ಕೃನಾಲ್ ಪಾಂಡ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕೃಣಾಲ್ ಪಾಂಡ್ಯ
Krunal in May 2017
ವಯಕ್ತಿಕ ಮಾಹಿತಿ
ಪೂರ್ಣ ಹೆಸರು
ಕೃಣಾಲ್ ಹಿಮಾಂಶು ಪಾಂಡ್ಯ
ಹುಟ್ಟು (1991-03-24) ೨೪ ಮಾರ್ಚ್ ೧೯೯೧ (ವಯಸ್ಸು ೩೩)
ಅಹ್ಮದಾಬಾದ್, ಗುಜರಾತ್, ಭಾರತ
ಎತ್ತರ1.85 m (6 ft 1 in)
ಬ್ಯಾಟಿಂಗ್ಎಡಗೈ
ಬೌಲಿಂಗ್Slow left-arm orthodox
ಪಾತ್ರಆಲ್ ರೌಂಡರ್
ಸಂಬಂಧಗಳುಹಾರ್ದಿಕ್ ಪಾಂಡ್ಯ (ಸೋದರ)
ಅಂತಾರಾಷ್ಟ್ರೀಯ ಮಾಹಿತಿ
ರಾಷ್ಟೀಯ ತಂಡ
ಅಂ. ಏಕದಿನ​ ಚೊಚ್ಚಲ (ಕ್ಯಾಪ್ ೨೩೩)೨೩ ಮಾರ್ಚ್ ೨೦೨೧ v ಇಂಗ್ಲೆಂಡ್
ಕೊನೆಯ ಅಂ. ಏಕದಿನ​೨೩ ಜುಲೈ ೨೦೨೧ v ಶ್ರೀಲಂಕಾ
ಅಂ. ಏಕದಿನ​ ಅಂಗಿ ನಂ.೩೬
ಟಿ೨೦ಐ ಚೊಚ್ಚಲ (ಕ್ಯಾಪ್ ೭೮)೪ ನವಂಬರ್ ೨೦೧೮ v ವೆಸ್ಟ್ ಇಂಡೀಸ್
ಕೊನೆಯ ಟಿ೨೦ಐ೨೫ ಜುಲೈ ೨೦೨೧ v ಶ್ರೀಲಂಕಾ
ಟಿ೨೦ಐ ಅಂಗಿ ನಂ.೩೬
ದೇಶೀಯ ತಂಡದ ಮಾಹಿತಿ
ವರ್ಷಗಳುತಂಡ
೨೦೧೨ರಿಂದಬರೋಡಾ ಕ್ರಿಕೆಟ್ ತಂಡ
೨೦೧೬-೨೦೨೧ಮುಂಬೈ ಇಂಡಿಯನ್ಸ್ (squad no. ೨೪)
೨೦೨೨ರಿಂದಲಕ್ನೋ ಸೂಪರ್ ಜಯಂಟ್ಸ್
೨೦೨೨ವಾರ್ವಿಕ್‌ಶೈರ್ ಕೌಂಟಿ
ವೃತ್ತಿ ಅಂಕಿಅಂಶಗಳು
ಸ್ಪರ್ಧೆ ಒಡಿಐ ಟಿ೨೦ಐ FC LA
ಪಂದ್ಯಗಳು ೧೯ ೬೭
ಗಳಿಸಿದ ರನ್ಗಳು ೧೩೦ ೧೨೪ ೪೭೦ ೨,೦೪೧
ಬ್ಯಾಟಿಂಗ್ ಸರಾಸರಿ ೬೫.೦೦ ೨೪.೮೦ ೩೧.೩೩ ೩೮.೫೦
೧೦೦/೫೦ ೦/೧ ೦/೦ ೨/೨ ೨/೧೨
ಉನ್ನತ ಸ್ಕೋರ್ ೫೮* ೨೬* ೧೬೦ ೧೩೩*
ಎಸೆತಗಳು ೨೨೮ ೪೧೯ ೬೮೩ ೩,೦೮೪
ವಿಕೆಟ್‌ಗಳು ೧೫ ೧೪ ೮೧
ಬೌಲಿಂಗ್ ಸರಾಸರಿ ೧೧೧.೫೦ ೩೬.೯೩ ೨೫.೮೫ ೩೧.೪೯
ಐದು ವಿಕೆಟ್ ಗಳಿಕೆ
ಹತ್ತು ವಿಕೆಟ್ ಗಳಿಕೆ
ಉನ್ನತ ಬೌಲಿಂಗ್ ೧/೨೬ ೪/೩೬ ೪/೪೦ ೬/೪೧
ಹಿಡಿತಗಳು/ ಸ್ಟಂಪಿಂಗ್‌ ೧/೦ ೮/೦ ೪/೦ ೨೩/೦
ಮೂಲ: ESPNcricinfo, ೨೬ ಜುಲೈ ೨೦೨೧

