ಉಷ್ಣ ಮಾಲಿನ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

Expression error: Unexpected < operator.

ಪೊಟ್ರೆಟೊ ಜನರೇಟಿಂಗ್‌ ಸ್ಟೇಷನ್, ಉಷ್ಣಜಲವನ್ನು ಸ್ಯಾನ್‌ಫ್ರಾನ್ಸಿಸ್ಕೊ ತೀರಕ್ಕೆ ಬಿಡುಗಡೆ ಮಾಡುತ್ತದೆ.[೧]

ನೀರಿನ ತಾಪಮಾನದ ಪರಿಸ್ಥಿತಿ ಯಾವುದೇ ಒಂದು ಪ್ರಕ್ರಿಯೆಯಿಂದ ಬದಲಾಗಿ ನೀರಿನ ಗುಣಮಟ್ಟ ಕೆಳಮಟ್ಟಕ್ಕೆ ಇಳಿಯುವುದನ್ನು ಉಷ್ಣ ಮಾಲಿನ್ಯ ಎನ್ನಲಾಗುತ್ತದೆ. ಇದರ ಸಹಜ ಕಾರಣಗಳೆಂದರೆ ನೀರನ್ನು ಎಂಜಿನ್ ಹಾಗೂ ಮಷೀನ್‌ಗಳನ್ನು ತಂಪಾಗಿಡಿಸಲು ಪವರ್ ಪ್ಲಾಂಟ್ಸ್ ಹಾಗೂ ಔದ್ಯೂಗಿಕ ಉತ್ಪಾದಕರು ಬಳಸುವುದು. ಈ ರೀತಿ ಬಳಸಿದ ನೀರನ್ನು ಹೆಚ್ಚಿನ ತಾಪಮಾನದಲ್ಲಿ ನೈಸರ್ಗಿಕ ಪರಿಸರಕ್ಕೆ ಹಿಂದಿರುಗಿಸಿದಾಗ, ತಾಪಮಾನದ ಬದಲಾವಣೆ (ಅ) ಆಮ್ಲಜನಕದ ಪೂರೈಕೆಯನ್ನು ಕುಗ್ಗಿಸುತ್ತದೆ, ಮತ್ತು (ಆ) ಜೀವಿ ಪರಿಸರದ ಪದ್ಧತಿಯ ಸಂಯೋಜನೆಯನ್ನು ಕೂಡ ಪರಿಣಮಿಸುತ್ತದೆ. ನಗರದ ಬಳಸಿದ ನೀರು -- ಬಿರುಗಾಳಿಯ ನೀರು ರಸ್ತೆಗಳಿಂದ ಹಾಗೂ ವಾಹನ ನಿಲ್ದಾಣಗಳಿಂದ ಹರಿದು ಬಂದು ನೀರಿನ ಮೆಲ್ಪದರವನ್ನು ಸೇರುವುದು -- ಕೂಡ ಹೆಚ್ಚಿದ ನೀರಿನ ತಾಪಮಾನದ ಒಂದು ಮೂಲವಾಗಿರಬಹುದು. ಒಂದು ಪವರ್ ಪ್ಲಾಂಟ್ ಮೊದಲನೇಯ ಬಾರಿಗೆ ತೆರೆದಾಗ ಅಥವಾ ದುರಸ್ತಿ ಅಥವಾ ಇತರ ಕಾರಣಗಳಿಗಾಗಿ ಮುಚ್ಚಿದಾಗ, ಒಂದು ನಿಯಮಿತ ತಾಪಮಾನದ ವಲಯಕ್ಕೆ ಅಳವಡಿಸಿಕೊಂಡ ಮೀನುಗಳು ಹಾಗೂ ಇತರ ಜೀವಿಗಳು ನೀರಿನ ತಾಪಮಾನದ ಹಠಾತ್ತ ಏರಿಕೆಯಿಂದ ಸಾವಿಗೀಡಾಗಬಹುದು, ಇದನ್ನು ’ಥರ್ಮಲ್ ಶಾಕ್’ ಎಂದು ಕೂಡ ಹೇಳುತ್ತಾರೆ. ಅತಿ ಶೀತ ನೀರನ್ನು ಜಲಾಶಯಗಳ ಕೆಳಗಿನಿಂದ ಉಷ್ಣ ಸರೋವರಗಳಲ್ಲಿ ಬಿಡುಗಡೆ ಮಾಡುವುದು ಕೂಡ ಉಷ್ಣದ ಮಾಲಿನ್ಯಕ್ಕೆ ಕಾರಣವಾಗಬಹುದು. ಇದು ಮೀನುಗಳಿಗೆ (ಮುಖ್ಯವಾಗಿ ಅದರ ಮೊಟ್ಟೆಗಳಿಗೆ ಹಾಗೂ ಮರಿಹುಳುಗಳಿಗೆ), ದೊಡ್ಡ ಬೆನ್ನೆಲುಬಿಲ್ಲದ ಪ್ರಾಣಿಗಳಿಗೆ ಹಾಗೂ ನದಿಯ ಉತ್ಪಾದನಾ ಸಾಮರ್ಥ್ಯವನ್ನು ಪರಿಣಮಿಸುತ್ತದೆ.

