ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರ ಪಟ್ಟಿ ಕನ್ನಡ ಭಾಷೆ
Jump to navigation
Jump to search
ಕೇಂದ್ರ ಸರ್ಕಾರವು ೧೯೫೫ ರಲ್ಲಿ ಸಾಹಿತ್ಯ ಅಕಾಡೆಮೆಯನ್ನು ಸ್ಠಾಪಿಸತು. ಇದುವರೆಗೆ ೬೧ ಕನ್ನಡದ ಲೇಖಕರಿಗೆ ಈ ಪ್ರಶಸ್ತಿ ಲಬಿಸಿದೆ. ೧೯೫೭ ಹಾಗೂ ೧೯೬೩ ರಲ್ಲಿ ಪ್ರಶಸ್ತಿಯನ್ನು ಕೊಡಲಾಗಿಲ್ಲ.
ಭಾರತದ ೨೪ ಭಾಷೆಗಳಿಗೆ ಈ ಪ್ರಸಸ್ತಿಯನ್ನು ನೀಡಲಾಗುತ್ತಿದೆ. ಫಲಕವನ್ನು ಭಾರತ ರತ್ನ ಸತ್ಯಜಿತ್ ರೇ ಯವರು ನಿರ್ಮಿಸಿದರು.
೧೯೫೪ ರಲ್ಲಿ ಸ್ಥಾಪಿತವಾದ ಈ ಪ್ರಶಸ್ತಿಯು ಒಂದು ಪಲಕ ಮತ್ತು ೧೦೦,೦೦೦ ರೂಪಾಯಿ ನಗದು ಬಹುಮಾನವನ್ನು ಒಳಗೊಂಡಿದೆ.
ಭಾರತೀಯ ಬರವಣಿಗೆಯ ಶ್ರೇಷ್ಠತೆಯನ್ನು ಗುರುತಿಸಲು ಮತ್ತು ಉತ್ತೇಜಿಸುವುದಕ್ಕಾಗಿ ಮತ್ತು ಹೊಸ ಪ್ರವೃತ್ತಿಯನ್ನು ಅಂಗೀಕರಿಸಲು ಈ ಪ್ರಶಸ್ತಿಯ ಉದ್ದೇಶವಾಗಿದೆ.
ಸಾಹಿತ್ಯ ಅಕಾಡೆಮಿಯ ಅಂತರ್ಜಾಲವನ್ನು ಇಲ್ಲಿ ನೋಡಬಹುದು http://www.sahitya-akademi.gov.in/
ಸಂಖ್ಯೆ | ವರ್ಷ | ವಿಜೇತರು | ಬರಹಗಳು |
---|---|---|---|
೧ | ೧೯೫೫ | ಕುವೆಂಪು | ಶ್ರೀ ರಾಮಾಯಣ ದರ್ಶನಂ |
೨ | ೧೯೫೬ | ಆರ್.ಎಸ್ ಮುಗಳಿ | ಕನ್ನಡ ಸಾಹಿತ್ಯ ಚರಿತ್ರೆ |
೩ | ೧೯೫೮ | ದ. ರಾ ಬೇಂದ್ರೆ | ಅರಳು ಮರಳು |
೪ | ೧೯೫೯ | ಡಾ ಕೆ. ಶಿವರಾಮ ಕಾರಂತ | ಯಕ್ಷಗಾನ ಬಯಲಾಟ |
೫ | ೧೯೬೦ | ವಿ.ಕೃ ಗೋಕಾಕ್ | ದ್ಯಾವ ಪೃಥ್ವಿ |
೬ | ೧೯೬೧ | ಎ.ಅರ್ ಕೃಷ್ಣಶಾಸ್ತ್ರಿ | ಬೆಂಗಾಲಿ ಕಾದಂಬರಿಕಾರ ಬಂಕಿಮಚಂದ್ರ |
೭ | ೧೯೬೨ | ದೇವುಡು ನರಸಿಂಹ ಶಾಸ್ತ್ರಿ | ಮಹಾಕ್ಷತ್ರಿಯ |
೮ | ೧೯೬೪ | ಬಿ ಪುಟ್ಟಸ್ವಾಮಯ್ಯ | ಕ್ರಾಂತಿ ಕಲ್ಯಾಣ |
೯ | ೧೯೬೫ | ಎಸ್. ವಿ. ರಂಗಣ್ಣ | ರಂಗ ಬಿನ್ನಪ |
೧೦ | ೧೯೬೬ | ಪು. ತಿ. ನರಸಿಂಹಾಚಾರ್ | ಹಂಸ ದಮಯಂತಿ ಮತ್ತು ಇತರ ರೂಪಕಗಳು |
