ಇರ್ಫಾನ್ ಖಾನ್

ವಿಕಿಪೀಡಿಯ ಇಂದ
Jump to navigation Jump to search

ಇರ್ಫಾನ್ ಖಾನ್
Irrfan Khan 2012.jpg
Khan at the press conference of director Ang Lee's Life of Pi (2012) at New Delhi
ಜನನ
Sahabzade Irrfan Ali Khan[೧]

(1962-11-30) 30 November 1962 (age 57)[೨]
Jaipur, Rajasthan, India
Other namesIrfan
ವೃತ್ತಿActor
ಜೀವಿತಾವಧಿ1988–present
ಸಂಗಾತಿSutapa Sikdar (1995–present)
ಜಾಲತಾಣwww.irrfan.com

'ಸಾಹಬ್ಜಾದೆ ಇರ್ಫಾನ್ ಖಾನ್',ಎಂಬ ಹೆಸರಿನ ಬಾಲಿವುಡ್ ನಟ, ಮೊದಲು ಇರ್ಫಾನ್ ಖಾನ್' ಎಂದು ಪರಿಚಿತರಾಗಿದ್ದರು. ನಂತರ, ಬಾಲಿವುಡ್ ನ ಆತನ ಗೆಳೆಯರಿಗೆಲ್ಲಾ 'ಇರ್ಫಾನ್'(Irrfan)ಎಂದೇ ಪ್ರಸಿದ್ಧರಾದರು.( ಜ.ನವೆಂಬರ್, ೧೯೬೨) ಭಾರತೀಯ ಬಾಲಿವುಡ್ ಚಲನಚಿತ್ರರಂಗದಲ್ಲಿ ಒಳ್ಳೆಯ ಅಭಿನೇತನೆಂದು ಹೆಸರುಗಳಿಸಿದ್ದಾರೆ.ಟೆಲಿವಿಶನ್ ವಲಯ, ಹಾಗೂ ರಂಗಭೂಮಿಯಲ್ಲೂ ಅತ್ಯುತ್ತಮ ಯೋಗದಾನ ಮಾಡಿದ್ದಾರೆ. ಬಾಲಿವುಡ್ ಚಿತ್ರರಂಗದಲ್ಲಿ ಅವರು ಕಾಣಿಸಿಕೊಂಡಚಲನಚಿತ್ರಗಳು :

 • 'ವಾರಿಯರ್',
 • 'ಮಕ್ಬೂಲ್,
 • 'ಹಾಸಿಲ್',
 • 'ಪಾನ್ ಸಿಂಗ್ ತೋಮರ್',
 • 'ರೋಗ್'

ಚಿತ್ರಗಳಿಂದ ಪರಿಚಿತರು. ಟೆಲಿವಿಶನ್ ನಿರ್ಮಾಣದ,'ಮಾನೋ ಯಾ ಮಾನೋ' 'ವೊಡಫೋನ್ ಕಮರ್ಶಿಯಲ್ಸ್' ನಲ್ಲಿ ಕೆಲಸ. ೨೦೧೨ ರಲ್ಲಿ 'ತೋಮರ್' ಚಿತ್ರದಲ್ಲಿ 'ತೋಮರ್' ಎಂಬ ಪಾತ್ರದಲ್ಲಿ ಹೆಸರಾದರು. ಒಟ್ಟಾರೆ ೩೦ ಹಿಂದಿ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಅವರು ಕೆಲವು ಇಂಗ್ಲೀಷ್ ಚಲನಚಿತ್ರಗಳಲ್ಲಿ, ಮತ್ತು ಟೆಲೆವಿಶನ್ ಧಾರಾವಾಹಿಗಳಲ್ಲೂ ಅಭಿನಯಿಸಿದ್ದಾರೆ. ಅವುಗಳ ವಿವರಗಳು ಹೀಗಿವೆ :

 • 'ನೇಮ್ ಸೇಕ್',
 • 'ನ್ಯೂಯಾರ್ಕ್,ಐ ಲವ್ ಯು',
 • 'ಅ ಮೈಟಿ ಹಾರ್ಟ್',
 • 'ಸ್ಲಮ್‌ಡಾಗ್ ಮಿಲಿಯನೇರ್',
 • 'ದ ಅಮೇಸಿಂಗ್ ಸ್ಪೈಡರ್ ಮ್ಯಾನ್',
 • 'ಲೈಫ್ ಆಫ್ ಪೈ'.
 • 'ಇನ್ ಟ್ರೀಟ್ ಮೆಂಟ್',ಎಚ್.ಬಿ.ಓ.ಧಾರಾವಾಹಿಯಲ್ಲಿ.(HBO series)

ಬಾಲ್ಯದ ದಿನಗಳು[ಬದಲಾಯಿಸಿ]

೧೯೯೫ ರ ಫೆಬ್ರವರಿ ೨೩ ರಂದು, ಮುಸಲ್ಮಾನ ಪರಿವಾರವೊಂದರಲ್ಲಿ ಜನಿಸಿದರು. ತಾಯಿ,ಬೇಗಂ, 'ಟೊಂಕ್ ಹಕೀಮ್' ಪರಿವಾರದಿಂದ ಬಂದವರು. ತಂದೆ, ಒಬ್ಬ ಜಾಗೀರ್ದಾರ್. 'ಟೊಂಕ್' ಜಿಲ್ಲೆಯ 'ಖಜೂರಿ' ಗ್ರಾಮದಲ್ಲಿ 'ಟೈರ್ ಬಿಸಿನೆಸ್' ನಡೆಸುತ್ತಿದ್ದರು. ಇರ್ಫಾನ್, ೧೯೮೪ ರಲ್ಲಿ 'ಎಂ.ಎ.'ಪದವಿಗೆ ತಯಾರಿ ನಡೆಸುತ್ತಿದ್ದರು. ದೆಹಲಿಯ 'ನ್ಯಾಷನಲ್ ಸ್ಕೂಲ್ ಆಫ್ ಡ್ರಾಮ'ದಲ್ಲಿ '(NSD)'ಪ್ರವೇಶ ದೊರೆಯಿತು. ವಿದ್ಯಾರ್ಥಿ ವೇತನವೂ ದೊರಕಿತು.

ವೈಯಕ್ತಿಕ ಜೀವನ[ಬದಲಾಯಿಸಿ]

