ವಿಷಯಕ್ಕೆ ಹೋಗು

ಕುರುಗೋಡ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕುರುಗೋಡ
ಕುರುಗೋಡು
Taluk

ಕುರುಗೋಡು ೨೦೧೮ನೇ ಇಸವಿಯಲ್ಲಿ ಹೊಸದಾಗಿ ಘೋಷಣೆಯಾದ ತಾಲೂಕು ಹಾಗೂ ಪುಣ್ಯಕ್ಷೇತ್ರ. ಇದು ಕರ್ನಾಟಕ ರಾಜ್ಯದ ಬಳ್ಳಾರಿ ಜಿಲ್ಲೆಯಲ್ಲಿದೆ.

[ಬದಲಾಯಿಸಿ]

ಇತಿಹಾಸ

[ಬದಲಾಯಿಸಿ]

ಸೋಮಲಾಪುರ ಗ್ರಾಮದ ಇತಿಹಾಸ

[ಬದಲಾಯಿಸಿ]

ನಮ್ಮ ಕರ್ನಾಟಕದಲ್ಲಿ 31 ಜಿಲ್ಲೆಗಳು ಪ್ರತಿಯೊಂದು ಜಿಲ್ಲೆಗಳು ಪ್ರಸಿದ್ಧಿಯಾಗಿ ಕಾಣಿಸಿಕೊಂಡಿದ್ದಾವೆ  ಇವುಗಳಲ್ಲಿ ನಮ್ಮ ಬಳ್ಳಾರಿ ಜಿಲ್ಲೆಯ  ಕುರುಗೋಡು ತಾಲೂಕಿನ ಕೆರೆಕೆರೆ  ಸೋಮಲಾಪುರ ಗ್ರಾಮದಲ್ಲಿ 61 ವರ್ಷಗಳ ಹಿಂದೆ  ಹಳೆ ಊರು ಎಂಬ ನಗರವಿತ್ತು  ಆ ನಗರದ ಆಗಿನ ಕಾಲದ ಜನರು 61 ವರ್ಷಗಳ ಹಿಂದೆ ಸೋಮಲಾಪುರದ ಜನರು ಆದರೆ ಈಗಿನ ಸೋಮಲಾಪುರನೆ ಹಳೆ ಊರಿನ ಸೋಮಲಾಪುರವಾಗಿತ್ತು ಆ ಸಮಯದಲ್ಲಿ ಆ ನಗರದ ಪಕ್ಕದಲ್ಲಿ ತುಂಗಾಭದ್ರಾ RBLLC ಕಾಲ್ವೆ ನಿರ್ಮಾಣವಾಗಿತ್ತು ಜಲಾಶಯದಿಂದ  ಹರಿದು ಬರುತ್ತಿದ್ದ ಊರಿನ ಪಕ್ಕದಲ್ಲಿ ಒಂದು ಕಾಲುವೆ  ಇತ್ತು  ಆ ಕಾಲ್ವೆ ಹೆಸರು ಆರ್ ಬಿ ಎಲ್ ಸಿ ಕಾಲ್ವೆ ಎಂದು ಹಳೆ ಊರಿನ ಸೋಮಲಾಪುರದ ಜನರು  ಕರೆಯುತ್ತಿದ್ದರು  ಕಾಲುವೆ ನಿರ್ಮಾಣವಾದಾಗ  ಕಾಲುವೆ ಸುತ್ತಲೂ ಅಂಶ ಹೆಚ್ಚಾಗುತ್ತಿತ್ತು  ಎಂದರೆ   ( ಸೋಮ್ಮು ) ಹೆಚ್ಚಾಗುತ್ತಿತ್ತು  ನೀರಿನ ಸಮ್ಮು ಹೆಚ್ಚಾಗುತ್ತಿರುವ ಕಾರಣದಿಂದ  ಆ ಊರಿನ ಜನರಿಗೆ ವಾಸ ಮಾಡಲು ತುಂಬಾ ಕಷ್ಟವಾಗುತ್ತಿತ್ತು   ಹಳೆ ಊರಿನ ಗ್ರಾಮಸ್ಥರಿಗೆ  ಅಲ್ಲಿನ ಗ್ರಾಮಸ್ಥರಿಗೆ ಜೀವನ ಮಾಡಲು ಕಷ್ಟವಾದಗ, ಆ ಜಾಗವನ್ನು ಬಿಟ್ಟು  ಆ ಊರಿನ ಎಲ್ಲಾ ಜನರು ಬೇರೆ ಕಡೆ ಸ್ಥಳಾಂತರ ಮಾಡಲಾಯಿತು  ಅದೇ ಈಗಿರುವ ಕೆರೆಕೆರೆ ಸೋಮಲಾಪುರ..

  • ಹಳೆ ಊರಿನ ಆಂಜನೇಯ ಸ್ವಾಮಿಯ ವಿಗ್ರಹದ ನಿರ್ಮಾಣ ಬಗ್ಗೆ ಸ್ವಲ್ಪ ತಿಳಿದುಕೊಳ್ಳೋಣ

ಆಗಿನ   ಸೋಮಲಾಪುರದ ಜನರು 61 ವರ್ಷಗಳ ಹಿಂದೆ  ಮತ್ತು ಐದು  ದಸಕಗಳ ಹಿಂದೆ ಆ ಸೋಮಲಾಪುರದ ಗ್ರಾಮಸ್ಥರಿಗೆ  ಒಂದು ದೊಡ್ಡ ಬಂಡೆ ಒಂದು ಕಂಡು ಬರುತ್ತದೆ  ಆ ಊರಿನ ಸ್ಥಳೀಯರು ಮೊದಲಿನೆ ಬಾರಿ ಆ ಬಂಡೆಯನ್ನು  ಒಡೆಯಲು ಹೋಗುತ್ತಾರೆ  ಬಂಡೆ ಒಡೆಯಲು ಹೋದ ಕಾರ್ಮಿಕರು ತಮ್ಮ ಆಯುಧಗಳಿಂದ  ಹೊಡೆದು ಬಂಡೆಗೆ ಎರಡು  ( ವೋಲ್ ) ಗುರುತನ್ನು ಮಾಡಿ ಮತ್ತೆ ಸ್ವಲ್ಪ  ವಿಶ್ರಾಂತಿ ಪಡೆಯಲು ಮರಳಿ  ತಮ್ಮ ಗ್ರಾಮಕ್ಕೆ ಬರುತ್ತಾರೆ  ಗ್ರಾಮಸ್ಥರು ವಿಶ್ರಾಂತಿ ಪಡೆದು  ಮತ್ತೆ ಮರಳಿ, ಆ ಬಂಡೆಯನ್ನು ಒಡೆಯಲು ಮತ್ತೆ ಹೋದರು  ಆ ಬಂಡೆಯ ಬಳಿ  ಗ್ರಾಮಸ್ಥರು ಆ ಬಂಡೆಯನ್ನು ಒಡೆಯಲು ಆ ಬಂಡೆಯ ಮುಂದೆ ಬರುತ್ತಾರೆ   ಅಲ್ಲಿ ನೋಡಿದಾಗ ಆ ಬಂಡೆಯಲ್ಲಿ   ಶ್ರೀ ರಾಮನ ಬಂಟನಾದಂಥಾಹ ಹನುಮನ ಪ್ರತಿಮೆಯೆಂದು ಆ ಬಂಡೆಯ ಮೇಲೆ ಮೂಡಿತ್ತು  ಊರಿನ ಗ್ರಾಮಸ್ಥರಿಗೆ ತಿಳಿದಿರಲಿಲ್ಲ  61 ವರ್ಷಗಳ ಹಿಂದೆ ಬಂಡೆ ಅನುಮಾನ ಮೂರ್ತಿಯಾಗಿತ್ತೆಂದು,

ಈಗಿನ ಕೆರೆಕೆರೆ ಸೋಮಲಾಪುರ ಗ್ರಾಮಸ್ಥರು  ಶ್ರೀ ರಾಮನ ಬಂಟ  ಹನುಮನನ್ನು  ಅವಾಗಿನಿಂದ ಇಲ್ಲಿಯವರೆಗೂ ಪೂಜಿಸುತ್ತಾ ಬರುತ್ತಿದ್ದಾರೆ...

ಆಗಿನ ಹಳೆ ಊರು ಈಗಿನ ಕೆರೆಕೆರೆ ಸೋಮಲಾಪುರ ಗ್ರಾಮವಾಗಿದೆ

ಭೌಗೋಳಿಕ

[ಬದಲಾಯಿಸಿ]

ಗ್ರಾಮವು ಭೌಗೋಳಿಕವಾಗಿ ೧೬* ೩೨' ೧೦"x ಉತ್ತರ ಅಕ್ಷಾಂಶ ಮತ್ತು ೭೫* ೩೧' ೧೯" ಪೂರ್ವ ರೇಖಾಂಶದಲ್ಲಿ ಬರುತ್ತದೆ.

