ಕುಲದೀಪ್ ನಯ್ಯರ್
ಕುಲದೀಪ್ ನಯ್ಯರ್ | |
---|---|
ಜನನ | |
ಮರಣ | ೨೩ ಆಗಸ್ಟ್ ೨೦೧೮ |
ರಾಷ್ಟ್ರೀಯತೆ | ಭಾರತೀಯ |
ವಿದ್ಯಾಭ್ಯಾಸ | ಮೆಡಿಲ್ ಸ್ಕೂಲ್ ಆಫ್ ಜರ್ನಲಿಸಂ |
ವೃತ್ತಿ(ಗಳು) | ಪತ್ರಕರ್ತ, ಲೇಖಕ, ಅಂಕಣಕಾರ, ವಿಮರ್ಶಕ |
ಜಾಲತಾಣ | http://www.kuldipnayar.com/ |
ಕುಲದೀಪ ನಯ್ಯರ್ (೧೪ ಆಗಸ್ಟ್ ೧೯೨೩ - ೨೩ ಆಗಸ್ಟ್ ೨೦೧೮) ಅವರು ಭಾರತದ ಹಿರಿಯ ಪತ್ರಕರ್ತರು, ಪತ್ರಿಕಾ ಅಂಕಣಕಾರರು, ಮಾನವಹಕ್ಕು ಕಾರ್ಯಕರ್ತರು ಮತ್ತು ಲೇಖಕರು. ಅವರು ತಮ್ಮ ಎಡಪಂಥೀಯ ವಿಚಾರಧಾರೆಯ ರಾಜಕೀಯ ವಿಮರ್ಶೆಗಳಿಂದ ಪ್ರಸಿದ್ಧರಾದವರು. ೧೯೯೭ರಲ್ಲಿ ಭಾರತದ ರಾಜ್ಯಸಭೆ ಸದಸ್ಯರಾಗಿ ನಾಮಾಂಕಿತಗೊಂಡಿದ್ದವರು.
ಮೊದಲಿನ ಜೀವನ ಮತ್ತು ಶಿಕ್ಷಣ
[ಬದಲಾಯಿಸಿ]ನಯ್ಯರ್ ಅವರು ಬ್ರಿಟಿಷ್ ಇಂಡಿಯಾದಲ್ಲಿದ್ದ ಪಂಜಾಬ್ ಪ್ರಾಂತ್ಯದ ಸಿಯಾಲ್‍ಕೋಟ್ ಎಂಬ ಊರಿನಲ್ಲಿ ೧೪ ಆಗಸ್ಟ್ ೧೯೨೩ರಂದು ಹುಟ್ಟಿದರು. ತಂದೆ ಗುರುಭಕ್ಷ್ ಸಿಂಗ್, ತಾಯಿ ಪೂರನ್ ದೇವಿ. ಅವರು ಲಾಹೋರ್ನ ಫೋರ್ಮನ್ ಕ್ರಿಶ್ಚಿಯನ್ ಕಾಲೇಜಿನಲ್ಲಿ ಬಿ.ಎ.(ಆನರ್ಸ್) ಮತ್ತು ಕಾನೂನು ಕಾಲೇಜಿನಲ್ಲಿ ಎಲ್.ಎಲ್.ಬಿ. ಪದವಿ ಪಡೆದರು.[೧] ೧೯೫೩ರಲ್ಲಿ ವಿದ್ಯಾರ್ಥಿ ವೇತನ ಪಡೆದು ನಾರ್ತ್‍ವೆಸ್ಟ್ ವಿಶ್ವವಿದ್ಯಾನಿಲಯದ ಮೆಡಿಲ್ ಸ್ಕೂಲ್ ಆಫ್ ಜರ್ನಲಿಸಂನಲ್ಲಿ ಜರ್ನಲಿಸಂ ಅಧ್ಯಯನ ಮಾಡಿದರು.[೨][೩]
ವೃತ್ತಿ ಜೀವನ
[ಬದಲಾಯಿಸಿ]- ನಯ್ಯರ್ ಅವರು ಉರ್ದು ಪತ್ರಿಕಾ ವರದಿಗಾರರಾಗಿ ಭಾರತದ ತುರ್ತು ಪರಿಸ್ಥಿತಿಯ (೧೯೭೫-೭೭) ಕೊನೆಯಲ್ಲಿ ಬಂಧನಕ್ಕೊಳಗಾಗಿದ್ದರು.[೪] ಅವರೊಬ್ಬ ಮಾನವಹಕ್ಕುಗಳ ಕಾರ್ಯಕರ್ತ ಹಾಗೂ ಶಾಂತಿವಾದಿ ಕಾರ್ಯಕರ್ತ. ೧೯೯೬ರಲ್ಲಿ ಸಂಯುಕ್ತ ರಾಷ್ಟ್ರ ಸಂಸ್ಥೆಯಲ್ಲಿ ಭಾರತ ನಿಯೋಗದ ಸದಸ್ಯರಾಗಿದ್ದರು.[೪] ೧೯೯೦ರಲ್ಲಿ ಗ್ರೇಟ್ ಬ್ರಿಟನ್ ದೇಶಕ್ಕೆ ಹೈ ಕಮಿಶನರ್ ಆಗಿ ನೇಮಕಗೊಂಡಿದ್ದರು.
