ಎಚ್.ಎಂ.ಜ್ಯೋತಿ
ಗೋಚರ
ಎಚ್.ಎಂ.ಜ್ಯೋತಿ | |
---|---|
Born | ಜ್ಯೋತಿ (27 ವರ್ಷ-ಮೇ 2016ಕ್ಕೆ) ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಕರ್ನಾಟಕ |
Nationality | ಭಾರತೀಯ : |
Occupation | 100, 200, 400 ಮತ್ತು 4×100 ಮೀಟರ್ಸ್ ಓಟದ ಸ್ಪರ್ಧೆ |
Years active | 2004-2016/ಪ್ರಸ್ತುತ |
Spouse(s) | ಮಾಜಿ ರಾಷ್ಟ್ರೀಯ ಚಾಂಪಿಯನ್,ಓಟಗಾರ ಶ್ರೀನಿವಾಸ್ |
Children | ಚಿಕ್ಕವಯಸ್ಸಿನ ಮಗಳು |
Awards | ಏಷಿಯನ್ ಅಥ್ಲೆತಿಕ್ ಛಾಂಪಿಯನ್‍ಷಿಪ್ :ಚಿನ್ನ;ಏಷಿಇಯನ್ ಗ್ರಾನ್ ಪ್ರೀ: ಚಿನ್ನ |
ಓಟದ ಕ್ರೀಡಾಪಟು
[ಬದಲಾಯಿಸಿ]- ಎಚ್.ಎಂ.ಜ್ಯೋತಿ (27 ವರ್ಷ-ಮೇ 2016ಕ್ಕೆ) ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನವರು. ಭಾರತದ ಅಥ್ಲೆಟಿಕ್ಸ್ ಲೋಕದಲ್ಲಿ ರಾಜ್ಯದ ಎಚ್.ಎಂ.ಜ್ಯೋತಿ ಸಾಧನೆ ಗಮನಾರ್ಹವಾದುದು. ಈ ವರ್ಷ ನಡೆದ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಹಲವು ಪದಕಗಳಿಗೆ ಕೊರಳೊಡ್ಡಿರುವ ಅವರು ಎರಡು ತಿಂಗಳ ಹಿಂದೆ ಲಖನೌನಲ್ಲಿ ನಡೆದಿದ್ದ ರಾಷ್ಟ್ರೀಯ ಅಥ್ಲೆಟಿಕ್ಸ್‌ನಲ್ಲಿ ಅತ್ಯುತ್ತಮ ಅಥ್ಲೀಟ್ ಗೌರವಕ್ಕೂ ಭಾಜನರಾಗಿದ್ದಾರೆ.
- 100, 200, 400 ಮೀಟರ್ಸ್ ಓಟ ಮತ್ತು 4ಘಿ100 ಮೀಟರ್ಸ್ ರಿಲೇ ಸ್ಪರ್ಧೆಯಲ್ಲಿ ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನ ಜ್ಯೋತಿ ಅವರ ಸಾಧನೆ Archived 2017-10-22 ವೇಬ್ಯಾಕ್ ಮೆಷಿನ್ ನಲ್ಲಿ. ವಿಶೇಷವಾದುದು.
- ಕಾಮನ್‌ವೆಲ್ತ್ ಕ್ರೀಡಾಕೂಟ, ಏಷ್ಯನ್ ಚಾಂಪಿಯನ್‌ಷಿಪ್, ಏಷ್ಯನ್ ಅಥ್ಲೆಟಿಕ್ ಚಾಂಪಿಯನ್‌ಷಿಪ್ ಗಳಲ್ಲಿ ಪದಕ ಗೆದ್ದ ಹೆಗ್ಗಳಿಕೆ ಹೊಂದಿರುವ ಜ್ಯೋತಿ ಏಷ್ಯನ್ ಕ್ರೀಡಾಕೂಟದಲ್ಲಿ ಫೈನಲ್ ಪ್ರವೇಶಿಸಿ ಸೈ ಎನಿಸಿಕೊಂಡಿದ್ದಾರೆ. ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲೂ ಪದಕಗಳ ಬೇಟೆಯಾಡಿರುವ ಅವರು 100 ಮತ್ತು 200 ಮೀಟರ್ಸ್ ಓಟಗಳಲ್ಲಿ ಕ್ರಮವಾಗಿ 11.30 ಹಾಗೂ 23.80 ಸೆಕೆಂಡುಗಳಲ್ಲಿ ಗುರಿ ಮುಟ್ಟಿ ಕರ್ನಾಟಕದ ಮಟ್ಟಿಗೆ ಹೊಸ ದಾಖಲೆ ನಿರ್ಮಿಸಿದ್ದಾರೆ.
