ಕೃಷ್ಣಾ ಕಲ್ಲೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕೃಷ್ಣಾ ಕಲ್ಲೆ
ಜನ್ಮನಾಮಕೃಷ್ಣಾ ಕಲ್ಲೆ
ಜನನ18 December 1940 at Karwar, ಉತ್ತರ ಕನ್ನಡ, ಕರ್ನಾಟಕ, ಭಾರತ
ಮರಣ15 March 2015 (aged 74)
ಮುಂಬಯಿ
ವಾದ್ಯಗಳುSinger

ಕೃಷ್ಣಾ ಕಲ್ಲೆ  (೧೮ ಡಿಸೆಂಬರ್ ೧೯೪೦ - ೧೫ ಮಾರ್ಚ್ ೨೦೧೫) ಭಾರತೀಯ  ಮರಾಠಿ ಮತ್ತು ಹಿಂದಿ ಚಿತ್ರರಂಗದಲ್ಲಿ ಹಿನ್ನೆಲೆ ಗಾಯಕಿ . ಅವರು  ಕೆಲವು ಕನ್ನಡ ಹಾಡುಗಳನ್ನು ಕೂಡಾ ಹಾಡಿದ್ದಾರೆ.

[೧][೨]

ಬಾಲ್ಯ[ಬದಲಾಯಿಸಿ]

ಕೃಷ್ಣಾ   ಕಾರವಾರ, ಉತ್ತರ ಕನ್ನಡದವರು . ಅವರ ತಂದೆ  ಕಾನ್ಪುರ್ ನಲ್ಲಿ ಸೇವೆ ಸಲ್ಲಿಸುತ್ತಿದ್ದುದರಿಂದ , ಅವರು ತನ್ನ ಶಾಲಾ ಅಭ್ಯಾಸವನ್ನು ಕಾನ್ಪುರದಲ್ಲಿಯೇ ಮುಗಿಸಿದರು.  ಅವರಿಗೆ  ಹಿಂದಿ ಮತ್ತು ಉರ್ದುಗಳ ಸಂಸ್ಕಾರ ಅಲ್ಲಿ ದೊರಕಿತು.  ೧೬ ರ ವಯಸ್ಸಿನಲ್ಲಿ , ಕಾನ್ಪುರ್ ರೇಡಿಯೋ ಸ್ಟೇಷನ್ ನಲ್ಲಿ  ಹಾಡಲು ಆರಂಭಿಸಿದರು . ಅವರು  ಉತ್ತರಪ್ರದೇಶದ  ವಿವಿಧ ಯಾತ್ರೆ ಸಂಗೀತ ಮಹೋತ್ಸವಗಳಲ್ಲಿ  ಹಾಡಿ  ಜನಪ್ರಿಯತೆ ಗಳಿಸಿದರು.[೩]

ವೃತ್ತಿ[ಬದಲಾಯಿಸಿ]

