ಇಟಕೋನಿಕ್ ಆಮ್ಲ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಇಟಕೋನಿಕ್ ಆಮ್ಲ ಒಂದು ಅಪರ್ಯಾಪ್ತ ಸಾವಯವ ಆಮ್ಲ. ಅಣುಸೂತ್ರ C5H6O4. ರಚನಾಸೂತ್ರ ಕೆಳಕಂಡಂತಿದೆ;

ರಾಸಾಯನಿಕವಾಗಿ ಮೆಥಿಲೀನ್ ಸಕ್ಸಿನಿಕ್ ಆಮ್ಲವೆನ್ನಬಹುದು.

ಗುಣಗಳು[ಬದಲಾಯಿಸಿ]

ಇದು ಹರಳುರೂಪದ ಬಿಳಿಯ ಘನವಸ್ತು. ದ್ರವೀಕರಣ ಬಿಂದು 1620-1640 ಸೆ. 100 ಮಿ.ಲೀ. ನೀರಿನಲ್ಲಿ 200 ಸೆ. ನಲ್ಲಿ 8 ಗ್ರಾಂಗಳಷ್ಟೂ 800 ಸೆ. ನಲ್ಲಿ 73 ಗ್ರಾಂಗಳಷ್ಟೂ ದ್ರವ್ಯ. ಈಥರ್,ಬೆಂಜೀ಼ನು, ಕ್ಲೋರೋಫಾರಂ ಇತ್ಯಾದಿ ಸಾವಯವ ಲೀನಕಾರಿಗಳಲ್ಲಿ ಅಲ್ಪದ್ರವ್ಯ.

ತಯಾರಿಕೆ[ಬದಲಾಯಿಸಿ]

ಸಿಟ್ರಕೋನಿಕ್ ಆಮ್ಲದ ಆನ್‌ಹೈಡ್ರೈಡನ್ನು ನೀರಿನೊಂದಿಗೆ 1500 ಸೆ. ಉಷ್ಣತೆಗೆ ಕಾಯಿಸಿದರೆ ಇಟಕೋನಿಕ್ ಆಮ್ಲ ಉತ್ಪತ್ತಿಯಾಗುವುದು. ಆದರೆ ಕೈಗಾರಿಕಾ ಪ್ರಮಾಣದಲ್ಲಿ ತಯಾರಿಸಲು ಫರ್ಮೆಂಟೇಷನ್ ವಿಧಾನ ಅನುಕೂಲ.[೧] 15-20% ಗ್ಲೂಕೋಸ್ ಕೆಲವು ನಿರವಯವ ಲವಣಗಳು ಮತ್ತು ಹೈಡ್ರೊಕ್ಲೋರಿಕ್ ಆಮ್ಲದ ಮಿಶ್ರಣವನ್ನು ವ್ಯತ್ಯಾಸ ಮಾಡುವುದರಿಂದ ಕ್ರಿಯಾಮಾಧ್ಯಮದ ಪಿಎಚ್ ಮೌಲ್ಯವನ್ನು 1.8-2.0 ಮಿತಿಯಲ್ಲಿ ನಿಯಂತ್ರಿಸುವರು. ಇದು ಬಹುಮುಖ್ಯ. ಈಗ ಆಸ್ಪರ್ಜಿಲಸ್ ಟರ‍್ರಿಯಸ್ ಎಂಬ ಬೂಷ್ಟಿನ ಆಯ್ದ ತಳಿಯನ್ನು ಕೂಡಿಸಿ ಗಾಳಿ ಹಾಯಿಸಲಾಗುವುದು. 280-350 ಸೆ. ಉಷ್ಣತಾ ಮಿತಿಯಲ್ಲಿ 2-5 ದಿವಸಗಳ ಕಾಲ ಬಿಟ್ಟರೆ ಇಟಕೋನಿಕ್ ಆಮ್ಲ ಉತ್ಪತ್ತಿಯಾಗಿರುತ್ತದೆ. ಹುಳಿಬಂದ ದ್ರವವನ್ನು ಶೋಧಿಸಿ ನಿರ್ವಾತ ಸ್ಥಿತಿಯಲ್ಲಿ ಸಾಂದ್ರೀಕರಿಸಿ ತಣಿಸಿದರೆ ಆಮ್ಲ ಸ್ಫಟಿಕೀಕರಿಸುವುದು.

ಉಪಯೋಗಗಳು[ಬದಲಾಯಿಸಿ]

ಇದರ ಎಸ್ಟರುಗಳು ಬಹ್ವಂಗೀಕರಿಸಿ (ಪಾಲಿಮರೈಸ್) ವಿಶಿಷ್ಟ ಗುಣಗಳಿರುವ ಪ್ಲಾಸ್ಟಿಕ್ಕುಗಳನ್ನು ಕೊಡುವುವು.

ಉಲ್ಲೇಖಗಳು[ಬದಲಾಯಿಸಿ]

  1. Roger A. Sheldon (2014). "Green and sustainable manufacture of chemicals from biomass: state of the art". Green Chem. 16 (3): 950–963. doi:10.1039/C3GC41935E.
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: