ವಿಷಯಕ್ಕೆ ಹೋಗು

ಎ.ಪಿ.ಮಾಲತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಎ. ಪಿ. ಮಾಲತಿ
Born (1944-05-06) ೬ ಮೇ ೧೯೪೪ (ವಯಸ್ಸು ೮೦)
ಉತ್ತರ ಕನ್ನಡ ಭಟ್ಕಳದಲ್ಲಿ
Nationalityಭಾರತೀಯ
Occupationಲೇಖಕ
Years active1944–ಇಂದಿನವರೆಗೂ
Parent(s)ದಿ.ಗಣೇಶ ಕೃಷ್ಣ ಭಟ್ಟರು (ತಂದೆ)
ದಿ.ಕಾವೇರಿ(ತಾಯಿ)
Relativesಡಾ. ಎ .ಪಿ. ರಾಧಾಕೃಷ್ಣ (ಮಗ), ಎ. ಪಿ. ಲಲಿತ (ಮಗಳು)

ಶ್ರೀಮತಿ ಎ.ಪಿ.ಮಾಲತಿ ಅವರು ಕಳೆದ ಆರು ದಶಕಗಳಿಂದ ಕನ್ನಡ ಸಾಹಿತ್ಯರಂಗದಲ್ಲಿ ಸಣ್ಣ ಕಥೆ, ಕಾದಂಬರಿ, ಜೀವನ ಚರಿತ್ರ, ವಿಚಾರ ಸಾಹಿತ್ಯ ಕೃತಿಗಳಿಂದ ಕ್ರಿಯಾಶೀಲರಾದವರು. ಅರ್ಧಾಂಗಿ ಆಘಾತ, ಅನಿಶ್ಚಯ, ಅತೃಪ್ತೆ, ದೇವ, ತಿರುಗಿದ ಚಕ್ರ, ಮಂದಾರ, ಹಸಿರು ಚಿಗುರು, ಬದಲಾಗದವರು, ಕಾಡು ಕರೆಯಿತು, ವಕ್ರರೇಖೆ, ಅಲೋಕ ಮುಂತಾದ- ಇಪ್ಪತ್ತು ಕಾದಂಬರಿಗಳು-, ಸಂಜೆಬಿಸಿಲು ಮತ್ತು ವಸಂತದ ಹೂವುಗಳು - ಸಣ್ಣ ಕಥಾಸಂಕಲನ, ಸುಖದಹಾದಿ, ದಿವ್ಯಪಥ, ಸಂತೋಷದ ಹುಡುಕಾಟ, ಮಹಿಳೆ-ಪರಿವರ್ತನೆಯ ಹಾದಿಯಲ್ಲಿ, ಮಕ್ಕಳ ಪಾಲನೆ ಮುಂತಾದ - ಒಂಬತ್ತು ಲೇಖನ ಪುಸ್ತಕಗಳು, ಕಾರುಣ್ಯನಿಧಿ ಶ್ರೀಮಾತಾ ಶ್ರೀ ಶಾರದಾ ದೇವಿ, ಅನನ್ಯ ಅನುವಾದಕ ಅಹೋಬಲ ಶಂಕರ ಜೀವನಚರಿತ್ರೆಗಳು,- “ಕಾದಂಬರಿ ರಚನೆಯಲ್ಲಿ ಸ್ಟ್ರಕ್ಚರಲ್ ಮೆಥೆಡ್”-ಡಿಪ್ಲೋಮಾ ಪ್ರಬಂಧ, ಅಂಜನ ಕಾದಂಬರಿ-ಸಂಸ್ಕೃತಕ್ಕೆ ಅನುವಾದ, ಸ್ಮೃತಿಯಾನ ಆತ್ಮಚರಿತ್ರೆ ಇವರ ಪ್ರಮುಖ ಕೃತಿಗಳು. ಮಂದಾರ ಈ.ಟಿ.ವಿ ಯಲ್ಲಿ ಧಾರಾವಾಹಿಯಾಗಿ ಪ್ರಸಾರವಾಗಿವೆ. ಹಲವಾರು ಸಣ್ಣ ಕಥೆಗಳು ಮಲೆಯಾಳಂ, ತೆಲುಗಿಗೆ ಅನುವಾದಗೊಂಡು, ರೇಡಿಯೋ ನಾಟಕವಾಗಿ ಪ್ರಸಾರವಾಗಿವೆ.

