ಗ್ರೆಗರ್ ಮೆಂಡೆಲ್
ಗ್ರೆಗರ್ ಜೋಹಾನ್ ಮೆಂಡೆಲ್ ರವರು ೧೮೬೫-೧೮೬೬ರಲ್ಲಿ ಜೈವಿಕ ಲಕ್ಷಣಗಳನ್ನು ಕುರಿತು ಮೂರು ತತ್ವಗಳನ್ನು ಪ್ರಸ್ತಾಪಿಸಿದರು. ೧೯೦೦ರಲ್ಲಿ ಮೆಂಡೆಲ್ ರವರು ತತ್ವಗಳನ್ನು ಮರು ಪತ್ತೆ ಹಚ್ಚಿದರು. ಈ ಮೂರು ತತ್ವಹಗಳು ಒಂದು ದೊಡ್ಡ ವಿವಾದ ಶೃಷ್ಠಿ ಮಾಡಿತು. ೧೯೧೫ರಲ್ಲಿ, ಥಾಮಸ್ಸ್ ಮಾರ್ಗನ್ ರವರು, ಮೆಂಡೆಲೆಯನ್ ಸಿದ್ಧಾಂತವನ್ನು, ಬೊವೆರಿ ಸುಟ್ಟನ್ ರವರ ಕ್ರೋಮೋಸೋಮ್ ಸಿದ್ಧಾಂತ್ತಕ್ಕೆ ಒಟುಗೂಡಿಸಲಾಗಿತ್ತು. ಈ ಮೂರು ವಿಙ್ಞಾನಿಗಳು ಸಂಸ್ಕೃತಾದಿಯ "ತಳಿಶಾಸ್ತ್ರ" ಎಂಬ ಜನಸಮುದಾಯಕ್ಕೆ ಸೇರಿದರು. ಒಳ್ಳೆಯ ಹೆಸರನ್ನು ಪಡೆದುಕೊಂಡರು. ೧೯೩೦ರಲ್ಲಿ ರೊನಾಲ್ಡ್ ಫಿಷರ್ ರವರು, "ಜೆನಿಟಿಕಲ್ ಥಿಯರಿ ಆಫ್ ನ್ಯಾಚುರಲ್ ಸೆಲೆಕ್ಷನ್" ಎಂಬ ಪುಸ್ತಕದಲ್ಲಿ ಮೆಂಡೆಲಿಯನ್ನವರ ಸಿದ್ಧಾಂತವು: "ನ್ಯಾಚುರಲ್ ಸೆಲೆಕ್ಷನ್" ಎಂಬ ಜೈವಿಕ ವಿಷಯಕ್ಕೆ ಸೇರಿಸಲಾಗಿತ್ತು. ವಿಕಾಸನದ ಮೇಲೆ ಗಣಿತ ಶಾಸ್ತ್ರವನ್ನು ಪ್ರಯತ್ನಿಸಲಾಗಿತ್ತು. "ಪಾಪುಲೇಷನ್ ತಳಿಶಾಸ್ತ್ರ" ಮತ್ತು ಆಧುನಿಕ ವಿಕಾಸಾತ್ಮಕ ವಿಶ್ಲೇಷಯನ್ನು ರೂಪಿಸಿದರು. ಗ್ರೆಗರ್ ಜೋಹಾನ್ ಮೆಂಡೆಲ್ ರಾವರಿಂದ "ಲಾಸ್ ಆಫ್ ಇನ್ಹೆರಿಟೆನ್ಸ್ ಉತ್ಪತಿಕೊಂಡವು. ಆಸ್ಟ್ರಿಯನ್ ಬೈರಾಗಿಯಾಗಿ, ಮೆಂಡೆಲ್ ರವರು ಕ್ರಿಸ್ತ ದೇವಾಲಯದ ಹಿಂಭಾಗದಲ್ಲಿ ಪೈಸಂ ಸ್ಯಾಟಿವಂ(ಉದ್ಯಾನ ಬಟಾನಿ ಗಿಡ) ಎಂಬ ಬೆಳೆಸುತ್ತಿದ್ದುಂಟು. ಈ ಗಿಡಗಳ ಮೇಲೆ ಸಂಕರೀಕರಣ ಪ್ರಯೋಗಗಳು ಪ್ರಯತ್ನಿಸಲಾಗಿತ್ತು. ೧೮೫೬ ರಿ೦ದ ೧೮೬೩ ವರೆಗೂ, ಮೆಂಡೆಲ್ ಪೈಸಂ ಸ್ಯಾಟಿವಂ ಗಿಡಗಳನ್ನು ಪರೀಕ್ಷಿಸಿದಿದ್ದುಂಟು. ಈ ಪ್ರಯೋಗಳ ಮೂಲಕ ಮೆಂಡೆಲ್ ರವರು ಎರಡು ತೀರ್ಮಾನಗಳನ್ನು ಮನವೊಲ್ಲಿಸಿದರು. ಇವೆರೆಡು ತೀರ್ಮಾನಗಳನ್ನು "ಮೆಂಡೆಲ್ ಪ್ರಿನ್ಸಿಪಲ್ಸ್ ಆಫ್ ಹೆರಿಡಿಟಿ" ಅಥವಾ "ಮೆಂಡೆಲಿಯನ್ ಇನ್ಹೆರಿಟೆನ್ಸ್" ಎಂದು ಹೆಸರು ಪಡೆದುಕೊಂಡಿತು. ಮೆಂಡೆಲಿಯನ್ ಇನ್ಹೆರಿಟೆನ್ಸ್ ವನ್ನು, ಎರಡು ಭಾಗ ಕಾಗದ ಮೇಲೆ ಬರೆದುದ್ದುಂಟು. ಮೆಂಡೆಲ್ ರವರು ೮ ಫ್ರೆಬ್ರವರಿ, ೧೮೬೫ ಮತ್ತು ೮ ಮಾರ್ಚ್, ೧೮೬೫ರಲ್ಲಿ ನ್ಯಾಚುರಲ್ ಹಿಸ್ಟರಿ ಸೊಸೈಟಿ ಆಫ್ ಬ್ರನೋದಲ್ಲಿ, ಅವರು ಮಾಡಿರುವ ಪ್ರಯೋಗದ ಬಗ್ಗೆ ಓದಿ ತಿಳಿಸಲಾಗಿತ್ತು. ಈ ಎರಡು ತೀರ್ಮಾನಗಳನ್ನು ೧೮೬೬ರಲ್ಲಿ ಪ್ರಕಟಿಸಲಾಯಿತು. ಮೂರು ಯುರೋಪಿಯನ್ ವಿಙ್ಞಾನಿಗಳಾದ ಹ್ಯೂಗೊ: ದಿ ವ್ರೈಸ್, ಕಾರ್ಲ್ ಕೋರ್ರೆನ್ಸ್ ಮತ್ತು ಎರಿಚ್ ವಾನ್ ಸ್ಚೆಮಾರ್ಕ ರವರು, ಮೆಂಡೆಲಿಯನ್ ಕೆಲಸ ಕಾರ್ಯಗಳನ್ನು ಮತ್ತೆ ಕಂಡುಹಿಡಿದರು. ಅದೇ ವರ್ಷದಲ್ಲಿ, ಫಿಷರ್ ಮತ್ತು ಹ್ಯಾಲ್ಡನ್ ರವರು ಸೇರಿ, ಮೆಂಡೆಲ್ ತೀರ್ಪುಗಳ ಮೇಲೆ ಗಣಿತ ಸಂಭವನೀಯತೆಗಳನ್ನು ಪ್ರಯತ್ನಿಸಿ ಅಭಿವ್ಯಕ್ತಿಯ ಲಕ್ಷಣಗಳನ್ನು ವಿಙ್ಞಾನದ ಬೆಳಕಿಗೆ ತಂದರು. ಪೈಸಂ ಸಟಿವಂ ಗಿಡದ ಲಕ್ಷಣಗಳು: ಬೀಜ (ಹಳದಿ ಮತ್ತು ಹಸಿರು), ಹೂವು (ಬಿಳಿ ಮತ್ತು ನೇರಳೆ), ಗಿಡದ ಎತ್ತರ (ಉದ್ದ ಮತ್ತು ಚಿಕ್ಕದ್ದು), ತೊಗಟೆ (ಹಳದಿ ಮತ್ತು ಹಸಿರು).