ಕವಯಿತ್ರಿ, 'ಸುತಾಪ ಸಿಕ್ದಾರ್'ಜೊತೆ ಮದುವೆಯಾದರು. ಆಕೆ,'ಎನ್.ಎಸ್.ಡಿ'.ಪದವೀಧರೆ. ಮಕ್ಕಳು 'ಬಾಬಿಲ್', ಮತ್ತು 'ಆರ್ಯನ್', ಇಬ್ಬರು ಸೊದರರು. 'ಇಮ್ರಾನ್ ಖಾನ್' ಮತ್ತು 'ಸಲ್ಮಾನ್ ಖಾನ್'. 'ರುಖ್ಸಾನಾ ಬೇಗಂ,' ಸೊದರಿ. ಪತ್ನಿ ಸಿಕ್ದಾರ್ ಹೇಳುವಂತೆ, "ಯಾವಾಗಲೂ ಏನೋ ತಲೆಗೆ ಹಚ್ಚಿಕೊಂಡು ಅದನ್ನು ಸಾಧಿಸಲು ಹಾತೊರೆಯುವ ಸ್ವಭಾವದವರು. ಹೊರಗಡೆಯಿಂದ ಮನೆಗೆ ಬಂದಕೂಡಲೆ 'ಬೆಡ್ ರೂಮ್' ಗೆ ಹೋಗಿ ನೆಲದಮೇಲೆ ಕೂತು, ಪುಸ್ತಕ ಒದುತ್ತಾರೆ. ನಾವೆಲ್ಲಾ ಅದೂ-ಇದು ಮಾತಿನಲ್ಲಿ ತೊಡಗಿದಾಗ, ಯಾವುದಾದರೂ ಒಂದು 'ಹಾಲಿವುಡ್ ಕಥೆ'ಯನ್ನು ವಾರಕ್ಕೊಮ್ಮೆಯಾದರೂ ಓದುವ ಹವ್ಯಾಸ ಅವರದು. ಮಧ್ಯರಾತ್ರಿ ೩ ರ ವರೆಗೆ ಎದ್ದಿದ್ದು, ತಮ್ಮ ಕೆಲಸದಲ್ಲಿ ತೊಡಗಿರುತ್ತಾರೆ. ಚಿಕ್ಕದಾಗಿ ಕಾಗದದಲ್ಲಿ ಬರೆದುಕೊಂಡು ಅದನ್ನು ಪ್ರತಿಬಾರಿ ಹೇಳಿ, ಬಾಯಿಪಾಠ ಮಾಡುತ್ತಾರೆ". 'ಬನೆಗಿ ಅಪ್ನಿ ಬಾತ್' ನ ಪಟ್ಕಥೆಯನ್ನು ಬರೆಯಲು ಪತ್ನಿಯ ಸಹಾಯ ಪಡೆದರು. ಸುಮಾರು ೧೧ ಬಾರಿ ಪುನಃ-ಪುನಃ ಬರೆಯಲು ಹೇಳಿದರು. ಪತ್ನಿಯ ಜೊತೆ ಸ್ಟೇಶನ್ ಗೆ ಹೋಗಿ, ಅಲ್ಲಿನ ವಿಧಿ-ವಿಧಾನಗಳನ್ನು ಅರಿಯುವ ಕೆಲಸ ಮಾಡಿದರು. ಈಗ ಅವರ ಹೆಸರನ್ನು 'ಇರ್ಫಾನ್' (Irrfan) ಎಂದು ಬದಲಾಯಿಸಿದ್ದಾರೆ. ಹೆಸರಿನಲ್ಲಿರುವ 'ಆರ್' ಅಕ್ಷರ ಒತ್ತಿ ಹೇಳಿದಾಗ, ಅವರಿಗೆ ಖುಷಿಯಾಗುತ್ತದಂತೆ.

ಅಭಿನಯ ಪ್ರಪಂಚದಲ್ಲಿ[ಬದಲಾಯಿಸಿ]

ಅಭಿನಯ ಅವರ ಜೀವನದ ಒಂದು ಮಹತ್ತರ ಅಂಶವಾಗಿದೆ. 'ಜೈಪುರ'ದಿಂದ ಆಗಿನ ಬೊಂಬಾಯಿಗೆ ಬಂದರು. ಆಗ 'ಡಿ.ಡಿ ಚಾನಲ್' ಬಹಳ ಹೆಸರುವಾಸಿಯಾಗಿತ್ತು.ಟೆಲಿವಿಶನ್ ಧಾರವಾಹಿಗಳಲ್ಲಿ ಅಭಿನಯಿಸಿದರು.

 • ಚಾಣಕ್ಯ,
 • ಭಾರತ್ ಏಕ ಖೋಜ್,
 • ಸಾರಾ ಜಹಾ ಹಮಾರ
 • ಬನೆಗೀ ಅಪ್ನಿ ಬಾತ್,
 • ಚಂದ್ರಕಾಂತ (ಡಿಡಿ)
 • ಅನೂ ಗೂಂಜ್ (ದೂರದರ್ಶನ),
 • ಸ್ಟಾರ್ ಬೆಸ್ಟ್ ಸೆಲ್ಲರ್ಸ್ ಸ್ಟಾರ್ ಪ್ಲಸ್)ಮತ್ತು ಸ್ಪರ್ಶ್,

ಇದಕ್ಕೆ ಮೊದಲು 'ದೂರದರ್ಶನದ ಟೆಲೆ ಪ್ಲೇ', 'ಲಾಲ್ ಘಾಸ್', 'ಪಾರ್ ನೀಲಾ ಘೋಡೆ' ನಲ್ಲಿ 'ಲೆನಿನ್' ಪಾತ್ರದಲ್ಲಿ ಅಭಿನಯಿಸಿದರು.

