ಖರಗ್ಪುರ
ಖರಗ್ಪುರ
Kharagpur | |
---|---|
Town | |
Government | |
• Mayor | Jaharlal Paul |
Population (2001) | |
• Total | ೨,೦೭,೯೮೪ |
Website | paschimmedinipur.gov.in/ |
ಖರಗ್‌ಪುರ (ಕೆಜಿಪಿ) ಬಂಗಾಳಿ:খড়্গপুর) ಎನ್ನುವುದು ಭಾರತದಲ್ಲಿನ ಕೈಗಾರಿಕಾ ಪಟ್ಟಣವಾಗಿದೆ. ಇದು ಪಶ್ಚಿಮ ಬಂಗಾಳ ರಾಜ್ಯದಲ್ಲಿನ ಮಿಡ್ನಾಪುರ ಪಶ್ಚಿಮ ಜಿಲ್ಲೆಯಲ್ಲಿದೆ. ಬಿಎನ್‌ಆರ್ ಅಥವಾ ಬಂಗಾಳ ನಾಗಪುರ ರೈಲ್ವೇ ), ಮಿಡ್ನಾಪುರ (ಉತ್ತರದ ಕಡೆ) ಮತ್ತು ಒಡಿಶಾ ರಾಜ್ಯದ (ಬಂಗಾಳ ಕೊಲ್ಲಿ ತೀರದಲ್ಲಿ ದಕ್ಷಿಣದ ಕಡೆ ಚಲಿಸುತ್ತಾ) ಬಾಲಸೋರ್ ಎಂಬುದಾಗಿ ಪ್ರಾಧಾನ್ಯತೆ ಪಡೆದಿದೆ.
(ಖರಗ್‌ಪುರವನ್ನು ಹೆಸರಾಂತ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿಗಳ) ಮೊದಲ ಕ್ಯಾಂಪಸ್ನ ಸ್ಥಳವಾಗಿ ಆಯ್ಕೆಮಾಡಲಾಗಿದೆ. ಐಐಟಿಗಳು ಭಾರತದಲ್ಲಿ ಪ್ರಧಾನವಾದ ತಾಂತ್ರಿಕ ಶಿಕ್ಷಣ ಸಂಸ್ಥೆಗಳಾಗಿದೆ ಮತ್ತು ಅವುಗಳು ಶೈಕ್ಷಣಿಕ ಮತ್ತು ತಾಂತ್ರಿಕ ಉತ್ಕೃಷ್ಟತೆಗಾಗಿ ಅಂತರಾಷ್ಟ್ರೀಯವಾಗಿ ಮಾನ್ಯತೆ ಪಡೆದಿವೆ. ಇದರ ಐಐಟಿಗಳಿಗೆ ಭಿನ್ನವಾಗಿ, ಐಐಟಿ ಖರಗ್‌ಪುರ್ವು ಇತರ ಐಐಟಿಗಳಲ್ಲಿ ನೀಡದ ಅಸಾಮಾನ್ಯವಾದ ಕೋರ್ಸುಗಳನ್ನು ನೀಡುವ ತನ್ನ ಸಾಮರ್ಥ್ಯಕ್ಕೆ ಬಹು ಕಾಲದಿಂದ ಹೆಸರುವಾಸಿಯಾಗಿದೆ. ಹಾಗೆಯೇ ಅದು ವಿದ್ಯಾರ್ಥಿಗಳ ಸಂಬಂಧ, ಅನನ್ಯವಾದ ಕ್ಯಾಂಪಸ್ ಜೀವನಶೈಲಿ ಮತ್ತು ವ್ಯಾಪಕವಾದ ಪಠ್ಯೇತರ ಚಟುವಟಿಕೆಗಳಿಗೆ ಪ್ರಖ್ಯಾತಿ ಪಡೆದಿದೆ. ಕ್ಯಾಂಪಸ್ ಹಿಜ್ಲಿ ಎಂಬಲ್ಲಿ ನೆಲೆಸಿದೆ.
ಖರಗ್‌ಪುರವು ವಿಶ್ವದಲ್ಲೇ ಅತೀ ಉದ್ದವಾದ ರೈಲ್ವೇ ಪ್ಲಾಟ್‌ಫಾರ್ಮ್‌ನೊಂದಿಗೆ [1072.5 ಮೀ]ಭಾರತದಲ್ಲೇ ಅತೀ ದೊಡ್ಡದಾದ ರೈಲ್ವೇ ಕಾರ್ಯಾಗಾರಗಳಲ್ಲಿ ಒಂದನ್ನು ಹೊಂದಿದೆ[೧]. ಖರಗ್‌ಪುರವು ಕಲೈಕುಂಡ ದಲ್ಲಿ ಮೊದಲ ಭೂಗತ ವಾಯು ಸೇನಾ ನಿಲ್ದಾಣವನ್ನು ಹೊಂದಿದೆ ಮತ್ತು ಅದು ಸಾಲುವಾ ದಲ್ಲಿ ಮತ್ತೊಂದು ವಾಯು ಸೇನಾ ನಿಲ್ದಾಣವನ್ನು ಹೊಂದಿದೆ.
ಸ್ಥಳ
[ಬದಲಾಯಿಸಿ]ವಿಸ್ತಾರದಲ್ಲಿ ಖರಗ್‌ಪುರವು ಪಶ್ಚಿಮ ಬಂಗಾಳದ ಐದನೇ ಅತೀದೊಡ್ಡ ನಗರವಾಗಿದ್ದು, ಸುಮಾರು 30 ಕಿಮೀ² ಪ್ರದೇಶವನ್ನು ವ್ಯಾಪಿಸಿ 22 02’ 30” ಅಕ್ಷಾಂಶ & 87 11’ 0” ರೇಖಾಂಶದಲ್ಲಿ ಮಿಡ್ನಾಪುರದ ದಕ್ಷಿಣ- ಪಶ್ಚಿಮ ಭಾಗದಲ್ಲಿ ನೆಲೆಸಿದೆ. ಈ ಉಪ-ವಿಭಾಗ ಪಟ್ಟಣವು ದಾಲ್ಮಾ ಪಹರ್ ಮತ್ತು ಮಿಡ್ನಾಪುರದ ಮೆಕ್ಕಲು ಮಣ್ಣಿನ ಪ್ರದೇಶದಲ್ಲಿ ರೂಪುಗೊಂಡಿದೆ. ಇದು ಹಲವಾರು ಜಲಮಾರ್ಗಗಳಿಂದ ವಿಭಜಿತವಾಗಿದ್ದು, ಪ್ರಮುಖ ನದಿಗಳು ಸುಬರ್ಣರೇಖಾ, ಕೆಲೆಘಾಯಿ ಮತ್ತು ಕಂಗಸಬಾಟಿ ಆಗಿದೆ.
ಭೂಗೋಳ ಶಾಸ್ತ್ರ/ಭೂ ವಿವರಣೆ
[ಬದಲಾಯಿಸಿ]ಖರಗ್‌ಪುರವು 22°19′49″N 87°19′25″E / 22.330239°N 87.323653°E ನಲ್ಲಿ ನೆಲೆಸಿದೆ.[೨] ಇದು ಸರಾಸರಿ 29 ಮೀಟರ್(95 ಅಡಿ)ಎತ್ತರದಲ್ಲಿದೆ.
ಜನಸಂಖ್ಯಾ ವಿವರಣೆ
[ಬದಲಾಯಿಸಿ]As of 2001[update] ಭಾರತ ಜನಗಣತಿ ಯ ಪ್ರಕಾರ,[೩] ಜನಸಂಖ್ಯೆಯಲ್ಲಿ ಪಶ್ಚಿಮ ಬಂಗಾಳದ ಐದನೇ ದೊಡ್ಡ ನಗರವಾಗಿರುವ ಖರಗ್‌ಪುರವು, 207,984(ಪಂಚಾಯಿತಿ ಪ್ರದೇಶ) ಮತ್ತು 88,339(ರೈಲ್ವೇ ನೆಲೆಸಿರುವ ಪ್ರದೇಶ) ರಷ್ಟು ಜನಸಂಖ್ಯೆಯನ್ನು ಹೊಂದಿದೆ. ಈ ಜನಸಂಖ್ಯೆಯಲ್ಲಿ ಶೇಕಡಾ 52 ರಷ್ಟು ಪುರುಷರು ಮತ್ತು ಶೇಕಡಾ 48ರಷ್ಟು ಸ್ತ್ರೀಯರು ಇದ್ದಾರೆ. ಖರಗ್‌ಪುರವು 64% ಸರಾಸರಿ ಸಾಕ್ಷರತಾ ಪ್ರಮಾಣವನ್ನು ಹೊಂದಿದ್ದು, ರಾಷ್ಟ್ರೀಯ ಸರಾಸರಿಯಾದ 59.5% ಕ್ಕಿಂತ ಹೆಚ್ಚಾಗಿದೆ. ಪುರುಷರ ಸಾಕ್ಷರತೆ ಪ್ರಮಾಣ 75% ಮತ್ತು ಮಹಿಳಾ ಸಾಕ್ಷರತೆ ಪ್ರಮಾಣ 52% ರಷ್ಟಿದೆ. ಖರಗ್‌ಪುರದಲ್ಲಿ ಜನಸಂಖ್ಯೆಯ ಶೇಕಡಾ 10 ರಷ್ಟು ಆರು ವರ್ಷದ ಕೆಳಗಿನ ಮಕ್ಕಳಾಗಿದ್ದಾರೆ. ಮಿಶ್ರ ಜನಾಂಗೀಯತೆ ಮತ್ತು ಭಾಷಾ ವೈವಿಧ್ಯತೆಯ ಪಟ್ಟಣವಾಗಿ ಖರಗ್‌ಪುರವು ಭಾರತದಲ್ಲಿ ಅನನ್ಯವಾದ ಸ್ಥಾನವನ್ನು ಪಡೆದಿದೆ. ಪ್ರಸ್ತುತ ಖರಗ್‌ಪುರವು ಸುಮಾರು 6.5 ಲಕ್ಷದಷ್ಟು ಜನಸಂಖ್ಯೆಯನ್ನು ಹೊಂದಿದೆ.
ಇತಿಹಾಸ
[ಬದಲಾಯಿಸಿ]ಈ ಲೇಖನದಿಂದ ಬೇರೆ ಯಾವುದೇ ಲೇಖನಕ್ಕೆ ಬಾಹ್ಯ ಸಂಪರ್ಕ ಹೊಂದಿಲ್ಲ.(October 2009) |
ಐತಿಹಾಸಿಕವಾಗಿ, ಖರಗ್‌ಪುರವು ಹಿಜ್ಲಿ ಸಾಮ್ರಾಜ್ಯದ ಭಾಗವಾಗಿತ್ತು ಮತ್ತು ಅದನ್ನು ಬಂಗಾಳಿ ಹಿಂದೂ ರಾಜರು ಆಡಳಿತ ನಡೆಸಿದರು. ಇತಿಹಾಸಕಾರರು ಹೇಳುವಂತೆ 16 ನೇ ಶತಮಾನದ ಮೊದಲಿನಲ್ಲಿ, ಖರಗ್‌ಪುರವು ದಟ್ಟಾರಣ್ಯಗಳಿಂದ ಸುತ್ತುವರಿದ ಚಿಕ್ಕ ಹಳ್ಳಿಯಾಗಿತ್ತು. ಹಳ್ಳಿಯು ಕಲ್ಲುಗಾಡಿನ ಬರಡು ಭೂಮಿಯಲ್ಲಿತ್ತು. ಖರಗಪುರದ ಬಳಿ ಕೇವಲ ಹಿಜ್ಲಿಗಳು ವಾಸವಾಗಿದ್ದರು. ಹಿಜ್ಲಿಯು ಬಂಗಾಳ ಕೊಲ್ಲಿಯ ಮುಖಜ ಭೂಮಿಯ ರಸೂಲ್‌ಪುರ ನದಿ ಪಾತ್ರದ ಗ್ರಾಮವಾಗಿತ್ತು. ಅದನ್ನು 1687 ರಲ್ಲಿ ಬಂದರು ಪಟ್ಟಣವಾಗಿ ಅಭಿವೃದ್ಧಿಗೊಳಿಸಲಾಯಿತು. ಹಿಜ್ಲಿಯು ಸಂಸ್ಥಾನವೂ ಸಹ ಆಗಿತ್ತು ಮತ್ತು ೧೮೮೬ ರವರೆಗೆ ಅಸ್ತಿತ್ವದಲ್ಲಿತ್ತು. ಅದು ಬಂಗಾಳ ಮತ್ತು ಒಡಿಶಾದ ಭಾಗಗಳನ್ನು ಒಳಗೊಂಡಿತ್ತು. ಅದು ಉತ್ತರದಲ್ಲಿ ಕೇಲಘಾಯಿ ಮತ್ತು ಹಲ್ದಿ ನದಿಗಳಾದ್ಯಂತ ತಾಮ್ಲುಕ್, ಪನ್ಸಕುರಾ, ದೇಬ್ರಾ ದಂತಹ ಪಟ್ಟಣಗಳನ್ನು ಹೊಂದಿದ್ದರೆ, ಉತ್ತರ ಮತ್ತು ಪೂರ್ವದ ಭಾಗಗಳಲ್ಲಿ ಬಂಗಾಳ ಕೊಲ್ಲಿ ಮತ್ತು ಖರಗ್‌ಪುರ್, ಕೇಶಿಯರಿ ದಾಂತನ್ ನಿಂದ ಮತ್ತು ಪಶ್ಚಿಮದಲ್ಲಿ ಜಾಲೇಶ್ವರ ದಿಂದ ಸುತ್ತುವರಿದಿತ್ತು.
ಹಿಜ್ಲಿಯನ್ನು ಗುರು ಪೀರ್ ಮಾಕಡ್ರಮ್ ಶಾ ಚಿಶ್ತಿಯವರ ಅನುಯಾಯಿಯಾದ ತಾಜ್ ಖಾನ್ ಅವರು ರಾಜ್ಯವಾಳಿದರು. ಅದನ್ನು ಕುಶನ್, ಗುಪ್ತಾ ಮತ್ತು ಪಾಲ್ ರಾಜವಂಶದವರು ಮತ್ತು ಮುಘಲರು ಸಹ ರಾಜ್ಯವಾಳಿದರು. ಹಿಂದೂ ರಾಜರು ಮತ್ತು ಮೊಗಲ್ ರಾಜ್ ಸಮಯದಲ್ಲಿ ಹಿಜ್ಲಿಯು ಅತ್ಯುತ್ತಮ ಔದ್ಯೋಗಿಕ ಮತ್ತು ವ್ಯಾಪಾರ ಕೇಂದ್ರಗಳ ಜೊತೆಗೆ ನ್ಯಾಯವ್ಯವಸ್ಥೆ, ಜೈಲು ಮತ್ತು ಆಡಳಿತ ಕಚೇರಿಗಳನ್ನು ಹೊಂದಿತ್ತೆಂದು ಹೇಳಲಾಗಿದೆ. ೧೭೪೫ ಎಡಿಯಲ್ಲಿ ಅದು ಉಚ್ಛ್ರಾಯ ಸ್ಥಿತಿಯಲ್ಲಿತ್ತು ಮತ್ತು ಈ ಕಾಲಾವಧಿಯಲ್ಲಿ ಹಿಜ್ಲಿಯ ಶ್ರೀಮಂತಿಕೆಯು ವಿವರಣೆಗೂ ಮೀರಿದುದಾಗಿತ್ತು. ಹಿಜ್ಲಿಯ ರಾಜಧಾನಿಯು ೧೬೨೮ ಎಡಿಯವರೆಗೆ ಬಹಿರಿಯಾಗಿತ್ತು, ನಂತರ ಅದನ್ನು ಹಿಜ್ಲಿಗೆ ಸ್ಥಳಾಂತರಿಸಲಾಯಿತು.
೧೮ ನೇ ಶತಮಾನದಲ್ಲಿ ಮತ್ತೊಂದು ಬಂದರು ಪಟ್ಟಣವಾದ ಖೆಜುರಿಯು ಅಸ್ತಿತ್ವಕ್ಕೆ ಬಂತು, ಅದನ್ನು ಬ್ರಿಟಿಷರು ಮೂಲಭೂತವಾಗಿ ಯುರೋಪಿಯನ್ ದೇಶಗಳೊಂದಿಗೆ ವ್ಯಾಪಾರವನ್ನು ನಿರ್ವಹಿಸಲು ನಿರ್ಮಿಸಿದರು. ಖೆಜುರಿಯು ಕೌಖಾಲಿ ನದಿ ಮುಖಜ ಭೂಮಿಯ ತೀರದಲ್ಲಿ ಸ್ಥಾಪಿಸಲಾದ ದ್ವೀಪವೂ ಸಹ ಆಗಿತ್ತು. ಖೆಜುರಿ ಮತ್ತು ಕಲ್ಕತ್ತಾವನ್ನು ಸಂಪರ್ಕಿಸುವ ಭಾರತದ ಮೊದಲ ಟೆಲಿಗ್ರಾಫ್ ಕಚೇರಿಯನ್ನು ೧೮೫೨ ರಲ್ಲಿ ಸ್ಥಾಪಿಸಲಾಯಿತು ಮತ್ತು ಖೆಜುರಿ ಮತ್ತು ಹಾಜಿ ಬಂದರಿನ ಕಾರಣದಿಂದ ಈ ಪ್ರಾಂತ್ಯದ ಅಭಿವೃದ್ಧಿಯನ್ನು ಈ ವಿಷಯವು ಅಂದಾಜು ಮಾಡುತ್ತದೆ. ೧೮೫೪ ರಲ್ಲಿ ಸಂಭವಿಸಿದ ಭಯಂಕರ ಚಂಡಮಾರುತದ ಕಾರಣದಿಂದ ಎರಡೂ ಬಂದರುಗಳು ನಾಶವಾದವು. ಅಂದಿನಿಂದ ದ್ವೀಪಗಲು ಮುಖ್ಯ ಭೂಭಾಗದೊಂದಿಗೆ ವಿಲೀನ ಹೊಂದಿದವು.
ಹಿಜ್ಲಿಯನ್ನು ಆಕ್ರಮಣ ಮಾಡಿದ ಮೊದಲ ಇಂಗ್ಲೀಷ್ ವಸಾಹತುವಾದಿಯು ಕ್ಯಾಪ್ಟನ್ ನಿಕೋಲ್ಸನ್ ಆಗಿದ್ದನು ಮತ್ತು ಅವರು ಬಂದರನ್ನು ಮಾತ್ರ ವಶಕ್ಕೆ ತೆಗೆದುಕೊಂಡನು. ೧೬೮೭ ರಲ್ಲಿ ಜೋಬ್ ಚಾರ್ನೋಕ್ ತನ್ನ ೪೦೦ ಸೈನಿಕರು ಮತ್ತು ಯುದ್ಧನೌಕೆಗಳೊಡನೆ ಹಿಂದೂ ಮತ್ತು ಮುಘಲ್ ರಕ್ಷಕರನ್ನು ಸೋಲಿಸಿ ಹಿಜ್ಲಿಯನ್ನು ವಶಕ್ಕೆ ತೆಗೆದುಕೊಂಡನು. ಮುಘಲರೊಂದಿಗಿನ ಯುದ್ಧದ ನಂತರ ಜೋಬ್ ಚಾರ್ನೋಕ್ ಮತ್ತು ಮುಘಲ್ ದೊರೆಗಳ ನಡುವೆ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಸೋಲುಂಡ ಜೋಬ್ ಚಾರ್ನೋಕ್ ಹಜ್ಲಿಯನ್ನು ತೊರೆದು ಉಲುಬೇರಿಯಾದ ಕಡೆ ಸಾಗಬೇಕಾಯಿತು ಮತ್ತು ಮೊಘಲ್ ದೊರೆಯು ಪ್ರಾಂತ್ಯದ ಆಳ್ವಿಕೆಯನ್ನು ಮುಂದುವರಿಸಿದನು. ಆಗಿನಿಂದ ಅವರು ಅಂತಿಮವಾಗಿ ಈಸ್ಟರ್ನ್ ಇಂಡಿಯಾದ ವ್ಯವಹಾರವನ್ನು ಸ್ಥಾಪಿಸಲು ಕೊಲ್ಕತ್ತಾದ ಸುಟನುಟಿಯಲ್ಲಿ ನೆಲೆಸಿದರು. ಇದು ಭಾರತದಲ್ಲಿ ಈಸ್ಟ್ ಇಂಡಿಯಾ ಕಂಪನಿಯ ಪ್ರಾರಂಭವಾಗಿತ್ತು. ಇಂದು ನಾವು ಹಿಜ್ಲಿಯನ್ನು ತಿಳಿದಂತೆ, ಹಿಂದಿನ ಹಿಜ್ಲಿ ಪ್ರಾಂತ್ಯದ ಚಿಕ್ಕ ಭಾಗವಾಗಿತ್ತು ಮತ್ತು ೧೯ ನೇ ಶತಮಾನದಲ್ಲಿ ಆಡಳಿತ ಕಚೇರಿಗಳನ್ನು ತೆರೆಯಲು ಬ್ರಿಟಿಷರಿಂದ ನಿರ್ಮಿಸಲಾಗಿತ್ತು. . ಇಂದಿನ ಸಂಪೂರ್ಣ ಖರಗ್‌ಪುರ ವಿಭಾಗವು ಹಿಜ್ಲಿ ಪ್ರಾಂತ್ಯಕ್ಕೆ ಹೊಂದಿಕೆಯುಳ್ಳ ಗಡಿಯನ್ನು ಹೊಂದಿದೆ.
ಖರಗ್‌ಪುರದ ಹೊರವಲಯದಲ್ಲಿರುವ 'ಖರಗೇಶ್ವರಿ' ಎಂದು ಕರೆಯಲ್ಪಡುವ ಹಳೆಯ ಶಿವ ದೇವಸ್ಥಾನದ ಹೆಸರಿನಿಂದ ಖರಗ್‌ಪುರ ಹೆಸರು ಉದ್ಭವಿಸಿದೆ ಎಂದು ಹೇಳಲಾಗಿದೆ. ದೇವಸ್ಥಾನವನ್ನು ರಾಜ ಖರಗ್ ಸಿಂಗ್ ಪಾಲ್ ಸ್ಥಾಪಿಸಿದನೆಂದು ಮತ್ತು ಅವನ ಹೆಸರನ್ನಿಡಲಾಯಿತೆಂದು ಸಹ ಹೇಳಲಾಗಿದೆ. ಖರಗ್‌ಪುರ ಸ್ಥಳವು ಪೌರಾಣಿಕವಾಗಿಯೂ ಪ್ರಾಮುಖ್ಯತೆಯನ್ನು ಪಡೆದಿದೆ. ಮಹಾಭಾರತದ ದಲ್ಲಿ ಚಿತ್ರಿಸಿದಂತೆ, ಈ ಪ್ರದೇಶವನ್ನು ರಾಕ್ಷಸ ರಾಜ ಹಿರಂಭ ನು ಆಳ್ವಿಕೆ ಮಾಡಿದ್ದನು. ಪಂಚ ಪಾಂಡವರು ತಮ್ಮ ವನವಾಸದ ಅವಧಿಯ ಭಾಗವನ್ನು ಇಲ್ಲಿ ಕಳೆದರು. ಭೀಮನು ಹಿರಂಭನ ತಂಗಿಯಾದ ಹಿರಿಂಬಿಯೊಂದಿಗೆ ಪ್ರೀತಿಸತೊಡಗಿದನು. ಇದು ಹಿರಿಂಭನಿಗೆ ಕಿರಿಕಿರಿಯುಂಟುಮಾಡಿತು ಮತ್ತು ಅವನು ಭೀಮನೊಂದಿಗೆ ಸಂಘರ್ಷಕ್ಕಿಳಿದನು. ಖರಗ್‌ಪುರ ದೇವಸ್ಥಾನವು ಇರುವ ಸ್ಥಳದಲ್ಲಿಯೇ ಭೀಮನು ಹಿರಿಂಭನನ್ನು ಕೊಂದನು.
ಸಾರಿಗೆ
[ಬದಲಾಯಿಸಿ]ರೈಲುಮಾರ್ಗ
[ಬದಲಾಯಿಸಿ]ಕಟಕ್ - ಬಾಲಸೋರ್ - ಖರಗ್‌ಪುರ ನಡುವೆ ಮತ್ತು ಸಿನಿಯಿಂದ ಕೋಲಘಾಟ್ ನಡುವೆ ಖರಗ್‌ಪುರ ಮುಖಾಂತರ ರೈಲು ಸಂಪರ್ಕದ ಚಾಲನೆಯೊಂದಿಗೆ ಖರಗ್‌ಪುರದಲ್ಲಿ ಮೊದಲ ರೈಲ್ವೇ ವ್ಯವಸ್ಥೆಯು ಪ್ರಾರಂಭವಾಯಿತು. ಜಂಕ್ಷನ್ ಸ್ಟೇಶನ್ ಆಗಿ ಖರಗ್‌ಪುರವನ್ನು ರೈಲ್ವೇ ನಕ್ಷೆಯಲ್ಲಿ ಡಿಸೆಂಬರ್ ೧೮೯೮ ರಂದು ಸ್ಥಾಪಿಸಲಾಯಿತು. ಈ ಪ್ರಾಂತ್ಯದಲ್ಲಿ ರೈಲ್ವೇ ಸಾರಿಗೆಯ ಪರಿಚಯದ ಬಗ್ಗೆ ಸಾರ್ವಜನಿಕರ ಮನೋಭಾವನೆ ಮತ್ತು ಸಮಾಜದ ಪ್ರತಿಕ್ರಿಯೆಯನ್ನು ಖರಗ್‌ಪುರದಲ್ಲಿ ಹುಟ್ಟಿ ಬೆಳೆದ ಪ್ರಸಿದ್ಧ ಬಂಗಾಳಿ ಕಾದಂಬರಿಕಾರರಾದ ಡಾ. ರಾಮಪಾದ ಚೌಧುರಿಯವರು ತಮ್ಮ ಬಂಗಾಳಿ ಕಾದಂಬರಿ ಪ್ರೊಥೋಮ್ ಪ್ರೊಹೋರ್‌ನಲ್ಲಿ ಸುಂದರವಾಗಿ ವರ್ಣಸಿದ್ದಾರೆ. ಮೊದ ಮೊದಲಲ್ಲಿ ಜನರು ಸೇತುವೆಯ ಮೇಲಿನ ಅಪಘಾತಕ್ಕೆ ಹೆದರಿ (ಸೇತುವೆ ಕುಸಿದು ಬೀಳಬಹುದೆಂಬ ಭಯ) ಹಾಗೂ ವಿವಿಧ ಜಾತಿ ಮತ್ತು ಧರ್ಮದವರಿಗೆ ಪ್ರತ್ಯೇಕ ಆಸನದ ವ್ಯವಸ್ಥೆ ಇಲ್ಲದ್ದರಿಂದ ಜಾತಿಭ್ರಷ್ಟನೆಂಬ ಸ್ಥಾನಮಾನ ಪಡೆಯುವ ಹೆದರಿಕೆಯಿಂದ ರೈಲಿನಲ್ಲಿ ಪ್ರಯಾಣ ಮಾಡಲು ಭಯಪಡುತ್ತಿದ್ದರೆಂದು ಹೇಳಲಾಗಿದೆ. ಆದರೆ, ೨೦ ನೇ ಶತಮಾನದ ಮೊದಲಿನಲ್ಲಿನ ಬರಗಾಲದ ಕಾರಣದಿಂದ ಅಭಿಪ್ರಾಯಗಳು ಬದಲಾದವು. ರೈಲ್ವೇ ಕಂಪನಿಯು ಮುಂದೆ ಬಂದು ಸ್ಥಳೀಯ ನಿರುದ್ಯೋಗಿ ಯುವಕರಿಗೆ ಉದ್ಯೋಗಗಳನ್ನು ಒದಗಿಸಿತು, ಅವರಿಗೆ ರೈಲಿನಲ್ಲಿ ಉಚಿತ ಪ್ರಯಾಣ ಸೌಲಭ್ಯ ಒದಗಿಸಿತು ಮತ್ತು ರೈಲಿನ ಮೂಲಕ ಪ್ರಯಾಣಿಸುವುದಕ್ಕೆ ಹೊದಿಕೆಯನ್ನು ಸಹ ನೀಡಿತು. ಈ ಪ್ರಚಾರದ ಯೋಜನೆಯು ಸಾಮಾಜಿಕ ಕಟ್ಟಳೆಯನ್ನು ಮುರಿಯಿತು ಮತ್ತು ರೈಲು ಸಾರಿಗೆಯು ಸಮಾಜಕ್ಕೆ ಒಪ್ಪಿಗೆಯಾಗುವಂತೆ ಮಾಡಿತು.
ಜಿಲ್ಲಾ ಕೇಂದ್ರವಾದ ಮಿಡ್ನಾಪುರವನ್ನು (ಕೋಸೈ ನದಿಯ ದಡದವರೆಗೆ) ಫೆಬ್ರವರಿ 1900 ರಲ್ಲಿ ಸಂಪರ್ಕಿಸಲಾಯಿತು. ಕೋಸೈ ನದಿಯ ಮೇಲಿನ ಸೇತುವೆಯ ನಿರ್ಮಾಣವು ಜೂನ್ ೧೯೦೧ ರಂದು ಪೂರ್ಣಗೊಂಡಿತು. ಹೌರಾದಿಂದ ಕೋಲಘಾಟ್ ಪೂರ್ವ ತೀರದವರೆಗೆ ಮತ್ತು ಖರಗ್‌ಪುರದಿಂದ ರೂಪನಾರಾಯಣ ನದಿಯ ಪಶ್ಚಿಮ ತೀರದವರೆಗೆ ರೈಲ್ವೇ ಮಾರ್ಗವನ್ನು 1899 ರಲ್ಲಿ ಪೂರ್ಣಗೊಳಿಸಲಾಯಿತು. ಆದರೆ ರೂಪನಾರಾಯಣ ನದಿಯ ಮೇಲಿನ ಸೇತುವೆಯನ್ನು ಏಪ್ರಿಲ್ 1900 ರಲ್ಲಿ ಪೂರ್ಣಗೊಳಿಸಿದ ನಂತರ ಮಾತ್ರವೇ ಹೌರಾ ಮತ್ತು ಖರಗ್‌ಪುರ ನಡುವಿನ ನೇರ ರೈಲು ಸಂಚಾರ ಸಾಧ್ಯವಾಯಿತು.
ಹೌರಾ – ಅಮ್ತಾ ಹಗುರ ರೈಲ್ವೇ (2 ಅಡಿ ಗೇಜ್ - 610 ಮಿಮೀ ) ಮಾರ್ಗವನ್ನು 1898 ರಲ್ಲಿ ಪೂರ್ಣಗೊಳಿಸಲಾಯಿತು ಮತ್ತು ಅದನ್ನು ಕಲ್ಕತ್ತಾದ ಮೆ/ಸ ಮಾರ್ಟಿನ್ ಎಂಡ್ ಕೋ ನಿರ್ವಹಣೆ ಮಾಡಿದರು. ಸಂಪರ್ಕವು ೧೯೭೧ ರವರೆಗೆ ಕಾರ್ಯಾಚರಣೆಯಲ್ಲೇ ಮುಂದುವರಿಯಿತು. ಹಗುರ ರೈಲ್ವೇಗಳ ನಿಲ್ಲಿಸುವಿಕೆಯ ನಂತರ, ಹೌರಾ ಮತ್ತು ಅಮ್ಟಾ ನಡುವೆ ಬ್ರಾಡ್ ಗೇಜ್ ಮಾರ್ಗದ ಬೇಡಿಕೆಯು ಆವೇಗ ಪಡೆಯಿತು. ಯೋಜನೆಯು ೪ ಹಂತಗಳಲ್ಲಿ ಪೂರ್ಣಗೊಂಡಿತು. ಮೊದಲ ಹಂತದಲ್ಲಿ, ಸಂತ್ರಾಗಾಚಿ ಮತ್ತು ದೋಮಜೂರ್ ನಡುವಿನ ಮಾರ್ಗವು ೧೯೮೪ ರಲ್ಲಿ ಪೂರ್ಣಗೊಂಡಿತು. ಯೋಜನೆ ಯುನಿಗೇಜ್ ಯೋಜನೆಯ ಅಡಿಯಲ್ಲಿನ ಎರಡನೆಯ ಹಂತದಲ್ಲಿ ಅದು ಬರ್ಗಾಚಿಯಾದವರೆಗೆ ೧೯೮೫ ರಲ್ಲಿ ವಿಸ್ತರಿಸಲ್ಪಟ್ಟಿತು. ಮುಶಿರ್ಹಾತ್‌ವರೆಗೆ (ಮಹೇಂದ್ರಲಾಲ್ ನಗರ ನಿಲ್ದಾಣ) ವಿಸ್ತರಣೆಯು ೨೦೦೦ ರಲ್ಲಿ ಪೂರ್ಣಗೊಂಡಿತು ಮತ್ತು ಅಮ್ಟಾದವರೆಗೆ ಅಂತಿಮ ಹಂತವು ಡಿಸೆಂಬರ್ ೨೦೦೪ ರಲ್ಲಿ ಪೂರ್ಣಗೊಂಡಿತು.
