ಊರ್ವಶಿ ಬುಟಾಲಿಯಾ
ಊರ್ವಶಿ ಬುಟಾಲಿಯಾ | |
---|---|
Born | 1952 (ವಯಸ್ಸು 72–73) |
Alma mater |
|
Occupation(s) | ಪ್ರಕಾಶಕರು ಮತ್ತು ಇತಿಹಾಸಕಾರರು ಸಹ-ಸಂಸ್ಥಾಪಕರು, ಕಾಲಿ ಫಾರ್ ವುಮೆನ್ (೧೯೮೪) ಜುಬಾನ್ ಬುಕ್ಸ್, ಸಂಸ್ಥಾಪಕರು (೨೦೦೩) |
Relatives | ಪಂಕಜ್ ಬುಟಾಲಿಯಾ |
Website | zubaanbooks |
ಊರ್ವಶಿ ಬುಟಾಲಿಯಾ (ಜನನ ೧೯೫೨) ಒಬ್ಬ ಭಾರತತೀಯ ಸ್ತ್ರೀವಾದಿ ಲೇಖಕಿ, ಪ್ರಕಾಶಕಿ ಮತ್ತು ಕಾರ್ಯಕರ್ತೆ. ಅವರು ಭಾರತದ ಮಹಿಳಾ ಚಳುವಳಿಯಲ್ಲಿನ ಕೆಲಸಕ್ಕಾಗಿ ಹೆಸರುವಾಸಿಯಾಗಿಯಾಗಿದ್ದಾರೆ. ಹಾಗೆಯೇ ದಿ ಅದರ್ ಸೈಡ್ ಆಫ್ ಇಂಡಿಯಾ ಮತ್ತು ಸ್ಪೀಕಿಂಗ್ ಪೀಸ್ : ವುಮೆನ್ಸ್ ವಾಯ್ಸಸ್ ಫ್ರಂ ಕಾಶ್ಮೀರ ಮುಂತಾದ ಪುಸ್ತಕಗಳನ್ನು ಬರೆದಿದ್ದಾರೆ.
ರಿತು ಮೆನನ್ ಜೊತೆಗೆ, ಅವರು ೧೯೮೪ ರಲ್ಲಿ ಭಾರತದ ಮೊದಲ ಸ್ತ್ರೀವಾದಿ ಪ್ರಕಾಶನ ಸಂಸ್ಥೆಯಾದ ಕಾಳಿ ಫಾರ್ ವುಮೆನ್ ಅನ್ನು ಸಹ - ಸ್ಥಾಪಿಸಿದರು. ೨೦೦೩ ರಲ್ಲಿ, ಅವರು ಮಹಿಳೆಯರಿಗಾಗಿ ಕಾಳಿಯ ಮುದ್ರೆಯಿರುವ ಜುಬಾನ್ ಬುಕ್ಸ್ ಅನ್ನು ಸ್ಥಾಪಿಸಿದರು. [೧]
೨೦೧೧ ರಲ್ಲಿ, ಬುಟಾಲಿಯಾ ಮತ್ತು ಮೆನನ್ ಅವರಿಗೆ ಸಾಹಿತ್ಯ ಮತ್ತು ಶಿಕ್ಷಣದಲ್ಲಿನ ಅವರ ಕೆಲಸಕ್ಕಾಗಿ ಭಾರತದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀಯನ್ನು ಜಂಟಿಯಾಗಿ ನೀಡಲಾಯಿತು. [೨]
ಆರಂಭಿಕ ಜೀವನ ಮತ್ತು ಶಿಕ್ಷಣ
[ಬದಲಾಯಿಸಿ]ಬುಟಾಲಿಯಾ ಹರಿಯಾಣದ ಅಂಬಾಲಾದಲ್ಲಿ ಪಂಜಾಬಿ ಪರಂಪರೆಯ ಪ್ರಗತಿಪರ ಮತ್ತು ನಾಸ್ತಿಕ ಕುಟುಂಬದಲ್ಲಿ ಜನಿಸಿದರು. ಸುಭದ್ರಾ ಮತ್ತು ಜೋಗಿಂದರ್ ಸಿಂಗ್ ಬುಟಾಲಿಯಾ ಅವರ ನಾಲ್ಕು ಮಕ್ಕಳಲ್ಲಿ ಊರ್ವಶಿ ಮೂರನೆಯವರು. ಇವರ ತಾಯಿ ಮಹಿಳೆಯರಿಗಾಗಿ ಸಲಹಾ ಕೇಂದ್ರವನ್ನು ನಡೆಸುತ್ತಿದ್ದರು. ಬುಟಾಲಿಯಾ ಅವರಿಗೆ ಬೇಲಾ ಹೆಸರಿನ ಒಬ್ಬ ಅಕ್ಕ, ಮತ್ತು ಪಂಕಜ್ ಮತ್ತು ರಾಹುಲ್ ಎಂಬ ಇಬ್ಬರು ಸಹೋದರರಿದ್ದಾರೆ. ಪಂಕಜ್ ಬುಟಾಲಿಯಾ ಎಡಪಂಥೀಯ ಸಾಕ್ಷ್ಯಚಿತ್ರ ನಿರ್ಮಾಪಕರಾಗಿದ್ದು, ವೃಂದಾವನದಲ್ಲಿ ವಾಸಿಸುವ ವಿಧವೆಯರ ಶೋಚನೀಯ ಸ್ಥಿತಿಗಳ ಸಾಕ್ಷ್ಯಚಿತ್ರಕ್ಕೆ ಹೆಸರುವಾಸಿಯಾಗಿದ್ದಾರೆ.
ಬುಟಾಲಿಯಾ ಅವರು ೧೯೭೧ ರಲ್ಲಿ ದೆಹಲಿ ವಿಶ್ವವಿದ್ಯಾಲಯದ ಮಿರಾಂಡಾ ಹೌಸ್‌ನಿಂದ ಸಾಹಿತ್ಯದಲ್ಲಿ ಬಿಎ ಪಡೆದರು. ೧೯೭೩ ರಲ್ಲಿ ದೆಹಲಿ ವಿಶ್ವವಿದ್ಯಾಲಯದಿಂದ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಮತ್ತು ೧೯೭೭ ರಲ್ಲಿ ಲಂಡನ್ ವಿಶ್ವವಿದ್ಯಾಲಯದಿಂದ ದಕ್ಷಿಣ ಏಷ್ಯಾದ ಅಧ್ಯಯನದಲ್ಲಿ ಸ್ನಾತಕೋತ್ತರ ಪದವಿ ಪಡೆದರು.[೩] ಅವರು ಇಂಗ್ಲಿಷ್, ಇಟಾಲಿಯನ್ ಮತ್ತು ಫ್ರೆಂಚ್ ಜೊತೆಗೆ ಹಿಂದಿ, ಪಂಜಾಬಿ ಮತ್ತು ಬಂಗಾಳಿ ಮಾತನಾಡುತ್ತಾರೆ. [೪]
ವೃತ್ತಿ
[ಬದಲಾಯಿಸಿ]ಬುಟಾಲಿಯಾ ದೆಹಲಿಯ ಆಕ್ಸ್‌ಫರ್ಡ್ ಯೂನಿವರ್ಸಿಟಿ ಪ್ರೆಸ್‌ನಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು. ೧೯೮೨ ರಲ್ಲಿ ಲಂಡನ್ ಮೂಲದ ಜೆಡ್ ಬುಕ್ಸ್‌ಗೆ ಸಂಪಾದಕರಾಗಿ ಸಂಕ್ಷಿಪ್ತವಾಗಿ ಸ್ಥಳಾಂತರಗೊಳ್ಳುವ ಮೊದಲು, ಅವರು ತಮ್ಮ ಆಕ್ಸ್‌ಫರ್ಡ್ ಪ್ರಧಾನ ಕಛೇರಿಯಲ್ಲಿ [೩] ಒಂದು ವರ್ಷ ಕೆಲಸ ಮಾಡಿದರು. ನಂತರ ಅವರು ಭಾರತಕ್ಕೆ ಹಿಂದಿರುಗಿದರು ಮತ್ತು ರಿತು ಮೆನನ್ ಜೊತೆಗೆ [೫] ಕಾಳಿ ಫಾರ್ ವುಮೆನ್ ಎಂಬ ಸ್ತ್ರೀವಾದಿ ಪ್ರಕಾಶನ ಸಂಸ್ಥೆಯನ್ನು ಸ್ಥಾಪಿಸಿದರು.
