ಊಳಿಗಮಾನ ಪದ್ಧತಿ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಊಳಿಗಮಾನ ಪದ್ಧತಿ ಅನ್ನುವುದು ಊಳಿಗಮಾನದ ಶ್ರೀಮಂತರ(ಒಡೆಯ ಅಥವಾ ಧಣಿ), ಮತ್ತು ಹಿಡುವಳಿದಾರರ (ರೈತ) ನಡುವಿನ ಆಳ್ವಿಕೆಯ ಮತ್ತು ಮಿಲಿಟರಿ ಪದ್ಧತಿ. ಊಳಿಗಮಾನ ಪದ್ಧತಿಯು ಒಂಬತ್ತನೆಯ ಶತಮಾನದಿಂದ ಹದಿನೈದನೆಯ ಶತಮಾನದವರೆಗೂ ಪ್ರವರ್ಧ ಮಾನದಲ್ಲಿತ್ತು. ಇದರ ಅತ್ಯಂತ ಉನ್ನತ ಅರ್ಥದಲ್ಲಿ, ಊಳಿಗಮಾನ ಪದ್ಧತಿಯನ್ನು ಮಧ್ಯಯುಗದ ಯುರೋಪಿನ ಆಳ್ವಿಕೆಯ ಪದ್ದತಿಗೆ ಸೂಚಿಸಲಾಗಿದ್ದು ಪರಸ್ಪರ ಕಾನೂನು ಬದ್ದ ಮತ್ತು ಸೈನಿಕ ಉದಾತ್ತಗುಣದ ನಡುವಿನ ಮಿಲಿಟರಿ ಜವಾಬ್ದಾರಿಗಳಿಂದ ರಚಿಸಲ್ಪಟ್ಟು, ಮೂರು ಪ್ರಮುಖ ಪರಿಕಲ್ಪನೆಗಳಾದ ಒಡೆಯರ, ಹಿಡುವಳಿದಾರರ, ಮತ್ತು ಉಂಬಳಿಗಳ ಸುತ್ತ ಸುತ್ತುತ್ತದೆ. ಲ್ಯಾಟಿನ್ ಪದ ಪ್ಯುಡಮ್‌ (ಫೀಪ್) ನಿಂದ ಪಡೆಯಲಾಗಿದ್ದರೂ, ನಂತರ ಉಪಯೋಗದಲ್ಲಿದ್ದ ಶಬ್ದ ಪ್ಯುಡಲಿಸಂ ಮತ್ತು ಪದ್ಧತಿಗಳನ್ನು ಮಧ್ಯಯುಗದ ಅವಧಿಯಲ್ಲಿ ಜೀವಿಸುತ್ತಿದ್ದ ಜನರಿಂದ ಇದನ್ನು ಔಪಚಾರಿಕ ರಾಜಕೀಯ ಪದ್ಧತಿ ಎಂದು ಭಾವಿಸಲಾಗಿಲ್ಲ.

ವ್ಯಾಖ್ಯಾನ[ಬದಲಾಯಿಸಿ]

 • ಊಳಿಗಮಾನ ಪದ್ಧತಿಗೆ ವ್ಯಾಪಕವಾಗಿ ಅಂಗೀಕರಿಸಲಾದ ಆಧುನಿಕ ವ್ಯಾಖ್ಯಾನ ಇಲ್ಲ. ಆಧುನಿಕ ಅವಧಿಯ ಆರಂಭದಲ್ಲಿ (17ನೆಯ ಶತಮಾನ) ಕಲ್ಪಿಸಲ್ಪಟ್ಟ, ಶಬ್ದವನ್ನು, ಮೂಲತಃ ರಾಜಕೀಯ ಪ್ರಕರಣಗಳಲ್ಲಿ ಉಪಯೋಗಿಸಲಾಗಿತ್ತು. ಆದರೆ ಊಳಿಗಮಾನ ಪದ್ಧತಿಯ ಇತರ ವ್ಯಾಖ್ಯಾನ ಗಳು ಅಸ್ತಿತ್ವದಲ್ಲಿವೆ. ಕನಿಷ್ಟ ಪಕ್ಷ 1960ರ ಶತಮಾನದಿಂದ,[೧]
 • ಅನೇಕ ಮಧ್ಯಯುಗದ ಇತಿಹಾಸಕಾರರು, ಕೆಲವುಸಲ "ಫ್ಯುಡಲ್ ಸಮುದಾಯ" ಎಂದು ಸೂಚಿಸುವ, ಭೂಮಿಯ ಒಡೆತನದ ತತ್ವದ ರೈತ ಸಮುದಾಯದ ಬಾಂಡುಗಳನ್ನು ಸೇರಿಸುವುದರಿಂದ, ವಿಶಾಲವಾದ ಸಾಮಾಜಿಕ ನೋಟವನ್ನು ಅಂತರ್ಗತಗೊಳಿಸಿದ್ದಾರೆ. ಅದಾಗ್ಯೂ 1970ರ ದಶಕದಿಂದ ಇತರರು ಪುರಾವೆಗಳನ್ನು ಮರು-ಪರಿಶೀಲಿಸಿದರು ಮತ್ತು ಊಳಿಗಮಾನ ಪದ್ಧತಿಯು ಕಾರ್ಯರೂಪಕ್ಕೆ ತರಲು ಸಾಧ್ಯವಿಲ್ಲದ ಶಬ್ದ.
 • ಆದ್ದರಿಂದ ಇದನ್ನು ಪರಿಣತರ ಮತ್ತು ಶೈಕ್ಷಣಿಕ ಚರ್ಚೆಯಿಂದ ಸಂಪೂರ್ಣವಾಗಿ ತಗೆದು ಹಾಕಬೇಕು ಅಥವಾ ಕೊನೆಯಪಕ್ಷ ಕೇವಲ ಹೆಚ್ಚಿನ ಅರ್ಹತೆ ಮತ್ತು ಎಚ್ಚರಿಕೆಯೊಂದಿಗೆ ಉಪಯೋಗಿಸಬೇಕೆಂದು ನಿಶ್ಚಯಿಸಿದರು. ಸಾಂಪ್ರದಾಯಿಕವಾಗಿ, ಅಮೆರಿಕಾ ಮತ್ತು ಬ್ರಿಟಿಷ್ ಚರಿತ್ರೆಕಾರರು "ಊಳಿಗಮಾನ ಪದ್ಧತಿ" ಶಬ್ಧವನ್ನು, ರಾಜಕೀಯ, ಮಿಲಿಟರಿ, ಮತ್ತು ca. 1000 ಮತ್ತು ca. 1300ರ ನಡುವಿನ ಪಾಶ್ಚಾತ್ಯ ಯುರೋಪಿನ ಸೇನಾನಿ ಶ್ರೀಮಂತ ವರ್ಗವನ್ನು ಒಟ್ಟಿಗೆ ಬದ್ಧವಾಗಿಸಿದ ಸಾಮಾಜಿಕ ಪದ್ಧತಿಯನ್ನು ವಿವರಿಸಲು ಉಪಯೋಗಿಸಿದ್ದರು. ಇವುಗಳ ಮೂಲ ಪಾಠ ಗಳು:
 • ವಿವಿಧ ದರ್ಜೆಯ ಮೆಲ್ಮಟ್ಟದವುಗಳ ನಡುವಿನ ಪರಸ್ಪರ ನಿಷ್ಠೆಯ ವೈಯುಕ್ತಿಕ ಒಡಂಬಡಿಕೆ ಮತ್ತು ಮಿಲಿಟರಿ ಸೇವೆಗಳನ್ನು ಹಿಡುವಳಿದಾರಿಕೆ/ಒಡೆತನ ಎಂದು ಗುರುತಿಸಲಾಗುತ್ತದೆ;
 • ಗೊತ್ತುಮಾಡಿದ ಸೇವೆಗಳ ಪ್ರತಿಫಲವಾಗಿ ಅವರ ಒಡೆಯರಿಂದ ಪಡೆದು, ಹಿಡುವಳಿದಾರರು/ಪುರುಷರು ಹೊಂದಿದ್ದ ಉಂಬಳಿಗಳು, ಸಾಮಾನ್ಯವಾಗಿ ಮಿಲಿಟರಿ ಮತ್ತು ಸಾಮಾಜಿಕ ಕರ್ತವ್ಯಗಳ ಮತ್ತು ನಾನಾರೀತಿಯ ಬಟವಾಡೆಗಳ ಸಂಯೋಜನೆಯಾಗಿರುತ್ತವೆ;
 • ಪೌರಹಕ್ಕುಗಳು, ವಿನಾಯಿತಿಗಳು ಅಥವಾ ಅತಿಸಾಧಾರಣ ಹಕ್ಕುಗಳನ್ನು ಹೊಂದಿದ್ದ ಪ್ರತಿಷ್ಠರ ಆಡಳಿತ ವ್ಯಾಪ್ತಿಯ ಮತ್ತು ರಾಜಕೀಯ ಅಧಿಕಾರ;
 • ಸೈದ್ಧಾಂತಿಕವಾಗಿ ಒಡೆಯರ ಒಡೆಯ ಮತ್ತು ಭೂಮಿಯಮೇಲಿನ ಎಲ್ಲಾ ಹಕ್ಕುಗಳ ಅಂತಿಮ ಮೂಲವಾದ ದುರ್ಬಲ ರಾಜನೊಂದಿಗೆ ವಿಕೇಂದ್ರೀಕರಿಸಿದ ನಿಯಮ.