- ರಾಷ್ಟ್ರೀಯ ದಾಖಲೆ
- 4*100 ಮೀಟರ್ಸ್ ರಿಲೇಯಲ್ಲಿ ರಾಷ್ಟ್ರೀಯ ದಾಖಲೆ ಬರೆದಿರುವ ಕೀರ್ತಿಗೂ ಭಾಜನರಾಗಿದ್ದಾರೆ.
ಜೀವನ
[ಬದಲಾಯಿಸಿ]- ಅವರ ಅಪ್ಪ ಮಂಜುನಾಥ್ ಮತ್ತು ಅಮ್ಮ ತಿಪ್ಪಮ್ಮ. ಅವರ ಬೆಂಬಲದಿಂದಲೇ ಕ್ರೀಡಾ ಕ್ಷೇತ್ರದಲ್ಲಿ ಇವತ್ತು ಇಷ್ಟು ಎತ್ತರಕ್ಕೆ ಬೆಳೆದು ನಿಂತಿದ್ದೇನೆ. ಅವರಿಗೆ ಮಗಳು ದೊಡ್ಡ ಸಾಧನೆ ಮಾಡಬೇಕೆಂಬ ಹಂಬಲ ಇತ್ತು, ಎನ್ನುತ್ತಾರೆ ಜ್ಯೋತಿ. ಪತಿ ಶ್ರೀನಿವಾಸ್ ಅವರಂತೂ ಹೆಜ್ಜೆ ಹೆಜ್ಜೆಗೂ ಬೆನ್ನು ತಟ್ಟಿ ಪ್ರೋತ್ಸಾಹಿಸುತ್ತಾರೆ. ಪತಿ ಶ್ರೀನಿವಾಸ್ ಭಾರತೀಯ ಸ್ಪ್ರಿಂಟರ್. ಕಾಮನ್ವೆಲ್ತ್ ಆಟಗಳು ಪದಕ ವಿಜೇತ . ಮಾಜಿ ರಾಷ್ಟ್ರೀಯ ಚಾಂಪಿಯನ್! ರಿಲೇ ರಾಷ್ಟ್ರೀಯ ದಾಖಲೆ ಹೊಂದಿದವ! ಮಾಜಿ ಓಟಗಾರ ಶ್ರೀನಿವಾಸ್ ಮದುವೆಯಾದ. ಹೆಮ್ಮೆಯ ಭಾರತೀಯ! ಅವರ ಪತಿ ಅಥ್ಲೆಟಿಕ್-ಓಟದ ಕೋಚ್ ಆಗಿ ಪತ್ನಿಯನ್ನು ಬೆಂಬಲಿಸುತ್ತಾರೆ. ಅತ್ತೆ, ಮಾವ ಕೂಡಾ ಇನ್ನಷ್ಟು ಸಾಧನೆ ಮಾಡು ಎಂದು ಆತ್ಮಸ್ಥೈರ್ಯ ತುಂಬಿದ್ದಾರೆ. ಅವರಿಗೆ ಒಂದು ಚಿಕ್ಕ ಮಗಳಿದ್ದಾಳೆ.