ಮಿಯಾಸಿಸ್[ಬದಲಾಯಿಸಿ]
ಒಂದು ಜೀವಕೋಶದ ಡಿ.ಎನ್.ಎ ವಿಭಾಗಕೊಂಡಾಗ, ನಾಲ್ಕು ಗ್ಯಾಮೀಟ್ಗಳು ಉತ್ಪತ್ತಿಯಾಗುತ್ತದೆ. ಈ ಪ್ರಕ್ರಿಯೆಯನ್ನು ಮಿಯಾಸಿಸ್ ಎಂದು ಕರೆಯಲಾಗುತ್ತದೆ. ಶರೀರದಲ್ಲಿ ಪ್ರತಿಯೊಂದು ಜೀವಕೋಶಕ್ಕೆ ಎರಡು ಪ್ರತಿಗಳಾದ ವರ್ಣತಂತು ಇರುತ್ತದೆ. ಗ್ಯಾಮೀಟ್ಗಳು ಮಿಯಾಸಿಸ್ ಪ್ರಕ್ರಿಯೆಯಲ್ಲಿ ತೊಡಗಿದ್ದರಿಂದ, ಜೀವಕೋಶದಲ್ಲಿ ಒಂದು ವರ್ಣತಂತು ಇರುತ್ತದೆ. ಇದನ್ನು ಹ್ಯಾಪ್ಲಾಯ್ಡ್ ಎಂದು ಕರೆಯಲಾಗುತ್ತದೆ. ಲೈಂಗಿಕ ಸಂತಾನೋತ್ಪತ್ತಿಯ ಸಮಯದಲ್ಲಿ, ಎರಡು ಗ್ಯಾಮೀಟ್ಗಳು: ಮೊಟ್ಟೆ (ಎಘ್) ಮತ್ತು ವೀರ್ಯ (ಸ್ಪರ್ಮ್) ಶೃಷ್ಠಿಯಾಗುತ್ತದೆ. ಇವು ಒಟ್ಟುಗೂಡಿ ಒಂದು ವರ್ಣತಂತುವಿನ ಜೋಡಿ ಶೃಷ್ಠಿಯಾಗುತ್ತದೆ. ಈ ವರ್ಣತಂತುವಿನ ಜೋಡಿಯ ಮುಂದೆ ಒಂದು ಜೀವಿಯಾಗಿ ರೂಪಿಸಿಕೊಂಡುತ್ತದೆ. ಈ ವರ್ಣತಂತುವಿನ ಜೋಡಿಯನ್ನು "ಜೀವಾಣು" ಎಂದು ಕರೆಯಾಲಾಗುತ್ತದೆ. ಜೀವಾಣು ವರ್ಣತಂತುವಿನ ಒಂದು ನಕಲು ಪ್ರತಿಯನ್ನು ಎರಡೂ ಪೋಷಕರಿಂದ ಪಡೆಯುತ್ತದೆ. ಜೀನ್ಗಳನ ವಿಭಿನ್ನ ಪ್ರತಿಗಳನ್ನು 'ಆಲೀಲ್' ಎಂದು ಕರೆಯಲಾಗುತ್ತದೆ. ಪೋಷ್ಕರದಿಂದ ಬಂದ ಡಾಮಿನೆಂಟ್ ಅಥವಾ ರಿಸಿಸ್ಸಿವ್ ಆಲೀಲುಗಳ ಪ್ರತಿಗಳ ಆಧಾರದ ಮೇಲೆ ಒಬ್ಬ ವ್ಯಕ್ತಿಯ ಆವಿಷ್ಕರಣ ಗುರುತಿಸಲಾಗುತ್ತದೆ. ಇದನ್ನು ಫಿನೋಟೈಪ್ ಎಂದು ಕರೆಯಲಾಗುತ್ತದೆ. ಗಿಡಗಳು ಮತ್ತು ಪ್ರಾಣಿಗಗಳು ಡಿಪ್ಲಾಯ್ಡ್ ಜೀವಿಗಳು. ಅವರಲ್ಲಿ ಪ್ರತಿಯೊಂದು ಜೀನ್ಗಳಿಗೆ ಎರಡು ಆಲೀಲುಗಳು ಇರುತ್ತದೆ. ಮೆಂಡೆಲ್ ರವರ ಮೂರು ತ್ತತ್ವಗಳು ಕೆಳಗೆ ವಿವರಿಸಲಾಗಿದೆ.
