ವಿಷಯಕ್ಕೆ ಹೋಗು

ಇರ್ವಿನ್ ಶ್ರೋಡಿಂಗರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
೧೯೩೩ರಲ್ಲಿ ಶ್ರೋಡಿಂಗರ್

ಇರ್ವಿನ್ ಶ್ರೋಡಿಂಗರ್ (1887-1961) ಆಸ್ಟ್ರಿಯದ ಭೌತವಿಜ್ಞಾನಿ ಮತ್ತು ಚಿಂತಕ. ನೊಬೆಲ್ ಪಾರಿತೋಷಿಕ ಪುರಸ್ಕೃತ.

ಈತನಿಗೆ ಚಿಕ್ಕಂದಿನಿಂದಲೇ ವಿಜ್ಞಾನದಲ್ಲಿ ಆಸಕ್ತಿ. ವ್ಯಾಕರಣ ಮತ್ತು ಜರ್ಮನ್ ಪದ್ಯಗಳ ಬಗ್ಗೆ ಅಪಾರ ಒಲವು. ಗ್ರೀಕ್ ಸಾಹಿತ್ಯ ಓದಿದ. 1906-1910ರ ತನಕ ವಿಯನ್ನ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ (1906-10). ಒಂದನೆಯ ಮಹಾಯುದ್ಧದಲ್ಲಿ (1914-18) ಫಿರಂಗಿದಳ ಅಧಿಕಾರಿಯಾಗಿ ಕೆಲಸ. ಮುಂದೆ ಸ್ಟಟ್‌ಗಾರ್ಟ್, ಬ್ರೆಸ್ಲೊ[] ಮತ್ತು ಜ಼ೂರಿಚ್ ವಿಶ್ವವಿದ್ಯಾಲಯಗಳಲ್ಲಿ ಪ್ರಾಧ್ಯಾಪಕ ಹುದ್ದೆ. ಜೂ಼ರಿಚ್ಚಿನಲ್ಲಿದ್ದ 6 ವರ್ಷಗಳು ಬಲು ತೃಪ್ತಿದಾಯಕವಾಗಿದ್ದುವು. ಅಲ್ಲಿ ಈತನ ಆತ್ಮೀಯ ಗೆಳೆಯರಾದ ಹರ್ಮನ್ ವೈಲ್ (1885-1955) ಮತ್ತು ಪೀಟರ್ ಡಿಬೈ (1884-1966) ಇದ್ದರು. ಈತನ ಹೆಸರಿನಿಂದಲೇ ಪ್ರಸಿದ್ಧವಾಗಿರುವ ತರಂಗ ಸಮೀಕರಣವನ್ನು ಈತ ಸ್ಥಾಪಿಸಿದ್ದು ಇಲ್ಲೇ(1926).

ಈತನಿಗೆ ನೀಲ್ಸ್ ಬೋರ್‌ನ (1885-1962) ತತ್‌ಕ್ಷಣಿಕ ರೀತಿಯ ಶಕಲ ಸಿದ್ಧಾಂತ ಹಿಡಿಸಿರಲಿಲ್ಲ. ಯಾವುದಾದರೊಂದು ಬಗೆಯ ಐಗನ್ ಮೌಲ್ಯ ಸಮಸ್ಯೆಯಿಂದ ಪರಮಾಣು ರೋಹಿತ ನಿರ್ಧರಿತವಾಗಬೇಕೆಂದು ಯೋಚಿಸುತ್ತಿದ್ದ. ಕಣಗಳೂ ತರಂಗಗಳಂತೆ ವರ್ತಿಸುತ್ತವೆ ಎಂಬ ಅಭಿಪ್ರಾಯವನ್ನು ಲೂಯಿ ಡಿ ಬ್ರಾಗ್ಲೀ (1892-1987) ಮಂಡಿಸಿದಾಗ ಇದನ್ನು ಗಣನೆಗೆ ತೆಗೆದುಕೊಂಡು ಎರಡನೆಯ ವರ್ಗದ ಒಂದು ಅವಕಲ ಸಮೀಕರಣವನ್ನು ಸ್ಥಾಪಿಸಿದ. ಇದಕ್ಕೆ ಶ್ರೋಡಿಂಗರ್ ಸಮೀಕರಣ ಎಂದು ಹೆಸರು.[] ಇಲ್ಲಿ ತರಂಗ ಫಲನ (ವೇವ್ ಫಂಕ್ಷನ್), ಕಣಚಲಿಸುವ V(r,t) = ವಿಭವ, (h=ಪ್ಲಾಂಕ್ ಸ್ಥಿರಾಂಕ). ಈ ಸಮೀಕರಣದಿಂದ ಈತ ಹೈಡ್ರೊಜನ್ ಪರಮಾಣುವಿನ ರೋಹಿತವನ್ನು ವಿವರಿಸಿದ. ಪರಮಾಣುಗಳ ಆಲ್ಫ ಕ್ಷಯಯನ್ನು (ಆಲ್ಫ ಡಿಕೇ) ಜಾರ್ಜ್ ಗ್ಯಾಮೊ (1904-68) ವಿವರಿಸಿದ. ಪರಮಾಣು ಮತ್ತು ನ್ಯೂಕ್ಲಿಯರ್ ಭೌತವಿಜ್ಞಾನದ ಅಧ್ಯಯನಕ್ಕೆ ಈ ಸಮೀಕರಣ ಅಡಿಗಲ್ಲಾಯಿತು. ಈ ಸಾಧನೆಗೆ ಈತನಿಗೆ 1933ರ ಭೌತವಿಜ್ಞಾನದ ನೊಬೆಲ್ ಪ್ರಶಸ್ತಿ ದೊರೆಯಿತು.[] 1927ರಲ್ಲಿ ಈತ ಪ್ಲಾಂಕ್‌ನ (1858-1947) ಉತ್ತರಾಧಿಕಾರಿಯಾಗಿ ಬರ್ಲಿನ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕನಾದ. ಆಗ ಜರ್ಮನಿಯ ರಾಜಧಾನಿ ವಿದ್ವತ್ತಿನ ಗಣಿಯಾಗಿತ್ತು. 1938ರಲ್ಲಿ ಹಿಟ್ಲರ್ (1889-1945) ಆಸ್ಟ್ರಿಯವನ್ನು ವಶಪಡಿಸಿಕೊಂಡಾಗ ಈತ ತಲೆಮರೆಸಿಕೊಂಡು ಇಟಲಿಗೆ ಹೋದ. ಮುಂದೆ ಡಬ್ಲಿನ್‌ನಲ್ಲಿ ಸೈದ್ಧಾಂತಿಕ ಭೌತವಿಜ್ಞಾನ ಶಾಲೆಯ ನಿರ್ದೇಶಕನಾಗಿ ನೇಮಕಗೊಂಡ.[] ನಿವೃತ್ತನಾಗುವ ತನಕ ಅಲ್ಲಿಯೇ ಇದ್ದ. 1953ರಲ್ಲಿ ವಿಯನ್ನಕ್ಕೆ ಹಿಂತಿರುಗಿದ. 1961 ಜನವರಿ 4ರಂದು ನಿಧನನಾದ. ಈತ ‘ವಾಟ್ ಈಸ್ ಲೈಫ್’ ಎಂಬ ಕೃತಿಯನ್ನು ರಚಿಸಿದ್ದಾನೆ.

ಉಲ್ಲೇಖಗಳು

[ಬದಲಾಯಿಸಿ]
  1. "The Nobel Prize in Physics 1933". NobelPrize.org (in ಅಮೆರಿಕನ್ ಇಂಗ್ಲಿಷ್). Retrieved 2023-02-19.
  2. Moore 1992, p. 194.
  3. "The Nobel Prize in Physics 1933". The Nobel Foundation. Retrieved 13 August 2021.
  4. Daugherty, Brian. "Brief Chronology". Erwin Schrödinger. Archived from the original on 9 March 2012. Retrieved 10 December 2012.

ಹೊರಗಿನ ಕೊಂಡಿಗಳು

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: