ಕುಟಿಲ ಲಿಪಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Rañjanā
ವರ್ಗAbugida
ಭಾಷೆಗಳುNewar
Sanskrit
Tibetan
ಸಮಯಾವದಿc. 1100–present
Parent systems
Child systemsSoyombo
Sister systemsPrachalit
Litumol
This article contains IPA phonetic symbols. Without proper rendering support, you may see question marks, boxes, or other symbols instead of Unicode characters.
Street sign in Kathmandu in Ranjana, Devanagari and English.
Signboard of Kathmandu Metropolitan City Office in Ranjana script (second row).

ಕುಟಿಲ ಲಿಪಿ ಅಥವಾ ರಂಜನಾ ಲಿಪಿ[೧] ಒಂದು ವಿಶೇಷ ರೀತಿಯ ನಾಗರೀ ಲಿಪಿ.[೧] ಸುಮಾರು 6ನೆಯ ಶತಮಾನದಿಂದ 9ನೆಯ ಶತಮಾನದವರೆಗೆ ಇದು ಉತ್ತರ ಭಾರತದಲ್ಲಿ ಪ್ರಚಲಿತವಾಗಿತ್ತು. ಅಕ್ಷರಗಳ ನೇರ ಗೆರೆಗಳೆಲ್ಲ ಕೆಳಭಾಗದಲ್ಲಿ ಬಲಕ್ಕೆ ಬಾಗಿದಂತಿರುವುದೂ, ಸಂಯುಕ್ತ ಸ್ವರಚಿಹ್ನೆಗಳು ಉದ್ದಕ್ಕೆ ಅಂಕುಡೊಂಕಾಗಿರುವುದೂ ಇದರ ವೈಶಿಷ್ಟ್ಯ. ಈ ರೀತಿಯ ಅಕ್ಷರಗಳ ವಕ್ರರೂಪದಿಂದಲೇ ಈ ಲಿಪಿಗೆ ಕುಟಿಲ ಎಂಬ ಹೆಸರು ರೂಢವಾದಂತೆ ಕಾಣುತ್ತದೆ.

ಪ್ರಾರಂಭಿಕ ಕಾಲ[ಬದಲಾಯಿಸಿ]

ಕುಟಿಲ ಲಿಪಿಯ ಪ್ರಾರಂಭಿಕ ಘಟ್ಟವನ್ನು ಯಶೋವರ್ಮನ ಮಂಡಸೋರ್ ಶಿಲಾಲೇಖದಲ್ಲೂ ಮಹಾನಾಮನ ಬುದ್ದಗಯೆಶಾಸನಗಳಲ್ಲೂ ಕಾಣಬಹುದು. ಮೌಖರಿ ಅರಸರ ಶಾಸನಗಳು, ಹರ್ಷವರ್ಧನನ ತಾಮ್ರಪಟಗಳು, ಚಂಬಾದ ಮೇರುವರ್ಮನ ಶಾಸನಗಳು, ಮಾಳವ ಮತ್ತು ರಾಜಾಸ್ಥಾನದಲ್ಲಿ ದೊರಕಿರುವ ಪ್ರತಿಹಾರ ರಾಜರ ಶಾಸನಗಳು, ಜಪಾನಿನಲ್ಲಿ ಹೊರ್ಯುಜೀ ಬೌದ್ಧ ಮಂದಿರದಲ್ಲಿಟ್ಟಿರುವ ಪ್ರಜ್ಞಾಪಾರಮಿತ, ಹೃದಯ ಸೂತ್ರ ಮತ್ತು ಉಷ್ಣೀಪ ವಿಜಯ ಎಂಬ ಹಸ್ತಪತ್ರಿಗಳು- ಇವೆಲ್ಲ ಈ ಲಿಪಿಯಲ್ಲೇ ಇವೆ. ಇಂದಿನ ದೇವನಾಗರೀ ಅಕ್ಷರಗಳ ಮೂಲರೂಪಗಳು ಈ ಲಿಪಿಯಲ್ಲಿ ಕಂಡುಬರುತ್ತವೆ.

ಅಕ್ಷರಗಳು[ಬದಲಾಯಿಸಿ]

ಸ್ವರಾಕ್ಷರಗಳು[ಬದಲಾಯಿಸಿ]

ಚೀನಾದ ಟಿಯಾಂಜಿನ್‌ನಲ್ಲಿರುವ ಬುದ್ಧ ದೇವಾಲಾಯದ ಮೇಲ್ಚಾವಣಿಯಲ್ಲಿರುವ, ಕುಟಿಲ ಲಿಪಿಯಲ್ಲಿ ಬರೆದ ಮಂತ್ರಗಳು
a अ aḥ अः ā आ āḥ आः i इ ī ई u उ ū ऊ ṛ ऋ ṝ ॠ
ḷ ऌ ḹ ॡ e ए ai ऐ o ओ au औ å अँ aṃ अं aī अय् a:j आय् aĪ एय्

ವ್ಯಂಜನಗಳು[ಬದಲಾಯಿಸಿ]

k क kh ख g ग gh घ ṅ ङ
c च ch छ j ज jh झ ñ ञ
ṭ ट ṭh ठ ḍ ड ḍh ढ ṇ ण
t त th थ d द dh ध n न
p प ph फ b ब bh भ m म
y य r र l ल v व
ś श ṣ ष s स h ह
kṣ क्ष tr त्र jñ ज्ञ

ಅಂಕೆಗಳು[ಬದಲಾಯಿಸಿ]

0 ० 1 १ 2 २ 3 ३ 4 ४ 5 ५ 6 ६ 7 ७ 8 ८ 9 ९

ಉಲ್ಲೇಖಗಳು[ಬದಲಾಯಿಸಿ]

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: