ವಿಷಯಕ್ಕೆ ಹೋಗು

ಏರಿಯಾ 51

Coordinates: 37°14′25″N 115°49′07″W / 37.240203°N 115.818558°W / 37.240203; -115.818558
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Area 51
This satellite image of Area 51 shows dry Groom Lake just north of the site.
IATA: noneICAO: KXTA
Summary
Airport type Military
Operator United States Air Force
Location Southern Nevada,  ಅಮೇರಿಕ ಸಂಯುಕ್ತ ಸಂಸ್ಥಾನ
Elevation AMSL ೪,೪೬೨ ft / ೧,೩೬೦ m
Coordinates 37°14′06″N 115°48′40″W / 37.23500°N 115.81111°W / 37.23500; -115.81111
Runways
Direction Length Surface
ft m
14L/32R ೧೨,೦೦೦ ೩,೬೫೮ Asphalt
12/30 ೫,೪೨೦ ೧,೬೫೨ Asphalt
09L/27R ೧೧,೪೪೦ ೩,೪೮೯ Salt
09R/27L ೧೧,೪೪೦ ೩,೪೮೯ Salt
03L/21R ೧೦,೦೩೦ ೩,೦೫೭ Salt
03R/21L ೧೦,೦೩೦ ೩,೦೫೭ Salt
14R/32L ೨೩,೨೭೦ ೭,೦೯೩ Closed

ಏರಿಯಾ 51 ಎಂಬುದು ಪಶ್ಚಿಮ ಸಂಯುಕ್ತ ಸಂಸ್ಥಾನಗಳಲ್ಲಿನ ನೆವಡಾ ಪ್ರದೇಶದ ದಕ್ಷಿಣ ಭಾಗದಲ್ಲಿ (ವ್ಯಾಪಾರಿ ಕೇಂದ್ರವಾದ ಲಾಸ್‌ ವೇಗಾಸ್‌ ನಗರದ ಉತ್ತರ ವಾಯುವ್ಯಕ್ಕೆ 83 ಮೈಲುಗಳಷ್ಟು ದೂರವಿರುವುದು) ನೆಲೆಗೊಂಡಿರುವ ಸೇನಾ ನೆಲೆಗೆ ಇಡಲಾಗಿರುವ ಅಡ್ಡಹೆಸರು ಅಥವಾ ಉಪನಾಮ. ಗ್ರೂಮ್ ಸರೋವರದ ದಕ್ಷಿಣ ದಂಡೆಯ ಮೇಲೆ ನೆಲೆಗೊಂಡಿರುವ ಇದರ ಕೇಂದ್ರಭಾಗದಲ್ಲಿ ಬೃಹತ್ತಾದ ಒಂದು ರಹಸ್ಯ ಸೇನಾ ವಿಮಾನ ನಿಲ್ದಾಣವಿದೆ. ಪ್ರಾಯೋಗಿಕ ವಿಮಾನಗಳು ಮತ್ತು ಶಸ್ತ್ರಾಸ್ತ್ರಗಳ ವ್ಯವಸ್ಥೆಗಳ ಅಭಿವೃದ್ಧಿ ಹಾಗೂ ಪರೀಕ್ಷಾ ಕಾರ್ಯಗಳಿಗೆ ಬೆಂಬಲ ನೀಡುವುದು ಈ ನೆಲೆಯ ಪ್ರಾಥಮಿಕ ಉದ್ದೇಶ.[೧][೨]

ಸಂಯಕ್ತ ಸಂಸ್ಥಾನಗಳ ವಾಯುಪಡೆಯ ವಿಶಾಲವಾದ ನೆವಡಾ ಪರೀಕ್ಷಾ ಮತ್ತು ತರಬೇತಿ ಶ್ರೇಣಿಪ್ರದೇಶದಲ್ಲಿ ಈ ನೆಲೆಯು ಸ್ಥಿತವಾಗಿದೆ. ನೆಲ್ಲಿಸ್‌ ವಾಯುಪಡೆಯ ನೆಲೆಯಲ್ಲಿರುವ 99ನೇ ವಾಯುನೆಲೆ ವಿಭಾಗದಿಂದ ಈ ಶ್ರೇಣಿಪ್ರದೇಶದ ಸೌಕರ್ಯಗಳು ನಿರ್ವಹಿಸಲ್ಪಡುತ್ತಿವೆಯಾದರೂ, ಎಡ್ವರ್ಡ್ಸ್‌ ವಾಯುಪಡೆ ನೆಲೆಯಲ್ಲಿನ ಏರ್‌ಫೋರ್ಸ್‌ ಫ್ಲೈಟ್‌ ಟೆಸ್ಟ್ ಸೆಂಟರ್ (AFFTC)ನ ಅಧೀನದಲ್ಲಿ ತರಬೇತಿ ವ್ಯವಸ್ಥೆಯು ನಡೆಯುತ್ತಿರುವಂತೆ ಕಾಣುತ್ತದೆ. ಗ್ರೂಮ್‌ ಸರೋವರದ [6]ನೈರುತ್ಯ ಭಾಗವನ್ನು ಆವರಿಸಿರುವ ಮೊಜಾವೆ ಮರುಭೂಮಿಯಲ್ಲಿ ನೆಲೆಗೊಂಡಿರುವ ಈ ನೆಲೆಯು ವಾಯುಪಡೆಯ ವಿಮಾನ ಪರೀಕ್ಷಾ ಕೇಂದ್ರ (ತುಕಡಿ 3) ಎಂದೇ ಗುರುತಿಸಲ್ಪಟ್ಟಿದೆ. [7][8]

ಈ ತರಬೇತಿ ಪ್ರದೇಶವನ್ನು ಇನ್ನೂ ಅನೇಕ ಹೆಸರುಗಳಿಂದ ಕರೆಯಲಾಗುತ್ತದೆ. ಅವುಗಳೆಂದರೆ, ಡ್ರೀಮ್‌ಲ್ಯಾಂಡ್ , ಪ್ಯಾರಡೈಸ್ ರಾಂಚ್ ,[೩][೪] ಹೋಮ್ ಬೇಸ್ , ವಾಟರ್‌ಟೌನ್ ಸ್ಟ್ರಿಪ್ , ಗ್ರೂಮ್ ಲೇಕ್ [೫]. ಹೋಮ್ ಏರ್‌ಪೋರ್ಟ್‌ [೬] ಎನ್ನುವುದು ಇದರ ತೀರಾ ಇತ್ತೀಚಿನ ಹೆಸರು. ಈ ಪ್ರದೇಶವು ನೆಲ್ಲಿಸ್ ಸೇನಾ ಕಾರ್ಯಾಚರಣೆಗಳ ಪ್ರದೇಶದ ಅಂಗವಾಗಿದೆ ಮತ್ತು ಆ ಕ್ಷೇತ್ರವನ್ನು ಸುತ್ತುವರೆದಿರುವ ನಿರ್ಬಂಧಿತ ವಾಯುಪ್ರದೇಶವನ್ನು (R-4808N[೭]) ಎಂದು ಉಲ್ಲೇಖಿಸಲಾಗುತ್ತದೆ. ಈ ಪ್ರದೇಶದಲ್ಲಿನ ಸೇನಾ ವಿಮಾನ ಚಾಲಕರು‌ಗಳಿಂದಾಗಿ ಈ ಪ್ರದೇಶವು "ದಿ ಬಾಕ್ಸ್ ‌" ಎಂದೇ ಜನಜನಿತವಾಗಿದೆ.

ಈ ನೆಲೆಯನ್ನು ಸುತ್ತುವರೆದಿರುವ ತೀವ್ರ ಗೌಪ್ಯತೆಯನ್ನು U.S. ಸರ್ಕಾರವು ಅಲ್ಲಗಳೆಯುತ್ತಾದರೂ, ಸದರಿ ಗೌಪ್ಯತೆಯಿಂದಾಗಿ ಇದೊಂದು ಪಿತೂರಿಯ ಸಿದ್ಧಾಂತಗಳಿಗೆ ಸಂಬಂಧಿಸಿದ ನಿರಂತರ ಚರ್ಚಾವಸ್ತುವಾಗಿ ಮತ್ತು ಹಾರುವ ತಟ್ಟೆಗಳ (UFO) ಕುರಿತಾದ ಪರಂಪರಾನುಗತ ನಂಬಿಕೆಗಳ ಕೇಂದ್ರಭಾಗವಾಗಿ ಮಾರ್ಪಟ್ಟಿದೆ.[೪]

ಭೂಗೋಳ[ಬದಲಾಯಿಸಿ]

ಏರಿಯಾ 51, NAFR ಮತ್ತು NTSನ್ನು ತೋರಿಸುತ್ತಿರುವ ಭೂಪಟ

ನೆವಡಾ ಟೆಸ್ಟ್‌ ಸೈಟ್‌ನ (NTS) ಯಕ್ಕ ಬಯಲು ಪ್ರದೇಶ ವಲಯದೊಂದಿಗೆ ಏರಿಯಾ 51 ನೆಲೆಯು ತನ್ನ ಗಡಿಯೊಂದನ್ನು ಹಂಚಿಕೊಳ್ಳುತ್ತದೆ. ಸಂಯುಕ್ತ ಸಂಸ್ಥಾನಗಳ ಅಣುಶಕ್ತಿ ಇಲಾಖೆಯು NTSನಲ್ಲಿ ನಡೆಸಿದ 928 ಅಣ್ವಸ್ತ್ರ ಪರೀಕ್ಷೆಗಳ ಪೈಕಿ 729 ಪರೀಕ್ಷೆಗಳು ನಡೆದ ಸ್ಥಳವಿದು.[೮] ಯಕ್ಕ ಪರ್ವತದ ಅಣ್ವಸ್ತ್ರ ತ್ಯಾಜ್ಯದ ಉಗ್ರಾಣವು ಗ್ರೂಮ್‌ ಸರೋವರದ 40 miles (64 kilometres)ಸರಿಸುಮಾರು ನೈರುತ್ಯ ದಿಕ್ಕಿನಲ್ಲಿದೆ.

ನೆವಡಾ ಪರೀಕ್ಷಾ ತಾಣದ ಇತರ ಭಾಗಗಳಿಗೂ ಇದೇ "ಏರಿಯಾ xx " ನಾಮಕರಣ ಪದ್ಧತಿಯನ್ನು ಬಳಸಲಾಗಿದೆ.[೯][೧೦]

ಮೂಲತಃ 60 ಮೈಲುಗಳಷ್ಟು ವಿಸ್ತೀರ್ಣವನ್ನುಳ್ಳ ಆಯತಾಕಾರದ ನೆಲೆಯೀಗ "ಗ್ರೂಮ್ ಬಾಕ್ಸ್‌" ಎಂದು ಕರೆಯಲಾಗುವ, ನಿರ್ಬಂಧಿತ ವಾಯುಪ್ರದೇಶದ 586.5 ಮೈಲುಗಳಷ್ಟು ಆಯತಾಕಾರದ ವಿಸ್ತೀರ್ಣವನ್ನುಳ್ಳ ಪ್ರದೇಶದ ಭಾಗವಾಗಿದೆ. ಈ ಪ್ರದೇಶವು ಆಂತರಿಕ NTS ರಸ್ತೆಜಾಲದೊಂದಿಗೆ ಸಂಪರ್ಕವನ್ನು ಹೊಂದಿದ್ದು, ಇಲ್ಲಿನ ಸುಸಜ್ಜಿತ ರಸ್ತೆಗಳು ದಕ್ಷಿಣಾಭಿಮುಖವಾಗಿ ಮರ್ಕ್ಯುರಿಗೂ ಮತ್ತು ಪಶ್ಚಿಮಾಭಿಮುಖವಾಗಿ ಯಕ್ಕ ಬಯಲು ಪ್ರದೇಶಕ್ಕೂ ಸಾಗುತ್ತವೆ. ಸರೋವರದಿಂದ ಆಗ್ನೇಯ ಭಾಗದೆಡೆಗೆ ಒಯ್ಯುವ, ಅಗಲವಾದ ಹಾಗೂ ಉತ್ತಮವಾಗಿ ನಿರ್ವಹಿಸಲ್ಪಟ್ಟ ಗ್ರೂಮ್ ಸರೋವರ ರಸ್ತೆಯು ಗೊತ್ತುಗುರಿಯಿಲ್ಲದೆ ಹಬ್ಬಿರುವ ಬೆಟ್ಟಗಳಲ್ಲಿನ ಕಣಿವೆಯೊಂದರ ಮೂಲಕ ಸಾಗುತ್ತದೆ. ಇದಕ್ಕೂ ಮುಂಚೆ ಗ್ರೂಮ್‌ ಸರೋವರವನ್ನು ಸುತ್ತುವರೆದ ಪ್ರದೇಶದಲ್ಲಿನ ಗಣಿಗಳೆಡೆಗೆ ಈ ರಸ್ತೆಯು ಕರೆದೊಯ್ಯುತ್ತಿತ್ತು. ಆದರೆ ಅವುಗಳು ಮುಚ್ಚಲ್ಪಟ್ಟಿದ್ದರಿಂದಾಗಿ ಈ ರಸ್ತೆಯು ಸುಧಾರಣೆ ಕಂಡಿತು. ಇದರ ತಿರುಗು ಓಟವು ಒಂದು ಭದ್ರತಾ ತನಿಖಾ ಸ್ಥಳವನ್ನು ದಾಟಿಹೋಗುತ್ತದೆಯಾದರೂ, ನೆಲೆಯನ್ನು ಸುತ್ತುವರೆದಿರುವ ನಿರ್ಬಂಧಿತ ಪ್ರದೇಶವನ್ನು ಮುಂದುವರೆದು ಪೂರ್ವಕ್ಕೆ ವಿಸ್ತರಿಸುತ್ತದೆ. ನಿರ್ಬಂಧಿತ ಪ್ರದೇಶವನ್ನು ಬಿಟ್ಟ ನಂತರ, ಗ್ರೂಮ್ ಲೇಕ್ ರಸ್ತೆಯು ಪೂರ್ವದೆಡೆಗೆ ಕೆಳಗಿಳಿದು ಟಿಕಾಬೂ ಕಣಿವೆಯ ತಳಪ್ರದೇಶದೆಡೆಗೆ ಸಾಗಿ, ರ್ಯಾಚೆಲ್‌ನ ದಕ್ಷಿಣಕ್ಕಿರುವ, "ಎಕ್ಸ್‌ಟ್ರಾ ಟೆರೆಸ್ಟ್ರಿಯಲ್ ಹೆದ್ದಾರಿ" ಎಂದು ಕರೆಯಲಾಗುವ ಸಂಸ್ಥಾನದ ಮಾರ್ಗ 375ರೊಂದಿಗೆ ಸೇರುವುದಕ್ಕೆ ಮುಂಚಿತವಾಗಿ ಹಲವಾರು ಪುಟ್ಟ ಹುಲ್ಲುಗಾವಲುಗಳೆಡೆ ಸಾಗುವ ಮಣ್ಣುರಸ್ತೆಯ ಮಾರ್ಗಗಳನ್ನು ಹಾದುಹೋಗುತ್ತದೆ.

ಗ್ರೂಮ್‌ ಸರೋವರದಲ್ಲಿನ ಕಾರ್ಯಾಚರಣೆಗಳು[ಬದಲಾಯಿಸಿ]

ಗ್ರೂಮ್‌ ಸರೋವರದ ನೆಲೆಯಲ್ಲಿ ಮುಂಚೂಣಿಯ ಘಟಕಗಳನ್ನು ಸಾಮಾನ್ಯವಾಗಿ ನಿಯೋಜಿಸುವುದಿಲ್ಲವಾದ್ದರಿಂದ ಅದೊಂದು ಸಾಂಪ್ರದಾಯಿಕ ವಾಯುನೆಲೆಯಲ್ಲ. ಅದಕ್ಕೆ ಬದಲಾಗಿ, ಹೊಸ ವಿಮಾನಗಳ ಅಭಿವೃದ್ಧಿ, ಪರೀಕ್ಷಾ ಕಾರ್ಯ ಮತ್ತು ತರಬೇತಿ ಹಂತಗಳಿಗಾಗಿ ಇದು ಬಳಕೆಯಾಗುವಂತೆ ತೋರುತ್ತದೆ. ಈ ವಿಮಾನಗಳು ಸಂಯುಕ್ತ ಸಂಸ್ಥಾನಗಳ ವಾಯುಪಡೆ ಅಥವಾ CIAಯಂತಹ ಇತರ ಸಂಸ್ಥೆಗಳಿಂದ ಒಮ್ಮೆ ಅನುಮೋದನೆಯನ್ನು ಪಡೆದುಕೊಂಡಲ್ಲಿ, ಸಾಮಾನ್ಯವಾಗಿ ಯಾವುದಾದರೊಂದು ಸಾಮಾನ್ಯ ವಾಯುಪಡೆಯ ನೆಲೆಯಿಂದ ಆ ವಿಮಾನದ ಕಾರ್ಯಾಚರಣೆಯನ್ನು ನಡೆಸಲಾಗುತ್ತದೆ.

ಶೀತಲ ಸಮರವು ಉತ್ತುಂಗದಲ್ಲಿದ್ದ ಅವಧಿಯಲ್ಲಿ ಸೋವಿಯೆಟ್‌ನ ಗೂಢಾಚಾರ ಉಪಗ್ರಹಗಳು ಗ್ರೂಮ್ ಸರೋವರ ಪ್ರದೇಶದ ಛಾಯಾಚಿತ್ರಗಳನ್ನು ಪಡೆದುಕೊಂಡಿದ್ದವು ಹಾಗೂ ನಂತರದಲ್ಲಿ ನಾಗರಿಕ ಉಪಗ್ರಹಗಳು ಈ ವಾಯುಪಡೆ ನೆಲೆ ಮತ್ತು ಅದರ ಸುತ್ತಮುತ್ತಲ ಪ್ರದೇಶಗಳ ವಿಸ್ತೃತ ಚಿತ್ರಿಕೆಗಳನ್ನು ತಯಾರಿಸಿದ್ದವು. ಈ ಚಿತ್ರಗಳು ಕೇವಲ ಅಪೂರ್ಣ ನೆಲೆ, ಉದ್ದವಾದ ವಿಮಾನ-ಹಾದಿ, ವಿಮಾನಖಾನೆಗಳು ಮತ್ತು ಸರೋವರವನ್ನು ಚಿತ್ರಿಸುವ ಮೂಲಕ ವಾಯುನೆಲೆಯ ಕುರಿತಾದ ತೀರಾ ಸಾಧಾರಣವಾದ ತೀರ್ಮಾನಗಳಿಗೆ ಪೂರಕವಾಗಿ ನಿಂತವು.

