ವಿಷಯಕ್ಕೆ ಹೋಗು

ಉತ್ತರಾಖಂಡದಲ್ಲಿ ಚುನಾವಣೆಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಭಾರತದಲ್ಲಿ ಉತ್ತರಾಖಂಡವನ್ನು ಗುರುತಿಸಿದ ನಕ್ಷೆ
  • ಸೆಪ್ಟೆಂಬರ್ 1998 24 ಉತ್ತರ ಪ್ರದೇಶ ವಿಧಾನಸಭೆ ಮತ್ತು ಉತ್ತರ ಪ್ರದೇಶ ವಿಧಾನ ಪರಿಷತ್ ಹೊಸ ರಾಜ್ಯದ ರಚಿಸುವ ಪ್ರಕ್ರಿಯೆ ಆರಂಭಿಸಿದರು. ಇದು ಉತ್ತರ ಪ್ರದೇಶ ಪುನಸ್ಸಂಘಟನಾ ಕಾಯಿದೆ ಜಾರಿಗೆ ಕಾರಣವಾಯಿತು. ಎರಡು ವರ್ಷಗಳ ನಂತರ ಭಾರತದ ಸಂಸತ್ತು ಉತ್ತರ ಪ್ರದೇಶ ಪುನಸ್ಸಂಘಟನಾ ಕಾಯಿದೆ, 2000 ಜಾರಿಗೆ ಅನುಮೋದನೆ ನೀಡಿತು ಮತ್ತು ಇದರಿಂದಾಗಿ 9,ನವೆಂಬರ್ 2000 ದಂದು ಉತ್ತರಾಖಂಡ್ ಭಾರತ ಗಣರಾಜ್ಯದ 29ನೇ ರಾಜ್ಯವಾಯಿತು.[]
  • ಉತ್ತರಾಖಂಡದ ವಿಧಾನಸಭೆಯನ್ನು 'ಉತ್ತರಾಖಂಡ್ ವಿಧಾನಸಭೆ' ಎಂದು ಕರೆಯಲಾಗುತ್ತದೆ (ಹಿಂದಿ: उत्तराखण्ड विधानसभा). ಜೊತೆಗೆ ಉತ್ತರಾಖಂಡದ ಏಕಸಭೆಯ ಆಡಳಿತ ಮತ್ತು ಕಾನೂನು ಕೈಗೊಳ್ಳುವ ಶಾಸಕಾಂಗವಾಗಿದೆ. ಭಾರತದ 29 ರಾಜ್ಯಗಳಲ್ಲಿ ಒಂದು, ಮತ್ತು ಡೆಹ್ರಾಡೂನ್ ಉತ್ತರಾಖಂಡ ರಾಜ್ಯದ ರಾಜಧಾನಿ. ಲೆಜಿಸ್ಲೇಟಿವ್ ಅಸೆಂಬ್ಲಿಯಲ್ಲಿ 71 ಸದಸ್ಯರು(MLA)ಇರುತ್ತಾರೆ . []
  • ಈಗಿನ ಮುಖ್ಯಮಂತ್ರಿ ಹರೀಶ್ ರಾವತ್ ಉತ್ತರಾಖಂಡ್ ವಿಧಾನಸಭೆ ಮುಖಂಡರಾಗಿದ್ದು. ವಿಧಾನಸಭೆಯ ಸ್ಪೀಕರ್ ಗೋವಿಂದ್ ಸಿಂಗ್ ಕುಂಜುವಾಲಾ ಆಗಿದ್ದಾರೆ. ಕೃಷ್ಣನ್ ಕಾಂತ್ ಪಾಲ್ ಉತ್ತರಖಂಡದ ರಾಜ್ಯಪಾಲರು. ಉತ್ತರಾಖಂಡ್ ರಾಜ್ಯದಲ್ಲಿ ವಿಧಾನಸಭೆ ಚುನಾವಣೆಗಳನ್ನು, ಭಾರತದ ಸಂವಿಧಾನಕ್ಕೆ ಅನುಗುಣವಾಗಿ ನಡೆಸಲಾಗುತ್ತದೆ. ಉತ್ತರಾಖಂಡ್ ಅಸೆಂಬ್ಲಿ ಏಕಪಕ್ಷೀಯವಾಗಿ ಸ್ಥಳೀಯ ಸಂಸ್ಥೆಗಳ ಚುನಾವಣೆಗಳ ನಿರ್ವಹಣೆಗೆ ಸಂಬಂಧಿಸಿದಂತೆ ರಾಜ್ಯ ಮಟ್ಟದ ಚುನಾವಣೆಗಳ ನಿರ್ವಹಣೆಗೆ ರಾಜ್ಯದ ಶಾಸನಸಭೆಯಿಂದ ಯಾವುದೇ ಬದಲಾವಣೆಗಳನ್ನು ಮಾಡಲು ಭಾರತದ ಪಾರ್ಲಿಮೆಂಟ್'ನ ಅನುಮೋದನೆ ಅಗತ್ಯವಿದೆ. ಆದರೆ ವಿಧಾನಸಭೆ ಕಾನೂನುಗಳು ರಚಿಸುತ್ತದೆ. ಇದಕ್ಕೆ ಹೆಚ್ಚುವರಿಯಾಗಿ, ಭಾರತ ಸಂವಿಧಾನದ ವಿಧಿ 356 ಪ್ರಕಾರ ಸಂಸತ್ತು ರಾಜ್ಯ ಶಾಸಕಾಂಗವನ್ನು ವಜಾ ಮಾಡಬಹುದು, ಹಾಗೂ ರಾಷ್ಟ್ರಪತಿ ಆಡಳಿತವನ್ನು ಹೊರಿಸಬಹುದು.(ಭಾನುವಾರ 2016 ಮಾರ್ಚ್ 27 ರಿಂದ ಜಾರಿಗೆ ಬರುವಂತೆ ಉತ್ತರಾಖಂಡ್ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೊಂಡಿದೆ.)[]

