ವಿಷಯಕ್ಕೆ ಹೋಗು

ಚೆಲ್ಲಾಟ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಚೆಲ್ಲಾಟ
ನಿರ್ದೇಶನಎಂ. ಡಿ. ಶ್ರೀಧರ್
ನಿರ್ಮಾಪಕಜಗದೀಶ್ ಕೋಟ್ಯಾನ್
ಲೇಖಕಬಿ ಎ ಮಧು (ಸಂಭಾಷಣೆ)
ಚಿತ್ರಕಥೆಎಂ. ಡಿ. ಶ್ರೀಧರ್
ಕಥೆಎಂ. ಡಿ. ಶ್ರೀಧರ್
ಆಧಾರಪುಲಿವಲ್ ಕಲ್ಯಾಣಂ
ಪಾತ್ರವರ್ಗಗಣೇಶ್
ರೇಖಾ ವೇದವ್ಯಾಸ್
ಸಂಗೀತಗುರುಕಿರಣ್
ಛಾಯಾಗ್ರಹಣಸುಂದರನಾಥ್ ಸುವರ್ಣ
ಸಂಕಲನಪಿ. ಆರ್. ಸುಂದರ್ ರಾಜ್
ಸ್ಟುಡಿಯೋಭೂಮಿ ಪ್ರೊಡಕ್ಷನ್ಸ್
ಬಿಡುಗಡೆಯಾಗಿದ್ದು
  • 21 ಏಪ್ರಿಲ್ 2006 (2006-04-21)
ಅವಧಿ೧೫೭ ನಿಮಿಷಗಳು
ದೇಶಭಾರತ
ಭಾಷೆಕನ್ನಡ

ಚೆಲ್ಲಾಟ ೨೦೦೬ ರ ಭಾರತೀಯ ಕನ್ನಡ ಭಾಷೆಯ ರೊಮ್ಯಾಂಟಿಕ್ ಹಾಸ್ಯ ಚಲನಚಿತ್ರವಾಗಿದ್ದು, ಇದನ್ನು ಎಂ ಡಿ ಶ್ರೀಧರ್ ನಿರ್ದೇಶಿಸಿದ್ದಾರೆ ಮತ್ತು ಭೂಮಿ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಜಗದೀಶ್ ಕೋಟ್ಯಾನ್ ನಿರ್ಮಿಸಿದ್ದಾರೆ. ಇದು ೨೦೦೩ರ ಮಲಯಾಳಂ ಚಿತ್ರ ಪುಲಿವಲ್ ಕಲ್ಯಾಣಂ ನ ರಿಮೇಕ್ ಆಗಿದೆ . [] ಚಿತ್ರದಲ್ಲಿ ಗಣೇಶ್ ಮತ್ತು ರೇಖಾ ವೇದವ್ಯಾಸ್ ನಟಿಸಿದ್ದಾರೆ. ಗುರುಕಿರಣ್ ಅವರು ಧ್ವನಿಮುದ್ರಿಕೆಯನ್ನು ಸಂಯೋಜಿಸಿದ್ದಾರೆ. ಚಿತ್ರವು ಕಡಿಮೆ ಬಜೆಟ್ ಹೊಂದಿತ್ತು ಮತ್ತು ಗಲ್ಲಾಪೆಟ್ಟಿಗೆಯಲ್ಲಿ ಯಶಸ್ವಿಯಾಯಿತು. [] []

ಕಥಾವಸ್ತು

[ಬದಲಾಯಿಸಿ]