ಕ್ರೀಡೆಯಲ್ಲಿ ಆಸಕ್ತಿಗೆ ಕಾರಣ
[ಬದಲಾಯಿಸಿ]- ಜ್ಯೋತಿ ಚಿಕ್ಕವಳಾಗಿದ್ದಾಗ ಅವರ ಅಕ್ಕ ಸರಿತಾ ವಿವಿಧ ಕ್ರೀಡಾಕೂಟಗಳಲ್ಲಿ ಭಾಗವಹಿಸುತ್ತಿದ್ದರು. ಆಗ ಅವರಿಗೆ ಸಾಕಷ್ಟು ಬಹುಮಾನಗಳು ಸಿಗುತ್ತಿದ್ದವು. ಅದನ್ನು ಕಂಡು ಇವರಲ್ಲೂ ಅವಳಂತೆ ಬಹುಮಾನ ಗೆಲ್ಲಬೇಕೆಂಬ ಆಸೆ ಚಿಗುರೊಡೆದಿತ್ತು. ಒಮ್ಮೆ ನಾನು ಓಟದ ಸ್ಪರ್ಧೆಯಲ್ಲಿ ಭಾಗವಹಿಸಿ ಅಕ್ಕನನ್ನೇ ಸೋಲಿಸಿ ಪ್ರಶಸ್ತಿ ಗೆದ್ದಿದ್ದೆ. ಅಲ್ಲಿ ನನ್ನ ಸಾಮರ್ಥ್ಯ ಕಂಡವರು ಪ್ರಶಂಸೆಯ ಮಾತುಗಳನ್ನಾಡಿದ್ದರು. ಅವರ ಮೆಚ್ಚುಗೆಯೇ ಸ್ಫೂರ್ತಿಯಾಯಿತು. 8ನೇ ತರಗತಿಗೆ ಮನೆಯವರು ಬೆಂಗಳೂರಿನ ವಿದ್ಯಾನಗರದ ಕ್ರೀಡಾ ಹಾಸ್ಟೆಲ್‌ಗೆ ಸೇರಿಸಿದರು. ಅಲ್ಲಿಂದ ಕ್ರೀಡಾ ಬದುಕಿನ ಪಯಣ ಆರಂಭವಾಯಿತು.
ಕ್ರೀಡಾ ತರಬೇತಿ
[ಬದಲಾಯಿಸಿ]- ಕ್ರೀಡಾ ನಿಲಯದಲ್ಲಿ ಮಂಜುನಾಥ್ ಎಂಬ ಕೋಚ್ ಇದ್ದರು. ಅವರು ನನ್ನ ಪ್ರತಿಭೆಗೆ ಸಾಣೆ ಹಿಡಿದರು. ಬಳಿಕ ರವಿ ಅವರೂ ಕೂಡಾ ಹಲವು ಕೌಶಲಗಳನ್ನು ಹೇಳಿಕೊಟ್ಟರು. ಅವರ ಮಾರ್ಗದರ್ಶನ ದಲ್ಲಿ ನೈಪುಣ್ಯ ಸಾಧಿಸಿ ಜೂನಿಯರ್ ಟೂರ್ನಿಗಳಲ್ಲಿ ಅಮೋಘ ಸಾಮರ್ಥ್ಯ ತೋರಿದರು. ಒಮ್ಮೆ ಭಾರತ ತಂಡದ ಕೋಚ್ ಆರ್. ಎಸ್. ಸಿಧು ಅವರು ಇವರಿಗೆ, ತುಂಬಾ ಎತ್ತರವಾಗಿದ್ದೀಯಾ. 400 ಮೀಟರ್ಸ್ ಓಟದೆಡೆ ಹೆಚ್ಚು ಗಮನ ನೀಡಿ ಅದರಲ್ಲಿಯೇ ಮುಂದುವರಿ ಎಂದು ಸಲಹೆ ನೀಡಿದರು.
- ಕ್ರಮೇಣ ಇವರು ಸೀನಿಯರ್ ತಂಡದ ತರಬೇತಿ ಶಿಬಿರಕ್ಕೂ ಆಯ್ಕೆಯಾದರು. 2004ರಲ್ಲಿ ದಕ್ಷಿಣ ಕೊರಿಯಾದಲ್ಲಿ ನಡೆದಿದ್ದ ಏಷ್ಯನ್ ಅಥ್ಲೆಟಿಕ್ ಕ್ರೀಡಾಕೂಟ ನ 4X400 ಮೀಟರ್ಸ್ ರಿಲೇಯಲ್ಲಿ ಭಾಗವಹಿಸಿ ಚಿನ್ನ ಗೆದ್ದರು.. ಅಲ್ಲಿಂದ ಅವರ ಕ್ರೀಡಾ ಬದುಕಿಗೆ ಹೊಸ ತಿರುವು ಸಿಕ್ಕಿತು. ಶಾಲಾ ದಿನಗಳಲ್ಲಿ ಟ್ರಿಪಲ್ ಜಂಪ್ ಸೇರಿದಂತೆ ಎಲ್ಲಾ ಸ್ಪರ್ಧೆಗಳಲ್ಲೂ ಭಾಗವಹಿಸುತ್ತಿದ್ದರು. ತುಂಬಾ ಚೆನ್ನಾಗಿ ಓಡುತ್ತಿದ್ದುದರಿಂದ ಇದರಲ್ಲಿಯೇ ಮುಂದುವರಿಯುವಂತೆ ಕೋಚ್‌ಗಳು ಸಲಹೆ ನೀಡಿದ್ದರು. ಹೀಗಾಗಿ ಓಟದಲ್ಲಿ ಗಮನ ಕೇಂದ್ರೀಕರಿಸಿದರು.
- “100, 200, 400 ಮತ್ತು 4ಘಿ100 ಮೀಟರ್ಸ್ ಓಟದ ಸ್ಪರ್ಧೆಗಳಲ್ಲಿ ಭಾಗವಹಿಸುವಾಗ .ನಾಲ್ಕೂ ಸ್ಪರ್ಧೆಗಳಲ್ಲೂ ಕಣಕ್ಕಿಳಿಯುವುದು ಆರಂಭದಲ್ಲಿ ತುಂಬಾ ಕಷ್ಟ ಅನಿಸುತ್ತಿತ್ತು. ಸಾಧನೆಯ ಹಸಿವು ಬಡಿದೆಬ್ಬಿಸುತ್ತಿತ್ತು. ಕ್ರಮೇಣ ಕಠಿಣ ತಾಲೀಮು ನಡೆಸುವುದಕ್ಕೆ ಒತ್ತು ನೀಡಿದೆ. ಈಗ ಯಾವುದೂ ಸವಾಲು ಅನಿಸುವುದೇ ಇಲ್ಲ. 100 ಮೀಟರ್ಸ್ ಓಟ ನನ್ನ ಅಚ್ಚುಮೆಚ್ಚಿನ ವಿಭಾಗ. ಜೊತೆಗೆ ಅಷ್ಟೇ ಭಯ ಕೂಡ. ಬೇರೆ ವಿಭಾಗಗಳಲ್ಲಾದರೆ ಸ್ವಲ್ಪ ಯೋಚಿಸುವುದಕ್ಕಾದರೂ ಸಮಯ ಇರುತ್ತೆ. ಆದರೆ 100 ಮೀಟರ್ಸ್‌ನಲ್ಲಿ ಹಾಗಲ್ಲ. ಈ ವಿಭಾಗದಲ್ಲಿ ಓಡಲು ಗಂಡೆದೆ ಬೇಕು. ಆ ಕ್ಷಣದಲ್ಲಿ ಕ್ಷಿಪ್ರಗತಿಯಲ್ಲಿ ಓಡಿದರಷ್ಟೇ ಪದಕ ಗೆಲ್ಲಲಾಗುತ್ತದೆ.” ಎನ್ನುತ್ತಾರೆ ಜ್ಯೋತಿ.
ಟೋಕಿಯೊ ಒಲಿಂಪಿಕ್ಸ್
[ಬದಲಾಯಿಸಿ]- ಜ್ಯೋತಿ.ಯವರಿಗೆ ಒಲಿಂಪಿಕ್ಸ್ ನಲ್ಲಿ ಓಡುವ ಬಯಕೆ ಇದೆ. “ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವುದು ಸಾಮಾನ್ಯದ ಮಾತಲ್ಲ. ಅದಕ್ಕೆ ಸಾಕಷ್ಟು ವರ್ಷಗಳ ಮುಂಚಿನಿಂದಲೇ ಸಿದ್ಧತೆ ಮಾಡಿಕೊಂಡು ಟೋಕಿಯೊ ಒಲಿಂಪಿಕ್ಸ್‌ಗೆ ಇನ್ನೂ ನಾಲ್ಕು ವರ್ಷ ಸಮಯ ಇದೆ. ಇದಕ್ಕಾಗಿ ಈಗಿನಿಂದಲೇ ತಯಾರಿ ಮಾಡಿಕೊಂಡು ಹೋದರೆ ಪದಕದ ಬರಬಹುದೇನೊ” ಎನ್ನುತ್ತಾರೆ.