ಹೌರಾ ಮತ್ತು ಖರಗ್‌ಪುರ ನಡುವಿನ ರೈಲ್ವೇ ಸಂಪರ್ಕವು ಮುಕ್ತಗೊಂಡ ಬಹುಪಾಲು ಅದೇ ಸಮಯದಲ್ಲೇ ಪನ್ಸ್‌ಕುರಾ ಮತ್ತು ತಾಮ್ಲೂಕ್ ನಡುವಿನ ರೈಲ್ವೇ ಸಂಪರ್ಕದ ಅಗತ್ಯತೆಯು 20 ನೇ ಶತಮಾನದ ಮೊದಲಲ್ಲಿ ರೂಪುಗೊಂಡಿತು. ರೈಲ್ವೇ ಕಂಪನಿಯು ಮೆ/ಸ ಮಾರ್ಟಿನ್ ಎಂಡ್ ಕಂಪನಿ ಮತ್ತು ಮೆ/ಸ ಬಾಬು ನಿಭಾರಣ್ ಚಂದ್ರ ದತ್ತಾ ಕಂಪನಿ ಹೀಗೆ ಎರಡು ಸಂಸ್ಥೆಗಳಿಂದ ನಿರ್ಮಾಣಕ್ಕೆ ಪ್ರಸ್ತಾಪಗಳನ್ನು ಸ್ವೀಕರಿಸಿತು. ಮೊದಲನೆಯದು ಗ್ಯಾರಂಟಿ ಪ್ರತಿಫಲವಾದ 3.5% ಗೆ ಪ್ರತಿಯಾಗಿ ಮತ್ತು ಎರಡನೆಯದು ಯಾವುದೇ ಗ್ಯಾರಂಟಿಯಿಲ್ಲದೇ ಪ್ರಸ್ತಾಪಿಸಿದವು. ಎರಡನೆಯ ಪ್ರಸ್ತಾಪವು ಲಾಭದಾಯಕವಾಗಿದ್ದರೂ, ನಿರ್ಮಾಣ ಕಾರ್ಯವನ್ನು ಸ್ಥಳೀಯರಿಗೆ ನೀಡುವುದೋ ಅಥವಾ ಯೋಜನೆಯು ಕೈಬಿಡುವಂತೆ ಒತ್ತಾಯಿಸುವುದೋ ಎಂಬ ಸಂದಿಗ್ಧತೆ ಇತ್ತು. ಸ್ವಾತಂತ್ರ್ಯಾನಂತರ, ಹಲ್ದಿಯಾ ಬಂದರನ್ನು ನಿರ್ಮಿಸುವ ಮೂಲಭೂತ ಉದ್ದೇಶಕ್ಕೋಸ್ಕರ ಪನ್ಸಕುರಾ ಮತ್ತು ದುರ್ಗಾಚಾಕ್ ಸಂಪರ್ಕಿಸವ ರೈಲು ಸಂಪರ್ಕದ ಅಗತ್ಯತೆಯು ಉದ್ಭವಿಸಿತು. ತಾಮ್ಲುಕ್ ಮುಖಾಂತರ ಪನ್ಸಕುರಾ - ದುರ್ಗಾಚಾಕ್ ನಡುವಿನ ರೈಲು ಸಂಪರ್ಕವು 1968 ರಲ್ಲಿ ಪೂರ್ಣಗೊಂಡಿತು, ಅದನ್ನು ನಂತರ 1975 ರಲ್ಲಿ ಹಲ್ದಿಯಾದವರೆಗೆ ವಿಸ್ತರಿಸಲಾಯಿತು. ತಾಮ್ಲುಕ್‌ನಿಂದ ದಿಘಾದವರೆಗೆ ರೈಲು ಸಂಪರ್ಕವನ್ನು ವಿಸ್ತರಿಸುವ ಯೋಜನೆಗೆ 1984 ರಲ್ಲಿ ಮಂಜೂರಾತಿ ನೀಡಲಾಯಿತು ಮತ್ತು ಎರಡು ಹಂತಗಳಲ್ಲಿ ಈ ಯೋಜನೆಯನ್ನು ಪೂರ್ಣಗೊಳಿಸಲು 20 ವರ್ಷಗಳು ತಗುಲಿದವು, ತಾಮ್ಲುಕ್ ಮತ್ತು ಕೋಂಟೈ ಅನ್ನು ಸಂಪರ್ಕ ಕಲ್ಪಿಸುವ ಮೊದಲ ಹಂತವು ನವೆಂಬರ್ 2003 ರಲ್ಲಿ ಪೂರ್ಣಗೊಂಡಿತು ಮತ್ತು ಡಿಸೆಂಬರ್ 2004 ರಲ್ಲಿ ಪ್ರವಾಸೀ ಕೇಂದ್ರವಾದ ದಿಘಾವು ಹೌರಾ/ ಶಾಲಿಮಾರ್‌ನೊಂದಿಗೆ ಸಂಪರ್ಕಿತವಾಯಿತು.
ಖರಗ್‌ಪುರದ ಭೌಗೋಳಿಕ ಸ್ಥಾನ ಮತ್ತು ದೇಶದ ವಿವಿಧ ಪ್ರದೇಶಗಳೊಡನೆ ಅದರ ರೈಲು ಸಂಪರ್ಕಗಳ ಸೌಲಭ್ಯವು ಎಲ್ಲಾ ಬ್ರಾಡ್ ಗೇಜ್ ಸ್ಟಾಕ್‌ನ ಮುಖ್ಯ ರಿಪೇರಿಯನ್ನು ಕೈಗೊಳ್ಳಲು ಸೌಲಭ್ಯಗಳೊಡನೆ ಕೇಂದ್ರೀಕೃತ ಕಾರ್ಯಾಗಾರವನ್ನು ನಿರ್ಮಿಸುವ ಕಾರ್ಯಕ್ಕೆ ಒಲವು ತೋರಿತು. 1900 ರಲ್ಲಿ ಕಾರ್ಯಕ್ಕೆ ಮಂಜೂರಾತಿ ನೀಡಲಾಯಿತು ಮತ್ತು ಕಾರ್ಯಾಗಾರದ ನಿರ್ಮಾಣ ಕಾರ್ಯವು 1904 ರಲ್ಲಿ ಪೂರ್ಣಗೊಂಡಿತು.
ಖರಗ್‌ಪುರದಲ್ಲಿರುವ ಶಾಲೆಗಳು
[ಬದಲಾಯಿಸಿ]ಖರಗ್‌ಪುರದಲ್ಲಿರುವ ಕೆಲವು ಶಾಲೆಗಳೆಂದರೆ:
- ಆರ್ಯವಿದ್ಯಾಪೀಠ
- ಜನತಾ ವಿದ್ಯಾಲಯ ವಾರ್ಡ್ ಸಂಖ್ಯೆ -16
- ಹಿಟ್ಕರಣಿ ಹಿರಿಯ ಮಾಧ್ಯಮಿಕ ಶಾಲೆ
- ಖರಗ್‌ಪುರ್ ಅತುಲ್ಮೋನಿ ಪಾಲಿಟೆಕ್ನಿಕ್ ಪ್ರೌಢ (ಹೆಚ್.ಎಸ್.) ಶಾಲೆ
- ಸಾಕ್ರೆಡ್ ಹಾರ್ಟ್ ಪ್ರೌಢಶಾಲೆ
- ಕೇಂದ್ರೀಯ ವಿದ್ಯಾಲಯ ಸಂಖ್ಯೆ.2, ಖರಗ್ಪುರ Archived 2019-09-02 ವೇಬ್ಯಾಕ್ ಮೆಷಿನ್ ನಲ್ಲಿ.
- ಕೇಂದ್ರೀಯ ವಿದ್ಯಾಲಯ ಸಂಖ್ಯೆ.2, ಕಲೈಕುಂಡ Archived 2011-01-30 ವೇಬ್ಯಾಕ್ ಮೆಷಿನ್ ನಲ್ಲಿ.
- ಕೇಂದ್ರೀಯ ವಿದ್ಯಾಲಯ ಸಂಖ್ಯೆ.1, ಕಲೈಕುಂಡ Archived 2020-07-20 ವೇಬ್ಯಾಕ್ ಮೆಷಿನ್ ನಲ್ಲಿ.
- ಕೇಂದ್ರೀಯ ವಿದ್ಯಾಲಯ, ಐಐಟಿ ಖರಗ್ಪುರ Archived 2010-03-28 ವೇಬ್ಯಾಕ್ ಮೆಷಿನ್ ನಲ್ಲಿ.
- ಕೇಂದ್ರೀಯ ವಿದ್ಯಾಲಯ, ಸಾಲುವಾ Archived 2018-04-28 ವೇಬ್ಯಾಕ್ ಮೆಷಿನ್ ನಲ್ಲಿ.
- ಸೈಂಟ್ ಆಗ್ನೆಸ್ ಪ್ರೌಢಶಾಲೆ
- ಸೈಂಟ್ ಆಗ್ನೆಸ್ ಬ್ರಾಂಚ್ ಸ್ಕೂಲ್, ಐಐಟಿ
- ಎಸ್.ಇ ರೈಲ್ವೇ ಹಿರಿಯ ಮಾಧ್ಯಮಿಕ ಶಾಲೆ (ಆಂಗ್ಲ ಮಾಧ್ಯಮ)
- ಎಸ್ ಇ ರೈಲ್ವೇ ಬಾಲಕರ ಹಿರಿಯ ಮಾಧ್ಯಮಿಕ ಶಾಲೆ, ಗೋಲೆ ಬಜಾರ್ ಹತ್ತಿರ
- ಎಸ್ ಇ ರೈಲ್ವೇ ಬಾಲಕಿಯರ ಹಿರಿಯ ಮಾಧ್ಯಮಿಕ ಶಾಲೆ, ಗೋಲೆ ಬಜಾರ್ ಹತ್ತಿರ
- ಎಸ್ ಇ ರೈಲ್ವೇ ಪ್ರೌಢಶಾಲೆ, ನ್ಯೂ ಸೆಟ್ಲಮೆಂಟ್
- ಸ್ಪೆಂಡ್ಲರ್ ಪ್ರೌಢಶಾಲೆ, ಸಾಲುವಾ
- ಡಿಎವಿ ಮಾಡೆಲ್ ಸ್ಕೂಲ್,ಐಐಟಿ Archived 2010-02-01 ವೇಬ್ಯಾಕ್ ಮೆಷಿನ್ ನಲ್ಲಿ.
- ಕ್ರಿಸ್ಟೋಫರ್ಸ್ ಡೇ ಸ್ಕೂಲ್, ಮಲಂಚಾ
- ಖರಗ್‌ಪುರ್ ಸಿಲ್ವರ್ ಜ್ಯುಬಿಲಿ ಪ್ರೌಢಶಾಲೆ Archived 2011-12-29 ವೇಬ್ಯಾಕ್ ಮೆಷಿನ್ ನಲ್ಲಿ.
- ಹಿಜ್ಲಿ ಪ್ರೌಢಶಾಲೆ, ಐಐಟಿ, ಕೆಜಿಪಿ Archived 2017-10-14 ವೇಬ್ಯಾಕ್ ಮೆಷಿನ್ ನಲ್ಲಿ.
- ಇಂದಾ ವಾಲಿಕಾ ವಿದ್ಯಾಲಯ
- ಇಂದಾ ಕೃಷ್ಣಲಾಲ್ ಶಿಕ್ಷಾ ನಿಕೇತನ
- ಸೌತ್ ಸೈಡ್ ಬಾಲಕಿಯರ ಪ್ರೌಢಶಾಲೆ
- ಸೌತ್ ಸೈಡ್ ಪ್ರೌಢಶಾಲೆ
- ಆಂಧ್ರ ಹಿರಿಯ ಮಾಧ್ಯಮಿಕ ಶಾಲೆ, ನ್ಯೂ ಸೆಟ್ಲಮೆಂಟ್
- ಉತ್ಕಲ್ ವಿದ್ಯಾಪೀಠ, ಗಿರಿ ಮೈದಾನ್
- ಸೈಂಟ್ ಜೋಸೆಫ್ಸ್ ಪ್ರೌಢಶಾಲೆ, ಓಲ್ಡ್ ಸೆಟ್ಲಮೆಂಟ್
- ವಾರ್ಡ್ ಮೆಮೋರಿಯಲ್ ಚರ್ಚ್ ಸ್ಕೂಲ್, ಖಾರಿದಾ
- ಬಲರಾಂಪುರ್ ಅಭೋಯ್ ಆಶ್ರಮ ನಿಕೇತನ ವಿದ್ಯಾಪೀಠ, ಬಲರಾಂಪುರ
- ಜನಕಲ್ಯಾಣ ಬಾಲಕರ ಮತ್ತು ಬಾಲಕಿಯರ ಹಿರಿಯ ಮಾಧ್ಯಮಿಕ ಶಾಲೆ, ಸುಭಾಸಪಲ್ಲಿ
- ತೆಲುಗು ವಿದ್ಯಾ ಪೀಠಮ್
- ನಿಂಪುರ ಆರ್ಯ ಬಿದ್ಯಾಪೀಠ, ಮಾಲಂಚಾ
ಆಸ್ಪತ್ರೆ
[ಬದಲಾಯಿಸಿ]ಈ ಲೇಖನದಿಂದ ಬೇರೆ ಯಾವುದೇ ಲೇಖನಕ್ಕೆ ಬಾಹ್ಯ ಸಂಪರ್ಕ ಹೊಂದಿಲ್ಲ.(October 2009) |
ಖರಗ್‌ಪುರದಲ್ಲಿ ಕೇಂದ್ರೀಯ ಆಸ್ಪತ್ರೆಯ ಅಗತ್ಯತೆಯನ್ನು ೧೯ ನೇ ಶತಮಾನದ ಹಿಂದೆಯೇ ಮನಗಾಣಲಾಗಿತ್ತು ಮತ್ತು ಸಂಪೂರ್ಣ ವೈದ್ಯಕೀಯ ಸೌಲಭ್ಯಗಳೊಡನೆ ಆಸ್ಪತ್ರೆಯನ್ನು ೧೮೯೭ ರಲ್ಲಿ ಸ್ಥಾಪಿಸಲಾಯಿತು. ವಿಕ್ಟೋರಿಯಾ ಕ್ರಾಸ್ ವಿಜೇತರಾದ ಡಾ. ಆರ್ತರ್ ಮಾರ್ಟಿನ್ ಲೀಕ್ ಅವರನ್ನು ೧೯೦೪ ರಲ್ಲಿ ಖರಗ್‌ಪುರ ಆಸ್ಪತ್ರೆಯ ಮುಖ್ಯ ವೈದ್ಯಕೀಯ ಅಧಿಕಾರಿಯಾಗಿ ನೇಮಕ ಮಾಡಲಾಯಿತು.
1931 ರ ಸೆಪ್ಟೆಂಬರ್ 16 ರಂದು, ಹಿಜ್ಲಿ ಜೈಲ್ ನಲ್ಲಿರುವ ಸ್ವಾತಂತ್ರ್ಯ ಹೋರಾಟಗಾರರು ಪ್ರಸಿದ್ಧ ಸ್ವಾತಂತ್ರ್ಯ ಹೋರಾಟಗಾರರಾದ ಶ್ರೀ ದಿನೇಶ್ ಗುಪ್ತಾ ಅವರಿಗೆ ಮರಣ ದಂಡನೆಯನ್ನು ವಿಧಿಸಿದ್ದ ಸೆಷನಲ್ ನ್ಯಾಯಾಧೀಶ ಗಾರ್ಲೆಯವರ ಸಾವನ್ನು ಸಂಭ್ರಮಿಸಿದರು. ಜೈಲಿನ ಅಧಿಕಾರಿಗಳು ಇದನ್ನು ಸಹಿಸಲಾಗಲಿಲ್ಲ ಮತ್ತು ಅವರು ಅವರ ಕೋಣೆಯಲ್ಲಿನ ಎಲ್ಲಾ ಸ್ವಾತಂತ್ರ್ಯ ಹೋರಾಟಗಾರರನ್ನು ಕೊಂದು ಹಾಕಿದರು. ಇಂದು ಐಐಟಿ ಕ್ಯಾಂಪಸ್ ಪ್ರದೇಶದೊಳಗಡೆ ಕುಪ್ರಸಿದ್ಧ ಹಿಜ್ಲಿ ಜೈಲು ನೆಲೆಸಿದೆ. ಇದೀಗ ಖರಗ್‌ಪುರದ ಹೆಸರು ಐಐಟಿಯೊಂದಿಗೆ ಪರ್ಯಾಯವಾಗಿದೆ. ಪ್ರಾರಂಭಿಕ ವರ್ಷಗಳಲ್ಲಿ ಅದರ (ಐಐಟಿ ಖರಗ್‌ಪುರದ) ಬೆಳವಣಿಗೆಯ ಪುರಾವೆಯನ್ನು ರೈಲ್ವೇ ವ್ಯವಸ್ಥೆಯು ಒದಗಿಸುತ್ತದೆ. ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರು ಹಾಗೂ ಬಂಗಾಳದ ಶ್ರೇಷ್ಠ ಸ್ವಾತಂತ್ರ್ಯ್ ಹೋರಾಟಗಾರರಾದ ಖುದಿರಾಮ್ ಬೋಸ್ಅವರುಗಳು ತಮ್ಮ ಜೈಲು ಶಿಕ್ಷೆಯನ್ನು ಹಿಜ್ಲಿ ಜೈಲಿನಲ್ಲಿ ಅನುಭವಿಸಿದರು.
ಇಂದು ರೈಲ್ವೇ ಮುಖ್ಯ ಆಸ್ಪತ್ರೆ ಮತ್ತು ಖರಗ್‌ಪುರ ಉಪ-ವಿಭಾಗ ಆಸ್ಪತ್ರೆಗಳು ಖರಗ್‌ಪುರದಲ್ಲಿರುವ ಮುಖ್ಯ ಸಾರ್ವಜನಿಕ ಕ್ಷೇತ್ರದ ಆಸ್ಪತ್ರೆಗಳಾಗಿವೆ.ಬಹು ಸಂಖ್ಯೆಯಲ್ಲಿ ಖಾಸಗಿ ಕ್ಲಿನಿಕ್‌ಗಳು ಮತ್ತು ನರ್ಸಿಂಗ್ ಹೋಮ್‌ಗಳೂ ಕಾರ್ಯನಿರ್ವಹಿಸುತ್ತಿವೆ. ಆದರೆ, ಆರೋಗ್ಯ ಸೇವೆಗಳ ಸೌಲಭ್ಯಗಳ ಒಟ್ಟಾರೆ ಗುಣಮಟ್ಟವು ಸಾಧಾರಣವಾಗಿದೆ ಮತ್ತು ಉತ್ತಮ ಆರೋಗ್ಯ ಸೇವೆಗಾಗಿ ಜನರು ಹೆಚ್ಚಾಗಿ ಮಿಡ್ನಾಪುರ ಅಥವಾ ಕೊಲ್ಕತ್ತಾಗೆ ತೆರಳುತ್ತಾರೆ.
