ಕೇರಳ ನಟನಮ್
ಕೇರಳ ನಟನಮ್ (ಕೇರಳ ನೃತ್ಯ) ಎನ್ನುವುದು ಭಾರತೀಯ ನೃತ್ಯ-ನಾಟಕ ಪ್ರಕಾರವಾದ ಕಥಕ್ಕಳಿಯಿಂದ ವಿಕಸಿತಗೊಂಡ ವಿಶಿಷ್ಟ ಕಲೆಯೆಂದು ಇದೀಗ ಗುರುತಿಸಲ್ಪಟ್ಟಿರುವ ಹೊಸ ಶೈಲಿಯ ನೃತ್ಯವಾಗಿದೆ. ಭಾರತೀಯ ನೃತ್ಯಗಾರರಾದ ಮತ್ತು ಕಥಕ್ಕಳಿಯಲ್ಲಿ ಪರಿಣಿತಿಯನ್ನು ಪಡೆದ ಗುರು ಗೋಪಿನಾಥ್ ಮತ್ತು ಇವರ ಪತ್ನಿಯವರಾದ ಮತ್ತು ಕೇರಳಕಲಾಮಂಡಲಮ್ನಲ್ಲಿ ಮೋಹಿನಿಆಟ್ಟಮ್ನ ಮೊದಲ ವಿದ್ಯಾರ್ಥಿಯಾದಥಂಕಾಮಣಿ ಗೋಪಿನಾಥ್ ಅವರುಗಳು ಕಥಕ್ಕಳಿ ಮೂಲದ ಭಾರತೀಯ ಶಾಸ್ತ್ರೀಯ ನೃತ್ಯ ಪ್ರಕಾರಗಳ ಶಿಕ್ಷಣವನ್ನು ನೀಡಲು ಮತ್ತು ಪ್ರದರ್ಶಿಸಲು ಅನನ್ಯ ಸ್ವರೂಪವನ್ನು ಅಭಿವೃದ್ಧಿಪಡಿಸಿದರು. ಒಬ್ಬಂಟಿ ಪ್ರದರ್ಶನ, ಯುಗಳ ನರ್ತನ, ನೃತ್ಯ ನಾಟಕಗಳು ಮತ್ತು ಸಾಂಪ್ರದಾಯಿಕ ಜಾನಪದ ನೃತ್ಯಗಳು ಅವರು ಆಯ್ಕೆ ಮಾಡಿಕೊಂಡ ವಸ್ತುಗಳಾಗಿದ್ದವು.
ಗುರು ಗೋಪಿನಾಥ್ ಮತ್ತು ತಂಕಾಮಣಿಯವರ ನೃತ್ಯ ಕಾರ್ಯಕ್ರಮಗಳು ವಿವಿಧ ವಿಷಯಗಳನ್ನು ಪ್ರಸ್ತುತ ಪಡಿಸಲು ಮಾರ್ಪಡಿಸಿದವುಗಳೊಂದಿಗೆ ಜೊತೆಯಾಗಿ ಅಸ್ತಿತ್ವದಲ್ಲಿರುವ ಸಾಂಪ್ರದಾಯಿಕ ಸಂಗೀತ ಕೃತಿಗಳನ್ನು ಕಂಡುಕೊಂಡಿವೆ. ಅವರ ಶೈಲಿಯು ಆಂಗಿಕ ಅಭಿನಯ - ದೇಹ ಚಲನೆಗಳು ಮತ್ತು ಅಭಿನಯಗಳು - ಮತ್ತು ಸಾತ್ವಿಕ ಅಭಿನಯ - ಕಥಕ್ಕಳಿಯ ಮುಖ ಭಾವನೆಗಳ ಮೇಲೆ ವಿಪರೀತವಾಗಿ ಆಧಾರಿತವಾಗಿದೆ. ಆದರೆ ಕಥಕ್ಕಳಿಯ ಪ್ರಮುಖ ನಿಲುವನ್ನು ಗೋಪಿನಾಥ್ ಅವರು ಹೆಚ್ಚು ಅನುಕೂಲಕರ ಭಂಗಿಗೆ ಬದಲಾಯಿಸಿದರು ಮತ್ತು ಇದು ಇಂದಿಗೂ ತ್ರಿಭಂಗ ಕಲ್ಪನೆಯೊಂದಿಗೆ ಸರಿಹೊಂದುತ್ತದೆ.
ಮತ್ತೊಂದು ಪ್ರಮುಖ ವಿಚಲನವು ಆಹಾರ ಅಭಿನಯ - ವೇಷಭೂಷಣ ವಿಧಾನ)ವಾಗಿತ್ತು, ಮತ್ತು ಇಲ್ಲಿ ಅವರು ಪಾತ್ರಕ್ಕೆ ಸರಿಹೊಂದುವಂತೆ ವೇಷಭೂಷಣಗಳು ಮತ್ತು ಮುಖದ ಅಲಂಕಾರವನ್ನು ಅಳವಡಿಸಿಕೊಂಡರು. ಆದ್ದರಿಂದ ಜೀಸಸ್ ಕ್ರೈಸ್ಟ್ ಕುರಿತ ನೃತ್ಯವೊಂದರಲ್ಲಿ, ನೃತ್ಯಗಾರರು ಕ್ರಿಸ್ತನಂತೆ ಉಡುಪವನ್ನು ಧರಿಸುತ್ತಾರೆ. ಸಾಮಾಜಿಕ ನೃತ್ಯಗಳಲ್ಲಿ ಕಲಾವಿದರು ಕಾರ್ಮಿಕರು, ಕೃಷಿಕರು, ಜಾನಪದ ಹೀಗಿ ಇತರರಂತೆ ಉಡುಗೆಯನ್ನು ಧರಿಸುತ್ತಾರೆ. ಇದರಂತೆಯೇ ಶ್ರೀಕೃಷ್ಣ, ರಾಜ, ಹಾವಾಡಿಗ, ಬೇಟೆಗಾರರಂತಹ ಪಾತ್ರಗಳೂ ಸಹ ಸೂಕ್ತವಾದ ಉಡುಪನ್ನು ಹೊಂದಿದ್ದವು. ಮೊದಲಬಾರಿಗೆ ಸಂಗೀತ ಕಾರ್ಯಕ್ರಮಗಳಿಗೆ ಬಳಸುತ್ತಿದ್ದ ಕರ್ನಾಟಕ ಸಂಗೀತದ ರಚನೆಗಳನ್ನು ಗೋಪಿನಾಥ್ ಅವರು ನೃತ್ಯ ಪ್ರಕಾರಗಳಿಗೆ ಅಳವಡಿಸಿಕೊಂಡರು. ಸಾಂಪ್ರದಾಯಿಕ ಕಥಕ್ಕಳಿ ಮತ್ತು ಮೋಹಿನಿ ಆಟ್ಟಂಗಳಿಗೆ ಭಿನ್ನವಾಗಿ, ಹಲವು ಇತರ ಸಂಗೀತ ಸಲಕರಣೆಗಳನ್ನೂ ಸಹ ಅವರ ಪ್ರಸ್ತುತಿಗಳಿಗೆ ಸೇರ್ಪಡೆ ಮಾಡಿಕೊಳ್ಳಲಾಯಿತು.
