ವಿಷಯಕ್ಕೆ ಹೋಗು

ಕಾಗ್ನಿಜ಼ಂಟ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Cognizant Technology Solutions Corporation
ಸಂಸ್ಥೆಯ ಪ್ರಕಾರPublic (NASDAQCTSH)
ಸ್ಥಾಪನೆ1994
ಸಂಸ್ಥಾಪಕ(ರು)Kumar Mahadeva
ಮುಖ್ಯ ಕಾರ್ಯಾಲಯTeaneck, New Jersey, United States
ಪ್ರಮುಖ ವ್ಯಕ್ತಿ(ಗಳು)Francisco D'Souza (President & CEO)
Lakshmi Narayanan
(Vice Chairman)
ಉದ್ಯಮIT services
IT consulting
ಆದಾಯ $4.50 billion (2010)[]
ಆದಾಯ(ಕರ/ತೆರಿಗೆಗೆ ಮುನ್ನ) $618.49000 million (2009)[]
ನಿವ್ವಳ ಆದಾಯ $671 million (2010)[]
ಒಟ್ಟು ಆಸ್ತಿ $3.33800 billion (2009)[]
ಒಟ್ಟು ಪಾಲು ಬಂಡವಾಳ $2.65300 million (2009)[]
ಉದ್ಯೋಗಿಗಳು100,000 (2010)
ಜಾಲತಾಣCognizant.com

ಕಾಗ್ನಿಜ಼ಂಟ್ ಟೆಕ್ನಾಲಜಿ ಸಲ್ಯೂಷನ್ಸ್ (ಕಾಗ್ನಿಜ಼ಂಟ್ ) (NASDAQCTSH) ಎಂಬುದು, ವ್ಯಾಪಾರ, ತಂತ್ರಜ್ಞಾನ, ಸಲಹಾ ಸೇವೆಗಳನ್ನು ಒದಗಿಸುವ U.S.- ಮೂಲದ ಬಹುರಾಷ್ಟ್ರೀಯ ಕಂಪನಿಯಾಗಿದ್ದು, ಇದರ ಕೇಂದ್ರ ಕಾರ್ಯಾಲಯ ಅಮೇರಿಕ ಸಂಯುಕ್ತ ಸಂಸ್ಥಾನದ ನ್ಯೂಜೆರ್ಸಿ ಟೀನೆಕ್ ನಲ್ಲಿದೆ. ಫಾರ್ಚ್ಯೂನ್ ಎಂಬ ನಿಯತಕಾಲಿಕೆ ಸತತ ಎಂಟನೆ ವರ್ಷಕ್ಕಾಗಿ ನಡೆಸಿದ,ಅಂದರೆ 2010 ರ ವರ್ಷದಲ್ಲಿ ಅತ್ಯಂತ ಕ್ಷಿಪ್ರವಾಗಿ ಪ್ರಗತಿ ಸಾಧಿಸಿದ 100 ಕಂಪನಿಗಳ ಪಟ್ಟಿಯಲ್ಲಿ ಕಾಗ್ನಿಜಂಟ್ ಹೆಸರನ್ನು ಕೂಡ ಸೇರಿಸಿದೆ.[] ಕಾಗ್ನಿಜಂಟ್ ನ ಹೆಸರನ್ನು ಫಾರ್ಚ್ಯೂನ್ 1000 ಮತ್ತು ಫೋರ್ಬ್ಸ್ ಗ್ಲೋಬಲ್ ನ 2000 ಪಟ್ಟಿಗಳಲ್ಲಿ ಸೇರಿಸಲಾಗಿದೆ. ಹೀಗೆ 2010ರಲ್ಲಿ ಅತ್ಯುತ್ತಮ ವಹಿವಾಟು ಕಂಡ U.S. ಕಂಪನಿಗಳ ಬಿಸ್ ನೆಸ್ ವೀಕ್ ನ 50 ಹೆಸರುಗಳುಳ್ಳ ಪಟ್ಟಿಯಲ್ಲಿ ಇದರ ಹೆಸರು ಸೇರಿದೆ; ಅಲ್ಲದೇ ಬಿಸ್ ನೆಸ್ ವೀಕ್ ನ ಹಾಟೆಸ್ಟ್ ಟೆಕ್ ಕಂಪನಿಗಳು ಎಂಬುದರಲ್ಲಿ, ಮತ್ತು ಅಮೇರಿಕದಲ್ಲಿ ಅತ್ಯಂತ ಕ್ಷಿಪ್ರ ಪ್ರಗತಿ ಸಾಧಿಸಿದ 25 ತಂತ್ರಜ್ಞಾನ ಕಂಪನಿಗಳ ಫೋರ್ಬ್ಸ್ ಫಾಸ್ಟ್ ಟೆಕ್ ನ 2010 ರ ಪಟ್ಟಿಯನ್ನೊಳಗೊಂಡಂತೆ ಹಲವು ವೇಗವಾಗಿ ಪ್ರಗತಿ ಸಾಧಿಸಿದ ಕಂಪನಿಗಳಲ್ಲಿ ಇದು ಸುಸ್ಥಿರ ಸ್ಥಾನ ಹೊಂದಿದೆ.

