ಗೀತಾ ಶೆಣೈ
ಗೋಚರ
ಗೀತಾ ಶೆಣೈ ಕನ್ನಡದ ಪ್ರಮುಖ ಲೇಖಕಿ. ಇವರು ೧೯೫೪ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನಿಸಿದರು. ಉಡುಪಿಯ ಸೈಂಟ್ ಸಿಸಿಲೀಸ್ ಕಾನ್ವೆಂಟ್‍ನಲ್ಲಿ ಶಾಲಾ ಶಿಕ್ಷಣವನ್ನು ಮುಗಿಸಿ ಪೂರ್ಣಪ್ರಜ್ಞಾ ಕಾಲೇಜಿನಲ್ಲಿ ಕಲಿತು ಬಿ.ಎಸ್ಸಿ ಪದವಿ ಪಡೆದರು. ನಂತರ ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡದಿಂದ ಕನ್ನಡ ಎಮ್.ಎ., ಕನ್ನಡ ವಿಶ್ವವಿದ್ಯಾಲಯ, ಹಂಪಿಯಿಂದ ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಪಿಹೆಚ್.ಡಿ, ಪದವಿ ಪಡೆದಿದ್ದಾರೆ. ಇಂದಿರಾಗಾಂಧಿ ಮುಕ್ತವಿಶ್ವವಿದ್ಯಾಲಯದಿಂದ ಮಹಿಳಾ ಅಧ್ಯಯನದಲ್ಲಿ ಸಿಡಬ್ಲ್ಯೂಇಡಿ ಕೋರ್ಸ್ ಮುಗಿಸಿದ್ದಾರೆ, ಜೀವನ ಚರಿತ್ರೆ, ಅನುವಾದ ಮತ್ತು ಮಹಿಳಾ ಅಧ್ಯಯನ ಇತ್ಯಾದಿ ಪ್ರಕಾರಗಳಲ್ಲಿ ೧೮ ಗ್ರಂಥಗಳನ್ನು ಪ್ರಕಟಿಸಿದ್ದಾರೆ. ಇವರ ಮೊದಲ ಕೃತಿ ಝುಂಪಾ ಲಾಹಿರಿಯವರ ಇಂಟರ್‍ಪ್ರಿಟರ್ ಆಫ್ ಮ್ಯಾಲಡೀಸ್ ಕಥಾಸಂಕಲನದ ಅನುವಾದ `ಬೇನೆಗಳ ದುಭಾಷಿ'. `ಕನ್ನಡ ಕಥನ ಸಾಹಿತ್ಯದಲ್ಲಿ ಸ್ತ್ರೀನಿರ್ವಚನ' ಇವರು ಹಂಪಿ ವಿಶ್ವವಿದ್ಯಾಲಯಕ್ಕೆ ಸಲ್ಲಿಸಿದ ಪಿಹೆಚ್.ಡಿ ಮಹಾಪ್ರಬಂಧವಾಗಿದೆ.
ಕೃತಿಗಳು
[ಬದಲಾಯಿಸಿ]ಅಪ್ರಕಟಿತ
[ಬದಲಾಯಿಸಿ]ಅನುವಾದ
[ಬದಲಾಯಿಸಿ]- ಬೇನೆಗಳ ದುಭಾಷಿ- ಕಥಾ ಸಂಕಲನ (ಮೂಲ : ಜುಂಪಾ ಲಾಹಿರಿ)
- ಜಗತ್ತನ್ನು ಬದಲಾಯಿಸುವುದು ಹೇಗೆ-ಸಮಾಜ ಶಾಸ್ತ್ರೀಯ ಅಧ್ಯಯನ ಕೃತಿ
ಅಚ್ಚಿನಲ್ಲಿ
[ಬದಲಾಯಿಸಿ]- ಚಂದ್ರಭಾಗದೇವಿ- ಬದುಕು ಬರೆಹ
- ಜ್ಯೋತ್ಸ್ನಾಕಾಮತ್-ಬದುಕು ಬರೆಹ
ಇತರ ಕೃತಿಗಳು
[ಬದಲಾಯಿಸಿ]- ಸರಸ್ವತಿ ದೇವಿಗೌಡರ -ಬದುಕು ಬರೆಹ
- ಪ್ರೇಮಾ ಕಾರಂತ -ಬದುಕು ಬರೆಹ
- ಪದ್ಮಾ ಶೆಣೈ- ಬದುಕು ಬರೆಹ
- ಪಂಡಿತ ರಮಾಬಾಯಿ ಸರಸ್ವತಿ- ಬದುಕು ಬರೆಹ
ಇತರೆ ವಿಷಯಗಳು
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]- 1 2 ನಮ್ಮ ಬದುಕಿನ ಪುಟಗಳು, ಪ್ರಧಾನ ಸಂಪಾದಕರು ಡಾ.ಕೆ. ಆರ್. ಸಂಧ್ಯಾರೆಡ್ಡಿ, ಕರ್ನಾಟಕ ಲೇಖಕಿಯರ ಸಂಘ(ರಿ.) ಬೆಂಗಳೂರು, ಮೊದಲ ಮುದ್ರಣ ೨೦೦೭, ಪುಟಸಂಖ್ಯೆ೮೧
ಈ ಲೇಖನದಲ್ಲಿಪರಿಶೀಲನೆಗಾಗಿ ಹೆಚ್ಚಿನ ಉಲ್ಲೇಖಗಳ ಅಗತ್ಯವಿದೆ. |