ಈ ನಿದರ್ಶನದಲ್ಲಿ, ಊಳಿಗಮಾನ ಪದ್ಧತಿಯು ಪ್ರಮುಖವಾಗಿ ಮಿಲಿಟರಿ ನೇಮಕಾತಿಯ ಪದ್ಧತಿಯಾಗಿದ್ದು, ಇದರಲ್ಲಿ ಭೂಮಿಯ ಅನುಭೋಗದ ಅವಧಿಯನ್ನು ವೀರಯೋಧ ಸೇವೆಗೆ ಬದಲಾಯಿಸಲಾಗುವುದು.[೨]

 • ಯುರೋಪಿನ ಪ್ರಸಂಗಗಳ ಹೊರಗೆ, ಊಳಿಗಮಾನ ಪದ್ಧತಿಯ ಪರಿಕಲ್ಪನೆಯನ್ನು ಸಾಧಾರಣವಾಗಿ ಕೇವಲ ಹೋಲಿಕೆಗಳಿಂದ (ಅರೆ-ಊಳಿಗಮಾನ ಎಂದು ಕರೆಯುವ) ಬಳಸಲಾಗುತ್ತಿತ್ತು, ಅತಿ ಹೆಚ್ಚಾಗಿ ಜಪಾನಿನ ಚರ್ಚೆಗಳಲ್ಲಿ ಶೊಗನ್‌ (ಮಿಲಿಟರಿ ಶ್ರೇಣಿ)ಗಳ ಅಡಿಯಲ್ಲಿ, ಮತ್ತು ಕೆಲವುಸಲ ಮಧ್ಯಯುಗದಲ್ಲಿ ಮತ್ತು ಗೋಂಡರಿನ್ ಇಥಿಯೋಪಿಯಾ ಸಮಯದಲ್ಲಿಯೂ ಬಳಕೆಯಲ್ಲಿತ್ತು.
 • ಅದಾಗ್ಯೂ, ಕೆಲವರು ಊಳಿಗಮಾನ ಪದ್ಧತಿಯ ಹೋಲಿಕೆಯನ್ನು ಪ್ರೋತ್ಸಾಹಿಸುವುದರಿಂದ, ಪುರಾತನ ಈಜಿಪ್ಟ್, ಪಾರ್ಥಿಯನ್ ಸಾಮ್ರಾಜ್ಯ, ಭಾರತದ ಉಪಖಂಡ, ಮತ್ತು ಆಂಟೆಬೆಲ್ಲಮ್ ಅಮೆರಿಕಾದ ದಕ್ಷಿಣಭಾಗಗಳಂತಹ ವಿಭಿನ್ನ ಸ್ಥಳಗಳಲ್ಲಿ ಕಾಣಲಾಗುತ್ತದೆ.[೩]

ಊಳಿಗಮಾನ ಪದ್ಧತಿ ಅನ್ನುವ ಶಬ್ದವನ್ನು ಆಗಾಗ್ಗೆ ಅನುಚಿತವಾಗಿ ಅಥವಾ ತುಚ್ಛಾರ್ಥಕವಾಗಿ ಪಾಶ್ಚಾತ್ಯವಲ್ಲದ ಸಮಾಜಗಳಿಗೆ ಅನ್ವಯಿಸುವಂತೆ ಮಾಡಲಾಗುವುದು, ಅಲ್ಲಿನ ಸಂಸ್ಥೆಗಳು ಮತ್ತು ಮನೋಭಾವಗಳು, ಮಧ್ಯಯುಗದ ಯುರೋಪ್ ರೂಡಿಯಲ್ಲಿಡಲು ಗ್ರಹಿಸಿದವುಗಳನ್ನು ಹೋಲುತ್ತವೆ.[೪] ಅಂತಿಮವಾಗಿ, ಊಳಿಗಮಾನ ಪದ್ಧತಿ ಶಬ್ದವನ್ನು ಉಪಯೋಗಿಸಿದ ಅನೇಕ ಮಾರ್ಗಗಳು ಇದಕ್ಕೆ ಖಚಿತವಾದ ಅರ್ಥ ದೊರಕದಂತೆ ಮಾಡಿವೆ, ಇದು ಅನೇಕ ಇತಿಹಾಸಕಾರರು ಮತ್ತು ರಾಜಕೀಯ ಸಿದ್ಧಾಂತಿಗಳು ಸಮಾಜವನ್ನು ಅರ್ಥಮಾಡಿಕೊಳ್ಳಲು ಇದು ಒಂದು ಉಪಯೋಗಕರ ಪರಿಕಲ್ಪನೆ ಎಂಬುದನ್ನು ತಿರಸ್ಕರಿಸುವಂತೆ ಮಾಡಿದೆ.[೫]

ಇತಿಹಾಸ[ಬದಲಾಯಿಸಿ]

ರೋಮನ್ ಸಾಮ್ರಾಜ್ಯ ಕ್ಷೀಣಿಸಿದಂತೆ, ಚಕ್ರವರ್ತಿಗಳು ನಿಷ್ಠಾವಂತಿಕೆಯ ವಿನಿಮಯದಲ್ಲಿ ಭೂಮಿಯನ್ನು ಮೇಲ್ಮಟ್ಟದವರಿಗೆ ನೀಡಿದ್ದಾರೆ. [೬] ರೋಮನ್ ಸೈನ್ಯ ದೀರ್ಘಕಾಲ ಕೇಂದ್ರೀಕರಿಸಲು ಸಾಧ್ಯವಿಲ್ಲದಿದ್ದರಿಂದ, ರಕ್ಷಣೆಗಾಗಿ ಭೂಮಿಯನ್ನು ವ್ಯಾಪಾರಮಾಡಿದ್ದ, ಒಡೆಯರ ದರ್ಜೆಯ ಮೇಲೆ ಮಿಲಿಟರಿ ಅಧಿಕಾರವು ಕೆಂದ್ರೀಕರಿಸಿದೆ.

ಗುಣಲಕ್ಷಣಗಳು[ಬದಲಾಯಿಸಿ]

ಪೊಲ್ಯಾಂಡ್ ಚಾರ್ಲ್‌ಮಾಗ್ನೆಗೆ ತನ್ನ ನಂಬಿಕೆಯನ್ನು ಒತ್ತೆಯಿಡುವರು;ಚಾನ್ಸನ್ ದೆ ಗೆಸ್ಟೆರ ಹಸ್ತಪ್ರತಿಯಿಂದ

ಮಾಲಿಕರು, ಹಿಡುವಳಿದಾರರು ಮತ್ತು ಉಂಬಳಗಳು[ಬದಲಾಯಿಸಿ]

 • ಊಳಿಗಮಾನ ಪದ್ದತಿಯನ್ನು ವಿವರಿಸುವ ಮೂರು ಮೂಲಭೂತ ಅಂಶಗಳೆದರೆ: ಮಾಲಿಕರು, ಹಿಡುವಳಿದಾರರು ಮತ್ತು ಉಂಬಳಗಳು; ಊಳಿಗಮಾನದ ಗುಂಪು ಈ ಮೂರು ಅಂಶಗಳು ಹೇಗೆ ಒಂದಕ್ಕೊಂದು ಹೊಂದಿಕೊಳ್ಳುತ್ತವೆ ಎಂಬುದನ್ನು ವಿವರಿಸುತ್ತವೆ. ಒಬ್ಬ ಮಾಲಿಕನು ಭೂಮಿಯನ್ನು (ಒಂದು ಉಂಬಳ) ತನ್ನ ಹಿಡುವಳಿದಾರನಿಗೆ ಕೊಡುತ್ತಿದ್ದನು. ಉಂಬಳಕ್ಕೆ ಬದಲಾಗಿ ಹಿಡುವಳಿದಾರನು ಮಾಲಿಕನಿಗೆ ಸೈನಿಕ ಸೇವೆಯನ್ನು ಒದಗಿಸುತ್ತಿದ್ದನು.
 • ಮಾಲಿಕ, ಹಿಡುವಳಿದಾರ ಮತ್ತು ಉಂಬಳಗಳ ನಡುವಿನ ಸಂಬಂಧವು ಊಳಿಗಮಾನ ಪದ್ದತಿಯ ಪ್ರಮುಖ ಆಧಾರವಾಗಿದೆ. ಮಾಲಿಕನು ಒಬ್ಬನಿಗೆ ಭೂಮಿ (ಉಂಬಳ) ವನ್ನು ಕೊಡುವ ಮೊದಲು, ಅವನು ಆ ವ್ಯಕ್ತಿಯನ್ನು ಹಿಡುವಳಿದಾರನನ್ನಾಗಿ ಮಾಡಬೇಕಾಗುತ್ತಿತ್ತು. ಇದನ್ನು ಊಳಿಗದವನ ಪ್ರಮಾಣ ಮತ್ತು ಸತ್ಕಾರಗಳನ್ನೊಳಗೊಂಡ ಎರಡು ಕ್ರಿಯೆಗಳಿರುವ ಪ್ರಶಂಸಾ ಆಚಾರ ಎಂಬ ಔಪಚಾರಿಕ ಮತ್ತು ಸಾಂಕೇತಿಕ ಆಚಾರವಿಧಿಯ ಮೂಲಕ ನಡೆಸಲಾಗುತ್ತದೆ.
 • ಸನ್ಮಾನದ ಸಂದರ್ಭದಲ್ಲಿ, ಮಾಲಿಕ ಮತ್ತು ಹಿಡುವಳಿದಾರ ಒಂದು ಒಪ್ಪಂದಕ್ಕೆ ಬಂದು, ಮಾಲಿಕನ ಆದೇಶದ ಮೇರೆಗೆ ಹಿಡುವಳಿದಾರನು ತಾನು ಹೊರಾಡಲು ಸಿದ್ದ ಎಂಬ ಮಾತು ಕೊಡುತ್ತಾನೆ. ಪಿಯಲ್ಟಿ ( ಊಳಿಗದವ) ಎಂಬ ಪದವುಪಿಡೆಲಿಟಸ್ (ಸ್ವಾಮಿನಿಷ್ಟೆ) ಎಂಬ ಲ್ಯಾಟಿನ್ ಪದದಿಂದ ಬಂದಿದ್ದು, ಹಿಡುವಳಿದಾರನು ತನ್ನ ಮಾಲಿಕನಿಗೆ ತೋರಿಸಬೇಕಾದ ಸ್ವಾಮಿನಿಷ್ಟೆ ಎಂಬ ಅರ್ಥವನ್ನು ಸೂಚಿಸುತ್ತದೆ.
 • "ಊಳಿಗದವ" ಎಂಬ ಪದವು ಹಿಡುವಳಿದಾರನೊಬ್ಬನು ತನ್ನ ಸನ್ಮಾನದ ಸಮಯದಲ್ಲಿ ಸ್ಪಷ್ಟವಾಗಿ ಮಾಡಿದ ವಚನ ಬದ್ದತೆಗಳ ಒಂದು ಪ್ರಮಾಣವನ್ನೂ ಸಹ ಸೂಚಿಸುತ್ತದೆ. ಅಂತಹ ಒಂದು ಪ್ರಮಾಣದ ನಂತರ ಸನ್ಮಾನ ನಡೆಯುತ್ತದೆ. ಅಂತಹ ಒಂದು ಪ್ರಶಂಸನಾ ಸಮಾರಂಭ ಮುಗಿದ ನಂತರ, ಮಾಲಿಕ ಮತ್ತು ಹಿಡುವಳಿದಾರರು ಪರಸ್ಪರ ಕರಾರಿನಂತೆ ಒಂದು ಊಳಿಗ ಸಂಬಂಧಕ್ಕೆ ಸಮ್ಮತಿ ಸೂಚಿಸುತ್ತಾರೆ.
 • ಹಿಡುವಳಿದಾರನ ಪ್ರಮುಖ ಕರಾರು ಎಂದರೆ ತನ್ನ ಮಾಲಿಕನಿಗೆ ಸಹಾಯ ಮಾಡುವುದು ಅಥವಾ ಸೈನಿಕ ಸೇವೆ ಒದಗಿಸುವುದು. ಉಂಬಳದ ಕಂದಾಯದಿಂದ ಏನೆಲ್ಲಾ ಸಲಕರಣೆಗಳನ್ನು ಹಿಡುವಳಿದಾರನು ಪಡೆಯುತ್ತಾನೋ, ಮಾಲಿಕನ ಪರವಾಗಿ ಸೈನಿಕ ಸೇವೆಯ ಕರೆಗಳ ಸಮಯದಲ್ಲಿ ಅವುಗಳಿಗೆ ಹಿಡುವಳಿದಾರನೇ ಜವಾಬ್ದಾರನಾಗಿರುತ್ತಾನೆ. ಈ ಸೈನಿಕ ಸೇವೆಯ ಸಹಾಯದ ಕಾರಣಕ್ಕಾಗಿಯೇ ಮಾಲಿಕನು ಊಳಿಗ ಸಂಬಂಧಕ್ಕೆ ಒಪ್ಪಿರುತ್ತಾನೆ.
 • ಇದರ ಜೊತೆಗೆ, ಹಿಡುವಳಿದಾರನು ಕೆಲವು ಸಮಯದಲ್ಲಿ ಇತರ ಕರಾರುಗಳನ್ನೂ ನಡೆಸಿಕೊಡಬೇಕಾಗುತ್ತದೆ. ಅಂತಹ ಕರಾರುಗಳಲ್ಲಿ ಒಂದು ಎಂದರೆ ಮಾಲಿಕನು ಯುದ್ಧಕ್ಕೆ ಹೋಗಬೇಕೆ ಅಥವಾ ಬೇಡವೆ ಎಂಬ ನಿರ್ಧಾರವನ್ನು ತೆಗೆದುಕೊಳ್ಳುವಾಗ, ತನ್ನ ಎಲ್ಲಾ ಹಿಡುವಳಿದಾರರನ್ನು ಒಂದು ಸಭೆ ಸೇರುವಂತೆ ಆಜ್ಞಾಪಿಸಿ ಸೂಕ್ತ ಸಲಹೆ ಪಡೆಯುತ್ತಾನೆ. ಹಿಡುವಳಿದಾರನು ತನ್ನ ಬೆಳೆಯ ಸ್ವಲ್ಪ ಭಾಗವನ್ನು ಮಾಲಿಕನಿಗೆ ಕೊಡಬೇಕಾಗಿರುತ್ತದೆ.
 • ಕೆಲವು ಸಂದರ್ಭಗಳಲ್ಲಿ ಹಿಡುವಳಿದಾರನು ತನ್ನ ಗೋಧಿಯನ್ನು ತಾನೇ ಗಿರಣಿಗಳಲ್ಲಿ ಹಿಟ್ಟು ಮಾಡಿಸಿ ಕೊಳ್ಳಬೇಕಾಗುತ್ತಿತ್ತು. ಆತನ ಮಾಲಿಕನು ಒಲೆಗಳ ಒಡೆತನವನ್ನು ಹೊಂದಿದ್ದು ಅದಕ್ಕೆ ಕಂದಾಯ ನೀಡಬೇಕಿತ್ತು. ಭೂ-ಸ್ವಾಧೀನ ಸಂಬಂಧಗಳು ಉಂಬಳದ ಸುತ್ತ ಸುತ್ತುತ್ತಿದ್ದವು.