ಬುಟಾಲಿಯಾ ಅವರ ಆಸಕ್ತಿಯ ಮುಖ್ಯ ಕ್ಷೇತ್ರಗಳು ಸ್ತ್ರೀವಾದಿ ಮತ್ತು ಎಡಪಂಥೀಯ ದೃಷ್ಟಿಕೋನದಿಂದ ವಿಭಜನೆ ಮತ್ತು ಮೌಖಿಕ ಇತಿಹಾಸಗಳಾಗಿವೆ . [೬] ಅವರು ಲಿಂಗ, ಕೋಮುವಾದ, ಮೂಲಭೂತವಾದ ಮತ್ತು ಮಾಧ್ಯಮಗಳ ಬಗ್ಗೆ ಬರೆದಿದ್ದಾರೆ. ಆಕೆಯ ಬರಹಗಳು ದಿ ಗಾರ್ಡಿಯನ್, ದಿ ನ್ಯೂ ಇಂಟರ್‌ನ್ಯಾಶನಲಿಸ್ಟ್ , ದಿ ಸ್ಟೇಟ್ಸ್‌ಮನ್, ದಿ ಟೈಮ್ಸ್ ಆಫ್ ಇಂಡಿಯಾ , ಔಟ್‌ಲುಕ್ ಮತ್ತು ಇಂಡಿಯಾ ಟುಡೇ ಸೇರಿದಂತೆ ಹಲವಾರು ಪತ್ರಿಕೆಗಳು ಮತ್ತು ನಿಯತಕಾಲಿಕೆಗಳಲ್ಲಿ ಕಾಣಿಸಿಕೊಂಡಿವೆ. ಅವರು ಎಡಪಂಥೀಯ ತೆಹೆಲ್ಕಾ ಮತ್ತು ಇಂಡಿಯನ್ ಪ್ರಿಂಟರ್ ಮತ್ತು ಪಬ್ಲಿಷರ್, ಮುದ್ರಣ ಮತ್ತು ಪ್ರಕಾಶನ ಉದ್ಯಮದೊಂದಿಗೆ ವ್ಯವಹರಿಸುವ ವ್ಯಾಪಾರದಿಂದ ವ್ಯಾಪಾರಕ್ಕೆ (ಬಿ೨ಬಿ) ಪ್ರಕಟಣೆಗೆ ನಿಯಮಿತ ಅಂಕಣಕಾರರಾಗಿದ್ದಾರೆ.
ಬುಟಾಲಿಯಾ ಅವರು ಆಕ್ಸ್‌ಫ್ಯಾಮ್ ಇಂಡಿಯಾದ ಸಲಹೆಗಾರರಾಗಿದ್ದಾರೆ ಮತ್ತು ದೆಹಲಿ ವಿಶ್ವವಿದ್ಯಾನಿಲಯದಲ್ಲಿ ಕಾಲೇಜ್ ಆಫ್ ವೊಕೇಶನಲ್ ಸ್ಟಡೀಸ್‌ನಲ್ಲಿ ಓದುಗರ ಸ್ಥಾನವನ್ನು ಹೊಂದಿದ್ದಾರೆ. [೩]
ಕಾಳಿ ಫಾರ್ ವುಮೆನ್
[ಬದಲಾಯಿಸಿ]ಕಾಳಿ ಫಾರ್ ವುಮೆನ್, ರಿತು ಮೆನನ್ ಜೊತೆಯಲ್ಲಿ ಬುಟಾಲಿಯಾ ಸಹ-ಸ್ಥಾಪಿಸಿದ ಭಾರತದ ಮೊದಲ ಸ್ತ್ರೀವಾದಿ ಪ್ರಕಾಶನ ಸಂಸ್ಥೆ. ೧೯೮೪ ರಲ್ಲಿ ಮೂರನೇ ಜಗತ್ತಿನಲ್ಲಿ ಮಹಿಳೆಯರ ಜ್ಞಾನವನ್ನು ಹೆಚ್ಚಿಸಲು ಇದನ್ನು ಟ್ರಸ್ಟ್ ಆಗಿ ಸ್ಥಾಪಿಸಲಾಯಿತು. ಜ್ಞಾನಕ್ಕೆ ಧ್ವನಿ ನೀಡುವುದು ಮತ್ತು ಮಹಿಳಾ ಬರಹಗಾರರು, ಸೃಜನಶೀಲರು ಮತ್ತು ಶಿಕ್ಷಣತಜ್ಞರಿಗೆ ವೇದಿಕೆಯನ್ನು ಒದಗಿಸುವುದು ಇದರ ಮೂಲ ಉದ್ದೇಶವಾಗಿತ್ತು. [೭]