ಜೀವಿ ಪರಿಸರದ ಪರಿಣಾಮಗಳು - ಬೆಚ್ಚಗಿರುವ ನೀರು[ಬದಲಾಯಿಸಿ]

ಹೆಚ್ಚಾದ ತಾಪಮಾನ ವಿಶಿಷ್ಟವಾಗಿ ನೀರಿನಲ್ಲಿನ ಕರಗಿದ ಆಮ್ಲಜನಕದ (DO) ಮಟ್ಟವನ್ನು ಕುಂದಿಸುತ್ತದೆ. ಕುಗ್ಗಿದ DO ಮಟ್ಟಗಳು ಮೀನುಗಳು, ದ್ವಿಚರಿಗಳು ಹಾಗೂ ಕೊಪೆಪೊಡಳಂತಹ ಜಲಚರಗಳಿಗೆ ಹಾನಿಯನ್ನು ಉಂಟು ಮಾಡಬಹುದು. ಉಷ್ಣದ ಮಾಲಿನ್ಯ ಜಲಚರಿಗಳ ಜೀವರಾಸಾಯನಿಕ ಕ್ರಿಯೆಯ ಗತಿಯನ್ನು ಕಿಣ್ವ ಚಟುವಟಿಕೆ ಎಂದು ಹೆಚ್ಚಿಸಬಹುದು, ಇದರ ಪರಿಣಾಮವಾಗಿ ಈ ಜೀವಿಗಳು ಪರಿಸರ ಬದಲಾವಣೆ ಇಲ್ಲದ ಸಮಯವನ್ನು ಹೋಲಿಸಿರೆ ಸ್ವಲ್ಪ ಕಾಲಾವಧಿಯಲ್ಲಿ ಹೆಚ್ಚಿನ ಆಹಾರವನ್ನು ಸೇವಿಸುತ್ತವೆ. ಹೆಚ್ಚಿದ ಜೀವರಾಸಾಯನಿಕ ಕ್ರಿಯೆಯ ಗತಿ ಆಹಾರದ ಮೂಲಗಳ ಕೊರತೆಯನ್ನುಂಟು ಮಾಡಬಹುದು, ಪರಿಣಾಮವಾಗಿ ಜಲಚರಿಗಳ ಸಂಖ್ಯೆಯಲ್ಲಿ ತೀವ್ರ ಇಳಿತ ಕಂಡು ಬರುತ್ತದೆ. ಪರಿಸರದಲ್ಲಿನ ಬದಲಾವಣೆ ಜೀವಿಗಳ ಇನ್ನು ಹೆಚ್ಚು ಯುಕ್ತ ಪರಿಸರದತ್ತ ವಲಸೆಯನ್ನು ಪರಿಣಮಿಸುತ್ತದೆ ಹಾಗೂ ಬೆಚ್ಚಗಿನ ನೀರಿನಲ್ಲಿ ಮಾತ್ರ ವಾಸಿಸುವ ಮೀನುಗಳ ಒಳ-ವಲಸೆ ಉಂಟಾಗುತ್ತದೆ. ಇದು ಕೆಲವೇ ಸಂಪನ್ಮೂಲಗಳ ಸ್ಪರ್ಧೆಗೆ ದಾರಿ ಆಗುತ್ತದೆ; ಒಳ ಬರುವ ಹೆಚ್ಚು ಹೊಂದಿಕೆಯ ಜೀವಿಗಳು ಬೆಚ್ಚಗಿನ ತಾಪಮಾನದಲ್ಲಿರುವ ಜೀವಿಗಳ ಮೇಲೆ ಹೆಚ್ಚು ಅನುಕೂಲ ಪಡೆದಿರಬಹುದು. ಇದರಿಂದ ಒಬ್ಬರಿಗೆ ಹಳೆಯ ಹಾಗೂ ಹೊಸ ಪರಿಸರಗಳ ಆಹಾರ ಸರಪಳಿಯಲ್ಲಿ ರಾಜಿ ಮಾಡಿಕೊಳ್ಳುವ ಸಮಸ್ಯೆ ಆಗಬಹುದು. ಇದರ ಪರಿಣಾಮವಾಗಿ ಜೀವಿಗಳ ವೈವಿಧ್ಯತೆಯಲ್ಲಿ ಇಳಿತ ಉಂಟಾಗುತ್ತದೆ. ತಾಪಮಾನದಲ್ಲಿನ ಒಂದರಿಂದ ಎರಡು ಡಿಗ್ರಿ ಸೆಲ್ಸಿಯಸ್‌ಗಳ ಬದಲಾವಣೆ ಕೂಡ ಜೀವಿಗಳ ಜೀವರಾಸಾಯನಿಕ ಕ್ರಿಯೆ ಹಾಗೂ ಇತರ ಪ್ರತಿಕೂಲ ಕೋಶಗಳ ಜೀವವಿಜ್ಞಾನದ ಪರಿಣಾಮಗಳಲ್ಲಿ ಪ್ರಮುಖ ಬದಲಾವಣೆಗಳನ್ನು ಉಂಟು ಮಾಡುತ್ತವೆ. ಅಗತ್ಯವಿರುವ ಒಸ್ಮೊಸಿಸ್‌ಯಿನ ಕೋಶ ಪರದೆಗಳ ಅಂತಃಪ್ರವೇಶ್ಯವನ್ನು ಕಡಿಮೆಗೊಳಿಸುವುದು, ಕೋಶ ಪ್ರೋಟಿನ್‌ಗಳ ಘನೀಕರಣ ಹಾಗೂ ಕಿಣ್ವ ಜೀವರಾಸಾಯನ ಕ್ರಿಯೆಯಲ್ಲಿ ಬದಲಾವಣೆಗಳು ಪ್ರಮುಖ ಪ್ರತಿಕೂಲ ಬದಲಾವಣೆಗಳಲ್ಲಿ ಸೇರಿವೆ. ಈ ಕೋಶಗಳ ಮಟ್ಟದ ಪರಿಣಾಮಗಳು ಜೀವಿತಾವಧಿ ಹಾಗೂ ಪುನರುತ್ಪಾದನೆಯ ಮೇಲೆ ಪ್ರತಿಕೂಲವಾಗಿ ಪ್ರಭಾವ ಬೀರಬಹುದು. ಬೆಚ್ಚಗಿನ ನೀರು ಪ್ರಾಥಮಿಕ ಉತ್ಪಾದಕರ ಮೇಲೆ ಪ್ರಭಾವ ಬೀರುತ್ತದೆ ಕಾರಣ ಹೆಚ್ಚು ತಾಪಮಾನದ ನೀರು ಸಸ್ಯಗಳ ಬೆಳವಣಿಗೆಯ ಗತಿಯನ್ನು ಹೆಚ್ಚಿಸುತ್ತದೆ, ಇದು ಜೀವಿತಾವಧಿಯ ಕುಗ್ಗುವಿಕೆ ಹಾಗೂ ತಳಿಗಳ ಹೆಚ್ಚು ಜನಸಂಖ್ಯೆಗೆ ಪರಿಣಮಿಸುತ್ತದೆ. ಇದು ಪಾಚಿ ವಿಕಸನವನ್ನುಂಟು ಮಾಡಿ ಆಮ್ಲಜನಕದ ಮಟ್ಟವನ್ನು ಮಲಿನಗೊಂಡ ಬೇಸಾಯದ ಸಜೀವವಲ್ಲದ ರಾಸಾಯನಿಕ ಗೊಬ್ಬರದಂತೆ ಕಡಿಮೆಗೊಳಿಸುತ್ತದೆ. ಅತಿ ದೊಡ್ಡ ತಾಪಮಾನದಲ್ಲಿನ ಹೆಚ್ಚಳವು