ಕೊಡುವವನ ಸಾಮರ್ಥ್ಯಕ್ಕೆ ಅನುಗುಣವಾಗಿ, ಕೊಡುವಿಕೆಗಳು ಒಂದು ಚಿಕ್ಕ ಒಕ್ಕಲ ಜಮೀನಿನಿಂದ ಹಿಡಿದು ಬಹುದೊಡ್ಡ ಭೂಮಿಯವರೆಗೂ ಇರುತ್ತಿತ್ತು.

 • ಉಂಬಳದ ಗಾತ್ರಗಳನ್ನು ಈಗಿನ ಆಧುನಿಕ ಭೂ ವಾಯಿದೆಗಳಿಗಿಂತ ಭಿನ್ನವಾದ ಅನಿಯಮಿತ ವಾಯಿದೆಗಳ ಮೂಲಕ ನಿರ್ಧರಿಸಲಾಗುತ್ತಿತ್ತು (ನೋಡಿರಿಮಧ್ಯಕಾಲೀನ ಭೂ ವಾಯಿದೆಗಳು). ಒಡೆಯ-ಹಿಡುವಳಿದಾರ ಸಂಬಂಧವು ಶ್ರೀಸಾಮಾನ್ಯತೆಯ ಸದಸ್ಯರಿಗೆ ಮಾತ್ರ ಸೀಮಿತವಾಗಿಲ್ಲ; ಉದಾಹರಣೆಗೆ, ಬಿಷಪರು ಮತ್ತು ಅಬೋಟರು, ಸಹ ಒಡೆಯರಾಗಿ ವರ್ತಿಸುವ ಸಾಮರ್ಥ್ಯವನ್ನು ಹೊಂದಿದ್ದರು. ಆದ್ದರಿಂದ ಮಾಲಿಕತ್ವ ಹಾಗೂ ಹಿಡುವಳಿಕೆಯಲ್ಲಿ ವಿವಿಧ ಹಂತಗಳು ಇದ್ದವು.
 • ಅರಸನು ಮಾಲಿಕನಾಗಿದ್ದು ಉಂಬಳಗಳನ್ನು ಶ್ರೀಮಂತರಿಗೆ ಎರವಲಾಗಿ ಕೊಡುತ್ತಿದ್ದನು, ಅವರೇ ಹಿಡುವಳಿದಾರರಾಗಿದ್ದರು. ಶ್ರೀಮಂತರು ಉಪಊಳಿಗಮಾನದ ಮೂಲಕ ತಮ್ಮ ಸ್ವಂತ ಹಿಡುವಳಿಗಳಿಗೆ ಮಾಲಿಕರಾಗಿರುತ್ತಿದ್ದರು. ಸಾಹುಕಾರರು ಹೊಲದಲ್ಲಿ ಕೆಲಸಮಾಡುವ ಒಕ್ಕಲಿಗರಿಗೆ ಮಾಲಿಕರಾಗಿದ್ದರು. ಅಂತಿಮವಾಗಿ ಚಕ್ರವರ್ತಿಯು ಒಬ್ಬ ಮಾಲಿಕನಾಗಿದ್ದು ಹಿಡುವಳಿದಾರರಾದ ಅರಸರಿಗೆ ಭೂಮಿಯನ್ನು ಎರವಲಾಗಿ ಕೊಡುತ್ತಿದ್ದನು.
 • ಸಾಂಪ್ರದಾಯಿಕವಾಗಿ ಇದು ಒಂದು ಸಾರ್ವಭೌಮಿಕ ಒಗ್ಗೂಡಿವಿಕೆಯ 'ಸಾರ್ವತ್ರಿಕ ಚಕ್ರಾಧಿಪತ್ಯ'ಕ್ಕೆ ಆಧಾರವಾಯಿತು ಮತ್ತು ಜಗತ್ತಿನ ಒಂದು ಕ್ರಮವಾಗಿ ಪರಿಣಮಿಸಿತು. ಹಿಡುವಳಿಗೆದಾರರಿಗೆ ಬರೀ ಜಮೀನನ್ನು ಕೊಡುವುದಷ್ಟೇ ಅಲ್ಲದೆ ಕೆಲವು ಸುಂಕ ಅಥವಾ ತೆರಿಗೆಗಳನ್ನು ಸಂಗ್ರಹಿಸುವ ಮತ್ತು ತಮ್ಮ ಜಮೀನುಗಳ ಮೇಲೆ ಖಾಸಗಿ ಕಾನೂನು ವ್ಯಾಪ್ತಿ ಅಧಿಕಾರ ಗಳನ್ನು ಪಡೆಯುವ ಹಕ್ಕುಗಳನ್ನು ನೀಡಲಾಗುತ್ತಿತ್ತು.

ಇತಿಹಾಸ ಲೇಖನ[ಬದಲಾಯಿಸಿ]

ಸಂಶೋಧನೆ[ಬದಲಾಯಿಸಿ]