೨೦೦೩ ರಲ್ಲಿ, ಸಹ-ಸಂಸ್ಥಾಪಕರಾದ ಬುಟಾಲಿಯಾ ಮತ್ತು ಮೆನನ್ ಬೇರೆಯಾದರು. ಕಾಳಿ ಫಾರ್ ವುಮೆನ್ ಬ್ಯಾನರ್ ಅಡಿಯಲ್ಲಿ ಇಬ್ಬರೂ ತಮ್ಮದೇ ಆದ ಮುದ್ರೆಗಳನ್ನು ಸ್ಥಾಪಿಸಿದರು. ಮೆನನ್ ವುಮೆನ್ ಅನ್ಲಿಮಿಟೆಡ್ ಅನ್ನು ಸ್ಥಾಪಿಸಿದರು [೮] ಮತ್ತು ಬುಟಾಲಿಯಾ ಜುಬಾನ್ ಬುಕ್ಸ್ ಅನ್ನು ಸ್ಥಾಪಿಸಿದರು. [೯]
ಜುಬಾನ್ ಬುಕ್ಸ್
[ಬದಲಾಯಿಸಿ]ಇದನ್ನು ಮೂಲತಃ ೨೦೦೩ ರಲ್ಲಿ ಲಾಭರಹಿತ ಉದ್ದೇಶದಿಂದ ಸ್ಥಾಪಿಸಲಾಯಿತು, ಜುಬಾನ್ ಈಗ ಜುಬಾನ್ ಪಬ್ಲಿಷರ್ಸ್ ಪ್ರೈವೇಟ್ ಲಿಮಿಟೆಡ್ ಎಂಬ ಖಾಸಗಿ ಕಂಪನಿ. ಈ ಸ್ವತಂತ್ರ ಪ್ರಕಾಶನ, "ಆನ್, ಫಾರ್, ಬೈ ಆಂಡ್ ಅಬೌಟ್ ವುಮೆನ್ ಇನ್ ಸೌತ್ ಏಷ್ಯಾ" ಎಂಬ ಧ್ಯೇಯದೊಂದಿಗೆ, ಖ್ಯಾತ ಲೇಖಕರಾದ ಜೈಶ್ರೀ ಮಿಶ್ರಾ, ನಿವೇದಿತಾ ಮೆನನ್, ಮಂಜುಳಾ ಪದ್ಮನಾಭನ್, ಸುನೀತಿ ನಾಮಜೋಶಿ ಮತ್ತು ಅನ್ನಿ ಜೈದಿ ಸೇರಿದಂತೆ ಅನೇಕರ ಕಾಲ್ಪನಿಕ ಮತ್ತು ಶೈಕ್ಷಣಿಕ ಪುಸ್ತಕಗಳನ್ನು ಪ್ರಕಟಿಸುತ್ತದೆ. [೧೦] .
ದಿ ಅದರ್ ಸೈಡ್ ಆಫ್ ಸೈಲೆನ್ಸ್
[ಬದಲಾಯಿಸಿ]ಸ್ತ್ರೀವಾದಿ ಸಮಸ್ಯೆಗಳೊಂದಿಗೆ ವ್ಯವಹರಿಸುವ ಹಲವಾರು ವೃತ್ತಪತ್ರಿಕೆ ಲೇಖನಗಳು ಮತ್ತು ಆಪ್-ಎಡ್ ತುಣುಕುಗಳನ್ನು ಹೊರತುಪಡಿಸಿ, ಬುಟಾಲಿಯಾ ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ ಅಥವಾ ಸಹ-ಲೇಖಕರಾಗಿದ್ದಾರೆ. ದಿ ಅದರ್ ಸೈಡ್ ಆಫ್ ಸೈಲೆನ್ಸ್ (೧೯೯೮), ವಿಭಜನೆಯಿಂದ ಬದುಕುಳಿದವರೊಂದಿಗೆ ನಡೆಸಿದ ಎಪ್ಪತ್ತಕ್ಕೂ ಹೆಚ್ಚು ಸಂದರ್ಶನಗಳ ಉತ್ಪನ್ನವಾಗಿದೆ, ಇದನ್ನು ಕೆಲವು ಭಾರತೀಯ ವಿಶ್ವವಿದ್ಯಾಲಯಗಳಲ್ಲಿ ಶೈಕ್ಷಣಿಕ ಪಠ್ಯವಾಗಿ ಬಳಸಲಾಗುತ್ತಿದೆ.