ಇವರ ಸುಖದ ಹಾದಿ ಚಿಂತನ ಕೃತಿಗೆ ರಾಜ್ಯ ಸಾಹಿತ್ಯ ಅಕಾಡಮಿ ಪುಸ್ತಕ ಬಹುಮಾನ, ೨೦೦೬ ರಲ್ಲಿ ರಾಜ್ಯ ಸಾಹಿತ್ಯ ಅಕಾಡಮಿಯಿಂದ ಜೀವಮಾನದ ಸಾಹಿತ್ಯ ಸಾಧನೆಗೆ ಗೌರವ ಪ್ರಶಸ್ತಿ. ನಿರಂಜನ ಪ್ರಶಸ್ತಿ, ಕಥಾರಂಗಂ ಪ್ರಶಸ್ತಿ, ಸೂರಿ ವೆಂಕಟರಮಣ ಶಾಸ್ತ್ರೀ ಕರ್ಕಿ ಪ್ರಶಸ್ತಿ, ಭಾರ್ಗವ ಪ್ರಶಸ್ತಿ ಇನ್ನೂ ಹಲವಾರು ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇವರ ಅನೇಕ ಕಥೆ ಕಾದಂಬರಿಗಳಿಗೆ ನಿಯತಕಾಲಿಕ ಪತ್ರಿಕೆಗಳು ಏರ್ಪಡಿಸಿದ ಸ್ಪರ್ಧೆಗಳಲ್ಲಿ ಬಹುಮಾನ ಲಭ್ಯವಾಗಿದೆ. ಇವರ ಸಾಹಿತ್ಯದಲ್ಲಿ ಸಾಮಜಿಕ ಕಳಕಳಿ, ಮನೋವೈಜ್ಞಾನಿಕ ಚಿಂತನೆ, ಮಾನವ ಪರ ಗ್ರಹಿಸುವ ಶಕ್ತಿ, ಕ್ರೌರ್ಯ, ಹತಾಶೆ ಸೋಲಿನಲ್ಲೂ ಉತ್ಸಾಹದ ಜೀವನ್ಮುಖಿ ಧೋರಣೆ, ಸ್ತ್ರೀ ಪರ ಕಾಳಜಿ ಎದ್ದು ಕಾಣುವ ಅಂಶಗಳು. ಮಾಲತಿಯವರ ಹುಟ್ಟೂರು ಉತ್ತರಕನ್ನಡ ಜಿಲ್ಲೆ ಭಟ್ಕಳ. ತಂದೆ ಗಣೇಶ ಕೃಷ್ಣ ಭಟ್ಟ, ತಾಯಿ ಕಾವೇರಿ. ಪತಿ ಎ.ಪಿ.ಗೋವಿಂದಭಟ್ಟ. ಶೈಕ್ಷಣಿಕ ವಿದ್ಯಾಭ್ಯಾಸ ಹೊನ್ನಾವರ ಮತ್ತು ಧಾರವಾಡದಲ್ಲಿ. ವಿವಾಹದ ನಂತರ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಸಮೀಪ ಮರಿಕೆಯಲ್ಲಿ. ಕೃಷಿ ಜೀವನ. ಮಾವ ಎ.ಪಿ.ಸುಬ್ಬಯ್ಯನವರು ಆ ಕಾಲದ ಜಮೀನ್ದಾರರು. ಇಂಗ್ಲೀಷನ ಶ್ರೇಷ್ಟ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದವರು. ಅತ್ತಿಗೆ ಗಂಡ ಜಿ.ಟಿ.ನಾರಾಯಣ ರಾವ್ ವಿಜ್ಞಾನ ಲೇಖಕರು. ಮಗ ಡಾ.ಎ.ಪಿ. ರಾಧಾಕೃಷ್ಣ ಭೌತಶಾಸ್ತ್ರದ ಪ್ರಾಧ್ಯಾಪಕ, ವಿಜ್ಞಾನ ಲೇಖಕ, ಮಗಳು ಲಲಿತಾ ಎಂಎಸ್.ಸಿ ಎಂ.ಎಡ್ ಪದವೀಧರೆ, ಮೈಸೂರಲ್ಲಿ ಸ್ವಂತದ ಉದ್ಯಮಿ. ಮೂವರು ಮೊಮ್ಮಕ್ಕಳು.