ಹವಾಮಾನ

[ಬದಲಾಯಿಸಿ]
  • ಬೆಸಿಗೆ-ಚಳಿಗಾಲದಲ್ಲಿ ಹವಾಗುಣವು ಹಿತಕರವಾಗಿದ್ದು, ಸಾಧಾರಣ ಪ್ರಮಾಣದ ಮಳೆಯಾಗುತ್ತದೆ. ಬೇಸಿಗೆಯಲ್ಲಿ ಅತಿ ಹೆಚ್ಚು ಉಷ್ಣತೆ ಅಂದರೆ ೪೨.೭ ಡಿಗ್ರಿವರೆಗೆ(ಎಪ್ರೀಲನಲ್ಲಿ), ಅತೀ ಕಡಿಮೆ ಅಂದರೆ ೯.೫ ಡಿಗ್ರಿ ಸೆಲ್ಸಿಯಸವರೆಗೆ (ಡಿಸೆಂಬರನಲ್ಲಿ) ಉಷ್ಣತೆ ದಾಖಲಾಗಿದೆ.
  • ಬೇಸಿಗೆಕಾಲ - ೩೫°C-೪೨°C ಡಿಗ್ರಿ ಸೆಲ್ಸಿಯಸ್
  • ಚಳಿಗಾಲ ಮತ್ತು
  • ಮಳೆಗಾಲ - ೧೮°C-೨೮°C ಡಿಗ್ರಿ ಸೆಲ್ಸಿಯಸ್.
  • ಮಳೆ - ಪ್ರತಿ ವರ್ಷ ಮಳೆ ೩೦೦ - ೬೦೦ಮಿಮಿ ಗಳಸ್ಟು ಆಗಿರುತ್ತದೆ.
  • ಗಾಳಿ -ಗಾಳಿ ವೇಗ ೧೮.೨ ಕಿಮಿ/ಗಂ (ಜೂನ), ೧೯.೬ ಕಿಮಿ/ಗಂ (ಜುಲೈ)ಹಾಗೂ ೧೭.೫ ಕಿಮಿ/ಗಂ (ಅಗಸ್ಟ್) ಇರುತ್ತದೆ.

ಜನಸಂಖ್ಯೆ

[ಬದಲಾಯಿಸಿ]

ಗ್ರಾಮದಲ್ಲಿ ಜನಸಂಖ್ಯೆ ಸುಮಾರು 17,379 ಇದೆ. ಅದರಲ್ಲಿ 8,815 ಪುರುಷರು ಮತ್ತು 8,564 ಮಹಿಳೆಯರು ಇದ್ದಾರೆ.

ಸಾಂಸ್ಕೃತಿಕ

[ಬದಲಾಯಿಸಿ]

ಮುಖ್ಯ ಭಾಷೆ ಕನ್ನಡ. ಆದರೆ ವಿವಿಧ ಸಂಸ್ಕೃತಿಗಳ ಪ್ರಭಾವದಿಂದಾಗಿ ಉರ್ದು, ಮರಾಠಿ ಮತ್ತು ಹಿಂದಿ ಮಿಶ್ರಿತ ವಿಶಿಷ್ಠವಾದ ಕನ್ನಡ. ಪ್ರಮುಖ ಆಹಾರ ಧಾನ್ಯ ಜೋಳ. ಜೊತೆಗೆ ಗೋಧಿ, ಅಕ್ಕಿ,ಮೆಕ್ಕೆ ಜೋಳ ಬೇಳೆಕಾಳುಗಳು. ಜವಾರಿ ಎಂದು ಗುರುತಿಸಲ್ಪಡುವ ವಿಶೇಷ ರುಚಿಯ ಕಾಯಿಪಲ್ಯ, ಸೊಪ್ಪುಗಳು ಹೆಸರುವಾಸಿ ಮತ್ತು ಸದಾಕಾಲವೂ ಲಭ್ಯ. ಜೋಳದ ರೊಟ್ಟಿ,, ಸೇಂಗಾ ಚಟ್ನಿ,, ಎಣ್ಣಿ ಬದನೆಯಕಾಯಿ ಪಲ್ಯ,, ಕೆನೆಮೊಸರು ಕರ್ನಾಟಕದ ಮೂಲೆಮೂಲೆಗಳಲ್ಲಿ ಪ್ರಸಿದ್ಧಿ ಪಡೆದಿವೆ.

ಕಲೆ ಮತ್ತು ಸಂಸ್ಕೃತಿ

[ಬದಲಾಯಿಸಿ]
ಉತ್ತರ ಕರ್ನಾಟಕದ ಊಟ

ಅಪ್ಪಟ ಉತ್ತರ ಕರ್ನಾಟಕ ಶೈಲಿಯ ಕಲೆಯನ್ನು ಒಳಗೊಂಡಿದೆ. ಪುರುಷರು ದೋತ್ರ, ನೆಹರು ಅಂಗಿ ಮತ್ತು ರೇಷ್ಮೆ ರುಮಾಲು(ಪಟಕ) ಧರಿಸುತ್ತಾರೆ.ಮಹಿಳೆಯರು ಇಲಕಲ್ಲ ಸೀರೆ ಮತ್ತು ಖಾದಿ ಬಟ್ಟೆಗಳನ್ನು ಧರಿಸುತ್ತಾರೆ.

ಗ್ರಾಮದಲ್ಲಿ ಹಿಂದೂ ಮತ್ತು ಮುಸ್ಲಿಂ ಧರ್ಮದ ಜನರಿದ್ದಾರೆ.

ಗ್ರಾಮದ ಪ್ರಮುಖ ಭಾಷೆ ಕನ್ನಡ. ಇದರೊಂದಿಗೆ ಹಿಂದಿ ಹಾಗೂ ಮರಾಠಿ ಭಾಷೆಗಳನ್ನು ಮಾತನಾಡುತ್ತಾರೆ.

‌‌ಶ್ರೀ ಶಿವಶರಣ ಮಲ್ಲಪ್ಪ ತಾತ ದೇವಾಲಯ,ಸಿಂಧಿಗೇರಿ

  • ಶ್ರೀ ಮಹಾಲಕ್ಷ್ಮಿ ದೇವಾಲಯ
  • ಶ್ರೀ ದುರ್ಗಾದೇವಿ ದೇವಾಲಯ
  • ಶ್ರೀ ಮಲ್ಲಿಕಾರ್ಜುನ ದೇವಾಲಯ
  • ಶ್ರೀ ಬಸವೇಶ್ವರ ದೇವಾಲಯ
  • ಶ್ರೀ ವೆಂಕಟೇಶ್ವರ ದೇವಾಲಯ

ಮಸೀದಿ

[ಬದಲಾಯಿಸಿ]

ಗ್ರಾಮದಲ್ಲಿ ಮುಸ್ಲಿಂ ಸಮುದಾಯದ ದರ್ಗಾ ಹಾಗೂ ಮಸೀದಿ ಇದೆ.

ನೀರಾವರಿ

[ಬದಲಾಯಿಸಿ]

ಗ್ರಾಮದ ಪ್ರತಿಶತ 50 ಭಾಗ ಭೂಮಿ ಕಾಲುವೆ, ತೆರದ ಬಾವಿ, ಕೊಳವೆ ಬಾವಿಯಿಂದ ನೀರಾವರಿ ಇದ್ದು ಪ್ರಮುಖವಾಗಿ ಕಬ್ಬು, ಮೆಕ್ಕೆಜೋಳ, ಜೋಳ, ಉಳ್ಳಾಗಡ್ಡಿ (ಈರುಳ್ಳಿ), ನಿಂಬೆಹಣ್ಣು, ಪಪ್ಪಾಯ, ಅರಿಶಿನ, ನೆಲಕಡಲೆ, ಶೇಂಗಾ(ಕಡಲೆಕಾಯಿ), ಸೂರ್ಯಕಾಂತಿ, ದ್ರಾಕ್ಷಿ, ದಾಳಿಂಬೆ, ಗೋಧಿ ಹಾಗೂ ಇತರೆ ಬೆಳೆಗಳನ್ನು ಬೆಳೆಯುತ್ತಾರೆ.

