ಚೆಮಂಚೇರಿ ಕುಂಞಿರಾಮನ್ ನಾಯರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಚೆಮಂಚೇರಿ ಕುಂಞಿರಾಮನ್ ನಾಯರ್
ಚೆಮಂಚೇರಿ ಕುಂಞಿರಾಮನ್ ನಾಯರ್t
ಜನನ26 June 1916
ಚೆಳಿಯ, ಕೇರಳ
ಮರಣ15 March 2021(2021-03-15) (aged 104)[೧]
ಕೋಝಿಕೋಡ್, ಕೇರಳ
ರಾಷ್ಟ್ರೀಯತೆಭಾರತೀಯ
Years active1945–2021
Known forಕಥಕ್ಕಳಿ

ಚೆಮಂಚೇರಿ ಕುಂಞಿರಾಮನ್ ನಾಯರ್, ಗುರು ಚೆಮಂಚೇರಿ (೨೬ ಜೂನ್ ೧೯೧೬ - ೧೫ ಮಾರ್ಚ್ ೨೦೨೧) ಎಂದೂ ಕರೆಯಲ್ಪಡುವ ಭಾರತೀಯ ಕಥಕ್ಕಳಿ ನಟ.ಅವರು ಕೊಲ್ಲಾಡಿಕೊಡನ್ ಶೈಲಿಯ ಕಲಾ ಪ್ರಕಾರದ ಕೊನೆಯ ಪ್ರತಿಪಾದಕರಲ್ಲಿ ಒಬ್ಬರು. ಅವರು ಎಂಭತ್ತು ವರ್ಷಗಳ ಕಾಲ ಭಾರತೀಯ ಶಾಸ್ತ್ರೀಯ ನೃತ್ಯ ಸಂಪ್ರದಾಯವನ್ನು ಕಲಿಯಲು, ಕಲಿಸಲು ಮತ್ತು ಜನಪ್ರಿಯಗೊಳಿಸಲು ಮೀಸಲಿಟ್ಟರು. ಕಲಾ ಪ್ರಕಾರಕ್ಕೆ ಅವರ ಕೊಡುಗೆಯನ್ನು ಗುರುತಿಸಿ [೨] ಭಾರತ ಸರ್ಕಾರವು ಅವರಿಗೆ 2017 ರಲ್ಲಿ ನಾಲ್ಕನೇ ಅತ್ಯುನ್ನತ ನಾಗರಿಕ ಗೌರವವಾದ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿತು [೩] [೪] .

ವೈಯಕ್ತಿಕ ಜೀವನ[ಬದಲಾಯಿಸಿ]