ದೊಡ್ಡ ನಗರದಿಂದ ಪುತ್ತೂರಿನ ಹಳ್ಳಿಗೆ ಬಂದು ಸುದೀರ್ಘ ಸಾಹಿತ್ಯ ಕೃಷಿಯಲ್ಲಿ ನಿರತರಾದ ಮಾಲತಿಯವರು ಕೃಷಿ ಜೀವನ ಮತ್ತು ಸಾಹಿತ್ಯ ಕೃಷಿಯ ಸಮನ್ವಯ ಸಾಧಕಿ.

ಕರಾವಳಿಯ ಜನಪ್ರಿಯ ಕತೆಗಾರ್ತಿಯರಲ್ಲಿ ಒಬ್ಬರೆಂದು ಮಾಲತಿಯವರನ್ನು ಗುರುತಿಸಲಾಗಿದೆ. ತಮ್ಮ ಬರವಣಿಗೆಯ ಅಂತಃಶಕ್ತಿಯಿಂದ ತಾವೇ ತಾವಾಗಿ ಬೆಳಕಿಗೆ ಬಂದ ಮುಖ್ಯರಲ್ಲಿ ಮಾಲತಿಯವರೂ ಒಬ್ಬರು. ಅವರು ಎಲ್ಲದರಿಂದ ಮುಕ್ತರಾಗಿ ತಮ್ಮ ಬರಹದ ಲೋಕವನ್ನು ಕಟ್ಟಿದರು.

ಜನನ-ಜೀವನ

[ಬದಲಾಯಿಸಿ]

ಜನ್ಮ ದಿನಾಂಕ:-೧೯೪೪ ಮೇ ೬

ಜನ್ಮ ಸ್ಥಳ:-ಉತ್ತರ ಕನ್ನಡಜಿಲ್ಲೆಯ ಭಟ್ಕಳದಲ್ಲಿ

ತಂದೆ:- ದಿ.ಗಣೇಶ ಕೃಷ್ಣ ಭಟ್ಟರು - ಖಾದಿ ಗ್ರಾಮೋದ್ಯೋಗ ಇಲಾಖೆಯಲ್ಲಿ ಕರ್ನಾಟಕದ ವಿವಿದೆಡೆ ಉದ್ಯೋಗ ಸಲ್ಲಿಸಿ ಕೊನೆಗೆ ಮುಂಬಯಿಯಲ್ಲಿ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ನಿವೃತ್ತಿ ಹೊಂದಿದರು.

ತಾಯಿ:- ದಿ.ಕಾವೇರಿ

ಹುಟ್ಟು ಹೆಸರು:-ಮೋಹಿನಿ

ಪತಿ:- ಪುತ್ತೂರು ಸಮೀಪದ ಆರ್ಯಾಪುವಿನ ಎ. ಪಿ. ಗೋವಿಂದ ಭಟ್ಟರು

ಮಗ:- ಡಾ. ಎ .ಪಿ. ರಾಧಾಕೃಷ್ಣ - ಪುತ್ತೂರಿನ ಸೈಂಟ್ ಫಿಲೋಮಿನಾ ಕಾಲೇಜಿನಲ್ಲಿ ಭೌತಶಾಸ್ತ್ರ ಪ್ರಾಧ್ಯಾಪಕರು ಹಾಗೂ ಕನ್ನಡದ ವಿಜ್ಞಾನ ಲೇಖಕ

ಮಗಳು:-ಎ. ಪಿ. ಲಲಿತ - ವಿವಾಹವಾಗಿ ಮೈಸೂರಿನಲ್ಲಿ ನೆಲೆಸಿದ್ದಾರೆ.

