ಪದ್ಮಾ ಶೆಣೈ
ಪದ್ಮಾ ಶೆಣೈ ಕನ್ನಡಸಾಹಿತ್ಯ ಲೋಕದಲ್ಲಿ ಒಬ್ಬ ಮೇರು ಲೇಖಕಿ."ವೇದಿಕ್ ಮ್ಯಾಥೆಮೇಟಿಕ್ಸ್" ಬರೆದ ಪ್ರಸಿದ್ದ ವಿದ್ವಾಂಸ ಡಿ.ಬಿ.ರಾಮಚಂದ್ರ ಬಾಳಿಗ ಪದ್ಮಾ ಶೆಣೈ ಅವರ ತಂದೆ. ಮೊದಮೊದಲು ಸಣ್ಣಕಥೆಗಳನ್ನು ಬರೆಯಲು ಆರಂಭಿಸಿದ ಪದ್ಮಾ, ಮದುವೆಯ ನಂತರ ಕಾದಂಬರಿಗಳನ್ನು ಬರೆಯಲು ಆರಂಭಿಸಿದರು. ಅವರ ಮೊದಲ ಕಾದಂಬರಿ "ರಸ-ವಿರಸ". ಇದಕ್ಕೆ ಕರ್ನಾಟಕ ರಾಜ್ಯಸರ್ಕಾರದ ಪ್ರಶಸ್ತಿ ದೊರೆಯಿತು. ೧೯೪೮ ರಲ್ಲೇ ಬರೆಯಲಿಕ್ಕೆ ಶುರು ಮಾಡಿದ ಪದ್ಮಾ ಶೆಣೈ, ಕಥೆ ಕಾದಂಬರಿಗಳಲ್ಲದೆ ಮಕ್ಕಳ ಸಾಹಿತ್ಯ, ಜೀವನ ಚರಿತ್ರೆ, ಪ್ರವಾಸ ಕಥನ,ವಿಚಾರ ಸಾಹಿತ್ಯ, ಹೀಗೆ ಹಲವಾರು ಪ್ರಕಾರದಲ್ಲಿ ಸಾಹಿತ್ಯ ಕೃಷಿ ಮಾಡುತ್ತಾ ಬಂದಿದ್ದಾರೆ. ಸಮಾಜದಲ್ಲಿನ ವೈವಿದ್ಯವನ್ನೂ, ವೈಪರಿತ್ಯವನ್ನೂ, ಅತೃಪ್ತಿಗಳನ್ನು ತಮ್ಮ ಕೃತಿಯಲ್ಲಿ ಮೂಡಿಸಿರುವುದಲ್ಲದೆ ಅವುಗಳ ಪರಿಹಾರವನ್ನೂ ಸೂಚಿಸಿದ್ದಾರೆ. ಸಾಮಾಜಿಕ ಸಮಾನತೆ, ಕೌಟುಂಬಿಕ ಸಮಸ್ಯೆಗಳು-ಸಂಬಂಧಗಳು, ಮಹಿಳಾ ಉನ್ನತಿ, ಹೀಗೆ ಸಮಾಜದ ಬಗ್ಗೆ ಲೇಖಕಿಯರಿಗೆ ಇರುವ ಕಳಕಳಿಯನ್ನು ನ್ಯಾಯವೂ ಸಂದರ್ಭೋಚಿತವಾಗಿದೆ ಎಂದು ಸಾರಿ ಹೇಳಿರುವಂತಿರುತ್ತದೆ ಅವರ ಸಾಹಿತ್ಯ.
ಕಾದಂಬರಿಗಳು
[ಬದಲಾಯಿಸಿ]- ರಸ-ವಿರಸ
- ಸಂಧಿಕಾಲ
- ಕೊನೆಯ ನಿರ್ಧಾರ
- ನರನಾರಾಯಣ
- ಜಯಶ್ರೀ
- ನಾ ನಿನ್ನ ಧ್ಯಾನದೊಳಿರಲು
- ಅನುಬಂಧ
- ಅನಿಶ್ಚಿತ
- ಅನುಗ್ರಹ
- ಮರೆಯ ನೆರಳು
- ಉಯ್ಯಾಲೆ
ಕಥಾಸಂಕಲನಗಳು
[ಬದಲಾಯಿಸಿ]- ದೂರದ ಆಸೆ
- ಹರಿದ ಗಾಳಿಪಟ
- ನೂಲಿನಂತೆ ಸೀರೆ
ನೀಳ್ಗತೆ
[ಬದಲಾಯಿಸಿ]- ಪ್ರಭಾ
- ಉಷಾ
- ಸುಧಾ
ಜೀವನ ಚರಿತ್ರೆ
[ಬದಲಾಯಿಸಿ]ಮಹಾ ಸನ್ಯಾಸಿ
ಪ್ರವಾಸ ಸಾಹಿತ್ಯ
[ಬದಲಾಯಿಸಿ]ಅಮೇರಿಕಾ ವಾಸ-ಪ್ರವಾಸ
ಮಕ್ಕಳ ಸಾಹಿತ್ಯ
[ಬದಲಾಯಿಸಿ]- ದ್ರುಪದಿ
- ಸಖೂಬಾಯಿ
- ಫಿರೋಜ್ ಶಾ ಮೆಹೆತ
- ಛತ್ರ ಸಾಲ
ಆಧ್ಯಾತ್ಮಿಕ
[ಬದಲಾಯಿಸಿ]- ಆನಂದ ಕುಟೀರದ ಮಹಾತ್ಮಾ-ಅಜ್ಜ
- ಆನಂದೋಪನಿಷತ್ತು
"ಭಾರತೀಯ ಸ್ತ್ರೀ ಸಂಸ್ಕೃತಿ ಮತ್ತು ಸಮಾಜ" ಎಂಬ ವೈಚಾರಿಕ ಗ್ರಂಥವನ್ನೂ ಮತ್ತು "ಮಹಾಸನ್ಯಾಸಿ" ಎಂಬ ಶಂಕರಾಚಾರ್ಯರ ಜೀವನ ಚರಿತ್ರೆಯನ್ನು ಬರೆದಿದ್ದಾರೆ. "ಅಮೇರಿಕಾ-ವಾಸ ಪ್ರವಾಸ" ಎಂಬುದು ಅವರ ಪ್ರವಾಸ ಕಥನ. ಇವರು ಕೊಂಕಣಿಯಲ್ಲೂ ಸಣ್ಣ ಕಥೆಗಳನ್ನು ಬರೆದಿದ್ದಾರೆ.