ವಿಷಯಕ್ಕೆ ಹೋಗು

ಗಢಮುಕ್ತೇಶ್ವರ

Coordinates: 28°48′N 78°06′E / 28.800°N 78.100°E / 28.800; 78.100
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಗಢಮುಕ್ತೇಶ್ವರ
ಗಢಮುಕ್ತೇಶ್ವರದಲ್ಲಿ (ಹಾಪುರ್), ಯುಪಿ, ಗಢ್ ಗಂಗಾದ ನೋಟ.
ಗಢಮುಕ್ತೇಶ್ವರದಲ್ಲಿ (ಹಾಪುರ್), ಯುಪಿ, ಗಢ್ ಗಂಗಾದ ನೋಟ.
Nickname: 
ಗಢ್ ಗಂಗಾ
ಗಢಮುಕ್ತೇಶ್ವರ is located in Uttar Pradesh
ಗಢಮುಕ್ತೇಶ್ವರ
ಗಢಮುಕ್ತೇಶ್ವರ
ಉತ್ತರ ಪ್ರದೇಶ, ಭಾರತದಲ್ಲಿ ನೆಲೆ
ಗಢಮುಕ್ತೇಶ್ವರ is located in India
ಗಢಮುಕ್ತೇಶ್ವರ
ಗಢಮುಕ್ತೇಶ್ವರ
ಗಢಮುಕ್ತೇಶ್ವರ (India)
Coordinates: 28°48′N 78°06′E / 28.800°N 78.100°E / 28.800; 78.100
ದೇಶ ಭಾರತ
ರಾಜ್ಯಉತ್ತರ ಪ್ರದೇಶ
ಜಿಲ್ಲೆಹಾಪುರ್
Named forಮುಕ್ತೇಶ್ವರ್ ಮಹಾದೇವ್
Government
 • Typeಪುರಸಭೆ
 • Bodyಗಢಮುಕ್ತೇಶ್ವರ ಪುರಸಭೆ
 • ಪುರಸಭಾಧ್ಯಕ್ಷರಾಕೇಶ್ ಕುಮಾರ್[] (ಬಿಜೆಪಿ)
 • ವಿಧಾನಸಭಾ ಸದಸ್ಯಹರೇಂದ್ರ ಸಿಂಗ್ ಟೇವಾಟಿಯಾ, (ಬಿಜೆಪಿ)
Population
 (2011)
 • Total೪೬,೦೭೭
ಭಾಷೆಗಳು
 • ಅಧಿಕೃತಹಿಂದಿ
Time zoneUTC+5:30 (ಐಎಸ್‍ಟಿ)
ಪಿನ್‍ಕೋಡ್
245205
ದೂರವಾಣಿ ಸಂಕೇತ5731
Vehicle registrationUP-37
Websitewww.nppgarhmukteshwar.com

ಗಢಮುಕ್ತೇಶ್ವರ ಉತ್ತರ ಪ್ರದೇಶದ ಹಾಪುರ್ ಜಿಲ್ಲೆಗೆ ಸೇರಿದ ಒಂದು ಪುರಾತನ ತೀರ್ಥಕ್ಷೇತ್ರ.

ಇತಿಹಾಸ

[ಬದಲಾಯಿಸಿ]

ಮಹಾಭಾರತ ಕಾಲದ ಹಸ್ತಿನಾಪುರದ ಒಂದು ಭಾಗವಾಗಿತ್ತೆಂದು ಸ್ಥಳಪುರಾಣ. ಈಗ ಇದರಿಂದ 25 ಮೈ. ದೂರದ ಪ್ರದೇಶವೊಂದನ್ನು ಹಸ್ತಿನಾಪುರವಿದ್ದ ಸ್ಥಳವೆಂದು ಗುರುತಿಸುತ್ತಾರೆ. ಅಗಸ್ತ್ಯ ಋಷಿಯ ಶಾಪದಿಂದ ಸರ್ಪವಾದ ನಹುಷ ಧರ್ಮರಾಯನಿಂದ ಶಾಪವಿಮುಖನಾದ್ದು ಇಲ್ಲಿಯೇ ಎಂದು ಮಹಾಭಾರತದ ಉಲ್ಲೇಖ.[]

ಪ್ರವಾಸಿ ಆಕರ್ಷಣೆಗಳು, ಆರ್ಥಿಕತೆ

[ಬದಲಾಯಿಸಿ]

ಇಲ್ಲಿ ಮಹಾದೇವನ ಏಳು ದೇವಸ್ಥಾನಗಳಿವೆ: ಗಣ ಮುಕ್ತೇಶ್ವರನಾಥ, ಕೇದಾರನಾಥ, ಗಂಗೇಶ್ವರನಾಥ, ಭೂತೇಶ್ವರನಾಥ, ಅಮಲೀಶ್ವರನಾಥ, ಮುಕ್ತೇಶ್ವರನಾಥ, ಮತ್ತು ಮುಕ್ತಿನಾಥ. ಇವುಗಳಲ್ಲಿ ಗಣಮುಕ್ತೇಶ್ವರ ದೇವಾಲಯವೇ ಪ್ರಧಾನವಾದದ್ದು. ಪ್ರದೇಶದ ಅರಾಧ್ಯದೇವತೆ ಗಂಗಾದೇವಿಯಾದ್ದರಿಂದ ಇಲ್ಲಿ ಆಕೆಯ ನಾಲ್ಕು ಪೂಜಾ ಮಂದಿರಗಳಿವೆ. ಇಲ್ಲಿ ಅನೇಕ ತೀರ್ಥಗಳೂ ಇವೆ. ಕಾರ್ತಿಕ ಪೌರ್ಣಮಿಯಂದು ಇಲ್ಲಿ ವಿಶೇಷ ಉತ್ಸವ ನಡೆಯುತ್ತದೆ. ಸಹಗಮನ ಮಾಡಿದ ಸಾಧ್ವಿಯರ 80ಕ್ಕೂ ಹೆಚ್ಚು ಮಾಸ್ತಿಕಲ್ಲುಗಳು ಗಢಮುಕ್ತೆಶ್ವರದ್ಲಲಿವೆ. ಹದಿಮೂರನೆಯ ಶತಮಾನದಲ್ಲಿ ಗಿಯಾಸುದ್ದೀನ್ ಬಲ್ಬನ್ ಕಟ್ಟಿಸಿದ ಒಂದು ಮಸೀದಿ ಇಲ್ಲಿದೆ.[]

ಇಂದು ಗಢಮುಕ್ತೇಶ್ವರ ಮರಮುಟ್ಟುಗಳ, ಬೊಂಬುಗಳ ಪ್ರಮುಖ ವ್ಯಾಪಾರ ಕೇಂದ್ರವಾಗಿದೆ. ಜನಸಂಖ್ಯೆ 46,077 (2011).

ಉಲ್ಲೇಖಗಳು

[ಬದಲಾಯಿಸಿ]
  1. "2023 UP Municipal Election results". ECI Uttar Pradesh. Retrieved 22 May 2023.
  2. www.wisdomlib.org (2015-07-13). "Nahusa, Nahuṣa, Nahusha, Nāhuṣa: 18 definitions". www.wisdomlib.org (in ಇಂಗ್ಲಿಷ್). Retrieved 2022-10-14.
  3. "About Us". Nagar Palika Parishad Garhmukteshwar. Archived from the original on 2015-04-02. Retrieved 13 August 2016.
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: