ವಿಷಯಕ್ಕೆ ಹೋಗು

ಔಷಧಿ ಅಂಗಡಿ/ವೃತ್ತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅಂತರರಾಷ್ಟ್ರೀಯವಾಗಿ ಗುರುತಿಸಲಾಗುವ ಔಷಧಾಲಯ/ಔಷಧವೃತ್ತಿ ವೃತ್ತಿಯನ್ನು ಪ್ರತಿನಿಧಿಸುವ ಸಂಕೇತವಾದ ಕಲಾಬತ್ತು ಮತ್ತು ಕುಟ್ಟಾಣಿ
1905ರ ಅವಧಿಯ ಸೋಡಾ ಚಿಲುಮೆಯೊಂದಿಗೆ ಪ್ರಾತಿನಿಧಿಕ ಅಮೇರಿಕದ ಔಷಧಾಲಯ

ಔಷಧ ವೃತ್ತಿ ಯು (ಗ್ರೀಕ್‌‌‌ ಪದ φάρμακον ನಿಂದ 'ಫಾರ್ಮಕಾನ್‌‌' = ಔಷಧಿ) ಆರೋಗ್ಯ ವಿಜ್ಞಾನಗಳನ್ನು ರಾಸಾಯನಿಕ ವಿಜ್ಞಾನಗಳೊಂದಿಗೆ ಸಂಬಂಧಿಸುವ ಆರೋಗ್ಯಸಂಬಂಧಿ ವೃತ್ತಿಯಾಗಿದ್ದು, ಔಷಧೀಯ ವಸ್ತುಗಳ ಸುರಕ್ಷಿತ ಹಾಗೂ ಪ್ರಯೋಜನೀಯ ಬಳಕೆಯಾಗುವಂತೆ ನೋಡಿಕೊಳ್ಳುವ ಜವಾಬ್ದಾರಿ ಹೊಂದಿದೆ.

ಔಷಧಿಗಳನ್ನು ಸಂಯೋಜಿಸುವುದು ಹಾಗೂ ಸಿದ್ಧಪಡಿಸಿಕೊಡುವುದು ಮುಂತಾದ ಬಹುತೇಕ ಮಟ್ಟಿಗೆ ಆರೋಗ್ಯಪಾಲನೆಗೆ ಸಂಬಂಧಪಟ್ಟ ಸಾಂಪ್ರದಾಯಿಕ ಚಟುವಟಿಕೆಗಳು ಹಾಗೂ ಮತ್ತಷ್ಟು ಆಧುನಿಕ ಸೇವೆಗಳಾದ ಚಿಕಿತ್ಸಕ ಸೇವೆಗಳು, ಔಷಧಿಗಳನ್ನು ಅವುಗಳ ಸುರಕ್ಷತೆ ಹಾಗೂ ಪರಿಣಾಮತ್ವಗಳ ಪ್ರಮಾಣೀಕರಣ ಹಾಗೂ ಔಷಧಿ ಮಾಹಿತಿ ನೀಡುವುದು ಔಷಧ ವೃತ್ತಿಯ ವ್ಯಾಪ್ತಿಗೆ ಬರುತ್ತವೆ. ಆದ್ದರಿಂದ ಔಷಧಿಕಾರರು, ಔಷಧಸಾಮಗ್ರಿ ಚಿಕಿತ್ಸೆಯಲ್ಲಿ ನಿಪುಣರಾಗಿರುತ್ತಾರಲ್ಲದೇ ರೋಗಿಗಳಿಗೆ ಸಕಾರಾತ್ಮಕ ಪರಿಣಾಮವಾಗುವಂತೆ ಔಷಧಿಯನ್ನು ಸಿದ್ಧಪಡಿಸುವ ಪ್ರಾಥಮಿಕ ಆರೋಗ್ಯ ವೃತ್ತಿಪರರಾಗಿರುತ್ತಾರೆ.

ಔಷಧಾಲಯ/ಔಷಧ ವೃತ್ತಿ(ಪ್ರಾಥಮಿಕ ಅರ್ಥದಲ್ಲಿ)ಯನ್ನು ನಡೆಸುತ್ತಿರುವ ಸಂಸ್ಥೆಯನ್ನು ಔಷಧಾಲಯ/ಔಷಧಶಾಲೆ , ಔಷಧಿಗಾರ ಅಥವಾ ಔಷಧ ಅಂಗಡಿ ಎಂದು ಕರೆಯಲಾಗುತ್ತದೆ. ಈ ಔಷಧಿಗಳು ಸಾಧಾರಣವಾಗಿ ಕೇವಲ ಔಷಧಿಗಳನ್ನು ಮಾತ್ರವಲ್ಲ, ಬದಲಿಗೆ ಇತರೆ ವಸ್ತುಗಳಾದ ಮಿಠಾಯಿ/ಕ್ಯಾಂಡಿ (ಸಿಹಿಗಳು), ಪ್ರಸಾಧನ ಸಾಮಗ್ರಿಗಳು, ಹಾಗೂ ನಿಯತಕಾಲಿಕೆಗಳು, ಅಷ್ಟೇ ಅಲ್ಲದೇ ಲಘು ತಿನಿಸುಗಳು ಅಥವಾ ಲಘು ದಿನಸಿಗಳನ್ನೂ ಮಾರುತ್ತವೆ.

ಔಷಧಾಲಯ/ಔಷಧಶಾಲೆ ಎಂಬ ಪಾರಿಭಾಷಿಕ ಪದವು ಅದರ ಮೂಲ ಪದ ಔಷಧಿಸಂಸ್ಥೆ/ಕಂಪೆನಿಯಿಂದ ವ್ಯುತ್ಪನ್ನವಾಗಿದ್ದು ಆ ಪದವನ್ನು 1400–1600ರ ಅವಧಿಯಿಂದಲೇ ಬಳಸಲಾಗುತ್ತಿತ್ತು. ಔಷಧಿಸಂಸ್ಥೆ/ಕಂಪೆನಿಯ ಬಾಧ್ಯತೆಗಳೊಂದಿಗೆ ಔಷಧಿಸಂಸ್ಥೆ/ಕಂಪೆನಿಯು ಸಾರ್ವತ್ರಿಕ ವೈದ್ಯಕೀಯ ಸಲಹೆ ಹಾಗೂ ಶಸ್ತ್ರಚಿಕಿತ್ಸೆ ಹಾಗೂ ಪ್ರಸೂತಿಚಿಕಿತ್ಸೆಯಂತಹಾ ಪ್ರಸ್ತುತ ಇತರೆ ತಜ್ಞವೈದ್ಯರುಗಳು ಮಾತ್ರವೇ ಕೈಗೊಳ್ಳುವ ವ್ಯಾಪಕವಾದ ಸೇವೆಗಳನ್ನು ನೀಡುತ್ತಿತ್ತು. (ಹಾಗೆ ಕರೆಯಲಾಗುತ್ತಿದ್ದ) ಔಷಧಿಸಂಸ್ಥೆ/ಕಂಪೆನಿಯು ಅನೇಕ ವೇಳೆ ಔಷಧಿಗಳ ಜೊತೆಗೆ, ತಂಬಾಕು ಹಾಗೂ ಹಕ್ಕುಸ್ವಾಮ್ಯದ ಔಷಧಿಗಳನ್ನು ಕೂಡಾ ಮಾರುತ್ತಿದ್ದ ಚಿಲ್ಲರೆ ಮಾರಾಟದ ಅಂಗಡಿಯಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಔಷಧಿಸಂಸ್ಥೆ/ಕಂಪೆನಿಗಳು ವ್ಯಾಪಕ ಬಳಕೆಯಲ್ಲಿರದ ಇನ್ನೂ ಅನೇಕ ಮೂಲಿಕೆಗಳನ್ನು ಬಳಸುತ್ತಿದ್ದವು.

ಮೂಲಿಕಾ ಹಾಗೂ ರಾಸಾಯನಿಕ ಘಟಕಾಂಶಗಳ ಪರೀಕ್ಷಾ ಚಟುವಟಿಕೆಗಳಲ್ಲಿ, ಔಷಧಿಸಂಸ್ಥೆ/ಕಂಪೆನಿಯ ಚಟುವಟಿಕೆಯು ವೈಜ್ಞಾನಿಕ ವಿಧಾನದ ಸೂತ್ರೀಕರಣದ ಮುನ್ನ ಆಧುನಿಕ ವಿಜ್ಞಾನ ಶಾಖೆಗಳಾದ ರಸಾಯನಶಾಸ್ತ್ರ ಹಾಗೂ ಔಷಧವಸ್ತು/ಪ್ರಭಾವಶಾಸ್ತ್ರಗಳ ಪೂರ್ವಗಾಮಿಯಾಗಿತ್ತು ಎನ್ನಬಹುದು.

ಶಾಖೆಗಳು[ಬದಲಾಯಿಸಿ]

ಔಷಧಾಲಯ/ಔಷಧಶಾಲೆ , tacuinum sanitatis casanatensis (XIV ಶತಮಾನ)

ಔಷಧಾಲಯ/ಔಷಧವೃತ್ತಿ ಕ್ಷೇತ್ರವನ್ನು ಸಾರ್ವತ್ರಿಕವಾಗಿ ಮೂರು ಪ್ರಮುಖ ಶಾಖೆಗಳಾಗಿ ವಿಂಗಡಿಸಬಹುದಾಗಿದೆ:

ಈ ಶಾಖೆಗಳು ಹಾಗೂ ಜೀವರಸಾಯನಶಾಸ್ತ್ರಗಳಂತಹಾ ಇತರೆ ವಿಜ್ಞಾನ ಶಾಖೆಗಳ ನಡುವಿನ ಗಡಿರೇಖೆಯು ಯಾವಾಗಲೂ ಸ್ಪಷ್ಟವಾಗಿರಲೇಬೇಕೆಂದೇನಿಲ್ಲ; ಅನೇಕ ವೇಳೆ ವಿವಿಧ ಶಾಖೆಗಳ ಸಹಭಾಗಿ ತಂಡಗಳು ಜೊತೆಗೂಡಿ ಸಂಶೋಧನೆ ನಡೆಸುತ್ತವೆ.

ಔಷಧವಸ್ತು/ಪ್ರಭಾವಶಾಸ್ತ್ರವನ್ನು ಕೆಲವೊಮ್ಮೆ ಔಷಧಾಲಯ/ಔಷಧಶಾಲೆಯ ನಾಲ್ಕನೇ ಶಾಖೆಯನ್ನಾಗಿ ಪರಿಗಣಿಸಲಾಗುತ್ತದೆ. ಔಷಧವಸ್ತು/ಪ್ರಭಾವಶಾಸ್ತ್ರವು ಔಷಧಾಲಯ/ಔಷಧವೃತ್ತಿಯ ಅಧ್ಯಯನಕ್ಕೆ ಅತ್ಯಗತ್ಯವಾದರೂ, ಅದು ಔಷಧಾಲಯ/ಔಷಧವೃತ್ತಿಗೇ ನಿರ್ದಿಷ್ಟ/ಸೀಮಿತಗೊಂಡಿಲ್ಲ. ಆದ್ದರಿಂದ ಇದನ್ನು ಸಾಧಾರಣವಾಗಿ ಸಮಗ್ರ ವಿಜ್ಞಾನದ ಶಾಖೆಯೆಂದು ಪರಿಗಣಿಸಲಾಗುತ್ತದೆ.

ಔಷಧೀಯ ವಿಶೇಷಜ್ಞತೆಗಳ ಮಂಡಳಿಯ ಅನುಮೋದನೆ ಪಡೆದ ಔಷಧಾಲಯ/ಔಷಧವೃತ್ತಿಯಲ್ಲಿನ ಇತರೆ ತಜ್ಞಶಾಖೆಗಳೆಂದರೆ: ಹೃದಯ ರಕ್ತನಾಳಶಾಸ್ತ್ರ, ಸಾಂಕ್ರಾಮಿಕ ರೋಗ, ಗ್ರಂಥಿಶಾಸ್ತ್ರ, ಔಷಧೀಯ ಚಿಕಿತ್ಸೆ, ಪರಮಾಣು ಚಿಕಿತ್ಸೆ, ಪೌಷ್ಟಿಕತೆ ಹಾಗೂ ಮನೋವೈದ್ಯಶಾಸ್ತ್ರ.[೧] ವೃದ್ಧಾಪ್ಯಶಾಸ್ತ್ರ/ದ ಔಷಧಾಲಯ/ಔಷಧಶಾಲೆಯ ಪ್ರಮಾಣೀಕರಣ ಸಮಿತಿಯು ಔಷಧಿಕಾರರ ವೃದ್ಧಾಪ್ಯಶಾಸ್ತ್ರ/ದ ಔಷಧಾಲಯ/ಔಷಧವೃತ್ತಿಯ ನೈಪುಣ್ಯತೆಯನ್ನು ಪ್ರಮಾಣೀಕರಿಸುತ್ತದೆ. ಅಮೇರಿಕನ್‌ ಬೋರ್ಡ್‌ ಆಫ್‌ ಅಪ್ಲೈಡ್‌ ಟಾಕ್ಸಿಕಾಲಜಿ ಸಂಸ್ಥೆಯು ಔಷಧಿಕಾರರ ಹಾಗೂ ಇತರೆ ವೈದ್ಯಕೀಯ ವೃತ್ತಿಪರರನ್ನು ಅನ್ವಯಿಕ ವಿಷವೈದ್ಯಶಾಸ್ತ್ರದ ನೈಪುಣ್ಯತೆಯನ್ನು ಪ್ರಮಾಣೀಕರಿಸುತ್ತದೆ.

ಔಷಧಿಕಾರರು[ಬದಲಾಯಿಸಿ]

ಔಷಧಿಕಾರರು ತಮ್ಮ ರೋಗಿಗಳಿಗೆ ಉತ್ತಮ ಆರೋಗ್ಯವನ್ನು ನೀಡುವ ನಿಟ್ಟಿನಲ್ಲಿ ವಿವಿಧ ಪಾತ್ರಗಳನ್ನು ವಹಿಸುವಂತಹಾ ಉನ್ನತ-ತರಬೇತಿ ಹೊಂದಿದ ಹಾಗೂ ಕೌಶಲ್ಯತೆ ಹೊಂದಿರುವ ವೈದ್ಯಕೀಯ ವೃತ್ತಿಪರರಾಗಿರುತ್ತಾರೆ. ಅನೇಕ ಔಷಧಿಕಾರರು ಸಣ್ಣ-ಉದ್ದಿಮೆದಾರರು ಕೂಡಾ ಆಗಿದ್ದು ತಮ್ಮ ಸ್ವಾಮ್ಯದ ಔಷಧಾಲಯ/ಔಷಧಶಾಲೆಯಲ್ಲೇ ಕಾರ್ಯನಿರ್ವಹಿಸುತ್ತಿರುತ್ತಾರೆ.

ಔಷಧಿಕಾರರು ಅಂತರರಾಷ್ಟ್ರೀಯ ಔಷಧೀಯ ಒಕ್ಕೂಟ(FIP)ದ ಮೂಲಕ ಅಂತರರಾಷ್ಟ್ರೀಯವಾಗಿ ತಮ್ಮನ್ನು ಪ್ರತಿನಿಧಿಸಿಕೊಳ್ಳುತ್ತಾರೆ. ಅವರು ರಾಷ್ಟ್ರೀಯ ಮಟ್ಟದಲ್ಲಿ ಡಚ್‌‌ ಫಾರ್ಮಸಿಸ್ಟ್‌ಸ್‌‌ ಅಸೋಸಿಯೇಷನ್‌ (VNA), ರಾಯಲ್‌ ಫಾರ್ಮಸ್ಯೂಟಿಕಲ್‌ ಸೊಸೈಟಿ ಆಫ್‌ ಗ್ರೇಟ್‌‌ ಬ್ರಿಟನ್‌(RPSGB), ಫಾರ್ಮಸಿ ಗಿಲ್ಡ್‌‌ ಆಫ್‌ ಆಸ್ಟ್ರೇಲಿಯಾ(PGA), ಪಾಕಿಸ್ತಾನ್‌ ಫಾರ್ಮಾಸಿಸ್ಟ್‌‌ಸ್‌‌ ಸೊಸೈಟಿ (PPS) ಹಾಗೂ ಅಮೇರಿಕನ್‌‌ ಫಾರ್ಮಸಿಸ್ಟ್‌‌ಸ್‌‌ ಅಸೋಸಿಯೇಷನ್‌‌ (APhA)ಗಳಂತಹಾ ವೃತ್ತಿಪರ ಸಂಸ್ಥೆಗಳಿಂದ ಪ್ರತಿನಿಧಿಸಲ್ಪಡುತ್ತಾರೆ. ಇದನ್ನೂ ನೋಡಿ: ಔಷಧಾಲಯ/ಔಷಧಶಾಲೆ ಸಂಸ್ಥೆಗಳ ಪಟ್ಟಿ.

