ಇ-ಪ್ರಜಾಪ್ರಭುತ್ವ

ವಿಕಿಪೀಡಿಯ ಇಂದ
Jump to navigation Jump to search

ಇ-ಪ್ರಜಾಪ್ರಭುತ್ವ (ಎಲೆಕ್ಟ್ರಾನಿಕ್‌ ಹಾಗೂ ಪ್ರಜಾಪ್ರಭುತ್ವ ಪದಗಳ ಸಂಯೋಜನ) ರಾಜಕೀಯ ಹಾಗೂ ಆಡಳಿತದ ಪ್ರಕ್ರಿಯೆಯಲ್ಲಿ ಮಾಹಿತಿ ತಂತ್ರಜ್ಞಾನಗಳ ಹಾಗೂ ಸಂಪರ್ಕ ತಂತ್ರಜ್ಞಾನಗಳ ಹಾಗೂ ವ್ಯೂಹರಚನೆಗಳ ಬಳಕೆಯನ್ನು ಹೇಳುತ್ತದೆ. ಈ ಸಂದರ್ಭದಲ್ಲಿ ಪ್ರಜಾಪ್ರಭುತ್ವದ ನಟರಲ್ಲಿ ಹಾಗೂ ವಿಭಾಗಗಳಲ್ಲಿ ಸರ್ಕಾರಗಳು, ಚುನಾಯಿತ ಅಧಿಕಾರಿಗಳು, ಮಾಧ್ಯಮ, ರಾಜಕೀಯ ಸಂಘಟನೆಗಳು ಹಾಗೂ ನಾಗರೀಕರು/ಮತದಾರರು ಸೇರಿರುತ್ತಾರೆ.[೧] ಇಂದಿನ ಪ್ರತಿನಿಧಿತ್ವ ಪ್ರಜಾಪ್ರಭುತ್ವದಲ್ಲಿ ಅಂತರ್ಜಾಲ, ಮೊಬೈಲ್ ಸಂಪರ್ಕಗಳು, ಹಾಗೂ ಇತರ ತಂತ್ರಜ್ಞಾನಗಳಿಂದ ಇ-ಪ್ರಜಾಪ್ರಭುತ್ವ ವಿಸ್ತೃತ ಹಾಗೂ ಹೆಚ್ಚು ಸಕ್ರಿಯ ನಾಗರೀಕ ಭಾಗವಹಿಸುವಿಕೆಯ ಲಕ್ಷ್ಯವನ್ನು ಹೊಂದಿದೆ. ಇದಲ್ಲದೆ ಸಾರ್ವಜನಿಕ ಸವಾಲುಗಳನ್ನು ಎದುರಿಸುವಲ್ಲಿ ನಾಗರೀಕನ ಹೆಚ್ಚಿನ ಭಾಗವಹಿಸುವಿಕೆ ಅಥವಾ ನೇರ ಪಾಲ್ಗೊಳ್ಳುವಿಕೆಯ ಮೂಲಕವೂ ನಡೆಸಬಹುದಾಗಿದೆ.[೨] ಇ-ಪ್ರಜಾಪ್ರಭುತ್ವ ತುಲನಾತ್ಮಕವಾಗಿ ಒಂದು ಹೊಸ ಪರಿಕಲ್ಪನೆಯಾಗಿದ್ದು, ಇದು ಅಂತರ್ಜಾಲದ ಜನಪ್ರಿಯತೆ ಹಾಗೂ ಪ್ರಜಾಪ್ರಭುತ್ವದ ಪ್ರಕ್ರಿಯೆಯಲ್ಲಿ ಆಸಕ್ತಿಯ ಪುನ:ಚೇತನ ಹುಟ್ಟಿಸುವ ಅಗತ್ಯದಿಂದ ಮೂಡಿಬಂದಿದೆ.[೩][page needed] ಪ್ರಜಾಪ್ರಭುತ್ವದ ಪ್ರಕ್ರಿಯೆಗಳಲ್ಲಿ ಆಸಕ್ತಿ ಸೃಷ್ಠಿಸಲು ಪ್ರವೇಶ ಸಾಧ್ಯತೆಯೇ ಕೀಲಿಯಾಗಿದೆ.[೪] ತಮ್ಮ ಅಭ್ಯರ್ಥಿಗಳನ್ನು ಬೆಂಬಲಿಸಲು ಹಾಗೂ ಅವರ ಪ್ರಚಾರ ನಡೆಸಲು ನಾಗರೀಕರು ಅಂತರ್ಜಾಲ ತಾಣಗಳನ್ನು ಬಳಸಲು ಬಯಸುತ್ತಾರೆ.[೫] ಸಂಯುಕ್ತ ರಾಷ್ಟ್ರದಲ್ಲಿ ಕೇವಲ ೫೦% ಜನಸಂಖ್ಯೆಯವರು ಮತ ಚಲಾಯಿಸುತ್ತಾರೆ, ಹಾಗೂ ಸಂಯುಕ್ತ ರಾಜ್ಯದಲ್ಲಿ ಬರಿ ೬೯%.[೬] ರಾಜಕೀಯ ಪ್ರಕ್ರಿಯೆಗಳನ್ನು ಸಾಮಾನ್ಯ ಜನರಿಂದ ದೂರವಿಡಲಾಗಿದೆ ಎಂದು ಸಂಶೋಧನೆ ತೋರಿಸಿದೆ, ಇಲ್ಲಿ ಸಾಮಾನ್ಯ ಜನರಿಂದ ದೂರವಿರುವ ಪ್ರತಿನಿಧಿಗಳು ನಿಯಮಗಳನ್ನು ಮಾಡುವರು.[೩][page needed] ನಾಗರೀಕರಲ್ಲಿ ಸರ್ಕಾರದ ಸಂಸ್ಥೆಗಳ ಬಗ್ಗೆ ಇರುವ ಜರೆತನವನ್ನು ತೆಗೆದು ಹಾಕುವುದು ಇ-ಪ್ರಜಾಪ್ರಭುತ್ವದ ಗುರಿ.[೭] ಹೀಗಿದ್ದರೂ, ನಾಗರೀಕ ಭಾಗವಹಿಸುವಿಕೆ ಹಾಗೂ ಪ್ರಜಾಪ್ರಭುತ್ವ ಆಡಳಿತದ ಮೇಲೆ ಎಲೆಕ್ಟ್ರಾನಿಕ್ ಹಾಗೂ ಡಿಜಿಟಲ್ ಸಲಕರಣೆಗಳ ನಿಜವಾದ ಪ್ರಭಾವದ ಬಗ್ಗೆ ಸಂಶಯಗಳಿವೆ, ಮತ್ತು ಎಲೆಕ್ಟ್ರಾನಿಕ್ ಪ್ರಜಾಪ್ರಭುತ್ವದ "ಕೃತಕ"ತೆಯ ವಿರುದ್ಧ ಎಚ್ಚರಿಕೆ ಕೂಡ ಇದೆ.[೮]

ಸಲಕರಣೆ ಹಾಗೂ ನಮೂನೆಗಳು[ಬದಲಾಯಿಸಿ]

ಕಳೆದ ನಾಲ್ಕು ವರ್ಷಗಳಲ್ಲಿ ಗಮನಾರ್ಹ ಬೆಳೆವಣಿಗೆ ಆಗಿದೆ, ಮತ್ತು ಹಲವು ವಿಭಾಗಗಳಲ್ಲಿ ಅನುಷ್ಠಾನದ ಗತಿ ಕೂಡಾ ಹೆಚ್ಚಾಗಿದೆ.[೯] ಸಾರ್ವಜನಿಕ- ಹಾಗೂ ಖಾಸಗಿ-ಕ್ಷೇತ್ರಗಳ ಆಧಾರ ತತ್ವಗಳು ನಾಗರೀಕ ಭಾಗವಹಿಸುವಿಕೆಗೆ ಮಾರ್ಗವನ್ನು ನೀಡುತ್ತದೆ ಮತ್ತು ನಾಗರೀಕರು ಅಪೇಕ್ಷಿಸಿದ ಪಾರದರ್ಶಕ ಮಾಹಿತಿಯ ಪ್ರವೇಶಾವಕಾಶವನ್ನು ನೀಡುತ್ತದೆ. ಈ ಸಾರ್ವಜನಿಕ-ಕ್ಷೇತ್ರದ ಪ್ರವೇಶದ್ವಾರಗಳನ್ನು ಅಥವಾ ಆಧಾರ ತತ್ವಗಳನ್ನು ಅಭಿವೃದ್ಧಿ ಪಡಿಸಲು, ಸರ್ಕಾರಗಳಿಗೆ ಆಂತರಿಕವಾಗಿ ಗುತ್ತಿಗೆ ಕೊಡುವುದನ್ನು ಅಭಿವೃದ್ಧಿಗೊಳಿಸಲು ಹಾಗೂ ನಿಯಂತ್ರಿಸಲು ಅಥವಾ ಸ್ವ-ಬಂಡವಾಳ ಒದಗಿಸುವ ಕರಾರಿಗೆ ಸಹಿ ಹಾಕುವ ಆಯ್ಕೆ ಇದೆ. ಕೆಲವು ನಿರ್ದಿಷ್ಟ ಇ-ಸರ್ಕಾರಿ ವಹಿವಾಟುಗಳಿಗೆ ಸ್ವಯಂ-ಬಂಡವಾಳ ಹೂಡಿಕೆ ಮಾದರಿ ಪ್ರವೇಶದ್ವಾರವನ್ನು ಸೃಷ್ಠಿಸುತ್ತದೆ. ಇವು ತಮಗೆ ತಾವೇ ಅನುಕೂಲ ಶುಲ್ಕದ ಮೂಲಕ ವೇತನ ಪಡೆಯುತ್ತಾರೆ. ಈ ಸ್ಥಳದಲ್ಲಿನ ಆರಂಭದ ಸ್ಪರ್ಧಿಗಳಲ್ಲಿ ಗೌಒನ್ ಸೊಲ್ಯುಷನ್ಸ್, ಫಸ್ಟ್ ಡೆಟಾ ಗೌರ್ನಮೆಂಟ್ ಸೊಲ್ಯುಷನ್ಸ್ ಹಾಗೂ Nicusa.com, ಒಂದು ಸ್ವ-ಬಂಡವಾಳ ಹೂಡಿಕೆ ಮಾದರಿಯಲ್ಲಿ ಕಟ್ಟಲಾದ ಕಂಪನಿ ಒಳಗೊಂಡಿವೆ.[೧೦] ಇ-ಪ್ರಜಾಪ್ರಭುತ್ವಕ್ಕೆ ಸೊಷಿಯಲ್ ನೆಟ್ವರ್ಕಿಂಗ್ ಒಂದು ಗೊಚರವಾಗುತ್ತಿರುವ ವಲಯ. ಅಲ್ಲದೆ ಆರ್ಗ್ಯುಮೆಂಟ್ ಮ್ಯಾಪ್‌ಗಳು ಹಾಗೂ ಸಂಭಾವ್ಯವಾಗಿ ಸಿಮೆಂಟಿಕ್ ವೆಬ್‌ಗಳಂತಹ ಸಂಬಂಧಿತ ತಂತ್ರಜ್ಞಾನಿಕ ಅಭಿವೃದ್ಧಿಗಳು ಕೂಡ ಇತ್ತೀಚೆಗೆ ಹೊರ ಬರುತ್ತಿವೆ. ಅವುಗಳನ್ನು ಇ-ಪ್ರಜಾಪ್ರಭುತ್ವ ಪರಿಕಲ್ಪನೆಯ ಪಕ್ವವಾಗುವುದಕ್ಕೆ ಮೆಟ್ಟಿಲು ಕಲ್ಲುಗಳಾಗಿ ನೋಡಲಾಗುತ್ತದೆ.[೧೧] ಉದಾಹರಣೆಗೆ, ಸೊಷಿಯಲ್ ನೆಟ್ವರ್ಕಿಂಗಿನ ಪ್ರವೇಶ ಬಿಂದು ನಾಗರೀಕರ ಪರಿಸರದೊಳಗಿದೆ ಮತ್ತು ಭಾಗವಹಿಸುವಿಕೆ ನಾಗರೀಕರ ನಿಬಂಧನೆಗಳ ಮೇಲೆ ಅವಲಂಬಿತವಿದೆ. ಇ-ಪ್ರಜಾಪ್ರಭುತ್ವದ ಸಿದ್ಧಾಂತ ಪ್ರತಿಪಾದಕರು ಸೊಷಿಯಲ್ ನೆಟ್ವರ್ಕ್‌ಗಳ ಸರ್ಕಾರಿ ಬಳಕೆಯನ್ನು ಸರ್ಕಾರ ಸಾರ್ವಜನಿಕರಿಗೆ ಹೆಚ್ಚು ಸೇವೆ ಸಲ್ಲಿಸುತ್ತಿದೆ ಎಂದು ತೋರಿಸುವಲ್ಲಿ ಮಾಧ್ಯಮವಾಗಿ ಸಹಾಯ ಮಾಡುತ್ತದೆ. ರಾಜ್ಯದಲ್ಲಿನ ಬಳಕೆಯ ಉದಾಹರಣೆಯನ್ನು ದಿ ಅಫಿಷಿಯಲ್ ಕಾಮನ್‌ವೆಲ್ತ್‌ ಆಫ್‌ ವರ್ಜಿನಿಯಾ ಹೊಂಪೇಜ್‌ನಲ್ಲಿ ಕಾಣಬಹುದು, ಇಲ್ಲಿ ನಾಗರೀಕರು ಗೂಗಲ್ ಸಲಕರಣೆ ಹಾಗೂ ತೆರೆದ ಸಾಮಾಜಿಕ ವೇದಿಕೆಯನ್ನು ಕಾಣಬಹುದು. ಅವರಿಗೆ ಲಭ್ಯವಿರುವ ಸೇವೆಗಳ ಸಂತುಷ್ಟಿಯನ್ನು ಪರಿವೀಕ್ಷಿಸಲು ಸರ್ಕಾರ ಹಾಗೂ ಅದರ ಪ್ರತಿನಿಧಿಗಳಿಗೆ ನಾಗರೀಕರನ್ನು ಅನುಸರಿಸಲು ಅವಕಾಶವಿದೆ. ಸರ್ಕಾರ ಹಾಗೂ ಅದರ ಪ್ರತಿನಿಧಿಗಳು ಸಮಾನ ಆಸಕ್ತಿ ಹಾಗೂ ಕಾಳಜಿಗಳನ್ನು ಹೊಂದಿದ ನಾಗರೀಕರ ಜೊತೆ ಮಾಹಿತಿಯನ್ನು ಲಿಸ್ಟ್‌ಸರ್ವ್ಸ್, RSS ಫೀಡ್ಸ್, ಮೊಬೈಲ್ ಮೆಸೇಜಿಂಗ್, ಮೈಕ್ರೊ-ಬ್ಲೊಗಿಂಗ್ ಸೇವೆಗಳು ಹಾಗೂ ಬ್ಲಾಗ್‌ಗಳ ಮೂಲಕ ಹಂಚಿಕೊಳ್ಳಬಹುದು. ಕೆಲವು ಸರ್ಕಾರಿ ಪ್ರತಿನಿಧಿಗಳು ಟ್ವಿಟರ್ ಅನ್ನು ಬಳಸಲು ಆರಂಭಿಸಿದ್ದಾರೆ, ಇದು ಅವರಿಗೆ ತಮ್ಮ ಅನುಯಾಯಿಗಳಿಗೆ ಮಾಹಿತಿಯನ್ನು ಹಂಚಿಕೊಳ್ಳುವ ಸರಳ ಮಾಧ್ಯಮ ಒದಗಿಸುತ್ತದೆ. ರೋಡ್ ಐಲ್ಯಾಂಡ್ ರಾಜ್ಯದಲ್ಲಿ, ಉದಾಹರಣೆಗೆ, ಖಜಾಂಚಿ ಫ್ರ್ಯಾಂಕ್ ಟಿ. ಕ್ಯೆಪ್ರಿಯೊ ರಾಜ್ಯದ ಹಣಕಾಸಿನ ಹರಿವಿನ ನಿತ್ಯ ಟ್ವಿಟ್ಸ್ ನೀಡುತ್ತಿದ್ದಾರೆ.

