ಕಿಶೋರಿ ಬಲ್ಲಾಳ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕಿಶೋರಿ ಬಲ್ಲಾಳ್
ಜನನ
ಕಿಶೋರಿ

ಮಂಗಳೂರಿನಲ್ಲಿ ಉಡುಪಿ ಜಿಲ್ಲೆ, ಕರ್ನಾಟಕ
ಮರಣ೧೮, ಫೆಬ್ರವರಿ, ೨೦೨೦
ಉದ್ಯೋಗಕನ್ನಡ ಚಿತ್ರರಂಗದಲ್ಲಿ ಮತ್ತು ನಾಟಕಗಳಲ್ಲಿ ಅಭಿನಯಿಸಿದರು. ಚಲನಚಿತ್ರ ಅಭಿನೇತ್ರಿ,
ಇದಕ್ಕೆ ಖ್ಯಾತರುತುಳು,ಕೊಂಕಣಿ, ಹಿಂದಿ, ಮತ್ತು ಮರಾಠಿ ಚಲನಚಿತ್ರಗಳಲ್ಲೂ ಅಭಿನಯಿಸಿದ್ದಾರೆ.
ಜೀವನ ಸಂಗಾತಿ೧೯೫೦ ರಲ್ಲಿ ಭರತನಾಟ್ಯ ಕಲಾವಿದ ಶ್ರೀಪತಿ ಬಲ್ಲಾಳರನ್ನು ವಿವಾಹವಾದರು.
ಪ್ರಶಸ್ತಿಗಳು
  • ೧೯೮೪ ರಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, * ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ,
  • ೨೦೦೫ ರಲ್ಲಿ 'ಸ್ವದೇಸ್' ಚಲನ ಚಿತ್ರದಲ್ಲಿ IIFA (International Indian Film Academy Awards) ಪ್ರಶಸ್ತಿ.

ಕಿಶೋರಿ ಬಲ್ಲಾಳ್, [೧] ಒಬ್ಬ ಭಾರತೀಯ ಅಭಿನೇತ್ರಿ. ಕನ್ನಡ ಹಾಗೂ ಹಿಂದಿ ಚಲನಚಿತ್ರಗಳಲ್ಲಿ ಮಹತ್ವದ ಭೂಮಿಕೆಯನ್ನು ನಿಭಾಯಿಸಿದ್ದಾರೆ. ಮೂಲತಃ ರಂಗಭೂಮಿ ಕಲಾವಿದೆಯಾಗಿದ್ದ ಕಿಶೋರಿ ಬಲ್ಲಾಳ್ ಅವರು, ಸಿನಿಮಾ, ಜಾಹೀರಾತುಗಳಲ್ಲಿ ಅಭಿನಯಿಸಿದ್ದರು.

ಜೀವನ & ಕುಟುಂಬ[ಬದಲಾಯಿಸಿ]

ಕಿಶೋರಿಯವರು [೨] ದಕ್ಷಿಣ ಕನ್ನಡದ ಮಂಗಳೂರಿನಲ್ಲಿ ಜನಿಸಿದರು. ಮುಂದೆ ೧೯೫೦ ರಲ್ಲಿ ಭರತನಾಟ್ಯ ಕಲಾವಿದ ರಂಗಕರ್ಮಿ ಶ್ರೀಪತಿ ಬಲ್ಲಾಳರ ಜೊತೆ ಮದುವೆಯಾದರು. ಅವರ ಪತಿ, ಖ್ಯಾತ ರಂಗನಿರ್ದೇಶಕ, ಅಭಿನೇತ ಹಾಗೂ ರಂಗಕರ್ಮಿ, ಶ್ರೀಪತಿ ಬಲ್ಲಾಳ ರೆಂದು ಮುಂಬಯಿ ರಂಗಭೂಮಿಯಲ್ಲಿ ದೊಡ್ಡ ಹೆಸರುಮಾಡಿದ್ದಾರೆ. ಸತಿ-ಪತಿಯರಿಬ್ಬರೂ ಹಲವಾರು ನಾಟಕಗಳಲ್ಲಿ ಪಾತ್ರವಹಿಸಿ ಮುಂಬಯಿ ರಂಗಭೂಮಿಗೆ ಪರಿಚಿತರಾಗಿದ್ದಾರೆ. ಈ ದಂಪತಿಗಳ ಮಗ ಕೆಲವು ವರ್ಷಗಳ ಹಿಂದೆ ಚಿಕ್ಕವಯಸ್ಸಿನಲ್ಲೇ ನಿಧನಹೊಂದಿದನು. ಆತನ ಪತ್ನಿ, ಅಹಲ್ಯ ಬಲ್ಲಾಳ್ ಸಹಿತ ಒಬ್ಬ ಯಶಸ್ವಿ ಅಭಿನೇತ್ರಿ. ಮುಂಬಯಿ ಕನ್ನಡ ರಂಗಭೂಮಿಯ ಪರಿಚಾರಕಿಯಾಗಿ ಅತ್ಯುತ್ತಮ ಕೆಲಸಗಳನ್ನು ನಿರ್ವಹಿಸುತ್ತಿದ್ದಾರೆ.

