ಕಾಂಗರೂ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕಾಂಗರೂ
Eastern Grey Kangaroo
Scientific classification
ಸಾಮ್ರಾಜ್ಯ:
Animalia
ವಿಭಾಗ:
Chordata
ವರ್ಗ:
ಕೆಳವರ್ಗ:
ಗಣ:
ಕುಟುಂಬ:
ಕುಲ:
Subgenus:
Species

6 species, see text.

ಕಾಂಗರೂ ಮ್ಯಾಕ್ರೊ ಪೋಡಿಡೀ ಕುಟುಂಬದ (ಮ್ಯಾಕ್ರೊಪಾಡ್ ಎಂದರೆ ದೊಡ್ಡ ಪಾದ) ಒಂದು ಹೊಟ್ಟೆಚೀಲದ ಪ್ರಾಣಿ. ಸಾಮಾನ್ಯ ಬಳಕೆಯಲ್ಲಿ ಈ ಪದವನ್ನು ಈ ಕುಟುಂಬದ ಅತಿ ದೊಡ್ಡ ಪ್ರಜಾತಿಗಳನ್ನು, ವಿಶೇಷವಾಗಿ ಮ್ಯಾಕ್ರೊಪಸ್ ಜಾತಿಯವುಗಳನ್ನು, ಅಂದರೆ ಕೆಂಪು ಕಾಂಗರೂ, ಆಂಟಿಲೋಪಿನ್ ಕಾಂಗರೂ, ಪೌರ್ವಾತ್ಯ ಬೂದು ಕಾಂಗರೂ ಮತ್ತು ಪಾಶ್ಚಾತ್ಯ ಬೂದು ಕಾಂಗರೂವನ್ನು, ವಿವರಿಸಲು ಬಳಸಲಾಗುತ್ತದೆ. ಈ ಕುಟುಂಬವು ವಾಲಬಿಗಳು, ವೃಕ್ಷ ಕ್ಯಾಂಗರೂಗಳು, ವಾಲರೂಗಳು, ಪ್ಯಾಡಿಮೆಲನ್‍ಗಳು ಮತ್ತು ಕ್ವಾಕಾ, ಎಲ್ಲ ಸೇರಿ ಕೆಲವು ೬೩ ಜೀವಂತ ಪ್ರಜಾತಿಗಳನ್ನು ಒಳಗೊಂಡಂತೆ, ಅನೇಕ ಚಿಕ್ಕದಾದ ಪ್ರಜಾತಿಗಳನ್ನು ಕೂಡ ಒಳಗೊಳ್ಳುತ್ತದೆ.

ವೈಜ್ಞಾನಿಕ ವರ್ಗೀಕರಣ[ಬದಲಾಯಿಸಿ]

A male red kangaroo

ಮ್ಯಾಕ್ರೋ ಪೋಡಿಡೀ ಕುಟುಂಬಕ್ಕ ಸೇರಿದ್ದು,ಮ್ಯಾಕ್ರೋಪಸ್ ಪಂಗಡಕ್ಕೆ ಸೇರಿದೆ.ಮುಖ್ಯವಾಗಿ ನಾಲ್ಕು ಪ್ರಭೇದಗಳನ್ನು ಗುರುತಿಸಲಾಗಿದೆ.

ಶಾರೀರಿಕ ಲಕ್ಷಣಗಳು[ಬದಲಾಯಿಸಿ]

ನೆಗೆಯಲು ಅನುಕೂಲವಾಗುವ ಬಲಿಷ್ಠವಾದ,ಉದ್ದವಾದ ಹಿಂಗಾಲುಗಳನ್ನು ಹೊಂದಿವೆ.ಉದ್ದ ಬಾಲವಿರುತ್ತದೆ.ಮರಿಗಳನ್ನು ಹೊತ್ತು ಸಾಗಿಸಲು ಹೊಟ್ಟೆಯಲ್ಲಿ ಚೀಲಗಳಿರುವುದು ಇದರ ಮುಖ್ಯ ವೈಶಿಷ್ಟ್ಯ. ಚೀಲದೊಳಗೆ ನಾಲ್ಕು ಮೊಲೆತೊಟ್ಟುಗಳಿದ್ದು ಮರಿಗಳಿಗೆ ಹಾಲೂಡಿದಲು ಅನುಕೂಲವಾಗಿದೆ.

ಭೌಗೋಳಿಕ ವಿತರಣೆ[ಬದಲಾಯಿಸಿ]

ಕಾಂಗರೂಗಳು ಆಸ್ಟ್ರೇಲಿಯಾ ಖಂಡಕ್ಕಷ್ಟೇ ಸೀಮಿತವಾದ ಪ್ರಾಣಿ.ವೃಕ್ಷ ಕಾಂಗರೂವಿನ ಒಂದು ಪ್ರಭೇದ ಮಾತ್ರ ಪಾಪುವ ನ್ಯೂಗಿನಿಯಲ್ಲಿ ಕಂಡುಬರುತ್ತದೆ.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

ಟೆಂಪ್ಲೇಟು:Diprotodontia

"https://kn.wikipedia.org/w/index.php?title=ಕಾಂಗರೂ&oldid=1090899" ಇಂದ ಪಡೆಯಲ್ಪಟ್ಟಿದೆ