ಚರ್ಚೆಪುಟ:ಎಂ. ಡಿ. ವಲ್ಸಮ್ಮ

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
  • ರಂಗನಾಥ್ ಮ. ರವರೇ ನೀವು ಹಾಕಿದ ಪದಕಗಳ ಟೆಂಪ್ಲೇಟ್ ಪಟ್ಟಿಯಲ್ಲಿ ಪದಕಗಳ ಹೆಸರೇ ಇಲ್ಲ. ಇಂಗ್ಲಿಷ್ ನಿಂದ ಅನುವಾದ ಮಾಡಿದರೂ - ಪದಕಗಳ ಹೆಸರು ಅದರಲ್ಲಿ ಬಿದ್ದಿಲ್ಲ. ನಾನು ಅದಕ್ಕಾಗಿ ಪದಕಗಳ ಹೆಸರು ಹಾಕಿ ಉತ್ತಮ ಪಡಿಸಿದರೆ ಅದನ್ನು ಅಳಿಸಿದ್ದೀರಿ- ಕಾರಣ ಏನು? ಲೇಖನಗಳು ನಿಮ್ಮ ಸ್ವಂತ ಹಕ್ಕಲ್ಲ- ತಿಳಿಯಿರಿ. ಪದಕಗಳ ವಿವರಗಳಿಗೆ ಸರಿಯಾದ ಉಲ್ಲೇಖ ಹಾಕಿಲ್ಲ ಹಾಗೆಯೇ ಬಿಟ್ಟಿದ್ದೀರಿ ಕಾರಣ ಏನು?. ಓಬ್ಬರು ಬರೆದ ಲೇಖನದಲ್ಲಿ ಕೊರತೆ ಇದ್ದರೆ,- ಸರಿ ಇಲ್ಲದಿದ್ದರೆ ಮತ್ತೊಬ್ಬರು ಅದನ್ನು ಸರಿಪಡಿಸಬಹುದು. ಅದು ನಿಮ್ಮೊಬ್ಬರಿಗೇ ಸೇರಿದ್ದಲ್ಲ. ಅಪೂರ್ಣವಾದ ಲೇಖನ, ಉಲ್ಲೇಖಗಳಿಲ್ಲದೆ- ವಿಷಯ ತುಂಬಿದ- ಹಾಕಿದ ಲೇಖನಗಳನ್ನು ಉತ್ತಮ ಪಡಿಸಲು ಸೂಚನೆ ಹಾಕಬಹುದು, ಅಥವಾ ರದ್ದು ಮಾಡಬಹುದು. ಉತ್ತಮ ಪಡಿಸಿದ ಲೇಖನಗಳ ಸಂಪಾದನೆಯನ್ನು ತೆಗೆಯುವುದು ವಿಧ್ವಂಸಕ ಕೃತ್ಯ. ಮತ್ತು ಅದು ಅಹಂಕಾರದ ಕಾರ್ಯ. ನೀವು ಇನ್ನೂ ಹೊಸದಾಗಿ ಸಂಪಾದನೆಗೆ ಇಳಿದಿದ್ದೀರಿ ಎಂದು ಭಾವಿಸುತ್ತೇನೆ. ಕಲಿಯುವುದು ಬಹಳಷ್ಟಿದೆ. ಅಹಂಕಾರ ಬೇಡ ಒಳ್ಳೆಯ ತಿದ್ದುಪಡಿಯನ್ನು ಸ್ವಾಗತಿಸಿ. ಇಲ್ಲವೇ ನೀವೇ ಕೊರೆತೆಯಾದ ವಿಷಯಗಳನ್ನು ತುಂಬಿರಿ. ಇಂಗ್ಲಿಷ್ ವಿಭಾಗದಲ್ಲಿ ಎಷ್ಟು ಉಲ್ಲೇಖವಿದೆ ನೋಡಿ ಅದೆಲ್ಲವನ್ನು ಹಾಕಿಲ್ಲ - ಏಕೆ? ಪ್ರತಿಯೊಂದಕ್ಕೂ ಆಧಾರ ಹಾಕಬೇಕೆಂದು ನಿಮಗೆ ಕಲಿಸಿದವರು ಹೇಳಿಲ್ಲವೇ? ಆದರೂ ಏಕೆ ಅಹಂಕಾರ? ತಪ್ಪಿದ್ದರೆ ಒಪ್ಪಿಕೊಳ್ಳಬೇಕು- ಅದು ಇಲ್ಲಿ ಸಂಪಾದನೆ ಮಾಡುವವರ ಮೊದಲ ಲಕ್ಷಣ. ಇಂಗ್ಲಿಷ್ ವಿಭಾಗ ನೋಡಿ - ಅದರಲ್ಲಿ ಸಂಪಾದನೆಗೆ ಎಷ್ಟು ಜನ ಸಹಕರಿಸಿ ಸೇರಿಕೊಂಡಿದ್ದಾರೆ ಎಂದು. ನೀವು ಮಾಡಿದ್ದೇ ಸರಿ, ಎಂಬ ಬೇರೆಯವರು ಅಭಿವೃದ್ಧಿಪಡಿಸಬಾರದು ಎಂಬ ಧೋರಣೆ ವಿಕಿಪೀಡಿಯಾಕ್ಕೆ ಸರಿ ಅಲ್ಲ. ದಯವಿಟ್ಟು ನಾನು ಹೇಳಿದ ವಿಚಾರಗಳನ್ನು ಸಮಾಧಾನದಿಂದ ಯೋಚಿಸಿ- ವಿಚಾರಿಸಿ ತಿಳಿದುಕೊಂದು ನಿಮ್ಮ ಲೇಖನವನ್ನು ಇನ್ನೂ ಅಭಿವೃದ್ಧಿಪಡಿಸಲು ಕೋರುತ್ತೇನೆ. ಹೊಸಬರಾದ ನಿಮಗೆ ಮತ್ತೊಮ್ಮೆ ಹೇಳುವುದು ಏನೆಂದರೆ- ನೀವು ಹಾಕಿದ ಲೇಖನ ನಿಮ್ಮೊಬ್ಬರಿಗೇ ಸೇರಿದ್ದಲ್ಲ- ಮತ್ತು ಅದರಲ್ಲಿ ಉಲ್ಲೇಖಗಳ ಕೊರತೆ ಇದೆ. ಬೇರೆಯವರು ಅಭಿವೃದ್ಧಿಪಡಿಸಬಹುದು- ಅಗತ್ಯವಿದ್ದರೆ ಅಭಿವೃದ್ಧಿ ಪಡಿಸಬೇಕು- ದಯವಿಟ್ಟು ತಿಳಿಯಿರಿ.Bschandrasgr (ಚರ್ಚೆ) ೦೯:೦೪, ೨೬ ಜನವರಿ ೨೦೨೦ (UTC)

ಕ್ಷಮಾಪಣೆ[ಬದಲಾಯಿಸಿ]

ಕ್ಷಮೆಯಿರಲಿ. ವಿಕಿಪೀಡಿಯ ಕಲಿಕೆಯ ಆರಂಭಿಕ ಹಂತದಲ್ಲಿದ್ದೇನೆ. ಉದ್ದೇಶಪೂವ‍ಕವಾಗಿ ನಿಮ್ಮ ಸಂಪಾದನೆಯನ್ನು ಅಳಿಸಿಲ್ಲ. ಈ ಕುರಿತು ವಿಷಾದಿಸುತ್ತ, ದಯಮಾಡಿ ನೀವು ಸೇರಿಸಿದ್ದ ಉಲ್ಲೇಖಗಳನ್ನು ಪುನಃ ಸೇರಿಸಬೇಕೆಂದು ಮನವಿ ಮಾಡಿಕೊಳ್ಳುತ್ತೇನೆ. ರಂಗನಾಥ್ ಮ (ಚರ್ಚೆ) ೧೩:೦೬, ೧೬ ಸೆಪ್ಟೆಂಬರ್ ೨೦೨೩ (IST)[reply]