ಉತ್ತರಾಖಂಡದ ವಿಧಾನಸಭೆ ಚುನಾವಣೆಗಳು

[ಬದಲಾಯಿಸಿ]
ಅಸೆಂಬ್ಲಿ ಚುನಾವಣಾ ವರ್ಷ ಸ್ಪೀಕರ್ ಮುಖ್ಯಮಂತ್ರಿ ಪಕ್ಷ ನಾಯಕ ರಾಜಕೀಯ ಪಕ್ಷ
ಮಧ್ಯಂತರ ಅಸೆಂಬ್ಲಿ N/A ಪ್ರಕಾಶ್ ಪಂತ್ ಸ್ವಾಮಿ ನಿತ್ಯಾನಂದ, ಎಸ್ ಕೊಶ್ಯಾರಿ ಭಾಜಪ ಯಾವುದೂ ಇಲ್ಲ
1 ನೇ ಅಸೆಂಬ್ಲಿ 2002 ಯಶ್ಪಾಲ್ ಆರ್ಯ ಎನ್ ಡಿ ತಿವಾರಿ ಕಾಂಗ್ರೆಸ್ ಸಿಂಗ್ ಕಂಡೂರಿ ಮತಲಬ್ ಭಾರತೀಯ ಜನತಾ ಪಕ್ಷ
2 ನೇ ಅಸೆಂಬ್ಲಿ 2007 ಹರಬನ್ಸ್ ಕಪೂರ್ ಬಿ ಸಿ ಖಂಡಾರಿ, ರಮೇಶ್ಪೊಕ್ರಿಯಾ,ಬಿ ಸಿ ಖಂಡಾರಿ, ಭಾಜಪ ಹರಾಕ್ ಸಿಂಗ್ ರಾವತ್ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
3 ನೇ ಅಸೆಂಬ್ಲಿ 2012 ಗೋವಿಂದ್ ಸಿಂಗ್ ಕುಂಜವಾಲಾ ವಿಜಯ್ ಬಹುಗುಣ,ಹರೀಶ್ ರಾವತ್ ಕಾಂಗ್ರೆಸ್ ಅಜಯ್ ಭಟ್ ಭಾರತೀಯ ಜನತಾ ಪಕ್ಷ

2002 ರ ಚುನಾವಣೆ

[ಬದಲಾಯಿಸಿ]
ಕ್ರ.ಸಂ.: ಪಕ್ಷದ ಹೆಸರು ಸ್ಪರ್ಧೆ ಗೆಲುವು %
1 ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (INC) 70 36 26.91%
2 ಭಾರತೀಯ ಜನತಾ ಪಾರ್ಟಿ (BJP) 69 19 25.45%
3 ಬಹುಜನ ಸಮಾಜ ಪಾರ್ಟಿ (BSP) 68 7 10.93%
4 ಉತ್ತರಾಕಂಡ ಕ್ರಾಂತಿದಳ (UKD) 62 4 5.49%
5 ಪಕ್ಷೇತರರು 70 4 -
ಒಟ್ಟು 70

2007ರ ಚುನಾವಣೆ

[ಬದಲಾಯಿಸಿ]
  • ಉತ್ತರಾಖಂಡ್ ವಿಧಾನಸಭೆಯ ಚುನಾವಣೆ 2007 - ರಾಜ್ಯದ ಮೂರನೇ ವಿಧಾನಸಭೆ. . ಭಾರತೀಯ ಜನತಾ ಪಕ್ಷ 70 ಸ್ಥಾನಗಳ ಶಾಸನಸಭೆಯಲ್ಲಿ 35 ಸ್ಥಾನಗಳನ್ನು ಪಡೆಯುವುದರೊಂದಿಗೆ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತು. 2007 ರ ಫೆಬ್ರವರಿ 21 ರಂದು ನಡೆದ ಚುನಾವಣೆಯಲ್ಲಿ,. ಸರ್ಕಾರ ರಚಿಸಲು ಒಂದು ಸ್ಥಾನವನ್ನು ಪಡೆಯಲು ಬೇರೆ ಪಕ್ಷದ ಬೆಂಬಲ ಅವಲಂಬಿಸಬೇಕಾಗಿತ್ತು. ಬಿಜೆಪಿ ಉತ್ತರಾಖಂಡ್ ಕ್ರಾಂತಿ ದಳ ಮತ್ತು ಮೂರು ಸ್ವತಂತ್ರ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 21 ಸ್ಥಾನಗಳನ್ನು ಹೊಂದಿರುವ ಅಧಿಕೃತ ವಿರೋಧ ಪಕ್ಷವಾಯಿತು. []
ಫಲಿತಾಂಶ
ಕ್ರ.ಸಂ.: ಪಕ್ಷದ ಹೆಸರು ಸ್ಪರ್ಧೆ ಗೆಲುವು
1 ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (INC) 70 21
2 ಭಾರತೀಯ ಜನತಾ ಪಾರ್ಟಿ (BJP) 70 35
3 ಬಹುಜನ ಸಮಾಜ ಪಾರ್ಟಿ (BSP) 70 8
4 ಉತ್ತರಾಕಂಡ ಕ್ರಾಂತಿದಳ (UKD) 61 3
5 ಪಕ್ಷೇತರರು 70 3
ಒಟ್ಟು . 70

3

  • ಭಾರತೀಯ ಜನತಾ ಪಕ್ಷ, 35 ಸ್ಥಾನಗಳನ್ನು ಪಡೆಯುವುದರೊಂದಿಗೆ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಬಹಳ ತಿಕ್ಕಾಟದ ನಂತರ 3 ಉತ್ತರಖಂಡ ಕ್ರಾಂತಿ ದಳದವರು ಮತ್ತು ಮೂವರು ಪಕ್ಷೇತರರು ಸರ್ಕಾರಕ್ಕೆ ಬೆಂಬಲ ಕೊಡುವರೆಂದು ಘೋಷಿಸಲಾಯಿತು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸರ್ಕಾರವು 70 ಸ್ಥಾನಗಳ ಪೈಕಿ ಕೇವಲ 21 ಸ್ಥಾನಗಳನ್ನು ಪಡೆದು, ಅಧಿಕಾರ ಕಳೆದುಕೊಂಡಿತು.
  • ದೀರ್ಘ ಚರ್ಚೆಗಳ ನಂತರ ಬಿ ಸಿ ಖಂಡೂರಿ ಮುಖ್ಯಮಂತ್ರಿ ಎಂದೂ ಬಿ ಎಸ್ ಕೊಶಾರಿ ಪಕ್ಷದ ಹೊಣೆ ನಿರ್ವಹಿಸಲು ತೀರ್ಮಾನವಾಯಿತು.
ವಿಧಾನಸಭೆಯಲ್ಲಿ ಮುಖ್ಯ ಸ್ಥಾನ ಹೊಂದಿರುವವರು
  • ಸ್ಪೀಕರ್: ಹರ್ಬನ್ಸ್ ಕಪೂರ್
  • ಉಪ-ಸ್ಪೀಕರ್: ಖಾಲಿ
  • ಬಿ.ಸಿ.ಖಂಡೂರಿ: ವಿಧಾನಸಭಾ ನಾಯಕ (ಮುಖ್ಯ ಮಂತ್ರಿ)
  • ವಿರೋಧ ಪಕ್ಷದ ನಾಯಕ: ಹರಾಕ್ ಸಿಂಗ್ ರಾವತ್
  • ಕಾರ್ಯದರ್ಶಿ: ಮಹೇಶ್ ಚಂದ್ರ [೧]

2012ರ ಚುನಾವಣೆ

[ಬದಲಾಯಿಸಿ]

ಉತ್ತರಾಖಂಡ ಚುನಾವಣೆ ೨೦೧೨

[ಬದಲಾಯಿಸಿ]
  • (೩೦-೧-೨೦೧೨)- ಮಾರ್ಚಿ
ಉತ್ತರಾಖಂಡ್ ವಿಧಾನಸಭೆ
ಸ್ಥಾನ ಪಾರ್ಟಿ(ಉತ್ತರಾಖಂಡ-2012) ನಿಂತ ಸ್ಥಾನ ಗೆಲುವು % ಒಟ್ಟು ಓಟಿನಲ್ಲಿ % ಓಟು ಸ್ಪರ್ಧಿಸಿದ ಕ್ಷೇತ್ರದಲ್ಲಿ
1 ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (INC) 70 32 33.79 33.79
3 ಬಹುಜನ ಸಮಾಜ ಪಾರ್ಟಿ (BSP) 70 3 12.1 9 19
4 ಪಕ್ಷೇತರ -- 3 12.34 --
5 ಉತ್ತರಖಂಡಕ್ರಾಂತಿ ದಳUKD(P) 44 1 1.93 3.18
2 ಭಾರತೀಯ ಜನತಾದಳ (BJP) 70 31 33.13 33.13
- ಒಟ್ಟು - Total 70 -- -- --

ಲೋಕ ಸಭೆ 2009 (ಸ್ಥಾನ 5

  • ಕಾಂಗ್ರೆಸ್ ------5, (43.14% )
  • ಬಿಜೆಪಿ --------0;( 33.80%)
  • ಬಿಎಸ್ ಪಿ ----- 0(15.24%)
  • ಒಟ್ಟು --------5

==

  • ಲೋಕ ಸಭೆ 2014
  • ಬಿಜೆಪಿ.......5
  • ಒಟ್ಟು ....5

ವಿಧಾನಸಭೆ ಉಪಚುನಾವಣೆ ೨೪-೭-೨೦೧೪

[ಬದಲಾಯಿಸಿ]
  • (ಉತ್ತರಾಂಚಲ ಮರುಚುನಾವಣೆ: ಕಾಂಗ್ರೆಸ್‌ ಸ್ವೀಪ್‌ಏಜೆನ್ಸೀಸ್ | Jul 25, 2014, 04.18PM)
  • ಧಾರ್ಚೂಲಾ ಕ್ಷೇತ್ರದಲ್ಲಿ ಸಿಎಂ ರಾವತ್‌ 20 ಸಾವಿರ ಮತಗಳಿಂದ ಗೆದ್ದರೆ, ದೊಯ್ವಾಲದಲ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಹಿರಾಸಿಂಗ್‌ ಬಿಸ್ತ್‌(6 ಸಾವಿರ) ಹಾಗೂ ಸೋಮೇಶ್ವರ ಮೀಸಲು ಕ್ಷೇತ್ರದಲ್ಲಿ ರೇಖಾ ಆರ್ಯ(9 ಸಾವಿರ) ಮತಗಳಿಂದ ಗೆಲುವು ದಾಖಲಿಸಿದ್ದಾರೆ ಎಂದು ಉತ್ತರಾಖಂಡ್ನ ಮುಖ್ಯ ಚುನಾವಣಾ ಅಧಿಕಾರಿ ರಾಧಾ ರಾತುರಿ ಹೇಳಿದ್ಧಾರೆ.
  • ಧಾರ್ಚೂಲಾ ಕ್ಷೇತ್ರದಲ್ಲಿ ರಾವತ್‌ಗೆ 31214 ಮತಗಳು ಬಂದಿದ್ದರೆ ಪ್ರತಿಸ್ಪರ್ಧಿ ಬಿಜೆಪಿಯ ಬಿ.ಡಿ.ಜೋಷಿಗೆ ಸಿಕ್ಕಿದ್ದು 10610 ಮತಗಳು ಮಾತ್ರ. ಅದೇ ವೇಳೆ ದೊಯ್ವಾಲದಲ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಹಿರಾಸಿಂಗ್‌ ಬಿಸ್ತ್‌ಗೆ 35980 ಹಾಗೂ ಪ್ರತಿಸ್ಪರ್ಧಿ ಬಿಜೆಪಿಯ ತ್ರಿವೇಂದ್ರಸಿಂಗ್‌ ರಾವತ್‌ಗೆ 29465 ಮತಗಳು ಬಂದಿವೆ. ಸೋಮೇಶ್ವರ ಮೀಸಲು ಕ್ಷೇತ್ರದಲ್ಲಿ ರೇಖಾ ಆರ್ಯಗೆ 22996 ಹಾಗೂ ಎದುರಾಳಿ ಬಿಜೆಪಿಯ ಮೋಹನ್‌ರಾಮ್‌ ಆರ್ಯಗೆ 13091 ಮತಗಳು ಸಿಕ್ಕಿವೆ ಎಂದು ರಾಧಾ ರಾತುರಿ ಹೇಳಿದರು.
  • 70 ಸದಸ್ಯರಿರುವ ವಿದಾನ ಸಭೆಯಲ್ಲಿ ಕಾಂಗ್ರೆಸ್‌ ತನ್ನ ಬಲವನ್ನು 32ರಿಂದ 35(+1=36?) ಕ್ಕೇರಿಸಿಕೊಂಡಿದೆ. ವಿಧಾನಸಭೆಯಲ್ಲಿ ಬಿಜೆಪಿ ಸದಸ್ಯರ ಸಂಖ್ಯೆಯನ್ನು 30ರಿಂದ 28ಕ್ಕೆ ಕುಗ್ಗಿಸಿದೆ

ಇತ್ತೀಚನ ಬೆಳವಣಿಗೆ ೨೬-೩-೨೦೧೬

[ಬದಲಾಯಿಸಿ]
  • 20-3-2016 ಕಾಂಗ್ರೆಸ್'ನ 9 ಶಾಸಕರು ಬಂಡಾಯವೆದ್ದು ಬಿಜೆಪಿ ಬೆಂಬಲಕ್ಕೆ ನಿಂತಿರುವ ಹಿನ್ನೆಲೆಯಲ್ಲಿ ಮಾ.28ರ ಒಳಗೆ ವಿಶ್ವಾಸಮತ ಸಾಬೀತುಪಡಿಸುವಂತೆ ಸಿಎಂ ಹರೀಶ್ ರಾವತ್ಗೆ ರಾಜ್ಯಪಾಲ ಕೆ.ಕೆ.ಪಾಲ್ ಸೂಚಿಸಿದ್ದಾರೆ. ಅಟಾರ್ನಿ ಜನರಲ್ ಉಮಾಕಾಂತ್ ಉನಿಯಾಲ್ ಮತ್ತು ಬಂಡಾಯ ಸಚಿವ ಹರಕ್ ಸಿಂಗ್ ರಾವತ್ರನ್ನು ಸಿಎಂ ವಜಾಗೊಳಿಸಿದ್ದಾರೆ. []
  • 27-3-2016 ಮುಖ್ಯಮಂತ್ರಿ ಹರೀಶ್‌ ರಾವತ್ ಅವರು ಸೋಮವಾರ ವಿಶ್ವಾಸಮತ ಯಾಚಿಸುವುದಕ್ಕೂ ಮುನ್ನ ವಿಧಾನಸಭಾ ಸ್ಪೀಕರ್‌ ಗೋವಿಂದ್‌ ಸಿಂಗ್ ಕುಂಜ್ವಾಲ್‌ ಅವರು ಒಂಬತ್ತು ಬಂಡಾಯ ಶಾಸಕರನ್ನು ಅನರ್ಹಗೊಳಿಸಿದರು(ಪಕ್ಷಾಂತರ ವಿರೋಧಿ ಕಾನೂನು). ರಾಜ್ಯಪಾಲ ಕೆ.ಕೆ.ಪಾಲ್‌ ಅವರು ರಾಜ್ಯದ ರಾಜಕೀಯ ಪರಿಸ್ಥಿತಿ ಕುರಿತು ವರದಿ ಸಲ್ಲಿಸಿದ ಆಧಾರದಲ್ಲಿ ಕೇಂದ್ರ ಸಂಪುಟ ಸಭೆ ಸೇರಿ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರುವ ಬಗ್ಗೆ ಚರ್ಚೆ ನಡೆಸಿದೆ. []

