ಚನ್ನರಾಯಪಟ್ಟಣ
ಚನ್ನರಾಯಪಟ್ಟಣ | |
ಚನ್ನರಾಯಪಟ್ಟಣ ರಸ್ತೆ | |
ರಾಜ್ಯ - ಜಿಲ್ಲೆ |
ಕರ್ನಾಟಕ - ಹಾಸನ |
ನಿರ್ದೇಶಾಂಕಗಳು | |
ವಿಸ್ತಾರ - ಎತ್ತರ |
km² - ೮೨೭ ಮೀ. |
ಸಮಯ ವಲಯ | IST (UTC+5:30) |
ಜನಸಂಖ್ಯೆ (೨೦೦೧) - ಸಾಂದ್ರತೆ |
೩೩,೨೪೦ - ೫,೦೯೦.೩೫/ಚದರ ಕಿ.ಮಿ. |
ಕೋಡ್‍ಗಳು - ಪಿನ್ ಕೋಡ್ - ಎಸ್.ಟಿ.ಡಿ. - ವಾಹನ |
- ೫೭೩ ೧೧೬ - +೦೮೧೭೬ - ಕೆಎ-೧೩ |
ಚನ್ನರಾಯಪಟ್ಟಣ ಹಾಸನ ಜಿಲ್ಲೆಯ ಒಂದು ತಾಲೂಕು ಕೇಂದ್ರ, ಅದರ ಆಡಳಿತ ಕೇಂದ್ರ. ಇದು ಬೆಂಗಳೂರಿನಿಂದ ೧೪೭ ಕಿ.ಮೀ ದೂರದಲ್ಲಿದೆ. ಇದಕ್ಕೆ ಕೊಳತ್ತೂರು/ಅಮೃತಪುರ ಎಂಬ ಹೆಸರುಗಳಿವೆ. ಈ ನಗರದ ಹೆಸರು ಚೆನ್ನಿಗರಾಯಪಟ್ಟಣ - ನಗರವನ್ನು ಆಳುತಿದ್ದ ರಾಜನ ಹೆಸರಿನಿಂದ ಬಂದಿದ್ದುದು. ಚನ್ನರಾಯಪಟ್ಟಣದಲ್ಲಿ ಆರು ಹೋಬಳಿಗಳಿವೆ. ೧. ನುಗ್ಗೇಹಳ್ಳಿ ೨. ಹಿರಿಸಾವೆ ೩. ಬಾಗೂರು ೪.ಶ್ರವಣಬೆಳಗೊಳ ೫. ದಂಡಿಗನಹಳ್ಳಿ ೬.ಕಸಬಾ
ಉತ್ತರದಲ್ಲಿ ಅರಸೀಕೆರೆ ತಾಲ್ಲೂಕು ಮತ್ತು ತುಮಕೂರು ಜಿಲ್ಲೆಯ ತಿಪಟೂರು ತಾಲ್ಲೂಕು, ಪೂರ್ವದಲ್ಲಿ ತುಮಕೂರು ಜಿಲ್ಲೆಯ ತುರುವೇಕೆರೆ ತಾಲ್ಲೂಕು ಮತ್ತು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕು, ದಕ್ಷಿಣದಲ್ಲಿ ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ತಾಲ್ಲೂಕು, ನೈಋತ್ಯ ಮತ್ತು ಪಶ್ಚಿಮದಲ್ಲಿ ಹೊಳೆನರಸೀಪುರ ಮತ್ತು ಹಾಸನ ತಾಲ್ಲೂಕುಗಳು ಚೆನ್ನರಾಯಪಟ್ಟಣ ತಾಲ್ಲೂಕನ್ನು ಸುತ್ತುವರಿದಿವೆ. ವಿಸ್ತೀರ್ಣ 1,042.26ಚ.ಕಿ.ಮೀ., ಜನಸಂಖ್ಯೆ 2,78,112 (2001), ಜನವಸತಿಯಿರುವ ಗ್ರಾಮಗಳ ಸಂಖ್ಯೆ 365.
ಚನ್ನರಾಯಪಟ್ಟಣದಲ್ಲಿ 1918ರಲ್ಲಿ ಪುರಸಭೆ ಸ್ಥಾಪಿತವಾಯಿತು. ಪಟ್ಟಣದ ಜನಸಂಖ್ಯೆ 34,502 (2001).
ಚನ್ನರಾಯಪಟ್ಟಣ ಮುಖ್ಯವಾದ ವ್ಯಾಪಾರಿ ಕೇಂದ್ರವಾಗಿದೆ. ಇಲ್ಲಿ ಮಾರಾಟವಾಗುವ ವಸ್ತುಗಳಲ್ಲಿ ತೆಂಗು ಮತ್ತು ಬೆಲ್ಲ ಮುಖ್ಯವಾದವುಗಳು. ಪ್ರತಿ ಶನಿವಾರ ಇಲ್ಲಿ "ಸಂತೆ" ನಡೆಯುತ್ತದೆ. ಸಂತೆ ಸುತ್ತ ಮುತ್ತಲಿನ ಎಲ್ಲಾ ಹಳ್ಳಿ ಮತ್ತು ಸಾಗತವಳ್ಳೀ ಯಿಂದ ಹೆಚ್ಚು ಜನರು ಸಂತೆಗೆ ಬಂದು ವ್ಯಾಪಾರ ಮಾಡುತ್ತಾರೆ. ಬಹುಮುಖ್ಯವಾದ ಜಾತ್ರಾ ಸಮಾರಂಭ ೭ ದಿನಗಳ ಕಾಲ ನಡೆಯುತ್ತದೆ. ಇಲ್ಲಿಗೆ ರಾಜ್ಯದ ವಿವಿಧ ಜಿಲ್ಲೆಗಳಂದ ಬಂದು ದೇವರ ಕೃಪೆಗೆ ಪಾತ್ರರಾಗುತ್ತಾರೆ. ಆನೆಕೆರೆಯಮ್ಮ ಮತ್ತು ಕುಂದೂರು ಮಠದ ಮೆಳಿಯಮ್ಮ ದೇವಿ ಇಲ್ಲಿಯ ಬಹು ಮುಖ್ಯವಾದ ದೇವಾಲಯಗಳು.
ಶ್ರವಣಬೆಳಗೊಳ: ಶ್ರವಣಬೆಳಗೊಳ ಈ ತಾಲ್ಲೂಕಿನ ಅತ್ಯಂತ ಪ್ರಸಿದ್ದ ಸ್ಥಳ. ಇದು ಜೈನರ ಮುಖ್ಯ ಯಾತ್ರಸ್ಥಳ. ಚನ್ನರಾಯಪಟ್ಟಣಕ್ಕೆ 13 ಕಿ.ಮೀ. ದೂರದಲ್ಲಿದೆ. ಶಾಸನಗಳಲ್ಲಿ ಇದನ್ನು ವೆಳಗೊಳ, ದೇವರಬೆಳಗೂಳ, ಶ್ವೇತಸರೊವರ, ಧವಳಸರೋವರ, ಗೋಮ್ಮಟಪುರ-ಎಂದು ಮುಂತಾಗಿಯೂ ಕರೆಯಲಾಗಿದೆ.ಜೈನಮುನಿ ಭದ್ರಬಾಹುವೂ ಚಂದ್ರಗುಪ್ತ ಮೌರ್ಯರೂ ಇಲ್ಲಿಗೆ ಬಂದಿದ್ದರೆಂದು ಹೇಳಲಾಗಿದೆ. ಶ್ರವಣಬೆಳಗೊಳ ಊರು ಇಂದ್ರಗಿರಿ ಅಥವಾ ವಿಂದ್ಯಗಿರಿ ಮತ್ತು ಚಂದ್ರಗಿರಿ ಎಂಬ ಎರಡು ಬೆಟ್ಟಗಳನ್ನು ಹೊಂದಿದೆ. ೧೨ ವರ್ಷಗಳಿಗೊಮ್ಮೆ ನಡೆಯುವ ಮಹಾಮಸ್ತಕಾಭಿಷೇಕ ಇಲ್ಲಿನ ವಿಷೇಷ ಸಂಭ್ರಮಾಚರಣೆಯಾಗಿದೆ. ಹಾಗೆಯೇ ಶ್ರವಣಬೆಳಗೊಳದಲ್ಲಿ ಅನೇಕ ಜೈನ ಮಸೀದಿಗಳಿವೆ ಮತ್ತು ಬಹುದೊಡ್ಡದಾದ ಕಳಸವಿದೆ,
ಚನ್ನರಾಯಪಟ್ಟಣದ ಪ್ರಮುಖ ನಗರವಾಗಿದೆ. ಶ್ರವಣಬೆಳಗೊಳವು ಭಾರಇತದ
ಇತಿಹಾಸದಲ್ಲಿ ಪ್ರಮುಖ ಪ್ರೇಕ್ಷಣೀಯ ಸ್ಥಳಗಳಲ್ಲಿ ಒಂದಾಗಿದೆ. ಭರತ ಮತ್ತು ಬಾಹುಬಲಿಯ ಸಂಕೇತವಾಗಿ ಎರಡು ಬೆಟ್ಟಗಳಿವೆ. ಅದನ್ನು ಚಂದ್ರಗಿರಿ ಬೆಟ್ಟ ಮತ್ತು ಇಂದ್ರಗಿರಿ ಬೆಟ್ಟ ಎಂದು ಕರೆಯಲಾಗುತ್ತಿದೆ. ೧೨ ವರ್ಷಗಳಿಗೊಮ್ಮೆ ನಡುವೆಯುವ ಮಹಾಮಸ್ತಕಾಭಿಷೇಕ ಇಲ್ಲಿನ ವಿಶೇಷ ಸಂಭ್ರಮಾಚರಣೆಯಾಗಿದೆ. ಹಾಗೆಯೇ ಶ್ರವಣಬೆಳಗೊಳದಲ್ಲಿ ಅನೇಕ ಜೈನ ಮಸೀದಿಗಳಿವೆ, ಮತ್ತು ಬಹು ದೊಡ್ಡದಾದ ಕಳಸವಿದೆ.ಶ್ರವಣಬೆಳಗೊಳವು ಪ್ರವಾಸಿಗರ ತಾಣವಾಗಿದೆ. ಹಲವಾರು ಪ್ರವಾಸಿಗರು ಭೇಟಿ ನೀಡುವ ಪ್ರೇಕ್ಷಣೀಯ ಸ್ಥಳವೇ ಶ್ರವಣಬೆಳಗೊಳ.
ಪ್ರಮುಖ ದೇವಾಲಯಗಳು
[ಬದಲಾಯಿಸಿ] ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು ಚರ್ಚೆ ಪುಟವನ್ನು ನೋಡಿ. |
- ನಾಗೇಶ್ವರ ಸ್ವಾಮಿ ದೇವಾಲಯ, ನವಿಲೆ
- ಚೆನ್ನಕೇಶವ ದೇವಾಲಯ, ನುಗ್ಗೇಹಳ್ಳಿ
- ಶ್ರವಣಬೆಳಗೊಳ
- ಚೌಡೇಶ್ವರಿ ದೇವಸ್ಥಾನ, ದಸರಿಘಟ್ಟ
- ಮೆಳಿಯಮ್ಮ ದೇವಾಲಯ, ಕುಂದೂರು ಮಠ
ನುಗ್ಗೆಹಳ್ಳಿ
- ಆನೆಕೆರಮ್ಮ ದೇವಿ ದೇವಾಲಯ, ಆನೆಕೆರೆ
ಹೊಯ್ಸಳ ರಾಜವಂಶದ ಸೋಮೇಶ್ವರ ರಾಜನ ಮುಖ್ಯಸ್ಥ ಬೊಮ್ಮಣ್ಣ ದಂಡ ನಾಯಕರಿಂದ ನಿರ್ಮಿಸಲ್ಪಟ್ಟ ಹಳೆಯ ನುಗ್ಗೆಹಳ್ಳಿ ಜಯಗೋಂಡೇಶ್ವರ ದೇವಸ್ಥಾನಕ್ಕೆ ನುಗ್ಗೆಹಳ್ಳಿಯು ಪ್ರಸಿದ್ಧವಾಗಿದೆ. ಈ ಗ್ರಾಮವು ಪ್ರಾಚೀನ ದ್ರಾವಿಡ ಶೈಲಿಯಲ್ಲಿ ನಿರ್ಮಿಸಲಾದ ಲಕ್ಷ್ಮಿ ನರಸಿಂಹ ದೇವಸ್ಥಾನ ಮತ್ತು ಸದಾಶಿವ ದೇವಸ್ಥಾನದಂತಹ ಪ್ರಾಚೀನ ದೇವಾಲಯಗಳನ್ನು ಹೊಂದಿದೆ. ನುಗ್ಗೆಹಳ್ಳಿ ಕರ್ನಾಟಕ ರಾಜ್ಯ, ಹಾಸನ ಜಿಲ್ಲೆಯ ಚನ್ನಾರಾಯಪಟ್ಟಣ ತಾಲ್ಲೂಕಿನ ಒಂದು ಗ್ರಾಮ. ಇದು ಮೈಸೂರು ವಿಭಾಗಕ್ಕೆ ಸೇರಿದ್ದು. ಇದು ಜಿಲ್ಲಾ ಕೇಂದ್ರದ ಹಾಸನದಿಂದ ಪೂರ್ವಕ್ಕೆ 47 ಕಿಮೀ ದೂರದಲ್ಲಿದೆ. ಚೆನ್ನರಾಯಪಟ್ಟಣದಿಂದ 7 ಕಿ.ಮೀ. ರಾಜ್ಯ ರಾಜಧಾನಿ ಬೆಂಗಳೂರಿನಿಂದ 141 ಕಿ.ಮೀ.ನುಗ್ಗೆಹಳ್ಳಿ ಪಿನ್ ಕೋಡ್ 573131 ಮತ್ತು ಪೋಸ್ಟಲ್ ಹೆಡ್ ಆಫೀಸ್ ನುಗ್ಗೇಹಳ್ಳಿ. ಅಕ್ಕನಹಳ್ಳಿ (6 ಕೆ.ಎಂ), ಕಲ್ಕೆರೆ (7 ಕೆಎಂ), ಟ್ಯಾಗದುರ್ (7 ಕೆಎಂ), ಎಸ್.ಶಿವಾರಾ (8 ಕೆಎಂ), ಮಟ್ಟನವಿಲೆ (9 ಕೆ.ಎಂ) ನುಗ್ಗೆಹಳ್ಳಿಗೆ ಹತ್ತಿರದ ಹಳ್ಳಿಗಳು. ನುಗ್ಗೆ ಲಕ್ಷ್ಮಿ ನರಸಿಂಹ ದೇವಾಲಯ, ನುಗ್ಗೆಹಳ್ಳಿ - ಒಂದು ಅವಲೋಕನ 1246 ರಲ್ಲಿ ಹೊಯ್ಸಳ ಸೈನ್ಯದ ಕಮಾಂಡರ್ ಬೊಮ್ಮಣ್ಣ ದಂಡನಾಯಕ ದೇವಸ್ಥಾನವನ್ನು ನೇಮಿಸಲಾಯಿತು. ಇದು ರಾಜ ವೀರಾ ಸೋಮೇಶ್ವರ ಆಳ್ವಿಕೆಯಲ್ಲಿತ್ತು. ಈ ದೇವಸ್ಥಾನವು ನರಸಿಂಹನಿಗೆ ಸಮರ್ಪಿತವಾಗಿದೆ ಆದರೆ ಇತರ ದೇವತೆಗಳ ಮತ್ತು ದೇವತೆಗಳ ಪ್ರತಿಮೆಯನ್ನು ಹೊಂದಿದೆ. ಈ ದೇವಾಲಯವನ್ನು ತ್ರಿಕುಚಲ ಎಂದು ನಿರ್ಮಿಸಲಾಗಿದೆ ಅಂದರೆ ಇದು ಮೂರು ಪವಿತ್ರಗಳನ್ನು ಹೊಂದಿದೆ. ಮುಖ್ಯ ದೇವಸ್ಥಾನವು ಉತ್ತರ ಪವಿತ್ರದಲ್ಲಿರುವ ನರಸಿಂಹದ ಪ್ರತಿಮೆಯೊಂದಿಗೆ, ಪಶ್ಚಿಮ ಗರ್ಭಗುಡಿಯಲ್ಲಿ ಕೆಸಾವದ ಮೂರ್ತಿಗಳಿಂದ ಉತ್ತುಂಗಕ್ಕೇರಿತ
ಭೌಗೋಳಿಕ ಮಾಹಿತಿ
