ಗೀತಾ ಶೆಣೈ
ಗೋಚರ
(ಗೀತಾ ಆರ್ ಶೆಣೈ ಇಂದ ಪುನರ್ನಿರ್ದೇಶಿತ)
ಗೀತಾ ಶೆಣೈ ಕನ್ನಡದ ಪ್ರಮುಖ ಲೇಖಕಿ. ಇವರು ೧೯೫೪ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನಿಸಿದರು. ಉಡುಪಿಯ ಸೈಂಟ್ ಸಿಸಿಲೀಸ್ ಕಾನ್ವೆಂಟ್‍ನಲ್ಲಿ ಶಾಲಾ ಶಿಕ್ಷಣವನ್ನು ಮುಗಿಸಿ ಪೂರ್ಣಪ್ರಜ್ಞಾ ಕಾಲೇಜಿನಲ್ಲಿ ಕಲಿತು ಬಿ.ಎಸ್ಸಿ ಪದವಿ ಪಡೆದರು. ನಂತರ ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡದಿಂದ ಕನ್ನಡ ಎಮ್.ಎ., ಕನ್ನಡ ವಿಶ್ವವಿದ್ಯಾಲಯ, ಹಂಪಿಯಿಂದ ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಪಿಹೆಚ್.ಡಿ, ಪದವಿ ಪಡೆದಿದ್ದಾರೆ. ಇಂದಿರಾಗಾಂಧಿ ಮುಕ್ತವಿಶ್ವವಿದ್ಯಾಲಯದಿಂದ ಮಹಿಳಾ ಅಧ್ಯಯನದಲ್ಲಿ ಸಿಡಬ್ಲ್ಯೂಇಡಿ ಕೋರ್ಸ್ ಮುಗಿಸಿದ್ದಾರೆ, ಜೀವನ ಚರಿತ್ರೆ, ಅನುವಾದ ಮತ್ತು ಮಹಿಳಾ ಅಧ್ಯಯನ ಇತ್ಯಾದಿ ಪ್ರಕಾರಗಳಲ್ಲಿ ೧೮ ಗ್ರಂಥಗಳನ್ನು ಪ್ರಕಟಿಸಿದ್ದಾರೆ. ಇವರ ಮೊದಲ ಕೃತಿ ಝುಂಪಾ ಲಾಹಿರಿಯವರ ಇಂಟರ್‍ಪ್ರಿಟರ್ ಆಫ್ ಮ್ಯಾಲಡೀಸ್ ಕಥಾಸಂಕಲನದ ಅನುವಾದ `ಬೇನೆಗಳ ದುಭಾಷಿ'. `ಕನ್ನಡ ಕಥನ ಸಾಹಿತ್ಯದಲ್ಲಿ ಸ್ತ್ರೀನಿರ್ವಚನ' ಇವರು ಹಂಪಿ ವಿಶ್ವವಿದ್ಯಾಲಯಕ್ಕೆ ಸಲ್ಲಿಸಿದ ಪಿಹೆಚ್.ಡಿ ಮಹಾಪ್ರಬಂಧವಾಗಿದೆ.
ಕೃತಿಗಳು
[ಬದಲಾಯಿಸಿ]ಅಪ್ರಕಟಿತ
[ಬದಲಾಯಿಸಿ]- ಕನ್ನಡ ಕಥನ ಸಾಹಿತ್ಯ ಮತ್ತು ಸ್ತ್ರೀ ನಿರ್ವಚನ-ಪಿ ಎಚ್.ಡಿ. ಮಹಾಪ್ರಬಂಧ
- ಕನ್ನಡ ಮಹಿಳಾ ಭಾಷಾಂತರ ಸಾಹಿತ್ಯ-ಸಂಶೋಧನಾ ಕೃತಿ
- ಕರ್ನಾಟಕದಲ್ಲಿ ಕೊಂಕಣಿ ಭಾಷಿಕ ಸಮುದಾಯ- ಸಂಶೋಧನಾ ಕೃತಿ
ಅನುವಾದ
[ಬದಲಾಯಿಸಿ]- ಬೇನೆಗಳ ದುಭಾಷಿ- ಕಥಾ ಸಂಕಲನ (ಮೂಲ : ಜುಂಪಾ ಲಾಹಿರಿ)
- ಜಗತ್ತನ್ನು ಬದಲಾಯಿಸುವುದು ಹೇಗೆ-ಸಮಾಜ ಶಾಸ್ತ್ರೀಯ ಅಧ್ಯಯನ ಕೃತಿ
ಅಚ್ಚಿನಲ್ಲಿ
[ಬದಲಾಯಿಸಿ]- ಚಂದ್ರಭಾಗದೇವಿ- ಬದುಕು ಬರೆಹ
- ಜ್ಯೋತ್ಸ್ನಾಕಾಮತ್-ಬದುಕು ಬರೆಹ
ಇತರ ಕೃತಿಗಳು
[ಬದಲಾಯಿಸಿ]- ಸರಸ್ವತಿ ದೇವಿಗೌಡರ -ಬದುಕು ಬರೆಹ
- ಪ್ರೇಮಾ ಕಾರಂತ -ಬದುಕು ಬರೆಹ
- ಪದ್ಮಾ ಶೆಣೈ- ಬದುಕು ಬರೆಹ
- ಪಂಡಿತ ರಮಾಬಾಯಿ ಸರಸ್ವತಿ- ಬದುಕು ಬರೆಹ
ಇತರೆ ವಿಷಯಗಳು
[ಬದಲಾಯಿಸಿ]- ಇವರ ಕತೆಗಳು ಮತ್ತು ಲೇಖನಗಳು ಕನ್ನಡದ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.[೧]
- ಇವರ ಲೇಖನಗಳು ವಿಶ್ವವಿದ್ಯಾಲಯ ಪ್ರಕಟಿಸಿದ ವಿಶ್ವಕೋಶದಲ್ಲಿ ಪ್ರಕಟವಾಗಿವೆ.
- ಸಂಶೋಧನಾ ಲೇಖನಗಳು ವಿಶ್ವವಿದ್ಯಾಲಯ ನಡೆಸಿದ ವಿಚಾರ ಸಂಕಿರಣಗಳಲ್ಲಿ ಬೆಳಕಿಗೆ ಬಂದಿವೆ.[೧]
- ಇವರ ಲೇಖನಗಳು ಅಕಾಶವಾಣಿಯಲ್ಲಿಯೂ ಪ್ರಸಾರಗೊಂಡಿವೆ