ದಿ.೨೬-೩-೨೦೧೬ರ ಸದಸ್ಯರ ಬಲಾಬಲ

[ಬದಲಾಯಿಸಿ]
30-12-2012 ರ ವಿಧಾನ ಸಭೆ ಚುನಾವಣೆ= ಒಟ್ಟು ಸ್ಥಾನಗಳು 70 -
ಕ್ರ.ಸಂ. ಪಕ್ಷದ ಹೆಸರು ಸದಸ್ಯಬಲ ನಾಯಕ
01. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (INC 36 ಹರೀಶ್ ರಾವತ್
02. ಭಾರತೀಯ ಜನತಾ ಪಕ್ಷ (ಬಿಜೆಪಿ 28 ಅಜಯ್ ಭಟ್
03. ಬಹುಜನ ಸಮಾಜ ಪಕ್ಷ (ಬಿಎಸ್ಪಿ) 02 02 ಹರಿ ದಾಸ್
೦4 ಉತ್ತರಾಖಂಡ್ ಕ್ರಾಂತಿ ದಳ (ಪಿ)(UKD (ಪಿ) 01 ಪ್ರೀತಮ್ ಸಿಂಗ್ ಪನ್ವಾರ್
೦5. ಪಕ್ಷೇತರರು 03 -
೦6. ಒಟ್ಟು 70
07 ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (INC) 36 36 - 9 ಬಂಡಾಯ = 27+3+2+1(ಇತರೆ) =33
೦6. ಒಟ್ಟು:70-9= ಉಳಿದ ಸದಸ್ಯ ಬಲ=61 ಕಾಂಗ್ರೆಸ್ (INC)27+3+2+1(ಇತರೆ) =33
07 ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (INC:36-> 61 36-9ಬಂಡಾಯ=27+3+2+1(ಇತರೆ) =33 / 61
ಉತ್ತರಾಖಂಡ್ ರಾಜ್ಯದ ಅಸ್ಥಿರತೆ ಬಗ್ಗೆ ರಾಜ್ಯಪಾಲ ಕೆಕೆ ಪಾಲ್ ಅವರ ವರದಿಗಳನ್ನು ಅನುಸರಿಸಿ, 2016 ಮಾರ್ಚ್ 27,ಭಾನುವಾರ ದಿಂದ ಜಾರಿಗೆ ಬರುವಂತೆ ಉತ್ತರಾಖಂಡ್ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೊಂಡಿದೆ.[]

ಹೈಕೋರ್ಟ್ ತೀರ್ಪು

[ಬದಲಾಯಿಸಿ]
  • 21-4-2016ರಂದು ಉತ್ತರಾಖಂಡದಲ್ಲಿ ಕೇಂದ್ರ ಸರ್ಕಾರ ವಿಧಿಸಿದ್ದ ರಾಷ್ಟ್ರಪತಿ ಆಳ್ವಿಕೆ ರದ್ದುಪಡಿಸಿರುವ ಉತ್ತರಾಖಂಡ ಹೈಕೋರ್ಟ್‌, ಏಪ್ರಿಲ್ 29ರಂದು ಹೊಸದಾಗಿ ಬಹುಮತ ಸಾಬೀತು ಪಡಿಸುವಂತೆ ಮುಖಂಡ ಹರೀಶ್ ರಾವತ್ ಅವರಿಗೆ ಗುರುವಾರ (21-4-2016) ಸೂಚಿಸಿದೆ. ರಾಷ್ಟ್ರಪತಿ ಆಳ್ವಿಕೆ ಪ್ರಶ್ನಿಸಿ ಕಾಂಗ್ರೆಸ್‌ ಮುಖಂಡ ಹರೀಶ್ ರಾವತ್ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಮುಖ್ಯನ್ಯಾಯಮೂರ್ತಿ ಕೆ.ಎಂ.ಜೋಸೆಫ್‌ ಹಾಗೂ ನ್ಯಾಯಮೂರ್ತಿ ವಿ.ಕೆ.ಬಿಸ್ಟ್‌ ಅವರಿದ್ದ ಪೀಠ ಸತತ ನಾಲ್ಕನೇ ದಿನವೂ ಮುಂದುವರೆಸಿ ತೀರ್ಪುನೀಡಿತು. ಉತ್ತರಾಖಂಡದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರುವಂಥ ಪರಿಸ್ಥಿತಿ ಇಲ್ಲದಿದ್ದರೂ ಕೇಂದ್ರ ಸರ್ಕಾರ ಉದ್ದೇಶ ಪೂರ್ವಕವಾಗಿ ಅದನ್ನು ಜಾರಿಗೊಳಿಸಿದೆ ಎಂದು ಪೀಠ ಅಭಿಪ್ರಾಯಪಟ್ಟಿತು.[]
  • ಸುಪ್ರೀಮ್'ಕೋರ್ಟಿನಲ್ಲಿ : 22/4/2016ರಾಷ್ಟ್ರಪತಿ ಆಳ್ವಿಕೆಯನ್ನು ರದ್ದುಪಡಿಸಿ ಉತ್ತರಾಖಂಡ ಹೈಕೋರ್ಟ್‌ ಗುರುವಾರ ನೀಡಿದ್ದ ಆದೇಶದ ವಿರುದ್ಧ ಕೇಂದ್ರ ಸರ್ಕಾರ ಶುಕ್ರವಾರ ಸುಪ್ರೀಂ ಕೋರ್ಟ್‌'ಗೆ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ದೀಪಕ್ ಮಿಶ್ರಾ ಹಾಗೂ ಶಿವಕೀರ್ತಿ ಸಿಂಗ್ ಅವರಿದ್ದ ಪೀಠ ನಡೆಸಿತು. ರಾಷ್ಟ್ರಪತಿ ಆಳ್ವಿಕೆಯನ್ನು ರದ್ದುಪಡಿಸಿದ್ದ ಉತ್ತರಾಖಂಡ ಹೈಕೋರ್ಟ್‌ ಆದೇಶಕ್ಕೆ ಸುಪ್ರೀಂ ಕೋರ್ಟ್‌ ಏಪ್ರಿಲ್ 27ರ ತನಕ ತಡೆ ನೀಡಿದೆ.[]
  • ದಿ.೨೭-೪-೨೦೧೬ ರಂದು ವಿಚಾರಣೆ ನಡೆಸಿ, ರಾಷ್ಟ್ರಪತಿ ಆಡಳಿತ ಉತ್ತರಾಖಂಡದಲ್ಲಿ ಮುಂದುವರೆಯುವುದು ಮತ್ತು ಮಾಜಿ ಮುಖ್ಯಮಂತ್ರಿ ಹರೀಶ್ ರಾವತ್ ಬಲಪರೀಕ್ಷೆ ಏಪ್ರಿಲ್ 29 ರಂದು ರಾಜ್ಯ ವಿಧಾನಸಭೆಯಲ್ಲಿ ನಡೆಯುವುದಿಲ್ಲ; ಎಂದು ಸುಪ್ರೀಂ ಕೋರ್ಟ್ ಹೇಳಿದೆ.
  • ಜಸ್ಟೀಸ್ ದೀಪಕ್ ಮಿಶ್ರಾ ಮತ್ತು ನ್ಯಾಯಮೂರ್ತಿ ಶಿವ ಕೀರ್ತಿ ಸಿಂಗ್ ಪೀಠ, ಕೇಂದ್ರಸರ್ಕಾರಕ್ಕೆ ಏಳು ಪ್ರಶ್ನೆಗಳನ್ನು ಮಂಡಿಸಿದರು, ಮತ್ತು 'ಸದನ ಪರೀಕ್ಷೆಯು ಸಮಸ್ಯೆಯನ್ನು ಪರಿಹರಿಸಲು ಉತ್ತಮ ಆಯ್ಕೆಯಾಗಿದೆ' ಎಂದು ಹೇಳಿದರು. ಮೊಕದ್ದಮೆ ಪುನಹ ಮೇ 3 ರಂದು ಮತ್ತೆ ವಿಚಾರಣೆಗೆ ಬರಲಿದೆ.[]
  • ದಿ.೩-೫-೨೦೧೬ ರಂದು ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಿರುವ ಪ್ರಕರಣದ ವಿಚಾರಣೆ ಮುಂದುವರೆಸಿದ ಸುಪ್ರೀಂ ಕೋರ್ಟ್, ಹೊರಹಾಕಲಾಗಿರುವ ಮುಖ್ಯಮಂತ್ರಿ ಹರೀಶ್ ರಾವತ್ ಅವರು ಬಹುಮತ ಸಾಬೀತು ಪಡಿಸಲು ಅವಕಾಶ ನೀಡುವ ಸಾಧ್ಯತೆಯನ್ನು ಪರಿಗಣಿಸುವಂತೆ ಕೇಂದ್ರ ಸರ್ಕಾರಕ್ಕೆ ಮಂಗಳವಾರ ಕೋರ್ಟ್ ಸೂಚಿಸಿದೆ.
  • ನ್ಯಾಯಾಧೀಶ ದೀಪಕ್ ಮಿಶ್ರಾ ಮುಖಂಡತ್ವದ ಅಪೆಕ್ಸ್ ನ್ಯಾಯಾಲಯ ಪೀಠ, ಇದರ ಬಗ್ಗೆ ಸರ್ಕಾರದಿಂದ ಸೂಚನೆ ಪಡೆದು ಕೋರ್ಟ್ ಗೆ ತಿಳಿಸುವಂತೆ ಅಟಾರ್ನಿ ಜನರಲ್ ಮುಕುಲ್ ರೋಹಟ್ಗಿ ಅವರಿಗೆ ಸೂಚಿಸಿದೆ. ಪರ್ವತ ರಾಜ್ಯದಲ್ಲಿ ಎದ್ದಿರುವ ರಾಜಕೀಯ ಅನಿಶ್ಚಿತತೆಯನ್ನು ಬಗೆಹರಿಸುವಂತೆ ಈ ಹಿಂದೆ ಕೂಡ ಕೋರ್ಟ್ ಹೇಳಿತ್ತು ಎಂದು ಅಭಿಪ್ರಾಯ ಪಟ್ಟಿದೆ.[೧೦]
  • ದಿ.೬-೫-೨೦೧೬ ರಂದು, ರಾಷ್ಟ್ರಪತಿ ಆಡಳಿತ ಜಾರಿಯಲ್ಲಿರುವ ಉತ್ತರಾಖಂಡ ವಿಧಾನಸಭೆಯಲ್ಲಿ ಬಹುಮತ ಸಾಬೀತಿಗೆ ಸುಪ್ರೀಂ ಕೋರ್ಟ್‌ ಸೂಚನೆಯಂತೆ ಕೇಂದ್ರ ಸರ್ಕಾರ ಶುಕ್ರವಾರ ಸಮ್ಮತಿ ಸೂಚಿಸಿದೆ.
  • ಮೇ.10 ರಂದು ಬಹುಮತ ಸಾಬೀತು ಪ್ರಕ್ರಿಯೆ ನಡೆಯಲಿದೆ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ. ಇದೇ ವೇಳೆ ಅಟಾರ್ನಿ ಜನರಲ್ ಮುಕುಲ್ ರೋಹಟ್ಗಿ ಅವರು ವೀಕ್ಷಕರನ್ನು ನೇಮಕ ಮಾಡುವಂತೆ ಕೋರ್ಟ್‌ಗೆ ಮನವಿ ಮಾಡಿದರು. ವಿಶ್ವಾಸಮತ ಯಾಚನೆ ಸಂದರ್ಭದಲ್ಲಿ ಅನರ್ಹಗೊಂಡ ಕಾಂಗ್ರೆಸ್ ನ 9 ಶಾಸಕರು ಮತ ಚಲಾಯಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ.[೧೧]
  • ಉತ್ತರಾಖಂಡ ಬಿಕ್ಕಟ್ಟು ಸೋಮವಾರ ಹೊಸ ತಿರುವು ಪಡೆದಿದ್ದು,‌ ಅನರ್ಹ 9 ಕಾಂಗ್ರೆಸ್ ಶಾಸಕರ ಅರ್ಜಿಯನ್ನು ಮಧ್ಯಾಹ್ನ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಒಪ್ಪಿಕೊಂಡಿದೆ.
  • 2 ಗಂಟೆಗೆ ವಿಚಾರಣೆ: ಈ ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ಮಧ್ಯಾಹ್ನ 2 ಗಂಟೆಗೆ ಕೈಗೆತ್ತಿಕೊಳ್ಳಲಿದೆ.
  • ೮-೫-೨೦೧೪;ಸ್ಪೀಕರ್ ಗೋವಿಂದ್ ಸಿಂಗ್‌ ಕುಂಜ್ವಾಲ್‌ ನೀಡಿದ್ದ ಅಮಾನತು ಆದೇಶದ ವಿರುದ್ಧ ಶಾಸಕರು ಸಲ್ಲಿಸಿದ್ದ ಅರ್ಜಿಯನ್ನು ಉತ್ತರಾಖಂಡ ಹೈಕೋರ್ಟ್‌ ಬೆಳಿಗ್ಗೆ ನಿರಾಕರಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
  • ೯-೫-೨೦೧೪;ತಮ್ಮ ವಿರುದ್ಧದ ಅನರ್ಹತೆ ಆದೇಶಕ್ಕೆ ತಡೆಯಾಜ್ಞೆ ನೀಡುವಂತೆ ಕೋರಿ ಉತ್ತರಾಖಂಡದ ಒಂಬತ್ತು ಶಾಸಕರು ಸಲ್ಲಿಸಿದ್ದ ಅರ್ಜಿ ಸಂಬಂಧ ಮಧ್ಯಂತರ ಆದೇಶ ನೀಡಲು ಸುಪ್ರೀಂಕೋರ್ಟ್ ಸೋಮವಾರ ನಿರಾಕರಿಸಿದೆ. ಇದರಿಂದ ಉತ್ತರಾಖಂಡ ವಿಧಾನಸಭೆಯಲ್ಲಿ ಮಂಗಳವಾರ(ಮೇ 10) ನಡೆಯಲಿರುವ ಬಹುಮತ ಸಾಬೀತು ಪರೀಕ್ಷೆಯ ವೇಳೆ ಮತ ಹಾಕುವ ಅಧಿಕಾರವನ್ನು ಅವರು ಕಳೆದುಕೊಂಡಿದ್ದಾರೆ.ಸುಪ್ರೀಂ ಕೋರ್ಟ್'ನಿಂದ ಅನರ್ಹಗೊಂಡ ಉತ್ತರಾಖಂಡ್ ಶಾಸಕರಿಗೆ ಯಾವುದೇ ಪರಿಹಾರವಿಲ್ಲ.[೧೨][೧೩]