[ಬದಲಾಯಿಸಿ]ತಾಲ್ಲೂಕು ಉತ್ತರದಿಂದ ದಕ್ಷಿಣದ ಕಡೆಗೆ ಸಾಮಾನ್ಯವಾಗಿ ಇಳಿಜಾರಾಗಿದೆ. ಹೇಮಾವತಿಯ ಕಡೆಗೆ ಹರಿಯುವ ನೀರಿಗೆ ಅಡ್ಡಲಾಗಿ ಅಲ್ಲಲ್ಲಿ ದೊಡ್ಡ ದೊಡ್ಡ ಕೆರೆಗಳನ್ನು ಕಟ್ಟಲಾಗಿದೆ. ಉತ್ತರದಲ್ಲಿ ಪೂರ್ವದಿಂದ ಪಶ್ಚಿಮಕ್ಕೆ ಎತ್ತರದ ಬೆಟ್ಟದ ಶ್ರೇಣಿಯೊಂದು ಹಬ್ಬಿದೆ. ಆದರಿಂದ ಕೆಲವು ತೊರೆಗಳು ಉತ್ತರಕ್ಕೂ ಪೂರ್ವಕ್ಕೂ ಹರಿದು ಶಿಂಷಾನದಿಯನ್ನು ಸೇರುತ್ತವೆ. ತಾಲ್ಲೂಕಿನ ಪಶ್ಚಿಮದ ಎಲ್ಲೆಯ ಬಳಿ ತಗ್ಗಿನಬೆಟ್ಟವೊಂದಿದೆ. ಶ್ರವಣಬೆಳಗೊಳದಲ್ಲಿ ತಕ್ಕಮಟ್ಟಿನದ ಎತ್ತರದ ಬೆಟ್ಟಗಳು ಒಂಟೊಂಟಿಯಾಗಿ ನಿಂತಿವೆ. ಅವುಗಳ ಪೈಕಿ ಇಂದ್ರಗಿರಿಯ ಎತ್ತರ 3,347' (1,020 ಮೀ.) ಜಗತ್ಪ್ರಸಿದ್ದವಾದ ಗೊಮ್ಮಟ್ಟ ವಿಗ್ರಹ ಇರುವುದು ಇದರ ಮೇಲೆಯೇ. ಮಿಕ್ಕಂತೆ ಈ ತಾಲ್ಲೂಕು ಅಷ್ಟೇನೂ ಎತ್ತರವಾಗಿಲ್ಲ. ಅಲೆಯಂತೆ ನೆಲ ಏರಿಳಿದು ಸಾಗಿದೆ.
ಬೇಸಾಯ
[ಬದಲಾಯಿಸಿ]ಚನ್ನರಾಯಪಟ್ಟಣ ತಾಲ್ಲೂಕಿನ ಮಣ್ಣು ಸಾಮಾನ್ಯವಾಗಿ ಫಲವತ್ತಾದ್ದು. ತರಿ ಮತ್ತು ಖುಷ್ಕಿ ಬೆಳೆಗಳನ್ನು ಸಾಮಾನ್ಯವಾಗಿ ಬೆಳೆಯಬಹುದು. ಪಶ್ಚಿಮದ ಎಲ್ಲೆಯ ಬಳಿಯ ನೆಲದ ಮಣ್ಣು ಆಳವಾಗಿಲ್ಲ. ಅಲ್ಲದೆ ಕಲ್ಲು ಮಿಶ್ರಿತ ಉಳಿದೆಡೆ ಮರಳಿನಿಂದ ಕೂಡಿದ ತೆಳುಕೆಂಪು ಮಣ್ಣು ಸಾಮಾನ್ಯ. ಅದರಲ್ಲಿ ಹೆಚ್ಚಿನ ವೈವಿಧ್ಯವೇನೂ ಇಲ್ಲ ನುಗ್ಗೇಹಳ್ಳಿಯ ಬಳಿ ಮಾತ್ರ ಕಪ್ಪುಮಣ್ಣು ಇದೆ. ಹೊಳೆನರಸೀಪುರದ ಬಳಿ ಹೇಮಾವತಿಗೆ ಕಟ್ಟಿರುವ ಶ್ರೀರಾಮದೇವರ ಅಣೆಕಟ್ಟಿನ ಉತ್ತರ ನಾಲೆಯಿಂದ ಚನ್ನರಾಯನಪಟ್ಟಣ ತಾಲ್ಲೂಕಿಗೆ ಸ್ವಲ್ಪ ನೀರಾವರಿ ಸೌಲಭ್ಯ ಒದಗಿದೆ. ಈ ನಾಲೆ ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ತಾಲ್ಲೂಕಿನಲ್ಲಿ ಮುಂದುವರಿಯುತ್ತದೆ. ಚನ್ನರಾಯನಪಟ್ಟಣ ತಾಲ್ಲೂಕಿನಲ್ಲಿ 49 ದೊಡ್ಡ ಕೆರೆಗಳೂ 170 ಸಣ್ಣ ಕೆರೆಗಳೂ 11 ಇತರ ಕೆರೆಗಳೂ ಇವೆ. ಇವಗಳು ಒಟ್ಟು ಅಚ್ಚುಕಟ್ಟು, 13,936.37 ಎಕರೆ. ತಾಲ್ಲೂಕಿನಲ್ಲಿ 362 ಎಕರೆಗಳಿಗೆ ನೀರೋದಿಸುವ 247 ಬಾವಿಗಳಿವೆ. ತಾಲ್ಲೂಕಿನಲ್ಲಿರುವ ಅನಾದಿ ಕೆರೆ ಹಾಸನ ಜಿಲ್ಲೆಯ ಎರಡು ಅತ್ಯಂತ ದೊಡ್ಡ ಕೆರೆಗಳ ಪೈಕಿ ಒಂದು. ಇದರ ಅಚ್ಚುಕಟ್ಟಿನ ಪ್ರದೇಶದ ವಿಸ್ತೀರ್ಣ 690.38 ಎಕರೆ. ತಾಲ್ಲೂಕಿನಲ್ಲಿ ಸಾಗುವಳಿಗೆ ಒಳಪಟ್ಟಿರುವ ಒಟ್ಟು ನೆಲ 1,63200 ಎಕರೆ. ಇದರಲ್ಲಿ 23,958 ಎಕರೆಗಳು (ಸಾಗುವಳಿ ನೆಲದ ಸೇ. 8.56) ನೀರಾವರಿಗೆ ಒಳಪಟ್ಟಿವೆ. ತಾಲ್ಲೂಕಿನ ಮುಖ್ಯ ಬೆಳೆಗಳು ರಾಗಿ (22.715 ಹೆಕ್ಟೇರುಗಳಲ್ಲಿ), ಬತ್ತ (10,530 ಎಕರೆಗಳಲ್ಲಿ), ಜೋಳ (1,192 ಹೇಕ್ಟೇರುಗಳಲ್ಲಿ), ನೆಲಗಡಲೆ (3,857 ಎಕರೆಗಳಲ್ಲಿ), ಕಬ್ಬು (1,412 ಹೆಕ್ಟೇರುಗಳಲ್ಲಿ). ಇತರ ಬೆಲೆಗಳು ಮೆಣಸಿನಕಾಯಿ, ಹರಳು, ಎಳ್ಳು, ಹತ್ತಿ , ತೆಂಗು, ಅಡಕೆ, ಆಲೂಗೆಡ್ಡೆ.