ಪ್ರಾಯೋಗಿಕ ವಿಷಯಗಳು[ಬದಲಾಯಿಸಿ]

ಇ-ಪ್ರಜಾಪ್ರಭುತ್ವದ ಸುತ್ತ ಹಲವು ವಾಸ್ತವಿಕ ಸಮಸ್ಯೆಗಳು ಆವರಿಸಿಕೊಂಡಿವೆ. ಮಾಧ್ಯಮದಲ್ಲಿ, ಅಂತರ್ಜಾಲದ ಮೇಲೆ, ಹಾಗೂ ಜನಪ್ರಿಯ ಪ್ರಜ್ಞೆಯಲ್ಲಿ, ಪ್ರಜಾಪ್ರಭುತ್ವದ ಹೊಸ ವಿದ್ಯುತ್ ತೊಟ್ಟಿಲು ಅಂತರ್ಜಾಲವೆಂದು ಬಲವಾದ ಹಾಗೂ ಸಾಮಾನ್ಯ ಸ್ಪರ್ಧೆಯಿಲ್ಲದ ಧೋರಣೆ ಇದೆ. ಈ ಧೋರಣೆಯ ಮೂಲವು ಬಹಮಟ್ಟಿಗೆ ಅಂತರ್ಜಾಲದ ವಾರ್ತಾ ಸಮೂಹಗಳ, ಮೇಲ್ ಪಟ್ಟಿಗಳ, ಬ್ಲಾಗ್‌ಗಳ, ವಿಕಿಗಳ ಹಾಗೂ ಚಾಟ್ ರೂಂಗಳಲ್ಲಿ ಬರುವ ಸಂಬಂಧಿತ ನಿರ್ಬಂಧವಿಲ್ಲದ ಸಂಮಾತುಕತೆ. ಪ್ರಸ್ತುತ ಅಂತರ್ಜಾಲ ಅದನ್ನು ಒಂದು ಪ್ರಜಾಪ್ರಭುತ್ವ ಮಾಧ್ಯಮ ಎಂದು ಭಾವಿಸಲು ಉತ್ತೇಜಿಸುವ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಇದರ ಆರಂಭದ ವಿಕಸನದಲ್ಲಿ ಸ್ಥಾಪಿಸಿದ ವಿನ್ಯಾಸ ಸಿದ್ಧಾಂತಗಳಲ್ಲಿ ಇದರ ವೈಶಿಷ್ಟ್ಯಗಳ ಭಾಗಗಳನ್ನು ಗುರುತಿಸಬಹುದು. ಕೇಂದ್ರಿಕೃತ ನಿಯಂತ್ರಣದ ಅಭಾವ ಹಲವು ಜನರಲ್ಲಿ ಪರಾಮರ್ಶೆ ಅಥವಾ ನಿಯಂತ್ರಣದ ಇತರ ಪ್ರಯತ್ನಗಳ ನಿಷ್ಫಲತೆ ಎಂದು ಸೂಚಿಸುತ್ತದೆ. ಇತರ ವೈಶಿಷ್ಟ್ಯತೆಗಳು ಆರಂಭದ ದಿನಗಳ ಸಾಮಾಜಿಕ ವಿನ್ಯಾಸದ ಪರಿಣಾಮದಿಂದಾಗಿವೆ, ಉದಾಹರಣೆಗೆ, ಮುಕ್ತ ಮಾತುಕತೆಗೆ ಬಲವಾದ ಸಂಕಲ್ಪ ಸ್ವಾತಂತ್ರ್ಯವಾದಿಯ ಬೆಂಬಲ, ಅಂತರ್ಜಾಲದ ಬಳಕೆಯ ಬಹುಪಾಲು ವಿಷಯಗಳನ್ನು ವ್ಯಾಪಿಸಿದ ಹಂಚಿಕೊಳ್ಳುವ ಸಂಪ್ರದಾಯ, ಹಾಗೂ ನ್ಯಾಷನಲ್ ಸೈಂಸ್ ಫೌಂಡೇಷನ್ ರವರಿಂದ ವಾಣಿಜ್ಯ ಬಳಕೆಗೆ ಸಂಪೂರ್ಣ ಪ್ರತಿಬಂಧ. ಅಂತರ್ಜಾಲದ ಅತಿ ಪ್ರಮುಖ ದೇಣಿಗೆ ಎಂದರೆ ಮಧ್ಯಸ್ಥಿಕೆಯಿಲ್ಲದೆ ಹಲವರಿಂದ-ಹಲವರಿಗೆ ಸಂಪರ್ಕ-ವ್ಯವಸ್ಥೆಯನ್ನು ನ್ಯೂಸ್‌ಗ್ರೂಪ್ಸ್, ಚಾಟ್ ರೂಮ್ಸ್, MUDಗಳ, ಹಾಗೂ ಹಲವು ಇತರ ರೀತಿಯಲ್ಲಿ ದೊಡ್ಡ ಪ್ರಮಾಣದಲ್ಲಿ ತಲುಪಿಸುವ ಯೋಜನೆ. ಈ ತರಹದ ಸಂಪರ್ಕತೆ, ವಾರ್ತಾ ಪತ್ರಿಕೆಗಳ ಅಥವಾ ರೇಡಿಯೋಗಳಂತಹ ಪ್ರಸಾರಣ ಮಾಧ್ಯಮವು ಮತ್ತು ಪತ್ರಗಳು ಅಥವಾ ಲ್ಯಾಂಡ್‌ಲೈನ್ ಟೆಲಿಫೋನ್‌ಗಳಂತಹ ಒಬ್ಬರಿಂದ-ಒಬ್ಬರಿಗೆ ಅಂತಹ ಮಾಧ್ಯಮಗಳು ಸ್ಥಾಪಿಸಿದ ಸೀಮಿತತೆಯನ್ನು ನಿರ್ಲಕ್ಷಿಸುತ್ತದೆ. ಅಂತಿಮವಾಗಿ, ಅಂತರ್ಜಾಲ ತೆರೆದ ಗುಣಮಟ್ಟ ಹೊಂದ ಭಾರಿ ಡಿಜಿಟಲ್ ಜಾಲವಾದರಿಂದ, ವಿಸ್ತ್ರತ ವೈವಿಧ್ಯಮತೆಯ ಸಂಪರ್ಕ ಮಾಧ್ಯಮ ಹಾಗೂ ಮಾದರಿಗಳಿಗೆ ವಿಶ್ವವ್ಯಾಪಿ ಹಾಗೂ ದುಬಾರಿವಲ್ಲದ ಪ್ರವೇಶವನ್ನು ವಾಸ್ತವದಲ್ಲಿ ಸಾಧಿಸಬಹುದು.[೧೨] ಇ-ಪ್ರಜಾಪ್ರಭುತ್ವ ಒಳಗೊಂಡ ಕೆಲವು ವಾಸ್ತವಿಕ ಸಂಅಸ್ಯೆಗಳಲ್ಲಿ: ಪರಿಣಾಮಕಾರಿ ಪಾಲ್ಗೊಳುವಿಕೆ; ನಿರ್ಧಾರದ ಹಂತದಲ್ಲಿ ಮತದಾನದ ಸಮಾನತೆ; ಅರಿವುಂಟುಮಾಡುವ ತಿಳುವಳಿಕೆ; ಕಾರ್ಯಸೂಚಿಯ ನಿಯಂತ್ರಣ; ಹಾಗೂ ಒಳಗೊಳ್ಳುವಿಕೆ.[೧೩]

ನಾಗರೀಕರ ಪಾತ್ರ[ಬದಲಾಯಿಸಿ]

ಅಂತರ್ಜಾಲ ಒಂದು ವಿಭಿನ್ನ ಅವಕಾಶಗಳ ನಿರ್ಮಾಣವನ್ನು ಒದಗಿಸುತ್ತದೆ, ಇದು ನಾಗರಿಕ ಗೊತ್ತು ಮಾಡುವಿಕೆ ಹಾಗೂ ಭಾಗವಹಿಸುವಿಕೆ ಹೊಸ ಆಸಕ್ತಿಯನ್ನು ಮೂಡಿಸಲು ಸಾಮರ್ಥ್ಯವನ್ನು ಹೊಂದಿದೆ. ನಾಗರಿಕ ಗೊತ್ತು ಮಾಡುವಿಠಕೆಯಲ್ಲಿ ಮೂರು ವಿಭಿನ್ನ ಆಯಾಮಗಳಿವೆ ಎಂದು ತಿಳಿದುಕೊಳ್ಳಬಹುದು: ರಾಜಕೀಯ ಜ್ಞಾನ (ಸಾರ್ವಜನಿಕ ಸಂಗತಿಗಳ ಬಗ್ಗೆ ಜನರು ಕಲಿತ್ತದ್ದು), ರಾಜಕೀಯ ವಿಶ್ವಾಸ (ರಾಜಕೀಯ ಪದ್ಧತಿಗೆ ಸಾರ್ವಜನಿಕರ ಬೆಂಬಲದ ಮನೋಭಾವ), ಹಾಗೂ ರಾಜಕೀಯ ಪಾಲ್ಗೊಳುವಿಕೆ (ಸರ್ಕಾರ ಹಾಗೂ ನಿರ್ಧರ-ಮಾಡುವ ಪ್ರಕ್ರಿಯೆಯನ್ನು ಪ್ರಭಾವಿಸಲು ರಚಿಸಿದ ಸಾಮಾಜಿಕ ನಡವಳಿಕೆ ಚಟುವಟಿಕೆಗಳು).[೧೪] ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿ ಸಾಮರ್ಥ್ಯ ನಾಗರೀಕರನ್ನು ಸರ್ಕಾರದ ಹಾಗೂ ರಾಜಕೀಯೆ ಸಂಗತಿಗಳ ಬಗ್ಗೆ ಹೆಚ್ಚು ಜ್ಞಾನವನ್ನು ಪಡೆದುಕೊಳ್ಳಲು ಅವಕಾಶ ಮಾಡಿಕೊಡುತ್ತದೆ, ಮತ್ತು ಮಧ್ಯಸ್ಥದ ಅಂತರಚಟುವಟಿಕೆ ಸರ್ಕಾರದೊಂದಿಗೆ ಹೊಸ ರೀತಿಯ ಸಂಪರ್ಕವನ್ನು ಕಲ್ಪಿಸುತ್ತದೆ, i.e. ಚುನಾಯಿತ ಅಧಿಕಾರಿಗಳು ಹಾಗೂ/ಅಥವಾ ಸಾರ್ವಜನಿಕ ನೌಕರರು. ಸಂಪರ್ಕದ ಮಾಹಿತಿ, ಶಾಸನ, ಕಾರ್ಯಸೂಚಿಗಳು ಹಾಗೂ ಕರಾರುಗಳ ವರ್ಗಾವಣೆ ಸರ್ಕಾರವನ್ನು ಹೆಚ್ಚು ಪಾರದರ್ಶಕ, ಮಿಂಬಲೆಗೆ ಬೆಸೆದ ಹಾಗೂ ಮಿಂಬಲೆಗೆ ಬೆಸೆಯದ ಎರಡೂ ತಿಳಿದ ಪಾಲ್ಗೊಳ್ಳುವಿಕೆಯ ಸಾಮರ್ಥ್ಯೆವನ್ನು ಹೆಚ್ಚಿಸುತ್ತದೆ.[೧೫] ಹೆಚ್ಚು ಮಾಹಿತಿಗಾಗಿ, ಭೇಟಿ ಕೊಡಿ transparent-gov.

ಸಂಘಟಿತ ಕಾರ್ಯಾಚರಣೆಯ ಒಂದು ಸಾಧನವಾಗಿ ಅಂತರ್ಜಾಲ[ಬದಲಾಯಿಸಿ]

ಅಂತರ್ಜಾಲವು ಪ್ರಾತಿನಿಧ್ಯ ಅಧಿಕಾರವನ್ನು ನೀಡುವ ಪ್ರಜಾಪ್ರಭುತ್ವದ ಕೆಲವು ದೂರದ ನಿರ್ಬಂಧಗಳನ್ನು ಹೊರಹಾಕಲು ಸಹಾಯ ಮಾಡುವ ಸಾಧನಗಳಿಗೆ ಒಂದು ವೇದಿಕೆ ಮತ್ತು ವಿತರಣಾ ಮಾಧ್ಯಮವಾಗಿದೆ. ವಿದ್ಯುನ್ಮಾನ ಪ್ರಜಾಪ್ರಭುತ್ವ (ಇ-ಡೆಮಾಕ್ರಸಿ)ಕ್ಕಾಗಿ ತಾಂತ್ರಿಕ ಮಾಧ್ಯಮದ ಬಳಕೆಯು ಸೆಲ್ ಫೋನ್‌ಗಳಂತಹ ಮೊಬೈಲ್ ತಂತ್ರಜ್ಞಾನಕ್ಕೂ ವಿಸ್ತರಿಸಲ್ಪಡುವ ನಿರೀಕ್ಷೆಯಿದೆ. ಅತ್ಯಂತ ಪ್ರಾಮುಖ್ಯವಾಗಿ, ಅಂತರ್ಜಾಲವು "ಹಲವರಿಂದ-ಹಲವರಿಗೆ" ( ಮೆನಿ ಟೊ ಮೆನಿ) ಮಾಹಿತಿ ನೀಡುವ ಸಂಪರ್ಕ ಮಾಧ್ಯಮವಾಗಿದ್ದು "ಕೆಲವರಿಂದ-ಹಲವರಿಗೆ", ಬಿತ್ತರಿಸುವ ರೇಡಿಯೋ ಮತ್ತು ದೂರದರ್ಶನಗಳು ಮತ್ತು "ಕೆಲವರಿಂದ - ಕೆಲವರಿಗೆ" ಭಿತ್ತರಿಸುವ ದೂರವಾಣಿಗಳು ಅಂತರ್ಜಾಲದಷ್ಟು ವ್ಯಾಪಕ ಪ್ರಚಾರವನ್ನು ಪಡೆದಿಲ್ಲ. ಸಮಾಜದ ಎಲ್ಲರೂ ಇದನ್ನು ಬಳಸುವಂತೆ ಮತ್ತು ಮಾಹಿತಿಯನ್ನು ಪರಸ್ಪರ ಹಂಚಿಕೊಳ್ಳಲು ಸಹಾಯ ಮಾಡುವ ಪ್ರಭಲವಾದ ಸಂಸ್ಕರಣಾ ಸಾಮರ್ಥ್ಯ ಹಾಗೂ ಸಮಗ್ರ ದತ್ತಾಂಶ ನಿರ್ವಹಣಾ ತಂತ್ರಜ್ಞಾನ, ಪರ್ಯಾಲೋಚಕ ಪ್ರಜಾಪ್ರಭುತ್ವ ಮತ್ತು ಚುನಾವಣೆಯಲ್ಲಿ ನಡೆಯುವ ಮೋಸಗಳನ್ನು ತಡೆಯುವ ವ್ಯವಸ್ಥೆಗಳನ್ನು ಹೊಂದಿರುವ ಈ ಅಂತರ್ಜಾಲವು ಹೆಚ್ಚಿನ ಗಣಕೀಕರಣದ ಸಾಮರ್ಥ್ಯವನ್ನು ಹೊಂದಿದೆ. ಅದಕ್ಕಿಂತ ಹೆಚ್ಚಾಗಿ, ದೈಹಿಕವಾಗಿ ಭಾಗವಹಿಸುವ ಅಗತ್ಯವಿಲ್ಲದೇ, ಎಲ್ಲೇ ಇರಲಿ, ನಿರ್ಧಿಷ್ಟ ಸಮಯದಲ್ಲಿ ಪರಸ್ಪರ ಬೇಟಿಯಾಗಿ, ಸಮಾಲೋಚನೆ ನಡೆಸಿ, ತಮ್ಮ ಯೋಜನೆಗಳನ್ನು ಯಶಸ್ವಿಯಾಗಿ ಪೂರೈಸಿಕೊಳ್ಳುವ ಒಂದು ಮಾಧ್ಯಮವನ್ನಾಗಿ ಅಂತರ್ಜಾಲವನ್ನು ಜನರು ಬಳಸುತ್ತಾರೆ. ಸಾಂಪ್ರದಾಯಿಕ "ಮನೆ-ಮನೆ" ಬೇಟಿ ಅಥವಾ ದೂರವಾಣಿ ಮೂಲಕ ನಡೆಯುವ ಚಟುವಟಿಕೆಗಳಿಗಿಂತ ಅಂತರ್ಜಾಲವನ್ನು ರಾಜಕೀಯ ಕಾರ್ಯಾಚರಣೆಯ ಒಂದು ಸಾಧನವನ್ನಾಗಿ ಬಳಸುವ ಪ್ರಕ್ರಿಯೆ ಇತರ ಪರ್ಯಾಯ ವ್ಯವಸ್ಥೆಗಳಿಗಿಂತ ಅಗ್ಗವಾಗಿಯೂ ಮತ್ತು ಅನುಕೂಲಕರವಾಗಿಯೂ ಇದೆ ಎಂದು ಹೆಚ್ಚಿನ ರಾಜಕಾರಣಿಗಳು ಅಭಿಪ್ರಾಯಪಡುತ್ತಾರೆ. ಅಭ್ಯರ್ಥಿಗಳು ಕೂಡಾ ರಾಜಕೀಯ ಚಟುವಟಿಕೆಯ ಪ್ರಭಲ ಬೆಂಬಲಿಗರಾಗಿ ಯುವಶ್ರೋತೃಗಳನ್ನು ತಲುಪಲು ಇಂದು ಸಾಮಾಜಿಕ ಸಂಪರ್ಕ ಕಲ್ಪಿಸುವ ವಬ್‌ಸೈಟ್‌ಗಳನ್ನು ಬಳಸಲು ಆರಂಭಿಸಿದ್ದಾರೆ. ವಿದ್ಯುನ್ಮಾನ ಅಂಚೆಯ ಸರಣಿಗಳು (ಇ-ಮೈಲ್ ಚೈನ್) ಮತ್ತು ರಾಜಕೀಯ ಬ್ಲಾಗ್‌ಗಳು ಕೂಡಾ ನೇರಸಂಪರ್ಕ ಕಾರ್ಯಾಚರಣೆ(ಆನ್‌ಲೈನ್ ಕಂಪೈನ್)ಯ ಮೇಲೆ ಮಹತ್ವದ ಪ್ರಭಾವ ಬೀರಿವೆ. ಈ ರಾಜಕೀಯ ಬ್ಲಾಗ್‌ಗಳಿಗೆ ಅಥವಾ ವೆಬ್ ಪುಟಗಳಲ್ಲಿ ವೀಕ್ಷಕರ ಅಭಿಪ್ರಾಯವನ್ನು ಅದರಲ್ಲೇ ಸೇರಿಸುವ ಅವಕಾಶವಿದ್ದು ಆ ಮೂಲಕ ಅವರು ತಮ್ಮ ದೃಷ್ಟಿಕೋನವನ್ನು ವ್ಯಕ್ತಪಡಿಸಬಹುದು. "ಪಾಯಿಂಟ್ ಆಂಡ್ ಕ್ಲಿಕ್" ಜಾಹೀರಾತು (ಇಂಟರ್‌ಆ‍ಯ್‌ಕ್ಟೀವ್ ಅಡ್ವರ್ಟೈಸಿಂಗ್ ಆನ್‌ಲೈನ್) ಕೂಡಾ ಸಾಂಪ್ರದಾಯಿಕ ಅಂಚೆ ಅಥವಾ ದೂರದರ್ಶನ ಮಾಧ್ಯಮದ ಮೂಲಕ ನಡೆಸುವ ಚಟುವಟಿಕೆಗಳನ್ನು ಬೆಂಬಲಿಸಿವೆ.[೧೬] ಅಂತರ್ಜಾಲದಲ್ಲಿನ ಅಗ್ಗದ ಬೆಲೆಯ ಮಾಹಿತಿ ವಿನಿಮಯ, ಅಂತೆಯೇ, ಇದರಲ್ಲಿ ಅಳವಡಿಸಿದ ವಿಷಯಗಳು ಜನರನ್ನು ತಲುಪುವಲ್ಲಿ ಹೊಂದಿದ್ದ ಭರವಸೆಯು ಅಂತರ್ಜಾಲವನ್ನು ವಿಶೇಷವಾಗಿ, ಕಡಿಮೆ ಆಯವ್ಯಯ (ಬಜೆಟ್) ಹೊಂದಿರುವ ಸಾಮಾಜಿಕ ಆಸಕ್ತಿ ಹೊಂದಿರುವ ಸಮುದಾಯಗಳಿಗೆ ಒಂದು ಯಶಸ್ವೀ ರಾಜಕೀಯ ಮಾಧ್ಯಮವನ್ನಾಗಿ ಮಾಡಿವೆ. ಉದಾಹರಣೆಗೆ, ಪರಿಸರದ ಅಥವಾ ಸಾಮಾಜಿಕ ಸಂಚಿಕೆಯ ತಂಡಗಳು ತಮ್ಮ ಸಂಚಿಕೆಗಳ ಬಗ್ಗೆ ಜಾಗೃತಿಯನ್ನು ಹೆಚ್ಚಿಸಲು ಹೆಚ್ಚಿನ ಬಂಡವಾಳ ಹೂಡಿಕೆಯ ಅಗತ್ಯವಿರುವ ರೂಢಿಯಲ್ಲಿರುವ ಇತರ ಮಾಧ್ಯಮಗಳಾದ ದೂರದರ್ಶನ ಅಥವಾ ವಾರ್ತಾಪತ್ರಿಕೆಗಳಿಗಿಂತ ಅಂತರ್ಜಾಲವು ಒಂದು ಸುಲಭ ವ್ಯವಸ್ಥೆಯಾಗಿದೆ ಎಂಬುದನ್ನು ಕಂಡುಕೊಂಡಿವೆ. ಈ ಎಲ್ಲಾ ಅಂಶಗಳಿಂದಲೇ ಇತರ ಸಾಂಪ್ರದಾಯಿಕ ರಾಜಕೀಯ ಸಂಪರ್ಕ ಮಾಧ್ಯಮಗಳಾದ ದೂರವಾಣಿ, ದೂರದರ್ಶನ, ವಾರ್ತಾಪತ್ರಿಕೆಗಳು ಹಾಗೂ ರೇಡಿಯೋಗಳಿಗಿಂತ ಅಂತರ್ಜಾಲವು ರಾಜಕೀಯ ಸಂಪರ್ಕ ಮಾಧ್ಯಮವಾಗಿ ಬಳಸಲು ಸಂಪೂರ್ಣ ಸಾಮರ್ಥ್ಯ ಹೊಂದಿದೆ. ನಾಗರಿಕ ಸಮಾಜವು ನಿಧಾನವಾಗಿ ಆನ್‌ಲೈನ್ ಜಗತ್ತಿಗೆ ಚಲಿಸುತ್ತಿದೆ.[೧೭] ಇನ್ನೊಂದು ಉದಾಹರಣೆ openforum.com.au ಎಂಬುದು. ಇದು ಆಸ್ಟ್ರೀಲಿಯಾದ ಲಾಭರಹಿತ ಇ-ಪ್ರಜಾಪ್ರಭುತ್ವ ಯೋಜನೆಯಾಗಿದ್ದು ಇದು ರಾಜಕಾರಣಿಗಳನ್ನು, ಹಿರಿಯ ಸಾರ್ವಜನಿಕ ಸೇವಕರನ್ನು, ಶೈಕ್ಷಣಿಕ ಅಧಿಕಾರಿಗಳನ್ನು, ವ್ಯಾಪಾರೀ ಜನರನ್ನು ಮತ್ತು ಇತರ ಸ್ಟಾಕ್ ಹೋಲ್ಡರ್‌ಗಳನ್ನು ತನ್ನ ಎತ್ತರದ ಬೆಲೆಯ ಪಾಲಿಸಿ ಡಿಬೇಟ್‌ನತ್ತ ಆಹ್ವಾನಿಸುತ್ತದೆ. ಬ್ಲಾಗಿಗರನ್ನು, ವೆಬ್ ಮಾಸ್ಟರ್‌ಗಳನ್ನು ಮತ್ತು ಸಾಮಾಜಿಕ ಮಾಧ್ಯಮಗಳ ಮಾಲೀಕರನ್ನು ಪ್ರಭಲಗೊಳಿಸುವ ಉದ್ದೇಶವನ್ನು ಹೊತ್ತ ಹೊಸ ತೆರನಾದ ಸಾಧನಗಳು ಕೂಡಾ ಅಭಿವೃದ್ಧಿಗೊಳಿಸಲ್ಪಟ್ಟಿವೆ. ಕಡ್ಡಾಯವಾಗಿ ಮಾಹಿತಿಗಾಗಿ ಬಳಸಲ್ಪಡುವ ಅಂತರ್ಜಾಲವನ್ನು ಒಂದು ಸಾಮಾಜಿಕ ಸಂಸ್ಥೆಯನ್ನಾಗಿ ಬಳಸುವಂತೆ ಎಲ್ಲಾ ರೀತಿಯಿಂದಲೂ ಪ್ರಯತ್ನಗಳು ನಡೆದಿವೆ. ತಕ್ಷಣ ಕಾರ್ಯಪ್ರವೃತ್ತಗೊಳಿಸುವ ಹೊಸ ತಂತ್ರಜ್ಞಾನದ ಯೋಜನೆಯ ವಿನ್ಯಾಸವು ವೆಬ್‌ಮಾಸ್ಟರ್‌ಗಳನ್ನು ತಮ್ಮ ವೀಕ್ಷಕರನ್ನು ನಾಯಕರಿಲ್ಲದೆಯೇ ಕಾರ್ಯಪ್ರವೃತ್ತಗೊಳಿಸಬಲ್ಲುದಾಗಿದೆ. ಈ ಸಾಧನಗಳು ಜಗತ್ತಿನಾದ್ಯಂತ ಬಳಸಲ್ಪಡುತ್ತವೆ. ಉದಾಹರಣೆಗೆ, ಇಂಟರ್ನೆಟ್ ಬಳಕೆದಾರರು ತಮ್ಮ ಅನಿಸಿಕೆ ಮತ್ತು ದೃಷ್ಟಿಕೋನವನ್ನು ವ್ಯಕ್ತಪಡಿಸಲು ಅವಕಾಶವುಳ್ಳ ಒಂದು ಪರಿಣಾಮಕಾರಿ ಬ್ಲಾಗೋಸ್ಪಿಯರ್‌ನ್ನು ಭಾರತವು ಅಭಿವೃದ್ಧಿಗೊಳಿಸುತ್ತಿದೆ.[೧೮]

ಸ್ಥಳೀಯ ಪ್ರಜಾಪ್ರಭುತ್ವ ಸಮುದಾಯಗಳಿಗೆ ನೀಡಿದ ವಿದ್ಯುನ್ಮಾನೀಯ ಬೆಂಬಲ[ಬದಲಾಯಿಸಿ]

ಅಲೆಕ್ಸಿಸ್ ಡಿ ಟೊಕ್ವೆವಿಲ್ಲೆಯಂತಹ ತತ್ವಶಾಸ್ತ್ರಜ್ಞರುಗಳ ಪ್ರಕಾರ ಸಾರ್ವಜನಿಕ ಹಿತಾಸಕ್ತಿ ಹಾಗೂ ರಾಜ್ಯದ ಹೊರಗಿನ ಶಕ್ತಿಯ ಆಕರಗಳ ಬಗ್ಗೆ ಪ್ರತಿಯೊಬ್ಬ ಪ್ರಜೆಗೂ ಅರಿವನ್ನೊದಗಿಸುವಂತಹ ಪ್ರಜೆಗಳ ಒಕ್ಕೂಟಗಳು ಪ್ರಜಾಪ್ರಭುತ್ವದ ಕಾರ್ಯಚಟುವಟಿಕೆಗಳಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಸಾರ್ವಜನಿಕ ಕಾನೂನು ಸಂಶೋಧಕರಾದ ಹಾನ್ಸ್ ಕ್ಲೀನ್ ಜ್ಯಾರ್ಜಿಯಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಇಂತಹ ಫಾರಂ‌ಗಳಲ್ಲಿ ಭಾಗವಹಿಸುವುದು ನಿರ್ಧಿಷ್ಟ ಸಮಯದಲ್ಲಿ ನಿರ್ಧಿಷ್ಟ ಸ್ಥಳದಲ್ಲಿ ಬೇಟಿಯಾಗುವ ಅಗತ್ಯಗಳಂತಹ ಹಲವು ಅಡೆತಡೆಗಳನ್ನು ಹೊಂದಿದೆ ಎಂದು ತಿಳಿಸಿದ್ದಾರೆ.[೧೯] ಅಮೇರಿಕಾ ಸಂಯುಕ್ತ ಸಂಸ್ಥಾನ‌ನ ಈಶಾನ್ಯ ಭಾಗಗಳ ಪೌರ ಒಕ್ಕೂಟಗಳ ಮೇಲಿನ ಅಧ್ಯಯನದಲ್ಲಿ ಕ್ಲೀನ್ ವಿದ್ಯುನ್ಮಾನಿಕ ಸಂಪರ್ಕ ಮಾಧ್ಯಮಗಳು ಯಾವುದೇ ಸಂಸ್ಥೆಯು ತನ್ನ ಧ್ಯೇಯವಾಕ್ಯವನ್ನು ಪೂರ್ತಿಗೊಳಿಸಲು ಅದಕ್ಕೆ ಬೇಕಾದ ಎಲ್ಲಾ ಅಗತ್ಯಗಳನ್ನೂ ಪೂರೈಸುತ್ತದೆ ಎಂದು ಹೇಳಿದ್ದಾರೆ. ಪೌರ ಸಮಾಜದಲ್ಲಿ ಸಂಸ್ಥೆಗಳ ಹಲವು ರೂಪಗಳಿವೆ. ಇಂಟರೆಸ್ಟ್ ಗ್ರೂಪ್ ಎಂಬ ಪದವು ಸಾಂಪ್ರದಾಯಿಕವಾಗಿ ಕೆಲವು ನಿರ್ಧಿಷ್ಟ ಸಾಮಾಜಿಕ ಗುಂಪುಗಳನ್ನು ಕೇಂದ್ರೀಕರಿಸಿದ ಮತ್ತು ಟ್ರೇಡ್ ಯೂನಿಯನ್ ಹಾಗೂ ವ್ಯವಹಾರ ಮತ್ತು ವೃತ್ತಿಪರ ಸಂಘಟನೆಗಳಂತಹ ಆರ್ಥಿಕ ವಲಯವನ್ನು ಕೇಂದ್ರೀಕರಿಸಿದ ಸಂಸ್ಥೆಗಳನ್ನು ಅಥವಾ ಮಹತ್ವದ ವಿಚಾರಗಳಾದ ಗರ್ಭಪಾತ, ಬಂದೂಕು ನಿಯಂತ್ರಣ ಅಥವಾ ಪರಿಸರವನ್ನು ಕೇಂದ್ರೀಕರಿಸಿದ ವ್ಯವಸ್ಥಿತ ಸಂಸ್ಥೆಗಳನ್ನು ಸೂಚಿಸುತ್ತದೆ.[೨೦] ಇತರ ಸಾಂಪ್ರದಾಯಿಕ ಆಸಕ್ತ ಗುಂಪುಗಳು (ಇಂಟೆರೆಸ್ಟ್ ಗ್ರೂಪ್) ಸುಸ್ಥಾಪಿತ ಸಂಸ್ಥೆಯ ರಚನೆಯ ಸೌಲಭ್ಯಗಳು ಮತ್ತು ವಿಧಿಯುಕ್ತ ಸದಸ್ಯತ್ವದ ಕಾನೂನುಗಳು ಮತ್ತು ಸರಕಾರ ಮತ್ತು ಕಾರ್ಯನೀತಿಗಳ ಮೇಲಿರುವ ಇವುಗಳ ಪ್ರಾಥಮಿಕ ದೃಷ್ಟಿಕೋನವನ್ನು ಹೊಂದಿವೆ. ರಾಷ್ಟ್ರದ ಗಡಿಗಳಿಂದಾಚೆಗೂ ಹಬ್ಬಿದ ವಕೀಲತನದ ಜಾಲವು ಈ ಸಂಸ್ಥೆಗಳ ದುರ್ಬಲವಾದ ಏಕೀಕರಣದ ವ್ಯವಸ್ಥೆಯನ್ನು ರಾಷ್ಟ್ರದ ಗಡಿಯುದ್ದಗಲಕ್ಕೂ ಒಂದೇ ಸೂರಿನಡಿ ತಂದಿವೆ.[೨೧] ಚುನಾಯಿತ ಪ್ರತಿನಿಧಿಗಳು, ಸಾರ್ವಜನಿಕ ಅಧಿಕಾರಿಗಳು ಮತ್ತು ರಾಜಕೀಯ ಗಣ್ಯರು ಸಭೆ ನಡೆಸಲು ಅನುಕೂಲವಾಗುವಂತಹ ಸೌಲಭ್ಯಗಳು, ಸಂಬಂಧಿತ ಒಕ್ಕೂಟಗಳು ಮತ್ತು ಸಂಸ್ಥೆಗಳ ನಡುವೆ ಪರಸ್ಪರ ಸಂಬಂಧ; ಸಂಘಟಕರನ್ನು, ರಾಜಕೀಯದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವವರನ್ನು, ಮತ್ತು ಸದಸ್ಯರನ್ನು ಸೂಕ್ತ ಎಚ್ಚರಿಕೆಗಳ ಮೂಲಕ, ವಾರ್ತಾಪತ್ರಗಳ ಮೂಲಕ, ಮತ್ತು ಇ-ಅಂಚೆಗಳ ಮೂಲಕ ಸಂಪರ್ಕದಲ್ಲಿರುವಂತೆ ಮಾಡುವ; ಧನಸಂಗ್ರಹ, ಬೆಂಬಲಿಗರ ನೇಮಕ, ಅವರ ಸಂದೇಶಗನ್ನು ಚಾಲ್ತಿಯಲ್ಲಿರುವ ವಾರ್ತಾ ಮಾಧ್ಯಮದ ಮೂಲಕ ಸಾರ್ವಜನಿಕರಿಗೆ ತಿಳಿಸುವ ಇವೇ ಮೊದಲಾದ ಹತ್ತು ಹಲವು ಸೇವೆಗಳನ್ನು ಈ ಸಂಸ್ಥೆಗಳಿಗೆ ಅಂತರ್ಜಾಲ ನೀಡಿದೆ.[೨೨]