ಬಹುಮತ ಸಾಬೀತು

[ಬದಲಾಯಿಸಿ]
  • ಮೇ ೧೦,೨೦೧೬ ರಂದು ಸುಪ್ರೀಂಕೋರ್ಟ್ ಆದೇಶದಂತೆ ಬಹುಮತ ಸಾಬೀತು ಪರೀಕ್ಷೆ ನೆಡೆದು, ಮಾಧ್ಯಮ ಮೂಲಗಳ ಪ್ರಕಾರ ಕಾಂಗ್ರೆಸ್ 33 ಮತಗಳನ್ನು ಪಡೆದಿದೆ, ನಿರೀಕ್ಷಿತ ಟೈ ಸಂದರ್ಭದಲ್ಲಿ ಮಾತ್ರ 31 (62). ವಿಧಾನಸಭೆ ಸ್ಪೀಕರ್ ಮತ ಹಾಕುವ ಅಗತ್ಯವಿದೆ. ಆದರೆ ಕಾಂಗ್ರೆಸ್ ಎರಡು ಮತ ಹೆಚ್ಚು (33)ಗಳಿಸಿದೆ (ಬಜೆಪಿಗೆ 28 ಮತ). ಆದರೆ ೧೧ ಮೇ ಯಂದು ಫಲಿತಾಂಶವನ್ನು ಸುಪ್ರೀಂಕೋರ್ಟ್ ಘೋಷಣೆ ಮಾಡಬೇಕಾಗಿದೆ. [೧೪]
  • ವಿಧಾನಸಭೆಯಲ್ಲಿ ಹರೀಶ್ ರಾವತ್ ಅವರು ವಿಶ್ವಾಸ ಮತ ಗೆದ್ದಿದ್ದಾರೆ ಎಂದು ಕೇಂದ್ರ ಸರ್ಕಾರ ಬುಧವಾರ ಒಪ್ಪಿಕೊಂಡಿದೆ. ಈ ವಿಷಯವನ್ನು ಸುಪ್ರೀಂ ಕೋರ್ಟ್‌'ಗೆ ತಿಳಿಸಿರುವ ಅಟಾರ್ನಿ ಜನರಲ್ ಮುಕುಲ್ ರೋಹಟಗಿ, ಉತ್ತರಾಖಂಡದಲ್ಲಿ ಹೇರಲಾಗಿದ್ದ ರಾಷ್ಟ್ರಪತಿ ಆಳ್ವಿಕೆಯನ್ನು ಕೇಂದ್ರ ಸರ್ಕಾರ ಹಿಂಪಡೆಯಲಿ ಎಂದು ತಿಳಿಸಿದ್ದಾರೆ. ಮಂಗಳವಾರ ನಡೆದ ಬಹುಮತ ಪರೀಕ್ಷೆಯಲ್ಲಿ 61 ಶಾಸಕರ ಪೈಕಿ ರಾವತ್ ಅವರಿಗೆ 33 ಸದಸ್ಯರು ಬೆಂಬಲಿಸಿದ್ದಾರೆ ಎಂದು ಸುಪ್ರೀಂಕೋರ್ಟ್‌ ಪ್ರಕಟಿಸಿದೆ. ರಾಷ್ಟ್ರಪತಿ ಆಳ್ವಿಕೆ ಹಿಂಪಡೆದ ಕೂಡಲೇ ರಾವತ್ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಬಹುದು ಎಂದು ನ್ಯಾಯಾಲಯ ಹೇಳಿದೆ. ಉಚ್ಚ ನ್ಯಾಯಾಲಯದ ಆದೇಶದ ಸ್ವಲ್ಪ ಕಾಲದ ನಂತರ, ಕೇಂದ್ರ, ಪ್ರಣಬ್ ಮುಖರ್ಜಿ ಅವರಿಗೆ ರಾಷ್ಟ್ರಪತಿ ಆಡಳಿತ ವಾಪಾಸಾತಿಗೆ ಶಿಫಾರಸು ಮಾಡಿದೆ.
  • ಒಂಬತ್ತು ಬಂಡಾಯ ಶಾಸಕರು: ವಿಜಯ್ ಬಹುಗುಣ, ಹರಾಕ್ ಸಿಂಗ್ ರಾವತ್, ಕನ್ವರ್ ಪ್ರಣವ್ ಸಿಂಗ್ 'ಚಾಂಪಿಯನ್', ಶೈಲಾ ರಾಣಿ ರಾವತ್, ಉಮೇಶ್ ಶರ್ಮಾ 'kau', ಶೈಲೇಂದ್ರ ಮೋಹನ್ ಸಿಂಘಾಲ್, ಅಮೃತಾ ರಾವತ್, ಸುಬೋಧ್ ಉನಿಯಾಲ್ ಪ್ರದೀಪ್ ಬಾತ್ರಾ; ಇವರನ್ನು ಮಂಗಳವಾರ ನಡೆದ ಬಹುಮತ ಪರೀಕ್ಷೆಯಲ್ಲಿ ಭಾಗವಹಿಸದಂತೆ ಅನರ್ಹಗೊಳಿಸಲಾಯಿತು.[೧೫]


