ಎಂ. ಡಿ. ವಲ್ಸಮ್ಮ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


ಎಂ. ಡಿ. ವಲ್ಸಮ್ಮ
ವೈಯುಕ್ತಿಕ ಮಾಹಿತಿ
ಪುರ್ಣ ಹೆಸರುಮನತೂರ್ ದೇವಾಸಿಯಾ ವಲ್ಸಮ್ಮ
ರಾಷ್ರೀಯತೆಭಾರತ
ಜನನ೨೧ ಅಕ್ಟೋಬರ್ ೧೯೬೦
ಒಟ್ಟಾಯೈ, ಕಣ್ಣೂರು, ಕೇರಳ, ಭಾರತ
Sport
ದೇಶಭಾರತ
ಕ್ರೀಡೆಟ್ರ್ಯಾಕ್ ಮತ್ತು ಫೀಲ್ಡ್
ಸ್ಪರ್ಧೆಗಳು(ಗಳು)೪೦೦ಮೀಟರ್ಸ್ ಹರ್ಡಲ್ಸ್
Achievements and titles
ವೈಯಕ್ತಿಕ ಪರಮಶ್ರೇಷ್ಠ೧೦೦ ಮೀಟರ್ಸ್ ಹರ್ಡಲ್ಸ್: ೧೪.೦೨(ಜಕಾರ್ತಾ ೧೯೮೫)
೪೦೦ ಮೀಟರ್ಸ್ ಹರ್ಡಲ್ಸ್: ೫೭.೮೧(೧೯೮೫)

ಮನತೂರ್ ದೇವಾಸಿಯಾ ವಲ್ಸಮ್ಮ (ಜನನ ೨೧ ಅಕ್ಟೋಬರ್ ೧೯೬೦) ಭಾರತದ ನಿವೃತ್ತ ಕ್ರೀಡಾಪಟು. ಏಷ್ಯನ್ ಕ್ರೀಡಾಕೂಟದಲ್ಲಿ ಭಾರತದಿಂದ ಸ್ಪರ್ಧಿಸಿದ ಮೊದಲ ಮಹಿಳೆ ಹಾಗು ಚಿನ್ನದ ಪದಕ ಗೆದ್ದ ಎರಡನೇ ಮಹಿಳೆ.

ಆರಂಭಿಕ ಜೀವನ[ಬದಲಾಯಿಸಿ]

ವಲ್ಸಮ್ಮ ಅವರು ಅಕ್ಟೋಬರ್ ೨೧, ೧೯೬೦ ರಂದು ಕೇರಳದ ಕಣ್ಣೂರು ಜಿಲ್ಲೆಯ ಒಟ್ಟಾಯೈನಲ್ಲಿ ಜನಿಸಿದರು. ಶಾಲಾ ದಿನಗಳಲ್ಲಿಯೇ ಅವರು ಅಥ್ಲೆಟಿಕ್ಸ್ ವೃತ್ತಿಜೀವನವನ್ನು ಪ್ರಾರಂಭಿಸಿದ್ದರೂ ಸಹ ಹೆಚ್ಚಿನ ಅಧ್ಯಯನಕ್ಕಾಗಿ ಪಾಲಕ್ಕಾಡ್ನ ಮರ್ಸಿ ಕಾಲೇಜಿಗೆ [೧] ತೆರಳಿದಾಗ ಅವರು ಅದನ್ನು ಹೆಚ್ಚು ಗಂಭೀರವಾಗಿ ತೆಗೆದುಕೊಂಡರು. ೧೯೭೯ರಲ್ಲಿ ಪುಣೆಯಲ್ಲಿ ನಡೆದ ಅಂತರ-ವಿಶ್ವವಿದ್ಯಾನಿಲಯ ಚಾಂಪಿಯನ್‌ಶಿಪ್‌ನಲ್ಲಿ 100 ಮೀಟರ್ ಹರ್ಡಲ್ಸ್ ಮತ್ತು ಪೆಂಟಾಥ್ಲಾನ್‌ನಲ್ಲಿ ಅವರ ಮೊದಲ ಪದಕವನ್ನು ಕೇರಳಕ್ಕೆ ಗೆದ್ದುಕೊಟ್ಟರು.

ವಲ್ಸಮ್ಮ ಅವರು ದಕ್ಷಿಣ ರೈಲ್ವೆ(ಭಾರತ)ಯಲ್ಲಿ ನೋಂದಾಯಿತರಾಗಿದ್ದರು ಮತ್ತು ಎ. ಕೆ. ಕುಟ್ಟಿಯವರ ಬಳಿ ತರಬೇತಿ ಪಡೆದಿದ್ದಾರೆ. 1981 ರಲ್ಲಿ ಬೆಂಗಳೂರಿನಲ್ಲಿ ನಡೆದ ಅಂತರ್-ರಾಜ್ಯ ಸಭೆಯಲ್ಲಿ ಅವರು ಐದು ಚಿನ್ನದ ಪದಕಗಳನ್ನು ಗೆಲ್ಲುವ ಮೂಲಕ ಗುರುತಿಸಿಕೊಂಡರು. ಆ ಪ್ರದರ್ಶನದಿಂದಾಗಿ ಅವರು ರೈಲ್ವೆ ಮತ್ತು ರಾಷ್ಟ್ರೀಯ ತಂಡಗಳಲ್ಲಿ ಆಡುವಂತಾಯಿತು ಮತ್ತು ೧೯೮೨ರಲ್ಲಿ ಅವರು ೪೦೦ ಮೀಟರ್ ಹರ್ಡಲ್ಸ್‌ನಲ್ಲಿ ಚಾಂಪಿಯನ್ ಆಗುವ ಮೂಲಕ ಏಷ್ಯನ್ ದಾಖಲೆಗಿಂತಲೂ ಉತ್ತಮವಾದ ದಾಖಲೆಯೋದನ್ನ ನಿರ್ಮಿಸಿದರು.

ವೃತ್ತಿಪರ ಅಥ್ಲೆಟಿಕ್ಸ್ ವೃತ್ತಿ[ಬದಲಾಯಿಸಿ]

1982 ರಲ್ಲಿ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿನೆಡೆದ ಏಷ್ಯನ್ ಕ್ರೀಡಾಕೂಟದಲ್ಲಿ ತವರು ನೆಲದ ಪ್ರೇಕ್ಷಕರ ಎದುರು ವಲ್ಸಮ್ಮ ಅವರು ೪೦೦ ಮೀಟರ್ ಹರ್ಡಲ್ಸ್‌ನಲ್ಲಿ ಭಾರತ ಮತ್ತು ಏಷ್ಯಾದಲ್ಲಿಯೇ ದಾಖಲೆಯ ೫೮.೪೭ ಸೆಕೆಂಡುಗಳಲ್ಲಿ ಚಿನ್ನದ ಪದಕವನ್ನು ಗೆದ್ದರು. ಈ ಮೂಲಕ ಕಮಲ್ಜಿತ್ ಸಂಧು (೪೦೦ ಮೀಟರ್ಸ್- ೧೯೭೪ ) ಅವರ ನಂತರ, ಭಾರತಕ್ಕೆ ಏಷ್ಯನ್ ಗೇಮ್ಸ್ ಅಲ್ಲಿ ಚಿನ್ನ ಗೆದ್ದ ಎರಡನೇ ಮಹಿಳಾ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಪಾತ್ರರಾದರ. ಮುಂದೆ ಅವರು ೪ * ೪೦೦ಮೀಟರ್ ರಿಲೇ ತಂಡದಲ್ಲಿ ಭಾಗವಹಿಸಿ ಬೆಳ್ಳಿ ಪದಕವನ್ನು ಸಂಪಾದಿಸಿಕೊಂಡರು. ೧೯೮೨ರಲ್ಲಿ ಭಾರತ ಸರ್ಕಾರದ ಅರ್ಜುನ ಪ್ರಶಸ್ತಿ ಮತ್ತು ೧೯೮೩ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನ ಪಡೆದುಕೊಂಡರು. ಹಾಗೂ ಕೇರಳ ಸರ್ಕಾರದಿಂದ ನೀಡಲಾಗುವ ಜಿ.ವಿ.ರಾಜ ನಗದು ಪ್ರಶಸ್ತಿಯನ್ನೂ ಪಡೆದುಕೊಂಡರು.