ಗಣೇಶ ( ಗಣೇಶ್ ), ರುದ್ರನ ( ದೇವರಾಜ್ ) ದತ್ತು ಪಡೆದ ತಮ್ಮ. ಅಪಘಾತದಲ್ಲಿ ರುದ್ರ ತನ್ನ ಬಲಗೈಯನ್ನು ಕಳೆದುಕೊಂಡಾಗ, ಚಿಕ್ಕ ವಯಸ್ಸಿನಲ್ಲಿ ಗಣೇಶ ತನ್ನ ಕುಟುಂಬದ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಾನೆ. ರುದ್ರನ ಸಹೋದರಿ ರಂಗಾಯಣ ರಘುವಿನ ಮಗನನ್ನು ಪ್ರೀತಿಸುತ್ತಾಳೆ, ಅವನು ನಿರ್ಲಜ್ಜನಾಗಿದ್ದು ಮದುವೆಯನ್ನು ಸಾಧ್ಯವಾಗಿಸಲು ಭಾರಿ ವರದಕ್ಷಿಣೆಯನ್ನು ಕೇಳುತ್ತಾನೆ. ಈ ಮದುವೆಯನ್ನು ಸಾಧ್ಯವಾಗಿಸಲು ರುದ್ರ ಮತ್ತು ಗಣೇಶ ಒಬ್ಬ "ಮದುಮಗ" ಎಂಬ ಫೈನಾನ್ಷಿಯರ್ ನಿಂದ (ಮೋಹನ್ ಜುನೇಜ) ಸಾಲವನ್ನು ತೆಗೆದುಕೊಂಡು ಅದನ್ನು ಪಟಾಕಿಗಳ ವ್ಯವಹಾರದಲ್ಲಿ ಹೂಡಿಕೆ ಮಾಡುತ್ತಾರೆ, ನಂತರ ಅದನ್ನು ಸಂಪೂರ್ಣವಾಗಿ ಕಳೆದುಕೊಳ್ಳುತ್ತಾರೆ.

ಅದೇ ಸಮಯದಲ್ಲಿ, ಗಣೇಶನ ಫೋನ್, ರೇಖಾಳ ( ರೇಖಾ ವೇದವ್ಯಾಸ್ ) ಫೋನಿನೊಂದಿಗೆ ಅದಲು ಬದಲಾಗುತ್ತದೆ. ಏಕೆಂದರೆ ಎರಡರ ಮಾಡೆಲ್ ಒಂದೇ ಆಗಿದೆ. ರೇಖಾ ಅವರ ತಂದೆ ಅವಿನಾಶ್, ರಂಗಾಯಣ ರಘು ಅವರ ಬಾಸ್. ಗಣೇಶ್ ಮತ್ತು ರೇಖಾ ಪ್ರೀತಿಯಲ್ಲಿ ಬೀಳುವ ಮೊದಲು ಮತ್ತು ಮದುವೆಯಾಗಲು ನಿರ್ಧರಿಸುವ ಮೊದಲು ಸಾಕಷ್ಟು ಹಾಸ್ಯಮಯವಾದ ಗೊಂದಲದ ಘಟನೆಗಳು ನಡೆದಿರುತ್ತವೆ. ಇವರ ಪ್ರೀತಿಯನ್ನು ಅವಿನಾಶ್‌ ಒಪ್ಪುವುದಿಲ್ಲ. ಗಣೇಶ್ ಮತ್ತು ರೇಖಾ ಈ ಅಡೆತಡೆಗಳನ್ನು ನಿವಾರಿಸಬಹುದೇ/ಇಲ್ಲವೇ ಎಂಬುದು ಉಳಿದ ಕಥೆ.

ತಾರಾಗಣ

[ಬದಲಾಯಿಸಿ]

ಧ್ವನಿಮುದ್ರಿಕೆ

[ಬದಲಾಯಿಸಿ]

  ಗುರುಕಿರಣ್ ಸಂಗೀತ ಸಂಯೋಜಿಸಿದ್ದಾರೆ. [] ಪುರಂದರ ದಾಸರ "ಇಂದು ಎನಗೆ ಗೋವಿಂದ" ಗೀತೆಯನ್ನು ರೀಮಿಕ್ಸ್ ಮಾಡಿ ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ. []

ಪ್ರತಿಕ್ರಿಯೆ

[ಬದಲಾಯಿಸಿ]

ಐಎಎನ್‌ಎಸ್‌ನ ಆರ್‌ಜಿ ವಿಜಯಸಾರಥಿ ಅವರು " ಚೆಲ್ಲಾಟ ಕೇವಲ ಸಾಧಾರಣ ಚಿತ್ರವಾಗಿದೆ ಮತ್ತು ಪೂರ್ಣ ಪ್ರಮಾಣದ ಹಾಸ್ಯ ಚಿತ್ರವನ್ನುನೀವೆಷ್ಟು ಇಷ್ಟ ಪಡುತ್ತೀರಿ ಎಂಬುದು ನಿಮಗೆ ಬಿಟ್ಟಿದ್ದು" ಎಂದು ಬರೆದಿದ್ದಾರೆ. [] ಇಂಡಿಯಾಗ್ಲಿಟ್ಜ್‌ನ ವಿಮರ್ಶಕರೊಬ್ಬರು "ಮಲಯಾಳಂ ಚಿತ್ರ 'ಪುಲಿ ಕಲ್ಯಾಣಂ' ನಿರ್ದೇಶಕ ಶ್ರೀಧರ್ ಅವರು ಚಿತ್ರಕ್ಕೆ ಹೊಸ ಆಕಾರವನ್ನು ನೀಡಿದ್ದಾರೆ. ಅದು ಉತ್ತಮ ತಾರಾಗಣ ಮತ್ತು ಛಾಯಾಗ್ರಹಣದಿಂದ ಸ್ಪಷ್ಟವಾಗಿದೆ" ಎಂದು ಬರೆದಿದ್ದಾರೆ. [] ಡೆಕ್ಕನ್ ಹೆರಾಲ್ಡ್‌ನ ಎಸ್‌ಎನ್ ದೀಪಕ್ "ಚಿತ್ರದ ಉದ್ದಕ್ಕೂ ನಡೆಯುವ ಹಾಸ್ಯ ದೃಶ್ಯಗಳಿಗಾಗಿ" ಚಿತ್ರವನ್ನು ಗುರುತಿಸಿದರು. ಅವರು ಇದನ್ನು "ಕ್ಲೀನ್ ಫ್ಯಾಮಿಲಿ ಎಂಟರ್ಟೈನರ್" ಎಂದು ಕರೆದರು ಮತ್ತು ಚಿತ್ರದಲ್ಲಿನ ಅಭಿನಯವನ್ನು ಶ್ಲಾಘಿಸಿದರು. []

ಬಾಕ್ಸ್ ಆಫೀಸ್

[ಬದಲಾಯಿಸಿ]

ಚಿತ್ರವು ವಿಮರ್ಶಕರಿಂದ ಸಕಾರಾತ್ಮಕ ವಿಮರ್ಶೆಗಳನ್ನು ಪಡೆದುಕೊಂಡಿತು ಮತ್ತು ೧೦೦ ದಿನಗಳನ್ನು ಪೂರೈಸುವ ಮೂಲಕ ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಪ್ರದರ್ಶನ ಕಂಡಿತು. []

ಉಲ್ಲೇಖಗಳು

[ಬದಲಾಯಿಸಿ]
  1. ೧.೦ ೧.೧ ೧.೨ "Chellata Kannada Movie Review - cinema preview stills gallery trailer video clips showtimes". IndiaGlitz. 2006-04-22. Archived from the original on 27 August 2022. Retrieved 2012-09-27.
  2. "Small budgets". The Hindu. 28 December 2006. Archived from the original on 22 January 2022. Retrieved 22 January 2022.
  3. "Small Screen Successes". The Times of India. 21 April 2021. Archived from the original on 22 January 2022. Retrieved 22 January 2022.
  4. "Chellata album". JioSaavn. Archived from the original on 11 April 2022. Retrieved 2022-04-11.
  5. Vijayasarathy, R. G. (28 March 2006). "Chellata Review". IANS. Archived from the original on 27 August 2022. Retrieved 19 September 2022 – via Nowrunning.
  6. Deepak, S. N. (23 April 2006). "Chellata". Deccan Herald. Archived from the original on 18 May 2006. Retrieved 6 September 2023.
  7. Vijayasarathy, R. G. (27 June 2006). "Darshan's 'Datta' the top Kannada film". IANS – via Nowrunning.

ಬಾಹ್ಯ ಕೊಂಡಿಗಳು

[ಬದಲಾಯಿಸಿ]