ಶ್ರೀಪತಿ ಬಲ್ಲಾಳ

ವಿಕಿಪೀಡಿಯ ಇಂದ
Jump to navigation Jump to search

ಶ್ರೀಪತಿ ಬಲ್ಲಾಳ್', [೧]ಒಬ್ಬ ಸಮರ್ಥ ರಂಗಕರ್ಮಿ, ನಟ, ಸಂಘಟಕ ಮತ್ತು ೧೫ ವರ್ಷಗಳ ಕಾಲ ಮುಂಬಯಿನಗರದ ಮಾಹಿಮ್ ನಲ್ಲಿರುವ ಕರ್ನಾಟಕ ಸಂಘದ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದರು. ಸುಮಾರು ೨೫ ವರ್ಷಗಳ ಕಾಲ ಬೆಂಗಳೂರಿನಲ್ಲಿ ನೆಲೆಸಿದರು.

ಜನನ, ಮತ್ತು ವಿದ್ಯಾಭ್ಯಾಸ[ಬದಲಾಯಿಸಿ]

ಶ್ರೀಪತಿ ಬಲ್ಲಾಳ್, ರಾಮದಾಸ್ ಬಲ್ಲಾಳ್ ಮತ್ತು ಕಲ್ಯಾಣಿ ಬಲ್ಲಾಳ್ ದಂಪತಿಗಳ ೭ ಗಂಡು ಮತ್ತು ೬ ಹೆಣ್ಣುಮಕ್ಕಳಲ್ಲಿ ಒಬ್ಬರಾಗಿ ಜನಿಸಿದರು. ೧೯೪೭ ರಲ್ಲಿ ಕಾಲೇಜು ಶಿಕ್ಷಣ ಗಳಿಸಲು ಮುಂಬಯಿ ನಗರಕ್ಕೆ ಪಾದಾರ್ಪಣೆಮಾಡಿದರು. ನಂತರ ರಂಗಭೂಮಿಯ ಕಾರ್ಯಚಟುವಟಿಕೆಗಳಿಂದ ಪ್ರೇರಿತರಾಗಿ ಸುಮಾರು ೪ ದಶಕಗಳ ಕಾಲ ಮುಂಬಯಿನಲ್ಲಿ ನೆಲೆನಿಂತರು. ದಕ್ಷಿಣ ಕನ್ನಡದ ಉಡುಪಿಯ ಸಮೀಪದ ಅಂಬಲ ಪಾಡಿಯಿಂದ ಮುಂಬಯಿನಗರಕ್ಕೆ ವಲಸೆಬಂದು ಹವ್ಯಾಸಿ ರಂಗಭೂಮಿಯನ್ನು ಕಟ್ಟಿಬೆಳೆಸಲು ಬಹಳ ಶ್ರಮಿಸಿದವರಲ್ಲಿ ಒಬ್ಬರು. ತಮ್ಮ ೧೬ ನೆಯ ವಯಸ್ಸಿನಲ್ಲಿಯೇ ರಂಗಪ್ರವೇಶ ಮಾಡಿದರು. ಅವರ ಜೊತೆ ಕಿಶೋರಿ ಬಲ್ಲಾಳರೂ ಸಹಕರಿಸಿದರು. ಜ್ಯಾತ ಕಾದಂಬರಿ ಕರ್ತೃ ವ್ಯಾಸರಾಯ ಬಲ್ಲಾಳ ರು ಶ್ರೀಪತಿ ಬಲ್ಲಾಳರ ಹಿರಿಯ ಸೋದರರು.

ಆಡಿದ ನಾಟಕಗಳು[ಬದಲಾಯಿಸಿ]

ಕುವೆಂಪು ರವರು ರಚಿಸಿದ "ಬಿರುಗಾಳಿ"ಯಲ್ಲಿ ಅಭಿನಯಿಸಿದರು. ಈ ನಾಟಕದಿಂದ ಅವರು ರಂಗಭೂಮಿಗೆ ಪಾದಾರ್ಪಣೆಮಾಡಿದ್ದರು.