- ೧೯೯೭ರಲ್ಲಿ ಭಾರತದ ರಾಜ್ಯಸಭೆ ಸದಸ್ಯರಾಗಿ ನಾಮಾಂಕಿತಗೊಂಡಿದ್ದರು.[೪] ಅವರ ಅಂಕಣಗಳು ೧೪ ಭಾಷೆಗಳ ಸುಮಾರು ೮೦ ಪತ್ರಿಕೆಗಳಲ್ಲಿ ಪ್ರಕಟಗೊಳ್ಳುತ್ತವೆ.[೪] ಅದರಲ್ಲಿ ಯುನೈಟೆಡ್ ಕಿಂಗ್‍ಡಂನ ಡೈಲಿ ಸ್ಟಾರ್, ಸಂಡೇ ಗಾರ್ಡಿಯನ್[೫], ಭಾರತದ ದ ಸ್ಟೇಟ್ಸ್ ಮನ್[೬] , ಪಾಕಿಸ್ತಾನದ ದ ನ್ಯೂಸ್[೭], ಎಕ್ಸ್ ಪ್ರೆಸ್ ಟ್ರಿಬ್ಯೂನ್[೮] , ಡಾನ್[೯] ಪತ್ರಿಕೆಗಳು ಸೇರಿವೆ.
ಶಾಂತಿವಾದಿ ಕಾರ್ಯಕರ್ತರಾಗಿ
[ಬದಲಾಯಿಸಿ]- ೨೦೦೦ ಇಸವಿಯಿಂದ ಪ್ರತಿವರ್ಷ ಅವರು ಪಾಕಿಸ್ತಾನ ಮತ್ತು ಭಾರತಗಳ ಸ್ವಾತಂತ್ರ್ಯದಿನಗಳಂದು (೧೪ ಮತ್ತು ೧೫ ಆಗಸ್ಟ್) ಅಮೃತಸರ ಸಮೀಪದ ವಾಘಾ ಗಡಿಯಲ್ಲಿ ಮೊಂಬತ್ತಿ ಬೆಳಗಿಸುವ ಕೆಲಸಕ್ಕೆ ಶಾಂತಿವಾದಿ ಕಾರ್ಯಕರ್ತರ ನೇತೃತ್ವ ವಹಿಸುತ್ತಿದ್ದಾರೆ.[೧೦]
- ಶಿಕ್ಷೆಯ ಅವಧಿ ಮುಗಿದನಂತರವೂ ಬಿಡುಗಡೆಯಾಗದೇ ಭಾರತದ ಜೈಲುಗಳಲ್ಲಿರುವ ಪಾಕಿಸ್ತಾನದ ಮತ್ತು ಪಾಕಿಸ್ತಾನದ ಜೈಲುಗಳಲ್ಲಿರುವ ಭಾರತದ ಖೈದಿಗಳ ಬಿಡುಗಡೆಗೋಸ್ಕರ ಅವರು ಕೆಲಸ ಮಾಡುತ್ತಿದ್ದಾರೆ.[೧೧]
ರಾಜಕೀಯ ವಿಮರ್ಶಕರಾಗಿ
[ಬದಲಾಯಿಸಿ]- ರಾಜಕೀಯ ವಿಮರ್ಶಕರಾಗಿ ಅವರು ಹೆಚ್ಚಾಗಿ ಮುಕ್ತವಾಗಿ ಪ್ರಚಲಿತ ರಾಜಕೀಯ ವಿದ್ಯಮಾನಗಳ ಕುರಿತಾಗಿ ಬರೆಯುತ್ತಾರೆ.[೧೨] ಅವರು ಅಣ್ಣಾ ಹಜಾರೆಯವರ ಚಳುವಳಿಯನ್ನು ಬೆಂಬಲಿಸಿದ್ದರು.[೪]
- ೧೯೭೧ರಲ್ಲಿ ಬಾಂಗ್ಲಾದೇಶದ (ಮೊದಲಿನ ಪೂರ್ವಪಾಕಿಸ್ತಾನ) ರಚನೆಯ ಸಂದರ್ಭದಲ್ಲಿ ಪಾಕಿಸ್ತಾನದ ಮಿಲಿಟರಿ ದೌರ್ಜನ್ಯದ ಕುರಿತಾಗಿ ಪಾಕಿಸ್ತಾನ ಸರಕಾರ ಯಾವುದೇ ವಿಷಾದ ವ್ಯಕ್ತಪಡಿಸದೇ ಇರುವುದನ್ನು[೧೩] ಮತ್ತು ಭಾರತದೊಳಕ್ಕೆ ಡ್ರಗ್ಸ್ ಕಳ್ಳಸಾಗಣೆ ಮಾಡಲು ಬಿಟ್ಟದ್ದಕಾಗಿ ಪಾಕಿಸ್ತಾನ ಸರಕಾರಕ್ಕೆ ಛೀಮಾರಿ ಹಾಕಿದ್ದರು.[೧೪]
ಲೇಖಕರಾಗಿ
[ಬದಲಾಯಿಸಿ]ನಯ್ಯರ್ ಅವರು ಇಂಗ್ಲೀಷ್ ಭಾಷೆಯಲ್ಲಿ ೧೫ ಪುಸ್ತಕಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಕೆಲವೆಂದರೆ "Beyond the Lines”, "Distant Neighbours: A Tale of the Subcontinent”, "India after Nehru", "Wall at Wagah, India-Pakistan Relationship", "The Judgement", "The Martyr","Scoop" ಮತ್ತು "India House".
- Nayar, Kuldip (1969). Beyond the lines. Allied Publishers. ASIN B0000E9UCO.
- Nayar, Kuldip (1971). India – The Critical years. Vikas Publications. ASIN B0006BZSPA.
- Nayar, Kuldip (1972). Distant Neighbours – A tale of the subcontinent. Vikas Publishing House Pvt Ltd. ISBN 978-0-7069-0194-8.
- Nayar, Kuldip (1974). Suppression of judges. Indian Book Co.
- Nayar, Kuldip (1975). India After Nehru. Vikas Publications. ISBN 978-0-7069-0366-9.
- Nayar, Kuldip (1977). The Judgment:Inside story of the emergency in India. Vikas Publishing House. ASIN B0000D5MPX.
- Nayar, Kuldip (1978). In Jail. Vikas Publishing House Pvt Ltd. ISBN 978-0-7069-0647-9.
- Nayar, Kuldip (1980). Report on Afghanistan. Allied Publishers Ltd. ISBN 978-0-86186-503-1.
- Nayar, Kuldip; Singh, Khushwant (1985). Tragedy of Punjab: Operation Bluestar & After. South Asia Books. ISBN 978-0-8364-1248-2.
- Nayar, Kuldip (1992). India House. Viking. ISBN 978-0-670-84432-6.
- Nayar, Kuldip (2000). The Martyr : Bhagat Singh Experiments in Revolution. Har Anand Publications. ISBN 978-81-241-0700-3.
- Nayar, Kuldip (2003). Wall at Wagah – India Pakistan Relations. Gyan Publishing House. ISBN 978-81-212-0829-1.
- Nayar, Kuldip (2006). Scoop! : Inside Stories from Partition to the Present. HarperCollins. ISBN 978-81-7223-643-4.
- Nayar, Kuldip (2007). Without Fear: The Life and Trial of Bhagat Singh. HarperCollins India. ISBN 978-81-7223-692-2.
- Nayar, Kuldip; Noorani, Asif; Page, David (2008). Tales of two cities. Lotus Roli. ISBN 978-81-7436-676-4.
- India: The Critical Years ಎಂಬ ಪುಸ್ತಕದಲ್ಲಿ ಕೆಲವು ಸೂಕ್ಷ್ಮ ರಾಜಕೀಯ ವಿಚಾರಗಳನ್ನು ಉಲ್ಲೇಖಿಸಿದ್ದು ಕೆಲವು ರಾಜಕಾರಣಿಗಳ ಅಸಮಾಧಾನಕ್ಕೆ ಕಾರಣವಾಯಿತು. ಅವರು ಹೆಚ್ಚಾಗಿ ಪ್ರಚಲಿತ ವಿದ್ಯಮಾನಗಳು ಹಾಗೂ ಇತಿಹಾಸದ ವ್ಯಕ್ತಿಗಳ (ಜವಾಹರಲಾಲ್ ನೆಹರು, ಡೇನಿಯಲ್ ಸ್ಮಿತ್ ಮತ್ತು Barry Manilow ಸೇರಿದಂತೆ) ಕುರಿತಾಗಿ ಬರೆದಿದ್ದಾರೆ. ನೆರೆಯ ಪಾಕಿಸ್ತಾನದೊಡನೆ ದ್ವಿಪಕ್ಷೀಯ ಮಾತುಕತೆಯ ನೀತಿಯಲ್ಲಿ ವಕಾಲತ್ತು ವಹಿಸಿದ್ದರು.
- ಭಾರತ ಮತ್ತು ಪಾಕಿಸ್ತಾನದ ಸ್ನೇಹವನ್ನೊಳಗೊಂಡ ದಕ್ಷಿಣ ಏಷಿಯಾದ ಬಗೆಗಿನ ಅವರ ದೃಷ್ಟಿಕೋನ ಗುರುತರವಾದುದಾಗಿದೆ.[೧೫] "Beyond the Lines." ಎನ್ನುವುದು ಅವರ ಆತ್ಮಚರಿತ್ರೆ. ಜುಲೈ ೨೦೧೨ರಲ್ಲಿ ಬಿಡುಗಡೆಯಾಯಿತು.
ಕನ್ನಡದಲ್ಲಿ ನಯ್ಯರ್
[ಬದಲಾಯಿಸಿ]- ನವಕರ್ನಾಟಕ ಪ್ರಕಾಶನ ಅವರ ಆತ್ಮಚರಿತ್ರೆಯನ್ನು ಒಂದು ಜೀವನ ಸಾಲದು! ಎಂಬ ಹೆಸರಿನಲ್ಲಿ ಪ್ರಕಟಿಸಿದೆ. ಡಾ. ಆರ್. ಪೂರ್ಣಿಮಾ ಇದನ್ನು ಅನುವಾದಿಸಿದ್ದಾರೆ.
