ವಿಷಯಕ್ಕೆ ಹೋಗು

ಉತ್ತರಾಖಂಡ ವಿಧಾನಸಭೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Uttarakhand Legislative Assembly election, 2012
ಭಾರತ
2007 ←
30 ಜನವರಿ 2012 (2012-01-30) → 2017

70 assembly constituencies
ಬಹುಮತಕ್ಕೆ36 ಸ್ಥಾನಗಳು ಬೇಕಾಗಿವೆ
  ಬಹುತೇಕ ಪಕ್ಷ ಅಲ್ಪಸಂಖ್ಯಾತ ಪಕ್ಷ
 
ನಾಯಕ Vijay Bahuguna B. C. Khanduri
ಪಾರ್ಟಿ ಕಾಂಗ್ರೆಸ್ ಬಿಜೆಪಿ
Alliance Post-poll alliance with PDF none
Leader since 2012 2007
ನಾಯಕನ ಸೀಟ್ Sitarganj (by-election) Kotdwar (lost)
Last election 21 35
ಸ್ಥಾನಗಳನ್ನು ಗೆದ್ದಿದ್ದಾರೆ 32 31
ಸೀಟ್ ಬದಲಾವಣೆ Increase 11 Decrease 4
Percentage 33.79% 33.13%

Chief Minister (ಚುನಾವಣೆಗೆ ಮುನ್ನ)

B. C. Khanduri
ಬಿಜೆಪಿ

ಚುನಾಯಿತ Chief Minister

Vijay Bahuguna
ಕಾಂಗ್ರೆಸ್

ಮೊದಲ ವಿಧಾನ ಸಭೆ[ಬದಲಾಯಿಸಿ]

 • ಸೆಪ್ಟೆಂಬರ್ 1998 24 ಉತ್ತರ ಪ್ರದೇಶ ವಿಧಾನಸಭೆ ಮತ್ತು ಉತ್ತರ ಪ್ರದೇಶ ವಿಧಾನ ಪರಿಷತ್ ಹೊಸ ರಾಜ್ಯ ರಚಿಸುವ ಪ್ರಕ್ರಿಯೆ ಆರಂಭಿಸಿದರು. ಇದು ಉತ್ತರ ಪ್ರದೇಶ ಪುನಸ್ಸಂಘಟನಾ ಕಾಯಿದೆ ಜಾರಿಗೆ ಕಾರಣವಾಯಿತು. ಎರಡು ವರ್ಷಗಳ ನಂತರ ಭಾರತದ ಸಂಸತ್ತು ಉತ್ತರ ಪ್ರದೇಶ ಪುನಸ್ಸಂಘಟನಾ ಕಾಯಿದೆ, 2000 ಜಾರಿಗೆ ಅನುಮೋದನೆ ನೀಡಿತು ಮತ್ತು ಇದರಿಂದಾಗಿ 9,ನವೆಂಬರ್ 2000 ದಂದು ಉತ್ತರಾಖಂಡ್ ಭಾರತ ಗಣರಾಜ್ಯದ 29ನೇ ರಾಜ್ಯವಾಯಿತು.[೧]
 • ಉತ್ತರಾಖಂಡ್ ಶಾಸನಸಭೆಯು*ಸೆಪ್ಟೆಂಬರ್ 1998 24 ಉತ್ತರ ಪ್ರದೇಶ ವಿಧಾನಸಭೆ ಮತ್ತು ಉತ್ತರ ಪ್ರದೇಶ ವಿಧಾನ ಪರಿಷತ್ ಹೊಸ ರಾಜ್ಯದ ರಚಿಸುವ ಪ್ರಕ್ರಿಯೆ ಆರಂಭಿಸಿದರು. ಇದು ಉತ್ತರ ಪ್ರದೇಶ ಪುನಸ್ಸಂಘಟನಾ ಕಾಯಿದೆ ಜಾರಿಗೆ ಕಾರಣವಾಯಿತು. ಎರಡು ವರ್ಷಗಳ ನಂತರ ಭಾರತದ ಸಂಸತ್ತು ಉತ್ತರ ಪ್ರದೇಶ ಪುನಸ್ಸಂಘಟನಾ ಕಾಯಿದೆ, 2000 ಜಾರಿಗೆ ಅನುಮೋದನೆ ನೀಡಿತು ಮತ್ತು ಇದರಿಂದಾಗಿ 9,ನವೆಂಬರ್ 2000 ದಂದು ಉತ್ತರಾಖಂಡ್ ಭಾರತ ಗಣರಾಜ್ಯದ 29ನೇ ರಾಜ್ಯವಾಯಿತು.[೨] ಉತ್ತರಾಖಂಡ್ ವಿಧಾನಸಭೆ ಎಂದೂ ಹೆಸರಾಗಿದೆ, (ಹಿಂದಿ: उत्तराखण्ड विधानसभा) ಉತ್ತರಾಖಂಡ್, ಭಾರತದ 29 ನೆಯ ರಾಜ್ಯ. ಇದು ಒಂದು ಏಕಸಭೆಯ ಆಡಳಿತ ಮತ್ತು ಕಾನೂನು ಕೈಗೊಳ್ಳುವ ಅಂಗವಾಗಿದೆ. ಡೆಹ್ರಾಡೂನ್ ಉತ್ತರಾಖಂಡ ರಾಜ್ಯದ ರಾಜಧಾನಿ. ಉತ್ತರಾಖಂಡ್ ವಿಧಾನಸಭೆ (ಲೆಜಿಸ್ಲೇಟಿವ್ ಅಸೆಂಬ್ಲಿ)ಯಲ್ಲಿ 71 ಶಾಸನಸಭಾ ಸದಸ್ಯರು(MLA) ಇದ್ದಾರೆ.
 • ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಫೆಬ್ರವರಿ 2002ರ ಚುನಾವಣೆಯಲ್ಲಿ 70 ಸ್ಥಾನದ ಶಾಸನಸಭೆಯಲ್ಲಿ 36 ಸ್ಥಾನಗಳನ್ನು ಪಡೆಯುವುದರೊಂದಿಗೆ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಉತ್ತರಾಖಂಡ್ ರಾಜ್ಯ ವಿಧಾನಸಭೆ ಚುನಾವಣೆ, 2002 ರಾಜ್ಯದ ಮೊದಲ ವಿಧಾನಸಭೆ. ಈ ವಿಧಾನಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ 19 ಸ್ಥಾನಗಳನ್ನು ಹೊಂದಿರುವ ಅಧಿಕೃತ ವಿರೋಧ ಆಯಿತು.[೩]

