ವಿಷಯಕ್ಕೆ ಹೋಗು

ಇಂಟರ್ನೆಟ್‌ ಇತಿಹಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಇಂಟರ್ನೆಟ್‌ವರ್ಕಿಂಗ್‌ ವ್ಯವಸ್ಥೆಯ ಬಳಕೆಯು ವ್ಯಾಪಕವಾಗಿ ಹರಡುವುದಕ್ಕೂ ಮುಂಚೆ ಇದ್ದ ನೆಟ್‌ವರ್ಕಿಂಗ್‌ ವ್ಯವಸ್ಥೆಯು ಇಂಟರ್ನೆಟ್‌ (=ಅಂತರಜಾಲ) ಉಗಮಕ್ಕೆ ಕಾರಣವಾಯಿತು. ಮೊದಲು ಹೆಚ್ಚಿನ ಸಂವಹನ ನೆಟ್‌ವರ್ಕ್‌ಗಳು ತಮ್ಮದೇ ಆದ ಮಿತಿಗಳನ್ನು ಹೊಂದಿದ್ದು, ಸ್ಥಳೀಯ ನೆಟ್‌ವರ್ಕ್‌ಗಳಲ್ಲಿ ಎರಡು ಸ್ಥಳಗಳ (ಕೇಂದ್ರ) ನಡುವೆ ಸಂವಹನ ನಡೆಸಲು ಮಾತ್ರ ಅವುಗಳು ಅನುವು ಮಾಡಿಕೊಡುತ್ತಿತ್ತು. ಪ್ರಮುಖ ಕಂಪ್ಯೂಟರ್‌ ನೆಟ್‌ವರ್ಕಿಂಗ್‌ ವಿಧಾನಗಳು ಕೇಂದ್ರೀಯ ಮೇನ್‌ಫ್ರೇಮ್ ಕಂಪ್ಯೂಟರ್‌ ಮಾದರಿಯನ್ನು ಆಧರಿಸಿದೆ. ಭೌತಿಕವಾಗಿ ಪ್ರತ್ಯೇಕವಾಗಿರುವ ನೆಟ್‌ವರ್ಕ್‌ಗಳ ನಡುವೆ ನೆಟ್‌ವರ್ಕಿಂಗ್‌ ತತ್ವಗಳನ್ನು ಅನ್ವೇಷಿಸಲು ಹಲವು ಸಂಶೋಧನಾ ಕಾರ್ಯಕ್ರಮಗಳು ಪ್ರಾರಂಭವಾದವು. ಇದು ಡಿಜಿಟಲ್‌ ನೆಟ್‌ವರ್ಕಿಂಗ್‌ನ ಪಾಕೇಟ್‌ ಸ್ವಿಚಿಂಗ್ ಮಾದರಿಯ ನೆಟ್‌ವರ್ಕಿಂಗ್‌ ಅಭಿವೃದ್ಧಿಗೆ ಕಾರಣವಾಯಿತು. ಡೊನಾಲ್ಡ್‌ ಡೇವಿಸ್‌ (NPL), ಪೌಲ್ ಬ್ಯಾರನ್‌ (RAND ಕಾರ್ಪೊರೇಷನ್‌), ಮತ್ತು MIT ಮತ್ತು UCLAಯಲ್ಲಿರುವ ಲಿಯೊನಾರ್ಡ್‌ ಕ್ಲೀನ್ರಾಕ್‌ ಪ್ರಯೋಗಾಲಯಗಳಲ್ಲಿನ ಸಂಶೋಧನಾ ಶ್ರಮವೂ ಇದರಲ್ಲಿ ಒಳಗೊಂಡಿತ್ತು. ಇದರಿಂದಾಗಿ ೧೯೬೦ ಮತ್ತು ೧೯೭೦ರ ದಶಕದ ಉತ್ತರಾರ್ಧದಲ್ಲಿ [೧]ಅರ್ಪಾನೆಟ್‌ ಮತ್ತು X.25 ಪ್ರೋಟಕಾಲ್‌ಗಳು ಸೇರಿದಂತೆ ಹಲವು ಪಾಕೆಟ್‌-ಸ್ವಿಚ್ಡ್‌ ನೆಟ್‌ವರ್ಕಿಂಗ್‌ ಮಾದರಿಗಳನ್ನು ಅಭಿವೃದ್ಧಿಪಡಿಸಲು ಕಾರಣವಾಯಿತು. ಜೊತೆಗೆ ಯುನಿಕ್ಸ್‌ನಿಂದ ಯುನಿಕ್ಸ್‌ಗೆ ಪ್ರತಿಮಾಡುವುದು (UUCP) ಮತ್ತು ಫಿಡೋನೆಟ್‌ಗಳು ಸಾರ್ವಜನಿಕನಿಕರಿಗೆ ನಿಲುಕುವಂತಾದದ್ದು ಮತ್ತು ಹವ್ಯಾಸಿ ನೆಟ್‌ವರ್ಕಿಂಗ್‌ ವ್ಯವಸ್ಥೆಯ ಜನಪ್ರಿಯತೆಯು ಹೆಚ್ಚಾಗಿತ್ತು. ಆದರೂ ಸಂಪರ್ಕ ರಹಿತ ಪ್ರತ್ಯೇಕ ನೆಟ್‌ವರ್ಕ್‌ಗಳು ಮಿತ ಪ್ರಮಾಣದ ಗೇಟ್‌ವೇಗಳ ಮೂಲಕ ನೆಟ್‌ವರ್ಕ್‌ಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದವು. ಇಂಟರ್ನೆಟ್‌ವರ್ಕಿಂಗ್‌ಗೆ ಹೊಂದುವ ಪ್ರೋಟಕಾಲ್‌ ಅಭಿವೃದ್ಧಿಸಲು ಪಾಕೇಟ್‌ ಸ್ವಿಚಿಂಗ್ ಅನ್ವಯವನ್ನು ರಚಿಸುದು ಇದರಿಂದಾಗಿ ಅಗತ್ಯವೆನಿಸಿತು.ಹೀಗಾಗಿ ವಿವಿಧ ನೆಟ್‌ವರ್ಕ್‌ಗಳನ್ನು ಒಂದು ಶ್ರೇಷ್ಠ ಚೌಕಟ್ಟಿನಲ್ಲಿ ಬಂಧಿಸುವುದು ಸಾಧ್ಯವಾಯಿತು. ಇಂಟರ್ನೆಟ್‌ ಪ್ರೋಟಕಾಲ್‌ ಸೂಟ್‌ ಅನ್ನು ಸಾಮಾನ್ಯ ನೆಟ್‌ವರ್ಕ್‌ ವ್ಯವಸ್ಥೆಯೆಂದು ಗೊತ್ತುಪಡಿಸುವುದರಿಂದ, ನೆಟ್‌ವರ್ಕ್‌ನ ಪರಿಕಲ್ಪನೆಯು ತನ್ನ ಭೌತಿಕ ಕಾರ್ಯನಿರ್ವಹಣೆಯಿಂದ ಬೇರ್ಪಡಿಸಬಹುದಾಗಿದೆ. ಇಂಟರ್ನೆಟ್‌ವರ್ಕಿಂಗ್‌ ವಿಕಸನವು ಜಾಗತಿಕ ನೆಟ್‌ವರ್ಕ್‌ ಕಲ್ಪನೆಯೊಂದಿಗೆ ಪ್ರಾರಂಭವಾಯಿತು. ಇದನ್ನೇ ಇಂಟರ್ನೆಟ್‌ ಎಂದು ಕರೆಯಲಾಗಿತ್ತು. ಪ್ರಮಾಣಿತ ಪ್ರೋಟಕಾಲ್‌ಗಳನ್ನು ಆಧರಿಸಿದ ಇಂಟರ್ನೆಟ್‌ ಅನ್ನು ೧೯೮೨ರಲ್ಲಿ ಅಧಿಕೃತವಾಗಿ ಅನುಷ್ಠಾನಕ್ಕೆ ತರಲಾಯಿತು. ಪಾಶ್ಚಾತ್ಯ ದೇಶಗಳ ಆಧುನಿಕ ದೂರಸಂಪರ್ಕ ನೆಟ್‌ವರ್ಕ್‌ಗಳಲ್ಲಿ ಇದರ ಅಳವಡಿಕೆ ಮತ್ತು ಅಂತರ್ಸಂಪರ್ಕಗೊಳಿಸುವ ಕಾರ್ಯ ತ್ವರಿತವಾಗಿ ಮಾಡಲಾಯಿತು. ಜಾಗತಿಕ ನೆಟ್‌ವರ್ಕ್‌ಗೆ ಡಿ-ಫ್ಯಾಕ್ಟೊ ಅಂತರರಾಷ್ಟ್ರೀಯ ಮಾಪನ ದೊರೆಯುತ್ತಿದ್ದಂತೆ, ಈ ಕಾರ್ಯವು ವಿಶ್ವದ ಇತರೆಡೆಗಳಲ್ಲಿ ವ್ಯಾಪಿಸಲು ಆರಂಭವಾಯಿತು. ಆದರೂ, ಡಿಜಿಟಲ್‌ ವಿಂಗಡಣೆಗೆ ಕಾರಣವಾಗಿರುವ ಮುಂದುವರಿದ ದೇಶಗಳು ಮತ್ತು ತೃತೀಯ ಜಗತ್ತಿಗೆ ಸೇರಿದ ದೇಶಗಳ ನಡುವಿನ ಅಭಿವೃದ್ಧಿಯಲ್ಲಿನ ವ್ಯತ್ಯಾಸವನ್ನು ಇಂದು ಕಾಣಬಹುದಾಗಿದೆ. ೧೯೮೦ನೇ ದಶಕದಲ್ಲಿ ಈ ಕ್ಷೇತ್ರಕ್ಕೆ ಖಾಸಗಿ ಇಂಟರ್ನೆಟ್‌ ಸೇವೆ ಪೂರೈಕೆದಾರರ ಪ್ರವೇಶವಾಯಿತು ಮತ್ತು ಇಂಟರ್ನೆಟ್‌ ಅನ್ನು ವಾಣಿಜ್ಯೋದ್ದೇಶಕ್ಕೆ ಎಳೆಯಲಾಯಿತು. ೧೯೯೦ನೇ ದಶಕದಲ್ಲಿ ಭರಪೂರ ಬಳಕೆಯಿಂದಾಗಿ ಇಂಟರ್ನೆಟ್‌ ವಿಕಸನಗೊಂಡಿತು.ಇಂಟರ್ನೆಟ್‌ನ ವ್ಯಾಪಕ ಬಳಕೆಯು ಸಂಸ್ಕೃತಿ ಮತ್ತು ವ್ಯಾಪಾರ ವ್ಯಹಾರದ ಮೇಲೆ ತೀವ್ರ ಪರಿಣಾಮ ಬೀರಿತು. ಆ ಹೊತ್ತಿಗೆ ಇಮೇಲ್ (=ವಿದ್ಯುನ್ಮಾನ ಅಂಚೆ) (), ಪಠ್ಯಗಳಿಂದ ಕೂಡಿದ ಚರ್ಚಾ ವೇದಿಕೆಗಳು ಮತ್ತು ವರ್ಲ್ಡ್‌ ವೈಡ್ ವೆಬ್‌ನಿಂದ ತ್ವರಿತ ಸಂವಹನದ ಉಗಮವನ್ನು ಇಂಟರ್ನೆಟ್ ಒಳಗೊಂಡಿತ್ತು. ಈ ಅನ್ವೇಷಣೆಗಳಿಂದಾಗಿ ವ್ಯಾಪಾರೋದ್ಯಮದಲ್ಲಿ ಹೂಡಿಕೆದಾರನ ಊಹಾತ್ಮಕ ಮಾರುಕಟ್ಟೆಯೊಂದು ಹುಟ್ಟಿ ಅದು ಹಣದುಬ್ಬರಕ್ಕೆ ಇಂಬು ನೀಡಿತು, ಜೊತೆಗೆ ಉಕ್ಕೇರಿ ಬೆಳೆದಿದ್ದ ಡಾಟ್‌-ಕಾಮ್‌ ಕ್ಷೇತ್ರ ಕುಸಿತ ಕಂಡಿತು. ಈ ಎಲ್ಲ ಹಿನ್ನೆಲೆಯ ನಡುವೆಯೂ ಇಂಟರ್ನೆಟ್‌ ಪ್ರಗತಿಯತ್ತ ಮುಖ ಮಾಡಿತು.

ಕಂಪ್ಯೂಟರಿನ ಇತಿಹಾಸ
ಹಾರ್ಡ್ವೇರ್ ೧೯೬೦ಕ್ಕೂ ಹಿಂದೆ
ಹಾರ್ಡ್ವೇರ್ ೧೯೬೦ ರಿಂದ ಇಂದಿನವರೆಗೆ
Hardware in Soviet Bloc countries
Artificial intelligence
Computer science
Operating systems
Programming languages
Software engineering
Graphical user interface
Internet
Personal computers
Laptops
Video games
World Wide Web
Timeline of computing
More...

ಇಂಟರ್ನೆಟ್‌ ಯುಗಕ್ಕೂ ಮುಂಚೆ[ಬದಲಾಯಿಸಿ]

ಇಂಟರ್ನೆಟ್‌ ಉಗಮಗೊಳ್ಳಲು ಕಾರಣವಾದ ಇಂಟರ್‌-ನೆಟ್‌ವರ್ಕಿಂಗ್‌ ವ್ಯಾಪಕವಾಗಿ ಹರಡುವ ಮೊದಲು, ಅಂದರೆ ೧೯೫೦ರ ದಶಕದಲ್ಲಿ ಮತ್ತು ೧೯೬೦ರ ದಶಕದ ಪೂರ್ವ ಭಾಗದಲ್ಲಿ ಹೆಚ್ಚಿನ ನೆಟ್‌ವರ್ಕ್‌ನಲ್ಲಿ ಕೇವಲ ಕೇಂದ್ರಗಳ ನಡುವೆ ಸಂವಹನ ನಡೆಸುವುದಕ್ಕಾಗಿ ಮಾತ್ರ ಹೆಚ್ಚಿನ ಸಂವಹನ ನೆಟ್‌ವರ್ಕ್‌ಗಳು ಸೀಮಿತವಾಗಿದ್ದವು. ಕೆಲವು ನೆಟ್‌ವರ್ಕ್‌ಗಳ ತಮ್ಮ ನಡುವೆ ಗೇಟ್‌ವೇಗಳು ಅಥವಾ ಬ್ರಿಡ್ಜ್‌ಗಳನ್ನು (ವಿವಿಧ ನೆಟ್‌ವರ್ಕ್‌ ವಲಯಗಳನ್ನು ಜೋಡಿಸುವ) ಹೊಂದಿರುತ್ತಿದ್ದವು. ಆದರೆ ಅನೇಕ ವೇಳೆ ಈ ಬ್ರಿಡ್ಜ್‌ಗಳನ್ನು ಮಿತವಾದ ಬಳಕೆಗೆ ಅಥವಾ ಏಕೋಪಯೋಗಕ್ಕೆಂದು ರಚಿಸಲಾಗುತ್ತಿತ್ತು. ವ್ಯಾಪಕವಾಗಿ ಹರಡಿದ ಕಂಪ್ಯೂಟರ್‌ ನೆಟ್‌ವರ್ಕಿಂಗ್‌ ಪ್ರಮುಖ ಮೇನ್‌ಫ್ರೇಮ್ ವಿಧಾನವನ್ನು ಆಧರಿಸಿದೆ. ಇದರಂತೆ ಉದ್ದದ ನಿರ್ದಿಷ್ಟ ಲೈನುಗಳ (ತಂತಿ) ಮೂಲಕ ನೆಟ್‌ವರ್ಕ್‌ಗಳ ಟರ್ಮಿನಲ್‌ಗಳನ್ನು (=ವಿಷಯ ವಿನಿಮಯಕ್ಕೆ ನೆರವಾಗುವ ಸಾಧನ) ಸಂಪರ್ಕಿಸಲಾಗುವುದು. ೧೯೫೦ನೇ ದಶಕದಲ್ಲಿ ಕೈಗೊಂಡ ಪೆನ್‌ಸಿಲ್ವೇನಿಯಾದ ಪಿಟ್ಸ್‌ಬರ್ಗ್‌ನಲ್ಲಿ ಕಾರ್ನೆಜಿ ಮೆಲನ್‌ ವಿಶ್ವವಿದ್ಯಾಲಯದ ಹರ್ಬರ್ಟ್‌ ಸಿಮೊನ್‌ರಂತಹ ವಿಜ್ಞಾನಿಗಳು ಪ್ರಾಜೆಕ್ಟ್‌ RANDನ ಸ್ವಯಂಚಾಲಿತ ಪ್ರಮೇಯ ಋಜುವಾತು ಮತ್ತು ಕೃತಕ ಬುದ್ಧಿಮತ್ತೆ ಸಂಶೋಧನೆಗಳನ್ನು ಕೈಗೊಂಡರು. ಇವರ ಸಹಾಯಕ್ಕಾಗಿ ಇಲಿನೋಯ್ಸ್‌ನ ಸುಲ್ಲಿವಾನ್‌ನ ವಿಜ್ಞಾನಿಗಳೊಂದಿಗೆ ಖಂಡಾಂತರ ಸಹಯೋಗವನ್ನು ಪಡೆದುಕೊಳ್ಳುವಾಗ ಈ ನೆಟ್‌ವರ್ಕಿಂಗ್‌ ವಿಧಾನವನ್ನು ಬಳಸಲಾಗಿತ್ತು.

ಮೂರು ಟರ್ಮಿನಲ್‌ಗಳು ಮತ್ತು ARPfb[ಬದಲಾಯಿಸಿ]

J.C.R. ಲಿಕ್ಲಿಡರ್‌ ಜಾಗತಿಕ ನೆಟ್‌ವರ್ಕ್‌ನ ಮೊದಲು ರೂವಾರಿ ಜನವರಿ ೧೯೬೦ರ ತಮ್ಮ ಮ್ಯಾನ್‌-ಕಂಪ್ಯೂಟರ್‌ ಸಿಂಬಿಯೊಸಿಸ್‌ಲೇಖನದಲ್ಲಿ ಅದರ ಮೂಲ ಕಲ್ಪನೆಗಳ ಬಗ್ಗೆ ಬರೆದಿದ್ದರು.

"A network of such [computers], connected to one another by wide-band communication lines [which provided] the functions of present-day libraries together with anticipated advances in information storage and retrieval and [other] symbiotic functions."

— J.C.R. Licklider, [೨]

ಯುನೈಟೆಡ್‌ ಸ್ಟೇಟ್ಸ್‌ ರಕ್ಷಣಾ ಇಲಾಖೆಯ ಕಛೇರಿಯಲ್ಲಿರುವ ಮುಂದುವರಿದ ಸಂಶೋಧನಾ ಯೋಜನೆಗಳ ನಿಯೋಗದ ಮುಖ್ಯಸ್ಥರನ್ನಾಗಿ ಲಿಕ್ಲಿಡರ್‌ರನ್ನು ೧೯೬೨ರ ಅಕ್ಟೋಬರ್‌ನಲ್ಲಿ ನೇಮಿಸಲಾಯಿತು. ಇಂದು ಈ ನಿಯೋಗವನ್ನು DARPA ಎಂದು ಕರೆಯಲಾಗುತ್ತದೆ. DARPA ಕಛೇರಿಯೊಳಗೆ ಹೆಚ್ಚಿನ ಕಂಪ್ಯೂಟರ್‌ ಸಂಶೋಧನೆಗೆ ಒಂದು ಅನಧಿಕೃತ ತಂಡವನ್ನ್ನುಈತ ರಚಿಸಿದ. ಮಾಹಿತಿ ಪ್ರಕ್ರಿಯೆ ಕಛೇರಿಯ ಕೆಲಸಕ್ಕಾಗಿ ಮೂರು ನೆಟ್‌ವರ್ಕ್‌ ಟರ್ಮಿನಲ್‌ಗಳನ್ನು ಸ್ಥಾಪಿಸಲಾಗಿತ್ತು. ಸ್ಯಾಂಟ ಮೋನಿಕಾದಲ್ಲಿನ ಸಿಸ್ಟಮ್‌ ಡೆವಲಪ್‌ಮೆಟ್‌ ಕಾರ್ಪೋರೇಷನ್‌ನಲ್ಲಿ ಒಂದು, ಬರ್ಕೆಲಿಯಲ್ಲಿರುವ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಜಿನೀ ಯೋಜನೆಗಾಗಿ ಇನ್ನೊಂದು ಮತ್ತು ಮಸ್ಸಾಚುಸೆಟ್ಸ್‌ ತಂತ್ರಜ್ಞಾನ ಶಿಕ್ಷಣ ಸಂಸ್ಥೆಯಲ್ಲಿನ (MIT) ಸೂಕ್ತ ಬಹುಬಳಕೆದಾರ ವ್ಯವಸ್ಥೆ ಯೋಜನೆಗಾಗಿ ಮತ್ತೊಂದು ಟರ್ಮಿನಲ್‌-ಹೀಗೆ ಈ ಮೂರೂ ಕಾರ್ಯಾಚರಣೆಯಲ್ಲಿದ್ದವು. ಇವುಗಳ ಬಳಕೆಯಿಂದ ಉಂಟಾಗುತ್ತಿದ್ದ ಸಂಪನ್ಮೂಲ ವ್ಯರ್ಥವಾಗುವುದೆಂದು ತಿಳಿದು ಲಿಕ್ಲಿಡರ್‌ರು ಇಂಟರ್‌-ನೆಟ್‌ವರ್ಕಿಂಗ್‌ಗೆ ಬೇಕಾದ ಅಗತ್ಯಗಳನ್ನು ಗುರುತಿಸಿದನು.

"For each of these three terminals, I had three different sets of user commands. So if I was talking online with someone at S.D.C. and I wanted to talk to someone I knew at Berkeley or M.I.T. about this, I had to get up from the S.D.C. terminal, go over and log into the other terminal and get in touch with them. [...] I said, it's obvious what to do (But I don't want to do it): If you have these three terminals, there ought to be one terminal that goes anywhere you want to go where you have interactive computing. That idea is the ARPAnet."

— Robert W. Taylor, co-writer with Licklider of "The Computer as a Communications Device", in an interview with the New York Times, [೩]

ಪಾಕೆಟ್‌ ಸ್ವಿಚಿಂಗ್[ಬದಲಾಯಿಸಿ]

ಪಾಕೆಟ್‌ ಸ್ವಿಚಿಂಗ್[ಬದಲಾಯಿಸಿ]

ಸೂಕ್ತ ನೆಟ್‌ವರ್ಕ್‌ನ್ನು ರಚಿಸಲು ಪ್ರತ್ಯೇಕ ಭೌತಿಕ ನೆಟ್‌ವರ್ಕ್‌ಗಳನ್ನು ಸಂಪರ್ಕಿಸುವುಲ್ಲಿರುವ ಸಮಸ್ಯೆಯು ಇಂಟರ್ನೆಟ್‌ವರ್ಕಿಂಗ್‌ನ ಅಂತಿಮ ಸಮಸ್ಯೆಯಾಗಿತ್ತು. ಪೌಲ್‌ ಬ್ಯಾರನ್‌ (RAND ಕಾರ್ಪೋರೇಷನ್‌) US ಸೈನಿಕರಿಗಾಗಿ ಉಳಿಸಿಕೊಳ್ಳಬಹುದಾದಂಥ ನೆಟ್‌ವರ್ಕ್‌ಗಳ ಅಧ್ಯಯನವನ್ನು ೧೯೬೦ರ ದಶಕದ ಹೊತ್ತಿಗೆ ಸಿದ್ಧಪಡಿಸಿದರು. ಲಿಯೊನಾರ್ಡ್‌ ಕ್ಲೀನ್‌ರಾಕ್‌ (MIT) ಅಧ್ಯಯನ ಮಾಡಿದ ಮತ್ತು ವಿಶ್ಲೇಷಿಸಿದ ತಂತ್ರಜ್ಞಾನವಾದ ಪಾಕೆಟ್‌-ಸ್ವಿಚಿಂಗ್ ಆಧರಿತ ನೆಟ್‌ವರ್ಕ್‌ನ್ನು ಡೊನಾಲ್ಡ್‌ ಡೇವಿಸ್‌ (UKಯ ನ್ಯಾಷನಲ್‌ ಫಿಸಿಕಲ್‌ ಲ್ಯಾಬೊರೇಟರಿ) ಪ್ರಸ್ತಾಪಿಸಿ, ಅದನ್ನು ಅಭಿವೃದ್ಧಿಪಡಿಸಿದರು. ಉಳಿಸಿಕೊಳ್ಳಬಹುದಾದ ಈ ನೆಟ್‌ವರ್ಕ್‌ಗಳು ಡೊನಾಲ್ಡ್‌ ಅಭಿವೃದ್ಧಿಸಿದ ಚಿಕ್ಕ 'ಸಂದೇಶ-ವಿಭಾಗ'ಗಳನ್ನು ಆಧರಿಸಿದೆ. ಪಾಕೇಟ್‌-ಸ್ವಿಚಿಂಗ್ ತಂತ್ರಜ್ಞಾನವು ಸಂಪನ್ಮೂಲ-ಮಿತವಾದ ಅಂತರ್ಸಂಪರ್ಕಿತ ಕೊಂಡಿಗಳಲ್ಲಿ ದೂರವಾಣಿಗಾಗಿ ಬಳಸುವ ಸಾಂಪ್ರದಾಯಿಕ ಸೈಕೂಟ್‌-ಸ್ವಿಚಿಂಗ್‌ (=ಮಾರ್ಗ ಬದಲಿಸುವ) ತಂತ್ರಜ್ಞಾನಕ್ಕಿಂತ ಉತ್ತಮವಾಗಿ ಬ್ಯಾಂಡ್‌ವಿಡ್ತ್‌ (=ತರಂಗ ವಿಸ್ತಾರ) ಬಳಕೆ ಮತ್ತು ಪ್ರತಿಕ್ರಿಯೆ ಸಮಯವನ್ನು ಒದಗಿಸುತ್ತದೆ. ಪಾಕೇಟ್‌ ಸ್ವಿಚಿಂಗ್ ತ್ವರಿತವಾಗಿ ದತ್ತಾಂಶವನ್ನು ಸಂಗ್ರಹಿಸಿ, ಮುಂದಕ್ಕೆ ಸಾಗಿಸುವ ನೆಟ್‌ವರ್ಕಿಂಗ್‌ ವಿನ್ಯಾಸವಾಗಿದ್ದು, ಪ್ರತಿ ಪಾಕೆಟ್‌ಗೆ ಮಾಡಲಾದ ರೂಟಿಂಗ್‌ (ನಿಗದಿತ ಮಾರ್ಗ) ನಿರ್ಣಯಗಳೊಂದಿಗೆ ಸಂಕೇತ ಪಾಕೇಟ್‌ಗಳಿಗೆ ಸಂದೇಶಗಳನ್ನು ವಿಂಗಡಿಸುತ್ತದೆ. ಮೊದಲು ನೆಟ್‌ವರ್ಕ್‌ಗಳಲ್ಲಿ ಸಂದೇಶ ಬದಲಿಸುವ ವ್ಯವಸ್ಥೆಗಳನ್ನು ಬಳಸುತ್ತಿದ್ದರು. ಇದಕ್ಕೆ ಅಗತ್ಯವಿರುವ ಜಟಿಲ ರೂಟಿಂಗ್‌‌ ವಿನ್ಯಾಸವು ಸಂಪೂರ್ಣ ವಿಫಲತೆಗೆ ಕಾರಣವಾಗಿಬಹುದು. ಪಾಲ್‌ ಬ್ಯಾರನ್‌ರ US ಸೈನ್ಯ ಸ್ಥಾಪಿಸಿದ ಸಂಶೋಧನೆ ನೆಟ್‌ವರ್ಕ್‌ನ ಶಾಬ್ದಿಕ ಸಮೃದ್ಧಿ ವರ್ಧನೆಗಾಗಿ ಸಂದೇಶ-ವಿಭಾಗಗಳನ್ನು ಬಳಸುವಲ್ಲಿ ಗಮನವನ್ನು ಕೇಂದ್ರಿಕರಿಸಲು ಇದು ಕಾರಣವಾಯಿತು.[೪] ಇಂಟರ್ನೆಟ್‌ ಅನ್ನು ಪರಮಾಣು ದಾಳಿಯಿಂದ ತಡೆಯಲು ವಿನ್ಯಾಸಗೊಳಿಸಲಾಗಿದೆ ಎಂಬ ದಂತಕಥೆ ನಗರ ಭಾಗದಲ್ಲಿ ವ್ಯಾಪಕವಾಗಿ ಹರಡಿತು.[೫][೬]

ಇಂಟರ್ನೆಟ್‌ ಉಗಮಕ್ಕೆ ಕಾರಣವಾದ ನೆಟ್‌ವರ್ಕ್‌ಗಳು[ಬದಲಾಯಿಸಿ]

ಅರ್ಪಾನೆಟ್[ಬದಲಾಯಿಸಿ]

DARPAನಲ್ಲಿರುವ ಮಾಹಿತಿ ಪ್ರಕ್ರಿಯೆ ಕಚೇರಿಯ ಮುಖ್ಯಸ್ಥನಾಗಿ ಬಡ್ತಿ ಹೊಂದಿದ ನಂತರ ರಾಬರ್ಟ್‌ ಟೇಲರ್ ಅಂತರ್ಸಂಪರ್ಕಿತ ನೆಟ್‌ವರ್ಕಿಂಗ್‌ ವ್ಯವಸ್ಥೆಯ ಲಿಕ್ಲಿಡರ್‌‌ರ ಕಲ್ಪನೆಗಳನ್ನು ಕಾರ್ಯರೂಪಕ್ಕೆ ತರಲು ಉದ್ದೇಶಿಸಿದ್ದರು. MITಯಿಂದ ಲ್ಯಾರ್ರಿ ರಾಬರ್ಟ್ಸ್‌ಅನ್ನು ಕರೆತಂದು, ಅಂತಹ ನೆಟ್‌ವರ್ಕ್‌ ಅನ್ನು ನಿರ್ಮಿಸುವ ಯೋಜನೆಯನ್ನು ಪ್ರೇರಣೆ ನೀಡಿದರು. ೧೯೬೯ರ ಅಕ್ಟೋಬರ್‌ ೨೯ರಂದು ೨೨:೩೦ ಘಂಟೆಗೆ ಲಾಸ್ ಎಂಜಲೀಸ್‌ನ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ ಮತ್ತು ಸ್ಟ್ಯಾಂಫೋರ್ಡ್‌ ಸಂಶೋಧನಾ ಸಂಸ್ಥೆ ನಡುವೆ ಮೊದಲ ಅರ್ಪಾನೆಟ್‌ ಕೊಂಡಿಯನ್ನು ರಚಿಸಲಾಯಿತು. ೧೯೬೯ರ ಡಿಸೆಂಬರ್‌ ೫ರ ಹೊತ್ತಿಗೆ ಉತಹ್‌ ವಿಶ್ವವಿದ್ಯಾಲಯ ಮತ್ತು ಸ್ಯಾಂಟ‌ ಬರ್ಬಾರದ ಕ್ಯಾಲಿಫೋರ್ನಿಯಾದ ವಿಶ್ವವಿದ್ಯಾಲಯವನ್ನು ನೆಟ್‌ವರ್ಕ್‌ಗೆ ಸೇರಿಸುವುದರೊಂದಿಗೆ ೪-ನೋಡ್‌ ನೆಟ್‌ವರ್ಕ್‌ ನಿರ್ಮಾಣಗೊಂಡಿತು. ALOHAnetನ ವಿಷಯಗಳು ಅಭಿವೃದ್ಧಿಯಾದಂತೆ, ಅರ್ಪಾನೆಟ್‌ ಕ್ಷಿಪ್ರಗತಿಯಲ್ಲಿ ಪ್ರಗತಿಕಂಡಿತು. ಪ್ರತಿ ಇಪ್ಪತ್ತು ದಿನಗಳಿಗೆ ಒಂದು ಹೊಸ ಹೋಸ್ಟ್‌ ಸೇರ್ಪಡೆಯಾಯಿತು, ೧೯೮೧ರ ಹೊತ್ತಿಗೆ ಹೋಸ್ಟ್‌ಗಳ ಸಂಖ್ಯೆಯು ೨೧೩ನ್ನು ತಲುಪಿ ದೋಡ್ಡ ಸಮೂಹ ನಿರ್ಮಾಣವಾಯಿತು. ಇಂಟರ್ನೆಟ್‌ನ್ನು ರಚಿಸಬಹುದಾದ ತಾಂತ್ರಿಕ ಕೇಂದ್ರವಾಗಿ ಅರ್ಪಾನೆಟ್‌ ಬೆಳೆಯಿತು, ಇಂಟರ್ನೆಟ್‌ನ್ನು ಅಭಿವೃದ್ಧಿಪಡಿಸುವಲ್ಲಿ ಬೇಕಾದ ಪ್ರಾಥಮಿಕ ತಂತ್ರಜ್ಞಾನದ ಸಾಧನವಾಯಿತು. ಅರ್ಪಾನೆಟ್‌ ಅಭಿವೃದ್ಧಿಯನ್ನು ಉತ್ತರಕ್ಕಾಗಿ ವಿನಂತಿ ಪ್ರಕ್ರಿಯೆಯ ಸುತ್ತ (=RFC)ಕೇಂದ್ರಿಕರಿಸಲಾಗಿದೆ. ಇದನ್ನು ಇಂಟರ್ನೆಟ್‌ ಪ್ರೋಟಕಾಲ್‌ ಮತ್ತು ಸಿಸ್ಟಮ್‌ಗಳನ್ನು ಸೂಚಿಸುವಿಕೆ ಮತ್ತು ವಿತರಿಸುವ ಉದ್ದೇಶಕ್ಕಾಗಿ ಇಂದಿಗೂ ಬಳಸಲಾಗುತ್ತಿದೆ. RFC ೧, ಲಾಸ್‌ ಎಂಜಲಿಸ್‌ನ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಸ್ಟೀವ್ ಕ್ರೊಕರ್‌ ಬರೆದಿರುವ "ಹೋಸ್ಟ್‌ ಸಾಪ್ಟ್‌ವೇರ್‌"ನ್ನು ೧೯೬೯ರ ಎಪ್ರಿಲ್‌ ೭ರಂದು ಪ್ರಕಟಿಸಲಾಯಿತು. ಈ ಎಲ್ಲ ಆರಂಭಿಕ ಮಾಹಿತಿಯನ್ನು ೧೯೭೨ರ ಸಾಕ್ಷ್ಯ ಚಿತ್ರವೊಂದರಲ್ಲಿ ದಾಖಲಿಸಲಾಗಿದೆ. ಅರ್ಪಾನೆಟ್‌ಗೆ ಅಂತಾರಾಷ್ಟ್ರೀಯ ಸಹಯೋಗ ವಿರಳವಾಗಿತ್ತು. ಹಲವು ರಾಜಕೀಯ ಕಾರಣಗಳಿಗಾಗಿ, ಯುರೋಪಿನ ಸಂಶೋಧಕರು X.25 ನೆಟ್‌ವರ್ಕ್‌ಗಳ ಅಭಿವೃದ್ಧಿಯಲ್ಲಿ ತಮ್ಮ ಗಮನವನ್ನು ಕೇಂದ್ರಿಕರಿಸಿದರು. ೧೯೭೨ರ ನಾರ್ವೇಜಿಯನ್‌ ಸೀಯಿಸ್ಮಿಕ್ ಅರ್ರೆ ನ್ನು (NORSAR) ಹೊರತುಪಡಿಸಿ, ತನುಮ್‌ ಭೂ ಕೇಂದ್ರ ಮತ್ತು ಲಂಡನ್‌ನ ವಿಶ್ವವಿದ್ಯಾಲಯ ಕಾಲೇಜ್‌ಗೆ ೧೯೭೩ರಲ್ಲಿ ಸ್ವೀಡನ್‌ನಿಂದ ಉಪಗ್ರಹ ಸಂಪರ್ಕ ಕಲ್ಪಿಸಲಾಯಿತು.[೭]

X.೨೫ ಮತ್ತು ಸಾರ್ವಜನಿಕರಿಗೆ ಅವಕಾಶ[ಬದಲಾಯಿಸಿ]

ಅಂತರರಾಷ್ಟ್ರೀಯ ದೂರಸಂಪರ್ಕ ಒಕ್ಕೂಟವು (ITU) ARPA ಸಂಶೋಧನೆಯ ಆಧಾರದ ಮೇಲೆ X.೨೫ ಮತ್ತು ಸಂಬಂಧಿಸಿದ ಮಾನದಂಡಗಳನ್ನು ರಚಿಸುವುದಕ್ಕಾಗಿ ಪಾಕೆಟ್‌ ಸ್ವಿಚಿಂಗ್ ನೆಟ್‌ವರ್ಕ್‌ ಮಾನದಂಡವನ್ನು ಅಭಿವೃದ್ಧಿಸಿತು. ಅದನ್ನು ಸಾಂಪ್ರದಾಯಿಕ ದೂರವಾಣಿ ಸಂಪರ್ಕಗಳನ್ನು ಪೈಪೋಟಿ ನೀಡಲು ವಾಸ್ತವಿಕ ವಿದ್ಯುನ್ಮಂಡಲಗಳು (virtual circuits) ರಚಿಸುವ ರೀತಿಯಲ್ಲಿ ಪಾಕೆಟ್‌ ಸ್ವಿಚಿಂಗ್‌ ನೆಟ್‌ವರ್ಕ್‌ ಆದ X.೨೫ ರಚಿಸಲ್ಪಟ್ಟಿತು. ೧೯೭೪ರಲ್ಲಿ ಬ್ರಿಟಿಷ್ ಶೈಕ್ಷಣಿಕ ಮತ್ತು ಸಂಶೋಧನಾ ಜಾಲಗಳ ಮಧ್ಯೆ SERCnet ನೆಟ್‌ವರ್ಕ್‌ನ ಆಧಾರದ ಮೇಲೆ X.೨೫ ರಚಿಸಲಾಯಿತು. ನಂತರ ಇದು JANET (=ಜಾನೆಟ್‌) ಆಗಿ ಪರಿವರ್ತನೆಗೊಂಡಿತು. X.೨೫ನ ಆರಂಭಿಕ ITU ಮಾನದಂಡವನ್ನು ೧೯೭೬ರ ಮಾರ್ಚ್‌ನಲ್ಲಿ ಅನುಮೋದಿಸಲಾಯಿತು.[೮] ೧೯೭೮ರಲ್ಲಿ ಬ್ರಿಟಿಷ್ ಅಂಚೆ ಕಛೇರಿ, ವೆಸ್ಟರ್ನ್‌ ಯುನಿಯನ್ ಇಂಟರ್ನ್ಯಾಷಲ್‌ ಮತ್ತು ಟಿಮ್ನೆಟ್‌ ಮೊದಲ ಅಂತರರಾಷ್ಟ್ರೀಯ ಪಾಕೆಟ್ ಸ್ವಿಚ್ಡ್‌ ನೆಟ್‌ವರ್ಕ್‌ ಅನ್ನು ರಚಿಸಲು ಜತೆಗೂಡಿದರು. ಇದನ್ನು ಅಂತಾರಾಷ್ಟ್ರೀಯ ಪಾಕೆಟ್ ಸ್ವಿಚ್ಡ್‌ ಸೇವೆ (IPSS)ಎಂದು ಕರೆಯಲಾಯಿತು. ಯುರೋಪ್‌ ಮತ್ತು US ನಲ್ಲಿ ಉದಯವಾದ ಈ ನೆಟ್‌ವರ್ಕ್‌ ೧೯೮೧ರ ಹೊತ್ತಿಗೆ, ಕೆನಡಾ, ಹಾಂಗ್ ಕಾಂಗ್ ‌ಮತ್ತು ಆಸ್ಟ್ರೇಲಿಯಾಕ್ಕೆ ವ್ಯಾಪಿಸಿತು. ೧೯೯೦ ದಶಕದ ಹೊತ್ತಿಗೆ ಇದು ವಿಶ್ವದಾದ್ಯಂತ ನೆಟ್‌ವರ್ಕಿಂಗ್‌ ವ್ಯವಸ್ಥೆಯನ್ನು ಒದಗಿಸಿತು.[೯] ಅರ್ಪಾನೆಟ್‌ಗಿಂತಲೂ ವಿಭಿನ್ನವಾದ X.೨೫ ವಾಣಿಜ್ಯ ಬಳಕೆಯಲ್ಲಿ ಸುಲಭವಾಗಿ ದೊರೆಯುವಂತಾಯಿತು. ಟೆಲಿನೆಟ್‌ ತನ್ನ ಟೆಲ್‌ಇಮೇಲ್‌ ವಿದ್ಯುನ್ಮಾನ ಸಂಪರ್ಕ ಸಾಧನದ ಸೇವೆಯನ್ನು ಅರ್ಪಿಸಿತು.ಇದು ಅರ್ಪಾನೆಟ್‌ ಸಾಮಾನ್ಯ ಇಮೇಲ್‌ ವ್ಯವಸ್ಥೆಗಿಂತ ಔದ್ಯಮಿಕ ಬಳಕೆಗೆ ಹೆಚ್ಚು ಗಮನ ನೀಡಿತು. ಮೊದಲ ಸಾರ್ವಜನಿಕ ಡಯಲ್‌-ಇನ್‌ ನೆಟ್‌ವರ್ಕ್‌ಗಳು ಸಾರ್ವಜನಿಕ ನೆಟ್‌ವರ್ಕ್‌ನಲ್ಲಿ ಕಾರ್ಯನಿರ್ವಹಿಸುವ ಕಾನ್ಸಂಟ್ರೇಟರ್‌ ಅನ್ನು (ಸಾಂದ್ರಕ) ತಲುಪಲು ಭಿನ್ನಕಾಲಿಕ TTY ಟರ್ಮಿನಲ್‌ ಪ್ರೋಟಕಾಲ್‌ಗಳನ್ನು ಬಳಸುತ್ತವೆ. ಕಂಪ್ಯೂಸರ್ವ್‌ನಂತಹ ಕೆಲವು ನೆಟ್‌ವರ್ಕ್‌ಗಳು ತಮ್ಮ ಪಾಕೆಟ್‌-ಸ್ವಿಚ್ಡ್‌ ಮೂಲಾಧಾರಗಳಿಗೆ ಟರ್ಮಿನಲ್‌ ಅವಧಿಗಳನ್ನು ಬಹುವಿಧಗೊಳಿಸಲು X.೨೫ನ್ನು ಬಳಸುತ್ತವೆ. ಟಿಮ್ನೆಟ್‌ನಂತಹ ಇತರ ನೆಟ್‌ವರ್ಕ್‌ಗಳು ಖಾಸಗಿ ಸ್ವಾಮ್ಯದ ಪ್ರೋಟಕಾಲ್‌ಗಳನ್ನು ಬಳಸುತ್ತವೆ. ವಿದ್ಯುನ್ಮಾನ ಸಂಪರ್ಕ ಬೆಂಬಲಗಳು ಮತ್ತು ವೈಯಕ್ತಿಕ ಕಂಪ್ಯೂಟರ್‌ ಬಳಕೆದಾರರಿಗೆ ತಾಂತ್ರಿಕ ಬೆಂಬಲ ನೀಡುವ ಸೇವೆಯನ್ನು ೧೯೭೯ರಲ್ಲಿ ಮೊದಲ ಬಾರಿಗೆ [[ಕಂಪ್ಯೂಸರ್ವ್‌|ಕಂಪ್ಯೂಸರ್ವ್‌]] ಒದಗಿಸಿತು. ಒದಗಿಸಿತು. CB ಅನುಕರಣ ಸಾಧನ (=Simulator)ದೊಂದಿಗೆ ನೈಜ ಚ್ಯಾಟ್‌ ಸೇವೆಯನ್ನು ಮೊದಲ ಬಾರಿಗೆ ಒದಗಿಸುವುದರೊಂದಿಗೆ ೧೯೮೦ರಲ್ಲಿ ಕಂಪನಿಯು ಮತ್ತೊಮ್ಮೆ ತನ್ನ ಹೊಸ ದಾಖಲೆ ಬರೆಯಿತು. ಇತರ ಪ್ರಮುಖ ಡಯಲ್‌-ಇನ್‌ ನೆಟ್‌ವರ್ಕ್‌ಗಳೆಂದರೆ ಅಮೆರಿಕಾ ಅನ್‌ಲೈನ್‌ (AOL) ಮತ್ತು ಪ್ರೋಡಿಜಿ. ಇವುಗಳು ಸಹ ಸಂವಹನವನ್ನು ಸಾಧ್ಯ ಮಾಡಿತು, ಸುದ್ದಿ ಮತ್ತು ಮನರಂಜನಾ ವಿಷಯಗಳನ್ನು ತನ್ನೊಡಲಲ್ಲಿ ತುಂಬಿಕೊಂಡಿತು. ಹವ್ಯಾಸಿ ರೇಡಿಯೊ ನಿರ್ವಾಹಕರು, ೦}ಹ್ಯಾಕರ್‌ಗಳು(=ಕಂಪ್ಯೂಟರ್‌ನಲ್ಲಿ ಅಕ್ರಮವಾಗಿ ನುಸುಳುವವರು)ಫಿಡೋನೆಟ್‌ನಂತಹ ಹಲವು ಬುಲೆಟಿನ್‌ ಬೋರ್ಡ್‌ ಸಿಸ್ಟಮ್‌ (BBS) ನೆಟ್‌ವರ್ಕ್‌ಗಳು ಆನ್‌ಲೈನ್‌ ಪ್ರವೇಶವನ್ನು ಒದಗಿಸುತ್ತಿದ್ದವು.[ಸೂಕ್ತ ಉಲ್ಲೇಖನ ಬೇಕು]

UUCP[ಬದಲಾಯಿಸಿ]

ಸಮೀಪದ ಚ್ಯಾಪೆಲ್‌ ಹಿಲ್‌ನಲ್ಲಿರುವ ಉತ್ತರ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯಕ್ಕೆ ಸರಣಿ ರೂಪದಲ್ಲಿ ಸುದ್ದಿ ಮತ್ತು ಸಂದೇಶಗಳನ್ನು ವರ್ಗಾಯಿಸಲು ಸರಳ ಬೌರ್ನ್‌ ಶೆಲ್‌ ಲಿಪಿಗಳನ್ನು ಬಳಸುವ ಪ್ರಸ್ತಾವ ವನ್ನು ಡ್ಯೂಕ್‌ ವಿಶ್ವವಿದ್ಯಾಲಯದ ಇಬ್ಬರು ವಿದ್ಯಾರ್ಥಿಗಳಾದ ಟಾಮ್‌ ಟ್ರಸ್ಕೊಟ್‌ ಮತ್ತು ಜಿಮ್‌ ಎಲ್ಲಿಸ್‌ರು ೧೯೭೯ರಲ್ಲಿ ಮುಂದಿಟ್ಟರು. ಸಾಪ್ಟ್‌ವೇರ್‌ ಅನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಿದ ನಂತರ, ಯುಸ್‌ನೆಟ್‌ ಸುದ್ದಿಯು UUCP ಹೋಸ್ಟ್‌ಗಳನ್ನು ರವಾನಿಸುವ ಜಾಲಬಂಧ(=ಮೆಷ್‌) ಬಳಕೆ ಕ್ಷಿಪ್ರವಾಗಿ ವ್ಯಾಪಿಸಿತು. ನಂತರ ಇದನ್ನು UUCPnet ಎಂದು ಹೆಸರಿಸಲಾಯಿತು. ಇದರಲ್ಲಿ ಗೇಟ್‌ವೇಗಳನ್ನು ರಚಿಸಿ, ಫಿಡೋನೆಟ್‌ ಮತ್ತು ಡಯಲ್-ಅಪ್‌ BBS ಹೋಸ್ಟ್‌ಗಳ ನಡುವೆ ಸಂಬಂಧ ಕಲ್ಪಿಸಲಾಯಿತು. UUCP ನೆಟ್‌ವರ್ಕ್‌ಗಳು ಮಿತ ವ್ಯಯದ್ದೂ, ಅಸ್ತಿತ್ವದಲ್ಲಿರುವ ನಿಗದಿಪಡಿಸಿದ X.25 ಕೊಂಡಿಗಳು ಅಥವಾ ಅರ್ಪಾನೆಟ್‌ ಸಂಪರ್ಕ ಮತ್ತು CSnetಮಾರ್ಗಗಳನ್ನು ಬಳಸುವ ಸಾಮರ್ಥ್ಯ ಉಳ್ಳದ್ದೂ, CSnet ಮತ್ತು Bitnetನೆಟ್‌ವರ್ಕ್‌ಗಳಿಗೆ ಹೋಲಿಸಿದರೆ ಕಠಿಣ ಬಳಕೆಯ ನೀತಿಯ ಕೊರತೆಯಿಂದಾಗಿ (ಬಗ್‌ ಫಿಕ್ಸಿಂಗ್‌ ಸೇವೆ ಒದಗಿಸುವ ವಾಣಿಜ್ಯ ಸಂಸ್ಥೆಗಳು) ತ್ವರಿತವಾಗಿ ವ್ಯಾಪಿಸಿತು. ಎವೂ ಸ್ಥಳೀಯ ನೆಟ್‌ವರ್ಕ್‌ಗೆ ಸಂಪರ್ಕ ಹೊಂದಿರುತ್ತಿದ್ದವು. ೧೯೮೧ರ ಹೊತ್ತಿಗೆ UUCP ಹೋಸ್ಟ್‌ಗಳ ಸಂಖ್ಯೆಯು ೫೫೦ರಷ್ಟು ಬೆಳೆಯಿತು. ೧೯೮೪ರಲ್ಲಿ ಹೋಸ್ಟ್‌ಗಳ ಸಂಖ್ಯೆ ದ್ವಿಗುಣಗೊಂಡು ೯೪೦ರಷ್ಟಕ್ಕೇರಿತು. ೧೯೮೭ರಿಂದ ಕಾರ್ಯನಿರ್ವಹಿಸುತ್ತಿದ್ದ ಸಬ್‌ಲಿಂಕ್‌ ನೆಟ್‌ವರ್ಕ್‌ ಅನ್ನು ಇಟಲಿಯಲ್ಲಿ ೧೯೮೯ರಲ್ಲಿ ಅಧಿಕೃತವಾಗಿ ಸ್ಥಾಪಿಸಲಾಯಿತು. ಕೆಲವು ಖಾಸಗಿ ವ್ಯಕ್ತಿಗಳು ಮತ್ತು ಚಿಕ್ಕ ಕಂಪನಿಗಳ ಸ್ವಾಮ್ಯದಲ್ಲಿರುವ ಇಟಲಿಯ ಘಟಕಗಳು (ಏಕಕಾಲದಲ್ಲಿ ಸುಮಾರು ೧೦೦) UUCP ತನ್ನ ಅಂತರ್ಸಂಪರ್ಕತೆಯ ಆಧಾರದ ಮೇಲೆ ಮೇಲ್‌ (ಇಮೇಲ್‌) ಮತ್ತು ಸುದ್ದಿ ಸಮೂಹಗಳ ಸಂದೇಶವನ್ನು ಮರುವಿತರಿಸುತ್ತಿತ್ತು. ಸಬ್‌ಲಿಂಕ್‌ ನೆಟ್‌ವರ್ಕ್‌ ವ್ಯಾಪಕ ಬಳಕೆಯಿಂದ ಜನಪ್ರಿಯವಾದ ಇಂಟರ್ನೆಟ್‌ ತಂತ್ರಜ್ಞಾನದ ಮೊದಲ ಉದಾಹರಣೆಯಾಗಿರಬಹುದು.

NPL[ಬದಲಾಯಿಸಿ]

UKಯಲ್ಲಿರುವ ರಾಷ್ಟ್ರೀಯ ಭೌತಶಾಸ್ತ್ರ ಪ್ರಯೋಗಾಲಯದ ಡೊನಾಲ್ಡ್‌ ಡೇವಿಸ್‌ರು ಪಾಕೆಟ್‌-ಸ್ವಿಚಿಂಗ್ ಆಧಾರಿತ ರಾಷ್ಟ್ರೀಯ ದತ್ತಾಂಶ ನೆಟ್‌ವರ್ಕ್‌ನ ವಿಚಾರವನ್ನು ೧೯೬೫ರಲ್ಲಿ ಪ್ರಸ್ತಾಪಿಸಿದರು. ಈ ಪ್ರಸ್ತಾಪವನ್ನು ರಾಷ್ಟ್ರೀಯವಾಗಿ ಪ್ರಾರಂಭಿಸದೆ, ಬಹುವಿಭಾಗೀಯ ಪ್ರಯೋಗಾಲಯದ ಅವಶ್ಯಗಳನ್ನು ಪೂರೈಸಲು ಪಾಕೇಟ್‌-ಸ್ವಿಚ್ಡ್‌ ನೆಟ್‌ವರ್ಕ್‌ ಅನ್ನು ರಚಿಸಿದರು. ಈ ತಂತ್ರಜ್ಞಾನವು ಕಾರ್ಯನಿರ್ವಹಣೆಗೆ ಯೋಗ್ಯವಾದ ಸ್ಥಿತಿಯಲ್ಲಿದೆ ಎಂದು ಸಾಬೀತುಪಡಿಸಿದರು. ೧೯೭೬ರ ಹೊತ್ತಿಗೆ ೧೨ ಕಂಪ್ಯೂಟರ್‌ಗಳು ಮತ್ತು ೭೫ ಟರ್ಮಿನಲ್‌ ಸಾಧನಗಳನ್ನು ಜೋಡಿಸಿದ್ದು, ೧೯೮೬ರಲ್ಲಿ ನೆಟ್‌ವರ್ಕ್‌ನ್ನು ಬದಲಾಯಿಸುವರೆಗೆ ಇನ್ನೂ ಹೆಚ್ಚಿನ ಸಾಧನಗಳನ್ನು ಇದಕ್ಕೆ ಸೇರಿಸಲಾಗಿತ್ತು.

ನೆಟ್‌ವರ್ಕ್‌ಗಳ ವಿಲೀನ ಮತ್ತು ಇಂಟರ್ನೆಟ್‌ ಉಗಮ[ಬದಲಾಯಿಸಿ]

TCP/IP[ಬದಲಾಯಿಸಿ]

1982ರ ಜನವರಿಯಲ್ಲಿ TCP/IP ಪರೀಕ್ಷಾರ್ಥ ನೆಟ್‌ವರ್ಕ್‌ನ ನಕ್ಷೆ

ವಿವಿಧ ನೆಟ್‌ವರ್ಕ್‌ ವಿಧಾನಗಳಿರುವುದರಿಂದ, ಅವುಗಳನ್ನು ಒಗ್ಗೂಡಿಸುವ ಅಗತ್ಯವಿತ್ತು. DARPA ಮತ್ತು ARPANETನ ರಾಬರ್ಟ್‌ E. ಕಾಹ್ನ್‌ ಸ್ಟ್ಯಾನ್‌ಫೋರ್ಡ್‌ ವಿಶ್ವವಿದ್ಯಾಲಯದ ವಿನ್ಟನ್‌ ಸೆರ್ಫ್‌ರನ್ನು ಈ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳುವುದಕ್ಕಾಗಿ ತಮ್ಮೊಂದಿಗೆ ಕಾರ್ಯ ನಿರ್ವಹಿಸಲು ಸೇರಿಸಿಕೊಂಡರು. ೧೯೭೩ರ ಹೊತ್ತಿಗೆ ಅವರು ಮೂಲ ಮರುನಿರೂಪಿಸುವಿಕೆಯನ್ನು ಕಂಡುಹಿಡಿದರು. ಅದರಂತೆ ಸಮಾನ ಇಂಟರ್ನೆಟ್‌ವರ್ಕ್‌ ಪ್ರೋಟಕಾಲ್‌ ಬಳಸುವುದರಿಂದ ನೆಟ್‌ವರ್ಕ್‌ ಪ್ರೋಟಕಾಲ್‌ಗಳ ನಡುವಿನ ವ್ಯತ್ಯಾಸವನ್ನು ಮರೆಮಾಡಿದರು ಮತ್ತು ಅರ್ಪಾನೆಟ್‌ನಲ್ಲಿದ್ದಂತೆ ವಿಶ್ವಾಸಾರ್ಹತೆಗೆ ನೆಟ್‌ವರ್ಕ್‌ ಜವಾಬ್ದಾರಿಯಾಗುವ ಬದಲು, ಹೋಸ್ಟ್‌ಗಳು ಜವಬ್ದಾರಿಯಾಗುವಂತೆ ಮಾಡಿದರು. ಸೆರ್ಫ್‌ ಈ ವಿನ್ಯಾಸವನ್ನು ರಚಿಸುವಲ್ಲಿ ಪ್ರಮುಖರಾದ ಹಬರ್ಟ್‌ ಜಿಮ್ಮೆರ್ಮ್ಯಾನ್‌, ಜಿರಾರ್ಡ್‌ ಲೆಲನ್‌ ಮತ್ತು ಲೂಯಿಸ್‌ ಪೌಜಿನ್‌ ( CYCLADES ನೆಟ್‌ವರ್ಕ್‌ನ ವಿನ್ಯಾಸಗಾರ) ಶ್ಲಾಘಿಸಿದರು.[೧೦] ೧೯೭೪ರ ಡಿಸೆಂಬರ್‌‌ರಂದು ನೆಟ್‌ವರ್ಕ್‌ ವರ್ಕಿಂಗ್‌ ಗ್ರೂಪ್‌ನ ವಿನ್ಟನ್‌ ಸೆರ್ಫ್‌, ಯೋಜನ್‌ ಡಲಾಲ್‌ ಮತ್ತು ಕಾರ್ಲ್‌ ಸನ್‌ಶೈನ್‌ರವರು ಅಂತಿಮ ಪ್ರೋಟಕಾಲ್‌ನ ವೈಶಿಷ್ಟ್ಯತೆ, RFC ೬೭೫ - ಇಂಟರ್ನೆಟ್‌ ಪ್ರಸಾರ ನಿಯಂತ್ರಣ ಕಾರ್ಯಕ್ರಮದ ವಿಶಿಷ್ಟ ವಿವರಣೆ ಯನ್ನು ಬರೆದಿದ್ದಾರೆ. ಇದರಲ್ಲಿ ಮೊದಲ ಬಾರಿ ಇಂಟರ್ನೆಟ್‌ವರ್ಕಿಂಗ್‌ ಸಂಕ್ಷಿಪ್ತರೂಪವಾಗಿ ಇಂಟರ್ನೆಟ್‌ ಎಂಬ ಪದವನ್ನು ಬಳಸಿರುವುದರಿಂದ ಅದು ದೃಢೀಕರಣಗೊಂಡಿದೆ. . ನಂತರ RFCಗಳು ಈ ಬಳಕೆಯನ್ನು ಪುನರಾವರ್ತಿಸುದವು. ಈಗ ನಾಮಪದದಂತಿರುವ ಪದ ಅಂದು ಗುಣವಾಚಕವಾಗಿ ಬಳಕೆಗೆ ಬಂತು. ನೆಟ್‌ವರ್ಕ್‌ಗೆ ಕನಿಷ್ಠ ಅವಶ್ಯಕತೆಗಳು ಸಾಕಾಗುವ ಹಂತ ತಲಪಿದಾಗ ಯಾವುದೇ ಲಕ್ಷಣವನ್ನು ಹೊಂದಿರುವ ನೆಟ್‌ವರ್ಕ್‌ ಅನ್ನು ಸಂಪರ್ಕಿಸುವುದು ಸಾಧ್ಯವಾಯಿತು.ಕಾಹ್ನ್‌ರ ಆರಂಭಿಕ ಸಮಸ್ಯೆಯನ್ನು ಇದು ಪರಿಹರಿಸಿತು. ಸಾಪ್ಟ್‌ವೇರ್‌ನ ಮೂಲ ಮಾದರಿಯ ಅಭಿವೃದ್ಧಿಗೆ ಆರ್ಥಿಕ ನೆರವು ಒದಗಿಸಲು DARPA ಸಮ್ಮತಿಸಿತು. ಹಲವು ವರ್ಷಗಳ ಶ್ರಮದ ನಂತರ SF ಕೊಲ್ಲಿ ಪ್ರದೇಶದಲ್ಲಿರುವ ಪಾಕೆಟ್‌ ರೇಡಿಯೊ ನೆಟ್‌ವರ್ಕ್‌ ಮತ್ತು ಅರ್ಪಾನೆಟ್‌ನ ನಡುವೆ ಒಡ್ಡೊಡ್ಡಾದರೂ ಮೊದಲ ಗೇಟ್‌ವೇಯ ಪ್ರದರ್ಶನ ನಡೆಯಿತು. ೧೯೭೭ರ ನವೆಂಬರ್‌ ೨೨ರಂದು[೧೧] ಮೂರು ನೆಟ್‌ವರ್ಕ್‌ಗಳಾದ ಅರ್ಪಾನೆಟ್‌, ಪಾಕೆಟ್‌ ರೇಡಿಯೊ ನೆಟ್‌ವರ್ಕ್‌ ಮತ್ತು ಅಟ್ಲಾಂಟಿಕ್‌ ಪಾಕೆಟ್‌ ಸ್ಯಾಟಲೈಟ್‌ ನೆಟ್‌ವರ್ಕ್‌ ಪ್ರದರ್ಶನ ನಡೆಯಿತು-ಇವೆಲ್ಲವನ್ನು DARPA ಪ್ರಾಯೋಜಿಸಿತ್ತು. ೧೯೭೪ರಲ್ಲಿ TCPಯ ಮೊದಲ ವಿಶಿಷ್ಟ ವಿವರಣೆ ಹೊಂದಿದ ಮೂಲರೂಪವಾದ, TCP/IPಯ ಅಂತಿಮ ರೂಪಕ್ಕೆ ಸಮೀಪವಿರುವ ಮಾದರಿಯು ೧೯೭೮ರ ಮಧ್ಯಭಾಗದಲ್ಲಿ ಅಸ್ತಿತ್ವಕ್ಕೆ ಬಂದಿತು. ೧೯೮೧ ವೇಳಗೆ ಇದಕ್ಕೆ ಸಂಬಂಧಿಸಿದ ಮಾನದಂಡಗಳನ್ನು RFCs ೭೯೧, ೭೯೨ ಮತ್ತು ೭೯೩ ಎಂದು ಪ್ರಕಟಿಸಿ, ಬಳಕೆಗೆ ತರಲಾಯಿತ. ಹಲವು ಕಾರ್ಯಚರಣಾ ವ್ಯವಸ್ಥೆಗಳಲ್ಲಿ TCP/IP ಕಾರ್ಯನಿರ್ವಹಿಸಲು, ಇದರ ಅಭಿವೃದ್ಧಿಗೆ DARPA ಪ್ರಾಯೋಜಿಸಿತು ಅಥವಾ ಪ್ರೋತ್ಸಾಹಿಸಿತು. ನಂತರ TCP/IPಗೆ ಸ್ಥಳಾಂತರವಾಗುವ ತನ್ನೆಲ್ಲಾ ಪಾಕೆಟ್‌ ನೆಟ್‌ವರ್ಕ್‌ಗಳಲ್ಲಿರುವ ಎಲ್ಲಾ ಹೋಸ್ಟ್‌ಗಳನ್ನು ಪಟ್ಟಿಮಾಡಿತು. ೧೯೮೩ರ ಜನವರಿ ೧ರಂದು ಹಿಂದಿನ NCP ಪ್ರೋಟಕಾಲ್‌ಅನ್ನು ಬದಲಿಸಿ, TCP/IP ಪ್ರೋಟಕಾಲ್‌ಗಳು ಅರ್ಪಾನೆಟ್‌ನಲ್ಲಿರುವ ಏಕಮಾತ್ರ ಅನುಮೋದಿತ ಪ್ರೋಟಕಾಲ್‌ ಆಗಿ ಮಾಡಲಾಯಿತು.[೧೨]

ವಿಶಾಲ ವ್ಯಾಪ್ತಿಯ ಹಲವು ಸಂಯುಕ್ತ ನೆಟ್‌ವರ್ಕ್‌ಗಳಿಗೆ ಅರ್ಪಾನೆಟ್‌: MILNET, NSI ಮತ್ತು NSFNet[ಬದಲಾಯಿಸಿ]

ಅರ್ಪಾನೆಟ್‌ ರಚನೆಗೊಂಡು ಹಲವಾರು ವರ್ಷಗಳ ಕಾಲ ಕಾರ್ಯನಿರ್ವಹಿಸಿದ ನಂತರ, ನೆಟ್‌ವರ್ಕ್‌ನ್ನು ಹಸ್ತಾಂತರಿಸಲು ARPA ಇನ್ನೊಂದು ಸಂಸ್ಥೆಗಾಗಿ ಹುಡುಕಿತು. ಏಕೆಂದರೆ ಮಹತ್ವದ ಸಂಶೋಧನೆ ಮತ್ತು ಅಭಿವೃದ್ಧಿಗೆ ಆರ್ಥಿಕ ಸಹಕಾರವನ್ನು ನೀಡುವುದೆ ARPAದ ಪ್ರಾಥಮಿಕ ಉದ್ದೇಶವಾಗಿತ್ತೇ ಹೊರತು ಸಂಪರ್ಕ ಸಾಧನಗಳನ್ನು ನಿರ್ವಹಿಸುವುದಾಗಿರಲ್ಲಿಲ್ಲ. ಕೊನೆಗೆ ೧೯೭೫ರ ಜುಲೈನಲ್ಲಿ ನೆಟ್‌ವರ್ಕ್‌ನ್ನು ರಕ್ಷಣಾ ಇಲಾಖೆಯ ಒಂದು ವಿಭಾಗವಾದ ರಕ್ಷಣಾ ಸಂವಹನ ಸಂಸ್ಥೆಗೆ ಹಸ್ತಾಂತರಿಸಲಾಯಿತು. ೧೯೮೩ರಲ್ಲಿ U.S. ಸೈನ್ಯದ ಅರ್ಪಾನೆಟ್‌ನ ಒಂದು ಭಾಗವು ಮಿಲ್ನೆಟ್‌ ಎಂಬ ಪ್ರತ್ಯೇಕ ನೆಟ್‌ವರ್ಕ್‌ ಆಗಿ ಬೇರ್ಪಟ್ಟಿತು. ಕ್ರಮೇಣವಾಗಿ ಮಿಲ್ನೆಟ್‌ ವರ್ಗರಹಿತವಾಯಿತು. ಆದರೆ NIPRNET ಸೈನಿಕರಿಗೆ, ರಹಸ್ಯದ SIPRNET ಮತ್ತು ಅತ್ಯುಚ್ಚ ಮಟ್ಟದ ರಹಸ್ಯಕ್ಕಾಗಿ JWICS ಮತ್ತು ಇನ್ನೂ ಹೆಚ್ಚಿನ ವರ್ಗಗಳನ್ನು ಬಳಸುತ್ತಿದ್ದರು. NIPRNET ಸಾರ್ವಜನಿಕ ಇಂಟರ್ನೆಟ್‌ಗೆ ನಿಯಂತ್ರಿಸಲ್ಪಟ್ಟ ಸುರಕ್ಷಿತ ಗೇಟ್‌ವೇಗಳು ಹೊಂದಿತ್ತು. ಅರ್ಪಾನೆಟ್‌ ಆಧಾರಿತ ನೆಟ್‌ವರ್ಕ್‌ಗಳು ಸರಕಾರದ ಆರ್ಥಿಕ ನೆರವನ್ನು ಪಡೆದಿದ್ದವು.ಹೀಗಾಗಿ ಸಂಶೋಧನೆಯಂತಹ ವಾಣಿಜ್ಯೇತರ ಬಳಕೆಗೆ ಸೀಮಿತಗೊಳಿಸಲಾಗಿತ್ತು ಮತ್ತು ವಾಣಿಜ್ಯೋದ್ದೇಶದ ಬಳಕೆಯ ಮೇಲೆ ಕಟ್ಟುನಿಟ್ಟಿನ ನಿಷೇಧ ಹೇರಲಾಗಿತ್ತು. ಆರಂಭದಲ್ಲಿ ಸೈನಿಕ ತಾಣಗಳು (sites) ಮತ್ತು ವಿಶ್ವವಿದ್ಯಾಲಯಗಳಿಗೆ ಮಾತ್ರ ಸಂಪರ್ಕವನ್ನು ಸೀಮಿತಗೊಳಿಸಲಾಗಿತ್ತು. ೧೯೮೦ರ ದಶಕದ ವೇಳೆಗೆ, ಹೆಚ್ಚಿನ ಶೈಕ್ಷಣಿಕ ಸಂಸ್ಥೆಗಳು ಮತ್ತು ಸಂಶೋಧನಾ ಯೋಜನೆಗಳಲ್ಲಿ ಭಾಗವಹಿಸುವ ಅಥವಾ ಅವರಿಗೆ ಸೇವೆಯನ್ನು ಒದಗಿಸುವವರಾದ ಡಿಜಿಟಲ್‌ ಇಕ್ಯುಪ್‌ಮೆಂಟ್‌ ಕಾರ್ಪೊರೇಷನ್‌ ಮತ್ತು ಹೆವ್ಲೆಟ್‌-ಪಾಕರ್ಡ್‌ನಂತಹ ಹೆಚ್ಚಿನ ಕಂಪನಿಗಳಿಗೆ ಸಂಪರ್ಕವನ್ನು ನೀಡಲಾಯಿತು.

1986ರ ಮೊದಲು BBN ಟೆಕ್ನಾಲಜಿಸ್‌ TCP/IP ಇಂಟರ್ನೆಟ್‌ ನಕ್ಷೆ

U.S. ಸರಕಾರ ಇತರ ವಿಭಾಗಗಳು, ರಾಷ್ಟ್ರೀಯ ವೈಮಾನಿಕ ಮತ್ತು ಖಗೋಳ ಸಂಸ್ಥೆ(NASA), ರಾಷ್ಟ್ರೀಯ ವಿಜ್ಞಾನ ಪ್ರತಿಷ್ಠಾನ (NSF) ಮತ್ತು ಇಂಧನ ಇಲಾಖೆಯು (DOE) ಇಂಟರ್ನೆಟ್‌ ಸಂಶೋಧನೆಯಲ್ಲಿ ವಿಪರೀತವಾಗಿ ತೊಡಗಿಸಿಕೊಂಡವು. ಅರ್ಪಾನೆಟ್‌ನ ಮುಂದಿನ ಉತ್ಪನ್ನದ ಅಭಿವೃದ್ಧಿಯನ್ನು ಪ್ರಾರಂಭಿಸಿದರು‌. ೧೯೮೦ರ ದಶಕದ ಮಧ್ಯೆ ಭಾಗದಲ್ಲಿ, ಈ ಮೂರು ವಿಭಾಗಗಳು ಸೇರಿ TCP/IP ಆಧಾರಿತ ಮೊದಲ ವಿಶಾಲ ವ್ಯಾಪ್ತಿಯ ನೆಟ್‌ವರ್ಕ್‌ಗಳನ್ನು ಅಭಿವೃದ್ಧಿಸಿದರು. NASAವು ನಾಸಾ ವಿಜ್ಞಾನ ನೆಟ್‌ವರ್ಕ್‌ನ್ನು ಅಭಿವೃದ್ಧಿಸಿತು, NSF CSNETನ್ನು ಅಭಿವೃದ್ಧಿಸಿತು ಮತ್ತು DOE ಇಂಧನ ವಿಜ್ಞಾನಗಳ ನೆಟ್‌ವರ್ಕ್‌ ಅಥವಾ ESNet ಅನ್ನು ಅಭಿವೃದ್ಧಿಸಿತು. TCP/IP ಆಧಾರಿತ CSNETನ್ನು ೧೯೮೪ರಲ್ಲಿ NSF ಅಭಿವೃದ್ಧಿಸಿತು. TCP/IP ಬಳಸಿಕೊಂಡು ಅರ್ಪಾನೆಟ್‌ಗೆ CSNETಗೆ ಸಂಪರ್ಕಿಸಲಾಯಿತ ಮತ್ತು X.25 ಮೂಲಕ TCP/IPಯನ್ನು ಚಲಿಸಲಾಯಿತು. ಆದರೆ ಅದು ಸ್ವಯಂಚಾಲಿತ ಡಯಲ್-ಅಪ್‌ ಮೇಲ್ ವಿನಿಮಯವನ್ನು ಬಳಸಿ, ಸೂಕ್ತವಾದ ನೆಟ್‌ವರ್ಕ್‌ ಸಂಪರ್ಕಯಿಲ್ಲದೆ ಇಲಾಖೆಗಳನ್ನು ಬೆಂಬಲಿಸುತ್ತಿತ್ತು. ಇದು NSFNetನ ಬೆನ್ನೆಲುಬಾಗಿ ಬೆಳೆದು, ೧೯೮೬ರಲ್ಲಿ ತನ್ನ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಇದು NSFನಿಂದ ಸ್ಥಾಪಿಸಲ್ಪಟ್ಟ ಅನೇಕ ಸುಪರ್‌ಕಂಪ್ಯೂಟಿಂಗ್‌ ಕೇಂದ್ರಗಳಿಗೆ ಸಂಪರ್ಕ ಮತ್ತು ಪ್ರವೇಶವನ್ನು ನೀಡಲು ಉದ್ದೇಶವನ್ನು ಹೊಂದಿತ್ತು.[೧೩]

ಇಂಟರ್ನೆಟ್‌ನೆಡೆಗೆ ಪರಿವರ್ತನೆ[ಬದಲಾಯಿಸಿ]

ಇಂಟರ್ನೆಟ್‌ವರ್ಕಿಂಗ್‌ ಪದದ ಸಂಕ್ಷಿಪ್ತ ರೂಪವಾಗಿ "ಇಂಟರ್ನೆಟ್‌" ಪದವನ್ನು TCP ಪ್ರೋಟಕಾಲ್‌ನಲ್ಲಿ ಪ್ರಕಟವಾದ ಮೊದಲ RFCಯಲ್ಲಿ (RFC ೬೭೫:[೧೪] ೧೯೭೪ರ ಡಿಸೆಂಬರ್‌ನ ಇಂಟರ್ನೆಟ್‌ ಪ್ರಸಾರ ನಿಯಂತ್ರಣ ಕಾರ್ಯಕ್ರಮ) ಬಳಸಲಾಗಿತ್ತು ಮತ್ತು ಈ ಎರಡು ಪದಗಳನ್ನು ಅಂತಃಪರಿವರ್ತನೀಯ ಪದಗಳನ್ನಾಗಿ ಬಳಸಲಾಗಿತ್ತು. TCP/IPನ್ನು ಬಳಸುವ ಯಾವುದೇ ನೆಟ್‌ವರ್ಕ್‌ನ್ನು ಸಾಮಾನ್ಯವಾಗಿ ಇಂಟರ್ನೆಟ್‌ ಎನ್ನಬಹುದು. ೧೯೮೦ರ ವೇಳೆಗೆ ಅರ್ಪಾನೆಟ್‌ NSFNetನೊಂದಿಗೆ ಅಂತರ್ಸಂಪರ್ಕ ಹೊಂದಿತ್ತು. ಇದನ್ನು ನೆಟ್‌ವರ್ಕ್‌ ಎಂದು ಕರೆಯುತ್ತಿರುವುದರಿಂದ ಇಂಟರ್ನೆಟ್‌[೧೫] ದೊಡ್ಡ ಮತ್ತು ಜಾಗತಿಕ TCP/IP ನೆಟ್‌ವರ್ಕ್‌ಆಗಬೇಕಿತ್ತು. ನೆಟ್‌ವರ್ಕಿಂಗ್‌ನಲ್ಲಿ ವ್ಯಾಪಕ ಆಸಕ್ತಿ ಬೆಳೆದಂತೆ, ಅವುಗಳಿಗಾಗಿ ಹೊಸ ಅನ್ವಯಗಳು ಅಭಿವೃದ್ಧಿಗೊಂಡವು. ಹಾಗೆಯೇ ಇಂಟರ್ನೆಟ್‌ ತಂತ್ರಜ್ಞಾನವು ವಿಶ್ವದೆಲ್ಲೆಡೆ ಪಸರಿಸಿತು. TCP/IPನಲ್ಲಿ ನೆಟ್‌ವರ್ಕ್‌-ಅಜ್ಞಾತ ಪ್ರಸ್ತಾಪವೆಂದರೆ IPSS X.೨೫ ನೆಟ್‌ವರ್ಕ್‌ನಂತಹ ಅಸ್ತಿತ್ವದಲ್ಲಿರುವ ಯಾವುದೇ ನೆಟ್‌ವರ್ಕ್‌ಗಳಿಗೆ ಇಂಟರ್ನೆಟ್‌ ಟ್ರ್ಯಾಫಿಕ್‌ನ್ನು ಒದಗಿಸಲು ಸುಲಭವಾಗಿ ಬಳಸುವುದಾಗಿದೆ. ೧೯೮೪ರಲ್ಲಿ ಲಂಡನ್‌ನ ವಿಶ್ವವಿದ್ಯಾಲಯ ಕಾಲೇಜು IPSS ಮೂಲಕ TCP/IPಯೊಂದಿಗೆ ಅಟ್ಲಾಂಟಿಕ್‌ ಸಾಗರವನ್ನು ದಾಟಿ ಹೋಗುವ ಉಪಗ್ರಹ ಕೊಂಡಿಗಳನ್ನು ಬದಲಾಯಿಸಿತು.[೧೬] ಆ ಕಾಲದಲ್ಲಿ ಅತಿ ಪ್ರಮುಖ ಅಪ್ಲಿಕೇಷನ್‌ ಆಗಿದ್ದ ಇಮೇಲ್ ವಿನಿಮಯವನ್ನು ಸಕ್ರಿಯಗೊಳಿಸುವುದಕ್ಕಾಗಿ ಸರಳ ಗೇಟ್‌ವೇಗಳನ್ನು ರಚಿಸಲು ಹಲವು ಜಾಲಗಳಿಗೆ ಇಂಟರ್ನೆಟ್‌ನ ನೇರ ಸಂಪರ್ಕ ಸಾಧ್ಯವಾಗುತ್ತಿರಲಿಲ್ಲ. UUCP ಅಥವಾ ಫಿಡೋನೆಟ್‌ ಬಳಸಿದ ಹೆಚ್ಚಿನ ತಾಣಗಳು ಬಿಟ್ಟು ಬಿಟ್ಟು ಸಂಪರ್ಕ ಹೊಂದುತ್ತಿದ್ದವು ಮತ್ತು ನೆಟ್‌ವರ್ಕ್‌ ಮತ್ತು ಇಂಟರ್ನೆಟ್‌ಗಳ ನಡುವಿನ ಗೇಟ್‌ವೇಗಳನ್ನು ಇವುಗಳು ಅವಲಂಬಿಸಿದ್ದವು. ಕೆಲವು ಗೇಟ್‌ವೇ ಸೇವೆಗಳು ಸರಳ ಇಮೇಲ್‌ ಅಲ್ಲದೆ, ಅದಕ್ಕೆ ಸಮಾನವಾದ UUCP ಅಥವಾ ಇಮೇಲ್‌ ಮೂಲಕ FTP ತಾಣಗಳಿಗೆ ಪ್ರವೇಶವನ್ನು ನೀಡುತ್ತಿದ್ದವು. ಅಂತಿಮವಾಗಿ, ಇಂಟರ್ನೆಟ್‌ನ ಉಳಿದ ಕೇಂದ್ರೀಕರಿಸಿದ ರೂಟಿಂಗ್ ಅಂಶಗಳನ್ನು ತಗೆದುಹಾಕಲಾಯಿತು. NSFNet ಇಂಟರ್ನೆಟ್‌ ಮೂಲಾಧಾರ ನೆಟ್‌ವರ್ಕ್‌ನ್ನು ತೆಗೆದುಹಾಕಲು EGP ರೂಟಿಂಗ್‌ ಪ್ರೋಟಕಾಲ್‌ನ ಹೊಸ ಪ್ರೋಟಕಾಲ್‌ ಬಾರ್ಡರ್‌ ಗೇಟ್‌ವೇ ಪ್ರೋಟಕಾಲ್‌(BGP)ನಿಂದ ಬದಲಿಸಲಾಯಿಸಲಾಯಿತು. ವಿಳಾಸ ಜಾಗದಲ್ಲಾಗುವ ಉತ್ತಮ ಸಂಭಾಷಣೆಯನ್ನು ಬೆಂಬಲಿಸುವುದಕ್ಕಾಗಿ ವರ್ಗರಹಿತ ಇಂಟರ್‌-ಡೊಮೈನ್‌ ರೂಟಿಂಗ್‌ನ್ನು ೧೯೯೪ರಲ್ಲಿ ಪರಿಚಯಿಸಲಾಯಿತು. ಇಲ್ಲಿ ರೂಟಿಂಗ್‌ ಕೋಷ್ಟಕಗಳ ಗಾತ್ರವನ್ನು ಕಡಿಮೆಗೊಳಿಸುವುದಕ್ಕಾಗಿ ರೂಟ್‌ ಸಮೂಹದ ಬಳಕೆಯನ್ನು ಅನುಮತಿಸಲಾಯಿತು.[೧೭] ಅತ್ಯಾಧುನಿಕ ಕಂಪನಿಯಾದ BBNನ ಸಹಾಯದಿಂದ ರಚಿಸಲಾಗಿರುವ ವ್ಯವಸ್ಥೆಯನ್ನ್ನು ಬಲದಲ್ಲಿರುವ ಚಿತ್ರ ತೋರಿಸುತ್ತದೆ. ಆ ಕಂಪನಿಯ ಹೆಸರಿನಲ್ಲಿ ಅದರ ಸಂಸ್ಥಾಪಕರ (ಬೋಲ್ಟ್, ಬೆರನೆರ್ಕ್‌, ಮತ್ತು ನ್ಯೂಮ್ಯಾನ್‌)ಹೆಸರಿದೆ.