ಜೀವನಾಧಾರದ ಕಿಣ್ವಗಳನ್ನು ವಿಕೃತಗೊಳಿಸುವಿಕೆಗೆ ದಾರಿಯಾಗಬಹುದು, ಇದು ಜಲಜನಕ ಹಾಗೂ ಡೈಸಲ್ಫೇಡ್ ಬಂಧಗಳ ಕಿಣ್ವಗಳಲ್ಲಿನ ಕ್ವಾಟರ್ನರಿ ವಿನ್ಯಾಸದಲ್ಲಿನ ಒಡೆಯುವಿಕೆಯಿಂದಾಗುತ್ತದೆ. ಜಲಚರಿಗಳಲ್ಲಿನ ಕುಂದಿದ ಕಿಣ್ವ ಚಟುವಟಿಕೆಯು ಲಿಪಿಡ್‌ಗಳ ತುಂಡುವರಿಕೆಯ ಅಸಾಮರ್ಥ್ಯದಂತಹ ಸಮಸ್ಯೆಗಳನ್ನುಂಟು ಮಾಡಬಹುದು, ಇದು ಮುಂದೆ ನ್ಯೂನಪೋಷಣೆಗೆ ದಾರಿಯಾಗುತ್ತದೆ. ನಿಯಮಿತ ಪ್ರಸಂಗಗಳಲ್ಲಿ, ಬೆಚ್ಚುಗಿನ ನೀರು ಸ್ವಲ್ಪ ಹಾನಿಕಾರಕ ಪರಿಣಾಮ ಬೀರುತ್ತದೆ ಹಾಗೂ ಒಳಬರುವ ಜಲಜೀವಿಗಳ ಉನ್ನತ ಕ್ರೀಯಾಶೀಲತೆಗೆ ದಾರಿ ಕೂಡ ಆಗಬಹುದು. ಈ ಘಟನೆ ವಿಶೇಷವಾಗಿ ಸೀಸನಲ್ ನೀರುಗಳಲ್ಲಿ ಕಂಡು ಬರುತ್ತದೆ ಹಾಗೂ ಇದನ್ನು ಥರ್ಮಲ್ ಎರ್ನಿಚಮೆಂಟ್ ಎಂದು ಹೇಳಲಾಗುವುದು. ಒಂದು ತೀವ್ರ ಪ್ರಸಂಗ ಕಡಲ ಹಸುವಿನ ಸಮಷ್ಟೀಕರಣದ ಅಭ್ಯಾಸದಿಂದ ಉದ್ಭವಿಸುತ್ತದೆ, ಇವು ಚಳಿಗಾಲದಲ್ಲಿ ಹಲವು ಬಾರಿ ಪವರ್ ಪ್ಲಾಂಟ್‌ ವಿಸರ್ಜನೆಗಳ ತಾಣಗಳನ್ನು ಬಳಸುತ್ತವೆ. ಭವಿಷ್ಯದ ಅಂದಾಜಿನ ಸಲಹೆಯ ಪ್ರಕಾರ ಕಡಲ ಹಸುಗಳ ಸಂಖ್ಯೆ ಈ ವಿಸರ್ಜನೆಗಳ ತೆಗೆಯುವಿಕೆಯಿಂದ ಕುಂದುವುದು. ಸಿಹಿನೀರಿಗೆ 70° ಫ್ಯಾರೆನ್‌ಹೈಟ್, ಉಪ್ಪು ನೀರಿಗೆ 80 °F ಹಾಗೂ ಉಷ್ಣವಲಯದ ಮೀನುಗಳಿಗೆ 80 °F ಅಷ್ಟು ತಾಪಮಾನಗಳು ಹೆಚ್ಚಾಗಿರಬಹುದು.[clarification needed]