ಕೃಷಿ ಮತ್ತು ತೋಟಗಾರಿಕೆ

[ಬದಲಾಯಿಸಿ]

ಗ್ರಾಮದ ಪ್ರಮುಖ ಉದ್ಯೋಗವೇ ಕೃಷಿ ಮತ್ತು ತೋಟಗಾರಿಕೆಯಾಗಿದೆ. ಈ ಕ್ಷೇತ್ರದಲ್ಲಿ ಸುಮಾರು ೭೫% ಜನರು ಕೆಲಸ ಮಾಡುತ್ತಾರೆ. ಗ್ರಾಮದಲ್ಲಿ ಕೇವಲ ೧೫% ಭೂಮಿ ಮಾತ್ರ ನೀರಾವರಿ ಹೊಂದಿದೆ. ಉಳಿದ ೮೫% ಭೂಮಿ ಮಳೆಯನ್ನೇ ಅವಲಂಭಿಸಿದೆ.

ಆರ್ಥಿಕತೆ

[ಬದಲಾಯಿಸಿ]

ಗ್ರಾಮದಲ್ಲಿ ಆರ್ಥಿಕ ವ್ಯವಸ್ಥೆ ಮಧ್ಯಮ ತರಗತಿಯಲ್ಲಿದೆ.

ಉದ್ಯೋಗ

[ಬದಲಾಯಿಸಿ]

ಗ್ರಾಮದಲ್ಲಿ ಫಲವತ್ತಾದ ಭೂಮಿ ಇದುವುದರಿಂದ ೭೦% ಜನಸಂಖ್ಯೆ ಕೃಷಿಯಲ್ಲಿ ನಿರತರಾಗಿದ್ದಾರೆ. ಕೃಷಿಯು ಗ್ರಾಮದ ಪ್ರಮುಖ ಉದ್ಯೋಗವಾಗಿದೆ. ಇದರೊಂದಿಗೆ ಹೈನುಗಾರಿಕೆ, ಕೋಳಿ ಸಾಕಾಣಿಕೆ, ದನಗಳ ಸಾಕಾಣಿಕೆ ಉಪ ಕಸುಬುಗಳಾಗಿವೆ.

ಆಹಾರ ಬೆಳೆಗಳು

ಜೋಳ, ಗೋಧಿ, ಮೆಕ್ಕೆಜೋಳ, ಸಜ್ಜೆ, ಕಡಲೆ, ತೊಗರಿ, ಹೆಸರು ಮತ್ತು ಕಡಲೆ ಇತ್ಯಾದಿ

ವಾಣಿಜ್ಯ ಬೆಳೆಗಳು

ದ್ರಾಕ್ಷಿ, ಕಬ್ಬು, ದಾಳಿಂಬೆ, ನಿಂಬೆ, ಮಾವು, ಬಾಳೆ, ಸೂರ್ಯಕಾಂತಿ, ಅರಿಸಿಣ, ಪಪ್ಪಾಯಿ, ಕಲ್ಲಂಗಡಿ, ಉಳ್ಳಾಗಡ್ಡಿ (ಈರುಳ್ಳಿ) ಮತ್ತು ಶೇಂಗಾ(ಕಡಲೆಕಾಯಿ) ಇತ್ಯಾದಿ.

ತರಕಾರಿ ಬೆಳೆಗಳು

ಬದನೆಕಾಯಿ, ಟೊಮ್ಯಾಟೊ, ಹೀರೇಕಾಯಿ, ನುಗ್ಗೆಕಾಯಿ, ಗೆಣಸು, ಗಜ್ಜರಿ, ಮೆಣಸಿನಕಾಯಿ, ಸೌತೆಕಾಯಿ, ಮೊಲಂಗಿ, ಅವರೆಕಾಯಿ, ಪಡವಲಕಾಯಿ, ಕುಂಬಳಕಾಯಿ, ಮೆಂತೆ ಪಲ್ಲೆ ಮತ್ತು ಕೊತಂಬರಿ ಇತ್ಯಾದಿ.

ಆಲದ ಮರ, ಬೇವಿನ ಮರ, ಜಾಲಿ ಮರ, ಹೈಬ್ರೀಡ್ ಜಾಲಿ ಮರ, ಮಾವಿನ ಮರ ಮತ್ತು ಅರಳಿ ಮರ ಇತ್ಯಾದಿ.