ಕೃಷ್ಣಾ  ಸಂಬಂಧಿಕರನ್ನು ಭೇಟಿ ಮಾಡಲು  ಮುಂಬೈಗೆ   ಬಂದರು. ಅರುಣ್ ದಾತೆ  ಅವರ ದನಿಯನ್ನು ಕೇಳಿದರು . ಅವರು ತಮ್ಮ ಸಂಗೀತ ನಿರ್ದೇಶಕ ಯಶವಂತ್ ದೇವ್ ಅವರಿಗೆ ಪರಿಚಯಿಸಿದ .  ಮರಾಠಿ ಗಾಯಕಿಯಾಗಿ ಅವರ ಪಯಣ  ಹೀಗೆ  ಆರಂಭವಾಯಿತು . ಅವರು  ೧೯೫೭ ರಲ್ಲಿ ರಾಷ್ಟ್ರೀಯ ಮಟ್ಟದ ಗಾಯನ ಪ್ರಶಸ್ತಿ  ಗೆದ್ದುಕೊಂಡರು . 1960ರಲ್ಲಿ ಆಕಾಶವಾಣಿ ಯಲ್ಲಿ ಕೆಲಸ ಸಿಕ್ಕಿತು . ಅವರು ಹಿಂದಿ ಚಿತ್ರರಂಗದಲ್ಲಿ ಸುಮಾರು ೧೯೬೦ ರಿಂದ ಮತ್ತು ೧೯೭೦ ರವರೆಗೆ ಒಂದು ದಶಕದಷ್ಟು ಕಾಲ ಸಕ್ರಿಯರಾಗಿದ್ದರು. ಅವರು ಕನ್ನಡ ಚಿತ್ರಗಳಲ್ಲಿ ಹಾಡಲು ೧೯೬೯ ರಲ್ಲಿ ಆರಂಭಿಸಿದರು.[೪] ಅವರು ೨೦೦ ಕ್ಕೂ  ಹೆಚ್ಚು  ಬಾಲಿವುಡ್ ಹಾಡುಗಳು, ೧೦೦ ಮರಾಠಿ ಚಿತ್ರ ಹಾಡುಗಳು, ೨ ಕನ್ನಡ ಚಿತ್ರ ಹಾಡುಗಳು, ೧೦೦ ಭಜನೆಗಳು, ಗಝಲ್ ಗಳು ಮತ್ತು ಭಕ್ತಿ ಗೀತೆಗಳನ್ನು ಹಾಡಿದ್ದಾರೆ . ಅವರು ಹಲವಾರು ಹಿಂದಿ, ಮರಾಠಿ ಚಿತ್ರಗಳಿಗಾಗಿ ಹಾಡಿದರು ಮತ್ತು ಮನ್ನಾ ಡೇ, ಮೊಹಮ್ಮದ್ ರಫಿ. ರಂತಹ ಗಾಯಕರ ಜತೆಗೆ ಚಲನಚಿತ್ರೇತರ ಆಲ್ಬಮ್ ಗಳನ್ನು ಬಿಡುಗಡೆ ಮಾಡಿದ್ದಾರೆ.[ಸೂಕ್ತ ಉಲ್ಲೇಖನ ಬೇಕು]

ಮಹಾರಾಷ್ಟ್ರ ಸರ್ಕಾರವು  'ಜೀವಮಾನದ ಸಾಧನೆಗಾಗಿ ಲತಾ ಮಂಗೇಶ್ಕರ್ ಪ್ರಶಸ್ತಿ'ಯನ್ನು   ಕೃಷ್ಣಾ ಕಲ್ಲೆ  ಅವರಿಗೆ ಕೊಟ್ಟು ಗೌರವಿಸಿದೆ. ರಾಜ್ಯ ಸಂಸ್ಕೃತಿ ಇಲಾಖೆಯ ಈ ಪ್ರಶಸ್ತಿಯು ರೂ.೫,00,000 ಗಳ ನಗದು ಬಹುಮಾನ , ಪ್ರಶಸ್ತಿ ಫಲಕ ಮತ್ತು ಟ್ರೋಫಿಯನ್ನು ಒಳಗೊಂಡಿದೆ.[೫][೬]

ಹಿಂದಿಯಲ್ಲಿ ಪ್ರಸಿದ್ಧ ಹಾಡುಗಳು[ಬದಲಾಯಿಸಿ]

 1. "ಸೋಚತಾ ಹೂ ಕೆ ತುಮ್ಹೆ  ಮೈನೆ  ಕಹೀಂ ದೇಖಾ ಹೈ" ("ರಾಝ್", 1967)
 2. "ಚಕ್ಕರ್ ಚಲಾಯೆ ಘನಚಕ್ಕರ್" ("ದೋ ದೂನಿ ಚಾರ್", ೧೯೬೮).
 3. ಹಮೇ ತೋ ಮಾರ ದಿಯಾ

ಕನ್ನಡ ಹಾಡುಗಳು[ಬದಲಾಯಿಸಿ]