ಕುಂಞಿರಾಮನ್ ನಾಯರ್ ರವರು ಜೂನ್ ೨೬,೧೯೧೬ ರಂದು ಕೊಯಿಲಾಂಡಿ ಬಳಿಯ ಚೆಲಿಯಾ ಗ್ರಾಮದ ಮಡಯಂಕಂಡಿ ಚಾತುಕುಟ್ಟಿ ನಾಯರ್ ಮತ್ತು ಅಮ್ಮು ಕುಟ್ಟಿ ದಂಪತಿಗೆ ಜನಿಸಿದರು. [೫] [೪] ಅವರು ಕೇವಲ ಮೂರು ವರ್ಷದವರಾಗಿದ್ದಾಗ ಅವರ ತಾಯಿ ನಿಧನರಾದರು, ಮತ್ತು ನಂತರ, ಹದಿಮೂರನೆಯ ವಯಸ್ಸಿನಲ್ಲಿ, ಅವರು ತಮ್ಮ ತಂದೆಯನ್ನು ಕಳೆದುಕೊಂಡರು. ಚಿಕ್ಕ ವಯಸ್ಸಿನಲ್ಲಿ ತನ್ನ ಜೀವನದ ಹಾದಿಯನ್ನ ಹುಡುಕಿ ಹೊರಟರು.ತನ್ನ ಹೃದಯದಲ್ಲಿನ ಧ್ವನಿಗೆ ಗಮನ ಕೊಟ್ಟು ಪ್ರದರ್ಶನ ಕಲೆಗಳನ್ನು ಮುಂದುವರಿಸಲು ನಿರ್ಧರಿಸಿದರು. ನಾಯರ್ ಬಾಲ್ಯದಿಂದಲೂ ಅಭಿನಯಕ್ಕಾಗಿ ಸಾಟಿಯಿಲ್ಲದ ಉತ್ಸಾಹವನ್ನು ಪ್ರದರ್ಶಿಸಿದರು. ನಾಟಕವೊಂದರಲ್ಲಿ ದಾಸಿಮಯ್ಯನ ಪಾತ್ರದಲ್ಲಿ ನಟಿಸುವ ಮೂಲಕ ಇದನ್ನು ಸಾಭೀತುಪಡಿಸಿದರು.ಅದು ಅವರಿಗೆ ಮೆಚ್ಚುಗೆಯನ್ನು ಗಳಿಸಿತು.ಕಥಕ್ಕಳಿ ಕೇರಳದ ವಿಶಿಷ್ಟ ನೃತ್ಯ-ನಾಟಕ , ೧೬ನೇ ಶತಮಾನದಲ್ಲಿ ತನ್ನ ಮೂಲವನ್ನು ಹೊಂದಿತ್ತು. ಚೆಮಂಚೇರಿಯವರಿಗೆ ಕಥಕ್ಕಳಿಯೊಂದಿಗಿನ ಅವಿನಾಭಾವ ಸಂಬಂಧವು ೧೫ನೇ ವಯಸ್ಸಿನಲ್ಲಿ ಪ್ರಾರಂಭವಾಯಿತು.ನಂತರ ಅವರು ಮಲಬಾರ್ ನ ಮೆಪ್ಪಯೂರಿನಲ್ಲಿ ಅಪ್ಪುಕುಟ್ಟಿ ನಂಬಿಯಾರ್ ನಡೆಸುತ್ತಿದ್ದ ರಾಧಾಕೃಷ್ಣ ಕಥಕ್ಕಳಿ ಯೋಗಮ್ ಗೆ ಸೇರಿದರು. ನಂತರ ಅವರು ಗುರು ಕರುಣಾಕರ್ ಮೆನನ್ ಅವರಲ್ಲಿ ತಮ್ಮ ಕಲಾತ್ಮಕತೆಯನ್ನು ಮೆರೆದರು. ಮನೆ ಬಿಟ್ಟು ಬಂದು ಕಲೆಗೆ ಸಂಪೂರ್ಣವಾಗಿ ಶರಣಾದರು. ವಳ್ಳಿತಿರುಮನಂ ನಾತಕದ ಮೂಲಕ ೧೫ನೇ ವಯಸ್ಸಿನಲ್ಲಿ ರಂಗ ಪ್ರವೇಶ ಮಾಡಿದರು.ಕೇರಳದ ನೃತ್ಯಗಳಲ್ಲಿ ಅಸಾಧಾರಣ ಪ್ರತಿಭೆಯನಿಸಿಕೊಂಡರು.ನಂತರ ಅವರು ಕಣ್ಣೂರಿನಲ್ಲಿ ವಾಸಿಸಲು ಬಂದರು ಮತ್ತು ೩೧ನೇ ವಯಸ್ಸಿನಲ್ಲಿ ಅವರು ತಮ್ಮ ಜೀವನದ ಸಂಗಾತಿಯಅದ ಜಾನಕಿಯವರನ್ನು ಭೇಟಿಯಾದರು. ಮದುವೆಯಾದ ಆರು ವರ್ಷಗಳ ನಂರ , ದಂಪತಿಗಳು ತಮ್ಮ ಮೊದಲೆನೆಯ ಮಗುವಾದ ಹೆಣ್ಣು ಮಗುವನ್ನು ಕಳೆದುಕೊಂಡರು.ಜಾನಕಿ ಒಂದು ವರ್ಷದ ನಂತರ ನಿಧನರಾದರು. ನಂತರ ನಾಯರ್ ಅವರ ಒಂದು ವರ್ಷದ ಮಗನೊಂದಿಗೆ ಜೀವನ ನಡೆಸಲು ಮುಂದಾದರು. [೪] [೫]