ಜೀವಿ ಪರಿಸರದ ಪರಿಣಾಮಗಳು - ಶೀತ ನೀರು[ಬದಲಾಯಿಸಿ]

ಜಲಾಶಯಗಳಿಂದ ನೈಜ್ಯವಲ್ಲದ ಶೀತ ನೀರಿನ ಬಿಡುಗಡೆಯು ನದಿಗಳ ಮೀನುಗಳಲ್ಲಿ ಹಾಗೂ ದೊಡ್ಡ ಬೆನ್ನೆಲುಬಿಲ್ಲದ ಪ್ರಾಣಿಗಳಲ್ಲಿ ಹಠಾತ್ತಾಗಿ ಬದಲಾವಣೆಯನ್ನುಂಟು ಮಾಡಬಹುದು, ಮತ್ತು ನದಿಯ ಉತ್ಪನ್ನತೆಯನ್ನು ಕಡಿಮೆಗಳಿಸಬಹುದು. ಆಸ್ಟ್ರೇಲಿಯದಲ್ಲಿ, ಹಲವು ನದಿಗಳು ಉಷ್ಣ ತಾಪಮಾನ ರಾಜ್ಯಭಾರವನ್ನು ಹೊಂದಿವೆ, ಸ್ಥಳೀಯ ಮೀನಿನ ತಳಿಗಳನ್ನು ವರ್ಜಿಸಲಾಗಿದೆ, ಮತ್ತು ದೊಡ್ಡ ಬೆನ್ನೆಲುಬಿಲ್ಲದ ಪ್ರಾಣಿಗಳನ್ನು ಉಗ್ರವಾಗಿ ಬದಲಾಯಿಸಿ ಅವುಗಳನ್ನು ಶಕ್ತಿಹೀನವಾಗಿಸಲಾಗಿದೆ. ಸಿಹಿ ನೀರಿನ ಮೀನುಗಳಿಗೆ 50 °F, ಉಪ್ಪು ನೀರಿನ ಮೀನುಗಳಿಗೆ 75 °F, ಹಾಗೂ ಉಷ್ಣವಲಯದ ಮೀನುಗಳಿಗೆ 80 °F ಆಷ್ಟು ಕಡಿಮೆ ತಾಪಮಾನ ಇರಬಹುದು.