 1. "ಒಂದೊಂದಾಗಿ ಜಾರಿದರೆ ( ಕಲ್ಪವೃಕ್ಷ ಚಲನಚಿತ್ರ)
 2. "ಜಯತೆ ಜಯತೆ" ( - ಮನ್ನಾ ಡೇ ಮತ್ತು ಅಂಬರ್ ಕುಮಾರ್  ಜತೆಗೂಡಿ  ಕಲ್ಪವೃಕ್ಷ ಚಲನಚಿತ್ರ)[೭]

ಪ್ರಶಸ್ತಿಗಳು[ಬದಲಾಯಿಸಿ]

 1. ೧೯೫೭ ರಲ್ಲಿ ರಾಷ್ಟ್ರೀಯ ಮಟ್ಟದ ಯುವ ಗಾಯನ ಪ್ರಶಸ್ತಿ - ಭಾರತದ ಮೊದಲ ರಾಷ್ಟ್ರಪತಿ ರಾಜೇಂದ್ರ ಪ್ರಸಾದ್ ಮತ್ತು ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರಿಂದ.
 2. ೧೯೫೮ರಲ್ಲಿ , ಅವರು ಗೆದ್ದುಕೊಂಡರು ಅಖಿಲ ಭಾರತ ಸುಗಮ ಸಂಗೀತ ಪ್ರಶಸ್ತಿಯ ಮೊದಲ ಬಹುಮಾನ, ಕೆ. ಎಲ್. ಸೆಹಗಲ್  ಸ್ಮಾರಕ ಗೋಲ್ಡನ್ ವಾಯ್ಸ್ ಪ್ರಶಸ್ತಿ ಮತ್ತು ಅನೇಕ ಇತರ ಪ್ರಶಸ್ತಿಗಳು.
 3. ೧೯೬೫, ಗೋಲ್ಡನ್ ವಾಯ್ಸ್  ಆಫ್ ಇಂಡಿಯಾ
 4. ೨೦೧೪ ರಲ್ಲಿ, ಮಹಾರಾಷ್ಟ್ರ ಸರ್ಕಾರವು ಅವರಿಗೆ   ಲತಾ ಮಂಗೇಶ್ಕರ್ ಜೀವನ್ ಗೌರವ ಪುರಸ್ಕಾರವನ್ನು  ಕೊಟ್ಟಿತು   .[೮]

ಮರಣ[ಬದಲಾಯಿಸಿ]

ಅವರು ೧೫ ಮಾರ್ಚ್ ೨೦೧೫ ನಂತರ ಕೊಂಚ ಅವಧಿಯ ಅನಾರೋಗ್ಯದ ನಂತರ  ಮುಂಬೈಯಲ್ಲಿ ತಮ್ಮ ೭೪ ನೇ ವಯಸ್ಸಿನಲ್ಲಿ   ಮರಣ ಹೊಂದಿದರು.[೯][೧೦][೧೧]

ಉಲ್ಲೇಖಗಳು[ಬದಲಾಯಿಸಿ]

 1. Marathi playback singer Krishna Kalle no more, business-standard.com; accessed 18 March 2015.
 2. "ज्येष्ठ गायिका कृष्णा कल्ले यांचे निधन". Archived from the original on 2016-03-14. Retrieved 2017-02-28.
 3. कृष्णा कल्ले
 4. http://chiloka.com/movie/kalpavruksha-1969
 5. Lata Mangeshkar Award for Lifetime Achievement announced for Krishna Kalle, india.com; accessed 18 March 2015.
 6. Krishna Kalle win government cash award, business-standard.com; accessed 18 March 2015.
 7. http://chiloka.com/movie/kalpavruksha-1969
 8. कृष्णा कल्ले यांना गानसम्राज्ञी लता मंगेशकर पुरस्कार जाहीर
 9. Marathi playback singer Krishna Kalle no more
 10. कृष्णा कल्ले यांचे निधन
 11. "ज्येष्ठ पार्श्वगायिका कृष्णा कल्ले यांचं निधन". Archived from the original on 2015-07-08. Retrieved 2017-02-28.