ಶಿಕ್ಷಣ[ಬದಲಾಯಿಸಿ]

ನಾಯರ್ ಗುರುಗಳು (ಶಿಕ್ಷಕರು/ಮಾರ್ಗದರ್ಶಿಗಳು) ಕರುಣಾಕರ ಮೆನನ್, . [೪] ಕಥಕ್ಕಳಿ ಕಲೆಯೊಳಗೆ ಅವರು ಕಪ್ಲಿಂಗತನ ಸಂಪ್ರದಾಯದ ಕಲ್ಲತ್ತಿಕೋತನಿಗೆ ಆಕರ್ಷಿತರಾದರು ಮತ್ತು ಅದರಲ್ಲಿ ಪರಿಣತಿಯನ್ನು ಪಡೆದರು. [೬]

ವೃತ್ತಿ ಮತ್ತು ಬೋಧನೆ[ಬದಲಾಯಿಸಿ]

ಪ್ರದರ್ಶಕರಾಗಿ ಹಲವು ವರ್ಷಗಳ ನಂತರ, ನಾಯರ್ ಅಂತಿಮವಾಗಿ ಕಥಕ್ಕಳಿಯ ಶಿಕ್ಷಕರಾದರು. [೭] ಅದೇನೇ ಇದ್ದರೂ, ಅವರು ಸಂತಾನಗೋಪಾಲಂನಲ್ಲಿನ ಶ್ರೀಕೃಷ್ಣ ವೇಷಂ ಮತ್ತು ಭಾರತದಲ್ಲಿ ನೋಡಿದ ಹಲವಾರು ನೃತ್ಯ-ನಾಟಕಗಳನ್ನು ಒಳಗೊಂಡಂತೆ ಆಯ್ದ ಪಾತ್ರಗಳಿಗೆ ರಂಗ ಕಲಾವಿದರಾಗಿ ಮುಂದುವರೆದರು. ಅವರು ವಿವಿಧ ನೃತ್ಯ-ನಾಟಕಗಳಿಗೆ ನೃತ್ಯ ಸಂಯೋಜನೆಯನ್ನೂ ಮಾಡಿದ್ದಾರೆ. [೬] ಕೃಷ್ಣನ ಪಾತ್ರ ನನಗೆ ತುಂಬಾ ಇಷ್ಟ ಎಂದು ಹೇಳಿದರು. [೪]

ಗುರು ಚೇಮಂಚೇರಿ ಕುಂಞಿರಾಮನ್ ನಾಯರ್

ಅವರು ೧೯೪೫ [೭] ಕಣ್ಣೂರಿನಲ್ಲಿ ಭಾರತೀಯ ನಾಟ್ಯ ಕಲಾಲಯಂ ಎಂಬ ಸಂಸ್ಥೆಯನ್ನು ಸ್ಥಾಪಿಸಿದರು. ೧೯೪೭ರಲ್ಲಿ ಪ್ರಾರಂಭವಾಗಿ, ಅವರು ತೆಲ್ಲಿಚೆರಿಯ ಭಾರತೀಯ ನಾಟ್ಯ ಕಲಾಲಯದ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದರು. [೬]

ನಂತರ, ಅವರು ೧೯೮೩ ರಲ್ಲಿ ಚೆಲಿಯ ಕಥಕ್ಕಳಿ ವಿದ್ಯಾಲಯ ಎಂಬ ಇನ್ನೊಂದು ಶಾಲೆಯನ್ನು ಚೇಲಿಯಾದಲ್ಲಿ ಸ್ಥಾಪಿಸಿದರು. [೭]

