ಕೃಷ್ಣಾ ಕಲ್ಲೆ
ಕೃಷ್ಣಾ ಕಲ್ಲೆ | |
---|---|
ಜನ್ಮನಾಮ | ಕೃಷ್ಣಾ ಕಲ್ಲೆ |
ಜನನ | 18 December 1940 at Karwar, ಉತ್ತರ ಕನ್ನಡ, ಕರ್ನಾಟಕ, ಭಾರತ |
ಮರಣ | 15 March 2015 (aged 74) ಮುಂಬಯಿ |
ವಾದ್ಯಗಳು | Singer |
ಕೃಷ್ಣಾ ಕಲ್ಲೆ (೧೮ ಡಿಸೆಂಬರ್ ೧೯೪೦ - ೧೫ ಮಾರ್ಚ್ ೨೦೧೫) ಭಾರತೀಯ ಮರಾಠಿ ಮತ್ತು ಹಿಂದಿ ಚಿತ್ರರಂಗದಲ್ಲಿ ಹಿನ್ನೆಲೆ ಗಾಯಕಿ . ಅವರು ಕೆಲವು ಕನ್ನಡ ಹಾಡುಗಳನ್ನು ಕೂಡಾ ಹಾಡಿದ್ದಾರೆ.
ಬಾಲ್ಯ
[ಬದಲಾಯಿಸಿ]ಕೃಷ್ಣಾ ಕಾರವಾರ, ಉತ್ತರ ಕನ್ನಡದವರು . ಅವರ ತಂದೆ ಕಾನ್ಪುರ್ ನಲ್ಲಿ ಸೇವೆ ಸಲ್ಲಿಸುತ್ತಿದ್ದುದರಿಂದ , ಅವರು ತನ್ನ ಶಾಲಾ ಅಭ್ಯಾಸವನ್ನು ಕಾನ್ಪುರದಲ್ಲಿಯೇ ಮುಗಿಸಿದರು. ಅವರಿಗೆ ಹಿಂದಿ ಮತ್ತು ಉರ್ದುಗಳ ಸಂಸ್ಕಾರ ಅಲ್ಲಿ ದೊರಕಿತು. ೧೬ ರ ವಯಸ್ಸಿನಲ್ಲಿ , ಕಾನ್ಪುರ್ ರೇಡಿಯೋ ಸ್ಟೇಷನ್ ನಲ್ಲಿ ಹಾಡಲು ಆರಂಭಿಸಿದರು . ಅವರು ಉತ್ತರಪ್ರದೇಶದ ವಿವಿಧ ಯಾತ್ರೆ ಸಂಗೀತ ಮಹೋತ್ಸವಗಳಲ್ಲಿ ಹಾಡಿ ಜನಪ್ರಿಯತೆ ಗಳಿಸಿದರು.[೩]
ವೃತ್ತಿ
[ಬದಲಾಯಿಸಿ]ಕೃಷ್ಣಾ ಸಂಬಂಧಿಕರನ್ನು ಭೇಟಿ ಮಾಡಲು ಮುಂಬೈಗೆ ಬಂದರು. ಅರುಣ್ ದಾತೆ ಅವರ ದನಿಯನ್ನು ಕೇಳಿದರು . ಅವರು ತಮ್ಮ ಸಂಗೀತ ನಿರ್ದೇಶಕ ಯಶವಂತ್ ದೇವ್ ಅವರಿಗೆ ಪರಿಚಯಿಸಿದ . ಮರಾಠಿ ಗಾಯಕಿಯಾಗಿ ಅವರ ಪಯಣ ಹೀಗೆ ಆರಂಭವಾಯಿತು . ಅವರು ೧೯೫೭ ರಲ್ಲಿ ರಾಷ್ಟ್ರೀಯ ಮಟ್ಟದ ಗಾಯನ ಪ್ರಶಸ್ತಿ ಗೆದ್ದುಕೊಂಡರು . 1960ರಲ್ಲಿ ಆಕಾಶವಾಣಿ ಯಲ್ಲಿ ಕೆಲಸ ಸಿಕ್ಕಿತು . ಅವರು ಹಿಂದಿ ಚಿತ್ರರಂಗದಲ್ಲಿ ಸುಮಾರು ೧೯೬೦ ರಿಂದ ಮತ್ತು ೧೯೭೦ ರವರೆಗೆ ಒಂದು ದಶಕದಷ್ಟು ಕಾಲ ಸಕ್ರಿಯರಾಗಿದ್ದರು. ಅವರು ಕನ್ನಡ ಚಿತ್ರಗಳಲ್ಲಿ ಹಾಡಲು ೧೯೬೯ ರಲ್ಲಿ ಆರಂಭಿಸಿದರು.[೪] ಅವರು ೨೦೦ ಕ್ಕೂ ಹೆಚ್ಚು ಬಾಲಿವುಡ್ ಹಾಡುಗಳು, ೧೦೦ ಮರಾಠಿ ಚಿತ್ರ ಹಾಡುಗಳು, ೨ ಕನ್ನಡ ಚಿತ್ರ ಹಾಡುಗಳು, ೧೦೦ ಭಜನೆಗಳು, ಗಝಲ್ ಗಳು ಮತ್ತು ಭಕ್ತಿ ಗೀತೆಗಳನ್ನು ಹಾಡಿದ್ದಾರೆ . ಅವರು ಹಲವಾರು ಹಿಂದಿ, ಮರಾಠಿ ಚಿತ್ರಗಳಿಗಾಗಿ ಹಾಡಿದರು ಮತ್ತು ಮನ್ನಾ ಡೇ, ಮೊಹಮ್ಮದ್ ರಫಿ. ರಂತಹ ಗಾಯಕರ ಜತೆಗೆ ಚಲನಚಿತ್ರೇತರ ಆಲ್ಬಮ್ ಗಳನ್ನು ಬಿಡುಗಡೆ ಮಾಡಿದ್ದಾರೆ. [ಸೂಕ್ತ ಉಲ್ಲೇಖನ ಬೇಕು]
ಮಹಾರಾಷ್ಟ್ರ ಸರ್ಕಾರವು 'ಜೀವಮಾನದ ಸಾಧನೆಗಾಗಿ ಲತಾ ಮಂಗೇಶ್ಕರ್ ಪ್ರಶಸ್ತಿ'ಯನ್ನು ಕೃಷ್ಣಾ ಕಲ್ಲೆ ಅವರಿಗೆ ಕೊಟ್ಟು ಗೌರವಿಸಿದೆ. ರಾಜ್ಯ ಸಂಸ್ಕೃತಿ ಇಲಾಖೆಯ ಈ ಪ್ರಶಸ್ತಿಯು ರೂ.೫,00,000 ಗಳ ನಗದು ಬಹುಮಾನ , ಪ್ರಶಸ್ತಿ ಫಲಕ ಮತ್ತು ಟ್ರೋಫಿಯನ್ನು ಒಳಗೊಂಡಿದೆ.[೫][೬]
ಹಿಂದಿಯಲ್ಲಿ ಪ್ರಸಿದ್ಧ ಹಾಡುಗಳು
[ಬದಲಾಯಿಸಿ]- "ಸೋಚತಾ ಹೂ ಕೆ ತುಮ್ಹೆ ಮೈನೆ ಕಹೀಂ ದೇಖಾ ಹೈ" ("ರಾಝ್", 1967)
- "ಚಕ್ಕರ್ ಚಲಾಯೆ ಘನಚಕ್ಕರ್" ("ದೋ ದೂನಿ ಚಾರ್", ೧೯೬೮).
- ಹಮೇ ತೋ ಮಾರ ದಿಯಾ
ಕನ್ನಡ ಹಾಡುಗಳು
[ಬದಲಾಯಿಸಿ]- "ಒಂದೊಂದಾಗಿ ಜಾರಿದರೆ ( ಕಲ್ಪವೃಕ್ಷ ಚಲನಚಿತ್ರ)
- "ಜಯತೆ ಜಯತೆ" ( - ಮನ್ನಾ ಡೇ ಮತ್ತು ಅಂಬರ್ ಕುಮಾರ್ ಜತೆಗೂಡಿ ಕಲ್ಪವೃಕ್ಷ ಚಲನಚಿತ್ರ)[೭]
ಪ್ರಶಸ್ತಿಗಳು
[ಬದಲಾಯಿಸಿ]- ೧೯೫೭ ರಲ್ಲಿ ರಾಷ್ಟ್ರೀಯ ಮಟ್ಟದ ಯುವ ಗಾಯನ ಪ್ರಶಸ್ತಿ - ಭಾರತದ ಮೊದಲ ರಾಷ್ಟ್ರಪತಿ ರಾಜೇಂದ್ರ ಪ್ರಸಾದ್ ಮತ್ತು ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರಿಂದ.