ಕೆಲ ಪ್ರಕರಣ/ಸಂದರ್ಭಗಳಲ್ಲಿ, ಪ್ರಾತಿನಿಧಿಕ ಸಂಸ್ಥೆಯು ವೃತ್ತಿಯ ನಿಯಮ/ನೈತಿಕತೆಗಳನ್ನು ನಿರೂಪಿಸುವ ಜವಾಬ್ದಾರಿ ಹೊಂದಿರುವ ನೊಂದಾಯಿಸಿಕೊಳ್ಳುವ ಸಂಸ್ಥೆಯೂ ಆಗಿರುತ್ತದೆ. ಷಿಪ್‌ಮನ್‌‌ ತನಿಖೆ Archived 2009-08-08 at the UK Government Web Archive ಯ ನಂತರ, ಇವೆರಡೂ ಜವಾಬ್ದಾರಿಗಳನ್ನು ಪ್ರತ್ಯೇಕಿಸುವ ನಡೆಯನ್ನು UKನಲ್ಲಿ ತೆಗೆದುಕೊಳ್ಳಲಾಗಿದೆ.

ಔಷಧಾಲಯ/ಔಷಧವೃತ್ತಿಯ ಇತಿಹಾಸ[ಬದಲಾಯಿಸಿ]

ವೈದ್ಯಕೀಯ ಮೂಲಿಕೆಗಳ ಪ್ರಾಕ್ತನ ಅಧ್ಯಯನಶಾಸ್ತ್ರವು ಪ್ರಾಚೀನ ಕಾಲದಲ್ಲಿನ ವೈದ್ಯಕೀಯ ಮೂಲಿಕೆಗಳ ಬಳಕೆಯನ್ನು ದೃಢೀಕರಿಸುತ್ತವೆ.[೨]

ಅತೀ ಪ್ರಾಚೀನವಾದ ಪರಿಚಿತ ವೈದ್ಯಕೀಯ ವಸ್ತುಗಳ ಮಾಹಿತಿ ಗ್ರಂಥವೆಂದರೆ 6ನೇ ಶತಮಾನ BCಯಲ್ಲಿ ಸುಶ್ರುತ ರಚಿಸಿದ್ದೆಂದು ಹೇಳಲಾದ ಭಾರತೀಯ ಆಯುರ್ವೇದ ಗ್ರಂಥವಾದ ARIANAದ ಸುಶ್ರುತ ಸಂಹಿತೆ ಯಾಗಿದೆ. ಆದಾಗ್ಯೂ, ರಕ್ಷಿತಗೊಂಡ ಅತಿ ಪ್ರಾಚೀನ ಗ್ರಂಥವು 3ನೇ ಅಥವಾ 4ನೇ ಶತಮಾನ AD ಕಾಲದ್ದಾಗಿದೆ.

ಅನೇಕ ಸುಮೇರಿಯನ್‌ ಕಾಲದ (6ನೇ ಸಹಸ್ರಮಾನ BCಯ ಕೊನೆಯ ಭಾಗ - 2ನೇ ಸಹಸ್ರಮಾನ BCಯ ಮೊದಲ ಭಾಗ) ಬೆಣೆಯಾಕಾರದ ಆವೆಮಣ್ಣಿನ ಬಿಲ್ಲೆ ಶಾಸನಗಳು ಔಷಧೀಯ ಸೂಚನೆಗಳನ್ನು ದಾಖಲಿಸಿಕೊಂಡಿದ್ದವು.[೩]

ಪ್ರಾಚೀನ ಈಜಿಪ್ಟ್‌ನ ಔಷಧವಸ್ತುಶಾಸ್ತ್ರೀಯ ಮಾಹಿತಿಗಳನ್ನು 1550 BCಯ ಈಬರ್ಸ್‌‌‌ ಜಂಬುಕಾಗದಗಳು‌‌ , ಹಾಗೂ 16ನೇ ಶತಮಾನ BCಯ ಎಡ್ವಿನ್‌ ಸ್ಮಿತ್‌‌‌‌ ಜಂಬುಕಾಗದ ಗಳಂತಹಾ ಅನೇಕ ಶಾಸನಗಳಲ್ಲಿ ದಾಖಲಿಸಲಾಗಿತ್ತು.

ವೈದ್ಯಕೀಯ ವಸ್ತುಗಳ ಮೇಲಿನ ಅತ್ಯಂತ ಪ್ರಾಚೀನ ಚೀನೀಯ ಕೈಪಿಡಿಯೆಂದರೆ 1ನೇ ಶತಮಾನ ADಯಷ್ಟು ಹಳೆಯದಾದ ಷೆನ್ನಾಂಗ್‌ ಬೆಂಕಾವ್‌‌ ಜಿಂಗ್‌‌ (ದೈವಿಕ ಕೃಷಿಕ'ನ ಮೂಲಿಕೆ-ಬೇರುಗಳ ಪ್ರಾಚೀನ ಗ್ರಂಥ ). ಇದನ್ನು ಹ್ಯಾನ್‌ ಸಾಮ್ರಾಜ್ಯದ ಅವಧಿಯಲ್ಲಿ ಸಂಪಾದಿಸಲಾಗಿತ್ತಲ್ಲದೇ ಇದನ್ನು ದಂತಕಥಾರೂಪದ ಷೆನ್ನಾಂಗ್‌ರದ್ದು ಎಂದು ಹೇಳಲಾಗಿತ್ತು. 168 BCಯಲ್ಲಿ ಮುಚ್ಚಿಬಿಡಲಾಗಿದ್ದ ಮಾವಂಗ್‌ಡುಯ್‌‌ ಸಮಾಧಿಯಲ್ಲಿ ಪತ್ತೆಯಾದ "52 ವ್ಯಾಧಿಗಳಿಗೆ ಔಷಧಿಪಟ್ಟಿಗಳು" ಎಂಬ ಹಸ್ತಪ್ರತಿಯು ದೃಷ್ಟಾಂತ ನೀಡುವಂತೆ ಪ್ರಾಚೀನ ಗ್ರಂಥಗಳಲ್ಲಿ ನಿರ್ದಿಷ್ಟ ವ್ಯಾಧಿಗಳಿಗೆ ನೀಡುವ ಚಿಕಿತ್ಸಾವಿಧಿಗಳ ಪಟ್ಟಿಗಳಿದ್ದವು. ಚೀನೀಯ ಔಷಧಾಲಯ/ಔಷಧವೃತ್ತಿಯ ಬಗೆಗಿನ ಮತ್ತಷ್ಟು ಮಾಹಿತಿಯ/ವಿವರಗಳನ್ನು ಚೀನಾದಲ್ಲಿನ ಔಷಧಾಲಯ/ಔಷಧವೃತ್ತಿ ಲೇಖನದಲ್ಲಿ ಕಾಣಬಹುದು.

ಗ್ರೀಕ್‌‌‌ ವೈದ್ಯ ಪೆಡಾನಿಯಸ್‌ ಡಯೋಕೊರೈಡ್ಸ್‌‌‌ ಸ್ಥಳೀಯ ಗ್ರೀಕ್‌‌ ಭಾಷೆಯಲ್ಲಿ ಬರೆದ 1ನೇ ಶತಮಾನ ADಯಲ್ಲಿ ಐದು ಸಂಪುಟಗಳ ಗ್ರಂಥ ‌Περί ύλης ιατρικήςಕ್ಕಾಗಿ ಹೆಸರುವಾಸಿಯಾಗಿದ್ದಾರೆ. ಅದರ ಲ್ಯಾಟಿನ್‌‌‌ ಭಾಷಾಂತರ De Materia Medica/ಡೆ ಮೆಟೀರಿಯಾ ಮೆಡಿಕಾ ವನ್ನು (ವೈದ್ಯಕೀಯ ವಸ್ತುಗಳಿಗೆ ಸಂಬಂಧಪಟ್ಟಂತೆ ) ಮಹಮ್ಮದೀಯ ಸ್ವರ್ಣಯುಗದ ಅವಧಿಯಲ್ಲಿನ ಅನೇಕ ಮಧ್ಯಪ್ರಾಚ್ಯದ ವಿಜ್ಞಾನಿಗಳ ಅಧ್ಯಯನಗಳನ್ನು ಆಧಾರವಾಗಿಟ್ಟುಕೊಂಡು ರಚಿಸಿದ ಇದನ್ನು ಅನೇಕ ಮಧ್ಯಯುಗದ ಗ್ರಂಥಗಳಿಗೆ ಆಕರಗ್ರಂಥವನ್ನಾಗಿ ಬಳಸಲಾಗಿದೆ. ಅದರ ಶೀರ್ಷಿಕೆಯು ಮೆಟೀರಿಯಾ ಮೆಡಿಕಾ ಎಂಬ ಪದ ರೂಪುಗೊಳ್ಳಲು ಕಾರಣವಾಯಿತು.

ಜಪಾನ್‌‌‌ನಲ್ಲಿ, ಅಸುಕಾ ಅವಧಿಯ (538-710) ಕೊನೆ ಹಾಗೂ ನಾರಾ ಅವಧಿಯ ಆದಿಗಳಲ್ಲಿ (710-794), ಆಧುನಿಕ ಔಷಧಿಕಾರರಿಗೆ ಸಮನಾದ ಜವಾಬ್ದಾರಿಗಳನ್ನು ಹೊತ್ತಿದ್ದ ವ್ಯಕ್ತಿಗಳನ್ನು ಬಹುಗೌರವದಿಂದ ನೋಡಲಾಗುತ್ತಿತ್ತು. ಟಾಯ್‌ಹೋ ಸಂಹಿತೆ (701)ಯಲ್ಲಿ ಸಮಾಜದಲ್ಲಿ ಔಷಧಿಕಾರರ ಸ್ಥಾನವನ್ನು ವಿಷದವಾಗಿ ವಿವರಿಸಲಾಗಿದ್ದು ಯೋರೋ ಸಂಹಿತೆ (718)ಯಲ್ಲಿ ಅದನ್ನು ಪುನರುಚ್ಚರಿಸಲಾಗಿದೆ. ಉತ್ತಮ ದರ್ಜೆಯ ಸ್ಥಾನಗಳನ್ನು ಹೇ-ಪೂರ್ವ ರಾಜಾಸ್ಥಾನಗಳಲ್ಲಿ ಅವರುಗಳಿಗೆ ನೀಡಲಾಗಿತ್ತಲ್ಲದೇ; ಈ ಸಾಂಸ್ಥಿಕ ಸಂರಚನೆಯು ಮೇಜೀ ಪುನಃಪ್ರತಿಷ್ಠಾಪನೆ(1868)ಯ ಅವಧಿಯವರೆಗೆ ಹಾಗೆಯೇ ಮುಂದುವರೆಯಿತು. ಈ ಸ್ಥಿರ ವರ್ಗಶ್ರೇಣಿಯಲ್ಲಿ ಔಷಧಿಕಾರರು—ಹಾಗೂ ಔಷಧಿಕಾರ ಸಹಾಯಕರೂ ಕೂಡಾ ಆರೋಗ್ಯ-ಸಂಬಂಧಿ ಕ್ಷೇತ್ರಗಳಲ್ಲಿ ವೈದ್ಯರು ಹಾಗೂ ಸೂಜಿಚಿಕಿತ್ಸಕರುಗಳಂತಹಾ ಉಳಿದವರಿಗಿಂತ ಉನ್ನತ ಸ್ಥಾನಮಾನವನ್ನು ನೀಡಲಾಗಿತ್ತು. ರಾಜವಂಶೀಯ ವ್ಯವಸ್ಥೆಯಲ್ಲಿ ಔಷಧಿಕಾರರನ್ನು ಚಕ್ರವರ್ತಿಯ ಇಬ್ಬರು ಖಾಸಗಿ ವೈದ್ಯರುಗಳಿಗಿಂತ ಉನ್ನತ ಸ್ಥಾನ ನೀಡಲಾಗಿತ್ತು.[೪]

ಔಷಧಾಲಯ/ಔಷಧವೃತ್ತಿಯನ್ನು ಸೂಚಿಸುವ ಮುಕ್ಕಾಲು ಮಣೆ, ಒರಳು/ಕಲಬತ್ತು, ಹಾಗೂ ಕುಟ್ಟಾಣಿಯನ್ನು ವೈದ್ಯನಂತ ವ್ಯಕ್ತಿಯ ಮುಂದೆ ಇಟ್ಟಿರುವಂತಹಾ ಕಲ್ಲು ಫಲಕವನ್ನು ಟರ್ಕಿಯಲ್ಲಿನ ಕುಸಾದಸಿ ಸನಿಹದ ಯುಫೇಯಸ್‌ನಲ್ಲಿನ ಒಂದು ಗ್ರಾಮೀಣ ದಾರಿಯಲ್ಲಿ ಇದೆ. http://www.pbase.com/tsechien/ephesus_ ತಾಣವು ಅಲ್ಲಿನ ಛಾಯಾಚಿತ್ರಗಳನ್ನು ಹೊಂದಿದೆ. ಪ್ರಸ್ತುತ ಯುಫೇಯಸ್‌ ನಗರವು 400BCಯಷ್ಟು ಹಳೆಯದಾಗಿದ್ದು ಮಾರ್ಕ್‌ ಆಂಟನಿ ಹಾಗೂ ಕ್ಲಿಯೋಪಾತ್ರ, ಮೇರಿ ಮ್ಯಾಗ್ಡಲೀನ್‌ರವರುಗಳ ನೆಲೆಯಾಗಿದ್ದುದಲ್ಲದೇ ಅಲ್ಲಿಯೇ St ಪಾಲ್‌, ಎಫೆಸಿಯನ್ನರಿಗೆ ತಾನು ಬರೆದ ಪತ್ರವನ್ನು ವಾಚಿಸಿದ್ದು ಹಾಗೂ ವಿಶ್ವದ ಏಳು ಅದ್ಭುತಗಳಲ್ಲಿ ಒಂದಾದ ಆರ್ಟೆಮಿಸ್‌ನ ದೇವಾಲಯವಿರುವ ಸ್ಥಳವೂ ಆಗಿದೆ.

ಬಾಗ್ದಾದ್‌‌ನಲ್ಲಿನ ಮೊದಲಿನ ಔಷಧಶಾಲೆಗಳು ಅಥವಾ ಔಷಧಿ ಅಂಗಡಿಗಳನ್ನು 754ರಲ್ಲಿ,[೫] ಅಬ್ಬಾಸಿದ್‌‌ ಖಲೀಫಸ್ಥಾನ ಮಹಮ್ಮದೀಯ ಸ್ವರ್ಣಯುಗದಲ್ಲಿ ‌ಸ್ಥಾಪಿಸಲಾಯಿತು. 9ನೇ ಶತಮಾನದ ಹೊತ್ತಿಗೆ, ಈ ಔಷಧಾಲಯಗಳನ್ನು ಸರ್ಕಾರದ ನಿಯಂತ್ರಣಕ್ಕೆ ತೆಗೆದುಕೊಳ್ಳಲಾಗಿತ್ತು.[೬]