ಕಥಕ್ಕಳಿಯ ಜೊತೆಗೆ, ಅವರು ಮಧ್ಯಕಾಲೀನ ಕವಿ ಜಯದೇವ ಅವರ ಗೀತಗೋವಿಂದಂ ಪದ್ಯಗಳನ್ನು ಆಧರಿಸಿದ ಅಷ್ಟಪದಿ ಅಟ್ಟಂ ಸೇರಿದಂತೆ ಇತರ ನೃತ್ಯ-ನಾಟಕ ಪ್ರಕಾರಗಳನ್ನು ಬೆಂಬಲಿಸಿದರು. ನಾಯರ್, ಮತ್ತೊಬ್ಬ ಡ್ಯಾನ್ಸ್ ಮಾಸ್ಟರ್, ಗುರು ಗೋಪಿನಾಥ್ ಅವರ ಸಹಯೋಗದೊಂದಿಗೆ, ಕಥಕ್ಕಳಿ ಮತ್ತು ಮೋಹಿನಿಯಾಟ್ಟಂ ಅನ್ನು ಆಧರಿಸಿದ ಕೇರಳ ನಟನಂ ಅನ್ನು ರೂಪಿಸಿದರು ಮತ್ತು ಕೇರಳದಲ್ಲಿ ಸರ್ಕಾರದಿಂದ ಗುರುತಿಸಲ್ಪಟ್ಟ ನೃತ್ಯ ಪ್ರಕಾರವಾಯಿತು. [೫]

ಅವರ ೧೦೦ ನೇ ಹುಟ್ಟುಹಬ್ಬದ ಆಚರಣೆಯ ಸಂದರ್ಭದಲ್ಲಿ, ನಟ ಮತ್ತು ನೃತ್ಯಗಾರ ವಿನೀತ್, ನಾಯರ್ ಅವರಿಗೆ ಗೌರವಾರ್ಥವಾಗಿ 'ಕೃಷ್ಣಪರ್ವಂ' ಹೆಸರಿನಲ್ಲಿ ಶಾಸ್ತ್ರೀಯ ನೃತ್ಯವನ್ನು ಪ್ರದರ್ಶಿಸಿದರು. [೮]

ಸಾವು[ಬದಲಾಯಿಸಿ]

ನಾಯರ್ ಅವರು ೨೫ ಮಾರ್ಚ್ ೨೦೨೧ ರಂದು ತಮ್ಮ ೧೦೪ ನೇ ವಯಸ್ಸಿನಲ್ಲಿ ಕೊಯಿಲಾಂಡಿ ಬಳಿಯ ಚೆಲಿಯಾ ಗ್ರಾಮದ ಅವರ ನಿವಾಸದಲ್ಲಿ ನಿಧನರಾದರು. [೯] [೧೦] [೧೧] [೧೨]

ಪ್ರಶಸ್ತಿಗಳು ಮತ್ತು ಗೌರವಗಳು[ಬದಲಾಯಿಸಿ]