ರೆಡ್ ಈಗಲ್ಸ್‌[ಬದಲಾಯಿಸಿ]

ಗೇಲ್‌ ಪೆಕ್‌ನ 4477ನೇ ಪರೀಕ್ಷಾ ಮತ್ತು ಮೌಲ್ಯನಿರ್ಧಾರಕ ವಿಮಾನ ಪಡೆಯಾದ "ರೆಡ್ ಈಗಲ್ಸ್"‌ಗಳ ಘಟಕಗಳಿಗೆ ಗ್ರೂಮ್‌ ಸರೋವರ ಪ್ರದೇಶವು ನೆಲೆಯಾಗಿತ್ತು. ವಾರ್ಷಿಕ ಕಾನ್‌ಸ್ಟೆಂಟ್ ಪೆಗ್ ಅಭ್ಯಾಸದ ಅಂಗವಾಗಿ, US ಮತ್ತು NATOಗೆ ಸೇರಿದ ವಿಮಾನ ಚಾಲಕರಿಗೆ ಪ್ರತಿಯಾಗಿ ಹಾರಿಸುವುದರ ತರಬೇತಿ ಮತ್ತು ರಹಸ್ಯ ವಿಶ್ಲೇಷಣೆಗಾಗಿ ಬಳಸಲಾಗಿದ್ದ ಸೋವಿಯೆಟ್‌-ವಿನ್ಯಾಸಿತ ಅಸಂಖ್ಯಾತ ವಿಮಾನಗಳನ್ನು (ಪೂರ್ವದ ವಿಮಾನ ಚಾಲಕರ ಬಣವು ಬಿಟ್ಟುಹೋದ ವಿಮಾನಗಳಿಂದ ಪಡೆದವು) ಆತ ಹಾರಿಸಿದ್ದ.[19][20] ಶೀತಲ ಯುದ್ಧವು ಅಂತ್ಯವಾಗುವುದರೊಂದಿಗೆ, USAF ಮತ್ತು ಅದರ ನಾಗರಿಕ ಗುತ್ತಿಗೆದಾರ ಸಂಸ್ಥೆಯಾದ ಟ್ಯಾಕ್-ಏರ್, ಉಕ್ರೈನ್[೧೧] ಮತ್ತು ಮೊಲ್ಡೋವಾದಿಂದ[೧೨] ಬಹಿರಂಗವಾಗಿ ಖರೀದಿಸಿದ ವಿಮಾನಗಳೊಂದಿಗೆ ಈ ರಹಸ್ಯ ವಿಮಾನಶ್ರೇಣಿಯನ್ನು ವರ್ಧಿಸಿಕೊಂಡು, ರೈಟ್‌ ಪ್ಯಾಟರ್‌ಸನ್ ವಾಯುಪಡೆಯ ನೆಲೆಯಿಂದ[೧೨] ಕಾರ್ಯಾಚರಣೆಗೆ ಒಳಪಡಿಸಿತು.

U-2 ಕಾರ್ಯಕ್ರಮ[ಬದಲಾಯಿಸಿ]

IIನೇ ಜಾಗತಿಕ ಸಮರದ ಅವಧಿಯಲ್ಲಿ ಗ್ರೂಮ್‌ ಸರೋವರವನ್ನು ಬಾಂಬ್ ದಾಳಿ ಮತ್ತು ಫಿರಂಗಿ ದಾಳಿಯ ಅಭ್ಯಾಸಗಳಿಗಾಗಿ ಬಳಸಿಕೊಳ್ಳಲಾಯಿತು. ಆದರೆ, ಮುಂಬರಲಿದ್ದ U-2 ಗೂಢಚಾರ ವಿಮಾನದ[೧೩][೧೪] ಪರೀಕ್ಷಾ ಕಾರ್ಯಗಳಿಗಾಗಿ ಇದು ಸೂಕ್ತ ಸ್ಥಳ ಎಂದು ಲಾಕ್‌ಹೀಡ್‌ ಸಂಸ್ಥೆಯ ಸ್ಕಂಕ್‌ ವರ್ಕ್ಸ್‌ ತಂಡವು ಇದನ್ನು ಆಯ್ಕೆಮಾಡಿಕೊಂಡಿದ್ದರಿಂದಾಗಿ 1955ರ ಏಪ್ರಿಲ್‌ವರೆಗೆ ಗ್ರೂಮ್‌ ಸರೋವರವನ್ನು ಬಿಟ್ಟುಕೊಡಬೇಕಾಯಿತು. ಸರೋವರದ ಜೌಗುನೆಲವು ಒಂದು ಮಾದರಿ ಭೂ ತುಕಡಿಯಂತೆ ಪರಿಣಮಿಸಿ, ತ್ರಾಸದಾಯಕ ಪರೀಕ್ಷಾರ್ಹ ವಿಮಾನಗಳ ಕಾರ್ಯಾಚರಣೆಯನ್ನು ನಡೆಸಲು ಸಾಧ್ಯವಾಯಿತು. ಇದರ ಜೊತೆಗೆ ಎಮಿಗ್ರೆಂಟ್ ಕಣಿವೆಯ ಪರ್ವತ ಶ್ರೇಣಿಗಳು ಹಾಗೂ NTS ಪರಿಧಿಯು, ಗೂಢಾಚಾರಿಕೆಯ ಕಣ್ಣುಗಳು ಹಾಗೂ ಹೊರಗಿನವರ ಹಸ್ತಕ್ಷೇಪದಿಂದ ಪರೀಕ್ಷಾ ಪ್ರದೇಶವನ್ನು ರಕ್ಷಿಸಿದವು.

IIನೇ ನೆಲೆ ಅಥವಾ "ದಿ ರಾಂಚ್‌" ಎಂಬ ಹೆಸರಿನಿಂದ ಅಂದು ಕರೆಯಲ್ಪಡುತ್ತಿದ್ದ ತಾತ್ಕಾಲಿಕ ವ್ಯವಸ್ಥೆಯ ನೆಲೆಯೊಂದನ್ನು ಲಾಕ್‌ಹೀಡ್‌ ಸಂಸ್ಥೆಯು ಈ ಸ್ಥಳದಲ್ಲಿ ನಿರ್ಮಿಸಿತು. ಒಂದಷ್ಟು ಆಶ್ರಯತಾಣಗಳು, ಕಾರ್ಯಾಗಾರಗಳು ಹಾಗೂ ಚಾವಣಿಯಿಲ್ಲದ ಮನೆಗಳಿಗಿಂತ ಸ್ವಲ್ಪವೇ ಹೆಚ್ಚೆನ್ನುವಂಥಾ ವ್ಯವಸ್ಥೆಯು ಈ ತಾತ್ಕಾಲಿಕ ವ್ಯವಸ್ಥೆಯಲ್ಲಿ ಸೇರಿದ್ದು, ಅದರಲ್ಲಿ ತನ್ನ ಚಿಕ್ಕ ತಂಡಗಳನ್ನು ಇಡಲು ಅದು ಬಳಸಿತು. ಕೇವಲ ಮೂರು ತಿಂಗಳಲ್ಲಿ 5000 ಅಡಿಯಷ್ಟು ಉದ್ದದ, ವಿಮಾನದ ಓಡುಹಾದಿಯೊಂದನ್ನು ನಿರ್ಮಿಸಲಾಯಿತು[೧೩] ಹಾಗೂ 1955ರ ಜುಲೈ ವೇಳೆಗೆ ಅದು ಬಳಕೆಗೆ ಯೋಗ್ಯವಾಗಿ ಪರಿಣಮಿಸಿತು. 1955ರ ಜುಲೈ 24ರಂದು C-124 ಗ್ಲೋಬ್‌ಮಾಸ್ಟರ್ II ಎಂಬ ಸರಕು ವಿಮಾನದ ಮೂಲಕ ಬರ್ಬ್ಯಾಂಕ್‌ನಿಂದ ಬಂದ ತನ್ನ ಮೊದಲ U-2 ಬಟವಾಡೆಯನ್ನು ಸದರಿ ನೆಲೆಯು ಸ್ವೀಕರಿಸಿತು. ಇದರೊಂದಿಗೆ ಡೊಗ್ಲಾಸ್ DC-3 ವಿಮಾನದ ಮೂಲಕ ಲಾಕ್‌ಹೀಡ್‌ ಸಂಸ್ಥೆಯ ತಂತ್ರಜ್ಞರೂ ಬಂದಿಳಿದರು.[೧೩] 1955ರ ಆಗಸ್ಟ್‌ 4ರಂದು ಮೊದಲ U-2 ವಿಮಾನವು ಗ್ರೂಮ್‌ನಿಂದ ಮೇಲಕ್ಕೆ ಹಾರಿತು. CIAನ ನಿಯಂತ್ರಣದ ಅಡಿಯಲ್ಲಿದ್ದ U-2 ವಿಮಾನ ಶ್ರೇಣಿಯೊಂದು 1956ರ ಮಧ್ಯ ಅವಧಿಯ ಹೊತ್ತಿಗೆ ಸೋವಿಯೆಟ್‌ ಪ್ರಾಂತ್ಯದ ಮೇಲಿನ ಹಾರಾಟವನ್ನು ಪ್ರಾರಂಭಿಸಿತು.

ಈ ಸಮಯದ ಅವಧಿಯಲ್ಲಿ, ವಾಯುಮಂಡಲದ ಅಣ್ವಸ್ತ್ರಗಳ ಒಂದು ಸರಣಿಸ್ಫೋಟ ಕಾರ್ಯವನ್ನು NTS ಮುಂದುವರೆಸಿತು. 1957ರಾದ್ಯಂತ ನಡೆದ U-2 ಕಾರ್ಯಾಚರಣೆಗಳು ಅಣುಬಾಂಬ್‌ ಪರೀಕ್ಷೆಗಳ ಪ್ಲಮ್ಬ್‌ಬಾಬ್ ಶ್ರೇಣಿಯಿಂದಾಗಿ ಆಗಿಂದಾಗ್ಗೆ ಅಡೆತಡೆಗೆ ಒಳಗಾದವು. ಏಕೆಂದರೆ, ಈ ಸರಣಿಯು NTSನಲ್ಲಿನ ಎರಡು ಡಜನ್‌ಗೂ ಮೀರಿದ ಉಪಕರಣಗಳನ್ನು ಆಸ್ಫೋಟಿಸಿದವು. ಜುಲೈ 5ರಂದು ಸಂಭವಿಸಿದ ಪ್ಲಮ್ಬ್‌ಬಾಬ್-ಹುಡ್ ಆಸ್ಫೋಟವು ಗ್ರೂಮ್‌ ಪ್ರದೇಶದಾದ್ಯಂತ ವಿಕಿರಣ ಕಣಗಳನ್ನು ಚೆಲ್ಲಾಡಿದ್ದೇ ಅಲ್ಲದೇ ತಾತ್ಕಾಲಿಕವಾಗಿ ಆ ಜಾಗವನ್ನು ತೆರವು ಮಾಡುವ ಪರಿಸ್ಥಿತಿಯನ್ನು ತಂದೊಡ್ಡಿತು.

ಬ್ಲಾಕ್‌ಬರ್ಡ್‌ ಯೋಜನೆಗಳು[ಬದಲಾಯಿಸಿ]

U-2ವಿನ ಅಭಿವೃದ್ಧಿಯು ಸಂಪೂರ್ಣಗೊಳ್ಳುವ ಮುಂಚೆಯೇ, CIAOXCART ಯೋಜನೆಯ ಒಂದು ಅಂಗವಾಗಿ ಲಾಕ್‌ಹೀಡ್‌ ಸಂಸ್ಥೆಯು U-2ವಿನ ಅನುಕ್ರಮ ಶ್ರೇಣಿಯ ಕುರಿತು ತನ್ನ ಕೆಲಸವನ್ನು ಪ್ರಾರಂಭಿಸಿತು. A-12 ಎಂಬ, ಉನ್ನತ ಎತ್ತರಗಳಿಂದ ನೆಲೆಗಳ ಪತ್ತೇದಾರಿಕೆ ನಡೆಸುವ ಮ್ಯಾಕ್-3 ವಿಮಾನವೊಂದನ್ನು ಈ ಕೆಲಸವು ಒಳಗೊಂಡಿತ್ತು. ಈ ವಿಮಾನದ ನಂತರದ ರೂಪಾಂತರವೇ USAF SR-71 ಬ್ಲಾಕ್‌ಬರ್ಡ್‌ ಎಂದು ಹೆಸರಾಯಿತು. ಬ್ಲಾಕ್‌ಬರ್ಡ್‌‌ನ ಹಾರಾಟದ ಗುಣಲಕ್ಷಣಗಳು ಹಾಗೂ ನಿರ್ವಹಣಾ ಅಗತ್ಯತೆಗಳ ಕಾರಣದಿಂದಾಗಿ ಗ್ರೂಮ್‌ ಸರೋವರದ ನೆಲೆಯಲ್ಲಿ ಸೌಕರ್ಯಗಳು ಹಾಗೂ ವಿಮಾನಗಳ ಓಡುಹಾದಿಗಳ ಬೃಹತ್ ವಿಸ್ತರಣಾ ಕಾರ್ಯವನ್ನು ಕೈಗೆತ್ತಿಕೊಳ್ಳಬೇಕಾಗಿ ಬಂತು. 1962ರಲ್ಲಿ ಗ್ರೂಮ್ ನೆಲೆಯಲ್ಲಿ A-12 ವಿಮಾನದ ಮೊದಲ ಮೂಲಮಾದರಿಯು ಹಾರಾಟ ನಡೆಸುವ ಹೊತ್ತಿಗೆ ಪ್ರಮುಖ ಓಡುಹಾದಿಯ ಉದ್ದವನ್ನು ಹೆಚ್ಚಿಸಲಾಗಿತ್ತು8,500 ft (2,600 m) ಮತ್ತು 1,000ಕ್ಕಿಂತಲೂ ಹೆಚ್ಚಿನ ಸಿಬ್ಬಂದಿಯೊಂದಿಗೆ ನೆಲೆಯು ಹೆಮ್ಮೆಯಿಂದ ಬೀಗುತ್ತಿತ್ತು. ಇಂಧನ ಪೂರೈಕೆಯ ತೊಟ್ಟಿ‌ಗಳು, ಒಂದು ನಿಯಂತ್ರಣಾ ಗೋಪುರ ಮತ್ತು ಬೇಸ್‌ಬಾಲ್ ಆಟಗಾರರು ನಿಲ್ಲುವ ತಾಣಗಳ ಒಂದು ಆವರಣ- ಈ ಎಲ್ಲಾ ಸೌಕರ್ಯಗಳನ್ನು ಅದು ಹೊಂದಿತ್ತು. ಭದ್ರತಾ ವ್ಯವಸ್ಥೆಯನ್ನು ಬಹಳ ಮಟ್ಟಿಗೆ ಹೆಚ್ಚಿಸಲಾಯಿತು, ಗ್ರೂಮ್ ಸರೋವರದ ಸುತ್ತಲಿನ ತಗ್ಗು ಪ್ರದೇಶದಲ್ಲಿದ್ದ ಪುಟ್ಟ ನಾಗರಿಕ ಗಣಿಯನ್ನು ಮುಚ್ಚಲಾಯಿತು ಮತ್ತು ಕಣಿವೆಯನ್ನು ಸುತ್ತುವರೆದಿದ್ದ ಪ್ರದೇಶವನ್ನು ಒಂದು ಪ್ರತ್ಯೇಕ ಸೇನಾ ಸಂರಕ್ಷಿತ ಪ್ರದೇಶವನ್ನಾಗಿ ಮಾರ್ಪಡಿಸಲಾಯಿತು. ಬ್ಲಾಕ್‌ಬರ್ಡ್‌ನ ಅತಿ ಪ್ರಮುಖ ರೂಪಾಂತರಗಳ ಮೊದಲ ಹಾರಾಟವನ್ನು ಗ್ರೂಮ್‌ ಪ್ರದೇಶವು ಕಂಡಿತು. ಅವುಗಳೆಂದರೆ: A-12, ವಿಫಲಗೊಂಡ YF-12 ಎಂಬ ನಿರೋಧಕ ವಿಮಾನ ಮತ್ತು ಬ್ಲಾಕ್‌ಬರ್ಡ್‌ ಆಧರಿತ D-21 ಎಂಬ ಚಾಲಕ ರಹಿತ ದೂರ ನಿಯಂತ್ರಿತ ವಿಮಾನ. A-12 ವಿಮಾನವು ಗ್ರೂಮ್‌ ಸರೋವರದ ಪ್ರದೇಶದಲ್ಲಿ 1968ರವರೆಗೂ ಉಳಿಯಿತು. (SR-71 ವಿಮಾನವು ಕ್ಯಾಲಿಫೋರ್ನಿಯಾದ ಪಾಮ್‌ಡೇಲ್‌ನಲ್ಲಿ ಮೊದಲಿಗೆ ಹಾರಾಟವನ್ನು ನಡೆಸಿತು.)

ಹ್ಯಾವ್ ಬ್ಲೂ/F-117 ಯೋಜನೆ[ಬದಲಾಯಿಸಿ]

1977ರ ಡಿಸೆಂಬರ್‌ನಲ್ಲಿ ಗ್ರೂಮ್ ಸರೋವರ ಪ್ರದೇಶದಲ್ಲಿ ಲಾಕ್‌ಹೀಡ್‌ ಹ್ಯಾವ್ ಬ್ಲೂ ಮೂಲಮಾದರಿಯ ರಹಸ್ಯ ಕದನ ವಿಮಾನವು (F-117 ನೈಟ್‌ಹಾಕ್‌ ವಿಮಾನದ ಪರಿಕಲ್ಪನಾ ಮಾದರಿಯ ಒಂದು ಪುಟ್ಟ ಪುರಾವೆ) ತನ್ನ ಮೊದಲ ಹಾರಾಟವನ್ನು ನಡೆಸಿತು.[೧೫] F-117 ರಹಸ್ಯ ಕದನ ವಿಮಾನಗಳ ಆರಂಭಿಕ ಉತ್ಪಾದನೆಗೆ ಪರೀಕ್ಷಾ ಕಾರ್ಯವು ಬದಲಾವಣೆಗೊಂಡ 1981ರ ಮಧ್ಯಭಾಗದವರೆಗೂ ಅತಿ-ರಹಸ್ಯದ ಮೂಲಮಾದರಿಗಳ ಪರೀಕ್ಷಾ ಸರಣಿಗಳು ಮುಂದುವರಿದವು. ಹಾರಾಟದ ಪರೀಕ್ಷೆಯ ಜೊತೆಗೆ, ರೆಡಾರ್ ಚಿತ್ರಿಸುವಿಕೆ, F-117 ಶಸ್ತ್ರಾಸ್ತ್ರಗಳ ಪರೀಕ್ಷಾ ಕಾರ್ಯಗಳನ್ನು ಗ್ರೂಮ್‌ ಪ್ರದೇಶವು ನಡೆಸಿತಲ್ಲದೇ, USAF F-117ನ ಸೇನಾಮುಖಿ ವಿಮಾನ ಚಾಲಕರುಗಳ ಮೊದಲ ಗುಂಪಿನ ತರಬೇತಿಯ ನೆಲೆಯಾಗಿಯೂ ಪರಿಣಮಿಸಿತು. ಇದಾದ ನಂತರ, ಇನ್ನೂ ಉನ್ನತ ರೀತಿಯಲ್ಲಿ ವರ್ಗೀಕರಣಗೊಂಡ ಯುದ್ಧ ಸೇವೆಯ F-117 ಕಾರ್ಯಾಚರಣೆಗಳು ಹತ್ತಿರದ ಟೋನೊಪಾ ಪರೀಕ್ಷಾ ಶ್ರೇಣಿಯ ವಿಮಾನ ನಿಲ್ದಾಣಕ್ಕೆ, ಕೊನೆಗೆ ಹೊಲೊಮನ್‌ ವಾಯುಪಡೆಯ ನೆಲೆಗೆ ವರ್ಗಾವಣೆಗೊಂಡವು.

ಏರಿಯಾ 51ರ ಗಡಿ ಮತ್ತು ಎಚ್ಚರಿಕೆಯ ಚಿಹ್ನೆಯು, 1950ರ ಮೆಕ್‌ಕೆರಾನ್‌ ಆಂತರಿಕ ಭದ್ರತಾ ಕಾಯಿದೆಯ ನಿಬಂಧನೆಗಳ ಅಡಿಯಲ್ಲಿ "ಛಾಯಾಚಿತ್ರಗ್ರಹಣವನ್ನು ನಿಷೇಧಿಸಲಾಗಿದೆ" ಮತ್ತು "ಮಾರಣಾಂತಿಕ ಬಲ ಪ್ರಯೋಗಿಸುವ ಅಧಿಕಾರ ನೀಡಲಾಗಿದೆ" ಎಂದು ಸೂಚಿಸುತ್ತಿರುವುದು. ಸರ್ಕಾರಿ ವಾಹನವೊಂದನ್ನು ಬೆಟ್ಟದ ತುದಿಯಲ್ಲಿ ನಿಲುಗಡೆ ಮಾಡಲಾಗಿದೆ; ಅಲ್ಲಿಂದ ಭದ್ರತಾ ಕಾವಲುಗಾರರು ಗ್ರೂಮ್‌ ಸರೋವರದೆಡೆಗಿನ ಮಾರ್ಗವನ್ನು ವೀಕ್ಷಿಸುತ್ತಾರೆ.

ನಂತರದ ಕಾರ್ಯಾಚರಣೆಗಳು[ಬದಲಾಯಿಸಿ]

1983ರಲ್ಲಿ F-117 ವಿಮಾನಗಳು ಸೇನಾ ಕಾರ್ಯಾಚರಣೆಯಲ್ಲಿ ತೊಡಗಿದಂದಿನಿಂದ, ಗ್ರೂಮ್‌ ಸರೋವರ ಪ್ರದೇಶದಲ್ಲಿನ ಕಾರ್ಯಾಚರಣೆಗಳು ಮುಂದುವರಿದಿವೆ.[೧೬] ಈ ವಾಯುನೆಲೆ ಮತ್ತು ಇದರ ಸಂಬಂಧಿತ ವಿಮಾನದ ಓಡುಹಾದಿಯ ವ್ಯವಸ್ಥೆಗಳು ವಿಸ್ತರಣೆಗೆ ಒಳಗಾಗಿವೆ.[೧೬][೧೭] 1995ರಲ್ಲಿ, ಒಕ್ಕೂಟ ಸರ್ಕಾರವು ವಾಯುನೆಲೆಯ ಸುತ್ತಲೂ ಇದ್ದ ಬಹಿಷ್ಕರಣ ಪ್ರದೇಶವನ್ನು ವಿಸ್ತರಿಸುವ ಮೂಲಕ, ಅದುವರೆಗೂ ಶಿಷ್ಟ ರೀತಿಯಲ್ಲಿ ನೆಲೆಯ ಮೇಲುಸ್ತುವಾರಿ ಮಾಡುತ್ತಿದ್ದ ಹತ್ತಿರದ ಪರ್ವತಗಳನ್ನು ತನ್ನ ವ್ಯಾಪ್ತಿಯಲ್ಲಿ ಸೇರಿಸಿಕೊಂಡಿತು. ಇದರಿಂದಾಗಿ ಈ ಮುಂಚೆ ಭೂ ವ್ಯವಸ್ಥಾಪನಾ ಸಂಸ್ಥೆಯಿಂದ ನಿರ್ವಹಿಸಲ್ಪಡುತ್ತಿದ್ದ 3,972 ಎಕರೆಗಳಷ್ಟು ಭೂಮಿಗೆ ಇದ್ದ ಪ್ರವೇಶಾವಕಾಶಕ್ಕೆ ತಡೆಯಾದಂತಾಯಿತು.[೧೬]

ಗ್ರೂಮ್ ಸರೋವರದಾದ್ಯಂತದ ರಸ್ತೆಯಲ್ಲಿ ಒಂದು ಬಸ್‌ನ ನೆರವಿನೊಂದಿಗೆ ಪ್ರಯಾಣ ಸೇವೆಯನ್ನು ಒದಗಿಸಲಾಗಿದೆ. NTS ಸರಹದ್ದಿನ ಆಚೆಯಿರುವ ಹಲವಾರು ಸಣ್ಣ ಸಮುದಾಯಗಳಲ್ಲಿ ವಾಸವಾಗಿರುವ ಒಂದಷ್ಟು ಸಂಖ್ಯೆಯ ನೌಕರರುಗಳಿಗೆ (ಈ ಕೆಲಸಗಾರರು ಗ್ರೂಮ್‌ ಪ್ರದೇಶದಲ್ಲಿ ನೌಕರಿ ಮಾಡುತ್ತಿದ್ದಾರೆಯೇ ಅಥವಾ NTSನಲ್ಲಿನ ಇತರ ಸೌಕರ್ಯಗಳಲ್ಲಿ ನೌಕರಿ ಮಾಡುತ್ತಿದ್ದಾರೆಯೇ ಎಂಬುದು ಸ್ಪಷ್ಟವಾಗಿರದಿದ್ದರೂ ಸಹ) ಇದು ಸಹಾಯಕವಾಗಿದೆ. ಗ್ರೂಮ್‌ ಸರೋವರದ ರಸ್ತೆಯಲ್ಲಿ ಸಾಗುವ ಬಸ್ಸು ಕ್ರಿಸ್ಟಲ್ ಸ್ಪ್ರಿಂಗ್ಸ್‌, ಆಷ್ ಸ್ಪ್ರಿಂಗ್ಸ್ ಮತ್ತು ಅಲಾಮೋ ಎಂಬ ನಿಲುಗಡೆಗಳಲ್ಲಿ ನಿಲ್ಲುವುದಲ್ಲದೇ, ರಾತ್ರಿಯೆಲ್ಲಾ ಅಲಾಮೋ ಪ್ರಾಂತ್ಯ ಕಚೇರಿಯ ಕಟ್ಟಡದ ತಂಗುದಾಣದಲ್ಲಿ ನಿಂತಿರುತ್ತದೆ.

ವಿಮಾನದ ಓಡುಹಾದಿಗಳು[ಬದಲಾಯಿಸಿ]

ವಾಯುನೆಲೆಯು ಏಳು ಓಡುಹಾದಿಗಳನ್ನು ಹೊಂದಿದ್ದು, ಈಗ ಮುಚ್ಚಲ್ಪಟ್ಟಿರುವಂತೆ ತೋರುವ ಒಂದು ಹಾದಿಯೂ ಅದರಲ್ಲಿ ಸೇರಿದೆ. 14R/32L ಎಂಬ ಈ ಮುಚ್ಚಲ್ಪಟ್ಟಿರುವ ಓಡುಹಾದಿಯು ಬಹುಮಟ್ಟಿಗೆ ಅತಿ ಉದ್ದದ್ದಾಗಿದ್ದು, ನಿಲುಗಡೆದಾರಿಯನ್ನು ಒಳಗೊಳ್ಳದೆಯೇ ಅದರ ಒಟ್ಟು ಉದ್ದ ಸುಮಾರು 7,100 ಮೀಟರ್‌ (23,300 ಅಡಿಗಳು)ಗಳಷ್ಟಿದೆ. ಇತರ ಓಡುಹಾದಿಗಳಲ್ಲಿ ಎರಡು ಡಾಂಬರೀಕೃತ ಓಡುಹಾದಿಗಳಾಗಿದ್ದು, ಅವುಗಳ ಪೈಕಿ 14L/32R ಓಡುಹಾದಿಯು 3,650 ಮೀಟರ್‌ಗಳಷ್ಟು (12,000 ಅಡಿಗಳಷ್ಟು) ಉದ್ದವನ್ನು ಹೊಂದಿದ್ದರೆ, 12/30 ಓಡುಹಾದಿಯು 1,650 ಮೀಟರ್‌ಗಳಷ್ಟು (5,400 ಅಡಿಗಳಷ್ಟು) ಉದ್ದವನ್ನು ಹೊಂದಿದೆ. ಉಳಿದ ನಾಲ್ಕು ಓಡುಹಾದಿಗಳು ಸಾಲ್ಟ್‌ ಸರೋವರದ ಮೇಲೆ ನೆಲೆಗೊಂಡಿವೆ. ಈ ನಾಲ್ಕು ಓಡುಹಾದಿಗಳ ಪೈಕಿ 09L/27R ಮತ್ತು 09R/27L ಎಂಬ ಓಡುಹಾದಿಗಳೆರಡೂ ಸರಿಸುಮಾರು 3,500 ಮೀಟರ್‌ಗಳಷ್ಟು (11,450 ಅಡಿಗಳಷ್ಟು) ಉದ್ದವಿದ್ದರೆ, 03L/21R ಮತ್ತು 03R/21L ಎಂಬ ಒಡುಹಾದಿಗಳೆರಡೂ ಸರಿಸುಮಾರು 3,050 ಮೀಟರ್‌ಗಳಷ್ಟು (10,000 ಅಡಿಗಳಷ್ಟು) ಉದ್ದವಿವೆ. ಈ ನೆಲೆಯು ಒಂದು ಹೆಲಿಪ್ಯಾಡ್‌ನ್ನೂ ಹೊಂದಿದೆ.[೧೮][೧೯]

ವಿಮಾನಯಾನ ವ್ಯವಸ್ಥೆಗಳ ತಮ್ಮ ವಿನೂತನ ಜೆಪ್ಪೆಸೆನ್ ದತ್ತಾಂಶ ಸಂಗ್ರಹದ ಪರಿಷ್ಕರಣೆಯಲ್ಲಿ ICAO ವಿಮಾನ ನಿಲ್ದಾಣ ಪತ್ತೆಹಚ್ಚುವ KXTA ಸಂಕೇತದದೊಂದಿಗೆ ಈ ವಾಯುನೆಲೆಯು ಕಾಣಿಸಿಕೊಂಡಿರುವುದನ್ನು ವಿಮಾನಯಾನ ಸಂಸ್ಥೆಯ ವಿಮಾನ ಚಾಲಕರುಗಳು 2007ರ ಡಿಸೆಂಬರ್‌ನಲ್ಲಿ ಗಮನಿಸಿದ್ದು, ಅದನ್ನು "ಹೋಮಿ ವಿಮಾನ ನಿಲ್ದಾಣ" ಎಂಬುದಾಗಿ ದಾಖಲಿಸಿದ್ದಾರೆ.[೨೦] ಪ್ರಾಯಶಃ, ಪ್ರಮಾದವಶಾತ್ತಾಗಿ ವಿಮಾನ ನಿಲ್ದಾಣದ ದತ್ತಾಂಶವು ಬಿಡುಗಡೆಯಾಗಿದ್ದರಿಂದ ಏರ್‌ಕ್ರಾಫ್ಟ್‌ ಓನರ್ಸ್‌ ಅಂಡ್ ಪೈಲಟ್ ಅಸೋಸಿಯೇಷನ್‌(AOPA)ನಿಂದ ಬುದ್ಧಿಮಾತುಗಳನ್ನು ಕೇಳಬೇಕಾಗಿ ಬಂತು. KXTA ಕುರಿತಾಗಿ ವಿದ್ಯಾರ್ಥಿ ವಿಮಾನ ಚಾಲಕರಿಗೆ ಸ್ಪಷ್ಟವಾಗಿ ಎಚ್ಚರಿಕೆಯನ್ನು ನೀಡಬೇಕು, ಸಾರ್ವಜನಿಕ ಯಾನದ ದತ್ತಾಂಶದಲ್ಲಿ ಈಗ ಒಂದು ಪಕ್ಷ ಅದು ಕಾಣಿಸಿಕೊಂಡರೂ ಸಹ ಇದನ್ನೊಂದು ಮಾರ್ಗಬಿಂದುವಾಗಿ ಅಥವಾ ಗಮ್ಯಸ್ಥಳವಾಗಿ ಪರಿಗಣಿಸಬಾರದು ಎಂಬ ಸೂಚನೆಗಳನ್ನು ಅದು ನೀಡಿತು.[೨೦]

ಏರಿಯಾ 51ರ ಮೇಲಿನ U.S. ಸರ್ಕಾರದ ದೃಷ್ಟಿಕೋನಗಳು[ಬದಲಾಯಿಸಿ]

ಏರಿಯಾ 51ರ ಕುರಿತಾದ ಆಕ್ಷೇಪವೊಂದಕ್ಕೆ USAFನಿಂದ ಬಂದ ಪತ್ರವೊಂದು ಉತ್ತರಿಸುತ್ತಿರುವುದು.

ಸರೋವರದ ಬಳಿಯಲ್ಲಿ USAF ಒಂದು ಕಾರ್ಯಾಚರಣಾ ಸ್ಥಳವನ್ನು ಹೊಂದಿದೆ ಎಂದು (ನ್ಯಾಯಾಲಯದ ವಿವಿಧ ದಾಖಲೆ ಪತ್ರಗಳಲ್ಲಿ ಮತ್ತು ಸರ್ಕಾರಿ ಮಾರ್ಗದರ್ಶಕ ಸೂಚನೆಗಳಲ್ಲಿ) ಮೌನವಾಗಿ ಒಪ್ಪಿಕೊಳ್ಳುವ ಒಕ್ಕೂಟ ಸರ್ಕಾರವು ಅದನ್ನು ಮೀರಿದ ಮತ್ತಾವುದೇ ಮಾಹಿತಿಯನ್ನು ನೀಡುವುದಿಲ್ಲ.

ಈ ಪ್ರದೇಶವು ನೆಲ್ಲಿಸ್ ಶ್ರೇಣಿಯ ಬಹುಪಾಲಿಗಿಂತ ಭಿನ್ನವಾಗಿದ್ದು, ಸರೋವರವನ್ನು ಸುತ್ತುವರೆದಿರುವ ಪ್ರದೇಶವು ನಾಗರಿಕ ಮತ್ತು ಸಾಮಾನ್ಯ ಸೇನಾ ವಿಮಾನ ದಟ್ಟಣೆಗಳೆರಡನ್ನೂ ಖಾಯಮ್ಮಾಗಿ ಅತಿಕ್ರಮಿಸಿದೆ. ರೆಡಾರ್ ಕೇಂದ್ರಗಳು ಈ ಪ್ರದೇಶವನ್ನು ಸಂರಕ್ಷಿಸುವುದರಿಂದ ಅನಧಿಕೃತ ಸಿಬ್ಬಂದಿಯನ್ನು ಅತಿಶೀಘ್ರವಾಗಿ ಹೊರಗಟ್ಟಬಹುದಾಗಿದೆ. ಒಂದು ವೇಳೆ NAFRನಲ್ಲಿ ತರಬೇತಿ ಪಡೆಯುತ್ತಿರುವ ವಿಮಾನ ಚಾಲಕರೂ ಸಹ ಅಕಸ್ಮಾತ್ತಾಗಿ ಗ್ರೂಮ್‌ ಸರೋವರದ ವಾಯುಪ್ರೆದೇಶವನ್ನು ಸುತ್ತುವರೆದಿರುವ ನಿರ್ಬಂಧಿತ "ಬಾಕ್ಸ್" ಪ್ರದೇಶದೊಳಗೆ ದಾರಿತಪ್ಪಿ ನುಗ್ಗಿದರೆ ಶಿಸ್ತುಕ್ರಮವನ್ನು ಎದುರಿಸುವ ಅಪಾಯಕ್ಕೆ ಸಿಲುಕುತ್ತಾರೆ.[೨೧]

USGS ಉಪಗ್ರಹದ ಲಭ್ಯವಿರುವ ಛಾಯಾಚಿತ್ರದ ಸಂಯೋಜನೆಯೊಂದು ದಕ್ಷಿಣ ನೆವಡಾವನ್ನು ತೋರಿಸುತ್ತಿರುವುದು. NTS ಮತ್ತು ಸುತ್ತಮುತ್ತಲ ಪ್ರದೇಶಗಳು ಕಾಣಿಸುತ್ತಿವೆ; NAFR ಮತ್ತು ನೆರೆಹೊರೆಯ ಪ್ರದೇಶವು ತೆಗೆದುಹಾಕಲ್ಪಟ್ಟಿದೆ.