ವಿದ್ಯಾಭ್ಯಾಸ:- ಪಿಯುಸಿ, ಡಿಪ್ಲೋಮಾ ಪದವಿ - 'ಕನ್ನಡ ಕಾದಂಬರಿ ರಚನೆಯಲ್ಲಿ ಸ್ಟ್ರಕ್ಚರಲ್ ಮೆಥೆಡ್' ಈ ವಿಷಯದಲ್ಲಿ ಬರೆದ ಸಂಶೋಧನಾ ಪ್ರಬಂಧಕ್ಕೆ ಕರ್ನಾಟಕ ಹರಿದಾಸ ಸೈಂಟಿಫಿಕ್ ರೀಸರ್ಚ್ ಸೆಂಟರ್ ಬೆಂಗಳೂರಿನಿಂದ ೨೦೧೧ರಲ್ಲಿ ಡಿಪ್ಲೋಮಾ ಪದವಿ.

ಕಾದಂಬರಿಗಳು

[ಬದಲಾಯಿಸಿ]
ಕೃತಿ ಇಸವಿ
ಅರ್ಧಾಂಗಿ ೧೯೭೩
ಆಘಾತ ೧೯೭೫
ಅತೃಪ್ತೆ ೧೯೭೮
ಅನಿಶ್ಚಯ ೧೯೭೮
ಹೊಸಹೆಜ್ಜೆ ೧೯೭೯
ಸರಿದ ತೆರೆ ೧೯೮೦
ಅಲೋಕ ೧೯೮೧
ಪುನರ್ಮಿಲನ ೧೯೮೧
ಬದಲಾಗದವರು ೧೯೮೪
ಮಿನುಗಿದ ಚುಕ್ಕೆ ೧೯೮೪
ತಿರುಗಿದ ಚಕ್ರ ೧೯೮೫
ದೇವ ೧೯೮೫
ನೂಪುರಗಾನ ೧೯೮೬
ಮಂದಾರ ೧೯೮೭
ಅಂಜನಾ ೧೯೮೭
ವಕ್ರರೇಖೆ ೧೯೯೩
ಕಾಡು ಕರೆಯಿತು ೧೯೯೩
ಪುಣ್ಯದ ಎಣ್ಣೆ ೧೯೯೪
ಖಾಲಿಮನೆ ೧೯೯೮
ಹಸಿರು ಚಿಗುರು ೨೦೦೮

ಇತರ ಕೃತಿಗಳು

[ಬದಲಾಯಿಸಿ]
  1. ಗ್ರಾಮೀಣ ಮಹಿಳೆಯರು-೧೯೭೫
  2. ಹಳ್ಳಿಗೆ ಬಂದ ಎಳೆಯರು-೧೯೮೦
  3. ಸುಖದ ಹಾದಿ-೧೯೮೧
  4. ಮಹಿಳೆ-ಸಮಾಜ ಕಲ್ಯಾಣ-೧೯೮೬
  5. ಮಕ್ಕಳ ಪಾಲನೆ-೧೯೯೦
  6. ದಿವ್ಯಪಥ-೧೯೯೦
  7. ಸಮಯದ ಸದುಪಯೋಗ-೧೯೯೪
  8. ಸಂತೋಷದ ಹುಡುಕಾಟ-೨೦೧೨

ಜೀವನ ಚರಿತ್ರೆ

[ಬದಲಾಯಿಸಿ]
  1. ಕಾರುಣ್ಯನಿಧಿ ಶ್ರೀ ಮಾತೆ ಶ್ರೀಶಾರದಾದೇವಿ
  2. ಅನನ್ಯ ಅನುವಾದಕ ಶ್ರೀ ಅಹೋಬಲಶಂಕರ

ಸಣ್ಣಕಥಾ ಸಂಕಲನಗಳು

[ಬದಲಾಯಿಸಿ]
  1. ವಸಂತದ ಹೂವುಗಳು-೧೯೯೮
  2. ಸಂಜೆ ಬಿಸಿಲು-೨೦೦೪

ಸಣ್ಣ ಕಥೆಗಳು

[ಬದಲಾಯಿಸಿ]
  1. ತಿರುವು
  2. ಮಾನ ತೆಗೆದ ಉಡುಪು
  3. ರಕ್ಷಣೆ
  4. ಮುದಿನಾಯಿ
  5. ಮನೆಮಗಳು
  6. ಅವನು ಮತ್ತು ಮಗ
  7. ಹೊಣೆ
  8. ಕೊರಮನ ಹೆಂಡತಿ
  9. ಚಿನ್ನದ ಬಳೆಗಳು
  10. ನಿರ್ಮಲ
  11. ಕಲ್ಲು ಕರಗಿತು
  12. ಅತೃಪ್ತ ಆತ್ಮಗಳು
  13. ಇಲ್ಲದವರು
  14. ವಿಶ್ವಾಸ
  15. ಅಪವಾದ
  16. ಬೆಳಕು
  17. ಅರ್ಹತೆ