 • 'ಉದಯ್ ಪ್ರಕಾಶ್' ಅನುವಾದಿತ ಚಿತ್ರ, ರಷ್ಯನ್ ನಾಟಕ-ಮಿಖೈಲ್ ಶಾತ್ರೋವ್ ಬರೆದ, 'ದಾರ್' ಎಂಬ ಧಾರಾವಾಹಿಯಲ್ಲಿ ಪ್ರಮುಖ ಖಳನಾಯಕ. ಒಬ್ಬ ಜವಳಿ ಕೊಲೆಗಡುಕನ ಪಾತ್ರ.
 • ಕೆ.ಕೆ.ಮೆನನ್ ಜೊತೆ, ಇದಲ್ಲದೆ ಸುಪ್ರಸಿದ್ಧ ಉರ್ದು ಕವಿ, ಮಾರ್ಕ್ಸ್ ವಾದಿ ಅಕ್ತಿವಿಸ್ಟ್ ಮಖ್ದೂಮ್ ಮೊಹಿಉದ್ದೀನ್ ಕಹ್ಕಶನ್, ಅಲಿ ಸರ್ದಾರ್ ಜಾಫ್ರಿ ನಿರ್ಮಿಸಿದ,ಸ್ಟಾರ್ ಬೆಸ್ಟ್ ಸೆಲ್ಲರ್ಸ್ ಕತೆಗಳಲ್ಲಿ (ಸ್ಟಾರ್ ಪ್ಲಸ್ ವಾಹಿನಿಯಲ್ಲಿ) ನಟಿಸಿದರು.
 • 'ಏಕ್ ಶಾಮ್ ಕಿ ಮುಲಾಕಾತ್' ನಲ್ಲಿ 'ಪಾರ್ಚೂನ್ ಶಾಪ್ ವಾಲ' ಪಾತ್ರ. ಮಾಲೀಕನ ಹೆಂಡತಿ ಅವನನ್ನು ಮೊಹಿತನನ್ನಾಗಿ ಮಾಡುತ್ತಿದ್ದಾಳೆ ಎಂಬ ಭ್ರಮೆಗ ಒಳಗಾಗುತ್ತಾನೆ. ಅವನ ಹೆಂಡತಿಯೇ (ತಿಸ್ಕಾ ಚೋಪ್ರ,)ಅವನಿಗೆ ಮೊಸಮಾಡುತ್ತಿದ್ದಾಳೆ.
 • ಮತ್ತೊಂದು ಆಫೀಸ್ ಲೆಕ್ಖಪತ್ರ ಅಧಿಕಾರಿ ಪಾತ್ರ. 'ಮಹಿಳಾ ಬಾಸ್' ನಿಂದ ಅವಮಾನಿತನಾಗಿ, ಅವಳ ಮೇಲೆ ಸೇಡು ತೀರುಸುವ ಪಾತ್ರ.
 • 'ಭಂವರ್' ಎಂಬ ಸೀರಿಯಲ್ ನಲ್ಲಿ (ಸೆಟ್ ಇಂಡಿಯ)-೨ ಎಪಿಸೋಡ್, ಮೊದಲನೆಯದರಲ್ಲಿ ಒಬ್ಬ ಕಳ್ಳನ ಪಾತ್ರ.
 • ೧೯೮೮ ರಲ್ಲಿ, 'ಸಲಾಂ ಬಾಂಬೆ', ಚಿತ್ರದಲ್ಲಿ 'ಮೀರಾನಾಯರ್' ಅವರಿಗೆ ಒಂದು ಪಾತ್ರ ಕೊಟ್ಟರು. ಅಲ್ಲಿಯವರೆಗೆ ಟೆಲಿವಿಶನ್ ಮತ್ತು ಥಿಯೇಟರ್ ಕೆಲಸಮಾಡುತ್ತಿದ್ದರು.
 • ೧೯೯೦ ರಲ್ಲಿ, 'ಏಕ್ ಡಾಕ್ಟರ್ ಕಿ ಮೌತ್ ಚಿತ್ರ' ಮತ್ತು ೧೯೯೮ ರಲ್ಲಿ,'ಸಚ್ ಎ ಲಾಂಗ್ ಜರ್ನಿ', ಹಲವು ಚಿತ್ರಗಳು ಅಷ್ಟು ಜನಪ್ರಿಯವಾಗಲಿಲ್ಲ ಲಂಡನ್ ವಾಸಿ, 'ಡಾ. ಅಸೀಫ್ ಕಪಾಡಿಯ' 'ವಾರಿಯರ್' ಚಿತ್ರದಲ್ಲಿ ನಾಯಕ ಪಾತ್ರ ಕೊಟ್ಟರು. ಇದು, ಚಾರಿತ್ರಿಕ ಚಿತ್ರ, ೧೧ ವಾರಗಳಲ್ಲಿ ಹಿಮಾಚಲ್ ಪ್ರದೇಶ್, ಮತ್ತು ರಾಜಾಸ್ತಾನ್ ನಲ್ಲಿ ಚಿತ್ರೀಕರಣವಾಯಿತು.
 • ೨೦೦೧ ರಲ್ಲಿ ವಾರಿಯರ್, 'ಅಂತಾರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್' ನಲ್ಲಿ ಜನಪ್ರಿಯತೆಯನ್ನು ತಂದುಕೊಟ್ಟಿತು.
 • ೨೦೦೩-೪ ರಲ್ಲಿ ಭಾರತೀಯ ಬರಹಗಾರ, ಅಶ್ವಿನಿ ಕುಮಾರ್ ನಿರ್ದೇಶಿಸಿದ, ಚಿಕ್ಕ ಚಿತ್ರ, 'ರೋಡ್ ಟು ಲಢಕ್' ನಲ್ಲಿ ಒಂದು ಕಿರ್ದಾರ್ ಮಾಡಲು ಅವಕಾಶ ಸಿಕ್ಕಿತು. 'ಅಂತಾರಾಷ್ಟ್ರೀಯ ಫೆಸ್ಟಿವಲ್' ನಲ್ಲಿ ಒಳ್ಳೆಯ ಪ್ರತಿಕ್ರಿಯೆ ಬಂತು. ಈಗ ಅದು ದೊಡ್ಡ ಚಿತ್ರವಾಗಿ ನಿರ್ಮಿಸಲ್ಪಡುತ್ತಿದೆ.
 • ಇರ್ಫಾನ್ ಖಾನ್ ಒಟ್ಟಿಗೆ ಅದೇ ವರ್ಷದಲ್ಲಿ 'ಮಕ್ಬೂಲ್' ಎಂಬ ಮತ್ತೊಂದು 'ಶೇಕ್ಸ್ ಪಿಯರ್ ಮಹಾಕವಿ'ಯ, ಜನಪ್ರಿಯ 'ಮ್ಯಾಕ್ಬೆತ್ ನಾಟಕ'ವನ್ನಾಧರಿಸಿದ ಚಿತ್ರದಲ್ಲಿ ಪಾತ್ರವಹಿಸಿದರು.
 • ಬಾಲಿವುಡ್ ಸಿನಿಮಾದಲ್ಲಿ ಮೊದಲು ಪಾದಾರ್ಪಣೆ ಮಾಡಿದ್ದು ೨೦೦೫ ರಲ್ಲಿ 'ರೋಗ್' ಎಂಬ ಚಿತ್ರದೊಂದಿಗೆ. ಮೆಚ್ಚುಗೆಯ ಮಾತುಗಳು ಚಿತ್ರವಲಯದಲ್ಲಿ ಬರಲಾರಂಭಿಸಿದವು. ಇರ್ಫಾನ್ ರ ಕಣ್ಣುಗಳು ಕಥೆಯ ಸಾರವನ್ನು ಎತ್ತಿಹೇಳುತ್ತವೆ. 'ಮನೀಶ್' ಜೊತೆಗಿರಲಿ ಅಥವಾ 'ಸುಹೇಲ್' ಜೊತೆ ವಾದಮಾಡುತ್ತಿರಲಿ ಒಳ್ಳೆಯ ನಟನೆ ಅವರಿಗೆ ತಾನಾಗಿಯೇ ಬಂದಿದೆ. ಹಲವಾರು ಚಿತ್ರಗಳಲ್ಲಿ ನಾಯಕ ಖಳನಾಯಕ, ಇಲ್ಲವೇ ಪೋಷಕ ನಟ. ೨೦೦೪ ಬೆಸ್ಟ್ ವಿಲನ್ ರೋಲ್ ನ್ಹಾಅಲ್ಸಿಲ್ಲಿ ಕಾಣಿಸಿದರು. ಅತಿ ಮಹತ್ವಾಕಾಂಕ್ಷಿ, ಧೀರ, ಒರಟನ ಪಾತ್ರ; ಮತ್ತಿನ್ನೇನು ಮಾಡುತಾನೋ ನೋಡೋಣ, ಎಂದು ಎದ್ದು ಕೂಡುವಷ್ಟು ಆಸಕ್ತಿ ಕೆರಳಿಸುತ್ತವೆ.
 • ೨೦೦೭ ಮೆಟ್ರೋ ಎಂಬ ಬಾಕ್ಸ್ ಆಫೀಸ್ ಹಿಟ್ ಚಿತ್ರ. ಫಿಲ್ಮ್ ಫೇರ್ ಪ್ರಶಸ್ತಿ ಅತ್ಯುತ್ತಮ ಪೋಷಕ ನಟ.
 • ನೇಮ್ ಸೇಕ್, ಎಂಬ ಚಿತ್ರದಲ್ಲಿ 'ಕೊಂಕಣ ಸೆನ್' ಜೊತೆ 'ಮೆಟ್ರೋ' ಚಿತ್ರದಲ್ಲಿ ಹಲವು ನಟ ನಟಿಯರ ಜೊತೆ ನಿರ್ಮಾಣವಾದ ಚಿತ್ರ.
 • 'ಎ ಮೈಟಿ ಹಾರ್ಟ್' ಮತ್ತು 'ದ ದಾರ್ಜಲಿಂಗ್ ಲಿಮಿಟೆಡ್' ಇಷ್ಟೊಂದು ಜನಪ್ರಿಯತೆ ಗಳಿಸಿದರೂ ಅವರು ಟೆಲೆವಿಶನ್ ಜೊತೆ ಸಂಬಂಧವನ್ನು ತೊರೆಯಲಿಲ್ಲ.