EG&Gಯ ಉಪ ಭದ್ರತಾ ಗುತ್ತಿಗೆದಾರನಾದ ವ್ಯಾಕನ್‌ಹಟ್[೨೨] ಸಂಸ್ಥೆಯೊಂದಿಗೆ ಕೆಲಸ ಮಾಡುತ್ತಿರುವ ಸಮವಸ್ತ್ರಧಾರಿ ಖಾಸಗಿ ಭದ್ರತಾ ಕಾವಲುಗಾರರು ಪರಿಧಿಯ ಭದ್ರತಾ ಕಾರ್ಯವನ್ನು ನೋಡಿಕೊಳ್ಳುತ್ತಾರೆ. ಜೀಪ್ ಶೆರೋಕಿ ಮತ್ತು ಹಮ್‌ವೀಗಳಂತಹ ರೂಪಬದಲಾಯಿಸಿದ ಮರಳುಗಾಡಿನ ವಾಹನಗಳಲ್ಲಿ ಮತ್ತೂ ತೀರ ಇತ್ತೀಚಿಗೆ ಕಂಡು ಬರುವಂತೆ, ಷಾಂಪೇನ್ ಬಣ್ಣದ ಫೋರ್ಡ್‌ F-150 ಪಿಕಪ್‌ ವಾಹನಗಳಲ್ಲಿ ಹಾಗೂ ಬೂದುಬಣ್ಣದ ಷೆವಿ 2500 4X4ಪಿಕಪ್‌ ವಾಹನಗಳಲ್ಲಿ ಅವರ ಗಸ್ತು ತಿರುಗುವಿಕೆ ಸಾಗುತ್ತದೆ. ಭದ್ರತಾ ಕಾವಲುಗಾರರು M16ರಂತಹ ಆಯುಧಗಳೊಂದಿಗೆ ಸಜ್ಜಿತರಾಗಿರುತ್ತಾರಾದರೂ, ಏರಿಯಾ 51ರ ವೀಕ್ಷಕರೊಂದಿಗೆ ಯಾವುದೇ ಹಿಂಸಾತ್ಮಕ ಹೋರಾಟಗಳು ನಡೆದಿರುವುದು ವರದಿಯಾಗಿಲ್ಲ. ಅದರ ಬದಲಿಗೆ, ಲಿಂಕನ್ ಕೌಂಟಿ ಷೆರಿಫ್‌ ಪ್ರದೇಶದ ಪರಿಧಿ ಹಾಗೂ ರೇಡಿಯೋದ ಸಮೀಪದವರೆಗೆ ಸಂದರ್ಶಕರನ್ನು ಭದ್ರತಾ ಕಾವಲುಗಾರರು ಸಾಮಾನ್ಯವಾಗಿ ಅನುಸರಿಸುತ್ತಾರೆ. ಸಂರಕ್ಷಿತ ಪ್ರದೇಶವನ್ನು ಉಲ್ಲಂಘಿಸಲು ಪ್ರಯತ್ನಿಸುವ ಉಲ್ಲಂಘನಕಾರರು ತಮಗೆ ನೀಡಲಾದ ನಿಲ್ಲುವ ಎಚ್ಚರಿಕೆಗೆ ಒಂದು ವೇಳೆ ಗಮನ ಕೊಡದಿದ್ದಲ್ಲಿ, ಪ್ರಾಣಾಂತಿಕ ಬಲವನ್ನು ಅವರ ಮೇಲೆ ಪ್ರಯೋಗಿಸಲಾಗುವುದು. ಸಾಮಾನ್ಯ ರೀತಿಯಲ್ಲಿ ಕ್ರಮ ಕೈಗೊಳ್ಳುವಾಗ, ಸುಮಾರು 600 $ಗಳ ವರೆಗಿನ ದಂಡ ಶುಲ್ಕವನ್ನು ವಿಧಿಸಲಾಗುತ್ತದೆಯಾದರೂ, ಕೆಲವೊಂದು ಸಂದರ್ಶಕರು ಹಾಗೂ ಪತ್ರಕರ್ತರನ್ನು FBI ಬೇಹುಗಾರರುಗಳು ಆಗಿಂದಾಗ್ಗೆ ಭೇಟಿ ಮಾಡುತ್ತಾರೆ.ತಮ್ಮ ಕ್ಯಾಮೆರಾ ಉಪಕರಣವನ್ನು ಈ ವಾಯುನೆಲೆಯ ಕಡೆಗೆ ಗುರಿಯಿಟ್ಟಿದ್ದಕ್ಕಾಗಿ ಕೆಲವೊಂದು ವೀಕ್ಷಕರನ್ನು ಸಾರ್ವಜನಿಕ ಪ್ರದೇಶದಲ್ಲಿ ಹಿಡಿದಿಡಲಾಗಿದೆ. ಹುದುಗಿಸಿಡಲಾದ ಚಲನಾ ಸಂವೇದಕಗಳು[೨೩][೨೪][೨೫] ಮತ್ತು HH-60 ಪೇವ್ ಹಾಕ್‌ ಹೆಲಿಕಾಪ್ಟರ್‌ಗಳ ಬಳಕೆಯು ಕಣ್ಗಾವಲಿನ ಪ್ರಕ್ರಿಯೆಗೆ ಪೂರಕವಾಗಿ ನಿಂತಿವೆ.

U.S. ಸರ್ಕಾರದ ಸಾರ್ವತ್ರಿಕ ಭೂಪಟಗಳಲ್ಲಿ ಈ ನೆಲೆಯು ಕಾಣಿಸಿಕೊಳ್ಳುವುದಿಲ್ಲ; ಈ ಪ್ರದೇಶದ ಸ್ಥಳಸ್ವರೂಪಕ್ಕೆ ಸಂಬಂಧಿಸಿದ [೨೬] USGS ಭೂಪಟವು ಕೇವಲ ದೀರ್ಘಕಾಲದಿಂದ ಬಳಸಲ್ಪಡದೇ ಇರುವ ಗ್ರೂಮ್‌ ಗಣಿಪ್ರದೇಶವನ್ನಷ್ಟೇ ತೋರಿಸುತ್ತದೆ.[೨೭] ನೆವಡಾದ ಸಾರಿಗೆ ಇಲಾಖೆಯು ಪ್ರಕಟಿಸಿರುವ ನಾಗರಿಕ ವಿಮಾನಯಾನದ ಭೂಪಟವೊಂದು ದೊಡ್ಡ ನಿರ್ಬಂಧಿತ ಪ್ರದೇಶವೊಂದನ್ನು[೨೮] ತೋರಿಸುತ್ತದೆಯಾದರೂ, ಅದು ನೆಲ್ಲಿಸ್ ನಿರ್ಬಂಧಿತ ವಾಯುಪ್ರದೇಶದ ಒಂದು ಅಂಗ ಎಂದೇ ವಿವರಣೆ ನೀಡುತ್ತದೆ. ಈ ಪ್ರದೇಶದ ಅಧಿಕೃತ ವೈಮಾನಿಕ ಯಾನದ ಭೂಪಟಗಳು ಗ್ರೂಮ್‌ ಸರೋವರವನ್ನು ತೋರಿಸುತ್ತವೆಯಾದರೂ ಅಲ್ಲಿನ ವಿಮಾನ ನಿಲ್ದಾಣದ ಸೌಲಭ್ಯಗಳನ್ನು ಅವು ಬಿಟ್ಟುಬಿಟ್ಟಿವೆ.[೨೯] ಇದೇ ರೀತಿಯಲ್ಲಿ ನೆವಡಾದಲ್ಲಿನ[೩೦] ಒಕ್ಕೂಟದ ಪ್ರದೇಶಗಳನ್ನು ತೋರಿಸುವ ರಾಷ್ಟ್ರೀಯ ಭೂಪಟ ಪುಸ್ತಕದ ಪುಟವು ನೆಲ್ಲಿಸ್‌ ಶ್ರೇಣಿಯ ಗ್ರೂಮ್‌ ಸರೋವರದ ವಿಭಾಗ ಮತ್ತು ಇತರ ಭಾಗಗಳ ನಡುವೆ ಯಾವುದೇ ವ್ಯತ್ಯಾಸವನ್ನು ತೋರಿಸುವುದಿಲ್ಲ. ಅಧಿಕೃತವಾಗಿ ವಿವರ್ಗೀಕರಿಸಲ್ಪಟ್ಟಿರೂ ಸಹ, 1960ರಲ್ಲಿ U.S.ನ ಕರೋನಾ ಗೂಢಚಾರ ಉಪಗ್ರಹದಿಂದ ತೆಗೆಯಲ್ಪಟ್ಟ ಮೂಲಚಿತ್ರವು ವಿವರ್ಗೀಕರಣಕ್ಕೆ ಮುಂಚಿತವಾಗಿಯೇ ಮಾರ್ಪಾಡಿಗೆ ಒಳಗಾಗಿದೆ. ಮಾಹಿತಿ ಸ್ವಾತಂತ್ರ್ಯ ಸಂಬಂಧಿತ ಆಕ್ಷೇಪಗಳಿಗೆ ಉತ್ತರವಾಗಿ, ಈ ತೆರೆದಿಡಲ್ಪಡುವಿಕೆಗಳು (ಗ್ರೂಮ್‌ ಸರೋವರ ಪ್ರದೇಶ ಮತ್ತು ಸಮಗ್ರ NAFR ಪ್ರದೇಶವನ್ನು ಚಿತ್ರಿಸುವ ಚಿತ್ರಿಕೆಗಳು) ನಾಶವಾಗಿರಬಹುದೆಂದು ತೋರುತ್ತದೆ ಎಂಬುದಾಗಿ ಸರ್ಕಾರವು ಪ್ರತಿಕ್ರಿಯಿಸುತ್ತದೆ.[೩೧] 2004ರಲ್ಲಿ ಟೆರ್ರಾ ಉಪಗ್ರಹದ ಚಿತ್ರಿಕೆಗಳನ್ನು (ಅವು ಸಾರ್ವತ್ರಿಕವಾಗಿ ಲಭ್ಯವಿದ್ದವು) ವೆಬ್‌ ಸರ್ವರ್‌ಗಳಿಂದ (ಮೈಕ್ರೋಸಾಫ್ಟ್‌ನ "ಟೆರ್ರಾಸರ್ವರ್‌" ಸೇರಿದಂತೆ) ತೆಗೆದುಹಾಕಲಾಯಿತು ಮತ್ತು [೩೨] ಮಾನೋಕ್ರೋಮ್ 1 m ರೆಸಲ್ಯೂಷನ್‌ನಿಂದ USGS ದತ್ತಾಂಶದ ರಾಶಿಯು ಸಾರ್ವಜನಿಕರ ಬಳಕೆಗೆ ಲಭ್ಯವಾಯಿತು. NASAದ ಲ್ಯಾಂಡ್‌ಸ್ಯಾಟ್‌ 7ನ ಚಿತ್ರಿಕೆಗಳು ಈಗಲೂ ಲಭ್ಯವಿವೆ (ಇವುಗಳನ್ನು NASA ವರ್ಲ್ಡ್‌ ವಿಂಡ್‌ನಲ್ಲಿ ಬಳಸಲಾಗಿದೆ). ಇತರ ಉಪಗ್ರಹ ಚಿತ್ರಿಕೆಗಳ ಸರಬರಾಜುದಾರರಿಂದ (ರಷ್ಯಾದ ಸರಬರಾಜುದಾರರು ಮತ್ತು IKONOSನ್ನು ಒಳಗೊಂಡಂತೆ) ಬಂದ ಉನ್ನತ ರೆಸಲ್ಯೂಷನ್ ಹೊಂದಿರುವ (ಮತ್ತು ತೀರಾ ಇತ್ತೀಚಿನ) ಚಿತ್ರಿಕೆಗಳು ವಾಣಿಜ್ಯ ಸ್ವರೂಪದಲ್ಲಿ ಲಭ್ಯವಿವೆ. ಈ ಚಿತ್ರಿಕೆಗಳು ಗಣನೀಯವಾದ ವಿವರಗಳಿಂದ ಕೂಡಿದ್ದು, ಓಡುಹಾದಿಯ ಗುರುತು, ನೆಲೆಯ ಸೌಲಭ್ಯಗಳು, ವಿಮಾನಗಳು ಹಾಗೂ ವಾಹನಗಳನ್ನು ಅವು ತೋರಿಸುತ್ತವೆ.

ಈ ವಾಯುನೆಲೆಯನ್ನು ಸುತ್ತುವರೆದಿರುವ ಪರಂಪರಾನುಗತ ನಂಬಿಕೆಗಳು ನಿರ್ಲಕ್ಷ್ಯಕ್ಕೆ ಒಳಗಾಗಬಹುದಾಗಿದ್ದ ಈ ಪ್ರದೇಶಕ್ಕೆ ಒಂದಷ್ಟು ಪ್ರವಾಸೋದ್ಯಮ ಸಾಮರ್ಥ್ಯವನ್ನು ತಂದುಕೊಡಬಲ್ಲವು ಎಂಬುದನ್ನು ಗುರುತಿಸಿದ ನೆವಡಾದ ಸಂಸ್ಥಾನ ಸರ್ಕಾರವು ಏರಿಯಾ 51ರ ಸಮೀಪವಿರುವ ಸಂಸ್ಥಾನದ ಮಾರ್ಗ 375ರ ವಿಭಾಗಕ್ಕೆ "ಎಕ್ಸ್‌ಟ್ರಾ ಟೆರೆಸ್ಟ್ರಿಯಲ್ ಹೆದ್ದಾರಿ[೩೩]" ಎಂದು ಅಧಿಕೃತವಾಗಿ ಪುನರ್‌ನಾಮಕರಣ ಮಾಡಿದ್ದೇ ಅಲ್ಲದೇ, ಅದು ಸಾಗುವಷ್ಟು ದೂರದುದ್ದಕ್ಕೂ ವಿಲಕ್ಷಣ ರೀತಿಯಲ್ಲಿ ಚಿತ್ರಿಸಿದ ಚಿಹ್ನೆಗಳನ್ನು ನಿಲ್ಲಿಸಿತು.[೩೩]

ಏರಿಯಾ 51ರ ಪರಿಧಿಯನ್ನು ಕಾಯುವ ಒಂದು ಕ್ಲೋಸ್ಡ್‌-ಸರ್ಕ್ಯೂಟ್‌ ಟಿವಿ ಕ್ಯಾಮೆರಾ

ಈ ವಾಯುನೆಲೆಯ ಒಳಭಾಗದಲ್ಲಿರುವ ಒಕ್ಕೂಟದ ಸ್ವತ್ತಿಗೆ ಸಂಸ್ಥಾನದ ಮತ್ತು ಸ್ಥಳೀಯ ತೆರಿಗೆಗಳಿಂದ ವಿನಾಯಿತಿ ಸಿಕ್ಕಿದೆಯಾದರೂ, ಖಾಸಗಿ ಗುತ್ತಿಗೆದಾರರ ಸ್ವಾಮ್ಯದಲ್ಲಿರುವ ಸೌಕರ್ಯಗಳಿಗೆ ಈ ವಿನಾಯಿತಿ ಸಿಕ್ಕಿಲ್ಲ. 1994ರಲ್ಲಿ ಗ್ಲೆನ್‌ ಕ್ಯಾಂಪ್‌ಬೆಲ್‌ ಎಂಬ ಏರಿಯಾ 51ರ ಸಂಶೋಧಕನು ಸಮರ್ಥನೆಯೊಂದನ್ನು ನೀಡಿ, ತೆರಿಗೆಗೆ ಅರ್ಹವಾದ 2 ದಶಲಕ್ಷ $ನಷ್ಟು ಮೌಲ್ಯವನ್ನು ಮಾತ್ರವೇ ಲಿಂಕನ್ ಪ್ರಾಂತ್ಯದ ಕರ ನಿರ್ಧಾರಕರಿಗೆ ಈ ವಾಯುನೆಲೆಯು ಘೋಷಿಸಿದ್ದು, ಕರನಿರ್ಧರಣೆಯನ್ನು ನಡೆಸುವುದಕ್ಕಾಗಿ ಆ ಪ್ರದೇಶವನ್ನು ಪ್ರವೇಶಿಸಲು ಆ ಕರ ನಿರ್ಧಾರಕರಿಗೆ ಸಾಧ್ಯವಾಗಿಲ್ಲ ಎಂದು ತಿಳಿಸಿದೆ.[೩೪]

ಪರಿಸರೀಯ ಮೊಕದ್ದಮೆ[ಬದಲಾಯಿಸಿ]