ಆಡಳಿತ
[ಬದಲಾಯಿಸಿ]ಚನ್ನರಾಯನಪಟ್ಟಣ ತಾಲ್ಲೂಕು ಹಾಸನ ಜಿಲ್ಲೆ ಮತ್ತು ಸೆಷನ್ಸ್ ನ್ಯಾಯಾಲಯ ಮತ್ತು ಸಿವಿಲ್ ನ್ಯಾಯಾಲಯಗಳ ಅಧಿಕಾರವ್ಯಾಪ್ತಿಗೆ ಒಳಪಟ್ಟಿದೆ. ಚನ್ನರಾಯನಪಟ್ಟಣದಲ್ಲಿ ಮುನ್ಸಿಫ್ ಮ್ಯಾಜಿಸ್ಟ್ರೇಟರು ಸಿವಿಲ್ ಮತ್ತು ಕ್ರಿಮಿನಲ್ ಮೊಕದ್ದೆಮೆಗಳನ್ನು ವಿಚಾರಿಸುತ್ತಾರೆ. 1959ರ ಗ್ರಾಮಪಂಚಾಯಿತಿ ಮತ್ತು ಸ್ಥಳೀಯ ಮಂಡಳಿಗಳ ಅಧಿನಿಯಮದ ಪ್ರಕಾರ ಗ್ರಾಮಪಂಚಾಯಿತಿಗಳಿವೆ. ತಾಲ್ಲೂಕು ಅಭಿವೃದ್ಧಿ ಮಂಡಲಿ ಚನ್ನರಾಯನಪಟ್ಟಣದಲ್ಲಿದೆ.
ಶಿಕ್ಷಣ
[ಬದಲಾಯಿಸಿ]1970ರಲ್ಲಿ ತಾಲ್ಲೂಕಿನಲ್ಲಿದ್ದ ಜೂನಿಯರ್ ಪ್ರಾಥಮಿಕ ಶಾಲೆಗಳು (1 ರಿಂದ 4ನೆಯ ತರಗತಿ) 217, ಉನ್ನತ ಪ್ರಾಥಮಿಕ ಶಾಲೆಗಳು 16, ಹೊಸ ಮಾದರಿ ಮಾಧ್ಯಮಿಕ ಶಾಲೆಗಳು 11, ಜಿಲ್ಲಾ ಮತ್ತು ತಾಲ್ಲೂಕು ಮಂಡಲಿ ಪ್ರೌಢಶಾಲೆಗಳು ಬಾಗೂರು, ನುಗ್ಗೇಹಳ್ಳಿ, ಶ್ರವಣಬೆಳಗೊಳ, ಉದಯಪುರಗಳಲ್ಲಿವೆ. ಚನ್ನರಾಯನಪಟ್ಟಣದಲ್ಲಿ ಪ್ರೌಢಶಾಲೆಯೂ ಶ್ರವಣಬೆಳಗೊಳದಲ್ಲಿ ಗೋಮ್ಮಟೇಶ್ವರ ಕಾಲೇಜೂ ಉಂಟು.
ಆಸ್ಪತ್ರೆಗಳು
[ಬದಲಾಯಿಸಿ]ಆಸ್ಪತ್ರೆಗಳು ಉದಯಪುರ, ಮುತ್ತನವಿಲೆ, ಚನ್ನರಾಯನಪಟ್ಟಣ, ಬಾಗೂರು, ದಿಡಿಗ, ಹಿರೇಸಾವೆ, ನಗ್ಗೇಹಳ್ಳಿ, ಶ್ರವಣಬೆಳಗೊಳ, ಕಾರೇಹಳ್ಳಿ-ಈ ಊರುಗಳಲ್ಲಿವೆ.
ಸಂತೆಗಳು, ಜಾತ್ರೆಗಳು
[ಬದಲಾಯಿಸಿ]ಚನ್ನರಾಯನಪಟ್ಟಣದಲ್ಲಿ ಶನಿವಾರವೂ ಹಿರೇಸಾವೆಯಲ್ಲಿ ಭಾನುವಾರ,ಅಕ್ಕನಹಳ್ಳಿ ಕ್ರಾಸ್ ನಲ್ಲಿ ಭಾನುವಾರ, ಕಲ್ಕೆರೆಯಲ್ಲಿ ಗುರುವಾರ, ನುಗ್ಗೇಹಳ್ಳಿಯಲ್ಲಿ ಶುಕ್ರವಾರವೂ ಸಂತೆಗಳು ಕೂಡುತ್ತವೆ. ತಾಲ್ಲೂಕಿನ ಮುಖ್ಯ ಜಾತ್ರೆಗಳಿವು: ಚನ್ನರಾಯನಪಟ್ಟಣದಲ್ಲಿ ಚಂದ್ರಶೇಕರ ಸ್ವಾಮಿ ಜಾತ್ರೆ (ಏಪ್ರಿಲ್), 2 ಶ್ರವಣಬೆಳಗೊಳದಲ್ಲಿ ಜೈನಮಠ ಜಾತ್ರೆ (ಮಾರ್ಚ್-ಏಪ್ರಿಲ್), ಗೋಮ್ಮಟೇಶ್ವರ ಮಹಾಮಸ್ತಕಾಭೀಷೇಕ (12 ವರ್ಷಗಳಿಗೊಮ್ಮೆ), 3. ಬೂಕನ ಬೆಟ್ಟದಲ್ಲಿ ರಂಗಸ್ವಾಮಿ ಜಾತ್ರೆ (ಜನವರಿ), 4. ನುಗ್ಗೇಹಳ್ಳಿಯಲ್ಲಿ ಲಕ್ಷ್ಮಿನರಸಿಂಹ ಸ್ವಾಮಿ ಜಾತ್ರೆ (ಮಾರ್ಚ್- ಏಪ್ರಿಲ್) 5. ನವಲೆಯಲ್ಲಿ ನಾಗೇಶ್ವರಸ್ವಾಮಿ ಜಾತ್ರೆ (ಏಪ್ರಿಲ್), 6. ಕತ್ರಘಟ್ಟದಲ್ಲಿ ಅಮ್ಮನವರ ರಥ (ಸೆಪ್ಟೆಂಬರ್), 7. ತೆಜ್ಜೆಗೆರೆಯಲ್ಲಿ ತೆಜ್ಜೆಗೆರೆ ಅಮ್ಮನ ತೇರು (ಫೆಬ್ರುವರಿ), 9. ಅಣಿಕೆರೆಯಲ್ಲಿ ಅಮ್ಮದೇವರ ರಥ (ಮಾರ್ಚ್), 10 ಬಾಗೂರಿನಲ್ಲಿ ಸಂತೆಕಾಳಮ್ಮನ ರಥ (ಮಾರ್ಚ್).11.ಕುಂದೂರು ಮಠದ ಸುಬ್ರಮಣ್ಯ ಸ್ವಾಮಿ ಜಾತ್ರೆ(ಷಷ್ಠೀ)12 ಬೂವನಹಳ್ಳಿ ಚೌಡೇಶ್ವರಿ ಜಾತ್ರೆ ಏಪ್ರಿಲ್
ಚನ್ನರಾಯನಪಟ್ಟಣ ತಾಲ್ಲೂಕಿನ ಕಸಬೆ (ಆಡಳಿತಕೇಂದ್ರ) ಚನ್ನರಾಯನಪಟ್ಟಣ ಹಾಸನ-ಬೆಂಗಳೂರ ರಸ್ತೆಯಲ್ಲಿ ಹಾಸನದಿಂದ 23 ಮೈ. ಪೂರ್ವಕ್ಕೆ ಮತ್ತು ಬೆಂಗಳೂರಿನಿಂದ 92 ಮೈ. ದೂರದಲ್ಲಿ. ಉ.ಅ. 120 54' ಮತ್ತು ಪೂ.ರೇ.760 ಮೇಲಿದೆ.
ಇತಿಹಾಸ
[ಬದಲಾಯಿಸಿ]ಇದರ ಹಿಂದಿನ ಹೆಸರು ಕೊಲತೂರು. ಆಗ ಇಲ್ಲಿ ಒಂದು ಅಗ್ರಹಾರ ಮಾತ್ರ ಇತ್ತು. ಮಾಚಲದೇವಿ ಮತ್ತು ಶಾಂತಲದೇವಿ ಎಂಬ ಇಬ್ಬರು ಇದರ ಈಶಾನ್ಯದಲ್ಲಿರುವ ವಿಶಾಲವಾದ ಕೆರೆಯನ್ನು ಕಟ್ಟಿಸಿದರೆಂದು ಹೇಳಲಾಗಿದೆ. ಸು. 1600ರಲ್ಲಿ ಹೊಳೆನರಸೀಪುರದ ಪಾಳೆಯಗಾರ ಲಕ್ಷ್ಮಪ್ಪನಾಯಕ ಇದನ್ನು ಪಟ್ಟಗಿರಿ ರಾಜನಿಂದ ಪಡೆದುಕೊಂಡ ತನ್ನ ಮಗ ಚನ್ನರಾಯನಿಗೆ ಜಹಗೀರಾಗಿ ಕೊಟ್ಟ. ಚನ್ನಿಗರಾಯ ದೇವಾಲಯದಿಂದ ಊರಿಗೆ ಚನ್ನರಾಯಪಟ್ಟಣ ಎಂಬ ಹೆಸರು ಬಂತು. ಇಲ್ಲಿ ದೊಡ್ಡ ಬಸವಯ್ಯನೆಂಬ ಪಾಳೆಯಗಾರ ಕಟ್ಟಿಸಿದ ಹಳೆಯ ಕೋಟೆಯನ್ನು ಹೈದರ್ ಆಲಿ ಪುನರ್ನಿಮಿಸಿದ.
ಶ್ರವಣಬೆಳಗೊಳ ಚನ್ನರಾಯಪಟ್ಟಣ ತಾಲೊಕಿನ ಪ್ರಮುಖ ನಗರ. ಇಲ್ಲಿ ೧೨ ವರುಶಗಳಿಗೊಮ್ಮೆ ನಡೆಯುವ ಮಹಾಮಸ್ತಾಕಾಭಿಶೆಕಾ ಪ್ರಮುಖವಾಗಿದೆ.
