ವಿಷಯಕ್ಕೆ ಹೋಗು

ಎಸ್.ಕೆ.ನಾಡಿಗ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ



ಪ್ರಸಿದ್ಧ ವ್ಯಂಗ್ಯಚಿತ್ರಕಾರರಾಗಿದ್ದ ಎಸ್.ಕೆ.ನಾಡಿಗ್, ತಮ್ಮ ವೃತ್ತಿಜೀವನವನ್ನು ಆರಂಭಿಸಿದ್ದು ಚಿತ್ರಗುಪ್ತ ವಾರಪತ್ರಿಕೆಯ ಉಪಸಂಪಾದಕರಾಗಿ. ಆ ಪತ್ರಿಕೆಗೆ ಎಸ್.ಕೆ.ನಾಡಿಗ್ ಹಾಗೂ ತಾಯಿನಾಡು ಪತ್ರಿಕೆಯ ಉಪಸಂಪಾದಕರಾಗಿದ್ದ ಹೆಚ್.ಆರ್.ನಾಗೇಶರಾವ್ 'ವಿನೋದ ವಿಹಾರ' ಎಂಬ ಸಾಪ್ತಾಹಿಕ ಅಂಕಣಕ್ಕೆ ಹಾಸ್ಯಲೇಖನಗಳನ್ನು ಬರೆಯುತ್ತಿದ್ದರು. ಮುಂದೆ ಭದ್ರಾವತಿಕಬ್ಬಿಣ ಮತ್ತು ಉಕ್ಕು ಕಾರ್ಖಾನೆಗೆ ಸೇರಿದ ನಂತರ ಬರವಣಿಗೆಯಿಂದ, ವ್ಯಂಗ್ಯಚಿತ್ರ ಕಲೆಯತ್ತ ಹೆಚ್ಚು ಆಸಕ್ತಿ ವಹಿಸಿದರು. ಸುಧಾ, ಕೊರವಂಜಿ, ವಿನೋದ, ಪ್ರಜಾವಾಣಿ, ಉದಯವಾಣಿ ಸೇರಿದಂತೆ ಕನ್ನಡದ ಬಹುತೇಕ ಪತ್ರಿಕೆಗಳಿಗೆ ವ್ಯಂಗ್ಯಚಿತ್ರ ರಚಿಸಿರುವ ನಾಡಿಗ್ ಅವರು, ವ್ಯಂಗ್ಯಚಿತ್ರಕಾರರ ಸಂಘಟನೆಯಲ್ಲಿ ಮಹತ್ತರ ಪಾತ್ರ ವಹಿಸಿದ್ದರು. ನೋಡಿದ ಕೂಡಲೇ "ಇದು ನಾಡಿಗ್ ಅವರದೇ" ಎನ್ನುವಂತಹ ಛಾಪು ನಾಡಿಗ್ ಅವರ ಚಿತ್ರಗಳಲ್ಲಿ ಕಾಣುತ್ತವೆ. "ನಾಡಿಗ್" ಅವರ ವ್ಯಂಗ್ಯಚಿತ್ರಗಳು ತಮ್ಮ ನವಿರಾದ ಹಾಸ್ಯಕ್ಕೆ ಹೆಸರಾದವು. ಬಡ ಬೋರೇಗೌಡನಿಗೆ ವೈದ್ಯರು "ನೀನು ಬಾದಾಮಿ, ಗೋಡಂಬಿ ಇವನ್ನೆಲ್ಲಾ ತಿನ್ನಲೇ ಬಾರದು" ಎಂಬ ಸಲಹೆ ನೀಡುವುದು, ಬಸ್ ನಿರ್ವಾಹಕ ಬಡ ಬೋರೇಗೌಡನಿಗೆ "ಮುಂದಿನ ಸೀಟಿನಲ್ಲಿ ಕೂತುಕೋ, ನೀನು ಬೇಗ ಹಳ್ಳಿ ತಲುಪುತ್ತೀಯಾ" ಎಂದು ಸೂಚಿಸುವುದೂ ಇವರ ಲಘು ಹಾಸ್ಯಕ್ಕೆ ಎರಡು ಉದಾಹರಣೆಗಳು. ವಿಡಂಬನಾತ್ಮಕ ಕಾದಂಬರಿಗಳ ಜತೆಗೆ ಐತಿಹಾಸಿಕ ಕಾದಂಬರಿಯನ್ನು ಕನ್ನೇಶ್ವರ ರಾಮ ಅವರು ರಚಿಸಿದ್ದಾರೆ. ಇವರ ಕನ್ನೇಶ್ವರ ರಾಮ ಚಲನಚಿತ್ರವಾಗಿಯೂ ಜನಪ್ರಿಯಗೊಂಡಿತು; ಈ ಚಲನಚಿತ್ರವನ್ನು ಶ್ರೀ ಎಂ.ಎಸ್. ಸತ್ಯು ಅವರು ನಿರ್ದೇಶಿಸಿದರು ಮತ್ತು ಕನ್ನೇಶ್ವರ ರಾಮನ ಪಾತ್ರದಲ್ಲಿ ಅನಂತನಾಗ್ ಕಾಣಿಸಿಕೊಂಡರು.

ಪ್ರಕಟಿತ ಕೃತಿಗಳು

[ಬದಲಾಯಿಸಿ]