ವಿಷಯಕ್ಕೆ ಹೋಗು

ಗ್ಲ್ಯಾಡಿಸ್ ಸ್ಟೇನ್ಸ್‌

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಗ್ಲ್ಯಾಡಿಸ್ ಸ್ಟೇನ್ಸ್‌ (ಜನನ ೧೯೫೧) ಅವರು ಆಸ್ಟ್ರೇಲಿಯದ ಮಿಷನರಿಯಾದ ಗ್ರಹಮ್ ಸ್ಟೇನ್ಸ್ ಎಂಬುವರ ಧರ್ಮಪತ್ನಿ. ಗ್ರಹಮ್ ಸ್ಟೇನ್ಸ್ ಅವರನ್ನು ತಮ್ಮ ಇಬ್ಬರು ಗಂಡು ಮಕ್ಕಳಾದ ತಿಮೋಥಿ (೯ ವರ್ಷ) ಮತ್ತು ಫಿಲಿಪ್ (೭ ವರ್ಷ) ಅವರ ಸಮೇತ ಭಾರತ ದೇಶದ ಒರಿಸ್ಸ ರಾಜ್ಯದಲ್ಲಿ ೨೨ ಜನವರಿ ೧೯೯೯ರಲ್ಲಿ ಸಜೀವ ದಹನ ಮಾಡಲಾಗಿತ್ತು.


ಇವರು ೨೦೦೪ರಲ್ಲಿ ತಮ್ಮ ಸ್ವದೇಶವಾದ ಆಸ್ಟ್ರೇಲಿಯಕ್ಕೆ ಹೋಗಿ ತಮ್ಮ ಮಗಳು ಮತ್ತು ತಂದೆಯ ಸಂಗಡ ನೆಲೆಸಲು ನಿರ್ಧರಿಸಿದ್ದರು. ಆದರೆ ಆಮೇಲೆ ಮತ್ತೆ ಭಾರತ ದೇಶಕ್ಕೆ ಬಂದು ತಾವು ಮತ್ತು ತಮ್ಮ ಪತಿ ಸೇವೆಮಾಡಿದ ಕುಷ್ಥರೋಗಿಗಳ ಮಧ್ಯೆ ಸೇವೆಯನ್ನು ಮುಂದುವರೆಸುವೆನು ಎಂದು ಹೇಳಿದರು. ಇದಲ್ಲದೆ ಇವರು ತಮ್ಮ ಪತಿ ಮತ್ತು ಇಬ್ಬರು ಗಂಡು ಮಕ್ಕಳ ಕೊಲೆಯಲ್ಲಿ ಮುಖ್ಯ ಆರೋಪಿಯಾದ ದಾರಾ ಸಿಂಗ್ ಎಂಬುವರಿಗೆ ಕ್ಷಮಾಪಣೆಯನ್ನು ಸಹ ನೀಡಿದ್ದರು.


ಇವರ ಕುಟುಂಬವು ಭಾರತ ದೇಶಕ್ಕೆ ಬಂದು ಕುಷ್ಥರೋಗಿಗಳ ಮಧ್ಯೆ ಮಾಡಿದ ಸೇವೆಗಾಗಿಯೂ ಮತ್ತು ಅವರು ಅಪರಾಧಿಗೆ ನೀಡಿದ ಕ್ಷಮಾಪಣೆಯ ನಿಮಿತ್ತವೂ ಭಾರತ ಸರ್ಕಾರ ೨೦೦೫ರಲ್ಲಿ ಇವರಿಗೆ ಪದ್ಮಶ್ರೀ ಪ್ರಶಸ್ತಿಯನ್ನಿತ್ತು ಗೌರವಿಸಿತು. ಇದನ್ನು ವಿರೋಧಿಸಿ ಅನೇಕರು ಆಕ್ಷೇಪಣೆಯನ್ನು ವ್ಯಕ್ತ ಪಡಿಸಿದ್ದರು.

ಹೊರಗಿನ ಸಂಪರ್ಕಗಳು

[ಬದಲಾಯಿಸಿ]