ಇದಕ್ಕೆ ಸಾವಿರಾರೂ ಜನ ಪ್ರವಾಸಿಗರು ಬರುತ್ತಾರೆ. ಇದು ಒಂದು ರಮಣೀಯ ಸ್ಟಳವಾಗಿದೆ.
ಇಂದ್ರಗಿರಿ ಚಂದ್ರಗಿರಿ ಎಂಬ ೨ ಬೆಟ್ಟಗಳಿವೆ.
ಸಾರಿಗೆ
[ಬದಲಾಯಿಸಿ]ಚನ್ನರಾಯನಪಟ್ಟಣ ಪ್ರಮುಖ ಬಸ್ ನಿಲ್ದಾಣ. ಮೈಸೂರಿನಿಂದ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಚಿತ್ರದುರ್ಗಗಳಿಗೆ ಹೋಗುವ ಬಸ್ಸುಗಳೂ ಬೆಂಗಳೂರಿನಿಂದ ಹಾಸನ, ಮಂಗಳೂರು, ಚಿಕ್ಕಮಗಳೂರು ಕಡೆಗೆ ಹೋಗುವ ಬಸ್ಸುಗಳೂ ಈ ಮೂಲಕ ಹೋಗುತ್ತವೆ.
ಮುಖ್ಯ ಸ್ಥಳಗಳು
[ಬದಲಾಯಿಸಿ]ಶ್ರವಣಬೆಳಗೊಳ ಈ ತಾಲ್ಲೂಕಿನ ಅತ್ಯಂತ ಪ್ರಸಿದ್ದ ಸ್ಥಳ. ಇದು ಜೈನರ ಮುಖ್ಯ ಯಾತ್ರಸ್ಥಳ. ಚನ್ನರಾಯಪಟ್ಟಣಕ್ಕೆ 13 ಕಿ.ಮೀ. ದೂರದಲ್ಲಿದೆ. ಶಾಸನಗಳಲ್ಲಿ ಇದನ್ನು ವೆಳಗೊಳ, ದೇವರಬೆಳಗೂಳ, ಶ್ವೇತಸರೊವರ, ಧವಳಸರೋವರ, ಗೋಮ್ಮಟಪುರ-ಎಂದು ಮುಂತಾಗಿಯೂ ಕರೆಯಲಾಗಿದೆ. ದಕ್ಷಿಣ ಕಾಶಿ ಎಂದು ಇದು ಪ್ರಸಿದ್ಧವಾಗಿದೆ. ಜೈನಮುನಿ ಭದ್ರಬಾಹುವೂ ಚಂದ್ರಗುಪ್ತ ಮೌರ್ಯರೂ ಇಲ್ಲಿಗೆ ಬಂದಿದ್ದರೆಂದು ಹೇಳಲಾಗಿದೆ. ಶ್ರವಣಬೆಳಗೋಳ ಊರು ಇಂದ್ರಗಿರಿ ಅಥವಾ ವಿಂದ್ಯಗಿರಿ ಮತ್ತು ಚಂದ್ರಗಿರಿ ಎಂಬ ಎರಡು ಬೆಟ್ಟಗಳ ನಡುವೆ ಇದೆ. ಈ ಬೆಟ್ಟಗಳಿಗೆ ಅನುಕ್ರಮವಾಗಿ ದೊಡ್ಡಬೆಟ್ಟ ಮತ್ತು ಚಿಕ್ಕಬೆಟ್ಟ ಎಂಬ ಹೆಸರುಗಳೂ ಉಂಟು. ದೊಡ್ಡಬೆಟ್ಟದ ಎತ್ತರ ಸುಮುದ್ರಮಟ್ಟದಿಂದ 3,347' (ಊರಿನಿಂದ 470' ಎತ್ತರ). 57' ಎತ್ತರದ ಗೊಮ್ಮಟನ ಏಕಶಿಲಾವಿಗ್ರಹ ಇರುವುದು ಇದರ ಮೇಲೆಯೇ. ಚಿಕ್ಕಬೆಟ್ಟದ ಎತ್ತರ 3,052'. ಇದರ ಮೇಲೆ ಕೆಲವು ಬಸದಿಗಳೂ ಶಾಸನಗಳೂ ಇವೆ. ಶ್ರವಣಬೆಳಗೊಳದ ಜನಸಂಖ್ಯೆ ೫೦೦೦ ಹೆಚ್ಚು ಜನರು ಇದ್ದಾರೆ
ದಿಂಡಗೂರು
[ಬದಲಾಯಿಸಿ]ಚನ್ನರಾಯನಪಟ್ಟಣಕ್ಕೆ 6 ಕಿ.ಮೀ. ದೂರದಲ್ಲಿ ಚನ್ನರಾಯನಪಟ್ಟಣ-ತಿಪಟೂರು ರಸ್ತೆಯಲ್ಲಿರುವ ಊರು ದಿಂಡಗೂರು. ಇದಕ್ಕೆ ಹಿಂದೆ ಮಲ್ಲಿಕಾರ್ಜುನಪುರ ಅಗ್ರಹಾರವೆಂಬ ಹೆಸರಿತ್ತು. ಇದನ್ನು ಪಂಡಿತ ದಂಡನಾಥ 13ನೆಯ ಶತಮಾನದಲ್ಲಿ ಕಟ್ಟಿಸಿದ. ಕೇಶವ ಮತ್ತು ಈಶ್ವರ ದೇವಾಲಯಗಳಿವೆ. ಹಳೆಬೆಳಗೊಳ ಬೆಂಗಳೂರು-ಮಂಗಳೂರು ರಸ್ತೆಯಲ್ಲಿ ಚನ್ನರಾಯನಪಟ್ಟಣಕ್ಕೆ 18 ಮೈ ದೂರದಲ್ಲಿದೆ. ಇಲ್ಲಿ ಹೊಯ್ಸಳ ಮಾದರಿಯ ಜೈನದೇವಾಲಯವೊಂದುಂಟು. ಇದು ಶಿಥಿಲಾವಸ್ಥೆಯಲ್ಲಿದೆ. ಇದನ್ನು ನಿರ್ಮಿಸಿದ ಕಾಲ ಸು. 