ಮುಂದಿನ ಟೂರ್ನಿ
[ಬದಲಾಯಿಸಿ]- 2017ರ ಜುಲೈ ತಿಂಗಳಿನಲ್ಲಿ ಜಾರ್ಖಂಡ್‌ನ ರಾಂಚಿಯಲ್ಲಿ ಏಷ್ಯನ್ ಟ್ರ್ಯಾಕ್ ಮತ್ತು ಫೀಲ್ಡ್ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್ ಆಯೋಜನೆಯಾಗಿದೆ. ಆ ಚಾಂಪಿಯನ್‌ಷಿಪ್‌ನಲ್ಲಿ ಪದಕ ಗೆಲ್ಲುವುದು ಅವರ ಸದ್ಯದ ಗುರಿ. ಆ ಚಾಂಪಿಯನ್‌ಷಿಪ್‌ನಲ್ಲಿ 100, 200 ಮೀಟರ್ಸ್ ಓಟ ಮತ್ತು 4ಘಿ100 ಮೀಟರ್ಸ್ ರಿಲೇಯಲ್ಲಿ ದೇಶವನ್ನು ಪ್ರತಿನಿಧಿಸುವ ಅವಕಾಶ ಸಿಗುವ ನಿರೀಕ್ಷೆ ಹೊಂದಿದ್ದಾರೆ. ಇದಕ್ಕೂ ಮುನ್ನ ಫೆಡರೇಷನ್ ಕಪ್, ರಾಷ್ಟ್ರೀಯ ಚಾಂಪಿಯನ್‌ಷಿಪ್, ಏಷ್ಯನ್ ಮತ್ತು ಇಂಡಿಯನ್ ಗ್ರ್ಯಾನ್ ಪ್ರಿ ಟೂರ್ನಿಗಳಲ್ಲಿ ಅಮೋಘ ಸಾಮರ್ಥ್ಯ ತೋರುವ ಸವಾಲು ಅವರ ಮುಂದಿದೆ. ಇದಕ್ಕಾಗಿ ಕಠಿಣ ತಾಲೀಮು ನಡೆಸುತ್ತಿದ್ದಾರೆ.[೩]
ಸಾಧನೆಗಳು
[ಬದಲಾಯಿಸಿ]ಅಂತರರಾಷ್ಟ್ರೀಯ ಕೂಟಗಳಲ್ಲಿ ಸಾಧನೆ
[ಬದಲಾಯಿಸಿ]ಕೂಟ | ಸ್ಥಳ | ದಿನಾಂಕ | ವಿಭಾಗ | ಪದಕ/ಸ್ಥಾನ |
---|---|---|---|---|
ಒಲಂಪಿಕ್ ಅರ್ಹತಾ ಕೂಟ | ಕಜಕಸ್ಥಾನ | ಜೂನ್ 2016 | 4X100 | ಬೆಳ್ಳಿ(ರಾಷ್ರೀಯ ದಾಖಲೆ) |
ಕಾಶ್ಯನೊವ್ ಸ್ಮಾರಕ ಅಂ.ರಾ.ಕೂಟ | ಕಜಕಸ್ಥಾನ | ಜೂನ್ 2016 | 4X100 | ಬೆಳ್ಳಿ |
ಅಂ.ರಾ. ಅತ್ಲೆಟಿಕ್ ಕೂಟ | ತತಿಯಾನ | ಜೂನ್ 2016 | 4X100 | ಬೆಳ್ಳಿ |
ತೈವಾನ್ ಓಪನ್ ಆತ್ಲೆಟಿಕ್ಸ್ | ತೈವಾನ್ | ಮೇ 2016 | 200 ಮೀ. | ಕಂಚು |
ಐಎಎಎಫ್ ವಿಶ್ವ ಛಾಲೇಂಜ್ | ಬೀಜಿಂಗ್ | ಮೇ 2016 | 4X100 | ರಾಷ್ರೀಯ ದಾಖಲೆ |
ಏಷ್ಯನ್ ಕ್ರೀಡಾಕೂಟ | ಚೀನಾ | ನವೆಂಬರ್ 2014 | 4X100 | 5 ನೇ |
