ಏಕ್ತಾ ಬಿಷ್ಟ್

ವಿಕಿಪೀಡಿಯ ಇಂದ
Jump to navigation Jump to search
ಎಕ್ತಾ ಬಿಷ್ಟ್
Ekta-bisht.jpg
ಎಕ್ತಾ ಬಿಷ್ಟ್
ವೈಯುಕ್ತಿಕ ಮಾಹಿತಿ
ಪೂರ್ಣ ಹೆಸರುಎಕ್ತಾ ಬಿಷ್ಟ್
ಜನನ (1986-02-08) 8 February 1986 (age 33)
ಅಲ್ಮೊರಾ, ಉತ್ತರಕಾಂಡ್, ಭಾರತ
ಬ್ಯಾಟಿಂ ಶೈಲಿಎಡಗೈ
ಬೌಲಿಂಗ್ ಶೈಲಿನಿಧಾನ ಗತಿಯ, ಸಾಂಪ್ರದಾಯಿಕ ಎಡಗೈ
International information
ದೇಶದ ಕಡೆ
ಓಡಿಐ ಚೊಚ್ಚಲ ಪಂದ್ಯ (cap 94)2 July 2011 v ಆಸ್ಟ್ರೇಲಿಯಾ
ಕೊನೆಯ ಓಡಿಐ16 September 2018 v ಶ್ರೀಲಂಕಾ
ಓಡಿಐ ಶರ್ಟ್ ನಂ.8
T20I debut23 June 2011 v ಆಸ್ಟ್ರೇಲಿಯಾ
ಕೊನೆಯ T20I10 June 2018 v ಬಾಂಗ್ಲಾದೇಶ
ದೇಶೀಯ ಟೀಮ್ ಮಾಹಿತಿ
ವರ್ಷಗಳುTeam
2012–presentರೇಲ್ವೇಸ್
ವೃತ್ತಿ ಅಂಕಿಅಂಶಗಳು
ಸ್ಪರ್ಧೆ WODI WT20I
ಪಂದ್ಯಗಳು 46 36
ಗಳಿಸಿದ ರನ್‌ಗಳು 139 37
ಬ್ಯಾಟಿಂಗ್ ಸರಾಸರಿ 9.92 4.62
100ಗಳು/50ಗಳು 0/0 0/0
ಅತ್ಯುತ್ತಮ ಸ್ಕೋರ್ 18* 15
ಬಾಲ್‌ಗಳು ಬೌಲ್ ಮಾಡಿದ್ದು 2523 745
ವಿಕೆಟ್ಗಳು 71 45
ಬೌಲಿಂಗ್ ಸರಾಸರಿ 20.64 14.84
5 ವಿಕೆಟ್‌ಗಳು (ಇನ್ನಿಂಗ್ಸ್) 2
10 ವಿಕೆಟ್‌ಗಳು (ಪಂದ್ಯ) n/a n/a
ಅತ್ಯುತ್ತಮ ಬೌಲಿಂಗ್ 5/08 4/21
ಕ್ಯಾಚುಗಳು/ಸ್ಟಂಪಿಂಗ್‌ಗಳು 8/– 6/–
ಮೂಲ: ESPNcricinfo, 24 July 2017

ಏಕ್ತಾ ಬಿಷ್ಟ್, ಓರ್ವ ಭಾರತೀಯ ಕ್ರಿಕೆಟ್ ಆಟಗಾರ್ತಿ. ಇವರು ಎಡಗೈ ಬ್ಯಾಟ್ಸಮನ್ ಹಾಗು ಎಡಗೈ ಲೆಗ್ ಸ್ಪಿನ್ ಬೌಲರ್.[೧]

ಆರಂಭಿಕ ಜೀವನ[ಬದಲಾಯಿಸಿ]