ತತ್ವಗಳು[ಬದಲಾಯಿಸಿ]
ಲಾ ಆಫ್ ಡಾಮಿನೆನ್ಸ್[ಬದಲಾಯಿಸಿ]
ಒಂದು ಜೀವಿಯ ಸ್ವರೂಪ ತನ್ನ ಸಂತತಿಯಲ್ಲಿ ಕಣಿಸಿಕೊಳ್ಳುತ್ತದೆ. ಇದನ್ನು ಗುಣಲಕ್ಷನ (ಟ್ರೈಟ್) ಎಂದು ಕರೆಯಲಾಗುತ್ತದೆ. ಎರಡು ಆಲೀಲನ ನಡುವಿನ ಸಂಬಂಧವನ್ನು 'ಡಾಮಿನೆನ್ಸ್' ಎಂದು ಕರೆಯಲಾಗುತ್ತದೆ. ಎರಡು ಆಲಿಲುಗಳನ್ನು ತನ್ನ ಪೋಷಕರಿಂದ ಪಡೆದುಕೊಂಡು, ಒಬ್ಬ ವ್ಯಕ್ತಿಯ ಸಂತತಿಯಲ್ಲಿ (ಆಫ್‌ಸ್ಪ್ರಿಂಗ್) ಒಂದು ಆಲೀಲಿನ ಫಿನೋಟೈಪ್ ಕಾಣಿಸಲಾಗುತ್ತದೆ. "ಒಂದು ಪೋಷಕದಲ್ಲಿ (ಮೂಲದಲ್ಲಿ) ಡಾಮಿನೆಂಟ್ ಆಲೀಲಿನ ಎರಡು ಪ್ರತಿಗಳು ಮತ್ತು ಎರಡನೇ ಪೋಷ್ಕದಲ್ಲಿ ರಿಸಿಸ್ಸಿವ್ ಆಲೀಲಿನ ಎರಡು ಪ್ರತಿಗಳು ಇರುತ್ತದೆ. ಒಂದು ವಿಧವಾದ ಜಿನೋಟೈಪ್ ಅನ್ನು ಅನುವಂಶಿಕವಾಗಿ ಸಂತತಿಯು ಪಡೆದುಕೊಳುತ್ತದೆ. ಸಂತತಿಯು ಡಾಮಿನೆಂಟ್ ಫಿನೋಟೈಪ್ ಅನ್ನು ಪ್ರದರ್ಶಿಸುತ್ತದೆ". ಇದು ಮೆಂಡೆಲ್ ಮೊದಲನೆಯ ಲಾ, 'ದಿ ಲಾ ಆಫ್ ಡಾಮಿನೆನ್ಸ್'.
ಲಾ ಆಫ್ ಸೆಗ್ರಿಗೇಶನ್[ಬದಲಾಯಿಸಿ]
ಒಂದು ಪೋಷಕರಲ್ಲಿ, ಒಂದು ನಿರ್ದಿಷ್ಟ ಜೀನ್‌ಗೆ, ಎರಡು ವಿಭಿನ್ನವಾದ ಆಲಿಲುಗಳು ವರ್ಣತಂತುವಿನ ಮೇಲೆ ಇರುತ್ತದೆ. "ಮಿಯಾಸಿಸ್ ಪ್ರಕ್ರಿಯೆಯಲ್ಲಿ ಎರಡು ವಿಭಿನ್ನವಾದ ಆಲಿಲುಗಳು ಬೇರ್ಪಡೆಯಾಗುತ್ತದೆ". ಇದು ಮೆಂಡೆಲ್ ಎರಡನೆಯ ಲಾ, 'ಲಾ ಆಫ್ ಸೇಗ್ರಿಗೇಶನ್'. ನಿರ್ದಿಷ್ಟಾವಾಗಿ, ಮಿಯಾಸಿಸ್‌ನ ಪ್ರಕ್ರಿಯೆಯ ಎರಡನೇಯ ಜೀವಕೋಶ್ ವಿಭಾಗವಾಗುವ ಸಂದರ್ಭದಲ್ಲಿ, ವರ್ಣತಂತುವಿನ ಮೇಲೆ ಇರುವ ಎರಡು ವಿಭಿನ್ನವಾದ ಆಲೀಲುಗಳು ಬೇರ್ಪಡೆಯಾಗುತ್ತದೆ.