ಉತ್ತರಾಖಂಡ ವಿಧಾನಸಭೆ ಚುನಾವನೆ ೨೦೦೨[ಬದಲಾಯಿಸಿ]

ಶ್ರೇಣಿ ಪಕ್ಷ ಸ್ಪರ್ಧಿಸಿದ್ದಸ್ಥಾನ ಗೆದ್ದಸ್ಥಾನ ಮತಗಳು % ಸ್ಥಾನಗಳ %
Seats Contested
1 ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (INC(INC) 70 36 26.91% 26.91%
2 ಭಾರತೀಯ ಜನತಾ ಪಕ್ಷ (ಬಿಜೆಪಿ)(BJP) 69 19 25.45% 25.81%
3 ಬಹುಜನ ಸಮಾಜ ಪಕ್ಷ (ಬಿಎಸ್ಪಿ)(BSP) 68 7 10.93% 11.20%
4 ಉತ್ತರಾಖಂಡ್ ಕ್ರಾಂತಿ ದಳ (UKD)(UKD) 62 4 5.49% 6.36%
5 ಪಕ್ಷೇತರರು 70 4 - -
ಒಟ್ಟು 70

ಉತ್ತರಾಖಂಡ ವಿಧಾನಸಭೆ ಚುನಾವಣೆ ೨೦೦೭[ಬದಲಾಯಿಸಿ]