ಮಧ್ಯ ಪ್ರಾಚ್ಯದಲ್ಲಿ ಸಸ್ಯಶಾಸ್ತ್ರ ಹಾಗೂ ರಸಾಯನಶಾಸ್ತ್ರ ಕ್ಷೇತ್ರಗಳಲ್ಲಿ ಆದ ಪ್ರಗತಿಯು ಮಹಮ್ಮದೀಯ ಮಧ್ಯಯುಗದ ಔಷಧಶಾಸ್ತ್ರವನ್ನು ಔಷಧವಸ್ತು/ಪ್ರಭಾವಶಾಸ್ತ್ರವಾಗಿ ಬೆಳೆಯಲು ಮೂಲಭೂತ ಕಾರಣವಾಯಿತು. ಉದಾಹರಣೆಗೆ ಮುಹಮ್ಮದ್‌‌ ಇಬ್ನ್‌ ಝಕಾರಿಯಾ ರಜಿ (ರ್ರ್ಹೇಜಸ್‌‌ )(865-915), ರಾಸಾಯನಿಕ ಸಂಯುಕ್ತಗಳ ವೈದ್ಯಕೀಯ ಬಳಕೆಯನ್ನು ನೀಡಿದ ಉತ್ತೇಜನ. ಅಬು ಅಲ್‌‌‌-ಖಾಸಿಮ್‌‌ ಅಲ್‌‌-ಝಹ್ರಾವಿ (ಅಬುಲ್‌ಕಾಸಿಸ್‌‌) (936-1013) ಔಷಧಿಗಳ ಉತ್ಪತನ ಹಾಗೂ ಆಸವನ ಪ್ರಕ್ರಿಯೆಗಳ ಮೂಲಕ ತಯಾರಿಕೆಯ ಪ್ರವರ್ತಕರಾಗಿದ್ದರು. ಅವರ ಲಿಬರ್‌ ಸರ್ವಿಟೋರಿಸ್‌‌ ಸಾಧಾರಣವಾಗಿ ಬಳಸಲಾಗುವ ಸಂಯೋಜಿಸಿ ತಯಾರಿಸಲಾದ ಸಂಕೀರ್ಣ ಔಷಧಗಳನ್ನು ಬಳಸಿ 'ಸಿಂಪಲ್ಸ್‌‌ಗಳನ್ನು' ತಯಾರಿಸುವುದು ಹೇಗೆ ಎಂದು ವಿವರಿಸುವ ಹಾಗೂ ಔಷಧಪಟ್ಟಿಗಳನ್ನು ಓದುಗರಿಗೆ ನೀಡುವುದರಿಂದ ಹೆಚ್ಚು ಆಸಕ್ತಿದಾಯಕ ಗ್ರಂಥವಾಗಿದೆ. ಆದಾಗ್ಯೂ ಸಬುರ್‌‌ ಇಬ್ನ್‌‌ ಸಾಹ್ಲ್‌‌‌ (d 869)ರವರು, ಬಹುವಿಧಗಳ ಔಷಧಿಗಳು ಹಾಗೂ ವ್ಯಾಧಿಗಳಿಗೆ ಪರಿಹಾರವನ್ನು ಸೂಚಿಸುವ ಫಾರ್ಮಕೋಪೀಡಿಯಾ ವ್ಯವಸ್ಥೆಗೆ ಚಾಲನೆ ನೀಡಿದ ಪ್ರಥಮ ವೈದ್ಯರಾಗಿದ್ದಾರೆ. ಅಲ್‌‌-ಬಿರುನಿ (973-1050) ಔಷಧಾಲಯ/ಔಷಧವೃತ್ತಿಯ ಜವಾಬ್ದಾರಿಯನ್ನು ಹಾಗೂ ಔಷಧಿಕಾರರ ಕಾರ್ಯಗಳು ಹಾಗೂ ಕರ್ತವ್ಯಗಳನ್ನು ವಿವರಿಸಿದ ಹಾಗೂ ಔಷಧಿಗಳ ಲಕ್ಷಣಗಳನ್ನು ವಿವರಿಸಿದ ಔಷಧವಸ್ತು/ಪ್ರಭಾವಶಾಸ್ತ್ರಗಳ ಮೇಲಿನ ಮೌಲಿಕವಾದ ಮಹಮ್ಮದೀಯ ಗ್ರಂಥಗಳಲ್ಲಿ ಒಂದಾದ ಕಿತಾಬ್‌ ಅಲ್‌‌-ಸಯ್‌ಡಾಲಾಹ್ ‌(ಔಷಧಿಗಳ ಗ್ರಂಥ ) ಎಂಬ ಹೆಸರಿನ, ಗ್ರಂಥವನ್ನು ರಚಿಸಿದ್ದಾರೆ. ಇಬ್ನ್‌‌ ಸಿನಾ (ಅವಿಸೆನ್ನಾ), ಕೂಡಾ 700ಕ್ಕಿಂತ ಹೆಚ್ಚಿನ ತಯಾರಿಕೆಗಳು, ಅವುಗಳ ಲಕ್ಷಣಗಳು, ಅವುಗಳ ಚಟುವಟಿಕೆಯ ರೀತಿ ಹಾಗೂ ಅವುಗಳ ಲಕ್ಷಣಗಳನ್ನು ವಿವರಿಸಿದ್ದಾರೆ. ಅವರು ದ ಕ್ಯಾನನ್‌ ಆಫ್‌ ಮೆಡಿಸಿನ್‌ ಗ್ರಂಥದಲ್ಲಿ ವಸ್ತುತಃ ಇಡೀ ಸಂಪುಟವನ್ನೇ ಸರಳ ಔಷಧಿಗಳಿಗೆ ಮೀಸಲಿಟ್ಟಿದ್ದಾರೆ. ಲ್ಯಾಟಿನ್‌‌‌ ಭಾಷೆಯಲ್ಲಿ ಐವತ್ತಕ್ಕೂ ಹೆಚ್ಚು ಬಾರಿ ಮುದ್ರಣಗೊಂಡಿರುವ ಎರಡು ಕೃತಿಗಳಾದ ಬಾಗ್ದಾದ್‌ನ‌ ಅಲ್‌-ಮರಿದಿನಿ ಹಾಗೂ ಕೈರೋಇಬ್ನ್‌‌ ಅಲ್‌‌-ವಫೀದ್‌‌ (1008-1074)ಗಳನ್ನು 'ಮೆಸ್ಯೂ' ದ ಯಂಗರ್‌/ಕಿರಿಯ ರಚಿತ ಡೆ ಮೆಡಿಸಿನಿಸ್‌ ಯೂನಿವರ್ಸಲಿಬಸ್‌‌ ಎಟ್‌‌ ಪರ್ಟಿಕ್ಯುಲರ್‌ಬಸ್‌ ಹಾಗೂ 'ಅಬೆಂಗ್ಯೂಫಿಟ್‌‌' ರಚಿತ ಮೆಡಿಕ್ಯಾಮೆಂಟಿಸ್‌ ಸಿಂಪ್ಲಿಸಿಬಸ್‌‌ ಕಾಣಿಸಿಕೊಳ್ಳುತ್ತವೆ. ಅಬಾನೋದ ಪೀಟರ್‌‌ರು (1250-1316) ಡೆ ವೆನೆರಿಸ್‌‌ ಎಂಬ ಶೀರ್ಷಿಕೆಯಡಿ ಅಲ್‌‌-ಮರಿದಿನಿ ಎಂಬ ಗ್ರಂಥವನ್ನು ಭಾಷಾಂತರಿಸಿ ಅದಕ್ಕೆ ಅನುಬಂಧವನ್ನು ಕೂಡಾ ಸೇರಿಸಿದ್ದಾರೆ. ಈ ಕ್ಷೇತ್ರದಲ್ಲಿ ಅಲ್‌‌-ಮುವಾಫ್ಫಾಕ್‌’ರ ಕೊಡುಗೆಗಳು ಕೂಡಾ ಪ್ರವರ್ತಕವೆನಿಸಿವೆ. 10ನೇ ಶತಮಾನದಷ್ಟು ಮುಂಚೆಯೇ, ಆರ್ಸೆನಿಯಸ್‌ ಆಕ್ಸೈಡ್‌‌ ಅನ್ನು ವಿವರಿಸುವ, ಹಾಗೂ ಸಿಲಿಕಿಕ್‌ ಆಮ್ಲದ ಬಗ್ಗೆ ಹೆಚ್ಚು ವಿವರಗಳನ್ನು ನೀಡಿರುವ ರೋಗಪರಿಹಾರಗಳು ಹಾಗೂ ಅವುಗಳ ವಾಸ್ತವವಾದ ಲಕ್ಷಣಗಳ ನ್ನು ವಿವರಣೆಗಳಿಗೆ ತಳಹದಿಯನ್ನು ಒದಗಿಸಿಕೊಟ್ಟಿದ್ದರು. ಅವರು ಸೋಡಿಯಂ ಕಾರ್ಬೋನೇಟ್‌ ಹಾಗೂ ಪೊಟ್ಯಾಸಿಯಂ ಕಾರ್ಬೋನೇಟ್‌ಗಳ ನಡುವಿನ ವ್ಯತ್ಯಾಸವನ್ನು ಸ್ಪಷ್ಟಗೊಳಿಸಿದರಲ್ಲದೇ ತಾಮ್ರದ ಸಂಯುಕ್ತಗಳ ವಿಶೇಷವಾಗಿ ತಾಮ್ರದ ಸಲ್ಫೇಟ್‌‌ಗಳು ಹಾಗೂ ಸತುವುಗಳ ವಿಷದ ಪ್ರವೃತ್ತಿಯೆಡೆಗೆ ಗಮನ ಸೆಳೆದರು. ಅವರು ಕುಡಿಯುವ ನೀರನ್ನಾಗಿ ಪರಿವರ್ತಿಸಲು ಸಮುದ್ರ ನೀರಿನ ಬಟ್ಟಿಇಳಿಸುವುದನ್ನು ಕೂಡಾ ವಿವರಿಸಿದ್ದರು.[೭]

ಯೂರೋಪ್‌‌ನಲ್ಲಿ ಔಷಧಾಲಯ/ಔಷಧಶಾಲೆ -ರೀತಿಯ ಅಂಗಡಿಗಳು 12ನೇ ಶತಮಾನದಲ್ಲಿ ಕಾಣಿಸಿಕೊಳ್ಳಲು ಆರಂಭಿಸಿದವು. 1240ರಲ್ಲಿ ಚಕ್ರವರ್ತಿ ಫ್ರೆಡರಿಕ್‌‌‌ II ವೈದ್ಯ'ರು ಹಾಗೂ ಔಷಧಿಕಾರರ ವೃತ್ತಿಗಳನ್ನು ಪ್ರತ್ಯೇಕಗೊಳಿಸಿ ಶಾಸನವೊಂದನ್ನು ಹೊರಡಿಸಿದನು.[೮] ಯೂರೋಪ್‌‌ನಲ್ಲಿ ಪ್ರಪ್ರಥಮ (ಈಗಲೂ ಕಾರ್ಯನಿರ್ವಹಿಸುತ್ತಿದೆ) ಔಷಧಾಲಯ/ಔಷಧಶಾಲೆಯನ್ನು ಜರ್ಮನಿಟ್ರೈಯರ್‌ನಲ್ಲಿ 1241ರಲ್ಲಿ ತೆರೆಯಲಾಯಿತು.[ಸಾಕ್ಷ್ಯಾಧಾರ ಬೇಕಾಗಿದೆ]

ಯೂರೋಪ್‌‌ನಲ್ಲಿ 1317ರಲ್ಲಿ ತೆರೆಯಲಾದ ಕ್ರೊಯೇಷಿಯಾದ ಡುಬ್ರೋವ್‌ನಿಕ್‌‌ನಲ್ಲಿನ ಫ್ರಾನ್ಸಿಸ್‌ ಪಂಥದ ಮಠದ ಅಂಗಣದಲ್ಲಿ ಹಳೆಯ ಔಷಧಾಲಯ/ಔಷಧಶಾಲೆಗಳು ಈಗಲೂ ಕಾರ್ಯನಿರ್ವಹಿಸುತ್ತಿವೆ; ಕನಿಷ್ಟ 1422ರಷ್ಟು ಹಳೆಯದಾದ ಎಸ್ಟೋನಿಯಾದ ಟಾಲಿನ್‌‌ನ ಟೌನ್‌ಹಾಲ್‌ ಚೌಕದಲ್ಲಿರುವುದು ಸಹಾ ಅಂತಹುದೇ. ಅತ್ಯಂತ ಹಳೆಯದು ಎಂದರೆ 1221ರಲ್ಲಿ ಆರಂಭವಾದುದೆನ್ನಲಾದ ಫ್ಲಾರೆನ್ಸ್‌‌ ಇಟ್ಲೆಯ ಸಾಂಟಾ ಮರಿಯಾ ನಾವೆಲ್ಲಾ ಇಗರ್ಜಿಯಲ್ಲಿರುವುದು, ಅಲ್ಲಿ ಈಗ ಸುಗಂಧದ ವಸ್ತು ಸಂಗ್ರಹಾಲಯವಿದೆ. ಮತ್ತೊಂದು ಹಳೆಯದಾದುದೆಂದರೆ ಬಹುಮಟ್ಟಿಗೆ ಫ್ರಾನ್ಸ್‌‌‌ನೊಳಗಿರುವ ಸ್ಪೇನ್‌ನ ಕ್ಯಾಟಲನ್‌ ಪರಾವೃತ ಪ್ರದೇಶ ಪ್ಯೂಗೆಸರ್ಡಾದಿಂದ ಕೆಲವೇ ಕಿಲೋಮೀಟರ್‌ಗಳಷ್ಟು ದೂರದಲ್ಲಿರುವ ಲ್ಲಿವಿಯಾ.

ಔಷಧಾಲಯ/ಔಷಧವೃತ್ತಿಯ ಅನುಷ್ಠಾನದ ಕ್ಷೇತ್ರಗಳ ವಿಧಗಳು[ಬದಲಾಯಿಸಿ]

ಔಷಧಿಕಾರರು ಚಿಲ್ಲರೆ, ಆಸ್ಪತ್ರೆಗಳು, ದವಾಖಾನೆಗಳು, ಶುಶ್ರೂಷಾಲಯಗಳು, ಔಷಧೋದ್ಯಮ, ಹಾಗೂ ನಿಯಂತ್ರಣ ಸಂಸ್ಥೆಗಳೂ ಸೇರಿದಂತೆ ವಿವಿಧ ವ್ಯಾಪ್ತಿಗಳಲ್ಲಿ ಕಾರ್ಯ ನಿರ್ವಹಿಸುತ್ತಾರೆ. ಔಷಧಿಕಾರರು ರಕ್ತಶಾಸ್ತ್ರ /ಗ್ರಂಥಿಶಾಸ್ತ್ರ, ಸಾಂಕ್ರಾಮಿಕ ರೋಗಗಳು, ಚರರೋಗ ಚಿಕಿತ್ಸೆ, ಪೌಷ್ಟಿಕತೆಯ ಬೆಂಬಲ, ಔಷಧಿ ಮಾಹಿತಿ, ವಿಷಮಾವಸ್ಥೆಯ ಚಿಕಿತ್ಸೆ, ಶಿಶುವೈದ್ಯಶಾಸ್ತ್ರಗಳು, etc. ಸೇರಿದಂತೆ ಆದರೆ ಅಷ್ಟಕ್ಕೆ ಸೀಮಿತವಲ್ಲದ ಅನುಷ್ಠಾನದ ಅನೇಕ ಕ್ಷೇತ್ರಗಳಲ್ಲಿ ತಜ್ಞತೆಯನ್ನು ಪಡೆಯಬಹುದಾಗಿದೆ.

ಸಮುದಾಯ ಔಷಧಾಲಯ/ಔಷಧಶಾಲೆ[ಬದಲಾಯಿಸಿ]

19ನೇ ಶತಮಾನದ ಇಟಲಿಯ ಔಷಧಾಲಯ/ಔಷಧಶಾಲೆ
ನಾರ್ವೆಯಲ್ಲಿನ ಆಧುನಿಕ ಔಷಧಾಲಯ/ಔಷಧಶಾಲೆ

ಔಷಧಾಲಯ/ಔಷಧಶಾಲೆ (ಸಾರ್ವತ್ರಿಕವಾಗಿ ಆಸ್ಟ್ರೇಲಿಯಾ, ನ್ಯೂಝಿಲೆಂಡ್‌‌ ಹಾಗೂ UKಗಳಲ್ಲಿ ಔಷಧಿಕಾರ ; ಅಥವಾ ಉತ್ತರ ಅಮೇರಿಕಾದಲ್ಲಿ ಔಷಧದ ಅಂಗಡಿ ; ಔದ್ಯಮಿಕ ಪರಿಭಾಷೆಯಲ್ಲಿ ಚಿಲ್ಲರೆ ಔಷಧಾಲಯ/ಔಷಧಶಾಲೆ ; ಅಥವಾ ಐತಿಹಾಸಿಕವಾಗಿ ಔಷಧವ್ಯಾಪಾರಿ) ಎಂದರೆ ಬಹುತೇಕ ಔಷಧಿಕಾರರು ಔಷಧವೃತ್ತಿಯ ಅನುಷ್ಟಾನವನ್ನು ಕೈಗೊಳ್ಳುವ ಸ್ಥಳ. ಸಮುದಾಯ ಔಷಧಾಲಯ/ಔಷಧವೃತ್ತಿಯಲ್ಲಿ ಮಾತ್ರವೇ ವೃತ್ತಿಯು ಇಬ್ಭಾಗಗೊಳ್ಳುವಿಕೆಯು ಸಾಧ್ಯ - ಚಿಲ್ಲರೆ ವ್ಯಾಪಾರಿಗಳೂ ಆದ ಆರೋಗ್ಯ ವೃತ್ತಿಪರರು ಎಂಬಂತೆ.

ಸಮುದಾಯ ಔಷಧಾಲಯ/ಔಷಧಶಾಲೆಗಳು ಸಾಧಾರಣವಾಗಿ ಔಷಧಿಗಳನ್ನು ಸಂಗ್ರಹಿಸಿಡುವ ಹಾಗೂ ಸಿದ್ಧಪಡಿಸಿಕೊಡುವ ಔಷಧಾಲಯಗಳಾಗಿದ್ದು ಚಿಲ್ಲರೆ ಅಂಗಡಿಯಾಗಿಯೂ ಕಾರ್ಯನಿರ್ವಹಿಸುತ್ತಿರುತ್ತವೆ. ಈ ಔಷಧಶಾಲೆಯು ಕಾನೂನಿನಲ್ಲಿ ನಿಗದಿಪಡಿಸಿದ ಸಂಗ್ರಹಣಾ ಪರಿಸ್ಥಿತಿಗಳು, ಕಡ್ಡಾಯ ಗ್ರಂಥಗಳು, ಉಪಕರಣಗಳು, etc. ಗಳನ್ನು ಹೊಂದಿರುವುದು ಅಪೇಕ್ಷಣೀಯವಾಗುವಂತಹಾ ಔಷಧಾಲಯ/ಔಷಧಶಾಲೆ ಕಾನೂನಿನ ನಿಯಂತ್ರಣಕ್ಕೊಳಪಟ್ಟಿರುತ್ತದೆ. ಒಂದು ಕಾಲಘಟ್ಟದಲ್ಲಿ ಔಷಧಿಕಾರರು ಔಷಧಾಲಯದ ಕಟ್ಟಡದಲ್ಲಿಯೇ/ಸಿದ್ಧಪಡಿಸಿದ ಔಷಧಿಗಳಿಗೆ ಒಳಪಟ್ಟಂತೆಯೇ ಇರುತ್ತಿದ್ದರೂ; ನಂತರ ತರಬೇತಿ ಪಡೆದ ಔಷಧಾಲಯ/ಔಷಧವೃತ್ತಿ ತಂತ್ರಜ್ಞರುಗಳ ಬಳಕೆಯ ಹಾಗೂ ಔಷಧಿಕಾರ ಬಹುತೇಕ ಸಮಯವನ್ನು ರೋಗಿಗಳೊಂದಿಗೆ ಸಂವಹನ ನಡೆಸುತ್ತಾ ಹೆಚ್ಚು ಕಾಲ ಕಳೆಯುವ ಪ್ರವೃತ್ತಿ ಹೆಚ್ಚಿತು.

ಎಲ್ಲಾ ಔಷಧಿಶಾಲೆಗಳಲ್ಲೂ ಅದು ತೆರೆದಿರುವಷ್ಟೂ ಕಾಲ ಓರ್ವ ಔಷಧಿಕಾರನು ಲಭ್ಯವಿರುವಂತೆ ನೋಡಿಕೊಳ್ಳುವುದು ಕಡ್ಡಾಯವಾಗಿತ್ತು. ಅನೇಕ ನ್ಯಾಯಕ್ಷೇತ್ರಗಳಲ್ಲಿ, ಔಷಧಾಲಯ/ಔಷಧಶಾಲೆಯ ಮಾಲೀಕ ಕೂಡಾ ಓರ್ವ ನೊಂದಾಯಿತ ಔಷಧಿಕಾರ (R.Ph.)ನಾಗಬೇಕಾಗಿದ್ದುದು ಕಡ್ಡಾಯವಾಗಿತ್ತು. ಈ ಎರಡನೇ ಅಗತ್ಯತೆಯನ್ನು ಅನೇಕ ನ್ಯಾಯಕ್ಷೇತ್ರಗಳಲ್ಲಿ ಹಿಂತೆಗೆದುಕೊಳ್ಳಲಾಗಿದ್ದು, ಅನೇಕ ಚಿಲ್ಲರೆ ಮಳಿಗೆದಾರರು (ಬೃಹತ್‌‌ ಅಂಗಡಿಸಮುಚ್ಚಯ/ಸೂಪರ್‌ಮಾರ್ಕೆಟ್‌‌ಗಳೂ ಹಾಗೂ ಸಗಟು ವ್ಯಾಪಾರಿಗಳೂ ಸೇರಿದಂತೆ) ಈಗ ಔಷಧಾಲಯ/ಔಷಧಶಾಲೆವೊಂದನ್ನು ತಮ್ಮ ಅಂಗಡಿಯ ವಿಭಾಗವಾಗಿ ಹೊಂದಿರಲು ಅವಕಾಶವಾಗಿದೆ.

ಅದೇ ರೀತಿ, ಅನೇಕ ಔಷಧಶಾಲೆ/ಔಷಧಾಲಯಗಳು ಈಗ ತಮ್ಮ ಕಾರ್ಯವಿನ್ಯಾಸದಲ್ಲಿ ದಿನಸಿ ಅಂಗಡಿಯಂತಿರುತ್ತವೆ. ಔಷಧಿಗಳು ಹಾಗೂ ಚಿಕಿತ್ಸಾ ಸೂಚನೆಗಳೊಂದಿಗೆ, ಅನೇಕವು ಈಗ ಪ್ರಸಾಧನ ಸಾಮಗ್ರಿಗಳು, ಶಾಂಪೂ, ಕಛೇರಿ ಸಾಮಗ್ರಿ, ಮಿಠಾಯಿಗಳು, ತಿಂಡಿಗಳು, ಬಾಳಿಕೆ ಬರುವ ವೈದ್ಯಕೀಯ ಉಪಕರಣಗಳು, ಶುಭಾಶಯ ಪತ್ರಗಳು, ಹಾಗೂ ಛಾಯಾಚಿತ್ರ ಸಂಸ್ಕರಣ ಸೇವೆಗಳಂತಹಾ ಹೆಚ್ಚುವರಿ ವೈವಿದ್ಯಮಯ ಸೇವೆಗಳನ್ನು ಹಾಗೂ ಮಾರಾಟಗಳನ್ನು ಕೈಗೊಳ್ಳುತ್ತಿವೆ.

ಆಸ್ಪತ್ರೆಯ ಔಷಧಾಲಯ[ಬದಲಾಯಿಸಿ]

ಆಸ್ಪತ್ರೆಗಳೊಳಗಿನ ಔಷಧಾಲಯಗಳು ಸಮುದಾಯ ಔಷಧಾಲಯ/ಔಷಧಶಾಲೆಗಳಿಗಿಂತ ಗಮನಾರ್ಹ ಭಿನ್ನತೆ ಹೊಂದಿರುತ್ತವೆ. ಆಸ್ಪತ್ರೆ ಔಷಧಾಲಯಗಳ ಕೆಲ ಔಷಧಿಕಾರರು ಸಂಕೀರ್ಣ ಔಷಧಿನಿರ್ವಹಣಾ ಸಮಸ್ಯೆಗಳನ್ನು ಎದುರಿಸಿದರೆ ಸಮುದಾಯ ಔಷಧಾಲಯ/ಔಷಧಶಾಲೆಗಳಲ್ಲಿನ ಔಷಧಿಕಾರರು ಬಹುಮಟ್ಟಿಗೆ ವ್ಯವಹಾರ ಹಾಗೂ ಗ್ರಾಹಕ ಸಂಬಂಧಿ ಸಂಕೀರ್ಣ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ನಿರ್ದಿಷ್ಟ ಲಕ್ಷಣಗಳು, ಚಿಕಿತ್ಸಾ ಕಟ್ಟುಪಾಡುಗಳ ಪ್ರಭಾವ, ಔಷಧಿಗಳ ಸುರಕ್ಷತೆ (i.e., ಔಷಧಿಗಳ ಪ್ರತಿಕ್ರಿಯಾತ್ಮಕತೆ) ಹಾಗೂ (ಆಸ್ಪತ್ರೆಯಲ್ಲಿ ಹಾಗೂ ಮನೆಯಲ್ಲಿ) ರೋಗಿಗಳ ಅನುಸರಣಾ ಸಮಸ್ಯೆಗಳು ಸೇರಿದಂತೆ ಔಷಧಿವೃತ್ತಿಯ ಸಂಕೀರ್ಣತೆಯಿಂದಾಗಿ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುವ ಅನೇಕ ಔಷಧಿಕಾರರು ಔಷಧಾಲಯ/ಔಷಧವೃತ್ತಿಯ ಶಿಕ್ಷಣದ ನಂತರ ಔಷಧಾಲಯ/ಔಷಧವೃತ್ತಿ ತರಬೇತಿ ಶಾಲೆಗಳಲ್ಲಿ ಹೆಚ್ಚಿನ ಅಧ್ಯಯನ ಹಾಗೂ ತರಬೇತಿಯನ್ನು ಕೆಲವೊಮ್ಮೆ ನಿರ್ದಿಷ್ಟ ಪ್ರದೇಶದಲ್ಲಿನ ಮತ್ತೊಂದು ತರಬೇತಿ ಕೇಂದ್ರದಲ್ಲಿ ಅನುಷ್ಟಾನ ಮಾಡುತ್ತಾರೆ. ಅಂತಹಾ ಔಷಧಿಕಾರರನ್ನು ಕೆಲವೊಮ್ಮೆ ದವಾಖಾನೀಯ ಔಷಧಿಕಾರರು ಎಂದು ಕರೆಯಲಾಗುತ್ತದಲ್ಲದೇ ಅವರು ಅನೇಕವೇಳೆ ಔಷಧಾಲಯ/ಔಷಧವೃತ್ತಿಯ ವಿವಿಧ ಶಾಖೆಗಳಲ್ಲಿ ತಜ್ಞತೆ ಪಡೆದಿರುತ್ತಾರೆ. ಉದಾಹರಣೆಗೆ, ಈ ಔಷಧಿಕಾರರುಗಳಲ್ಲಿ ರಕ್ತಶಾಸ್ತ್ರ/ಗ್ರಂಥಿಶಾಸ್ತ್ರ, HIV/AIDS, ಸಾಂಕ್ರಾಮಿಕ ರೋಗ, ವಿಷಮಪರಿಸ್ಥಿತಿ ಚಿಕಿತ್ಸೆ, ತುರ್ತು ಔಷಧಿಗಳು, ವಿಷಶಾಸ್ತ್ರ, ಪರಮಾಣು ಔಷಧಾಲಯ/ಔಷಧಶಾಲೆ, ನೋವು ನಿರ್ವಹಣೆ, ಮನೋವೈದ್ಯಶಾಸ್ತ್ರ, ಗರಣೆ-ನಿರೋಧಕ ಚಿಕಿತ್ಸೆ, ಮೂಲಿಕಾ ಚಿಕಿತ್ಸೆ, ನರಶಾಸ್ತ್ರ/ಅಪಸ್ಮಾರ ನಿರ್ವಹಣೆ, ಶಿಶುವೈದ್ಯ, ನವಜಾತ ಶಿಶುವೈದ್ಯ ಕ್ಷೇತ್ರಗಳಲ್ಲಿ ತಜ್ಞತೆ ಪಡೆಯುವರಿರುತ್ತಾರೆ.

ಆಸ್ಪತ್ರೆ ಔಷಧಾಲಯಗಳನ್ನು ಸಾಮಾನ್ಯವಾಗಿ ಆಸ್ಪತ್ರೆಯ ಆವರಣದೊಳಗೇ ಸ್ಥಾಪಿಸಲಾಗಿರುತ್ತದೆ. ಆಸ್ಪತ್ರೆ ಔಷಧಾಲಯಗಳ/ಳು ಸಾಧಾರಣವಾಗಿ ಹೆಚ್ಚಿನ ಪ್ರಮಾಣದ ಔಷಧಿಗಳನ್ನು ಸಂಗ್ರಹಿಸಿರುತ್ತವಲ್ಲದೇ ಸಮುದಾಯ ಔಷಧಾಲಯಕ್ಕೆ ಸೂಕ್ತವಾಗದಿರುವಂತಹಾ ಹೆಚ್ಚು ವೈಶಿಷ್ಟ್ಯತೆಗಳ ಔಷಧಿಗಳನ್ನು ಕೂಡಾ ಅವುಗಳಲ್ಲಿ ಸಂಗ್ರಹಿಸಿರಲಾಗುತ್ತದೆ. ಬಹುತೇಕ ಆಸ್ಪತ್ರೆ ಔಷಧಿಗಳು ಏಕಾಂಶ-ಪ್ರಮಾಣ ಅಥವಾ ಏಕಬಳಕೆಯ ಪ್ರಮಾಣದ್ದಾಗಿರುತ್ತವೆ. ಆಸ್ಪತ್ರೆ ಔಷಧಿಕಾರರು ಹಾಗೂ ತರಬೇತಿ ಪಡೆದ ಔಷಧಾಲಯ/ಔಷಧವೃತ್ತಿ ತಂತ್ರಜ್ಞರು ಸಮಗ್ರ ಬಾಹ್ಯಪೂರಣ ಪೌಷ್ಟಿಕವ್ಯವಸ್ಥೆ /ಟೋಟಲ್‌ ಪೇರೆಂಟೆರಲ್‌ ನ್ಯೂಟ್ರಿಷನ್‌ (TPN), ಹಾಗೂ ಇನ್ನಿತರ ಅಭಿಧಮನಿಯೊಳಗೆ ನೀಡುವ ಇತರೆ ಔಷಧಿಗಳೂ ಸೇರಿದಂತೆ ಸಂಯೋಜಿತ ಕ್ರಿಮಿಶುದ್ಧೀಕೃತ ಉತ್ಪನ್ನಗಳನ್ನು ಸಂಯೋಜಿಸುತ್ತಾರೆ. ಸಿಬ್ಬಂದಿಗಳಿಗೆ ಸೂಕ್ತ ತರಬೇತಿ, ಉತ್ಪನ್ನಗಳ ಗುಣಮಟ್ಟ ಖಚಿತತೆ, ಹಾಗೂ ಸೂಕ್ತ ಸೌಲಭ್ಯಗಳು ಅಗತ್ಯವಿರುವಂತಹಾ ಸಂಕೀರ್ಣ ಪ್ರಕ್ರಿಯೆಯಾಗಿದೆ. ಅನೇಕ ಆಸ್ಪತ್ರೆ ಔಷಧಾಲಯಗಳು ಹೆಚ್ಚಿನ ಅಪಾಯದ ಸಿದ್ಧಪಡಿಕೆಗಳು ಹಾಗೂ ಇತರೆ ಕೆಲ ಸಂಯೋಜನಾ ಪ್ರಕ್ರಿಯೆಗಳನ್ನು ಅದೇ ಪ್ರಕ್ರಿಯೆಗಳಲ್ಲಿ ತಜ್ಞರನ್ನು ಹೊಂದಿರುವ ಕಂಪೆನಿಗಳಿಗೆ ಹೊರಗುತ್ತಿಗೆ ನೀಡಲು ನಿರ್ಧರಿಸಿವೆ. ಚಿಕಿತ್ಸೆಗಳು ಹಾಗೂ ಔಷಧ-ಸಂಬಂಧಿ ತಂತ್ರಜ್ಞಾನಗಳ ಹೆಚ್ಚಿನ ವೆಚ್ಚ ಮತ್ತು ರೋಗಿಯ ಮೇಲೆ ನಡೆಸಿದ ಚಿಕಿತ್ಸೆಗಳು ಹಾಗೂ ಔಷಧಾಲಯ/ಔಷಧವೃತ್ತಿ ಸೇವೆಗಳಿಂದಾಗುವ ಸಂಭಾವ್ಯ ಪ್ರಭಾವದಿಂದಾಗಿ ಹಾಗೂ ರೋಗಿಯ ಸುರಕ್ಷತೆಯಿಂದಾಗಿ ಆಸ್ಪತ್ರೆ ಔಷಧಾಲಯಗಳು ಸಾಧ್ಯವಿರುವ ಹೆಚ್ಚಿನ ಮಟ್ಟದ ಚಿಕಿತ್ಸೆಗಳನ್ನು ನೀಡಬೇಕಾದ ಅನಿವಾರ್ಯತೆಯಿರುತ್ತದೆ.

ನೈದಾನಿಕ ಔಷಧಾಲಯ/ಔಷಧವೃತ್ತಿ[ಬದಲಾಯಿಸಿ]

ನೈದಾನಿಕ ಔಷಧಿಕಾರರು ರೋಗಿಗಳಿಗೆ ಔಷಧಿಯ ಬಳಕೆಯನ್ನು ಉತ್ತಮಗೊಳಿಸುವ ಆರೋಗ್ಯವನ್ನು ಪ್ರವರ್ತಿಸುವ, ಕ್ಷೇಮ ಆರೋಗ್ಯವನ್ನು ನೀಡುವ ಹಾಗೂ ರೋಗಗಳನ್ನು ತಡೆಗಟ್ಟುವ ನೇರ ಚಿಕಿತ್ಸಾ ಸೇವೆಗಳನ್ನು ನೀಡುತ್ತಾರೆ.[೯] ನೈದಾನಿಕ ಔಷಧಿಕಾರರು ಎಲ್ಲಾ ರೀತಿಯ ಆರೋಗ್ಯ ಪರಿಸರಗಳಲ್ಲಿ ರೋಗಿಯ ಆರೋಗ್ಯ ಸರಿಪಡಿಸುವವರಾದರೂ ನೈದಾನಿಕ ಔಷಧಾಲಯ/ಔಷಧವೃತ್ತಿಯ ಚಳುವಳಿಯು ಮೊದಲಿಗೆ ಆಸ್ಪತ್ರೆಗಳು ಹಾಗೂ ದವಾಖಾನೆಗಳೊಳಗೇ ಆರಂಭಗೊಂಡಿತ್ತು. ನೈದಾನಿಕ ಔಷಧಿಕಾರರು ಅನೇಕವೇಳೆ ಔಷಧೀಯ ಚಿಕಿತ್ಸಾ ಪದ್ಧತಿಯನ್ನು ಉತ್ತಮಗೊಳಿಸಲು ವೈದ್ಯರು ಹಾಗೂ ಇತರೆ ವೈದ್ಯಕೀಯ ವೃತ್ತಿಪರರುಗಳೊಂದಿಗೆ ಸಹಭಾಗಿತ್ವದಲ್ಲಿ ಕೆಲಸ ಮಾಡುತ್ತಾರೆ. ನೈದಾನಿಕ ಔಷಧಿಕಾರರು ರೋಗಿಗಳ ಪಾಲನೆಯ ವಿಚಾರದಲ್ಲಿ ಅಂತರಶಾಸ್ತ್ರೀಯ ವಿಧಾನಗಳ ಅಭಿನ್ನ ಅಂಗವಾಗಿದ್ದಾರೆ. ಅವರು ವೈದ್ಯರು, ದಾದಿಗಳು ಹಾಗೂ ಅನೇಕ ವೈದ್ಯಕೀಯ ಹಾಗೂ ಶಸ್ತ್ರಚಿಕಿತ್ಸಾತ್ಮಕ ಕ್ಷೇತ್ರಗಳಲ್ಲಿನ ಇತರೆ ವೈದ್ಯಕೀಯ ವೃತ್ತಿಪರರೊಂದಿಗೆ ಸಹಭಾಗಿತ್ವದಲ್ಲಿ ಕಾರ್ಯನಿರ್ವಹಿಸುತ್ತಾರೆ. ಅವರು ಅನೇಕವೇಳೆ ರೋಗಿ ಪಾಲನಾ ಹಂತಗಳಲ್ಲಿ ಹಾಗೂ ಔಷಧಿ ಉತ್ಪನ್ನಗಳ ಆಯ್ಕೆಯಲ್ಲಿ ಭಾಗವಹಿಸುತ್ತಾರೆ. ಯುನೈಟೆಡ್‌ ಸ್ಟೇಟ್ಸ್‌‌ನಲ್ಲಿನ ಬಹುತೇಕ ಆಸ್ಪತ್ರೆಗಳಲ್ಲಿ ಕಟ್ಟೆಚ್ಚರ ವಹಿಸಬೇಕಾದ, ಸಂಭಾವ್ಯ ಅಪಾಯಕಾರಿ ಔಷಧಿಗಳ ಪ್ರಮಾಣ ನಿಗದಿಪಡಿಸುವುದರ ಜೊತೆಗೆ ಅವುಗಳ ನಿರ್ವಹಣೆಯನ್ನೂ ನೈದಾನಿಕ ಔಷಧಿಕಾರರೇ ಮಾಡುತ್ತಾರೆ.

ಸಂಯೋಜನಾ ಔಷಧಾಲಯ/ಔಷಧವೃತ್ತಿಗಳು[ಬದಲಾಯಿಸಿ]

ಸಂಯೋಜನೆ ಎಂಬುದು ನವೀನ ರೂಪಗಳಲ್ಲಿ ಔಷಧಿಗಳನ್ನು ಸಿದ್ಧಪಡಿಸುವ ಪದ್ಧತಿಯಾಗಿದೆ. ಉದಾಹರಣೆಗೆ, ಓರ್ವ ಔಷಧಿ ತಯಾರಕ ಒಂದು ಔಷಧಿಯನ್ನು ಮಾತ್ರೆಯಾಗಿ ಮಾತ್ರವೇ ನೀಡಿದರೆ ಸಂಯೋಜಕ ಔಷಧಿಕಾರನು ಔಷಧಿಯನ್ನು ಹೊಂದಿರುವ ಔಷಧೀಕೃತ ಲಾಲಿಪಾಪ್‌ಅನ್ನು ತಯಾರಿಸಬಹುದು. ಮಾತ್ರೆಯನ್ನು ನುಂಗಲು ಕಷ್ಟವೆನಿಸಿದ ರೋಗಿಗಳು ಅದರ ಬದಲಾಗಿ ಔಷಧೀಕೃತ ಲಾಲಿಪಾಪ್‌ಅನ್ನು ಹೀರುವು/ಚೀಪುವುದನ್ನು ಆಯ್ದುಕೊಳ್ಳಬಹುದು.

ಮತ್ತೊಂದು ವಿಧದ ಸಂಯೋಜನೆ ಎಂದರೆ ಕ್ಯಾಪ್ಸೂಲುಗಳು ಹಾಗೂ ಮಾತ್ರೆಗಳ ವಿವಿಧ ಪ್ರಮಾಣದ (g,mg,mcg) ಸತ್ವಗಳನ್ನು ಸಂಯೋಜಿಸಿ ವೈದ್ಯರು ಸೂಚಿಸಿದ ಅಗತ್ಯ ಚಿಕಿತ್ಸೆಯುಂಟಾಗುವಂತೆ ಮಾಡುವುದು. ಈ ರೂಪದ ಸಂಯೋಜನೆಯನ್ನು ಸಮುದಾಯ ಅಥವಾ ಆಸ್ಪತ್ರೆ ಔಷಧಾಲಯಗಳು ಅಥವಾ ಗೃಹಗಳಲ್ಲಿ ನಡೆಸುವ ಚಿಕಿತ್ಸೆಗಳಲ್ಲಿ ಕಾಣಬಹುದು.

ಸಂಯೋಜಿತ ಔಷಧಾಲಯಗಳು ಸಂಯೋಜನೆಗಳಲ್ಲಿ ಪರಿಣತವಾಗಿರುತ್ತವಾದರೂ, ಸಮುದಾಯ ಔಷಧಾಲಯ/ಔಷಧಶಾಲೆಗಳಿಂದ ರೋಗಿಗಳು ಪಡೆದುಕೊಳ್ಳಬಹುದಾದ ಸಂಯೋಜಿತವಲ್ಲದ ಅದೇ ಔಷಧಗಳನ್ನು ಕೂಡಾ ಅವುಗಳಲ್ಲಿ ಅನೇಕವು ಸಂಯೋಜಿಸುತ್ತವೆ.

ಸಲಹಾ ವೈದ್ಯ ಔಷಧಾಲಯ/ಔಷಧಶಾಲೆ[ಬದಲಾಯಿಸಿ]

ಸಲಹಾವೈದ್ಯ ಔಷಧಾಲಯ/ಔಷಧಶಾಲೆ ಪದ್ಧತಿಯು ಔಷಧಗಳ ವಾಸ್ತವ ಸಿದ್ಧಪಡಿಕೆಗಿಂತ ಹೆಚ್ಚು ಚಿಕಿತ್ಸಾ ಪಥ್ಯಗಳ ವಿಮರ್ಶೆಗಳ (i.e. "ಸಂವೇದನಾ ಸೇವೆಗಳು ") ಬಗ್ಗೆ ಕೇಂದ್ರೀಕರಿಸುತ್ತದೆ. ಸಲಹಾವೈದ್ಯ ಔಷಧಿಕಾರರು ಬಹುತೇಕ ಪ್ರಾತಿನಿಧಿಕವಾಗಿ ಶುಶ್ರೂಷಾ ಗೃಹಗಳಲ್ಲಿ ಕಾರ್ಯನಿರ್ವಹಿಸುವವರಾದರೂ, ಇತರೆ ಸಂಸ್ಥೆಗಳು ಹಾಗೂ ಅಸಾಂಸ್ಥಿಕ ಶಾಖೆಗಳ ಪರಿಸರಗಳಲ್ಲಿ ಕೂಡಾ ಹೆಚ್ಚುತ್ತಲಿದ್ದಾರೆ.[೧೦] ಯುನೈಟೆಡ್‌ ಸ್ಟೇಟ್ಸ್‌ನಲ್ಲಿ ಕೆಲವರು‌ ಈಗ ಅನೇಕ ದೊಡ್ಡ ಔಷಧಾಲಯ/ಔಷಧಶಾಲೆ ನಿರ್ವಹಣಾ ಕಂಪೆನಿಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದರೂ (ಪ್ರಮುಖವಾಗಿ ಆಮ್ನಿಕೇರ್‌, ಕಿಂಡ್‌ರೆಡ್‌ ಹೆಲ್ತ್‌ಕೇರ್‌ ಹಾಗೂ ಫಾರ್ಮೆರಿಕಾ) ಸಾಂಪ್ರದಾಯಿಕವಾಗಿ ಸಲಹಾವೈದ್ಯ ಔಷಧಿಕಾರರು ಸರ್ವೇಸಾಮಾನ್ಯವಾಗಿ ಸ್ವತಂತ್ರ ಉದ್ಯಮಿಗಳಾಗಿರುತ್ತಾರೆ. ಈ ಪ್ರವೃತ್ತಿಯು ನಿಧಾನವಾಗಿ ವಿರುದ್ಧವಾಗುತ್ತಿರಬಹುದು ಇದಕ್ಕೆ ಕಾರಣ ಅನೇಕ ವೃದ್ಧರು ವಿವಿಧ ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದರೂ ಸಾಂಸ್ಥಿಕ ಪರಿಸರಗಳಿಂದ ಹೊರಗೆ ಉಳಿಯುತ್ತಲಿದ್ದಾರಾದ್ದರಿಂದ ಸಲಹಾವೈದ್ಯ ಔಷಧಿಕಾರರು ನೇರವಾಗಿ ರೋಗಿಗಳೊಂದಿಗೆ ವ್ಯವಹರಿಸುತ್ತಿದ್ದಾರೆ. ಕೆಲ ಸಮುದಾಯ ಔಷಧಾಲಯಗಳು ಸಲಹಾವೈದ್ಯ ಔಷಧಿಕಾರರನ್ನು ನೇಮಿಸಿಕೊಂಡು ಹಾಗೂ/ಅಥವಾ ಸಮಾಲೋಚನಾ ಸೇವೆಗಳನ್ನು ನೀಡುತ್ತಿವೆ.

ಸಲಹಾವೈದ್ಯ ಔಷಧಾಲಯ/ಔಷಧಶಾಲೆಗಳ ಮೂಲತತ್ವವೆಂದರೆ 1990ರಲ್ಲಿ ಹೆಪ್ಲರ್‌ ಹಾಗೂ ಸ್ಟ್ರಾಂಡ್‌ರವರುಗಳು ಅಭಿವೃದ್ಧಿಪಡಿಸಿದ ಔಷಧೀಯ ಪಾಲನೆ.[೧೧][೧೨]

ಅಂತರ್ಜಾಲ ಔಷಧಾಲಯ/ಔಷಧಶಾಲೆ[ಬದಲಾಯಿಸಿ]

2000ನೇ ಇಸವಿಯಿಂದೀಚೆಗೆ, ವಿಶ್ವದಾದ್ಯಂತ ಸ್ಥಾಪಿತವಾಗುತ್ತಿರುವ ಅಂತರ್ಜಾಲ ಔಷಧಾಲಯಗಳ ಸಂಖ್ಯೆ ಹೆಚ್ಚುತ್ತಲಿದೆ. ಈ ಔಷಧಾಲಯಗಳಲ್ಲಿ ಅನೇಕವು ಸಮುದಾಯ ಔಷಧಾಲಯ/ಔಷಧಶಾಲೆಗಳಂತಹವಾಗಿದ್ದು ವಸ್ತುತಃ ಅವುಗಳಲ್ಲಿ ಅನೇಕವನ್ನು, ಬ್ರಿಕ್‌ ಅಂಡ್‌ ಮಾರ್ಟರ್‌ ಪದ್ಧತಿಯ ಮೂಲಕ ಆನ್‌ಲೈನ್‌ನಲ್ಲಿ ಗ್ರಾಹಕರಿಗೆ ಮನೆ ಬಾಗಿಲಿಗೆ ಸೇವೆ ನೀಡುವ ಸಮುದಾಯ ಔಷಧಾಲಯ/ಔಷಧಶಾಲೆಗಳು ನಡೆಸುತ್ತವೆ. ಅವುಗಳ ನಡುವಿನ ಪ್ರಮುಖ ವ್ಯತ್ಯಾಸ ಔಷಧಿ/ಚಿಕಿತ್ಸೆಗಳನ್ನು ಹೇಗೆ ಕೋರಲಾಗುತ್ತದೆ ಹಾಗೂ ಪಡೆಯಲಾಗುತ್ತದೆ ಎಂಬುದರಲ್ಲಿದೆ. ಕೆಲ ಗ್ರಾಹಕರು ಅವರು ತೆಗೆದುಕೊಳ್ಳುವ ಔಷಧಿ ಬಗ್ಗೆ ಮತ್ತೊಬ್ಬರು ತಿಳಿದುಕೊಳ್ಳುವ ಅವಕಾಶವಿರುವ ಸಮುದಾಯ ಔಷಧಿಅಂಗಡಿಗೆ ಪ್ರಯಾಣಿಸುವುದಕ್ಕಿಂತ ಉತ್ತಮವಾದ ಇದನ್ನು ಹೆಚ್ಚು ಸೌಕರ್ಯವಾದ ಹಾಗೂ ಖಾಸಗಿ ವಿಧಾನವಾಗಿದೆ ಎಂದು ಭಾವಿಸುತ್ತಾರೆ. ಕೆಲ ವೈದ್ಯರುಗಳು ತಾವು ಮನೆಯಿಂದ ಕಾರ್ಯನಿರ್ವಹಿಸುತ್ತಿದ್ದರೆ ಅಂತರಜಾಲ ಔಷಧಾಲಯಗಳನ್ನು(ಆನ್‌ಲೈನ್‌‌ ಔಷಧಾಲಯಗಳು ಎಂದೂ ಕರೆಯಲ್ಪಡುವ) ಶಿಫಾರಸು ಮಾಡುತ್ತಾರೆ.

ಬಹುತೇಕ ಅಂತರಜಾಲ ಔಷಧಾಲಯಗಳು ಸೂಚಿತ ಔಷಧಿಗಳನ್ನು ಮಾರುವುದರಿಂದ ಸೂಕ್ತ ಸೂಚನಾ ಚೀಟಿಯು ಅಗತ್ಯವಿದ್ದರೂ, ಕೆಲ ಅಂತರಜಾಲ ಔಷಧಾಲಯಗಳು ಸೂಚಿತ ಔಷಧಗಳನ್ನು ಸೂಚನಾಚೀಟಿಯಿಲ್ಲದೆಯೂ ಮಾರಾಟ ಮಾಡುತ್ತವೆ. ವೈದ್ಯರನ್ನು ಭೇಟಿ ಮಾಡುವ "ಅನಾನುಕೂಲ"ವನ್ನು ತಪ್ಪಿಸಿಕೊಳ್ಳುವ ಸಲುವಾಗಿ ಅಥವಾ ತಮಗೆ ಬೇಕಾದ ಔಷಧಿಗಳನ್ನು ತಮ್ಮ ವೈದ್ಯರು ಸೂಚಿಸಲು ನಿರಾಕರಿಸುವುದರಿಂದ ಅನೇಕ ಗ್ರಾಹಕರು ಅಂತಹಾ ಔಷಧಾಲಯಗಳಿಂದಲೇ ಔಷಧಿಗಳನ್ನು ತರಿಸಿಕೊಳ್ಳುತ್ತಾರೆ. ಆದಾಗ್ಯೂ, ಈ ಪದ್ಧತಿಯನ್ನು ವಿಶೇಷವಾಗಿ ವೈದ್ಯರುಗಳು ಮಾತ್ರವೇ ವಿಶ್ವಾಸಾರ್ಹವಾಗಿ ವಿರುದ್ಧಚಿಹ್ನೆಗಳನ್ನು, ಅಪಾಯ/ಅನುಕೂಲ ಅನುಪಾತಗಳು, ಹಾಗೂ ಆಯಾ ವ್ಯಕ್ತಿಗೆ ಔಷಧಿಯ ಬಳಕೆಯ ಒಟ್ಟಾರೆ ಔಚಿತ್ಯವನ್ನು ನಿರ್ಧರಿಸಬಲ್ಲರು ಎಂಬ ಭಾವನೆಯಿರುವವರು ಅಪಾಯಕಾರಿ ಎಂದು ಟೀಕೆ ಕೇಳಿಬರುತ್ತಿದೆ. ಅಂತಹಾ ಔಷಧಾಲಯಗಳು ಕಳಪೆ ಮಟ್ಟದ ಉತ್ಪನ್ನಗಳನ್ನು ಸಿದ್ಧಪಡಿಸಿ ಮಾರುತ್ತಿರುವ ದೂರುಗಳು ಕೂಡಾ ಬಂದಿವೆ.[ಸಾಕ್ಷ್ಯಾಧಾರ ಬೇಕಾಗಿದೆ]