ಕೃಣಾಲ್ ಹಿಮಾಂಶು ಪಾಂಡ್ಯ, ಓರ್ವ ಭಾರತೀಯ ಕ್ರಿಕೆಟ್ ಆಟಗಾರ. ಇವರು ಎಡಗೈ ಬ್ಯಾಟ್ಸ್‌ಮನ್ ಹಾಗೂ ಎಡಗೈ ಲೆಗ್ ಸ್ಪಿನ್ ಬೌಲರ್. ಐಪಿಎಲ್‍‌ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪರವಾಗಿ ಆಡುತ್ತಾರೆ.[೧]

ಆರಂಭಿಕ ಜೀವನ[ಬದಲಾಯಿಸಿ]

ಇವರು ೨೪ನೇ ಮಾರ್ಚ್ ೧೯೯೧ ರಂದು ಅಹ್ಮದಾಬಾದ್, ಗುಜರಾತ್‌ನಲ್ಲಿ ಜನಿಸಿದರು. ಆರ್ಥಿಕವಾಗಿ ದುರ್ಬಲವಾಗಿದ್ದ ಕೃನಾಲ‍್ ಪಾಂಡ್ಯ ಕುಟುಂಬವು ಗೋರ್ವಾದಲ್ಲಿನ ಬಾಡಿಗೆ ಮನೆಯಲ್ಲಿ ವಾಸಿಸುತ್ತಿತ್ತು. ೨೦೧೬ರಲ್ಲಿ ಇವರು ಪ್ರಥಮ ದರ್ಜೆ ಕ್ರಿಕೆಟ್ ಆಡದೇ ಇದ್ದರು, ಮುಂಬೈ ಇಂಡಿಯನ್ಸ್ ತಂಡ ಇವರ ಪ್ರತಿಭೆಯನ್ನು ಗುರುತಿಸಿ ತಂಡಕ್ಕೆ ಸೇರಿಸಿಕೊಂಡರು. ಅದರ ನಂತರ ಇವರು ಬರೋಡ ತಂಡದ ಪರವಾಗಿ ೨೦೧೬-೧೭ರ ರಣಜಿ ಟ್ರೋಫಿಯಲ್ಲಿ ಆಡುವ ಮೂಲಕ ಕೃನಾಲ‍್ ಪ್ರಥಮ ದರ್ಜೆ ಕ್ರಿಕೆಟ‍್‌ನಲ್ಲಿ ಪಾದಾರ್ಪಣೆ ಮಾಡಿದರು. ಅದೇ ವರ್ಷ ಇವರು ವಿಜಯ್ ಹಜಾರೆ ಟ್ರೋಫಿಯಲ್ಲಿ ಬರೋಡ ತಂಡದ ಪರವಾಗಿ ಅತೀ ಹೆಚ್ಚು ವಿಕೇಟ್ ಹಾಗು ಅತೀ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಹಿರಿಮೆಗೆ ಪಾತ್ರರಾದರು.[೨][೩]

ವೃತ್ತಿ ಜೀವನ[ಬದಲಾಯಿಸಿ]

ಐಪಿಎಲ್ ಕ್ರಿಕೆಟ್[ಬದಲಾಯಿಸಿ]

ಏಪ್ರಿಲ್ ೧೬, ೨೦೧೬ರಂದು ವಾಂಖೆಡೆ ಕ್ರೀಡಾಂಗಣ, ಮುಂಬೈಯಲ್ಲಿ ಗುಜರಾತ್ ಲೈಯನ್ನ್ ವಿರುದ್ಧ ನಡೆದ ೦೯ನೇ ಐಪಿಎಲ್ ಕ್ರಿಕೆಟ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡದಿಂದ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಪಾದಾರ್ಪಣೆ ಮಾಡಿದರು. ತಮ್ಮ ಪಾದಾರ್ಪಣೆ ಪಂದ್ಯದಿಂದ ಇಲ್ಲಿಯವರೆಗೂ ಇವರು ಮುಂಬೈ ಇಂಡಿಯನ್ಸ್ ತಂಡಕ್ಕೆ ಆಡುತ್ತ ಬಂದಿದ್ದಾರೆ. ಇವರ ಸಹೋದರ ಹಾರ್ದಿಕ್ ಪಾಂಡ್ಯ ಸಹ ಇವರ ಜೊತೆಗೆ ಮುಂಬೈ ಇಂಡಿಯನ್ಸ್ ತಂಡಕ್ಕೆ ಆಡುತ್ತಾರೆ.[೪]


ಅಂತರರಾಷ್ಟ್ರೀಯ ಕ್ರಿಕೆಟ್[ಬದಲಾಯಿಸಿ]

ನವಂಬರ್ ೦೪, ೨೦೧೮ರಲ್ಲಿ ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದ ವಿರುಧ್ಧ ನಡೆದ ಮೊದಲ ಟಿ-೨೦ ಪಂದ್ಯದ ಮೂಲಕ ಇವರು ಅಂತರರಾಷ್ಟ್ರೀಯ ಕ್ರಿಕೆಟ್ ಜಗತ್ತಿಗೆ ಪದಾರ್ಪನೆ ಮಾಡಿದರು. ಇವರ ಪಾದಾರ್ಪಣೆ ಪಂದ್ಯದಲ್ಲಿ ಕೃನಾಲ್ ಪಾಂಡ್ಯರವರು ಒಂದು ವಿಕೇಟ ಸಹಿತ ಕೇವಲ ಒಂಬತ್ತು ಎಸೆತಗಳಲ್ಲಿ ಮೂರು ಬೌಂಡರಿ ಸಹಿತ ೨೧ ರನ್ ಕಲೆ ಹಾಕಿ ಅಜೇಯರಾಗಿ ಉಳಿದರು.[೫]

ಪಂದ್ಯಗಳು[ಬದಲಾಯಿಸಿ]

 • ಟಿ-೨೦ ಕ್ರಿಕೆಟ್ : ೦೩ ಪಂದ್ಯಗಳು.[೬]
 • ಐಪಿಎಲ್ ಕ್ರಿಕೆಟ್ : ೩೯ ಪಂದ್ಯಗಳು

ವಿಕೇಟ್‍ಗಳು[ಬದಲಾಯಿಸಿ]

 • ಟಿ-೨೦ ಪಂದ್ಯಗಳಲ್ಲಿ  : ೦೧
 • ಐಪಿಎಲ್ ಪಂದ್ಯಗಳಲ್ಲಿ  : ೨೮

ಅರ್ಧ ಶತಕಗಳು[ಬದಲಾಯಿಸಿ]

 • ಐಪಿಎಲ್ ಪಂದ್ಯಗಳಲ್ಲಿ  : ೦೧


ಉಲ್ಲೇಖಗಳು[ಬದಲಾಯಿಸಿ]

 1. https://www.news18.com/cricketnext/profile/krunal-pandya/63788.html
 2. https://www.cricbuzz.com/profiles/11311/krunal-pandya
 3. http://stats.espncricinfo.com/ci/engine/records/averages/batting_bowling_by_team.html?id=11523;team=1610;type=tournament
 4. https://www.cricbuzz.com/live-cricket-scorecard/16397/mumbai-indians-vs-gujarat-lions-9th-match-indian-premier-league-2016
 5. https://www.cricbuzz.com/live-cricket-scorecard/21253/india-vs-windies-1st-t20i-windies-tour-of-india-2018
 6. http://www.espncricinfo.com/india/content/player/471342.html