ಇತಿಹಾಸ

[ಬದಲಾಯಿಸಿ]

ಕಾಗ್ನಿಜ಼ಂಟ್ ಅನ್ನು ಡುನ್ ಅಂಡ್ ಬ್ರಾಡ್ ಸ್ಟ್ರೀಟ್ ಕಾರ್ಪೊರೇಷನ್ ನ IT (ಮಾಹಿತಿ ತಂತ್ರಜ್ಞಾನ)ಅಭಿವೃದ್ಧಿ ಮತ್ತು ನಿರ್ವಹಣಾ ಸೇವೆಗಳಿಗಾಗಿ 1994 ರಲ್ಲಿ ಸ್ಥಾಪಿಸಲಾಯಿತು. ಕುಮಾರ್ ಮಹದೇವ[] ಇದರ CEO ಮತ್ತು ಅಧ್ಯಕ್ಷರಾದರು.[] ಕಂಪನಿಯು ಎರಡು ವರ್ಷಗಳ ನಂತರ ಸ್ವತಂತ್ರ ಸಂಘಟನೆ,ವ್ಯಾಪಾರಿ ಸಂಸ್ಥೆಯಾಗಿ ಹೊರಹೊಮ್ಮಿತು. ಲಕ್ಷ್ಮಿ ನಾರಾಯಣ್ ಅವರು ಈ ಕಂಪನಿಯ CEO ಹುದ್ದೆಗೇರಿದಾಗ, ಕುಮಾರ್ ಮಹದೇವ 2003 ರಲ್ಲಿ ರಾಜೀನಾಮೆ ನೀಡಿದರು.[] ಕಾಗ್ನಿಜ಼ಂಟ್, ಆದ್ಯ ಕೈಗಾರಿಕಾ ವಲಯ ಮತ್ತು ತಂತ್ರಜ್ಞಾನದ ವಲಯದಲ್ಲಿ ಸಂಘಟಿಸಲಾದ ಮೊದಲ IT ಸೇವಾ ಕಂಪನಿಗಳಲ್ಲಿ ಒಂದಾಗಿದೆ. ಇದು ಪ್ರಸ್ತುತ ಬಿಸ್ ನೆಸ್ ಪ್ರೋಸೆಸ್ ಔಟ್ ಸೋರ್ಸಿಂಗ್(BPO) ಅನ್ನು ಒಳಗೊಂಡಂತೆ ಬೃಹತ್ ಮಟ್ಟದ ವ್ಯವಹಾರ, ತಂತ್ರಜ್ಞಾನ ಮತ್ತು ಸಲಹಾ ಸೇವೆಗಳನ್ನು ಒದಗಿಸುತ್ತಿದೆ. ಅಲ್ಲದೇ ಬ್ಯಾಂಕಿಂಗ್ ನಲ್ಲಿ ಗಮನಾರ್ಹ ವ್ಯವಹಾರ, ಹಣಕಾಸಿನ ಸೇವೆಗಳು, ಸಂಪರ್ಕ, ಗ್ರಾಹಕರ ಸರಕು, ಇಂಧನ ಮತ್ತು ಬಳಕೆಗಳು, ಆರೋಗ್ಯ ಸಂರಕ್ಷಣೆ, ಮಾಹಿತಿ, ಮಾಧ್ಯಮ ಮತ್ತು ಮನರಂಜನೆ, ವಿಮಾ, ಜೀವ ವಿಜ್ಞಾನಗಳು, ಉತ್ಪಾದನೆ, ಸಗಟು ವ್ಯಾಪಾರ, ತಂತ್ರಜ್ಞಾನ, ಸಾರಿಗೆ ವ್ಯವಸ್ಥೆ ಮತ್ತು ವ್ಯವಸ್ಥಾಪನ ತಂತ್ರ ಹಾಗು ಪ್ರವಾಸ ಮತ್ತು ಆತಿಥ್ಯ ಸೇವೆಗಳನ್ನು ಹೊಂದಿದೆ.

ಆರ್ಥಿಕ ಸ್ಥಿತಿ

[ಬದಲಾಯಿಸಿ]

ಕಾಗ್ನಿಜ಼ಂಟ್ ಅನ್ನು 1998 ರಲ್ಲಿ NASDAQ ನಲ್ಲಿ ಹಾಗು 2004 ರಲ್ಲಿ NASDAQ-100 ಸೂಚ್ಯಾಂಕ ಪಟ್ಟಿಯಲ್ಲಿ ಸೇರಿಸಲಾಯಿತು. ಕಂಪನಿಯು 2006 ರ ನವೆಂಬರ್ 16 ರಂದು ಕಂಡ ಅಂತಿಮ ವಹಿವಾಟು ನಂತರ, ಸ್ಟಾಂಡರ್ಡ್ ಅಂಡ್ ಪೂವರ್ಸ್ S&P 400 ಶೇರು ಮುಖ ಬೆಲೆಯಿಂದ ಕಾಗ್ನಿಜಂಟ್, S&P 500 ಗೆ ತಲುಪಿತು.ಹೀಗೆ ಅದರ ಶೇರು ಬೆಲೆಗಳಲ್ಲಿ ಗಣನೀಯತೆ ಕಾಣಿಸಿತು.

ನಿರ್ವಹಣೆ

[ಬದಲಾಯಿಸಿ]

ನಿರ್ವಹಣೆ: ನಿರ್ವಾಹಕ ತಂಡ

  • ಫ್ರಾನ್ಸಿಸ್ಕೊ ಡಿಸೋಜಾ:ಅಧ್ಯಕ್ಷರು ಮತ್ತು ಪ್ರಧಾನ ನಿರ್ವಹಣಾ ಅಧಿಕಾರಿ
  • ಲಕ್ಷ್ಮಿ ನಾರಾಯಣ್: ಉಪಾಧ್ಯಕ್ಷರು
  • ಗೊರ್ಡಾನ್ ಕೊಬರ್ನ: ಪ್ರಧಾನ ಹಣಕಾಸು ಮತ್ತು ನಿರ್ವಾಹಕ ಅಧಿಕಾರಿ
  • ಚಂದ್ರಶೇಖರನ್: ಗ್ಲೋಬಲ್ ಡಿಲಿವರಿಯ ಅಧ್ಯಕ್ಷರು ಮತ್ತು ನಿರ್ವಾಹಕ ನಿರ್ದೇಶಕ
  • ರಾಜೀವ್ ಮೆಹ್ತಾ: ಗ್ಲೋಬಲ್ ಕ್ಲೈಂಟ್ ಸರ್ವೀಸಸ್ ನ ಪ್ರಧಾನ ನಿರ್ವಾಹಕ ಅಧಿಕಾರಿ[]

ಸೇವೆಗಳು

[ಬದಲಾಯಿಸಿ]