- ಪ್ರಜಾವಾಣಿ ಪತ್ರಿಕೆಯಲ್ಲಿ ನಯ್ಯರ್ ಅವರ ಅಂಕಣ ಹಲವು ವರ್ಷಗಳ ಕಾಲ ಪ್ರಕಟವಾಗಿದೆ. (ಅನುವಾದಿತ)
ಅವರ ಬಗ್ಗೆ ಟೀಕೆಗಳು
[ಬದಲಾಯಿಸಿ]ಅವರು ಭಾರತ ವಿರೋಧೀ ಪಿತೂರಿಯ ವಿಚಾರಗಳನ್ನು ಬೆಂಬಲಿಸಿದರೆಂಬ ಆರೋಪಕ್ಕೆ ಗುರಿಯಾಗಿದ್ದಾರೆ.[೩] ಫೆಬ್ರವರಿ ೨೦೧೦ರಲ್ಲಿ ಪಾಕಿಸ್ತಾನದ ಡಾನ್ ಪತ್ರಿಕೆಯ ತಮ್ಮ ಅಂಕಣದಲ್ಲಿ ಭಾರತದ ಉಗ್ರ ನಿಗ್ರಹ ಪಡೆಯ ಮುಖ್ಯಸ್ಥರಾಗಿದ್ದ ಹೇಮಂತ್ ಕರ್ಕರೆಯವರನ್ನು ಹಿಂದೂ ಬಲಪಂಥೀಯ ಕಾರ್ಯಕರ್ತರು ಕೊಲೆ ಮಾಡಿದರು ಎಂಬ ಆರೋಪ ಮಾಡಿದ್ದರು.[೧೬] ಪಾಕಿಸ್ತಾನದ ಐಎಸ್ಐ ಹಣಕಾಸು ಬೆಂಬಲದಲ್ಲಿ ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಸೈಯದ್ ಗುಲಾಬ್ ನಬಿ ಫಾಯಿ ಆಯೋಜಿಸಿದ ಹಲವಾರು ಕಾರ್ಯಕ್ರಮಗಳಲ್ಲಿ ಕುಲದೀಪ್ ನಯ್ಯರ್ ಪಾಲ್ಗೊಂಡಿದ್ದರು ಎಂಬುದನ್ನು ಜುಲೈ ೨೦೧೧ರಲ್ಲಿ ಅಮೆರಿಕ ಸಂಯುಕ್ತ ಸಂಸ್ಥಾನದ ಅಧಿಕಾರಿಗಳು ಖಚಿತಪಡಿಸಿದರು.[೧೭]
೧೯೮೭ರ ಡಾ ಅಬ್ದುಲ್ ಖಾದಿರ್ ಖಾನ್ ಸಂದರ್ಶನ
[ಬದಲಾಯಿಸಿ]- ಕುಲ್ದೀಪ್ ನಯ್ಯರ್ ೧೯೮೭ರಲ್ಲಿ ಪಾಕಿಸ್ತಾನದ ಪರಮಾಣು ವಿಜ್ಞಾನಿ ಡಾ ಅಬ್ದುಲ್ ಖಾದಿರ್ ಖಾನ್ ರನ್ನು ದಿ ಅಬ್ಸರ್ವರ್ ಪತ್ರಿಕೆಗಾಗಿ ಸಂದರ್ಶನ ಮಾಡಿದರು. ಈ ಸಂದರ್ಶನವು, ಜನರಲ್ ಜಿಯಾ ಉಲ್ ಹಖ್ ಪಾಕಿಸ್ತಾನದ ಪರಮಾಣು ಬಾಂಬ್ ಬಗ್ಗೆ ಹುಸಿವರದಿಯನ್ನು ಹಬ್ಬಿಸಲು ಮತ್ತು ಭಾರತ ಸೇನೆಯ ಆಪರೇಷನ್ ಬ್ರಾಸ್ ಟಾಕ್ಸ್ ಅನ್ನು ವಿಫಲಗೊಳಿಸಲು ನಡೆಸಿದ ಕುತಂತ್ರವಾಗಿತ್ತು ಎಂಬುದು ಒಂದು ವಾದ.[೧೮] ಕುಲ್ದೀಪ್ ಪಾಕಿಸ್ತಾನದ ಪರಮಾಣು ಆಯೋಗದ ಅಧ್ಯಕ್ಷ ಮುನೀರ್ ಅಹ್ಮದ್ ಖಾನರ ವಾಲಿಮಾ(ಇಸ್ಲಾಂ ಮದುವೆಯ ಆರತಕ್ಷತೆ) ಸಮಾರಂಭಕ್ಕೆ ತೆರಳಿದಾಗ, ಮುನೀರ್ ಅಹ್ಮದ್ ಉಡುಗೊರೆಯ ರೂಪದಲ್ಲಿ, ಕುಲ್ದೀಪ್ ರಿಗೆ ಅಬ್ದುಲ್ ಖಾದಿರ್ ಖಾನ್ ರ ಸಂದರ್ಶನ ಏರ್ಪಾಡು ಮಾಡಿದ್ದರು ಎಂಬುದು ಕುಲ್ದೀಪ್ ವಾದ. ಆದರೆ, ಪರಮಾಣು ಬಾಂಬ್ ಬಗ್ಗೆ ಕ್ಷುಲ್ಲಕ ಕಾರಣಕ್ಕೆ ಉನ್ನತ ವಿಙ್ಞಾನಿಯ ಸಂದರ್ಶನ ಸಿಗುವುದು ಹೇಗೆ ಸಾಧ್ಯ ಎಂಬುದು ಟೀಕಾಕಾರರ ವಾದ.
- ಡಾ ಅಬ್ದುಲ್ ಖಾದಿರ್ ಖಾನ್ ಪಾಕಿಸ್ತಾನದ ಬಳಿ ಪರಮಾಣು ಬಾಂಬ್ ಇದೆಯೆಂದೂ, ಭಾರತದ ಮೇಲೆ ಅದನ್ನು ಪ್ರಯೋಗಿಸಲು ಹಿಂಜರಿಯುವುದಿಲ್ಲವೆಂದೂ ಆ ಸಂದರ್ಶನದಲ್ಲಿ ಬೆದರಿಕೆ ಹಾಕಿದ್ದರು.[೧೯]. ತಿಳಿದೋ, ತಿಳಿಯದೆಯೋ ಕುಲ್ದೀಪ್ ನಯ್ಯರ್ ನಡೆಸಿದ ಸಂದರ್ಶನದ ಮೂಲಕ, ಭಾರತದ ಮನೋಬಲವನ್ನು ಕುಗ್ಗಿಸುವ ಯತ್ನಕ್ಕೆ ಕೈಜೋಡಿಸಿದ್ದರು ಎಂಬ ವದಂತಿ ಹಬ್ಬಿತು. ಇದರಿಂದ ಕುಲ್ದೀಪ್ ಬಹಳ ನೊಂದುಕೊಂಡಿದ್ದರು. ೧೯೭೯ರಲ್ಲಿ ಶ್ಯಾಂ ಭಾಟಿಯಾರ ಸಂದರ್ಶನದಲ್ಲಿ ಕೂಡಾ ಡಾ ಅಬ್ದುಲ್ ಖಾದಿರ್ ಖಾನ್ ಇದೇ ರೀತಿ ಪಾಕಿಸ್ತಾನದ ಪರಮಾಣು ಬಾಂಬ್ ಬಗ್ಗೆ ಹುಸಿವರದಿಯನ್ನು ಹಬ್ಬಿಸಲು ಯತ್ನಿಸಿದಾಗ ಶ್ಯಾಂ ಭಾಟಿಯಾ ಖಾನ್ ರನ್ನು ತರಾಟೆಗೆ ತೆಗೆದುಕೊಂಡಿದ್ದರು[೨೦]
- ತಮ್ಮ ಆತ್ಮಚರಿತ್ರೆಯಲ್ಲಿ[೨೧] ಕುಲ್ದೀಪ್ ಪಾಕಿಸ್ತಾನದ ಪರಮಾಣು ವಿಜ್ಞಾನಿ ಡಾ ಅಬ್ದುಲ್ ಖಾದಿರ್ ಖಾನ್‍ರ ಸಂದರ್ಶನ ಗಿಟ್ಟಿಸಲು ತಾವು ವದಂತಿಯೊಂದನ್ನು ಹಬ್ಬಿಸಿದ್ದಾಗಿ ಬರೆದಿದ್ದಾರೆ. ಭಾರತ ಪರಮಾಣು ಆಯೋಗದ ಅಧ್ಯಕ್ಷ ಹೆಚ್ ಎನ್ ಸೇಥ್ನಾ ಕುಲ್ದೀಪ್ ರನ್ನು ಉದ್ದೇಶಿಸಿ, ಪರಮಾಣು ಬಾಂಬ್ ತಯಾರಿಸಲು ಜನ-ಹಣ (ಪ್ರಾವೀಣ್ಯತೆ ಪಡೆದ ತಙ್ಞರು, ಸಂಶೋಧನೆಗೆ ವಿಫುಲ ಹಣ) ಎರಡೂ ಇಲ್ಲದ ಪಾಕಿಸ್ತಾನದ ಬಗ್ಗೆ ಏಕೆ ತಲೆ ಕೆಡಿಸಿಕೊಳ್ಳುವಿರಿ ಎಂದು ಹೀಗಳೆದದ್ದನ್ನು ಖಾನ್ ರಿಗೆ ಹೇಳಿ, ಅವರಿಂದ ಸ್ಕೂಪ್ ಪಡೆಯಲು ಯತ್ನಿಸಿದ್ದಾಗಿ ಕುಲ್ದೀಪ್ ವಿವರಿಸಿದ್ದಾರೆ.