ಪತ್ರಿಕೆ ಮತ್ತು ವಿಶೇಷ ಸಂಚಿಕೆಯ ಬಿಡಿ ಲೇಖನಗಳು

[ಬದಲಾಯಿಸಿ]
  1. ಪರಿವರ್ತನೆಯ ಹಾದಿಯಲ್ಲಿ ಮಹಿಳೆ
  2. ಶಿಕ್ಷಣದಲ್ಲಿ ಹೆತ್ತವರ ಪಾತ್ರ
  3. ಮಕ್ಕಳ ಆಟಪಾಠಗಳು-೧೯೯೭
  4. ಕೃಷಿ ಜೀವನ ಜಿಗುಪ್ಸೆ ಯಾಕೇ?
  5. ಕೃಷಿ ಸಂಸ್ಕೃತಿಯ ಉಳಿವಿನಲ್ಲಿ ಸಾಹಿತ್ಯದ ಪಾತ್ರ
  6. ಹವ್ಯಕ ಮಹಿಳೆಯರಲ್ಲಿ ಇತ್ತೀಚೆಗೆ ಆದ ಬದಲಾವಣೆ
  7. ಹವ್ಯಕೇತರರೊಂದಿಗೆ ಹೆಚ್ಚುತ್ತಿರುವ ವಿವಾಹ ಬಾಂಧವ್ಯ -ನವಂಬರ್ ೨೦೦೪
  8. ಹವ್ಯಕ ಸಂಪ್ರದಾಯದ ಉಳಿವಿನಲ್ಲಿ ಮಹಿಳೆಯರ ಪಾತ್ರ
  9. ವಿವಾಹ ವಿಚ್ಛೇದನೆ - ಒಂದು ಚಿಂತನೆ - ಡಿಸೆಂಬರ್ ೨೦೦೪
  10. ಗಣೇಶೋತ್ಸವ ಸಾಂಸ್ಕೃತಿಕ ಚಿಂತನೆ - ೨೦೦೭
  11. ಮಹಿಳೆ - ಸಮಾಜ ಸ್ವಾಸ್ಥ್ಯ - ೨೦೦೮
  12. ಸಾಹಿತ್ಯ ದೃಷ್ಟಿ-ಸೃಷ್ಟಿ - ೨೦೧೪
  13. ಅಜ್ಜಿ, ತಾಯಿ, ಮಗಳು - ಅಭಿವ್ಯಕ್ತಿಯ ಚೌಕಟ್ಟುಗಳು - ೨೦೧೫
  14. ಫಣಿಯಮ್ಮ - ೨೦೧೫
  15. ಸ್ವಾವಲಂಬನೆಯ ಹಾದಿಯಲ್ಲಿ ಮಹಿಳೆ
  16. ಧಾವಂತದ ಬದುಕು
  17. ಮಹಿಳೆಯರು ಎದುರಿಸುತ್ತಿರುವ ಸವಾಲುಗಳು
  18. ಡಾ.ಶಿವರಾಮ ಕಾರಂತರು - ಒಂದು ನೆನಪು
  19. ಪುತ್ತೂರಿನಲ್ಲಿ ಕರಾವಳಿ ಲೇಖಕಿ ವಾಚಕಿಯರ ಸಂಘ ಮತ್ತು ಉತ್ತರ ಕರ್ನಾಟಕ ಲೇಖಕಿಯರ ಸಂಘಗಳ ಸಮ್ಮಿಲನ - ಉದಯವಾಣಿ ಲೇಖನ
  20. ನವರಾತ್ರೆಯ ರಂಗು
  21. ದೀಪಾವಳಿ- ಬೆಳಕಿನ ಹಬ್ಬ

