ಉತ್ಪನ್ನ (ಹಣಕಾಸು)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಉತ್ಪನ್ನ ಎಂಬುದೊಂದು ಹಣಕಾಸಿಗೆ ಸಂಬಂಧಿಸಿದ ದಸ್ತಾವೇಜು ಸಾಧನವಾಗಿದ್ದು, ಇತರ ಕೆಲವು ಸ್ವತ್ತು, ಸೂಚಿ, ಸಂಗತಿ, ಮೌಲ್ಯ ಅಥವಾ ಸನ್ನಿವೇಶದಿಂದ (ಆಧಾರವಾಗಿರುವ ಸ್ವತ್ತು ಎಂದು ಇದಕ್ಕೆ ಹೆಸರು) ಇದು ಉತ್ಪತ್ತಿಯಾಗಿದೆ . ಸ್ವತಃ ಆಧಾರವಾಗಿರುವ ಸ್ವತ್ತನ್ನು ವ್ಯಾಪಾರ ಅಥವಾ ವಿನಿಮಯ ಮಾಡುವುದಕ್ಕಿಂತ ಹೆಚ್ಚಾಗಿ, ಆಧಾರವಾಗಿರುವ ಸ್ವತ್ತಿನ ಆಧಾರದ ಮೇಲೆ ಹಣ ಅಥವಾ ಸ್ವತ್ತುಗಳನ್ನು ಕಾಲಾನಂತರದಲ್ಲಿ ವಿನಿಮಯ ಮಾಡಿಕೊಳ್ಳಲು ಉತ್ಪನ್ನ ವ್ಯಾಪಾರಿಗಳು ಒಪ್ಪಂದವೊಂದನ್ನು ಮಾಡಿಕೊಳ್ಳುತ್ತಾರೆ. ಮುಮ್ಮಾರಿಕೆಗಳ ಒಪ್ಪಂದವೊಂದು ಇದಕ್ಕೆ ನೀಡಬಹುದಾದ ಒಂದು ಸರಳ ಉದಾಹರಣೆಯಾಗಿದೆ: ಇದು ಆಧಾರವಾಗಿರುವ ಸ್ವತ್ತನ್ನು ಭವಿಷ್ಯದ ದಿನವೊಂದರಲ್ಲಿ ವಿನಿಮಯ ಮಾಡಲು ಮಾಡಿಕೊಂಡ ಒಂದು ಒಪ್ಪಂದವಾಗಿದೆ. ಉತ್ಪನ್ನಗಳು ಬಹುಪಾಲು ಹೆಚ್ಚಿನ ಸನ್ನೆ-ಸಾಮರ್ಥ್ಯವನ್ನು ಹೊಂದಿದ್ದು, ಆಧಾರವಾಗಿರುವ ಮೌಲ್ಯದಲ್ಲಿನ ಒಂದು ಚಿಕ್ಕ ಸಂಚಲನೆಯು ಉತ್ಪನ್ನದ ಮೌಲ್ಯದಲ್ಲಿ ಒಂದು ದೊಡ್ಡ ವ್ಯತ್ಯಾಸವನ್ನು ಉಂಟುಮಾಡಬಲ್ಲುದಾಗಿರುತ್ತದೆ. ಒಂದು ವೇಳೆ ಆಧಾರವಾಗಿರುವ ಸ್ವತ್ತಿನ ಮೌಲ್ಯವು ತಾವು ನಿರೀಕ್ಷಿಸಿದ ಮಾರ್ಗದಲ್ಲಿಯೇ ಚಲಿಸಿದರೆ (ಉದಾಹರಣೆಗೆ, ನಿರ್ಧರಿತ ದಿಕ್ಕಿನಲ್ಲಿ ಚಲಿಸುತ್ತದೆ, ನಿರ್ದಿಷ್ಟ ವಲಯವೊಂದರ ಒಳಗೆ ಅಥವಾ ಹೊರಗೆ ನಿಲ್ಲುತ್ತದೆ, ಒಂದು ಗೊತ್ತಾದ ಮಟ್ಟವನ್ನು ಮುಟ್ಟುತ್ತದೆ), ಸಟ್ಟಾ ವ್ಯವಹಾರ ಮಾಡಲು ಮತ್ತು ಲಾಭ ಗಳಿಸಲು ಹೂಡಿಕೆದಾರರಿಂದ ಉತ್ಪನ್ನಗಳು ಬಳಸಲ್ಪಡಬಹುದು. ಇದಕ್ಕೆ ಪರ್ಯಾಯವಾಗಿ, ತಮ್ಮ ಆಧಾರವಾಗಿರುವ ಸ್ಥಾನಕ್ಕೆ ವಿರುದ್ಧ ದಿಕ್ಕಿನಲ್ಲಿ ಮೌಲ್ಯವು ಚಲಿಸುವ ಹಾಗೂ ಅದರ ಭಾಗ ಅಥವಾ ಎಲ್ಲವನ್ನೂ ಪರಸ್ಪರ ಹೊಡೆದುಹಾಕುವ ಒಂದು ಉತ್ಪನ್ನದ ಒಡಂಬಡಿಕೆಯೊಳಗೆ ಪ್ರವೇಶಿಸುವ ಮೂಲಕ ಆಧಾರವಾಗಿರುವ ಸ್ವತ್ತಿನಲ್ಲಿ ನಷ್ಟವಾಗದಂತೆ ರಕ್ಷಿಸಿಕೊಳ್ಳಲು ಅಥವಾ ಅಪಾಯ ತಗ್ಗಿಸಲು ವ್ಯಾಪಾರಿಗಳು ಉತ್ಪನ್ನಗಳನ್ನು ಬಳಸಿಕೊಳ್ಳಬಹುದು. ಉತ್ಪನ್ನಗಳು ಈ ಕೆಳಕಂಡ ಅಂಶಗಳಿಂದ ಸಾಮಾನ್ಯವಾಗಿ ಸಂಪೂರ್ಣವಾಗಿ ವರ್ಗೀಕರಿಸಲ್ಪಡುತ್ತವೆ:

ಬಳಕೆಗಳು[ಬದಲಾಯಿಸಿ]

ನಷ್ಟವಾಗದಂತೆ ರಕ್ಷಿಸಿಕೊಳ್ಳುವಿಕೆ[ಬದಲಾಯಿಸಿ]

ನಷ್ಟವಾಗದಂತೆ ರಕ್ಷಿಸಿಕೊಳ್ಳುವಿಕೆಯು, ಅಪಾಯವನ್ನು ತೊಡೆದುಹಾಕಲು ಅಥವಾ ತಗ್ಗಿಸಲು ವಿನ್ಯಾಸಗೊಳಿಸಿದ ಒಂದು ಕೌಶಲವಾಗಿದೆ. ಆಧಾರವಾಗಿರುವ ಸ್ವತ್ತಿನ ಬೆಲೆಯ ಕುರಿತಾದ ಅಪಾಯವು ಒಬ್ಬ ಸಹಭಾಗಿಯಿಂದ ಮತ್ತೊಂದು ಸಹಭಾಗಿಗೆ ವರ್ಗಾವಣೆಯಾಗುವಲ್ಲಿ ಉತ್ಪನ್ನಗಳು ಅವಕಾಶ ಮಾಡಿಕೊಡುತ್ತವೆ. ಉದಾಹರಣೆಗೆ, ಓರ್ವ ಗೋಧಿ ಬೆಳೆವ ರೈತ ಮತ್ತು ಓರ್ವ ಗಿರಣಿಗಾರ, ಭವಿಷ್ಯದ ದಿನದಲ್ಲಿ ಒಂದು ನಿರ್ದಿಷ್ಟ ಪ್ರಮಾಣದ ಗೋಧಿಗೆ ಪ್ರತಿಯಾಗಿ ಒಂದು ನಿರ್ದಿಷ್ಟ ಪ್ರಮಾಣದ ನಗದು ಹಣವನ್ನು ವಿನಿಮಯ ಮಾಡಿಕೊಳ್ಳಲು ಮುಮ್ಮಾರಿಕೆಗಳ ಒಪ್ಪಂದವೊಂದಕ್ಕೆ ಸಹಿಹಾಕಬಹುದು.

ಎರಡೂ ವ್ಯಕ್ತಿಗಳು ಭವಿಷ್ಯದ ಒಂದು ಅಪಾಯವನ್ನು ತಗ್ಗಿಸಿಕೊಂಡಿರುತ್ತಾರೆ: ಅಂದರೆ, ಗೋಧಿ ಬೆಳೆವ ರೈತನಿಗೆ ಬೆಲೆಯ ಅನಿಶ್ಚಿತತೆಯ ಅಪಾಯ, ಮತ್ತು ಗಿರಣಿಗಾರನಿಗೆ ಗೋಧಿಯ ಲಭ್ಯತೆಯಾಗದಿರುವ ಅಪಾಯ ಇವು ತಗ್ಗಿಸಲ್ಪಟ್ಟಿರುತ್ತವೆ. ಆದಾಗ್ಯೂ, ಹವಾಮಾನದ ಕಾರಣ ಅಥವಾ ಒಬ್ಬ ಸಹಭಾಗಿಯು ಒಡಂಬಡಿಕೆಯ ಕುರಿತಾಗಿ ವಚನಭಂಗ ಮಾಡುವ ಕಾರಣದಂಥ, ಒಡಂಬಡಿಕೆಯಿಂದ ನಿರ್ದಿಷ್ಟಪಡಿಸಲ್ಪಡದ ಸಂಗತಿಗಳಿಂದಾಗಿಯೂ ಗೋಧಿಯು ಸಿಗದಿರುವ ಅಪಾಯಗಳು ಇಲ್ಲಿ ಎದುರಾಗಬಹುದು. ತೀರುವೆ ಮನೆ ಎಂದು ಕರೆಯಲಾಗುವ ಒಂದು ಮೂರನೇ ಸಹಭಾಗಿಯು ಅಥವಾ ಸಂಸ್ಥೆಯು, ಮುಮ್ಮಾರಿಕೆಗಳ ಒಪ್ಪಂದವೊಂದನ್ನು ಖಚಿತಪಡಿಸುತ್ತದೆಯಾದರೂ, ಪರಸ್ಪರ ಎದುರಾಗಿರುವ ಸಹಭಾಗಿಗಳಿಗೆ, ಅಂದರೆ ಪೂರಕ ಸಹಭಾಗಿಗಳಿಗೆ ಪ್ರತಿಯಾಗಿ ಎಲ್ಲಾ ಉತ್ಪನ್ನಗಳೂ ಖಚಿತಪಡಿಸಲ್ಪಡುವುದಿಲ್ಲ. 

ಇನ್ನೊಂದು ದೃಷ್ಟಿಕೋನದಲ್ಲಿ ಹೇಳುವುದಾದರೆ, ರೈತ ಮತ್ತು ಗಿರಣಿಗಾರ- ಈ ಇಬ್ಬರೂ ಮುಮ್ಮಾರಿಕೆಗಳ ಒಪ್ಪಂದವೊಂದಕ್ಕೆ ಸಹಿಹಾಕಿದಾಗ, ಒಂದು ಅಪಾಯವನ್ನು ತಗ್ಗಿಸಿಕೊಳ್ಳುತ್ತಾರೆ ಮತ್ತು ಒಂದು ಅಪಾಯವನ್ನು ತಮ್ಮದಾಗಿಸಿಕೊಳ್ಳುತ್ತಾರೆ: ಒಡಂಬಡಿಕೆಯಲ್ಲಿ ನಿರ್ದಿಷ್ಟಪಡಿಸಲ್ಪಟ್ಟ ಬೆಲೆಗಿಂತ ಕಡಿಮೆ ಬೆಲೆಗೆ ಗೋಧಿಯ ಬೆಲೆಯು ಕುಸಿದಾಗ, ರೈತನ ಅಪಾಯವು ತಗ್ಗುತ್ತದೆ ಮತ್ತು ಒಡಂಬಡಿಕೆಯಲ್ಲಿ ನಿರ್ದಿಷ್ಟಪಡಿಸಲ್ಪಟ್ಟ ಬೆಲೆಗಿಂತ ಘೋಧಿಯ ಬೆಲೆಯು ಹೆಚ್ಚಿದಾಗ, ರೈತನು ಅಪಾಯವನ್ನು ತನ್ನದಾಗಿಸಿಕೊಳ್ಳುತ್ತಾನೆ (ತನ್ಮೂಲಕ ತಾನು ಗಳಿಸಬಹುದಾಗಿದ್ದ ಹೆಚ್ಚುವರಿ ಆದಾಯವನ್ನು ಕಳೆದುಕೊಳ್ಳುತ್ತಾನೆ). ಮತ್ತೊಂದು ಕಡೆ, ಒಡಂಬಡಿಕೆಯಲ್ಲಿ ನಿರ್ದಿಷ್ಟಪಡಿಸಲಾದ ಬೆಲೆಗಿಂತ ಗೋಧಿಯ ಬೆಲೆಯು ಕುಸಿದಾಗ ಗಿರಣಿಗಾರನು ಅಪಾಯವನ್ನು ತನ್ನದಾಗಿಸಿಕೊಳ್ಳುತ್ತಾನೆ (ತನ್ಮೂಲಕ ತಾನು ಮಾರುಕಟ್ಟೆ ಬೆಲೆಯನುಸಾರ ವಾಸ್ತವವಾಗಿ ಕೊಡಬಹುದಾಗಿದ್ದುದಕ್ಕಿಂತ ಭವಿಷ್ಯದಲ್ಲಿ ಹೆಚ್ಚಿನ ಹಣವನ್ನು ಪಾವತಿಸುತ್ತಾನೆ) ಮತ್ತು ಒಡಂಬಡಿಕೆಯಲ್ಲಿ ನಿರ್ದಿಷ್ಟಪಡಿಸಲಾದ ಬೆಲೆಗಿಂತ ಗೋಧಿಯ ಬೆಲೆ ಏರಿದಾಗ ತನ್ನ ಅಪಾಯವನ್ನು ತಗ್ಗಿಸಿಕೊಳ್ಳುತ್ತಾನೆ. ಈ ಅರ್ಥದಲ್ಲಿ, ಒಬ್ಬ ಸಹಭಾಗಿಯು ಒಂದು ತೆರನಾದ ಅಪಾಯಕ್ಕೆ ವಿಮಾಗಾರನಾಗಿರುತ್ತಾನೆ (ಅಪಾಯ ತೆಗೆದುಕೊಳ್ಳುವವ), ಮತ್ತು ಪ್ರತಿ-ಸಹಭಾಗಿಯು ಮತ್ತೊಂದು ತೆರನಾದ ಅಪಾಯಕ್ಕೆ ವಿಮಾಗಾರನಾಗಿರುತ್ತಾನೆ (ಅಪಾಯ ತೆಗೆದುಕೊಳ್ಳುವವ). ಓರ್ವ ವ್ಯಕ್ತಿ ಅಥವಾ ಸಂಸ್ಥೆಯು ಸ್ವತ್ತೊಂದನ್ನು (ಒಂದು ವ್ಯಾಪಾರದ ಸರಕಿನಂಥದು, ಗುರುತುಚೀಟಿ ಪಾವತಿಗಳನ್ನು ಹೊಂದಿರುವ ಒಂದು ಬಾಂಡ್‌ನಂಥದು, ಲಾಭಾಂಶಗಳನ್ನು ಪಾವತಿಸುವ ಒಂದು ಷೇರು, ಮತ್ತು ಇನ್ನೂ ಅನೇಕವು) ಖರೀದಿಸಿ, ಮುಮ್ಮಾರಿಕೆಗಳ ಒಪ್ಪಂದವೊಂದನ್ನು ಬಳಸಿಕೊಳ್ಳುವ ಮೂಲಕ ಅದನ್ನು ಮಾರಾಟ ಮಾಡಿದಾಗಲೂ ನಷ್ಟವಾಗದಂತೆ ರಕ್ಷಿಸಿಕೊಳ್ಳುವಿಕೆಯು ಸಂಭವಿಸುತ್ತದೆ. ಒಂದು ನಿರ್ದಿಷ್ಟಪಡಿಸಲಾದ ಪ್ರಮಾಣದ ಸಮಯದವರೆಗೆ ವ್ಯಕ್ತಿ ಅಥವಾ ಸಂಸ್ಥೆಯು ಸ್ವತ್ತಿನೊಂದಿಗೆ ಸಾಮಿಪ್ಯವನ್ನು ಹೊಂದಿರುತ್ತಾರೆ, ಮತ್ತು ಮುಮ್ಮಾರಿಕೆಗಳ ಒಪ್ಪಂದದ ಅನುಸಾರ ಒಂದು ನಿರ್ದಿಷ್ಟಪಡಿಸಲಾದ ಬೆಲೆಯಲ್ಲಿ ಭವಿಷ್ಯದಲ್ಲಿ ಅದನ್ನು ಅವರು ಮಾರಬಹುದಾಗಿರುತ್ತದೆ. ಸ್ವತ್ತಿನ ಭವಿಷ್ಯದ ಮೌಲ್ಯಕ್ಕೆ ಸಂಬಂಧಿಸಿದಂತಿರುವ ಮಾರುಕಟ್ಟೆಯ ಪ್ರಸಕ್ತ ಬೆಲೆ ಕಟ್ಟುವಿಕೆ ಅಥವಾ ನಿರ್ಧಾರಣೆಯಿಂದ ಭವಿಷ್ಯದ ಮಾರಾಟದ ಬೆಲೆಯು ಅನಿರೀಕ್ಷಿತವಾಗಿ ಮಾರ್ಗಬದಲಿಸುವ ಅಪಾಯವನ್ನು ತಗ್ಗಿಸುವ ಸಮಯಕ್ಕೆ ಸರಿಯಾಗಿ, ವ್ಯಕ್ತಿ ಅಥವಾ ಸಂಸ್ಥೆಯು ಸ್ವತ್ತನ್ನು ಹಿಡುವಳಿಯಲ್ಲಿಟ್ಟುಕೊಳ್ಳುವ ಪ್ರಯೋಜನವನ್ನು ಹೊಂದಲು ಇದು ನಿಸ್ಸಂದೇಹವಾಗಿ ಅನುವುಮಾಡಿಕೊಡುತ್ತದೆ.

ಚಿಕಾಗೊ ಬೋರ್ಡ್‌ ಆಫ್ ಟ್ರೇಡ್‌ನಲ್ಲಿನ ಉತ್ಪನ್ನಗಳ ವ್ಯಾಪಾರಿಗಳು.

ಉತ್ಪನ್ನಗಳು ಒಂದು ಕ್ರಮಬದ್ಧವಾದ ವ್ಯಾವಹಾರಿಕ ಉದ್ದೇಶವಾಗಿ ಕಾರ್ಯನಿರ್ವಹಿಸುತ್ತವೆ. ಉದಾಹರಣೆಗೆ, ಒಂದು ನಿಶ್ಚಿತ ಬಡ್ಡಿದರದಲ್ಲಿ ಒಂದು ಬೃಹತ್‌ ಮೊತ್ತದ ಹಣವನ್ನು ಸಂಸ್ಥೆಯೊಂದು ಸಾಲವಾಗಿ ಪಡೆಯುತ್ತದೆ.[೧] ಸಾಲದ ಮೇಲಿನ ಬಡ್ಡಿಯ ದರವು ಪ್ರತಿ ಆರು ತಿಂಗಳಿಗೊಮ್ಮೆ ಪರಿಷ್ಕೃತಗೊಳ್ಳುತ್ತದೆ. ಆರು ತಿಂಗಳಲ್ಲಿ ಬಡ್ಡಿಯ ದರವು ಇನ್ನೂ ಹೆಚ್ಚಾಗಬಹುದೆಂಬುದರ ಬಗ್ಗೆ ಸಂಸ್ಥೆಯು ಕಳವಳವನ್ನು ಹೊಂದಿರುತ್ತದೆ. ಮುಂಗಡದ ದರ ಒಪ್ಪಂದವೊಂದನ್ನು (ಫಾವರ್ಡ್‌ ರೇಟ್‌ ಅಗ್ರಿಮೆಂಟ್‌-FRA) ಸಂಸ್ಥೆಯು ಖರೀದಿಸಬಹುದಾಗಿರುತ್ತದೆ. ಮುಂಗಡದ ದರ ಒಪ್ಪಂದವು, ಒಂದು ಕಾಲ್ಪನಿಕ ಮೊತ್ತದ ಹಣದ ಮೇಲಿನ ಖರೀದಿಗಳ ಆರು ತಿಂಗಳ ನಂತರ ಒಂದು ನಿಗದಿಪಡಿಸಲಾದ ಬಡ್ಡಿದರವನ್ನು ಪಾವತಿಸಲು ಮಾಡಿಕೊಳ್ಳುವ ಒಂದು ಒಡಂಬಡಿಕೆಯಾಗಿದೆ.[೨] ಒಂದು ವೇಳೆ, ಆರು ತಿಂಗಳ ನಂತರದ ಬಡ್ಡಿದರವು ಒಡಂಬಡಿಕೆಯ ದರಕ್ಕಿಂತ ಮೇಲಿದ್ದರೆ, ಮಾರಾಟಗಾರನು ಸಂಸ್ಥೆಗೆ, ಅಥವಾ FRA ಖರೀದಿದಾರನಿಗೆ ವ್ಯತ್ಯಾಸದ ಮೊತ್ತವನ್ನು ಪಾವತಿಸುತ್ತಾನೆ. ಒಂದು ವೇಳೆ ದರವು ಕಡಿಮೆಯಿದ್ದರೆ ಆಗ ಮಾರಾಟಗಾರನಿಗೆ ಸಂಸ್ಥೆಯು ವ್ಯತ್ಯಾಸದ ಮೊತ್ತವನ್ನು ಪಾವತಿಸುತ್ತದೆ. FRAನ ಖರೀದಿಯು ದರದ ಹೆಚ್ಚಳಕ್ಕೆ ಸಂಬಂಧಿಸಿದ ಅನಿಶ್ಚಿತತೆಯನ್ನು ತಗ್ಗಿಸುವಲ್ಲಿ ಮತ್ತು ಗಳಿಕೆಯನ್ನು ಸ್ಥಿರಗೊಳಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.

ಸಟ್ಟಾ ವ್ಯಾಪಾರದಲ್ಲಿನ ಹೂಡಿಕೆ ಮತ್ತು ಅಂತರಪಣನ[ಬದಲಾಯಿಸಿ]

ಅಪಾಯಕ್ಕೆ ಪ್ರತಿಯಾಗಿ ವಿಮೆ ಹೊಂದಲು ಅಥವಾ ನಷ್ಟವಾಗದಂತೆ ರಕ್ಷಿಸಿಕೊಳ್ಳುವುದಕ್ಕಿಂತ ಹೆಚ್ಚಾಗಿ, ಅಪಾಯವನ್ನು ತನ್ನದಾಗಿಸಿಕೊಳ್ಳಲು ಉತ್ಪನ್ನಗಳನ್ನು ಬಳಸಿಕೊಳ್ಳಬಹುದು.

ಈ ರೀತಿಯಾಗಿ, ಆಧಾರವಾಗಿರುವ ಸ್ವತ್ತಿನ ಮೌಲ್ಯದ ಮೇಲೆ ಸಟ್ಟಾ ವ್ಯವಹಾರ ಮಾಡಲು ಉತ್ಪನ್ನದ ಒಡಂಬಡಿಕೆಯೊಂದಕ್ಕೆ ಪ್ರವೇಶಿಸುತ್ತಾರೆ. ವಿಮೆಯನ್ನು ಅರಸುತ್ತಿರುವ ಅಥವಾ ಆ ಕುರಿತು ಪ್ರಯತ್ನಿಸುತ್ತಿರುವ ಸಹಭಾಗಿಯು ಆಧಾರವಾಗಿರುವ ಸ್ವತ್ತಿನ ಭವಿಷ್ಯದ ಮೌಲ್ಯದ ಕುರಿತು ತಪ್ಪಾಗಿ ಅಂದಾಜಿಸಿರುತ್ತಾನೆ ಎಂಬುದು ಇವರ ಬಾಜಿಕಟ್ಟುವಿಕೆಯ ಹಿಂದಿನ ಲೆಕ್ಕಾಚಾರವಾಗಿರುತ್ತದೆ. ಮುಮ್ಮಾರಿಕೆಯ ಮಾರುಕಟ್ಟೆ ಬೆಲೆಯು ಹೆಚ್ಚಿನದಾಗಿದ್ದಾಗ ಉತ್ಪನ್ನದ ಒಡಂಬಡಿಕೆಯೊಂದರ ಅನುಸಾರ ಕಡಿಮೆ ಬೆಲೆಯಲ್ಲಿ ಭವಿಷ್ಯದಲ್ಲಿ ಸ್ವತ್ತೊಂದನ್ನು ಕೊಳ್ಳಲು ಸಾಮರ್ಥ್ಯ ಹೊಂದಿರಬೇಕೆಂದು ಸಟ್ಟಾ ವ್ಯಾಪಾರಿಗಳು ಬಯಸುತ್ತಾರೆ, ಅಥವಾ ಮುಮ್ಮಾರಿಕೆಯ ಮಾರುಕಟ್ಟೆ ಬೆಲೆಯು ಕಡಿಮೆಯಾಗಿದ್ದಾಗ ಉತ್ಪನ್ನದ ಒಡಂಬಡಿಕೆಯೊಂದರ ಅನುಸಾರ ಒಂದು ಹೆಚ್ಚಿನ ಬೆಲೆಯಲ್ಲಿ ಭವಿಷ್ಯದಲ್ಲಿ ಸ್ವತ್ತೊಂದನ್ನು ಮಾರಲು ಸಾಮರ್ಥ್ಯ ಹೊಂದಿರಬೇಕೆಂದು ಅವರು ಬಯಸುತ್ತಾರೆ. 

ಸ್ವತ್ತೊಂದರ ಪ್ರಸಕ್ತ ಖರೀದಿಯ ಬೆಲೆಯು ಮುಮ್ಮಾರಿಕೆಗಳ ಒಪ್ಪಂದವೊಂದರಲ್ಲಿ ನಿರ್ದಿಷ್ಟಗೊಳಿಸಲಾಗಿರುವ ಬೆಲೆಗಿಂತ ಕೆಳಗೆ ಬಿದ್ದಾಗ, ಸ್ವತ್ತನ್ನು ಮಾರಾಟ ಮಾಡಲು ವೈಯಕ್ತಿಕ ಹೂಡಿಕೆದಾರರು ಮತ್ತು ಸಾಂಸ್ಥಿಕ ಹೂಡಿಕೆದಾರರು ಅಂತರಪಣನದ (ಆರ್ಬಿಟ್ರೇಜ್‌) ಅವಕಾಶಗಳ ಕಡೆಗೂ ಗಮನ ಹರಿಸಬಹುದು. ಉತ್ಪನ್ನಗಳಲ್ಲಿನ ಸಟ್ಟಾ ವ್ಯಾಪಾರದ ಮಾರಾಟವು 1995ರಲ್ಲಿ ಭಾರೀ ಪ್ರಮಾಣದ ಕುಖ್ಯಾತಿಯನ್ನು ಗಳಿಸಿತು. ಈ ಅವಧಿಯಲ್ಲಿ ನಿಕ್‌ ಲೀಸನ್‌ ಎಂಬ ಹೆಸರಿನ, ಬೇರಿಂಗ್ಸ್‌ ಬ್ಯಾಂಕ್‌‌ನಲ್ಲಿನ ಓರ್ವ ವ್ಯಾಪಾರಿಯು, ಮುಮ್ಮಾರಿಕೆಗಳ ಒಪ್ಪಂದಗಳಲ್ಲಿ ಕಳಪೆಯಾದ ಮತ್ತು ಅನಧಿಕೃತವಾದ ಹೂಡಿಕೆಗಳನ್ನು ಮಾಡಿದ. ಕಳಪೆ ಮಟ್ಟದ ವಿವೇಚನಾ ಶಕ್ತಿ, ಬ್ಯಾಂಕ್‌ನ ಆಡಳಿತ ಮಂಡಳಿ ಮತ್ತು ನಿಯಂತ್ರಕರುಗಳಿಂದ ಹೊರಹೊಮ್ಮಿದ ಮೇಲುಸ್ತುವಾರಿಯ ಕೊರತೆ ಹಾಗೂ ಕೋಬ್‌ ಭೂಕಂಪದಂಥ ದುರದೃಷ್ಟಕರ ಸಂಗತಿಗಳ ಒಂದು ಸಂಯೋಜನೆಯಿಂದಾಗಿ 1.3 ಶತಕೋಟಿ $ಗಳಷ್ಟು ನಷ್ಟವನ್ನು ಲೀಸನ್‌ ಅನುಭವಿಸಿದ್ದೇ ಅಲ್ಲದೇ, ಶತಮಾನಗಳಷ್ಟು ಹಳೆಯದಾದ ಸಂಸ್ಥೆಯು ದಿವಾಳಿಯಾಗಲು ಕಾರಣನಾದ.[೩]

ಉತ್ಪನ್ನಗಳ ವಿಧಗಳು[ಬದಲಾಯಿಸಿ]

OTC ಮತ್ತು ವಿನಿಮಯ ಕೇಂದ್ರದಿಂದ-ಮಾರಾಟವಾದ ಉತ್ಪನ್ನಗಳು[ಬದಲಾಯಿಸಿ]

ವಿಶಾಲಾರ್ಥದಲ್ಲಿ ಹೇಳುವುದಾದರೆ ಉತ್ಪನ್ನದ ಒಡಂಬಡಿಕೆಗಳಲ್ಲಿ ಎರಡು ವಿಶಿಷ್ಟ ಗುಂಪುಗಳಿದ್ದು, ಮಾರುಕಟ್ಟೆಯಲ್ಲಿ ಅವು ಮಾರಲ್ಪಡುವ ವಿಧಾನಗಳಿಂದ ಅವು ಪ್ರತ್ಯೇಕಿಸಲ್ಪಟ್ಟಿವೆ:

 • ನೇರ ಮಾರಾಟದ (OTC) ಉತ್ಪನ್ನಗಳು : ಇವು ಒಂದು ವಿನಿಮಯ ಕೇಂದ್ರ ಅಥವಾ ಇತರ ಮಧ್ಯವರ್ತಿಯ ಮೂಲಕ ಹೋಗದೆ, ಎರಡು ಸಹವರ್ತಿಗಳ ನಡುವೆ ನೇರವಾಗಿ ಮಾರಾಟವಾದ (ಮತ್ತು ಖಾಸಗಿಯಾಗಿ ಸಂಧಾನದ ಮೂಲಕ ತೀರ್ಮಾನಿಸಲ್ಪಟ್ಟ) ಒಡಂಬಡಿಕೆಗಳಾಗಿರುತ್ತವೆ. ವಸ್ತು ವಿನಿಮಯಗಳು, ಮುಂಗಡದ ದರ ಒಪ್ಪಂದಗಳು, ಮತ್ತು ವಿಲಕ್ಷಣ ರೀತಿಯ ಪೂರ್ವಪಾವತಿ ಹಕ್ಕುಗಳಂಥ ಉತ್ಪನ್ನಗಳು ಬಹುತೇಕ ಎಲ್ಲ ಸಮಯದಲ್ಲೂ ಇದೇ ರೀತಿಯಲ್ಲಿ ಮಾರಾಟವಾಗುತ್ತವೆ. OTC ಉತ್ಪನ್ನ ಮಾರುಕಟ್ಟೆಯು ಉತ್ಪನ್ನಗಳಿಗಾಗಿರುವ ಅತಿದೊಡ್ಡ ಮಾರುಕಟ್ಟೆಯಾಗಿದೆ, ಮತ್ತು ಸಹವರ್ತಿಗಳ ನಡುವಿನ ಮಾಹಿತಿಯ ಬಹಿರಂಗಪಡಿಸುವಿಕೆಗೆ ಸಂಬಂಧಿಸಿದಂತೆ ಹೆಚ್ಚಿನ ರೀತಿಯಲ್ಲಿ ಅನಿಯಂತ್ರಿತವಾದ ಅಥವಾ ನಿಯಮಗಳಿಗೊಳಪಡದ ವ್ಯವಸ್ಥೆಯಾಗಿದೆ. ಏಕೆಂದರೆ, ಬ್ಯಾಂಕುಗಳು ಹಾಗೂ ನಷ್ಟವಾಗದಂತೆ ರಕ್ಷಿಸಿಕೊಳ್ಳುವ ನಿಧಿಗಳಂಥ ಇತರ ಅತಿ ಸುಶಿಕ್ಷಿತ ಹಾಗೂ ಅತ್ಯಾಧುನಿಕ ಸಹವರ್ತಿಗಳಿಂದ OTC ಮಾರುಕಟ್ಟೆಯು ರೂಪುಗೊಂಡಿರುತ್ತದೆ. ಚಟುವಟಿಕೆಯು ಯಾವುದೇ ವಿನಿಮಯ ಕೇಂದ್ರಕ್ಕೆ ಗೋಚರವಾಗದ ರೀತಿಯಲ್ಲಿ ವ್ಯಾಪಾರಗಳು ಖಾಸಗಿಯಾಗಿ ನಡೆಯಲು ಸಾಧ್ಯವಿರುತ್ತದೆಯಾದ್ದರಿಂದ OTC ಮೊತ್ತಗಳ ದಾಖಲಿಸುವಿಕೆ ಅಥವಾ ವರದಿ ಮಾಡುವಿಕೆಯು ಕಷ್ಟಕರವಾಗಿರುತ್ತದೆ. ಬ್ಯಾಂಕ್‌ ಫಾರ‍್ ಇಂಟರ್‌ನ್ಯಾಷನಲ್‌ ಸೆಟ್ಲ್‌ಮೆಂಟ್ಸ್‌‌ನ ಅನುಸಾರ, ಇನ್ನೂ ಬಾಕಿಯಿರುವ ಒಟ್ಟಾರೆ ಕಾಲ್ಪನಿಕ ಮೊತ್ತವು (ಜೂನ್‌ 2008ರ ಜೂನ್‌ನಲ್ಲಿದ್ದಂತೆ) 684 ಲಕ್ಷಕೋಟಿ $ನಷ್ಟಿದೆ [೪]. ಈ ಒಟ್ಟಾರೆ ಕಾಲ್ಪನಿಕ ಮೊತ್ತದ ಪೈಕಿ, 67%ನಷ್ಟು ಬಡ್ಡಿ ದರ ಒಡಂಬಡಿಕೆಗಳು, 8%ನಷ್ಟು ಕ್ರೆಡಿಟ್‌ ಡಿಫಾಲ್ಟ್‌ ಸ್ವಾಪ್ಸ್‌ (CDS)ಗಳು, 9%ನಷ್ಟು ವಿದೇಶಿ ವಿನಿಮಯ ಒಡಂಬಡಿಕೆಗಳು, 2%ನಷ್ಟು ವ್ಯಾಪಾರದ ಸರಕು ಒಡಂಬಡಿಕೆಗಳು, 1%ನಷ್ಟು ನಿವ್ವಳ ಬೆಲೆಯ ಒಡಂಬಡಿಕೆಗಳು, ಮತ್ತು 12%ನಷ್ಟು ಇತರ ವರ್ಗದ್ದಾಗಿವೆ. OTC ಉತ್ಪನ್ನಗಳು ಒಂದು ವಿನಿಮಯ ಕೇಂದ್ರದಿಂದ ಮಾರಾಟವಾಗುವುದಿಲ್ಲವಾದ್ದರಿಂದ, ಅದರಲ್ಲಿ ಕೇಂದ್ರೀಯ ಪ್ರತಿ-ಸಹಭಾಗಿಯಿರುವುದಿಲ್ಲ. ಆದ್ದರಿಂದ, ಒಂದು ಸಾಮಾನ್ಯ ಒಡಂಬಡಿಕೆಯಂತೆ ಅವು ಪ್ರತಿ-ಸಹಭಾಗಿ ಅಪಾಯಕ್ಕೆ ಸಿಲುಕುವ ಸಾಧ್ಯತೆಗಳಿರುತ್ತವೆ. ಏಕೆಂದರೆ ಪ್ರತಿಯೊಬ್ಬ ಪ್ರತಿ-ಸಹಭಾಗಿಯು ಪರಸ್ಪರರ ಕಾರ್ಯಕ್ಷಮತೆ ಅಥವಾ ಸಾಮರ್ಥ್ಯವನ್ನು ಅವಲಂಬಿಸಿರುತ್ತಾರೆ.
 • ವಿನಿಮಯ ಕೇಂದ್ರದಿಂದ-ಮಾರಾಟವಾದ ಉತ್ಪನ್ನಗಳು (ETD): ಇವು ವಿಶಿಷ್ಟವಾಗಿರುವ ಉತ್ಪನ್ನಗಳ ವಿನಿಮಯ ಕೇಂದ್ರಗಳು ಅಥವಾ ಇತರ ವಿನಿಮಯ ಕೇಂದ್ರಗಳ ಮೂಲಕ ಮಾರಾಟವಾಗುವ ಉತ್ಪನ್ನಗಳ ಉತ್ಪನ್ನಗಳಾಗಿರುತ್ತವೆ. ಉತ್ಪನ್ನಗಳ ವಿನಿಮಯ ಕೇಂದ್ರವೊಂದು ಸಂಬಂಧಪಟ್ಟ ಎಲ್ಲಾ ವ್ಯವಹಾರಗಳಿಗೂ ಒಂದು ಮಧ್ಯವರ್ತಿಯಂತೆ ಕಾರ್ಯನಿರ್ವಹಿಸುತ್ತದೆ, ಹಾಗೂ ಒಂದು ಖಾತರಿಯಾಗಿ ವರ್ತಿಸುವ ದೃಷ್ಟಿಯಿಂದ ವ್ಯಾಪಾರದ ಎರಡೂ ಮಗ್ಗಲು ಅಥವಾ ಪಕ್ಷಗಳಿಂದ ಆರಂಭಿಕ ಠೇವಣಿ ಹಣವನ್ನು ಪಡೆಯುತ್ತದೆ. ವಿಶ್ವದ ಅತಿದೊಡ್ಡ[೫] ಉತ್ಪನ್ನಗಳ ವಿನಿಮಯ ಕೇಂದ್ರಗಳೆಂದರೆ (ವ್ಯವಹಾರ ಚಟುವಟಿಕೆಗಳ ಸಂಖ್ಯೆಯನ್ನು ಆಧರಿಸಿದ್ದು), ಕೊರಿಯಾ ವಿನಿಮಯ ಕೇಂದ್ರ (KOSPI ಸೂಚಿ ಮುಮ್ಮಾರಿಕೆಗಳು & ಪೂರ್ವಪಾವತಿ ಹಕ್ಕುಗಳನ್ನು ಇದು ದಾಖಲಿಸುತ್ತದೆ), ಯುರೆಕ್ಸ್‌ (ಬಡ್ಡಿ ದರ & ಸೂಚಿ ಉತ್ಪನ್ನಗಳಂಥ ಐರೋಪ್ಯ ಉತ್ಪನ್ನಗಳ ಒಂದು ವ್ಯಾಪಕ ಶ್ರೇಣಿಯನ್ನು ಇದು ದಾಖಲಿಸುತ್ತದೆ), ಮತ್ತು CME ಸಮೂಹ (2007ರಲ್ಲಿ ಸಂಭವಿಸಿದ ಚಿಕಾಗೊ ಮರ್ಕೆಂಟೈಲ್‌ ಎಕ್ಸ್‌ಚೇಂಜ್‌ ಮತ್ತು ಚಿಕಾಗೊ ಬೋರ್ಡ್‌ ಆಫ್ ಟ್ರೇಡ್‌‌ಗಳ ವಿಲೀನ ಹಾಗೂ 2008ರಲ್ಲಿ ನಡೆದ ನ್ಯೂಯಾರ್ಕ್‌ ಮರ್ಕೆಂಟೈಲ್‌ ಎಕ್ಸ್‌ಚೇಂಜ್‌‌ನ ಸ್ವಾಧೀನ ಪ್ರಕ್ರಿಯೆಯಿಂದ ಇದು ರೂಪುಗೊಂಡಿತು). BISನ ಪ್ರಕಾರ, ವಿಶ್ವದ ಉತ್ಪನ್ನಗಳ ವಿನಿಮಯ ಕೇಂದ್ರಗಳಲ್ಲಿನ ಸಂಯೋಜಿತ ವಹಿವಾಟು, 2005ರ Q4 ಅವಧಿಯಲ್ಲಿ 344 ಲಕ್ಷಕೋಟಿ USDನಷ್ಟು ಪ್ರಮಾಣಕ್ಕೆ ಮುಟ್ಟಿತ್ತು. ಕೆಲವೊಂದು ಬಗೆಯ ಉತ್ಪನ್ನ ಸಾಧನಗಳು ಸಾಂಪ್ರದಾಯಿಕ ವಿನಿಮಯ ಕೇಂದ್ರಗಳ ಮೂಲಕವೂ ಮಾರಾಟವಾಗಬಹುದು. ಇದಕ್ಕೊಂದು ನಿದರ್ಶನವನ್ನು ಕೊಡುವುದಾದರೆ, ಪರಿರ್ತನೀಯ ಬಾಂಡ್‌ಗಳು ಮತ್ತು/ಅಥವಾ ಪರಿರ್ತನೀಯತೆಯ ಮನ್ನಣೆ ಪಡೆದ ಬಾಂಡ್‌ಗಳಂಥ ಸಂಕರ ಸಾಧನಗಳು, ಸ್ಟಾಕ್‌ ಅಥವಾ ಬಾಂಡ್‌ ವಿನಿಮಯ ಕೇಂದ್ರಗಳಲ್ಲಿ ದಾಖಲಿತವಾಗಬಹುದು. ಅಷ್ಟೇ ಅಲ್ಲ, ವಾರಂಟ್‌ಗಳೆಂದು ಹೇಳಲಾಗುವ ಲಿಖಿತ ಅಧಿಕಾರ ಪತ್ರಗಳು (ಅಥವಾ "ಹಕ್ಕುಬಾಧ್ಯತೆಗಳು") ಕೂಡ ನಿವ್ವಳ ಬೆಲೆಯ ವಿನಿಮಯ ಕೇಂದ್ರಗಳಲ್ಲಿ ದಾಖಲಿತವಾಗಬಹುದು. ನಿರ್ವಹಣೆಯ ಹಕ್ಕುಬಾಧ್ಯತೆಗಳು, ನಗದು xPRTಗಳು ಮತ್ತು ಒಂದು ಸರಳವಾದ ಸಾರಾಸಗಟು ಸ್ವರೂಪದಲ್ಲಿ ಸಂಯೋಜಿಸಲ್ಪಟ್ಟಿರುವ ಪೂರ್ವಪಾವತಿ ಹಕ್ಕುಗಳ ಒಂದು ಸಂಕೀರ್ಣ ಸಂಚಯವನ್ನು ಅವಶ್ಯವಾಗಿ ಒಳಗೊಂಡಿರುವ ಇತರ ಹಲವಾರು ಸಾಧನಗಳು, ನಿವ್ವಳ ಬೆಲೆಯ ವಿನಿಮಯ ಕೇಂದ್ರಗಳಲ್ಲಿ ವಾಡಿಕೆಯಂತೆ ದಾಖಲಿಸಲ್ಪಟ್ಟಿರುತ್ತವೆ. ಇತರ ಉತ್ಪನ್ನಗಳಂತೆ, ಸಾರ್ವಜನಿಕವಾಗಿ ಮಾರಾಟವಾದ ಈ ಉತ್ಪನ್ನಗಳು ಅಪಾಯ/ಪ್ರತಿಫಲದೆಡೆಗೆ ಮತ್ತು ಚಂಚಲತೆಯ ಗುಣಲಕ್ಷಣಗಳೆಡೆಗೆ ಹೂಡಿಕೆದಾರರಿಗೆ ದಾರಿಮಾಡಿಕೊಡುತ್ತವೆ. ಇವು ಆಧಾರವಾಗಿರುವ ಒಂದು ವ್ಯಾಪಾರದ ಸರಕಿನೊಂದಿಗೆ ಸಂಬಂಧ ಹೊಂದಿರುವುದರ ಜೊತೆಗೇ ಭಿನ್ನವಾಗಿ ಕಂಡುಬರುತ್ತವೆ.

ಸಾಮಾನ್ಯ ಉತ್ಪನ್ನ ಒಡಂಬಡಿಕೆಯ ವಿಧಗಳು[ಬದಲಾಯಿಸಿ]

ಉತ್ಪನ್ನಗಳ ಪೈಕಿ ಮೂರು ಪ್ರಮುಖ ವರ್ಗಗಳು ಅಸ್ತಿತ್ವದಲ್ಲಿವೆ:

 1. ಮುಮ್ಮಾರಿಕೆಗಳು/ಮುಂಗಡ ಒಪ್ಪಂದಗಳು: ಇಂದು ನಿರ್ದಿಷ್ಟಗೊಳಿಸಲಾದ ಒಂದು ಬೆಲೆಯಲ್ಲಿ ಮುಮ್ಮಾರಿಕೆಯ ದಿನಾಂಕದಂದು ಅಥವಾ ಅದಕ್ಕೆ ಮುಂಚಿತವಾಗಿ ಒಂದು ಸ್ವತ್ತನ್ನು ಕೊಳ್ಳಲು ಅಥವಾ ಮಾರಲು ಇರುವ ಒಡಂಬಡಿಕೆಗಳು ಈ ಹೆಸರಿನಿಂದ ಕರೆಯಲ್ಪಡುತ್ತವೆ. ಮುಮ್ಮಾರಿಕೆಗಳ ಒಪ್ಪಂದವೊಂದು ಒಂದು ಮುಂಗಡದ ಒಡಂಬಡಿಕೆಗಿಂತ ಭಿನ್ನವಾಗಿರುತ್ತದೆ. ಒಡಂಬಡಿಕೆಯನ್ನು ಕೊಳ್ಳಲು ಮತ್ತು ಮಾರಲು ಅವಕಾಶವಿರುವ ವಿನಿಮಯ ಕೇಂದ್ರವೊಂದರ ನಿರ್ವಹಣೆ ಮಾಡುವ ತೀರುವೆ ಮನೆಯೊಂದರಿಂದ ಬರೆಯಲ್ಪಡುವ ಒಂದು ಪ್ರಮಾಣಾನುಸಾರಿಯಾಗಿಸಿದ ಒಡಂಬಡಿಕೆಯು ಮುಮ್ಮಾರಿಕೆಗಳ ಒಪ್ಪಂದ ಎನಿಸಿಕೊಳ್ಳುತ್ತದೆ. ಆದರೆ, ಮುಂಗಡದ ಒಡಂಬಡಿಕೆಯು ಪ್ರಮಾಣಾನುಸಾರಿಯಾಗಿಸಿದ್ದಲ್ಲದ ಒಂದು ಒಡಂಬಡಿಕೆಯಾಗಿದ್ದು, ಸ್ವತಃ ಸಹವರ್ತಿಗಳಿಂದ ಬರೆಯಲ್ಪಟ್ಟಿರುತ್ತದೆ.
 2. ಪೂರ್ವಪಾವತಿ ಹಕ್ಕುಗಳು: ಒಂದು ಸ್ವತ್ತನ್ನು ಕೊಳ್ಳಲು (ಒಂದು ಸವಾಲು ಸರದಿಯ ಪೂರ್ವಪಾವತಿ ಹಕ್ಕಿನ ಸಂದರ್ಭದಲ್ಲಿ) ಅಥವಾ ಮಾರಲು (ಒಂದು ಕ್ರಯ ಕರಾರಿನ ಪೂರ್ವಪಾವತಿ ಹಕ್ಕಿನ ಸಂದರ್ಭದಲ್ಲಿ) ಮಾಲೀಕನಿಗೆ ಹಕ್ಕನ್ನು ನೀಡುವ, ಆದರೆ ಅನಿವಾರ್ಯತೆಯನ್ನು ಅಥವಾ ನಿರ್ಬಂಧವನ್ನು ವಿಧಿಸದ ಒಡಂಬಡಿಕೆಗಳು ಈ ಗುಂಪಿಗೆ ಸೇರುತ್ತವೆ. ಯಾವ ಬೆಲೆಯಲ್ಲಿ ಮಾರಾಟವು ನಡೆಯುತ್ತದೆಯೋ ಅದು ಒಡಂಬಡಿಕೆಯ ಬೆಲೆ ಎನಿಸಿಕೊಳ್ಳುತ್ತದೆ, ಮತ್ತು ಸಹವರ್ತಿಗಳು ಪೂರ್ವಪಾವತಿ ಹಕ್ಕಿಗೆ ಪ್ರವೇಶಿಸುವ ಸಮಯದಲ್ಲಿ ಇದು ನಿರ್ದಿಷ್ಟಪಡಿಸಲ್ಪಡುತ್ತದೆ. ಪೂರ್ವಪಾವತಿ ಹಕ್ಕು ಒಡಂಬಡಿಕೆಯು ವಾಯಿದೆ ತುಂಬಿರುವ ದಿನಾಂಕವೊಂದನ್ನೂ ಸಹ ನಿರ್ದಿಷ್ಟಪಡಿಸುತ್ತದೆ. ಐರೋಪ್ಯ ಪೂರ್ವಪಾವತಿ ಹಕ್ಕಿನ ಒಂದು ಸಂದರ್ಭದಲ್ಲಿ, ವಾಯಿದೆ ತುಂಬಿರುವ ದಿನಾಂಕದಂದು (ಆದರೆ ಅದಕ್ಕಿಂತ ಮುಂಚೆ ಅಲ್ಲ) ಮಾರಾಟವು ನಡೆಯಬೇಕೆಂದು ಬಯಸುವ ಹಕ್ಕನ್ನು ಮಾಲೀಕನು ಹೊಂದಿರುತ್ತಾನೆ; ಅಮೆರಿಕಾದ ಪೂರ್ವಪಾವತಿ ಹಕ್ಕಿನ ಒಂದು ಸಂದರ್ಭದಲ್ಲಿ ವಾಯಿದೆ ತುಂಬಿರುವ ದಿನಾಂಕದವರೆಗಿನ ಯಾವುದೇ ಸಮಯದಲ್ಲಿ ಮಾರಾಟವು ನಡೆಯಬೇಕೆಂದು ಮಾಲೀಕನು ಬಯಸಬಹುದಾಗಿದೆ. ಒಂದು ವೇಳೆ ಒಡಂಬಡಿಕೆಯ ಮಾಲೀಕನು ಈ ಹಕ್ಕನ್ನು ಚಲಾಯಿಸಿದರೆ, ಸದರಿ ವ್ಯವಹಾರವನ್ನು ನಡೆಸುವ ಅನಿವಾರ್ಯತೆ ಅಥವಾ ಹೊಣೆಗಾರಿಕೆಯು ಪ್ರತಿ-ಸಹಭಾಗಿಯ ಮೇಲೆ ಬೀಳುತ್ತದೆ.
 3. ವಸ್ತು ವಿನಿಮಯಗಳು: ಹಣ ಚಲಾವಣೆಗಳು/ವಿನಿಮಯ ದರಗಳು, ಬಾಂಡ್‌ಗಳು/ಬಡ್ಡಿ ದರಗಳು, ವ್ಯಾಪಾರ ಸರಕುಗಳು, ಷೇರುಗಳು ಅಥವಾ ಇತರ ಸ್ವತ್ತುಗಳ ಆಧಾರವಾಗಿರುವ ಮೌಲ್ಯವನ್ನು ಆಧರಿಸಿದ ಒಂದು ನಿರ್ದಿಷ್ಟಪಡಿಸಿದ ಮುಮ್ಮಾರಿಕೆ ದಿನಾಂಕದಂದು ಅಥವಾ ಅದಕ್ಕೆ ಮುಂಚಿತವಾಗಿ ನಗದು (ಹರಿವುಗಳನ್ನು) ವಿನಿಮಯ ಮಾಡಿಕೊಳ್ಳಲು ಇರುವ ಒಡಂಬಡಿಕೆಗಳು ಈ ಗುಂಪಿಗೆ ಸೇರುತ್ತವೆ.

ಈ ಮೂಲಭೂತ ವಿಧಗಳ ಅಂಶಗಳನ್ನು ಸಂಯೋಜಿಸುವ ಮೂಲಕ ಹೆಚ್ಚು ಸಂಕೀರ್ಣವಾದ ಉತ್ಪನ್ನಗಳನ್ನು ಸೃಷ್ಟಿಸಬಹುದು. ಉದಾಹರಣೆಗೆ, ವಿನಿಮಯ ವಸ್ತುವೊಂದನ್ನು ಹೊಂದಿರುವಾತನು, ಒಂದು ನಿರ್ದಿಷ್ಟಪಡಿಸಿದ ಮುಮ್ಮಾರಿಕೆ ದಿನಾಂಕದಂದು ಅಥವಾ ಅದಕ್ಕಿಂತ ಮುಂಚೆ ವಸ್ತು ವಿನಿಮಯವೊಂದಕ್ಕೆ ಪ್ರವೇಶಿಸುವ ಹಕ್ಕನ್ನು ಹೊಂದಿರುತ್ತಾನೆಯೇ ಹೊರತು ಹೊಣೆಗಾರಿಕೆಯನ್ನಾಗಲೀ ಅಥವಾ ಅನಿವಾರ್ಯತೆಯನ್ನಾಗಲೀ ಅಲ್ಲ.

ಉದಾಹರಣೆಗಳು[ಬದಲಾಯಿಸಿ]

ಉತ್ಪನ್ನಗಳ ಸಂಪೂರ್ಣ ಮಾರುಕಟ್ಟೆಯು ಆಧಾರವಾಗಿರುವ ಸ್ವತ್ತಿನ ಐದು ಪ್ರಮುಖ ವರ್ಗಗಳನ್ನು ಹೊಂದಿದೆ:

ಈ ಉತ್ಪನ್ನಗಳ ಒಂದಷ್ಟು ಸಾಮಾನ್ಯ ಉದಾಹರಣೆಗಳು ಹೀಗಿವೆ:

ಆಧಾರವಾಗಿರುವುದು ಒಡಂಬಡಿಕೆಯ ಬಗೆಗಳು
ವಿನಿಮಯ ಕೇಂದ್ರದಿಂದ-ಮಾರಾಟವಾದ ಮುಮ್ಮಾರಿಕೆಗಳು ವಿನಿಮಯ ಕೇಂದ್ರದಿಂದ-ಮಾರಾಟವಾದ ಪೂರ್ವಪಾವತಿ ಹಕ್ಕುಗಳು OTC ವಸ್ತು ವಿನಿಮಯ OTC ಮುಂಗಡ ಒಪ್ಪಂದ OTC ಪೂರ್ವಪಾವತಿ ಹಕ್ಕು
ಸಾಮಾನ್ಯ ಷೇರು DJIA ಸೂಚಿ ಮುಮ್ಮಾರಿಕೆ
ಏಕ-ಸ್ಟಾಕ್‌ನ ಮುಮ್ಮಾರಿಕೆ
DJIA ಸೂಚಿ ಮುಮ್ಮಾರಿಕೆಯ ಮೇಲಿನ ಪೂರ್ವಪಾವತಿ ಹಕ್ಕು
ಏಕ-ಷೇರಿನ ಪೂರ್ವಪಾವತಿ ಹಕ್ಕು
ಸಾಮಾನ್ಯ ಷೇರಿನ ವಸ್ತು ವಿನಿಮಯ ಅನುಕ್ರಮವಾಗಿ
ಮರುಖರೀದಿ ಒಪ್ಪಂದ
ಸ್ಟಾಕ್‌ ಪೂರ್ವಪಾವತಿ ಹಕ್ಕು
ಲಿಖಿತ ಅಧಿಕಾರ ಪತ್ರ (ವಾರಂಟ್‌)
ಪರಿಭ್ರಮಣದ ಲಿಖಿತ ಅಧಿಕಾರ ಪತ್ರ
ಬಡ್ಡಿ ದರ ಯೂರೊಡಾಲರ‍್ ಮುಮ್ಮಾರಿಕೆ
ಯೂರಿಬಾರ‍್ ಮುಮ್ಮಾರಿಕೆ
ಯೂರೋಡಾಲರ್‌ ಮುಮ್ಮಾರಿಕೆಯ ಮೇಲಿನ ಪೂರ್ವಪಾವತಿ ಹಕ್ಕು
ಯೂರಿಬಾರ್‌ ಮುಮ್ಮಾರಿಕೆಯ ಮೇಲಿನ ಪೂರ್ವಪಾವತಿ ಹಕ್ಕು
ಬಡ್ಡಿ ದರದ ವಸ್ತು ವಿನಿಮಯ ಮುಂಗಡ ಒಪ್ಪಂದದ ದರ ಒಪ್ಪಂದ ಬಡ್ಡಿಯ ಗರಿಷ್ಟ ಮಿತಿ ಮತ್ತು ಕನಿಷ್ಟ ಮಿತಿ
ವಿನಿಮಯ ವಸ್ತು
ಮೂಲಭೂತ ವಸ್ತು ವಿನಿಮಯ
ಬಾಂಡ್‌ ಪೂರ್ವಪಾವತಿ ಹಕ್ಕು
ಸಾಲ ಬಾಂಡ್‌ ಮುಮ್ಮಾರಿಕೆ ಬಾಂಡ್‌ ಮುಮ್ಮಾರಿಕೆಯ ಮೇಲಿನ ಪೂರ್ವಪಾವತಿ ಹಕ್ಕು ಸಾಲ ಮರುಪಾವತಿಸದಿರುವ ವಸ್ತು ವಿನಿಮಯ
ಒಟ್ಟು ಪ್ರತಿಫಲದ ವಸ್ತು ವಿನಿಮಯ
ಮರುಖರೀದಿ ಒಪ್ಪಂದ ಸಾಲ ಮರುಪಾವತಿಸದಿರುವ ಪೂರ್ವಪಾವತಿ ಹಕ್ಕು
ವಿದೇಶಿ ವಿನಿಮಯ ಚಲಾವಣಾ ಹಣದ ಮುಮ್ಮಾರಿಕೆ ಚಲಾವಣಾ ಹಣದ ಮುಮ್ಮಾರಿಕೆಯ ಮೇಲಿನ ಪೂರ್ವಪಾವತಿ ಹಕ್ಕು ಚಲಾವಣ ಹಣದ ವಸ್ತು ವಿನಿಮಯ ಚಲಾವಣಾ ಹಣದ ಮುಂಗಡ ಒಪ್ಪಂದ ಚಲಾವಣಾ ಹಣದ ಪೂರ್ವಪಾವತಿ ಹಕ್ಕು
ವ್ಯಾಪಾರದ ಸರಕು WTI ಕಚ್ಚಾ ತೈಲದ ಮುಮ್ಮಾರಿಕೆಗಳು ಹವಾಮಾನದ ಉತ್ಪನ್ನಗಳು ವ್ಯಾಪಾರದ ಸರಕು ವಸ್ತು ವಿನಿಮಯ ಕಬ್ಬಿಣದ ಅದಿರಿನ ಮುಂಗಡ ಒಡಂಬಡಿಕೆ ಬಂಗಾರದ ಪೂರ್ವಪಾವತಿ ಹಕ್ಕು

ಆಧಾರವಾಗಿರುವ ವಿನಿಮಯವಾಗಬಹುದಾದ ವಸ್ತುಗಳ ಇತರ ಉದಾಹರಣೆಗಳು ಹೀಗಿವೆ:

ನಗದು ಹರಿವು[ಬದಲಾಯಿಸಿ]

ಸಹವರ್ತಿಗಳ ನಡುವಿನ ಪಾವತಿಗಳು ಈ ಕೆಳಗಿನ ಅಂಶಗಳಿಂದ ನಿರ್ಧರಿಸಲ್ಪಡಬಹುದು:

 • ಮುಮ್ಮಾರಿಕೆಯಲ್ಲಿನ ಬೇರೊಂದು ಸ್ವತಂತ್ರವಾಗಿ ಮಾರಾಟವಾದ ಸ್ವತ್ತಿನ ಬೆಲೆ (ಉದಾಹರಣೆಗೆ, ಒಂದು ಸಾಮಾನ್ಯ ಸ್ಟಾಕ್‌);
 • ಸ್ವತಂತ್ರವಾಗಿ ನಿರ್ಧರಿಸಲ್ಪಟ್ಟ ಸೂಚಿಯೊಂದರ ಮಟ್ಟ (ಉದಾಹರಣೆಗೆ, ಸ್ಟಾಕ್‌ ಮಾರುಕಟ್ಟೆಯ ಒಂದು ಸೂಚಿ ಅಥವಾ heating-degree-days ಎಂದು ಕರೆಯಲಾಗುವ ಸೂಚಿ);
 • ಉತ್ತಮವಾಗಿ-ನಿರ್ದಿಷ್ಟಪಡಿಸಲಾದ ಕೆಲವೊಂದು ಸಂಗತಿಯ ಸಂಭವಿಸುವಿಕೆ (ಉದಾಹರಣೆಗೆ, ಕಂಪನಿಯೊಂದರ ಕರ್ತವ್ಯಲೋಪ ಮಾಡುವಿಕೆ);
 • ಒಂದು ಬಡ್ಡಿ ದರ;
 • ಒಂದು ವಿನಿಮಯ ದರ;
 • ಅಥವಾ ಬೇರೊಂದು ಅಂಶ.

ಒಂದು ಪೂರ್ವ-ನಿರ್ಧಾರಿತ ಬೆಲೆಗೆ ಮುಮ್ಮಾರಿಕೆಯಲ್ಲಿನ ಒಂದು ಹಂತದಲ್ಲಿ ಆಧಾರವಾಗಿರುವ ಭದ್ರತೆ ಅಥವಾ ವ್ಯಾಪಾರದ ಸರಕನ್ನು ಕೊಳ್ಳುಲು ಅಥವಾ ಮಾರಲು ಕೆಲವೊಂದು ಉತ್ಪನ್ನಗಳು ಸೂಕ್ತವಾಗಿರುತ್ತವೆ. ಒಂದು ವೇಳೆ, ಆಧಾರವಾಗಿರುವ ಭದ್ರತೆ ಅಥವಾ ವ್ಯಾಪಾರದ ಸರಕಿನ ಬೆಲೆಯು ಸರಿಯಾದ ದಿಕ್ಕಿನೊಳಗೆ ಚಲಿಸಿದರೆ, ಉತ್ಪನ್ನದ ಮಾಲೀಕನು ಹಣಮಾಡುತ್ತಾನೆ; ಇಲ್ಲವಾದಲ್ಲಿ, ಆತ ಹಣ ಕಳೆದುಕೊಳ್ಳುತ್ತಾನೆ ಅಥವಾ ಉತ್ಪನ್ನವು ನಿಷ್ಪ್ರಯೋಜಕವಾಗುತ್ತದೆ. ಒಡಂಬಡಿಕೆಯ ನಿಬಂಧನೆಗಳ ಆಧಾರದ ಮೇಲೆ, ಉತ್ಪನ್ನವೊಂದರ ಸಂಭವನೀಯ ಗಳಿಕೆ ಅಥವಾ ನಷ್ಟವು, ಒಂದು ವೇಳೆ ಆಧಾರವಾಗಿರುವ ಭದ್ರತೆ ಅಥವಾ ವ್ಯಾಪಾರದ ಸರಕನ್ನು ಆತ ನೇರವಾಗಿ ಮಾರಿದ್ದರೆ ಸಿಗುತ್ತಿದ್ದುದಕ್ಕಿಂತ ಸಾಕಷ್ಟು ಹೆಚ್ಚಿರುತ್ತದೆ.

ಮೌಲ್ಯನಿರ್ಣಯ[ಬದಲಾಯಿಸಿ]

Total world derivatives from 1998-2007[೬] compared to total world wealth in the year 2000[೭]

ಮಾರುಕಟ್ಟೆ ಮತ್ತು ಅಂತರಪಣನ-ಮುಕ್ತ ಬೆಲೆಗಳು[ಬದಲಾಯಿಸಿ]

ಮೌಲ್ಯದ ಎರಡು ಸಾಮಾನ್ಯ ಅಳತೆಗೋಲುಗಳೆಂದರೆ:

 • ಮಾರುಕಟ್ಟೆ ಬೆಲೆ: ಇದು ಒಡಂಬಡಿಕೆಯನ್ನು ಕೊಳ್ಳಲು ಅಥವಾ ಮಾರಲು ವ್ಯಾಪಾರಿಗಳು ಒಪ್ಪುವ ಬೆಲೆ
 • ಅಂತರಪಣನ-ಮುಕ್ತ ಬೆಲೆ: ಈ ಒಡಂಬಡಿಕೆಗಳಲ್ಲಿ ಮಾರಾಟ ಮಾಡುವುದರಿಂದ ಅಪಾಯ-ಮುಕ್ತ ಲಾಭಗಳನ್ನು ಮಾಡಲಾಗುವುದಿಲ್ಲ ಎಂಬುದು ಇದರರ್ಥ; ಇದನ್ನು ನೋಡಿ: ತರ್ಕಬದ್ಧ ಬೆಲೆನಿಗದಿ

ಮಾರುಕಟ್ಟೆ ಬೆಲೆಯನ್ನು ನಿರ್ಧರಿಸುವುದು[ಬದಲಾಯಿಸಿ]

ವಿನಿಮಯ ಕೇಂದ್ರದಿಂದ-ಮಾರಾಟವಾದ ಉತ್ಪನ್ನಗಳಿಗೆ ಸಂಬಂಧಿಸಿದಂತೆ, ಮಾರುಕಟ್ಟೆ ಬೆಲೆಯು ಸಾಮಾನ್ಯವಾಗಿ ಪಾರದರ್ಶಕವಾಗಿರುತ್ತದೆ (ಯಾವುದೇ ಒಂದು ಸಮಯದಲ್ಲಿ ಆ ನಿರ್ದಿಷ್ಟ ಒಡಂಬಡಿಕೆಯ ಮೇಲೆ ಹೂಡಲಾದ ಎಲ್ಲಾ ಪ್ರಸಕ್ತ ಸವಾಲು ಕರೆಗಳು ಹಾಗೂ ಆಹ್ವಾನಗಳನ್ನು ಆಧರಿಸಿ ವಿನಿಮಯ ಕೇಂದ್ರದಿಂದ ನಿಜಾವಧಿಯಲ್ಲಿ ಅನೇಕ ವೇಳೆ ಇದು ಪ್ರಕಟಿಸಲ್ಪಡುತ್ತದೆ). ವ್ಯಾಪಾರ-ವಹಿವಾಟು ಕೈಯಿಂದ ನಿರ್ವಹಿಸಲ್ಪಡುತ್ತದೆಯಾದ್ದರಿಂದ ಬೆಲೆಗಳನ್ನು ಯಂತ್ರಸದೃಶವಾಗಿ ಅಥವಾ ಸ್ವಯಂಚಾಲಿತವಾಗಿ ಪ್ರಸಾರ ಮಾಡುವುದು ಕಷ್ಟಕರವಾಗಿ ಪರಿಣಮಿಸುತ್ತದೆ. ಆದ್ದರಿಂದ OTC ಅಥವಾ ಕನಿಷ್ಟದರದಲ್ಲಿ-ವ್ಯಾಪಾರವಾದ ಒಡಂಬಡಿಕೆಗಳೊಂದಿಗೆ ಜಟಿಲತೆಗಳು ಹುಟ್ಟುವ ಸಾಧ್ಯತೆಗಳಿರುತ್ತವೆ. ನಿರ್ದಿಷ್ಟವಾಗಿ OTC ಒಡಂಬಡಿಕೆಗಳಿಗೆ ಸಂಬಂಧಿಸಿ ಹೇಳುವುದಾದರೆ, ಬೆಲೆಗಳನ್ನು ತಾಳೆನೋಡಲು ಮತ್ತು ಪ್ರಸಾರ ಮಾಡಲು ಯಾವುದೇ ಕೇಂದ್ರೀಯ ವಿನಿಮಯ ಕೇಂದ್ರಗಳಿಲ್ಲ.

ಅಂತರಪಣನ-ಮುಕ್ತ ಬೆಲೆಯನ್ನು ನಿರ್ಧರಿಸುವುದು[ಬದಲಾಯಿಸಿ]

ಉತ್ಪನ್ನಗಳ ಒಡಂಬಡಿಕೆಯೊಂದರ ಅಂತರಪಣನ-ಮುಕ್ತ ಬೆಲೆಯು ಸಂಕೀರ್ಣವಾಗಿದೆ, ಮತ್ತು ಪರಿಗಣಿಸುವುದಕ್ಕೆ ಸಂಬಂಧಿಸಿದಂತೆ ಅನೇಕ ವೈವಿಧ್ಯಮಯ ಚರ ಪರಿಮಾಣಗಳು ಅಸ್ತಿತ್ವದಲ್ಲಿವೆ. ಅಂತರಪಣನ-ಮುಕ್ತ ಬೆಲೆನಿಗದಿಯು ವಿತ್ತೀಯ ಗಣಿತಶಾಸ್ತ್ರದ ಒಂದು ಪ್ರಮುಖ ವಿಷಯವಾಗಿದೆ. ಆಧಾರವಾಗಿರುವ ಸ್ವತ್ತಿನ ಬೆಲೆಯ ಸಂಭವನೀಯ ಪ್ರಕ್ರಿಯೆಯು ಅನೇಕ ವೇಳೆ ನಿರ್ಣಾಯಕವಾಗಿರುತ್ತದೆ. ಬ್ಲ್ಯಾಕ್‌-ಸ್ಕೋಲ್ಸ್‌ ಸೂತ್ರವು ಸೈದ್ಧಾಂತಿಕವಾದ ಪೂರ್ವಪಾವತಿ ಹಕ್ಕುಗಳ ಮೌಲ್ಯನಿರ್ಣಯಕ್ಕೆ ಮೀಸಲಾದ ಒಂದು ಪ್ರಮುಖ ಸಮೀಕರಣವಾಗಿದ್ದು, ಐರೋಪ್ಯ ಸ್ಟಾಕ್‌ ಪೂರ್ವಪಾವತಿ ಹಕ್ಕು ಒಂದರಿಂದ ಬಂದ ನಗದು ಹರಿವುಗಳನ್ನು ಕೇವಲ ಸ್ಟಾಕ್‌ನ್ನು ಬಳಸಿಕೊಂಡು ಮಾಡುವ ನಿರಂತರ ಕೊಳ್ಳುವ ಹಾಗೂ ಮಾರುವ ಕಾರ್ಯತಂತ್ರದ ಮೂಲಕ ಪುನರಾವರ್ತಿಸಬಹುದು ಎಂಬ ಎಣಿಕೆಯುನ್ನು ಈ ಸಮೀಕರಣವು ಆಧರಿಸಿದೆ. ದ್ವಿನಾಮದ ಪೂರ್ವಪಾವತಿ ಹಕ್ಕುಗಳ ಮಾದರಿಯು ಈ ಮೌಲ್ಯನಿರ್ಣಯ ಕೌಶಲದ ಒಂದು ಸರಳೀಕೃತ ರೂಪವಾಗಿದೆ.

ಟೀಕೆಗಳು[ಬದಲಾಯಿಸಿ]

ಉತ್ಪನ್ನಗಳು ಅನೇಕ ಬಾರಿ ಈ ಕೆಳಕಂಡ ಟೀಕೆಗಳಿಗೆ ಒಳಗಾಗಿವೆ:

ಬೃಹತ್ ನಷ್ಟಗಳ ಸಂಭವನೀಯತೆ[ಬದಲಾಯಿಸಿ]

ಸನ್ನೆ-ಸಾಮರ್ಥ್ಯದ ಬಳಕೆ, ಅಥವಾ ಸಾಲಮಾಡುವಿಕೆಯ ಕಾರಣದಿಂದಾಗಿ ಉತ್ಪನ್ನಗಳ ಬಳಕೆಯು ದೊಡ್ಡ ಪ್ರಮಾಣದ ನಷ್ಟಗಳಿಗೆ ಕಾರಣವಾಗಬಲ್ಲದು. ಆಧಾರವಾಗಿರುವ ಸ್ವತ್ತಿನ ಬೆಲೆಯಲ್ಲಿನ ಸಣ್ಣ ಪ್ರಮಾಣದ ಸಂಚಲನೆಗಳಿಂದ ಬೃಹತ್ ಪ್ರಮಾಣದ ಪ್ರತಿಫಲಗಳನ್ನು ಗಳಿಸಲು ಉತ್ಪನ್ನಗಳು ಹೂಡಿಕೆದಾರರಿಗೆ ಅವಕಾಶ ಮಾಡಿಕೊಡುತ್ತವೆ. ಆದಾಗ್ಯೂ, ಒಂದು ವೇಳೆ ಆಧಾರವಾಗಿರುವ ಸ್ವತ್ತಿನ ಬೆಲೆಯು ಹೂಡಿಕೆದಾರರ ವಿರುದ್ಧ ದಿಕ್ಕಿನಲ್ಲಿ ಗಣನೀಯವಾಗಿ ಚಲಿಸಿದಾಗ, ಅವರು ಬೃಹತ್ ಪ್ರಮಾಣದ ಪ್ರತಿಫಲಗಳನ್ನು ಕಳೆದುಕೊಳ್ಳುವ ಸಾಧ್ಯತೆಯಿರುತ್ತದೆ. ಉತ್ಪನ್ನದ ಮಾರುಕಟ್ಟೆಗಳಲ್ಲಿ ಕಂಡುಬರುವ ಬೃಹತ್‌ ಪ್ರಮಾಣದ ನಷ್ಟಗಳಿಗೆ ಹಲವಾರು ನಿದರ್ಶನಗಳು ಸಿಗುತ್ತವೆ. ಅಂಥ ಕೆಲವು ಇಲ್ಲಿವೆ:

 • US ಒಕ್ಕೂಟ ಸರ್ಕಾರದಿಂದ ಒದಗಿಸಲ್ಪಟ್ಟ 85 ಶತಕೋಟಿ $ನಷ್ಟು ಸಾಲದೊಂದಿಗೆ ವಿಮಾಗಾರ ಸಂಸ್ಥೆಯಾದ ಅಮೆರಿಕನ್ ಇಂಟರ್‌ನ್ಯಾಷನಲ್‌ ಗ್ರೂಪ್‌ನ್ನು (AIG) ಮರುಬಂಡವಾಳವಾಗಿಸಬೇಕಾಗಿ ಬಂದ ತುರ್ತು ಪರಿಸ್ಥಿತಿ[೮]. AIGಯ ಒಂದು ಅಂಗಸಂಸ್ಥೆಯು ತಾನು ಹಿಂದೆ ವಿಮಾಪತ್ರಕ್ಕೆ ಸಹಿಹಾಕಿದ್ದ ಕ್ರೆಡಿಟ್‌ ಡಿಫಾಲ್ಟ್‌ ಸ್ವಾಪ್ಸ್‌ನ (CDS) ಕುರಿತಾದ ಮೊದಲಿನ ಮೂರು ತ್ರೈಮಾಸಿಕಗಳ ಮೇಲೆ 18 ಶತಕೋಟಿ $ಗಿಂತಲೂ ಹೆಚ್ಚಿನ ಹಣವನ್ನು ಕಳೆದುಕೊಂಡಿತ್ತು.[೯] ಮುಂಬರಲಿದ್ದ ಮೂರು ತ್ರೈಮಾಸಿಕಗಳ ಅವಧಿಗೆ ಮತ್ತಷ್ಟು ನಷ್ಟಗಳು ಉಂಟಾಗುವ ಸಾಧ್ಯತೆಯಿದ್ದುದರಿಂದ, ಮರುಬಂಡವಾಳವಾಗಿಸುವಿಕೆಯು ಅನಿವಾರ್ಯವಾಗಿತ್ತು ಎಂದು ವರದಿಯಾಗಿತ್ತು.
 • 2008ರ ಜನವರಿಯಲ್ಲಿ ಮುಮ್ಮಾರಿಕೆಗಳ ಒಪ್ಪಂದದ ದುರ್ಬಳಕೆಯ ಮೂಲಕ ಸೋಷಿಯೇಟ್‌ ಜೆನರೇಲ್‌ನಿಂದುಂಟಾದ 7.2 ಶತಕೋಟಿ $ನಷ್ಟು ಮೊತ್ತದ ನಷ್ಟ.
 • 2006ರ ಸೆಪ್ಟೆಂಬರ್‌ನಲ್ಲಿ ಬೆಲೆಯು ಏಕಾಏಕಿ ಕೆಳಗೆ ಬಿದ್ದಾಗ, ಸುದೀರ್ಘ ನಿಸರ್ಗಾನಿಲವಾಗಿದ್ದ ಅಮರಾಂಥ್ ಅಡ್ವೈಸರ್ಸ್‌ ಎಂಬ ವಿಫಲಗೊಂಡ ನಿಧಿಯಲ್ಲಿ ಆದ US$6.4 ಶತಕೋಟಿ US$ನಷ್ಟು ಹಣದ ನಷ್ಟ.
 • 1998ರಲ್ಲಿ ಲಾಂಗ್‌-ಟರ್ಮ್‌ ಕ್ಯಾಪಿಟಲ್‌ ಮ್ಯಾನೇಜ್‌ಮೆಂಟ್‌ ಎಂಬ ವಿಫಲಗೊಂಡ ನಿಧೀಯಲ್ಲಿನ 4.6 ಶತಕೋಟಿ US$ನಷ್ಟು ಹಣದ ನಷ್ಟ.
 • U.S. ಇತಿಹಾಸದಲ್ಲಿನ ಪೌರಸಂಸ್ಥೆಯ ಅತಿದೊಡ್ಡ ದಿವಾಳಿತನವಾದ, 1994ರಲ್ಲಿ ಸಂಭವಿಸಿದ ಆರೇಂಜ್‌ ಕೌಂಟಿ, CAಗೆ ಸಂಬಂಧಿಸಿದ ದಿವಾಳಿತನ. 1994ರ ಡಿಸೆಂಬರ್‌ 6ರಂದು, ಆರೇಂಜ್‌ ಕೌಂಟಿಯು ಸ್ಥಳೀಯ ಶಾಖೆ 9ರ ದಿವಾಳಿತನವನ್ನು ಘೋಷಿಸಿತು, ಮತ್ತು 1995ರ ಜೂನ್‌ನಲ್ಲಿ ಇದರಿಂದ ಹೊರಹೊಮ್ಮಿತು. ಸದರಿ ಆಡಳಿತ ವಿಭಾಗವು ಸುಮಾರು 1.6 ಶತಕೋಟಿ $ನಷ್ಟು ಹಣವನ್ನು ಉತ್ಪನ್ನಗಳ ಮಾರಾಟದ ಮೂಲಕ ಕಳೆದುಕೊಂಡಿತು. ಆ ಸಮಯದಲ್ಲಿ ಆರೇಂಜ್‌ ಕೌಂಟಿಯು ದಿವಾಳಿಯೂ ಆಗಿರಲಿಲ್ಲ ಅಥವಾ ಸಾಲ ತೀರಿಸಲಾಗದ ಸ್ಥಿತಿಯಲ್ಲೂ ಇರಲಿಲ್ಲ; ಆದಾಗ್ಯೂ, ಸದರಿ ಆಡಳಿತ ವಿಭಾಗವು ಅಳವಡಿಸಿಕೊಂಡಿದ್ದ ಕಾರ್ಯತಂತ್ರದ ಕಾರಣದಿಂದಾಗಿ, ಸೇವೆಗಳನ್ನು ನಿರ್ವಹಿಸಲು ಅಗತ್ಯವಾಗಿದ್ದ ನಗದು ಹರಿವುಗಳನ್ನು ಸೃಷ್ಟಿಸಲು ಅಸಮರ್ಥವಾಗಿತ್ತು. ಉತ್ಪನ್ನಗಳನ್ನು ಅಸಮರ್ಪಕವಾದ ರೀತಿಯಲ್ಲಿ ಬಳಸಿದರೆ ಮತ್ತು ಯೋಜನಾರಹಿತವಾದ ವಿಧಾನವೊಂದರಲ್ಲಿ ಸ್ಥಾನಗಳನ್ನು ಫೈಸಲಾತಿ ಮಾಡಿಬಿಟ್ಟರೆ ಅಥವಾ ಮುಚ್ಚಿಬಿಟ್ಟರೆ ಏನಾಗುತ್ತದೆ ಎಂಬುದಕ್ಕೆ ಆರೇಂಜ್‌ ಕೌಂಟಿಯು ಒಂದು ಉತ್ತಮ ಉದಾಹರಣೆಯಾಗಿದೆ; ಒಂದು ವೇಳೆ ಅವು ಫೈಸಲಾತಿಗೆ ಒಳಗಾಗದೇ ಇದ್ದಿದ್ದರೆ, ಅವರ ಸ್ಥಾನಗಳು ಹಿಂದಿರುಗುತ್ತಿದ್ದಾದ್ದರಿಂದ ಅವರು ಯಾವುದೇ ಹಣವನ್ನು ಕಳೆದುಕೊಳ್ಳುತ್ತಿರಲಿಲ್ಲ ಎಂಬುದಕ್ಕೆ ಇದೊಂದು ಉದಾಹರಣೆಯಾಗಿದೆ.[ಸೂಕ್ತ ಉಲ್ಲೇಖನ ಬೇಕು] US ಪೌರಸಂಸ್ಥೆಗಳಿಂದಾದ ಬಡ್ಡಿದರದ-ಉತ್ಪನ್ನಗಳ ಸಂಭವನೀಯ ಸಮಸ್ಯಾತ್ಮಕ ಬಳಕೆಯು ಇತ್ತೀಚಿನ ವರ್ಷಗಳಲ್ಲಿ ಮುಂದುವರೆದಿದೆ. ಉದಾಹರಣೆಗಾಗಿ, ಇದನ್ನು ನೋಡಿ:[೧೦]
 • 1994ರಲ್ಲಿ ಕಂಡುಬಂದ ನಿಕ್‌ ಲೀಸನ್‌ ವಾಣಿಜ್ಯ ವ್ಯವಹಾರ

ಅಧ್ಯಕ್ಷ ಕ್ಲಿಂಟನ್‌ನ, ಹಣಕಾಸು ಮಾರುಕಟ್ಟೆಗಳಿಗೆ ಸಂಬಂಧಿಸಿದಂತಿದ್ದ ಕಾರ್ಯನಿರತ ಗುಂಪಿನ ಸದಸ್ಯರಾದ ಲ್ಯಾರಿ ಸಮ್ಮರ್ಸ್‌, ಅಲನ್‌ ಗ್ರೀನ್‌ಸ್ಪಾನ್‌, ಅರ್ಥರ‍್ ಲೆವಿಟ್‌, ಮತ್ತು ರಾಬರ್ಟ್‌ ರೂಬಿನ್‌ ಮೊದಲಾದವರು ಟೀಕೆಗೆ ಒಳಗಾಗಿದ್ದಾರೆ. ಉತ್ಪನ್ನಗಳ ಮಾರುಕಟ್ಟೆಗಳನ್ನು ನಿಯಂತ್ರಿಸಲಿರುವ ಒಂದು ಪ್ರಯತ್ನವನ್ನು ಮುಳುಗಿಸಿಬಿಟ್ಟಿದ್ದಕ್ಕಾಗಿ, ಮತ್ತು ತನ್ಮೂಲಕ 2008ರ ಅಂತ್ಯದ ವೇಳೆಗೆ ಹಣಕಾಸಿನ ಮಾರುಕಟ್ಟೆಗಳು ಕುಸಿತ ಕಾಣುವಲ್ಲಿ ನೆರವಾಗಿದ್ದಕ್ಕೆ ಅವರು ಟೀಕೆಯನ್ನು ಕೇಳಬೇಕಾಗಿ ಬಂತು. ಅಧ್ಯಕಷ್ ಜಾರ್ಜ್‌ W. ಬುಷ್‌ ಕೂಡಾ ಟೀಕೆಗೆ ಒಳಗಾಗಿದ್ದಾರೆ. ಏಕೆಂದರೆ, 2008ರ ಕರಗುವಿಕೆಗೆ ಮುಂಚಿನ 8 ವರ್ಷಗಳ ಅವಧಿಗೆ ಅಧ್ಯಕ್ಷರಾಗಿದ್ದ ಅವರು, ಉತ್ಪನ್ನಗಳ ಮಾರಾಟವನ್ನು ನಿಯಂತ್ರಿಸಲು ಏನನ್ನೂ ಮಾಡಲಿಲ್ಲ. ನಿಯಂತ್ರಣವನ್ನು ತೆಗೆದುಹಾಕುವುದು ತನ್ನ ರಾಜಕೀಯ ಸೂತ್ರಗಳ ಪ್ರಮುಖ ತತ್ತ್ವಗಳಲ್ಲೊಂದಾಗಿತ್ತು ಎಂದು ಬುಷ್‌ ಹೇಳಿಕೆ ನೀಡಿದ್ದಾರೆ.

ಎದುರು-ಸಹಭಾಗಿಯ ಅಪಾಯ[ಬದಲಾಯಿಸಿ]

ಉತ್ಪನ್ನಗಳು (ಅದರಲ್ಲೂ ವಿಶೇಷವಾಗಿ ವಸ್ತು ವಿನಿಮಯಗಳು) ಹೂಡಿಕೆದಾರರನ್ನು ಎದುರು-ಸಹಭಾಗಿ ಅಪಾಯ ಕ್ಕೆ ಒಡ್ಡುತ್ತವೆ. ಉದಾಹರಣೆಗೆ, ಒಂದು ವೇಳೆ ವ್ಯಕ್ತಿಯೋರ್ವನು ತನ್ನ ವ್ಯವಹಾರಕ್ಕಾಗಿ ಒಂದು ನಿಶ್ಚಿತ ಬಡ್ಡಿದರದ ಸಾಲವನ್ನು ಅಪೇಕ್ಷಿಸುತ್ತಿದ್ದು, ಬ್ಯಾಂಕುಗಳು ಕೇವಲ ಬದಲಾಗುವ ದರದ ಸಾಲವನ್ನು ಮಾತ್ರವೇ ನೀಡುತ್ತಿರುವುದನ್ನು ಕಂಡುಕೊಂಡರೆ, ಬದಲಾಗುವ ದರದ ಸಾಲವನ್ನು ಬಯಸುತ್ತಿರುವ ಮತ್ತೋರ್ವ ವ್ಯವಹಾರಸ್ಥನಿಗೆ ಈ ವ್ಯಕ್ತಿಯು ಪಾವತಿಗಳನ್ನು ವಸ್ತು ವಿನಿಮಯ ಮಾಡಿಕೊಳ್ಳುತ್ತಾನೆ; ತನ್ಮೂಲಕ ಆ ವ್ಯಕ್ತಿಗೆ ಒಂದು ನಿಶ್ಚಿತ ಬಡ್ಡಿದರವು ಕೃತಕವಾಗಿ ಸೃಷ್ಟಿಯಾದಂತಾಗುತ್ತದೆ. ಆದಾಗ್ಯೂ, ಒಂದು ವೇಳೆ ಎರಡನೇ ವ್ಯವಹಾರವು ದಿವಾಳಿಯಾಗಿ ಹೋದರೆ, ಅದು ತನ್ನ ಬದಲಾಗುವ ದರವನ್ನು ಪಾವತಿಸಲು ಅಸಮರ್ಥವಾಗುತ್ತದೆ ಮತ್ತು ಇದರಿಂದಾಗಿ ಮೊದಲನೆಯ ವ್ಯವಹಾರವು ತನ್ನ ನಿಶ್ಚಿತ ದರವನ್ನು ಕಳೆದುಕೊಳ್ಳುತ್ತದೆ ಹಾಗೂ ಮತ್ತೊಮ್ಮೆ ಒಂದು ಬದಲಾಗುವ ದರವನ್ನು ಪಾವತಿಸಬೇಕಾಗುತ್ತದೆ. ಒಂದು ವೇಳೆ ಬಡ್ಡಿದರಗಳು ಹೆಚ್ಚಾಗಿದ್ದರೆ, ಮೊದಲನೇ ವ್ಯವಹಾರವು ವ್ಯತಿರಿಕ್ತ ಪರಿಣಾಮವನ್ನು ಎದುರಿಸುವ ಸಾಧ್ಯತೆಯಿರುತ್ತದೆ; ಏಕೆಂದರೆ ಹೆಚ್ಚಿನ ಪ್ರಮಾಣದ ಬದಲಾಗುವ ದರವನ್ನು ಪಾವತಿಸಲು ಅದು ಸಿದ್ಧವಾಗಿರದ ಸಾಧ್ಯತೆಯಿರಬಹುದಾಗಿರುತ್ತದೆ. ಈ ಪ್ರಭಾವ ಅಥವಾ ಪರಿಣಾಮದ ಕಾರಣದಿಂದಾಗಿ ಉತ್ಪನ್ನದ ವಿವಿಧ ಬಗೆಗಳು ವಿವಿಧ ಮಟ್ಟಗಳ ಅಪಾಯವನ್ನು ಹೊಂದಿರುತ್ತವೆ. ಉದಾಹರಣೆಗೆ, ಕಾನೂನಿನ ಅನುಸಾರವಾಗಿರುವ ಪ್ರಮಾಣಕವಾಗಿಸಿದ ಸ್ಟಾಕ್‌ ಪೂರ್ವಪಾವತಿ ಹಕ್ಕುಗಳು ಬಯಸುವಂತೆ, ಅಪಾಯದಲ್ಲಿರುವ ಸಹಭಾಗಿಯು ವಿನಿಮಯ ಕೇಂದ್ರದೊಂದಿಗೆ ಒಂದು ನಿರ್ದಿಷ್ಟ ಮೊತ್ತದ ಹಣವನ್ನು ಠೇವಣಿಯಾಗಿರಿಸಬೇಕಾಗುತ್ತದೆ. ಅವು ಯಾವುದೇ ನಷ್ಟಗಳಿಗೆ ಸಂಬಂಧಿಸಿದಂತೆ ಪಾವತಿಸಬಲ್ಲವು ಎಂಬುದನ್ನು ಇದು ತೋರಿಸುತ್ತದೆ; ಸಾಲಗಳ ಮೇಲಿನ ನಿಶ್ಚಿತ ದರಗಳಿಗೆ ಬದಲಾಗಿ ಬದಲಾಗುವ ದರಗಳನ್ನು ವಸ್ತು ವಿನಿಮಯ ಮಾಡುವ ವ್ಯವಹಾರಗಳಿಗೆ ನೆರವಾಗುವ ಬ್ಯಾಂಕುಗಳು, ಎರಡೂ ಸಹವರ್ತಿಗಳಿಗೆ ಮೇಲೆ ಸಾಲಸಂಬಂಧಿ ತಪಾಸಣೆಗಳನ್ನು ನಡೆಸಬಹುದು. ಆದಾಗ್ಯೂ ಉದಾಹರಣೆಗೆ, ಎರಡು ಕಂಪನಿಗಳ ನಡುವಿನ ಖಾಸಗಿ ಒಪ್ಪಂದಗಳಲ್ಲಿ, ಸಮರ್ಥ ಹೂಡಿಕೆಯ ತನಿಖೆ ಹಾಗೂ ಅಪಾಯದ ವಿಶ್ಲೇಷಣೆಯನ್ನು ಕೈಗೊಳ್ಳುವುದಕ್ಕಾಗಿರುವ ಮಾನದಂಡಗಳು ಇಲ್ಲದಿರಬಹುದು.

ಸಣ್ಣ/ಅನನುಭವಿ ಹೂಡಿಕೆದಾರರಿಗಾಗಿ ತಕ್ಕುದಾಗಿರದಂತೆ ಹೆಚ್ಚಿರುವ ಅಪಾಯ[ಬದಲಾಯಿಸಿ]

ಸಣ್ಣ ಅಥವಾ ಅನನುಭವಿ ಹೂಡಿಕೆದಾರರಿಗಾಗಿ ತಕ್ಕುದಾಗಿರದಂತೆ ಹೆಚ್ಚಿರುವ ಅಪಾಯದ ಮೊತ್ತಗಳನ್ನು ಉತ್ಪನ್ನಗಳು ಒಡ್ಡುತ್ತವೆ. ಏಕೆಂದರೆ ದೊಡ್ಡ ಪ್ರತಿಫಲಗಳ ಸಂಭವನೀಯತೆಯನ್ನು ಉತ್ಪನ್ನಗಳು ಮುಂದಿಡುತ್ತವೆ, ವೈಯಕ್ತಿಕ ಹೂಡಿಕೆದಾರರಿಗೂ ಸಹ ಅವು ಒಂದು ಆಕರ್ಷಣೆಯನ್ನು ಮುಂದಿಡುತ್ತವೆ. ಆದಾಗ್ಯೂ, ಉತ್ಪನ್ನಗಳಲ್ಲಿನ ಸಟ್ಟಾ ವ್ಯಾಪಾರದಲ್ಲಿನ ಹೂಡಿಕೆಯು ಅನೇಕವೇಳೆ ಒಂದು ಭಾರೀ ಮೊತ್ತದ ಅಪಾಯವನ್ನು ಸ್ವೀಕರಿಸುತ್ತದೆ. ಹೀಗಾಗಿ ಅನುಗುಣವಾದ ಅನುಭವ ಮತ್ತು ಮಾರುಕಟ್ಟೆಯ ಜ್ಞಾನವು ಸಟ್ಟಾ ವ್ಯವಹಾರಸ್ತರಿಗೆ, ಅದರಲ್ಲೂ ವಿಶೇಷವಾಗಿ ಸಣ್ಣ ಹೂಡಿಕೆದಾರರಿಗೆ ಅತ್ಯಗತ್ಯವಾಗಿರುತ್ತದೆ. ಈ ಕಾರಣದಿಂದಲೇ ಹಣಕಾಸಿಗೆ ಸಂಬಂಧಿಸಿದ ಕೆಲವೊಂದು ಯೋಜನಾಕಾರರು ಈ ಸಾಧನಗಳ ಬಳಕೆಯನ್ನು ಮಾಡದಿರುವಂತೆ ಸಲಹೆಯನ್ನು ನೀಡುತ್ತಾರೆ. ಉತ್ಪನ್ನಗಳು ಸಂಕೀರ್ಣವಾದ ಸಾಧನಗಳಾಗಿದ್ದು, ಹೆಚ್ಚುವರಿ ಅಪಾಯವನ್ನು ಸ್ವೀಕರಿಸುವುದಕ್ಕಾಗಿರುವ ಸಹವರ್ತಿಗಳ ಒಪ್ಪಿಗೆಯ, ಅಥವಾ ಅದರ ವಿರುದ್ಧ ನಷ್ಟವಾಗದಂತೆ ರಕ್ಷಿಸಿಕೊಳ್ಳುವುದರ ಮೇಲೆ ಆಧರಿಸಿ, ಸಹವರ್ತಿಗಳ ನಡುವೆ ಅಪಾಯವನ್ನು ವರ್ಗಾಯಿಸಲೆಂದು ಇವು ವಿಮೆಯ ಒಂದು ಸ್ವರೂಪವಾಗಿ ಸೃಷ್ಟಿಸಲ್ಪಟ್ಟಿವೆ.

ಬೃಹತ್ ಕಾಲ್ಪನಿಕ ಮೌಲ್ಯ[ಬದಲಾಯಿಸಿ]

 • ವಿಶಿಷ್ಟವೆನಿಸುವಂತೆ, ಉತ್ಪನ್ನಗಳು ಒಂದು ಬೃಹತ್ ಕಾಲ್ಪನಿಕ ಮೌಲ್ಯ ವನ್ನು ಹೊಂದಿವೆ. ಹೇಳಿದಂಥ ಸ್ವರೂಪದಲ್ಲಿ, ಅವುಗಳ ಬಳಕೆಯು ನಷ್ಟಗಳಿಗೆ ಕಾರಣವಾಗಬಹುದಿದ್ದು, ಆ ನಷ್ಟವನ್ನು ತುಂಬಲು ಹೂಡಿಕೆದಾರನು ಅಸಮರ್ಥನಾಗಿರುತ್ತಾನೆ ಎಂಬ ಕಾರಣಕ್ಕೆ ಅಲ್ಲಿ ಅಪಾಯವಿರುತ್ತದೆ. ಇದು ಒಂದು ಆರ್ಥಿಕ ಬಿಕ್ಕಟ್ಟಿನಲ್ಲಿ ಪರಿಣಾಮವಾಗಿ ಬರುವ ಸರಣಿ ಕ್ರಿಯೆಯೊಂದಕ್ಕೆ ಕಾರಣವಾಗಬಹುದು ಎಂಬ ಸಂಭವನೀಯತೆಯನ್ನು ವಾರನ್‌ ಬಫೆಟ್ ಎಂಬ ಪ್ರಖ್ಯಾತ ಹೂಡಿಕೆದಾರನು ಬರ್ಕ್‌‌ಷೈರ್‌ ಹ್ಯಾಥವೇಯ 2002ರ ವಾರ್ಷಿಕ ವರದಿಯಲ್ಲಿ ಸೂಚಿಸಿದ್ದಾನೆ. ಅವುಗಳನ್ನು ಬಫೆಟ್‌ 'ಸಮೂಹನಾಶದ ಹಣಕಾಸಿನ ಶಸ್ತ್ರಾಸ್ತ್ರಗಳು' ಎಂದು ಕರೆದ. ಉತ್ಪನ್ನಗಳೊಂದಿರುವ ಸಮಸ್ಯೆಯೆಂದರೆ, ಸ್ವತ್ತುಗಳ ಹೆಚ್ಚುತ್ತಲೇ ಇರುವ ದೊಡ್ಡ ಪ್ರಮಾಣದ ಕಾಲ್ಪನಿಕ ಮೊತ್ತವೊಂದನ್ನು ಅವು ನಿಯಂತ್ರಿಸುತ್ತವೆ ಮತ್ತು ಇದರಿಂದಾಗಿ ವಾಸ್ತವಿಕ ಬಂಡವಾಳದ ಹಾಗೂ ಇಕ್ವಿಟಿಗಳ ಮಾರುಕಟ್ಟೆಗಳ ವ್ಯವಸ್ಥೆಯಲ್ಲಿ ವಿರೂಪತೆ ಉಂಟಾಗಬಹುದು. ಭದ್ರತೆಗಳನ್ನು ಕೊಳ್ಳಲು ಅಥವಾ ಮಾರಲು ಒಂದು ತೀರ್ಮಾನವನ್ನು ಕೈಗೊಳ್ಳಲು, ಹೂಡಿಕೆದಾರರು ಉತ್ಪನ್ನಗಳ ಮಾರುಕಟ್ಟೆಗಳ ಕಡೆಗೆ ನೋಡಲು ಶುರುಮಾಡುತ್ತಾರೆ ಮತ್ತು ಆದ್ದರಿಂದ ಅಪಾಯವನ್ನು ವರ್ಗಾಯಿಸುವ ಮಾರುಕಟ್ಟೆ ಎಂದು ಮೂಲತಃ ಅರ್ಥೈಸಲಾಗಿದ್ದು, ಈಗ ಒಂದು ಅಗ್ರಗಣ್ಯ ಸೂಚಕವಾಗಿ ಮಾರ್ಪಡುತ್ತದೆ.

(2002ರ ವರ್ಷಕ್ಕಾಗಿರುವ ಬರ್ಕ್‌‌ಷೈರ್‌ ಹ್ಯಾಥವೇ ವಾರ್ಷಿಕ ವರದಿಯನ್ನು ನೋಡಿ)

ಒಂದು ಆರ್ಥಿಕತೆಯ ಋಣಭಾರದ ಸನ್ನೆ-ಸಾಮರ್ಥ್ಯ[ಬದಲಾಯಿಸಿ]

ಉತ್ಪನ್ನಗಳು ಬೃಹತ್ತಾದ ರೀತಿಯಲ್ಲಿ ಆರ್ಥಿಕತೆಯೊಂದರಲ್ಲಿನ ಋಣಭಾರದ ಮೇಲೆ ಸನ್ನೆಪ್ರಯೋಗ ವನ್ನು ಮಾಡುತ್ತವೆ. ಇದರಿಂದಾಗಿ ತನ್ನ ಋಣಭಾರದ ಹೊಣೆಗಾರಿಕೆಯ ಸೇವೆಯನ್ನು ಮಾಡಲು ಆಧಾರವಾಗಿರುವ ವಾಸ್ತವಿಕ ಆರ್ಥಿಕತೆಗೆ ಎಂದೆಂದಿಗೂ ಕಷ್ಟವಾಗಿ ಪರಿಣಮಿಸುತ್ತದೆ. ಇದು ವಾಸ್ತವಿಕ ಆರ್ಥಿಕ ಚಟುವಟಿಕೆಯನ್ನು ಕಸಿದುಕೊಳ್ಳುವಲ್ಲಿ ಕಾರಣವಾಗಿ, ಅದರ ಪರಿಣಾಮವಾಗಿ ಒಂದು ಹಿನ್‌ಸರಿತ ಅಥವಾ ಕುಸಿತವೂ ಕಂಡುಬರುತ್ತದೆ. 1934ರ ನವೆಂಬರ್‌ನಿಂದ 1948ರ ಫೆಬ್ರವರಿವರೆಗೆ U.S. ಫೆಡರಲ್‌ ರಿಸರ್ವ್‌ನ ಅಧ್ಯಕ್ಷ‌ನಾಗಿದ್ದ ಮಾರಿನರ‍್ S. ಎಕ್ಲೆಸ್‌ನ ದೃಷ್ಟಿಕೋನದಲ್ಲಿ, 1920ರ ದಶಕ-30ರ ದಶಕದ ಮಹಾನ್‌ ಕುಸಿತಕ್ಕೆ ತೀರಾ ಹೆಚ್ಚಿನ ಮಟ್ಟದ ಋಣಭಾರವು ಪ್ರಮುಖ ಕಾರಣಗಳಲ್ಲೊಂದಾಗಿತ್ತು. (ನೋಡಿ: 2002ರ ಬರ್ಕ್‌‌ಷೈರ್‌ ಹ್ಯಾಥವೇ ವಾರ್ಷಿಕ ವರದಿ)

ಪ್ರಯೋಜನಗಳು[ಬದಲಾಯಿಸಿ]

ಅದೇನೇ ಇದ್ದರೂ, ಉತ್ಪನ್ನಗಳ ಬಳಕೆಯು ತನ್ನದೇ ಆದ ಪ್ರಯೋಜನಗಳನ್ನು ಹೊಂದಿದೆ:

 • ಅಪಾಯದ ಕೊಳ್ಳುವಿಕೆ ಮತ್ತು ಮಾರುವಿಕೆಗೆ ಉತ್ಪನ್ನಗಳು ಅನುವುಮಾಡಿಕೊಡುತ್ತವೆ, ಮತ್ತು ಇದು ಆರ್ಥಿಕ ವ್ಯವಸ್ಥೆಯ ಮೇಲೆ ಒಂದು ಧನಾತ್ಮಕ ಪ್ರಭಾವವನ್ನು ಹೊಂದಿರುತ್ತದೆ ಎಂದು ಅನೇಕ ಜನರು ಪರಿಗಣಿಸುತ್ತಾರೆ. ಸಾಮಾನ್ಯ ಸಂದರ್ಭಗಳಡಿಯಲ್ಲಿ, ಉತ್ಪನ್ನದ ಬಳಕೆಯೊಂದಿಗೆ ಯಾರೋ ಒಬ್ಬರು ಹಣವನ್ನು ಕಳೆದುಕೊಳ್ಳುತ್ತಾರಾದರೂ ಮತ್ತಾರೋ ಹಣವನ್ನು ಗಳಿಸುತ್ತಾರೆ. ಉತ್ಪನ್ನಗಳು ಉಪಯುಕ್ತತೆಯಲ್ಲಿ ಶೂನ್ಯ ಫಲಿತದ್ದಲ್ಲವಾದ್ದರಿಂದ, ಉತ್ಪನ್ನಗಳಲ್ಲಿನ ಮಾರಾಟವು ಆರ್ಥಿಕ ವ್ಯವಸ್ಥೆಯ ಮೇಲೆ ಪ್ರತಿಕೂಲ ಪರಿಣಾಮವನ್ನುಂಟುಮಾಡಬಾರದು.
 • ಫೆಡರಲ್‌ ರಿಸರ್ವ್‌ ಬೋರ್ಡ್‌‌ನ ಹಿಂದಿನ ಅಧ್ಯಕ್ಷ ಅಲನ್‌ ಗ್ರೀನ್‌ಸ್ಪಾನ್‌ ಎಂಬಾತ 2003ರಲ್ಲಿ ಒಂದು ಹೇಳಿಕೆಯನ್ನು ನೀಡಿ, 21ನೇ ಶತಮಾನದ ಆರಂಭದಲ್ಲಿ ಉತ್ಪನ್ನಗಳ ಬಳಕೆಯು ರ್ಥಿಕ ಅವನತಿಯ ಪ್ರಭಾವವನ್ನು ಮೃದುಗೊಳಿಸಿದೆ ಎಂದು ತಿಳಿಸಿದ.[ಸೂಕ್ತ ಉಲ್ಲೇಖನ ಬೇಕು]

ವ್ಯಾಖ್ಯಾನಗಳು[ಬದಲಾಯಿಸಿ]

