ಎಮು
ಎಮು Temporal range: Paleocene - present
| |
---|---|
Conservation status | |
Scientific classification | |
ಸಾಮ್ರಾಜ್ಯ: | Animalia
|
ವಿಭಾಗ: | Chordata
|
ವರ್ಗ: | |
ಗಣ: | |
ಕುಟುಂಬ: | |
ಕುಲ: | |
ಪ್ರಜಾತಿ: | D. novaehollandiae
|
Binomial name | |
Dromaius novaehollandiae | |
Sub-species | |
D. novaehollandiae novaehollandiae (Latham, 1790)[೩] | |
The Emu has been recorded in the areas shown in pink. | |
Synonyms | |
Dromiceius novaehollandiae |
ಎಮು (pronounced /ˈiːmjuː/[೪][೫]) ಅಥವಾ ಡ್ರೊಮೈಯಸ್ ನೊವೇಹೊಲ್ಯಾಂಡಿಯೇ ಎಂಬ ಶಾಸ್ತ್ರೀಯ ಹೆಸರಿನಿಂದ ಕರೆಯಲ್ಪಡುವ ಪಕ್ಷಿಯು ಆಸ್ಟ್ರೇಲಿಯಾ ಮೂಲದ ಒಂದು ಅತ್ಯಂತ ದೊಡ್ಡ ಪಕ್ಷಿಯಾಗಿದೆ ಮತ್ತು ಡ್ರೊಮೈಯಸ್ ಕುಲಕ್ಕೆ ಸೇರಿರುವ ಏಕೈಕ ಉಪಲಬ್ಧ ಸದಸ್ಯನಾಗಿದೆ. ಎತ್ತರದ ಆಧಾರದಲ್ಲಿ ಹೇಳುವುದಾದರೆ, ಇದು ವಿಶ್ವದಲ್ಲಿನ ಎರಡನೇ-ಅತಿದೊಡ್ಡ ಉಪಲಬ್ಧ ಪಕ್ಷಿಯಾಗಿದ್ದು, ತನ್ನ ಹಾರಲಾಗದ ಸಂಬಂಧಿಯಾದ ಉಷ್ಟ್ರಪಕ್ಷಿಯ ನಂತರದ ಸ್ಥಾನವನ್ನು ಆಕ್ರಮಿಸಿಕೊಂಡಿದೆ. ಮೃದುವಾದ-ಗರಿಯನ್ನು ಹೊಂದಿರುವ, ಕಂದು ಬಣ್ಣದ ಈ ಹಾರಲಾರದ ಪಕ್ಷಿಯು .....2 metres (6.6 ft)ನಷ್ಟು ಎತ್ತರದವರೆಗೆ ಬೆಳೆಯುತ್ತದೆ. ಎಮು ಪಕ್ಷಿಯು ಹೆಚ್ಚು ಜನಸಾಂದ್ರತೆಯಿರುವ ಪ್ರದೇಶಗಳು, ದಟ್ಟ ಕಾಡು, ಮತ್ತು ಬಂಜರು ಅಥವಾ ಶುಷ್ಕ ಪ್ರದೇಶಗಳಿಂದ ದೂರವಾಗಿರುತ್ತದೆಯಾದರೂ, ಆಸ್ಟ್ರೇಲಿಯಾದ ಬಹುತೇಕ ಪ್ರಧಾನ ಭೂಭಾಗದಲ್ಲಿ ಇದು ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತದೆ.[೨] ಎಮು ಪಕ್ಷಿಗಳು ಹೆಚ್ಚೆಚ್ಚು ದೂರವನ್ನು ಅತೀವವಾದ ವೇಗದಲ್ಲಿ, ಒಪ್ಪವಾಗಿ ಬಳಕೆಮಾಡಿಕೊಳ್ಳುವ ಕುಕ್ಕುಲೋಟದಲ್ಲಿ ಕ್ರಮಿಸಬಲ್ಲವು ಮತ್ತು, ಒಂದು ವೇಳೆ ಅವಶ್ಯಕತೆ ಕಂಡುಬಂದಲ್ಲಿ, ಏಕಕಾಲಕ್ಕೆ ಗಂಟೆಗೆ 50 ಕಿಮೀಗಳಷ್ಟು (ಗಂಟೆಗೆ 31 ಮೈಲಿಗಳು) ವೇಗದಲ್ಲಿ ನಿಗದಿತ ದೂರವನ್ನು ಪೂರ್ಣವೇಗದಲ್ಲಿ ಓಡಬಲ್ಲವು.[೨] ಸಮಯಸಾಧಕತನದ ರೀತಿಯಲ್ಲಿ ಅಲೆಮಾರಿ ಸ್ವಭಾವವನ್ನು ಹೊಂದಿರುವ ಅವು, ಆಹಾರವನ್ನು ಹುಡುಕಿಕೊಂಡು ಬಹುದೂರದ ಪ್ರದೇಶಗಳವರೆಗೆ ಸಾಗಬಹುದು; ವೈವಿಧ್ಯಮಯ ಸಸ್ಯಗಳು ಹಾಗೂ ಕೀಟಗಳನ್ನು ಅವು ತಿಂದುಕೊಂಡು ಇರಬಲ್ಲವು. ಟಾಸ್ಮೇನಿಯಾದಲ್ಲಿ ವಾಸವಾಗಿದ್ದ ಎಮು ಉಪಜಾತಿಯು 1788ರಲ್ಲಿ ಆಸ್ಟ್ರೇಲಿಯಾದ ಐರೋಪ್ಯ ವಸಾಹತು ನೆಲೆಗೊಂಡ ನಂತರ ನಿರ್ನಾಮವಾದವು; ಮತ್ತು ಪ್ರಧಾನ ಭೂಭಾಗದ ಉಪಜಾತಿಯ ಹರಡಿಕೆಯು ಮಾನವರ ಚಟುವಟಿಕೆಗಳಿಂದ ಪ್ರಭಾವಕ್ಕೆ ಒಳಗಾಗುತ್ತಾ ಬಂದಿದೆ. ಹಿಂದೊಮ್ಮೆ ಪೂರ್ವ ತೀರದಲ್ಲಿ ಸಾಮಾನ್ಯವಾಗಿ ಕಂಡುಬರುತ್ತಿದ್ದ ಎಮು ಪಕ್ಷಿಗಳು ಈಗ ಅಪರೂಪವಾಗಿವೆ; ಅದಕ್ಕೆ ತದ್ವಿರುದ್ಧವಾಗಿ, ಆಸ್ಟ್ರೇಲಿಯಾ ಖಂಡದ ಒಳಭಾಗದಲ್ಲಿನ ಕೃಷಿಯ ಬೆಳವಣಿಗೆ ಮತ್ತು ಬೇಸಾಯದ ಪ್ರಾಣಿಗಳಿಗಾಗಿ ಮಾಡಲಾಗುತ್ತಿರುವ ನೀರಿನ ವ್ಯವಸ್ಥೆಯಿಂದಾಗಿ ಬಂಜರು ಪ್ರದೇಶ ಅಥವಾ ಶುಷ್ಕ ಪ್ರದೇಶಗಳಲ್ಲಿ ಎಮುವಿನ ಶ್ರೇಣಿಯು ಹೆಚ್ಚಾಗಲು ಕಾರಣವಾಗಿದೆ. ಎಮುಗಳನ್ನು ಅವುಗಳ ಮಾಂಸ, ತೈಲ, ಮತ್ತು ಚರ್ಮಕ್ಕಾಗಿ ಸಾಕಣೆ ಮಾಡಲಾಗುತ್ತದೆ.
ಜೀವಿವರ್ಗೀಕರಣ ಶಾಸ್ತ್ರ ಮತ್ತು ಹರಡಿಕೆ
[ಬದಲಾಯಿಸಿ]ಸಂಖ್ಯೆ ಮತ್ತು ಪ್ರವೃತ್ತಿಗಳು [೬] | ||
ಸ್ಥಳ | ಸಂಖ್ಯೆ | ಪ್ರವೃತ್ತಿ |
ಆಸ್ಟ್ರೇಲಿಯಾ | 630,000 ದಿಂದ 725,000ರವರೆಗೆ | ಸ್ಥಿರ |
ಒಟ್ಟು | 630,000 ದಿಂದ 725,000ರವರೆಗೆ | ಸ್ಥಿರ |
1789ರಲ್ಲಿ ಪ್ರಕಟಗೊಂಡ ಅರ್ಥರ್ ಫಿಲಿಪ್‌ನ ವೋಯೇಜ್ ಟು ಬಾಟನಿ ಬೇ ಕೃತಿಯಲ್ಲಿನ ನ್ಯೂ ಹಾಲೆಂಡ್ ಕ್ಯಾಸವೇರಿ ಎಂಬ ಹೆಸರಿನಡಿಯಲ್ಲಿ ಎಮು ಮೊದಲು ವಿವರಿಸಲ್ಪಟ್ಟಿತು.[೭] ಆ ಸಮಯದಲ್ಲಿ ನ್ಯೂ ಹಾಲೆಂಡ್ ಎಂದು ಉಲ್ಲೇಖಿಸಲ್ಪಡುತ್ತಿದ್ದ, ಆಸ್ಟ್ರೇಲಿಯಾ ಪ್ರದೇಶದ ಸಿಡ್ನಿಗೆ ಸೇರಿದ ಮಾದರಿಯೊಂದರ ಮೇಲೆ ಸದರಿ ಜಾತಿಯ ಹೆಸರನ್ನು ಜಾನ್ ಲ್ಯಾಥಮ್ ಎಂಬ ಪಕ್ಷಿವಿಜ್ಞಾನಿ ಇರಿಸಿದ.[೨] ಫಿಲಿಪ್‌ನ ಪುಸ್ತಕದ ಕುರಿತಾಗಿ ಜತೆಗೂಡಿ ಕೆಲಸ ಮಾಡಿದ ಈತ, ಆಸ್ಟ್ರೇಲಿಯಾದ ಅನೇಕ ಪಕ್ಷಿ ಜಾತಿಗಳ ಹೆಸರುಗಳು ಹಾಗೂ ಅವುಗಳ ಮೊದಲ ವಿವರಣೆಗಳನ್ನು ಒದಗಿಸಿದ; ಇದರ ಹೆಸರು "ವೇಗದ-ಕಾಲನ್ನುಳ್ಳ ನ್ಯೂ ಹಾಲೆಂಡರ್" ಎಂಬುದಕ್ಕಿರುವ ಲ್ಯಾಟಿನ್ ಹೆಸರಾಗಿದೆ.[೮] ಎಮು ಎಂಬ ಸಾಮಾನ್ಯ ಹೆಸರಿನ ನಿಷ್ಪತ್ತಿಯು ಖಚಿತವಾಗಿ ತಿಳಿದಿಲ್ಲವಾದರೂ, ಬೃಹತ್ ಪಕ್ಷಿಗೆ ಸಂಬಂಧಿಸಿದ ಅರೇಬಿಕ್ ಪದವೊಂದರಿಂದ ಇದು ಬಂದಿರಬಹುದೆಂದು ಭಾವಿಸಲಾಗಿದೆ. ಆಸ್ಟ್ರೇಲಿಯಾ ಮತ್ತು ನ್ಯೂಗಿನಿಯಾದಲ್ಲಿನ ಸಂಬಂಧಿತ ಕ್ಯಾಸವೇರಿಯನ್ನು ವಿವರಿಸಲು ಇದೇ ಪದವು ಪೋರ್ಚುಗೀಸ್ ಪರಿಶೋಧಕರಿಂದ ನಂತರದಲ್ಲಿ ಬಳಸಲ್ಪಟ್ಟಿತು.[೯] ವಿಕ್ಟೋರಿಯಾದಲ್ಲಿ, ಎಮುವಿಗೆ ಸಂಬಂಧಿಸಿದ ಕೆಲವೊಂದು ಪದಗಳು ವಿಭಿನ್ನವಾಗಿದ್ದವು. ಜಾ ಜಾ ವುರ್ರುಂಗ್ ಭಾಷೆಯಲ್ಲಿ ಇದರ ಹೆಸರು ಬರ್ರಿಮಾಲ್ ಎಂದಾಗಿದ್ದರೆ, ಗುನಾಯ್ ಭಾಷೆಯಲ್ಲಿ ಮೈಯೌರ್ ಎಂದೂ, ಮತ್ತು ಜರ್ದ್ವಾದ್‌ಜಾಲಿ ಭಾಷೆಯಲ್ಲಿ ಕೌರ್ನ್ ಎಂದೂ ಇದಕ್ಕೆ ಹೆಸರಿತ್ತು.[೧೦] ಸಿಡ್ನಿಯ ತಗ್ಗುಪ್ರದೇಶಕ್ಕೆ ಸೇರಿದ ಇಯೊರಾ ಹಾಗೂ ದಾರುಗ್ ವಲಯಗಳ ಸ್ಥಳೀಯ ನಿವಾಸಿಗಳಿಗೆ ಇದು ಮುರಾವುಂಗ್ ಅಥವಾ ಬಿರಾಬಯಿನ್ ಎಂದೇ ಪರಿಚಿತವಾಗಿತ್ತು.[೧೧] ಎಮುವಿಗೆ ಸಂಬಂಧಿಸಿದಂತೆ 1816ರಲ್ಲಿ ತಾನು ನೀಡಿದ ಮೂಲ ವಿವರಣೆಯಲ್ಲಿ, ವಿಯೆಲ್ಲಾಟ್ ಎಂಬಾತ ಎರಡು ಜಾತಿವಾಚಕ ಹೆಸರುಗಳನ್ನು ಬಳಸಿದ; ಮೊದಲಿಗೆ ಅದು ಡ್ರೊಮಿಷಿಯಸ್ ಎಂದಾಗಿದ್ದರೆ, ನಂತರದ ಕೆಲ ಪುಟಗಳಲ್ಲಿ ಅದು ಡ್ರೊಮೈಯಸ್ ಎಂದಾಗಿತ್ತು. ಯಾವುದು ಸರಿಯಾದ ಹೆಸರು ಎಂಬುದರ ಕುರಿತಾಗಿ ಅಂದಿನಿಂದಲೂ ಇದು ಚರ್ಚೆಗೆ ಗ್ರಾಸವಾಗುತ್ತಲೇ ಬಂದಿದೆ; ಎರಡನೆಯ ಹೆಸರು ಹೆಚ್ಚು ನಿಖರವಾಗಿ ರೂಪುಗೊಂಡಿದೆಯಾದರೂ, ಜೀವಿವರ್ಗೀಕರಣ ಶಾಸ್ತ್ರದಲ್ಲಿನ ವಿಧ್ಯುಕ್ತ ಸಂಪ್ರದಾಯದ ಪ್ರಕಾರ, ಮೊದಲ ಹೆಸರು ಸ್ಪಷ್ಟವಾಗಿ ಒಂದು ಮುದ್ರಣದ ದೋಷವಾಗಿರದ ಹೊರತು ಸೂಕ್ತವಾಗಿ ಕಂಡುಬರುತ್ತದೆ.[೧೨] ಆಸ್ಟ್ರೇಲಿಯಾದ ಸರ್ಕಾರದ ಪ್ರಕಟಣೆಗಳೂ ಸೇರಿದಂತೆ ತೀರಾ ಆಧುನಿಕವಾದ ಪ್ರಕಟಣೆಗಳು[೧೩] ಡ್ರೊಮೈಯಸ್ ಎಂಬ ಹೆಸರನ್ನೇ ಬಳಸುತ್ತಿದ್ದು, ಡ್ರೊಮಿಷಿಯಸ್ ಎಂಬ ಹೆಸರನ್ನು ಒಂದು ಪರ್ಯಾಯ ಕಾಗುಣಿತವಾಗಿ ಉಲ್ಲೇಖಿಸುತ್ತವೆ.
ವರ್ಗೀಕರಣ
[ಬದಲಾಯಿಸಿ]ಎಮುಗಳ ಹತ್ತಿರದ ಸಂಬಂಧಿಗಳಾದ ಕ್ಯಾಸವೇರಿಗಳು, ಹಾರಲಾಗದ ಗಣವಾದ ಸ್ಟ್ರೂಥಿಯಾನಿಫಾರ್ಮೆಸ್‌ನಲ್ಲಿನ ಕ್ಯಾಸುಯೇರಿಡೇ ಕುಟುಂಬದಲ್ಲಿ ಸೇರಿಸಲ್ಪಡುವುದರೊಂದಿಗೆ ಎಮು ಪಕ್ಷಿಯು ವರ್ಗೀಕರಿಸಲ್ಪಟ್ಟಿತು. ಆದಾಗ್ಯೂ, ಕ್ಯಾಸುಯೇರಿಡೇ ಕುಟುಂಬವನ್ನು ಅವುಗಳ ಸ್ವಂತ ಗಣವಾದ ಕ್ಯಾಸುಯೇರಿಫಾರ್ಮೆಸ್ ಎಂಬುದಾಗಿ ವಿಭಜಿಸುವ ಮೂಲಕ ಒಂದು ಪರ್ಯಾಯ ವರ್ಗೀಕರಣವನ್ನು ಇತ್ತೀಚೆಗಷ್ಟೇ ಅಂಗೀಕರಿಸಲಾಗಿದೆ. ಐರೋಪ್ಯ ವಸಾಹತುವು ನೆಲೆಗಾಣುವುದಕ್ಕೆ ಮುಂಚಿತವಾಗಿ ಮೂರು ವಿಭಿನ್ನ ಡ್ರೊಮೈಯಸ್ ಜಾತಿಗಳು ಆಸ್ಟ್ರೇಲಿಯಾದಲ್ಲಿ ಸಾಮಾನ್ಯವಾಗಿದ್ದವು, ಮತ್ತು ಅವುಗಳಲ್ಲಿ ಒಂದು ಜಾತಿಯು ಪಳೆಯುಳಿಕೆಗಳಿಂದ ಅರಿಯಲ್ಪಟ್ಟಿದೆ. ಡ್ರೊಮೈಯಸ್ ಬೌದಿನಿಯಾನಸ್ ಮತ್ತು D. ಏಟರ್ ಎಂದು ಕರೆಯಲ್ಪಡುವ ಪುಟ್ಟ ಎಮುಗಳೆರಡೂ ಕೆಲವೇ ದಿನಗಳ ನಂತರದಲ್ಲಿ ನಿರ್ನಾಮವಾದವು; ಆದಾಗ್ಯೂ, D. ನೊವೇಹೊಲ್ಯಾಂಡಿಯೇ ಎಂಬ ಎಮು ಪಕ್ಷಿಯು ಸಾಮಾನ್ಯವಾಗಿ ಉಳಿದುಕೊಂಡಿದೆ. ಬಹುಮಟ್ಟಿಗೆ ಮಳೆಬೀಳುವಿಕೆಯನ್ನು ಅವಲಂಬಿಸಿರುವ ಎಮುಗಳ ಸಂಖ್ಯೆಯು ದಶಕದಿಂದ ದಶಕಕ್ಕೆ ಬದಲಾಗುತ್ತಲೇ ಬಂದಿದೆ; ಎಮು ಪಕ್ಷಿಗಳ ಸಂಖ್ಯೆ 625,000ದಿಂದ 725,000ರವರೆಗೆ ಇರಬಹುದೆಂದು ಅಂದಾಜಿಸಲಾಗಿದ್ದು, ಈ ಪೈಕಿ 100,000ದಿಂದ 200,000ದವರೆಗಿನ ಎಮುಗಳು ಪಶ್ಚಿಮ ಆಸ್ಟ್ರೇಲಿಯಾದಲ್ಲಿದ್ದರೆ, ಉಳಿದ ಎಮುಗಳು ಬಹುಮಟ್ಟಿಗೆ ನ್ಯೂ ಸೌತ್ ವೇಲ್ಸ್ ಮತ್ತು ಕ್ವೀನ್ಸ್‌ಲೆಂಡ್‌ನಲ್ಲಿ ನೆಲೆಗೊಂಡಿವೆ.[೯] ಟಾಸ್ಮೇನಿಯಾದ ಎಮು ಎಂದು ಹೆಸರಾಗಿರುವ D. ನೊವೇಹೊಲ್ಯಾಂಡಿಯೇ ಡೈಮೆನೆನ್ಸಿಸ್ ಎಂಬ ಒಂದು ಉಪಜಾತಿಯು 1865ರ ಸುಮಾರಿಗೆ ನಿರ್ನಾಮವಾಯಿತು. 20ನೇ ಶತಮಾನದ ಅವಧಿಯಲ್ಲಿ, ಟಾಸ್ಮೇನಿಯಾದ ಆಚೆಗಿರುವ ಮಾರಿಯಾ ದ್ವೀಪ ಮತ್ತು ದಕ್ಷಿಣ ಆಸ್ಟ್ರೇಲಿಯಾದ ಸಮೀಪದಲ್ಲಿರುವ ಕಾಂಗರೂ ದ್ವೀಪಗಳಿಗೆ ಎಮುಗಳು ಪರಿಚಯಿಸಲ್ಪಟ್ಟವು. ಕಾಂಗರೂ ದ್ವೀಪದ ಪಕ್ಷಿಗಳು ಅಲ್ಲಿ ಒಂದು ತಳಿ ಬೆಳೆಸುವಿಕೆ ಸಂಖ್ಯೆಯನ್ನು ನೆಲೆಗೊಳಿಸಿವೆ. ಮಾರಿಯಾ ದ್ವೀಪದಲ್ಲಿನ ಸದರಿ ಪಕ್ಷಿ ಸಂಕುಲದ ಸಂಖ್ಯೆಯು 1990ರ ದಶಕದ ಮಧ್ಯಭಾಗದಲ್ಲಿ ನಿರ್ನಾಮವಾಯಿತು. ಆಸ್ಟ್ರೇಲಿಯಾದಲ್ಲಿ ಮೂರು ಉಪಲಬ್ಧ ಉಪಜಾತಿಗಳು ಕಂಡುಬರುತ್ತವೆ:
- ಆಗ್ನೇಯ ಭಾಗದಲ್ಲಿ ಕಂಡುಬರುವ, D. ನೊವೇಹೊಲ್ಯಾಂಡಿಯೇ ನೊವೇಹೊಲ್ಯಾಂಡಿಯೇ ಉಪಜಾತಿ. ತಳಿ ಬೆಳೆಸುವಿಕೆಯ ಸಮಯದಲ್ಲಿ ಇವು ನಸುಬಿಳಿಯ ಗರಿಗಳ ಕತ್ತುನೆರಿಗೆಯನ್ನು ಹೊಂದಿರುತ್ತವೆ.
- ಉತ್ತರ ಭಾಗದಲ್ಲಿ ಕಂಡುಬರುವ D. ನೊವೇಹೊಲ್ಯಾಂಡಿಯೇ ವುಡ್‌ವರ್ಡಿ ಉಪಜಾತಿ. ಇದು ಸಣಕಲು ದೇಹ ಮತ್ತು ಮಸುಕಲು ಬಣ್ಣವನ್ನು ಹೊಂದಿರುತ್ತದೆ.
- ನೈರುತ್ಯ ಭಾಗದಲ್ಲಿ ಕಂಡುಬರುವ D. ನೊವೇಹೊಲ್ಯಾಂಡಿಯೇ ರಾತ್‌ಷಿಲ್ಡಿ ಉಪಜಾತಿ. ಇದು ಗಾಢವರ್ಣದಲ್ಲಿದ್ದು ತಳಿ ಬೆಳೆಸುವಿಕೆಯ ಅವಧಿಯಲ್ಲಿ ಯಾವುದೇ ಗರಿಗಳ ಕತ್ತುನೆರಿಗೆಯನ್ನು ಹೊಂದಿರುವುದಿಲ್ಲ.
ವಿಸ್ತೃತ ವಿವರಣೆ
[ಬದಲಾಯಿಸಿ]ಎಮುಗಳು ಬೃಹತ್ ಗಾತ್ರದ ಪಕ್ಷಿಗಳಾಗಿವೆ. ಅತಿ ದೊಡ್ಡ ಎಮುಗಳು .....150 to 190 centimetres (59–75 in)ವರೆಗಿನ ಎತ್ತರವನ್ನು, ಭುಜದ ಭಾಗದಲ್ಲಿ ...1 to 1.3 metres (3.3–4.3 ft)ರವರೆಗೆ ತಲುಪಬಲ್ಲವು. ಎಮುಗಳು ....ರಿಂದ ....18 and 48 kilograms (40 and 106 lb)ರವರೆಗೆ ತೂಗುತ್ತವೆ.[೨][೧೪][೧೫]
ಅವು ಪುಟ್ಟದಾದ, ಅವಶೇಷವಾಗಿರುವ ರೆಕ್ಕೆಗಳನ್ನು ಮತ್ತು ಒಂದು ಉದ್ದನೆಯ ಕತ್ತು ಹಾಗೂ ಕಾಲುಗಳನ್ನು ಹೊಂದಿರುತ್ತವೆ. ಗಂಟೆಗೆ 48 ಕಿಮೀಗಳಷ್ಟು (ಗಂಟೆಗೆ 30 ಮೈಲಿಗಳಷ್ಟು) ಉನ್ನತ ವೇಗದಲ್ಲಿ ಓಡಬಲ್ಲ ಅವುಗಳ ಸಾಮರ್ಥ್ಯವು, ಅತಿಶಯವಾಗಿ ವಿಶೇಷೀಕರಿಸಲ್ಪಟ್ಟ ಅಥವಾ ನಿರ್ದಿಷ್ಟ ಉದ್ದೇಶಕ್ಕಾಗಿ ಹೊಂದಾಣಿಕೆ ಮಾಡಲ್ಪಟ್ಟ ಅವುಗಳ ಶ್ರೋಣಿ ಕುಹರದ ಅವಯವ ಸ್ನಾಯುವ್ಯೂಹದಿಂದಾಗಿ ದಕ್ಕಿದೆ. ಅವುಗಳ ಪಾದಗಳು ಕೇವಲ ಮೂರು ಬೆರಳುಗಳನ್ನು ಹೊಂದಿವೆ ಮತ್ತು ಅದಕ್ಕನುಗುಣವಾಗಿ ಮೂಳೆಗಳು ಸಂಖ್ಯೆ ಹಾಗೂ ಸಂಬಂಧಿತ ಪಾದದ ಸ್ನಾಯುಗಳ ಸಂಖ್ಯೆಯೂ ತಗ್ಗಿಸಲ್ಪಟ್ಟದೆ. ಅಷ್ಟೇ ಅಲ್ಲ, ಅವು ಕೆಳಭಾಗದ ಕಾಲುಗಳ ಹಿಂಭಾಗದಲ್ಲಿ ಮೀನಖಂಡದ ಸ್ನಾಯುಗಳನ್ನು ಹೊಂದಿರುವ ಏಕೈಕ ಪಕ್ಷಿಗಳಾಗಿವೆ. ಎಮುಗಳ ಶ್ರೋಣಿ ಕುಹರದ ಅವಯವ ಸ್ನಾಯುಗಳು, ಹಾರುವ ಪಕ್ಷಿಗಳ ಹಾರುಸ್ನಾಯುಗಳ ರೀತಿಯಲ್ಲಿಯೇ ಒಟ್ಟಾರೆ ಪರಿಮಾಣ ದ್ರವ್ಯರಾಶಿಗೆ ಒಂದು ಕೊಡುಗೆಯನ್ನು ನೀಡುತ್ತವೆ.[೧೬] ಮೇಯುವುದಕ್ಕೆ ಅನುವಾಗುವಂತೆ ಅವು ಒಂದು ಮೃದುವಾದ ಕೊಕ್ಕನ್ನು ಹೊಂದಿವೆ.[೨]
ಎಮುವಿನ ಕತ್ತು ನಸು ನೀಲಿ ಬಣ್ಣದಲ್ಲಿದ್ದು ತನ್ನ ವಿರಳವಾದ ಗರಿಗಳ ಮೂಲಕ ಅದನ್ನು ಅದನ್ನು ಹೊರಹೊಮ್ಮಿಸುತ್ತದೆ.[೨] ಕೇಶಮಯವಾದ ನೋಟವನ್ನು ನೀಡುವ ಕಂದುಬಣ್ಣದಿಂದ ಬೂದು-ಕಂದು ಬಣ್ಣದವರೆಗಿನ ಪುಕ್ಕಗಳನ್ನು ಅವು ಹೊಂದಿವೆ. ಗರಿಗಳ ಗರಿದಿಂಡುಗಳು ಮತ್ತು ತುದಿಗಳು ಕಪ್ಪಗಿರುತ್ತವೆ. ಸೌರ ವಿಕಿರಣದ ಶಕ್ತಿಯು ರೆಕ್ಕೆಯ ತುದಿಗಳಿಂದ ಹೀರಲ್ಪಡುತ್ತದೆ, ಮತ್ತು ವಿರಳವಾಗಿ-ಜೋಡಣೆಗೊಂಡಿರುವ ಒಳಭಾಗದ ಪುಕ್ಕಗಳು ಚರ್ಮಕ್ಕೆ ಶಾಖನಿರೋಧಕಗಳಾಗಿ ಕಾರ್ಯನಿರ್ವಹಿಸುತ್ತವೆ. ಪರಿಣಾಮಕವಾಗಿ ಕಂಡುಬರುವ ಶಾಖವು ಸದರಿ ಪದರದಿಂದ ಒದಗಿಸಲ್ಪಡುವ ನಿರೋಧನದಿಂದಾಗಿ ಚರ್ಮದೊಳಗೆ ಹರಿಯದಂತೆ ತಡೆಯಲ್ಪಟ್ಟು,[೧೭] ದಿನದ ಶಾಖದ ಅವಧಿಯಲ್ಲೂ ಪಕ್ಷಿಯು ಕ್ರಿಯಾಶೀಲವಾಗಿರುವಲ್ಲಿ ಅದಕ್ಕೆ ಅನುವುಮಾಡಿಕೊಡುತ್ತದೆ. ಎಮು ಪಕ್ಷಿಯ ಗರಿಯ ಒಂದು ವಿಶಿಷ್ಟ ಲಕ್ಷಣವೆಂದರೆ, ಒಂದು ಏಕ ಗರಿದಿಂಡಿನಿಂದ ಅದರ ಜೋಡಿ ಗರಿಯ ಕಾಂಡವು ಹೊರಹೊಮ್ಮುವುದೇ ಆಗಿದೆ. ಗಂಡು ಮತ್ತು ಹೆಣ್ಣು ಪಕ್ಷಿಗಳು ನೋಡಲಿಕ್ಕೆ ಒಂದೇ ಥರ ಇರುತ್ತವೆ. ತೀರಾ ಬಿಸಿಯಾಗಿರುವ ದಿನಗಳಲ್ಲಿ, ಎಮುಗಳು ತಮ್ಮ ದೇಹದ ಉಷ್ಣತೆಯನ್ನು ಕಾಯ್ದುಕೊಳ್ಳಲು ಏದುಸಿರು ಬಿಡುತ್ತವೆ, ಅವುಗಳ ಶ್ವಾಸಕೋಶಗಳು ಆವಿಯಾಗಿಸುವ ಶೈತ್ಯಕಾರಿಗಳಾಗಿ ಕೆಲಸ ಮಾಡುತ್ತವೆ ಮತ್ತು ಇತರ ಕೆಲವೊಂದು ಜಾತಿಗಳಿಗಿಂತ ಭಿನ್ನವಾಗಿ ಕಂಡುಬರುವ ರಕ್ತದಲ್ಲಿನ ಇಂಗಾಲದ ಡೈಯಾಕ್ಸೈಡ್‌ನ ಕಡಿಮೆ ಮಟ್ಟಗಳು ಕ್ಷಾರತೆಯನ್ನು ಉಂಟುಮಾಡುವುದು ಕಂಡುಬರುವುದಿಲ್ಲ.[೧೮] ತಂಪಾಗಿರುವ ವಾತಾವರಣದಲ್ಲಿ ಸಾಮಾನ್ಯವಾದ ರೀತಿಯಲ್ಲಿ ಉಸಿರಾಡಲು ಅವು ದೊಡ್ಡದಾದ ಬಹುಮಡಿಕೆಯ ಮೂಗಿನ ಮಾರ್ಗವನ್ನು ಅವು ಹೊಂದಿವೆ. ತಂಪಾದ ಗಾಳಿಯು ಶ್ವಾಸಕೋಶಗಳೊಳಗೆ ಹಾದುಹೋದಂತೆ ಬೆಚ್ಚಗಾಗುತ್ತದೆ, ತನ್ಮೂಲಕ ಮೂಗಿನ ಪ್ರದೇಶದಿಂದ ಶಾಖವನ್ನು ಹೊರತೆಗೆಯಲು ಸಾಧ್ಯವಾಗುತ್ತದೆ. ನಿಶ್ವಾಸದ ಅವಧಿಯಲ್ಲಿ, ಎಮುವಿನ ಮೂಗಿನ ತಂಪಾದ ಸುರುಳಿಯಂಥ ರಚನೆಗಳು ಗಾಳಿಯಿಂದ ಹಿಂದಕ್ಕೆ ಪಡೆದ ತೇವಾಂಶವನ್ನು ಬಾಷ್ಪೀಕರಿಸಿ, ಮರುಬಳಕೆಗಾಗಿ ಅದನ್ನು ಹೀರಿಕೊಳ್ಳುತ್ತದೆ.[೧೯] ಜೋರಾದ ಮೊರೆಯುವಿಕೆ, ಕಂಪಿಸುವ ರೆಕ್ಕೆಗಳಿಂದ ಶಬ್ದಮಾಡುವಿಕೆ, ಮತ್ತು ...2 kilometres (1.2 mi)ನಷ್ಟು ಆಚೆಯವರೆಗೆ ಕೇಳುವ ಗುರುಗುಟ್ಟುವ ಧ್ವನಿಗಳನ್ನು ಅವುಗಳ ಉಲಿಯುವಿಕೆಗಳು ಒಳಗೊಂಡಿರುತ್ತವೆ. ....30 cm (12 in)ನಷ್ಟು ಉದ್ದವಿರುವ ಮತ್ತು ತೆಳುವಾದ-ಭಿತ್ತಿಯಿಂದ ಮಾಡಲ್ಪಟ್ಟಿರುವ, ಊದಿ ಉಬ್ಬಿಸಬಹುದಾದ ಕತ್ತಿನ ಒಂದು ಚೀಲದಿಂದ ಅವುಗಳ ಮೊರೆಯುವ ಧ್ವನಿಯು ಸೃಷ್ಟಿಯಾಗುತ್ತದೆ.[೨][೯]
ಪರಿಸರ ವೃತ್ತಾಂತ ಮತ್ತು ನಡವಳಿಕೆ
[ಬದಲಾಯಿಸಿ]ಆಸ್ಟ್ರೇಲಿಯಾದಾದ್ಯಂತ ಇರುವ ಬಹುತೇಕ ಆವಾಸಸ್ಥಾನಗಳಲ್ಲಿ ಎಮುಗಳು ವಾಸಿಸುತ್ತವೆಯಾದರೂ, ಪೆಡಸುಪರ್ಣಿ ಕಾಡು ಮತ್ತು ಹುಲ್ಲುಗಾವಲು ಕಾಡುಪ್ರದೇಶದ ವಲಯಗಳಲ್ಲಿ ಅವು ಅತ್ಯಂತ ಸಾಮಾನ್ಯವಾಗಿ ಕಂಡುಬರುತ್ತವೆ ಮತ್ತು ತೇವದ ಕಾಲಗಳ ಅವಧಿಯನ್ನು ಹೊರತುಪಡಿಸಿ, ಜನನಿಬಿಡತೆಯನ್ನು ಹೊಂದಿರುವ ಮತ್ತು ಅತಿ ಶುಷ್ಕ ಪ್ರದೇಶಗಳಲ್ಲಿ ಅಷ್ಟಾಗಿ ಕಂಡುಬರುವುದಿಲ್ಲ.[೨] ಎಮುಗಳು ಪ್ರಧಾನವಾಗಿ ಜೊತೆಜೊತೆಯಾಗಿ ಸಂಚರಿಸುತ್ತವೆ,[೨] ಮತ್ತು ಅವು ಅಗಾಧವಾದ ಹಿಂಡುಗಳನ್ನು ರೂಪಿಸಬಲ್ಲ ಸಂದರ್ಭದಲ್ಲೇ, ಇದೊಂದು ಅಸಾಧಾರಣವಾದ ಸಾಮಾಜಿಕ ನಡವಳಿಕೆಯಾಗಿದ್ದು, ಆಹಾರದ ಮೂಲಗಳ ಕಡೆಗೆ ಚಲಿಸುವ ಒಂದು ಸಾಮಾನ್ಯ ಅಗತ್ಯದಿಂದ ಅದು ಉದ್ಭವಿಸುತ್ತದೆ. ಸಮೃದ್ಧವಾದ ಹುಲ್ಲುಗಾವಲು ಪ್ರದೇಶಗಳನ್ನು ತಲುಪುವ ಸಲುವಾಗಿ ಸುದೀರ್ಘ ಅಂತರವನ್ನು ಎಮುಗಳು ಕ್ರಮಿಸುತ್ತವೆ ಎಂದು ಕಂಡುಬಂದಿದೆ. ಪಶ್ಚಿಮ ಆಸ್ಟ್ರೇಲಿಯಾದಲ್ಲಿ, ಎಮುವಿನ ಚಲನೆಗಳು ಒಂದು ಸ್ಪಷ್ಟವಾದ ಋತುವಿನ ಮಾದರಿಯನ್ನು, ಅಂದರೆ ಬೇಸಿಗೆಯಲ್ಲಿ ಉತ್ತರದ ಕಡೆಗೂ ಚಳಿಗಾಲದಲ್ಲಿ ದಕ್ಷಿಣದ ಕಡೆಗೂ ಚಲಿಸುವ ಮಾದರಿಯನ್ನು ಅನುಸರಿಸುತ್ತವೆ. ಪೂರ್ವ ತೀರದಲ್ಲಿನ ಅವುಗಳ ಅಲೆದಾಟಗಳು ಒಂದು ನಿರ್ದಿಷ್ಟ ಮಾದರಿಯನ್ನು ಅನುಸರಿಸಿದಂತೆ ಕಾಣುವುದಿಲ್ಲ.[೨೦] ಅಗತ್ಯ ಕಂಡುಬಂದಾಗಲೆಲ್ಲಾ ಈಜುವ ಸಾಮರ್ಥ್ಯವನ್ನೂ ಸಹ ಎಮುಗಳು ಹೊಂದಿವೆ. ನಾಗರಿಕತೆಯ ಅಸ್ತಿತ್ವವಿರುವ ಪ್ರದೇಶವನ್ನು ಸಮೀಪಿಸುತ್ತಿರುವ ಕುರಿತು ಎಮು ಪಕ್ಷಿಯೊಂದಕ್ಕೆ ಎಚ್ಚರವಿರುತ್ತದೆಯಾದರೂ, ಕೃಷಿ ಮಾಡಿರದ ನೈಸರ್ಗಿಕ ಪರಿಸ್ಥಿತಿಯಲ್ಲಿ ವಾಸವಾಗಿರುವ ಮನುಷ್ಯರ ಸಣ್ಣ ಗುಂಪುಗಳು ಅವುಗಳನ್ನು ಆಹಾರದ ಮೂಲಕ ಪ್ರಚೋದಿಸಿದಾಗ ಎಮುಗಳು ಅವರ ಬಳಿಗೆ ಸಾಗುತ್ತವೆ. ವಾಸ್ತವವಾಗಿ, ಅವುಗಳಿಗೆ ಆಹಾರವನ್ನು ನೀಡದಿದ್ದರೂ ಸಹ, ಅವು ತಮ್ಮತಮ್ಮೊಳಗೇ ಸತತವಾಗಿ ನೆರವಾಗುವ ನಡವಳಿಕೆಯನ್ನು ತೋರಿಸುತ್ತವೆ.
ಆಹಾರ ಕ್ರಮ
[ಬದಲಾಯಿಸಿ]ಹಗಲು ಹಕ್ಕಿಯೊಂದರ ಮಾದರಿಯಲ್ಲಿ ಎಮುಗಳು ಮೇವನ್ನು ಸಂಗ್ರಹಿಸುತ್ತವೆ. ಸ್ಥಳದಲ್ಲಿ ಲಭ್ಯವಿರುವ ಮತ್ತು ಪರಿಚಯಿಸಲ್ಪಟ್ಟಿರುವ ವೈವಿಧ್ಯಮಯ ಸಸ್ಯಜಾತಿಯನ್ನು ಅವು ತಿನ್ನುತ್ತವೆ; ಹೀಗೆ ಅವು ತಿನ್ನುವ ಸಸ್ಯಗಳು ಆಯಾ ಋತುವಿನಲ್ಲಿನ ಅವುಗಳ ಲಭ್ಯತೆಯನ್ನು ಅವಲಂಬಿಸಿರುತ್ತದೆ. ಎಮುಗಳು ಕೀಟಗಳನ್ನೂ ತಿನ್ನುತ್ತವೆ. ಅವುಗಳೆಂದರೆ, ಕುಪ್ಪಳಿಸುವ ಮಿಡತೆಗಳು ಮತ್ತು ಚಿಮ್ಮಂಡೆಗಳು, ಕಪ್ಪುಮಚ್ಚೆಯ ಕೆಂಗಂದು ಜೀರುಂಡೆಗಳು, ಬಂಟ ಇರುವೆ ಮತ್ತು ಚಕ್ಕೊತ್ತಿ ಸೊಪ್ಪಿನ ಮರಿಹುಳುಗಳು, ಬಾಗ್‌ನಾಗ್ ಪತಂಗಗಳು ಮತ್ತು ಹತ್ತಿಕಾಯಿಯ ಬೀಜಕೋಶದ ಪತಂಗದ ಬಾಲದ ಮರಿಹುಳುಗಳು ಹಾಗೂ ಇರುವೆಗಳು.[೨೧] ಪಶ್ಚಿಮ ಆಸ್ಟ್ರೇಲಿಯಾದಲ್ಲಿ, ಸಂಚರಿಸುವ ಎಮುಗಳಲ್ಲಿ ಆಹಾರದ ಆದ್ಯತೆಗಳು ಅಥವಾ ಇಷ್ಟಪಡುವಿಕೆಗಳು ಕಂಡುಬರುತ್ತವೆ; ಮಳೆಗಾಲ ಪ್ರಾರಂಭವಾಗುವವರೆಗೂ ಅವು ಅಕೇಷಿಯಾ ಅನ್ಯುರಾ ಸಸ್ಯದ ಬೀಜಗಳನ್ನು ತಿನ್ನುತ್ತವೆ. ಅದಾದ ನಂತರ ಅವು ತಾಜಾ ಹುಲ್ಲಿನ ಚಿಗುರುಗಳು ಹಾಗೂ ಮರಿಹುಳುಗಳನ್ನು ತಿನ್ನುತ್ತವೆ; ಚಳಿಗಾಲದಲ್ಲಿ ಅವು ಕ್ಯಾಸಿಯಾ ಸಸ್ಯ ದ[verification needed] ಎಲೆಗಳು ಮತ್ತು ಬೀಜಕೋಶಗಳನ್ನು ತಿನ್ನುತ್ತವೆ; ವಸಂತಕಾಲದಲ್ಲಿ ಅವು ಕುಪ್ಪಳಿಸುವ ಮಿಡತೆಗಳನ್ನು ಹಾಗೂ ಕ್ವಾನ್‌ಡಾಂಗ್‌ನ ಒಂದು ವಿಧವಾದ ಸಂಟಾಲಂ ಅಕ್ಯುಮಿನೇಟಂ ನ ಹಣ್ಣನ್ನು ತಿನ್ನುತ್ತವೆ.[೨][೨೨] ಬೃಹತ್ ಪ್ರಮಾಣದ ಮೊಳೆಯಬಲ್ಲ ಬೀಜಗಳ ಪ್ರಸರಣದಲ್ಲೂ ಸಹ ಎಮುಗಳು ಒಂದು ಪ್ರಮುಖ ಮಧ್ಯವರ್ತಿಯ ಪಾತ್ರವನ್ನು ವಹಿಸುವ ಮೂಲಕ, ಇದರಿಂದಾಗಿ ಹೂವಿನ ಜೀವ ವೈವಿಧ್ಯತೆಗೆ ತಮ್ಮದೇ ಆದ ಕಾಣಿಕೆಯನ್ನು ನೀಡುತ್ತವೆ.[೨೨][೨೩] ತಾವು ಸೇವಿಸಿದ ಸಸ್ಯ ಸಾಮಗ್ರಿಯನ್ನು ಜೀರ್ಣಿಸಿಕೊಳ್ಳಲು ನೆರವಾಗುವಲ್ಲಿ ಉರುಟುಗಲ್ಲುಗಳು ಮತ್ತು ಕಲ್ಲುಗಳ ಅಗತ್ಯ ಎಮುಗಳಿಗೆ ಕಂಡುಬರುತ್ತದೆ. ಒಂದೊಂದೂ ಕಲ್ಲೂ ....45 g (1.6 oz)ನಷ್ಟು ತೂಗಬಹುದು ಮತ್ತು ಒಮ್ಮೆಗೆ ತಮ್ಮ ಎರಡನೆಯ ಜಠರದಲ್ಲಿ ಅವು ಸುಮಾರು ....745 g (1.642 lb)ನಷ್ಟು ಕಲ್ಲುಗಳನ್ನು ಹೊಂದಿರಲು ಸಾಧ್ಯವಿದೆ. ಅವು ಇದ್ದಿಲನ್ನೂ ತಿನ್ನುತ್ತವೆಯಾದರೂ, ಇದಕ್ಕೆ ಕಾರಣವೇನು ಎಂಬುದನ್ನು ವಿಜ್ಞಾನಿಗಳಿನ್ನೂ ಖಚಿತಪಡಿಸಿಲ್ಲ.[೨]
ತಳಿ ಬೆಳೆಸುವಿಕೆ
[ಬದಲಾಯಿಸಿ]ಡಿಸೆಂಬರ್ ಮತ್ತು ಜನವರಿಯ ಬೇಸಿಗೆ ತಿಂಗಳುಗಳ ಅವಧಿಯಲ್ಲಿ ಎಮುಗಳು ಮರಿಹಾಕುವಿಕೆಯ ಜೋಡಿಗಳನ್ನು ರೂಪಿಸುತ್ತವೆ, ಮತ್ತು ಈ ಜೋಡಿಗಳು ಸುಮಾರು ಐದು ತಿಂಗಳುಗಳವರೆಗೆ ಜೊತೆಯಲ್ಲಿರುವ ಸಾಧ್ಯತೆಯಿರುತ್ತದೆ. ಮೇ ಮತ್ತು ಜೂನ್ ತಿಂಗಳುಗಳಲ್ಲಿ ಗಂಡು-ಹೆಣ್ಣಿನ ಕೂಡುವಿಕೆಯು ಸಂಭವಿಸುತ್ತದೆ. ಮರಿಹಾಕುವಿಕೆಯ ಋತುವಿನ ಅವಧಿಯಲ್ಲಿ, ಹಾರ್ಮೋನಿನಲ್ಲಿನ ಬದಲಾವಣೆಗಳನ್ನು ಗಂಡುಗಳು ಕಂಡುಕೊಳ್ಳುತ್ತವೆ. ಲ್ಯೂಟಿನೈಝಿಂಗ್ ಹಾರ್ಮೋನು ಮತ್ತು ಟೆಸ್ಟೋಸ್ಟೆರಾನ್ ಮಟ್ಟಗಳಲ್ಲಿನ ಒಂದು ಹೆಚ್ಚಳವು ಈ ಬದಲಾವಣೆಯಲ್ಲಿ ಸೇರಿರುತ್ತದೆ, ಹಾಗೂ ಅವುಗಳ ವೃಷಣಗಳ ಗಾತ್ರವು ದುಪ್ಪಟ್ಟು ಹೆಚ್ಚಾಗುತ್ತದೆ.[೨೪] ಗಂಡುಗಳು ತಮ್ಮ ಲೈಂಗಿಕ ಕಾಮನೆಗಳನ್ನು ತೀರಿಸಿಕೊಳ್ಳುವ ಅಪೇಕ್ಷೆಯಲ್ಲಿ ಮುಳುಗಿಹೋಗುತ್ತವೆ ಮತ್ತು ನೆಲದ ಮೇಲಿನ ಅರೆ-ಆಸರೆಯ ತಗ್ಗುಪ್ರದೇಶದವೊಂದರಲ್ಲಿ ಮರದ ತೊಗಟೆ, ಹುಲ್ಲು, ಕಡ್ಡಿಗಳು ಮತ್ತು ಎಲೆಗಳನ್ನು ಬಳಸಿ ಒಂದು ಒರಟಾದ ಗೂಡನ್ನು ನಿರ್ಮಿಸುತ್ತವೆ. ಪ್ರತಿ ಒಂದು ಅಥವಾ ಎರಡು ದಿನಕ್ಕೊಮ್ಮೆ ಸದರಿ ಜೋಡಿಯು ಒಂದಾಗುತ್ತದೆ, ಮತ್ತು ಪ್ರತಿ ಎರಡು ಅಥವಾ ಮೂರನೆಯ ದಿನದಂದು 11 (ಮತ್ತು ಸುಮಾರು 20ರವರೆಗೆ) ಅತಿದೊಡ್ಡದಾದ, ದಪ್ಪನೆಯ-ಚಿಪ್ಪನ್ನುಳ್ಳ, ದಟ್ಟ-ಹಸಿರಿನ ಮೊಟ್ಟೆಗಳ ಒಂದು ಸರಾಸರಿಯ ಪೈಕಿ ಒಂದನ್ನು ಹೆಣ್ಣು ಪಕ್ಷಿಯು ಇಡುತ್ತದೆ. ಮಳೆ ಬೀಳುವಿಕೆಯ ಸ್ವರೂಪದೊಂದಿಗೆ ಮೊಟ್ಟೆಗಳ ಸಂಖ್ಯೆಯೂ ಬದಲಾಗುತ್ತಾ ಹೋಗುತ್ತದೆ.[೨] ಸರಾಸರಿಯಾಗಿ ಮೊಟ್ಟೆಗಳು ....134 by 89 millimetres (5.3 in × 3.5 in)ನಷ್ಟಿರುತ್ತವೆ ಮತ್ತು ...ರಿಂದ ...ರವರೆಗೆ700 and 900 grams (1.5 and 2.0 lb)[೨೫] ತೂಗುತ್ತವೆ. ಇದು ಪ್ರಮಾಣ ಮತ್ತು ತೂಕದಲ್ಲಿ 10ರಿಂದ 12ರವರೆಗಿನ ಕೋಳಿಮರಿಯ ಮೊಟ್ಟೆಗಳಿಗೆ ಸುಮಾರಾಗಿ ಸಮನಾಗಿರುತ್ತದೆ. ತಳೀಯವಾಗಿ ತದ್ರೂಪವಾಗಿರುವ ಹಕ್ಕಿಯ ಅವಳಿಗಳ ಮೊಟ್ಟಮೊದಲ ಪ್ರಮಾಣೀಕೃತ ಸಂಭವಿಸುವಿಕೆಯು ಎಮು ಪಕ್ಷಿಯಲ್ಲಿ ನಿರೂಪಿಸಲ್ಪಟ್ಟಿತು.[೨೬] ತನ್ನ ಸಂಗಾತಿಯು ಮೊಟ್ಟೆಗಳನ್ನು ಇಡಲು ಪ್ರಾರಂಭಿಸುತ್ತಿದ್ದಂತೆ ಗಂಡು ಪಕ್ಷಿಯು ಮೊಟ್ಟೆಗೆ ಕಾವುಕೊಡಲು ಬಯಸುತ್ತದೆ, ಮತ್ತು ಮೊಟ್ಟೆಗಳನ್ನು ಇಡುವ ಕಾಲವು ಸಂಪೂರ್ಣವಾಗುವುದಕ್ಕೆ ಮುಂಚೆಯೇ, ಮೊಟ್ಟೆಗಳಿಗೆ ಕಾವುಕೊಡಲು ಶುರುಮಾಡುತ್ತದೆ. ಇಲ್ಲಿಂದಾಚೆಗೆ ಗಂಡುಪಕ್ಷಿಯು ತಿನ್ನುವುದನ್ನು, ಕುಡಿಯುವುದನ್ನು, ಅಥವಾ ಮಲವಿಸರ್ಜನೆ ಮಾಡುವುದನ್ನು ನಿಲ್ಲಿಸಿಬಿಡುತ್ತದೆ, ಮತ್ತು ಮೊಟ್ಟೆಗಳನ್ನು ಮರಿಮಾಡುವ ಕೆಲಸಕ್ಕೆ ಮಾತ್ರವೇ ಅಂಟಿಕೊಳ್ಳುತ್ತದೆ. ಈ ಕೆಲಸವನ್ನು ಅದು ದಿನಕ್ಕೆ ಸುಮಾರು 10 ಬಾರಿ ಮಾಡುತ್ತದೆ. ಎಂಟು ವಾರಗಳ ಅವಧಿಯ ಕಾವುಕೊಡುವಿಕೆಯು ಮುಗಿದ ನಂತರ, ಗಂಡುಪಕ್ಷಿಯು ತನ್ನ ತೂಕದಲ್ಲಿ ಮೂರನೇ ಒಂದು ಭಾಗವನ್ನು ಕಳೆದುಕೊಳ್ಳುತ್ತದೆ ಮತ್ತು ದೇಹದಲ್ಲಿ ಸಂಗ್ರಹವಾಗಿರುವ ಕೊಬ್ಬಿನಂಶದ ಮೇಲೆ ಹಾಗೂ ಗೂಡಿನಿಂದಲೇ ತಾನು ತಲುಪಬಲ್ಲ ಯಾವುದೇ ಮುಂಜಾನೆಯ ಇಬ್ಬನಿಯನ್ನು ಸೇವಿಸಿ ಅದು ಬದುಕಿರುತ್ತದೆ. ಸೂಪರ್ ಫೇರಿ-ರೆನ್‌ನಂಥ ಆಸ್ಟ್ರೇಲಿಯಾದ ಇತರ ಅನೇಕ ಪಕ್ಷಿಗಳಲ್ಲಿ ಕಂಡುಬರುವಂತೆ, ದಾಂಪತ್ಯ ದ್ರೋಹ ಎಂಬುದು ಎಮುಗಳಲ್ಲಿ ರೂಢಿಯ ನಡವಳಿಕೆಯಾಗಿದ್ದು, ಆರಂಭಿಕ ಜೋಡಿ-ಬಾಂಧವ್ಯದ ಹೊರತಾಗಿಯೂ ಇದು ಕಂಡುಬರುತ್ತದೆ: ಗಂಡುಪಕ್ಷಿಯು ಕಾವು ಕೊಡುವಿಕೆಯನ್ನು ಒಮ್ಮೆ ಶುರುಮಾಡುತ್ತಿದ್ದಂತೆ, ಹೆಣ್ಣು ಪಕ್ಷಿಯು ಇತರ ಗಂಡುಪಕ್ಷಿಗಳೊಂದಿಗೆ ದೇಹಸಂಪರ್ಕವನ್ನು ಬೆಳೆಸುತ್ತದೆ ಮತ್ತು ತತ್ಫಲವಾಗಿ ಅದು ಬಹುಸಂಖ್ಯೆಯ ಒಂದು ಕಾವಿನ ಮೊಟ್ಟೆಗಳನ್ನು ಇಡಬಹುದಾಗಿದೆ; ಈ ರೀತಿಯಾಗಿ, ಹೆಚ್ಚೂಕಮ್ಮಿ ಒಂದು ಸಲದ ಮರಿಗಳ ಒಂದು ಗುಂಪಿನಲ್ಲಿನ ಮರಿಗಳ ಪೈಕಿ ಅರ್ಧಕ್ಕಿಂತ ಹೆಚ್ಚು ಭಾಗಕ್ಕೆ ಇತರ ಗಂಡು ಪಕ್ಷಿಗಳು ಅಪ್ಪಂದಿರಾಗಿರುತ್ತವೆ, ಅಥವಾ ಎಮುಗಳು ತಳಿ ಪರಾವಲಂಬಿಕೆಯನ್ನೂ ಪ್ರದರ್ಶಿಸುವುದರಿಂದ ಅವಕ್ಕೆ ಎರಡೂ ಜನ್ಮದಾತರ ಕರ್ತೃತ್ವ ಅಥವಾ ಪಾಲನೆಯು ದೊರೆಯುವುದಿಲ್ಲ.[೨೭] ಮರಿಗಳು ಮೊಟ್ಟೆಯೊಡೆದು ಆಚೆಗೆ ಬರುವವರೆಗೂ ಕೆಲವೊಂದು ಹೆಣ್ಣು ಪಕ್ಷಿಗಳು ಗೂಡಿನಲ್ಲೇ ಉಳಿದು ಅದನ್ನು ರಕ್ಷಿಸುತ್ತವೆಯಾದರೂ, ಮತ್ತೊಂದು ಗೂಡುಕಟ್ಟುವ ಉದ್ದೇಶದಿಂದ ಬಹುತೇಕ ಹೆಣ್ಣು ಪಕ್ಷಿಗಳು ಸದರಿ ಗೂಡಿನ ಮರಿಯ ಪ್ರದೇಶವನ್ನು ಸಂಪೂರ್ಣವಾಗಿ ತೊರೆಯುತ್ತವೆ; ಒಂದು ಉತ್ತಮವಾದ ಋತುವಿನಲ್ಲಿ ಹೆಣ್ಣು ಎಮುವೊಂದು ಮೂರು ಬಾರಿ ಗೂಡನ್ನು ಕಟ್ಟಬಹುದು.[೨೦] ಕಾವು ಕೊಡುವಿಕೆಯು 56 ದಿನಗಳನ್ನು ತೆಗೆದುಕೊಳ್ಳುತ್ತದೆ, ಮತ್ತು ಮೊಟ್ಟೆಗಳು ಒಡೆದು ಆಚೆಗೆ ಬರುವುದಕ್ಕೆ ಸ್ವಲ್ಪ ಮುಂಚಿತವಾಗಿ ಗಂಡು ಪಕ್ಷಿಗಳು ಕಾವು ಕೊಡುವುದನ್ನು ನಿಲ್ಲಿಸುತ್ತವೆ.[೨೦] ಹೊಸದಾಗಿ ಮೊಟ್ಟೆಯೊಡೆದು ಹೊರಬಂದ ಮರಿಗಳು ಕ್ರಿಯಾಶೀಲವಾಗಿರುತ್ತವೆ ಮತ್ತು ಕೆಲವೇ ದಿನಗಳಲ್ಲಿ ಗೂಡನ್ನು ಬಿಟ್ಟುಹೋಗುವಷ್ಟು ಸಮರ್ಥವಾಗಿರುತ್ತವೆ. ಅವು ಸುಮಾರು ....12 centimetres (5 in)ನಷ್ಟು ಎತ್ತರವಿದ್ದು....5 kg (18 oz)ನಷ್ಟು[೨] ತೂಗುತ್ತವೆ, ಮತ್ತು ಮರೆಮಾಚಿಸುವಿಕೆಗಾಗಿ ಸ್ಪಷ್ಟವಾದ ಕಂದು ಹಾಗೂ ಕೆನೆಬಣ್ಣದ ಪಟ್ಟಿಗಳನ್ನು ಹೊಂದಿರುತ್ತವೆ. ಈ ಪಟ್ಟಿಗಳು ಮೂರು ತಿಂಗಳ ಅಥವಾ ಅದರ ನಂತರದಲ್ಲಿ ಬಣ್ಣಗುಂದುತ್ತವೆ. ಬೆಳೆಯುತ್ತಿರುವ ಮರಿಗಳೊಂದಿಗೆ ಸುಮಾರು 7 ತಿಂಗಳುಗಳವರೆಗೆ ಗಂಡು ಉಳಿದುಕೊಂಡು, ಅವುಗಳನ್ನು ರಕ್ಷಿಸುತ್ತದೆ ಮತ್ತು ಆಹಾರವನ್ನು ಹೇಗೆ ಹುಡುಕುವುದು ಎಂಬುದನ್ನು ಹೇಳಿಕೊಡುತ್ತದೆ.[೨][೨೫] ಮರಿಗಳು ಕ್ಷಿಪ್ರವಾಗಿ ಬಳೆಯುತ್ತವೆ ಮತ್ತು 5-6 ತಿಂಗಳುಗಳಲ್ಲಿ ಸಂಪೂರ್ಣವಾಗಿ ಬೆಳೆದ ಹಂತವನ್ನು ಮುಟ್ಟುತ್ತವೆ;[೨] ಅವು ತಮ್ಮ ಎರಡನೇ ಋತುವಿನಲ್ಲಿ ಮರಿಹಾಕುವುದಕ್ಕಾಗಿ ಬೇರ್ಪಡುವುದಕ್ಕೆ ಮುಂಚಿತವಾಗಿ ಆರು ತಿಂಗಳವರೆಗೆ ಅಥವಾ ಮತ್ತಷ್ಟು ಅವಧಿಯವರೆಗೆ ಅವು ತಮ್ಮ ಕುಟುಂಬ ತಂಡದೊಡನೆ ಉಳಿದುಕೊಳ್ಳಬಹುದು. ಕಾಡುಪ್ರದೇಶದಲ್ಲಿ ಎಮುಗಳು 10ರಿಂದ 20 ವರ್ಷಗಳವರೆಗೆ 0/} ಜೀವಿಸುತ್ತವೆ. ಸೆರೆಯಲ್ಲಿರುವ ಪಕ್ಷಿಗಳು ಕಾಡುಪ್ರದೇಶದಲ್ಲಿನ ಎಮುಗಳಿಗಿಂತ ಹೆಚ್ಚುಕಾಲದವರೆಗೆ ಬದುಕಬಲ್ಲವು.