ಕಾಗ್ನಿಜ಼ಂಟ್ , ವ್ಯಾಪಾರ ಮತ್ತು ತಂತ್ರಜ್ಞಾನ ಸಲಹಾ ಸೇವೆ, ಸಂಕೀರ್ಣ ವ್ಯವಸ್ಥೆಗಳ ಏಕೀಕರಣ, ಅನ್ವಯಿಕೆ ಅಭಿವೃದ್ಧಿ ಮತ್ತು ನಿರ್ವಹಣೆ, ಬಿಸ್ ನೆಸ್ ಪ್ರೋಸೆಸ್ ಔಟ್ ಸೋರ್ಸಿಂಗ್, IT ಮೂಲ ಸೌಕರ್ಯ ಸೇವೆಗಳು , ವಿಶ್ಲೇಷಣಾತ್ಮಕಗಳು, ಜಾಲ ವಿಶ್ಲೇಷಣಾತ್ಮಕಗಳು, ಬಿಸ್ ನೆಸ್ ಇಂಟಲಿಜೆನ್ಸ್, ಡೇಟಾ ವೇರ್ ಹೌಸಿಂಗ್, CRM ಮತ್ತು ಸಾಮಾಜಿಕ CRM, ಸಪ್ಲೇ ಚೈನ್ ಮ್ಯಾನೇಜ್ಮೆಂಟ್, ಇಂಜಿನಿಯರಿಂಗ್ ಮ್ಯಾನೇಜ್ಮೆಂಟ್ ಸಲ್ಯೂಷನ್ಸ್, ERP, R&D ಔಟ್ ಸೋರ್ಸಿಂಗ್, ಮತ್ತು ಟೆಸ್ಟಿಂಗ್ ಸಲ್ಯೂಷನ್ಸ್ ಗಳನ್ನು ಒಳಗೊಂಡಂತೆ, ಬೃಹತ್ ಮಟ್ಟದ ಮಾಹಿತಿ ತಂತ್ರಜ್ಞಾನವನ್ನು, ಸಲಹೆ ಮತ್ತು ಬಿಸ್ ನೆಸ್ ಪ್ರೋಸೆಸಿಂಗ್ ಔಟ್ ಸೋರ್ಸಿಂಗ್ (BPO) ಸೇವೆಗಳನ್ನು ಒದಗಿಸುತ್ತಿದೆ.

U.S. ನಲ್ಲಿ ಆಫ್ ಶೋರಿಂಗ್ ಅಂಡ್ ಹೈರಿಂಗ್ (ಕಂಪನಿಯನ್ನು ವಿದೇಶಕ್ಕೆ ಸ್ಥಳಾಂತರ ಮತ್ತು ವಿದೇಶಿಯರ ನೇಮಕ)

[ಬದಲಾಯಿಸಿ]

ಅಮೇರಿಕ ಸಂಯುಕ್ತ ಸಂಸ್ಥಾನಕ್ಕೆ ವಿದೇಶಿ ನೌಕರರನ್ನು ಕರೆತರಲು L1 ವೀಸಾವನ್ನು ಪಡೆಯುವ ಅಗ್ರ 10 ಕಂಪನಿಗಳಲ್ಲಿ ಕಾಗ್ನಿಜಂಟ್ ಕೂಡ ಒಂದಾಗಿದೆ. ಅದಕ್ಕಾಗಿ 2008 ರ ನವೆಂಬರ್ ನಲ್ಲಿ ನೀಡಿದ SEC 10-Q ಫೈಲಿಂಗ್ ನಲ್ಲಿ, "ನಮ್ಮ ಭವಿಷ್ಯದ ಯಶಸ್ಸು, ತಾಂತ್ರಿಕ ಮತ್ತು ಯೋಜನಾ ನಿರ್ವಹಣ ಕೌಶಲದೊಂದಿಗೆ, ನೌಕರರನ್ನು ಅಭಿವೃದ್ಧಿಶೀಲ ರಾಷ್ಟ್ರಗಳಿಂದ ಅದರಲ್ಲೂ ವಿಶೇಷವಾಗಿ ಭಾರತದಿಂದ ಆಕರ್ಷಿಸುವ ಮತ್ತು ಅವರನ್ನಿಲ್ಲಿ ಉಳಿಸಿಕೊಳ್ಳುವ ನಮ್ಮ ಸಾಮರ್ಥ್ಯದ ಮೇಲೆ ಅವಲಂಬಿಸಿದೆ. ಅಮೇರಿಕ ಸಂಯುಕ್ತ ಸಂಸ್ಥಾನ ಮತ್ತು ಯುರೋಪ್ ನಲ್ಲಿ ಇರುವ ಬಹುಪಾಲು IT ವೃತ್ತಿಪರರು ಭಾರತೀಯ ಪ್ರಜೆಗಳಾಗಿದ್ದಾರೆ. ಅಮೇರಿಕ ಸಂಯುಕ್ತ ಸಂಸ್ಥಾನದಲ್ಲಿ ಮತ್ತು ಯುರೋಪ್ ನಲ್ಲಿ ಕಾರ್ಯನಿರ್ವಹಿಸಲು ಭಾರತೀಯರ ಸಾಮರ್ಥ್ಯವು ಅವರ ಸಾಮರ್ಥ್ಯದ ಮೇಲೆ, ಹಾಗು ಅಗತ್ಯ ವೀಸಾ ಮತ್ತು ಕೆಲಸದ ಪರವಾನಗಿಯನ್ನು ಪಡೆಯುವ ನಮ್ಮ ಸಾಮರ್ಥ್ಯದ ಮೇಲೆ ಅವಲಂಬಿಸಿರುತ್ತದೆ ಎಂದು ಕಂಪನಿ ಹೇಳಿತು."[]

ಕಂಪನಿಯು ಅದರ U.S. ಕಾರ್ಯಪಡೆಯನ್ನು ವಿಸ್ತರಿಸುತ್ತಿದೆ. ಹೀಗೆ 2011 ರ ಜನವರಿಯಲ್ಲಿ, ಕಂಪನಿಯು ಆರಿಜೋನದ ಫೋನಿಕ್ಸ್ ನಲ್ಲಿ ಹೊಸ 1,000 ವ್ಯಕ್ತಿಗತ ಸೌಲಭ್ಯ ಒಳಗೊಂಡಂತೆ, ಅದರ U.S. ವಿತರಣಾ ಕೇಂದ್ರ(ಡಿಲಿವರಿ ಸೆಂಟರ್)ಗಳನ್ನು ವಿಸ್ತರಿಸುವ ಯೋಜನೆಯನ್ನು ಪ್ರಕಟಿಸಿತು.[]

ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ

[ಬದಲಾಯಿಸಿ]
  • ಕಾಗ್ನಿಜ಼ಂಟ್ ಪರೋಪಕಾರಿ ದತ್ತಿಸಂಸ್ಥೆಯ ಹಣಕಾಸು ಮತ್ತು ಆಡಳಿತಾತ್ಮಕ ಬೆಂಬಲದ ಮುಖಾಂತರ ಅಲ್ಲದೇ ಕಾಗ್ನಿಜಂಟ್ ನ ನೌಕರ ಸ್ವಪ್ರಯತ್ನದ ಮೂಲಕ, ಕಾಗ್ನಿಜಂಟ್ ನ ಪ್ರತಿಷ್ಟಾನ, ಲೋಕೋಪಕಾರೀ ಕಾರ್ಯಗಳನ್ನು ಪ್ರಪಂಚದಾದ್ಯಂತ ನಿರ್ವಹಿಸುತ್ತಿದೆ. ಈ ಕಂಪನಿಯು 2005 ರ ಮಾರ್ಚ್ ನಲ್ಲಿ ಭಾರತೀಯ ಕಂಪನಿಗಳ ಕಾಯ್ದೆಯಡಿ "ದತ್ತಿ ಸಂಸ್ಥೆಯಾಗಿ" ನೋಂದಾಯಿಸಲ್ಪಟ್ಟಿತು. ಈ ಮೂಲಕ ಕಾಗ್ನಿಜಂಟ್ ದತ್ತಿಸಂಸ್ಥೆ ಯು,ಸಮಾಜದ ಕಡಿಮೆ ಸವಲತ್ತಿನ ಜನರಿಗೆ ಹಣಕಾಸು ಮತ್ತು ತಾಂತ್ರಿಕ ಬೆಂಬಲ ನೀಡುವ ಮೂಲಕ ಅವರು ಉತ್ತಮ ಗುಣಮಟ್ಟದ ಶಿಕ್ಷಣ ಮತ್ತು ಆರೋಗ್ಯ ಸಂರಕ್ಷಣೆ ಪಡೆಯಲು ಸಹಾಯ ಮಾಡುತ್ತಿದೆ; ಶೈಕ್ಷಣಿಕ ಮತ್ತು ಆರೋಗ್ಯ ಸಂರಕ್ಷಣಾ ಸುಧಾರಣೆಯ ಕಾರ್ಯಕ್ರಮಗಳ ರೂಪ ರೇಖೆ ರಚನೆ ಮತ್ತು ಜಾರಿಗೆ ತರುವುದು; ಹಾಗು ಸರ್ಕಾರೇತರ ಸಂಸ್ಥೆಗಳು (NGOs),ಶೈಕ್ಷಣಿಕ ಸಂಸ್ಥೆಗಳು, ಆರೋಗ್ಯ ಸಂರಕ್ಷಣೆಯ ಸಂಸ್ಥೆಗಳು, ಸರ್ಕಾರದ ನಿಯೋಗಗಳು ಮತ್ತು ಕಾರ್ಪೊರೇಷನ್ ಗಳೊಂದಿಗೆ ಪಾಲುದಾರನಾಗಿ ಕಾರ್ಯನಿರ್ವಹಿಸುತ್ತದೆ.
  • ಇದರ ಯೋಜನೆ,ಪ್ರೊಜೆಕ್ಟ್ ಔಟ್ ರೀಚ್ ನಡಿ, 400 ಕ್ಕಿಂತ ಹೆಚ್ಚು ಅದರ ಪ್ರವರ್ತನ ಸಂಸ್ಥೆಗಳು ಬೆಂಬಲ ಪಡೆದಿವೆ.ಇವು ಪ್ರಪಂಚದಾದ್ಯಂತ 200,000ಕ್ಕಿಂತ ಹೆಚ್ಚು ಮಕ್ಕಳನ್ನು ತಲುಪುವ ಮೂಲಕ, ಕಾಗ್ನಿಜಂಟ್ ಶಾಲೆಗಳಿಗೆ ಮತ್ತು ಅನಾಥಾಲಯಗಳಿಗೆ ಬೆಂಬಲ ನೀಡುತ್ತಿದೆ.
  • ಕಾಗ್ನಿಜ಼ಂಟ್ ನ ಈ ಪೋಷಣಾ ಪ್ರಯತ್ನ ಕಾರ್ಯವು "ಗೊ ಗ್ರೀನ್" ಸಹಾಯಕ ಉಪಕ್ರಮವನ್ನೂ ಒಳಗೊಂಡಿದೆ. ಇದನ್ನು 2008 ರಲ್ಲಿ ಆರಂಭಿಸಲಾಗಿದ್ದು, ಇದು ಇಂಧನ ಸಂರಕ್ಷಣೆ, ಮರು ಬಳಕೆ, ಮತ್ತು ಹೊಣೆಗಾರಿಕೆಯ ತ್ಯಾಜ್ಯ ನಿರ್ವಹಣೆಯ ಕಡೆಗೆ ಹೆಚ್ಚು ಗಮನಹರಿಸಿದೆ.
  • ಕಾಗ್ನಿಜ಼ಂಟ್ ಅಕಾಡೆಮಿ

    [ಬದಲಾಯಿಸಿ]