ವಿಶ್ವಾದ್ಯಂತ ಪಸರಿಸಿದ TCP/IP[ಬದಲಾಯಿಸಿ]

ಪೆಸಿಫಿಕ್‌ ಮತ್ತು ಅದರಾಚೆಗೆ ಸಂಪರ್ಕವನ್ನು ಕಲ್ಪಿಸುತ್ತಿದ್ದ ಯುರೋಪಿನ ಇಂಟರ್ನೆಟ್‌ CERN[ಬದಲಾಯಿಸಿ]

CERN ತನ್ನ ಪ್ರಮುಖ ಆಂತರಿಕ ಕಂಪ್ಯೂಟರ್‌ ಸಿಸ್ಟಮ್‌ಗಳು, ಕಾರ್ಯಸ್ಥಳಗಳು, PCಗಳು ಮತ್ತು ವೇಗವರ್ಧಕ ನಿಯಂತ್ರಣ ವ್ಯವಸ್ಥೆಗಳನ್ನು ಪರಸ್ಪರ ಸಂಪರ್ಕಗೊಳಿಸಲು TCP/IP೧೯೮೪ ಮತ್ತು ೧೯೮೮ರ ನಡುವಿನ ಅವಧಿಯಲ್ಲಿ ಸ್ಥಾಪಿತವಾಯಿತು ಮತ್ತು ಕಾರ್ಯಚರಣೆಯನ್ನು ಪ್ರಾರಂಭಿಸಿತು. ಆಂತರಿಕವಾಗಿ CERNETನ ಮಿತ ಸಂಖ್ಯೆಯಲ್ಲಿರುವ ತಾನೇ ಅಭಿವೃದ್ಧಿಸಿದ ವ್ಯವಸ್ಥೆ ಮತ್ತು ಹೊರಗಿನ ಬೇರೆ ವ್ಯವಸ್ಥೆಗೆ ಹೊಂದಿಕೊಳ್ಳದ (ಒಡೆತನದಲ್ಲಿರುವ) ಹಲವು ನೆಟ್‌ವರ್ಕ್‌ ಪ್ರೋಟಕಾಲ್‌ಗಳನ್ನು ಕಾರ್ಯನಿರ್ವಹಿಸಲು CERN ಬಳಕೆ ಮುಂದುವರಿಸಲಾಯಿತು. ಯುರೋಪ್‌ನಲ್ಲಿ TCP/IPಯ ವ್ಯಾಪಕ ಬಳಕೆಗೆ ಗಮನಾರ್ಹ ಪ್ರತಿರೋಧ ಎದುರಾಯಿತು. ೧೯೮೯ರವರೆಗೆ CERN TCP/IP ಇಂಟ್ರಾನೆಟ್‌ಗಳು ಇಂಟರ್ನೆಟ್‌ನಿಂದ ಪ್ರತ್ಯೇಕವಾಗಿಯೇ ಉಳಿದುಬಿಟ್ಟವು. ೧೯೮೮ರಲ್ಲಿ ಅಂಸ್ಟೆರ್ಡ್ಯಾಮ್‌ನಲ್ಲಿರುವ CWIನ ಡೇನಿಯಲ್‌ ಕರೆನ್ಬರ್ಗ್‌ CERNನ TCP/IP ಸಂಯೋಜಕರಾದ ಬೆನ್‌ ಸೆಗಲ್‌ರನ್ನು ಭೇಟಿಯಾಗಿ, ಯುರೋಪಿನ UUCP ಯುಸ್‌ನೆಟ್‌ ನೆಟ್‌ವರ್ಕ್‌ನ್ನು (ಹೆಚ್ಚಿನವು X.೨೫ ಕೊಂಡಿಗಳ ಮೂಲಕ ಕಾರ್ಯನಿರ್ವಹಿಸುವಂತವು) TCP/IPಗೆ ಪರಿವರ್ತಿಸುವ ಬಗ್ಗೆ ಸಲಹೆಯನ್ನು ನೀಡಿದರು. ೧೯೮೭ರಲ್ಲಿ ಬೆನ್ ಸೆಗಲ್‌ ಆಗ ಚಿಕ್ಕ ಕಂಪನಿಯಾಗಿದ್ದ ಸಿಸ್ಕೊದ ಲೆನ್‌ ಬೊಸಾಕ್‌ರನ್ನು CERNಗಾಗಿ TCP/IP ರೂಟರ್‌ಗಳನ್ನು ಖರೀದಿಸುವ ಬಗ್ಗೆ ಮಾತುಕತೆ ನಡೆಸಲು ಭೇಟಿಯಾಗಿ, ಕರೆನ್ಬರ್ಗ್‌ ನೀಡಿದ ಸಲಹೆಯನ್ನು ತಿಳಿಸಿದರು ಮತ್ತು ಅದಕ್ಕಾಗಿ ಸಿಸ್ಕೊ ಸೂಕ್ತ ಯಂತ್ರಾಂಶವನ್ನು ತಯಾರಿಸಬೇಕೆಂದು ಬೊಸಾಕ್‌ರಿಗೆ ತಿಳಿಸಿದರು. ಇದರಿಂದಾಗಿ ಯುರೋಪ್‌ ಭಾಗದಲ್ಲಿ ಅಸ್ತಿತ್ವದಲ್ಲಿರುವ UUCP ನೆಟ್‌ವರ್ಕ್‌ಗಳಾದ್ಯಂತ ಇಂಟರ್ನೆಟ್‌ ವ್ಯಾಪಿಸಿತು. ೧೯೮೯ರಲ್ಲಿ CERN ಮೊದಲ ಬಾಹ್ಯ TCP/IP ಸಂಪರ್ಕಗಳನ್ನು ಪ್ರಾರಂಭಿಸಿತು.[೧೮] ಇದು ಮತ್ತು ರೇಸಿಯಾಕ್ಸ್‌ IP ಯುರೋಪಿಯನ್ಸ್‌ನ (RIPE) ರಚನೆ ಎರಡೂ ಏಕಕಾಲದಲ್ಲಿ ಸಂಭವಿಸಿತು. ಆರಂಭದಲ್ಲಿ IP ನೆಟ್‌ವರ್ಕ್‌ ನಿರ್ವಾಹಕರ ಸಮೂಹವು ಜತೆಗೂಡಿ ಕಾರ್ಯ ಸಂಯೋಜನೆಗಾಗಿ ನಿಯತವಾಗಿ ಒಟ್ಟು ಸೇರುತಿತ್ತು. ೧೯೯೨ರಲ್ಲಿ RIPE ಅಂಸ್ಟೆರ್ಡ್ಯಾಮ್‌ನಲ್ಲಿ ಸಹಕಾರ ಸಂಸ್ಥೆಯಾಗಿ ಅಧಿಕೃತವಾಗಿ ನೋಂದಣಿಯಾಯಿತು. ಅದೇ ಸಂದರ್ಭದಲ್ಲಿ ಯುರೋಪ್‌ನಲ್ಲಿ ಇಂಟರ್ನೆಟ್‌ವರ್ಕಿಂಗ್‌ನ ಅಭಿವೃದ್ಧಿಯಿಂದಾಗಿ ARPAಗೆ ತಾತ್ಕಾಲಿಕ ನೆಟ್‌ವರ್ಕಿಂಗ್‌ ವ್ಯವಸ್ಥೆಯನ್ನು ರಚಿಸಲಾಗಿತ್ತು. ಈ ನಡುವೆ ಆಸ್ಟ್ರೇಲಿಯಾದ ವಿಶ್ವವಿದ್ಯಾಲಯಗಳು X.೨೫ ಮತ್ತು UUCPನೆಟ್‌ನಂತಹ ವಿವಿಧ ತಂತ್ರಜ್ಞಾನಗಳನ್ನು ಬಳಸಿಕೊಂಡು ನೆಟ್‌ವರ್ಕ್‌ ವ್ಯವಸ್ಥೆಯನ್ನು ರಚಿಸಿದರು. ವೈಯಕ್ತಿಕ ಅಂತರರಾಷ್ಟ್ರೀಯ UUCP ಡಯಲ್-ಅಪ್‌ ಅಥವಾ X.೨೫ ಸಂಪರ್ಕಿಸಲು ತಗಲುವ ವೆಚ್ಚದಿಂದಾಗಿ ಜಾಗತಿಕ ನೆಟ್‌ವರ್ಕ್‌ಗಳಿಗೆ ಈ ನೆಟ್‌ವರ್ಕ್‌ಗಳ ಸಂಪರ್ಕವು ಸೀಮಿತವಾಗಿತ್ತು. ತಮ್ಮ ನೆಟ್‌ವರ್ಕಿಂಗ್‌ನ ಮೂಲಸೌಲಭ್ಯಗಳನ್ನು ಒಗ್ಗೂಡಿಸುವುದಕ್ಕಾಗಿ IP ಪ್ರೋಟಕಾಲ್‌ಗಳ ಬಳಕೆಯ ಕಡೆಗೆ ಆಸ್ಟ್ರೇಲಿಯಾದ ವಿಶ್ವವಿದ್ಯಾಲಯಗಳು ೧೯೮೯ರಲ್ಲಿ ಹೆಚ್ಚಿನ ಒತ್ತು ಕೊಟ್ಟವು. [[ಆಸ್ಟ್ರೇಲಿಯನ್‌ ವೈಸ್‌-ಛಾನ್ಸೆಲರ್ಸ್ ಕಮಿಟಿ AARNet|ಆಸ್ಟ್ರೇಲಿಯನ್‌ ವೈಸ್‌-ಛಾನ್ಸೆಲರ್ಸ್ ಕಮಿಟಿ AARNet]]ಅನ್ನು ೧೯೮೯ರಲ್ಲಿ ಸಿದ್ಧಪಡಿಸಿದರು. ಆಸ್ಟ್ರೇಲಿಯಾದ ನೆಟ್‌ವರ್ಕ್‌ ಆಧರಿಸಿದ IPಗೆ ಮಾತ್ರ ಇದರ ಸೇವೆಯನ್ನು ಒದಗಿಸಲಾಗುತ್ತಿತ್ತು. ೧೯೮೦ರ ದಶಕದ ಕೊನೆಯಲ್ಲಿ ಇಂಟರ್ನೆಟ್‌ ಏಷ್ಯಾಕ್ಕೆ ವ್ಯಾಪಿಸಲು ಆಂರಭಿಸಿತು. ೧೯೮೪ರಲ್ಲಿ ಜಪಾನ್‌ UUCP-ಆಧಾರಿತ ನೆಟ್‌ವರ್ಕ್‌ JUNETನ್ನು ರಚಿಸಿ, ೧೯೮೯ರಲ್ಲಿ ಇದನ್ನು NSFNetಗೆ ಸಂಪರ್ಕಿಸಿತು. ಜಪಾನ್‌ನ ಕೋಬೆಯಲ್ಲಿ ನಡೆದ ಇಂಟರ್ನೆಟ್‌ ಸಮುದಾಯದ ವಾರ್ಷಿಕ ಸಭೆ INET'೯೨ನ ಆತಿಥೇಯವನ್ನು ವಹಿಸಿಕೊಂಡಿತ್ತು. ೧೯೯೦ರಲ್ಲಿ ಸಿಂಗಪೂರ್‌ TECHNETನ್ನು ಅಭಿವೃದ್ಧಿಪಡಿಸಿತು. ೧೯೯೨ರಲ್ಲಿ ಥೈಲೆಂಡ್‌ ಚುಲಲಾಂಗ್‌ಕೋರ್ನ್‌ ವಿಶ್ವವಿದ್ಯಾಲಯ ಮತ್ತು UUNET ನಡುವೆ ಜಾಗತಿಕ ಇಂಟರ್ನೆಟ್‌ ಸಂಪರ್ಕವನ್ನು ಪಡೆಯಿತು.[೧೯]

ಡಿಜಿಟಲ್‌ ವಿಭಜಕ[ಬದಲಾಯಿಸಿ]

ಅಭಿವೃದ್ಧಿ ಹೊಂದಿದ ದೇಶಗಳು ತಮ್ಮ ತಾಂತ್ರಿಕ ಮೂಲಸೌಕರ್ಯಗಳೊಂದಿಗೆ ಇಂಟರ್ನೆಟ್‌ ವ್ಯವಸ್ಥೆಯನ್ನು ಪ್ರವೇಶಿಸಿದಾಗ, ಅಭಿವೃದ್ಧಿಶೀಲ ದೇಶಗಳು ಇಂಟರ್ನೆಟ್‌ ಅನ್ನು ಪ್ರವೇಶಿಸಲಾಗದೆ ಡಿಜಿಟಲ್‌ ವಿಭಜಕದ ಪರಿಣಾಮಕ್ಕೆ ಒಳಗಾಗಿ ಇಂಟರ್ನೆಟ್‌ನಂದ ಪ್ರತ್ಯೇಕವಾದವು. ಭೂಪ್ರದೇಶದ ಅಗತ್ಯಕ್ಕನುಗುಣವಾಗಿ, ಈ ದೇಶಗಳು ಹೆಚ್ಚು ಹೆಚ್ಚಾಗಿ ಇಂಟರ್ನೆಟ್‌ನ ಪ್ರಸಾರ ಸೌಕರ್ಯಗಳ ಲಭಿಸುವಂತೆ ಮಾಡಲು ಇಂಟರ್ನೆಟ್‌ ಸಂಪನ್ಮೂಲ ನಿರ್ವಹಣೆ ಮತ್ತು ಹಂಚಿಕೆ ಪ್ರಕ್ರಿಯೆಯ ಅನುಭವಕ್ಕಾಗಿ ಸಂಸ್ಥೆಗಳನ್ನು ಸ್ಥಾಪಿಸಿದವು.

ಆಫ್ರಿಕಾ[ಬದಲಾಯಿಸಿ]

೧೯೯೦ರ ದಶಕದ ಆರಂಭದಲ್ಲಿ, ಆಫ್ರಿಕಾದ ದೇಶಗಳು ಅಂತಾರಾಷ್ಟ್ರೀಯ ಮತ್ತು ಇಂಟರ್ನೆಟ್‌ವರ್ಕ್‌ ಕಂಪ್ಯೂಟರ್‌ ಸಂಪರ್ಕಗಳಿಗೆ X.೨೫ IPSS ಮತ್ತು ೨೪೦೦ ಬೌಡ್‌ ಮೊಡೆಮ್‌ UUCP ಕೊಂಡಿಗಳನ್ನು ಅವಲಂಬಿಸಿದವು. ೧೯೯೫ರ ಆಗಸ್ಟ್‌ನಲ್ಲಿ ಇನ್ಫೋಮೇಲ್‌ ಉಗಾಂಡ ಲಿ. ಹೆಸರಿನಲ್ಲಿದ್ದ ಕಂಪಾಲದ ಈಗಿನ ಇನ್ಫೋಕಾಮ್‌ (http://www.imul.com Archived 2020-12-01 ವೇಬ್ಯಾಕ್ ಮೆಷಿನ್ ನಲ್ಲಿ.) ಖಾಸಗಿ ಸಂಸ್ಥೆ ಮತ್ತು ಕೊಲೊರೆಡೊದ ಅವೊನ್‌ನ NSN ನೆಟ್‌ವರ್ಕ್‌ ಸರ್ವಿಸಸ್‌ ೧೯೯೭ರಲ್ಲಿ ಮಾರಾಟವಾದವು. ಈಗ ಈ ಸಂಸ್ಥೆಗಳನ್ನು ಕ್ಲಿಯರ್ ಚ್ಯಾನಲ್‌ ಸ್ಯಾಟಲೈಟ್‌ ಎಂದು ಕರೆಯಲಾದ ಈ ಸಂಸ್ಥೆಗಳು ಆಫ್ರಿಕಾದ ಮೊದಲ ಸ್ಥಳೀಯ TCP/IP ಅಧಿಕ ವೇಗದ ಉಪಗ್ರಹ ಇಂಟರ್ನೆಟ್‌ ಸೇವೆಗಳನ್ನು ಆರಂಭಿಸಿದವು. ದತ್ತಾಂಶ ಸಂಪರ್ಕವನ್ನು RSCC ರಷ್ಯಾದ ಉಪಗ್ರಹದ C-ಬ್ಯಾಂಡ್‌ನಲ್ಲಿ ಒದಗಿಸಲಾಗುತ್ತಿತ್ತು. ಅದು ಇನ್ಫೋಮೇಲ್‌ನ ಕಂಪಾಲದಲ್ಲಿನ ಕಛೇರಿಗಳು ಮತ್ತು ನ್ಯೂಜರ್ಸಿಯಲ್ಲಿರುವ NSNನ ನಿಗದಿತ ಭೂಕೇಂದ್ರದಿಂದ ಖಾಸಗಿ ನೆಟ್‌ವರ್ಕ್‌ಗಳನ್ನು ಬಳಸಿ NSNನ MAE-ಪಶ್ಚಿಮ ಕೇಂದ್ರಕ್ಕೆ ನೇರವಾಗಿ ಸಂಪರ್ಕಿಸುತ್ತದೆ. ಇನ್ಫೋಕಾಮ್‌ನ ಮೊದಲ ಉಪಗ್ರಹ ಸಂಪರ್ಕವು ೬೪kbps ವೇಗವನ್ನು ಹೊಂದಿತ್ತು.ಇದರಲ್ಲಿ ಸನ್‌ ಹೋಸ್ಟ್‌ ಕಂಪ್ಯೂಟರ್‌ ಮತ್ತು ಹನ್ನೆರಡು US ರೋಬೊಟಿಕ್ಸ್‌‌ ಡಯಲ್-ಅಪ್‌ ಮೊಡೆಮ್‌ಗಳು ತೊಡಗಿದ್ದವು. ಸಂಪೂರ್ಣ ಅಮೆರಿಕಾ ಖಂಡಕ್ಕೆ ಇಂಟರ್ನೆಟ್‌ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಲೇಲೆಂಡ್‌ ಇನಿಶಿಯೇಟೀವ್‌ Archived 2011-10-27 ವೇಬ್ಯಾಕ್ ಮೆಷಿನ್ ನಲ್ಲಿ. ಯೋಜನೆಗೆ USAID ನಿಧಿ ನೆರವು ನೀಡಿತು.ಇದರ ಅಭಿವೃದ್ದಿ ಕೆಲಸ ೧೯೯೬ರಲ್ಲಿ ಪ್ರಾರಂಭವಾಯಿತು. ಗಿನಿ, ಮೊಜಾಂಬಿಕ್‌, ಮಡಗಾಸ್ಕಾರ್‌ ಮತ್ತು ರುವಾಂಡ೧೯೯೭ರಲ್ಲಿ ತಮ್ಮದೇ ಆದ ಉಪಗ್ರಹ ಭೂಕೇಂದ್ರಗಳನ್ನು ಹೊಂದಿದವು. ಇದನ್ನುಕೋಟೆ ಡಿ'ಇವೋಯಿರ್‌ ಮತ್ತು ಬೆನಿನ್‌ ದೇಶಗಳು ೧೯೯೮ರಲ್ಲಿ ಹಿಂಬಾಲಿಸಿದವು. AfriNIC ಎಂಬ ಇಂಟರ್ನೆಟ್‌ನ ಮೂಲಸೌಕರ್ಯವನ್ನು ಆಫ್ರಿಕಾ ಸ್ಥಾಪಿಸಿತು. AfriNICನ ಕೇಂದ್ರವು ಮಾರಿಷಸ್‌‌ನಲ್ಲಿದೆ. ಇದು ಆಫ್ರಿಕಾ ಭೂಖಂಡದ IP ವಿಳಾಸ ಹಂಚಿಕೆಯ ನಿರ್ವಹಣೆಯನ್ನು ನೋಡಿಕೊಳ್ಳುತ್ತದೆ. ಇತರ ಇಂಟರ್ನೆಟ್‌ ಪ್ರದೇಶಗಳಂತೆ, ಇದೂ ಕೂಡಾ ಕಾರ್ಯಕಾರಿ ಫೋರಮ್‌‌ , ಕಾರ್ಯಕಾರಿ ನೆಟ್‌ವರ್ಕಿಂಗ್‌ ಪರಿಣಿತರ ಇಂಟರ್ನೆಟ್‌ ಸಮುದಾಯ ಹೊಂದಿದೆ.[೨೦] ಅತ್ಯುತ್ತಮ ಕಾರ್ಯನಿರ್ವಹಣಾ ಸಾಮರ್ಥ್ಯ ಹೊಂದಿದ ಪ್ರಸಾರ ಕೇಂದ್ರ ಇದಾಗಿದ್ದು ಪಾಶ್ಚಿಮ ಮತ್ತು ದಕ್ಷಿಣ ಕರಾವಳಿಯು ಕಡಲಾಳದ ಆಪ್ಟಿಕಲ್‌ ಕೇಬಲ್ಲುಗಳನ್ನು ಹೊಂದಿದೆ. ಖಂಡಾಂತರ ಕೇಬಲ್‌ ವ್ಯವಸ್ಥೆಗಳಿಗೆ ಅತಿ-ವೇಗದ (ಅತಿ ವೇಗದಲ್ಲಿ ಸಂಕೇತಗಳನ್ನು ಸಾಗಿಸುವ) ಕೇಬಲ್‌ಗಳಿದ್ದು ಉತ್ತರ ಆಫ್ರಿಕಾ ಮತ್ತು ಆಫ್ರಿಕಾದ ತುದಿಯ ಭಾಗವನ್ನು ಸೇರಿಸುತ್ತವೆ. ಆಫ್ರಿಕಾದ ಅಭಿವೃದ್ಧಿಗೆ ಹೊಸ ಪಾಲುಗಾರಿಕೆ (NEPAD) ಮತ್ತು ಪೂರ್ವ ಆಫ್ರಿಕಾ ಜಲಾಂತರ ವ್ಯವಸ್ಥೆ (Eassy) ನಡುವಿನ ಜಂಟಿ ಕಾರ್ಯಚರಣೆಯು ಕೊನೆಗೊಂಡು, ಎರಡು ಸಂಸ್ಥೆಗಳು ಪ್ರತ್ಯೇಕವಾಗಿ ಕೆಲಸ ಮಾಡುತ್ತಿರುವುದರಿಂದ, ಪೂರ್ವ ಆಫ್ರಿಕಾದಲ್ಲಿನ ಕಡಲಾಳದಲ್ಲಿನ ಕೇಬಲ್‌ ಅಭಿವೃದ್ಧಿಯು ನಿಧಾನಗೊಂಡಿತು.[೨೧]

ಏಷ್ಯಾ ಮತ್ತು ಒಷಿಯಾನಿಯಾ[ಬದಲಾಯಿಸಿ]

