ಉನ್ನಿಯಪ್ಪಮ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಉನ್ನಿಯಪ್ಪಮ್ (ಕರೊಲ್ಲಪ್ಪಮ್)
ಮೂಲ
ಮೂಲ ಸ್ಥಳಭಾರತ
ಪ್ರಾಂತ್ಯ ಅಥವಾ ರಾಜ್ಯಕೇರಳ
ವಿವರಗಳು
ಸೇವನಾ ಸಮಯಲಘು ಆಹಾರ
ಮುಖ್ಯ ಘಟಕಾಂಶ(ಗಳು)ಅಕ್ಕಿ, ಬೆಲ್ಲ, ಬಾಳೆ ಹಣ್ಣು, ತುಪ್ಪ, ಸಕ್ಕರೆ

ಕರೊಲ್ಲಪ್ಪಮ್ ಎಂದೂ ಕರೆಯಲ್ಪಡುವ ಉನ್ನಿಯಪ್ಪಮ್ (ಮಲಯಾಳಂ: ഉണ്ണിയപ്പം) ದುಂಡಗಿರುವ ಚಿಕ್ಕ ಗಾತ್ರದ ಲಘು ಆಹಾರವಾಗಿದೆ. ಇದನ್ನು ಅಕ್ಕಿ, ಬೆಲ್ಲ, ಬಾಳೆ ಹಣ್ಣು, ಹುರಿದ ಕೊಬ್ಬರಿ ತುಂಡುಗಳು, ಹುರಿದ ಎಳ್ಳಿನ ಬೀಜಗಳು, ತುಪ್ಪ ಮತ್ತು ಏಲಕ್ಕಿ ಪುಡಿಯಿಂದ ತಯಾರಿಸಲಾಗುತ್ತದೆ. ಇದನ್ನು ಎಣ್ಣೆಯಲ್ಲಿ ಕರಿಯಲಾಗುತ್ತದೆ. ಬಾಳೆಹಣ್ಣಿನ ಬದಲು ಹಲಸಿನ ಹಣ್ಣಿನ ಮುರಬ್ಬವನ್ನು ಬಳಸುವ ಈ ನೈಸರ್ಗಿಕ ಮತ್ತು ಸ್ಪಂಜಿನಂಥ ಕರಿದ ಹಿಟ್ಟಿನ ಭಿನ್ನ ರೂಪಗಳು ೨೦೦೦ ದಶಕದ ಉತ್ತರಾರ್ಧದಿಂದ ಸಾಮಾನ್ಯವಾಗಿವೆ. ಇದು ಕೇರಳದ ಜನಪ್ರಿಯ ಲಘು ಆಹಾರವಾಗಿದೆ. ಮಲಯಾಳಂನಲ್ಲಿ, ಉನ್ನಿ ಎಂದರೆ ಚಿಕ್ಕದು ಮತ್ತು ಅಪ್ಪಂ ಎಂದರೆ ಅಕ್ಕಿಯ ಬಿಲ್ಲೆಖಾದ್ಯ ಎಂದಾಗಿದೆ.

ಹೊರಗಿನ ಕೊಂಡಿಗಳು[ಬದಲಾಯಿಸಿ]