ಅಂತರ್ಜಾಲ ಔಷಧಾಲಯಗಳ ವಿಚಾರದಲ್ಲಿ ಆತಂಕದ ವಿಚಾರವೆಂದರೆ ನಿಯಂತ್ರಿತ ಮದ್ದುಗಳನ್ನು ವಿಶೇಷವಾಗಿ ಯುವಜನಾಂಗಕ್ಕೆ (e.g., ವಿಕೋಡಿನ್‌‌, ಸಾರ್ವತ್ರಿಕವಾಗಿ ಹೈಡ್ರೋಕೊಡೊನ್‌ ಎಂದು ಕರೆಯಲ್ಪಡುತ್ತದೆ) ಅಂತರ್ಜಾಲದ ಮೂಲಕ ಸ್ಥಾಪಿತ ವೈದ್ಯ-ರೋಗಿ ಸಂಬಂಧವನ್ನು ಹೊಂದಿರುವ ವೈದ್ಯ/ವೈದ್ಯವೃತ್ತಿಪರರು ನೀಡದೆಯೇ ಸಿಗುವ ಸುಗಮತೆ. ಅಂತರ್ಜಾಲ ಸರ್ವರ್‌‌ನ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸಿ ಆತ/ಕೆ ಎಂದೂ ಭೇಟಿಯಾಗದ "ರೋಗಿಗೆ" ನಿಯಂತ್ರಿತ ಮದ್ದನ್ನು ಸೂಚಿಸುವಂತಹಾ ಅನೇಕ ಪ್ರಕರಣಗಳು ನಡೆದಿವೆ. ಯುನೈಟೆಡ್‌ ಸ್ಟೇಟ್ಸ್‌‌ನಲ್ಲಿ, ನಿಯಂತ್ರಿತ ಮದ್ದುಗಳ ಬಗೆಗಿನ ಸೂಚನಾ ಚೀಟಿಯು ಮಾನ್ಯವಾಗಬೇಕೆಂದರೆ, ಪರವಾನಗಿ ಹೊಂದಿರುವ ವೈದ್ಯರು ಕ್ರಮಬದ್ಧ ವೈದ್ಯ-ರೋಗಿ ಸಂಬಂಧದ ಭಾಗವಾಗಿ ನೀಡಿದ ಕ್ರಮಬದ್ಧ ವೈದ್ಯಕೀಯ ಉದ್ದೇಶಕ್ಕಾಗಿ ಅದನ್ನು ನೀಡಿರಬೇಕಾಗಿರುತ್ತದೆ. ಅದನ್ನು ತುಂಬುವ ಔಷಧಾಲಯ/ಔಷಧಶಾಲೆಯು ಅದಕ್ಕೆ ಅನುಗುಣವಾದ ಸೂಚನಾ ಚೀಟಿಯು ಮಾನ್ಯತೆಯುಳ್ಳದೆಂದು ಖಚಿತಪಡಿಸಿಕೊಳ್ಳುವಂತಹಾ ಜವಾಬ್ದಾರಿಯನ್ನು ಹೊಂದಿರಬೇಕಾಗುತ್ತದೆ. ಅನೇಕವೇಳೆ, ನಿರ್ದಿಷ್ಟ ಸರ್ಕಾರಗಳ ಕಾನೂನುಗಳು ಮಾನ್ಯತೆಯುಳ್ಳ ರೋಗಿ-ವೈದ್ಯ ಸಂಬಂಧವೆಂದರೇನು ಎಂಬುದನ್ನು ಸೂಚಿಸುತ್ತವೆ.

ಕೆನಡಾ ರಾಷ್ಟ್ರವು ಡಜನ್‌ಗಟ್ಟಲೆ ಅಂತರಜಾಲ ಔಷಧಾಲಯಗಳ ನೆಲೆಯಾಗಿದ್ದು, ತಮ್ಮ ಕಡಿಮೆ-ವೆಚ್ಚದ ಸೂಚನಾ ಚೀಟಿ ಔಷಧಿಗಳನ್ನು ವಿಶ್ವದ ಅತ್ಯಂತ ಹೆಚ್ಚಿನ ಔಷಧಿವೆಚ್ಚಗಳನ್ನು ಪಾವತಿಸುವವರಾದ U.S. ಗ್ರಾಹಕರುಗಳಿಗೆ ಅವು ಮಾರುತ್ತವೆ.[ಸಾಕ್ಷ್ಯಾಧಾರ ಬೇಕಾಗಿದೆ] ಇತ್ತೀಚಿನ ವರ್ಷಗಳಲ್ಲಿ, ದುಬಾರಿ ಔಷಧವೆಚ್ಚದ US ಹಾಗೂ ಇನ್ನಿತರ ರಾಷ್ಟ್ರಗಳ ಅನೇಕ ಗ್ರಾಹಕರು, ಅನೇಕ ವೇಳೆ ಕೆನಡಾದಕ್ಕಿಂತ ಕಡಿಮೆ ಬೆಲೆಗೆ ಔಷಧಿಗಳನ್ನು ನೀಡುವ ಭಾರತ, ಇಸ್ರೇಲ್‌ ಹಾಗೂ UKದಲ್ಲಿನ ಪರವಾನಗಿಯುಳ್ಳ ಅಂತರಜಾಲ ಔಷಧಾಲಯಗಳೆಡೆ ಮುಖ ಮಾಡಿವೆ.

ಯುನೈಟೆಡ್‌ ಸ್ಟೇಟ್ಸ್‌‌ನಲ್ಲಿ, ಗ್ರಾಹಕವೆಚ್ಚಗಳನ್ನು ಕಡಿಮೆಗೊಳಿಸಲು ಕೆನಡಾ ಹಾಗೂ ಇತರೆ ರಾಷ್ಟ್ರಗಳಿಂದ ಆಮದಾಗುವ ಔಷಧಿಗಳನ್ನು ಕಾನೂನುಬದ್ಧಗೊಳಿಸುವುದಕ್ಕೆ ಒತ್ತಡ ಹೇರಲಾಗುತ್ತಿದೆ. ಬಹುತೇಕ ಸಂದರ್ಭಗಳಲ್ಲಿ ಸೂಚನಾ ಚೀಟಿ ಔಷಧಗಳ ಆಮದು ಆಹಾರ ಮತ್ತು ಔಷಧಿ ನಿಯಂತ್ರಣದ (FDA) ವಿಧೇಯಕಗಳೂ ಹಾಗೂ ಒಕ್ಕೂಟ ಕಾನೂನುಗಳ ಉಲ್ಲಂಘನೆಯಾಗಿರುತ್ತದೆ, ಇದರ ಅನುಸರಣೆಗೆ ಗ್ರಾಹಕರ ಬದಲಿಗೆ ಸಾಧಾರಣವಾಗಿ ಅಂತರರಾಷ್ಟ್ರೀಯ ಔಷಧಿ ವಿತರಕರನ್ನು ಹೊಣೆ ಮಾಡಲಾಗುತ್ತದೆ. ಯಾವುದೇ U.S. ನಾಗರಿಕರು ಸೂಚನಾ ಚೀಟಿಯೊಂದಿಗಿನ ಕೆನಡಾದ ಔಷಧಗಳನ್ನು ಖಾಸಗಿ ಬಳಕೆಗಾಗಿ ತೆಗೆದುಕೊಂಡಿದ್ದು ಇಲಾಖೆಯಿಂದ ಆರೋಪಕ್ಕೊಳಗಾದ ಯಾವುದೇ ಉದಾಹರಣೆ ಇಲ್ಲ.

ಇತ್ತೀಚೆಗೆ-ಅಭಿವೃದ್ಧಿಪಡಿಸಲಾದ ಆಸ್ಟ್ರೇಲಿಯಾ'ದ ಮೆಡಿಸಿನ್‌ ನೇಮ್‌ ಫೈಂಡರ್‌ Archived 2010-01-28 ವೇಬ್ಯಾಕ್ ಮೆಷಿನ್ ನಲ್ಲಿ. ಹಾಗೂ ವಾಲ್‌ಗ್ರೀನ್ಸ್‌‌' ಡ್ರಗ್‌‌ ಇನ್‌‌ಫೋ ಸರ್ಚ್‌ Archived 2010-07-06 ವೇಬ್ಯಾಕ್ ಮೆಷಿನ್ ನಲ್ಲಿ. ಗಳಂತಹಾ ಆನ್‌ಲೈನ್‌‌ ಸೇವೆಗಳು ಔಷಧೀಯ ಉತ್ಪನ್ನಗಳ ಬಗ್ಗೆ ಮಾಹಿತಿ ನೀಡುವವಾದರೂ ಸೂಚನಾ ಚೀಟಿಗಳನ್ನು ಅಥವಾ ಔಷಧಿ ಸಿದ್ಧಪಡಿಕೆಗಳನ್ನಾಗಲೀ ನೀಡುವುದಿಲ್ಲ. ಈ ಸೇವೆಗಳನ್ನು ಅನೇಕ ವೇಳೆ ಸಾರ್ವತ್ರಿಕ ಪರ್ಯಾಯ ಔಷಧಗಳನ್ನು ಬೆಲೆ ಹಾಗೂ ಪ್ರಭಾವಗಳ ಬಗ್ಗೆ ತೌಲನಿಕ ಮಾಹಿತಿಗಳನ್ನು ನೀಡುವ ಮೂಲಕ ನೀಡಲಾಗುತ್ತದೆ.

ಪಶುವೈದ್ಯ ಔಷಧಾಲಯ/ಔಷಧಶಾಲೆ[ಬದಲಾಯಿಸಿ]

ಕೆಲವೊಮ್ಮೆ ಪ್ರಾಣಿಗಳ ಔಷಧಾಲಯಗಳು ಎಂದು ಕರೆಯಲ್ಪಡುವ, ಪಶುವೈದ್ಯ ಔಷಧಾಲಯಗಳು, ಆಸ್ಪತ್ರೆ ಔಷಧಾಲಯ/ಔಷಧಶಾಲೆ, ಚಿಲ್ಲರೆ ಔಷಧಾಲಯ/ಔಷಧಶಾಲೆ ಅಥವಾ ಅಂಚೆ-ಆದೇಶ/ಮೇಲ್‌ ಆರ್ಡರ್‌‌ ಔಷಧಾಲಯ/ಔಷಧಶಾಲೆಗಳ ವರ್ಗಗಳಿಗೆ ಸೇರಬಹುದು. ಪಶುವೈದ್ಯ ಔಷಧಾಲಯಗಳು ಪ್ರಾಣಿಗಳ ಔಷಧೀಯ ಅಗತ್ಯವನ್ನು ಪೂರೈಸುವ ವಿಭಿನ್ನ ವಿಧಗಳು ಹಾಗೂ ವಿಭಿನ್ನ ಸತ್ವಗಳ ಔಷಧಿಗಳನ್ನು ಸಂಗ್ರಹಿಸಿರುತ್ತವೆ. ಪ್ರಾಣಿಗಳ ಅಗತ್ಯಗಳಿಗನುಸಾರವಾಗಿ ಪಶುವೈದ್ಯ ಔಷಧಗಳ ಮೇಲಿನ ನಿಯಂತ್ರಣಗಳು ಅನೇಕವೇಳೆ ಜನರಿಗೆ ಸಂಬಂಧಿಸಿದಂತೆ ಇರುವದಕ್ಕಿಂತ ಬಹುತೇಕ ವಿಭಿನ್ನವಾಗಿದ್ದು, ಪಶುವೈದ್ಯ ಔಷಧಾಲಯ/ಔಷಧಶಾಲೆಗಳನ್ನು ಅನೇಕವೇಳೆ ಸಾಧಾರಣ ಔಷಧಾಲಯಗಳಿಗಿಂತ ಪ್ರತ್ಯೇಕಿಸಿರಲಾಗುತ್ತದೆ.

ಬೈಜಿಕ/ಪರಮಾಣು ಔಷಧಾಲಯ/ಔಷಧಶಾಲೆ[ಬದಲಾಯಿಸಿ]

ಬೈಜಿಕ/ಪರಮಾಣು ಔಷಧಾಲಯ/ಔಷಧಶಾಲೆಯು ನಿರ್ದಿಷ್ಟ ರೋಗಗಳ ಚಿಕಿತ್ಸೆಗಳಿಗೆ ಹಾಗೂ ರೋಗನಿದಾನದ ಪರೀಕ್ಷೆಗಳನ್ನು ನಡೆಸಲು ವಿಕಿರಣಶೀಲ ವಸ್ತುಗಳನ್ನು ತಯಾರಿಸುವುದರ ಬಗ್ಗೆ ಕೇಂದ್ರೀಕೃತವಾಗಿರುತ್ತದೆ. ಪರಮಾಣು ಔಷಧಿಕಾರರು ವಿಕಿರಣಶೀಲ ವಸ್ತುಗಳನ್ನು ನಿರ್ವಹಿಸುವ ಬಗ್ಗೆ ಹೆಚ್ಚುವರಿ ತರಬೇತಿಯನ್ನು ಪಡೆಯುತ್ತಾರಲ್ಲದೇ, ಸಮುದಾಯ ಹಾಗೂ ಆಸ್ಪತ್ರೆ ಔಷಧಾಲಯಗಳಲ್ಲಿರುವ ಸಂಪ್ರದಾಯದಂತೆ, ಪರಮಾಣು ಔಷಧಿಕಾರರು ನೇರವಾಗಿ ರೋಗಿಗಳೊಂದಿಗೆ ಕಾರ್ಯನಿರ್ವಹಿಸುವುದಿಲ್ಲ.

ಸೇನಾ ಔಷಧಾಲಯ/ಔಷಧಶಾಲೆ[ಬದಲಾಯಿಸಿ]

ಸೇನಾ ಔಷಧಾಲಯ/ಔಷಧಶಾಲೆಗಳು ಇಲ್ಲಿನ ತಂತ್ರಜ್ಞರು ಕೈಗೊಳ್ಳುವ ಬಹುತೇಕ ಕಾರ್ಯಗಳು ನಾಗರಿಕ ವಲಯದಲ್ಲಿ ಕಾನೂನುವಿರೋಧಿ ಎಂದೆನಿಸುವುದರಿಂದ ಸಂಪೂರ್ಣವಾಗಿ ವಿಭಿನ್ನ ಕೆಲಸದ ಪರಿಸರವನ್ನು ಹೊಂದಿರುತ್ತದೆ. ತಂತ್ರಜ್ಞ ರೋಗಿಗಳ ಔಷಧಿಕಾರ ಕೈಗೊಳ್ಳುವ ಸಮಾಲೋಚನಾ ಹಾಗೂ ಔಷಧ ಪರೀಕ್ಷಣೆಗಳ ವಿಚಾರದಲ್ಲಿ ಕಾನೂನುಗಳು ಅನ್ವಯವಾಗುವುದಿಲ್ಲ.

ಔಷಧಾಲಯ/ಔಷಧವೃತ್ತಿ ಮಾಹಿತಿತಜ್ಞತೆ[ಬದಲಾಯಿಸಿ]

ಔಷಧಾಲಯ/ಔಷಧವೃತ್ತಿ ಮಾಹಿತಿತಜ್ಞತೆ ಎಂಬುದು ಔಷಧಾಲಯ/ಔಷಧವೃತ್ತಿ ಪದ್ಧತಿ ವಿಜ್ಞಾನ ಹಾಗೂ ಅನ್ವಯಿಕ ಮಾಹಿತಿ ತಂತ್ರಜ್ಞಾನಗಳ ಸಂಯೋಜನೆಯಾಗಿದೆ. ಔಷಧಾಲಯ/ಔಷಧವೃತ್ತಿ ಮಾಹಿತಿ ತಂತ್ರಜ್ಞರು ಔಷಧಾಲಯ/ಔಷಧವೃತ್ತಿಗಳ ಅನೇಕ ಪದ್ಧತಿವಲಯಗಳಲ್ಲಿ ಕಾರ್ಯನಿರ್ವಹಿಸುವವರಾದರೂ, ಅವರು ಮಾಹಿತಿ ತಂತ್ರಜ್ಞಾನ ವಿಭಾಗ ಅಥವಾ ಆರೋಗ್ಯಪಾಲನಾ ಮಾಹಿತಿ ತಂತ್ರಜ್ಞಾನ ವಿಕ್ರಯ ಕಂಪೆನಿಗಳಲ್ಲಿ ಕೂಡಾ ಕಾರ್ಯನಿರ್ವಹಿಸಿರಬಹುದಾಗಿದೆ. ಚಿಕಿತ್ಸಾ ಪದ್ಧತಿಯ ವಲಯ ಹಾಗೂ ತಜ್ಞ ಕ್ಷೇತ್ರಗಳಾಗಿ ಪ್ರಮುಖ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ರೋಗಿಗಳ ಮಾಹಿತಿ ಯೋಜನೆಗಳು ಹಾಗೂ ಆರೋಗ್ಯ ವ್ಯವಸ್ಥೆಗಳ ಅಂತರಕ್ರಿಯಾಸಾಧ್ಯತೆಗಳ ಗುರಿಗಳನ್ನು ತಲುಪಲು ಔಷಧಾಲಯ/ಔಷಧಶಾಲೆ ಮಾಹಿತಿತಜ್ಞ ಕ್ಷೇತ್ರವು ತೀವ್ರವಾಗಿ ಬೆಳೆಯುತ್ತಲಿವೆ. ಔಷಧಿಕಾರರು ಔಷಧಿನೀಡಿಕೆ ನಿರ್ವಹಣಾ ವ್ಯವಸ್ಥೆ ಅಭಿವೃದ್ದಿ, ಅಳವಡಿಕೆ ಹಾಗೂ ಉತ್ತಮಿಕೆಗಳಲ್ಲಿ ಭಾಗವಹಿಸುವಂತೆ ಉತ್ತಮ ತರಬೇತಿ ನೀಡಿರಲಾಗುತ್ತದೆ.

