ಇಂಡಿಗೋ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search
Indian indigo dye lump.jpg

ಇಂಡಿಗೋ ಎರಡು ಇಂಡೋಲ್ ಆವರ್ತಗಳ ಸಂಯೋಜನೆಯಿಂದ ಉತ್ಪತ್ತಿಯಾಗುವ ವಸ್ತು. ಅಣುಸೂತ್ರ C16H10N2O2.

ಇಂಡಿಗೋ ಪದದ ಕನ್ನಡರೂಪ ನೀಲಿ. ಸಾಮಾನ್ಯವಾಗಿ ಇದರ ಉಪಯೋಗ ಬಟ್ಟೆಯ ಚೆಲುವೆಗೆ. ಈ ಪದಾರ್ಥ ಇಂಡಿಕಾನ ಎಂಬ ವಸ್ತುವಿನ ರೂಪದಲ್ಲಿ, ಇಂಡಿಗೋಫೆರ ಟಿಂಕ್ಟೋರಿಯ ಎಂಬ ಜಾತಿಗೆ ಸೇರಿದ ಸಸ್ಯಗಳಲ್ಲಿ ಉತ್ಪತ್ತಿಯಾಗುತ್ತದೆ. ಕೃತಕವಾಗಿ ಇಂಡಿಗೋವನ್ನು ತಯಾರು ಮಾಡುವುದಕ್ಕೆ ಮೊದಲು ಭಾರತದಲ್ಲಿ ಈ ಗಿಡವನ್ನು ಅಧಿಕ ಪ್ರಮಾಣದಲ್ಲಿ ಬೆಳೆಯಲಾಗುತ್ತಿತ್ತು.

ಗುಣಗಳು[ಬದಲಾಯಿಸಿ]

ಅಪ್ಪಟ ನೀಲಿ ಬಣ್ಣದ ಹರಳಿನ ರೂಪದಲ್ಲಿರುವ ವಸ್ತು. 300° ಸೆ. ನಲ್ಲಿ ನೇರವಾಗಿ ಆವಿಯಾಗುತ್ತದೆ (ಎಂದರೆ ದ್ರವಿಸುವುದಿಲ್ಲ) ಮತ್ತು ಛಿದ್ರವಾಗುತ್ತದೆ. ನೀರು, ಈಥರ್ ಮತ್ತು ಮದ್ಯಸಾರದಲ್ಲಿ ವಿಲೀನವಾಗುವುದಿಲ್ಲ. ಆದರೆ ಅನಿಲಿನ್, ನೈಟ್ರೋಬೆಂಜೀನ್, ಕ್ಲೋರೋಫಾರ್ಮ್, ಪ್ರಬಲ ಅಸಿಟಿಕ್ ಮತ್ತು ಸಲ್ಪ್ಯೂರಿಕ್ ಆಮ್ಲಗಳಲ್ಲಿ ವಿಲೀನವಾಗುತ್ತದೆ.

ಉತ್ಪತ್ತಿ, ತಯಾರಿಕೆ[ಬದಲಾಯಿಸಿ]

ಇಂಡಿಗೋಫೆರ ಸಸ್ಯಗಳ ಸಣ್ಣ ಸಣ್ಣ ರಂಬೆಗಳು ಮತ್ತು ಎಲೆಗಳನ್ನು ನೀರಿನೊಂದಿಗೆ ಹುದುಗಿಸಿದಾಗ ಇಂಡಿಕಾನ್ ವಿಭಜನೆಯಾಗುತ್ತದೆ. ಫಲಿತವನ್ನು ಗಾಳಿಯಲ್ಲಿ ಉತ್ಕರ್ಷಿಸಿದಾಗ ಇಂಡಿಗೋ ಒತ್ತರದ ರೂಪದಲ್ಲಿ ಹೋರಬೀಳುತ್ತದೆ. ಈ ವಿಧಾನ ಈಗ ಬಳಕೆಯಲ್ಲಿಲ್ಲ. ಕೃತಕವಾಗಿ ಇಂಡಿಗೋವನ್ನು; ಅನಿಲಿನ್ ಮತ್ತು ಕ್ಲೋರಲಿಸಿಟಿಕ್ ಆಮ್ಲಗಳನ್ನು (ClCH2.COOH) ಸಂಯೋಗ ಮಾಡುವುದರಿಂದ ಉತ್ಪತ್ತಿಯಾಗುವ ಫೀನೈಲ್ ಗ್ಲೈಸಿನ್ ವಸ್ತುವನ್ನು ಪ್ರತ್ಯಾಮ್ಲ ಮತ್ತು ಸೋಡಿಯಂ ಅಮೈಡ್‍ಗಳೊಂದಿಗೆ ಬೆಸೆದು ಉತ್ಪತ್ತಿಮಾಡುತ್ತಾರೆ. ಕೃತಕವಾಗಿ ಉತ್ಪತ್ತಿಯಾಗುವ ಇಂಡಿಗೋ ವಾಸ್ತವ ಮೂಲಗಳಿಂದ ತಯಾರುಮಾಡುವ ವಸ್ತುವಿಗಿಂತ ಉತ್ತಮವಾಗಿರುವುದೆಂದು ಪರಿಗಣಿಸಲಾಗಿದೆ.

ಉಪಯೋಗಗಳು[ಬದಲಾಯಿಸಿ]

ಹತ್ತಿಯ ಬಟ್ಟೆಗಳಿಗೆ ಬಣ್ಣವನ್ನು ಕೊಡುವುದಕ್ಕೆ; ಶಾಯಿಗಳ ತಯಾರಿಕೆಯಲ್ಲಿ; ಇಂಡಿಗೋದಿಂದ ಉತ್ಪತ್ತಿಯಾಗುವ ವಸ್ತುಗಳ ತಯಾರಿಕೆಯಲ್ಲಿ, ಬಣ್ಣಗಳ ತಯಾರಿಕೆಯಲ್ಲಿ.

ಹೆಚ್ಚಿನ ಓದಿಗೆ[ಬದಲಾಯಿಸಿ]

  • Balfour-Paul, Jenny (2016). Indigo: Egyptian Mummies to Blue Jeans. London: British Museum Press. pp. 264 pages. ISBN 978-0-7141-1776-8.
  • Ferreira, E.S.B.; Hulme A. N.; McNab H.; Quye A. (2004). "The natural constituents of historical textile dyes" (PDF). Chemical Society Reviews. 33 (6): 329–36. doi:10.1039/b305697j. PMID 15280965.
  • Sequin-Frey, Margareta (1981). "The chemistry of plant and animal dyes" (PDF). Journal of Chemical Education. 58 (4): 301. Bibcode:1981JChEd..58..301S. doi:10.1021/ed058p301.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

Wikisource-logo.svg
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಇಂಡಿಗೋ&oldid=979166" ಇಂದ ಪಡೆಯಲ್ಪಟ್ಟಿದೆ