ಪ್ರಶಸ್ತಿಗಳು

[ಬದಲಾಯಿಸಿ]
  1. 'ಸುಖದ ಹಾದಿ' ಕೃತಿಗೆ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡಮಿ ಬಹುಮಾನ. ಈ ಕೃತಿ ಈಗಾಗಲೇ ಮೂರು ಬಾರಿ ಮುದ್ರಣಗೊಂಡಿದೆ.[]
  2. "ಅನಿಶ್ಚಯ" ಕಾದಂಬರಿಗೆ ೧೯೭೮ರಲ್ಲಿ ಕನ್ನಡ ಸಾಹಿತ್ಯ ಪರಿಷತ್ ನಿಂದ ಬಹುಮಾನ ಲಭಿಸಿದೆ[][]
  3. "ಅನಿಶ್ಚಯ" ಕಾದಂಬರಿಗೆ ತಮ್ಮನರಾವ್ ಅಮ್ಮಿನಭಾವಿ ಸ್ಮಾರಕ ಗ್ರಂಥ ಬಹುಮಾನ
  4. 'ಕಾಡು ಕರೆಯಿತು' ಕಾದಂಬರಿಗೆ ಮಾತೋಶ್ರೀ ರತ್ನಮ್ಮ ಹೆಗ್ಗಡೆ ಪ್ರಶಸ್ತಿ-೧೯೯೮[]
  5. 'ಖಾಲಿಮನೆ' ಕಾದಂಬರಿಗೆ ಮಾತೋಶ್ರೀ ರತ್ನಮ್ಮ ಹೆಗ್ಗಡೆ ಬಹುಮಾನ
  6. "ಸಂಜೆ ಬಿಸಿಲು" ಎಂಬ ಕಾದಂಬರಿಗೆ ೨೦೦೪ರಲ್ಲಿ ಕಥಾರಂಗಂ ಪ್ರಶಸ್ತಿ
  7. ‘ಗ್ರಾಮೀಣ ಮಹಿಳೆಯರು’ ಕೃತಿಗೆ ೧೯೭೬ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಬಹುಮಾನ
  8. ‘ಅನಿಶ್ಚಯ’ ಕಾದಂಬರಿಗೆ ಧಾರವಾಡಕರ್ನಾಟಕ ವಿದ್ಯಾವರ್ಧಕ ಸಂಘದ ಬಹುಮಾನ
  9. 'ಮಂದಾರ', 'ತಿರುಗಿದ ಚಕ್ರ', 'ವಕ್ರರೇಖೆ' ಕಾದಂಬರಿಗಳಿಗೆ - ವನಿತಾ ಮಾಸ ಪತ್ರಿಕೆ ನಡೆಸಿದ ಸ್ಪರ್ಧೆಗಳಲ್ಲಿ ಅನುಕ್ರಮವಾಗಿ ಪ್ರಥಮ ಮತ್ತು ದ್ವಿತೀಯ ಬಹುಮಾನಗಳು.
  10. ನಿಯತಕಾಲಿಕ ಪತ್ರಿಕೆಗಳ ಸಣ್ಣ ಕಥಾ ಸ್ಪರ್ಧೆಗಳಲ್ಲಿ ಅನೇಕ ಸಣ್ಣ ಕಥೆಗಳಿಗೆ ಪ್ರಥಮ, ದ್ವಿತೀಯ ಬಹುಮಾನ []
  11. ೨೦೦೬ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡಮಿಯಿಂದ ಜೀವಮಾನದ ಸಾಹಿತ್ಯ ಸಾಧನೆಗಾಗಿ ಗೌರವ ಪ್ರಶಸ್ತಿ
  12. ೨೦೧೩ರಲ್ಲಿ ಕರ್ಕಿ ವೆಂಕಟರಮಣಶಾಸ್ತ್ರೀ ಸೂರಿ ಪ್ರಶಸ್ತಿ
  13. ೧೯೯೪ರಲ್ಲಿ ಭಾರ್ಗವ ಪ್ರಶಸ್ತಿ, ಕೋದಂಡರಾಮ ದೇವಸ್ಥಾನ, ಹಿರೇಮಗಳೂರು