 • 'ಮಾನೋ ಯಾ ನ ಮಾನೋ' (ಸ್ಟಾರ್ ಒನ್ ನಲ್ಲಿ) 'ಕ್ಯಾ ಕಹೇ' ಎಂಬ ಕಾರ್ಯಕ್ರಮವನ್ನು ಪ್ರಸ್ತುತಿಪಡಿಸಿದರು.
 • ೨೦೦೮ ನಿರೂಪಕನಾಗಿ. ಐಡಿ id – Identity of the Soul. ವಿಶ್ವದಾದ್ಯಂತ ವೆಸ್ಟ್ ಬ್ಯಾಂಕ್ ನಲ್ಲಿ ಇದಕ್ಕೆ ಒಳ್ಳೆಯ ಜನಪ್ರಿಯತೆ ದೊರಕಿತು.
 • ೨೦೦೮ 'ಸ್ಲಂಡಾಗ್ ಮಿಲಿಯನೇರ್' ಚಿತ್ರದಲ್ಲಿ ಪೋಲಿಸ್ ಆಫಿಸರ್ ಪಾತ್ರ. 'ಸ್ಕ್ರೀನ್ ಅಕ್ಟರ್ಸ್ ಗಿಲ್ಡ್ ಅವಾರ್ಡ್' ಅತ್ಯುತ್ತಮ ಕೆಲಸ ಚಿತ್ರದಲ್ಲಿ 'ದಯಾನಿ ಬಾಯ್ಲ್' ಹೇಳಿದರು. ವುದೇ ಪಾತ್ರ ಕೊಟ್ಟರೂ ಅದರಲ್ಲಿ ಉತ್ತಮ ಮಟ್ಟದಲ್ಲಿ ಮಾಡುವ ಕ್ಷಮತೆ ಇದೆ. 'ಸ್ಲಂ ಡಾಗ್' ನ ಪೋಲಿಸ್ ಪೇದೆ, 'ಜಮಾಲ್' ನಿರಪರಾಧಿ ಎಂದು ನಿರ್ಧರಿಸಬಹುದು. ಒಬ್ಬ ಖಿಲಾಡಿಯ ತರಹ ಪ್ರತಿಬಾರಿಯೂ ನಿಖರವಾಗಿ ರೆಕಾರ್ಡ್ಸ್ ಮಾಡುವ ಕ್ಷಮತೆ ಇದೆ ಎಂದು. ಅವರ ಚಡಪಡಿಕೆ ನೋಡಲು ಬಹಳ ಚೆನ್ನಾಗಿರುತ್ತೆ.
 • ೨೦೦೯ ಆಸಿಡ್ ಫ್ಯಾಕ್ಟರಿ ಎಂಬ ಚಿತ್ರದಲ್ಲಿ ಮಾಡಿದರು. ಹೆಚ್ಚು ಹೆಚ್ಚು ಅಕ್ಷನ್ ಚಿತ್ರದಲ್ಲಿ ಮಾಡುವ ಆಶೆ. ನ್ಯೂ ಯಾರ್ಕ್ ನಲ್ಲಿ ಗುಜರಾತಿ ವಜ್ರ ವ್ಯಾಪಾರಿ ಎಫ್.ಬಿ. ಐ. ಏಜೆಂಟ್ 'ನ್ಯೂಯಾರ್ಕ್ ಐ ಲವ್ ಯು' ನಲ್ಲಿ.
 • ಇತ್ತೀಚಿನ ಚಿತ್ರ, 'ಪಾನ್ ಸಿಂಗ್ ತೋಮರ್' ರಾಜ್ಪುತ್ 'ಇನ್ ಟ್ರೀಟ್ ಮೆಂಟ್' ಎಂಬ ಎಚ್.ಬಿ.ಒ ಸೀರಿಸ್ ಚಿತ್ರದಲ್ಲಿ ಕೆಲಸ. ೩ ನೆ ಸೀಸನ್ ಸುನಿಲ್ ಪಾತ್ರ; ಅವನ ಹೆಂಡತಿಯ ಮರಣಕ್ಕೆ ನ್ಯೂಯಾರ್ಕ್ ಗೆ ಹೋಗಿ, ಕೊರಗುತ್ತಾ ಕಾಲಕಳೆಯುವ, ಹಾಗೂ ಅನುಭವಿಸುವ ಏಕಾಂಗಿತನದ ಪ್ರಸ್ತುತಿ.
 • ಹೊಸ ಚಿತ್ರ, 'ಕಭಿ ಖುಷಿ ಕಭಿ ಗಮ್' ಚಿತ್ರದಲ್ಲಿ ಪಾತ್ರವಹಿಸಲು ಸಹಿಹಾಕಿದ್ದಾರೆ.
 • ೨೦೧೨ ರಲ್ಲಿ 'ದ ಅಮೇಜಿಂಗ್ ಸ್ಪೈಡರ್ ಮಾನ್' ಚಿತ್ರದಲ್ಲಿ, 'ಡಾ.ರಜಿತ್ ರಥ' ಪಾತ್ರದಲ್ಲಿ.