ಗುರು ಗೋಪಿನಾಥ್ ಅವರು ತಮ್ಮ ಜೀವಿತ ಕಾಲದಲ್ಲಿ ತಮ್ಮ ಶೈಲಿಗೆ ಯಾವುದೇ ಹೆಸರನ್ನು ನೀಡದಿದ್ದರೂ, ಅವರ ಕಾಲಾನಂತರ ಅವರ ಶೈಲಿಗೆ ಹೆಸರನ್ನು ನೀಡುವ ಕುರಿತಾದ ಆಂದೋಲನವು ಆವೇಗವನ್ನು ಪಡೆದುಕೊಂಡಿತು. ೧೯೯೩ ರಲ್ಲಿ, ತ್ರಿವೇಂದ್ರಂನಲ್ಲಿ ನಡೆದ ಗುರು ಗೋಪಿನಾಥ್ ಮತ್ತು ಕೇರಳ ನಾಟನಮ್ ಕುರಿತಾದ ಜಾಗತಿಕ ಸಮ್ಮೇಳನದಲ್ಲಿ, ಅವರ ವಿದ್ಯಾರ್ಥಿಗಳು ಈ ಶೈಲಿಗೆ ಸಂಸ್ಕೃತದ ವಿವರಣೆಯನ್ನು ನೀಡಿದರು. ಕೇರಳೀಯ ಶಾಸ್ತ್ರೀಯ ಸರ್ಗಾತ್ಮಕ ನೃತ್ಯಂ -"ಕೇರಳದಿಂದ ಜನ್ಮ ತಳೆದ ಒಂದು ಸಾಂಪ್ರದಾಯಿಕ ಸೃಜನಾತ್ಮಕ ನೃತ್ಯ ಶೈಲಿ."
ಕೇರಳ ನಟನಮ್ ಅನ್ನು ಮೂರು ವಿಧಗಳಲ್ಲಿ ಪ್ರದರ್ಶಿಸಬಹುದು: ಏಕಾಂಗ ನಟನಮ್ ಅಂದರೆ ಒಬ್ಬಂಟಿ ಪ್ರದರ್ಶನ, ಸಂಘ ನಟನಮ್ ಅಂದರೆ ಸಮೂಹ, ನಾಟಕ ನಟನಮ್ ಅಂದರೆ ಕಥೆಯೊಂದನ್ನು ಅಭಿನಯಿಸು ನೃತ್ಯ ನಾಟಕ. ಪುರುಷ ಮಹಿಳೆ ಜೋಡಿಯ ನೃತ್ಯ ಮಾಡುವಿಕೆ (ಯುಗಳ ನರ್ತನ)ಯು ಕೇರಳ ನಟನಮ್‌ನಲ್ಲಿ ವಿಶಿಷ್ಟಪೂರ್ಣವಾದ ಶೈಲಿಯಾಗಿದೆ. ಹಾಗೆಯೇ ಅವರು ನೃತ್ಯ ನಾಟಕವನ್ನು ೫ ಅಥವಾ ೬ ಗಂಟೆಗಳ ದೀರ್ಘಾವಧಿಯ ನೃತ್ಯ ಪ್ರದರ್ಶನಕ್ಕೂ ವಿಸ್ತರಿಸಿದರು ಮತ್ತು ಅದಕ್ಕೆ ಭಾರತೀಯ ನೃತ್ಯ ರೂಪಕವೆಂದು ಕರೆಯಲಾಯಿತು.