೧೯೮೪ರಲ್ಲಿ ಭಾರತೀಯ ಮಹಿಳಾ ತಂಡವೊಂದು ಲಾಸ್ ಏಂಜಲೀಸ್ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿ ಫೈನಲ್‌ಗೆ ಪ್ರವೇಶಿಸಿದ್ದುಇತಿಹಾಸದಲ್ಲೇ ಮೊದಲು ಮತ್ತು ಏಳನೇ ಸ್ಥಾನದಲ್ಲಿ ಮುಕ್ತಾಯಗೊಳಿಸಿದ್ದು ಹೆಮ್ಮೆಯ ಸಂಗತಿ. ಮುಂದೆ ವಲ್ಸಮ್ಮ ಅವರು ೧೦೦ ಮೀಟರ್ ಹರ್ಡಲ್ಸ್‌ನಲ್ಲಿ ಹೆಚ್ಚು ಗಮನಹರಿಸಿದರು. ಅವರು ೧೦೦ ಮೀಟರ್ ಹರ್ಡಲ್ಸ್‌ನಲ್ಲಿ ಚಿನ್ನ ಗೆಲ್ಲುವ ಮೂಲಕ ೧೯೮೫ರಲ್ಲಿ ನಡೆದ ಮೊದಲ ನ್ಯಾಷನಲ್ ಗೇಮ್ಸ್ ಅಲ್ಲಿ ರಾಷ್ಟ್ರೀಯ ದಾಖಲೆಯನ್ನು ನಿರ್ಮಿಸಿದರು.

ವಲ್ಸಮ್ಮ ಅವರು ೧೯೮೩ರಲ್ಲಿ ಮಾಸ್ಕೋದಲ್ಲಿ ನಡೆದ ಸ್ಪಾರ್ಟಕಿಯಡ್ ಕ್ರೀಡಾಕೂಟದಲ್ಲಿ ಸಹ ಕಾಣಿಸಿಕೊಂಡು ೧೦೦ ಮೀಟರ್ ಅಲ್ಲಿ ಕಂಚಿನ ಪದಕವನ್ನ ಗಳಿಸಿದರು, ಕ್ವಾರ್ಟರ್-ಮೈಲ್ ಅಲ್ಲಿ ಬೆಳ್ಳಿ ಪದಕ ಮತ್ತು ೪ X ೪೦೦ ಮೀಟರ್ ರಿಲೇಯಲ್ಲಿ ಚಿನ್ನದ ಪದಕವನ್ನ ಗೆದ್ದರು.

ಸುಮಾರು ೧೫ ವರ್ಷಗಳ ವೃತ್ತಿಜೀವನದಲ್ಲಿ ಎಂ. ಡಿ ವಲ್ಸಮ್ಮ ಅವರು ಲಂಡನ್, ಟೋಕಿಯೊ, ಹವಾನಾಗಳಲ್ಲಿ ನಡೆದ ವಿಶ್ವಕಪ್ಮೀಟ್ಗಳು , ೧೯೮೨, ೧೯೮೬, ೧೯೯೦ ಮತ್ತು ೧೯೯೪ರ ಏಷ್ಯನ್ ಗೇಮ್ಸ್ ಆವೃತ್ತಿಗಳಲ್ಲಿ ಹಾಗು ಎಲ್ಲಾ ಏಷ್ಯನ್ ಟ್ರ್ಯಾಕ್ ಮತ್ತು ಫೀಲ್ಡ್ ಮೀಟ್ಗಳು ಮತ್ತು ಎಸ್ಎಎಫ್ ಗೇಮುಗಳಲ್ಲಿ ಭಾಗವಹಿಸಿ ಪ್ರತಿಯೊಂದರಲ್ಲೂ ತಮ್ಮ ಛಾಪನ್ನು ಮೂಡಿಸಿದ್ದಾರೆ.

ಉಲ್ಲೇಖಗಳು[ಬದಲಾಯಿಸಿ]