ಉಷ್ಣ ಮಾಲಿನ್ಯದ ನಿಯಂತ್ರಣ[ಬದಲಾಯಿಸಿ]

ಗುಸ್ತಾವ್‌ ಕ್ನೆಪ್ಪರ್ ಪವರ್‌ ಸ್ಟೇಷನ್, ಡಾರ್ಟ್‌ಮಂಡ್‌‍, ಜರ್ಮನಿಯಲ್ಲಿರುವ ಶೈತ್ಯ ಗೋಪುರಗಳು

ಔದ್ಯಮಿಕ ತ್ಯಾಜ್ಯಜಲ ಸಂಯುಕ್ತ ರಾಷ್ಟ್ರದಲ್ಲಿ, ಉಷ್ಣದ ಮಾಲಿನ್ಯ ಹೆಚ್ಚಾಗಿ ಪವರ್ ಪ್ಲಾಂಟ್ಸ್, ಪೆಟ್ರೋಲಿಯಂ ಸಂಸ್ಕರಣಾಗಾರಗಳು, ಕಾಗದ ಮಾಡಲು ಬಳಸುವ ಬಟ್ಟೆ ಹಾಗೂ ಕಾಗದದ ಕಾರ್ಖಾನೆಗಳು, ರಾಸಾಯನಿಕ ಪ್ಲಾಂಟ್‌ಗಳು, ಸ್ಟೀಲ್ ಕಾರ್ಖಾನೆಗಳು ಹಾಗೂ ಕುಲುಮೆಗಳಂತಹ ಔದ್ಯಮಿಕ ಮೂಲಗಳಿಂದ ಉತ್ಪನ್ನವಾಗುತ್ತವೆ.[೨][೩] ಈ ಮೂಲಗಳಿಂದ ಬರುವ ಬಿಸಿಯಾದ ನೀರನ್ನು ಹೀಗೆ ನಿಯಂತ್ರಿಸಬಹುದು:

  • ಶೈತ್ಯಾಗಾರಗಳು - ಆವಿ, ಶಾಖ ಪ್ರಸರಣ, ಮತ್ತು ವಿಕಿರಣವಾಗಿಸಲ್ಪಟ್ಟ ಮಾನವ ನಿರ್ಮಿತ ಜಲ.
  • ಶೈತ್ಯ ಗೋಪುರಗಳು ನಿರುಪಯುಕ್ತ ಉಷ್ಣವನ್ನು ವಾತಾವರಣಕ್ಕೆ ಆವಿಯ ಮೂಲಕ ಅಥವಾ ಉಷ್ಣವನ್ನು ವರ್ಗಾವಣೆ ಮಾಡುವ ಮೂಲಕ ವಾತಾವರಣಕ್ಕೆ ಬಿಡುಗಡೆ ಮಾಡುತ್ತದೆ.
  • ಉಪ‌ಉತ್ಪನ್ನೀಕರಣ, ಈ ಕ್ರಿಯೆಯಲ್ಲಿ ತ್ಯಾಜ್ಯ ಉಷ್ಣವನ್ನು ಮರುಬಳಕೆ ಮಾಡುವ ಮೂಲಕ ಮನೆಬಳಕೆ ಹಾಗೂ ಕೈಗಾರಿಕಾ ಉಷ್ಣ ಉತ್ಪತ್ತಿಗಾಗಿ ಬಳಸಲಾಗುತ್ತದೆ.[೪]