ದೂರದ ಟಿಕಾಬೂ ಶಿಖರದಿಂದ ಕಾಣುವ Area 51 ಪ್ರದೇಶ

1994ರಲ್ಲಿ ಐವರು ಅನಾಮಿಕ ನಾಗರಿಕ ಗುತ್ತಿಗೆದಾರರು ಮತ್ತು ವಾಲ್ಟರ್ ಕಾಸ್‌ಜಾ ಹಾಗೂ ರಾಬರ್ಟ್‌ ಫ್ರಾಸ್ಟ್‌ ಎಂಬ ಗುತ್ತಿಗೆದಾರರ ವಿಧವೆಯರು, USAF ಮತ್ತು ಸಂಯುಕ್ತ ಸಂಸ್ಥಾನಗಳ ಪರಿಸರೀಯ ಸಂರಕ್ಷಣಾ ಸಂಸ್ಥೆಯ ವಿರುದ್ಧ ದಾವೆ ಹೂಡಿದರು. ಜಾರ್ಜ್‌ ವಾಷಿಂಗ್ಟನ್‌ ವಿಶ್ವವಿದ್ಯಾಲಯದ ಕಾನೂನು ಪ್ರೊಫೆಸರ್ ಆದ ಜೋನಾಥನ್ ಟರ್ಲಿಯವರಿಂದ ಅವರ ದಾವೆಯು ಪ್ರತಿನಿಧಿಸಲ್ಪಟ್ಟಿತ್ತು. ಗ್ರೂಮ್‌ ಸರೋವರ ಪ್ರದೇಶದ ತೆರೆದ ಗುಂಡಿಗಳು ಹಾಗೂ ಕಂದಕಗಳಲ್ಲಿ ಬೃಹತ್ ಪ್ರಮಾಣದ, ಗುರುತಿಸಲಾಗದ ರಾಸಾಯನಿಕಗಳನ್ನು ಸುಡುವ ಸಂದರ್ಭದಲ್ಲಿ ಅವರು ಆ ಜಾಗದಲ್ಲಿ ಇದ್ದುದರ ಬಗ್ಗೆ ಆ ದಾವೆಯು ಆಪಾದನೆಯನ್ನು ಮಾಡಿತ್ತು. ಆಪಾದಕರುಗಳಿಂದ ಸಂಗ್ರಹಿಸಿದ ಅಂಗಾಂಶಗಳ ಮಾದರಿಯನ್ನು ರಟ್ಗರ್ಸ್‌ ವಿಶ್ವವಿದ್ಯಾಲಯಜೀವರಸಾಯನ ಶಾಸ್ತ್ರಜ್ಞರು ವಿಶ್ಲೇಷಿಸಿದಾಗ, ಅವರ ದೇಹದ ಕೊಬ್ಬಿನಲ್ಲಿ ಡಯಾಕ್ಸಿನ್, ಡೈಬೆನ್ಜೋಫ್ಯುರಾನ್ ಮತ್ತು ಟ್ರೈಕ್ಲೋರೋಎಥಿಲೀನ್‌ಗಳು ಉನ್ನತ ಮಟ್ಟದಲ್ಲಿದ್ದುದು ಕಂಡುಬಂತು. ಗ್ರೂಮ್‌ ಸರೋವರ ಪ್ರದೇಶದಲ್ಲಿ ತಾವು ಕಾರ್ಯ ನಿರ್ವಹಿಸುತ್ತಿರುವುದರಿಂದ ತಮಗೆ ಚರ್ಮದ, ಪಿತ್ತಕೋಶದ ಹಾಗೂ ಶ್ವಾಸಕೋಶದ ಗಾಯಗಳುಂಟಾಗಿ, ಇದು ಫ್ರಾಸ್ಟ್‌ ಮತ್ತು ಕಾಸ್‌ಜಾರವರ ಸಾವುಗಳಿಗೆ ಕಾರಣವಾಯಿತು ಎಂದು ಆ ಆಪಾದಕರು ಆಪಾದಿಸಿದ್ದರು. USAF ಕಾನೂನುಬಾಹಿರವಾಗಿ ವಿಷಕಾರಿ ವಸ್ತುಗಳನ್ನು ನಿರ್ವಹಿಸಿದೆ ಮತ್ತು ಸಂಪನ್ಮೂಲ ಸಂರಕ್ಷಣೆ ಹಾಗೂ ಪೂರ್ವಸ್ಥಿತಿಯ ಕಾಯಿದೆಯನ್ನು (ಅಪಾಯಕಾರಿ ಸಾಮಗ್ರಿಗಳ ನಿರ್ವಹಣೆಯ ಕುರಿತು ಇದು ಕಾರ್ಯ ನಿರ್ವಹಿಸುತ್ತದೆ) ಜಾರಿಗೆ ತರುವಲ್ಲಿ EPAಯು ವಿಫಲವಾಗಿದೆ ಎಂದು ಸಮರ್ಥಿಸಿಕೊಂಡಿದ್ದ ದಾವೆದಾರರು ತಮಗೆ ಉಂಟಾದ ಗಾಯಗಳಿಗೆ ಪರಿಹಾರವನ್ನು ಕೇಳಿದ್ದರು. ತಾವು ಯಾವ ವಿಧದ ರಾಸಾಯನಿಕಗಳಿಗೆ ತಮ್ಮನ್ನು ಒಡ್ಡಿಕೊಂಡರೋ ಅವುಗಳ ಕುರಿತಾದ ವಿಸ್ತೃತ ಮಾಹಿತಿಯನ್ನು ನೀಡುವಂತೆಯೂ ಅವರು ಬಯಸಿದ್ದರು. ಇದರಿಂದಾಗಿ ಬದುಕುಳಿದಿರುವವರ ವೈದ್ಯಕೀಯ ಚಿಕಿತ್ಸೆಯು ಕಾರ್ಯಸಾಧ್ಯವಾಗುತ್ತದೆ ಎಂಬುದು ಅವರ ನಂಬಿಕೆಯಾಗಿತ್ತು. ಸದನದ ಗುಪ್ತಚರ ಸಮಿತಿಯ ಹಿಂದಿನ ಅಧ್ಯಕ್ಷನಾಗಿದ್ದ, ಕಾಂಗ್ರೆಸ್ಸಿಗ ಲೀ ಎಚ್. ಹ್ಯಾಮಿಲ್ಟನ್, 60 ಮಿನಿಟ್ಸ್‌ ಪತ್ರಿಕೆಯ ವರದಿಗಾರ ಲೆಸ್ಲಿ ಸ್ಟಾಲ್‌ರೊಂದಿಗೆ ಮಾತನಾಡುತ್ತಾ, "ಮೊಕದ್ದಮೆಯೊಂದರಿಂದ ತಮ್ಮನ್ನು ರಕ್ಷಿಸಿಕೊಳ್ಳುವ ಸಲುವಾಗಿ ಏರಿಯಾ 51ರ ಕುರಿತಾದ ಎಲ್ಲಾ ಮಾಹಿತಿಯನ್ನೂ ವಾಯುಪಡೆಯು ರಹಸ್ಯವಾಗಿ ವರ್ಗೀಕರಿಸುತ್ತಿದೆ" ಎಂದು ನುಡಿದಿದ್ದರು.[೩೫]

ಸಂಸ್ಥಾನದ ರಹಸ್ಯಗಳ ವಿಶೇಷ ಹಕ್ಕು ಎಂಬ ಅಂಶವನ್ನು ಉಲ್ಲೇಖಿಸುತ್ತಾ, U.S. ಜಿಲ್ಲಾ ನ್ಯಾಯಾಲಯದ (ನೆವಡಾ ಜಿಲ್ಲೆಗಾಗಿ ಲಾಸ್‌ ವೇಗಾಸ್‌ನಲ್ಲಿರುವ ಸಂಯುಕ್ತ ಸಂಸ್ಥಾನಗಳ ಜಿಲ್ಲಾ ನ್ಯಾಯಾಲಯದ) ವಿಚಾರಣಾ ನ್ಯಾಯಾಧೀಶ ಫಿಲಿಪ್ ಪ್ರೊರವರಿಗೆ ಅಹವಾಲು ಸಲ್ಲಿಸಿದ ಸರ್ಕಾರವು, ಇದು ವರ್ಗೀಕೃತ ರಹಸ್ಯ ಮಾಹಿತಿಯನ್ನು ಹೊರಗೆಡಹುತ್ತದೆ ಮತ್ತು ಇದರಿಂದಾಗಿ ರಾಷ್ಟ್ರೀಯ ಭದ್ರತೆಗೆ ಧಕ್ಕೆಯುಂಟಾಗುತ್ತದೆ ಎಂದು ಆಪಾದಿಸಿ, ವರ್ಗೀಕೃತ ರಹಸ್ಯ ದಾಖಲೆಗಳ ಬಹಿರಂಗಪಡಿಸುವಿಕೆಗೆ ಅಥವಾ ರಹಸ್ಯ ಸಾಕ್ಷಿಗಳ ಪರೀಕ್ಷಣ ಕಾರ್ಯಕ್ಕೆ ಅವಕಾಶ ಕೊಡಬಾರದು ಎಂದು ಮನವಿ ಮಾಡಿತು.[೩೬] ನ್ಯಾಯಾಧೀಶ ಪ್ರೊರವರು ಸರ್ಕಾರದ ವಾದವನ್ನು ತಿರಸ್ಕರಿಸಿದಾಗ, ಅಧ್ಯಕ್ಷ ಬಿಲ್‌ ಕ್ಲಿಂಟನ್‌ರವರು ಅಧ್ಯಕ್ಷೀಯ ನಿರ್ಣಯವೊಂದನ್ನು ಜಾರಿಮಾಡಿ, "ನೆವಡಾದ ಗ್ರೂಮ್ ಸರೋವರ ಪ್ರದೇಶದ ಬಳಿಯಿರುವ ವಾಯುಪಡೆಯ ಕಾರ್ಯಾಚರಣಾ ವ್ಯವಸ್ಥೆ"ಗೆ ಪರಿಸರೀಯ ಬಹಿರಂಗಪಡಿಸುವಿಕೆಯ ಕಾನೂನುಗಳಿಂದ ವಿನಾಯಿತಿ ನೀಡಿದರು. ಇದರ ಪರಿಣಾಮವಾಗಿ, ಸಮರ್ಥ ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ನ್ಯಾಯಾಧೀಶ ಪ್ರೊರವರು ದಾವೆಯನ್ನು ವಜಾಗೊಳಿಸಿದರು. ಮಾಹಿತಿಗಳನ್ನು ರಹಸ್ಯವಾಗಿ ವರ್ಗೀಕರಿಸುವ ಉದ್ದೇಶದಿಂದ ಸರ್ಕಾರವು ತನ್ನ ಬಳಿಯಿರುವ ಅಧಿಕಾರದ ದುರುಪಯೋಗ ಮಾಡಿಕೊಳ್ಳುತ್ತಿದೆ ಎಂಬ ಅಂಶದ ಆಧಾರದ ಮೇಲೆ, ಒಂಬತ್ತನೇ ಸಂಚಾರಿ ನ್ಯಾಯಪ್ರಾಂತ್ಯಕ್ಕೆ ಸಂಬಂಧಿಸಿದ U.S.ನ ಮೇಲ್ಮನವಿ ನ್ಯಾಯಾಲಯಕ್ಕೆ ಜೋನಾಥನ್‌ ಟರ್ಲಿಯವರು ಮೇಲ್ಮನವಿ ಸಲ್ಲಿಸಿದರು. ವಾಯುಪಡೆಯ ಕಾರ್ಯದರ್ಶಿಯಾದ ಶೀಲಾ ಇ. ವಿಡ್ನಾಲ್‌ರವರು ಒಂದು ಮೊಕದ್ದಮೆ ಟಿಪ್ಪಣಿಯನ್ನು ಸಲ್ಲಿಸಿ, ಗ್ರೂಮ್‌ ಸರೋವರ ಪ್ರದೇಶದ ಬಳಿಯಿರುವ ವಾಯು ಮತ್ತು ನೀರಿನಲ್ಲಿರುವ ಸಾಮಗ್ರಿಗಳ ಅಥವಾ ಮಾಹಿತಿಗಳ ಬಹಿರಂಗಪಡಿಸುವಿಕೆಯು "ಸೇನಾ ಕಾರ್ಯಾಚರಣಾ ಸಾಮರ್ಥ್ಯಗಳನ್ನು ಹೊರಗೆಡವಬಹುದು ಅಥವಾ ವರ್ಗೀಕೃತ ರಹಸ್ಯ ಕಾರ್ಯಾಚರಣೆಗಳ ಸ್ವರೂಪ ಹಾಗೂ ವ್ಯಾಪ್ತಿಯನ್ನು ಹೊರಗೆಡವಬಹುದು" ಎಂದು ತಿಳಿಸಿದರು. ಟರ್ಲಿಯವರ ಅಹವಾಲನ್ನು[೩೭] ಒಂಬತ್ತನೇ ಸಂಚಾರಿ ನ್ಯಾಯಪೀಠವು ತಿರಸ್ಕರಿಸಿದರೆ, U.S. ಸರ್ವೋಚ್ಚ ನ್ಯಾಯಾಲಯವು ಅದರ ವಿಚಾರಣೆಯನ್ನು ಮಾಡಲು ನಿರಾಕರಿಸಿತು. ಇದರಿಂದಾಗಿ ಆಪಾದಕರ ಅಥವಾ ಫಿರ್ಯಾದಿಗಳ ಪ್ರಕರಣಕ್ಕೆ ತೆರೆಬಿದ್ದಂತಾಯಿತು.

ಗ್ರೂಮ್‌ ಪ್ರದೇಶಕ್ಕೆ ನೀಡಿರುವ ವಿನಾಯಿತಿಯ ಮುಂದುವರಿಕೆಯ ಕುರಿತಾದ ಅಧ್ಯಕ್ಷೀಯ ನಿರ್ಣಯವೊಂದನ್ನು ಅಧ್ಯಕ್ಷರು ಪ್ರತಿವರ್ಷವೂ ನೀಡುತ್ತಾ ಬರುತ್ತಿದ್ದಾರೆ.[೩೮][೩೯][೪೦] ಗ್ರೂಮ್‌ ಸರೋವರ ಪ್ರದೇಶವೆಂದರೆ ನೆಲ್ಲಿಸ್‌ ಸಂಕೀರ್ಣದ ಕೇವಲ ಮತ್ತೊಂದು ಭಾಗವಷ್ಟೇ ಎಂಬ ಭಾವನೆಗಿಂತ ಮಿಗಿಲಾದದ್ದು ಎಂದು U.S. ಸರ್ಕಾರವು ಎಂದಾದರೂ ಹೇಳಿಕೊಂಡಿದ್ದಲ್ಲಿ ಅದಕ್ಕಿರುವ ಏಕೈಕ ಔಪಚಾರಿಕ ಗುರುತು ಎಂದರೆ ಇದು ಮತ್ತು ಇತರ ಸರ್ಕಾರಿ ಸಂವಹನ ಅಥವಾ ಆದೇಶಗಳಲ್ಲಿ ಬಳಸಲಾದ ಇದೇ ತರಹದ ಮೌನಸಮ್ಮತಿಯ ಅಭಿವ್ಯಕ್ತಿಗಳು ಮಾತ್ರ.

F-117 ನೈಟ್‌ಹಾಕ್‌ ಸಾಮಗ್ರಿಯ ಸುರಕ್ಷಿತ ನಿರ್ವಹಣೆಗೆ ಸಂಬಂಧಿಸಿದ, ಒಂದು ರಹಸ್ಯವಲ್ಲದ ಜ್ಞಾಪಕ ಪತ್ರವನ್ನು ವಾಯುಪಡೆಯ ವೆಬ್‌ಸೈಟ್‌ನಲ್ಲಿ 2005ರಲ್ಲಿ ಪ್ರಕಟಿಸಲಾಗಿತ್ತು. ಆಪಾದಕರು ಅಥವಾ ಫಿರ್ಯಾದುದಾರರು ಯಾವ ಮಾಹಿತಿಯನ್ನು ಕೋರಿದ್ದರೋ (ಸರ್ಕಾರವು ರಹಸ್ಯವಾಗಿ ವರ್ಗೀಕರಿಸಿದೆ ಎಂದು ಸಮರ್ಥಿಸಲಾದ ಮಾಹಿತಿ) ಅದೇ ಮಾಹಿತಿಗಳು ಈ ಜ್ಞಾಪಕ ಪತ್ರದಲ್ಲಿ ಚರ್ಚಿಸಲ್ಪಟ್ಟಿದ್ದವು. ಇದರ ಕುರಿತು ಪತ್ರಕರ್ತರು ಎಚ್ಚೆತ್ತುಕೊಂಡ ನಂತರದ ಕೆಲವೇ ಸಮಯದಲ್ಲಿ ಸದರಿ ಜ್ಞಾಪಕ ಪತ್ರವನ್ನು ತೆಗೆದುಹಾಕಲಾಯಿತು.[೪೧]

1974ರ ಸ್ಕೈಲ್ಯಾಬ್ ಛಾಯಾಚಿತ್ರಗ್ರಹಣ[ಬದಲಾಯಿಸಿ]

ಡ್ವಾಯ್ನ್‌ ಎ. ಡೇ ಎಂಬ ಓರ್ವ ಬಾಹ್ಯಾಕಾಶ ಚರಿತ್ರಕಾರ 2006ರ ಜನವರಿಯಲ್ಲಿ, ಅಂತರಿಕ್ಷ ವಿಜ್ಞಾನಕ್ಕೆ ಸಂಬಂಧಿಸಿದ ದಿ ಸ್ಪೇಸ್‌ ರಿವ್ಯೂ ಎಂಬ ಆನ್‌ಲೈನ್‌ ನಿಯತಕಾಲಿಕದಲ್ಲಿ "ಅಸ್ಟ್ರೋನಾಟ್ಸ್‌ ಅಂಡ್‌ ಏರಿಯಾ 51: ದಿ ಸ್ಕೈಲ್ಯಾಬ್ ಇನ್ಸಿಡೆಂಟ್" ಎಂಬ ಶೀರ್ಷಿಕೆಯನ್ನುಳ್ಳ ಲೇಖನವೊಂದನ್ನು ಪ್ರಕಟಿಸಿದರು. 1974ರಲ್ಲಿ CIA ನಿರ್ದೇಶಕ ವಿಲಿಯಂ ಕಾಲ್ಬಿಯವರಿಗೆ ಓರ್ವ ಅನಾಮಿಕ CIA ಅಧಿಕಾರಿಯು ಬರೆದ ಜ್ಞಾಪಕ ಪತ್ರವೊಂದನ್ನು ಈ ಲೇಖನವು ಆಧರಿಸಿತ್ತು. ಸ್ಕೈಲ್ಯಾಬ್‌ 4ನ್ನು ಏರಿರುವ ಗಗನಯಾತ್ರಿಗಳು ಬೃಹತ್ ಯೋಜನೆಯೊಂದರ ಭಾಗವಾಗಿ ಸ್ಥಳವೊಂದರ ಛಾಯಾಚಿತ್ರವನ್ನು ಪ್ರಮಾದವಶಾತ್ ತೆಗೆದಿದ್ದಾರೆ ಎಂದು ಆ ಜ್ಞಾಪಕ ಪತ್ರವು ವರದಿ ಮಾಡಿತ್ತು. ಇದಕ್ಕೆ ಸಂಬಂಧಿಸಿ ಆ ಜ್ಞಾಪಕ ಪತ್ರದಲ್ಲಿ ನಮೂದಿಸಲಾದ ವಿಷಯಗಳು ಇಂತಿದ್ದವು:

There were specific instructions not to do this. <redacted> was the only location which had such an instruction.

ಆ ಸ್ಥಳದ ಹೆಸರು ಅಸ್ಪಷ್ಟವಾಗಿತ್ತಾದರೂ, ಅದರಲ್ಲಿನ ಮಾಹಿತಿಯ ಸಹಾಯದಿಂದಾಗಿ ಆ ಪ್ರದೇಶವು ಗ್ರೂಮ್‌ ಸರೋವರ ಪ್ರದೇಶವೇ ಎಂದು ಡ್ವಾಯ್ನ್‌ ಡೇಯವರು ನಂಬಲು ಸಾಧ್ಯವಾಯಿತು. ಡೇಯವರು ಗಮನಿಸಿದಂತೆ:

[I]n other words, the CIA considered no other spot on Earth to be as sensitive as Groom Lake.[೪೨][೪೩]

ಈ ಚಿತ್ರಿಕೆಗಳನ್ನು ರಹಸ್ಯವಾಗಿ ವರ್ಗೀಕರಿಸಬೇಕೇ ಎಂಬುದರ ಬಗ್ಗೆ ಒಕ್ಕೂಟದ ಸಂಸ್ಥೆಗಳ ನಡುವೆ ನಡೆದ ಚರ್ಚೆಗಳನ್ನು ಸದರಿ ಜ್ಞಾಪಕ ಪತ್ರವು ವಿವರಿಸುತ್ತದೆ. ಇದಕ್ಕೆ ಸಂಬಂಧಿಸಿ ರಕ್ಷಣಾ ಇಲಾಖೆಯ ಸಂಸ್ಥೆಗಳು ವರ್ಗೀಕರಿಸಬೇಕು ಎಂದು ವಾದಿಸಿದರೆ, ನಾಸಾ ಮತ್ತು ಸಂಸ್ಥಾನದ ಇಲಾಖೆಯು ವರ್ಗೀಕರಣದ ವಿರುದ್ಧವಾಗಿ ವಾದಿಸಿರುವ ವಿವರಗಳು ಅದರಲ್ಲಿವೆ. ರಹಸ್ಯವೆಂದು ಬೇರ್ಪಡಿಸದ ಚಿತ್ರಿಕೆಗಳ ನ್ಯಾಯಬದ್ಧತೆಯನ್ನು ಸ್ವತಃ ಜ್ಞಾಪಕ ಪತ್ರವೇ ಪ್ರಶ್ನಿಸಿದ್ದು, ಅದು ಪ್ರತಿವರ್ತನಾತ್ಮಕವಾಗಿ ವರ್ಗೀಕರಿಸಲ್ಪಡಬೇಕು ಎಂದು ಹೇಳುತ್ತದೆ.

ಸ್ವತಃ DCI (ಕೇಂದ್ರೀಯ ಗುಪ್ತದಳದ ನಿರ್ದೇಶಕ) ಕಾಲ್ಬಿಯವರಿಂದ ಕೈಬರಹದಲ್ಲಿ ಸ್ಪಷ್ಟವಾಗಿ ಬರೆಯಲ್ಪಟ್ಟ ಜ್ಞಾಪಕ ಪತ್ರದ ಮೇಲಿನ ಟಿಪ್ಪಣಿಗಳು[೪೪] ಈ ರೀತಿ ಹೇಳುತ್ತವೆ:

He did raise it—said State Dept. people felt strongly. But he inclined leave decision to me (DCI)—I confessed some question over need to protect since:

 1. USSR has it from own sats
 2. What really does it reveal?
 3. If exposed, don't we just say classified USAF work is done there?

ಸ್ಕೈಲ್ಯಾಬ್ ಚಿತ್ರಣಗಳಿಗೆ ಸಂಬಂಧಿಸಿದ ಚರ್ಚೆಗಳ ನಿರ್ಣಯವನ್ನು ವಿವರ್ಗೀಕೃತ ದಾಖಲೆಗಳು ಹೊರಗೆಡಹುವುದಿಲ್ಲ. ಸ್ಕೈಲ್ಯಾಬ್‌ 4ರ ಉಳಿದ ಛಾಯಾಚಿತ್ರಗಳೊಂದಿಗೆ ಒಕ್ಕೂಟ ಸರ್ಕಾರದ ಉಪಗ್ರಹ ಚಿತ್ರಣಗಳ ಸಂಗ್ರಹದಲ್ಲಿ ಕಾಣಿಸಿಕೊಂಡ ಛಾಯಾಚಿತ್ರವನ್ನು 2007ರಲ್ಲಿ ಡೇಯವರು ಗುರುತಿಸುವವರೆಗೆ ಯಾರೂ ಗಮನಕ್ಕೆ ತಂದುಕೊಂಡಿರುವ ಯಾವುದೇ ದಾಖಲೆಯಿಲ್ಲವಾದ್ದರಿಂದಾಗಿ ತೆರೆಮರೆಯಲ್ಲಿ ನಡೆದ ಚರ್ಚೆಗಳು ಅನಿಶ್ಚಿತವಾಗಿ ಅಥವಾ ಸಂದಿಗ್ಧವಾಗಿಯೇ ಉಳಿದುಕೊಂಡವು.[೪೫]

ಏರಿಯಾ 51ಕ್ಕೆ ಸಂಬಂಧಿಸಿದ UFOನ ಹಾಗೂ ಇತರ ಪಿತೂರಿಯ ವಿಚಾರ ಸರಣಿಗಳು[ಬದಲಾಯಿಸಿ]

ರಹಸ್ಯವಾಗಿ ವರ್ಗೀಕರಿಸಲ್ಪಟ್ಟಿರುವ, ವಿಮಾನ ಸಂಶೋಧನೆಗೆ ಸಂಬಂಧಿಸಿದ ಇದರ ಗುಪ್ತ ಸ್ವರೂಪ ಹಾಗೂ ನಿಸ್ಸಂದೇಹವಾದ ಸಂಬಂಧಗಳೊಂದಿಗೆ ಅಸಾಮಾನ್ಯ ವಿದ್ಯಮಾನದ ವರದಿಗಳೂ ಸೇರಿಕೊಂಡು, ಏರಿಯಾ 51ನ್ನು ಆಧುನಿಕ UFO ಮತ್ತು ಪಿತೂರಿಯ ವಿಚಾರ ಸರಣಿಗಳ ಕೇಂದ್ರಬಿಂದುವನ್ನಾಗಿಸಿವೆ. ಇಂತಹ ವಿಚಾರ ಸರಣಿಗಳಲ್ಲಿ ನಮೂದಿಸಲ್ಪಟ್ಟಿರುವ, ಏರಿಯಾ 51ರಲ್ಲಿ ನಡೆಯುತ್ತಿವೆ ಎನ್ನಲಾದ ಕೆಲವೊಂದು ಚಟುವಟಿಕೆಗಳಲ್ಲಿ ಈ ಕೆಳಗಿನವು ಸೇರಿವೆ:

 • ಅನ್ಯಲೋಕಕ್ಕೆ ಸೇರಿದ ಅಪ್ಪಳಿಸಲ್ಪಟ್ಟ ಬಾಹ್ಯಾಕಾಶ ನೌಕೆಯ (ರೋಸ್‌ವೆಲ್‌ನಲ್ಲಿ ವಶಪಡಿಸಿಕೊಳ್ಳಲಾಯಿತು ಎಂದು ಭಾವಿಸಲಾದ ಸಾಮಗ್ರಿಯೂ ಸೇರಿದಂತೆ) ದಾಸ್ತಾನು, ಪರೀಕ್ಷಣೆ ಮತ್ತು ರಿವರ್ಸ್‌ ಎಂಜಿನಿಯರಿಂಗ್, ಅವುಗಳಲ್ಲಿದ್ದ ವಾಸಿಗಳ (ಬದುಕಿರುವ ಮತ್ತು ಸತ್ತಿರುವ) ಅಧ್ಯಯನ ಮತ್ತು ಅನ್ಯಲೋಕದ ತಂತ್ರಜ್ಞಾನವನ್ನು ಆಧರಿಸಿದ ವಿಮಾನದ ತಯಾರಿಕೆ.
 • ಭೂಮ್ಯಾತೀತ ಶಕ್ತಿಗಳೊಂದಿಗೆ ಸಭೆಗಳು ಅಥವಾ ಜಂಟಿ ಕಾರ್ಯಗಳ ನಿರ್ವಹಣೆ.
 • ವಿಲಕ್ಷಣ ಶಕ್ತಿಯ ಆಯುಧಗಳ (SDI ಅನ್ವಯಿಕಗಳು ಅಥವಾ ಬೇರಾವುದೇ ಅನ್ವಯಿಕಗಳಿಗಾಗಿ) ಅಥವಾ ಹವಾಮಾನ ನಿಯಂತ್ರಣ ಸಾಧನಗಳ ಅಭಿವೃದ್ಧಿ.
 • ಕಾಲಯಾನ ಮತ್ತು ದೂರಸ್ಥಚಾಲನಾ ತಂತ್ರಜ್ಞಾನದ ಅಭಿವೃದ್ಧಿ.
 • ಅರುಣಶೋಭೆಯ ಯೋಜನೆಗೆ ಸಂಬಂಧಿಸಿದ ಅಸಾಮಾನ್ಯ ಮತ್ತು ವಿಲಕ್ಷಣ ಪ್ರೇರಕ ವ್ಯವಸ್ಥೆಗಳ ಅಭಿವೃದ್ಧಿ.
 • ಅಸ್ಪಷ್ಟವಾಗಿರುವಂತೆ ತೋರುವ ಏಕ ವಿಶ್ವ ಸರ್ಕಾರವೊಂದರ ಅಥವಾ ವೈಭವಪೂರ್ಣ 12 ಸಂಸ್ಥೆಗೆ ಸಂಬಂಧಿಸಿದ ಚಟುವಟಿಕೆಗಳು.

ಗ್ರೂಮ್‌ ಸರೋವರ ಅಥವಾ ಅದರ ದಕ್ಷಿಣಕ್ಕೆ 8.5 ಮೈಲುಗಳಷ್ಟು ದೂರವಿರುವ ಪೆಪೂಸ್‌ ಸರೋವರ ಪ್ರದೇಶದಲ್ಲಿನ ರಹಸ್ಯ ಅಥವಾ ಭೂಗತ ಸೌಕರ್ಯಗಳ ಕುರಿತಾಗಿ ಬಹಳಷ್ಟು ಊಹಾಪೋಹಗಳಿದ್ದು, ಒಂದು ಖಂಡಾಂತರ ರಹಸ್ಯ ರೈಲುಮಾರ್ಗದ ವ್ಯವಸ್ಥೆ, ಅಗೋಚರವಾಗುತ್ತಿರುವಂತೆ ತೋರುವ ಮತ್ತು ಮರೆಮಾಚಲಾಗಿರುವ ಅದರ ಡಾಂಬರ್‌ಗೆ[೪೬] ನೀರು ಚಿಮುಕಿಸಿದಾಗ ಸಂಕ್ಷಿಪ್ತವಾಗಿ ಕಾಣಿಸುವ ಒಂದು ವಿಮಾನ ಹಾದಿ (ಲೂಯಿಸ್‌ ಕೆರೋಲ್‌ನ ಚೆಷೈರ್‌ ಕ್ಯಾಟ್‌ ಬಂದ ನಂತರ ಇದಕ್ಕೆ "ಚೆಷೈರ್ ಏರ್‌ಸ್ಟ್ರಿಪ್" ಎಂಬ ಅಡ್ಡಹೆಸರು ಬಂತು) ಮತ್ತು ಅನ್ಯಲೋಕದ ತಂತ್ರಜ್ಞಾನವನ್ನು ಆಧರಿಸಿದ ಎಂಜಿನಿಯರಿಂಗ್ ಕೌಶಲ್ಯ ಇವೇ ಮೊದಲಾದವುಗಳ ಕುರಿತಾದ ಸಮರ್ಥನೆಗಳು ಅದರಲ್ಲಿ ಸೇರಿದ್ದವು. ಸಾರ್ವತ್ರಿಕವಾಗಿ ಲಭ್ಯವಿರುವ ಉಪಗ್ರಹ ಚಿತ್ರಣಗಳು ಗ್ರೂಮ್ ಶುಷ್ಕ ಸರೋವರದಲ್ಲಿ ಸ್ಪಷ್ಟವಾಗಿ ಕಾಣುವ ಇಳಿದಾಣದ ಹಾದಿಗಳನ್ನು ತೋರಿಸುತ್ತವೆಯೇ ಹೊರತು, ಪೆಪೋಸ್‌ ಸರೋವರ ಪ್ರದೇಶದಲ್ಲಿನ ವಿವರವನ್ನಲ್ಲ.

ಏರಿಯಾ 51ರಲ್ಲಿನ OXCART ಮತ್ತು NERVA ದಂತಹ ಪ್ರಾಯೋಗಿಕ ಯೋಜನೆಗಳ ಪರಿಣತರು ಒಪ್ಪಿಕೊಳ್ಳುವ ಪ್ರಕಾರ, ಬಹುಪಾಲು UFOದ ದೃಶ್ಯಗಳಿಗೆ ಮತ್ತು ಇತರ ಊಹಾಪೋಹಗಳಿಗೆ ಅವರ ಕಾರ್ಯವು (2,850 OXCART ಪರೀಕ್ಷಾ ವಿಮಾನಗಳು ಮಾತ್ರವೇ ಸೇರಿದಂತೆ) ಪ್ರಮಾದವಶಾತ್ತಾಗಿ ಕಾರಣವಾಗಿವೆ.[೪]

The shape of OXCART was unprecedented, with its wide, disk-like fuselage designed to carry vast quantities of fuel. Commercial pilots cruising over Nevada at dusk would look up and see the bottom of OXCART whiz by at 2,000-plus mph. The aircraft's titanium body, moving as fast as a bullet, would reflect the sun's rays in a way that could make anyone think, UFO.[೪]

ಬೃಹತ್ ಭೂಗತ ರೈಲುಮಾರ್ಗ ವ್ಯವಸ್ಥೆಯೊಂದರ ಅಸ್ತಿತ್ವವನ್ನು ಅವರು ನಿರಾಕರಿಸುತ್ತಾರಾದರೂ, ಏರಿಯಾ 51ರ ಕಾರ್ಯಾಚರಣೆಗಳಲ್ಲಿ ಬಹುಪಾಲು ರಹಸ್ಯವಾಗಿಯೇ ನಡೆದಿದ್ದವು (ಮತ್ತು ಈಗಲೂ ನಡೆಯುತ್ತವೆ ಎಂದು ಭಾವಿಸಬಹುದು).[೪]

ಏರಿಯಾ 51ರ ಪಿತೂರಿಯ ವಿಚಾರ ಸರಣಿಗಳಿಗೆ ಪೂರಕವಾಗಿರುವ ಘಟನೆಗಳ ಅರಿವಿನ ಬಗ್ಗೆ ಹಲವಾರು ಜನ ಸಮರ್ಥನೆಯನ್ನು ನೀಡಿದ್ದಾರೆ. ಇವುಗಳಲ್ಲಿ ಬಾಬ್‌ ಲೇಜರ್‌ ಕೂಡಾ ಒಬ್ಬ. ಏರಿಯಾ 51ರ ನಲ್ಲಿನ S-4ನಲ್ಲಿ (ಪೆಪೂಸ್‌ ಸರೋವರದಲ್ಲಿನ ಒಂದು ಸೌಲಭ್ಯ) ಕೆಲಸ ಮಾಡಿದ್ದ ತನ್ನನ್ನು, U.S. ಸರ್ಕಾರದ ವಶದಲ್ಲಿದ್ದ ಅನ್ಯಲೋಕದ ಬಾಹ್ಯಾಕಾಶ ನೌಕೆಯೊಂದಿಗೆ ಕಾರ್ಯನಿರ್ವಹಿಸಲು ಗುತ್ತಿಗೆಗೆ ತೆಗೆದುಕೊಳ್ಳಲಾಗಿತ್ತು ಎಂದು ಆತ 1989ರಲ್ಲಿ ಸಮರ್ಥನೆಯನ್ನು ನೀಡಿದ್ದ. ಇದೇ ರೀತಿಯಲ್ಲಿ, ಬ್ರೂಸ್ ಬರ್ಗೆಸ್‌ನಿಂದ ನಿರ್ದೇಶಿಸಲ್ಪಟ್ಟ ಡ್ರೀಮ್‌ಲ್ಯಾಂಡ್ ಎಂಬ 1996ರ ಸಾಕ್ಷ್ಯಚಿತ್ರವು 71ವರ್ಷ ವಯಸ್ಸಿನ ಓರ್ವ ಯಂತ್ರ ಶಿಲ್ಪಿಯೊಂದಿಗಿನ (ಮೆಕ್ಯಾನಿಕಲ್ ಎಂಜಿನಿಯರ್) ಸಂದರ್ಶನವೊಂದನ್ನು ಒಳಗೊಂಡಿತ್ತು. ಈತ 1950ರ ಅವಧಿಯಲ್ಲಿ ಏರಿಯಾ 51ರಲ್ಲಿ ಕಾರ್ಯನಿರ್ವಹಿಸುತ್ತಿದ್ದ ನೌಕರನಾಗಿದ್ದ ಎಂದು ಅದರಲ್ಲಿ ತಿಳಿಸಲಾಗಿತ್ತು. "ಹಾರುವ ತಟ್ಟೆಯ ಅನುಕರಣ ಸಾಧನ"ವೊಂದರ ಕುರಿತು ತಾನು ಕಾರ್ಯನಿರ್ವಹಿಸಿದ್ದಾಗಿಯೂ, ಅಪ್ಪಳಿಸುವಿಕೆಗೆ ಒಳಗಾದ ಒಂದು ಭೂಮ್ಯಾತೀತ ವಿಮಾನದಿಂದ ಉದ್ಭವಿಸಿರುವ ತಟ್ಟೆಯೊಂದನ್ನು ಅದು ಆಧರಿಸಿದ್ದು, US ವಿಮಾನ ಚಾಲಕರುಗಳ ತರಬೇತಿಗಾಗಿ ಅದನ್ನು ಬಳಸಲಾಗುತ್ತಿತ್ತೆಂದೂ ಆತ ಸಮರ್ಥನೆಗಳನ್ನು ನೀಡಿದ್ದ. "ಜೆ-ರಾಡ್" ಎಂಬ ಹೆಸರಿನ ಮತ್ತು "ದೂರಸಂವೇದನದ ಅನುವಾದಕ ಅಥವಾ ಸಂವಹಕ" ಎಂದು ವಿವರಿಸಲಾಗಿದ್ದ ಭೂಮ್ಯಾತೀತ ಜೀವಿಯೊಂದರೊಂದಿಗೆ ತಾನು ಕೆಲಸಮಾಡಿದ್ದಾಗಿಯೂ ಆತ ಹೇಳಿಕೊಂಡಿದ್ದ.[೪೭] ಡಾನ್ ಬ್ಯೂರಿಷ್ (ಡಾನ್ ಕ್ರೇನ್‌ನ ಗುಪ್ತನಾಮ) ಎಂಬಾತನು ಏರಿಯಾ 51ರಲ್ಲಿ "ಜೆ-ರಾಡ್‌" ಎಂಬ ಹೆಸರಿನ ಅನ್ಯಲೋಕಜೀವಿಯ ಜೊತೆಜೊತೆಗೇ ಅನ್ಯಲೋಕದ ವೈರಸ್‌ಗಳ ಕ್ಲೋನಿಂಗ್‌ ಕಾರ್ಯದಲ್ಲಿಯೂ ಕೆಲಸಮಾಡಿದ್ದಾಗಿ 2004ರಲ್ಲಿ ಹೇಳಿಕೊಂಡಿದ್ದ. 1989ರಲ್ಲಿ ಲಾಸ್‌ ವೇಗಾಸ್‌ನ ಓರ್ವ ಪೆರೋಲ್ ಅಧಿಕಾರಿಯಾಗಿಯೂ ಕಾರ್ಯನಿರ್ವಹಿಸುತ್ತಿದ್ದುದರ ಜೊತೆಗೆ ಆತ ಬ್ಯೂರಿಷ್‌ SUNYಯಲ್ಲಿ PhD ಪದವಿಯನ್ನೂ ಸಂಪಾದಿಸುತ್ತಿದ್ದುದರಿಂದಾಗಿ ಆತನ ಪಾಂಡಿತ್ಯಪೂರ್ಣ ಸಾಕ್ಷ್ಯಾಧಾರಗಳು ಹೆಚ್ಚಿನ ಚರ್ಚೆಗೆ ಗ್ರಾಸವಾದ ವಿಷಯಗಳಾಗಿವೆ.[೪೮]