ಲಾ ಆಫ್ ಇಂಡಿಪೆಂಡೆಂಟ್ ಅಸಾರ್ಟ್ಮೆಂಟ್[ಬದಲಾಯಿಸಿ]
ಎರಡನೆಯ ಜೀವಕೋಶದ ವಿಭಾಗದ ಸಮಯದಲ್ಲಿ, ಒಂದು ಆಲೀಲಿನ ಜೋಡಿ ಎರಡು ಮರಿ ಜೀವಕೋಶಿಗಳಾಗಿ ಬೇರ್ಪಡೆಯಾಗುತ್ತದೆ. ಈ ಜೋಡಿಯ ಬೇರ್ಪಡೆವು, ಇನ್ನೊಂದು ಆಲೀಲಿನ ಜೋಡಿಯ ಬೇರ್ಪಡೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ". ಇದು ಮೆಂಡೆಲ್ ಮೂರನೆಯ ಲಾ, 'ಲಾ ಆಫ್ ಇಂಡಿಪೆಂಡೆಂಟ್ ಅಸ್ಸಾರ್ಟ್ಮೆಂಟ್'. ಒಂದು ಜೀನಿನಿಂದ ಅನ್ನುವಂಶಿಕವಾಗಿ ಬಂದ ಗುಣಲಕ್ಷಣಗಳು, ಇನ್ನೊಂದು ಜೀನಿನಿಂದ ಉತ್ಪತ್ತಿಯಾಗುವ ಗುಣಲಕ್ಷಗಳಿಂದ ವಿವಿಧವಾಗಿರುತ್ತದೆ. ಇದಕ್ಕೆ ಕಾರಣ: ಮಿಯಾಸಿಸ್ ಪ್ರಕ್ರಿಯೆಯ ಸಮಯದಲ್ಲಿ, ವಿವಿಧ ವರ್ಣತಂತುವಿನ ಮೇಲೆ ಇರುವ ಜೀನ್‌ಗಳು ಎರಡು ಮರಿ ಜಿವಕೋಶಗಳಾಗಿ ಬೇರ್ಪಡೆಯಾಗುತ್ತದೆ.
ಮೆಂಡೆಲಿಯನ್ ಟ್ರೈಟ್ಸ್[ಬದಲಾಯಿಸಿ]
೧೮೦೦ರಲ್ಲಿ ಆಸ್ಟ್ರಿಯನ್ ಬೈರಾಗಿಯಾದ ಗ್ರೆಗರ್ ಜೋಹಾನ್ ಮೆಂಡೆಲ್ ರವರು ಪೈಸಂ ಸ್ಯಾಟಿವಂ ಗಿಡದ ಗುಣಲಕ್ಷಣಗಳ ಬಗ್ಗೆ ಪಡೆದುಕೊಂಡ ಙ್ಞಾನವನ್ನು 'ಮೆಂಡೆಲಿಯನ್ ಟ್ರೈಟ್ಸ್' ಎಂದು ಹೆಸರನ್ನು ಪಡೆದುಕೊಂಡಿತ್ತು. ಆಲೀಲುಗಳನ್ನು ಒಂದು ಅಕ್ಷರದಲ್ಲಿ ವ್ಯಕ್ತಪಡಿಸಲಾಗುತ್ತದೆ. ಡಾಮಿನೆಂಟ್ ಆಲೀಲುಗಳನ್ನು ದೊಡ್ಡಕ್ಷರದಲ್ಲಿ ಪ್ರತಿನಿಧಿಸಲಾಗುತ್ತದೆ. ರಿಸಿಸ್ಸಿವ್ ಆಲೀಲುಗಳನ್ನು ಸಣ್ಣಕ್ಷರದಲ್ಲಿ ಪ್ರತಿನಿಧಿಸಲಾಗುತ್ತದೆ. ಮಕ್ಕಳು, ಒಂದು ಆಲೀಲನ್ನು ತಂದೆಯಿಂದ ಮತ್ತೊಂದು ಆಲೀಲನ್ನು ತಾಯಿಯಿಂದ ಪಡೆದುಕೊಳ್ಳುಲಾಗುತ್ತದೆ. ಈ ಎರಡು ಆಲೀಲುಗಳು ಒಟ್ಟುಗೂಡಿ ಮಕ್ಕಳ ಫಿನೋಟೈಪ್ ಅನ್ನು ನಿರ್ಧರಿಸುತ್ತದೆ. ಕಂದು ಬಣ್ಣದ ಕೂದಲು, ನೀಲಿ ಬಣ್ಣದ ಕಣ್ಣುಗಳಾದ ಗುಣಲಕ್ಷಣದ ದೈಹಿಕ ತೋರಿಕೆಯನ್ನು 'ಫಿನೋಟೈಪ್' ಎಂದು ಕರಯಲಾಗುತ್ತದೆ. ಒಂದು ಅಥವಾ ಎರಡು ಡಾಮಿನೆಂಟ್ ಆಲೀಲುಗಳನ್ನು ಪಡೆದುಕೊಂಡ ಮಗು, ಡಾಮಿನೆಂಟ್ ಫಿನೋಟೈಪವನ್ನು ಪ್ರದರ್ಶಿಸುತ್ತದೆ. ಒಂದು ಅಥವ ಎರಡು ರಿಸಿಸ್ಸಿವ್ ಆಲೀಲುಗಳನ್ನು ಪಡೆದುಕೊಂಡ ಮಗು, ರಿಸಿಸ್ಸಿವ್ ಫಿನೋಟೈಪವನ್ನು ಪ್ರದರ್ಶಿಸುತ್ತದೆ.
ಪುನ್ನೆಟ್ಟ್ ಬಾಕ್ಸ್[ಬದಲಾಯಿಸಿ]
ಸಂತತಿಯ ಗುಣಲಕ್ಷಣ ಅಥವಾ ಫಿನೊಟೈಪುಗಳನ್ನು ಗುರಿತಿಸುವ ಒಂದು ನಕ್ಷೆಯನ್ನು 'ಪುನ್ನೆಟ್ಟ್ ಬಾಕ್ಸ್' ಎಂದು ಕರೆಯಲಾಗುತ್ತದೆ. ಇದನ್ನು 'ಪುನ್ನೆಟ್ಟ್ ಸ್ವ್ಕೇರ್' ಎಂದೂ ಕರೆಯಲಾಗುತ್ತದೆ. ಮೊದಲೆನೆಯ ಪೋಷಕವನ್ನು ಪುನ್ನೆಟ್ಟ್ ಬಾಕ್ಸ್ ಮೇಲಿನ ಜಾಗದಲ್ಲಿ ಬರೆಯಲಾಗುತ್ತದೆ. ಈ ಪೋಷಕರ ಎರಡು ರಿಸಿಸ್ಸಿವ್ ಆಲೀಲುಗಳನ್ನು ಸಣ್ಣಕ್ಷರದಲ್ಲಿ ವ್ಯಕ್ತಪಡಿಸಲಾಗುತ್ತದೆ. ಎರಡೆನೇಯ ಪೋಷಕವನ್ನು ಪುನ್ನೆಟ್ಟ್ ಬಾಕ್ಸಿನ ಒಂದು ಬದಿಯಲ್ಲಿ ಬರೆಯಲಾಗುತ್ತದೆ. ಈ ಪೋಷಕರ ಒಂದು ಡಾಮಿನೆಂಟ್ ಆಲಿಲ್ ಮತ್ತು ಒಂದು ರಿಸಿಸ್ಸಿವ್ ಆಲೀಲುಗಳನ್ನು ಸಣ್ಣಕ್ಷರದಲ್ಲಿ ವ್ಯಕ್ತಪಡಿಸಲಾಗುತ್ತದೆ. ಮೆಂಡೆಲ್ ಪ್ರಯೋಗ ಮಾಡಿದ ಪೈಸಂ ಸ್ಯಾಟಿವಂ ಪೋಷಕರ ಗಿಡದ ಫಿನೋಟೈಪ್ ಹಸಿರು ಬಣ್ಣದಲ್ಲಿ ಇತ್ತು. ಮತ್ತೊಂದು ಪೋಷಕರ ಗಿಡದ ಫಿನೋಟೈಪ್ ಹಳದಿ ಬಣ್ಣದಲ್ಲಿ ಇತ್ತು. ಈ ಎರಡು ಪೋಷಕರ ಗಿಡದ ಮೇಲೆ ಪ್ರಯೋಗ ಮಾಡಿದ್ದ ಸಂದರ್ಭದಲ್ಲಿ ಪ್ರತಿಯೊಂದು ಪೋಷಕರ ಗಿಡಗಳು, ತಮ್ಮ ಒಂದು ಆಲೀಲನ್ನು ಸಂತತಿಗೆ ನೀಡಿತ್ತು. ಸಂತತಿಯ ಆಲೀಲುಗಳನ್ನು ಈ ನಾಲ್ಕು ಚಿಕ್ಕ ಬಾಕ್ಸಿನಲ್ಲಿ ಕಾಣಬಹುದು. ಸಂತತಿಯು ಹಳದಿ ಬಣ್ಣ ಅಥವಾ ಹಸಿರು ಬಣ್ಣದಲ್ಲಿ ಇರುತ್ತದೆ ಎಂದು ಗ್ರೆಗರ್ ಮೆಂಡೆಲ್ ರವರು ಋಜುವಾತು ಮಾಡಿತೋರಿಸಿದ್ದಾರೆ.