ಆಸ್ಟ್ರೇಲಿಯಾದಲ್ಲಿರುವ ಏಷ್ಯಾ ಪೆಸಿಫಿಕ್‌ ನೆಟ್‌ವರ್ಕ್‌ ಮಾಹಿತಿ ಕೇಂದ್ರ(APNIC)ದಮುಖ್ಯ ಕಛೇರಿಯು ಆಸ್ಟ್ರೇಲಿಯಾ ಖಂಡದ IP ವಿಳಾಸ ಹಂಚಿಕೆ ನಿರ್ವಹಣೆಯನ್ನು ನೋಡಿಕೊಳ್ಳುತ್ತದೆ. ಏಷ್ಯಾ-ಪೆಸಿಫಿಕ್‌ ರೀಜನಲ್‌ ಇಂಟರ್‌ನೆಟ್‌ ಕಾನ್ಫೆರೆನ್ಸ್‌ ಕಾರ್ಯಚರಣಾ ತಂತ್ರಜ್ಞಾನಗಳ (APRICOT) ಮೇಲೆ APNIC ಒಂದು ವೇದಿಕೆಯನ್ನು ಪ್ರಾಯೋಜಿಸಿತು.[೨೨] ಚೀನಾ ಗಣರಾಜ್ಯದ ಜನರು ಮೊದಲ TCP/IP ಕಾಲೇಜು ನೆಟ್‌ವರ್ಕ್‌ ಆದ ತ್ಸಿಂಗುಯಾ ವಿಶ್ವವಿದ್ಯಾಲಯದ TUNET ಅನ್ನು ೧೯೯೧ರಲ್ಲಿ ಕಂಡರು. PRCಯು ೧೯೯೫ರಲ್ಲಿ ಬೀಜಿಂಗ್‌ನ ಎಲೆಕ್ಟ್ರೋ-ಸ್ಪೇಕ್ಟ್ರೋಮೀಟರ್‌ (ರೋಹಿತ ಮಾಪನ) ಒಕ್ಕೂಟ ಮತ್ತು ಸ್ಟ್ಯಾನ್‌ಫೋರ್ಡ್‌ ವಿಶ್ವವಿದ್ಯಾಲಯ|ಕಂಡರು. PRCಯು ೧೯೯೫ರಲ್ಲಿ ಬೀಜಿಂಗ್‌ನ ಎಲೆಕ್ಟ್ರೋ-ಸ್ಪೇಕ್ಟ್ರೋಮೀಟರ್‌ (ರೋಹಿತ ಮಾಪನ) ಒಕ್ಕೂಟ ಮತ್ತು ಸ್ಟ್ಯಾನ್‌ಫೋರ್ಡ್‌ ವಿಶ್ವವಿದ್ಯಾಲಯದ ರೇಖೀಯ ವೇಗವರ್ಧಕ ಕೇಂದ್ರದ ನಡುವೆ ಮೊದಲ ಬಾರಿಗೆ ಜಾಗತಿಕ ಇಂಟರ್ನೆಟ್‌ ಸಂಪರ್ಕವನ್ನು ಪಡೆಯಿತು. ಆದಾಗ್ಯೂ, ಚೀನಾ ರಾಷ್ಟ್ರವ್ಯಾಪಿ ದ ರೇಖೀಯ ವೇಗವರ್ಧಕ ಕೇಂದ್ರದ ನಡುವೆ ಮೊದಲ ಬಾರಿಗೆ ಜಾಗತಿಕ ಇಂಟರ್ನೆಟ್‌ ಸಂಪರ್ಕವನ್ನು ಪಡೆಯಿತು. ಆದಾಗ್ಯೂ, ಚೀನಾ ರಾಷ್ಟ್ರವ್ಯಾಪಿ ವಿಷಯ ಶೋಧಕವನ್ನು ಅಳವಡಿಸಿಕೊಂಡು ತನ್ನದೇ ಆದ ಡಿಜಿಟಲ್‌ ವಿಭಜಕವನ್ನು ಅನುಷ್ಠಾನಕ್ಕೆ ತರುತ್ತಿತ್ತು.[೨೩]

ಲ್ಯಾಟಿನ್ ಅಮೆರಿಕ[ಬದಲಾಯಿಸಿ]

ಇತರ ಪ್ರದೇಶಗಳಲ್ಲಿರುವಂತೆ, ಲ್ಯಾಟಿನ್‌ ಅಮೆರಿಕಾ ಮತ್ತು ಕ್ಯಾರೇಬಿಯನ್‌ ದ್ವೀಪಗಳ ಇಂಟರ್ನೆಟ್‌ ವಿಳಾಸಗಳ ನೋಂದಣಾ ಕಛೇರಿಯು(LACNIC) IP ವಿಳಾಸ ವಲಯ ಮತ್ತು ತನ್ನ ವ್ಯಾಪ್ತಿಗೆ ಒಳಪಟ್ಟ ಇತರ ಸಂಪನ್ಮೂಲಗಳ ನಿರ್ವಹಣೆಯನ್ನು ನೋಡಿಕೊಳ್ಳುತ್ತದೆ ಉರುಗ್ವೆಯಲ್ಲಿರುವ LACNICನ ಕೇಂದ್ರ ಕಛೇರಿಯು DNS ರೂಟ್‌, ರಿವರ್ಸ್‌ DNS ಮತ್ತು ಇತರ ಪ್ರಮುಖ ಸೇವೆಗಳನ್ನು ನೋಡಿಕೊಳ್ಳುತ್ತದೆ.

ವಾಣಿಜ್ಯ ಬಳಕೆಗೆ ಮುಕ್ತವಾದ ನೆಟ್‌ವರ್ಕ್‌[ಬದಲಾಯಿಸಿ]

ಇಂಟರ್ನೆಟ್‌ನ ವಾಣಿಜ್ಯ ಬಳಕೆಯಲ್ಲಿನ ಆಸಕ್ತಿಯು ಪ್ರಮುಖ ಚರ್ಚೆಯ ವಿಷಯವಾಯಿತು. ವಾಣಿಜ್ಯ ಬಳಕೆಯನ್ನು ನಿಷೇಧಿಸಲಾಗಿದ್ದರೂ, ವಾಣಿಜ್ಯ ಬಳಕೆಯ ಖಚಿತವಾದ ವ್ಯಾಖ್ಯಾನವು ಅಸ್ಪಷ್ಟವೂ, ವೈಯಕ್ತಿಕ ಸಂಗತಿಯೂ ಆಗಿದೆ. UUCPನೆಟ್‌ ಮತ್ತು X.೨೫ IPSS ಅಂತಹ ಯಾವುದೇ ನಿರ್ಬಂಧಗಳಿರಲಿಲ್ಲ. ಆದರೆ ಕೊನೆಗೆ ಅರ್ಪಾನೆಟ್‌ನ UUCPNet ಬಳಕೆ ಮತ್ತು NSFNet ಸಂಪರ್ಕಗಳಿಗೆ ಅಧಿಕೃತ ನಿರ್ಬಂಧ ಹೇರಲಾಯಿತು. ನಿರ್ವಾಹಕರ ಬೇಜವಾಬ್ದಾರಿಯಿಂದಾಗಿ ಈ ನೆಟ್‌ವರ್ಕ್‌ಗಳನ್ನು ಸಂಪರ್ಕಿಸಲು ಇಂದಿಗೂ ಕೆಲವು UUCP ಕೊಂಡಿಗಳು ಉಳಿದುಕೊಂಡಿವೆ.

ವಿಶ್ವದ ಇಂಟರ್ನೆಟ್‌ ಹೋಸ್ಟ್‌ಗಳು: 1981 - 2009
ವಿಶ್ವದ ಇಂಟರ್ನೆಟ್‌ ಹೋಸ್ಟ್‌ಗಳು: 1981 - 2009

೧೯೮೦ರ ದಶಕದ ಕೊನೆಯಲ್ಲಿ ಮೊದಲ ಇಂಟರ್ನೆಟ್‌ ಸೇವೆ ಪೂರೈಸುವ (ISP) ಕಂಪನಿಗಳು ರಚನೆಗೊಂಡವು. PSINet, UUNET, Netcom, ಮತ್ತು ಪೋರ್ಟಲ್‌ ಸಾಪ್ಟ್‌ವೇರ್‌ನಂತಹ ಕಂಪನಿಗಳು ಪ್ರಾದೇಶಿಕ ಸಂಶೋಧನೆ ನೆಟ್‌ವರ್ಕ್‌ಗಳಿಗೆ ಸೇವೆ ಮತ್ತು ಸಾರ್ವಜನಿಕರಿಗೆ ಬದಲಿ ನೆಟ್‌ವರ್ಕ್‌ ಪ್ರವೇಶ, UUCP-ಆಧರಿತ ಇಮೇಲ್‌ ಮತ್ತು ಯುಸ್‌ನೆಟ್‌ ಸುದ್ದಿಯನ್ನು ಒದಗಿಸುವ ಉದ್ದೇಶದಿಂದ ಹುಟ್ಟಿಕೊಂಡವು. ೧೯೮೯ರಲ್ಲಿ ಯುನೈಟೆಡ್‌ ಸ್ಟೇಟ್ಸ್‌ನಲ್ಲಿ ಮೊದಲ ವಾಣಿಜ್ಯ ಡಯಲ್‌ಅಪ್‌ ISP ದಿ ವರ್ಲ್ಡ್‌ (ಇಂಟರ್ನೆಟ್‌ ಸೇವೆ ಪೂರೈಕೆದಾರರು) ಆರಂಭಿಸಿದರು.[೨೪] ಪಶ್ಟಿಮ ಕರಾವಳಿಯಲ್ಲಿರುವ ಮೊದಲ ಡಯಲ್-ಅಪ್‌ ಬೆಸ್ಟ್‌ ಇಂಟರ್ನೆಟ್‌,[೨೫] ಈಗಿನ ವೆರಿಯೊ ೧೯೯೬ರಲ್ಲಿ ತನ್ನ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಕಾಂಗ್ರೆಸ್‌ ವೈಜ್ಞಾನಿಕ ಮತ್ತು ಆಧುನಿಕ-ತಂತ್ರಜ್ಞಾನ ಕಾಯಿದೆಯ ಮೂಲಕ NSFNetನಲ್ಲಿ ವಾಣಿಜ್ಯ ಚಟುವಟಿಕೆಗಾಗಿ ೧೯೯೨ರಲ್ಲಿ ಅನುಮತಿ ನೀಡಿತು42 U.S.C. § 1862(g) ಮತ್ತು ವಾಣಿಜ್ಯ ನೆಟ್‌ವರ್ಕ್‌ಗಳೊಂದಿಗೆ NSFNet ಪರಸ್ಪರ ಸಂಪರ್ಕ ಹೊಂದುವುದಕ್ಕೆ ಅವಕಾಶ ಕಲ್ಪಿಸಿತು. ಶಿಕ್ಷಣೇತರ ಉದ್ದೇಶಕ್ಕಾಗಿ ತಮ್ಮ ನೆಟ್‌ವರ್ಕ್‌ ಬಳಕೆಯಾಗುತ್ತದೆ ಎಂಬ ಒಂದು ಕಲ್ಪನೆಯೇ ವಿಶ್ವವಿದ್ಯಾಲಯದ ಬಳಕೆದಾರರನ್ನು ಕೆರಳಿಸಿತು ಮತ್ತು ಇದು ಸಂಘರ್ಷಕ್ಕೆ ಈಡಾಯಿತು.[ಸೂಕ್ತ ಉಲ್ಲೇಖನ ಬೇಕು] ಅಂತಿಮವಾಗಿ, ವಾಣಿಜ್ಯ ಇಂಟರ್ನೆಟ್‌ ಸೇವೆ ಪೂರೈಕೆದಾರರು ಶಿಕ್ಷಣ ಮತ್ತು ಸಂಶೋಧನೆಯ ಹೊಸ ರಂಗದಲ್ಲಿ ಭಾಗವಹಿಸಲು ಶಕ್ತವಾಗುವಷ್ಟು ಕಡಿಮೆ ದರದಲ್ಲಿ ಪದವಿ ಪೂರ್ವ ಕಾಲೇಜುಗಳು ಮತ್ತು ಇತರ ಶಾಲೆಗಳಿಗೆ ಇಂಟರ್ನೆಟ್‌ ಸೇವೆಯನ್ನು ಒದಗಿಸಿದರು.[ಸೂಕ್ತ ಉಲ್ಲೇಖನ ಬೇಕು] ೧೯೯೦ರ ಹೊತ್ತಿಗೆ, ಪ್ರತಿಸ್ಪರ್ಧಿಯಲ್ಲಿರುವ ಹೊಸ ನೆಟ್‌ವರ್ಕಿಂಗ್‌ ತಂತ್ರಜ್ಞಾನಗಳು ಮತ್ತು ಯೋಜನೆಗಳು ARPANETನ್ನು ಮೀರಿಸಿದವು. ಈಗ ANSNET ಅಡ್ವಾನ್ಸ್ಡ್ ನೆಟ್‌ವರ್ಕ್ಸ್ ಅಂಡ್‌ ಸರ್ವೀಸಸ್‌ ಎಂದು ಮರು ಹೆಸರಿಸಲಾಗಿಗಿರುವ NSFNet ೧೯೯೪ರಲ್ಲಿ ಲಾಭ-ರಹಿತ ಸಂಸ್ಥೆಗಳಿಗೆ ಪ್ರವೇಶ ನೀಡುವುದರ ಮೂಲಕ, ಇಂಟರ್ನೆಟ್‌ನ ಮೂಲಾಧಾರದಂತಿದ್ದ ತನ್ನ ಸ್ಥಾನವನ್ನು ಕಳೆದುಕೊಂಡಿತು. ಸರಕಾರಿ ಸಂಸ್ಥೆಗಳು ಮತ್ತು ವಾಣಿಜ್ಯ ಉದ್ದೇಶದ ಸೇವಾ ಪೂರೈಕೆದಾರರು ತಮ್ಮದೇ ಆದ ಮೂಲಾಧಾರಗಳು ಮತ್ತು ಅಂತರ್ಸಂಪರ್ಕಗಳನ್ನು ರಚಿಸಿಕೊಂಡರು. ಪ್ರಾದೇಶಿಕ ನೆಟ್‌ವರ್ಕ್‌ ಪ್ರವೇಶ ಕೇಂದ್ರಗಳು (NAPs) ಹಲವು ನೆಟ್‌ವರ್ಕ್‌ಗಳ ನಡುವೆ ಪ್ರಾಥಮಿಕ ಅಂತರ್ಸಂಪರ್ಕವನ್ನು ಕಲ್ಪಿಸುತ್ತಿದ್ದವು. ೧೯೯೫ರ ಮೇನಲ್ಲಿ ಇಂಟರ್ನೆಟ್‌ ಮೂಲಾಧಾರಕ್ಕೆ ನ್ಯಾಷನಲ್‌ ಸೈನ್ಸ್‌ ಫೌಂಡೇಷನ್‌ ತನ್ನ ಪ್ರಾಯೋಜಕತ್ವವನ್ನು ನಿಲ್ಲಿಸಿದಾಗ, ಇಂಟರ್ನೆಟ್‌ ಮೇಲಿನ ವಾಣಿಜ್ಯ ನಿರ್ಬಂಧಗಳಿಗೆ ತೆರೆ ಬಿದ್ದಿತು.

ಇಂಟರ್ನೆಟ್‌ ಇಂಜಿನಿಯರಿಂಗ್‌ ಕಾರ್ಯಪಡೆ[ಬದಲಾಯಿಸಿ]

ಇಂಟರ್ನೆಟ್‌ ಪ್ರಕ್ರಿಯೆಗಳನ್ನು ಸುಲಭಗೊಳಿಸುವ ವಿವಿಧ ಪ್ರೋಟಕಾಲ್‌ಗಳನ್ನು ಸೂಚಿಸುವ ನೆನಪಿನ ಟಿಪ್ಪಣಿಯಂತೆ ಸಲಹೆ ಸೂಚನೆಗಾಗಿ ವಿನಂತಿಯನ್ನು (RFCs)ಪ್ರಾರಂಭಿಸಲಾಯಿತು ಮತ್ತು ಇವುಗಳನ್ನು ದಿವಂಗತ Dr. ಪೋಸ್ಟಲ್‌ ತಮ್ಮ IANA ಕಾರ್ಯಗಳ ಭಾಗದಂತೆ ಸಂಪಾದಿಸಿದ್ದರು.[೨೬] U.S. ಸರಕಾರದ ಆರ್ಥಿಕ ನೆರವನ್ನು ಪಡೆಯುತ್ತಿರುವ ವಿಜ್ಞಾನಿಗಳ ತ್ರೈಮಾಸಿಕ ಸಭೆಯನ್ನು ೧೯೮೫ರ ಜನವರಿಯಲ್ಲಿ IETF ಪ್ರಾರಂಭಿಸಿತು. ಅದೇ ವರ್ಷದ ಅಕ್ಟೋಬರ್‌ನಲ್ಲಿ ನಡೆದ ನಾಲ್ಕನೇ IETF ಸಭೆಯಲ್ಲಿ ಸರಕಾರೇತರ ಮಾರಾಟಗಾರರ ಪ್ರತಿನಿಧಿಗಳನ್ನು ಆಹ್ವಾನಿಸಲು ಪ್ರಾರಂಭಿಸಲಾಯಿತು.[ಸೂಕ್ತ ಉಲ್ಲೇಖನ ಬೇಕು] ಇಂಟರ್ನೆಟ್‌ ವೃತ್ತಿಪರ ಸದಸ್ಯರನ್ನೊಳಗೊಂಡ ಇಂಟರ್ನೆಟ್‌ ಸೊಸೈಟಿ ೧೯೯೨ರಲ್ಲಿ ಸ್ಥಾಪನೆಯಾಯಿತು ಮತ್ತು ಸ್ವತಂತ್ರ ಅಂತಾರಾಷ್ಟ್ರೀಯ ಗುಣಮಟ್ಟ ಮಂಡಳಿಗೆ IETF ತನ್ನ ಕಾರ್ಯಾಚರಣೆಯನ್ನು ವರ್ಗಾಯಿಸಿತು.[ಸೂಕ್ತ ಉಲ್ಲೇಖನ ಬೇಕು]

NIC, InterNIC, IANA ಮತ್ತು ICANN[ಬದಲಾಯಿಸಿ]