ಕೇರಳ ನಂದನಮ್‌ನಲ್ಲಿನ ಪ್ರಮುಖ ಕಲಾವಿದರು
[ಬದಲಾಯಿಸಿ]' ೧.ಗುರು ಚಂದ್ರಶೇಖರನ್ (೧೯೧೬ – ೧೯೯೮)
ಗುರು ಚಂದ್ರಶೇಖರನ್ ಅವರು ಮಹಾನ್ ಭಾರತೀಯ ನೃತ್ಯಗಾರರು ಮತ್ತು ನೃತ್ಯ ಸಂಯೋಜಕರಾಗಿದ್ದರು ಮತ್ತು ಇವರು ೧೯೧೬ ರಲ್ಲಿ ಕೇರಳದ ತ್ರಿವೇಂದ್ರಂನಲ್ಲಿ ಜನಿಸಿದರು. ಇವರ ತಂದೆಯವರು ಎನ್‌ಕೆ ನಾಯರ್ (ಕುಂಜು ಕೃಷ್ಣನ್ ಕುರುಪ್) ಅವರಾಗಿದ್ದು, ಇವರು ಹೆಸರಾಂತ ತೈಲ ಚಿತ್ರಗಾರರಾಗಿದ್ದರು. ವಿಶ್ವವಿದ್ಯಾನಿಲಯದಲ್ಲಿ ಅಧ್ಯಯನ ಮಾಡುತ್ತಿರುವ ಸಂದರ್ಭದಲ್ಲಿ, ಇವರು ತಮ್ಮ ತಂದೆ ತಾಯಿಯವರಿಗೆ ಮಾಹಿತಿ ನೀಡದೆಯೇ ನೃತ್ಯಾಭ್ಯಾಸವನ್ನು ಪ್ರಾರಂಭಿಸಿದರು. ಇವರು ಗುರು ಗೋಪಿನಾಥ್ ಅವರ ಮಾರ್ಗದರ್ಶನದಲ್ಲಿ ಕಥಕ್ಕಳಿ ನೃತ್ಯವನ್ನು ಅಧ್ಯಯನ ಮಾಡಿದರು. ಆ ಸಮಯದಲ್ಲಿ, ಗೋಪಿನಾಥ್ ಅವರು ಟ್ರಾವಂಕೂರ್ ಅರಮನೆಯಿಂದ ರಾಜಾಶ್ರಯವನ್ನು ಪಡೆದರು ಮತ್ತು 'ಶ್ರೀ ಚಿತ್ರೋದಯ ನಾರ್ಥ ಕಲಾಲಯಂ' ಎಂಬ ಹೆಸರಿನ ನೃತ್ಯ ಶಾಲೆಯನ್ನು ಟ್ರಾವಂಕೂರ್‌ನ ಪೂಜಪ್ಪುರ ಸರ್ಕಾರವು ಸ್ಥಾಪಿಸಿತು. ಚಂದ್ರಶೇಖರನ್ ಅವರು ಈ ಶಾಲೆಯ ವಿದ್ಯಾರ್ಥಿಗಳಲ್ಲಿ ಒಬ್ಬರಾಗಿದ್ದರು. ಕೆಲವು ಸಮಯದ ನಂತರ, ಅರಮನೆಯ ಕಥಕ್ಕಳಿ ಕಲಾವಿದರೂ ಸಹ ಆಗಿದ್ದ ನೆಡುಮಾಡಿ ನಾರಾಯಣ ಕುರುಪ್ ಅವರಿಂದ ಚಂದ್ರಶೇಖರನ್ ಅವರು ಕಥಕ್ಕಳಿಯನ್ನು ಕಲಿತರು. ಆನಂತರ, ಅವರು ತಮ್ಮದೇ ತಂಡವನ್ನು ಆಯೋಜಿಸಿದರು ಮತ್ತು ಭಾರತದ ವಿವಿಧ ಭಾಗಗಳಲ್ಲಿ ಪ್ರದರ್ಶನವನ್ನು ನೀಡಿದರು. ಆ ಸಮಯದಲ್ಲಿ, ಶಾಸ್ತ್ರೀಯ ನೃತ್ಯಗಳಲ್ಲಿ ಸಾಮಾಜಿಕ ವಿಷಯಗಳನ್ನು ಅಪರೂಪಕ್ಕೆ ಬಳಸಲಾಗುತ್ತಿತ್ತು. ಇವರು ನೃತ್ಯದಲ್ಲಿ ಹಲವು ಸಾಮಾಜಿಕ ವಿಷಯಗಳನ್ನು ನಿರ್ದೇಶಿಸಿದರು ಮತ್ತು ನೃತ್ಯ ಸಂಯೋಜನೆಯನ್ನು ಮಾಡಿದರು. ಭಾರತೀಯ ಸೈನ್ಯವು ವಿಶ್ವ ಯುದ್ಧ II ದಲ್ಲಿ ತೊಡಗಿಸಿಕೊಂಡದ್ದರಿಂದ ೧೯೪೩ ರಲ್ಲಿ ಸರ್ಕಾರದ ಆಮಂತ್ರಣದ ಮೇರೆಗೆ, ಇವರು ತಮ್ಮ ತಂಡವನ್ನು ಅಲೆಕ್ಸಾಂಡ್ರಿಯಾ (ಈಜಿಪ್ಟ್), ಮಧ್ಯ ಪ್ರಾಚ್ಯ ಮತ್ತು ಇಟಲಿ ದೇಶಗಳಿಗೆ ಸೈನ್ಯದ ಮನರಂಜನೆಗಾಗಿ ಕೊಂಡೊಯ್ದರು. ೧೯೪೬ ರಲ್ಲಿ ಯುದ್ಧವು ಮುಗಿದಾಗ, ಇವರು ಮತ್ತೊಮ್ಮೆ ದೂರಪ್ರಾಚ್ಯಕ್ಕೆ ತೆರಳಲು ಪ್ರಯತ್ನಿಸಿದರು, ಆದರೆ ಸಿಲೋನ್‌ನಲ್ಲಿ ಪ್ರವಾಸವು ಕೊನೆಗೊಂಡಿತು.
ಇವರು ಪಶ್ಚಿಮ ಬಂಗಾಳದ ಶಾಂತಿನಿಕೇತನದಲ್ಲಿ ನೃತ್ಯ ಪ್ರೊಫೆಸರ್ ಆಗಿ, ಕೇರಳ ವಿಶ್ವವಿದ್ಯಾನಿಲಯದ ಸೆನೆಟ್ ಸದಸ್ಯರಾಗಿ, ಕೇರಳ ಕಲಾಮಂಡಲಂ ಸರ್ಕಾರಿ ಸಂಸ್ಥೆಯ ಆಡಳಿತ ಮಂಡಳಿ ನಿರ್ದೇಶಕರಾಗಿ, ಮಲಯಾಳಂ ಎನ್‌ಸೈಕ್ಲೋಪೀಡಿಯಾದ ಸಲಹಾ ಮಂಡಳಿಯ ಸದಸ್ಯರಾಗಿ, ಸ್ವಾತಿ ತಿರುನಾಳ್ ಸಂಗೀತ ಕಾಲೇಜಿನ ಅತಿಥಿ ನೃತ್ಯ ಪ್ರೊಫೆಸರ್ ಆಗಿ ಮತ್ತು ತ್ರಿವೇಂದ್ರಂನ ಬಾಲ ಭವನದ ಆಡಳಿತ ಮಂಡಳಿಯ ಸ್ಥಾಪಕ ಸದಸ್ಯರಾಗಿ ಕಾರ್ಯನಿರ್ವಹಿಸಿದರು.
ನಲ್ವತ್ತರ ದಶಕದ ಕೊನೆಯಲ್ಲಿ, ಅವರ ಕೆಲವು ಸ್ನೇಹಿತರ ಒತ್ತಾಯದ ಮೇರೆಗೆ, ನೃತ್ಯ ಪ್ರಕಾರದಲ್ಲಿ ರಾಜಕೀಯ ವಿಷಯವಸ್ತುವಾದ 'ವಾಯ್ಸ್ ಆಫ್ ಟ್ರಾವಂಕೂರ್' ಅನ್ನು ರಚಿಸಿದರು ಮತ್ತು ಪ್ರಸ್ತುತ ಪಡಿಸಿದರು, ಇದು ದೀವಾನ್ ಸರ್ ಸಿಪಿ ರಾಮಸ್ವಾಮಿಯವರ ನಿರಂಕುಶ ಪ್ರಭುತ್ವದ ಆಡಳಿತವನ್ನು ಮತ್ತು ಆನಂತರದ ಜನರ ಚಳುವಳಿಯನ್ನು ಪ್ರತಿಬಿಂಬಿಸುತ್ತಿತ್ತು. ಆದರೆ ಸರ್ ಸಿಪಿ ಅವರು ಚಂದ್ರಶೇಖರನ್ ಅವರ ಕಲೆಯ ಅಭಿಮಾನಿಯಾಗಿದ್ದರು. ಆದರೆ, ೧೯೪೬ ರಲ್ಲಿ ತ್ರಿವೇಂದ್ರಮ್‌ನಲ್ಲಿ ನಡೆದ ಅಖಿಲ ಭಾರತ ಶೈಕ್ಷಣಿಕ ಸಮ್ಮೇಳನದಲ್ಲಿ ಅತ್ಯುಚ್ಛ ಮಟ್ಟದ ಪ್ರಶಂಸೆಯನ್ನು ಪಡೆದರು.
ವರದಿಯ ಪ್ರಕಾರ: "ಚಂದ್ರಶೇಖರನ್ ಅವರು ನಟರಾಜ ತಾಂಡವವನ್ನು ಅಸಾಧಾರಣ ರೀತಿಯಲ್ಲಿ ಪ್ರಸ್ತುತ ಪಡಿಸಿದರು. ಇವರು ಬೇಟೆಗಾರನ ನೃತ್ಯವನ್ನು ಪ್ರದರ್ಶಿಸಿದಾಗ, ಅರಣ್ಯದಲ್ಲಿ ಬದುಕುಳಿದ ಎಲ್ಲರ ಒಡೆಯನಾಗಿ ಅವರ ಸಂತೋಷವನ್ನು ಸ್ಪುಟವಾಗಿ ಗ್ರಹಿಸಬಹುದಾಗಿತ್ತು. ಅವರನ್ನು ಹಾವೊಂದು ಕಚ್ಚಿದಾಗ, ಆತ್ಮಹತ್ಯಾ ಪ್ರವೃತ್ತಿಯ ತೀವ್ರಯಾತನೆಯನ್ನು ಅವರು ಅನುಭವಿಸುತ್ತಿರುವಾಗಿನ ಸಂದರ್ಭದ ದುರಂತಮಯ ಭಾವುಕತೆಯನ್ನು ಅತೀ ಅಸಾಧಾರಣ ಮಟ್ಟದವರೆಗೆ ಅವರು ಹುಟ್ಟಿಸುತ್ತಿದ್ದರು. ಅವರು 'ಅರ್ಧನಾರೀಶ್ವರ' ರಾಗಿ ಪ್ರವೇಶಿಸಿದಾಗ, ಇಲ್ಲಿ ದೇಹವು ಕ್ರಿಯಾಶೀಲತೆ ಮತ್ತು ದೈವಾನುಗ್ರಹದ ದ್ವಿಗುಣ ಕರೆಗೆ ಪ್ರತಿಕ್ರಯಿಸುತ್ತಿತ್ತು. ಇದು ಉದಯ್ ಶಂಕರ್ ಅವರು ಮಾಡಬಹುದಾದ್ದಕ್ಕಿಂತ ಬಹಶಃ ಹೆಚ್ಚಿನದಾಗಿತ್ತು" ಮಹಾತ್ಮಾ ಗಾಂಧಿಯವರ ದುರಂತಮಯ ಅಂತ್ಯವನ್ನು ಪ್ರತಿಬಿಂಬಿಸುವ ಇವರ ಮತ್ತೊಂದು ರಚನೆಯಾದ 'ಪೋಲಿಂಜ ದೀಪಮ್' (ಆರಿದ ದೀಪ)ವನ್ನು ೧೯೪೮ ರಲ್ಲಿ ಪ್ರದರ್ಶಿಸಲಾಯಿತು.