ಔಷಧಾಲಯ/ಔಷಧವೃತ್ತಿಗಳಲ್ಲಿನ ಸಮಸ್ಯೆಗಳು[ಬದಲಾಯಿಸಿ]

ಸೂಚನೆಗಳ ನೀಡಿಕೆಯನ್ನು ಸಿದ್ಧಪಡಿಸುವಿಕೆಯಿಂದ ಪ್ರತ್ಯೇಕಿಸುವಿಕೆ[ಬದಲಾಯಿಸಿ]

ಬಹುತೇಕ ಕಾನೂನುಪರಿಧಿಗಳಲ್ಲಿ (ಯುನೈಟೆಡ್‌ ಸ್ಟೇಟ್ಸ್‌‌ನಂತಹಾ), ಔಷಧಿಕಾರರು ವೈದ್ಯರುಗಳಿಗಿಂತ ಪ್ರತ್ಯೇಕವಾಗಿ ನಿಯಂತ್ರಣಕ್ಕೊಳಪಡುತ್ತಾರೆ. ಈ ಕಾನೂನುಪರಿಧಿಗಳು ಸಾಮಾನ್ಯವಾಗಿ ನಿಯೋಜಿತ ಔಷಧಿಗಳನ್ನು ಸಾರ್ವಜನಿಕರಿಗೆ ಔಷಧಿಕಾರರು ಮಾತ್ರವೇ ವಿತರಿಸಬೇಕೆಂದು ಹಾಗೂ ವೈದ್ಯರೊಂದಿಗೆ ವ್ಯಾವಹಾರಿಕ ಪಾಲುದಾರಿಕೆಯನ್ನು ಹೊಂದಲಾಗುವುದಿಲ್ಲ ಮಾತ್ರವಲ್ಲದೇ ಅವರಿಗೆ "ಹಿಂಬಾಕಿ" ಪಾವತಿಗಳನ್ನು ಮಾಡುವ ಹಾಗಿಲ್ಲ ಎಂದು ನಿರ್ದೇಶಿಸುತ್ತವೆ. ಆದಾಗ್ಯೂ, ಅಮೇರಿಕನ್‌ ಮೆಡಿಕಲ್‌ ಅಸೋಸಿಯೇಷನ್‌ ಸಂಸ್ಥೆಯ (AMA) ನಡವಳಿಕೆಯ ನಿಯಮಗಳು ರೋಗಿಗಳ ಶೋಷಣೆ ಎಂದೆನಿಸಿಕೊಳ್ಳದಿರುವವರೆಗೆ ವೈದ್ಯರು ತಮ್ಮ ಕಛೇರಿಯ ನಿರ್ವಹಣಾ ವಲಯದಲ್ಲಿ ಮಾತ್ರವೇ ಔಷಧಿಗಳನ್ನು ಸಿದ್ಧಪಡಿಸಬಹುದೆಂದು ಹಾಗೂ ರೋಗಿಗಳಿಗೆ ತಮ್ಮ ಸೂಚನಾ ಚೀಟಿಯನ್ನು ಬೇರೆಡೆ ಬರೆಸಿಕೊಳ್ಳಬಹುದಾದ ಹಕ್ಕನ್ನು ಹೊಂದಿರುತ್ತಾರೆಂದು ಸೂಚಿಸುತ್ತದೆ. 7ರಿಂದ 10 ಪ್ರತಿಶತ ಸೇವೆಯಲ್ಲಿರುವ ಅಮೇರಿಕಾದ ವೈದ್ಯರು ತಾವೇ ಸ್ವತಃ ಔಷಧಿಗಳನ್ನು ಸಿದ್ಧಪಡಿಸುತ್ತಾರೆಂದು ತಿಳಿದುಬಂದಿದೆ.[೧೩]

ಯುನೈಟೆಡ್‌ ಕಿಂಗ್‌ಡಮ್‌‌ನಲ್ಲಿನ ಕೆಲ ಗ್ರಾಮೀಣ ಪ್ರದೇಶಗಳಲ್ಲಿ, ಸೂಚನಾ ಚೀಟಿ-ಸಹಿತಮಾತ್ರ ಔಷಧಿಗಳನ್ನು ತಮ್ಮ ಚಿಕಿತ್ಸಾ ಪದ್ಧತಿಯನುಸಾರ ಮಾತ್ರವೇ ತಮ್ಮ ರೋಗಿಗಳಿಗೆ ಸಿದ್ಧಪಡಿಸಬಹುದಾದ ಹಾಗೂ ಸೂಚನಾಚೀಟಿ ಬರೆಯಬಹುದಾದ ಎರಡೂ ಅನುಮತಿಗಳುಳ್ಳ ಔಷಧಿ ಸಿದ್ಧಪಡಿಸಬಲ್ಲ ವೈದ್ಯರು[೧೪] ಗಳಿದ್ದಾರೆ. ಕಾನೂನಿನ ಅಗತ್ಯಗಳ ಪ್ರಕಾರ GP ಪದ್ಧತಿಯನ್ನು ಗೊತ್ತುಪಡಿಸಿದ ಗ್ರಾಮೀಣ ಪ್ರದೇಶದಲ್ಲಿ ಮಾತ್ರವೇ ಇರಬಹುದಾಗಿದ್ದು (ಪ್ರಸ್ತುತ 1.6 ಕಿಲೋಮೀಟರ್‌‌ಗಳು) ರೋಗಿಯ ಮನೆ ಹಾಗೂ ಸಮೀಪದ ಚಿಲ್ಲರೆ ಔಷಧಾಲಯ/ಔಷಧಶಾಲೆಯ ನಡುವೆ ಇರಬೇಕಾದ ಕನಿಷ್ಟ ಅಂತರವನ್ನು ಕೂಡಾ ನಿಗದಿಪಡಿಸಿದೆ.

ಇತರೆ ರಾಷ್ಟ್ರಗಳ ಕಾನೂನುಪರಿಧಿಗಳಲ್ಲಿ (ನಿರ್ದಿಷ್ಟವಾಗಿ ಏಷ್ಯನ್‌ ರಾಷ್ಟ್ರಗಳಾದ ಚೀನಾ, ಮಲೇಷಿಯಾ, ಹಾಗೂ ಸಿಂಗಪೂರ್‌ಗಳಲ್ಲಿ), ವೈದ್ಯರುಗಳಿಗೆ ತಾವೇ ಔಷಧಿ ಸಿದ್ಧಪಡಿಸಲು ಅನುಮತಿಯಿದೆಯಲ್ಲದೇ ಕೆಲವೇಳೆ ನಿರ್ದಿಷ್ಟವಾಗಿ ಸಾಂಪ್ರದಾಯಿಕ ಚೀನೀ ವೈದ್ಯಕೀಯದಲ್ಲಿ ಔಷಧಾಲಯ/ಔಷಧವೃತ್ತಿಯ ಪದ್ಧತಿಯು ವೈದ್ಯರ ವೃತ್ತಿಯೊಂದಿಗೆ ಅಂತರ್ಗತವಾಗಿರುತ್ತದೆ.

ಕೆನಡಾದಲ್ಲಿ ದವಾಖಾನೆ ಹಾಗೂ ಔಷಧಾಲಯ/ಔಷಧಶಾಲೆಗಳು ಒಟ್ಟಿಗೆ ಇರುವುದು ಹಾಗೂ ಎರಡರ ಮಾಲೀಕತ್ವವು ಒಬ್ಬರದೇ ಆಗಿರುವುದು ಸಾರ್ವತ್ರಿಕವೇ ಆದರೂ ಪರವಾನಗಿಗಳನ್ನು ಪ್ರತ್ಯೇಕವಾಗಿ ಪಡೆಯಬೇಕಿರುತ್ತದೆ.

ಬಹುಮತ ನಿಯಮದ ಅಳವಡಿಕೆಗೆ ಕಾರಣವೇನೆಂದರೆ ಹಿತಾಸಕ್ತಿಗಳ ಸಂಘರ್ಷದ ಅಪಾಯದ ಅತೀವ ಸಾಧ್ಯತೆ ಹಾಗೂ/ಅಥವಾ ನಿರಂಕುಶ ಅಧಿಕಾರವನ್ನು ತಡೆಗಟ್ಟುವುದು. ಹೀಗೆ ಮಾಡಲಿಲ್ಲವಾದರೆ, ವೈದ್ಯರು ಸಾಧ್ಯವಿರುವಷ್ಟೂ "ರೋಗನಿದಾನಗಳನ್ನು ನಡೆಸುವ" ಹಾಗೂ ಪರಿಸ್ಥಿತಿಯ ಗಂಭೀರತೆಯನ್ನು ಉತ್ಪ್ರೇಕ್ಷಿಸುವ ಆರ್ಥಿಕ ಹಿತಾಸಕ್ತಿಯನ್ನು ಹೊಂದಿರಬಹುದಾಗಿರುತ್ತದೆ, ಏಕೆಂದರೆ ಆಗ ಆಕೆ/ತ ರೋಗಿಗಳಿಗೆ ಹೆಚ್ಚು ಔಷಧಿಗಳನ್ನು ಮಾರಬಹುದಾಗಿರುತ್ತದೆ. ಅಂತಹಾ ಹಿತಾಸಕ್ತಿಯು ರೋಗಿಯ ಅಲ್ಪವೆಚ್ಚದ ಚಿಕಿತ್ಸೆಯನ್ನು ಹೊಂದುವ ಹಾಗೂ ಅಡ್ಡಪರಿಣಾಮಗಳಿರಬಹುದಾದ ಔಷಧಿಗಳ ಅನಪೇಕ್ಷಿತ ಬಳಕೆಯನ್ನು ತಡೆಗಟ್ಟುವ ರೋಗಿಯ ಹಿತಾಸಕ್ತಿಗೆ ನೇರವಾಗಿ ಬಾಧಕವಾಗಿರುತ್ತದೆ. ಈ ವ್ಯವಸ್ಥೆಯು U.S. ಹಾಗೂ ಇನ್ನೂ ಅನೇಕ ಸರ್ಕಾರಗಳ ತಪಾಸಣೆ ಹಾಗೂ ಸಮತೋಲನ ವ್ಯವಸ್ಥೆಯೊಂದಿಗೆ ಬಹಳಷ್ಟು ಸಮರೂಪತೆಯನ್ನು ಹೊಂದಿರುತ್ತದೆ.

ಅನೇಕ ರಾಷ್ಟ್ರಗಳಲ್ಲಿ ಈ ಪ್ರತ್ಯೇಕತೆಯ ಬಗ್ಗೆ ಅಭಿಯಾನವು ಆರಂಭವಾಗಿದ್ದು ಅನೇಕವುಗಳಲ್ಲಿ ಯಶಸ್ವಿಯೂ ಆಗಿದೆ (ಕೊರಿಯಾದಂತೆ). ಉಳಿದ ಅನೇಕ ರಾಷ್ಟ್ರಗಳು ಪ್ರತ್ಯೇಕತೆಯ ಕಡೆಗೆ ಸಾಗುತ್ತಿರುವಂತೆ ಹಣಕಾಸಿನ ಹಿತಾಸಕ್ತಿ ಹೊಂದಿರುವ ಔಷಧಿ ಸಿದ್ದಧಪಡಿಸಬಲ್ಲ ವೈದ್ಯರುಗಳಿಂದ ಪ್ರತಿರೋಧ ಹಾಗೂ ವಶೀಲಿಗಳು ಪ್ರಮುಖ ತಡೆಗೋಡೆಯಾಗಿ ಪರಿಣಮಿಸಬಲ್ಲವಾಗಿವೆ (e.g. ಮಲೇಷಿಯಾದಲ್ಲಿ ).

ಔಷಧಾಲಯ/ಔಷಧವೃತ್ತಿಯ ಭವಿಷ್ಯ[ಬದಲಾಯಿಸಿ]

ಬರಲಿರುವ ದಶಕಗಳಲ್ಲಿ, ಆರೋಗ್ಯಪಾಲನೆ ವ್ಯವಸ್ಥೆಯಲ್ಲಿ ಔಷಧಿಕಾರರು ಮತ್ತಷ್ಟು ಅವಿಭಾಜ್ಯ ಅಂಗವಾಗಲಿದ್ದಾರೆ. ಕೇವಲ ಔಷಧಿಗಳನ್ನು ಸಿದ್ಧಪಡಿಸುವುದು ಮಾತ್ರವಲ್ಲದೇ, ಔಷಧಿಕಾರರಿಗೆ ತಮ್ಮ ರೋಗಿ ಪಾಲನಾ ನೈಪುಣ್ಯತೆಗಳಿಗೆ ಪ್ರತಿಫಲವೂ ಸಿಗಲಿದೆ.[೧೫]

ಔಷಧಿ ಚಿಕಿತ್ಸೆನಿರ್ವಹಣೆ (MTM)- ಪ್ರಸ್ತುತ ರಾಷ್ಟ್ರವ್ಯಾಪಿಯಾಗಿ ಔಷಧಾಲಯ/ಔಷಧಶಾಲೆ ವಿದ್ಯಾಲಯಗಳಲ್ಲಿ ಕಲಿಸಲ್ಪಡುತ್ತಿರುವ ಒಂದು ಔಷಧಾಲಯ/ಔಷಧವೃತ್ತಿಯ ಪದ್ಧತಿಯಾಗಿದ್ದು ಔಷಧಿಕಾರರು ತಮ್ಮ ರೋಗಿಗಳಿಗೆ ನೀಡಬಹುದಾಗಿರುವ ವೈದ್ಯಕೀಯ ಸೇವೆಗಳನ್ನೊಳಗೊಂಡಿರುತ್ತದೆ. ಅಂತಹಾ ಸೇವೆಗಳಲ್ಲಿ ಓರ್ವ ರೋಗಿಗೆ ಪ್ರಸ್ತುತ ನೀಡಲಾಗುತ್ತಿರುವ ಎಲ್ಲಾ ಚಿಕಿತ್ಸಾವಿವರಗಳ ಸಮಗ್ರ ವಿಶ್ಲೇಷಣೆಯನ್ನು (ಸೂಚನಾ ಚೀಟಿ, ಸೂಚನಾ ಚೀಟಿಮಾತ್ರವಲ್ಲದ, ಹಾಗೂ ಮೂಲಿಕಾಚಿಕಿತ್ಸೆಗಳು) ಒಳಗೊಂಡಿರುತ್ತದೆ. ಇದರ ಪರಿಣಾಮವಾಗಿ ಚಿಕಿತ್ಸೆಯ ಸಮನ್ವಯಗೊಳಿಕೆ ಹಾಗೂ ರೋಗಿಗಳಿಗೆ ಇದರ ಬಗ್ಗೆ ಅರಿವು ಬಂದುದರಿಂದ ರೋಗಿಯ ಆರೋಗ್ಯದ ಮೇಲಿನ ಉತ್ತಮ ಪರಿಣಾಮಗಳ ಹೆಚ್ಚುವಿಕೆ ಹಾಗೂ ಔಷಧಿ ಚಿಕಿತ್ಸೆನಿರ್ವಹಣೆಗೆ ವೆಚ್ಚ ಕಡಿಮೆಯಾಗುವಿಕೆ ಸಾಧ್ಯವಾಗುತ್ತದೆ.[೧೬]

ಈ ರೂಪಾಂತರವು ಆಗಲೇ ಕೆಲವು ರಾಷ್ಟ್ರಗಳಲ್ಲಿ ಆರಂಭಗೊಂಡಿದೆ; ಉದಾಹರಣೆಗೆ, ಆಸ್ಟ್ರೇಲಿಯಾದಲ್ಲಿನ ಔಷಧಿಕಾರರು ಆಸ್ಟ್ರೇಲಿಯಾದ ಸರಕಾರದಿಂದ ವ್ಯಾಪಕ ಮನೆ ಔಷಧಿಗಳ ವಿಮರ್ಶೆಯನ್ನು ಕೈಗೊಳ್ಳುವುದಕ್ಕೆ ಪ್ರತಿಫಲವಾಗಿ ಸಂಭಾವನೆಯನ್ನು ಪಡೆಯುತ್ತಾರೆ. ಕೆನಡಾದಲ್ಲಿ, ನಿರ್ದಿಷ್ಟ ಪ್ರಾಂತ್ಯಗಳಲ್ಲಿನ ಔಷಧಿಕಾರರು ಮಿತಿಗೊಳಿಸಿದ ಸೂಚನಾಚೀಟಿ ನೀಡುವ ಹಕ್ಕುಗಳನ್ನು ಹೊಂದಿದ್ದು (ಆಲ್ಬರ್ಟಾ ಹಾಗೂ ಬ್ರಿಟಿಷ್‌ ಕೊಲಂಬಿಯಾಗಳ ಹಾಗೆ) ಅಥವಾ ತಮ್ಮ ಪ್ರಾಂತೀಯ ಸರ್ಕಾರದಿಂದ ಔಷಧಿಗಳ ಪರಿಶೀಲನೆಗಳಂತಹಾ ಹೆಚ್ಚುವರಿ ಸೇವೆಗಳಿಗಾಗಿ ಸಂಭಾವನೆಯನ್ನು ಪಡೆಯುತ್ತಾರೆ (ಒಂಟಾರಿಯೋದಲ್ಲಿನ ಮೆಡ್ಸ್‌ಚೆಕ್ಸ್‌ನ ಹಾಗೆ). ಯುನೈಟೆಡ್‌ ಕಿಂಗ್‌ಡಮ್‌‌ನಲ್ಲಿ, ಹೆಚ್ಚುವರಿ ತರಬೇತಿ ಪಡೆದ ಔಷಧಿಕಾರರಿಗೆ ಸೂಚನಾಚೀಟಿ ಕೊಡುವ ಅನುಮತಿಗಳನ್ನು ನೀಡಲಾಗುತ್ತಿದೆ. ಅವರು ಔಷಧಿ ಬಳಕೆಯ ಬಗೆಗಿನ ಪರಿಶೀಲನೆಗಳಿಗಾಗಿ ಸರ್ಕಾರದಿಂದ ಸಂಭಾವನೆಯನ್ನೂ ಪಡೆಯುತ್ತಿದ್ದಾರೆ. ಯುನೈಟೆಡ್‌ ಸ್ಟೇಟ್ಸ್‌‌ದಲ್ಲಿ, ಔಷಧೀಯ ಪಾಲನೆ ಅಥವಾ ದವಾಖಾನೀಯ ಔಷಧಾಲಯ/ಔಷಧವೃತ್ತಿಯು ಔಷಧಾಲಯ/ಔಷಧವೃತ್ತಿಯ ಪದ್ಧತಿಯ ಮೇಲೆ ವಿಕಸನಗೊಳ್ಳುವಂತಹಾ ಪ್ರಭಾವ ಬೀರಿದೆ.[೯] ಅಷ್ಟೇಅಲ್ಲದೇ, ಡಾಕ್ಟರ್‌ ಆಫ್‌ ಫಾರ್ಮಸಿ ಪದವಿಯನ್ನು (Pharm. ಪಡೆದಿರಬೇಕಾದ್ದು ಈಗ ಸೇವೆಯನ್ನು ಆರಂಭಿಸುವ ಮುಂಚೆ ಕಡ್ಡಾಯವಾಗಿದ್ದು ಕೆಲ ಔಷಧಿಕಾರರು ಪ್ರಸ್ತುತ ಒಂದು ಅಥವಾ ಎರಡು ವರ್ಷಗಳ ರೆಸಿಡೆನ್ಸಿ ಅಥವಾ ಫೆಲೋಷಿಪ್‌ ತರಬೇತಿಗಳನ್ನು ದವಿಯ ನಂತರ ಪೂರೈಸುತ್ತಿದ್ದಾರೆ. ಇದರೊಂದಿಗೆ, ಶ್ರುಶೂಷಾಗೃಹಗಳಲ್ಲಿ ಸಾಂಪ್ರದಾಯಿಕವಾಗಿ ಕಾರ್ಯನಿರ್ವಹಿಸುತ್ತಿದ್ದ ಸಲಹಾವೈದ್ಯ ಔಷಧಿಕಾರರು, "ಹಿರಿಯರ ಪಾಲನಾ ಔಷಧಾಲಯ/ಔಷಧಶಾಲೆ" ಎಂಬ ಹೆಸರಿನಡಿಯಲ್ಲಿ [೧೭] ಪ್ರಸ್ತುತ ರೋಗಿಗಳೊಂದಿಗೆ ನೇರ ಸಮಾಲೋಚನೆಗಳಿಗೆ ತಮ್ಮ ಸೇವೆಯನ್ನು ವಿಸ್ತರಿಸುತ್ತಿದ್ದಾರೆ.

ಇವನ್ನೂ ನೋಡಿ[ಬದಲಾಯಿಸಿ]

Page ಮಾಡ್ಯೂಲ್:Portal/styles.css has no content.

ಸಂಕೇತಗಳು[ಬದಲಾಯಿಸಿ]

ಔಷಧಾಲಯ/ಔಷಧವೃತ್ತಿಯೊಂದಿಗೆ ಸಂಬಂಧಿಸಿದಂತೆ ಬಹುಸಾಮಾನ್ಯವಾಗಿ ಬಳಸುವ ಎರಡು ಸಂಕೇತಗಳೆಂದರೆ ಕಲಾಬತ್ತು ಹಾಗೂ ಕುಟ್ಟಾಣಿ ಹಾಗೂ ಅನೇಕ ವೇಳೆ ಟೈಪ್‌ ಮಾಡಿದ ಪಠ್ಯದಲ್ಲಿ "rx" ಎಂದು ಬರೆಯಲಾಗುವ (ರೆಸಿಪೆರೆ ) ಅಕ್ಷರ/ಚಿಹ್ನೆ. ಪ್ರದರ್ಶನ ಗೋಳವನ್ನು ಕೂಡಾ ಆಂಗ್ಲ-ಭಾಷಿಕ ರಾಷ್ಟ್ರಗಳಲ್ಲಿ 20ನೇ ಶತಮಾನದ ಆದಿಯವರೆವಿಗೆ ಬಳಸಲಾಗುತ್ತಿತ್ತು. ಔಷಧಾಲಯ/ಔಷಧವೃತ್ತಿ ಸಂಸ್ಥೆಗಳು ಅನೇಕ ವೇಳೆ ಇತರೆ ಸಂಕೇತಗಳನ್ನು ನೆದರ್‌ಲೆಂಡ್ಸ್‌ನಲ್ಲಿ ಅನೇಕವೇಳೆ ಬಳಸುವ ಬೌಲ್‌ ಆಫ್‌ ಹೈಜೀಯಿಯಾ, ಶಂಕುವಿನಾಕೃತಿಯ ಅಳತೆಪಾತ್ರೆ ಹಾಗೂ ಕಾಡುಕೆಯಸ್‌ಗಳನ್ನು ತಮ್ಮ ಲೋಗೋಗಳಲ್ಲಿ ಬಳಸುತ್ತವೆ. ವಿಭಿನ್ನ ರಾಷ್ಟ್ರಗಳಲ್ಲಿ ಸಾರ್ವತ್ರಿಕವಾಗಿ ಬಳಸುವ ಇತರೆ ಚಿಹ್ನೆಗಳೆಂದರೆ : ಫ್ರಾನ್ಸ್‌‌ನ‌ ಹಸಿರು ಗ್ರೀಕ್‌‌‌ ಶಿಲುಬೆ, ಅರ್ಜೆಂಟಿನಾ, ಯುನೈಟೆಡ್‌ ಕಿಂಗ್‌ಡಮ್‌‌, ಬೆಲ್ಜಿಯಂ, ಇಟಲಿ ಹಾಗೂ ಸ್ಪೇನ್‌ಗಳಲ್ಲಿನ ದ ಶಿಲುಬೆ, ನೆದರ್‌ಲೆಂಡ್ಸ್‌‌ನ ಅಪರೂಪದ ಗೇಪರ್‌ ಪಕ್ಷಿ, ಹಾಗೂ ಜರ್ಮನಿ ಹಾಗೂ ಆಸ್ಟ್ರಿಯಾಗಳ ಕೆಂಪು ಬಣ್ದದ ಶೈಲೀಕೃತ A ಅಕ್ಷರ (ಅಪೋಥೆಕೆ , ಔಷಧಾಲಯ/ಔಷಧವೃತ್ತಿಗೆ, ಆಂಗ್ಲ ಪದ 'ಅಪೋಥೆಕರಿ'ಯದೇ ಆದ ಗ್ರೀಕ್‌ ‌‌ಪದಮೂಲದ ಜರ್ಮನ್‌ ಪದ).

ಟಿಪ್ಪಣಿಗಳು[ಬದಲಾಯಿಸಿ]

 1. ಬೋರ್ಡ್‌ ಆಫ್‌ ಫಾರ್ಮಸ್ಯೂಟಿಕಲ್‌ ಸ್ಪೆಷಾಲಿಟೀಸ್‌‌, ಕರೆಂಟ್‌ ಸ್ಪೆಷಾಲಿಟೀಸ್‌ Archived 2007-08-07 ವೇಬ್ಯಾಕ್ ಮೆಷಿನ್ ನಲ್ಲಿ.
 2. Ellis, Linda (2000). Archaeological Method and Theory: An Encyclopedia. Taylor & Francis. pp. 443–448. ISBN 9780815313052.
 3. John K. Borchardt (2002). "The Beginnings of Drug Therapy: Ancient Mesopotamian Medicine". Drug News & Perspectives. 15 (3): 187–192. doi:10.1358/dnp.2002.15.3.840015. ISSN 0214-0934. PMID 12677263.
 4. ಟಿಟ್‌ಸಿಂಗ್‌, ಐಸಾಕ್. (1834) Annales des empereurs du japon, p. 434.
 5. Hadzovic, S (1997). "Pharmacy and the great contribution of Arab-Islamic science to its development". Medicinski Arhiv (in Croatian). 51 (1–2): 47–50. ISSN 0025-8083. OCLC 32564530. PMID 9324574. {{cite journal}}: Cite has empty unknown parameters: |quotes=, |month=, and |coauthors= (help)CS1 maint: unrecognized language (link)
 6. al-Ghazal, Sharif Kaf (2003). "The valuable contributions of Al-Razi (Rhazes) in the history of pharmacy during the Middle Ages" (pdf). Journal of the International Society for the History of Islamic Medicine. 2 (4): 9–11. ISSN 1303-667X. OCLC 54045642. {{cite journal}}: Unknown parameter |month= ignored (help)
 7. ಲೆವೆ M. (1973), 'ಅರ್ಲಿ ಅರೇಬಿಕ್‌ ಫಾರ್ಮಕಾಲಜಿ’, E. J. ಬ್ರಿಲ್‌; ಲೇಡೆನ್‌.
 8. "ಔಷಧಾಲಯ/ಔಷಧವೃತ್ತಿ ಜಾಲಪುಟಗಳ ಇತಿಹಾಸ - ಸ್ವೀಡನ್‌‌ನ ಅತಿ ಹಳೆಯ ಔಷಧಾಲಯಗಳು". Archived from the original on 2011-06-23. Retrieved 2010-09-08.
 9. ೯.೦ ೯.೧ ಅಮೇರಿಕನ್‌ ಕಾಲೇಜ್‌ ಆಫ್‌ ಕ್ಲಿನಿಕಲ್‌ ಫಾರ್ಮಸಿ, ಕ್ಲಿನಿಕಲ್‌ ಫಾರ್ಮಸಿ ಡಿಫೈನ್‌ಡ್‌‌ Archived 2007-07-04 ವೇಬ್ಯಾಕ್ ಮೆಷಿನ್ ನಲ್ಲಿ.
 10. ಅಮೇರಿಕನ್‌ ಸೊಸೈಟಿ ಆಫ್‌ ಕನ್ಸಲ್ಟೆಂಟ್‌ ಫಾರ್ಮಾಸಿಸ್ಟ್‌ಸ್‌‌ , ಪುನರಾವರ್ತಿತ ಪ್ರಶ್ನೆಗಳು
 11. Strand LM (1990). "Pharmaceutical care and patient outcomes: notes on what it is we manage". Top Hosp Pharm Manage. 10 (2): 77–84. PMID 10128568.
 12. Hepler CD, Strand LM (1990). "Opportunities and responsibilities in pharmaceutical care". Am J Hosp Pharm. 47 (3): 533–43. PMID 2316538.
 13. ಅಮೇರಿಕನ್‌ ಅಸೋಸಿಯೇಷನ್‌ ಆಫ್‌ ಸ್ಟೇಟ್‌‌ ಕಾಂಪೆನ್ಸೇಷನ್‌ ಇನ್‌ಷ್ಯೂರೆನ್ಸ್‌‌ ಫಂಡ್ಸ್‌, ಪ್ರಿಪ್ಯಾಕೇಜ್‌ಡ್‌ ಡ್ರಗ್ಸ್‌ ಇನ್‌ ವರ್ಕರ್ಸ್‌ ಕಾಂಪೆನ್ಸೇಷನ್‌ Archived 2018-08-15 ವೇಬ್ಯಾಕ್ ಮೆಷಿನ್ ನಲ್ಲಿ.
 14. ಬ್ರಿಟಿಷ್‌ ಮೆಡಿಕಲ್‌ ಅಸೋಸಿಯೇಷನ್‌, ಸಿದ್ಧಪಡಿಸಿದ ಔಷಧ ನೀಡುವ ವೈದ್ಯರುಗಳ ಬಗೆಗಿನ ವಿವರಣೆ ನೀಡುವಿಕೆ, 30 ಜನವರಿ 2009 [೧] Archived 2020-05-20 ವೇಬ್ಯಾಕ್ ಮೆಷಿನ್ ನಲ್ಲಿ.
 15. ಅಮೇರಿಕನ್‌ ಕಾಲೇಜ್‌ ಆಫ್‌ ಕ್ಲಿನಿಕಲ್‌ ಫಾರ್ಮಸಿ, ಎವಿಡೆನ್ಸ್‌ ಆಫ್‌ ದ ಇಕನಾಮಿಕ್‌ ಬೆನಿಫಿಟ್‌ ಆಫ್‌ ಕ್ಲಿನಿಕಲ್‌ ಫಾರ್ಮಸಿ ಸರ್ವೀಸಸ್‌: 1996-2000
 16. ಅಮೇರಿಕನ್‌ ಫಾರ್ಮಸಿ ಸ್ಟೂಡೆಂಟ್‌ ಅಲೈಯನ್ಸ್‌ (APSA)
 17. ಅಮೇರಿಕನ್‌ ಸೊಸೈಟಿ ಆಫ್‌ ಕನ್ಸಲ್ಟೆಂಟ್‌ ಫಾರ್ಮಾಸಿಸ್ಟ್‌‌ಸ್‌, ಹಿರಿಯ ಪಾಲನಾ ಔಷಧಿಕಾರ ಎಂದರೆ ಏನು? Archived 2006-10-23 ವೇಬ್ಯಾಕ್ ಮೆಷಿನ್ ನಲ್ಲಿ.

ಆಕರಗಳು[ಬದಲಾಯಿಸಿ]

 • ವಾಟ್‌ಕಿನ್ಸ್‌, ಎಲಿಜಬೆತ್‌ ಸೀಗೆಲ್‌, “ಫ್ರಂ ಹಿಸ್ಟರಿ ಆಫ್‌ ಫಾರ್ಮಸಿ ಟು ಫಾರ್ಮಸ್ಯೂಟಿಕಲ್‌ ಹಿಸ್ಟರಿ,” ಫಾರ್ಮಸಿ ಇನ್‌ ಹಿಸ್ಟರಿ , 51 (no. 1, 2009), 3–13.
 • (Japanese)
ಅಸೈ,T. (1985). ನ್ಯೋಕನ್‌ ಟುಕಾಯ್ . ಟೋಕಿಯೋ: ಕೋಡಾನ್‌-ಷಾ.

ಬಾಹ್ಯ ಕೊಂಡಿಗಳು[ಬದಲಾಯಿಸಿ]

ಇತರೆ[ಬದಲಾಯಿಸಿ]

 • ಔಷಧಾಲಯ/ಔಷಧವೃತ್ತಿಯ ಅವಾಸ್ತವ ಗ್ರಂಥಾಲಯ - ಔಷಧಾಲಯ/ಔಷಧವೃತ್ತಿಯಲ್ಲಿನ ವೃತ್ತಿ, ಔಷಧಾಲಯ/ಔಷಧಶಾಲೆ ಮಹಾವಿದ್ಯಾಲಯಗಳು, ಔಷಧೀಯ ಕಂಪೆನಿಗಳು, ಸಂಘಗಳು ಹಾಗೂ ಸಮ್ಮೇಳನಗಳ ಬಗ್ಗೆ ಮಾಹಿತಿ ಸೇರಿದಂತೆ ಸಮಗ್ರ ಔಷಧಾಲಯ/ಔಷಧವೃತ್ತಿಗೆ -ಸಂಬಂಧಿಸಿದ ಸಂಪನ್ಮೂಲಗಳ ಪರಿವಿಡಿ.