ಮಾಧ್ಯಮ ಮತ್ತು ಜನಪ್ರಿಯ ಸಂಸ್ಕೃತಿಯಲ್ಲಿನ ಚಿತ್ರಣ[ಬದಲಾಯಿಸಿ]

ಏರಿಯಾ 51ನ್ನು ಭೂಮ್ಯಾತೀತ ಜೀವಿಗಳ ಆಶ್ರಯಧಾಮವಾಗಿ ಜನಪ್ರಿಯ ಸಂಸ್ಕೃತಿಯು ಆಗಾಗ ಚಿತ್ರಿಸುತ್ತಾ ಬಂದಿದೆ. ಏರಿಯಾ 51ನ್ನು ಸುತ್ತುವರೆದಿರುವ ಅಸಂಖ್ಯಾತ ಪಿತೂರಿಯ ವಿಚಾರಸರಣಿಗಳಿಂದಾಗಿ ಇದಕ್ಕೆ ಜನಪ್ರಿಯ ಸಂಸ್ಕೃತಿಯಲ್ಲಿ, ಅದರಲ್ಲೂ ನಿರ್ದಿಷ್ಟವಾಗಿ ವೈಜ್ಞಾನಿಕ ಕಾದಂಬರಿಗಳಲ್ಲಿ ಒಳ್ಳೆಯ ಪ್ರಚಾರವೇ ದೊರೆತಿದೆ. ಕಾದಂಬರಿಯ ರೂಪದಲ್ಲಿರುವ ಈ ಪ್ರದೇಶದಲ್ಲಿನ ಘಟನೆಗಳನ್ನು ಡಜನ್‌ಗಟ್ಟಲೆ ಚಲನಚಿತ್ರಗಳು ಮತ್ತು ದೂರದರ್ಶನ ಕಾರ್ಯಕ್ರಮಗಳು ಬಳಸಿಕೊಂಡಿವೆ. ಅಂಥಾ ಮಾಧ್ಯಮಗಳ ಪಟ್ಟಿಯನ್ನು ಈ ಕೆಳಗೆ ನೀಡಲಾಗಿದೆ:

 • 1996ರಲ್ಲಿ ಬಂದ ಇಂಡಿಪೆಂಡೆನ್ಸ್‌ ಡೇ ಎಂಬ ಸಾಹಸ ಚಿತ್ರದಲ್ಲಿ, 1947ರ ರೋಸ್‌ವೆಲ್ UFO ಘಟನೆಯಿಂದ ಸಿಕ್ಕಿದ ಅಪ್ಪಳಿಸಲ್ಪಟ್ಟ ಬೇಹುಗಾರಿಕೆಯ ಹಡಗನ್ನು ಈ ಸಂಕೀರ್ಣದಲ್ಲಿ ಅಧ್ಯಯನ ಮಾಡುತ್ತಿರುವಂತೆ ತೋರಿಸಲಾಗಿದೆ. ಈ ಚಿತ್ರದ ನಾಯಕರುಗಳು ನಂತರ ಈ ವಾಯುನೆಲೆಯಲ್ಲಿನ ವಿಮಾನ ಹಾದಿಗಳಿಂದ ತಮ್ಮ ಅಂತಿಮ ದಾಳಿಯನ್ನು ಮಾಡುತ್ತಾರೆ. ಅಷ್ಟೇ ಅಲ್ಲದೇ, ದೃಢಪಟ್ಟಿರುವ ವಾಸ್ತವಾಂಶಕ್ಕೆ ತನ್ನ ಒಪ್ಪಿಗೆಯಿದು ಎಂಬಂತೆ ರ್ಯಾಂಡಿ ಕ್ವೇಡ್‌ ವಹಿಸಿರುವ ರಸ್ಸೆಲ್ ಕೇಸ್‌ ಪಾತ್ರವು, ಈ ವಾಯುನೆಲೆಯನ್ನು ನೆವಡಾದ ಸಂಸ್ಥಾನ ಭೂಪಟವೊಂದರಲ್ಲಿ ತೋರಿಸದಿರುವುದರ ಕುರಿತು ಒಂದು ಹಂತದಲ್ಲಿ ಉಲ್ಲೇಖಿಸುತ್ತದೆ.
 • ಸೆವೆನ್ ಡೇಸ್‌ ಎಂಬ ದೂರದರ್ಶನ ಸರಣಿಯು ಏರಿಯಾ 51ರ ಸಂಕೀರ್ಣದ ಒಳಭಾಗದಲ್ಲಿಯೇ ಹೆಚ್ಚಿನ ಪ್ರಮಾಣದಲ್ಲಿ ಚಿತ್ರೀಕರಿಸಲ್ಪಟ್ಟಿದೆ. ರಹಸ್ಯವಾದ ರಾಷ್ಟ್ರೀಯ ಭದ್ರತಾ ಸಂಸ್ಥೆಯೊಂದರ (NSA) ಕಾರ್ಯಾಚರಣೆಯಿಂದ ಈ ನೆಲೆಯು ನಡೆಸಲ್ಪಡುತ್ತಿದೆ ಎಂಬ ರೀತಿಯಲ್ಲಿ ನೆಲೆಯು ಚಿತ್ರಿಸಲ್ಪಟ್ಟಿದೆ. 1947ರ ರೋಸ್‌ವೆಲ್‌ ಘಟನೆಯಿಂದ ವಶಪಡಿಸಿಕೊಳ್ಳಲಾದ, ಅನ್ಯಲೋಕದ ತಂತ್ರಜ್ಞಾನದ ನೆರವಿನಿಂದ ಕಾರ್ಯಸಾಧ್ಯಗೊಳಿಸಿದ ಕಾಲಯಾನದ ಉಪಕರಣವೊಂದನ್ನು ಈ ಕಾರ್ಯಾಚರಣೆಯಲ್ಲಿ ತೋರಿಸಲಾಗಿದೆ.
 • ಟೂಮ್ ರೈಡರ್ ಚಿತ್ರದಲ್ಲಿ ನಟಿ ಲಾರಾ ಕ್ರಾಫ್ಟ್‌, ಏರಿಯಾ 51ರೊಳಗೆ ಹಠಾತ್ತನೆ ನುಗ್ಗುತ್ತಾಳೆ. "ಎಲಿಮೆಂಟ್‌ 115" ಎಂದು ಕರೆಯಲಾದ ಒಂದು ವಿಶೇಷ ಕಲ್ಲನ್ನು ಅಲ್ಲಿ ಅವಳು ಹುಡುಕಬೇಕಿರುತ್ತದೆ.
 • ಪರ್ಫೆಕ್ಟ್‌ ಡಾರ್ಕ್‌ ಎಂಬ ವಿಡಿಯೋ ಆಟದಲ್ಲಿ ಜೋನ್ನಾ ಡಾರ್ಕ್‌ ಎಂಬುವವಳು ಏರಿಯಾ 51ಕ್ಕೆ ನುಸುಳುತ್ತಾಳೆ. ಓರ್ವ ಸಹಯೋಗಿ ರಹಸ್ಯ ಗೂಢಾಚಾರನನ್ನು ಭೇಟಿಯಾಗುವುದು, ಸತ್ತಿದೆಯೆಂದು ಭಾವಿಸಲಾದ, "ಎಲ್ವಿಸ್" ಎಂಬ ಸಂಕೇತನಾಮವನ್ನು ಹೊಂದಿರುವ ಅನ್ಯಲೋಕ ಜೀವಿಯ ಸ್ವವೀಕ್ಷಣ ಪ್ರಯೋಗಾಲಯವನ್ನು ಕಂಡುಕೊಳ್ಳುವುದು ಹಾಗೂ ಯಶಸ್ವಿಯಾಗಿ ಅಲ್ಲಿಂದ ಹೊರಬೀಳುವುದು ಇವಿಷ್ಟು ಆಕೆಯ ಉದ್ದೇಶಗಳಾಗಿರುತ್ತವೆ.
 • ಇಂಡಿಯಾನಾ ಜೋನ್ಸ್‌ ಅಂಡ್‌ ದಿ ಕಿಂಗ್‌ಡಂ ಆಫ್ ದಿ ಕ್ರಿಸ್ಟಲ್ ಸ್ಕಲ್ ಚಿತ್ರದ ಆರಂಭದಲ್ಲಿ, "ವಿಮಾನಖಾನೆ 51"ನ್ನು ಸರ್ಕಾರಿ ಉಗ್ರಾಣದ ತಾಣವಾಗಿ ತೋರಿಸಲಾಗಿದ್ದು, ರೈಡರ್ಸ್‌ ಆಫ್‌ ದಿ ಲಾಸ್ಟ್ ಆರ್ಕ್ ‌ನ ಕೊನೆಯಲ್ಲಿ ಧರ್ಮಗ್ರಂಥಗಳನ್ನಿಟ್ಟಿರುವ ಪೆಟ್ಟಿಗೆಯನ್ನು ಅಲ್ಲಿ ಸಂಗ್ರಹಿಸಿಟ್ಟಿರುವಂತೆ ಚಿತ್ರಿಸಲಾಗಿದೆ. ಅಷ್ಟೇ ಅಲ್ಲ, ರೋಸ್‌ವೆಲ್ ಅನ್ಯಗ್ರಹ ಜೀವಿಯ ಅಳಿದುಳಿದ ಭಾಗಗಳನ್ನು ಮತ್ತೆ ವಶಪಡಿಸಿಕೊಳ್ಳಲು KGB ಪತ್ತೇದಾರರು ಅಲ್ಲಿಗೆ ಹೋಗುವಂತೆ, ಅಂತಿಮವಾಗಿ ಹರಳುಗಳಿಂದ ಕೂಡಿದ ಅಸ್ತಿಪಂಜರವನ್ನು ಹೊಂದಿದ ಅಂತರ ಆಯಾಮದ ಜೀವಿಯೊಂದು ಅಲ್ಲಿ ಪ್ರಕಟಗೊಳ್ಳುವಂತೆ ಚಿತ್ರಿಸಲಾಗಿದೆ. ರೋಸ್‌ವೆಲ್‌ ಮತ್ತು ಏರಿಯಾ 51ರ ನಡುವಿನ ಸಂಬಂಧಗಳ ಕುರಿತಾದ ಜನಪ್ರಿಯ ನಂಬಿಕೆಗಳಿಗೆ ಒಂದು ಉಲ್ಲೇಖದಂತೆ 51 ಸಂಖ್ಯೆಯನ್ನು ಬರಹಗಾರನಾದ ಡೇವಿಡ್ ಕೋಪ್ ಪರಿಗಣಿಸಿದ್ದಾನೆ.[೪೯]
 • ಸ್ಟಾರ್‌ಗೇಟ್‌ SG-1 ಎಂಬ ದೂರದರ್ಶನ ಸರಣಿಯಲ್ಲಿ, ಇತರ ಗ್ರಹಗಳಿಂದ ಭೂಮಿಗೆ ಮರಳಿ ತಂದ ಭೂಮ್ಯಾತೀತ ತಂತ್ರಜ್ಞಾನದ ದಾಸ್ತಾನು ಮತ್ತು ಸಂಶೋಧನೆಯ ಒಂದು ಸೌಕರ್ಯವಾಗಿ ಏರಿಯಾ 51ನ್ನು ಬಳಸಿಕೊಳ್ಳಲಾಗಿದೆ.
 • NBCಯಲ್ಲಿ ಪ್ರಸಾರವಾದ ಪುನರ್‌ಪ್ರದರ್ಶಿತ ನೈಟ್‌ ರೈಡರ್‌ ಸರಣಿಯಾದ ನೈಟ್‌ ಟು ಕಿಂಗ್ಸ್‌ ಪಾನ್‌ ನ ಕಂತಿನಲ್ಲಿ, NSA ಬೇಹುಗಾರರಿಂದ KITTನ್ನು ತೆಗೆದುಕೊಂಡ ನಂತರ, ಅದನ್ನು ಮತ್ತೆ ವಶಪಡಿಸಿಕೊಳ್ಳಲು ಏರಿಯಾ 51ರಲ್ಲಿನ ಒಂದು ದಾಸ್ತಾನು ಸೌಕರ್ಯದೊಳಗೆ ಮೈಕೇಲ್‌ ನೈಟ್‌ ನುಸುಳುತ್ತಾನೆ.
 • ಮೆಟಲ್ ಗೇರ್ ಸರಣಿಯಲ್ಲಿ, ದಿ ಪೇಟ್ರಿಯಾಟ್ಸ್‌ ಎಂದು ಹೇಳಲಾಗುವ ಗುಂಪೊಂದರ ಕೇಂದ್ರಸ್ಥಾನಗಳಲ್ಲಿ ಒಂದಾಗಿ ಏರಿಯಾ 51 ಚಿತ್ರಿಸಲ್ಪಟ್ಟಿದೆ. ಇವರು ಮರೆಯಲ್ಲಿದ್ದುಕೊಂಡೇ ಪ್ರಪಂಚದ ಎಲ್ಲಾ ಅಂಶಗಳನ್ನೂ ಜಾಣ್ಮೆಯಿಂದ ಬಳಸಬಲ್ಲವರಾಗಿರುತ್ತಾರೆ.
 • ಸೂಪರ್‌ಮ್ಯಾನ್: ರೆಡ್‌ ಸನ್ ಎಂಬ ಕಾಮಿಕ್ ಪುಸ್ತಕದಲ್ಲಿ ಜೆ. ಎಡ್ವರ್ಡ್‌ ಹೂವರ್‌ನ ಆಜ್ಞಾನುಸಾರವಾಗಿ ಅಬಿನ್‌ ಸುರ್‌‌‌ನ ದೇಹವನ್ನು ಏರಿಯಾ 51ರ ಪ್ರದೇಶದಲ್ಲಿ ಇಡಲಾಗಿರುತ್ತದೆ.ನಂತರ ಜಾನ್‌ ಎಫ್.ಕೆನಡಿಯವರು ಈ ಪ್ರದೇಶವನ್ನು ಪ್ರವೇಶಿಸಲು ಲೆಕ್ಸ್‌ ಲೂಥರ್‌ಗೆ ಅನುವು ಮಾಡಿಕೊಟ್ಟು, ಸೋವಿಯೆಟ್ ಒಕ್ಕೂಟವನ್ನು ಸೋಲಿಸುವುದಕ್ಕೋಸ್ಕರ ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸುವುದಕ್ಕೆ ಅವಕಾಶ ಮಾಡಿಕೊಡುತ್ತಾರೆ ಎನ್ನುವ ರೀತಿಯಲ್ಲಿ ಚಿತ್ರಿಸಲಾಗಿದೆ.
 • ದೂರದರ್ಶನ ಸಾಕ್ಷ್ಯಚಿತ್ರವಾದ "UFO ಹಂಟರ್ಸ್" ಸರಣಿಯ ಎರಡನೇ ಅವಧಿಯ ಮುಕ್ತಾಯದ ಅಂಕಕ್ಕಾಗಿ ಏರಿಯಾ 51ನ್ನು 2008ರ ಅಕ್ಟೋಬರ್‌ನಲ್ಲಿ ಚಿತ್ರೀಕರಿಸಲಾಗಿತ್ತು. ಹಿಸ್ಟರಿ ವಾಹಿನಿಯಲ್ಲಿ 2009ರ ಫೆಬ್ರವರಿ 25ರಂದು ಇದರ ಹೈ ಡೆಫನಿಷನ್ ಧ್ವನಿಮುದ್ರಿತ ಭಾಗವು ಪ್ರಸಾರವಾಗಿತ್ತು.
 • 2005ರಲ್ಲಿ ಏರಿಯಾ 51 ಎಂಬ ವಿಡಿಯೋ ಆಟವನ್ನು ಮಿಡ್‌ವೇ ಗೇಮ್ಸ್‌ ಸಂಸ್ಥೆಯು ಬಿಡುಗಡೆ ಮಾಡಿತ್ತು.

ಆಕರಗಳು[ಬದಲಾಯಿಸಿ]