ಪ್ರಯೋಜನಗಳು ಮತ್ತು ಅನಾನುಕೂಲತೆಗಳು[ಬದಲಾಯಿಸಿ]

ಮಾಹಿತಿ ಮತ್ತು ಸಂಪರ್ಕ ತಂತ್ರಜ್ಞಾನಗಳು ಪ್ರಜಾಸತ್ತೀಯ ಅಥವಾ ಪ್ರಜಾಪ್ರಭುತ್ವ ವಿರೋಧಿಗಳಲ್ಲ. ಇವು ಕೇವಲ ಕೊನೆಯ ದಾರಿಯಾಗಿದ್ದು ಯಾವುದೇ ಪ್ರಮಾಣಕತೆಯನ್ನು ಹೊಂದಿರುವುದಿಲ್ಲ. ಕೆಲವು ಉದ್ದೇಶಗಳನ್ನು ಸಾಧಿಸುವ ಸಲುವಾಗಿ ಸಜ್ಜುಗೊಳಿಸಿದ ಸಾಧನೆಗಳಿವು. (ಉದಾಹರಣೆಗೆ: ದಬ್ಬಾಳಿಕೆಯ ನಿಯಂತ್ರಣ ಅಥವಾ ಒತ್ತಾಯದ ಭಾಗವಹಿಸುವಿಕೆಯಂತಹ ವಿರೋಧಾತ್ಮಕ ಉದ್ದೇಶಗಳನ್ನು ಆದರದಿಂದ ಅನುಕೂಲಕರ ವಿಧಾನದಲ್ಲಿ ದ್ವಿಮಾನ ತಂತ್ರಜ್ಞಾನದಿಂದ ನೀಡಲಾಗುತ್ತದೆ). ಆದರೂ, ಕೆಲವೊಂದು ಸುವ್ಯವಸ್ಥಿತ ಸಂಸ್ಥೆಗಳ ಚೌಕಟ್ಟಿನೊಳಗಿರುವ ಸ್ಥಿತಿಯನ್ನು ಹೊಂದಿರುವ ಸಂಸ್ಥೆಗಳು ಪ್ರಜಾಸತ್ತೀಯ ಉದ್ದೇಶಗಳಿಗೆ, ಪ್ರಕ್ರಿಯೆಗಳ ಪ್ರಯೋಜನಕ್ಕಾಗಿ ವಿದ್ಯುನ್ಮಾನ ಮಾಧ್ಯಮವನ್ನು ಬಳಸುವುದನ್ನು ಬೆಂಬಲಿಸಬಹುದು ಅಥವಾ ನಿರ್ಬಂಧಿಸಬಹುದು. ಆದುದರಿಂದ, ಪ್ರಜಾಪ್ರಭುತ್ವ ಪ್ರಕ್ರಿಯೆಗಳ ಎಲ್ಲಾ ಕಾರ್ಯ ಚಟುವಟಿಕೆಗಳನ್ನು ವಿದ್ಯುನ್ಮಾನ ಅಂಕೆಗಳಿಗೆ ಪರಿವರ್ತಿಸುವಲ್ಲಿನ ಅಪಾಯಗಳು ಮತ್ತು ಅವಕಾಶಗಳು ಮುಖ್ಯವಾಗಿ ಆಯ್ಕೆ ಮಾಡಿದ ಪ್ರಜಾ ಪ್ರಜಾಪ್ರಭುತ್ವದ ಮಾದರಿಗೆ ಸಂಬಂಧಿಸಿದ ವ್ಯವಸ್ಥಿತ ಸಂಸ್ಥೆಯ ಚೌಕಟ್ಟನ್ನು (ಮುಖ್ಯವಾಗಿ ಸಂವಿಧಾನದಲ್ಲಿ ಸೂಚಿಸಿದ ಸಾಮಾಜಿಕ ಒಡಂಬಡಿಕೆಯ ಮಾದರಿ, ಕಾನೂನಿನ ನಿಯಮಗಳ ನಿರ್ದಿಷ್ಟ ಅಂಶಗಳು, ಪ್ರಾತಿನಿಧಿಕ ಪ್ರಜಾಪ್ರಭುತ್ವ, ಅಥವಾ ನೇರ ಪ್ರಜಾಪ್ರಭುತ್ವ ಇವೇ ಮೊದಲಾದುವುಗಳನ್ನೊಳಗೊಂಡಿದೆ). ಬಹುವಾಗಿ ಅವಲಂಭಿಸಿದೆ.[೨೩]

ಅನುಕೂಲಗಳು[ಬದಲಾಯಿಸಿ]

ಅತ್ಯಾಧುನಿಕ ತಂತ್ರಜ್ಞಾನಗಳಾದ ವಿದ್ಯುನ್ಮಾನ ಅಂಚೆಯ ಪಟ್ಟಿ, ಪಿಯರ್ ಟು ಪಿಯರ್ ನೆಟ್‍ವರ್ಕ್, ಒಡಂಬಡಿಕೆಯ ತಂತ್ರಾಂಶ, ವಿಕಿಗಳು, ಅಂತರ್ಜಾಲ ಫಾರಂಗಳು ಮತ್ತು ಬ್ಲಾಗ್‌ಗಳು ವಿದ್ಯುನ್ಮಾನ ಪ್ರಜಾಪ್ರಭುತ್ವದ ಕೆಲವು ಅಂಶಗಳ ಸಂಭಾವ್ಯ ಪರಿಹಾರದ ಸಾಮರ್ಥ್ಯಗಳು. ಹಲವು ಸರಕಾರೇತರ ವೆಬ್‌ಸೈಟ್‌ಗಳು ಕಾನೂನು ವ್ಯಾಪ್ತಿಯೊಳಗೆ ಬೆಳೆದುಬಂದಿದ್ದು ಬಳಕೆದಾರರನ್ನು ಕೇಂದ್ರೀಕರಿಸಿದ ಅನ್ವಯಗಳಂತಹ ಹಲವು ಸೇವೆಗಳನ್ನು ನೀಡಿದ್ದು ಇವು ಸಾವಿರಾರು ಸರಕಾರೀ ಸಂಸ್ಥೆಗಳಿಂದ ಸಂಗ್ರಹಿಸಿದ ಮಾಹಿತಿಗಳ ಹಾಗೂ ಬೇರೆ ಬೇರೆ ಮಾಹಿತಿ ಸರಬರಾಜುಗಾರರಿಂದ ಒದಗಿದ ಮಾಹಿತಿಗಳ ನಡುವಿನ ದೃಢವಾದ ವ್ಯವಸ್ಥೆಯನ್ನೂ ಸಹ ರೂಪುಗೊಳಿಸಿದೆ. ಇದು ಅನುಕೂಲಕರವಾದ ಮತ್ತು ವಾಣಿಜ್ಯ-ವ್ಯವಹಾರಗಳಲ್ಲಿ ಕಡಿಮೆ ಖರ್ಚಿನದ್ದಾಗಿದ್ದು ಹಲವಾರು ಡಾಲರ್‌ಗಳನ್ನು ಕೊಟ್ಟು ಪಡೆಯಬೇಕಾಗಿರುವಂತಹ ತಾಜಾ ಮಾಹಿತಿಗಳನ್ನು ತಕ್ಷಣ ಒದಗಿಸಬಲ್ಲ ಸಾರ್ವಜನಿಕ ಪ್ರಯೋಜನಗಳನ್ನು ಸಹ ಒಳಗೊಂಡಿದೆ. ಇದಕ್ಕೆ ಒಂದು ಉದಾಹರಣೆಯೆಂದರೆ, transparent.gov.com, ಇದು ನಾಗರಿಕರಿಗೆ ದೊರೆಯುವ ಉಚಿತ ಮಾಹಿತಿ ಸಂಗ್ರಹ ಮೂಲವಾಗಿದ್ದು ತಮ್ಮ ಸಮುದಾಯದಲ್ಲಿ ಅಥವಾ ದೇಶದೆಲ್ಲೆಡೆ ಇರುವ ಎಲ್ಲಾ ಸಮುದಾಯಗಳಲ್ಲಿ ಸರಕಾರಗಳ ಮುಕ್ತ ಕರ್ತೃತ್ವಗಳ ಬಗ್ಗೆ ಕೂಡಲೆ ತಿಳಿದುಕೊಳ್ಳಲು ಸಹಾಯ ಮಾಡುತ್ತದೆ. ಇನ್ನೊಂದು ಮಹತ್ವದ ಮೂಲವೆಂದರೆ, USA.gov, ಅಮೇರಿಕಾ ಸಂಯುಕ್ತ ಸಂಸ್ಥಾನ ಸರಕಾರದ ಸ್ವಾಮ್ಯದಲ್ಲಿರುವ ಅಧಿಕೃತ ವೆಬ್‌ಸೈಟ್. ಈ ವೆಬ್‌ಸೈಟ್ ಎಲ್ಲಾ ಸಂಯುಕ್ತ ರಾಷ್ಟ್ರಗಳ ಮತ್ತು ರಾಜ್ಯ ಸರಕಾರೀ ಸಂಸ್ಥೆಗಳ ಸಂಬಂಧ ಹೊಂದಿದೆ. ಈ ವೆಬ್‌ಸೈಟ್‌ನಿಂದ ಒದಗಿಸಲಾಗುವ ಮಾಹಿತಿಯು ಎಲ್ಲಾ ಪೌರರಿಗೆ, ಮತ್ತು ವಿದೇಶೀಯರಿಗೆ ಕೂಡಾ ಚಾಲ್ತಿಯಲ್ಲಿರುವ, ಸಂಯುಕ್ತಸಂಸ್ಥಾನ ಸರಕಾರದ ತಾಜಾ ವಾರ್ತೆ ಹಾಗೂ ವಿಧಾಯಕಗಳನ್ನು ಒಳಗೊಂಡಿದೆ. ಇವು ವಿದ್ಯುನ್ಮಾನ ಸರಕಾರ(ಇ-ಗವರ್ನ್‌ಮೆಂಟ್)ವು ಅಂತರ್ಜಾಲವನ್ನು ಬೆಂಬಲಿಸುವ ಕೇವಲ ಕೆಲವೇ ಉದಾಹರಣೆಗಳು ಮಾತ್ರ.[೨೪] ಇ-ಪ್ರಜಾಪ್ರಭುತ್ವವು ಅತ್ಯಂತ ಸರಳವಾದ ಪ್ರಕ್ರಿಯೆಯಾಗಿದ್ದು ಸರಕಾರದ ಮಾಹಿತಿಯನ್ನು ಪಡೆಯಲು ಸಾರ್ವಜನಿಕ ವಲಯಗಳ ಸಂಸ್ಥೆಗಳಿಗೆ ಮತ್ತು ಪೌರರಿಗೆ ಅಧಿಕೃತ ಪ್ರವೇಶ ನೀಡಿದೆ. ಉದಾಹರಣೆಗೆ, ಇಂಡಿಯಾನಾ ಬ್ಯೂರೋ ಆಫ್ ಮೋಟಾರ್ ವೆಹಿಕಲ್ಸ್ ಕೌಂಟಿಯ ನ್ಯಾಯಮಂಡಳಿಯಲ್ಲಿ ನಡೆಸಲಾಗುವ ಚಾಲಕರ ದಾಖಲೆಗಳನ್ನು ಪ್ರಮಾಣೀಕರಿಸುವ ಪ್ರಕ್ರಿಯೆಯನ್ನು ಸರಳಗೊಳಿಸಿದೆ. ಸರಕಾರದ ದಾಖಲೆಗಳನ್ನು ಡಿಜಿಟಲ್ ಮಾದರಿಯಲ್ಲಿ ಸಹಿ ಹಾಕಿ ಅಧಿಕೃತವಾಗಿ ಪ್ರಮಾಣೀಕರಿಸಿ, ಅಂಚೆಮುದ್ರೆಯನ್ನು ಬಳಸಿ ಅದನ್ನು ವಿದ್ಯುನಮಾನ ಮಾಧ್ಯಮದ ಮೂಲಕ ವಿತರಿಸುವ ಪ್ರಥಮ ಪ್ರಯತ್ನವನ್ನು ಕೈಗೊಂಡ ಪ್ರಪ್ರಥಮ ರಾಜ್ಯವೆಂದರೆ ಇಂಡಿಯಾನಾ.[೨೫] ತನ್ನ ಸರಳತೆಯೊಂದಿಗೆ, ಇ-ಪ್ರಜಾಪ್ರಭುತ್ವ ಸೇವೆಗಳು ಖರ್ಚು ವೆಚ್ಛಗಳನ್ನು ಕಡಿಮೆಮಾಡುತ್ತದೆ. ಅಲಬಾಮಾ ಡಿಪಾರ್ಟ್‌ಮೆಂಟ್ ಆಫ್ ಕನ್ಸರ್ವೇಶನ್ ಮತ್ತು ನ್ಯಾಚುರಲ್ ರಿಸೋರ್ಸಸ್, ವಾಲ್ ಮಾರ್ಟ್ ಮತ್ತು ಎನ್‌‍ಐಸಿಗಳು ಆನ್‌ಲೈನ್ ಹುಡುಕಲು ಮತ್ತು ಶೋಧಿಸಲು ನೀಡುವ ಪರವಾನಗಿ ಸೇವೆಗಳನ್ನು ನೀಡಲು ಇರುವ ಕಂಪ್ಯೂಟರನ್ನೇ ಬಳಸಿ ಈ ಪ್ರಕ್ರಿಯೆಯು ಸ್ವಯಂಚಾಲಿತವಾಗಿ ನಡೆಯುವಂತೆ ಕ್ರಮ ಕೈಗೊಂಡಿತು. ೧೪೦,೦೦೦ ಕ್ಕಿಂತಲೂ ಅಧಿಕ ಪರವಾನಗಿಗಳು ವಾಲ್ ಮಾರ್ಟ್ ಮಳಿಗೆಗಳಲ್ಲಿ ಪ್ರಥಮ ಅನ್ವೇಷಣೆಯಲ್ಲೇ ಖರೀದಿಸಲ್ಪಟ್ಟು, ಸಂಸ್ಥೆಯ ಅಂದಾಜಿನ ಪ್ರಕಾರ ಈ ಪ್ರಕ್ರಿಯೆಯಿಂದ ವರ್ಷಕ್ಕೆ ಡಾಲರ್ ೨೦೦,೦೦೦ ರಷ್ಟು ಹಣ ಉಳಿಸಲು ಸಾಧ್ಯವಾಯಿತು.[೨೬] ವಿದ್ಯುನ್ಮಾನ ಪ್ರಜಾಪ್ರಭುತ್ವವು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಯುವಜನರನ್ನು ತಲುಪುವ ಪ್ರಯೋಜನವನ್ನು ನೀಡಿದ್ದು ಇದು ಚುನಾವಣೆಯ ಸಂದರ್ಭದಲ್ಲಿ ಮತದಾನದ ಪ್ರಮಾಣವನ್ನು ವೃದ್ಧಿಸಿ ಯುವಜನರ ನಡುವೆ ಜಾಗೃತಿಯನ್ನೂ ಮೂಡಿಸಿದೆ. ಮತದಾನದ ಪ್ರಮಾಣವು ಸ್ಥಿರವಾಗಿ ಇಳಿಮುಖವಾಗುತ್ತಿರುವ ಈ ಸ್ಥಿತಿಯನ್ನು ಇ-ಪ್ರಜಾಪ್ರಭುತ್ವ ಮತ್ತು ವಿದ್ಯುನ್ಮಾನ ಮತದಾನದ ಪ್ರಕ್ರಿಯೆಯು ಬದಲಾಯಿಸಬಹುದು. ಕೆನಡಾ, ಅಮೇರಿಕಾ ಸಂಯುಕ್ತ ಸಂಸ್ಥಾನ ಮತ್ತು ಯುನೈಟೆಡ್ ಕಿಂಗ್‌ಡಮ್‌ಗಳೂ ಸೇರಿದಂತೆ ಹೆಚ್ಚಿನ ಉಧ್ಯಮೀಕರಣಗೊಂಡ ರಾಷ್ಟ್ರಗಳಲ್ಲಿ, ವಿಶೇಷವಾಗಿ ಯುವಜನತೆಯ ಮತದಾನದ ಪ್ರಮಾಣವು ಗಮನಾರ್ಹ ಇಳಿಕೆ ಕಂಡಿದೆ. ವಿದ್ಯುನ್ಮಾನ ರಾಜಕೀಯ ಭಾಗವಹಿಸುವಿಕೆಯ ಪ್ರಕ್ರಿಯೆಗಳು ಯುವಜನರಿಗೆ ಅತ್ಯಂತ ನಿಕಟವಾದುದಾಗಿದ್ದು ಇದರ ಪರಿಣಾಮವಾಗಿ ಸಾಂಪ್ರದಾಯಿಕ ಮತದಾನದ ವಿಧಾನಗಳನ್ನು ಅನುಸರಿಸಿ ಮತದಾನ ಮಾಡಲು ಅನನುಕೂಲ ಸ್ಥಿತಿಯನ್ನೆದುರಿಸುತ್ತಿದ್ದ ಯುವಜನರ ಭಾಗವಹಿಸುವಿಕೆಯು ಗಣನೀಯ ಪ್ರಮಾಣದಲ್ಲಿ ವೃದ್ಧಿಸಿತು. ವಿದ್ಯುನ್ಮಾನ ಪ್ರಜಾಪ್ರಭುತ್ವವು ಪ್ರಜಾಪ್ರಭುತ್ವದಲ್ಲಿ ಜನತೆಯು ಪಾಲ್ಗೊಳ್ಳುವುದನ್ನು ವೃದ್ಧಿಸಿದ್ದು ನಾಗರಿಕರ ಅನಕ್ಷರತೆಯನ್ನು ಮತ್ತು ಮತನೀಡುವಲ್ಲಿ ತೋರುವ ನಿರುತ್ಸಾಹವನ್ನು ಕಡಿಮೆಗೊಳಿಸಿದೆ ಹಾಗೂ, ರಾಜಕೀಯ ಶಿಕ್ಷಣ, ಮಾತುಕತೆ ಮತ್ತು ಚರ್ಚೆ ಹಾಗೂ ಭಾಗವಹಿಸುವಿಕೆಯನ್ನು ಬೆಳೆಸಬಲ್ಲ ಉತ್ತಮ ಆಸ್ತಿಯಾಗಿದೆ.[೨೭]