ಖರಗ್‌ಪುರ ಇಂದು
[ಬದಲಾಯಿಸಿ]ಈ ಲೇಖನದಿಂದ ಬೇರೆ ಯಾವುದೇ ಲೇಖನಕ್ಕೆ ಬಾಹ್ಯ ಸಂಪರ್ಕ ಹೊಂದಿಲ್ಲ.(October 2009) |
ಖರಗ್‌ಪುರವು ರಾಷ್ಟ್ರದಾದ್ಯಂತದ ಪ್ರತಿಯೊಂದು ಧರ್ಮ ಮತ್ತು ಜಾತಿಯ ಜನರು ನೆಲಸಿರುವ ಸ್ಥಳವಾಗಿದೆ. ಖರಗ್‌ಪುರವು ಇನ್ನೂ ಸಹ ಅದರ ಸಣ್ಣ-ಪಟ್ಟಣದ ಮೋಹಕತೆಯನ್ನು ಉಳಿಸಿಕೊಂಡಿದೆ ಮತ್ತು ಐಐಟಿ ಖರಗ್‌ಪುರ ವಲಯವನ್ನು ಹೊರತುಪಡಿಸಿ ಅಕ್ಷರಶಃ ರಾತ್ರಿ ೧೦ ಗಂಟೆಯ ವೇಳೆಗೆ ಮುಚ್ಚಿಬಿಡುತ್ತದೆ. ಆದರೆ ನಾಯಿಕೊಡೆಗಳಂತೆ ಬೆಳೆಯುತ್ತಿರುವ ಮಾಲ್‌ಗಳು ಮತ್ತು ಹೋಟೆಲ್‌ಗಳೊಂದಿಗೆ ಖರಗ್‌ಪುರ ಮತ್ತು ಅದರ ಸುತ್ತಮುತ್ತಲ ಪ್ರದೇಶದ ರಾತ್ರಿ ಜೀವನವು ಕ್ರಮೇಣ ಸುಧಾರಿಸುತ್ತಿದೆ. ಖರಗ್‌ಪುರವು ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿಯೂ ಅಭಿವೃದ್ಧಿಹೊಂದುತ್ತಿದೆ ಮತ್ತು ದಿ ರಿಜೆಂಟ್ ಹೆರಿಟೇಜ್, ಡೈಮಂಡ್ ಟವರ್ I, II, III, IV ಮತ್ತು V ನಂತಹ ಹೌಸಿಂಗ್ ಕಾಂಪ್ಲೆಕ್ಸ್‌ಗಳಂತಹ ಹಲವಾರು ಯೋಜನೆಗಳು ಪ್ರಗತಿಯಲ್ಲಿವೆ. ಹಲವಾರು ಬ್ಯಾಂಕುಗಳ ವ್ಯವಹಾರ ಸ್ಥಳವಾಗಿರುವ ಅಟ್ವಾಲ್ಸ್ ರಿಯಲ್ ಎಸ್ಟೇಟ್ ಸಹ ಖರಗ್‌ಪುರದಲ್ಲಿದೆ. ಬಿಗ್ ಬಜಾರ್ ಸಹ ಖರಗ್‌ಪುರದಲ್ಲಿ ಪ್ರಾರಂಭವಾಗಿದೆ ಮತ್ತು ಯೋಜನೆಯ ಅಂಗವಾಗಿ ದಿ ಹೆರಿಟೇಜ್‌ನವರಿಂದ ಶಾಪಿಂಗ್ ಕಾಂಪ್ಲೆಕ್ಸ್ ಕೂಡ ಆರಂಭವಾಗಲಿದೆ. ಹಲವಾರು ಪ್ರಸ್ತುತ ಮತ್ತು ಬರಲಿರುವ ಹೊಸ ಕೈಗಾರಿಕೆಗಳೊಂದಿಗೆ ಖರಗ್‌ಪುರವು ಕೈಗಾರಿಕಾ ಪಟ್ಟಣವಾಗಿ ವೇಗವಾಗಿ ಬೆಳವಣಿಗೆ ಹೊಂದುತ್ತಿದೆ. ಖರಗ್‌ಪುರದಲ್ಲಿ ನೆಲೆಸಿರುವ ಪ್ರಮುಖ ಕೈಗಾರಿಕೆಗಳೆಂದರೆ:
ಪ್ರಸ್ತುತ ಇರುವ ಕೈಗಾರಿಕಾ ಘಟಕಗಳು:
- ಬನ್ಸಾಲ್ ಸಿಮೆಂಟ್ ಪ್ರೈವೇಟ್ ಲಿಮಿಟೆಡ್ (ಗ್ರೈಂಡಿಂಗ್ ಘಟಕ)
- ಟೆಲಿಕಾಂ ಕಾರ್ಖಾನೆ(೨೦೦೦ ರಿಂದ ಬಿಎಸ್‌ಎನ್‌ಎಲ್ ವಶದಲ್ಲಿದೆ)
- ಆಸೋ ಸಿಮೆಂಟ್ ಲಿಮಿಟೆಡ್. (ಸ್ಲಾಗ್ ಸಿಮೆಂಟ್)
- ಎಸ್ಸೆನ್ ಫ್ಯಾಬ್ರಿಕೇಟರ್ಸ್ ಪ್ರೈವೇಟ್ ಲಿಮಿಟೆಡ್ (ಬೃಹತ್ ಇಂಜಿನಿಯರಿಂಗ್ ವಿಭಾಗ)
- ಫ್ಲೆಂಡರ್ ಮ್ಯಾಕ್‌ನೀಲ್ (ಕೈಗಾರಿಕಾ ಗೇರ್‌ಗಳು)
- ಹಮ್‌ಬೋಲ್ಟ್ ವೆಡಾಗ್ (ಇಂ) ಲಿಮಿಟೆಡ್. (ಸ್ಲರಿ ಪಂಪ್ಸ್)
- ಎಸ್ಇ ರೈಲ್ವೇ ವರ್ಕ್‌ಶಾಪ್ (ಕ್ಯಾರಿಯೇಜ್, ವ್ಯಾಗನ್, ಸ್ಟೀಲ್ ಮತ್ತು ಡೀಸೆಲ್ ಲೋಕೋಮೋಟಿವ್ ನಿರ್ವಹಣೆ)
- ಟಾಟಾ ಬೇರಿಂಗ್ಸ್ ಲಿಮಿಟೆಡ್. (ಬೇರಿಂಗ್ಸ್ ಮತ್ತು ಅದರ ಕಾಸ್ಟಿಂಗ್‌ಗಳು)
- ಟಾಟಾ ಕನ್‌ಸ್ಟ್ರಕ್ಶನ್ಸ್ & ಪ್ರಾಜೆಕ್ಟ್ಸ್ ಲಿಮಿಟೆಡ್ ಹಿಂದಿನ ಟಾಟಾ ಡೇವಿ ಲಿಮಿಟೆಡ್. (ಬೃಹತ್ ಇಂಜಿನಿಯರಿಂಗ್) (೨೦೦೩ ರಿಂದ ಈ ಕಾರ್ಖಾನೆಯನ್ನು ಮುಚ್ಚಲಾಗಿದೆ)
- ಬೆಂಗಾಲ್ ಎನರ್ಜಿ ಲಿಮಿಟೆಡ್ (ಗಟ್ಟಿ & ಮೆದು ಕಬ್ಬಿಣ)
- ಟಾಟಾ ಮೆಟಾಲಿಕ್ಸ್ ಲಿಮಿಟೆಡ್. (ಗಟ್ಟಿ ಕಬ್ಬಿಣ ಸ್ಥಾವರ)
- ವೆಲ್‌ಮ್ಯಾನ್ ವಾಕೋಮಾ ಲಿಮಿಟೆಡ್. (ಕೋಕ್ ಓವೆನ್/ಮೆಟಲರ್ಜಿಕಲ್ ಕೋಕ್)
- ರಶ್ಮಿ ಮೆಟಾಲಿಕ್ಸ್ (ಗಟ್ಟಿ ಕಬ್ಬಿಣ ತಯಾರಿಕೆ ಘಟಕ)
- ರಾಮಸ್ವರೂಪ್ ಲೋಹ್ ಉದ್ಯೋಗ್(ತಯಾರಿಸಿದ ಸ್ಟೀಲ್)
- ಸಾಯಿ ಫರ್ಟಿಲೈಜರ್ ಪ್ರೈವೇಟ್ ಲಿಮಿಟೆಡ್ (ಎಸ್ಎಸ್‌ಪಿ ತಯಾರಕರು)
- ಕೆಇ ಟೆಕ್ನಿಕಲ್ ಟೆಕ್ಸ್‌ಟೈಲ್ಸ್ ಪ್ರೈವೇಟ್ ಲಿಮಿಟೆಡ್. (ಟೆಕ್ನಿಕಲ್ ಟೆಕ್ಸ್‌ಟೈಲ್ಸ್, ಉಕ್ಕಿನ ಕೈಗವಸುಗಳು, ಫೈಬರ್ ಗ್ಲಾಸ್ ಫ್ಯಾಬ್ರಿಕ್)
- ಟೆಲ್ಕಾನ್ ರಸ್ತೆ ಹೊರಗಿನ ವಾಹನ ಸ್ಥಾವರ.
- ಅವ್ಟೆಕ್ ಲಿಮಿಟೆಡ್
ಮುಂಬರುವ ಪ್ರಮುಖ ಘಟಕಗಳು:
- ಆಸೋ ಸಿಮೆಂಟ್ ಲಿಮಿಟೆಡ್. (ಸಿಮೆಂಟ್ (ವಿಸ್ತರಣೆ))
- ಸೆಂಚುರಿ ಕಬ್ಬಿಣ ಮತ್ತು ಸ್ಟೀಲ್
ಐಐಟಿ ಕ್ಯಾಂಪಸ್‌ನ ಉಪಸ್ಥಿತಿ, ಕೊಲ್ಕತ್ತಾಗಿನ ಸಾಮಿಪ್ಯತೆ ಮತ್ತು ರೈಲಿನ ಮುಖಾಂತರ ದೇಶದ ವಿವಿಧೆಡೆಗಳಿಗಿನ ಅತ್ಯುತ್ತಮ ಸಂಪರ್ಕದ ಕಾರಣದಿಂದ ಈ ಪ್ರದೇಶವು ಹೂಡಿಕೆಗೆ ಪ್ರಶಸ್ತ ಸ್ಥಳವಾಗುವ ಭರವಸೆ ಮೂಡಿಸುತ್ತದೆ. ಗೋಲೆ ಬಜಾರ್, ಪುರಾತನ ಬಜಾರ್ ಮತ್ತು ಗೇಟ್ ಬಜಾರ್ ಎಂದು ಕರೆಯಲ್ಪಡುವ ಮಾರುಕಟ್ಟೆ ಸ್ಥಳಗಳು ಮತ್ತು ಸಹಕಾರಿ ಗೋಲೆ ಬಜಾರ್ ಮತ್ತು ಮಾಲಂಚಾದಲ್ಲಿ ಸೂಪರ್‌ಮಾರ್ಕೆಟ್‌ಗಳಿವೆ.
ಖರಗ್‌ಪುರವು "ಗಿರಿ ಮೈದಾನ","ಹಿಜ್ಲಿ","ನಿಂಪುರ","ಕಲೈಕುಂಡ" ಹಾಗೂ ಇತರ ಇನ್ನಷ್ಟು ನಿಲ್ಧಾಣಗಳನ್ನು ಹೊಂದಿದೆ."ಹಿಜ್ಲಿ"ಯು ಖರಗ್‌ಪುರ ನಗರದಲ್ಲಿ ಎರಡನೆಯ ಪ್ರಮುಖವಾದ ರೈಲ್ವೇ ನಿಲ್ದಾಣವಾಗಿದೆ. ಖರಗ್‌ಪುರ-ಹೌರಾ ಉಪನಗರ ಸ್ಥಳೀಯ ರೈಲು ಸಂಚಾರವು ಶೀಘ್ರದಲ್ಲಿಯೇ "ಹಿಜ್ಲಿ"ಯಿಂದ ಪ್ರಾರಂಭವಾಗಲಿದೆ ಮತ್ತು ದೆಹಲಿಗೆ ತೆರಳುವ ಮತ್ತು ಇನ್ನಷ್ಟು ಎಕ್ಸ್‌ಪ್ರೆಸ್ ರೈಲುಗಳಿಗೆ ಶೀಘ್ರದಲ್ಲಿಯೇ "ಹಿಜ್ಲಿ" ಯಲ್ಲಿ ನಿಲುಗಡೆ ನೀಡಲಾಗುವುದು.