 • "ಫ್ಯೂಡಲ್" ಎಂಬ ಪದವನ್ನು ಇಟಲಿಯ ಪುನರುಜ್ಜೀವನದ ನ್ಯಾಯಶಾಸ್ತ್ರ ಪಂಡಿತರುಗಳು ಆಸ್ತಿಯ ಸಾಮಾನ್ಯ ಸಾಂಪ್ರದಾಯಿಕ ನಿಯಮಕ್ಕಾಗಿ ಕಂಡುಹಿಡಿದರು. ಜಿಯಾಕೊಮೊ ಆಲ್ವಾರೋಟ್ಟೊನ (1385-1453) ಶಾಸ್ತ್ರ ಗ್ರಂಥವಾದ ದೆ ಫ್ಯೂಡಿಸ್ ( ಉಂಬಳಕ್ಕೆ ಸಂಬಂಧಿಸಿದ) ಸಾಮಾನ್ಯ ಕಾನೂನು ತತ್ವಗಳ ಮೂಲದ ಶ್ರೀಮಂತರ ಭೂ ಹಿಡುವಳಿಯ ಅವಾರೋಹಣಗಳನ್ನು ನಿಯಂತ್ರಿಸುವ ನಿಯಮಗಳ ಪ್ರಾಂತೀಯ ಬೇಧಗಳು ಇದ್ದಾಗ್ಯೂ, ಒಂದು ರೂಡಿಯ "ಊಳಿಗಮಾನ ನಿಯಮ"ವನ್ನು ಜಾರಿಗೆ ತರಲಾಯಿತು.[೭]
 • ಇನ್ನೊಂದು ಮೂಲದ ಪ್ರಕಾರ, ಫ್ಯೂಡಲ್ ಎಂಬ ಪದವನ್ನು ಅತ್ಯಂತ ಪ್ರಾರಂಭದಲ್ಲಿ ಬಳಸಲಾದ ಕಾಲವೆಂದರೆ ಅದು 17ನೇ ಶತಮಾನ(1614), ಆ [೮] ಸಮಯದಲ್ಲಿ ಈ ಪದ್ದತಿಯನ್ನು ವಿವರಿಸುವ ಅರ್ಥವು ಅತಿ ವೇಗವಾಗಿ ಅಥವಾ ಸಂಪೂರ್ಣವಾಗಿ ಅಳಿದು ಹೋಗಿತ್ತು. ಈ ಅವಧಿಯಲ್ಲಿ ಯಾವುದೇ ಲೇಖಕರು ಊಳಿಗಮಾನ ಪದ್ದತಿಯು ಆ ಶಬ್ದವನ್ನು ಬಳಸಿಕೊಂಡತೆ ವಿವರಿಸುವುದಿಲ್ಲ.
 • "ಫ್ಯೂಡಲಿಸಂ" ( ಊಳಿಗಮಾನ) ಎಂಬ ಪದವು ಮಧ್ಯಕಾಲೀನ ಅವಧಿಯಲ್ಲಿ ಬಳಸಿದ ಒಂದು ಪದವಾಗಿರದೆ, ಅದು 16ನೇ ಶತಮಾನದಲ್ಲಿ ಫ್ರೆಂಚ್ ಮತ್ತು ಆಂಗ್ಲ ವಕೀಲರು ಶ್ರೀಮಂತ ಯೋಧರ ಮಧ್ಯೆ ಇರುವ ಕೆಲವು ಸಾಂಪ್ರದಾಯಿಕ ಕರಾರುಗಳನ್ನು ವಿವರಿಸಲು ಬಳಸಿದ ಪದವಾಗಿದೆ.[೯]
 • ನಂತರದ ವಿಮರ್ಶಕರು ಇದನ್ನು ಕೆಲವು ಸಾರಿ ಯಾವುದೇ ಕಾನೂನು ಅಥವಾ ಪದ್ದತಿಯನ್ನು ವಿವರಿಸಲು ಒಂದು ಹದಗೆಟ್ಟ ಪದವಾಗಿ ಬಳಸಿದರು, ಏಕೆಂದರೆ ಅವರ ಪ್ರಕಾರ ಇದು ಅನ್ಯಾಯದ ಅಥವಾ ಸಮಯ ಮೀರಿದ ಪದವಾಗಿತ್ತು. ಇವುಗಳ ಅನೇಕ ಕನೂನು ಮತ್ತು ರೂಢಿಗಳು ಕೆಲವು ರೀತಿಯಲ್ಲಿ ಉಂಬಳ (ಲ್ಯಾಟೀನ್:ಫ್ಯೂಡಮ್ , ಪ್ರಾನ್ಸ್ ನ 884ಶಾಸನದಲ್ಲಿ ಕಾಣಿಸಿಕೊಂಡ ಮೊದಲ ಪದ)ದ ಮಧ್ಯಕಾಲಿಕ ಸಂಸ್ಥೆಗೆ ಸಂಬಂಧಿಸಿರುತ್ತಿತ್ತು ಮತ್ತು ಇದನ್ನು ಒಂದೇ ಪದದ ಅರ್ಥದಲ್ಲಿ ಬಳಸಲಾಯಿತು. "ಫ್ಯೂಡಲಿಸಂ" ಎಂಬ ಪದವು ಫ್ರೆಂಚ್ ಕ್ರಾಂತಿ ಯ ಸಮಯದಲ್ಲಿ ಬಳಸಲಾದ ಪೆಯೊಡಲಿಸ್ಮೆ ಎಂಬ ಪದದಿಂದ ಬಂದಿದೆ.

ಪದದ ಬೆಳವಣಿಗೆ[ಬದಲಾಯಿಸಿ]

 • ಊಳಿಗಮಾನ ಪದ್ದತಿಯು 1748ರಲ್ಲಿ ವ್ಯಾಪಕವಾಗಿ ಬಳಸಿದ ಜನಪ್ರಿಯ ಪದವಾಗಿದೆ, ಇದಕ್ಕೆ ಮೊಂಟೆಸ್ಕುನ De L'Esprit des Lois (ಕಾನೂನುಗಳ ಚೇತನ )ಕ್ಕೆ ಕೃತಜ್ಞತೆ ಸಲ್ಲಿಸಬೇಕು. 18ನೇ ಶತಮಾನದಲ್ಲಿ, ಜ್ಞಾನೋದಯದ ಲೇಖಕರು ಪ್ರಾಚೀನ ಪ್ರಭುತ್ವದ , ಹಳೆಯ ಪದ್ದತಿ ಅಥವಾ ಪ್ರೆಂಚ್ ಪ್ರಭುತ್ವಕ್ಕೆ ಕಪ್ಪು ಮಸಿ ಬಳೆಯಲು ಊಳಿಗಮಾನ ಪದ್ದತಿಯ ಬಗ್ಗೆ ಬರೆದರು.
 • ಬರಹಗಾರರು ಇದನ್ನು ಕಾರಣಿಕರಿಸಿದ್ದರಿಂದ ಇದನ್ನು ಜ್ಞಾನೋದಯ ಯುಗ ಎನ್ನುವರು ಮತ್ತು ಮಧ್ಯಕಾಲಿಕ ಯುಗವನ್ನು "ಅಂಧಕಾರ ಯುಗಗಳು" ಎನ್ನುವರು. ಊಳಿಗಮಾನವನ್ನು ಒಳಗೊಂಡಂತೆ, ಅದರ ನಕಾರಾತ್ಮಕ ಗುಣಗಳನ್ನು ಪ್ರೆಂಚ್ ರಾಜಪ್ರಭುತ್ವದ ಆಧಾರದಲ್ಲಿ ರಾಜಕೀಯ ಲಾಭ ಎಂದು ಬಿಂಬಿಸಿದ್ದರಿಂದ ಅರಿವುಳ್ಳ ಬರಹಗಾರರು ಸಾಮಾನ್ಯವಾಗಿ ಅಂಧಕಾರ ಯುಗಗಳಿಂದ ಅಪಹಾಸ್ಯ ಮತ್ತು ತಿರಸ್ಕಾರಕ್ಕೆ ಒಳಗಾದರು.[೧೦] ಅವರಿಗೆ "ಊಳಿಗಮಾನ" ಪದ್ದತಿ ಎಂದರೆ ಭೂಮಿಯ ಒದೆತನದ ತತ್ವಕ್ಕೆ ಸಂಬಂಧಪಟ್ಟ ಘನತೆಗಳು ಮತ್ತು ವಿಶೇಷ ಅಧಿಕಾರಗಳ ಹಕ್ಕು ಆಗಿತ್ತು.

ಆಗಸ್ಟ್ 1789ರಲ್ಲಿ ಫ್ರೆಂಚ್ ಮೂಲಭೂತ ಸಭೆಯು ಊಳಿಗಮಾನ ಆಡಳಿತ ಪದ್ದತಿಯನ್ನು ತೆಗೆದು ಹಾಕಿತು.

 • ಆಡಮ್ ಸ್ಮಿತ್ "ಊಳಿಗಮಾನ ಪದ್ದತಿ" ಎಂಬ ಪದವನ್ನು ಸಾಮಾಜಿಕ ಮತ್ತು ಆರ್ಥಿಕ ಅರ್ಥ ವ್ಯವಸ್ಥೆಯನ್ನು ವಿವರಿಸಲು ಸಾಮಾಜಿಕ ಸ್ತರಗಳಲ್ಲಿ ವ್ಯಾಖ್ಯಾನಿಸಿದ ಪದವಾಗಿ ಬಳಸಿದನು, ಇವುಗಳಲ್ಲಿ ಪ್ರತಿಯೊಂದು ಅರ್ಜಿತ ಸಾಮಾಜಿಕ ಮತ್ತು ಅರ್ಥಿಕ ಘನತೆಗಳು ಮತ್ತು ಒಪ್ಪಂದಗಳನ್ನು ಹೊಂದಿತ್ತು. ಇಂತಹ ಒಂದು ಪದ್ದತಿಯಲ್ಲಿ, ಮಾರುಕಟ್ಟೆ ಪ್ರಭಾವಗಳಿಗನುಸಾರವಾಗಿ ಸಂಘಟಿತವಾಗದ ಆಸ್ತಿಯನ್ನು ಆದರೆ ಜೀತದಾಳುಗಳನ್ನು ಹೊಂದಿದ್ದ ಭೂ ಮಾಲಿಕರ ರೂಢಿಯ ಕೂಲಿ ಸೇವೆಗಳಿಗನುಸಾರವಾಗಿ ಆಸ್ತಿಯನ್ನು ಕೃಷಿಯಿಂದ ಪಡೆಯಲಾಗುತ್ತಿತ್ತು.[೧೧]

ಮಾರ್ಕ್ಸ್[ಬದಲಾಯಿಸಿ]

 • ಕಾರ್ಲ್ ಮಾರ್ಕ್ಸ್ ಸಹ ಈ ಪದವನ್ನು ರಾಜಕೀಯ ವಿಶ್ಲೇಷಣೆಗೆ ಬಳಸಿದ್ದಾರೆ. 19ನೇ ಶತಮಾನದಲ್ಲಿ ಕಾರ್ಲ್ ಮಾರ್ಕ್ಸ್, ಊಳಿಗಮಾನ ಪದ್ದತಿಯನ್ನು ಬಂಡವಾಳ ಶಾಹಿಯ ಅನಿವಾರ್ಯ ಉದಯದ ಮುಂಚೆ ಉಂಟಾದ ಆರ್ಥಿಕ ಸ್ಥಿತಿಗತಿ ಎಂದು ವಿವರಿಸಿದ್ದಾರೆ. ಮಾರ್ಕ್ಸ್‌ನ ಪ್ರಕಾರ, ಊಳಿಗಮಾನ ಪದ್ದತಿಯು ತಮ್ಮ ವ್ಯವಸಾಯ ಯೋಗ್ಯ ಜಮೀನಿನ ನಿಯಂತ್ರದ ಮೇಲಿರುವ ಆಡಳಿತ ವರ್ಗದ (ಶ್ರೀಮಂತಿಕೆ) ಸಾಮರ್ಥ್ಯವಾಗಿದ್ದು, ಈ ಜಮೀನುಗಳಿಗಾಗಿ ದುಡಿದ ರೈತರನ್ನು ಜೀತ ಪದ್ದತಿಯ ಮೂಲಕ ಶೋಷಣೆಯ ಆಧಾರದ ಮೇಲೆ ಒಂದು ಸಮಾಜದ ವರ್ಗ ವನ್ನಾಗಿ ಮಾಡಲಾಯಿತು.[೧೨]
 • "ಕೈ-ಗಿರಣಿಯು ನಿಮಗೆ ಊಳಿಗ ಮಾಲಿಕರ ಸಮಾಜವನ್ನು ಕೊಡುತ್ತದೆ; ಹಬೆ-ಗಿರಣಿಯು ಕೈಗಾರಿಕಾ ಬಂಡವಾಳ ಶಾಹಿಗಳ ಸಮಾಜವನ್ನು ನೀಡುತ್ತದೆ."[೧೩] ಆದ್ದರಿಂದ ಮಾರ್ಕ್ಸ್ ಊಳಿಗಮಾನ ಪದ್ದತಿಯನ್ನು ಒಂದು ಪರಿಶುದ್ಧ ಆರ್ಥಿಕ ಮಾದರಿ ಎಂದು ಪರಿಗಣಿಸಿದರು.