5 ರಾಜ್ಯಗಳ ವಿಧಾನಸಭಾ ಚುನಾವಣೆ

[ಬದಲಾಯಿಸಿ]
  • 2017ರಲ್ಲಿ ಭಾರತದ 5 ರಾಜ್ಯಗಳಾದ ಉತ್ತರಪ್ರದೇಶ, ಪಂಜಾಬ್, ಗೋವಾ, ಉತ್ತರಾಖಂಡ ಮತ್ತು ಮಣಿಪುರಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ ಫೆಬ್ರವರಿ 4 ರಿಂದ ಮಾರ್ಚ್ 11ರ ತನಕ ಚುನಾವಣೆ ನಡೆಯಲಿದೆ. ಜನವರಿ 04 ರಂದು ಐದು ರಾಜ್ಯಗಳ ವಿಧಾನಸಭೆ ಚುನಾವಣೆ ದಿನಾಂಕವನ್ನು ಕೇಂದ್ರ ಚುನಾವಣಾ ಆಯೋಗ 4-1-2017.ಬುಧವಾರ ಪ್ರಕಟಿಸಿದೆ.
  • ಈ 5 ರಾಜ್ಯಗಳ ಶಾಸಕಾಂಗ ಅಸೆಂಬ್ಲಿಗಳ ಅವಧಿ -ಗೋವಾ 18 ಮಾರ್ಚ್, 2017; ಮಣಿಪುರ: 18 ಮಾರ್ಚ್, 2017; ಪಂಜಾಬ್: 18 ಮಾರ್ಚ್, 2017; ಉತ್ತರಾಖಂಡ್: 26 ಮಾರ್ಚ್, 2017; ಯುಪಿ: 27 ಮೇ, 2017; ರಂದು ಮುಕ್ತಾಯಗೊಳ್ಳುತ್ತದೆ.
  • ಫೆಬ್ರವರಿ 15(ಬುಧವಾರ)ರಂದು ಮತದಾನ.
  • 70 ಅಸೆಂಬ್ಲಿ ಕ್ಷೇತ್ರ.
  • ಈಗಿನ ಅಸೆಂಬ್ಲಿ ಬಲಾಬಲ: ಕಾಂಗ್ರೆಸ್ (32), ಬಿಜೆಪಿ (31), ಬಿಎಸ್ ಪಿ(3), ಯುಕೆಡಿ (1), ಇತರ (3)
  • ಫಲಿತಾಂಶದ ದಿನಾಂಕ : ಮಾರ್ಚ್ 11, 2017 (ಶನಿವಾರ)

[೧೬]

ಮತದಾರರು ೨೦೧೭

[ಬದಲಾಯಿಸಿ]
  • ಈ ವರ್ಷ ಉತ್ತರಾಖಂಡದ ರಾಜ್ಯದ ಚುನಾವಣಾ ರೋಲ್‍ನಲ್ಲಿ , ಮತದಾರರ ಸಂಖ್ಯೆ 38,87 ಲಕ್ಷ ಪುರುಷರು ಮತ್ತು 35,23 ಲಕ್ಷ ಮಹಿಳಾ ಮತದಾರರನ್ನು ಹೊಂದಿತ್ತು. ಇದರಲ್ಲಿ ತಮ್ಮ ಮತ ಚಲಾಯಿಸಿದವರು 24,21 ಲಕ್ಷ ಪುರುಷರು ಮತ್ತು 24,49 ಲಕ್ಷ ಮಹಿಳೆಯರು. [೧೭]

ಉತ್ತರಾಖಂಡದಲ್ಲಿ ಚುನಾವಣೆ ೨೦೧೭

[ಬದಲಾಯಿಸಿ]
  • ಫೆಬ್ರವರಿ 15(ಬುಧವಾರ)ರಂದು ಮತದಾನ.
  • +70 ಅಸೆಂಬ್ಲಿ ಕ್ಷೇತ್ರ.
  • ಈಗಿನ ಅಸೆಂಬ್ಲಿ ಬಲಾಬಲ: ಕಾಂಗ್ರೆಸ್ (32), ಬಿಜೆಪಿ (31), ಬಿಎಸ್ ಪಿ(3), ಯುಕೆಡಿ (1), ಇತರೆ (3)
  • ಫಲಿತಾಂಶದ ದಿನಾಂಕ : ಮಾರ್ಚ್ 11, 2017 (ಶನಿವಾರ)
  • ವಿಧಾನಸಭಾ ಚುನಾವಣೆ: ಉತ್ತರಾಖಂಡ್ ಚುನಾವಣೆಯಲ್ಲಿ ದಾಖಲೆಯ ಮತದಾನ 68%
  • *ಈ ವರ್ಷ ಉತ್ತರಾಖಂಡದ ರಾಜ್ಯದ ಚುನಾವಣಾ ರೋಲ್‍ನಲ್ಲಿ , ಮತದಾರರ ಸಂಖ್ಯೆ 38,87 ಲಕ್ಷ ಪುರುಷರು ಮತ್ತು 35,23 ಲಕ್ಷ ಮಹಿಳಾ ಮತದಾರರನ್ನು ಹೊಂದಿತ್ತು. ಇದರಲ್ಲಿ ತಮ್ಮ ಮತ ಚಲಾಯಿಸಿದವರು 24,21 ಲಕ್ಷ ಪುರುಷರು ಮತ್ತು 24,49 ಲಕ್ಷ ಮಹಿಳೆಯರು. [೧೭]

ಫಲಿತಾಂಶ

[ಬದಲಾಯಿಸಿ]
ರಾಜ್ಯ ಬಿಜೆಪಿ ಕಾಂಗ್ರೆಸ್ ಬಿಎಸ್.ಪಿ ಇತರೆ
ಉತ್ತರಾಖಂಡ್ (70) ಬಿಜೆಪಿ 57 ಕಾಂ; 11 2

[೧೮] [೧೯]