ನಟನೆ[ಬದಲಾಯಿಸಿ]

ಡಾ.ಶಿವರಾಮ ಕಾರಂತ್, ಹಾಗೂ ಖ್ಯಾತ ಕವಿ ,ಕಾದಂಬರಿಕಾರ, ವ್ಯಾಸರಾಯ ಬಲ್ಲಾಳರ ಮೇಲ್ವಿಚಾರಣೆಯಲ್ಲಿ ತರಪೇತಿ ಗಳಿಸಿದರು. ಮುಂಬಯಿನಗರದ ದುರ್ಗಾಖೋಟೆ ಜಾಹಿರಾತು ಕಂಪೆನಿಯಲ್ಲಿ ಕೆಲಸಮಾಡುವ ಅವಕಾಶ ಪ್ರಾಪ್ತವಾಯಿತು. ಕನ್ನಡ ಹಾಗೂ ಮರಾಠಿ ರಂಗಭೂಮಿಯ ಹಲವಾರು ನಾಟಕಗಳಲ್ಲಿ ಅಭಿನಯಿಸಿದರು. ೧೯೭೦ ರಲ್ಲಿ ಎ ಜೊ ಹೈ ಜಿಂದಗಿ ಎಂಬ ಹಾಸ್ಯಪ್ರಧಾನವಾದ ಹಿಂದಿ ಚಲನಚಿತ್ರದಲ್ಲಿ ಅಭಿನಯಿಸಿ ಹೆಸರುವಾಸಿಯಾದರು.

ಕನ್ನಡ ಚಲನಚಿತ್ರರಂಗದಲ್ಲಿ ಪಾದಾರ್ಪಣೆ[ಬದಲಾಯಿಸಿ]

೧೯೬೦ ರಲ್ಲಿ ಕಿಶೋರಿ ಬಲ್ಲಾಳರು, 'ಇವಳೆಂಥ ಹೆಂಡತಿ', ಎನ್ನುವ ಚಿತ್ರದಿಂದ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆಮಾಡಿದರು. ತಮ್ಮ ೧೫ ವರ್ಷಗಳ ಚಲನ ಚಿತ್ರ ಜೀವನದಲ್ಲಿ ಹೆಸರಾಂತ ನಿರ್ದೇಶಕರು, ಮತ್ತು ನಟರ ಜೊತೆಗೆ ಕೆಲಸಮಾಡಿದರು. ಚಲನಚಿತ್ರದ ಹೆಸರಾಂತ ಅಭಿನೇತ ಶಾರುಖ್ ಖಾನ್ (ಹಿಂದಿ ನಟ) ರ ತಾಯಿಯಾಗಿ ಸ್ವದೇಸ್, ಎಂಬ ಚಿತ್ರದಲ್ಲಿ ಮಾಡಿದ ಅಭಿನಯ ಅಪಾರ ಜನಪ್ರಿಯತೆಯನ್ನು ಗಳಿಸಿತು. ೨೦೧೬ ರಲ್ಲಿ ನಿರ್ಮಿಸಿದ 'ಮಹಾವೀರ', 'ಮಚಿದೇವ', ಮತ್ತು 'ಆಸ್ತ್ರಾ' ಪ್ರಮುಖ ಚಿತ್ರಗಳು. ಕಿರುತೆರೆ ಧಾರಾವಾಹಿಗಳಲ್ಲಿ ಅತಿ ಹೆಚ್ಚು ದಿನ ನಡೆದ ಅಮೃತವರ್ಷಿಣಿ ಎಂಬ ಅತಿದೊಡ್ಡ ಕಿರುತೆರೆ ಧಾರಾವಾಹಿಯಲ್ಲಿ ಮಾಡಿದ ಅಭಿನಯಕ್ಕೆ ಅಪಾರ ಮನ್ನಣೆ ಪ್ರಾಪ್ತವಾಯಿತು.