ನಂತರದ ಅಧ್ಯಯನಗಳು[ಬದಲಾಯಿಸಿ]

 • 19ನೇ ಶತಮಾನದ ಕೊನೆಯ ಹಾಗೂ 20ನೇ ಶತಮಾನದ ಆರಂಭಗಳಲ್ಲಿ , ಜಾನ್ ಹೊರೇಸ್ ರೌಂಡ್ ಮತ್ತು ಫ್ರೆಡ್ರಿಕ್ ವಿಲಿಯಂ ಮೈಟ್ ಲ್ಯಾಂಡ್, ಎಂಬ ಇಬ್ಬರು ಬ್ರಿಟನ್ನಿನ ಮಧ್ಯಕಾಲಿಕ ಇತಿಹಾಸಕರು, 1066 ರಲ್ಲಿ ನಾರ್ಮನ್ ದಾಳಿಯ ಮುನ್ನ ಇದ್ದ ಬ್ರಿಟೀಷ್ ಸಮಾಜದ ಬಗ್ಗೆ ವಿಭಿನ್ನ ತೀರ್ಮಾನಗಳನ್ನು ಕೊಟ್ಟರು. ರೌಂಡ್ ಪ್ರಕಾರ ನಾರ್ಮನ್‌ಗಳು ಊಳಿಗಮಾನ ಪದ್ದತಿಯನ್ನು ತಂದರು ಎಂದು ವಾದಿಸಿದರೆ, ಮೈಟ್ ಲ್ಯಾಂಡ್ ಇದರ ಮೂಲಭೂತಗಳು ಆಗಲೇ ಬ್ರಿಟನ್‌ನಲ್ಲಿ ಇದ್ದವು ಎಂದು ಅಭಿಪ್ರಾಯಪಟ್ಟಿದ್ದರು.
 • ಈ ಚರ್ಚೆ ಇಂದಿಗೂ ಮುಂದುವರೆದಿದೆ. 20ನೇ ಶತಮಾನದಲ್ಲಿ, ಚರಿತ್ರಕಾರರಾದ ಫ್ರಾಂಕೋಯಿಸ್-ಲೂಯಿಸ್ ಗ್ಯಾನ್ಸ್‌ಹೋಫ್ ರವರು ಊಳಿಗಮಾನ ಪದ್ದತಿಯ ವಿಷಯದ ಬಗ್ಗೆ ತುಂಬಾ ಪ್ರಭಾವಿತರಾದರು. ಗ್ಯಾನ್ಸ್‌ಹೋಫ್ ಊಳಿಗಮಾನ ಪದ್ದತಿಯನ್ನು ಸಂಕುಚಿತವಾದ ಕಾನೂನು ಮತ್ತು ಸೈನಿಕ ದೃಷ್ಟಿಕೋನದಿಂದ ವ್ಯಾಖ್ಯಾನಿಸುವುದರೊಂದಿಗೆ ಊಳಿಗಮಾನ ಸಂಬಂಧಗಳು ಕೇವಲ ಮಧ್ಯಕಾಲೀನ ಕುಲೀನತೆಯಲ್ಲಿ ಮಾತ್ರ ಅಸ್ತಿತ್ವದಲ್ಲಿದ್ದವು.
 • ಗ್ಯಾನ್ಸ್‌ಹೋಫ್ ಈ ಪರಿಕಲ್ಪನೆಯನ್ನು ಊಳಿಗಮಾನ (1944) ಸ್ಪಷ್ಟೀಕರಿಸಿದರು. ಈತನ ಊಳಿಗಮಾನ ಪದ್ದತಿಯ ಅತಿ ಶ್ರೇಷ್ಟವಾದ ವ್ಯಾಖ್ಯಾನವು [೧೨] ಇಂದಿಗೂ ಪರಿಚಿತವಾಗಿದೆ. ಅಷ್ಟೇ ಅಲ್ಲದೆ ಇದು ಅರ್ಥ ಮಾಡಿಕೊಳ್ಳಲು ಸುಲಭವಾಗಿದ್ದು, ಒಬ್ಬ ಮಾಲಿಕನು ಉಂಬಳವನ್ನು ಒಬ್ಬ ಹಿಡುವಳಿದಾರನಿಗೆ ಕೊಟ್ಟಾಗ, ಆತನು ಅದಕ್ಕೆ ಬದಲಾಗಿ ಸೈನಿಕ ಸೇವೆಯನ್ನು ಒದಗಿಸುತ್ತಾನೆ ಎಂಬ ವಿಷಯ ಸರಳವಾಗಿದೆ.
 • ಗ್ಯಾನ್ಸ್‌ಹೋಪ್ಸ್‌ನ ಸಮಕಾಲೀನರಲ್ಲಿ ಒಬ್ಬನಾದ, ಫ್ರೆಂಚ್ ಇತಿಹಾಸಕಾರ ಮಾರ್ಕ್ ಬ್ಲೋಚ್, 20ನೇ ಶತಮಾನದ ಮಧ್ಯಕಾಲೀನ ಪ್ರಭಾವಿತ ಮಧ್ಯಕಾಲೀನ ಇತಿಹಾಸಕಾರನಾಗಿದ್ದನು.[೧೨] ಬ್ಲೋಚ್ ಊಳಿಗಮಾನ ಪದ್ದತಿಯನ್ನು ಒಂದು ಕಾನೂನು ಹಾಗೂ ಸೈನಿಕ ದೃಷ್ಟಿಕೋನದಿಂದ ನೋಡದೇ, ಸಾಮಾಜಿಕವಾಗಿ ಪರಿಗಣಿಸಿದರು. ಅವರು ತಮ್ಮ ಆಲೋಚನೆಗಳನ್ನು ಊಳಿಗ ಸಮಾಜ ದಲ್ಲಿ ಬೆಳೆಸಿದರು (1939–40; ಇಂಗ್ಲಿಷ್ 1960).
 • ಬ್ಲೋಚ್ ಊಳಿಗಮಾನ ಪದ್ದತಿಯನ್ನು ಸಂಪೂರ್ಣವಾಗಿ ಉದಾತ್ತತೆಯ ಸೀಮಿತವನ್ನು ಹೊಂದದೇ ಇರುವ ಒಂದು ಸಮಾಜ ಎಂದು ಪರಿಗಣಿಸಿದ್ದಾನೆ. ಗ್ಯಾನ್ಸ್‌ಹೋಫ್, ಮಾಲಿಕ ಮತ್ತು ಹಿಡುವಳಿದಾರರ ಮಧ್ಯೆ ಒಂದು ಶ್ರೇಣಿಕೃತ ಸಂಬಂಧವನ್ನು ಗುರುತಿಸಿದ್ದರು. ಆದರೆ ಬ್ಲೋಚ್ ಮಾಲಿಕರು ಮತ್ತು ರೈತರ ಮಧ್ಯೆ ಒಂದೇ ರೀತಿಯ ಸಂಬಂಧವನ್ನು ಕಂಡಿದ್ದರು. ರೈತರು ಊಳಿಗಮಾನ ಪದ್ದತಿ ಸಂಬಧಗಳ ಒಂದು ಅಂಗ ಎಂಬ ಅಂಶವನ್ನು ಬ್ಲೋಚ್ ತಮ್ಮ ಶ್ರೀಮಂತ ವರ್ಗದ ಗುಂಪಿನಿಂದ ಕೈಬಿಟ್ಟಿದ್ದರು.
 • ಉಂಬಳಕ್ಕೆ ಬದಲಾಗಿ ಹಿಡುವಳಿದಾರರು ಸೈನಿಕ ಸೇವೆಯನ್ನು ಮಾಡಿದರೆ, ಒಕ್ಕಲಿಗರು ಅದಕ್ಕೆ ಬದಲಾಗಿ ರಕ್ಷಣೆಗೋಸ್ಕರ ದೈಹಿಕ ಶ್ರಮ ವಹಿಸುತ್ತಿದ್ದರು. ಈ ಎರಡೂ ಸಹ ಊಳಿಗಮಾನ ಪದ್ದತಿ ಸಂಬಂಧದ ಒಂದು ಸ್ವರೂಪವಾಗಿದೆ. ಬ್ಲೋಚ್‌ನ ಪ್ರಕಾರ, ಊಳಿಗ ಅರ್ಥಗಳಲ್ಲಿ ಕಂಡು ಬರುವ ಇತರ ಸಮಾಜದ ಅಂಶಗಳೆಂದರೆ: ಮಾಲಿಕತ್ವದ ಮೇಲೆ ಕೇಂದ್ರೀಕೃತವಾಗಿರುವ ಜೀವನದ ಎಲ್ಲಾ ಅಂಶಗಳು ಮತ್ತು ಆದ್ದರಿಂದ ನಾವು ಊಳಿಗ ಚರ್ಚ್ ರಚನೆ, ಊಳಿಗ ಮುಖ ಸ್ತುತಿ ಸಾಹಿತ್ಯ( ಮತ್ತು ಅಂತಿ ಮುಖ ಸ್ತುತಿ) ಮತ್ತು ಊಳಿಗ ಆರ್ಥಿಕತೆಯ ಬಗ್ಗೆ ಮತನಾಡಲು ಸಾಧ್ಯವಿದೆ.

ಪದ ಬಳಕೆಯ ವಿರುದ್ಧ ಪ್ರತಿಭಟನೆ[ಬದಲಾಯಿಸಿ]

1974ರಲ್ಲಿ ಯು.ಎಸ್.ನ ಇತಿಹಾಸಕಾರರಾದ ಎಲಿಜಬೆತ್ ಎ.ಆರ್. ಬ್ರೌನ್[೫]

 • ಊಳಿಗಮಾನ ಎಂಬ ಪದವನ್ನು ನಿರಾಕರಿಸಿದರು, ಏಕೆಂದರೆ ಈ ಪರಿಕಲ್ಪನೆಗೆ ಒಂದು ಚಾರಿತ್ರಿಕ ದೋಷವನ್ನು ಉಂಟುಮಾಡುವಂತಿತ್ತು. ಕೆಲವು ಸಾರಿ ಊಳಿಗಮಾನ , ಈ ಪದವನ್ನು ಹಲವಾರು ಜನರು ವಿರೋಧವಾಗಿ ಬಳಸುವುದನ್ನು ಮನಗಂಡು, ಈ ಪದವು ಮಧ್ಯಕಾಲಿಕ ನೈಜ್ಯತೆಯ ಆಧಾರದ ಮೇಲೆ ಮಾತ್ರ ರಚಿತವಾಗಿದ್ದು, ಇತಿಹಾಸದ ದಾಖಲೆಗಳಲ್ಲಿ ಇದನ್ನು ಆಧುನಿಕ ಚರಿತ್ರಾಕಾರಾರು ಒತ್ತಾಯಪುರ್ವಕವಾಗಿ ಸೇರಿಸಿದ್ದಾರೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
 • ಬ್ರೌನ್‌ನ ಬೆಂಬಲಿಗರು ಈ ಪದವನ್ನು ಚರಿತ್ರೆಯ ಪಠ್ಯಪುಸ್ತಕಗಳಿಂದ ತೆಗೆದುಹಾಕಬೇಕು ಎಂಬ ಸಲಹೆಯನ್ನು ನೀಡಿದರು ಮತ್ತು ಸಂಪೂರ್ಣವಾಗಿ ಮಧ್ಯಕಾಲಿಕ ಇತಿಹಾಸದ ಬಗ್ಗೆ ಉಪನ್ಯಾಸಗಳನ್ನು ನೀಡಬೇಕು ಎಂದು ಅಭಿಪ್ರಾಯ ಪಟ್ಟರು. ಉಂಬಳ ಮತ್ತು ಹಿಡುವಳಿಗಳಲ್ಲಿ: ಸುಸಾನ್ ರೇನಾಲ್ಡ್ಸ್ ಬ್ರೌನ್ ನ ಮೂಲ ಸಿದ್ದಾಂತವನ್ನು ವಿಸ್ತರಿಸಿ ಮಧ್ಯಕಾಲಿಕ ಪುರಾವೆಯನ್ನು ಪುನರ್ ಅರ್ಥವಿವರಣೆ (1994), ಮಾಡಲಾಯಿತು.
 • ರೇನಾಲ್ಡ್‌ಳ ಪದ್ದತಿಯನ್ನು ಆಕೆಯ ಸಮಕಾಲಿನರು ಪ್ರಶ್ನಿಸಿದರಾದರೂ, ಇತರ ಚರಿತ್ರಕಾರರು ಆಕೆಯ ವಾದವನ್ನು ಬೆಂಬಲಿಸಿದರು.[೧೨]ರೇನಾಲ್ಡ್‌ಮಾರ್ಕ್ಸ್ ರವರ ಊಳಿಗಮಾನ ವನ್ನು ವಿರೋಧಿಸಿಲ್ಲ ಎಂಬುದು ಗಮನಾರ್ಹ ಸಂಗತಿಯಾಗಿದೆ.

ಫ್ಯೂಡಲ್ ಎಂಬ ಪದವು ಪಾಶ್ಚಿಮಾತ್ಯವಲ್ಲದ ಸಮಾಜಗಳಿಗೂ ಅನ್ವಯಿಸುವುದಾಗಿದ್ದು ಮಧ್ಯಕಾಲೀನ ಯೂರೋಪ್‌ನಲ್ಲಿ ಇರಬಹುದಾದ ಒಂದೇ ರೀತಿಯ ಮನೋಭಾವನೆಗಳು ಮತ್ತು ಆಚಾರಗಳನ್ನು ಒಳಗೊಂಡಿತ್ತು. (ಇತರೆ ಊಳಿಗದಂತಹ ಪದ್ದತಿಗಳನ್ನು ನೋಡಿ).

 • ಅಂತಿಮವಾಗಿ, ವಿಮರ್ಶಕರು ಹೇಳುವಂತೆ, ಊಳಿಗಮಾನ ಪದ್ದತಿ ಯು ಹಲವಾರು ವಿಧಗಳಲ್ಲಿ ತನ್ನ ನಿರ್ಧಿಷ್ಟ ಅರ್ಥದಿಂದ ವಂಚಿತವಾಗಿದ್ದು, ಅನೇಕ ಇತಿಹಾಸಕರರು ಮತ್ತು ರಾಜಕೀಯ ಸಿದ್ದಾಂತಕರು ಇದು ಸಮಾಜವನ್ನು ಅರ್ಥೈಸಿಕೊಳ್ಳಲು ಸಾಧ್ಯವಾಗುವ ಒಂದು ಉಪಯುಕ್ತ ಪರಿಕಲ್ಪನೆ ಎಂದು ಎಂದು ಕೈಬಿಟ್ಟಿದ್ದಾರೆ.[೧೨]

ಊಳಿಗಮಾನ ಪದ್ಧತಿಯನ್ನು ಪ್ರಶ್ನಿಸುವಿಕೆ[ಬದಲಾಯಿಸಿ]

ಶಬ್ದದ ವ್ಯಾಖ್ಯಾನ ಮತ್ತು ಉಪಯೋಗ[ಬದಲಾಯಿಸಿ]

ಮಧ್ಯಕಾಲೀನ ಸಮಾಜದ ತ್ರಿಪಕ್ಷೀಯ ವಿನ್ಯಾಸ: ಪಾದ್ರಿ (ಒರೇಟರ್ಸ್), ವೀರಯೋಧ (ಬೆಲ್ಲೇಟರ್ಸ್) ಮತ್ತು ಕೃಷಿಕ (ಲ್ಯಾಬರ‍ೇಟರ್ಸ್)
 • ಸುಸನ್ ರೆನೋಲ್ಡ್ಸ್ ರವರಿಂದ ನೀಡಲಾಗಿದ್ದ ಐತಿಹಾಸಿಕ ಉದಾಹರಣೆಗಳು ಊಳಿಗಮಾನ ಪದ್ಧತಿ ಶಬ್ದದ ಸಾಂಪ್ರದಾಯಿಕ ಬಳಕೆಯನ್ನು ಸವಾಲಿಸುತ್ತವೆ: ರಾಜ್ಯದಲ್ಲಿನ ಇತರ ಪ್ರಭಾವಿ ಪುರುಷರು ಮಾಡಿದ ರೀತಿಯಲ್ಲಿ, ಮೊದಲಿನ ಕೊರೊಲಿಂಗೈನರು ಹಿಡುವಳಿದಾರರನ್ನು ಹೊಂದಿದ್ದರು ಎಂಬುದನ್ನು ಚಾಲ್ತಿಯಲ್ಲಿರುವ ಮೂಲಗಳು ಬಹಿರಂಗಪಡಿಸುತ್ತವೆ. ಕೊರೊಲಿಂಗೈನ್ ಪ್ರಾನ್ಸಿಯಾದಲ್ಲಿ, ಸೆರ್ವಿಯ ಪ್ರತಿಷ್ಠೆಯನ್ನು ಹೊಂದಿದ್ದ ಪುರುಷರು, ಸಾಮಾನ್ಯವಾಗಿ ನಾವು ಹಿಡುವಳಿದಾರರಿಗೆ ಸಂಬಂಧಪಟ್ಟವು ಎಂದು ಭಾವಿಸುವ ಕಛೇರಿಗಳ ಬಗೆಗಳನ್ನು ಸಹ ಹೊಂದಿರ ಬಹುದು ಎಂಬುದು ಸಹ ಸತ್ಯ. ಮುಂದಿನ ಎರಡು ಶತಮನಗಳಲ್ಲಿ ಈ ಸಂಬಂಧವು ಹೆಚ್ಚು ಹೆಚ್ಚು ಪ್ರಮಾಣಬದ್ಧವಾಯಿತು.
 • ಆದರೆ ಇದರ ಕಾರ್ಯ ಮತ್ತು ಪದ್ಧತಿಗಳು ವಿವಿಧ ಪ್ರದೇಶಗಳಲ್ಲಿ ಬಿನ್ನವಾಗಿರುತ್ತವೆ. ಉದಾಹರಣೆಗೆ, ಈಸ್ಟರ್ನ್ ಫ್ರಾನ್ಸಿಯಾದ ಆಧಿಪತ್ಯವನ್ನು ಸ್ಥಾನಪಲ್ಲಟ ಮಾಡಿದ ಜರ್ಮನ್ ರಾಜ್ಯಗಳಲ್ಲಿ, ಹಾಗು ಕೆಲವು ಸ್ಲೇವಿಕ್ ರಾಜ್ಯಗಳಲ್ಲಿ, ಊಳಿಗಮಾನದ ಸಂಬಂಧವು ಊಳಿಗತನಕ್ಕೆ ಚರ್ಚಾಸ್ಪದವಾಗಿ ಹೆಚ್ಚು ಹತ್ತಿರದ ನಂಟನ್ನು ಹೊಂದಿದ್ದು, ಇದು ಕೃಷಿಕರು ಭೂಮಿಯೊಂದಿಗೆ ಸಂಬಂಧವನ್ನು ಹೊಂದುವಂತೆ ಮಾಡುವ ಒಂದು ಪದ್ಧತಿಯಾಗಿದೆ.
 • ಮೇಲಾಗಿ, ಹೋಲಿ ರಾಮನ್ ಆಧಿಪತ್ಯದ ವಿಕಸನವು ಮಧ್ಯದ ಯುರೋಪಿನಲ್ಲಿನ ಊಳಿಗಮಾನ ಸಂಬಂಧದ ಇತಿಹಾಸ ದಮೇಲೆ ಹೆಚ್ಚು ಪರಿಣಾಮಬೀರಿದೆ. ಹೆಚ್ಚಾಗಿ ಅಂಗೀಕರಿಸಲಾದ ಊಳಿಗಮಾನ ಪದ್ಧತಿಯ ಮಾದರಿಗಳು, ಅವರು ರಾಜರು, ನಾಯಕರು, ರಾಜಕುಮಾರರು, ಅಥವಾ ಮಿಲಿಟರಿ ಅಧಿಕಾರಿಗಳಾದಿದ್ದರೂ, ಅವರಲ್ಲಿ ಚಕ್ರವರ್ತಿಯಿಂದ ಕಡಿಮೆ ಅಧಿಕಾರದಿಂದ ಆಳುವವರ ವರೆಗೂ ಸ್ಪಷ್ಟ ಅಧಿಕಾರ ಶ್ರೇಣಿ ಇರುತ್ತದೆ ಎಂಬುದನ್ನು ನೀದರ್ಶಿಸುತ್ತವೆ.
 • ಈ ನಮೂನೆಗಳು ಸುವ್ಯಕ್ತವಾಗಿ ಅಸತ್ಯವಾಗಿರುತ್ತವೆ: ಹೋಲಿ ರಾಮನ್ ಚಕ್ರವರ್ತಿಯನ್ನು ಏಳು ಪ್ರತಿಷ್ಠಿತ ವ್ಯಕ್ತಿಗಳ ಗುಂಪಿನಿಂದ ಆಯ್ಕೆ ಮಾಡಲಾಗಿದೆ, ಇವರಲ್ಲಿ ಮೂವರು ಚರ್ಚ್‌ನ ದೊರೆಗಳಾಗಿದ್ದು ಅವರು ಸೈದ್ಧಾಂತಿಕವಾಗಿ ಯಾವುದೇ ಜಾತ್ಯಾತೀತ ಒಡೆಯರಿಗೆ ನಿಷ್ಠೆಯಿಂದ ಶಪಥಮಾಡುವುದಿಲ್ಲ. ಪ್ರೆಂಚ್ ರಾಜ್ಯಗಳು ಸಹ ಮಾದರಿಗಳು ನಿಖರವಾದವು ಎಂಬುದಕ್ಕೆ ಸ್ಪಷ್ಟ ಆಧಾರಗಳನ್ನು ಒದಗಿಸುವಂತೆ ಕಾಣುತ್ತಿದ್ದವು.
 • ನಾರ್ಮಾಂಡಿಯ ಡಜ್ ರಾಜ್ಯಕ್ಷೇತ್ರದ ಪ್ರತಿಫಲವಾಗಿ ಚಾರ್ಲೆಸ್ ದಿ ಸಿಂಪಲ್‌ಗೆ ರೊಲ್ಲೊ ಆಫ್ ನಾರ್ಮಾಂಡಿ ಮೊಣಕಾಲೂರಿ ಗೌರವವನ್ನು ಅರ್ಪಿಸಿದ ಸಮಯದವರೆಗೂ ಇದನ್ನು ಪರಿಗಣಿಸಲಾಗಿತ್ತು. ರಾಜನು ಬಗ್ಗಿ ಏಳುವಾಗ ಆತನು ಗುದ್ದಿದನೆಂದು ಕೆಲ ಮೂಲಗಳು ಹೇಳುತ್ತವೆ. ಇದು 'ಹಿಡುವಳಿದಾರರು' ಊಳಿಗಮಾನ ಸಂಬಂಧಗಳನ್ನು ಬಹಿರಂಗವಾಗಿ ಹೀಗಳೆಯಲು ಸಾಧ್ಯವಾಗುತ್ತದೆ ಎಂಬುದನ್ನು ತಿಳಿಯಪಡಿಸುತ್ತದೆ.
 • ಸ್ವಾಯತ್ತತೆಯಿಂದ ನಾರ್ಮಾನ್ಸ್ ಆಳಿದ ರಾಜ್ಯಕ್ಷೇತ್ರವು, ಯಾವುದೇ ಕಾನೂನು ಬದ್ದ "ಊಳಿಗಮಾನ" ಸಂಬಂಧಗಳನ್ನು ಹೊರತು ಪಡಿಸಿ, ನಾರ್ಮಾನ್ಸ್ ಅವರ ತೃಪ್ತಿಯಂತೆ ನಡೆದುಕೊಂದಿದ್ದರು ಎಂಬ ಅಭಿಪ್ರಾಯವನ್ನು ಸಮರ್ಥಿಸುತ್ತದೆ. ಅದಾಗ್ಯೂ, ಅವರ ಸ್ವಂತ ನಾಯಕತ್ವದಲ್ಲಿ, ನಾರ್ಮಾನ್ಸ್ ತನ್ನ ಅನುಯಾಯಿಗಳು ತಮಗೆ ಬದ್ಧವಾಗಿರುವಂತೆ ಮಾಡಲು ಊಳಿಗಮಾನದ ಸಂಬಂಧವನ್ನು ಉಪಯೋಗಮಾಡಿಕೊಂಡಿದ್ದರು.
 • ಇದು ನಾರ್ಮಾನ್ ದಾಳಿಕಾರರ ಪ್ರಾಬಲ್ಯವಾಗಿದ್ದು, ಇದು ನಾರ್ಮಾನ್‌ರ ಗೆಲುವಿನ ನಂತರ ಇಂಗ್ಲೇಂಡ್‌ನಲ್ಲಿ ಊಳಿಗಮಾನದ ಸಂಬಂಧವನ್ನು ಪ್ರಭಲಗೊಳಿಸಿತು ಮತ್ತು ಸ್ವಲ್ಪ ಮಟ್ಟಿಗೆ ಅಧಿಕೃತಗೊಳಿಸಿತು. ಆಧುನಿಕ ಕಾಲದಲ್ಲಿ, ಊಳಿಗಮಾನ ಪದ್ಧತಿ ಎಂಬ ಶಬ್ದದ ಬಳಕೆಯಮೇಲೆ ವಿವಾದವು ಅಸ್ತಿತ್ವದಲ್ಲಿತ್ತು. ಅದಾಗ್ಯೂ, ಬೆಂಬಲದ ಎಲ್ಲಾ ಪರಸ್ಪರ ಜವಾಬ್ದಾರಿಗಳನ್ನು ಮತ್ತು ಸ್ಥಾನ, ಅಧಿಕಾರ ವ್ಯಾಪ್ತಿ, ಅಥವಾ ಭೂಮಿಯ ನಿರ್ಭಂದವಿಲ್ಲದ ಅನುಭೋಗದ ಜಾಗದಲ್ಲಿನ ನಿಷ್ಠೆಗಳನ್ನು ಆಕ್ರಮಿಸಲು ಕೆಲವುಸಲ ಅವ್ಯವಸ್ಥಿತವಾಗಿ ಉಪಯೋಗಿಸಲಾಗುತ್ತದೆ.
 • ಭೂಮಿಯನ್ನು "ಕರಾರುಗೊಳಿಸಿದ" ಅನುಭೋಗದ ಅವಧಿಗೆ ಸಂಯೋಜಿಸಿದ ಅನೈಶ್ಚಿಕ ಜವಾಬ್ದಾರಿಗಳನ್ನು ಹೊರತುಪಡಿಸಿದ ನಿರ್ಧಿಷ್ಟವಾದ ಸ್ವಪ್ರೇರಿತ ವಿನಿಮಯ ಮತ್ತು ವೈಯುಕ್ತಿಕ ವ್ಯವಹಾರಗಳಿಗೆ, ಈ ಶಬ್ದವನ್ನು ಬಹುತೇಕ ಇತಿಹಾಸಕಾರರಿಂದ ನಿರ್ಭಂದಿಸಲಾಗಿದೆ: ನಂತರದವನ್ನು ಮಾನೊರಿಯಲಿಸಂನ ಮಗ್ಗಲುಗಳು ಎನ್ನುವುದಕ್ಕಿಂತಲೂ, ಊಳಿಗಮಾನ ಸಮಾಜದ ಭಾಗ ಆದರೆ ಸರಿಯಾದ ಊಳಿಗಮಾನ ಪದ್ಧತಿಯಲ್ಲ ಎಂದು ಪರಿಗಣಿಸಲಾಗಿದೆ.

ಉಳಿಗಮಾನ ಪದ್ಧತಿ ಬಳಕೆಯ ಮುಂಜಾಗ್ರತೆಗಳು[ಬದಲಾಯಿಸಿ]

ಅವು ಹೊಂದಿದ್ದ ಅರ್ಥಗಳ ಶ್ರೇಣಿಯ ಕಾರಣ, ಊಳಿಗಮಾನ ಪದ್ಧತಿ ಮತ್ತು ಸಂಬಂಧಿಸಿದ ಶಬ್ದಗಳನ್ನು ಗಣನೀಯವಾದ ಜಾಗರೂಕತೆಯಿಂದ ಪ್ರಸ್ತಾಪಿಸತಕ್ಕದ್ದು ಮತ್ತು ಉಪಯೋಗಿಸತಕ್ಕದ್ದು. ಪೆರ್ನಂದ್ ಬ್ರಾವ್‌ಡೆಲ್ ನಂತಹ ಎಚ್ಚರಿಕೆಯ ಇತಿಹಾಸಕಾರರು, "ವ್ಯಾಪಕ ದೊಡ್ಡ ಎಸ್ಟೇಟ್‌ಗಳು ಕಾಣಿಸಿಕೊಂಡಂತೆ, ಅಮೆರಿಕಾದ ಬಹುತೇಕ ಭಾಗವು 'ಊಳಿಗಮಾನ ಪದ್ದತಿಗೆ' ಒಳಗಾದಾಗಿನ, ಹದಿನೇಳನೆಯ ಶತಮಾನದಂತಹ", ವಿಶಾಲವಾದ ಸಾಮಾಜಿಕ ಮತ್ತು ಆರ್ಥಿಕ ಪ್ರಕರಣಗಳಲ್ಲಿ ಪ್ರಯೋಗಿಸುವಾಗ ಉದಾಹರಣೆಗಳಲ್ಲಿ ಊಳಿಗಮಾನ ಪದ್ಧತಿ ಯನ್ನು ಮಂಡಿಸುತ್ತಾರೆ, (ದಿ ಪರ್ಸ್‌ಪೆಕ್ಟಿವ್ ಆಫ್ ದಿ ವರ್ಲ್ಡ್ , 1984, ಪು. 403).

ಇತರ ಊಳಿಗಮಾನ-ಮಾದರಿಯ ಪದ್ಧತಿಗಳು[ಬದಲಾಯಿಸಿ]

ಭೂಮಿಯ ಅನುಭೋಗದ ಅವಧಿ ಮಾದರಿಯ ಇತರ ಊಳಿಗಮಾನ ಪದ್ಧತಿಗಳು ಸಹ ಅಸ್ತಿತ್ವದಲ್ಲಿದ್ದವು, ಮತ್ತು ಮಧ್ಯಕಾಲೀನ ಜಪಾನನ್ನು ಒಳಗೊಂಡು, ಪ್ರಪಂಚದ ವಿವಿಧ ಭಾಗಗಳಲ್ಲಿ ಇನ್ನುಸಹ ಅಸ್ತಿತ್ವದಲ್ಲಿವೆ. "ಊಳಿಗಮಾನ ಪದ್ಧತಿಯನ್ನು" ಆಧುನಿಕ ರಾಜಕೀಯ ವ್ಯಾಖ್ಯಾನದಲ್ಲಿ, ಕೇಂದ್ರದ ಅಧಿಕಾರಕ್ಕೆ ಕಾರ್ಪೊರೇಟ್ (ಸಂಘದ) "ಬರೋನ್‌ಗಳನ್ನು" ನಿರ್ಬಂಧಿಸಲು ಸೇವೆಯನ್ನು ಒದಗಿಸುವ, ಮೇಲ್ನೋಟಕ್ಕೆ ಬಂಡವಾಳಗಾರರಂತೆ ಕಾಣುವ ಸಮಾಜಗಳಲ್ಲಿನ ಕಾರ್ಯಕ್ರಮಗಳ ಶೀರ್ಷಿಕೆಯಂತೆ (ಆರ್ಥಿಕ ವಿಮೋಚನೆಗಳು ಮತ್ತು ಉತ್ತೇಜಕಗಳಂತಹ ಕಾರ್ಯಕ್ರಮಗಳು) ಸಹ ಉಪಯೋಗಿಸಲಾಗುತ್ತಿತ್ತು.[೧೪]

ಇವನ್ನೂ ನೋಡಿ[ಬದಲಾಯಿಸಿ]

 • ಮಿಶ್ರ ಜಾತಿಯ ಊಳಿಗಮಾನ ಪದ್ಧತಿ
 • ಸೆಸ್ಟುಯಿ ಕ್ಯೂ
 • ಸ್ವಾತಂತ್ರ್ಯಗಳ ಹಕ್ಕುಪತ್ರ
 • ಶೌರ್ಯ
 • ಕನ್‌ಕಾರ್ಡಟ್ ಆಫ್ ವರ್ಮ್ಸ್
 • ಸಜ್ಜನರು
 • ಭೂಮಿಯ ಸಂಪತ್ತು
 • ಮಜೊರತ್ (ಆಸ್ತಿ ಪರಂಪರೆಯ ಹಕ್ಕು)
 • ಭೂಮಿಯ ಒಡೆತನದ ತತ್ವ
 • ಮಧ್ಯಕಾಲೀನ ಜನಾಂಗ ಸ್ಥಿತಿ ಅಧ್ಯಯನ
 • ಮಧ್ಯಕಾಲೀನ ಯುಗ
 • ನಲ್ಲೆ ಟೆರ್ರೆ ಸಾನ್ಸ್ ಸೈಗ್‌ನೆಯರ್
 • ಇತರರ ಮೇಲಿನ ಒಡೆಯ
 • ಕ್ವಿಯಾ ಎಂಪ್ಟೊರ್ಸ್
 • ಸಾರ್ಕ್
 • ಊಳಿಗತನ
 • ಮಾರ್ಟ್‌ಮೈನ್‌ನ ನಿಬಂಧನೆ
 • ಹಿಡುವಳದಾರ

ಮಿಲಿಟರಿ (ಸೇನೆ)

 • ವೀರಯೋಧರು
 • ಮಧ್ಯಯುಗದ ಸಂಗ್ರಾಮ

ಯುರೋಪಿಯನ್ ಅಲ್ಲದ:

 • ಫೆಂಗ್ಜಿಯನ್
 • ಭಾರತೀಯ ಊಳಿಗಮಾನ ಪದ್ಧತಿ

ಟಿಪ್ಪಣಿಗಳು[ಬದಲಾಯಿಸಿ]

 1. ಕಾನ್ಕರೆಂಟ್ ವಿತ್ ವೆನ್ ಮಾರ್ಕ್ ಬ್ಲೋಚ್'ಸ್ ಫ್ಯೂಡಲ್ ಸೊಸೈಟಿ (1939) ಇದನ್ನು 1960ರಲ್ಲಿ ಮೊದಲ ಬಾರಿಗೆ ಆಂಗ್ಲದಲ್ಲಿ ಭಾಷಾಂತರಿಸಲಾಯಿತು.
 2. Richard Abels. "Feudalism". usna.eddu. 
 3. "Reader's Companion to Military History". 
 4. Cf. ಉದಾಹರಣೆಗೆ: Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 5. ೫.೦ ೫.೧ Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 6. Mr. ಡೊವ್ಲಿಂಗ್'ಸ್ ಫ್ಯೂಡಲಿಸಂ ಪೇಜ್. ಜೂನ್ ‌22, 2006 ಮೈಕ್ ಡೊವ್‌ಲಿಂಗ್.
 7. Richard Abels. [http:// www. usna. edu/Users/history/abels/hh315/Feudal.htm "Feudalism"] Check |url= value (help). usna.edu. 
 8. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 9. ಕಾಂಟರ್, ನಾರ್ಮನ್ ಎಫ್. ದಿ ಸಿವಿಲೈಜೇಷನ್ ಆಫ್ ದಿ ಮಿಡಿಲ್ ಏಜೆಸ್. ಹರ್ಪರ್ ಪೆರೆನ್ನಿಯಲ್, 1994.
 10. ರಾಬರ್ಟ್ ಬಾರ್ಟ್‌ಲೆಟ್.
  • "ಪೆರ್ಸ್ಪೆಕ್ಟಿವ್ಸ್ ಆನ್ ದಿ ಮಿಡೀವಲ್ ವರ್ಲ್ಡ್" ಮಿಡೀವಲ್ ಪನೊರಮ ದಲ್ಲಿ, 2001, ಐಎಸ್‌ಬಿಯನ್ 0892366427
 11. Richard Abels. "Feudalism". usna.edu. 
 12. ೧೨.೦ ೧೨.೧ ೧೨.೨ ೧೨.೩ ೧೨.೪ ಫಿಲಿಪ್ ಡೈಲೀಡರ್, "ಫ್ಯೂಡಲಿಸಂ", ದಿ ಹೈಟ್ ಮಿಡಿಲ್ ಏಜೆಸ್
 13. ಕ್ವೊಟ್ ಫ್ರಮ್ ದಿ ಪಾವೆರ್ಟಿ ಆಫ್ ಫಿಲಾಸಫಿ (1847), ಅಧ್ಯಾಯ 2.
 14. "Let's try capitalism instead of feudalism". 

ಉಲ್ಲೇಖಗಳು[ಬದಲಾಯಿಸಿ]

 • ಬ್ಲಾಚ್, ಮಾರ್ಕ್, ಪೇಡಲ್ ಸೊಸೈಟಿ. ಅನುವಾದಕ. ಎಲ್.ಎ.ಮಾನ್ಯನ್ ಎರಡು ಸಂಪುಟಗಳು. ಚಿಕಾಗೊ: ಯೂನಿವರ್ಸಿಟಿ ಆಫ್ ಚಿಕಾಗೊ ಪ್ರೆಸ್, 1961 ಐಎಸ್‌ಬಿಎನ್ 0-226-05979-0
 • ಬ್ರೌನ್, ಎಲಿಜಾಬೆತ್, 'ದಿ ಟೈರನ್ನಿ ಆಫ್ ಎ ಕನ್‌ಸ್ಟ್ರಕ್ಟ್: ಮಧ್ಯಕಾಲೀನ ಯುರೋಪಿನ ಊಳಿಗಮಾನ ಪದ್ಧತಿ ಮತ್ತು ಇತಿಹಾಸಕಾರರು', ಅಮೆರಿಕನ್ ಹಿಸ್ಟೋರಿಕಲ್ ರಿವ್ಯೂವ್ , 79 (1974), ಪು. 1063–8.
 • ಕ್ಯಾಂಟರ್, ನಾರ್ಮನ್ ಎಫ್., ಇನ್ವೆಂಟಿಂಗ್ ದಿ ಮಿಡಿಲ್ ಏಜೆಸ್: ದಿ ಲೈವ್ಸ್, ವರ್ಕ್ಸ್, ಆಂಡ್ ಐಡಿಯಾಸ್ ಆಫ್ ದಿ ಗ್ರೇಟ್ ಮಿಡೀವಲಿಸ್ಟ್ಸ್ ಆಫ್ ದಿ ಟ್ವಂಟಿಯತ್ ಸೆಂಚುರಿ. ಕ್ವಿಲ್, 1991.
 • Ganshof, François Louis (1952). Feudalism. London; New York: Longmans, Green. 
 • ಗ್ವೆರ್ರೆವ್, ಅಲೈನ್, L'avenir d'un passé ಇನ್‌ಸರ್ಟೈನ್. ಪರೀಸ್: ಲೆ ಸೆವಿಲ್, 2001. (ಶಬ್ದದ ಅರ್ಥದ ಸಂಪೂರ್ಣ ಇತಿಹಾಸ).
 • ಪೊಲಿ, ಜೀನ್-ಪಿಯರೆ ಆಂಡ್ ಬೊರ್ನಝೆಲ್, ಎರಿಕ್, ದಿ ಫ್ಯುಡಲ್l ಟ್ರಾನ್ಸ್‌ಫಾರ್ಮೇಷನ್, 900-1200. , Tr. ಕಾರೊಲೈನ್ ಹಿಗ್ಗಿತ್. ನ್ಯೂ ಯಾರ್ಕ್ ಆಂಡ್: ಹಾಲ್‌ಮ್ಸ್ ಆಂಡ್ ಮಿಯರ್, 1991.
 • ರೆಯ್‌ನೋಲ್ಡ್ಸ್, ಸುಸನ್, ಫೀಪ್ಸ್ ಆಂಡ್ ವಸ್ಸಲ್ಸ್: ದಿ ಮಿಡೀವಲ್ ಎವಿಡೆನ್ಸ್ ರಿಇಂಟೆರ್‌ಪ್ರಿಟೆಡ್. ಆಕ್ಸ್‌ಫರ್ಡ್: ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದ ಮುದ್ರಣಾಲಯ, 1994 ಐಎಸ್‌ಬಿಯನ್ 0-19-820648-8

ಬಾಹ್ಯ ಕೊಂಡಿಗಳು[ಬದಲಾಯಿಸಿ]