ಸಾಮಾನ್ಯ
ನಿರ್ದಿಷ್ಟ
 1. ಪೀಟರ್‌ W. ವರ್ಲಿನ್‌ರವರ ‌ಡ್ರಿಮ್‌ಲ್ಯಾಂಡ್‌: ಫಿಪ್ಟಿ ಇಯರ್ಸ್‌ ಆಫ್‌ ಸೀಕ್ರೆಟ್‌ ಫ್ಲೈಟ್‌ ಟೆಸ್ಟಿಂಗ್‌ ಇನ್‌ ನೆವಡಾ
 2. ರಿಚ್‌, ಪು. 57, 1977ರಲ್ಲಿನ ಗ್ರೂಮ್‌ ಸರೋವರ ಪ್ರದೇಶವನ್ನು ರಿಚ್‌ರವರು, "...ಪೌರ ವಿಮಾನನಿಲ್ದಾಣಗಳಿಗಿಂತ ಹೆಚ್ಚು ದೊಡ್ಡದಿರುವ, ಸೂಕ್ಷ್ಮ ವೈಮಾನಿಕ ಯೋಜನೆಗಳಿಗಾಗಿ ಮೀಸಲಿಟ್ಟ ಪರೀಕ್ಷಾ ಪ್ರದೇಶವಾಗಿರುವ, ಅವ್ಯವಸ್ಥಿತವಾಗಿ ಆಯೋಜಿಸಲ್ಪಟ್ಟಿರುವ ಸೌಕರ್ಯಗಳನ್ನು ಹೊಂದಿರುವ ಪ್ರದೇಶ" ಎಂದು ವಿವರಿಸುತ್ತಾರೆ.
 3. ರಿಚ್‌, ಪು. 56, ರಿಚ್‌ರವರು ಹೀಗೆ ಬರೆಯುತ್ತಾರೆ, "ಯುವ ಮತ್ತು ಮುಗ್ಧ ವಿಮಾನ ಚಾಲಕರನ್ನು ಸೆಳೆಯುವ ಭರವಸೆಯೊಂದಿಗೆ, ದೇವರಿಂದ ತ್ಯಜಿಸಲ್ಪಟ್ಟ ಈ ಪ್ರದೇಶಕ್ಕೆ ಪ್ಯಾರಡೈಸ್‌ ರಾಂಚ್‌ ಎಂದು ತಮಾಷೆಗಾಗಿ ಕೆಲ್ಲಿ [ಜಾನ್ಸನ್‌, U2ನ ವಿನ್ಯಾಸಕ]ಯವರು ಅಡ್ಡಹೆಸರನ್ನು ಇಟ್ಟಿದ್ದರು".
 4. ೪.೦ ೪.೧ ೪.೨ ೪.೩ ೪.೪ Jacobsen, Annie. "The Road to Area 51". Los Angeles Times, 5 April 2009.
 5. ಪ್ಯಾಟನ್, ಪು. 3, ಪ್ಯಾರಡೈಸ್ ರಾಂಚ್, ವಾಟರ್‌ಟೌನ್, ಗ್ರೂಮ್‌ ಸರೋವರ, ಮತ್ತು ಹೋಮ್‌ ಬೇಸ್‌ನ್ನು ಅಡ್ಡಹೆಸರುಗಳೆಂಬಂತೆ ಪಟ್ಟಿಮಾಡುತ್ತದೆ.
 6. ಡೈಲಿ ಎವಿಯೇಟರ್‌ - ಹೋಮಿ ಏರ್‌ಪೋರ್ಟ್‌ Archived 2014-08-04 ವೇಬ್ಯಾಕ್ ಮೆಷಿನ್ ನಲ್ಲಿ., ಜನವರಿ 14, 2008ರಂದು ಲೇಖನವನ್ನು ಮರುಸಂಪಾದಿಸಲಾಗಿದೆ.
 7. ಗ್ರೂಮ್‌ ಸರೋವರ ಪ್ರದೇಶದ FAA ವೈಮಾನಿಕ ನಕ್ಷೆ
 8. USನ ಇಂಧನ ಇಲಾಖೆ. Archived 2011-08-05 ವೇಬ್ಯಾಕ್ ಮೆಷಿನ್ ನಲ್ಲಿ.ನೆವಡಾದ ಕಾರ್ಯಾಚರಣೆಗಲ ಕಚೇರಿ. Archived 2011-08-05 ವೇಬ್ಯಾಕ್ ಮೆಷಿನ್ ನಲ್ಲಿ."ಸಂಯುಕ್ತ ಸಂಸ್ಥಾನಗಳ ಪರಮಾಣು ಪರೀಕ್ಷೆಗಳು: ಜುಲೈ 1945ರಿಂದ ಸಪ್ಟೆಂಬರ್‌ 1992 (ಡಿಸೆಂಬರ್‌ 2000) Archived 2011-08-05 ವೇಬ್ಯಾಕ್ ಮೆಷಿನ್ ನಲ್ಲಿ.
 9. ನೆವಡಾ ಸಂಸ್ಥಾನದ ಪರಿಸರ ಸಂರಕ್ಷಣಾ ವಿಭಾಗದ ಸ್ಥಳಾಕೃತಿ ನಕ್ಷೆಯ ಮೇಲೆ ವಿವಿಧ ಪ್ರದೇಶಗಳ ಇರಿಸುವಿಕೆಯನ್ನು NTS ಭೂಪಟ ತೋರಿಸುತ್ತಿರುವುದು Archived 2008-02-16 ವೇಬ್ಯಾಕ್ ಮೆಷಿನ್ ನಲ್ಲಿ..
 10. ಅಮೆರಿಕಾದ ವಿಜ್ಞಾನಿಗಳ ಒಕ್ಕೂಟದ ವೆಬ್‌ಸೈಟ್‌ನಲ್ಲಿನ ಟಿಪ್ಪಣಿ ಸಹಿತದ NTS ಭೂಪಟ
 11. "ಸುಖೋಯ್ಸ್ ಇನ್‌ ದಿ US (ಅಧಿಕೃತ)" Archived 2010-03-21 ವೇಬ್ಯಾಕ್ ಮೆಷಿನ್ ನಲ್ಲಿ., ಬಿಲ್‌ ಸ್ವೀಟ್‌ಮನ್‌, ಎವಿಯೇಷನ್‌ ವೀಕ್‌ , 7 ಮೇ 2009
 12. ೧೩.೦ ೧೩.೧ ೧೩.೨ ಷಾಡೋ ಫ್ಲೈಟ್ಸ್‌: ಅಮೆರಿಕಾಸ್‌ ಸೀಕ್ರೆಟ್‌ ಏರ್‌ ವಾರ್‌ ಎಗೈನ್ಸ್‌ಟ್‌ ದಿ ಸೊವಿಯೆಟ್ ಯುನಿಯನ್‌ , ಕರ್ಟಿಸ್‌ ಪೀಬಲ್ಸ್‌, 2000, ಪ್ರೆಸಿಡಿಯೊ ಪ್ರೆಸ್‌, ISBN 0-89141-700-1.
 13. ರಿಚ್‌, ಪು. 141-144, U2 ಪರೀಕ್ಷಾ ವಿಮಾನ ಚಾಲಕರಾದ ಟೋನಿ ಲೆವಿಯರ್‌ರವರು ಮೃತ್ಯು ಕಣಿವೆಯ ದೂರದ ಪ್ರದೇಶದಲ್ಲಿನ ತಾಣಗಳಿಗಾಗಿ ಬೇಹುಗಾರಿಕೆ ನಡೆಸುತ್ತಾ ಗ್ರೂಮ್‌ನ ಬಗ್ಗೆ ಹೀಗೆ ಹೇಳಿದ, "ನಾನು ಇದಕ್ಕೆ ಹತ್ತಕ್ಕಿಂತ ಹೆಚ್ಚು [ಅಂಕ] ನೀಡುತ್ತೇನೆ... ಒಣ ಸರೋವರ ಪ್ರದೇಶವು ಸುಮಾರು ಮೂರುವರೆ ಮೈಲಿಯಷ್ಟು ವಿಸ್ತೀರ್ಣ ಹೊಂದಿದೆ" ಎಂಬ ಮಾತನ್ನು ವಿವರಿಸುತ್ತದೆ ಮತ್ತು U-2 ವಿನ್ಯಾಸಗಾರ ಕೆಲ್ಲಿ ಜಾನ್ಸನ್‌ ಹಾಗೂ CIA ಅಧಿಕಾರಿ ರಿಚರ್ಡ್‌ ಬಿಸ್ಸೆಲ್‌ರವರಿಗೆ ಲೆವಿಯರ್‌‌ ಸರೋವರವನ್ನು ತೋರಿಸುತ್ತಿರುವುದನ್ನು ಮತ್ತು "ಸರೋವರದ ದಕ್ಷಿಣ ತುದಿಯಲ್ಲಿ" ವಿಮಾನಗಳ ಓಡುಹಾದಿ ನಿರ್ಮಿಸಲು ಜಾನ್ಸನ್‌ರವರು ನಿರ್ಧರಿಸಿದ್ದನ್ನು ಇದು ವಿವರಿಸುತ್ತದೆ.
 14. ರಿಚ್‌, ಪುಟಗಳು. 56-60
 15. ೧೬.೦ ೧೬.೧ ೧೬.೨ "ಏರಿಯಾ 51 ಫೆಸಿಲಿಟಿ ಒವರ್‌ವ್ಯೂ", ಜಾನ್‌ ಪೈಕ್, ಅಮೆರಿಕಾದ ವಿಜ್ಞಾನಿಗಳ ಒಕ್ಕೂಟ
 16. "ಇಮೇಜಸ್ ಆಫ್ ಟಾಪ್ ಸೀಕ್ರೆಟ್ U.S. ಏರ್ ಬೇಸ್ ಷೋ ಗ್ರೋತ್", ಮೇರಿ ಮೊಟ್ಟಾ, space.com, 23 ಎಪ್ರಿಲ್‌ 2000, "ಸುಮಾರು 30 ವರ್ಷಗಳಿಗೂ ಹಿಂದೆ ಈ ಕುಖ್ಯಾತ ಸ್ಥಳದ ಮೊದಲ ಚಿತ್ರಿಕೆಗಳನ್ನು ತೆಗೆದಂದಿನಿಂದ ಈ ಪ್ರದೇಶವು ಗಮನಾರ್ಹವಾಗಿ ವಿಸ್ತರಿಸಿದೆ ಎಂಬುದನ್ನು ಛಾಯಾಚಿತ್ರಗಳು ಪ್ರದರ್ಶಿಸುತ್ತವೆ."
 17. ಡಿಸೆಂಬರ್‌ 21, 2007ರಂದು ಮರುಸಂಪಾದಿಸಿದ ಪ್ರಕಾರ Google Earth / Digital Globe ಚಿತ್ರಿಕೆಗಳನ್ನು ಆಧರಿಸಿದ ಅಳತೆಗಳು, ವಿಮಾನಗಳ ಓಡುಹಾದಿ ರಚನೆ ಮತ್ತು ಜೋಡಣೆಯ ಬಗೆಗಿನ ಮಾಹಿತಿ.
 18. Jeppesen-Sanderson, Inc. (2007). "Jeppesen Flightstar Airport Database". Archived from the original on 2008-09-13. Retrieved 2007-10-01. {{cite web}}: Unknown parameter |month= ignored (help)
 19. ೨೦.೦ ೨೦.೧ ಡೋಂಟ್‌ ಆಸ್ಕ್‌, ಡೋಂಟ್‌ ಟೆಲ್‌: ಏರಿಯಾ 51 ಗೆಟ್ಸ್‌ ಏರ್‌ಪೋರ್ಟ್‌ ಐಡೆಂಟಿಫೈಯರ್‌
 20. ಹಾಲ್‌, ಜಾರ್ಜ್‌. ಸ್ಕಿನ್ನರ್‌, ಮೈಕಲ್‌. ರೆಡ್‌ ಫ್ಲಾಗ್‌, ಮೋಟರ್‌ಬುಕ್ಸ್‌ ಇಂಟರ್‌ನ್ಯಾಷನಲ್, 1993, ISBN 0-87938-759-9, ಪು.49: "ಡ್ರಿಮ್‌ಲ್ಯಾಂಡ್‌ ಮೇಲೆ ಹಾರುವುದು ನಿಷೇಧ ಎಂದು ಹೇಳುವುದು ತಗ್ಗುನುಡಿಯಾಗಿದೆ..."
 21. ಪ್ಯಾಟನ್‌, ಪು10
 22. "ಏರಿಯಾ 51 ಹ್ಯಾಕರ್ಸ್ ಡಿಗ್‌ ಅಪ್‌ ಟ್ರಬಲ್‌" Archived 2012-11-30 ವೇಬ್ಯಾಕ್ ಮೆಷಿನ್ ನಲ್ಲಿ. ಕೆವಿನ್‌ ಪೌಲ್ಸನ್‌, ಸೆಕ್ಯುರಿಟಿ ಫೋಕಸ್‌ ಮೇ 25, 2004
 23. "ರಸ್ತೆ ಸಂವೇದಕಗಳು", ಡ್ರಿಮ್‌ಲ್ಯಾಂಡ್‌ ರೆಸಾರ್ಟ್‌
 24. "ಏರಿಯಾ 51ರ ಹೊಸ ರಸ್ತೆ ಸಂವೇದಕಗಳು‌", ಡ್ರಿಮ್‌ಲ್ಯಾಂಡ್‌ ರೆಸಾರ್ಟ್‌
 25. UTM 11 605181E 4124095Nಸ್ಥಳಕ್ಕಾಗಿ (NAD27) (ಮ್ಯಾಪ್ ವಯಾ TopoQuest.com) USGS 1:24K/25K ಟೊಪೊ ಭೂಪಟ[ಶಾಶ್ವತವಾಗಿ ಮಡಿದ ಕೊಂಡಿ]
 26. GROOM MINE, NVಭೂಬಿಂದುವಿಗಾಗಿ (ಮ್ಯಾಪ್ ವಯಾ TopoQuest.com) USGS 1:24K/25K ಟೊಪೊ ಭೂಪಟ
 27. "ವಿಮಾನನಿಲ್ದಾಣ ಮತ್ತು ಇಳಿದಾಣದ ಹಾದಿಗಳು, 2002" Archived 2011-01-04 ವೇಬ್ಯಾಕ್ ಮೆಷಿನ್ ನಲ್ಲಿ., ನೆವಡಾದ ಸಾರಿಗೆ ಇಲಾಖೆ, cf ವಿಭಾಗ R-4808N
 28. ಲಾಸ್‌ ವೇಗಾಸ್‌ ವಿ ವೈಮಾನಿಕ ನಕ್ಷೆ, ರಾಷ್ಟ್ರೀಯ ವೈಮಾನಿಕ ನಕ್ಷೆ ತಯಾರಿ ಕಛೇರಿ, ಫೆಡರಲ್‌ ಎವಿಯೆಷನ್‌ ಅಡ್ಮಿನಿಷ್ಟೇಷನ್‌ (26 ಸೆಪ್ಟಂಬರ್‌ 2008ರಂದು ಕೊನೆಯ ಬಾರಿ ಪರೀಕ್ಷಿಸಲಾಗಿದೆ)
 29. "ಫೆಡರಲ್‌ ಲ್ಯಾಂಡ್ಸ್‌ ಆಂಡ್‌ ಇಂಡಿಯನ್‌ ರಿಸರ್ವೆಷನ್ಸ್‌" Archived 2011-10-17 ವೇಬ್ಯಾಕ್ ಮೆಷಿನ್ ನಲ್ಲಿ., ದಿ ನ್ಯಾಷನಲ್ ಅಟ್ಲಾಸ್ ಆಫ್ ಯುನೈಟೆಡ್‌ ಸ್ಟೇಟ್ಸ್‌ ಆಫ್‌ ಅಮೆರಿಕ , ಯುನೈಟೆಡ್‌ ಸ್ಟೇಟ್ಸ್‌ನ ಆಂತರಿಕ ಇಲಾಖೆ, ದಾಖಲೆಯ ID: pagefed_nv7.pdf INTERIOR-GEOLOGICAL SURVEY, RESTON, VIRGINIA-2003
 30. "ಕರೋನಾ ಚಿತ್ರಿಕೆ". Archived from the original on 2008-09-12. Retrieved 2009-10-23.
 31. ಟೆರ್ರಾಸರ್ವರ್‌ ಚಿತ್ರಿಕೆ
 32. ೩೩.೦ ೩೩.೧ Stephen Regenold (2007-04-13). ""Lonesome Highway to Another World?"". New York Times. Retrieved 2007-07-08.
 33. Glenn Campbell (1994). "Secret Base Cheats Local Tax Rolls". The Groom Lake Desert Rat. Archived from the original on 2017-11-30. Retrieved 2007-07-08. In the 93-94 tax year, the Air Force paid taxes of $65,517 on a property assessment (for "Buildings and Improvements" plus "Other Personal Property") of $2,517,781. {{cite web}}: Unknown parameter |month= ignored (help)
 34. 1996ರ ಮಾರ್ಚ್‌ 17ರಂದು 60 ಮಿನಿಟ್ಸ್‌ ಪ್ರಸಾರಮಾಡಿದ "ಏರಿಯಾ 51 / ಕ್ಯಾಚ್‌ 22" Archived 2017-03-27 ವೇಬ್ಯಾಕ್ ಮೆಷಿನ್ ನಲ್ಲಿ. ಭಾಗ.
 35. ಫೆಡರಲ್‌ ಜಡ್ಜ್‌ಸ್‌ ಟು ಹಿಯರ್ ಕೇಸ್‌ ಇನ್‌ವಾಲ್ವಿಂಗ್‌ ಏರಿಯಾ 51 ಕೀಥ್‌ ರೋಜರ್ಸ್‌, ಲಾಸ್‌ ವೇಗಾಸ್‌ ರಿವ್ಯೂ-ಜರ್ನಲ್ , ಜೂನ್‌ 4, 2002
 36. ಕಸ್ಜಾ V ಬ್ರೌನರ್‌ ಮತ್ತು ಸಂಬಂಧಿತ ವಿಷಯ ಫ್ರಾಸ್ಟ್ V ಪೆರ್ರಿ, ಲೇಕ್, ವಿಡ್ನಲ್ ಕುರಿತು USನ 9ನೆಯ ಸಂಚಾರಿ ಪೀಠದ ಅಧಿಕೃತ ನಿರ್ಣಯ.
 37. 2000 ಅಧ್ಯಕ್ಷೀಯ ನಿರ್ಣಯ
 38. 2002 ಅಧ್ಯಕ್ಷೀಯ ನಿರ್ಣಯ
 39. 2003 ಅಧ್ಯಕ್ಷೀಯ ನಿರ್ಣಯ
 40. 21-Sun-2006/news/7488359.html "ವಾರ್ನಿಂಗ್ಸ್ ಫಾರ್‌ ಎಮರ್ಜೆನ್ಸಿ ರೆಸ್ಪಾಂಡರ್ಸ್‌ ಕೆಪ್ಟ್‌ ಫ್ರಮ್‌ ಏರಿಯಾ 51 ವರ್ಕರ್ಸ್‌", ಕೀಥ್‌ ರೋಜರ್ಸ್‌, ಲಾಸ್‌ ವೇಗಾಸ್‌ ರಿವ್ಯೂ-ಜರ್ನಲ್, ಮೇ 21, 2006
 41. Dwayne A. Day (January 9, 2006). "Astronauts and Area 51: the Skylab Incident". The Space Review. Retrieved 2006-04-02.
 42. Presidential Determination No. 2003-39
 43. "CIA memo to DCI Colby" (PDF). hosted by The Space Review. Retrieved 2006-04-02.
 44. Dwayne A. Day (26 November 2007). "Secret Apollo". The Space Review. Retrieved 2009-02-16.
 45. Mahood, Tom (1996). "The Cheshire Airstrip". Archived from the original on 2006-03-16. Retrieved 2006-04-02. {{cite web}}: Unknown parameter |month= ignored (help)
 46. ಡ್ರಿಮ್‌ಲ್ಯಾಂಡ್‌ , ಸ್ಕೈ ಟೆಲಿವಿಷನ್‌ಗಾಗಿರುವ ಟ್ರಾನ್ಸ್‌ಮಿಡಿಯಾ ಆಂಡ್‌ ಡೆಂಡಲಯನ್‌ ತಯಾರಿಕೆ‌ (1996).
 47. Sheaffer, Robert (2004). "Tunguska 1, Roswell 0". Skeptical Inquirer. Committee for Skeptical Inquiry. 28 (6). Archived from the original on 2009-03-13. Retrieved 2009-10-23. {{cite journal}}: Unknown parameter |month= ignored (help)
 48. Rinzler, J.W. (2008). The Complete Making of Indiana Jones. Random House. p. 249. ISBN 9780091926618. {{cite book}}: Unknown parameter |coauthors= ignored (|author= suggested) (help)

ಹೊರಗಿನ ಕೊಂಡಿಗಳು[ಬದಲಾಯಿಸಿ]

ಸಾಮಾನ್ಯ
ನಕ್ಷೆಗಳು ಮತ್ತು ಛಾಯಾಚಿತ್ರಗಳು

37°14′25″N 115°49′07″W / 37.240203°N 115.818558°W / 37.240203; -115.818558

"https://kn.wikipedia.org/w/index.php?title=ಏರಿಯಾ_51&oldid=1166941" ಇಂದ ಪಡೆಯಲ್ಪಟ್ಟಿದೆ