ಬಾಲಸೊರ್
ಬಾಲಸೋರು | |
ರಾಜ್ಯ - ಜಿಲ್ಲೆ |
ಒಡಿಶಾ - ಬಾಲೇಶ್ವರ್ |
ನಿರ್ದೇಶಾಂಕಗಳು | |
ವಿಸ್ತಾರ - ಎತ್ತರ |
km² - 16 ಮೀ. |
ಸಮಯ ವಲಯ | IST (UTC+5:30) |
ಜನಸಂಖ್ಯೆ (2001) - ಸಾಂದ್ರತೆ |
106,032 - /ಚದರ ಕಿ.ಮಿ. |
ಬಾಲ ಈಶ್ವರ > ಬಾಲೇಶ್ವರ ಎಂಬುದು ಬಾಲೇಸ್ವರ ಆಗಿ ಇಂದು ಒರಿಯಾ ಭಾಷೆಯಲ್ಲಿ ಬಾಲಸೊರ್ ಆಗಿದೆ. ಈ ಬಾಲಸೊರ್ ಒಂದು ವಾಣಿಜ್ಯ ಮತ್ತು ಔದ್ಯೋಗಿಕ ಕೇಂದ್ರವಾಗಿದ್ದು ಅಪಾರ ಜನತೆಗೆ ಬದುಕುವ ದಾರಿ ಕಲ್ಪಿಸಿದೆ. ಇಲ್ಲಿಂದ ಸುಮಾರು ೨೦ ಕಿಲೋಮೀಟರು ದೂರದಲ್ಲಿರುವ ಚಾಂದೀಪುರ ಸಮುದ್ರ ತೀರವು ಒಂದು ವೈಚಿತ್ರ್ಯಕ್ಕೆ ಸಾಕ್ಷಿಯಾಗಿದೆ. ರಾತ್ರಿಯಿಡೀ ಭೋರ್ಗರೆದು ರೌದ್ರತೆ ತೋರುವ ಸಮುದ್ರವು ಬೆಳಗಾಗಿ ಸೂರ್ಯ ಮೇಲೇರತೊಡಗಿದಂತೆ ತನ್ನ ಕಲರವ ಮರೆತು ಒಂದೊಂದೇ ಹೆಜ್ಜೆ ಹಿಂಜರಿಯತೊಡಗುತ್ತದೆ. ಮಧ್ಯಾಹ್ನದ ಹೊತ್ತಿಗೆ ಈ ಸರಿತ ಎಷ್ಟಿರುತ್ತದೆಂದರೆ ಸಮುದ್ರದ ನೀರು ಮುಟ್ಟಲು ನಾವು ಸಮುದ್ರ ತಳದ ನೆಲದ ಮೇಲೆಯೇ ಸುಮಾರು ನಾಲ್ಕೈದು ಕಿಲೋಮೀಟರು ದೂರ ನಡೆದು ಹೋಗಬೇಕು.
ಬಾಲಸೊರ್ ನಿಂದ ಸುಮಾರು ೧೦ ಕಿಲೋಮೀಟರು ದೂರದಲ್ಲಿರುವ ನೀಲಗಿರಿ ಬೆಟ್ಟಪ್ರದೇಶದಲ್ಲಿರುವ ಪುರಾತನ ಪಟ್ಟಣದ ಅವಶೇಷಗಳು, ಅರಮನೆಯ ಪಳೆಯುಳಿಕೆಗಳು, ಬೆಟ್ಟದ ಮೇಲಿನ ನೀರಧಾರೆಯ ನಡುವೆ ಇರುವ ಪಂಚಲಿಂಗಗಳು, ಕೀರಚೋರ ಎಂಬ ಗುಜರಾತಿ ಮಂದಿರ ಇವೆಲ್ಲವೂ ನೋಡತಕ್ಕ ಸ್ಥಳಗಳು. ಬಾಲಸೊರ್ದಲ್ಲಿನ ಕಾನ್ವೆಂಟ್ ಶಾಲೆಯು ಸರ್ಕಾರೀ ಶಾಲೆಗಿಂತಲೂ ಹೆಚ್ಚಿನ ಜನಮನ್ನಣೆ ಗಳಿಸಿದೆ. ’ಚರ್ಚ್ ಆಫ್ ನಾರ್ತ್ ಇಂಡಿಯಾ’ದ ಹೆಣ್ಣುಮಕ್ಕಳ ಶಾಲೆ ಹಾಗೂ ಫಕೀರ್ ಮೋಹನ್ ಕಾಲೇಜುಗಳು ಸಹಾ ಮುಂಚೂಣಿಯಲ್ಲಿವೆ. ಪಾನಿಚಕ್, ಚಿಡಿಯಾಪುಲ್ ಮತ್ತು ಮೋತಿಗಂಜ್ ಮುಂತಾದ ಸ್ಥಳಗಳು ಸಂತೆಯ ಕೇಂದ್ರಗಳಾಗಿ ಬಂಗಾಲಿ ವಸ್ತುಗಳನ್ನೂ ಸಂಭಲ್‌ಪುರಿ ಸೀರೆಗಳನ್ನೂ ಬಿಕರಿ ಮಾಡುತ್ತವೆ.