 • 1979 ರ ಕೇರಳ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಯು ಅವರ ಕೊಡುಗೆಗಳಿಗಾಗಿ ಅವರನ್ನು ಗುರುತಿಸಿದೆ. [೭]
 • 1999 ಅಕಾಡೆಮಿಯ ಕೇರಳ ಸಂಗೀತ ನಾಟಕ ಅಕಾಡೆಮಿ ಫೆಲೋಶಿಪ್ [೭]
 • 2001 ಕೇರಳ ಕಲಾಮಂಡಲಂ ಕಲೆಗೆ ವಿಶೇಷ ಕೊಡುಗೆಗಳಿಗಾಗಿ ಪ್ರಶಸ್ತಿಯನ್ನು ನೀಡಿತು. [೭]
 • 2002 ದರ್ಪಣಂ ನಾಟ್ಯಕುಲಪತಿ ಪ್ರಶಸ್ತಿ [೭]
 • 2002 ಕೇರಳ ಕಲಾಮಂಡಲಂ ವಿಶಿಷ್ಟ ಕಲಾ ಸೇವಾ ಪ್ರಶಸ್ತಿ [೬]
 • 2009 ಕೇರಳ ಕಲಾಮಂಡಲಂನ ಕಲಾರತ್ನಂ ಪ್ರಶಸ್ತಿ [೬]
 • ಭಾರತ ಸರ್ಕಾರದಿಂದ 2017 ಪದ್ಮಶ್ರೀ ಪ್ರಶಸ್ತಿ [೪]
 • ಮಾಯಿಲ್ಪೀಲಿ ಪ್ರಶಸ್ತಿ [೬]
 • ಕಥಕ್ಕಳಿಗೆ ನೀಡಿದ ಕೊಡುಗೆಗಳಿಗಾಗಿ ಸಂಗೀತ ನಾಟಕ ಅಕಾಡೆಮಿ ಟ್ಯಾಗೋರ್ ಪ್ರಶಸ್ತಿ [೬]

ಉಲ್ಲೇಖಗಳು[ಬದಲಾಯಿಸಿ]

 1. "Kathakali maestro Chemancheri Kunhiraman Nair dies at 105". The New Indian Express. Retrieved 15 March 2021.
 2. "A Century of Passion: Chemancheri Kunhiraman Nair". keralatourism.org/.
 3. "Padma Awards 2017 announced - Press Information Bureau Government of India Ministry of Home Affairs". pib.nic.in. Archived from the original on 2017-01-27. Retrieved 25 January 2017.
 4. ೪.೦ ೪.೧ ೪.೨ ೪.೩ ೪.೪ ೪.೫ "Padma awards: Moment of glory for Kerala". timesofindia.indiatimes.com/. 26 January 2017.
 5. ೫.೦ ೫.೧ ೫.೨ "Meet the 100-year-old Kathakali dancer Kunhiraman Nair". hindustantimes.com. Retrieved 24 July 2015.
 6. ೬.೦ ೬.೧ ೬.೨ ೬.೩ ೬.೪ ೬.೫ ೬.೬ "Chemencerri Kuniraman Nair". sangeetnatak.gov.
 7. ೭.೦ ೭.೧ ೭.೨ ೭.೩ ೭.೪ ೭.೫ ೭.೬ "Kathakali meastro - Chemancheri Kunhiraman Nair". Kerala Tourism.
 8. "Guru Chemancheri Kunhiraman Nair celebrates 100th birthday". deccanchronicle.com/.
 9. "Kathali maestro Guru Chemancheri passes away at 105". Mathrubhumi. 15 March 2021. Retrieved 15 March 2021.
 10. "ഗുരു ചേമഞ്ചേരി അന്തരിച്ചു; അരങ്ങൊഴി‍ഞ്ഞത് 9 പതിറ്റാണ്ടിലേറെ നീണ്ട കലാസപര്യയ്ക്കുശേഷം". Manoramanews (in ಇಂಗ್ಲಿಷ್). Archived from the original on 15 ಮಾರ್ಚ್ 2021. Retrieved 15 March 2021.
 11. "ഗുരു ചേമഞ്ചേരി അരങ്ങൊഴിഞ്ഞു". Kairali News | Kairali News Live l Latest Malayalam News (in ಅಮೆರಿಕನ್ ಇಂಗ್ಲಿಷ್). 15 March 2021. Retrieved 15 March 2021.
 12. ലേഖകൻ, മാധ്യമം (15 March 2021). "ഗുരു ചേമഞ്ചേരി കുഞ്ഞിരാമൻ നായർ അരങ്ങൊഴിഞ്ഞു | Madhyamam". www.madhyamam.com (in ಇಂಗ್ಲಿಷ್). Retrieved 15 March 2021.