ಇತರ ಗೌರವಗಳು

[ಬದಲಾಯಿಸಿ]
  • ಕರಾವಳಿ ಲೇಖಿಕಿ ವಾಚಕಿಯರ ಸಂಘದ ಪ್ರಥಮ ಮಹಿಳಾ ಸಮ್ಮೇಳನದ ಸಮ್ಮೇಳನಾಧ್ಯಕ್ಷೆ - ೧೯೯೪
  • ಕರಾವಳಿ ಲೇಖಕಿ ವಾಚಕಿಯರ ಸಂಘದ ಅಧ್ಯಕ್ಷೆ ೨೦೦೯-೨೦೧೧
  • ಪುತ್ತೂರಿನ ಕೆದಂಬಾಡಿಯಲ್ಲಿ ನಡೆದ ೧೧ನೇ ಪುತ್ತೂರು ತಾಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆ - ೨೦೦೫
  • ಮಂಗಳೂರು ಗಣರಾಜ್ಯೋತ್ಸವ ಗೌರವ ಪ್ರಧಾನ
  • ಗೌರವಾರ್ಪಣೆ - ಡೋನ್ ಬಾಸ್ಕೋ ಕ್ಲಬ್, ಪುತ್ತೂರು ೧೯೯೨ರಲ್ಲಿ []
  • ಲಯನ್ಸ್, ರೋಟರಿ ಕ್ಲಬ್ ನಿಂದ ಸನ್ಮಾನ
  • ಧಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ 'ಗಡಿ ಗ್ರಾಮೀಣ ಪ್ರದೇಶದ ಸುವರ್ಣ ಭಾವೈಕ್ಯತೆ ಸಂಸ್ಕೃತಿ ಸಂಭ್ರಮ'ದಲ್ಲಿ ಗೌರವ ಸನ್ಮಾನ
  • ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನ
  • ವಸುಧಾ ಪ್ರತಿಷ್ಠಾನ ಉಪ್ಪಿನಂಗಡಿ ಗೌರವ ಸನ್ಮಾನ
  • 'ಇಲ್ಲದವರು' ಎಂಬ ಕಥೆ ಬೆಂಗಳೂರು ಆಕಾಶವಾಣಿಯಲ್ಲಿ ನಾಟಕದ ರೂಪದಲ್ಲಿ ಬಿತ್ತರಗೊಂಡಿದೆ.
  • 'ಸಂಜೆ ಬಿಸಿಲು' ಕಥಾಸಂಕಲನದ "ಯೋಗ" ಕಥೆಯನ್ನು ಲಕ್ಷ್ಮಣಾಚಾರ್ ಅವರುಮಲಯಾಳಂ ಭಾಷೆಗೆ ಅನುವಾದಿಸಿದ್ದಾರೆ
  • "ಅರ್ಹತೆ" ಕಥೆಯನ್ನು ಪ್ರಮೋದ ಕುಮಾರ ಲಕ್ಷ್ಮಣಾಚಾರ್ ಅವರು ತೆಲುಗುಗೂ ಅನುವಾದಿಸಿದ್ದಾರೆ
  • 'ದೇವ' ಕಾದಂಬರಿ ಮಂಗಳೂರು ಯುನಿವರ್ಸಿಟಿ ಪದವಿ ತರಗತಿಗೆ ಮತ್ತು ಕೊಟ್ಟಾಯಮ್ ಯುನಿವರ್ಸಿಟಿಯ ಪಿ.ಯು.ಸಿ.ಗೆ ಪಠ್ಯಪುಸ್ತಕವಾಗಿತ್ತು.
  • 'ಪ್ರೀತಿ' ಲೇಖನ ಇಂಗ್ಲೀಷಿಗೆ ಅನುವಾದ
  • 'ಅಂಜನಾ' ಕಾದಂಬರಿ ಸಂಸ್ಕೃತಕ್ಕೆ ಅನುವಾದ
  • 'ಮಂದಾರ' ಕಾದಂಬರಿ ಟೆಲಿಚಿತ್ರವಾಗಿ ಧಾರಾವಾಹಿ ರೂಪದಲ್ಲಿ 'ಈ ಟಿ.ವಿ.' ಯಲ್ಲಿ ಪ್ರಸಾರ
  • ಸಣ್ಣ ಕಥೆ, ಚಿಂತನ ಲೇಖನಗಳು ಮಂಗಳೂರು ಆಕಾಶವಾಣಿಯಲ್ಲಿ ಪ್ರಸಾರ
  • ಪುತ್ತೂರಿನ ಶಿವರಾಮ ಕಾರಂತ ಅಧ್ಯಯನ ಪೀಠದ ಕಮಿಟಿ ಸದಸ್ಯೆ
  • ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಹಿಳಾ ಪ್ರತಿನಿಧಿ
  • 'ಎ.ಪಿ.ಮಾಲತಿಯವರ ಕಾದಂಬರಿಗಳು ಒಂದು ಅಧ್ಯಯನ' ಈ ವಿಷಯದಲ್ಲಿ ಕಣ್ಣೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿನಿ ಸತ್ಯಭಾಮಾ ಇವರಿಗೆ ಎಂ.ಫಿಲ್ ಡಿಗ್ರಿ ಪ್ರಧಾನ
  • 'ಎ.ಪಿ.ಮಾಲತಿಯವರ ಕಾದಂಬರಿಗಳಲ್ಲಿ ಸ್ತ್ರೀಜಗತ್ತು' ಈ ವಿಷಯದಲ್ಲಿ ಸುಬ್ರಮಣ್ಯ ಪದವಿ ಕಾಲೇಜಿನ ಮೂಕಾಂಬಿಕ ಇವರಿಗೆ ಎಂ.ಫಿಲ್ ಡಿಗ್ರಿ ಪ್ರಧಾನ