೧೧ | ೧೯೬೭ | ಡಿ. ವಿ. ಗುಂಡಪ್ಪ | ಶ್ರಿ ಮದ್ ಭಗದ್ಗೀತಾ ತಾತ್ಪರ್ಯ ಅಥವಾ ಜೀವನಧರ್ಮ ಯೋಗ |
೧೨ | ೧೯೬೮ | ಮಾಸ್ತಿ ವೆಂಕಟೇಶ ಅಯ್ಯಂಗಾರ್ | ಸಣ್ಣ ಕತೆಗಳು |
೧೩ | ೧೯೬೯ | ಎಚ್ ತಿಪ್ಪೇರುದ್ರಸ್ವಾಮಿ | ಕರ್ನಾಟಕ ಸಂಸ್ಕೃತಿ ಸಮೀಕ್ಷೆ |
೧೪ | ೧೯೭೦ | ಶಂ.ಬಾ.ಜೋಶಿ | ಕರ್ನಾಟಕ ಸಂಸ್ಕೃತಿಯ ಪೂರ್ವ ಪೀಠಿಕೆ |
೧೫ | ೧೯೭೧ | ಆದ್ಯ ರಂಗಚಾರ್ಯ | ಕವಿ ಕುಲಗುರು ಕಾಳಿದಾಸ |
೧೬ | ೧೯೭೨ | ಎಸ್. ಎಸ್. ಭೂಸನೂರಮಠ | ಶೂನ್ಯ ಸಂಪಾದನೆಯ ಪರಾಮರ್ಶೆ |
೧೭ | ೧೯೭೩ | ವಿ ಸೀತಾರಾಮಯ್ಯ | ಅರಲು ಬರಲು |
೧೮ | ೧೯೭೪ | ಗೋಪಾಲಕೃಷ್ಣ ಅಡಿಗ | ವರ್ಧಮಾನ |
೧೯ | ೧೯೭೫ | ಎಸ್.ಎಲ್ ಬೈರಪ್ಪ | ದಾಟು |
೨೦ | ೧೯೭೬ | ಎಮ್ ಶಿವರಾಮ್ | ಮನ ಮಂಥನ |
೨೧ | ೧೯೭೭ | ಕೆ ಎಸ್ ನರಸಿಂಹಸ್ವಾಮಿ | ತೆರೆದ ಬಾಗಿಲು |
೨೨ | ೧೯೭೮ | ಬಿ ಜಿ ಎಲ್ ಸ್ವಾಮಿ | ಹಸಿರು ಹೊನ್ನು |
೨೩ | ೧೯೭೯ | ಎ ಎನ್ ಮೂರ್ತಿರಾವ್ | ಚಿತ್ರಗಳು ಪತ್ರಗಳು |
೨೪ | ೧೯೮೦ | ಗೊರೂರು ರಾಮಸ್ವಾಮಿ ಅಯ್ಯಂಗಾರ್ | ಅಮೇರಿಕಾದಲ್ಲಿ ಗೊರೂರು |
೨೫ | ೧೯೮೧ | ಚನ್ನವೀರ ಕಣವಿ | ಜೀವ ಧ್ವನಿ |
೨೬ | ೧೯೮೨ | ಚದುರಂಗ | ವೈಶಾಖ |
೨೭ | ೧೯೮೩ | ಯಶವಂತ ಚಿತ್ತಾಲ | ಕತೆಯಾದಳು ಹುಡುಗಿ |
೨೮ | ೧೯೮೪ | ಜಿ ಎಸ್ ಶಿವರುದ್ರಪ್ಪ | ಕಾವ್ಯಾರ್ಥ ಚಿಂತನ |
೨೯ | ೧೯೮೫ | ಟಿ ಆರ್ ಸುಬ್ಬರಾವ್ | ದುರ್ಗಾಸ್ತಮಾನ |
೩೦ | ೧೯೮೬ | ವ್ಯಾಸರಾಯ ಬಲ್ಲಾಳ | ಬಂಡಾಯ |
೩೧ | ೧೯೮೭ | ಪೂರ್ಣಚಂದ್ರ ತೇಜಸ್ವಿ | ಚಿದಂಬರ ರಹಸ್ಯ |
೩೨ | ೧೯೮೮ | ಶಂಕರ ಮೊಕಾಶಿ ಪುಣೇಕರ | ಅವಧೇಶ್ವರಿ |
೩೩ | ೧೯೮೯ | ಹಾ ಮಾ ನಾಯಕ | ಸಂಪ್ರತಿ |
೩೪ | ೧೯೯೦ | ದೇವನೂರು ಮಹಾದೇವ | ಕುಸುಮಬಾಲೆ |
೩೫ | ೧೯೯೧ | ಚಂದ್ರಶೇಖರ ಕಂಬಾರ | ಸಿರಿಸಂಪಿಗೆ |
೩೬ | ೧೯೯೨ | ಸು. ರಂ. ಎಕ್ಕುಂಡಿ | ಬಕುಲದ ಹೂವುಗಳು |