ಪ್ರಶಸ್ತಿಗಳು
[ಬದಲಾಯಿಸಿ]- ೧೯೯೯ರಲ್ಲಿ ನಾರ್ತ್‍ವೆಸ್ಟ್ ವಿಶ್ವವಿದ್ಯಾನಿಲಯದಿಂದ ಅಲ್ಯುಮ್ನಿ ಮೆರಿಟ್ (Alumni Merit Award) ಪ್ರಶಸ್ತಿ.
- ೨೦೦೩: ಪತ್ರಿಕಾ ಸ್ವಾತಂತ್ರ್ಯಕ್ಕಾಗಿ Astor Award[೨೨]
- ೨೦೦೭: ಜೀವಮಾನದ ಸಾಧನೆಗಾಗಿ 'ಶಹೀದ್ ನಿಯೋಗಿ ಸ್ಮಾರಕ' ಪ್ರಶಸ್ತಿ[೨೩]
ನಿಧನ
[ಬದಲಾಯಿಸಿ]ನಯ್ಯರ್ ಅವರು ೨೩ಆಗಸ್ಟ್ ೨೦೧೮ರಂದು ದೆಹಲಿಯ ತಮ್ಮ ಮನೆಯಲ್ಲಿ ನಿಧನರಾದರು. ಅವರಿಗೆ ೯೫ ವರ್ಷ ವಯಸ್ಸಾಗಿತ್ತು.[೨೪]
ಉಲ್ಲೇಖಗಳು
[ಬದಲಾಯಿಸಿ]- ↑ pakistanherald. com/ Profile/Kuldip-Nayyer-761 "Kuldip Nayyer". Herald (Pakistan). Retrieved 14 January 2012.
{{cite news}}
: Check|url=
value (help) - ↑ "Hall of Achieve ment: Kuldip Nayar". Archived from the original on 14 ಆಗಸ್ಟ್ 2011. Retrieved 14 January 2012.
- ↑ ೩.೦ ೩.೧ "Nayar". Archived from the original on 25 ಜನವರಿ 2012. Retrieved 14 January 2012.
- ↑ ೪.೦ ೪.೧ ೪.೨ ೪.೩ ೪.೪ [http:// www.dnaindia.com/mumbai/report_governments-to-be-blamed-for-indo-pak-animosity-kuldip-nayar_1571367 "Governments to be blamed for Indo-Pak animosity: Kuldip Nayar"]. Daily News and Analysis. India. 31 July 2011. Retrieved 13 January 2012.
{{cite news}}
: Check|url=
value (help) - ↑ Nayar, Kuldip. "LEADERS & MISLEADERS". The Guardian. Archived from the original on 11 ಜನವರಿ 2012. Retrieved 13 January 2012.
- ↑ {{url = http://www.thestatesman.com/news/opinion/geeta-should-have-opened-more-doors/100000.html /TodaysPrintWriterName.aspx?URL=Kuldip%20Nayar | work = The News International | accessdate =13 January 2012}}
- ↑ Nayar, Kuldip. "All stories / articles Kuldip Nayar".
- ↑ Nayar, Kuldip. "Stories by Kuldip Nayar". The Express Tribune. Retrieved 13 January 2012.
- ↑ Nayar, Kuldip. "Posts by Kuldip Nayar". Dawn (newspaper). Archived from the original on 2 ಜನವರಿ 2012. Retrieved 13 January 2012.
- ↑ "Who Has The Matches?". Outlook (India). 30 Aug 2010. Retrieved 13 January 2012.
- ↑ Vij, Shivam (11 January 2012). "Why is Gopal Das free and not Khalil Chishty?". The News International. Archived from the original on 11 ಜನವರಿ 2012. Retrieved 13 January 2012.
- ↑ Outlook Publishing (28 January 2008). Outlook. Outlook Publishing. p. 30. Archived from [http: //books. google.com/books?id=WzEEAAAAMBAJ&pg=PT30 the original] on 31 ಜುಲೈ 2013. Retrieved 14 January 2012.
{{cite book}}
: Check|url=
value (help) - ↑ Nayar, Kuldip (20 December 2011). "The birth of Bangladesh". The Express Tribune. Retrieved 13 January 2012.
- ↑ "Pakistan pushing drugs into Punjab: Kuldip Nayar". Sify. 12 January 2012. Retrieved 13 January 2012.
- ↑ "India, Pakistan press rue Kashmir deadlock". BBC. 7 September 2004. Retrieved 14 January 2012.
- ↑ Nayar, Kuldip (19 February 2010). "Politics of terrorism". Dawn (newspaper). Retrieved 14 January 2012.
- ↑ L'affaire Fai: US lawmakers, Indian liberals come under scrutiny Archived 2012-09-13 ವೇಬ್ಯಾಕ್ ಮೆಷಿನ್ ನಲ್ಲಿ. Times of India – 20 July 2011
- ↑ http://carnegieendowment.org/2013/11/14/nuclearsignaling-in-south-asia-revisiting-a.-q.-khan-s-1987-threat-pub-53328
- ↑ https://bharatkarnad[ಶಾಶ್ವತವಾಗಿ ಮಡಿದ ಕೊಂಡಿ]. com/2017/01/25/ababeel-its-intent-hanois-response-to-indian-promises/
- ↑ http://www.rediff.com/news/2004/jan/05spec.htm
- ↑ http://www.amazon.com/Beyond-The-Lines-An-Autobiography-ebook/dp/B008OSHY40
- ↑ "Award for Kuldip Nayar". The Hindu. 2003-03-01. Archived from the original on 2013-01-26. Retrieved 2012-09-29.
- ↑ "Kuldip Nayar presented lifetime achievement award". The Hindu. 2007-09-10. Archived from the original on 2007-09-16. Retrieved 2012-09-29.
- ↑ ಹಿರಿಯ ಪತ್ರಕರ್ತ ನಯ್ಯರ್ ನಿಧನ, ಪ್ರಜಾವಾಣಿ ವಾರ್ತೆ, ೨೩ಆಗಸ್ಟ್೨೦೧೮
ಹೊರಕೊಂಡಿಗಳು
[ಬದಲಾಯಿಸಿ]- CS1 errors: URL
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಎಲ್ಲಾ ಲೇಖನಗಳು
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಲೇಖನಗಳು from ಆಗಸ್ಟ್ 2021
- ಶಾಶ್ವತವಾಗಿ ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಎಲ್ಲಾ ಲೇಖನಗಳು
- Pages using infobox person with unknown parameters
- Articles with hCards
- ಪತ್ರಕರ್ತರು
- ಲೇಖಕರು
- ವಿಮರ್ಶಕರು
- ಅಂಕಣಕಾರರು
- ರಾಜ್ಯಸಭೆ ಸದಸ್ಯರು
- ರಾಯಭಾರಿಗಳು
- ೧೯೨೩ ಜನನ
- ೨೦೧೮ ನಿಧನ
- Pages using ISBN magic links