ನಾನ್ ಮೆಂಡೆಲಿಯನ್ ಟ್ರೈಟ್ಸ್[ಬದಲಾಯಿಸಿ]
ಒಂದು ಜೀನಿನಿಂದ ಡಾಮಿನೆಂಟ್ ಮತ್ತು ರಿಸಿಸ್ಸಿವ್ ಆಲಲೀಲುಗಳು ಸಂತತಿಗಳಿಗೆ ಅಥವಾ ತಲೆಮಾರುಗಳಿಗೆ ಸಾಗುತ್ತದೆ. ಈ ಗುಣಲಕ್ಷಗಳನ್ನು ನಾನ್ ಮೆಂಡೆಲಿಯನ್ ಟ್ರೈಟ್ಸ್ ಎಂದು ಕರೆಯಲಾಗುತ್ತದೆ. ಕೂದಲಿನ ಬಣ್ಣ ಮತ್ತು ಒಬ್ಬ ಮನುಷ್ಯನ ಎತ್ತರವು ಬಹುಪೂರ್ವಿಕ (ಪಾಲಿಜೆನಿಕ್) ಟ್ರೈಟ್ಸಗಳು ಉದಾಹರಣೆಗಳು. ಈ ಪಾಲಿಜಿನಿಕ್ ಟ್ರೈಟ್ಸಗಳನ್ನು ನಾನ್ ಮೆಂಡೆಲಿಯನ್ ಟ್ರೈಟ್ಸ್ ಎಂದು ಪರಿಗಣಿಸಲಾಗಿದೆ. ಇದಕ್ಕೆ ಕಾರಣ: ಈ ಪಾಲಿಜೆನಿಕ್ ಟ್ರೈಟ್ಸಗಳ ಆಲೀಲುಗಳು ಒಂದಕ್ಕಿಂತ ಹೆಚ್ಚು ಫಿನೋಟೈಫಳಿಗೆ ಅನುಮತಿಸುತ್ತದೆ. ಯಾವುದೇ ಡಾಮಿನೆಂಟ್ ಅಥವಾ ರಿಸಿಸ್ಸಿವ್ ಅಲೀಲುಗಳಿಲ್ಲದ ಗುಣಲಕ್ಷಣಗಳನ್ನು 'ಕೋ ಡಾಮಿನೆನ್ಸ್' ಎಂದು ಕರೆಯಲಾಗುತ್ತದೆ. ರಕ್ತದ ರೀತಿಗಳು ಇದಕ್ಕೆ ಉದಾಹರಣೆಗಳು. ಆರಂಭದಲ್ಲಿ, ಕೆಲವು ಗುಣಲಕ್ಷಣಹಳನ್ನು ಮೆಂಡೆಲಿಯನ್ ಇನ್ಹೆರಿಟೆನ್ಸ್ ಎಂದು ನಂಬಲಾಗಿತ್ತು. ಈ ಆಧುನಿಕ ಯುಗದಲ್ಲಿ ಮೆಂಡೆಲಿಯನ್ ಇನ್ಹೆರಿಟೆನ್ಸಗಳು ಒಂದಕಿಂತಲೂ ಹೆಚ್ಚು ಜೀನ್ಗಳ ಮಾದರಿಗಳ ಮೇಲೆ ಆಧಾರವಾಗಿದೆ. ಕೆಲವು ಉದಾಹರಣೆಗಳು: ಕಣ್ಣಿನ ಬಣ್ಣ, ಕೂದಲಿನ ಬಣ್ಣ, ರಕ್ತ ಗುಂಪಿನ ಇನ್ಹೆರಿಟೆಂನ್ಸ್, ಬೇರ್ಪಟ್ಟಿ (ಡಾಮಿನೆಂಟ್) ಅಥವಾ ನಿಯಕ್ತವಾದ (ರಿಸಿಸ್ಸಿವ್) ಕಿವಿಯ ಹಾಲೆಗಾಳು, ಮಾರ್ಟನ್ಸ್ ಟೋ, ಫಿನೈಲಥಿಯೋಕಾರ್ಬಮೈಡ್ (ಡಾಮಿನೆಂಟ್) ರುಚಿನ ಸಾಮರ್ಥ್ಯ ನೋಡುವುದು. ಗಿಡಗಳು, ಪ್ರಾಣಿಗಳು, ಮತ್ತು ಮನುಷ್ಯರು ಒಬ್ಬರಿಗಿಂತ ಇನೊಬ್ಬರು ವಿಭಿನ್ನವಾಗಿರುವುದಕಕ್ಕೆ, ಈ ಮೆಂಡೆಲಿಯನ್ ಇನ್ಹೆರಿಟೆನ್ಸ್ ಒಂದು ಕಾರಣ.