೧೯೪೯ ರಲ್ಲಿ ಇವರು ಕಥಕ್ಕಳಿ ನೃತ್ಯದ ಪ್ರೊಫೆಸರ್ ಆಗಿ ವಿಶ್ವಭಾರತಿ ವಿಶ್ವವಿದ್ಯಾನಿಲಯ (ಶಾಂತಿನಿಕೇತನ)ವನ್ನು ಸೇರಿದರು. ಈ ಸಮಯಾವಧಿಯಲ್ಲಿ, ಇವರು ರವೀಂದ್ರನಾಥ್ ಟಾಗೋರ್‌ರವರ ಪ್ರಸಿದ್ಧ ನೃತ್ಯ ನಾಟಕಗಳಾದ 'ಚಿತ್ರಾಂಗಧಾ", 'ಚಂದ್ರಲೇಖಾ' ಇತ್ಯಾದಿಯನ್ನು ರಚಿಸಿದರು ಮತ್ತು ನವದೆಹಲಿ ಮತ್ತು ಕಲ್ಕತ್ತಾ ಒಳಗೊಂಡು ಉತ್ತರ ಭಾರತದ ವಿವಿಧ ನಗರಗಳಲ್ಲಿ ಪ್ರದರ್ಶಿಸಿದರು. ವಿಶ್ವಭಾರತಿಯಲ್ಲಿ, ಖಂಡಿ, ಬಾಲಿ, ಬರ್ಮಾ ಇತರವುಗಳಿಂದ ಒಳಗೊಂಡು ವಿವಿಧ ನೃತ್ಯ ಪ್ರಕಾರಗಳೊಂದಿಗೆ ಪರಿಚಯ ಮಾಡಿಕೊಳ್ಳುವ ಅವಕಾಶ ಇವರಿಗೆ ದೊರಕಿತು. ಶಾಂತಿನಿಕೇತನದಲ್ಲಿ ಅವರು ಇದ್ದ ಈ ಅವಧಿಯಲ್ಲಿ, ಆಗಿನ ಸಂದರ್ಭದಲ್ಲಿ ಶಾಂತಿನಿಕೇತನಕ್ಕೆ ಆಗಾಗ್ಗೆ ಭೇಟಿ ನೀಡುತ್ತಿದ್ದ ಪ್ರೊ. ಹುಮಾಯೂನ್ ಕಬೀರ್, ಜಾಕೀರ್ ಹುಸೇನ್ (ಭಾರತದ ಮಾಜಿ ರಾಷ್ಟ್ರಪತಿಗಳು) ಅವರೊಂದಿಗೆ ಇವರು ಪರಿಚಯ ಮಾಡಿಕೊಂಡರು. ಈ ಎಲ್ಲಾ ಪ್ರಸಿದ್ಧ ವ್ಯಕ್ತಿಗಳು ಪ್ರದರ್ಶನ ಕಲೆಯಲ್ಲಿ ಚಂದ್ರಶೇಖರನ್ ಅವರ ಪ್ರತಿಭೆಯನ್ನು ಕೊಂಡಾಡಿದರು: "ಚಂದ್ರಶೇಖರನ್ ಅವರು ಅತ್ಯುತ್ತಮ ಭಾವಗರ್ಭಿತತೆಯನ್ನು ಹೊಂದಿದ್ದರು ಮತ್ತು ಕುಶಲತೆ ಮತ್ತು ಸಾಮರ್ಥ್ಯದೊಂದಿಗೆ ಭಾವನೆಯ ಛಾಯೆಗಳನ್ನು ಸಂವಹನ ಮಾಡುವ ಸಾಮರ್ಥ್ಯವುಳ್ಳವರಾಗಿದ್ದರು. ಇವರ ತಾಳದ ಗ್ರಹಿಕೆ ಮತ್ತು ನಾಟಕದ ವ್ಯಾಖ್ಯಾನವು ಇವರನ್ನು ಶ್ರೇಷ್ಠ ಕಲಾವಿದರನ್ನಾಗಿ ಗುರುತಿಸಿದೆ."
೧೯೫೨ ರ ಫೆಬ್ರವರಿ ೨೧ ರಂದು ಕವಿ ಹರೀಂದ್ರನಾಥ ಚಟ್ಟೋಪಾಧ್ಯಾಯ ಅವರು ಚಂದ್ರಶೇಖರನ್ ಅವರ ಬಗ್ಗೆ ಈ ರೀತಿಯಾಗಿ ಬರೆದಿದ್ದಾರೆ. "ಏಕೈಕ ದೃಢ ಸಂಕಲ್ಪದ, ಬೆಂಬಲವಿಲ್ಲದೇ ನೀವು ನಿರ್ಮಾಣ ಮಾಡಿದ್ದು ಎದೆಗಾರಿಕೆಯಾಗಿದೆ ಇದು ನೀವು ಧೈರ್ಯೋತ್ಸಾಹಗಳ ಎದೆಗಾರಿಕೆಯನ್ನು ಹೊಂದಿರುವುದಾಗಿ ತೋರಿಸುತ್ತದೆ, ನನ್ನ ಅಂತರಂಗದಿಂದ ನಿಮಗೆ ಶುಭ ಹಾರೈಸುತ್ತೇನೆ."