ತ್ರಿವೇಂದ್ರ ಸಿಂಗ್ ರಾವತ್ ಉತ್ತರಾಖಂಡ್ ಮುಖ್ಯಮಂತ್ರಿ

[ಬದಲಾಯಿಸಿ]
  • ಆರ್‍ಎಸ್ಎಸ್ ಮಾಜಿ ಪ್ರಚಾರಕ್ ತ್ರಿವೇಂದ್ರ ಸಿಂಗ್ ರಾವತ್ ಅವರನ್ನು ಉತ್ತರಾಖಂಡ್ ಮುಖ್ಯಮಂತ್ರಿ ಸ್ಥಾನಕ್ಕೆ ಆಯ್ಕೆ ಮಾಡಲಾಗಿದೆ ಎಂದು ಬಿಜೆಪಿ ಮೂಲಗಳಿಂದ ತಿಳಿದು ಬಂದಿದೆ. ತ್ರಿವೇಂದ್ರ ಅವರನ್ನು ಆಯ್ಕೆ ಮಾಡಿರುವ ಬಗ್ಗೆ ನಿನ್ನೆ ರಾತ್ರಿ ಅವರಿಗೆ ಮಾಹಿತಿ ನೀಡಿದ್ದು, ಶುಕ್ರವಾರ ಶಾಸಕಾಂಗ ಸಭೆಯಲ್ಲಿ ಅವರನ್ನು ಅಧಿಕೃತವಾಗಿ ಆಯ್ಕೆ ಮಾಡಲಾಗುವುದು ಎಂದು ಮೂಲಗಳು ಹೇಳಿವೆ.
  • ಅವರನ್ನು ಅಧಿಕೃತವಾಗಿ ಆಯ್ಕೆ ಮಾಡಲಾಗಿದೆ.
  • ಉತ್ತರಾಖಂಡದಲ್ಲಿ ಬಿಜೆಪಿ ಮೂರನೆಯ ಎರಡರಷ್ಟು ಸ್ಥಾನಗಳನ್ನು ಪಡೆದಿರುವುದು ಇದೇ ಮೊದಲು. ಮುಖ್ಯಮಂತ್ರಿ ಸ್ಥಾನಕ್ಕೆ ಬಿಜೆಪಿಯ ತ್ರಿವೇಂದ್ರ ಸಿಂಗ್ ರಾವತ್, ಪ್ರಕಾಶ್ ಪಂತ್ ಮತ್ತು ಕಾಂಗ್ರೆಸ್ಸಿನಿಂದ ಬಿಜೆಪಿಗೆ ಬಂದಿರುವ ಸತ್ಪಾಲ್ ಮಹಾರಾಜ್ ಅವರ ಹೆಸರು ಕೇಳಿ ಬಂದಿತ್ತು. ಇಂದು ನಡೆಯಲಿರುವ ಸಭೆಯಲ್ಲಿ ಕೇಂದ್ರ ಸಚಿವ ನರೇಂದ್ರ ಸಿಂಗ್ ತೋಮರ್ ಮತ್ತು ಬಿಜೆಪಿ ಪ್ರಧಾನ ಕಾರ್ಯದರ್ಶಿ ,ಸರೋಜ್ ಪಾಂಡೆ, ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್, ಉತ್ತರಾಖಂಡ್ ರಾಜ್ಯದ ಉಸ್ತುವಾರಿ ವಹಿಸಿರುವ ಶ್ಯಾಮ್ ಜಾಜು ಭಾಗವಹಿಸಿದ್ದಾರೆ.
  • 2017 ಮಾರ್ಚ್ 18 ರಂದು ಡೆಹ್ರಾಡೂನ್‍ನಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದರು:[೨೦][೨೧]

ಉಲ್ಲೇಖಗಳು

[ಬದಲಾಯಿಸಿ]
  1. Define Uttarakhand at Dictionary.com".Dictionary.com.
  2. "About Us". Government of Uttarakhand. Retrieved 17 July 2012.
  3. ೩.೦ ೩.೧ http://www.hindustantimes.com/india/president-s-rule-imposed-in-uttarakhand-amid-political-crisis-cong-fumes/story-ksKOtAvVsbuqrWBBMfSiTP.html
  4. http://legislativebodiesinindia.nic.in/uttranchal.htm
  5. http://m.dailyhunt.in/news/india/kannada/vijayavani-epaper-vijvani/patanadatta-uttaraakhanda-kaangres-sarkaara-newsid-51070176
  6. http://www.hindustantimes.com/india/uttarakhand-crisis-rawat-condemns-modi-govt-sec-144-imposed-in-doon/story-w6u8ssLFOvtYLbmp0FCcjO.html
  7. http://www.hindustantimes.com/india/uttarakhand-high-court-sets-aside-president-s-rule/story-6m23Hw6IwXedT3dOiK1KHK.html
  8. http://www.hindustantimes.com/india/sc-stays-uttarakhand-hc-order-which-set-aside-president-s-rule-in-state/story-eDJgkrLFdzLa5GBVeeeczK.html
  9. 'SC says Prez rule to continue in Uttarakhand, no floor test on Friday' Hindustan Times, New Delhi|Updated: Apr 27, 2016
  10. [ಕನ್ನಡ ಪ್ರಭ ೩-೫-೨೦೧೬)
  11. ದಿ.೬-೫-೨೦೧೬ http://www.prajavani.net/
  12. http://www.prajavani.net/
  13. http://www.hindustantimes.com/india/
  14. http://www.hindustantimes.com/india/live-congress-claims-victory-in-uttarakhand-floor-test-result-tomorrow/story-aWVIASDBazI7H0aq9XoW4N.html
  15. X:೧೧-೫-೨೦೧೬:Harish Rawat back as Uttarakhand CM[೧]
  16. Assembly elections 2017:
  17. ೧೭.೦ ೧೭.೧ More women vote than men in all 13 districts; Kautilya Singh | TNN | Updated: Feb 24, 2017,
  18. ಒಲಿದ ‘ಉತ್ತರ’ದ ಜನಾದೇಶ;ಏಜೆನ್ಸಿಸ್‌11 Mar, 2017[ಶಾಶ್ವತವಾಗಿ ಮಡಿದ ಕೊಂಡಿ]
  19. Mar 11, 2017, 05.37 PM ISTNEWS;; ELECTIONS 2017 ;RESULTS;ELECTION RESULTS at 5.45pm
  20. ಉತ್ತರಾಖಂಡ್ ಮುಖ್ಯಮಂತ್ರಿ ಸ್ಥಾನಕ್ಕೆ ತ್ರಿವೇಂದ್ರ ಸಿಂಗ್ ಆಯ್ಕೆ
  21. ಡೆಹ್ರಾಡೂನ್‌ ನಗರದ ಪೆರೇಡ್‌ ಗ್ರೌಂಡ್‌ನಲ್ಲಿ ಮಧ್ಯಾಹ್ನ ನಡೆದ ಸಮಾರಂಭದಲ್ಲಿ ರಾಜ್ಯಪಾಲ ಕೃಷ್ಟಕಾಂತ ಪೌಲ್‌ ಅವರಿಂದ ರಾಜ್ಯದ 8 ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಉಲ್ಲೇಖ

[ಬದಲಾಯಿಸಿ]

.