ಕಾಡು (ಚಲನಚಿತ್ರ)
ಗೋಚರ
ಕಾಡು ಗಿರೀಶ್ ಕರ್ನಾಡ್ ಬರೆದು ನಿರ್ದೇಶಿಸಿದ 1973 ರ ಕನ್ನಡ ಚಲನಚಿತ್ರ. ಶ್ರೀಕೃಷ್ಣ ಅಲನಹಳ್ಳಿಯವರ "ಕಾಡು" ಕಾದಂಬರಿ ಆಧರಿತ ಚಲನಚಿತ್ರವಾಗಿದೆ.
ಅಮರೀಶ್ ಪುರಿ , ನಂದಿನಿ ಭಕ್ತವತ್ಸಲ , ಜಿಎಸ್ ನಟರಾಜ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರವು 21 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಮತ್ತು 21 ನೇ ದಕ್ಷಿಣ ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಗೆದ್ದಿದೆ.
ಕಮಲ್ ಹಾಸನ್ ಅವರು , ಕಾಡು ತಮ್ಮ ನೆಚ್ಚಿನ ಚಿತ್ರಗಳಲ್ಲಿ ಒಂದೆಂದು ಮತ್ತು ಈ ಚಿತ್ರವು ಅವರ ತೆವರ್ ಮಗನ್ (1992) ಚಿತ್ರಕ್ಕೆ ಸ್ಫೂರ್ತಿಯಾಗಿದೆ ಎಂದು ಹೇಳಿದ್ದಾರೆ.
ಕಾಡು ಕನ್ನಡ ಚಲನಚಿತ್ರೋದ್ಯಮದ ಆರಂಭಿಕ ಸಮಾನಾಂತರ ಸಿನೆಮಾಗಳಲ್ಲಿ (parallel cinema) ಒಂದಾಗಿದೆ.
ಕಾಡು (ಚಲನಚಿತ್ರ) | |
---|---|
ಕಾಡು | |
ನಿರ್ದೇಶನ | ಗಿರೀಶ್ ಕಾರ್ನಾಡ್ |
ನಿರ್ಮಾಪಕ | ಜಿ.ಎನ್.ಲಕ್ಷ್ಮೀಪತಿ |
ಪಾತ್ರವರ್ಗ | ಅಮರೀಶ್ ಪುರಿ,ಉಮಾ ಶಿವಕುಮಾರ್, ಮಾ.ನಟರಾಜ್, ಸುಧಾ ಬೇಳವಾಡಿ |
ಸಂಗೀತ | ಬಿ ವಿ ಕಾರ೦ತ |
ಛಾಯಾಗ್ರಹಣ | ಗೋವಿಂದ್ ನಿಹಲಾನಿ |
ಬಿಡುಗಡೆಯಾಗಿದ್ದು | ೧೯೭೪ |
ಪ್ರಶಸ್ತಿಗಳು | ರಾಷ್ಟ್ರ ಪ್ರಶಸ್ತಿ |
ಚಿತ್ರ ನಿರ್ಮಾಣ ಸಂಸ್ಥೆ | ಎಲ್.ಎನ್.ಕಂಬೈನ್ಸ್ |
ಇತರೆ ಮಾಹಿತಿ | ಶ್ರೀಕೃಷ್ಣ ಆಲನಹಳ್ಳಿ ಅವರ ಕಾಡು ಕಾದಂಬರಿ ಅಧಾರಿತ ಚಿತ್ರ |
ಪಾತ್ರವರ್ಗ
[ಬದಲಾಯಿಸಿ]ಚಂದ್ರೆಗೌಡ ಪಾತ್ರದಲ್ಲಿ ಅಮರೀಶ್ ಪುರಿ
ಗೌಡರ ಪತ್ನಿ ಕಮಲಿಯಾಗಿ ನಂದಿನಿ ಭಕ್ತವತ್ಸಲ
ಮಾಸ್ಟರ್ ಜಿ.ಎಸ್. ನಟರಾಜ್ , ಗೌಡರ ಸೋದರಳಿಯ ಕಿಟ್ಟಿಯಾಗಿ
ಕೆಂಚನಾಗಿ ಸುಂದರ್ ರಾಜ್
ಶಿವಗಂಗನಾಗಿ ಲೋಕೇಶ್
ಬಸಕ್ಕನಾಗಿ ಉಮಾ ಶಿವಕುಮಾರ್
ಕಲ್ಪನಾ ಸಿರುರ್