ಪ್ರಶಸ್ತಿ,ಪುರಸ್ಕಾರಗಳು[ಬದಲಾಯಿಸಿ]

 • ೩ ಫಿಲ್ಮ್ ಫೇರ್ ಅವಾರ್ಡ್ಸ್,
 • ಸ್ಕ್ರೀನ್ ಆಕ್ಟರ್ಸ್ ಗಿಲ್ಡ್ ಅವಾರ್ಡ್,
 • ಸ್ಪಿರಿಟ್ ಅವಾರ್ಡ್ ಗೆ, ನಾಮಿನೇಶನ್.
 • ೨೦೧೧ ರ, ಪದ್ಮಶ್ರೀ ಪ್ರಶಸ್ತಿ, ನ್ಯಾಶನಲ್ ಫಿಲ್ಮ್ ಅವಾರ್ಡ್, ಬೆಸ್ಟ್ ಆಕ್ಟರ್,
 • ೬೦ ನೆಯ ನ್ಯಾಷನಲ್ ಪ್ರಶಸ್ತಿಗಳು ೨೦೧೨ ರ, ಪಾನ್ ಸಿಂಗ್ ತೋಮರ್
 • 'ಸನ್.೨೦೧೨ ರ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ',ಹಾಲೀವುಡ್ ಚಲನಚಿತ್ರ,'ಲೈಫ್ ಆಫ್ ಪೈ'ಗೆ.