    ಕಾಗ್ನಿಜಂಟ್ ಅಕಾಡೆಮಿಯ ಆಂತರಿಕ ತರಬೇತಿ ಕೇಂದ್ರದ ಮೂಲಕ ಕಲಿಕೆಯ ಎಲ್ಲಾ ಕಾರ್ಯಕ್ರಮಗಳನ್ನು ನಿರ್ದೇಶಿಸಲಾಗುತ್ತದೆ. ಪ್ರಮುಖ ನಾಲ್ಕು ಶೈಕ್ಷಣಿಕ ಉಪಕ್ರಮಗಳು ಕೆಳಕಂಡಂತಿವೆ: ಶಿಕ್ಷಣ ಮುಂದುವರಿಕೆ, ಸಾಮಾಜಿಕ ಪಾತ್ರ ಆಧಾರಿತ ತರಬೇತಿ, ಕಾರ್ಯನಿರ್ವಾಹಕ ತರಬೇತಿ ಕಾರ್ಯಕ್ರಮ, ಪ್ರಮಾಣಿಕರಣ. ಆಂತರಿಕ ತರಬೇತಿ ಕಾರ್ಯಕ್ರಮಗಳ ಜೊತೆಯಲ್ಲಿ, ಸಹೋದ್ಯೋಗಿಗಳು ಹಾರ್ವರ್ಡ್ ವಿಶ್ವವಿದ್ಯಾನಿಲಯ, ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್, ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಗಳನ್ನು ಒಳಗೊಂಡಂತೆ ಗಮನಾರ್ಹ ವಿಶ್ವವಿದ್ಯಾನಿಲಯಗಳಲ್ಲಿ ಆಡಳಿತ ನಿರ್ದಿಷ್ಟಗೊಳಿಸಿದ ತರಬೇತಿ ಪಡೆಯುತ್ತಾರೆ. ತರಗತಿಯ ಕೊಠಡಿಯಲ್ಲಿ ನಡೆಯುವ ಔಪಚಾರಿಕ ಕಲಿಕೆಯ ಜೊತೆಯಲ್ಲಿ, ಕಾಗ್ನಿಜ಼ಂಟ್ ಅಕಾಡೆಮಿ ತನ್ನ ಸಿಬ್ಬಂದಿಗೆ ಕಲಿಕೆಯಲ್ಲಿ ಡೆಸ್ಕ್ ಟಾಪ್ ಅನ್ನು ಕೂಡ ಅಳವಡಿಕೆಗೆ ತಂದಿದೆ. ಅವರು ಬಹುಮಾದರಿಯ ಮೂಲದ ಕಲಿಕೆ ಮತ್ತು ತಂತ್ರಜ್ಞಾನ ಆಧಾರಿತ ತರಬೇತಿ(TBT) ಕಾರ್ಯಕ್ರಮವನ್ನು ಉಪಯೋಗಿಸುತ್ತಾರೆ.[]

    ಜಾಗತಿಕ ಕಛೇರಿಗಳು

    [ಬದಲಾಯಿಸಿ]
    • N.J. ಯ ಟೀನೆಕ್ ನಲ್ಲಿರುವ ಇದರ ಕೇಂದ್ರ ಕಾರ್ಯಾಲಯಗಳು ಮತ್ತು ವಿತರಣಾ ಕೇಂದ್ರಗಳ ಜೊತೆಯಲ್ಲಿ, ಕಾಗ್ನಿಜ಼ಂಟ್ ಅಮೇರಿಕ ಸಂಯುಕ್ತ ಸಂಸ್ಥಾನ ದಲ್ಲಿ ಇನ್ನೂ ಅಧಿಕ ಐದು ವಿತರಣಾ ಕೇಂದ್ರಗಳನ್ನು ಒಳಗೊಂಡಿದೆ: ಅರ್ಕ್ಯಾನ್ಸಸ್ ನಲ್ಲಿರುವ ಬೆಂಟಾನ್ ವಿಲ್ಲೆ; ನ್ಯೂಜೆರ್ಸಿಯಲ್ಲಿರುವ ಬ್ರಿಡ್ಜ್ ವಾಟರ್; ಚಿಕಾಗೋ, ಇಲಿನಾಯ್; ಮ್ಯಾಸಚುಸೆಟ್ಸ್ ನ ಹಾಲಿಸ್ಟನ್; ಮತ್ತು ಆರಿಜೋನ್ ನ ಫೋನಿಕ್ಸ್
    • ಕಂಪನಿಯು UK, ಯುರೋಪ್, ಭಾರತ, ಚೀನಾ, ಫಿಲಿಪ್ಪೀನ್ಸ್, ಕೆನಡಾ, ಅರ್ಜೆಂಟೀನ ಮತ್ತು ಮೆಕ್ಸಿಕೊ ದಲ್ಲಿ ಸ್ಥಳೀಯ, ಪ್ರಾದೇಶಿಕ ಮತ್ತು ಜಾಗತಿಕ ವಿತರಣಾ ಕೇಂದ್ರಗಳನ್ನು ಕೂಡ ಒಳಗೊಂಡಿದೆ.
    • ಕಂಪನಿಯ ಬಹುಪಾಲು ನೌಕರರು ಭಾರತ ದಲ್ಲಿದ್ದಾರೆ: ಚೆನ್ನೈ, ಕೊಯಂಬತ್ತೂರ್, ಕೊಲ್ಕತ್ತಾ, ಬೆಂಗಳೂರು, ಹೈದ್ರಾಬಾದ್, ಪುಣೆ, ಮುಂಬಯಿ, ಗುರಗಾಂವ್ ಮತ್ತು ಕೊಚ್ಚಿನ್.

    ಇತ್ತೀಚಿನ ಸುದ್ದಿಗಳು

    [ಬದಲಾಯಿಸಿ]

    ಕಾಗ್ನಿಜ಼ಂಟ್ ಪತ್ರಿಕಾ ಪ್ರಕಟಣೆಯ ಪೂರ್ಣ ಪಟ್ಟಿಗಾಗಿ, ದಯವಿಟ್ಟು ಇಲ್ಲಿ ಕ್ಲಿಕ್ ಮಾಡಿ.

    1. ಕಾಗ್ನಿಜ಼ಂಟ್ , ಆಯಾ ಋತುವಿನಲ್ಲಿ ಅತ್ಯಂತ ಭರಾಟೆಯ ಹೆಚ್ಚು ವ್ಯಾಪಾರ ನಡೆಯುವ ಕಾಲಾವಧಿಗೆ ಯಶಸ್ವಿಯಾಗಿ ಸ್ಪಂದಿಸುವ ಮೂಲಕ ಜಾಗತಿಕ ಬಿಡಿ ವ್ಯಾಪಾರಿಗಳಿಗೆ ಸಹಾಯ ಮಾಡುತ್ತದೆ[೧೦]

    2. ಮಾರಾಟ ಮತ್ತು ಮಾರಾಟಗಾರಿಕೆಯ ಪರಿಣಾಮಕಾರಿತ್ವ ಮತ್ತು ವ್ಯಾಪಾರ ಪ್ರದರ್ಶನ ಹೆಚ್ಚಿಸಲು ಕಮರ್ಷಿಯಲ್ ಆಪರೇಷನ್ಸ್ ಸಲ್ಯೂಷನ್ ಗಾಗಿ ಲಿಲಿ ಕಾಗ್ನಿಜ಼ಂಟ್ ಅನ್ನು ಆಯ್ಕೆ ಮಾಡಿತು.[೧೧]

    3. ಕ್ಷಿಪ್ರ ಅಭಿವೃದ್ಧಿ ಹೊಂದಲು ಕಾಗ್ನಿಜ಼ಂಟ್ ಉತ್ತರ ಅಮೇರಿಕದ ವಿತರಣಾ ಕೇಂದ್ರದ ತನ್ನ ಹೆಜ್ಜೆ ಗುರುತನ್ನೂ ವಿಸ್ತರಿಸಿತು.[]

    ಉಲ್ಲೇಖಗಳು

    [ಬದಲಾಯಿಸಿ]
    1. ೧.೦ ೧.೧ ೧.೨ ೧.೩ ೧.೪ "News Room". Cognizant Technology Solutions Investor Relations. Retrieved 2010-02-13.
    2. Fortune 100 Fastest-Growing Companies 2010
    3. http://www.alumni.hbs.edu/bulletin/2003/september/mahadeva.html
    4. http://www.rediff.com/money/2003/dec/22cognizant.htm
    5. "Cognizant founder steps down". The Hindu Business Line. Retrieved 2010-09-27.
    6. "ಕಾಗ್ನಿಜಂಟ್". Archived from the original on 2010-12-14. Retrieved 2011-02-11.
    7. SEC ಫೈಲಿಂಗ್ - ರಿಸ್ಕ್ ಫ್ಯಾಕ್ಟರ್ಸ್
    8. ೮.೦ ೮.೧ [೧]
    9. "ಕಾಗ್ನಿಜಂಟ್". Archived from the original on 2010-12-14. Retrieved 2011-02-11.
    10. [೨]
    11. [೩]


    ಬಾಹ್ಯ ಕೊಂಡಿಗಳು

    [ಬದಲಾಯಿಸಿ]

    ಟೆಂಪ್ಲೇಟು:Portal