ಕಿಶೋರಿ ಬಲ್ಲಾಳರ ಚಿತ್ರಗಳು[ಬದಲಾಯಿಸಿ]

  1. ೨೦೧೬ ಕಾಹಿ ಕಾಹಿ (ಆಜ್ಜಿಯಾಗಿ)
  2. ೨೦೧೬ ಆಸ್ರಾ, [೩]
  3. ೨೦೧೬ ನಾನಿ (ಕಿಶೋರಿ ಬಲ್ಲಾಳ್ ಆಗಿ)
  4. ೨೦೧೫ ರಿಂಗ್ ರೋಡ್ ಗ್ರಾಂಡ್ ಮದರ್ (ಕಿಶೋರಿ ಬಲ್ಲಾಳ್ ಆಗಿ)
  5. ೨೦೧೫ 'ಕ್ಯಾರಿ ಆನ್ ಮರಾಠ' (ಕಿಶೋರಿ ಬಲ್ಲಾಳ್ ಆಗಿ)
  6. ೨೦೧೫ 'ಬಾಂಬೆ ಮಿಠಾಯಿ' (ಕಿಶೋರಿ ಬಲ್ಲಾಳ್ ಆಗಿ)
  7. ೨೦೧೪ 'ಆಕ್ರಮಣ',
  8. ೨೦೧೩ 'ಗಲಾಟೆ',
  9. ೨೦೧೨ 'ಐಯ್ಯಾ' (ಸೂರ್ಯನ ಮದರ್ ಆಗಿ)
  10. ೨೦೧೨ ಬಂಗಾರದ ಕುರಲ್ [೪]
  11. ೨೦೧೧ ಕೆಂಪೆಗೌಡ ಕಾವ್ಯಾಸ್ ಗ್ರಾಂಡ್ ಮದರ್(ಕಿಶೋರಿ ಬಲ್ಲಾಳ್ ಆಗಿ)
  12. ೨೦೦೯ ಕ್ವಿಕ್ ಗನ್ ಮುರುಗನ್ ಎಸ್.ಜಿ.ಮುರುಗನ್
  13. ೨೦೦೮ ಅಕ್ಕ-ತಂಗಿ (ಕಿಶೋರಿ ಬಲ್ಲಾಳ್ ಆಗಿ)
  14. ೨೦೦೫ ನಮ್ಮಣ್ಣ (ಕಿಶೋರಿ ಬಲ್ಲಾಳ್ ಆಗಿ)
  15. ೨೦೦೪ ಸ್ವದೇಸ್ (ಕಾವೇರಮ್ಮನ ಪಾತ್ರ)[೫]
  16. ೨೦೦೩ ಈಖುಷಿ (ಕಿಶೋರಿ ಬಲ್ಲಾಳ್ ಆಗಿ)
  17. ೨೦೦೩ 'ಏಕ್ ಅಲಗ್ ಮೌಸಮ್'
  18. ೨೦೦೦ 'ಸ್ಪರ್ಶ'
  19. ೧೯೮೯ 'ಗೈರ್ ಕಾನೂನಿ' (ಕಿಶೋರಿ ಬಲ್ಲಾಳ್ ಆಗಿ)

ಪ್ರಶಸ್ತಿಗಳು[ಬದಲಾಯಿಸಿ]

  1. ೧೯೮೪ ರಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ,
  2. ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, ಪ್ರಶಸ್ತಿ,
  3. ೨೦೦೫ ರಲ್ಲಿ 'ಸ್ವದೇಸ್' ಚಲನ ಚಿತ್ರದಲ್ಲಿ ಅತ್ಯುತ್ತಮ ಪೋಷಕ ನಟಿ ಪಾತ್ರನಿರ್ವಹಿಸಿದ್ದಕ್ಕೆ IIFA (International Indian Film Academy Awards) ಪ್ರಶಸ್ತಿ,

ನಿಧನ[ಬದಲಾಯಿಸಿ]

ಕಿಶೋರಿ ಬಲ್ಲಾಳರು ೧೮ ಫೆಬ್ರವರಿ, ೨೦೨೦ ರಂದು ಮಂಗಳವಾರ ಬೆಂಗಳೂರಿನ ಸೇವಾಕ್ಷೇತ್ರ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.[೬]

ಉಲ್ಲೇಖಗಳು[ಬದಲಾಯಿಸಿ]

  1. kishori-ballal,kannada movie star
  2. IMDb Kishori ballal, Filmography, (Actress 17 credits)
  3. Aasra Times Entertainment
  4. Mangalore : Ram shetty's bangarada kural ready to bloom,Daiji world.com, March, 12, 2012,
  5. The story behind the return of the native.The Hindu, Dec,16th,Thurs,2004
  6. ಕನ್ನಡದ ಹಿರಿಯ ನಟಿ ಕಿಶೋರಿ ಬಲ್ಲಾಳ್ ವಿಧಿವಶ, ಫಿಲ್ಮಿಬೀಟ್ ಕನ್ನಡ, 18ಫೆಬ್ರವರಿ2020

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

  1. Top 50 Memorable Bollywood Characters: Kaveri Amma from Swades, Sept, 24, 2014, Rahul desai Archived 2019-04-26 ವೇಬ್ಯಾಕ್ ಮೆಷಿನ್ ನಲ್ಲಿ.