ಅನನುಕೂಲಗಳು[ಬದಲಾಯಿಸಿ]

ಜೊತೆಗೆ, ಈ ತಂತ್ರಜ್ಞಾನಗಳು ನಿರ್ಧಿಷ್ಟ ಭಾಗದ ಭೂಪ್ರದೇಶಗಳಲ್ಲಿ ಹುಟ್ಟುವಂತಹ ಹೊಸ ಯೋಜನೆಗಳನ್ನು ಕಾರ್ಯಗತಗೊಳಿಸುವಲ್ಲಿ ನಿಷ್ಫಲತೆ ಅಥವಾ ಪ್ರಾಮುಖ್ಯವಾದ ಗುರುತುಗಳ ಕಳುವು, ಮಾಹಿತಿಯ ಮಿತಿಮೀರಿದ ಸಂಗ್ರಹ, ಮತ್ತು ಮಾಹಿತಿ ಮೇಲಿನ ವಿಧ್ವಂಸಕ ಕೃತ್ಯಗಳೇ ಮೊದಲಾದ ಹಲವು ಘಟನೆಗಳಿಗೆ ಮುಂದಾಳತ್ವ ವಹಿಸುತ್ತವೆ. ನೇರ ಪ್ರಜಾಪ್ರಭುತ್ವಕ್ಕೆ ಸಂಬಂಧಿಸಿದಂತೆ ಕೆಲವು ಸಾಂಪ್ರದಾಯಿಕ ವಿರೋಧಗಳಿದ್ದು ಅವು ವಿದ್ಯುನ್ಮಾನ ಪ್ರಜಾಪ್ರಭುತ್ವಕ್ಕೂ ಅನ್ವಯಿಸುತ್ತವೆ, ಅಂದರೆ, ಇದೂ ಕೂಡಾ ಉತ್ತಮ ಆಡಳಿತದ ಸಾಧ್ಯತೆಯು ಸಾಮಾನ್ಯರ ಬಂಡಾಯ ಮತ್ತು ರಾಜಕೀಯ ಪುಡಾರಿತನದ ಕಡೆ ಹೋಗುವ ಸಾಧ್ಯತೆಗಳನ್ನು ತರುತ್ತದೆ. ಇವಲ್ಲದೇ ಇನ್ನೂ ಹೆಚ್ಚಿನ ವಿರೋಧಗಳು ಇವೆ. ಇದರಲ್ಲಿ ಇ-ಪ್ರಜಾಪ್ರಭುತ್ವದ ಮಾಧ್ಯಮವನ್ನು (ಮೊಬೈಲ್ ಮತ್ತು ಅಂತರ್ಜಾಲ) ಪ್ರವೇಶಿಸಬಲ್ಲವರು ಮತ್ತು ಪ್ರವೇಶಿಸಲಾಗದವರ ನಡುವೆ ಇರುವ ಡಿಜಿಟಲ್ ಅಂತರ ಅಷ್ಟೇ ಅಲ್ಲದೇ ಇ-ಪ್ರಜಾಪ್ರಭುತ್ವದ ಮಾಧ್ಯಮದ ನಾವೀನ್ಯತೆಗಳ ಮೇಲೆ ತೆರಬೇಕಾದ ಅವಕಾಶಗಳ ಮೇಲಿನ ಬೆಲೆಗಳೂ ಸೇರಿವೆ. ಇದಕ್ಕಿಂತ ಹೆಚ್ಚಾಗಿ, ಆನ್‌ಲೈನ್ ಮೂಲಕ ರಾಜಕೀಯಕ್ಷೇತ್ರದಲ್ಲಿ ಪಾಲ್ಗೊಳ್ಳುವುದರಲ್ಲಿ ಇರುವ ಪ್ರಯೋಜನಗಳನ್ನು ಅರಿಯದವರು ಇನ್ನೂ ಇದ್ದಾರೆ.[೨೮] ಸರಕಾರದ ಯೋಜನೆಗಳು ಸಮಸ್ತ ಮಾಹಿತಿಯನ್ನು ಒದಗಿಸುತ್ತಿದ್ದರೂ, ಮಾಹಿತಿ ತಂತ್ರಜ್ಞಾನ ಮತ್ತು ಡಿಜಿಟಲ್ ವ್ಯವಸ್ಥೆಯ ಬಗೆಗಿನ ಅಜ್ಞಾನವೇ ಆನ್‌ಲೈನ್ ಪಾಲ್ಗೊಳ್ಳುವಿಕೆಯನ್ನು ಜನ ಸ್ವೀಕರಿಸುವಲ್ಲಿ ಅವರನ್ನು ಅಧೈರ್ಯ ತಾಳುವಂತೆ ಮಾಡಿದೆ. ಅಂತರ್ಜಾಲದ ಮೇಲಿನ ರಾಜಕೀಯ ಬೆಳವಣಿಗೆಗಳು ಅಂತರ್ಜಾಲವನ್ನು ಬಳಸದ ನಿರುತ್ಸಾಹೀ ಜನರು ಹೊಸ ತಂತ್ರಜ್ಞಾನವನ್ನು ಸ್ವೀಕರಿಸಿ ಅದಕ್ಕೆ ಹೊಂದಿಕೊಳ್ಳುವಂತೆ ಮಾಡಿ ಗಮನಾರ್ಹ ಪರಿವರ್ತನೆಯನ್ನು ತರಬಹುದು.

ನೇರ ವಿದ್ಯುನ್ಮಾನ ಪ್ರಜಾಪ್ರಭುತ್ವ[ಬದಲಾಯಿಸಿ]