ಪ್ರಾಣಿ

[ಬದಲಾಯಿಸಿ]

ತೋಳ, ನರಿ, ಹಾವು, ಮೊಲ, ನವಿಲು, ಬೆಳ್ಳಕ್ಕಿ, ಗುಬ್ಬಿ, ಕಾಗೆ, ಕೋಗಿಲೆ, ಕರಡಿ ಇತ್ಯಾದಿ.

ಪ್ರತಿವರ್ಷ ಕಾರ ಹುಣ್ಣುಮೆ, ಯುಗಾದಿ, ದಸರಾ, ದೀಪಾವಳಿ, ನಾಗರ ಪಂಚಮಿ, ಉರಸು ಹಾಗೂ ಮೊಹರಮ್ ಹಬ್ಬಗಳನ್ನು ಆಚರಿಸುತ್ತಾರೆ.

ಆರೋಗ್ಯ

[ಬದಲಾಯಿಸಿ]

ತಾಲೂಕಿನಲ್ಲಿ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರವಿದೆ.

ಆರಕ್ಷಕ (ಪೋಲಿಸ್) ಠಾಣೆ

[ಬದಲಾಯಿಸಿ]

ಗ್ರಾಮದ ಪೋಲಿಸ್ ಠಾಣೆಯು ಸುತ್ತಲಿನ ಸುಮಾರು ೫೦ಕ್ಕೂ ಹೆಚ್ಚು ಹಳ್ಳಿಗಳ ವಾಪ್ತಿ ಹೊಂದಿದೆ.

ಸಾಕ್ಷರತೆ

[ಬದಲಾಯಿಸಿ]

ಗ್ರಾಮದ ಸಾಕ್ಷರತೆಯ ಪ್ರಮಾಣ ಸುಮಾರು ೬೭%. ಅದರಲ್ಲಿ ೭೫% ಪುರುಷರು ಹಾಗೂ ೫೫% ಮಹಿಳೆಯರು ಸಾಕ್ಷರತೆ ಹೊಂದಿದೆ.

ಮಳೆ ಮಾಪನ ಕೇಂದ್ರ

[ಬದಲಾಯಿಸಿ]
  • ಮಳೆ ಮಾಪನ ಕೇಂದ್ರ, ಕುರುಗೋಡ

ಬ್ಯಾಂಕ್

[ಬದಲಾಯಿಸಿ]
  • ಡಿ.ಸಿ.ಸಿ.ಬ್ಯಾಂಕ, ಕುರುಗೊಡು
  1. SBI 2 ಬ್ರಾಂಚ್.

ದೂರವಾಣಿ ವಿನಿಮಯ ಕೇಂದ್ರ

[ಬದಲಾಯಿಸಿ]
  • ದೂರವಾಣಿ ವಿನಿಮಯ ಕೇಂದ್ರ, ಕುರುಗೋಡ

ಅಂಚೆ ಕಚೇರಿ

[ಬದಲಾಯಿಸಿ]
  • ಅಂಚೆ ಕಚೇರಿ, ಕುರುಗೋಡ

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ

[ಬದಲಾಯಿಸಿ]
  • ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಕುರುಗೋಡ

ಹಾಲು ಉತ್ಪಾದಕ ಸಹಕಾರಿ ಸಂಘ

[ಬದಲಾಯಿಸಿ]
  • ಹಾಲು ಉತ್ಪಾದಕ ಸಹಕಾರಿ ಸಂಘ, ಕುರುಗೋಡ

ಪಶು ಚಿಕಿತ್ಸಾಲಯ

[ಬದಲಾಯಿಸಿ]
  • ಪಶು ಚಿಕಿತ್ಸಾಲಯ, ಕುರುಗೋಡ

ವಿದ್ಯುತ್ ಪರಿವರ್ತನಾ ಕೇಂದ್ರ

[ಬದಲಾಯಿಸಿ]
  • 110 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, ಕುರುಗೋಡ

ಸರಕಾರಿ ವಾಹನ ನಿಲ್ದಾಣ

[ಬದಲಾಯಿಸಿ]
  • ಸರಕಾರಿ ವಾಹನ ನಿಲ್ದಾಣ, ಕುರುಗೋಡ

ಉಲ್ಲೇಖಗಳು

[ಬದಲಾಯಿಸಿ]

ಕರ್ನಾಟಕ

"https://kn.wikipedia.org/w/index.php?title=ಕುರುಗೋಡ&oldid=1313242" ಇಂದ ಪಡೆಯಲ್ಪಟ್ಟಿದೆ