ಗೋಥೆ ಇನ್ಸ್ಟಿಟ್ಯೂಟ್ ಇದನ್ನು "ಇತ್ತೀಚಿನ ದಶಕಗಳಲ್ಲಿ ಪ್ರಕಟವಾದ ದಕ್ಷಿಣ ಏಷ್ಯಾದ ಅಧ್ಯಯನಗಳಲ್ಲಿ ಅತ್ಯಂತ ಪ್ರಭಾವಶಾಲಿ ಪುಸ್ತಕಗಳಲ್ಲಿ ಒಂದಾಗಿದೆ... ಇದು ದುರಂತದ ಸಾಮೂಹಿಕ ಅನುಭವದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯದ ಪಾತ್ರವನ್ನು ಒತ್ತಿಹೇಳುತ್ತದೆ" ಎಂದು ಹೇಳಿದೆ.[೧೧] ದಿ ಅದರ್ ಸೈಡ್ ಆಫ್ ಸೈಲೆನ್ಸ್ ೨೦೦೧ ರಲ್ಲಿ ಓರಲ್ ಹಿಸ್ಟರಿ ಬುಕ್ ಅಸೋಸಿಯೇಷನ್ ಪ್ರಶಸ್ತಿ ಮತ್ತು [೪] ೨೦೦೩ ರಲ್ಲಿ ತನ್ನ ಸಂಸ್ಕೃತಿಗಾಗಿ ನಿಕ್ಕಿ ಏಷ್ಯಾ ಪ್ರಶಸ್ತಿಯನ್ನು ಗೆದ್ದುಕೊಂಡಿತು.
ಕ್ರಿಯಾಶೀಲತೆ
[ಬದಲಾಯಿಸಿ]ಬುಟಾಲಿಯಾ ವುಮೆನ್ಸ್ ಇನ್ಸ್ಟಿಟ್ಯೂಟ್ ಫಾರ್ ಫ್ರೀಡಂ ಆಫ್ ಪ್ರೆಸ್ (ಡಬ್ಲೂಐಎಫ್‌ಪಿ) ನ ಸಹವರ್ತಿಯಾಗಿದ್ದಾರೆ. [೧೨]
ಪ್ರಶಸ್ತಿಗಳು ಮತ್ತು ಮನ್ನಣೆ
[ಬದಲಾಯಿಸಿ]೨೦೦೦ ರಲ್ಲಿ, ಬುಟಾಲಿಯಾ ವುಮೆನ್ ಇನ್ ಪಬ್ಲಿಷಿಂಗ್‌ನಿಂದ ಪಂಡೋರಾ ಪ್ರಶಸ್ತಿಯನ್ನು ಗೆದ್ದರು. [೧೩]
೨೦೧೧ ರಲ್ಲಿ, ಬುಟಾಲಿಯಾ ಅವರಿಗೆ ಭಾರತ ಸರ್ಕಾರದಿಂದ ಪದ್ಮಶ್ರೀ ಪ್ರಶಸ್ತಿಯನ್ನು ನೀಡಲಾಯಿತು. [೯]
೨೦೧೭ ರಲ್ಲಿ, ಗೋಥೆ ಇನ್ಸ್ಟಿಟ್ಯೂಟ್ ಬುಟಾಲಿಯಾಗೆ ಗೋಥೆ ಪದಕವನ್ನು ನೀಡಿತು, ಇದು ಫೆಡರಲ್ ರಿಪಬ್ಲಿಕ್ ಆಫ್ ಜರ್ಮನಿಯ ಅಧಿಕೃತ ಅಲಂಕಾರವಾಗಿದೆ, ಇದು " ಜರ್ಮನ್ ಭಾಷೆಯ ಅಸಾಧಾರಣ ಸಾಮರ್ಥ್ಯವನ್ನು ಮತ್ತು ಅಂತರರಾಷ್ಟ್ರೀಯ ಸಾಂಸ್ಕೃತಿಕ ವಿನಿಮಯದಲ್ಲಿ ಪ್ರದರ್ಶಿಸಿದ ವ್ಯಕ್ತಿಗಳನ್ನು ಗೌರವಿಸುತ್ತದೆ." [೧೧] [೧೪]
ಕೆಲಸ
[ಬದಲಾಯಿಸಿ]- ಊರ್ವಶಿ ಬುಟಾಲಿಯಾ; ರಿತು ಮೆನನ್ (೧೯೯೨). ಇನ್ ಅದರ್ ವರ್ಡ್ಸ್: ನ್ಯೂ ರೈಟಿಂಗ್ ಬೈ ಇಂಡಿಯನ್ ವುಮೆನ್. ಕಾಳಿ ಫಾರ್ ವುಮೆನ್. ISBN 978-81-85107-48-6.
- ಊರ್ವಶಿ ಬುಟಾಲಿಯಾ; ರಿತು ಮೆನನ್ (೧೯೯೫). ಮೇಕಿಂಗ್ ಅ ಡಿಫರೆನ್ಸ್: ಫೆಮಿನಿಸ್ಟ್ ಪಬ್ಲಿಶಿಂಗ್ ಇನ್ ದ ಸೌತ್. ಬೆಲ್ಲಾಜಿಯೊ ಪಬ್ಲಿಷಿಂಗ್ ನೆಟ್ವರ್ಕ್. ISBN 9780964078086.
- ತನಿಕಾ ಸರ್ಕಾರ್; ಊರ್ವಶಿ ಬುಟಾಲಿಯಾ (೧೯೯೫). ವುಮೆನ್ ಆಂಡ್ ದ ಹಿಂದು ರೈಟ್: ಅ ಕಲೆಕ್ಷನ್ ಆಫ್ ಎಸ್ಸೇಸ್. ಕಾಳಿ ಫಾರ್ ವುಮೆನ್. ISBN 978-81-85107-66-0.
- ತನಿಕಾ ಸರ್ಕಾರ್; ಊರ್ವಶಿ ಬುಟಾಲಿಯಾ (೧೯೯೫). ವುಮೆನ್ ಆಂಡ್ ದ ರೈಟ್ ವಿಂಗ್ ಮುಮೆಂಟ್ಸ್: ಇಂಡಿಯನ್ ಎಕ್ಸ್ಪ್ರೆಸ್ಸಸ್. ಲಂಡನ್: ಜ಼ಡ್ ಬುಕ್ಸ್. ISBN 978-1-85649-289-8.
- ಊರ್ವಶಿ ಬುಟಾಲಿಯಾ (೧೯೯೮). ದ ಅದರ್ ಸೈಡ್ ಆಫ್ ದ ಸೈಲೆನ್ಸ್: ವಯ್ಸಸ್ ಫ್ರಮ್ ದ ಪಾರ್ಟಿಷಿಯನ್ ಆಫ್ ಇಂಡಿಯಾ. ಪೆಂಗ್ವಿನ್ ಬುಕ್ಸ್ ಇಂಡಿಯಾ. ISBN 978-0-14-027171-3.
- ಊರ್ವಶಿ ಬುಟಾಲಿಯಾ (೨೦೦೨). ಸ್ಪೀಕಿಂಗ್ ಪೀಸ್: ವುಮೆನ್ಸ್ ವಾಯ್ಸಸ್ ಫ್ರಮ್ ಕಾಶ್ಮೀರ್. ಕಾಳಿ ಫಾರ್ ವುಮೆನ್. ISBN 978-81-86706-43-5.
- ಊರ್ವಶಿ ಬುಟಾಲಿಯಾ, ed. (೨೦೦೬). ಇನ್ನರ್ ಲೈನ್: ದ ಜುಬಾನ್ ಬುಕ್ ಆಫ್ ಸ್ಟೋರೀಸ್ ಬೈ ಇಂಡಿಯನ್ ವುಮೆನ್. ಜುಬಾನ್. ISBN 978-81-89013-77-6.