- ೧೯೫೮ರಲ್ಲಿ , ಅವರು ಗೆದ್ದುಕೊಂಡರು ಅಖಿಲ ಭಾರತ ಸುಗಮ ಸಂಗೀತ ಪ್ರಶಸ್ತಿಯ ಮೊದಲ ಬಹುಮಾನ, ಕೆ. ಎಲ್. ಸೆಹಗಲ್ ಸ್ಮಾರಕ ಗೋಲ್ಡನ್ ವಾಯ್ಸ್ ಪ್ರಶಸ್ತಿ ಮತ್ತು ಅನೇಕ ಇತರ ಪ್ರಶಸ್ತಿಗಳು.
- ೧೯೬೫, ಗೋಲ್ಡನ್ ವಾಯ್ಸ್ ಆಫ್ ಇಂಡಿಯಾ
- ೨೦೧೪ ರಲ್ಲಿ, ಮಹಾರಾಷ್ಟ್ರ ಸರ್ಕಾರವು ಅವರಿಗೆ ಲತಾ ಮಂಗೇಶ್ಕರ್ ಜೀವನ್ ಗೌರವ ಪುರಸ್ಕಾರವನ್ನು ಕೊಟ್ಟಿತು .[೮]
ಮರಣ
[ಬದಲಾಯಿಸಿ]ಅವರು ೧೫ ಮಾರ್ಚ್ ೨೦೧೫ ನಂತರ ಕೊಂಚ ಅವಧಿಯ ಅನಾರೋಗ್ಯದ ನಂತರ ಮುಂಬೈಯಲ್ಲಿ ತಮ್ಮ ೭೪ ನೇ ವಯಸ್ಸಿನಲ್ಲಿ ಮರಣ ಹೊಂದಿದರು.[೯][೧೦][೧೧]
ಉಲ್ಲೇಖಗಳು
[ಬದಲಾಯಿಸಿ]- ↑ Marathi playback singer Krishna Kalle no more, business-standard.com; accessed 18 March 2015.
- ↑ "ज्येष्ठ गायिका कृष्णा कल्ले यांचे निधन". Archived from the original on 2016-03-14. Retrieved 2017-02-28.
- ↑ कृष्णा कल्ले[ಶಾಶ್ವತವಾಗಿ ಮಡಿದ ಕೊಂಡಿ]
- ↑ http://chiloka.com/movie/kalpavruksha-1969
- ↑ Lata Mangeshkar Award for Lifetime Achievement announced for Krishna Kalle, india.com; accessed 18 March 2015.
- ↑ Krishna Kalle win government cash award, business-standard.com; accessed 18 March 2015.
- ↑ http://chiloka.com/movie/kalpavruksha-1969
- ↑ कृष्णा कल्ले यांना गानसम्राज्ञी लता मंगेशकर पुरस्कार जाहीर
- ↑ Marathi playback singer Krishna Kalle no more
- ↑ कृष्णा कल्ले यांचे निधन[ಶಾಶ್ವತವಾಗಿ ಮಡಿದ ಕೊಂಡಿ]
- ↑ "ज्येष्ठ पार्श्वगायिका कृष्णा कल्ले यांचं निधन". Archived from the original on 2015-07-08. Retrieved 2017-02-28.
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಎಲ್ಲಾ ಲೇಖನಗಳು
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಲೇಖನಗಳು from ಜೂನ್ 2024
- Articles with invalid date parameter in template
- ಶಾಶ್ವತವಾಗಿ ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಎಲ್ಲಾ ಲೇಖನಗಳು
- Articles with hCards
- Infobox musical artist with missing or invalid Background field
- Articles with unsourced statements
- ಹಿನ್ನೆಲೆ ಗಾಯಕಿಯರು
- ಕರ್ನಾಟಕದ ಪ್ರಸಿದ್ಧ ವ್ಯಕ್ತಿಗಳು
- ವಿಕಿ ಲವ್ಸ್ ವಿಮೆನ್ ದಕ್ಷಿಣ ಏಷ್ಯಿಯಾ ಸ್ಪರ್ಧೆಗೆ ವಿಸ್ತರಿಸಿದ ಲೇಖನ