ಗಂಟಲುಮಣಿ

ಗಂಟಲುಮಣಿ, ಅಥವಾ ಗಳಕುಹರದ ಉಬ್ಬು ಮಾನವನ ಕುತ್ತಿಗೆಯ ವೈಶಿಷ್ಟ್ಯವಾಗಿದೆ. ಇದು ಗಂಟಲುಗೂಡನ್ನು ಸುತ್ತುವರಿದಿರುವ ಥೈರಾಯ್ಡ್ ಮೃದ್ವಸ್ಥಿಯ ಕೋನದಿಂದ ರಚನೆಗೊಂಡಿರುವ ಗಡ್ಡೆ ಅಥವಾ ಉಬ್ಬು ಆಗಿದೆ ಮತ್ತು ವಿಶೇಷವಾಗಿ ಪುರುಷರಲ್ಲಿ ಕಂಡುಬರುತ್ತದೆ.
ರಚನೆ[ಬದಲಾಯಿಸಿ]
ಗಂಟಲುಮಣಿಯ ರಚನೆಯು ಚರ್ಮದ ಕೆಳಗೆ ಉಬ್ಬನ್ನು ರೂಪಿಸುತ್ತದೆ. ಇದು ಸಾಮಾನ್ಯವಾಗಿ ವಯಸ್ಕ ಪುರುಷರಲ್ಲಿ ಹೆಚ್ಚು ದೊಡ್ಡದಾಗಿದ್ದು, ಸಾಮಾನ್ಯವಾಗಿ ಸ್ಪಷ್ಟವಾಗಿ ಗೋಚರವಾಗುತ್ತದೆ ಮತ್ತು ಮುಟ್ಟಬಹುದಾಗಿದೆ. ಸ್ತ್ರೀಯರಲ್ಲಿ, ಈ ಉಬ್ಬು ಅಷ್ಟಾಗಿ ಕಾಣುವುದಿಲ್ಲ ಮತ್ತು ಥೈರಾಯ್ಡ್ ಮೃದ್ವಸ್ಥಿಯ ಮೇಲಿನ ಅಂಚಿನ ಮೇಲೆ ಕಷ್ಟದಿಂದ ಗ್ರಹಿಸಲ್ಪಡುತ್ತದೆ.[೧]
ಇದರ ಬೆಳವಣಿಗೆಯು ಪುರುಷರ ಒಂದು ದ್ವಿತೀಯಕ ಲೈಂಗಿಕ ಲಕ್ಷಣವೆಂದು ಪರಿಗಣಿಸಲಾಗುತ್ತದೆ ಮತ್ತು ಹಾರ್ಮೋನಿನ ಚಟುವಟಿಕೆಯ ಪರಿಣಾಮವಾಗಿ ಕಾಣಿಸಿಕೊಳ್ಳುತ್ತದೆ. ಇದರ ಬೆಳವಣಿಗೆಯ ಪ್ರಮಾಣಗಳ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ ಮತ್ತು ಗಂಟಲುಗೂಡಿನಲ್ಲಿ ಆ ಪ್ರದೇಶದ ಅಗಲವಾಗುವಿಕೆ ಬಹಳ ಹಠಾತ್ತಾಗಿ ಮತ್ತು ಕ್ಷಿಪ್ರವಾಗಿ ಆಗಬಹುದು.