1094 ಇರಬಹುದು. ಕೇಶವ ಮತ್ತು ಶಿವದೇವಾಲಯಗಳೂ ಇವೆ. ಹೆಬ್ಬಳಲು ಚನ್ನರಾಯಪಟ್ಟಣಕ್ಕೆ 32 ಕಿ.ಮೀ. ದೂರದಲ್ಲಿ ಹಿರೇಸಾವೆ ರಸ್ತೆಯಲ್ಲಿದೆ. ಇಲ್ಲಿರುವ ಸಿಂಗೇಶ್ವರ ದೇವಾಲಯ ಸು. 1200ರಲ್ಲಿ ಹೊಯ್ಸಳ ಇಮ್ಮಡಿ ಬಲ್ಲಾಳನ ಕಾಲದಲ್ಲಿ ಕಟ್ಟಿಸಿದ್ದು. ಜಿನನಾಥಪುರ ಗ್ರಾಮ ಕಾಂತರಾಜಪುರ-ಶ್ರವಣಬೆಳಗೊಳ ರಸ್ತೆಯಲ್ಲಿ ಚನ್ನಪಟ್ಟಣಕ್ಕೆ 14 ಕಿ.ಮಿ. ದೂರದಲ್ಲಿದೆ. 1117ರಲ್ಲಿ ವಿಷ್ಣುವರ್ಧನನ ದಂಡನಾಯಕ ಗಂಗರಾಜ ಸ್ಥಾಪಿಸಿದನೆಂದು ಹೇಳುವ ಒಂದು ಶಾಸನ ಇಲ್ಲಿದೆ. ಇಲ್ಲಿರುವ ಶಾಂತಿನಾಥ ಬಸ್ತಿ ಸು. 1200ರಲ್ಲಿ ನಿರ್ಮಿತವಾದ್ದು. ಇದು ಹೊಯ್ಸಳ ಶೈಲಿಗೆ ಉತ್ತಮ ನಿದರ್ಶನ. ಅರೆಗಲ್ ಬಸ್ತಿಯಲ್ಲಿ ಪಾಶ್ರ್ವನಾತ ವಿಗ್ರಹವಿದೆ.
ಕುಂದೂರು ಮಠ
[ಬದಲಾಯಿಸಿ]ಚನ್ನರಾಯಪಟ್ಟಣಕ್ಕೆ 20 ಕಿ.ಮೀ. ದೂರದಲ್ಲಿರುವ ಕುಂದೂರಿನಲ್ಲಿ ಮೆಳಿಯಮ್ಮ, ರಂಗನಾಥ ಮತ್ತು ಸುಬ್ರಹ್ಮಣೇಶ್ವರ ದೇವಾಲಯಗಳಿವೆ. ಇಲ್ಲೊಂದು ಒಕ್ಕಲಿಗರ ಮಠ ಉಂಟು. ಹಳ್ಳಿಯ ಬಳಿ ಕುಡ್ಲುಕಲ್ಲು ಎಂಬ ಸ್ತಂಭವೊಂದಿದೆ
ನುಗ್ಗೇಹಳ್ಳಿ
[ಬದಲಾಯಿಸಿ]ಚನ್ನರಾಯಪಟ್ಟಣಕ್ಕೆ 20 ಕಿ.ಮೀ. ದೂರದಲ್ಲಿರುವ ಒಂದು ಹೋಬಳಿ ಕೇಂದ್ರ ನುಗ್ಗೇಹಳ್ಳಿ. ಚನ್ನರಾಯಪಟ್ಟಣ-ತಿಪಟೂರು ರಸ್ತೆಯಲ್ಲಿರುವ ಪ್ರಾಚೀನ ಗ್ರಾಮ. ಜನಸಂಖ್ಯೆ 2,902 (1971). ಇಲ್ಲಿ ಚೋಳರು ಕಟ್ಟಿಸಿದ ಜಯಗೊಂಡೇಶ್ವರ ದೇವಾಲಯವಿದೆ. 1121ರಲ್ಲಿ ವಿಷ್ಣುವರ್ಧನ ಇದಕ್ಕೆ ದತ್ತಿಗಳನ್ನು ನೀಡಿದ. ಹೊಯ್ಸಳ ಸೋಮೇಶ್ವರನ ದಂಡನಾಯಕ ಬೊಮ್ಮಣ್ಣ ಇಲ್ಲಿ ಒಂದು ಅಗ್ರಹಾರವನ್ನೂ ಲಕ್ಷ್ಮೀನರಸಿಂಹ ದೇವಾಲಯವನ್ನೂ ಕಟ್ಟಿಸಿದನೆಂದು ಶಾಸನವೊಂದು ತಿಳಿಸುತ್ತದೆ. ಇಲ್ಲಿರುವ ಸದಾಶಿವ ದೇವಾಲಯವೂ ಹೊಯ್ಸಳ ಮಾದರಿಯದು.
ಉಲ್ಲೇಖಗಳು
[ಬದಲಾಯಿಸಿ]೧. ಹಾಸನ ಇತಿಹಾಸ ೨. ಹೊಯ್ಸಳ ಟೂರಿಸಮ್ Archived 2014-02-09 ವೇಬ್ಯಾಕ್ ಮೆಷಿನ್ ನಲ್ಲಿ.