ಕ್ಯಾಲಿಫೋರ್ನಿಯಾದ ಮೆನ್ಲೋ ಪಾರ್ಕ್‌ನಲ್ಲಿ ಸ್ಟ್ಯಾನ್‌ಫೋರ್ಡ್‌ ಸಂಶೋಧನಾ ಸಂಸ್ಥೆಯಲ್ಲಿನ (=SRI) ನೆಟ್‌ವರ್ಕ್‌ ಇನ್‌ಫರ್‌ಮೇಷನ್‌ ಸೆಂಟರ್‌ (=NIC) ನೆಟ್‌ವರ್ಕ್‌ನ ಕಾರ್ಯಾಚರಣೆಯನ್ನು ಸಂಯೋಜಿಸುವ ಮೊದಲ ಕೇಂದ್ರ ಪ್ರಾಧಿಕಾರವಾಗಿದೆ. ೧೯೭೨ರಲ್ಲಿ ಈ ವಿಷಯಗಳ ನಿರ್ವಹಣೆಯನ್ನು ಹೊಸದಾಗಿ ರಚನೆಗೊಂಡ ಇಂಟರ್ನೆಟ್‌ ಅಸೈನ್ಡ್‌ ನಂಬರ್ಸ್‌ ಅಥಾರಿಟಿಗೆ (=IANA) ವಹಿಸಲಾಯಿತು. RFC ಸಂಪಾದಕತ್ವದಲ್ಲಿ ನಿರ್ವಹಿಸಿದ ಪಾತ್ರದ ಜೊತೆಗೆ ಜಾನ್‌ ಪೋಸ್ಟಲ್‌ ೧೯೯೮ರಲ್ಲಿ ಕೊನೆಯುಸಿರೆಳೆಯುವವರೆಗೆ IANAಯ ನಿರ್ವಾಹಕರರಾಗಿ ದುಡಿದರು. ಅರ್ಪಾನೆಟ್‌ ಅಭಿವೃದ್ಧಿಹೊಂದುವ ಮೊದಲು, ಹೋಸ್ಟ್‌ಗಳನ್ನು ಅದರ ಹೆಸರುಗಳಿಂದ ಉಲ್ಲೇಖಿಸಲಾಗುತ್ತಿತ್ತು. ನೆಟ್‌ವರ್ಕ್‌ನಲ್ಲಿ ಪ್ರತಿ ಹೋಸ್ಟ್‌ಗೆ SRI ಇಂಟರ್‌ನ್ಯಾಷನಲ್‌ನಿಂದ HOSTS.TXT ಫೈಲ್‌ ಅನ್ನು (ಕಡತ) ವಿತರಿಸಲಾಗುತ್ತಿತ್ತು. ನೆಟ್‌ವರ್ಕ್‌ ಬೆಳೆದಂತೆ, ಈ ಪ್ರಕ್ರಿಯೆಯು ತುಂಬಾ ಸಿಕ್ಕಾಗತೊಡಗಿತು. ಇದಕ್ಕೆ ಪೌಲ್‌ ಮೊಕಾಪೆಟ್ರಿಸ್‌ ರಚಿಸಿದ ಡೊಮೈನ್‌ ನೇಮ್‌ ಸಿಸ್ಟಮ್‌ (=ಕ್ಷೇತ್ರವಾರು ಹೆಸರಿನ ವ್ಯವಸ್ಥೆ)ನಿಂದಾಗಿ ತಾಂತ್ರಿಕ ಪರಿಹಾರ ದೊರೆಯಿತು. SRIನಲ್ಲಿನ ರಕ್ಷಣಾ ದತ್ತಾಂಶ ನೆಟ್‌ವರ್ಕ್‌—ನೆಟ್‌ವರ್ಕ್‌ ಮಾಹಿತಿ ಕೇಂದ್ರವು ಮೇಲ್ಮಟ್ಟದ ಡೊಮೈನ್‌ಗಳಾದ (TLDs) .mil, .gov, .edu, .org, .net, .com ಮತ್ತು .us ಯುನೈಟೆಡ್‌ ಸ್ಟೇಟ್ಸ್‌ ರಕ್ಷಣಾ ಇಲಾಖೆ ಒಪ್ಪಂದದಡಿ ರೂಟ್‌ ನೇಮ್‌ಸರ್ವರ್‌ ನಿರ್ವಹಣೆ ಮತ್ತು ಇಂಟರ್ನೆಟ್‌ ನಂಬರ್ ಅಸೈನ್ಮೆಂಟ್‌ ಸೇರಿದಂತೆ ಎಲ್ಲಾ ನೋಂದಣಿ ಸೇವೆಗಳನ್ನು ಒದಗಿಸುತ್ತದೆ.[೨೭] ೧೯೯೧ರಲ್ಲಿ ಡಿಫೆನ್ಸ್‌ ಇನ್‌ಫಾರ್ಮೇಷನ್‌ ಸಿಸ್ಟಮ್ಸ್‌ ಏಜೆನ್ಸಿಯು (DISA) DDN-NICನ (ಈವರೆಗೆ SRI ನೋಡಿಕೊಳ್ಳುತ್ತಿದ್ದ) ನಿರ್ವಹಣೆ ಮತ್ತು ಸಂರಕ್ಷಣೆಯ ಜವಾಬ್ದಾರಿಯನ್ನು ಗವರ್ನಮೆಂಟ್‌ ಸಿಸ್ಟಮ್ಸ್‌, Inc.ಗೆ ನೀಡಿತು. ಗವರ್ನಮೆಂಟ್‌ ಸಿಸ್ಟಮ್ಸ್‌ ಈ ಕೆಲಸವನ್ನು ನಿರ್ವಹಿಸಲು ಚಿಕ್ಕ ಖಾಸಗಿ ಕಂಪನಿಯಾದ ನೆಟ್‌ವರ್ಕ್‌ ಸೊಲ್ಯೂಷನ್‌, Incನೊಂದಿಗೆ ಉಪಒಪ್ಪಂದ ಮಾಡಿಕೊಂಡಿತು.[೨೮][೨೯] ಇಲ್ಲಿಯ ತನಕ ಇಂಟರ್ನೆಟ್‌ನ ಅಭಿವೃದ್ಧಿಯು ಸೈನಿಕೇತರ ಮೂಲದಿಂದ ಬಂದಿರುವುದಾಗಿತ್ತು. ಮತ್ತು ರಕ್ಷಣಾ ಇಲಾಖೆಯು ಇನ್ನೂ ಮುಂದೆ .mil TLD ಹೊರಗೆ ನೋಂದಣಿ ಸೇವೆಗಳಿಗೆ ಆರ್ಥಿಕ ನೆರವನ್ನು ನೀಡದಿರಲು ನಿರ್ಧರಿಸಿತು. U.S.ನ ನ್ಯಾಷನಲ್‌ ಸೈನ್ಸ್‌ ಫೌಂಡೇಷನ್‌ ವಿಳಾಸಗಳ ವಿತರಣೆ ಮತ್ತು ವಿಳಾಸ ಡಾಟಾಬೇಸ್‌ನ (ದತ್ತಾಂಶ ಸಂಗ್ರಹ) ನಿರ್ವಹಣೆಯನ್ನು ನೋಡಿಕೊಳ್ಳಲು InterNICನ್ನು ರಚಿಸಿತು. ಇದರ ಜವಾಬ್ದಾರಿಯನ್ನು ವಹಿಸಲು ೧೯೯೨ರಲ್ಲಿ ಸ್ಪರ್ಧಾತ್ಮಕ ಹರಾಜು ಪ್ರಕ್ರಿಯೆ ನಡೆಸಿ ೧೯೯೩ರಲ್ಲಿ ಪ್ರತಿಷ್ಠಾನವು ಮೂರು ಸಂಸ್ಥೆಗಳಿಗೆ ಈ ಗುತ್ತಿಗೆಯನ್ನು ನೀಡಿತು. ನೆಟ್‌ವರ್ಕ್‌ ಸೊಲ್ಯುಷನ್ಸ್‌ ನೋಂದಣಿ ಸೇವೆಗಳನ್ನೂ, AT&T ಡೈರೆಕ್ಟರಿ (ನಿರ್ದೇಶಿಕೆ) ಮತ್ತು ಡಾಟಾಬೇಸ್‌ ಸೇವೆ ಮತ್ತು ಜನರಲ್ ಆಟೋಮಿಕ್ಸ್‌ ಮಾಹಿತಿ ಸೇವೆಗಳನ್ನೂ ನೀಡಬಹುದಾಗಿದೆ.[೩೦] ೧೯೯೮ರಲ್ಲಿ IANA ಮತ್ತು InterNICನ್ನು ICANN ನಿಯಂತ್ರಣದಲ್ಲಿ ಪುನಸ್ಸಂಘಟಿಸಲಾಯಿತು. US ವಾಣಿಜ್ಯ ಇಲಾಖೆಯು ಭಾರಿ ಸಂಖ್ಯೆಯ ಇಂಟರ್ನೆಟ್‌ ಸಂಬಂಧಿಸಿದ ಕಾರ್ಯಗಳನ್ನು ನಿರ್ವಹಿಸಲು ಕ್ಯಾಲಿಫೋರ್ನಿಯಾದ ಲಾಭೋದ್ದೇಶವಿಲ್ಲದ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿತು. ಹೆಸರು ನಿರ್ವಹಣೆಯ ಪ್ರಮುಖ ಗುತ್ತಿಗೆಯನ್ನು ಟೆಂಡರ್ ಸಲ್ಲಿಕೆಯ ಆಧಾರದ ಮೇಲೆ ನೀಡಲು ನಿರ್ಧರಿಸಿ, DNS ಸಿಸ್ಟಮ್‌ ಕಾರ್ಯನಿರ್ವಹಣೆಯ ಜವಬ್ದಾರಿಯನ್ನು ಖಾಸಗೀಕರಣಗೊಳಿಸಿ, ಸ್ಪರ್ಧೆಗೆ ಮುಕ್ತಗೊಳಿಸಲಾಯಿತು.

ಜಾಗತೀಕರಣ ಮತ್ತು ೨೧ನೇ ಶತಮಾನ[ಬದಲಾಯಿಸಿ]

೧೯೯೦ರಿಂದಲೂ ಇಂಟರ್ನೆಟ್‌ನ ನಿಯಂತ್ರಣ ಮತ್ತು ಸಂಸ್ಥೆಯು ವಾಣಿಜ್ಯ ಉದ್ದೇಶದಿಂದ ಜಾಗತಿಕವಾಗಿ ಮಹತ್ವವನ್ನು ಪಡೆದಿತ್ತು. ಹಳೆಯ ಅರ್ಪಾನೆಟ್‌ ನಂತರದ ಆವೃತ್ತಿಗಳು ಮತ್ತು ನೆಟ್‌ವರ್ಕ್‌ನ ಸಾಮಾನ್ಯ ತಾಂತ್ರಿಕ ಅಂಶಗಳಲ್ಲಿ ಪ್ರಸ್ತುತ ನಿರ್ವಾಹಕರು ಇಂಟರ್ನೆಟ್‌ನ ಕೆಲವು ತಾಂತ್ರಿಕ ಅಂಶಗಳ ನಿಯಂತ್ರಣವನ್ನು ಹೊಂದಿರುವ ಸಂಸ್ಥೆಗಳಾಗಿವೆ. ನೆಟ್‌ವರ್ಕ್‌ನ ನಿರ್ವಾಹಕರಂತೆ ಅಧಿಕೃತವಾಗಿ ಗುರುತಿಸಿಕೊಳ್ಳುವಾಗ‌, ಅವರು ಪಾತ್ರ ಮತ್ತು ನಿರ್ಣಯಗಳನ್ನು ಸೀಮಿತಗೊಳಿಸುವ ಅಂತಾರಾಷ್ಟ್ರೀಯ ಪರಿಶೀಲನೆ ಮತ್ತು ಆಕ್ಷೇಪಗಳಿಗೆ ಅವುಗಳು ಒಳಪಡುತ್ತದೆ. ವರ್ಷ ೨೦೦೦[೩೧] ದಲ್ಲಿ ಈ ಆಕ್ಷೇಪಗಳಿಂದಾಗಿ ದಕ್ಷಿಣ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದೊಂದಿಗಿನ ಸಂಬಂಧವನ್ನು ICANN ಮೊದಲು ಕಡಿದುಕೊಂಡಿತು ಮತ್ತು ೨೦೦೯ರ ಸಪ್ಟೆಂಬರ್‌ನಲ್ಲಿ ತನ್ನ ದೀರ್ಘಾವಧಿಯ ಒಪ್ಪಂದಗಳನ್ನು ಕೊನೆಗೊಳ್ಳುವುದನ್ನು ತಪ್ಪಿಸಲು US ಸರಕಾರದಿಂದ ಸ್ವಾಯತ್ತತೆ ಪಡೆಯಿತು. ಆದರೂ ವಾಣಿಜ್ಯ ಇಲಾಖೆಯೊಂದಿಗೆ ಮಾಡಿಕೊಂಡ ಕರಾರಿನ ಕಟ್ಟುಪಾಡುಗಳು ೨೦೧೧ರವರೆಗೆ ಮುಂದುವರಿಯುವುದು.[೩೨][೩೩][೩೪] ICANN ಸಂಸ್ಥೆಯ ಪರಿಣಾಮವಾಗಿ ಇಂಟರ್ನೆಟ್‌ ಇತಿಹಾಸವು ಅನೇಕ ರೀತಿಯಲ್ಲಿ ಏರಿಳಿಯುತ್ತದೆ. ಇಂಟರ್ನೆಟ್‌ಗೆ ಸಂಬಂಧಿಸಿದಂತೆ ಮಟ್ಟವನ್ನು ನಿರ್ದಿಷ್ಟಪಡಿಸುವ ಪಾತ್ರದಲ್ಲಿ, IETF ತಾತ್ಕಾಲಿಕ ಪ್ರಮಾಣಿತ ಸಮೂಹವಾಗಿ ಮುಂದುವರಿಯಿತು. ಅರ್ಪಾನೆಟ್‌ ಯೋಜನೆಯಡಿ RFC ೧ರಿಂದ ಅನುಕ್ರಮವಾಗಿ ಸಂಖ್ಯೆಯನ್ನು ನಿರ್ದಿಷ್ಟಪಡಿಸಿದ ಸಲಹೆ ಸೂಚನೆ ಸಲಹೆಗಾಗಿ ವಿನಂತಿಗಳನ್ನು ನೀಡುವ ಕ್ರಮವನ್ನು ಅವರು ಮುಂದುವರಿಸಿದರು. ಉದಾಹರಣೆಗೆ, IETF ರಚನೆಯಾಗುವುದಕ್ಕೂ ಮುಂಚೆ ೧೯೮೦ರ ದಶಕದಲ್ಲಿ US ಸರಕಾರ ಆರ್ಥಿಕ ಸಹಕಾರ ಪಡೆಯುತ್ತಿದ್ದ ವಿಜ್ಞಾನಿಗಳ ಸಮೂಹವಾದ GADS ಕಾರ್ಯಪಡೆಯು ಕಾರ್ಯನಿರ್ವಹಿಸುತ್ತಿತ್ತು. ಅಂತಾರಾಷ್ಟ್ರೀಕೃತ ಡೊಮೈನ್‌ ಹೆಸರುಗಳಂತಹ ಅಭಿವೃದ್ಧಿ ಕೆಲಸಗಳನ್ನು ಮಾಡಿದ i18nನಂತಹ ಸಮೂಹದ ಇತ್ತೀಚಿನ ಹಲವು ಕೆಲಸಗಳು ಜಾಗತಿಕ ಅವಶ್ಯಕತೆಯನ್ನು ಒಳಗೊಂಡಿದೆ. ಇಂಟರ್ನೆಟ್‌ ಸಮುದಾಯವು ಸೀಮಿತ ಮೇಲ್ವಿಚಾರಣೆಯನ್ನು ಒದಗಿಸಲು IETFಗೆ ಆರ್ಥಿಕ ನೆರವನ್ನು ನೀಡಿತು.

ಬಳಕೆ ಮತ್ತು ಸಂಸ್ಕೃತಿ[ಬದಲಾಯಿಸಿ]

ಇಮೇಲ್‌ ಮತ್ತು ಯುಸ್‌ನೆಟ್‌[ಬದಲಾಯಿಸಿ]

ಇಮೇಲ್‌ಅನ್ವಯವನ್ನು ಇಂಟರ್ನೆಟ್‌ನ ಹಂತಕ ಎಂದು ‌ ಆಗಾಗ ಕರೆಯಲಾಗುತ್ತೆ. ಇಂಟರ್ನೆಟ್‌ ಅಭಿವೃದ್ದಿಗೂ ಮೊದಲೇ ಇದ್ದದ್ದು ಇದು.ಆದರೆ ಇಂಟರ್ನೆಟ್‌ ಎಂಬುದು ಅದರ ಅಭಿವೃದ್ಧಿಯ ಸಾಧನವಾಯಿತು. ಇಮೇಲ್‌ನ ಬಳಕೆ ಆರಂಭವಾದದ್ದು ೧೯೬೫ರಲ್ಲಿ. ಇದನ್ನು ಮೇನ್‌ಫ್ರೇಮ್‌ ಕಂಪ್ಯೂಟರ್‌ನ ಬಹುಬಳಕೆದಾರರಿಗೆ ಸಂವಹನಕ್ಕಾಗಿ ಬಳಸಲಾಗುತ್ತಿತ್ತು. ಇತಿಹಾಸ ಅಸ್ಪಷ್ಟವಾಗದ್ದರೂ SDCಯ Q32 ಮತ್ತು MITಯ CTSS ಸಿಸ್ಟಮ್‌ಗಳ ನಡುವೆ ನಡೆದ ಇಮೇಲ್‌ನ ಸಂವಹನವೇ ಮೊದಲಿನದು.[೩೫] ಇಮೇಲ್‌ನ ಅಭಿವೃದ್ಧಿಗೆ ಅರ್ಪಾನೆಟ್‌ ಕಂಪ್ಯೂಟರ್‌ ನೆಟ್‌ವರ್ಕ್‌ ಕೊಡುಗೆ ಅಪಾರ. ಅರ್ಪಾನೆಟ್‌ ರಚನೆಗೊಂಡ ಸ್ವಲ್ಪ ಸಮಯದಲ್ಲೇ, ಅದರ ಮೇಲೆ ಇಂಟರ್‌-ಸಿಸ್ಟಮ್‌ ಇಮೇಲ್‌ ವರ್ಗಾವಣೆ ಪ್ರಯೋಗವನ್ನು ಮಾಡಲಾಗಿತ್ತು ಎಂಬುದಾಗಿ ವರದಿಯೊಂದು ಹೇಳುತ್ತದೆ. ೧೯೭೧ರಲ್ಲಿ ರೇ ತೋಮ್ಲಿನ್ಸನ್‌ ಪ್ರಮಾಣಿತ ಇಂಟರ್ನೆಟ್‌ ಇಮೇಲ್‌ ವಿಳಾಸದ ಪ್ರಕಾರವನ್ನು ರಚಿಸಿದರು. ಅದರಲ್ಲಿ ಹೋಸ್ಟ್‌ ಹೆಸರಿಂದ ಬಳಕೆದಾರರ ಹೆಸರನ್ನು ಪ್ರತ್ಯೇಕಗೊಳಿಸಲು @ ಚಿಹ್ನೆಯಮಾದರಿಯನ್ನು ಬಳಸಲಾಗಿತ್ತು.[೩೬] UUCP ಮತ್ತು IBMನ VNET ಇಮೇಲ್‌ ಸಿಸ್ಟಮ್‌ನಂಥ ಬದಲಿ ರವಾನೆ ವ್ಯವಸ್ಥೆಗಳ ಮೂಲಕ ಬಹುಬಳಕೆದಾರ ಕಂಪ್ಯೂಟರ್‌ಗಳ ಸಮೂಹಗಳಲ್ಲಿ ಇಮೇಲ್‌ ತಲುಪಿಸಲು ಹಲವು ಪ್ರೋಟಕಾಲ್‌ಗಳನ್ನು ಅಭಿವೃದ್ಧಿಪಡಿಸಲಾಯಿತು. ಅರ್ಪಾನೆಟ್‌, BITNET ಮತ್ತು NSFNetನಂತಹ ಹಲವು ನೆಟ್‌ವರ್ಕ್‌ಗಳ ನಡುವೆ ಇಮೇಲ್‌ ಅನ್ನು ವರ್ಗಾಯಿಸಬಹುದು. ಹಾಗೆಯೇ UUCP ಮೂಲಕ ಇತರ ಜಾಲಗಳಿಗೆ ನೇರವಾಗಿ ಸಂಪರ್ಕ ಹೊಂದಿದ ಹೋಸ್ಟ್‌ಗಳಿಗೆ ಸಹ ಇಮೇಲ್‌ ಅನ್ನು ಕಳುಹಿಸಬಹುದು. SMTP ಪ್ರೋಟಕಾಲ್‌ನ ಇತಿಹಾಸವನ್ನು ನೋಡಿ. ಅದಲ್ಲದೇ, ಇತರರು ಓದಬಹುದಾದ ಪಠ್ಯ ಫೈಲ್‌ಗಳನ್ನು ಪ್ರಕಟಿಸಲು UUCP ಅವಕಾಶ ನೀಡುತ್ತದೆ. ೧೯೭೯ರಲ್ಲಿ ಸ್ಟೀವ್‌ ಡೇನಿಯಲ್‌ ಮತ್ತು ಟಾಮ್‌ ಟ್ರಸ್ಕೋಟ್‌ ಅಭಿವೃದ್ಧಿ ಪಡಿಸಿದ ಸಾಪ್ಟ್‌ವೇರ್‌ನ್ನು ಸುದ್ದಿ ಮತ್ತು ಸಂದೇಶದಂತಹ ಸುದ್ದಿಪತ್ರಗಳನ್ನು ವಿತರಿಸಿಲು ಬಳಸಲಾಯಿತು. ಇವು ಬಹಳ ಬೇಗನೆ ಹಲವು ವಿಷಯಗಳ ಮೇಲೆ ಸುದ್ದಿ ಸಮೂಹಗಳೆನ್ನಲಾದ ಚರ್ಚಾ ಸಮೂಹಗಳಾಗಿ ಅಭಿವೃದ್ಧಿ ಹೊಂದಿದವು. ARPANET ಮತ್ತು NSFNetನಲ್ಲಿ ಅಂತಹ ಚರ್ಚಾ ಸಮೂಹಗಳನ್ನು ಮೇಲಿಂಗ್‌ ಪಟ್ಟಿಗಳ ಮೂಲಕ ರಚಿಸಲಾಗುತ್ತಿತ್ತು. ಈ ಸಮೂಹಗಳಲ್ಲಿ ತಾಂತ್ರಿಕ ಸಮಸ್ಯೆಗಳು ಮತ್ತು ಸಾಂಸ್ಕೃತಿಕ ವಿಷಯಗಳನ್ನು sflovers‌ Archived 2005-08-28 ವೇಬ್ಯಾಕ್ ಮೆಷಿನ್ ನಲ್ಲಿ. ಮೇಲಿಂಗ್ ಪಟ್ಟಿಯಲ್ಲಿ ವೈಜ್ಞಾನಿಕ ಕಲ್ಪಿತ ಕಥೆ ಕುರಿತು ಚರ್ಚೆಯಂಥದ್ದು) ಚರ್ಚಿಸಲಾಗುತ್ತಿತ್ತು.