ಉಲ್ಲೇಖನಗಳು[ಬದಲಾಯಿಸಿ]
ಬಾಹ್ಯ ಕೊಂಡಿಗಳು[ಬದಲಾಯಿಸಿ]
- 1913 Catholic Encyclopedia entry, "Mendel, Mendelism"
- Augustinian Abbey of St. Thomas at Brno
- Biography, bibliography and access to digital sources in the Virtual Laboratory of the Max Planck Institute for the History of Science
- Biography of Gregor Mendel Archived 2008-01-17 ವೇಬ್ಯಾಕ್ ಮೆಷಿನ್ ನಲ್ಲಿ.
- GCSE student
- Gregor Mendel (1822–1884)
- Gregor Mendel Primary Sources Archived 2017-09-17 ವೇಬ್ಯಾಕ್ ಮೆಷಿನ್ ನಲ್ಲಿ.
- Johann Gregor Mendel: Why his discoveries were ignored for 35 (72) years (German)
- Masaryk University to rebuild Mendel’s greenhouse | Brno Now
- Mendel Museum of Genetics
- Mendel's Paper in English
- Online Mendelian Inheritance in Man
- A photographic tour of St. Thomas' Abbey, Brno, Czech Republic Archived 2008-04-19 ವೇಬ್ಯಾಕ್ ಮೆಷಿನ್ ನಲ್ಲಿ.
- http://www.yourgenome.org/facts/what-is-meiosis
- http://www.innovateus.net/science/what-mendelian-genetics Archived 2016-10-14 ವೇಬ್ಯಾಕ್ ಮೆಷಿನ್ ನಲ್ಲಿ.