ಕೆಲವು ಸೌಲಭ್ಯಗಳಲ್ಲಿ ಒಮ್ಮುಖ ಶೈತ್ಯೀಕರಣ ವನ್ನು (OTC) ಬಳಸಲಾಗುತ್ತದೆ. ಈ ರೀತಿಯ ಉಪಕರಣಗಳು ಉಷ್ಣತೆಯನ್ನು ಅಷ್ಟಾಗಿ ಈ ಮೇಲಿನ ಉಪಕರಣಗಳ ರೀತಿಯಲ್ಲಿ ಕಡಿಮೆಗೊಳಿಸುವುದಿಲ್ಲ. ಉದಾಹರಣೆಗೆ, ಸ್ಯಾನ್‌ಫ್ರಾನ್ಸಿಸ್ಕೊದಲ್ಲಿಯ ಪೋರ್ಟ್ರಿಯೊ ಜನರೇಟಿಂಗ್ ಸ್ಟೇಷನ್ OTCಯನ್ನು ಬಳಸುತ್ತದೆ. ಇಲ್ಲಿ ಬಳಕೆಯಾದ ನೀರನ್ನು ಸ್ಯಾನ್‌ಫ್ರಾನ್ಸಿಸ್ಕೊ ತೀರಕ್ಕೆ ಬಿಡುತ್ತದೆ. ಇದು ಆ ತೀರದ ಸಾಮಾನ್ಯ ಉಷ್ಣತೆಗಿಂತ 10 °C (20 °F) ಹೆಚ್ಚು ಇರುತ್ತದೆ.[೫] ಪಟ್ಟಣದ ವಾತಾವರಣದಲ್ಲಿ ಹೊರಚೆಲ್ಲುವ ಉಷ್ಣ ಉಷ್ಣ ಹವಾಮಾನದ ದಿನಗಳಲ್ಲಿ ಪಟ್ಟಣದ ವಾತಾವರಣದಿಂದ ಹೊರಚೆಲ್ಲಲ್ಪಡುವ ತ್ಯಾಜ್ಯಗಳಿಂದ ಕೂಡ ಸಣ್ಣ ತೊರೆಗಳ ಮೇಲೆ ಪರಿಣಾಮ ಉಂಟಾಗುತ್ತದೆ. ಇದು ಸಾಮಾನ್ಯವಾಗಿ ಹೆಚ್ಚಿನ ತಾಪಮಾನವಿರುವ ವಾಹನನಿಲುಗಡೆ ಸ್ಥಳ ಮತ್ತು ರಸ್ತೆಗಳು ಹಾಗೂ ಜನರು ಸಾಗುವ ಪ್ರದೇಶಗಳಲ್ಲಿ ನೀರು ಹರಿಯುವುದರಿಂದ ಉಂಟಾಗುತ್ತದೆ. ಚಂಡಮಾರುತದಿಂದ ಮಳೆಯ ನೀರು ಸಮರ್ಪಕವಾಗಿ ಭೂಮಿಯಲ್ಲಿಯ ಅಂತರ್ಜಲದೊಂದಿಗೆ ಇಂಗುವಂತೆ ಮಾಡಲು ಸಮರ್ಪಕ ವಿಧಾನಗಳಾದ ನೈಸರ್ಗಿಕ ಪ್ರತಿಧಾರಣಾ ವಿಧಾನ, ಧಾರಣಾ ಹೊಂಡ‌ಗಳನ್ನು ಬಳಸುವ ಮೂಲಕ ಈ ಉಷ್ಣ ಮಾಲಿನ್ಯವನ್ನು ಕಡಿಮೆ ಮಾಡಬಹುದಾಗಿದೆ. ಧಾರಣಾ ಹೊಂಡಗಳಲ್ಲಿ ಸೂರ್ಯಕಿರಣಗಳಿಂದ ನೀರು ಬಿಸಿಯಾಗುವುದರಿಂದ ವಾತಾವರಣದ ಉಷ್ಣವನ್ನು ಕಡಿಮೆಗೊಳಿಸುವುದಕ್ಕೆ ಸಶಕ್ತವಾಗಿಲ್ಲ.[೬]...