 • ಉತ್ತರಾಖಂಡ್ ವಿಧಾನಸಭೆಯ ಚುನಾವಣೆ 2007, ರಾಜ್ಯದ ಎರಡನೇ ವಿಧಾನಸಭೆ (ವಿಧಾನಸಭೆ). ಚುನಾವಣೆಗಳು ಫೆಬ್ರವರಿ 2007, 21ರಂದು ನಡೆದವು.
Rankಶ್ರೇಣಿ Partyಪಕ್ಷ Seats Contestedಸ್ಪರ್ಧಿಸಿದ್ದಸ್ಥಾನ Seats Wonಗೆದ್ದಸ್ಥಾನ
1 ಭಾರತೀಯ ಜನತಾ ಪಕ್ಷ (ಬಿಜೆಪಿ) (BJP) 70 35
4 ಉತ್ತರಾಖಂಡ್ ಕ್ರಾಂತಿ ದಳ (UKD) (UKD) 61 3
4 ಪಕ್ಷೇತರರು 70 3
2 ಭಾ.ರಾ.ಕಾಂಗ್ರೆಸ್ (INC) 70 21
3 ಬಹುಜನ ಸಮಾಜ ಪಕ್ಷ (ಬಿಎಸ್ಪಿ)(BSP) 70 8
ಒಟ್ಟು 70

ಮುಖ್ಯ ಸ್ಥಾನಗಳು[ಬದಲಾಯಿಸಿ]

 • ಸ್ಪೀಕರ್: ಹರಬನ್ಸ್ ಕಪೂರ್
 • ಉಪ ಸ್ಪೀಕರ್: ಖಾಲಿ
 • ಬಿ ಸಿ ಖಂಡೂರಿ: ಸಭಾನಾಯಕ/ ಮುಖ್ಯ ಮಂತ್ರಿ
 • ವಿರೋಧ ಪಕ್ಷದ ನಾಯಕ: ಹರಕ್ ಸಿಂಗ್ ರಾವತ್
 • ಪ್ರಧಾನ ಕಾರ್ಯದರ್ಶಿ: ಮಹೇಶ್ ಚಂದ್ರ [೪]

ಉತ್ತರಾಖಂಡ ವಿಧಾನಸಭೆ ಚುನಾವಣೆ ೨೦೧೨[ಬದಲಾಯಿಸಿ]

ಉತ್ತರಾಖಂಡದಲ್ಲಿ ಚುನಾವಣೆಗಳು

ಉತ್ತರಾಖಂಡದಲ್ಲಿ ಚುನಾವಣೆ ೨೦೧೭[ಬದಲಾಯಿಸಿ]

 • ಫೆಬ್ರವರಿ 15(ಬುಧವಾರ)ರಂದು ಮತದಾನ.
 • +70 ಅಸೆಂಬ್ಲಿ ಕ್ಷೇತ್ರ.
 • ಈಗಿನ ಅಸೆಂಬ್ಲಿ ಬಲಾಬಲ: ಕಾಂಗ್ರೆಸ್ (32), ಬಿಜೆಪಿ (31), ಬಿಎಸ್ ಪಿ(3), ಯುಕೆಡಿ (1), ಇತರೆ (3)
 • ಫಲಿತಾಂಶದ ದಿನಾಂಕ : ಮಾರ್ಚ್ 11, 2017 (ಶನಿವಾರ)
 • ವಿಧಾನಸಭಾ ಚುನಾವಣೆ: ಉತ್ತರಾಖಂಡ್ ಚುನಾವಣೆಯಲ್ಲಿ ದಾಖಲೆಯ ಮತದಾನ 68%
 • *ಈ ವರ್ಷ ಉತ್ತರಾಖಂಡದ ರಾಜ್ಯದ ಚುನಾವಣಾ ರೋಲ್‍ನಲ್ಲಿ , ಮತದಾರರ ಸಂಖ್ಯೆ 38,87 ಲಕ್ಷ ಪುರುಷರು ಮತ್ತು 35,23 ಲಕ್ಷ ಮಹಿಳಾ ಮತದಾರರನ್ನು ಹೊಂದಿತ್ತು. ಇದರಲ್ಲಿ ತಮ್ಮ ಮತ ಚಲಾಯಿಸಿದವರು 24,21 ಲಕ್ಷ ಪುರುಷರು ಮತ್ತು 24,49 ಲಕ್ಷ ಮಹಿಳೆಯರು. [೫]

ಫಲಿತಾಂಶ[ಬದಲಾಯಿಸಿ]