  1. ವಸಂತ ಕವಲಿಯವರ ನಿರ್ದೇಶನದಲ್ಲಿ "ಎನ್ನ ಮುದ್ದಿನ ಮುದ್ದಣ"ನೆಂಬ ಎಂಬ ನಾಟಕದಲ್ಲಿ ಶ್ರೀಪತಿಬಲ್ಲಾಳ್ ಮುದ್ದಣನಾಗಿಯೂ, ಮನೋರಮೆಯ ಪಾತ್ರದಲ್ಲಿ ಕಿಶೋರಿ ಬಲ್ಲಾಳರೂ ಅಭಿನಯಿಸಿ ಪ್ರೇಕ್ಷಕರ ಮನೆಮಾತಾದರು

ನಿರ್ದೇಶಿಸಿದ ನಾಟಕಗಳು[ಬದಲಾಯಿಸಿ]

  1. 'ಸಂಕ್ರಾಂತಿ', ಲಂಕೇಶ್ ವಿರಚಿತ
  2. 'ಮುಳ್ಳಲ್ಲಿದೆ ಮಂದಾರ'-ವ್ಯಾಸರಾವ್ ಬಲ್ಲಾಳ ವಿರಚಿತ (ಮೂಲ:ಬರ್ನಾಡ್ ಶಾ)
  3. 'ಗಿಳಿಯು ಪಂಜರದೊಳಿಲ್ಲ' (ಮೂಲ:ಇಬ್ಸನ್)
  4. ಪದ್ಮಶ್ರೀ ಧುಂಡಿರಾಜ ಮರಾಠಿ ವಲಯದ
  5. 'ಮಾತೃದೇವೋಭವ' ಕಾಮತರ ಕೃತಿ
  6. 'ನೀಲಾಂಬಿಕೆ', ಡಾ.ಬಿ.ಎ.ಸನದಿಯವರ ಕೃತಿಯನ್ನಾಧರಿಸಿ,

ತರಂಗ ರಂಗತಂಡದ ಸ್ಥಾಪನೆ[ಬದಲಾಯಿಸಿ]

ತರಂಗ ತಂಡವನ್ನು ಕಟ್ಟಿ ಹಲವಾರು ನಾಟಕಗಳನ್ನು ರಾಜ್ಯದಾದ್ಯಂತ ಪ್ರಚಾರಮಾಡಿದರು.

ನಿಧನ[ಬದಲಾಯಿಸಿ]

ಶ್ರೀಪತಿಬಲ್ಲಾಳ್, (೯೧) ಬೆಂಗಳೂರಿನ ಉಪನಗರಗಳಲ್ಲೊಂದಾದ ಕೋರಮಂಗಲದ ಗೃಹದಲ್ಲಿ ಶುಕ್ರವಾರ, ೧೯,ಏಪ್ರಿಲ್, ೨೦೧೯ ರಂದು ನಿಧನರಾದರು. ಅವರು ಬಹಳ ದಿನಗಳಿಂದ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದರು. ರಂಗನಟಿ ಮತ್ತು ಸಿನೆಮಾಗಳಲ್ಲೂ ಅಭಿನಯಿಸಿದ ಅವರ ಪತ್ನಿ ಕಿಶೋರಿಬಲ್ಲಾಳ್, ಮತ್ತು ಸೊಸೆ ಅಹಲ್ಯ ಬಲ್ಲಾಳ್ ಇದ್ದಾರೆ. ಅವರ ಮಗ ಸಂತೋಷ್ ಬಲ್ಲಾಳ್ ೧೦ ವರ್ಷಗಳ ಹಿಂದೆಯೇ ತೀರಿಕೊಂಡಿದ್ದರು.

ಉಲ್ಲೇಖಗಳು[ಬದಲಾಯಿಸಿ]

  1. https://www.prajavani.net/stories/national/ballal-630567.html 'ಹಿರಿಯ ರಂಗಕರ್ಮಿ ಶ್ರೀಪತಿ ಬಲ್ಲಾಳ್ ಇನ್ನು ನೆನಪು', ಪ್ರಜಾವಾಣಿ,೨೧, ಏಪ್ರಿಲ್,೨೦೧೯]