ಕಾಮನ್‍ವೆಲ್ತ್ ಕ್ರೀಡಾ ಕೂಟ | ಗ್ಲಾಸ್ಕೊ | 2014 | 4X100 | 5 ನೇ |
ಅಂತರರಾಷ್ಟ್ರೀಯ ಕೂಟಗಳಲ್ಲಿ ಸಾಧನೆ 2010
[ಬದಲಾಯಿಸಿ]ಕೂಟ | ಸ್ಥಳ | ದಿನಾಂಕ | ವಿಭಾಗ | ಪದಕ/ಸ್ಥಾನ |
---|---|---|---|---|
ಏಷ್ಯನ್ ಕ್ರೀಡಾಕೂಟ | ಚೀನಾ | ನವೆಂಬರ್ 15,2010 | 4X100 | 5 ನೇ |
ಕಾಮನ್‍ವೆಲ್ತ್ ಕ್ರೀಡಾ ಕೂಟ | ದೆಹಲಿ | 3-10-2010 | 4X100 | ಕಂಚು |
ಏಷ್ಯನ್ ಗ್ರಾನ್ ಪ್ರಿ | ಪುಣೆ | 27-6-2010 | 100 | ಕಂಚು |
ಏಷ್ಯನ್ ಗ್ರಾನ್ ಪ್ರಿ | ಪುಣೆ | 27-6-2010 | 100 | ಚಿನ್ನ |
ಏಷ್ಯನ್ ಗ್ರಾನ್ ಪ್ರಿ | ಬೆಂಗಳೂರು | 4-7-2010 | 100 | ಕಂಚು |
ಏಷ್ಯನ್ ಗ್ರಾನ್ ಪ್ರಿ | ಬೆಂಗಳೂರು | 4-7-2010 | 4X100 | ಚಿನ್ನ |
ಏಷ್ಯನ್ ಗ್ರಾನ್ ಪ್ರಿ | ಚನ್ನೈ | 8-7-2010 | 100 | ಕಂಚು |
ಏಷ್ಯನ್ ಗ್ರಾನ್ ಪ್ರಿ | ಚನ್ನೈ | 8-7-2010 | 4X100 | ಬೆಳ್ಳಿ |
ಅಂತರರಾಷ್ಟ್ರೀಯ ಕೂಟಗಳಲ್ಲಿ ಸಾಧನೆ2008 - 2009
[ಬದಲಾಯಿಸಿ]ಕೂಟ | ಸ್ಥಳ | ದಿನಾಂಕ | ವಿಭಾಗ | ಪದಕ/ಸ್ಥಾನ |
---|---|---|---|---|
ಏಷಿಯನ್ ಅತ್ಲೆಟಿಕ್ಸ ಛಾಂಪಿಯನ್‍ಶಿಪ್ | ಚೀನಾ | 10-11-2009 | 100 | ಕಂಚು |
ಏಷ್ಯನ್ ಗ್ರಾನ್ ಪ್ರಿ | ಚೀನಾ | 27-5-2009 | 4X100 | ಕಂಚು |
ಏಷ್ಯನ್ ಗ್ರಾನ್ ಪ್ರಿ | ಚೀನಾ | 27-5-2009 | 100 | ಕಂಚು |
ಏಷ್ಯನ್ ಗ್ರಾನ್ ಪ್ರಿ | ಚೀನಾ | 23-5-2009 | 100 | ಕಂಚು |
ಏಷ್ಯನ್ ಆಲ್ ಸ್ಪೊರ್ಟ್‍ಸ್ ಮೀಟ್ | ಭೋಪಾಲ್ | 18-9-2008 | 100 | ಚಿನ್ನ |
ಏಷ್ಯನ್ ಗ್ರಾನ್ ಪ್ರಿ | ಥಾಯ್ಲೆಂಡ್ | ಜೂನ್-2008 | 4X100 | ಕಂಚು |