ಇವನ್ನೂ ಗಮನಿಸಿ[ಬದಲಾಯಿಸಿ]

ಆಕರಗಳು[ಬದಲಾಯಿಸಿ]

  1. ಸೆಲ್ನಾ, ರಾಬರ್ಟ್ (2009) "ವಿದ್ಯುತ್‌ ಸ್ಥಾವರಗಳು ಮೀನು ಕೊಲ್ಲುವುದನ್ನು ತಡೆಯಲು ಯಾವುದೇ ವಿಧಾನವನ್ನು ಹೊಂದಿಲ್ಲ." ಸ್ಯಾನ್‌ಫ್ರಾನ್ಸಿಸ್ಕೊ ಕ್ರೋನಿಕಲ್, ಜನವರಿ 2, 2009.
  2. ಯು.ಎಸ್‌. ಪರಿಸರ ರಕ್ಷಣಾ ಸಂಸ್ಥೆ (EPA). ವಾಷಿಂಗ್ಟನ್‌, D.C."ಕೂಲಿಂಗ್‌ ವಾಟರ್ ಇಂಟೇಕ್ ಸ್ಟ್ರಕ್ಚರ್ಸ್‌-ಬೇಸಿಕ್ ಇನ್ಫಾರ್ಮೇಷನ್" Archived 2010-05-27 ವೇಬ್ಯಾಕ್ ಮೆಷಿನ್ ನಲ್ಲಿ. ಜೂನ್‌ 10, 2008
  3. EPA. " Archived 2010-05-29 ವೇಬ್ಯಾಕ್ ಮೆಷಿನ್ ನಲ್ಲಿ.ಅಂತಿಮ ವಿಭಾಗ 316(b) ಮೂರನೇ ಹಂತಕ್ಕೆ ತಾಂತ್ರಿಕ ಉನ್ನತಿಯ ಪಟ್ಟಿ" Archived 2010-05-29 ವೇಬ್ಯಾಕ್ ಮೆಷಿನ್ ನಲ್ಲಿ. ಜೂನ್ 1987 5ನೇ ಅಧ್ಯಾಯ.
  4. EPA (1997). Profile of the Fossil Fuel Electric Power Generation Industry (Report). Archived from the original on 2011-04-05. https://web.archive.org/web/20110405122613/http://www.epa.gov/compliance/resources/publications/assistance/sectors/notebooks/fossil.html.  Document No. EPA/310-R-97-007. p. 24
  5. ಕ್ಯಾಲಿಫೋರ್ನಿಯಾ ಪರಿಸರ ರಕ್ಷಣಾ ಸಂಸ್ಥೆ ಸ್ಯಾನ್ ಫ್ರಾನ್ಸಿಸ್ಕೊ ತೀರದ, ಸ್ಥಳೀಯ ಜಲ ಗುಣಮಟ್ಟ ನಿಯಂತ್ರಣ ಮಂಡಳಿ. "ಮಿರಾಂಟ್‌ ಪೊಟ್ರೆರೊಗಾಗಿನ ತ್ಯಾಜ್ಯ ವಿಸರ್ಜನಾ ಅಗತ್ಯಗಳು, ಎಲ್‌ಎಲ್‌ಸಿ, ಪೊಟ್ರಾರೊ ಫವರ್ ಪ್ಲಾಂಟ್‌." Archived 2011-06-16 ವೇಬ್ಯಾಕ್ ಮೆಷಿನ್ ನಲ್ಲಿ. ಆರ್ಡರ್ ಸಂಖ್ಯೆ. R2-2006-0032; NPDES ಪರಿಮಿಟ್‌ ಸಂಖ್ಯೆ. CA0005657. ಮೇ 26, 2006
  6. EPA. " Archived 2010-08-02 ವೇಬ್ಯಾಕ್ ಮೆಷಿನ್ ನಲ್ಲಿ."ಪಟ್ಟಣ ಪ್ರದೇಶದ ಚಂಡಮಾರುತದ ಜಲ ನಿರ್ವಹಣಾ ವಿಧಾನಗಳ ಪ್ರಾಥಮಿಕ ಮಾಹಿತಿ" Archived 2010-08-02 ವೇಬ್ಯಾಕ್ ಮೆಷಿನ್ ನಲ್ಲಿ. ಆಗಸ್ಟ್ 1999 ಕಡತ ಸಂಖ್ಯೆ. EPA-821-R-99-012. p. 5-58.