ಉಲ್ಲೇಖ

[ಬದಲಾಯಿಸಿ]
  1. ಸಮನ್ವಯ ಸಾಹಿತ್ಯದ ಲೇಖಕಿ ಎ.ಪಿ.ಮಾಲತಿ, 'ನಾಡಿಗೆ ನಮಸ್ಕಾರ' ಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆ, ಡಾ.ಶೈಲಾ.ಯು, ಕನ್ನಡ ಸಂಘ, ಕಾಂತಾವರ, ೨೦೧೬, ಪು.೪೩-೪೪
  2. ಚಂದ್ರಗಿರಿ ,ನಾಡೋಜ ಡಾ ಸಾರ ಅಬೂಬಕ್ಕರ್ ಅಭಿನಂದನ ಗ್ರಂಥ,ಸಂಪಾದಕರು ಡಾ ಸಬಿಹ , ಸಿರಿವನ ಪ್ರಕಾಶನ ಬೆಂಗಳೂರು ,ಮೊದಲ ಮುದ್ರಣ- ೨೦೦೯, ಪುಟ ಸಂಖ್ಯೆ ೨೮೬
  3. kasapa.in/
  4. ಚಂದ್ರಗಿರಿ, ನಾಡೋಜ ಡಾ ಸಾರ ಅಬೂಬಕ್ಕರ್ ಅಭಿನಂದನಾ ಗ್ರಂಥ, ಸಂಪಾದಕರು ಡಾ ಸಬಿಹಾ, ಸಿರಿವನ ಪ್ರಕಾಶನ ಬೆಂಗಳೂರು, ಪುಟ ಸಂಖ್ಯೆ ೨೮೬
  5. ಸಮನ್ವಯ ಸಾಹಿತ್ಯದ ಲೇಖಕಿ ಎ.ಪಿ.ಮಾಲತಿ, 'ನಾಡಿಗೆ ನಮಸ್ಕಾರ' ಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆ, ಡಾ.ಶೈಲಾ.ಯು, ಕನ್ನಡ ಸಂಘ, ಕಾಂತಾವರ, ೨೦೧೬, ಪು.೪೩-೪೪
  6. ಸಮನ್ವಯ ಸಾಹಿತ್ಯದ ಲೇಖಕಿ ಎ.ಪಿ.ಮಾಲತಿ, 'ನಾಡಿಗೆ ನಮಸ್ಕಾರ' ಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆ, ಡಾ.ಶೈಲಾ.ಯು, ಕನ್ನಡ ಸಂಘ, ಕಾಂತಾವರ, ೨೦೧೬, ಪು.೪೩-೪೪