ರಾಜ್ಯ ಬಿಜೆಪಿ ಕಾಂಗ್ರೆಸ್ ಬಿಎಸ್.ಪಿ ಇತರೆ
ಉತ್ತರಾಖಂಡ್ (70) ಬಿಜೆಪಿ 57 ಕಾಂ; 11 2

[೬] [೭]

ತ್ರಿವೇಂದ್ರ ಸಿಂಗ್ ರಾವತ್ ಉತ್ತರಾಖಂಡ್ ಮುಖ್ಯಮಂತ್ರಿ[ಬದಲಾಯಿಸಿ]

 • ಆರ್‍ಎಸ್ಎಸ್ ಮಾಜಿ ಪ್ರಚಾರಕ್ ತ್ರಿವೇಂದ್ರ ಸಿಂಗ್ ರಾವತ್ ಅವರನ್ನು ಉತ್ತರಾಖಂಡ್ ಮುಖ್ಯಮಂತ್ರಿ ಸ್ಥಾನಕ್ಕೆ ಆಯ್ಕೆ ಮಾಡಲಾಗಿದೆ ಎಂದು ಬಿಜೆಪಿ ಮೂಲಗಳಿಂದ ತಿಳಿದು ಬಂದಿದೆ. ತ್ರಿವೇಂದ್ರ ಅವರನ್ನು ಆಯ್ಕೆ ಮಾಡಿರುವ ಬಗ್ಗೆ ನಿನ್ನೆ ರಾತ್ರಿ ಅವರಿಗೆ ಮಾಹಿತಿ ನೀಡಿದ್ದು, ಶುಕ್ರವಾರ ಶಾಸಕಾಂಗ ಸಭೆಯಲ್ಲಿ ಅವರನ್ನು ಅಧಿಕೃತವಾಗಿ ಆಯ್ಕೆ ಮಾಡಲಾಗುವುದು ಎಂದು ಮೂಲಗಳು ಹೇಳಿವೆ.
 • ಅವರನ್ನು ಅಧಿಕೃತವಾಗಿ ಆಯ್ಕೆ ಮಾಡಲಾಗಿದೆ.
 • ಉತ್ತರಾಖಂಡದಲ್ಲಿ ಬಿಜೆಪಿ ಮೂರನೆಯ ಎರಡರಷ್ಟು ಸ್ಥಾನಗಳನ್ನು ಪಡೆದಿರುವುದು ಇದೇ ಮೊದಲು. ಮುಖ್ಯಮಂತ್ರಿ ಸ್ಥಾನಕ್ಕೆ ಬಿಜೆಪಿಯ ತ್ರಿವೇಂದ್ರ ಸಿಂಗ್ ರಾವತ್, ಪ್ರಕಾಶ್ ಪಂತ್ ಮತ್ತು ಕಾಂಗ್ರೆಸ್ಸಿನಿಂದ ಬಿಜೆಪಿಗೆ ಬಂದಿರುವ ಸತ್ಪಾಲ್ ಮಹಾರಾಜ್ ಅವರ ಹೆಸರು ಕೇಳಿ ಬಂದಿತ್ತು. ಇಂದು ನಡೆಯಲಿರುವ ಸಭೆಯಲ್ಲಿ ಕೇಂದ್ರ ಸಚಿವ ನರೇಂದ್ರ ಸಿಂಗ್ ತೋಮರ್ ಮತ್ತು ಬಿಜೆಪಿ ಪ್ರಧಾನ ಕಾರ್ಯದರ್ಶಿ ,ಸರೋಜ್ ಪಾಂಡೆ, ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್, ಉತ್ತರಾಖಂಡ್ ರಾಜ್ಯದ ಉಸ್ತುವಾರಿ ವಹಿಸಿರುವ ಶ್ಯಾಮ್ ಜಾಜು ಭಾಗವಹಿಸಿದ್ದಾರೆ.
 • 2017 ಮಾರ್ಚ್ 18 ರಂದು ಡೆಹ್ರಾಡೂನ್‍ನಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದರು:[೮][೯]

ನೋಡಿ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

ಉಲ್ಲೇಖ[ಬದಲಾಯಿಸಿ]