ವಿದ್ಯುನ್ಮಾನ ನೇರ ಪ್ರಜಾಪ್ರಭುತ್ವ ವು ಜನರು ಕಾನೂನು ವ್ಯವಸ್ಥೆಗಳ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಅನುವು ನೀಡಿದ್ದು ನೇರ ಪ್ರಜಾಪ್ರಭುತ್ವದ ಪ್ರಭಾವಶಾಲಿ ರೂಪವಾಗಿದೆ. ಹಲವು ವಕೀಲರು ಪರ್ಯಾಲೋಚನೆ ನಡೆಸಬೇಕಾದ ಈ ಪ್ರಕ್ರಿಯೆಗಳಲ್ಲಿ ತಂತ್ರಜ್ಞಾನದ ವರ್ಧನೆ ಅಗತ್ಯವಿದೆ ಎಂದು ಅಭಿಪ್ರಾಯಪಡುತ್ತಾರೆ. ನೇರ ವಿದ್ಯುನ್ಮಾನ ಪ್ರಜಾಪ್ರಭುತ್ವವು ಕೆಲವೊಮ್ಮೆ ಆಡಳಿತ ವ್ಯವಸ್ಥೆಯ ತೆರೆದ ಮೂಲ ಆಡಳಿತ ಮತ್ತು ಸಹಯೋಗೀ ಆಡಳಿತ ಎಂಬಿತ್ಯಾದಿ ಹೆಸರುಗಳಿಂದಲೂ ಕರೆಯಲ್ಪಡುತ್ತದೆ. ನೇರ ವಿದ್ಯುನ್ಮಾನ ಪ್ರಜಾಪ್ರಭುತ್ವವು ವಿದ್ಯುನ್ಮಾನ ಮತದಾನ ಅಥವಾ ಮತ ಚಲಾಯಿಸಲು ಬೇರೆ ಯಾವುದೇ ವಿಧಾನದ ಅಗತ್ಯವನ್ನು ಹೊಂದಿದೆ. ಯಾವುದೇ ನೇರ ಪ್ರಜಾಪ್ರಭುತ್ವದಲ್ಲಿರುವಂತೆ ನಾಗರಿಕರು ಶಾಸನಸಭೆಯಲ್ಲಿ ಮತಚಲಾಯಿಸುವ ಹಕ್ಕು, ಶಾಸನವನ್ನು ಪುನಃ ರಚಿಸುವ ಹಕ್ಕು ಹಾಗೂ ಪ್ರತಿನಿಧಿಗಳನ್ನು ವಾಪಾಸು ಕರೆಸಿಕೊಳ್ಳುವ (ಯಾವುದೇ ಪ್ರತಿನಿಧಿಗಳು ಕಾಯ್ದಿರಿಸಲ್ಪಟ್ಟಿದ್ದರೆ) ಹಕ್ಕನ್ನೂ ಕೂಡಾ ಹೊಂದಿರುತ್ತಾರೆ. ತಂತ್ರಜ್ಞಾನವು ವಿದ್ಯಾರ್ಥಿ ಸಂಸ್ಥೆಗಳಿಂದ ಬಳಸಲ್ಪಡುವ ಫ್ಲೋರಿಡಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ನೇರವಿದ್ಯುನ್ಮಾನ ಪ್ರಜಾಪ್ರಭುತ್ವವನ್ನು ಬೆಂಬಲಿಸುವ ತಂತ್ರಜ್ಞಾನವು ಸಂಶೋಧಿಸಲ್ಪಟ್ಟಿದ್ದು ಅಭಿವೃದ್ಧಿಗೊಳ್ಳಲ್ಪಟ್ಟಿದೆ.[೨೯] ಹಲವು ಸಹಾಯಕ ಮತ್ತು ಸಂಬಂಧಿತ ಯೋಜನೆಗಳ ಜೊತೆಗೆ ಹಲವಾರು ಇತರ ತಂತ್ರಾಂಶ ಅಭಿವೃದ್ಧಿ ಯೋಜನೆಗಳು ಅಭಿವೃದ್ಧಿಯ ದಾರಿಯಲ್ಲಿವೆ.[೩೦][೩೧] ಈ ಯೋಜನೆಗಳನ್ನು ಹೆಚ್ಚಿನವುಗಳು ಈಗ ಮೆಟಾಗವರ್ನ್‌ಮೆಂಟ್ ಪ್ರಾಜೆಕ್ಟ್ ಎಂಬ ಒಂದೇ ಸೂರಿನಡಿ ಯಾವುದೇ ವೇದಿಕೆಯಡಿ (ಕ್ರಾಸ್ ಪ್ಲಾಟ್‌ಫಾರ್ಮ್) ಕಾರ್ಯನಿರ್ವಹಿಸಬಲ್ಲ ತಂತ್ರಾಂಶಗಳೊಂದಿಗೆ ಸಹಯೋಗತ್ವ ಹೊಂದಿವೆ.[೩೨] ನೇರ ವಿದ್ಯುನ್ಮಾನ ಪ್ರಜಾಪ್ರಭುತ್ವವು ಸುವ್ಯವಸ್ಥಿತವಾಗಿ ಪ್ರಪಂಚದ ಯಾವುದೇ ಸರಕಾರಗಳಲ್ಲಿ ಇನ್ನೂ ಕಾರ್ಯಗತಗೊಳಿಸಲ್ಪಟ್ಟಿಲ್ಲ. ಆದರೂ, ಹಲವಾರು ದಿಟ್ಟಹೆಜ್ಜೆಗಳು ಈಗ ಯೋಜಿಸಲ್ಪಟ್ಟಿವೆ. ಅಮೇರಿಕಾ ಸಂಯುಕ್ತ ಸಂಸ್ಥಾನ‌ದ ೧೯೯೨ ಮತ್ತು ೧೯೯೬ರ ತನ್ನ ಅಧ್ಯಕ್ಷೀಯ ಕಾರ್ಯಾಚರಣೆಯಲ್ಲಿ "ವಿದ್ಯುನ್ಮಾನ ಪುರಸಭೆಗಳು" (ಎಲೆಕ್ಟ್ರಾನಿಕ್ ಟೌನ್ ಹಾಲ್ಸ್)ಗೆ ವಕೀಲರಾಗಿದ್ದ ರಾಸ್ ಪೆರೋಟ್ ಒಬ್ಬ ಮಹಾನ್ ವಕೀಲರಾಗಿದ್ದು ನೇರ ವಿದ್ಯುನ್ಮಾನ ಪ್ರಜಾಪ್ರಭುತ್ವದ ಪ್ರಧಾನ ವಕೀಲರೂ ಆಗಿದ್ದಾರೆ. ಇದೀಗಾಗಲೇ, ಸಮಾರ್ಧ ನೇರ ಪ್ರಜಾಪ್ರಭುತ್ವ ಆಡಳಿತ ವ್ಯವಸ್ಥೆಯಿದ್ದ ಸ್ವಿಟ್ಸರ್‌ಲ್ಯಾಂಡ್ ಪೂರ್ಣಪ್ರಮಾಣದ ವ್ಯವಸ್ಥೆಗಾಗಿ ಅಗತ್ಯವಿರುವ ಎಲ್ಲಾ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದೆ.[೩೩] ೨೦೦೭ರ ಸಂಯುಕ್ತ ಸಂಸ್ಥಾನಗಳ ಚುನಾವಣೆಯಲ್ಲಿ ಸೆನೆಟರ್ ಆನ್-‌ಲೈನ್ ಎಂಬ ಆಸ್ಟ್ರೇಲಿಯಾದ ರಾಜಕೀಯ ಪಕ್ಷವು ಪ್ರತಿಯೊಂದು ಬಿಲ್ ಮೇಲೆ ಸೆನೇಟರ್ ಯಾವ ರೀತಿ ಮತ ಚಲಾಯಿಸಬೇಕು ಎಂದು ಆಸ್ಟ್ರೇಲಿಯನ್ನರು ತಿಳಿದುಕೊಳ್ಳಲು ಅನುಕೂಲವಾಗಲು ನೇರ ವಿದ್ಯುನ್ಮಾನ ಪ್ರಜಾಪ್ರಭುತ್ವವನ್ನು ಅಳವಡಿಸಿಕೊಳ್ಳುವಂತೆ ಅನುಮೋದಿಸಿತು.[೩೪] ಇಂತಹುದೇ ಪ್ರಯತ್ನವೊಂದು ೨೦೦೨ರಲ್ಲಿ ಸ್ವೀಡನ್‌ನಲ್ಲೂ ನಡೆದು ಸ್ವೀಡಿಶ್ ಪಾರ್ಲಿಮೆಂಟ್‌ನ್ನು ನಡೆಸುತ್ತಿರುವ ಆಕ್ಟೀವ್‌ಡೆಮಾಕ್ರಟಿ ಪಕ್ಷವು ತನ್ನ ಸದಸ್ಯರಿಗೆ ತನ್ನೆಲ್ಲಾ ಚಟುವಟಿಕೆಗಳನ್ನು ತಿಳಿದುಕೊಂಡು ಆ ಬಗ್ಗೆ ಎಲ್ಲಾ ಅಥವಾ ಕೆಲವು ವಿಚಾರಗಳಲ್ಲಿ ತಮ್ಮದೇ ಆದ ನಿರ್ಧಾರವನ್ನು ತಳೆಯುವ ಅಥವಾ ಒಂದು ಅಥವಾ ಹಲವು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ವಾಪಾಸು ಕರೆಸಿಕೊಳ್ಳುವ, ಬದಲಿ ವ್ಯವಸ್ಥೆ ಮಾಡುವಂತಹ ಎಲ್ಲಾ ಅಧಿಕಾರವನ್ನು ನೀಡಿದೆ. ಅನಿರ್ಧಿಷ್ಟ, ಚಂಚಲ ಪ್ರಜಾಪ್ರಭುತ್ವ ಅಥವಾ ಪ್ರಾತಿನಿಧ್ಯದ ಬದಲಿ ವ್ಯವಸ್ಥೆ ನೀಡಬಲ್ಲ ನೇರ ಪ್ರಜಾಪ್ರಭುತ್ವವು ಶಾಸನದಲ್ಲಿ ತನ್ನ ನಾಗರಿಕರು ತಾವು ನಂಬಿದ ಸೂಕ್ತ ಪ್ರತಿನಿಧಿಗಳಿಗೆ ಮತ ಚಲಾಯಿಸುವ ಅಧಿಕಾರವನ್ನು ಉಳಿಸಿಕೊಟ್ಟಿದೆ. ಮತ ಚಲಾಯಿಸುವುದು ಮತ್ತು ಪ್ರತಿನಿಧಿಗಳನ್ನು ನೇಮಕಗೊಳಿಸುವುದನ್ನು ವಿದ್ಯುನ್ಮಾನ ಮಾಧ್ಯಮದ ಮೂಲಕ ಮಾಡಬಹುದಾಗಿದೆ. ಈ ಪ್ರತಿನಿಧಿಗಳು ಕೂಡಾ ಇತರ ಪ್ರತಿನಿಧಿಗಳೊಡನೆ ಸೇರಿ ಪ್ರತಿನಿಧಿಗಳ ಸರಣಿಯನ್ನೆ ರೂಪಿಸಿಕೊಂದಿದ್ದು, ಒಂದು ವೇಳೆ, "ಎ" ಯು "ಬಿ"ಯನ್ನೂ, "ಬಿ"ಯು "ಸಿ"ಯನ್ನು ನೇಮಕಗೊಳಿಸಿದ್ದು, ಆದರೆ, "ಎ" ಅಥವಾ "ಬಿ" ಇಬ್ಬರೂ ಅನುಮೋದಿಸಿದ ಬಿಲ್‌ಗೆ ಮತ ಚಲಾಯಿಸದೆ, "ಸಿ"ಯು ಅದಕ್ಕೆ ಮತ ನೀಡಿದರೆ, "ಸಿ"ಯ ಮತವು ಈ ಮೂವರಿಗೂ ಸಲ್ಲುತ್ತದೆ. ಪ್ರಜೆಗಳೂ ಕೂಡಾ ತಮ್ಮ ಇಷ್ಟದ ಮೇರೆಗೆ ತಮ್ಮ ಪ್ರತಿನಿಧಿಗಳಿಗೆ ಸ್ಥಾನ ನೀಡುವ ಅವಕಾಶವಿದ್ದು ಒಂದು ವೇಳೆ ಇವರು ಮೊದಲು ಆರಿಸಿದ ಪ್ರತಿನಿಧಿಯು ಸೋತರೆ, ಇವರ ಆಯ್ಕೆಯ ಎರಡನೆಯ ಪ್ರತಿನಿಧಿಯು ಇವರ ಪರವಾಗಿ ಮತಚಲಾಯಿಸಲು ಅರ್ಹನಾಗುತ್ತಾನೆ.

ಮಾಹಿತಿ ಮತ್ತು ಸಂಪರ್ಕ ತಂತ್ರಜ್ಞಾನ ಮತ್ತು ರಾಜಕೀಯ ಪಾಲ್ಗೊಳ್ಳುವಿಕೆ[ಬದಲಾಯಿಸಿ]

ಮಾಹಿತಿ ಮತ್ತು ಸಂಪರ್ಕ ತಂತ್ರಜ್ಞಾನಗಳು(ಐಸಿಟಿ) ಪ್ರಜಾಜನರನ್ನು ಸಂಘಟಿಸುವಲ್ಲಿ ಮತ್ತು ಅವರಿಗೆ ಪೌರಾಡಳಿತದ ಹಲವು ಯೋಜನೆಗಳ ಸಹಿತ ಆ ಬಗೆಗಿನ ಮಾಹಿತಿಯನ್ನು ಜನರಿಗೆ ತಿಳಿಯಪಡಿಸುವಲ್ಲಿ ಮಹತ್ವದ ಕಾರ್ಯನಿರ್ವಹಿಸುತ್ತದೆ. ಪ್ರಜೆಗಳು ಸಕ್ರಿಯರಾಗಿ ಪಾಲ್ಗೊಳ್ಳುವುದನ್ನು ಹೆಚ್ಚಿಸಲು ಈ ಐಸಿಟಿಗಳನ್ನು ಬಳಸಲಾಗುತ್ತದೆ ಮತ್ತು ಆಡಳಿತ ವ್ಯವಸ್ಥೆಯ ಎಲ್ಲಾ ಪ್ರಕ್ರಿಯೆಗಳ ಪ್ರತಿಯೊಂದು ಹಂತದಲ್ಲಿ ಶಾಸನಗಳನ್ನು ಜಾರಿಗೊಳಿಸುವ ನಾಯಕರ ನಡುವಣ ಸಂಘಟನೆಯನ್ನು ಈ ತಂತ್ರಜ್ಞಾನಗಳು ಬೆಂಬಲಿಸುತ್ತವೆ.[೩೫] ತಮ್ಮನ್ನು ತಾವು ವ್ಯವಸ್ಥಿತವಾಗಿಟ್ಟುಕೊಳ್ಳಲು ನಾಗರಿಕರಿಗೆ ಸಹಾಯ ಮಾಡುವುದರೊಂದಿಗೆ ಐಸಿಟಿಗಳು ಪ್ರಜಾಜನರ ಸಾಂಸ್ಕೃತಿಕ ಪ್ರಾತಿನಿಧಿತ್ಯವನ್ನು ಸೂಚಿಸುವ ಸಾಂಸ್ಕೃತಿಕ ಸಂಕೇತಗಳನ್ನು ಬೆಳೆಸುತ್ತವೆ. ಪ್ರಜೆಗಳ ಸಬಲೀಕರಣವನ್ನು ಪ್ರೇರೇಪಿಸುವ ಅಥವಾ ಅವರನ್ನು ನಾಗರಿಕ ಪ್ರಜ್ಞೆ ಬೆಳೆಸುವಂತೆ ಮಾಡುವ ಪ್ರಮುಖ ಸಾಧನಗಳು ಎಂಬಂತೆ ತಿಳಿಯಲಾಗಿದೆ.[೩೬]

ಅಂತರ್ಜಾಲದ ಮೂಲಕ ಯುವಜನಾಂಗವನ್ನು ಪೌರತ್ವದಲ್ಲಿ ತೊಡಗಿಸಿಕೊಳ್ಳುವುದು[ಬದಲಾಯಿಸಿ]

ತರುಣ ಯುವಜನರನ್ನು ರಾಜಕೀಯ ಕ್ಷೇತ್ರದಲ್ಲಿ ಸಮರ್ಥವಾಗಿ ತೊಡಗಿಸಿಕೊಳ್ಳುವಂತೆ ಮಾಡುವಲ್ಲಿ ಅಂತರ್ಜಾಲದ ಸಾಮರ್ಥ್ಯದ ಬಗ್ಗೆ ಹಲವಾರು ಊಹೆಗಳು ಪ್ರಚಲಿತದಲ್ಲಿವೆ. ೩೫ ವರ್ಷಕ್ಕಿಂತ ಕೆಳಗಿನ ವಯಸ್ಸು ಹೊಂದಿರುವ, ಎಕ್ಸ್ ಮತ್ತು ವೈ ಎಂದು ಭಾರಿ ಭಾರಿಗೂ ಕರೆಯಲ್ಪಡುವ ಈ ತರುಣ ಯುವಜನರ ಸಮುದಾಯವು ರಾಜಕೀಯ ಆಸಕ್ತಿಯ ಕೊರತೆ ಮತ್ತು ರಾಜಕೀಯದಲ್ಲಿ ಚಟುವಟಿಕೆಗಳಲ್ಲಿ ಭಾಗವಹಿಸದೇ ಇರುವವರು ಎಂದು ಕಳೆದ ಎರಡು ದಶಕಗಳಿಂದಲೇ ಪ್ರಚಲಿತದಲ್ಲಿವೆ.[೩೭] ಯುವಜನಾಂಗವು ಮಾಧ್ಯಮಗಳನ್ನು ನಿಯಮಿತವಾಗಿ ಹಾಗೂ ಪರಿಣಾಮಕಾರಿಯಾಗಿ ದೀರ್ಘಕಾಲದಿಂದ ಬಳಸುವಲ್ಲಿ ಆಸಕ್ತಿಯನ್ನು ಕಳೆದುಕೊಂಡಿರುವುದು ಮತ್ತು ಹೊಸ ತಂತ್ರಜ್ಞಾನ ಹಾಗೂ ಆಧುನಿಕ ವಿಧಾನಗಳ ಬಗ್ಗೆ ಪರೀಕ್ಷೆ ನಡೆಸಲು ಉತ್ಸಾಹಿಗಳಾಗಿರುವುದು ದೃಢವಾಗಿದೆ. ಯುವ ಪ್ರೌಢರು ಆಧುನಿಕ ತಂತ್ರಜ್ಞಾನದ ಪ್ರಯೋಜನಗಳನ್ನು ಅದನ್ನು ತಮ್ಮ ಶಿಕ್ಷಣದಲ್ಲಿ, ಉದ್ಯೋಗದಲ್ಲಿ, ಹಾಗೂ ರಾಜಕೀಯ ಕ್ಷೇತ್ರದಲ್ಲಿ ಬಳಸುವಲ್ಲಿ ಆಸಕ್ತರಾಗಿದ್ದಾರೆ. ಯುವಜನರು ಅಂತರ್ಜಾಲ ತಂತ್ರಜ್ಞಾನದ ಬಳಕೆಯಲ್ಲಿ ಪರಿಣಿತರಾಗಿದ್ದು ಸಂಶೋಧನೆ ಮತ್ತು ರಾಜಕೀಯ ಮಾಹಿತಿಗಳಿಗಾಗಿ ಅಂತರ್ಜಾಲ ಆಧಾರಿತ ವೇದಿಕೆಗಳನ್ನು ಬಳಸುವಲ್ಲಿ ವಯಸ್ಕ ಪ್ರಜೆಗಳಿಗಿಂತ ಹೆಚ್ಚಿನ ಉತ್ಸಾಹ ಹೊಂದಿದ್ದಾರೆ.[೩೮] ಆದರೂ, ಇಂಟರ್‌ನೆಟ್ ಮತ್ತು ಸೋಶಿಯಲ್ ನೆಟ್‌ವರ್ಕಿಂಗ್ ವೆಬ್‌ಸೈಟ್‌ಗಳನ್ನೊಳಗೊಂಡ ಈ ಹೊಸ ಮಾಧ್ಯಮಗಳು ಯುವಜನಾಂಗವನ್ನು ಪ್ರಜಾಪ್ರಭುತ್ವ ಪ್ರಕ್ರಿಯೆಗಳಲ್ಲಿ ಸಕ್ರಿಯರಾಗಿ ತೊಡಗಿಸಿಕೊಳ್ಳುವಲ್ಲಿ ಒಮ್ಮತದ ಅಭಿಪ್ರಾಯವಿಲ್ಲ.

ಇವನ್ನೂ ನೋಡಿ[ಬದಲಾಯಿಸಿ]

 • ಆ‍ಯ್‌ಕ್ಟೀವ್‌ಡೆಮೊಕ್ರಟಿ
 • ಸಹವರ್ತಿ ಆಡಳಿತ
 • ಡೆಮೊಕ್ಸ್ - ಡೆಮೊಕ್ರಸಿ ಎಕ್ಸ್‌ಪಿರೀಮೆಂಟ್
 • ನೇರ ಪ್ರಜಾಪ್ರಭುತ್ವ
 • ಇ-ಸರಕಾರ
 • ಇ-ಭಾಗವಹಿಸುವಿಕೆ
 • ಇಲೆಕ್ಟ್ರಾನಿಕ್ ಕಾಯಿದೆ ಭಂಗ
 • ಆವಿಎಭವಿಸುವ ಪ್ರಜಾಪ್ರಭುತ್ವ
 • ಇರೂಲ್‌ಮೇಕಿಂಗ್
 • ಹ್ಯಾಕ್ಟಿವಿಜಮ್
 • ಅಂತರ್ಜಾಲ ಕಾರ್ಯಕಾರಿತ್ವ
 • ಮಾಧ್ಯಮ ಪ್ರಜಾಪ್ರಭುತ್ವ
 • ಆನ್‌ಲೈನ್ ಮಾತುಕತೆ
 • ಆನ್‌ಲೈನ್ ವಿವೇಚನೆ
 • ಮುಕ್ತ ರಾಜಕೀಯ
 • ಮುಕ್ತ ಮೂಲ ಆಡಳಿತ
 • ಪಾಲ್ಗೊಳ್ಳುವಿಕೆ
 • ಪಾಲ್ಗೊಳ್ಳುವ ಪ್ರಜಾಪ್ರಭುತ್ವ
 • ಸಂಸದೀಯ ಇನ್ಫಾರ್ಮೇಟಿಕ್ಸ್
 • ಹಂಗೇರಿಯಲ್ಲಿ ರಾಜಕೀಯ ಪಕ್ಷ ಅಂತರ್ಜಾಲ ಪ್ರಜಾಪ್ರಭುತ್ವದ ಪಕ್ಷ
 • ಸಾರ್ವಜನಿಕ ವಿಪ್
 • ಆಮೂಲಾಗ್ರ ಪಾರದರ್ಶಕತೆ
 • ಎರಡನೇಯ ಸೂಪರ್‌ಪವರ್
 • ಪ್ರಜ್ಞಾವಂತ ಗುಂಪು
 • ಅವರು ನಿಮಗಾಗಿ ಕೆಲಸ ಮಾಡಿತ್ತಾರೆ
 • ಪ್ರಜಾಪ್ರಭುತ್ವದ ಬಗೆಗಳು
 • ವೋಟಿಂಗ್ ಅಡ್ವೈಸ್ ಅಪ್ಲಿಕೇಶನ್

ಉಲ್ಲೇಖಗಳು[ಬದಲಾಯಿಸಿ]

 1. ಕ್ಲಿಫ್ಟ್,ಎಸ್. ((೨೦೦೪) ಇ-ಡೆಮಾಕ್ರಸಿ ರಿಸೋರ್ಸ್ ಲಿಂಕ್ಸ್ ಫ್ರಾಮ್ ಸ್ಟೀವನ್ ಕ್ಲಿಫ್ಟ್-ಇ-ಗವರ್ನಮೆಂಟ್, ಇ-ಪಾಲಿಟಿಕ್ಸ್, ಇ- ವೋಟಿಂಗ್ ಲಿಂಕ್ಸ್ ಆ‍ಯ್‌೦ಡ್ ಮೋರ್ ಜುಲೈ ೧೦, ೨೦೦೯ರಂದು ಮರುಸಂಪಾದಿಸಲಾಗಿದೆ, ಫ್ರಾಮ್ ಪಬ್ಲಿಕಸ್.ನೆ-ಟ್ ಪಬ್ಲಿಕ್ ಸ್ಟ್ರೇಟಜೀಸ್ ಫೋರ್ಥ್ ಆನ್‌ಲೈನ್ ವರ್ಲ್ಡ್: Publicus.net
 2. ^ Ibid .
 3. ೩.೦ ೩.೧ ಬೆಲ್ಲಮಿ ಸಿ., ಟಿ. ಜೆ. (೧೯೯೮). ಗವರ್ನಿಂಗ್ ಇನ್ ದ ಇನ್ಫಾರ್ಮೇಶನ್ ಏಜ್. ಗ್ರೇಟ್ ಬ್ರಿಟನ್:ಬಿಡ್ಡೆಲ್ಸ್ ಲಿಮಿಟೆಡ್.
 4. ಸ್ಟಾಕ್‌ವೆಲ್, ಎಸ್. (೨೦೦೧). ಹಾಕಿಂಗ್ ಡೆಮಾಕ್ರಸಿ: ದ ವರ್ಕ್ ಆಫ್ ದ ಗ್ಲೋಬಲ್. ದಿ ಸೌತರ್ನ್ ರಿವ್ಯೂ- ಆನ್‌ಲೈನ್ ಜರ್ನಲ್ , ೩೪ (ಸಂಖ್ಯೆ. ೩), ೮೭-೧೦೩
 5. ಫ್ರ್ಯಾಂಕ್-ರುಟಾ, ಜಿ. (೨೦೦೩). ವರ್ಚುವಲ್ ಪಾಲಿಟಿಕ್ಸ್: ಹೌ ದ ಇಂಟರ್ನೆಟ್ ಈಸ್ ಟ್ರಾನ್ಸ್‌ಫಾರ್ಮಿಂಗ್ ಡೆಮಾಕ್ರಸಿ. ದಿ ಅಮೆರಿಕನ್ ಪ್ರಾಸ್ಪೆಕ್ಟ್- ಆನ್‌ಲೈನ್ , ೧೪ (ಸಂಖ್ಯೆ. ೯), ಎ೬-ಎ೮.
 6. ಮರ್ಕ್ಯೂರಿಯೊ, ಬಿ. (೨೦೦೩). ಒವರ್ ಹೋಲಿಂಗ್ ಆಸ್ಟ್ರೇಲಿಯನ್ ಡೆಮಾಕ್ರಸಿ: ದಿ ಬೆನೆಫಿಟ್ಸ್ ಆ‍ಯ್‌೦ಡ್ ಬರ್ಡನ್ ಆಫ್ ಇಂಟರ್ನೆಟ್ ವೋಟಿಂಗ್ . ಯುನಿವರ್ಸಿಟಿ ಆಫ್ ತಾಸ್ಮೆನಿಯಾ ಲಾ ರಿವ್ಯೂ , ೨೧ (ಸಂಖ್ಯೆ. ೨), ೨೩-೬೫.
 7. Ibid .
 8. ಮೊಸ್ಕೊ, ವಿ. (೨೦೦೫) ದಿ ಡಿಜಿಟಲ್ ಸಬ್‌ಲೈಮ್: ಮೈತ್, ಪವರ್, ಆ‍ಯ್‌೦ಡ್ ಸೈಬರ್‌ಸ್ಪೇಸ್. ದಿ ಎಂಐಟಿ ಪ್ರೆಸ್‌. Maurizio Bolognini (2001), Democrazia elettronica (in Italian), Rome: Carocci Editore, ISBN 8843020358 External link in |title= (help)CS1 maint: unrecognized language (link) ಲಸೊಲಿ, ಡಬ್ಲ್ಯೂ. (೨೦೦೬- ಆಫ್ ವಿಂಡೋಸ್, ಟ್ರೈಯಾಂಗಲ್ಸ್ ಆ‍ಯ್‌೦ಡ್ ಸರ್ಕಲ್ಸ್: ದಿ ಪಾಲಿಟಿಕಲ್ ಇಕನಾಮಿ ಇನ್ ದ ಡಿಸ್ಕೋರ್ಸ್ ಆಫ್ ಇಲೆಕ್ಟ್ರಾನಿಕ್ ಡೆಮಾಕ್ರಸಿ. Comunicazione Politica, ೭(೧), ೨೭-೪೮. ಲಸೊಲಿ, ಡಬ್ಲ್ಯೂ (೨೦೦೭). Forme di democrazia elettronica. In G. Pasqino (Ed.), Strumenti della democrazia (ಪುಪು. ೧೦೧-೧೨೨). ಬೊಲೊಂಗಾ: Il ಮುಲಿನೊ.
 9. ಸೆಂಟರ್ ಫಾರ್ ಡಿಜಿಟಲ್ ಗವರ್ನಮೆಂಟ್ “ಡಿಜಿಟಲ್ ಸ್ಟೇಟ್ಸ್ ಸರ್ವೇ ಒಪನ್-ಅಕ್ಸೆಸ್ ಆನ್‌ಲೈನ್ ರಿಸೋರ್ಸ್ ೨೦೦೮ http://www.centerdigitalgov.com/survey/೬೧
 10. ಗವರ್ನಮೆಂಟ್ ಟೆಕ್ನಾಲಜೀಸ್ ಪಬ್ಲಿಕ್ ಸಿಐಒ ಥಾಟ್ ಲೀಡರ್ಶಿಪ್ ಪ್ರೊಪೈಲ್ "ಎಕ್ಸ್‌ಪ್ಯಾಂಡಿಂಗ್ ಇಗವರ್ನಮೆಂಟ್, ಎವರಿ ಡೇ" ಓಪನ್ ಅಕ್ಸೆಸ್ ಆನ್‌ಲೈನ್ ಪೇಪರ್ ೨೦೦೬ Nicusa.com
 11. Martin Hilbert (April, 2009). "The Maturing Concept of E-Democracy: From E-Voting and Online Consultations to Democratic Value Out of Jumbled Online Chatter". Journal of Information Technology and Politics. Retrieved February 24, 2010. Check date values in: |date= (help)
 12. ನೊವಾಕ್, ಟಿ., & ಹಾಫ್ಮನ್, ಡಿ. (೧೯೯೮). ಬ್ರಿಡ್ಜಿಂಗ್ ದ ಡಿಜಿಟಲ್ ಡಿವೈನ್: ದಿ ಇಂಪ್ಯಾಕ್ಟ್ ಆಫ್ ರೇಸ್ ಆನ್ ಕಂಪ್ಯೂಟರ್ ಅಕ್ಸೆಸ್ ಅ‍ಯ್‌೦ಡ್ ಇಂಟರ್ನೆಟ್ ಯೂಸ್. ನ್ಯಾಶ್ವಿಲ್ಲೆ: ವ್ಯಾಂಡರ್‌ಬಿಲ್ಟ್ ಯುನಿವರ್ಸಿಟಿ.
 13. ದಾಲ್, ಆರ‍್.ಎ. (೧೯೮೯). ಡೆಮಾಕ್ರಸಿ ಆ‍ಯ್‌೦ಡ್ ಪಾಲಿಟಿಕ್ಸ್. ಎಕ್ಸೆಟ್ರಾ. ನ್ಯೂ ಹೆವನ್: ಯಾಲೆ ಯುನಿವರ್ಸಿಟಿ ಪ್ರೆಸ್
 14. ನಾರಿಸ್, ಪಿ. (೨೦೦೧). ಡಿಜಿಟಲ್ ಡಿವೈನ್: ಸಿವಿಕ್ ಎಂಗೇಜ್ಮೆಂಟ್, ಇನ್ಫಾರ್ಮೇಶನ್ ಪಾವರ್ಟಿ, ಆ‍ಯ್‌೦ಡ್ ದ ಇಂಟರ್ನೆಟ್ ವರ್ಲ್ಡ್‌ವೈಡ್. ಕೇಂಬ್ರಿಡ್ಜ್ ಯುನಿವರ್ಸಿಟಿ ಪ್ರೆಸ್
 15. ಸೆಂಟರ್ ಫಾರ್ ಡಿಜಿಟಲ್ ಗವರ್ನಮೆಂಟ್ “ENGAGE: ಕ್ರಿಯೇಟಿಂಗ್ ಇ-ಗವರ್ನಮೆಂಟ್ ದ್ಯಾಟ್ ಸಪೋರ್ಟ್ಸ್ ಕಾಮರ್ಸ್,ಕೊಲಾರೇಶನ್, ಕಮ್ಯುನಿಟಿ ಆ‍ಯ್‌೦ಡ್ ಕಾಮನ್‌ವೇಲ್ತ್” ೨೦೦೮ Nicusa.com
 16. • ಆ‍ಯ್‌ಡಂ ನಗವ್ರ್ನಿ. "ಪಾಲಿಟಿಕ್ಸ್ ಫೇಸಸ್ ಸ್ವೀಪಿಂಗ್ ಚೇಂಜ್ ವಾಯಾ ದ ಇಂಟರ್ನೆಟ್."ದಿ ನ್ಯೂಯಾರ್ಕ್ ಟೈಮ್ಸ್ ೦೪-೦೨-೨೦೦೬ ೧-೨. NYtimes.com
 17. ಜೆನ್ಸೆನ್, ಎಂ.,ಡ್ಯಾಂಜೀಗರ್, ಜೆ., & ವೆಂಕಟೇಶ್, ಎ. (೨೦೦೭, ಜನವರಿ). ಸಿವಿಲ್ ಸೊಸೈಟಿ ಆ‍ಯ್‌೦ಡ್ ಸೈಬರ್ ಸೊಸೈಟಿ: ಇಂಟರ್ನೆಟ್ ಇನ್ ಕಮ್ಯುನಿಟಿ ಅಸೊಸಿಯೇಶನ್ ಅ‍ಯ್‌೦ಡ್ ಡೆಮಾಕ್ರಾಟಿಕ್ ಪಾಲಿಟಿಕ್ಸ್. ಇನ್ಫಾರ್ಮೇಶನ್ ಸೊಸೈಟಿ, ೨೩(೧), ೩೯-೫೦.
 18. ದಿ ರೋಡ್ ಟು ಇ-ಡೆಮಾಕ್ರಸಿ. (೨೦೦೮, ಫೆಬ್ರವರಿ). ದಿ ಇಕನಾಮಿಸ್ಟ್, ೩೮೬(೮೫೬೭), ೧೫.
 19. Klein, Hans (1999). "Tocqueville in Cyberspace: Using the Internet for Citizens Associations". The Information Society (15): 213–220. Unknown parameter |month= ignored (help)
 20. ನಾರೀಸ್, ಪಿ. (೨೦೦೧). ಡಿಜಿಟಲ್ ಡಿವೈನ್: ಸಿವಿಕ್ ಎಂಗೇಜ್ಮೆಂಟ್, ಇನ್ಫಾರ್ಮೇಶನ್ ಪಾವರ್ಟಿ, ಆ‍ಯ್‌೦ಡ್ ದ ಇಂಟರ್ನೆಟ್ ವರ್ಲ್ಡ್‌ವೈಡ್. ಕೇಂಬ್ರಿಡ್ಜ್ ಯುನಿವರ್ಸಿಟಿ ಪ್ರೆಸ್
 21. Ibid .
 22. Ibid .
 23. ಹಿಲ್ಬರ್ಹಿಲ್ಬರ್ಟ್, ಮಾರ್ಟೀನ್. "ಡಿಜಿಟಲ್ ಪ್ರೊಸಸಸ್ ಆ‍ಯ್‌೦ಡ್ ಡೆಮಾಕ್ರಾಟಿಡ್ ಥಿಯರಿ : ಡೈನಾಮಿಕ್ಸ್, ರಿಸ್ಕ್ಸ್ ಆ‍ಯ್‌೦ಡ್ ಅಪಾರ್ಚುನಿಟಿಸ್ ದ್ಯಾಟ್ ಅರೈಸ್ ವೆನ್ ಡೆಮಾಕ್ರಟಿಕ್ ಇನ್ಸ್ಟಿಟ್ಯೂಶನ್ ಮೀಟ್ ಡಿಜಿಟಲ್ ಇನ್ಫಾರ್ಮೇಶನ್ ಆ‍ಯ್‌೦ಡ್ ಕಮ್ಯುನಿಕೇಶನ್ ಟೆಕ್ನಾಲಜೀಸ್" ಒಪನ್ ಅಕ್ಸೆಸ್ ಆನ್‌ಲೈನ್ ಬುಕ್ ೨೦೦೭, Martinhilbert.net
 24. ಗಂತರ್, ಬಿ. (೨೦೦೬- ಅಡ್ವಾನ್ಸಸ್ ಇನ್ ಇ-ಡೆಮಾಕ್ರಸಿ: ಒವರ್‌ವ್ಯೂ. ಎಮರಾಲ್ಡ್ ಗ್ರುಪ್ ಪಬ್ಲಿಷಿಂಗ್ ಲಿಮಿಟೆಡ್ ೫೮(೫), ೩೬೧-೩೭೦
 25. ಇಂಡಿಯಾನಾ ಬ್ಯೂರೊ ಆಫ್ ಮೋಟಾರ್ ವೆಹಿಕಲ್ಸ್
 26. Nicusa.com
 27. ಕೆನೆಡಿಯನ್ ಪಾರ್ಟೀಸ್ ಇನ್ ಟ್ರಾನ್ಸಿಶನ್, ೩ನೇಯ ಆವೃತ್ತಿ. ಗ್ಯಾಂಗ್‌ನಾನ್ ಆ‍ಯ್‌೦ಡ್ ತ್ಯಾಂಗ್ವೆ (ಎಡಿಶನ್). ಚಾಪ್ಟರ್೨೦ - ಮಿಲ್ನರ್‌ರಿಂದ ಪ್ರಬಂಧ
 28. ಕೊಮಿಟೊ, ಎಲ್. (೨೦೦೭ ಡಿಸೆಂಬರ್ ಕಮ್ಯುನಿಟಿ ಆ‍ಯ್‌೦ಡ್ ಇನ್‌ಕ್ಲೂಷನ್‌: ದಿ ಇಂಪ್ಯಾಕ್ಟ್ ಆಫ್ ನ್ಯೂ ಕಮ್ಯುನಿಕೇಶನ್ಸ್ ಟೆಕ್ನಾಲಜೀಸ್ ಐರಿಷ್ ಜರ್ನಲ್ ಆಫ್ ಸೊಷಿಯಾಲಜಿ, ೧೬(೨), ೭೭-೯೬.
 29. ಕಟ್ಟಾಮುರಿ ಇಟಲ್. "ಸಪೋರ್ಟಿಂಗ್ ಡಿಬೇಟ್ಸ್ ಓವರ್ ಸಿಟಿಜನ್ಸ್ ಇನಿಶಿಯೇಟಿವ್ಸ್", ಡಿಜಿಟಲ್ ಗವರ್ನಮೆಂಟ್ ಕಾನ್ಫರೆನ್ಸ್ ಪುಪು ೨೭೯-೨೮೦, ೨೦೦೫
 30. ಲಿಸ್ಟ್ ಆಫ್ ರಿಲೇಟೆಡ್ ಪ್ರೊಜೇಕ್ಟ್ಸ್ ಫ್ರಾಮ್ ದ ಮೆಟಾಗವರ್ನಮೆಂಟ್ ಪ್ರೊಜೇಕ್ಟ್
 31. ಲಿಸ್ಟ್ ಆಫ್ ಆ‍ಯ್‌ಕ್ಟೀವ್ ಪ್ರೊಜೇಕ್ಟ್ಸ್ ಇನ್ವಾಲ್ವ್ಡ್ ಇನ್ the ಮೆಟಾಗವರ್ನಮೆಂಟ್ project
 32. ಸ್ಟ್ಯಾಂಡರ್ಡೈಸೇಶನ್ ಪ್ರೊಜೇಕ್ಟ್ ಆಫ್ ದಿ ಮೆಟಾಗವರ್ನಮೆಂಟ್ ಪ್ರೊಜೇಕ್ಟ್.
 33. ಎಲೆಕ್ಟ್ರಾನಿಕ್ ವೋಟಿಂಗ್ ಇನ್ ಸ್ವಿಜರ್ಲ್ಯಾಂಡ್ (ಇನ್‌ವ್ಯಾಲಿಡ್ ಲಿಂಕ್)
 34. "Senator On-Line". Retrieved 2008-06-03.
 35. ಕುಬಿಸೆಕ್, ಎಚ್., & ವೆಸ್ಟ್‌ಹ್ಯಾಮ್, ಎಚ್. (೨೦೦೭). ಸಿನಾರಿಯಸ್ ಫಾರ್ ಫ್ಯೂಚರ್ ಯೂಸ್ ಆಫ್ ಇ-ಡೆಮಾಕ್ರಸಿ ಟೂಲ್ಸ್ ಇನ್ ಯೂರೋಪ್ ಇನ್ ಡಿ.ಎಫ್. ನಾರೀಸ್, ಕರೆಂಟ್ ಇಶ್ಯೂಸ್ ಆ‍ಯ್‌೦ಡ್ ಟ್ರೆಂಡ್ಸ್ ಇನ್ ಇ-ಗವರ್ನಮೆಂಟ್ ರಿಸರ್ಚ್ (ಪುಪು.೨೦೩-೨೨೩). ಹರ್ಶಿ: ಸೈಬರ್‌ಟೆಕ್ ಪಬ್ಲಿಷಿಂಗ್.
 36. ಫ್ರೈಸೆನ್, ವಿ. ಎ. ಜೆ. (೨೦೦೮). ದ ಇ-ಮ್ಯಾನ್ಸಿಪೆಶನ್ ಆಫ್ ದ ಸಿಟಿಜನ್ ಆ‍ಯ್‌೦ಡ್ ದಿ ಫ್ಯೂಚರ್ ಆಫ್ ಇ-ಗವರ್ನಮೆಂಟ್: ರಿಪ್ಲೆಕ್ಷನ್ಸ್ ಆನ್ ಐಸಿಟಿ ಅ‍ಯ್‌೦ಡ್ ಸಿಟಿಜನ್ಸ್’. ಇನ್ ಎ.ಆ‍ಯ್‌೦ಟಿರೈಕೊ (ಎಡಿಶನ್.)., ಎಲೆಕ್ಟ್ರಾನಿಕ್ ಗವರ್ನಮೆಂಟ್: ಸಂಪುಟ. ೬., ಕಾನ್ಸೆಪ್ಟ್ಸ್, ಮೆಥಡಾಲಜೀಸ್, ಟೂಲ್ಸ್ ಆ‍ಯ್‌೦ಡ್ ಅಪ್ಲಿಕೇಶನ್ಸ್ (ಪುಪು. ೪೦೭೦-೪೦೮೪). ನ್ಯೂಯಾರ್ಕ್: ಇನ್ಫಾರ್ಮೇಶನ್ ಸೈನ್ಸ್ ರೆಫರೆನ್ಸ್
 37. ಓವನ್, ಡಿ. (೨೦೦೬- ದಿ ಇಂಟರ್ನೆಟ್ ಆ‍ಯ್‌೦ಡ್ ಯುಥ್ ಸಿವಿಕ್ ಎಂಗೇಜ್ಮೆಂಟ್ ಇನ್ ದ ಅಮೇರಿಕಾ ಸಂಯುಕ್ತ ಸಂಸ್ಥಾನ. ಇನ್ ಎಸ್. ಓಟ್ಸ್, ಡಿ. ಓವನ್ & ಆ. ಕೆ. ಗಿಬ್ಸನ್ (ಎಡಿಶನ್ಸ್.), ದಿ ಇಂಟರ್ನೆಟ್ ಆ‍ಯ್‌೦ಡ್ ಪಾಲಿಟಿಕ್ಸ್: ಸಿಟಿಜನ್ಸ್,ವೊಟರ್ಸ್ ಅ‍ಯ್‌೦ಡ್ ಆ‍ಯ್‌ಕ್ಟಿವಿಸ್ಟ್ಸ್. ಲಂಡನ್: ರೌಟ್ಲೆಡ್ಜ್.
 38. Ibid .

ಬಾಹ್ಯ ಕೊಂಡಿಗಳು[ಬದಲಾಯಿಸಿ]

 • Access2democracy.org, , ಎನ್‌ಜಿಒ - ಇ-ಪ್ರಜಾಪ್ರಭುತ್ವ: ಫ್ರಾಮ್ ಥಿಯರಿ ಟು ಪ್ರಾಕ್ಟೀಸ್.
 • ಕೌನ್ಸಿಲ್ ಆಫ್ ಯೂರೋಪ್ಸ್ ವರ್ಕ್ ಆನ್ ಇ-ಡೆಮಾಕ್ರಸಿ ಐಡಬ್ಲ್ಯುಜಿಯಿಂದ ೨೦೦೬ರಲ್ಲಿ ಸ್ಥಾಪನೆಯಾದ ಇ-ಪ್ರಜಾಪ್ರಭುತ್ವದ ಮೇಲೆ ಕೆಲಸ ಮಾಡಿದ ಆ‍ಯ್‌ಡ್ ಹಾಕ್ ಕಮಿಟಿ
 • Edc.unigue.ch -ಇಲೆಕ್ಟ್ರಾನಿಕ್ ಪ್ರಜಾಪ್ರಭುತ್ವದ ಮೇಲಿನ ಶೈಕ್ಷಣಿಕ ಸಂಶೋಧನಾ ಕೇಂದ್ರ. ಅಲೆಕ್ಸಾಂಡರ್ ಎಚ್. ತ್ರೆಶ್‌ಸೆಲ್ ನಿರ್ದೇಶಕರು, ಜಿನೆವಾ ವಿಶ್ವವಿದ್ಯಾಲಯದ c೨d ಮತ್ತು ಫ್ಲಾರೆನ್ಸ್‌ನಲ್ಲಿರುವ ಯೂರೋಪಿಯನ್ ಯುನಿವರ್ಸಿಟಿ ಇನ್ಸ್ಟಿಟ್ಯೂಟ್ ಮತ್ತು ಆಕ್ಸ್‌ಫರ್ಡ್ ಯುನಿವರ್ಸಿಟಿ ಒಐಐಯ ನಡುವಿನ ಜಂಟಿ ಉದ್ಯಮ.
 • Experientia.com - ಸಾರ್ವಜನಿಕ ಅಧಿಕಾರ ಮತ್ತು ಸ್ಥಳೀಯ ಸರ್ಕಾರದ ಜಾಲತಾಣಗಳಲ್ಲಿ ನಾಗರಿಕರು ಭಾಗವಹಿಸುತ್ತಿರುವುದನ್ನು ಸೃಜನಾತ್ಮಕ ದಾರಿಗಳ ಮೂಲಕ ವೃತ್ತಿಪರ ಬ್ಲಾಗ್‌ಗಳು ಕಂಡುಕೊಂಡಿವೆ.
 • E-Democracy.org
 • ICELE - ಇಂಟರ್ನ್ಯಾಶನಲ್ ಸೆಂಟರ್ ಆಫ್ ಎಕ್ಸೆಲೆನ್ಸ್ ಫಾರ್ ಲೋಕಲ್ ಇ-ಡೆಮಾಕ್ರಸಿ, ಯುಕೆ ನಡೆಸುತ್ತಿರುವ ಅಂತರಾಷ್ಟ್ರೀಯ ಯೋಜನೆಯಾಗಿದ್ದು ಇದಕ್ಕೆ ಬೇಕಾದ ಉಪಕರಣಗಳು, ಉತ್ಪನ್ನಗಳು, ಸಂಶೋಧನೆಗಳು ಮತ್ತು ಸ್ಥಳೀಯ ಇ-ಪ್ರಜಾಪ್ರಭುತ್ವಕ್ಕಾಗಿ ಕಲಿಕೆ ಒದಗಿಸುತ್ತಿದೆ.
 • ಇನ್ಸ್ಟಿಟ್ಯೂಟ್ ಫಾರ್ ಪಾಲಿಟಿಕ್ಸ್ ಡೆಮಾಕ್ರಸಿ ಆ‍ಯ್‌೦ಡ್ ದ ಇಂಟರ್ನೆಟ್
 • ಇಂಟರ್ಯಾಕ್ಟೀವ್ ಡೆಮಾಕ್ರಸಿ[೧] - ತಂತ್ರಜ್ಞಾನವುಯ್ ಹೇಗೆ ಪ್ರಜಾಪ್ರಭುತ್ವವನ್ನ ಸುಧಾರಿಸುತ್ತಿದೆ ಎಂಬುದನ್ನು ವಿವರಿಸುವ ಟಿಪ್ಪಣಿ
 • Esri.salford.ac.uk, IPOL - ಎ ಪೋರ್ಟಲ್ ಅನ್ ಇಂಟರ್ನೆಟ್ ಆ‍ಯ್‌೦ಡ್ ಪಾಲಿಟಿಕ್ಸ್ — ಆನ್‌ಲೈನ್ ಭಾಗವಹಿಸುವಿಕೆಯ ಕುರಿತಾಗಿನ ಪ್ರಥಮ ಮತ್ತು ದ್ವಿತೀಯ ಸಂಶೋಧನಾ ಮೂಲ, ಸಂಸತ್ತು ಮತ್ತು ಅಸೆಂಬ್ಲಿಗಳಿಂದ ಇ-ಪ್ರಜಾಪ್ರಭುತ್ವ ಮತ್ತು ಅಂತರ್ಜಾಲದ ಬಳಕೆಗಳನ್ನು ಈ ಜಾಲತಾಣ ಒಳಗೊಂಡಿದೆ; ಸ್ಟೀಫನ್ ವಾರ್ಡ್‌, ವೇನರ್ ಲಸೊಲಿ ಮತ್ತು ರಚೆಲ್ ಗಿಬ್ಸನ್‌‍ರಿಂದ ಸಂಪಾದನೆ.
 • Transparent-Gov.com
 • World E-democracy-Forum.com
 • ಐಸಿಇಜಿಒವಿ - ಇಂಟರ್ನ್ಯಾಶನಲ್ ಕಾನ್ಫರೇನ್ಸ್ ಆನ್ ಇಲೆಕ್ಟ್ರಾನಿಕ್ ಗವರ್ನನ್ಸ್
 • ಡೆಮಾಕ್ರಟೀಸ್ ಆನ್‌ಲೈನ್ ಎಕ್ಸ್‌ಚೇಂಜ್ - ಇ-ಪ್ರಜಾಪ್ರಭುತ್ವದ ಮೇಲೆ ಚರ್ಚೆ ನಡೆಸುವ ಡಿಸ್ಕಷನ್