 • ದ್ವಿಪಕ್ಷೀಯ ಆವರಿಸುವಿಕೆ: ಒಳಗೊಂಡಿರುವ ಎಲ್ಲಾ ಪ್ರತ್ಯೇಕ ಒಡಂಬಡಿಕೆಗಳನ್ನು ಆವರಿಸಿಕೊಂಡು ಒಂದು ಏಕ ಕಾನೂನುಬದ್ಧ ಹೊಣೆಗಾರಿಕೆಯನ್ನು ಸೃಷ್ಟಿಸುವ, ಒಂದು ಬ್ಯಾಂಕು ಹಾಗೂ ಓರ್ವ ಎದುರು-ಸಹಭಾಗಿಯ ನಡುವೆ ಏರ್ಪಡುವ, ಕಾನೂನುಬದ್ಧವಾಗಿ ಜಾರಿಮಾಡಬಹುದಾದ ಒಂದು ವ್ಯವಸ್ಥೆ.
ಇದರರ್ಥವೇನೆಂದರೆ, ಸಹವರ್ತಿಗಳ ಪೈಕಿ ಒಬ್ಬನ ದಿವಾಳಿತನ ಅಥವಾ ಸಾಲತೀರಿಸಲಾಗದ ಸ್ಥಿತಿಯ ಸಂದರ್ಭದಲ್ಲಿ, ಬ್ಯಾಂಕ್‌ನ ಹೊಣೆಗಾರಿಕೆಯು ದ್ವಿಪಕ್ಷೀಯ ಆವರಿಸುವಿಕೆ ವ್ಯವಸ್ಥೆಯಲ್ಲಿ ಒಳಗೊಂಡಿರುವ ಒಡಂಬಡಿಕೆಗಳ ಎಲ್ಲಾ ಧನಾತ್ಮಕ ಹಾಗೂ ಋಣಾತ್ಮಕ ನ್ಯಾಯಸಮ್ಮತ ಮೌಲ್ಯಗಳ ನಿವ್ವಳ ಮೊತ್ತವಾಗಿರುತ್ತದೆ.
 • ಸಾಲ ಉತ್ಪನ್ನ: ಸಾಲದ ಅಪಾಯವನ್ನು ಓರ್ವ ರಕ್ಷಣೆಯ ಖರೀದಿದಾರನಿಂದ ಸಾಲ ರಕ್ಷಣೆಯ ಮಾರಾಟಗಾರನಿಗೆ ವರ್ಗಾಯಿಸುವ ಒಡಂಬಡಿಕೆಯಿದು. ಕ್ರೆಡಿಟ್‌ ಲಿಂಕ್‌ಡ್‌ ನೋಟ್ಸ್‌ ಮತ್ತು ಟೋಟಲ್‌ ರಿಟರ್ನ್‌ ಸ್ವಾಪ್ಸ್‌ ಎಂದು ವಿಭಿನ್ನ ಪರಿಭಾಷೆಯಲ್ಲಿ ಕರೆಯಲಾಗುವ ಅನೇಕ ಸ್ವರೂಪಗಳನ್ನು ಸಾಲ ಉತ್ಪನ್ನದ ಉತ್ಪನ್ನಗಳು ತಾಳಬಹುದು.
 • ಉತ್ಪನ್ನ: ಇದೊಂದು ಹಣಕಾಸಿನ ಒಡಂಬಡಿಕೆಯಾಗಿದ್ದು, ಇದರ ಮೌಲ್ಯವು ಸ್ವತ್ತುಗಳು, ಬಡ್ಡಿ ದರಗಳು, ಹಣ ಚಲಾವಣಾ ವಿನಿಮಯ ದರಗಳು, ಅಥವಾ ಸೂಚಿಗಳ ಕಾರ್ಯನಿರ್ವಹಣೆಯಿಂದ ಉತ್ಪತ್ತಿಯಾಗಿರುತ್ತದೆ. ರೂಪಿಸಲಾದ ಸಾಲದ ಹೊಣೆಗಾರಿಕೆಗಳು ಮತ್ತು ಠೇವಣಿಗಳು, ವಸ್ತು ವಿನಿಮಯಗಳು, ಮುಮ್ಮಾರಿಕೆಗಳು, ಪೂರ್ವಪಾವತಿ ಹಕ್ಕುಗಳು, ಗರಿಷ್ಟ ಮಿತಿಗಳು, ಕನಿಷ್ಟ ಮಿತಿಗಳು, ಸಂಯೋಜಕಗಳು, ಮುಂಗಡ ಒಪ್ಪಂದಗಳು ಮತ್ತು ಇನ್ನೂ ಅನೇಕ ಸಂಯೋಜನೆಗಳನ್ನು ಒಳಗೊಂಡ ಹಣಕಾಸಿನ ಒಡಂಬಡಿಕೆಗಳ ಒಂದು ವ್ಯಾಪಕ ವಿಂಗಡಣೆಯನ್ನು ಉತ್ಪನ್ನದ ವ್ಯವಹಾರಗಳು ಒಳಗೊಳ್ಳುತ್ತವೆ.
 • ವಿನಿಮಯ ಕೇಂದ್ರದಿಂದ-ಮಾರಾಟವಾದ ಉತ್ಪನ್ನ ಒಡಂಬಡಿಕೆಗಳು: ಇವು ಪ್ರಮಾಣಕವಾಗಿಸಿದ ಉತ್ಪನ್ನ ಒಡಂಬಡಿಕೆಗಳಾಗಿದ್ದು, (ಉದಾಹರಣೆಗೆ ಮುಮ್ಮಾರಿಕೆಗಳ ಒಪ್ಪಂದಗಳು ಮತ್ತು ಪೂರ್ವಪಾವತಿ ಹಕ್ಕುಗಳು) ಒಂದು ಸಂಘಟಿತ ಮುಮ್ಮಾರಿಕೆಗಳ ವಿನಿಮಯದ ಮೇಲೆ ವ್ಯವಹರಿಸಲ್ಪಡುತ್ತವೆ.
 • ಒಟ್ಟು ಋಣಾತ್ಮಕ ನ್ಯಾಯಸಮ್ಮತ ಮೌಲ್ಯ: ಇದು ಒಡಂಬಡಿಕೆಗಳ ನ್ಯಾಯಸಮ್ಮತ ಮೌಲ್ಯಗಳ ಮೊತ್ತವಾಗಿದ್ದು, ಈ ವ್ಯವಸ್ಥೆಯಲ್ಲಿ ಆವರಿಸುವಿಕೆಯನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆಯೇ ಬ್ಯಾಂಕುಗಳು ಹಣವನ್ನು ಅದರ ಎದುರು-ಸಹವರ್ತಿಗಳಿಗೆ ತೆರುತ್ತವೆ. ಒಂದು ವೇಳೆ ಬ್ಯಾಂಕುಗಳು ದಿವಾಳಿಯಾದರೆ ಮತ್ತು ಅಲ್ಲಿ ಒಡಂಬಡಿಕೆಗಳ ಯಾವುದೇ ಆವರಿಸುವಿಕೆಯು ಇಲ್ಲದಿದ್ದರೆ, ಮತ್ತು ಬ್ಯಾಂಕ್‌ನ ಯಾವುದೇ ಮೇಲಾಧಾರಗಳನ್ನು ಎದುರು-ಸಹವರ್ತಿಗಳು ಹೊಂದಿಲ್ಲದಿದ್ದರೆ, ಇದು ಬ್ಯಾಂಕ್‌ನ ಎದುರು-ಸಹವರ್ತಿಗಳಿಗೆ ಉಂಟಾಗುವ ಗರಿಷ್ಟ ಪ್ರಮಾಣದ ನಷ್ಟಗಳಿಗೆ ಕಾರಣವಾಗುತ್ತದೆ.
 • ಒಟ್ಟಾರೆ ಧನಾತ್ಮಕ ನ್ಯಾಯಸಮ್ಮತ ಮೌಲ್ಯ: ಇದು ಒಡಂಬಡಿಕೆಗಳ ನ್ಯಾಯಸಮ್ಮತ ಮೌಲ್ಯಗಳ ಒಟ್ಟು ಮೊತ್ತವಾಗಿದ್ದು, ಈ ವ್ಯವಸ್ಥೆಯಲ್ಲಿ ಆವರಿಸುವಿಕೆಯನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆಯೇ ಬ್ಯಾಂಕುಗಳಿಗೆ ಅದರ ಎದುರು-ಸಹವರ್ತಿಗಳು ಹಣವನ್ನು ತೆರುತ್ತಾರೆ. ಒಂದು ವೇಳೆ ಬ್ಯಾಂಕ್‌ನ ಎದುರು-ಸಹವರ್ತಿಗಳು ದಿವಾಳಿಯಾದರೆ ಮತ್ತು ಅಲ್ಲಿ ಒಡಂಬಡಿಕೆಗಳ ಆವರಿಸುವಿಕೆಯು ಇಲ್ಲದಿದ್ದರೆ, ಮತ್ತು ಎದುರು-ಸಹಭಾಗಿ ಸಂಯೋಜಕತ್ವವನ್ನು ಬ್ಯಾಂಕು ಹೊಂದಿಲ್ಲದಿದ್ದರೆ, ಬ್ಯಾಂಕೊಂದು ಹೊಂದಬಹುದಾದ ಗರಿಷ್ಟ ಪ್ರಮಾಣದ ನಷ್ಟಗಳನ್ನು ಇದು ಪ್ರತಿನಿಧಿಸುತ್ತದೆ.
 • ಹೆಚ್ಚು-ಅಪಾಯದ ಅಡಮಾನ ಭದ್ರತೆಗಳು: ಈ ಭದ್ರತೆಗಳಲ್ಲಿ ಬೆಲೆ ಅಥವಾ ನಿರೀಕ್ಷಿತ ಸರಾಸರಿ ಅವಧಿಯು, ಹೆಚ್ಚು-ಅಪಾಯದ ಅಡಮಾನ ಭದ್ರತೆಗಳಿಗೆ ಸಂಬಂಧಿಸಿದ FFIEC ಕಾರ್ಯನೀತಿಯ ಹೇಳಿಕೆಯಿಂದ ಪರಿಮಿತಿಗೊಳಿಸಲ್ಪಟ್ಟಂತೆ ಬಡ್ಡಿದರದ ಬದಲಾವಣೆಗಳಿಗೆ ಅತ್ಯಂತ ಸಂವೇದಿಗಳಾಗಿರುತ್ತವೆ.
 • ಕಾಲ್ಪನಿಕ ಮೊತ್ತ: ಇದು ನಾಮಮಾತ್ರದ ಅಥವಾ ಹೊರತೋರ್ಕೆಯ ಮೊತ್ತವಾಗಿದ್ದು, ವಸ್ತು ವಿನಿಮಯಗಳು ಮತ್ತು ಇತರ ಅಪಾಯ ನಿರ್ವಹಣಾ ಉತ್ಪನ್ನಗಳ ಮೇಲೆ ಮಾಡಲಾದ ಪಾವತಿಗಳನ್ನು ಲೆಕ್ಕಾಚಾರ ಮಾಡಲು ಇದನ್ನು ಬಳಸಲಾಗುತ್ತದೆ. ಸಾಮಾನ್ಯವಾಗಿ ಈ ಮೊತ್ತವು ಕೈಗಳನ್ನು ಬದಲಿಸುವುದಿಲ್ಲ ಮತ್ತು ಹಾಗಾಗಿ ಕಾಲ್ಪನಿಕ ಎಂದು ಉಲ್ಲೇಖಿಸಲ್ಪಡುತ್ತದೆ.
 • ನೇರ ಮಾರಾಟದ (OTC) ಉತ್ಪನ್ನ ಒಡಂಬಡಿಕೆಗಳು: ಇವು ಖಾಸಗಿಯಾಗಿ ಸಂಧಾನದ ಮೂಲಕ ತೀರ್ಮಾನಿಸಿದ ಉತ್ಪನ್ನದ ಒಡಂಬಡಿಕೆಗಳಾಗಿದ್ದು, ಇವು ಸಂಘಟಿತ ಮುಮ್ಮಾರಿಕೆಗಳ ವಿನಿಮಯಗಳ ಆಚೆಗೆ ವ್ಯವಹರಿಸಲ್ಪಡುತ್ತವೆ.
 • ವ್ಯವಸ್ಥೆಯುಳ್ಳ ಟಿಪ್ಪಣಿಗಳು: ಇವು ಅಡಮಾನದ-ಬೆಂಬಲವಿಲ್ಲದ ಋಣಭಾರದ ಭದ್ರತೆಗಳಾಗಿದ್ದು, ಇವುಗಳ ಹರಿವು ಗುಣಲಕ್ಷಣಗಳು, ಒಂದು ಅಥವಾ ಹೆಚ್ಚಿನ ಸೂಚಿಗಳನ್ನು ಅವಲಂಬಿಸಿರುತ್ತವೆ ಮತ್ತು / ಅಥವಾ ಮುಂಗಡ ಒಪ್ಪಂದಗಳು ಅಥವಾ ಪೂರ್ವಪಾವತಿ ಹಕ್ಕುಗಳನ್ನು ಒಳಗೊಂಡಿರುತ್ತವೆ.
 • ಒಟ್ಟು ಅಪಾಯ-ಆಧರಿಸಿದ ಬಂಡವಾಳ: ಇದು ಶ್ರೇಣಿ 1 ಮತ್ತು ಶ್ರೇಣಿ 2ರ ಬಂಡವಾಳದ ಒಂದು ಮೊತ್ತವಾಗಿರುತ್ತದೆ. ಶ್ರೇಣಿ 1ರ ಬಂಡವಾಳವು ಸಾಮಾನ್ಯ ಷೇರುದಾರರ ಇಕ್ವಿಟಿ, ಸಾರ್ವಕಾಲಿಕ ಮೊದಲ ಹಕ್ಕಿನ ಷೇರುದಾರರ ಇಕ್ವಿಟಿಯೊಂದಿಗೆ, ಸಂಯೋಜಿತ ಅಂಗಸಂಸ್ಥೆಗಳ ನಿವ್ವಳ ಬೆಲೆಯ ಲೆಕ್ಕಪತ್ರಗಳಲ್ಲಿನ ಸಂಚಿತವಲ್ಲದ ಲಾಭಾಂಶಗಳು, ಉಳಿಸಿಕೊಳ್ಳಲಾದ ಗಳಿಕೆಗಳು, ಮತ್ತು ಅಲ್ಪಭಾಗದ ಬಡ್ಡಿಗಳನ್ನು ಒಳಗೊಂಡಿರುತ್ತದೆ. ಶ್ರೇಣಿ 2ರ ಬಂಡವಾಳವು, ಅಧೀನಗೊಳಿಸಲಾದ ಋಣಭಾರ, ಮಧ್ಯವರ್ತಿ-ಅವಧಿಯ ಮೊದಲ ಹಕ್ಕಿನ ಸ್ಟಾಕ್‌, ಸಂಚಿತ ಮತ್ತು ದೀರ್ಘ-ಅವಧಿಯ ಮೊದಲ ಹಕ್ಕಿನ ಸ್ಟಾಕ್‌, ಮತ್ತು ಬ್ಯಾಂಕ್‌ ಒಂದರ ಸಾಲ ಮತ್ತು ಭೋಗ್ಯದ ನಷ್ಟಗಳಿಗಾಗಿರುವ ರಿಯಾಯತಿಯ ಒಂದು ಭಾಗವನ್‌ಉ ಒಳಗೊಂಡಿರುತ್ತದೆ.

ಇದನ್ನೂ ಗಮನಿಸಿ[ಬದಲಾಯಿಸಿ]

ಆಕರಗಳು[ಬದಲಾಯಿಸಿ]

 1. ಚಿಸಾಲ್ಮ್‌, ಡೆರಿವೆಟೀವ್ಸ್‌ ಡಿಮಿಸ್ಟಿಫೈಡ್‌ (ವೈಲಿ 2004)
 2. ಚಿಸಾಲ್ಮ್‌, ಡೆರಿವೆಟೀವ್ಸ್‌ ಡಿಮಿಸ್ಟಿಫೈಡ್‌ (ವೈಲಿ 2004) ಕಾಲ್ಪನಿಕ ಮೊತ್ತವೆಂದರೆ ಯಾವ ವಾಸ್ತವಿಕ ಮೂಲಧನವೂ ಇಲ್ಲವೆಂದರ್ಥ.
 3. How Leeson broke the bank - BBC Economy http://news.bbc.co.uk/2/hi/business/375259.stm
 4. BIS ಸಮೀಕ್ಷೆ : ಬ್ಯಾಂಕ್‌ ಫಾರ‍್ ಇಂಟರ್‌ನ್ಯಾಷನಲ್‌ ಸೆಟ್ಲ್‌ಮೆಂಟ್ಸ್‌ನ (BIS) ಜೂನ್‌ 2008ರ ಜೂನ್‌ ಅಂತ್ಯದ ವೇಳೆಯ, ಅರ್ಧ-ವಾರ್ಷಿಕ OTC ಉತ್ಪನ್ನಗಳ ಅಂಕಿ-ಅಂಶಗಳ ವರದಿಯು ತೋರಿಸುವ ಪ್ರಕಾರ, OTC ಉತ್ಪನ್ನಗಳ ಪೈಕಿ 683.7 ಲಕ್ಷಕೋಟಿ $ನಷ್ಟು ಒಟ್ಟು ಕಾಲ್ಪನಿಕ ಮೊತ್ತಗಳು ಬಾಕಿ ಉಳಿದಿದ್ದು ಅವುಗಳ ಒಂದು ಒಟ್ಟಾರೆ ಮಾರುಕಟ್ಟೆ ಮೌಲ್ಯವು 20 ಲಕ್ಷಕೋಟಿ $ನಷ್ಟಿದೆ. ಇದನ್ನೂ ನೋಡಿ ಪ್ರಯರ‍್ ಪೀರಿಯಡ್‌ ರೆಗ್ಯುಲರ‍್ OTC ಡೆರಿವೆಟಿವ್ಸ್‌ ಮಾರ್ಕೆಟ್ ಸ್ಟಾಟಿಸ್ಟಿಕ್ಸ್‌ .)
 5. ಫ್ಯೂಚರ್ಸ್‌ ಅಂಡ್‌ ಆಪ್ಷನ್ಸ್‌ ವೀಕ್‌ : 2005ರ ಅಕ್ಟೋಬರ್‌ 10ರ F&O ವೀಕ್‌ನಲ್ಲಿ ಪ್ರಕಟಿಸಲಾದ ಅಂಕಿ-ಅಂಶಗಳ ಅನುಸಾರ. ಇದನ್ನೂ ನೋಡಿ FOW Website.
 6. http://www.bis.org/statistics/derstats.htm
 7. [10]
 8. "ಡೆರಿವೆಟಿವ್ಸ್‌ ಕೌಂಟರ್‌-ಪಾರ್ಟಿ ರಿಸ್ಕ್‌: ಲೆಸನ್ಸ್‌ ಫ್ರಂ AIG ಅಂಡ್‌ ದಿ ಕ್ರೆಡಿಟ್‌ ಕ್ರೈಸಿಸ್‌". Archived from the original on 2010-02-21. Retrieved 2010-02-04.
 9. ರಾಯಿಟರ್ಸ್‌‌ನ ಜೇಮ್ಸ್‌ B. ಕೆಲ್‌ಹರ್‌ ಬರೆದಿರುವ "ಬಫೆಟ್‌’ಸ್‌ ಟೈಂಬಾಂಬ್‌ ಗೋಸ್‌ ಆಫ್‌ ಆನ್‌ ವಾಲ್‌ಸ್ಟ್ರೀಟ್‌ ಎಂಬ ಲೇಖನ
 10. ಕತ್ರಿನಾ ಚಂಡಮಾರುತದ ನಂತರದ ಹಣಕಾಸು ನೆರವಿನ ಕುರಿತಾದ ರಿಸ್ಕ್‌ ನಿಯತಕಾಲಿಕದ ಲೇಖನ

ಹೆಚ್ಚಿನ ಓದಿಗೆ[ಬದಲಾಯಿಸಿ]

ಬಾಹ್ಯ ಕೊಂಡಿಗಳು[ಬದಲಾಯಿಸಿ]

ಟೆಂಪ್ಲೇಟು:Derivatives market