ಏಷ್ಯನ್ ಗ್ರಾನ್ ಪ್ರಿ | ಬ್ಯಾಂಕಾಕ್ | ಜೂನ್-2008 | 4X100 | ಬೆಳ್ಲಿ |
ದಕ್ಷಿಣ ಏಷಿಯನ್ ಛಾಂಪಿಯನ್ ಷಿಪ್ | ಕೇರಳ | ಮಾರ್ಚಿ-2008 | 100 | ಕಂಚು |
ದಕ್ಷಿಣ ಏಷಿಯನ್ ಛಾಂಪಿಯನ್ ಷಿಪ್ | ಕೇರಳ | ಮಾರ್ಚಿ-2008 | 4X100 | ಬೆಳ್ಳಿ |
ಅಂತರರಾಷ್ಟ್ರೀಯ ಕೂಟಗಳಲ್ಲಿ ಸಾಧನೆ-2006-2007
[ಬದಲಾಯಿಸಿ]ಕೂಟ | ಸ್ಥಳ | ದಿನಾಂಕ | ವಿಭಾಗ | ಪದಕ/ಸ್ಥಾನ |
---|---|---|---|---|
ಏಷ್ಯನ್ ಗ್ರಾನ್ ಪ್ರಿ | ಪುಣೆ | 2007 | 100 | ೪ ನೇ |
ಏಷ್ಯನ್ ಗ್ರಾನ್ ಪ್ರಿ | ಗೌಹಾಟಿ | ಜೂನ್ 2007 | 4X100 | ಕಂಚು |
ಏಷ್ಯನ್ ಕ್ರೀಡಾಕೂಟ | ದೋಹಾ | ಡಿಸೆಂಬರ್ 2007 | 4X100 | ೪ನೇ |
ಆಹ್ವಾನಿತ ಕೂಟ | ರಷ್ಯಾ | ಸೆಪ್ಟಂಬರ್ 2006 | 100 | ಚಿನ್ನ |
ಏಷ್ಯನ್ ಗ್ರಾನ್ ಪ್ರಿ | ಪುಣೆ | ಮಾರ್ಚಿ 2006 | 200 ಮೀ. | ೫ ನೇ |
ಏಷ್ಯನ್ ಗ್ರಾನ್ ಪ್ರಿ | ಬ್ಯಾಂಕಾಕ್ | ಮಾರ್ಚಿ 2006 | 200 ಮೀ. | ಬೆಳ್ಲಿ |
ಏಷಿಯನ್ ಅತ್ಲೆಟಿಕ್ಸ್ ಛಾಂಪಿಯನ್ ಷಿಪ್ | ದ.ಕೊರಿಯ | ಸೆಪ್ಟಂಬರ್ 2004 | 4X100 | ಚಿನ್ನ |
ನೋಡಿ
[ಬದಲಾಯಿಸಿ]- *ದೀಪಾ ಕರ್ಮಾಕರ್
- *ಕರ್ನಾಟಕ ಮತ್ತು ಕ್ರೀಡೆ
- *17ನೇ ಏಷ್ಯನ್ ಕ್ರೀಡಾಕೂಟ 2014
- *ಮೇರಿ ಕೋಮ್
- *ಎಂ.ಆರ್. ಪೂವಮ್ಮ
- *ಜಿತು ರಾಯ್
- *ಭಾರತದ ಮಹಿಳಾ ಹಾಕಿ ತಂಡ
ಉಲ್ಲೇಖ
[ಬದಲಾಯಿಸಿ]- ↑ Women's 4x100m relay team break 18 year old national ...
- ↑ HM Jyothi | Facebook
- ↑ ಒಲಿಂಪಿಕ್ಸ್‌ನಲ್ಲಿ ಓಡುವ ಹೆಬ್ಬಯಕೆ Archived 2016-11-15 ವೇಬ್ಯಾಕ್ ಮೆಷಿನ್ ನಲ್ಲಿ.;ಜಿ. ಶಿವಕುಮಾರ;14 Nov, 2016