ಉಲ್ಲೇಖಗಳು
[ಬದಲಾಯಿಸಿ]- ↑ Daftuar, Swati (28 October 2010). "Identity matters". The Hindu. Retrieved 26 April 2013.
- ↑ "Press Information Bureau". www.pib.nic.in. Retrieved 2019-03-07.
- ↑ ೩.೦ ೩.೧ ೩.೨ "Bio – Butalia". Lettre Ulysses Award for the Art of Reportage. Retrieved 26 April 2013.
- ↑ ೪.೦ ೪.೧ "Lettre Ulysses Award | Urvashi Butalia, India". www.lettre-ulysses-award.org. Retrieved 2019-03-07.
- ↑ Ghoshal, Somak (14 June 2013). "Urvashi Butalia: I want to prove that feminist publishing can survive commercially". Livemint. Retrieved 16 August 2013.
- ↑ Sundus, Areeba (8 November 2018). "Urvashi Butalia: The Historian Who Revived The Forgotten Voices of Partition". Feminism In India (FII). Retrieved 28 April 2021.
- ↑ Puri, Jyoti, Woman, Body, Desire in Postcolonial India: Narratives of Gender and Sexuality (London: Routledge, 1999).
- ↑ "Ritu Menon". Women Unlimited. Retrieved 2019-03-07.
- ↑ ೯.೦ ೯.೧ "Padma Shri Awarded To Publishing Stalwarts After A Decade". All About Book Publishing. February 2011. Archived from the original on 28 ಏಪ್ರಿಲ್ 2021. Retrieved 28 April 2021.
- ↑ "About | Zubaan" (in ಅಮೆರಿಕನ್ ಇಂಗ್ಲಿಷ್). Retrieved 2019-03-07.
- ↑ ೧೧.೦ ೧೧.೧ Scroll Staff. "Feminist publisher Urvashi Butalia wins the prestigious Goethe Medal". Scroll.in (in ಅಮೆರಿಕನ್ ಇಂಗ್ಲಿಷ್). Retrieved 2019-03-07.
- ↑ "Associates | The Women's Institute for Freedom of the Press". www.wifp.org (in ಅಮೆರಿಕನ್ ಇಂಗ್ಲಿಷ್). Retrieved 21 June 2017.
- ↑ "Urvashi Butalia". Heinrich-Böll-Stiftung (in ಇಂಗ್ಲಿಷ್). Retrieved 2019-03-07.
- ↑ "Awardee: Urvashi Butalia" (PDF). Goethe Institut.
ಬಾಹ್ಯ ಸಂಪರ್ಕ
[ಬದಲಾಯಿಸಿ]- ಜುಬಾನ್ ಬುಕ್ಸ್ ವೆಬ್ಸೈಟ್
- 2006 ಲೆಟ್ರೆ ಯುಲಿಸೆಸ್ ಪ್ರಶಸ್ತಿ ತೀರ್ಪುಗಾರರ ಸದಸ್ಯರಾಗಿ ಜೀವನಚರಿತ್ರೆ
- ಅನುಪಮಾ ಅರೋರಾ ಮತ್ತು ಸ್ಯಾಂಡ್ರಿನ್ ಸಾನೋಸ್ ಅವರಿಂದ ಸಂದರ್ಶನ, ಜರ್ನಲ್ ಆಫ್ ಫೆಮಿನಿಸ್ಟ್ ಸ್ಕಾಲರ್ಶಿಪ್ 6 (ವಸಂತ 2014)
- Pages using the JsonConfig extension
- CS1 ಅಮೆರಿಕನ್ ಇಂಗ್ಲಿಷ್-language sources (en-us)
- CS1 ಇಂಗ್ಲಿಷ್-language sources (en)
- Articles with hCards
- Commons category link is on Wikidata
- Articles with FAST identifiers
- Articles with ISNI identifiers
- Articles with VIAF identifiers
- Articles with WorldCat Entities identifiers
- Articles with BNE identifiers
- Articles with BNF identifiers
- Articles with BNFdata identifiers
- Articles with GND identifiers
- Articles with J9U identifiers
- Articles with LCCN identifiers
- Articles with NLK identifiers
- Articles with NTA identifiers
- Articles with PLWABN identifiers
- Articles with SUDOC identifiers
- ವಿಕಿಪೀಡಿಯ ಅನುವಾದ ಶಿಬಿರ ಲೇಖನ