ಮಾನವರೊಂದಿಗಿನ ಸಂಬಂಧ
[ಬದಲಾಯಿಸಿ]ಸಂರಕ್ಷಣೆಯ ಸ್ಥಿತಿಗತಿ
[ಬದಲಾಯಿಸಿ]ಎಮುಗಳು ಸ್ಥಳೀಯ ಆಸ್ಟ್ರೇಲಿಯನ್ನರು ಹಾಗೂ ಆರಂಭಿಕ ಐರೋಪ್ಯ ವಲಸೆಗಾರರಿಂದ ಆಹಾರದ ಒಂದು ಮೂಲವಾಗಿ ಬಳಸಲ್ಪಡುತ್ತಿದ್ದವು. ಎಮು ಪಕ್ಷಿಗಳನ್ನು ಹಿಡಿಯಲು ಮೂಲನಿವಾಸಿಗಳು ವೈವಿಧ್ಯಮಯ ತಂತ್ರಗಳನ್ನು ಬಳಸುತ್ತಿದ್ದರು. ನೀರಿನ ಹಳ್ಳಗಳಲ್ಲಿ ಅವು ನೀರುಕುಡಿಯುತ್ತಿರುವಾಗ ಅವುಗಳನ್ನು ಭರ್ಜಿಯಿಂದ ತಿವಿಯುವುದು, ನೀರಿನ ಕುಳಿಗಳಿಗೆ ವಿಷ ಬೆರೆಸುವುದು, ಬಲೆಗಳಲ್ಲಿ ಎಮುಗಳನ್ನು ಸೆರೆಹಿಡಿಯುವುದು, ಮತ್ತು ಅವುಗಳ ಊಳಿಡುವಿಕೆಯನ್ನು ಅನುಕರಿಸುವ ಮೂಲಕ ಅಥವಾ ಗರಿಗಳು ಮತ್ತು ಚಿಂದಿಗಳಿಂದ ಮಾಡಿದ ಚೆಂಡೊಂದನ್ನು ಮರವೊಂದರಿಂದ ತೂಗುಬಿಟ್ಟು ಎಮುಗಳನ್ನು ಆಕರ್ಷಿಸುವುದು ಇವೇ ಮೊದಲಾದವು ಸದರಿ ತಂತ್ರಗಳಲ್ಲಿ ಸೇರಿದ್ದವು.[೨೫] ಆಹಾರದ ಅಗತ್ಯಗಳಿಗಾಗಿ ಯುರೋಪಿಯನ್ನರು ಎಮುಗಳನ್ನು ಕೊಲ್ಲುತ್ತಿದ್ದರು. ಅಷ್ಟೇ ಅಲ್ಲ, ಅವುಗಳು ತಮ್ಮ ವ್ಯವಸಾಯ ಪ್ರದೇಶದಲ್ಲಿ ಮಧ್ಯೆ ಪ್ರವೇಶಿಸಿದಾಗ, ಅಥವಾ ಜಲಕ್ಷಾಮದ/ಬಾಯಾರಿಕೆಯಾದ ಸಮಯದಲ್ಲಿ ನೀರನ್ನು ಹುಡುಕಿಕೊಂಡು ತಮ್ಮ ವಸಾಹತು ಪ್ರದೇಶಗಳನ್ನು ಅವು ಅತಿಕ್ರಮವಾಗಿ ಪ್ರವೇಶಿಸಿದಾಗಲೂ ಅವರು ಎಮುಗಳನ್ನು ಕೊಲ್ಲುತ್ತಿದ್ದರು. 1932ರಲ್ಲಿ ಪಶ್ಚಿಮ ಆಸ್ಟ್ರೇಲಿಯಾದಲ್ಲಿ ಕಂಡುಬಂದ ಎಮು ಯುದ್ಧವು ಇದಕ್ಕೊಂದು ಪರಮೋಚ್ಚ ಉದಾಹರಣೆಯಾಗಿತ್ತು. ಈ ಅವಧಿಯಲ್ಲಿನ ಒಂದು ಸುಡುಬೇಸಿಗೆಯಲ್ಲಿ ಎಮುಗಳ ಒಂದು ಹಿಂಡು ಕ್ಯಾಂಪಿಯನ್ ಮೇಲೆ ದಾಳಿಮಾಡಿ ಪಟ್ಟಣದ ವಾಸಿಗಳಲ್ಲಿ ಗಾಬರಿಯನ್ನುಂಟುಮಾಡಿದಾಗ, ಅವುಗಳನ್ನು ಓಡಿಸುವ ಒಂದು ವಿಫಲಯತ್ನವು ತೀವ್ರವಾಗಿತ್ತು. ಜಾನ್ ಗೌಲ್ಡ್‌ನ ಹ್ಯಾಂಡ್‌ಬುಕ್ ಟು ದಿ ಬರ್ಡ್ಸ್ ಆಫ್ ಆಸ್ಟ್ರೇಲಿಯಾ ಎಂಬ ಕೃತಿಯು 1865ರಲ್ಲಿ ಮೊದಲ ಬಾರಿಗೆ ಪ್ರಕಟಗೊಂಡಿತು. ಟಾಸ್ಮೇನಿಯಾದಿಂದ ಎಮು ಪಕ್ಷಿಗಳು ಕಾಣೆಯಾಗುತ್ತಿರುವುದರ ಕುರಿತು, ಹಾಗೂ ಅಪರೂಪವಾಗುತ್ತಾ ಹೋಗುತ್ತಿರುವ ಕಾರಣದಿಂದಾಗಿ ಅವು ನಿರ್ನಾಮವಾಗಿರುವುದರ ಕುರಿತು ಆತ ಈ ಕೃತಿಯಲ್ಲಿ ವಿಷಾದಿಸುತ್ತಾನೆ. ಸಿಡ್ನಿಯ ಆಸುಪಾಸಿನಲ್ಲಿ ಎಮುಗಳು ಇನ್ನು ಮುಂದೆ ಸಾಮಾನ್ಯವಾಗಿ ಕಾಣಿಸಿಕೊಳ್ಳುವುದಿಲ್ಲ ಎಂದು ಉಲ್ಲೇಖಿಸುವ ಆತ, ಈ ಪಕ್ಷಿಜಾತಿಗೆ ಸಂರಕ್ಷಿತ ಪಕ್ಷಿ ಎಂಬ ಸ್ಥಾನಮಾನವನ್ನು ನೀಡಬೇಕು ಎಂದು ಪ್ರಸ್ತಾವಿಸುತ್ತಾನೆ.[೭] ಕಾಡುಪ್ರದೇಶದ ಎಮುಗಳು 1999ರ ಎನ್ವಿರಾನ್ಮೆಂಟ್ ಪ್ರೊಟೆಕ್ಷನ್ ಅಂಡ್ ಬಯೋಡೈವರ್ಸಿಟಿ ಕನ್ಸರ್ವೇಶನ್ ಆಕ್ಟ್ ಅಡಿಯಲ್ಲಿ ಆಸ್ಟ್ರೇಲಿಯಾದಲ್ಲಿ ಔಪಚಾರಿಕವಾಗಿ ಸಂರಕ್ಷಿಸಲ್ಪಟ್ಟಿವೆ. IUCN ಸಂಸ್ಥೆಯು ಅವುಗಳ ಸ್ಥಾನಮಾನವನ್ನು ಕನಿಷ್ಟ ಕಾಳಜಿಯ ವ್ಯಾಪ್ತಿಯಲ್ಲಿರುವಂತೆ ಗುರುತಿಸಿ ಶ್ರೇಯಾಂಕವನ್ನು ನೀಡಿದೆ.[೧] ಅವುಗಳ ಕಂಡುಬರುವಿಕೆಯ ಶ್ರೇಣಿಯು ...ರಿಂದ...ರವರೆಗೆ1,000,000 to 10,000,000 km2 (390,000–3,860,000 sq mi) ಇದೆ, ಮತ್ತು 1992ರ ಒಂದು ಅಂದಾಜಿನ ಪ್ರಕಾರ ಈ ಸಂಖ್ಯೆಯು 630,000 ಮತ್ತು 730,000ದ ನಡುವೆ ಇತ್ತು.[೨೮] ಆಸ್ಟ್ರೇಲಿಯಾದ ಪ್ರಧಾನ ಭೂಭಾಗದಲ್ಲಿನ ಎಮುಗಳ ಸಂಖ್ಯೆಯು ಐರೋಪ್ಯ ವಸಾಹತುಗಳಿಗೆ[೯] ಮುಂಚಿತವಾಗಿದ್ದುದಕ್ಕಿಂತ ಈಗ ಹೆಚ್ಚಿನ ಮಟ್ಟದಲ್ಲಿದೆ ಎಂದು ಭಾವಿಸಲಾಗುತ್ತಿದೆಯಾದರೂ, ಕೆಲವೊಂದು ಕಾಡುಪ್ರದೇಶದ ಎಮು ಪಕ್ಷಿಗಳ ಸಂಖ್ಯೆಗಳು ಚಿಕ್ಕ ಸಂಖ್ಯೆಯ ಗಾತ್ರದ ಕಾರಣದಿಂದಾಗಿ ಸ್ಥಳೀಯವಾಗಿ ಅಳಿವಿನ ಅಂಚನ್ನು ಮುಟ್ಟಿವೆ. ಎಮುಗಳ ಈ ಸಣ್ಣ ಸಂಖ್ಯೆಗಳಿಗೆ ಒದಗಿಬಂದಿರುವ ಅಪಾಯದ ಸೂಚನೆಗಳಲ್ಲಿ, ಆವಾಸಸ್ಥಾನದ ಪ್ರದೇಶಗಳ ತೆರವುಗೊಳಿಸುವಿಕೆ ಮತ್ತು ಛಿದ್ರೀಕರಣ; ಉದ್ದೇಶಪೂರ್ವಕವಾಗಿ ಕಡಿದುಹಾಕುವಿಕೆ; ವಾಹನಗಳೊಂದಿಗಿನ ಅಪ್ಪಳಿಸುವಿಕೆಗಳು; ಕಾಡಿನ ಮತ್ತು ಸಾಕಿದ ನಾಯಿಗಳು, ಗುಳ್ಳೆನರಿಗಳು, ಮತ್ತು ಕಾಡುಹಂದಿಗಳಿಂದ ಸಣ್ಣ ಮರಿಗಳು ಹಾಗೂ ಮೊಟ್ಟೆಗಳು ತಿನ್ನಲ್ಪಡುವುದು ಇವೇ ಮೊದಲಾದವು ಸೇರಿವೆ. ನ್ಯೂ ಸೌತ್ ವೇಲ್ಸ್‌ನ ಉತ್ತರ ತೀರದ ಜೈವಿಕ ವಲಯ ಮತ್ತು ಪೋರ್ಟ್ ಸ್ಟೀಫನ್ಸ್ ಪ್ರದೇಶಗಳ ಪ್ರತ್ಯೇಕಿಸಲ್ಪಟ್ಟ ಅಥವಾ ಅಪೂರ್ವವಾದ ಎಮುಗಳ ಸಮೂಹವನ್ನು ಅಪಾಯದಂಚಿನಲ್ಲಿರುವ ಪ್ರಾಣಿಗಳೆಂದು ನ್ಯೂ ಸೌತ್ ವೇಲ್ಸ್ ಸರ್ಕಾರವು ಪಟ್ಟಿಮಾಡಿದೆ.[೨೯]
ಆರ್ಥಿಕ ಮೌಲ್ಯ
[ಬದಲಾಯಿಸಿ]ಎಮುಗಳು ಕಾಣಿಸಿಕೊಂಡಿದ್ದ ಪ್ರದೇಶದಲ್ಲಿನ ಮೂಲನಿವಾಸಿಗಳಿಗೆ ಅವು ಮಾಂಸದ ಒಂದು ಪ್ರಮುಖ ಮೂಲವಾಗಿದ್ದವು. ಎಮು ಪಕ್ಷಿಯ ಕೊಬ್ಬಿನಂಶವನ್ನು ಸಾಂಪ್ರದಾಯಿಕ ಔಷಧಿಯಾಗಿ ಬಳಸಲಾಗುತ್ತಿತ್ತು, ಮತ್ತು ಚೆರ್ಮದ ಮೇಲೆ ಅದನ್ನು ಲೇಪಿಸಲಾಗುತ್ತಿತ್ತು. ಇದನ್ನು ಒಂದು ಅಮೂಲ್ಯವಾದ ಘರ್ಷಣಾಹ್ರಾಸಕಾರಕದ (ಲ್ಯೂಬ್ರಿಕಂಟ್) ರೂಪದಲ್ಲಿಯೂ ಬಳಸಲಾಗುತ್ತಿತ್ತು. ಇದನ್ನು ಕಾವಿಮಣ್ಣಿನ ಜೊತೆಯಲ್ಲಿ ಬೆರೆಸಿ, ಅದರಿಂದ ಔಪಚಾರಿಕವಾದ ದೇಹಾಲಂಕರಣಕ್ಕಾಗಿ ಬಳಸುವ ಸಾಂಪ್ರದಾಯಿಕ ಬಣ್ಣವನ್ನು ಹಾಗೂ ಮರದ ಸಾಧನಗಳಿಗೆ ಮತ್ತು ಕೂಲಮನ್ ಎಂದು ಕರೆಯಲಾಗುವ ಪಾತ್ರೆಗಳಿಗೆ ಬೇಕಾಗುವ ತೈಲದ ಲೇಪವನ್ನು ತಯಾರಿಸಲಾಗುತ್ತಿತ್ತು.[೩೦] ಎಮುವನ್ನು ಹೇಗೆ ಬೇಯಿಸಲಾಗುತ್ತಿತ್ತು ಎಂಬುದರ ಕುರಿತಾದ ಒಂದು ಉದಾಹರಣೆಯು ಮಧ್ಯ ಆಸ್ಟ್ರೇಲಿಯಾದ ಅರೆಂಟೆ ಜನಾಂಗದವರಿಂದ ತಿಳಿದುಬಂದಿದ್ದು, ಅವರು ಇದನ್ನು ಕೆರೆ ಅನ್‌ಕೆರೆ ಎಂದು ಕರೆಯುತ್ತಾರೆ:
"Emus are around all the time, in green times and dry times. You pluck the feathers out first, then pull out the crop from the stomach, and put in the feathers you've pulled out, and then singe it on the fire. You wrap the milk guts that you've pulled out into something [such as] gum leaves and cook them. When you've got the fat off, you cut the meat up and cook it on fire made from river red gum wood."[೩೧]
ವಾಣಿಜ್ಯ ಸ್ವರೂಪದಲ್ಲಿನ ಎಮು ಸಾಕಣೆಯು ಪಶ್ಚಿಮ ಆಸ್ಟ್ರೇಲಿಯಾದಲ್ಲಿ 1987ರಲ್ಲಿ ಪ್ರಾರಂಭವಾಯಿತು ಮತ್ತು 1990ರಲ್ಲಿ ಅವುಗಳ ವಧಿಸುವಿಕೆಯು ಮೊದಲು ಸಂಭವಿಸಿತು.[೩೨] ಆಸ್ಟ್ರೇಲಿಯಾದಲ್ಲಿ, ಹಿಡಿದಿಡಲ್ಪಟ್ಟಿರುವ ಸ್ಥಿತಿಯಲ್ಲಿ ಸಂತಾನಾಭಿವೃದ್ಧಿ ಮಾಡಲಾದ ಪ್ರಾಣಿಗಳನ್ನು ವಾಣಿಜ್ಯ ಸ್ವರೂಪದ ಉದ್ಯಮವು ಆಧರಿಸಿದೆ ಮತ್ತು ಟಾಸ್ಮೇನಿಯಾವನ್ನು ಹೊರತುಪಡಿಸಿದ ಎಲ್ಲಾ ರಾಜ್ಯಗಳಲ್ಲೂ ಕಾಡುಪ್ರದೇಶದ ಎಮುಗಳನ್ನು ಸಂರಕ್ಷಿಸಲು ಪರವಾನಗಿಯನ್ನು ಹೊಂದುವುದು ಅತ್ಯಗತ್ಯವಾಗಿದೆ. ಆಸ್ಟ್ರೇಲಿಯಾದ ಆಚೆಗೆ, ಉತ್ತರ ಅಮೆರಿಕಾದಲ್ಲಿ ಒಂದು ಬೃಹತ್ ಪ್ರಮಾಣದಲ್ಲಿ ಎಮುಗಳನ್ನು ಸಾಕಣೆ ಮಾಡಲಾಗುತ್ತಿದ್ದು, US[೩೩] ಪೆರು, ಮತ್ತು ಚೀನಾದಲ್ಲಿ ಸುಮಾರು 1 ದಶಲಕ್ಷ ಪಕ್ಷಿಗಳನ್ನು ಸಾಕಲಾಗುತ್ತಿದ್ದರೆ, ಇನ್ನಿತರ ಕೆಲವು ದೇಶಗಳಲ್ಲಿ ಕಡಿಮೆ ಪ್ರಮಾಣದಲ್ಲಿ ಸಾಕಣೆ ಮಾಡಲಾಗುತ್ತಿದೆ. ಹಿಡಿದಿಡಲ್ಪಟ್ಟ ಸ್ಥಿತಿಯಲ್ಲಿ ಎಮುಗಳು ಚೆನ್ನಾಗಿ ಸಂತಾನಾಭಿವೃದ್ಧಿಯನ್ನು ಮಾಡುತ್ತವೆ, ಮತ್ತು ಜಡತೆಯ ಕಾರಣದಿಂದಾಗಿ ಉದ್ಭವಿಸುವ ಅವುಗಳ ಕಾಲಿನ ಹಾಗೂ ಜೀರ್ಣಾಂಗ ವ್ಯೂಹದ ಸಮಸ್ಯೆಗಳನ್ನು ತಪ್ಪಿಸುವ ಸಲುವಾಗಿ ಅವುಗಳನ್ನು ಬೃಹತ್ ಗಾತ್ರದ ಮುಕ್ತ ದೊಡ್ಡಿಗಳಲ್ಲಿ ಇರಿಸಲಾಗುತ್ತದೆ. ಕಾಳುಗಳನ್ನು ನೀಡುವ ಮೂಲಕ ಮತ್ತು ಕೊರತೆಯನ್ನು ಪೂರೈಸಲು ಮೇಯಿಸುವ ಮೂಲಕ ಅವುಗಳಿಗೆ ವಿಶಿಷ್ಟವಾದ ರೀತಿಯಲ್ಲಿ ಪೋಷಣೆ ನೀಡಲಾಗುತ್ತದೆ, ಮತ್ತು ಅವುಗಳಿಗೆ 50–70 ವಾರಗಳಷ್ಟು ವಯಸ್ಸಾದ ನಂತರ ಅವುಗಳನ್ನು ವಧಿಸಲಾಗುತ್ತದೆ. ಅವು ದಿನಕ್ಕೆರಡು ಬಾರಿ ತಿನ್ನುತ್ತವೆ ಮತ್ತು ಪ್ರತಿ ಭೋಜನದಲ್ಲೂ ...2.25 kilograms (5 lb)ನಷ್ಟು ಎಲೆಗಳನ್ನು ಅವು ಬಯಸುತ್ತವೆ. ಎಮುಗಳನ್ನು ಅವುಗಳ ಮಾಂಸ, ಚರ್ಮ, ಮತ್ತು ತೈಲಕ್ಕಾಗಿ ಪ್ರಮುಖವಾಗಿ ಸಾಕಲಾಗುತ್ತದೆ. ಎಮು ಮಾಂಸವು ಒಂದು ಕಡಿಮೆ-ಕೊಬ್ಬಿನಂಶವಿರುವ ಮಾಂಸವಾಗಿದೆ (ಇದರಲ್ಲಿ 1.5%ಗಿಂತ ಕಡಿಮೆ ಕೊಬ್ಬಿನಂಶವಿದೆ), ಮತ್ತು ಅದರಲ್ಲಿನ ಕೊಲೆಸ್ಟೆರಾಲ್ ಅಂಶವು ತಲಾ 100 ಗ್ರಾಂ ಮಾಂಸದಲ್ಲಿ 85 ಮಿಗ್ರಾಂನಷ್ಟಿರುವುದರಿಂದ ಕೊಬ್ಬಿಲ್ಲದ ಇತರ ಮಾಂಸಗಳೊಂದಿಗೆ ಅದು ಹೋಲಿಕೆಗೆ ಅರ್ಹವಾಗಿದೆ. ಇತರ ಸಾಕುಕೋಳಿ ಜಾತಿಗಳ ರೀತಿಯಲ್ಲಿ, ಬಳಕೆಗೆ ಯೋಗ್ಯವಾದ ಭಾಗಗಳ ಪೈಕಿಯ ಬಹುಭಾಗವೆಂದರೆ (ತೊಡೆ ಮತ್ತು ಪೊರೆಯ ಅಥವಾ ಕೆಳಕಾಲಿನ ಭಾಗದ ದೊಡ್ಡಗಾತ್ರದ ಸ್ನಾಯುಗಳಿಂದ ಮಾಂಸದ ಉತ್ತಮ ಭಾಗಗಳು ದೊರೆಯುತ್ತವೆ), ಗಾಢವಾದ ಮಾಂಸವೆನ್ನಬಹುದು; ಅಡುಗೆಯ ಉದ್ದೇಶಗಳಿಗಾಗಿ ಬಳಸುವ ಎಮುವಿನ ಮಾಂಸವನ್ನು USDAಯು ಕೆಂಪಿ ಮಾಂಸ ಎಂದು ಪರಿಗಣಿಸಿದೆ. ಏಕೆಂದರೆ ಇದರ ಕೆಂಪು ಬಣ್ಣ ಹಾಗೂ pH ಮೌಲ್ಯವು ದನದ ಮಾಂಸವನ್ನು [೩೩][೩೪] ಬಹುಮಟ್ಟಿಗೆ ಹೋಲುತ್ತದೆಯಾದರೂ, ಪರಿಶೀಲನಾ ಉದ್ದೇಶಗಳಿಗಾಗಿ ಇದನ್ನು ಸಾಕುಕೋಳಿ ಎಂದೇ ಪರಿಗಣಿಸಲಾಗಿದೆ. ಪ್ರಸಾಧನ ವಸ್ತುಗಳು, ಆಹಾರಕ್ರಮದ ಪೂರಕವಸ್ತುಗಳು, ಮತ್ತು ಚಿಕಿತ್ಸಕ ಉತ್ಪನ್ನಗಳಲ್ಲಿ ಬಳಸಲ್ಪಡುವ ತೈಲವನ್ನು ಉತ್ಪಾದಿಸಲು ಎಮುವಿನ ಕೊಬ್ಬು ಬಳಕೆಯಾಗುತ್ತದೆ. ಈ ತೈಲವು ಉರಿಯೂತ-ನಿರೋಧಕ ಗುಣಲಕ್ಷಣಗಳನ್ನು[೩೫] ಹೊಂದಿದೆ ಎಂಬುದಕ್ಕೆ ಕೆಲವೊಂದು ಸಾಕ್ಷ್ಯವು ದೊರೆತಿದೆ. ಆದಾಗ್ಯೂ, USನ ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ ಸಂಸ್ಥೆಯು ಅಪ್ಪಟ ಎಮು ತೈಲೋತ್ಪನ್ನವನ್ನು ಒಂದು ಅನುಮತಿಸದ ಔಷಧವಾಗಿ ಪರಿಗಣಿಸುತ್ತದೆ. ಚರ್ಮದಲ್ಲಿನ ಗರಿಯ ಕಿರುಚೀಲಗಳ ಸುತ್ತಲಿನ ಒಂದು ಉಬ್ಬಿದ ಪ್ರದೇಶದ ಕಾರಣದಿಂದಾಗಿ, ಎಮು ಚರ್ಮವು ಒಂದು ವಿಶಿಷ್ಟವಾದ ಶೈಲಿಯ ಮೇಲ್ಮೈಯನ್ನು ಹೊಂದಿದೆ; ಆದ್ದರಿಂದ ಸಣ್ಣ ತೊಗಲಿನ ಚೀಲಗಳು ಹಾಗೂ ಬೂಟುಗಳಂಥ ಸಣ್ಣ ವಸ್ತುಗಳ ತಯಾರಿಕೆಯಲ್ಲಿ ಈ ಚರ್ಮವನ್ನು ಇತರ ಚರ್ಮಗಳೊಂದಿಗೆ ಹಲವು ಬಾರಿ ಸಂಯೋಜಿಸಲಾಗುವುದು. ಎಮುವಿನ ಗರಿಗಳು ಹಾಗೂ ಮೊಟ್ಟೆಗಳನ್ನು ಅಲಂಕಾರಿಕ ಕಲೆಗಳು ಮತ್ತು ಕರಕೌಶಲಗಳಲ್ಲಿ ಬಳಸಲಾಗುವುದು.
ಮಾನವರ ಮೇಲಿನ ದಾಳಿಗಳು
[ಬದಲಾಯಿಸಿ]ಆಸ್ಟ್ರೇಲಿಯಾದಲ್ಲಿ ಎಮು ದಾಳಿಗಳು ಅಪರೂಪವಾಗಿವೆಯಾದರೂ ಅವು ಸಂಭವಿಸಿವೆ. ದಾಳಿಗೊಳಗಾದಾಗ, ಎಮು ಪಕ್ಷಿಯು ಒಂದು ಅಂಕುಡೊಂಕಾದ ಶೈಲಿಯಲ್ಲಿ ಚಲಿಸುತ್ತದೆ. ಬೆಣೆ-ಬಾಲದ ಹದ್ದಿನ ದಾಳಿಯಿಂದ ರಕ್ಷಿಸಿಕೊಳ್ಳಲು ಅದು ಹೀಗೆ ಮಾಡುತ್ತದೆ, ಅಥವಾ ಸನಿಹದ-ವ್ಯಾಪ್ತಿಯಲ್ಲಿ ಒದೆತದ ಶೈಲಿಯನ್ನು ಬಳಸುತ್ತದೆ.[೩೬] 1932ರಲ್ಲಿ, ಎಮು ಯುದ್ಧ ಎಂದು ಕರೆಯಲಾದ ಸನ್ನಿವೇಶವೊಂದರಲ್ಲಿ ಅವುಗಳನ್ನು ರವಾನಿಸಲು ಸೇನೆಯ ವತಿಯಿಂದ ಆದೇಶ ಬರುವುದರೊಂದಿಗೆ, ಅನೇಕ ಎಮುಗಳು ಪಶ್ಚಿಮ ಆಸ್ಟ್ರೇಲಿಯಾದಲ್ಲಿನ ಪಶುಪಾಲನಾ ಕೇಂದ್ರದ ವಲಯದೊಳಗೆ ಸೇರಿಕೊಂಡವು. ಮಾನವರ ಮೇಲೆ ಎಮುಗಳು ದಾಳಿಮಾಡುತ್ತಿದ್ದವು ಎಂಬುದಕ್ಕೆ ಇವು ಎರಡು ದಾಖಲಿಸಲ್ಪಟ್ಟ ನಿದರ್ಶನಗಳಾಗಿವೆ.[೩೭][೩೮]
ಸಾಂಸ್ಕೃತಿಕ ಉಲ್ಲೇಖಗಳು
[ಬದಲಾಯಿಸಿ]ಆಸ್ಟ್ರೇಲಿಯಾದ ಮೂಲನಿವಾಸಿ ಪುರಾಣದಲ್ಲಿ ಎಮುವಿಗೆ ಒಂದು ಪ್ರಮುಖವಾದ ಸ್ಥಾನ ದೊರೆತಿದೆ. NSWನಲ್ಲಿನ ಯುವಾಲ್‌ರಾಯ್ ಮತ್ತು ಇತರ ಸಮೂಹಗಳ ಒಂದು ಸೃಷ್ಟಿಯ ಮಿಥ್ಯಾಕಲ್ಪನೆಯು ಇದರಲ್ಲಿ ಸೇರಿಕೊಂಡಿದ್ದು, ಎಮುವಿನ ಮೊಟ್ಟೆಯೊಂದನ್ನು ಆಕಾಶಕ್ಕೆ ಎಸೆಯುವ ಮೂಲಕ ಸೂರ್ಯನ ಸೃಷ್ಟಿಯಾಯಿತು ಎಂಬ ಅಭಿಪ್ರಾಯವು ಇದರಲ್ಲಿ ಸೇರಿದೆ; ಹಲವಾರು ಮೂಲನಿವಾಸಿಗಳ ಸಮೂಹದಾದ್ಯಂತ ಹೇಳಲಾಗುವ ಕಾರ್ಯಕಾರಣವಾದದ ಅಸಂಖ್ಯಾತ ಕಥೆಗಳಲ್ಲಿ ಎಮು ಪಕ್ಷಿಯು ಕಾಣಿಸಿಕೊಳ್ಳುತ್ತದೆ.[೩೯] ಮಧ್ಯ ಆಸ್ಟ್ರೇಲಿಯಾದ ಕುರ್ಡೈಚಾ ಮನುಷ್ಯನು ತನ್ನ ಪಾದದ ಗುರುತುಗಳನ್ನು ಮರೆಮಾಡಲು ಎಮುವಿನ ಗರಿಗಳಿಂದ ಮಾಡಲಾದ ಪಾದರಕ್ಷೆಗಳನ್ನು ಧರಿಸುತ್ತಿದ್ದ ಎಂದು ಹೇಳಲಾಗುತ್ತದೆ. ಆಸ್ಟ್ರೇಲಿಯಾದಾದ್ಯಂತವಿರುವ ಅನೇಕ ಮೂಲನಿವಾಸಿ ಭಾಷೆ ಸಮೂಹಗಳು ಸಂಪ್ರದಾಯವೊಂದನ್ನು[೪೦] ಹೊಂದಿದ್ದು, ಕ್ಷೀರಪಥದಲ್ಲಿನ ಕಡುಧೂಳಿನ ಪಥಗಳು ಒಂದು ದೈತ್ಯ ಎಮುವನ್ನು ಪ್ರತಿನಿಧಿಸುತ್ತವೆ ಎಂಬುದು ಅದರಲ್ಲಿನ ನಂಬಿಕೆಯಾಗಿದೆ. ಎಮು ಪಕ್ಷಿಯು ಜನಪ್ರಿಯವಾದ ರೀತಿಯಲ್ಲಿ ಆದರೆ ಅನಧಿಕೃತವಾಗಿ ಒಂದು ಪ್ರಾಣಿಯ ಲಾಂಛನವಾಗಿ, ಅಂದರೆ, ಆಸ್ಟ್ರೇಲಿಯಾದ ರಾಷ್ಟ್ರೀಯ ಪಕ್ಷಿಯಾಗಿ ಪರಿಗಣಿಸಲ್ಪಟ್ಟಿದೆ.[೪೧] ಆಸ್ಟ್ರೇಲಿಯಾದ ಸೇನಾಪಡೆಗಳ ಮೇಲಂಗಿಯ ಮೇಲಿನ ಡಾಲಿನ ಒಂದು ಧಾರಕನಾಗಿ ಕೆಂಪು ಕಾಂಗರೂನೊಂದಿಗೆ ಇದು ಕಾಣಿಸಿಕೊಳ್ಳುತ್ತದೆ ಮತ್ತು ಸೇನಾಪಡೆಗಳ ಒಂದು ಭಾಗವಾಗಿಯೂ ಇದು ಆಸ್ಟ್ರೇಲಿಯಾದ 50 ಸೆಂಟ್ ನಾಣ್ಯದ ಮೇಲೂ ಕಾಣಿಸಿಕೊಳ್ಳುತ್ತದೆ. 1888ರಿಂದ ಬಂದ ಒಕ್ಕೂಟ-ಪೂರ್ವ ನ್ಯೂ ಸೌತ್ ವೇಲ್ಸ್‌ನ 100ನೇ ವಾರ್ಷಿಕೋತ್ಸವದ ಒಂದು ಸಂಚಿಕೆಯೂ ಸೇರಿದಂತೆ, ಆಸ್ಟ್ರೇಲಿಯಾದ ಹಲವಾರು ಅಂಚೆಯ ಚೀಟಿಗಳ ಮೇಲೂ ಎಮು ಕಾಣಿಸಿಕೊಂಡಿದೆ. 2 ಪೆನ್ನಿಗಳ ಮೌಲ್ಯದ ಒಂದು ನೀಲಿ ಬಣ್ಣದ ಎಮು ಅಂಚೆಚೀಟಿ, 1986ರಲ್ಲಿ ಬಿಡುಗಡೆಯಾದ 36 ಸೆಂಟ್ ಮೌಲ್ಯದ ಒಂದು ಅಂಚೆಚೀಟಿ, ಮತ್ತು 1994ರಲ್ಲಿ ಬಿಡುಗಡೆಯಾದ 1.35 $ ಮೌಲ್ಯದ ಒಂದು ಅಂಚೆಚೀಟಿ ಈ ಶ್ರೇಣಿಯಲ್ಲಿ ಸೇರಿವೆ. ಆಸ್ಟ್ರೇಲಿಯಾದ ಲಘು ಅಶ್ವದಳದ ಟೋಪಿಗಳು ಎಮುವಿನ ಗರಿಯ ಒಂದು ತುರಾಯಿಯಿಂದ ಭರ್ಜರಿಯಾಗಿ ಅಲಂಕರಿಸಲ್ಪಟ್ಟಿವೆ. ಆಸ್ಟ್ರೇಲಿಯಾದಲ್ಲಿ ಎಮುವಿನ ಹೆಸರನ್ನು ಇಟ್ಟುಕೊಂಡಿರುವ, ಸರ್ಕಾರಿ ಗೆಜೆಟ್ಟಿನಲ್ಲಿ ಪ್ರಕಟಿಸಿದ ಸುಮಾರು 600 ಸ್ಥಳಗಳಿದ್ದು, ಅದರಲ್ಲಿ ಪರ್ವತಗಳು, ಸರೋವರಗಳು, ಉಪನದಿಗಳು, ಮತ್ತು ಪಟ್ಟಣಗಳು ಸೇರಿಕೊಂಡಿವೆ.[೪೨] 19ನೇ ಮತ್ತು 20ನೇ ಶತಮಾನಗಳ ಅವಧಿಯಲ್ಲಿ, ಆಸ್ಟ್ರೇಲಿಯಾದ ಅನೇಕ ಕಂಪನಿಗಳು ಮತ್ತು ಗೃಹಬಳಕೆಯ ಉತ್ಪನ್ನಗಳು ಎಮು ಪಕ್ಷಿಯ ಹೆಸರನ್ನು ಇಟ್ಟುಕೊಂಡಿದ್ದವು; ಉದಾಹರಣೆಗೆ, ಪಶ್ಚಿಮ ಆಸ್ಟ್ರೇಲಿಯಾದಲ್ಲಿ ಎಮು ಹಣೆಪಟ್ಟಿಯ ಬಿಯರ್ ಪಾನೀಯವು 20ನೇ ಶತಮಾನದ ಆರಂಭದಿಂದಲೂ ತಯಾರಾಗುತ್ತಾ ಬಂದಿದೆ. ಇಲ್ಲಿನ ಸ್ವಾನ್ ಬ್ರೂಯರಿಯು ಎಮು ಹಣೆಪಟ್ಟಿಯ ಬಿಯರ್‌ಗಳ ಒಂದು ಶ್ರೇಣಿಯನ್ನು ಉತ್ಪಾದಿಸಿಕೊಂಡು ಬರುತ್ತಿದೆ. ಎಮು - ಆಸ್ಟ್ರಲ್ ಆರ್ನಿತಾಲಜಿ ಎಂಬುದು ರಾಯಲ್ ಆಸ್ಟ್ರೇಲೇಷ್ಯನ್ ಆರ್ನಿತಾಲಜಿಸ್ಟ್ಸ್ ಯೂನಿಯನ್‌ನ ಸಮಾನಸ್ಕಂದರಿಂದ ಅವಲೋಕಿಸಲ್ಪಟ್ಟ ಒಂದು ತ್ರೈಮಾಸಿಕ ಪ್ರಕಟಣೆಯಾಗಿದ್ದು, ಇದು ಬರ್ಡ್ಸ್ ಆಸ್ಟ್ರೇಲಿಯಾ ಎಂದೂ ಹೆಸರಾಗಿದೆ. ಎಮು ಪಕ್ಷಿ ಮತ್ತು ಕಾಂಗರೂಗಳು ಜೊತೆಯಾಗಿ, ದಕ್ಷಿಣ ಆಸ್ಟ್ರೇಲಿಯಾದಲ್ಲಿನ ವೈಯಾಲ್ಲಾದ ಹಳ್ಳಿಗಾಡಿನ-ಮೂಲಕ ನಡೆಸುವ ಹಿಮದ ಹಲಗೆಹಾಸು ತಂಡದ ಭಾಗ್ಯದಾಯಕ ಪ್ರಾಣಿಗಳಾಗಿ ಬಿಂಬಿಸಲ್ಪಟ್ಟಿವೆ.
ಆಕರಗಳು
[ಬದಲಾಯಿಸಿ]- ↑ ೧.೦ ೧.೧ BirdLife International (2008). Dromaius novaehollandiae. In: IUCN 2008. IUCN Red List of Threatened Species. Retrieved 05 November 2008. ಈ ಜಾತಿಯ ಕುರಿತು ಏಕೆ ಕನಿಷ್ಟ ಮಟ್ಟದ ಕಾಳಜಿಯನ್ನು ತೋರಿಸಲಾಗುತ್ತಿದೆ ಎಂಬುದರ ಕುರಿತಾದ ಸಮರ್ಥನೆಯನ್ನು ದತ್ತಾಂಶದ ಸಂಗ್ರಹದ ನಮೂದುಗಳು ಒಳಗೊಂಡಿವೆ
- ↑ ೨.೦೦ ೨.೦೧ ೨.೦೨ ೨.೦೩ ೨.೦೪ ೨.೦೫ ೨.೦೬ ೨.೦೭ ೨.೦೮ ೨.೦೯ ೨.೧೦ ೨.೧೧ ೨.೧೨ ೨.೧೩ ೨.೧೪ ೨.೧೫ Davies, S.J.J.F. (2003). "Emus". In Hutchins, Michael (ed.). Grzimek's Animal Life Encyclopedia. Vol. 8 Birds I Tinamous and Ratites to Hoatzins (2 ed.). Farmington Hills, MI: Gale Group. pp. 83–87. ISBN 0 7876 5784 0. ಉಲ್ಲೇಖ ದೋಷ: Invalid
<ref>
tag; name "Davies" defined multiple times with different content - ↑ ೩.೦ ೩.೧ * Brands, Sheila (August 14, 2008). "Systema Naturae 2000 / Classification, Dromaius novaehollandiae". Project: The Taxonomicon. Archived from the original on ಮೇ 28, 2009. Retrieved Feb 04 2009.
{{cite web}}
: Check date values in:|accessdate=
(help) - ↑ "ಕೇಂಬ್ರಿಜ್ ಅಡ್ವಾನ್ಸ್‌ಡ್ ಲರ್ನರ್ಸ್ ಡಿಕ್ಷ್‌ನರಿ". Archived from the original on 2008-12-23. Retrieved 2021-08-27.
- ↑ "ಅಮೆರಿಕನ್ ಹೆರಿಟೇಜ್ ಡಿಕ್ಷ್‌ನರಿ". Archived from the original on 2008-10-12. Retrieved 2010-03-23.
- ↑ ಬರ್ಡ್‌ಲೈಫ್ ಇಂಟರ್‌ನ್ಯಾಷನಲ್ (2008)(a)
- ↑ ೭.೦ ೭.೧ ಗೌಲ್ಡ್, J. 1865. ಹ್ಯಾಂಡ್‌ಬುಕ್ ಟು ದಿ ಬರ್ಡ್ಸ್ ಆಫ್ ಆಸ್ಟ್ರೇಲಿಯಾ ಸಂಪುಟ 2. ಲ್ಯಾಂಡ್ಸ್‌ಡೌನ್ ಪ್ರೆಸ್‌ನಿಂದ ಮರುಮುದ್ರಣವಾದದ್ದು 1972ರಲ್ಲಿ
- ↑ Gotch, A.F. (1995) [1979]. "16". Latin Names Explained. A Guide to the Scientific Classifications of Reptiles, Birds & Mammals. London: Facts on File. p. 179. ISBN 0 8160 3377 3.
- ↑ ೯.೦ ೯.೧ ೯.೨ ೯.೩ ಆಸ್ಟ್ರೇಲಿಯನ್ ಮ್ಯೂಸಿಯಂ. 2001. ಎಮು ಡ್ರೊಮೈಯಸ್ ನೊವೇಹೊಲ್ಯಾಂಡಿಯೇ
- ↑ Wesson, Sue C. (2001). Aboriginal flora and fauna names of Victoria: As extracted from early surveyors' reports (PDF). Melbourne: Victorian Aboriginal Corporation for Languages. Archived from the original (PDF) on 2006-08-19. Retrieved 2006-11-11.
- ↑ Troy, Jakelin (1993). The Sydney language. Canberra: Jakelin Troy. p. 54. ISBN 0-646-11015-2.
- ↑ https://web.archive.org/web/20060306065316/http://elibrary.unm.edu/sora/Auk/v044n04/p0592-p0593.pdf
- ↑ "Australian Faunal Directory - Redirect to new Environment Site". Deh.gov.au. Retrieved 2008-11-03.[ಶಾಶ್ವತವಾಗಿ ಮಡಿದ ಕೊಂಡಿ]
- ↑ "ADW: Dromaius novaehollandiae: Information". Animaldiversity.ummz.umich.edu. Retrieved 2008-11-03.
- ↑ "Commercial Emu and Ostrich rearing". Poulvet.com. Archived from the original on 2010-02-03. Retrieved 2008-11-03.
- ↑ ಪಾಠಕ್, A. E. ಮತ್ತು ಬಾಲ್ಡ್‌ವಿನ್, J. 1998 ಪೆಲ್ವಿಕ್ ಲಿಂಬ್ ಮಸ್ಕ್ಯುಲೇಚರ್ ಇನ್ ದಿ ಎಮು ಡ್ರೊಮೈಯಸ್ ನೊವೇಹೊಲ್ಯಾಂಡಿಯೇ (ಏವ್ಸ್ : ಸ್ಟ್ರೂಥಿಯಾನಿಫಾರ್ಮೆಸ್: ಡ್ರೊಮೈಡೇ): ಅಡಾಪ್ಟೇಷನ್ಸ್ ಟು ಹೈ-ಸ್ಪೀಡ್ ರನ್ನಿಂಗ್. ಜರ್ನಲ್ ಆಫ್ ಮಾರ್ಫಾಲಜಿ 238:23–37 PMID 9768501
- ↑ ಮ್ಯಾಲನಿ, S. K. ಮತ್ತು ಡಾಸನ್, T. J. 1995. ದಿ ಹೀಟ್ ಲೋಡ್ ಫ್ರಂ ಸೋಲಾರ್ ರೇಡಿಯೇಷನ್ ಆನ್ ಎ ಲಾರ್ಜ್, ಡೈಯರ್ನಲಿ ಆಕ್ಟಿವ್ ಬರ್ಡ್, ದಿ ಎಮು (ಡ್ರೊಮೈಯಸ್ ನೊವೇಹೊಲ್ಯಾಂಡಿಯೇ). ಜರ್ನಲ್ ಆಫ್ ಥರ್ಮಲ್ ಬಯಾಲಜಿ 20:381–87
- ↑ ಮ್ಯಾಲನಿ, S.K. ಮತ್ತು ಡಾಸನ್, T.J. 1994. ಥರ್ಮೋರೆಗ್ಯುಲೇಷನ್ ಇನ್ ಎ ಲಾರ್ಜ್ ಬರ್ಡ್, ದಿ ಎಮು (ಡ್ರೊಮೈಯಸ್ ನೊವೇಹೊಲ್ಯಾಂಡಿಯೇ). ಕಂಪ್ಯಾರಟೀವ್ ಬಯೋಕೆಮಿಸ್ಟ್ರಿ ಅಂಡ್ ಸೈಕಾಲಜಿ. B, ಬಯೋಕೆಮಿಕಲ್ ಸಿಸ್ಟಮಿಕ್ ಅಂಡ್ ಎನ್ವೈರ್ನಮೆಂಟಲ್ ಫಿಸಿಯಾಲಜಿ. 164:464–72
- ↑ ಮ್ಯಾಲನಿ, S.K. ಮತ್ತು ಡಾಸನ್, T.J. 1998. ವೆಂಟಿಲೇಟರಿ ಅಕಾಮಡೇಷನ್ ಆಫ್ ಆಕ್ಸಿಜನ್ ಡಿಮಾಂಡ್ ಅಂಡ್ ರೆಸ್ಪಿರೇಟರಿ ವಾಟರ್ ಲಾಸ್ ಇನ್ ಎ ಲಾರ್ಜ್ ಬರ್ಡ್, ದಿ ಎಮು (ಡ್ರೊಮೈಯಸ್ ನೊವೇಹೊಲ್ಯಾಂಡಿಯೇ), ಅಂಡ್ ಎ ರಿ-ಇಕ್ಸಾಮಿನೇಷನ್ ಆಫ್ ವೆಂಟಿಲೇಟರಿ ಅಲೋಮೆಟ್ರಿ ಫಾರ್ ಬರ್ಡ್ಸ್. ಫಿಸಿಯಲಾಜಿಕಲ್ ಜುವಾಲಜಿ 71:712–19
- ↑ ೨೦.೦ ೨೦.೧ ೨೦.೨ ಡೇವೀಸ್, S. J. J. F. 1976. ದಿ ನ್ಯಾಚುರಲ್ ಹಿಸ್ಟರಿ ಆಫ್ ದಿ ಎಮು ಇನ್ ಕಂಪ್ಯಾರಿಸನ್ ವಿತ್ ದಟ್ ಆಫ್ ದಿ ಆರ್ಡರ್ ಆಫ್ ಅದರ್ ರ್ಯಾಟೈಟ್ಸ್. ಇನ್ ಪ್ರೊಸೀಡಿಂಗ್ಸ್ ಆಫ್ ದಿ 16ನ್ತ್ ಇಂಟರ್‌ನ್ಯಾಷನಲ್ ಆರ್ನಿತೋಲಾಜಿಕಲ್ ಕಾಂಗ್ರೆಸ್ , H.J. ಫಿರ್ತ್ ಮತ್ತು J. H. ಕ್ಯಾಲಬಿ ಸಂಪಾದಿತ ಆಸ್ಟ್ರೇಲಿಯನ್ ಅಕಾಡೆಮಿ ಆಫ್ ಸೈನ್ಸ್, ಪುಟ 109–20 ISBN 0-85847-038-1
- ↑ ಬಾರ್ಕರ್, R. D. ಮತ್ತು ವರ್ಟ್‌ಜೆನ್ಸ್, W. J. M. ದಿ ಫುಡ್ ಆಫ್ ಆಸ್ಟ್ರೇಲಿಯನ್ ಬರ್ಡ್ಸ್ 1 ನಾನ್-ಪ್ಯಾಸರೀನ್ಸ್. CSIRO ಆಸ್ಟ್ರೇಲಿಯಾ ISBN 0-643-05007-8
- ↑ ೨೨.೦ ೨೨.೧ Robert Powell (1990). Leaf and Branch. Department of Conservation and Land Management. p. 197.
Quandong's fruits are an important food for the emu. ...major dispersers...
- ↑ ಮೆಕ್‌ಗ್ರಾತ್, R. J. ಮತ್ತು ಬಾಸ್, D. 1999. ಸೀಡ್ ಡಿಸ್ಪರ್ಸಲ್ ಬೈ ಎಮುಸ್ ಆನ್ ದಿ ನ್ಯೂ ಸೌತ್ ವೇಲ್ಸ್ ನಾರ್ತ್-ಈಸ್ಟ್ ಕೋಸ್ಟ್. EMU 99: 248–52
- ↑ ಮೆಲೆಕಿ I. A. ಮತ್ತು ಇತರರು 1998. ಎಂಡೋಕ್ರೈನ್ ಅಂಡ್ ಟೆಸ್ಟಿಕ್ಯುಲಾರ್ ಚೇಂಜಸ್ ಇನ್ ಎ ಷಾರ್ಟ್-ಡೇ ಸೀಸನಲಿ ಬ್ರೀಡಿಂಗ್ ಬರ್ಡ್, ದಿ ಎಮು (ಡ್ರೊಮೈಯಸ್ ನೊವೇಹೊಲ್ಯಾಂಡಿಯೇ), ಇನ್ ಸೌತ್‌ವೆಸ್ಟರ್ನ್ ಆಸ್ಟ್ರೇಲಿಯಾ. ಅನಿಮಲ್ ರೀಪ್ರೊಡಕ್ಷನ್ ಸೈನ್ಸಸ್ 53:143–55 PMID 9835373
- ↑ ೨೫.೦ ೨೫.೧ ೨೫.೨ ರೀಡರ್ಸ್ ಡೈಜೆಸ್ಟ್ ಕಂಪ್ಲೀಟ್ ಬುಕ್ ಆಫ್ ಆಸ್ಟ್ರೇಲಿಯನ್ ಬರ್ಡ್ಸ್ . ರೀಡರ್ಸ್ ಡೈಜೆಸ್ಟ್ ಸರ್ವೀಸಸ್ ISBN 0-909486-63-8
- ↑ ಬಸೆಟ್, S. M. ಮತ್ತು ಇತರರು 1999. ಜೆನೆಟಿಕಲಿ ಐಡೆಂಟಿಕಲ್ ಏವಿಯನ್ ಟ್ವಿನ್ಸ್. ಜರ್ನಲ್ ಆಫ್ ಜುವಾಲಜಿ 247: 475–78
- ↑ ಟೇಲರ್, E. L. ಮತ್ತು ಇತರರು 2000. ಜೆನೆಟಿಕ್ ಎವಿಡೆನ್ಸ್ ಫಾರ್ ಮಿಕ್ಸ್ಡ್ ಪೇರೆಂಟೇಜ್ ಇನ್ ನೆಸ್ಟ್ಸ್ ಆಫ್ ದಿ ಎಮು (ಡ್ರೊಮೈಯಸ್ ನೊವೇಹೊಲ್ಯಾಂಡಿಯೇ). ಬಿಹೇವಿಯರಲ್ ಇಕಾಲಜಿ ಅಂಡ್ ಸೋಷಿಯೋಬಯಾಲಜಿ 47:359–64
- ↑ * BirdLife International (2008(a)). "Emu - BirdLife Species Factsheet". Data Zone. Archived from the original on 14 ಮಾರ್ಚ್ 2020. Retrieved 06 Feb 2009.
{{cite web}}
: Check date values in:|accessdate=
and|year=
(help) - ↑ ಪರಿಸರ ಮತ್ತು ಸಂರಕ್ಷಣೆ ಇಲಾಖೆ (NSW) NSW ಉತ್ತರ ತೀರದ ಜೈವಿಕ ವಲಯ ಮತ್ತು ಪೋರ್ಟ್ ಸ್ಟೀಫನ್ಸ್‌ನಲ್ಲಿನ ಎಮು ಸಂಖ್ಯೆ - ಸಂಕ್ಷಿಪ್ತ ವರ್ಣನೆ Archived 2008-12-23 ವೇಬ್ಯಾಕ್ ಮೆಷಿನ್ ನಲ್ಲಿ.
- ↑ ಸೌತ್ ಆಸ್ಟ್ರೇಲಿಯಾ ಮೆಮರಿ
- ↑ Turner, Margaret-Mary, Arrernte Foods: Foods from Central Australia, IAD Press, Alice Springs, 1994, ISBN 0-949659-76-2 p47
- ↑ ಒ'ಮ್ಯಾಲಿ, P. 1997. ಎಮು ಫಾರ್ಮಿಂಗ್ ಇನ್ ದಿ ನ್ಯೂ ರೂರಲ್ ಇಂಡಸ್ಟ್ರೀಸ್ . ರೂರಲ್ ಇಂಡಸ್ಟ್ರೀಸ್ ರಿಸರ್ಚ್ & ಡೆವಲಪ್‌ಮೆಂಟ್ ಕಾರ್ಪೊರೇಷನ್
- ↑ ೩೩.೦ ೩೩.೧ USDA. ರ್ಯಾಟೈಟ್ಸ್ (ಎಮು, ಆಸ್ಟ್ರಿಚ್, ಅಂಡ್ ರಿಯಾ) Archived 2007-06-04 ವೇಬ್ಯಾಕ್ ಮೆಷಿನ್ ನಲ್ಲಿ.
- ↑ USDA. 2005. USDA ನ್ಯಾಷನಲ್ ನ್ಯೂಟ್ರಿಯೆಂಟ್ ಡೇಟಾಬೇಸ್ ಫಾರ್ ಸ್ಟಾಂಡರ್ಡ್ ರೆಫರೆನ್ಸ್, ರಿಲೀಸ್ 18 ಎಮು, ಫುಲ್ ರಂಪ್, ರಾ Archived 2010-09-02 ವೇಬ್ಯಾಕ್ ಮೆಷಿನ್ ನಲ್ಲಿ.
- ↑ ಯೋಗನಾಥನ್, S. ಮತ್ತು ಇತರರು. 2003. ಆಂಟಗೋನಿಸಂ ಆಫ್ ಕ್ರೋಟಾನ್ ಆಯಿಲ್ ಇನ್‌ಫ್ಲಮೇಷನ್ ಬೈ ಟಾಪಿಕಲ್ ಎಮು ಆಯಿಲ್ ಇನ್ CD-1 ಮೈಸ್. ಲಿಪಿಡ್ಸ್ 38:603–07. PMID 12934669
- ↑ ದಿ ಎಮು Archived 2010-05-30 ವೇಬ್ಯಾಕ್ ಮೆಷಿನ್ ನಲ್ಲಿ. NSW ಸರ್ಕಾರ
- ↑ ಅಟ್ಯಾಕ್ಡ್ ಬೈ ಆನ್ ಎಮು ದಿ ಆರ್ಗಸ್ 10 ಆಗಸ್ಟ್ 1904
- ↑ ವಿಕ್ಟೋರಿಯಾ, ಪ್ರಂ ಗೀಲಾಂಗ್ ಅಡ್ವರ್ಟೈಸರ್ ದಿ ಮರ್ಕ್ಯುರಿ 24 ಮಾರ್ಚ್ 1873
- ↑ ಡಿಕ್ಸನ್, R. B. 1916. ಓಷಿಯಾನಿಕ್ ಮೈಥಾಲಜಿ ಭಾಗ V. ಆಸ್ಟ್ರೇಲಿಯಾ
- ↑ ನಾರಿಸ್, R & C, 2009, ಎಮು ಡ್ರೀಮಿಂಗ್: ಆನ್ ಇಂಟ್ರಡಕ್ಷನ್ ಟು ಆಬ್‌ಒರಿಜಿನಲ್ ಅಸ್ಟ್ರಾನಮಿ [೧]
- ↑ ವಿದೇಶಾಂಗ ವ್ಯವಹಾರಗಳು ಮತ್ತು ವ್ಯಾಪಾರದ ಇಲಾಖೆ. ಆಸ್ಟ್ರೇಲಿಯಾದ ರಾಜನ ವಂಶಲಾಂಛನ Archived 2011-09-28 ವೇಬ್ಯಾಕ್ ಮೆಷಿನ್ ನಲ್ಲಿ.
- ↑ ಜಿಯೋಸೈನ್ಸ್ ಆಸ್ಟ್ರೇಲಿಯಾ. 2004. ಆಸ್ಟ್ರೇಲಿಯಾದ ಗೆಝೆಟಿಯರು Archived 2012-12-09 ವೇಬ್ಯಾಕ್ ಮೆಷಿನ್ ನಲ್ಲಿ.
ಹೊರಗಿನ ಕೊಂಡಿಗಳು
[ಬದಲಾಯಿಸಿ]- ಎಮು ಚಿಕ್ಸ್ ಎಮರ್ಜಿಂಗ್, ಧ್ವನಿ ತುಣುಕುಗಳು, ಛಾಯಾಚಿತ್ರಗಳು ಮತ್ತು ವಿಡಿಯೋಗಳೊಂದಿಗಿನ ಲೇಖನ.
- ಆಸ್ಟ್ರೇಲಿಯಾದ ಯುದ್ಧ ಸ್ಮಾರಕದಿಂದ ಪಡೆದಿರುವ "ಕಾಂಗರೂ ಗರಿಗಳು" ಮತ್ತು ಆಸ್ಟ್ರೇಲಿಯಾದ ಲಘು ಅಶ್ವದಳ Archived 2008-09-06 ವೇಬ್ಯಾಕ್ ಮೆಷಿನ್ ನಲ್ಲಿ.
- ಅಂತರ್ಜಾಲದ ಪಕ್ಷಿ ಸಂಗ್ರಹದಲ್ಲಿ ಲಭ್ಯವಿರುವ ಎಮು ವಿಡಿಯೋಗಳು, ಛಾಯಾಚಿತ್ರಗಳು & ಧ್ವನಿಗಳು Archived 2012-01-10 ವೇಬ್ಯಾಕ್ ಮೆಷಿನ್ ನಲ್ಲಿ.
- ಎಮು ಮೊಟ್ಟೆಗಳು ಹಾಗೂ ಅವುಗಳನ್ನು ಹೇಗೆ ಬೇಯಿಸುವುದು ಎಂಬುದರ ಕುರಿತಾದ ಒಂದು ಚರ್ಚೆ
- Pages with reference errors
- CS1: long volume value
- CS1 errors: dates
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಎಲ್ಲಾ ಲೇಖನಗಳು
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಲೇಖನಗಳು from ಆಗಸ್ಟ್ 2021
- ಶಾಶ್ವತವಾಗಿ ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಎಲ್ಲಾ ಲೇಖನಗಳು
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- Pages using PMID magic links
- Pages using ISBN magic links
- IUCN Red List least concern species
- Articles with 'species' microformats
- Taxobox articles missing a taxonbar
- All pages needing factual verification
- Wikipedia articles needing factual verification from December 2007
- Articles with invalid date parameter in template
- ಕಡತ ಕೊಂಡಿಗಳು ಮುರಿದಿರುವ ಪುಟಗಳು
- Commons link is on Wikidata
- Spoken articles
- Articles with hAudio microformats
- ಕ್ಯಾಸುಯೇರಿಡೇ
- ಡ್ರೊಮೈಯಸ್
- ಹಾರಲಾರದ ಪಕ್ಷಿಗಳು
- ವಂಶಲಾಂಛನದ ಪಕ್ಷಿಗಳು
- ಆಸ್ಟ್ರೇಲಿಯಾದ ರಾಷ್ಟ್ರೀಯ ಸಂಕೇತಗಳು
- ಪಕ್ಷಿಗಳು