ವಿಷಯಕ್ಕೆ ಹೋಗು

ಕಾನಿಕಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕಾನಿಕಾ ಅನ್ನದ ಪರಿಮಳಯುಕ್ತ ಸಿಹಿ ಖಾದ್ಯವಾಗಿದೆ. ಇದು ಒಂದು ಒರಿಸ್ಸಾದ ಖಾದ್ಯವಾಗಿದ್ದು ಸಾಂಪ್ರದಾಯಿಕವಾಗಿ ಹಬ್ಬಗಳು ಮತ್ತು ಪೂಜೆಗಳ ವೇಳೆ ಇದನ್ನು ತಯಾರಿಸಲಾಗುತ್ತದೆ. ಜಗನ್ನಾಥ ದೇವಾಲಯದಲ್ಲಿ ಮಹಾಪ್ರಸಾದ ಅಥವಾ ಛಪ್ಪನ್ ಭೋಗದ ಭಾಗವಾಗಿ ತಯಾರಿಸಲಾದ ೫೬ ಬೇಯಿಸಿದ ಖಾದ್ಯಗಳಲ್ಲಿ ಇದೂ ಒಂದು.[] ಇದನ್ನು ಜಗನ್ನಾಥ ದೇವರಿಗೆ ಸಕಲ ಧೂಪವೆಂದು ಕರೆಯಲ್ಪಡುವ ಬೆಳಿಗ್ಗೆಯ ಊಟದ ಭಾಗವಾಗಿ ಅರ್ಪಿಸಲಾಗುತ್ತದೆ.[]

ಇದನ್ನು ತಯಾರಿಸಲು ಬಳಸಲಾದ ಮುಖ್ಯ ಪದಾರ್ಥಗಳೆಂದರೆ ಪರಿಮಳಯುಕ್ತ ಅಕ್ಕಿ, ತುಪ್ಪ, ಒಣದ್ರಾಕ್ಷಿ, ಗೋಡಂಬಿ, ಕರಿ ಹಾಗೂ ಹಸಿರು ಏಲಕ್ಕಿ, ದಾಲ್ಚಿನ್ನಿ, ಲವಂಗ, ಜಾಪತ್ರೆ ಪುಡಿ, ಪುಲಾವ್ ಎಲೆ, ಸಕ್ಕರೆ, ಉಪ್ಪು ಮತ್ತು ಅರಿಸಿನ.[]

ಉಲ್ಲೇಖಗಳು

[ಬದಲಾಯಿಸಿ]
  1. "ಆರ್ಕೈವ್ ನಕಲು" (PDF). Archived from the original (PDF) on 2023-06-18. Retrieved 2020-05-03.
  2. "Daily Rituals in Jagannatha Temple | Holy Dham". www.holydham.com. Retrieved 2020-01-23.
  3. MyYellowApron (2019-01-31). "Odisha Kanika |Mitha Pulao |Sweet Rice". MyYellowApron (in ಇಂಗ್ಲಿಷ್). Archived from the original on 2019-10-07. Retrieved 2020-01-23.


"https://kn.wikipedia.org/w/index.php?title=ಕಾನಿಕಾ&oldid=1235277" ಇಂದ ಪಡೆಯಲ್ಪಟ್ಟಿದೆ