ಡಕಾಯಿತನಾಗಿ ಬದಲಾದ ಕ್ರೀಡಾಪಟುವಿನ ಬದುಕಿನ ನೈಜ ಕತೆಯನ್ನು ಆಧರಿಸಿ 'ತಿಗ್ಮಾಂಶು ಧೂಲಿಯ' ನಿರ್ದೇಶಿಸಿದ 'ಪಾನ್ ಸಿಂಗ್ ತೋಮರ್' ಚಿತ್ರ '೬೦ ನೆಯ ರಾಷ್ಟ್ರೀಯ ಸಿನೆಮಾ ಪ್ರಶಸ್ತಿ ಸಮಾರಂಭ'ದಲ್ಲಿ ಶ್ರೇಷ್ಟ ಚಿತ್ರವಾಗಿ ಹೊರಹೊಮ್ಮಿದೆ. ನಾಯಕ, 'ಇರ್ಫಾನ್ ಖಾನ್', 'ಶ್ರೇಷ್ಟ ನಟ ಪ್ರಶಸ್ತಿ'ಯನ್ನು ಮರಾಠಿ ಭಾಷೆಯ 'ಅನುಮತಿ' ಚಿತ್ರದ ಹಿರಿಯನಟ 'ವಿಕ್ರಮ್ ಗೋಖಲೆ' ಜೊತೆಗೆ ಹಂಚಿಕೊಂಡಿದ್ದಾರೆ. ೫೦-೬೦ ರ ದಶಕದಲ್ಲಿ 'ಸ್ಟೀಪಲ್ ಛೇಸ್' ಪ್ರತಿಯೋಗೀತೆಯಲ್ಲಿ '೭ ಸಲ ರಾಷ್ಟ್ರೀಯ ಕಾಂಪಿಯನ್ ಶಿಪ್' ಗೆದ್ದ 'ತೋಮರ್' ಸೇನೆ ಸೇರಿ, ಯೋಧನಾಗಿ ದೇಶಸೇವೆ ಮಾಡಿದ್ದ. ಆದರೆ ಭೂವಿವಾದವೊಂದರ ಕಾರಣದಿಂದಾಗಿ ಡಕಾಯಿತನಾಗಿ ಬದಲಾದ 'ತೋಮರ್' ಪಾತ್ರವನ್ನು ಬೆಳ್ಳಿ ತೆರೆಯಮೇಲೆ ಅತ್ಯಂತ ಪರಿಣಾಮಕಾರಿಯಾಗಿ ತಂದುಕೊಟ್ಟ 'ಇರ್ಫಾನ್ ಖಾನ್' ಗೆ ಈ ವರ್ಷದ ಉನ್ನತ ಗೌರವ ಸಂದಿದೆ. ೧೯೮೧ ರಲ್ಲಿ 'ತೋಮರ್' ಹತ್ಯೆಯಾಗಿದ್ದಾನೆ. ಪ್ರಶಸ್ತಿಯನ್ನು 'ಇರ್ಫಾನ್ ಖಾನ್', 'ತೋಮರ್' ಹಾಗೂ ಅವರ ಪರಿವಾರಕ್ಕೆ ಅರ್ಪಿಸಿದ್ದಾರೆ.

ಉಲ್ಲೇಖನಗಳು=[ಬದಲಾಯಿಸಿ]