ಏಕ್ತಾ ಬಿಷ್ಟ್‌‌‍ರವರು ಫೆಬ್ರವರಿ ೦೮, ೧೯೮೬ರಂದು ಆಲ್ಮೋರ, ಉತ್ತರಾಖಂಡನಲ್ಲಿ ತಾರಾ ಬಿಷ್ಟ್ ಹಾಗು ಕುಂದನ್ ಸಿಂಗ್ ಬಿಷ್ಟ್ ದಂಪತಿಗೆ ಜನಿಸಿದರು. ತಂದೆ ಕುಂದನ್ ಸಿಂಗ್ ಬಿಷ್ಟ್ ೧೯೮೮ ರಲ್ಲಿ ಹವಾಲ್ದಾರನ ಸ್ಥಾನದಲ್ಲಿ ಭಾರತೀಯ ಸೈನ್ಯದಿಂದ ನಿವೃತ್ತರಾದರು. ಇವರಿಗೆ ಇಬ್ಬರು ಒಡಹುಟ್ಟಿದವರು. ತಮ್ಮ ಆರನೇ ವಯ್ಯಸ್ಸಿನಲ್ಲೆ ಇವರು ಕ್ರಿಕೆಟ್ ಆಡಲು ಪ್ರಾರಂಭಿಸಿದರು. ಇವರು ಗಂಡುಮಕ್ಕಳೊಂದಿಗೆ ಆಟವಾಡುತ್ತಿದ್ದರು. ಇವರು ಪುರುಷರ ತಂಡದಲ್ಲಿನ ಏಕೈಕ ಹುಡುಗಿಯಾಗಿ ಆಟವಾಡುತ್ತಿದ್ದದ್ದು ಬಹಳಷ್ಟು ಜನರ ಗಮನ ಸೆಳೆಯುತಿತ್ತು. ತಂದೆ ಕುಂದನ್ ಸಿಂಗ್ ಬಿಷ್ಟ್‌‌‍ರವರಿಗೆ ಕೇವಲ ೧,೫೦೦ ರೂಪಾಯಿ ಪೆನ್ಷನ್ ಸಿಗುತ್ತಿತ್ತು. ಆದರೂ ಮಗಳಿಗೆ ಪ್ರೋತ್ಸಾಹಿಸುವ ಸಲುವಾಗಿ ಇವರು ಒಂದು ಟೀ-ಸ್ಟಾಲನ್ನು ಶುರುಮಾಡಿದರು. ಏಕ್ತಾ ಬಿಷ್ಟ್‌ರವರು ಭಾರತೀಯ ಕ್ರಿಕೆಟ್ ತಂಡಕ್ಕೆ ಆಯ್ಕೆಯಾದಾಗ ಇವರಿಗೆ ಪ್ರಾಯೋಜಕರು ಲಭಿಸಿದರು, ಹಾಗೆ ಇವರ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತ ಬಂದಿತು.[೨]

ವೃತ್ತಿ ಜೀವನ[ಬದಲಾಯಿಸಿ]

ಪ್ರಥಮ ದರ್ಜೆ ಕ್ರಿಕೆಟ್[ಬದಲಾಯಿಸಿ]

ಏಕ್ತಾ ಬಿಷ್ಟ್‌‌‌ರವರು ೨೦೦೬ರಲ್ಲಿ ಉತ್ತರಾಖಂಡ ಕ್ರಿಕೆಟ್ ತಂಡದ ನಾಯಕಿಯಾಗಿದ್ದರು. ನಂತರ ೨೦೦೭ ರಿಂದ ೨೦೧೦ರ ವರೆಗೆ ಇವರು ಉತ್ತರ ಪ್ರದೇಶ ಕ್ರಿಕೆಟ್ ತಂಡಕ್ಕೆ ಸೇವೆ ಸಲ್ಲಿಸಿದರು.[೩]

ಅಂತರರಾಷ್ಟ್ರೀಯ ಕ್ರಿಕೆಟ್[ಬದಲಾಯಿಸಿ]

ಜೂನ್ ೨೩, ೨೦೧೧ರಂದು ಆಸ್ಟ್ರೇಲಿಯದಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ವಿರುದ್ದ ನಡೆದ ಟಿ-೨೦ ಸರಣಿಯ ಪಂದ್ಯದ ಮೂಲಕ ಏಕ್ತಾ ಬಿಷ್ಟ್‌‌‌ ಅಂತರರಾಷ್ಟ್ರೀಯ ಕ್ರಿಕೆಟ್ ಜಗತ್ತಿಗೆ ಪಾದಾರ್ಪನೆ ಮಾಡಿದರು.ನಂತರ ಜುಲೈ ೦೨, ೨೦೧೧ರಂದು ಆಸ್ಟ್ರೇಲಿಯದಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ವಿರುದ್ದ ನಡೆದ ಮೂರನೇ ಏಕದಿನ ಕ್ರಿಕೆಟ್ ಪಂದ್ಯದ ಮೂಲಕ ಇವರು ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್ಗೆ ಪಾದಾರ್ಪನೆ ಮಾಡಿದರು. ನಂತರ ಆಗಸ್ಟ್ ೧೩, ೨೦೧೪ರಲ್ಲಿ ಇಂಗ್ಲೆಂಡ್‌ನಲ್ಲಿ ಇಂಗ್ಲೆಂಡ್ ಕ್ರಿಕೆಟ್ ತಂಡದ ವಿರುದ್ಧ ನಡೆದ ಏಕೈಕ ಟೆಸ್ಟ್ ಕ್ರಿಕೆಟ್ ಪಂದ್ಯದ ಮೂಲಕ ಇವರು ಅಂತರರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ನಲ್ಲಿ ಪಾದಾರ್ಪಣೆ ಮಾಡಿದರು.[೪][೫][೬]

ಪಂದ್ಯಗಳು[ಬದಲಾಯಿಸಿ]

 • ಏಕದಿನ ಕ್ರಿಕೆಟ್ : ೫೨ ಪಂದ್ಯಗಳು[೭]
 • ಟೆಸ್ಟ್ ಕ್ರಿಕೆಟ್ : ೦೧ ಪಂದ್ಯಗಳು
 • ಟಿ-೨೦ ಕ್ರಿಕೆಟ್ : ೪೦ ಪಂದ್ಯಗಳು

ವಿಕೇಟ್‍ಗಳು[ಬದಲಾಯಿಸಿ]

 1. ಟಿ-೨೦ ಪಂದ್ಯಗಳಲ್ಲಿ : ೫೦
 2. ಟೆಸ್ಟ್ ಪಂದ್ಯಗಳಲ್ಲಿ : ೦೩
 3. ಏಕದಿನ ಪಂದ್ಯಗಳಲ್ಲಿ : ೭೯

ಉಲ್ಲೇಖಗಳು[ಬದಲಾಯಿಸಿ]

 1. https://www.cricbuzz.com/profiles/9080/ekta-bisht
 2. https://timesofindia.indiatimes.com/sports/cricket/icc-womens-world-cup-2017/dads-tea-stall-brewed-ekta-bishts-success-on-pitch/articleshow/59433469.cms
 3. https://timesofindia.indiatimes.com/sports/cricket/icc-womens-world-cup-2017/dads-tea-stall-brewed-ekta-bishts-success-on-pitch/articleshow/59433469.cms
 4. http://www.espncricinfo.com/series/8648/scorecard/500224/australia-women-vs-india-women-natwest-womens-t20-quadrangular-series-2011
 5. http://www.espncricinfo.com/series/8649/scorecard/500228/australia-women-vs-india-women-3rd-match-natwest-womens-quadrangular-series-2011
 6. http://www.espncricinfo.com/series/11662/scorecard/722387/england-women-vs-india-women-only-test-india-women-tour-of-england-2014
 7. http://www.espncricinfo.com/india/content/player/442048.html