ಗಾಂಧೀವಾದಿ ಮತ್ತು ಶಾಂತಿನಿಕೇತನದ ಧೀನಬಂಧುವಿನ ಮಾಜಿ ನಿರ್ದೇಶಕರಾದ ಎಸ್‌ಕೆ ಜಾರ್ಜ್ ಅವರು ಚಂದ್ರಶೇಖರನ್ ಬಗ್ಗೆ "ಶ್ರೀ ಚಂದ್ರಶೇಖರನ್ ಅವರು ಶಾಂತಿನಿಕೇತನವು ಹೊಂದಿದ್ದ ಅತ್ಯುತ್ತಮ ಶಿಕ್ಷಕರಲ್ಲಿ ಒಬ್ಬರಾಗಿದ್ದಾರೆ ಮತ್ತು ದೇಶದ ವಿವಿಧ ಭಾಗಗಳ ವಿದ್ಯಾರ್ಥಿಗಳಲ್ಲಿ ಅಧ್ಯಯನದ ಬಗ್ಗೆ ಆಸಕ್ತಿಯನ್ನು ಕೆರಳಿಸಲು ಸಾಕಷ್ಟು ಕಾರ್ಯ ಮಾಡಿದ್ದಾರೆ. ಶಾಂತಿನಿಕೇತನದಲ್ಲಿ ಅವರ ವಾಸ್ತವ್ಯದ ಸಂದರ್ಭದಲ್ಲಿ ಅವರ ಕಲೆಯ ಕೌಶಲ್ಯದಿಂದ ವಿಶ್ವದ ಎಲ್ಲಾ ಭಾಗಗಳ ಸಂದರ್ಶಕರನ್ನು ಸಂತೋಷಪಡಿಸಿದ್ದಾರೆ ಮತ್ತು ವಿಶ್ವ ಶಾಂತಿಪ್ರಿಯರ ಸಭೆಯ ಪ್ರತಿನಿಧಿಗಳನ್ನು ಒಳಗೊಂಡು ಅವರೆಲ್ಲರಿಂದಲೂ ಉಜ್ವಲವಾದ ಮೆಚ್ಚುಗೆಯನ್ನು ಪಡೆದಿದ್ದಾರೆ. ಶಾಂತಿನಿಕೇತನದಲ್ಲಿ ಮತ್ತು ಹೊರಗಡೆ ಪ್ರಸ್ತುತ ಪಡಿಸಿದ 'ಚಂಡಾಲಿಕಾ,' 'ಚಿತ್ರಾಂಗಧಾ' ಮತ್ತು 'ಸ್ಯಾಮಾ' ನಂತಹ ಗುರುದೇವ್ ಅವರ ನೃತ್ಯ ನಾಟಕಗಳಲ್ಲಿ, ಅವರು ಪ್ರಮುಖ ಪಾತ್ರಗಳನ್ನು ವಹಿಸಿದ್ದಾರೆ." ಎಂದು ಹೇಳಿದ್ದಾರೆ.
ಹಲವು ವರ್ಷಗಳ ನಂತರ, ಚಂದ್ರಶೇಖರನ್ ಅವರು ವಿಶ್ವಭಾರತಿಯಿಂದ ಮರಳಿ ಬಂದು ಪ್ರತಿಭಾ ನೃತಕಲಾ ಕೇಂದ್ರ ಎಂಬ ಹೆಸರಿನ ತಮ್ಮದೇ ಶಾಲೆಯನ್ನು ತ್ರಿವೇಂದ್ರಂನಲ್ಲಿ ಪ್ರಾರಂಭಿಸಿದರು. ೧೯೫೪ ರ ಸಂದರ್ಭದಲ್ಲಿ, ಭೂಸುಧಾರಣಾವಾದಿ ಚಳುವಳಿಯನ್ನು ಸಮರ್ಥಿಸುವ ಸಾಮಾಜಿಕ ವಿಷಯ ವಸ್ತುವುಳ್ಳ 'ತಿಲಕ್ಕುನ್ನ ಮನ್ನು ' (ಕುದಿಯುತ್ತಿರುವ ಮರಳು) ಅನ್ನು ಪ್ರದರ್ಶಿಸಿದರು. ಇದು ರಾಷ್ಟ್ರಪತಿ ರಾಜೇಂದ್ರ ಪ್ರಸಾದ್ ಮತ್ತು ಡಾ.ರಾಧಾಕೃಷ್ಣನ್ ಅವರನ್ನು ಒಳಗೊಂಡು ಪ್ರಖ್ಯಾತ ವ್ಯಕ್ತಿಗಳಿಂದ ವ್ಯಾಪಕವಾದ ಮನ್ನಣೆಯನ್ನು ಗಳಿಸಿತು.
ಚಂದ್ರಶೇಖರನ್ ಅವರ ರಚನಾತ್ಮಕ ಕೊಡುಗೆಗಳಲ್ಲಿ 'ವಾಯ್ಸ್ ಆಫ್ ಟ್ರಾವಂಕೂರ್,' 'ಮನಿಷದಾ,' 'ಶಿವ ತಾಂಡವಮ್,' 'ಗಣೇಶ ನೃತಮ್,' 'ಅರ್ಧನಾರೀಶ್ವರ,' 'ಸೂರ್ಯ ನೃತಮ್,' 'ಗೀತೋಪದೇಶಮ್,' ಕಾಳಿದಾಸ ಅವರ 'ಕುಮಾರ ಸಂಭವಮ್,' 'ಶಾಕುಂತಲಮ್,' ಕುಮಾರನ್ ಅಸನ ಅವರ 'ಚಾಂಡಾಲ ಭಿಕ್ಷುಕಿ,' ವಲ್ಲತೋಳ ಅವರ 'ಮಗ್ಧಾಲನ ಮಾರಿಯ,' 'ಗುರುವಂ ಶಿಷ್ಯನುಮ್,' ವಯಲಾರ್ ಅವರ 'ಆಯಿಷಾ,' ಚಂಗಂಪುಳಾ ಅವರ 'ರಾಮನನ್' ಮತ್ತು 'ಮಾರ್ಕಂಡೇಯನ್,' 'ಮೋಹಿನಿ ರುಕ್ಮಾಂಗಧಾ,' 'ಸಾವಿತ್ರಿ,' 'ದಕ್ಷಯಾಗಂ,' 'ಏಕಲವ್ಯನ್,' 'ಚಿಲಪ್ಪಡಿಕಾರಂ,' ಗ್ರೀಕ್ ಕಥೆಯಾದ 'ಪೈಗಮಲಿಯೋನ್,' ಚೀನಾದ ಕಥೆ 'ಫಿಶರ್‌ಮೆನ್ಸ್ ರಿವೆಂಜ್,' ಜಪಾನೀಸ್ ಕಥೆಯಾದ 'ಎಸಾಶಿಯುವೋ' (ಪ್ರಾಪಿಡಿಯನ್ ಪಥಾಲಥಿಲ್), ಬೈಬಲ್ ಕಥೆಯಾದ 'ಸಾಲೋಮ್' ಮತ್ತು ಇನ್ನಷ್ಟವುಗಳ ರಚನೆಗಳು ಒಳಗೊಂಡಿವೆ. ಇವರು 'ಶ್ರೀ ಗುರುವಾಯೂರಪ್ಪನ್,' 'ಕುಮಾರ ಸಂಭವಮ್,' 'ಶ್ರೀ ಅಯ್ಯಪ್ಪನ್,' 'ಹೃಷ್ಯ ಶ್ರೀರಂಗಮ್' ಮತ್ತು 'ಶ್ರೀ ಹನುಮಾನ್'ನಂತಹ ಹಲವಾರು ನೃತ್ಯರೂಪಕಗಳನ್ನು ರಚಿಸಿದ್ದಾರೆ ಮತ್ತು ಪ್ರದರ್ಶಿಸಿದ್ದಾರೆ.