೩೭ | ೧೯೯೩ | ಪಿ ಲಂಕೇಶ್ | ಕಲ್ಲು ಕರಗುವ ಸಮಯ ಮತ್ತು ಇತರ ಕತೆಗಳು |
೩೮ | ೧೯೯೪ | ಗಿರೀಶ್ ಕಾರ್ನಾಡ್ | ತಲೆದಂಡ |
೩೯ | ೧೯೯೫ | ಕೀರ್ತಿನಾಥ ಕುರ್ತಕೋಟಿ | ಉರಿಯುವ ನಾಲಗೆ |
೪೦ | ೧೯೯೬ | ಜಿ ಎಸ್ ಅಮೂರ | ಭುವನದ ಭಾಗ್ಯ |
೪೧ | ೧೯೯೭ | ಎಮ್ ಚಿದಾನಂದ ಮೂರ್ತಿ | ಹೊಸತು ಹೊಸತು |
೪೨ | ೧೯೯೮ | ಬಿ ಸಿ ರಾಮಚಂದ್ರ ಶರ್ಮ | ಸಪ್ತಪದಿ |
೪೩ | ೧೯೯೯ | ಡಿ ಆರ್ ನಾಗರಾಜ್ | ಸಾಹಿತ್ಯ ಕಥನ |
೪೪ | ೨೦೦೦ | ಶಾಂತಿನಾಥ ದೇಸಾಯಿ | ಓಂ ಣಮೋ |
೪೫ | ೨೦೦೧ | ಎಲ್ ಎಸ್ ಶೇಷಗಿರಿರಾವ್ | ಇಂಗ್ಲೀಷ್ ಸಾಹಿತ್ಯ ಚರಿತ್ರೆ |
೪೬ | ೨೦೦೨ | ಎಸ್ ನಾರಾಯಣ ಶೆಟ್ಟಿ | ಯುಗಸಂಧ್ಯಾ |
೪೭ | ೨೦೦೩ | ಕೆ ವಿ ಸುಬ್ಬಣ್ಣ | ಕವಿರಾಜ ಮಾರ್ಗ ಮತ್ತು ಕನ್ನಡ ಜಗತ್ತು |
೪೮ | ೨೦೦೪ | ಗೀತಾ ನಾಗಭೂಷಣ | ಬದುಕು |
೪೯ | ೨೦೦೫ | ರಾಘವೇಂದ್ರ ಪಾಟೀಲ | ತೇರು |
೫೦ | ೨೦೦೬ | ಎಮ್ ಎಮ್ ಕಲಬುರ್ಗಿ | ಮಾರ್ಗ ೪ |
೫೧ | ೨೦೦೭ | ಕುಂ.ವೀರಭದ್ರಪ್ಪ | ಅರಮನೆ |
೫೨ | ೨೦೦೮ | ಶ್ರೀನಿವಾಸ ಬಿ ವೈದ್ಯ | ಹಳ್ಳ ಬಂತು ಹಳ್ಳ |
೫೩ | ೨೦೦೯ | ವೈದೇಹಿ | ಕ್ರೌಂಚ ಪಕ್ಷಿಗಳು |
೫೪ | ೨೦೧೦ | ರಹಮತ್ ತರೀಕೆರೆ | ಕತ್ತಿಯಂಚಿನ ದಾರಿ |
೫೫ | ೨೦೧೧ | ಗೋಪಾಲಕೃಷ್ಣ ಪೈ | ಸ್ವಪ್ನ ಸಾರಸ್ವತ |
೫೬ | ೨೦೧೨ | ಎಚ್ ಎಸ್ ಶಿವಪ್ರಕಾಶ್ | ಮಬ್ಬಿನ ಹಾಗೆ ಕಣಿವೆಯಾಸಿ |
೫೭ | ೨೦೧೩ | ಸಿ ಎನ್ ರಾಮಚಂದ್ರನ್ | ಆಖ್ಯಾನ-ವ್ಯಾಖ್ಯಾನ |
೫೮ | ೨೦೧೪ | ಜಿ ಎಚ್ ನಾಯಕ್ | ಉತ್ತರಾರ್ಧ |
೫೯ | ೨೦೧೫ | ಕೆ ವಿ ತಿರುಮಲೇಶ್ | ಅಕ್ಷಯ ಕಾವ್ಯ |
೬೦ | ೨೦೧೬ | ಬೊಳುವಾರು ಮಹಮದ್ ಕುಂಞ | ಸ್ವಾತಂತ್ರ್ಯದ ಓಟ |
೬೧ | ೨೦೧೭ | ಟಿ.ಪಿ.ಅಶೋಕ | ಕಥನ ಭಾರತಿ |
೬೨ | ೨೦೧೮ | ಕೆ.ಜಿ.ನಾಗರಾಜಪ್ಪ | ಅನುಶ್ರೇಣಿ-ಯಜಮಾನಿಕೆ |