ಓಲ್ಡ್ ಸೆಟ್ಲಮೆಂಟ್, ನ್ಯೂ ಸೆಟ್ಲಮೆಂಟ್, ಮಥುರಾಕಾಟಿ, ನಿಂಪುರ, ಸೌತ್ ಸೈಡ್, ಟ್ರಾಫಿಕ್ ಹಾಗೂ ಇತರ ಹೆಸರುಗಳ ಹಲವಾರು ರೈಲ್ವೇ ವಸತಿ ಪ್ರದೇಶಗಳಿವೆ. ಬಿಗ್ ಬಜಾರ್, ಪಾಂಟಲೂನ್ಸ್ ಮತ್ತು ಇನ್ನೂ ಹಲವಾರು ಪ್ರಮುಖ ಅಂಗಡಿಗಳನ್ನು ಹೊಂದಿರುವ ಜಗನ್ನಾಥ ಮಂದಿರದ ಹತ್ತಿರವಿರುವ 'ಪೂಜಾ ಕಾಂಪ್ಲೆಕ್ಸ್' ಮಲ್ಟಿ ರಿಟೇಲ್‌ನ ಉದ್ಭಾಟನೆಯು ನಗರದ ಪ್ರಮುಖ ಬೆಳವಣಿಗೆಯಾಗಿದೆ. ಇತ್ತೀಚೆಗೆ ನಗರದಲ್ಲಿ ಮಾಲಂಚಾ ರಸ್ತೆಯಲ್ಲಿ "ರೀಜೆಂಟ್ ಸ್ಟೇಶನ್" ಹೆಸರಿನ ಶಾಪಿಂಗ್ ಮಾಲ್‌ನ ವೈಭವೋಪೇತ ಉದ್ಭಾಟನೆಯು ನಡೆಯಿತು.
"ಬಾಂಬೆ ಟಾಕೀಸ್","ಅರೋರಾ","ಶೀತಲ","ಸೌತ್ ಸಿನೇಮಾ" ಹಾಗೂ ಇನ್ನಿತರ ಚಿತ್ರಮಂದಿರಗಳಿವೆ. ಬಾಂಬೆ ಸಿನೆಮಾದಲ್ಲಿ ಇದೀಗ ಡಿಜಿಟಲ್ ಪ್ರೊಜೆಕ್ಷನ್ ಹಾಗೂ ಆವೃತ ಸೌಂಡ್ ಸಿಸ್ಟಮ್ ಅನ್ನು ಅಳವಡಿಸಲಾಗಿದೆ. ಆದರೆ ಇತರ ಚಿತ್ರಮಂದಿರಗಳ ಸ್ಥಿತಿಯು ಕಳಪೆಯಾಗಿದೆ. ಸಂತಸದ ವಿಷಯವೆಂದರೆ ಪ್ರಖ್ಯಾತ ಮಲ್ಟಿಪೆಕ್ಸ್ "ಐನಾಕ್ಸ್" ಶೀಘ್ರದಲ್ಲೇ "ಪೂಜಾ ಕಾಂಪ್ಲೆಕ್ಸ್" ನಲ್ಲಿ ಪ್ರಾರಂಭವಾಗಲಿದೆ.
ಪ್ರಮುಖ ಪೂಜಾ ಸ್ಥಳಗಳೆಂದರೆ ಗೋಲೆ ಬಜಾರ್ ಹತ್ತಿರದ "ಮಸೀದಿ", ಗೋಲೆ ಬಜಾರ್‌ನಲ್ಲಿರುವ " ದುರ್ಗಾಂಬಾ ಮಂದಿರ", ಶುಭಾಸ್‌ಪಲ್ಲಿ ಮತ್ತು ನಿಂಪುರದಲ್ಲಿರುವ "ಗುರುದ್ವಾರ" ಮತ್ತು ಹಲವು ದೇವಸ್ಥಾನಗಳು ಮತ್ತು ಚರ್ಚುಗಳು ಸೇರಿವೆ. ಗೇಟ್ ಬಜಾರ್ ಹತ್ತಿರದಲ್ಲಿರುವ "ಜಗನ್ನಾಥ ಮಂದಿರ"ವು ನಗರದ ಹೊಚ್ಚಹೊಸ ದೇವಾಲಯವಾಗಿದೆ.
ನಿಂಪುರವು ಸಾವಿರಾರು ರೈಲ್ವೇ ನೌಕರರ ವಾಸಸ್ಥಾನವಾಗಿದೆ. ನಿಂಪುರದಿಂದ ಕೂಲಿ ಗರಿ ಎನ್ನುವ ಷಟಲ್ ರೈಲು ಗೇಟ್ ಬಜಾರ್‌ವರೆಗೆ ಚಲಿಸುತ್ತದೆ.
ನಿಂಪುರದಿಂದ ಹಿಜ್ಲಿಯವರೆಗೆ ಟಾಂಗ್ರಾ ಹಟ್ ಮತ್ತು ತಾಲಿಬಾಗಿಚಾ ಮುಖಾಂತರ ಸಾಗುವ ಉದ್ದನೆಯ ಅಂಕುಡೊಂಕಾದ ರಸ್ತೆಯೊಂದಿದೆ.
ಖರಗ್‌ಪುರದ ದಕ್ಷಿಣ ಭಾಗವು ಭಾರತೀ ರೈಲ್ವೇ ಗೆ ಸೇರಿರುವ ಯೋಜನಾಬದ್ಧ ಪ್ರದೇಶವಾಗಿದ್ದು, ಅದನ್ನು ಬ್ರಿಟಿಷರು ನಾಗರಿಕ ಪ್ರದೇಶವಾಗಿ ಸ್ಥಾಪಿಸಿದರು. ಹತ್ತಿರದಲ್ಲೇ ಖರಗ್‌ಪುರ ಮುನ್ಸಿಪಾಲಿಟಿ ಮತ್ತು ಅಗ್ನಿಶಾಮಕ ಠಾಣೆ ಇದೆ. ಅದು ಆಂಧ್ರ ಹೈಸ್ಕೂಲ್ ಮತ್ತು ತೆಲುಗು ವಿದ್ಯಾ ಪೀಠಮ್‌ನಂತಹ ಪ್ರಖ್ಯಾತ ತೆಲುಗು ಶಾಲೆಗಳನ್ನು ಹೊಂದಿದೆ. ದುರ್ಗಾ ಪೂಜೆ, ಗಣೇಶ ಪೂಜೆ, ಸರಸ್ವತಿ ಪೂಜೆ, ಕಾಳಿ ಪೂಜೆ ಮತ್ತು ಅಮ್ಮಾವರಿ ಪೂಜೆ ಹಾಗೂ ಇನ್ನಿತರವುಗಳು ಇಲ್ಲಿನ ಪ್ರಸಿದ್ಧ ಉತ್ಸವಗಳಾಗಿವೆ. ಸಂಪೂರ್ಣ ರೈಲ್ವೇ ಕಾಲನಿಯಲ್ಲಿ ರಾಸ್ ಮತ್ತು ಮಾತಾ ಪೂಜೆಯನ್ನೂ ಸ್ಥಳೀಯರು ವರ್ಷಕ್ಕೊಮ್ಮೆ ಆಚರಿಸುತ್ತಾರೆ. ಜಗನ್ನಾಥ ದೇವಾಲಯದ ಪ್ರಾಂಗಣದ ಹತ್ತಿರದಲ್ಲಿ ರಥ ಮೇಳವನ್ನು ಆಚರಿಸಲಾಗುತ್ತದೆ. ಆದರೆ ಎಲ್ಲದಕ್ಕಿಂತ ದೊಡ್ಡದಾದ ಉತ್ಸವವು "ದಸರಾ" ಅಥವಾ "ರಾವಣ್ ಪೋರಾ" (ಸ್ಥಳೀಯ ಭಾಷೆಯಲ್ಲಿ) ಆಗಿದೆ.
2000 ರಿಂದ ಪ್ರಾರಂಭಗೊಂಡು ಪ್ರತಿ ವರ್ಷದ ಜನವರಿಯಲ್ಲಿ ಖರಗ್‌ಪುರದ ಸ್ಥಳೀಯ ಬಂಗಾಳಿ ಪುಸ್ತಕಮೇಳವಾದ "ಖರಗ್‌ಪುರ-ಎರ್ ಬೋಯಿಮೇಲಾ" ಜರುಗುತ್ತದೆ. ಪ್ರತಿ ವರ್ಷ ಪುಷ್ಪ ಮೇಳ ("ಫೂಲ್ ಮೇಲಾ" ಬಂಗಾಳಿಯಲ್ಲಿ) ಸಹ ಜರುಗುತ್ತದೆ.
ಸರ್ಕಾರ ಮತ್ತು ಆಡಳಿತ
[ಬದಲಾಯಿಸಿ]ಈ ಲೇಖನದಿಂದ ಬೇರೆ ಯಾವುದೇ ಲೇಖನಕ್ಕೆ ಬಾಹ್ಯ ಸಂಪರ್ಕ ಹೊಂದಿಲ್ಲ.(October 2009) |
ಖರಗ್ಪುರ ಮುನ್ಸಿಪಾಲಿಟಿಯು ಪಟ್ಟಣದ ನಾಗರಿಕ ಚಟುವಟಿಕೆಗಳನ್ನು ನಿರ್ವಹಿಸುತ್ತದೆ. ಅದರ ವ್ಯಾಪ್ತಿಯೊಳಗೆ ರೈಲ್ವೇ ಪ್ರದೇಶವನ್ನು ಸೇರಿಸಿಕೊಂಡು ಅದನ್ನು ಮುನ್ಸಿಪಲ್ ಕಾರ್ಪೋರೇಷನ್ ಆಗಿ ಮೇಲ್ದರ್ಜೆಗೆ ಏರಿಸುವ ಪ್ರಸ್ತಾಪವಿದೆ. ಪ್ರಸ್ತುತ ರೈಲ್ವೇ ಪ್ರದೇಶನದ ನಾಗರಿಕರ ಸೌಕರ್ಯದ ಜವಾಬ್ದಾರಿಯು ಡಿವಿಷನಲ್ ರೈಲ್ವೇ ಮ್ಯಾನೇಜರ್, ಖರಗ್‌ಪುರ ಅವರಿಗೆ ಇದ್ದು, ಅವರು ಖರಗ್‌ಪುರದಲ್ಲಿನ ರೈಲ್ವೇ ವ್ಯವಸ್ಥೆಯ ಮುಖ್ಯಸ್ಥರೂ ಆಗಿದ್ದಾರೆ. ಖರಗ್‌ಪುರವು ಉಪ-ವಿಭಾಗದ ಪಟ್ಟಣವಾಗಿದೆ ಮತ್ತು ಉಪ-ವಿಭಾಗಾಧಿಕಾರಿಯವರು ಸ್ಥಳೀಯ ಆಡಳಿತದ ಮುಖ್ಯಸ್ಥರಾಗಿದ್ದಾರೆ.
ರಾಜಕೀಯ
[ಬದಲಾಯಿಸಿ]ಖರಗ್‌ಪುರ ಪಟ್ಟಣ ಮತ್ತು ಖರಗ್‌ಪುರ ಗ್ರಾಮೀಣ ವಿಧಾನಸಭಾ ಕ್ಷೇತ್ರಗಳು ಮಿಡ್ನಾಪುರ (ಲೋಕಸಭಾ ಕ್ಷೇತ್ರ) ದ ಭಾಗವಾಗಿದೆ.[೪]
ಭಾಗದ ಸ್ಥಳೀಯ ರಾಜಕೀಯವು ನಿಜವಾಗಿಯೂ ಅಸಹ್ಯಕರವಾಗಿದೆ ಏಕೆಂದರೆ ರಾಜಕಾರಣಿಗಳು ಈ ಭಾಗದ ಬಡ ಜನರ ಬಗ್ಗೆ ಕಾಳಜಿ ವಹಿಸುವುದಿಲ್ಲ. ಐಎನ್‌ಸಿಯ ಗ್ಯಾನ್ ಸಿಂಗ್ ಸೋಹನ್‌ಪಾಲ್ ಅವರು ಖರಗ್‌ಪುರ ಪಟ್ಟಣ ವಿಧಾನಸಭಾ ಕ್ಷೇತ್ರದ ಪ್ರಸ್ತುತ ಎಮ್‌ಎಲ್ಎ ಯವರಾಗಿದ್ದು, ಅವರು 2006 ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಜಯಗಳಿಸಿದ್ದಾರೆ. ಇದು ಅವರ ಸತತ ಆರನೇ ಗೆಲುವಾಗಿದೆ: ಅವರು ಐಎನ್‌ಸಿ ಅಭ್ಯರ್ಥಿಯಾಗಿ 2001, 19996, 1991 ಮತ್ತು 1987 ರಲ್ಲಿ ಜಯಗಳಿಸಿದರು, ಆದರೆ ಅವರು ಈ ಕ್ಷೇತ್ರವನ್ನು ಐಸಿಎಸ್ ಅಭ್ಯರ್ಥಿಯಾಗಿ 1982 ರಲ್ಲಿ ಜಯಗಳಿಸಿದ್ದರು. 1977 ರಲ್ಲಿ ಈ ಕ್ಷೇತ್ರವನ್ನು ಜೆಎನ್‌ಪಿಯ ಸುಧೀರ್ ದಾಸ್ಸರ್ಮಾ ಅವರು ಗೆದ್ದಿದ್ದರು.[೫]
ಸಿಪಿಐ(ಎಂ)ನ ನಜಮುಲ್ ಹಕ್ ಅವರು ಖರಗ್‌ಪುರ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಪ್ರಸ್ತುತ ಎಮ್‌ಎಲ್ಎ ಆಗಿದ್ದು, ಅವರು 2006 ರ ರಾಜ್ಯ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಜಯಗಳಿಸಿದ್ದಾರೆ. ಇದು ಈ ಕ್ಷೇತ್ರದಿಂದ ಅವರ ಸತತ ಐದನೇ ಗೆಲುವಾಗಿದೆ, ಈ ಹಿಂದೆ ಅವರು 2001, 1996, 1991 ಮತ್ತು 1987 ರಲ್ಲಿ ಜಯಗಳಿಸಿದ್ದರು. ಸಿಪಿಐ(ಎಂ)ನ ಅಭ್ಯರ್ಥಿ ಸಿರಾಜ್ ಅಲಿಯವರು ಈ ಕ್ಷೇತ್ರವನ್ನು 1982 ಮತ್ತು 1977 ರಲ್ಲಿ ಗೆದ್ದಿದ್ದರು.[೬]
ರೈಲ್ವೇ ನಿಲ್ದಾಣದ ಗ್ಯಾಲರಿ
[ಬದಲಾಯಿಸಿ]-
ನಿಲ್ದಾಣದ ಹೊರ ನೋಟ
-
ನಿಲ್ದಾಣದಲ್ಲಿ ನಿಂತಿರುವ ರಾಜಧಾನಿ ಎಕ್ಸ್‌ಪ್ರೆಸ್
-
ನಿಲ್ದಾಣದಲ್ಲಿ ನಿಂತಿರುವ ಕೋರಮಂಡಲ್ ಎಕ್ಸ್‌ಪ್ರೆಸ್
-
ನಿಲ್ದಾಣದ ವೈಮಾನಿಕ ನೋಟ
-
ನಿಲ್ದಾಣ
-
ನಿಲ್ದಾಣ
ಮೂಲಗಳು
[ಬದಲಾಯಿಸಿ]- ಅಮರಿಕ್ ಸಿಂಗ್ ವಿರ್ಧಿ ಅವರ “ಮಾರ್ಚ್ ಟು ನ್ಯೂ ಮಿಲ್ಲೇನಿಯಂ” [www.amrikvirdiofficial.blogspot.com]
- ಅಮರಿಕ್ ಸಿಂಗ್ ವಿರ್ಧಿಯವರ “ಮಿಡ್ನಾಪುರ ದರ್ಪಣ್” [www.amrikvirdiofficial.blogspot.com]
- ಅಮರಿಕ್ ಸಿಂಗ್ ವಿರ್ಧಿಯವರ “ದಿಸ್ ಇಸ್ ಮಿಡ್ನಾಪುರ್”
[www.amrikvirdiofficial.blogspot.com]
- ಅಮರಿಕ್ ಸಿಂಗ್ ವಿರ್ಧಿಯವರ “ಪ್ರೋಬ್ಲಮ್ ಪ್ರೋಹೋರ್” [www.amrikvirdiofficial.blogspot.com]
- ಅಮರಿಕ್ ಸಿಂಗ್ ವಿರ್ಧಿಯವರ “ಖರಗ್‌ಪುರ್ ಟುಡೇ” [www.amrikvirdiofficial.blogspot.com]
ಉಲ್ಲೇಖಗಳು
[ಬದಲಾಯಿಸಿ]- ↑ "ಆರ್ಕೈವ್ ನಕಲು". Archived from the original on 2019-07-30. Retrieved 2010-10-05.
- ↑ ಫಾಲಿಂಗ್ ರೇನ್ ಜೆನೋಮಿಕ್ಸ್, ಐಎನ್‌ಸಿ - ಖರಗ್‌ಪುರ
- ↑ GRIndia
- ↑ "Assembly Constituencies - Corresponding Districts and Parliamentary Constituencies" (PDF). West Bengal. Election Commission of India. Archived from the original (PDF) on 2008-10-03. Retrieved 2008-10-02.
- ↑ "State Elections 2006 - Partywise Comparision for 224-Kharagpur Town Constituency of West Bengal". Election Commission of India. Archived from the original on 2005-02-10. Retrieved 2008-10-26.
- ↑ "State Elections 2006 - Partywise Comparision for 225-Kharagpur Rural Constituency of West Bengal". Election Commission of India. Archived from the original on 2005-02-10. Retrieved 2008-10-26.
ಬಾಹ್ಯ ಕೊಂಡಿಗಳು
[ಬದಲಾಯಿಸಿ]- ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಖರಗ್ಪುರ
- ಖರಗ್‌ಪುರದ ಬಳಿಯ ಭೇಟಿ ನೀಡುವ ಸ್ಥಳಗಳು Archived 2010-07-31 ವೇಬ್ಯಾಕ್ ಮೆಷಿನ್ ನಲ್ಲಿ.
- ಖರಗ್ಪುರ ಸಿಲ್ವರ್ ಜುಬಿಲಿ ಹೈಸ್ಕೂಲ್ Archived 2011-12-29 ವೇಬ್ಯಾಕ್ ಮೆಷಿನ್ ನಲ್ಲಿ.
- ಐಐಟಿ
- ಕೆಜಿಪಿ ರೈಲ್ವೇ Archived 2019-07-30 ವೇಬ್ಯಾಕ್ ಮೆಷಿನ್ ನಲ್ಲಿ.
- ಖರಗ್‌ಪುರದ ಚದರಿಕೆ ಮರುಒಗ್ಗೂಡಿದ್ದು Archived 2012-07-16 ವೇಬ್ಯಾಕ್ ಮೆಷಿನ್ ನಲ್ಲಿ.
- ಮೇದಿನಾಪುರದ ನೋಟೀಸ್ಬೋರ್ಡ್
- ಕೆಇ ಟೆಕ್ನಿಕಲ್ ಟೆಕ್ಸ್‌ಟೈಲ್ಸ್ ಪ್ರೈವೇಟ್ ಲಿಮಿಟೆಡ್, ಖರಗ್ಪುರ
- ಪಶ್ಚಿಮ ಮಿಡ್ನಾಪುರ ಡಿಸ್ಟ್ರಿಕ್ಟ್ ಪೋಲೀಸ್ Archived 2011-09-29 ವೇಬ್ಯಾಕ್ ಮೆಷಿನ್ ನಲ್ಲಿ.
- ಜನತಾವಿಮರ್ಶೆ ಖರಗ್ಪುರ ಪುಟ
- Pages using the Phonos extension
- ಕಡತ ಕೊಂಡಿಗಳು ಮುರಿದಿರುವ ಪುಟಗಳು
- Pages using the JsonConfig extension
- Short description is different from Wikidata
- Pages using infobox settlement with unknown parameters
- Pages using infobox settlement with missing country
- Pages using infobox settlement with no map
- Pages using infobox settlement with no coordinates
- Pages using gadget WikiMiniAtlas
- Articles containing potentially dated statements from 2001
- All articles containing potentially dated statements
- Articles needing additional references from October 2009
- Articles with invalid date parameter in template
- All articles needing additional references
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- Commons category link is on Wikidata
- ಪಶ್ಚಿಮ ಬಂಗಾಳದಲ್ಲಿನ ರೈಲ್ವೆ ನಿಲ್ದಾಣಗಳು
- ಪಶ್ಚಿಮ ಮೇದಿನಾಪುರ ಜಿಲ್ಲೆಯ ನಗರಗಳು ಮತ್ತು ಪಟ್ಟಣಗಳು
- ಪಶ್ಚಿಮ ಬಂಗಾಳದಲ್ಲಿನ ವಿಧಾನಸಭಾ ಕ್ಷೇತ್ರಗಳು
- ಖರಗ್ಪುರ ರೈಲ್ವೇ ವಿಭಾಗ
- ಭಾರತೀಯ ರೈಲ್ವೆಯ ವಿಭಾಗಗಳು
- ಆಗ್ನೇಯ ರೈಲ್ವೆ(ಭಾರತ) ವಲಯ
- ಪಶ್ಚಿಮ ಮೇದಿನಾಪುರ ಜಿಲ್ಲೆಯಲ್ಲಿ ಸಮುದಾಯ ಅಭಿವೃದ್ಧಿ ವಿಭಾಗಗಳು
- ಕಾರ್ಮಿಕ
- ಪಶ್ಚಿಮ ಬಂಗಾಳ