ಇವರು ಭಾರತೀಯ ಇತಿಹಾಸದ ಹಿನ್ನೆಲೆಯಲ್ಲಿ ೧೯೬೪ ರಲ್ಲಿ 'ಹಿಮವಂತೆ ಮಕ್ಕಳ್ ' (ಹಿಮಾಲಯದ ಮಕ್ಕಳು) ಎಂಬ ಹೆಸರಿನ ನೃತ್ಯರೂಪಕವನ್ನು ನಿರ್ಮಿಸಿದರು ಮತ್ತು ಇದು ೧೯೬೨ ರಲ್ಲಿ ಭಾರತದ ಮೇಲೆ ಚೀನಾ ಆಕ್ರಮಣದೊಂದಿಗೆ ಮುಕ್ತಾಯಗೊಂಡಿತ್ತು. ಇದನ್ನು ನೋಡಿದ ನಂತರ, ಆಗಿನ ಕೇರಳದ ರಾಜ್ಯಪಾಲರಾಗಿದ್ದ ವಿ.ವಿ.ಗಿರಿ ಅವರು ಎಷ್ಟು ಸಂತೋಷಗೊಂಡಿದ್ದರೆಂದರೆ ಅವರು ಚಂದ್ರಶೇಖರನ್ ಅವರನ್ನು ರಾಜ ಭವನಕ್ಕೆ ಆಮಂತ್ರಿಸಿ ಅವರನ್ನು ಗೌರವಿಸಿದರು. ಅವರ ಅಭಿನಂದನಾಪೂರ್ವಕ ಟಿಪ್ಪಣಿಗಳ ಸಾರವು ಇಲ್ಲಿದೆ.
"ತ್ರಿವೇಂದ್ರಮ್‌ನ ಪ್ರತಿಭಾ ನೃತಕಲಾ ಕೇಂದ್ರದವರು ಪ್ರಸ್ತುತ ಪಡಿಸಿದ ಮತ್ತು ಹೆಸರಾಂತ ಮತ್ತು ಪ್ರಖ್ಯಾತ ನೃತ್ಯಪಟು ಚಂದ್ರಶೇಖರನ್ ಅವರು ನಿರ್ದೇಶಿಸಿದ ರಾಷ್ಟ್ರೀಯ ಐಕ್ಯತೆಯ ಕುರಿತು ಆಧರಿಸಿದ ನೃತ್ಯ ನಾಟಕದ ಪ್ರದರ್ಶನವನ್ನು ವೀಕ್ಷಿಸಿ ಹರ್ಷಗೊಂಡಿದ್ದೇನೆ. ಈ ನಾಟಕವು ನಾವು ವೈದಿಕ ಕಾಲದಿಂದ ಇಲ್ಲಿಯವರೆಗೆ ಸಾಗಿ ಬಂದ ಹಲವು ಅವಧಿಗಳನ್ನು ವಿವರಿಸುತ್ತದೆ. ಇದು ಚಿಂತನಾಶಕ್ತಿಯನ್ನು ಉದ್ದೀಪನೆ ಮಾಡುವ ನಾಟಕವಾಗಿದೆ ಮತ್ತು ಈ ಪ್ರದರ್ಶನದಲ್ಲಿ ಭಾಗವಹಿಸುವ ವ್ಯಕ್ತಿಯು ಉತ್ಸುಕತೆಯನ್ನು ಮತ್ತು ಪ್ರೇರೇಪಣೆಯನ್ನು ಪಡೆಯುತ್ತಾರೆ ಮತ್ತು ತಮ್ಮ ರಾಷ್ಟ್ರಭಕ್ತಿಯ ಉತ್ಸಾಹವನ್ನು ಮತ್ತು ತಮ್ಮ ರಾಷ್ಟ್ರಕ್ಕೆ ತ್ಯಾಗ ಮಾಡುವ ಪ್ರೀತಿಯನ್ನು ಹೆಚ್ಚಿಸಿಕೊಳ್ಳುತ್ತಾರೆ."
೧೯೬೫ ರಲ್ಲಿ, ಚಂದ್ರಶೇಖರನ್ ಅವರು ಸಂಗೀತ ನಾಟಕವನ್ನು ರಚನೆ ಮಾಡಿದರು ಮತ್ತು ಇದು ಮಲಯಾಳಂನಲ್ಲಿ ಮತ್ತು ಇತರ ಯಾವುದೇ ಭಾರತೀಯ ಭಾಷೆಯಲ್ಲಿ ಇಂತಹ ಪ್ರಕಾರಗಳಲ್ಲಿ ಮೊದಲನೆಯದಾಗಿತ್ತು. ಸಂಗೀತ ನಾಟಕವು ಮಹಾಭಾರತದ ಪಾತ್ರವಾದ ಕರ್ಣನ ಮೇಲೆ ಆಧಾರಿತವಾಗಿತ್ತು. ಚಂದ್ರಶೇಖರನ್ ಅವರು ಸ್ವತಃ ಕರ್ಣನ ಪಾತ್ರವನ್ನು ನಿರ್ವಹಣೆ ಮಾಡಿದರು ಮತ್ತು ಅದರಲ್ಲಿ ಸುಮಾರು ಇತರ ನೂರು ಜನರು ಭಾಗವಹಿಸಿದರು, ಇದನ್ನು ಒಂದು ತಿಂಗಳಿಗಿಂತ ಹೆಚ್ಚು ಕಾಲ ತ್ರಿವೇಂದ್ರಂನಲ್ಲಿ ಪ್ರದರ್ಶಿಸಲಾಯಿತು. ಸಂಗೀತ ನಾಟಕವನ್ನು ಕಲಾ ನಿಲಯಂ ಖಾಯಂ ಥಿಯೇಟರ್‌ನವರು ನಿರ್ಮಾಣ ಮಾಡಿದ್ದರು. ನಂತರ ಚಂದ್ರಶೇಖರನ್ ಅವರು ಪ್ರತಿಭಾ ಒಪೆರಾ ಹೌಸ್ ಎಂದು ಕರೆಯಲಾಗುವ ತಮ್ಮ ಸ್ವಂತ ವೇದಿಕೆಯನ್ನು ಪ್ರಾರಂಭಿಸಿದರು ಮತ್ತು ಮಹಾಭಾರತದ ನಾಯಕನ ಮೇಲೆ ಆಧಾರಿತವಾದ 'ಭೀಷ್ಮರ್' ಎಂಬ ಶೀರ್ಷಿಕೆಯ ಸಂಗೀತ ನಾಟಕವನ್ನು ನಿರ್ಮಾಣ ಮಾಡಿದರು, ಇದು ಕಲಾತ್ಮಕವಾಗಿ ಯಶಸ್ಸು ಪಡೆಯಿತು ಆದರೆ ಆರ್ಥಿಕವಾಗಿ ನೆಲಕಚ್ಚಿತು, ಇದರಿಂದ ಅವರು ಭಾಗಶಃ ಪಾತ್ರದಿಂದ ಹಿಂದೆ ಸರಿಯುವಂತೆ ಮಾಡಿತು. ಆದರೆ ಅವರು ೧೦೮೦ ರವರೆಗೆ ತಮ್ಮ ಚಟುವಟಿಕೆಗಳನ್ನು ಮುಂದುವರಿಸಿದರು.
ತ್ರಿವೇಂದ್ರಂನ ಹಸನ್ ಮಾರ್ರಿಕರ್ ಹಾಲ್‌ನಲ್ಲಿ ಅವರ ಷಷ್ಠಿಯಬ್ಧಪೂರ್ತಿ (೬೦ ನೇ ಜನ್ಮದಿನ)ಗೆ ಸಂಬಂಧಿಸಿದಂತೆ ಪ್ರೊಫೆಸರ್ ಅಯ್ಯಪ್ಪ ಪಾನಿಕ್ಕರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾರ್ವಜನಿಕ ಸಮಾರಂಭದಲ್ಲಿ ತ್ರಿವೇಂದ್ರಂನ ನಾಗರಿಕರು ಚಂದ್ರಶೇಖರನ್ ಅವರಿಗೆ 'ಗುರು' ಬಿರುದನ್ನು ನೀಡಿ ಸನ್ಮಾನಿಸಿದರು. ೧೯೭೬ ರಲ್ಲಿ ಕೇರಳ ಸಂಗೀತ ನಾಟಕ ಅಕಾಡೆಮಿಯು ಇವರಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸಿತು. ಭಾರತದಲ್ಲಿನ ವಿವಿಧ ನೃತ್ಯಗಳ ಬಗ್ಗೆ ಚಂದ್ರಶೇಖರನ್ ಅವರು ನಿಯತಕಾಲಿಕಗಳಲ್ಲಿ ಹಲವಾರು ಲೇಖನಗಳನ್ನು ಬರೆದಿದ್ದಾರೆ. ಭರತನಾಟ್ಯಂ ಕುರಿತಂತೆ ಇವರ ನಟೀಯ ನಿರಿಶನಮ್ ಎಂಬ ಶೀರ್ಷಿಕೆಯ ಪುಸ್ತಕವು ಮೇರುಕೃತಿಯಾಗಿದೆ ಹಾಗೂ ಭಾರತದ ಸರ್ಕಾರದ ಸಾಂಸ್ಕೃತಿಕ ಇಲಾಖೆಯೊಂದಿಗೆ ಫೆಲೋಶಿಪ್ ಪ್ರಶಸ್ತಿಯೊಂದಿಗೆ ನಡೆಸಿದ ಸಂಶೋಧನಾ ಕಾರ್ಯದ ಅತ್ಯುನ್ನತ ಕೃತಿಯಾಗಿದೆ.
ಚಂದ್ರಶೇಖರನ್ ಅವರು ಕಾಲಪ್ಪುರಕ್ಕಲ್ ಕುಟುಂಬದ, ಅಲಂಗಾಡ್ ಪರವೂರಿನ, ಹಿಂದಿನ ಟ್ರಾವಂಕೂರ್ ರಾಜ್ಯದ ಅಸಿಸ್ಟೆಂಟ್ ಸೂಪರಿಟೆಂಡೆಂಟ್ ಆಫ್ ಪೊಲೀಸ್ ಆಗಿದ್ದರು. ಗೋಪಾಲ ಪಾಣಿಕ್ಕರ್ ಅವರ ಮಗಳು ಮೋಹನವಲ್ಲಿ ಅಮ್ಮ ಅವರನ್ನು ಮದುವೆಯಾದರು. ಇವರ ಪತ್ನಿಯೂ ಸಹ ವಿವಿಧ ನೃತ್ಯ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದರು. ಚಂದ್ರಶೇಖರನ್ ಅವರು ತಮ್ಮ ೮೨ ನೇ ವಯಸ್ಸಿನಲ್ಲಿ ೧೯೯೮ ರ ಆಗಸ್ಟ್ ೫ ರಂದು ನಿಧನರಾದರು.