ಗೋಫರ್‌ನಿಂದ WWWವರೆಗೆ[ಬದಲಾಯಿಸಿ]

೧೯೮೦ನೇ ದಶಕ ಮತ್ತು ೧೯೯೦ನೇ ದಶಕದ ಆರಂಭದಲ್ಲಿ ಇಂಟರ್ನೆಟ್‌ನಲ್ಲಾದ ಬೆಳವಣಿಗೆಯಿಂದಾಗಿ, ಫೈಲ್‌ಗಳು ಮತ್ತು ಮಾಹಿತಿಯನ್ನು ಹುಡುಕಲು ಮತ್ತು ಕ್ರಮಬದ್ಧ ಸಂಯೋಜನೆಯ ಅಗತ್ಯವನ್ನು ಹಲವರು ಮನಗಂಡರು. ಗೋಫರ್‌, WAIS, ಮತ್ತು FTP ದಾಖಲೆಯ ಪಟ್ಟಿಯಂತಹ ಯೋಜನೆಗಳು ವಿತರಿಸಿದ ದತ್ತಾಂಶವನ್ನು ಕ್ರಮಬದ್ಧವಾಗಿ ಸಂಯೋಜಿಸುವ ಮಾರ್ಗವನ್ನು ಕಂಡುಕೊಳ್ಳಲು ಪ್ರಯತ್ನಿಸಿದವು. ದುರಾದೃಷ್ಟವಶಾತ್‌, ಈ ಯೋಜನೆಗಳು ಅಸ್ತಿತ್ವದಲ್ಲಿರುವ ಎಲ್ಲಾ ದತ್ತಾಂಶ ಪ್ರಕಾರಗಳಿಗೆ ಸರಿಹೊಂದಿಸಲು ಮತ್ತು ಯಾವುದೇ ಅಡಚಣೆಯಿಲ್ಲದೆ ಮುಂದುವರಿಯಲು ವಿಫಲವಾದವು. [ಸೂಕ್ತ ಉಲ್ಲೇಖನ ಬೇಕು] ಹೈಪರ್‌ಟೆಕ್ಸ್ಟ್‌ ಆ ಸಮಯದ ಹೆಚ್ಚು ಭರವಸೆ ಹೊಂದಿದ ಬಳಕೆದಾರ ಅಂತರ್ವರ್ತನ (interface) ಮಾದರಿಯಾಗಿತ್ತು. ವನ್ನೆವರ್‌ ಬುಷ್‌ರ "ಮೆಮೆಕ್ಸ್‌"ನಿಂದ[೩೭] ಪ್ರೇರೇಪಿತವಾದ ಈ ತಂತ್ರಜ್ಞಾನವನ್ನು ಪ್ರಾಜೆಕ್ಟ್‌ ಕ್ಸಾನಡುನಲ್ಲಿ ಟೆಡ್‌ ನೆಲ್ಸನ್‌ರ ಸಂಶೋಧನೆ ಮತ್ತು NLSನಲ್ಲಿ ಡೌಗ್ಲಾಸ್‌ ಎಂಜೆಲ್ಬರ್ಟ್‌ರ ಸಂಶೋಧನೆಯ ಅಂಶಗಳ ಮೂಲಕ ಅಭಿವೃದ್ದಿಪಡಿಸಲಾಯಿತು.[೩೮] Apple ಕಂಪ್ಯೂಟರ್‌ನ ಹೈಪರ್‌ಕಾರ್ಡ್‌ನಂತಹ ಹಲವು ಚಿಕ್ಕ ಸ್ವಯಂ-ಅಂತರ್ಗತ ಹೈಪರ್‌ಟೆಕ್ಸ್ಟ್‌ ವ್ಯವಸ್ಥೆಗಳನ್ನು ಈ ಮೊದಲೇ ರಚಿಸಲಾಗಿತ್ತು. ಗೋಫರ್‌ ಇಂಟರ್ನೆಟ್‌ನಲ್ಲಿ ಮೊದಲ ಸಾಮಾನ್ಯ ಬಳಕೆಯ ಹೈಪರ್‌ಟೆಕ್ಸ್ಟ್‌ ಇಂಟರ್ಫೇಸ್‌ ಆಗಿದೆ. ಗೋಫರ್‌ ಮೆನು ಅಂಶಗಳು ಹೈಪರ್‌ಟೆಕ್ಸ್ಟ್‌ನ ಉದಾಹರಣೆಯಾಗಿರುವಾಗ, ಹೈಪರ್‌ಟೆಕ್ಸ್ಟ್‌ ಅರ್ಥದಲ್ಲಿ ಅವುಗಳನ್ನು ತಿಳಿಯಲಾಗುತ್ತಿರಲಿಲ್ಲ.

CERNನಲ್ಲಿ ಬರ್ನರ್ಸ್‌-ಲಿ ಈ NeXT ಕಂಪ್ಯೂಟರ್‌ನ್ನು ಬಳಸಿದ್ದರು ಮತ್ತು ಇದು ವಿಶ್ವದ ಮೊದಲ ವೆಬ್‌ ಸರ್ವರ್ ಆಗಿತ್ತು.

೧೯೮೯ರಲ್ಲಿ ಟಿಮ್‌ ಬರ್ನರ್ಸ್‌-ಲೀ CERNನಲ್ಲಿ ಕೆಲಸ ಮಾಡುತ್ತಿರುವಾಗ ನೆಟ್‌ವರ್ಕ್‌ ಆಧಾರಿತ ಹೈಪರ್‌ಟೆಕ್ಸ್ಟ್‌ ಕಲ್ಪನೆಯ ಅಳವಡಿಕೆಯನ್ನು ಅನ್ವೇಷಿಸಿದರು. ತಾವು ಕಂಡುಹಿಡಿದ ತಂತ್ರಜ್ಞಾನವು ವ್ಯಾಪಕವಾಗಿ ಹರಡುವುದೆಂಬ ಭರವಸೆಯೊಂದಿಗೆ ಸಾರ್ವಜನಿಕ ಬಳಕೆಗೆ ತಮ್ಮ ಅನ್ವೇಷಣೆಯನ್ನು ಬಿಡುಗಡೆಮಾಡಿದರು. ವರ್ಲ್ಡ್‌ ವೈಡ್‌ ವೆಬ್‌(WWW)ನ ಅಭಿವೃದ್ದಿಯಲ್ಲಿ ಪಟ್ಟ ಶ್ರಮಕ್ಕಾಗಿ ಬರ್ನರ್ಸ್‌-ಲೀ ೨೦೦೪ರಲ್ಲಿ ಮಿಲೆನಿಯಂ ತಂತ್ರಜ್ಞಾನ ಪ್ರಶಸ್ತಿ ಪಡೆದರು. ತುಂಬ ಮೊದಲೇ ಹೈಪರ್‌ಕಾರ್ಡ್ ಮಾದರಿಯ ಮೇಲೆ ರಚಿತವಾದ ವೆಬ್‌ ಬ್ರೌಸರ್‌ ಎಂದರೆ ViolaWWW ೧೯೯೩ರಲ್ಲಿ ಆದ ಮೊಸಾಯಿಕ್‌ ವೆಬ್‌ ಬ್ರೌಸರ್‌ನ[೩೯] ಪರಿಚಯವು[೪೦] ವರ್ಲ್ಡ್‌ ವೈಡ್‌ ವೆಬ್‌ಗೆ ಒಂದು ಪ್ರಮುಖ ತಿರುವು ಕೊಟ್ಟಿತು. ಅರ್ಬನಾ-ಚಾಂಪೇನ್‌ನಲ್ಲಿರುವ ಇಲ್ಲಿನೊಯಿಸ್‌ ವಿಶ್ವವಿದ್ಯಾಲಯದ (NCSA-UIUC) ನ್ಯಾಷನಲ್‌ ಸೆಂಟರ್‌ ಫಾರ್‌ ಸೂಪರ್‌ಕಂಪ್ಯೂಟಿಂಗ್‌ ಅಪ್ಲಿಕೇಷನ್ಸ್‌ ಕೇಂದ್ರ‌ದಲ್ಲಿನ ಮಾರ್ಕ್‌ ಅಂಡ್ರೀಸ್ಸೆನ್‌ರ ಮಂದಾಳತ್ವದ ತಂಡವು ಈ ಗ್ರಾಫಿಕಲ್‌ ಬ್ರೌಸರ್‌ನ್ನು ಅಭಿವೃದ್ಧಿಪಡಿಸಿತು. ಉತ್ತಮ ಕಾರ್ಯನಿರ್ವಹಣೆಯ ಕಂಪ್ಯೂಟಿಂಗ್‌ ಮತ್ತು ಸಂವಹನಗಳ ಮಸೂದೆ ಯ ಸಹಕಾರದಿಂದ ಮೊಸಾಯಿಕ್ ಗೋರ್‌ ಮಸೂದೆ ಎಂದು ಕರೆಯುವ 1991ರ ಉತ್ತಮ ಕಾರ್ಯನಿರ್ವಹಣೆಯ ಕಂಪ್ಯೂಟಿಂಗ್‌ ಮತ್ತು ಸಂವಹನಗಳ ಮಸೂದೆ ಯಡಿ ಯೋಜನೆಗೆ ಆರ್ಥಿಕ ನೆರವು ನೀಡುವುದನ್ನು ಪ್ರಾರಂಭಿಸಿದರು.[೪೧] ಮೊಸಾಯಿಕ್‌ನ ಗ್ರಾಫಿಕಲ್‌ ಇಂಟರ್ಫೇಸ್‌ ಪಠ್ಯಾಧರಿತ ಗೋಫರ್‌ಗಿಂತ ಹೆಚ್ಚು ಜನಪ್ರಿಯವಾಯಿತು ಮತ್ತು ಇಂಟರ್ನೆಟ್‌ನ್ನು ಪ್ರವೇಶಿಸಲು WWW ಸೂಕ್ತ ಇಂಟರ್ಫೇಸ್‌ ಆಗಿತ್ತು. (ಗೋರ್‌ "ಇಂಟರ್ನೆಟ್‌ ರಚನೆ"ಯಲ್ಲಿ ತಮ್ಮ ಪಾತ್ರವನ್ನು ಅಧ್ಯಕ್ಷೀಯ ಚುನಾವಣೆ ಪ್ರಚಾರದಲ್ಲಿ ಉಲ್ಲೇಖಿಸಿದಾಗ, ಹಾಸ್ಯಾಸ್ಪದಕ್ಕಿಡಾದರು. Al ಗೋರ್‌ ಮತ್ತು ಮಾಹಿತಿ ತಂತ್ರಜ್ಞಾನದ ಪೂರ್ಣ ಲೇಖನ ನೋಡಿ). ೧೯೯೪ರಲ್ಲಿ ಅಂಡ್ರೀಸೆನ್‌ರ Netscape Navigator ಕ್ರಮೇಣವಾಗಿ ವಿಶ್ವದ ಹೆಚ್ಚು ಜನಪ್ರಿಯ ಬ್ರೌಸರ್‌ ಆಗುತ್ತಿದ್ದಂತೆ, ಮೊಸಾಯಿಕ್‌ನ ಸ್ಥಾನವನ್ನು ಅದು ಆಕ್ರಮಿಸಿತು. ಸ್ವಲ್ಪ ಸಮಯ ವಿಶ್ವದ ಜನಪ್ರಿಯ ಬ್ರೌಸರ್ ಆಗಿ ಮೆರೆದ ನಂತರ Netscape Navigator, ಕ್ರಮೇಣವಾಗಿ Internet Explorer ಮತ್ತು ಇತರ ಬ್ರೌಸರ್‌ಗಳ ಸ್ಪರ್ಧೆಯಿಂದ ತನ್ನ ಸ್ಥಾನವನ್ನು ಕಳೆದುಕೊಂಡಿತು. UCLAಯ ರಾಯ್ಸ್ ಸಭಾಂಗಣದಲ್ಲಿ ದಿ ಸುಪರ್‌ಹೈವೇ ಸಮಿಟ್‌ ೧೯೯೪ರ ಜನವರಿ ೧೧ರಂದು ಜರುಗಿತು. ಇದು "ಈ ಕ್ಷೇತ್ರಕ್ಕೆ ಸಂಬಂಧಿಸಿದ ಎಲ್ಲಾ ಪ್ರಮುಖ ಉದ್ಯಮಿಗಳು, ಸರಕಾರ ಮತ್ತು ಶೈಕ್ಷಣಿಕ ಮುಖಂಡರನ್ನು ಒಟ್ಟು ಸೇರಿಸಿ, ಮಾಹಿತಿ ಹೆದ್ದಾರಿ ಮತ್ತು ಅದರ ಅಳವಡಿಕೆಗಳ ಕರಿತು ನಡೆಸಲಾದ ರಾಷ್ಟ್ರೀಯ ಮಾತುಕತೆ ಮಾಡಿದ ಮೊದಲ ಸಾರ್ವಜನಿಕ ಸಭೆಯಾಗಿದೆ."[೪೨] cyber24.com [೪೩] ಜಾಲದಲ್ಲಿ ನಡೆದ ಸೈಬರ್‌ಸ್ಪೇಸ್‌ನಲ್ಲಿ 24 ಗಂಟೆಗಳು , ಈವರೆಗೆ ನಡೆದ "ಅತಿ ದೊಡ್ಡ ದಿನವಿಡೀ ನಡೆದ ಅನ್‌ಲೈನ್‌ ಕಾರ್ಯಕ್ರಮವಾಗಿದೆ" (೧೯೯೬ರ ಫೆಬ್ರುವರಿ ೮).[೪೪] ಛಾಯಾಚಿತ್ರಗ್ರಾಹಕ ರಿಕ್‌ ಸ್ಮೋಲನ್‌ ಈ ಜಾಲದ ನೇತೃತ್ವ ವಹಿಸಿದ್ದರು. ೧೯೯೭ರ ಜನವರಿ ೨೩ರಲ್ಲಿ ಸ್ಮಿಥ್‌ಸೋನಿಯನ್‌ ಶಿಕ್ಷಣ ಸಂಸ್ಥೆಯ ಅಮೆರಿಕಾದ ಇತಿಹಾಸ ರಾಷ್ಟ್ರೀಯ ವಸ್ತು ಸಂಗ್ರಹಾಲಯದಲ್ಲಿ ನಡೆದ ಛಾಯಾಚಿತ್ರ ಪ್ರದರ್ಶನದಲ್ಲಿ ಯೋಜನೆಯ ೭೦ ಛಾಯಾಚಿತ್ರಗಳನ್ನು ಪ್ರದರ್ಶಿಸಲಾಯಿತು.[೪೫]

ಸರ್ಚ್ ಇಂಜಿನುಗಳು[ಬದಲಾಯಿಸಿ]

ವರ್ಲ್ಡ್‌ ವೈಡ್‌ ವೆಬ್‌ ರಚನೆಗೊಳ್ಳುವುದಕ್ಕೂ ಮೊದಲು, ಇಂಟರ್ನೆಟ್‌ನ್ನು ಸಂಯೋಜಿಸಲು ಪ್ರಯತ್ನಿಸಿದ ಸರ್ಚ್‌ ಇಂಜಿನುಗಳಿದ್ದವು. ೧೯೯೦ರಲ್ಲಿ ಮ್ಯಾಕ್‌ಗಿಲ್‌ ವಿಶ್ವವಿದ್ಯಾಲಯವು ಆರ್ಕಿ ಸರ್ಚ್‌ ಎಂಜಿನನ್ನು ರಚಿಸಿತು, ಅದನ್ನು ಅನುಸರಿಸಿ ೧೯೯೧ರಲ್ಲಿ WAIS ಮತ್ತು ಗೋಫರ್‌ ಸರ್ಚ್‌ ಎಂಜಿನುಗಳು ಬಂದವು. ಈ ಮೂರು ವ್ಯವಸ್ಥೆಗಳು ವರ್ಲ್ಡ್‌ ವೈಡ್‌ ವೆಬ್‌ ಗಿಂತಲೂ ಮುಂಚಿನವು. ಆದರೆ ವೆಬ್‌ ಮತ್ತು ಇಂಟರ್ನೆಟ್‌ನ ಉಳಿದ ಭಾಗದ ಸೂಚಿಗೆ ಸೇರಿಸಿರುವುದರಿಂದಾಗಿ ಹಲವು ವರ್ಷಗಳ ನಂತರ ವೆಬ್‌ ಕಂಪ್ಯೂಟರ್ ಪರದೆಯಲ್ಲಿ ಕಾಣಿಸಿಕೊಂಡ ನಂತರವೂ ಆ ಮೂರೂ ವ್ಯವಸ್ಥೆಗಳು ಕಾಣಿಸುತ್ತಿದ್ದವು. ಇನ್ನಷ್ಟು ಹೆಚ್ಚಿನ ಸಾಮರ್ಥ್ಯದ ಹಲವು ಸರ್ವರ್‌ಗಳೂ ಸಹ ಕಾರ್ಯನಿರ್ವಹಿಸುತ್ತಿದ್ದರೂ ೨೦೦೬ರಲ್ಲೂ ಗೋಫರ್‌ ಸರ್ವರ್‌ಗಳು ಇದ್ದವು. ವೆಬ್‌ ಬೆಳೆದಂತೆಲ್ಲಾ, ವೆಬ್‌ನಲ್ಲಿನ ಪುಟಗಳನ್ನು ಪತ್ತೆಹಚ್ಚಲು ಮತ್ತು ಜನರಿಗೆ ಅದನ್ನು ತಲುಪಿಸಲು ಸರ್ಚ್‌ ಇಂಜಿನುಗಳು ಮತ್ತು ವೆಬ್‌ ನಿರ್ದೇಶಿಕೆಗಳನ್ನು ರಚಿಸಲಾಯಿತು. ಮೊದಲ ಪೂರ್ಣ ಪ್ರಮಾಣದ ವೆಬ್‌ ಸರ್ಚ್‌ ಇಂಜಿನ್‌WebCrawler ೧೯೯೪ರಲ್ಲಿ ತನ್ನ ಕಾರ್ಯಚರಣೆಯನ್ನು ಪ್ರಾರಂಭಿಸಿತು. WebCrawler ಬರುವುದಕ್ಕೆ ಮೊದಲು, ಕೇವಲ ವೆಬ್‌ ಪುಟದ ಶೀರ್ಷಿಕೆಯನ್ನು ಮಾತ್ರ ಶೋಧಿಸಲಾಗುತ್ತಿತ್ತು. ೧೯೯೩ರಲ್ಲಿ Lycos ಸರ್ಚ್‌ ಇಂಜಿನ್ನನ್ನು ವಿಶ್ವವಿದ್ಯಾಲಯ ಯೋಜನೆಯಾಗಿ ರಚಿಸಲಾಯಿತು. ಮೊದಲ ವ್ಯಾವಹಾರಿಕವಾಗಿ ಯಶಸ್ಸು ಪಡೆದ ಸರ್ಚ್‌ ಎಂಜಿನ್‌ ಇದಾಗಿದೆ. ೧೯೯೦ನೇ ದಶಕದ ಉತ್ತರಾರ್ಧದಲ್ಲಿನ ಜನಪ್ರಿಯ ಸರ್ಚ್ ಇಂಜಿನ್‌ ಮತ್ತು ವೆಬ್ ನಿರ್ದೇಶಿಕೆಯೆಂದರೆYahoo! (೧೯೯೫ರಲ್ಲಿ ಸ್ಥಾಪನೆಗೊಂಡದ್ದು) ಮತ್ತು Altavista (೧೯೯೫ರಲ್ಲಿ ಸ್ಥಾಪನೆಗೊಂಡದ್ದು) ಅನುಕ್ರಮವಾಗಿ ವೆಬ್‌ ನಿರ್ದೇಶಿಕೆಗಳು ಮತ್ತು ವೆಬ್‌ ಸರ್ಚ್‌ ಎಂಜಿನುಗಳಲ್ಲಿ ಮುಂಚೂಣಿ ಸ್ಥಾನದಲ್ಲಿದ್ದವು. ೨೦೦೧ರ ಆಗಸ್ಟ್‌ ವೇಳೆಗೆ ಸಂಬಂಧಪಟ್ಟ ಕ್ರಮಾಂಕವನ್ನು ಅಭಿವೃದ್ಧಿಪಡಿಸಿದ Googleಅನ್ನು (೧೯೯೮ರಲ್ಲಿ ಸ್ಥಾಪನೆಗೊಂಡದ್ದು) ಅನುಸರಿಸಿ, ಸರ್ಚ್‌ ಇಂಜಿನುಗಳು ನಿರ್ದೇಶಿಕೆ ಮಾದರಿಯಲ್ಲಿ ಫಲಿತಾಂಶವನ್ನು ನೀಡಲು ಪ್ರಾರಂಭಿಸಿತು. ನಿರ್ದೇಶಿಕೆ ವೈಶಿಷ್ಟ್ಯಗಳು ಸಾಮಾನ್ಯವಾಗಿ ಲಭ್ಯವಾಗುತ್ತಿದ್ದರೂ ಸಹ, ಸರ್ಚ್‌ ಎಂಜಿನುಗಳಿಗೆ ನಿದರ್ಶನಗಳಾಗಿದ್ದವು. ೨೦೦೦ರ ಮೊದಲು ವಾಣಿಜ್ಯ ಉದ್ದೇಶಗಳಿಗೆ ಹೆಚ್ಚಿನ ಮಹತ್ವ ನೀಡುತ್ತಿದ್ದ ಡಾಟಾಬೇಸ್‌ ಗಾತ್ರವು ಉತ್ತಮ ಫಲಿತಾಂಶಗಳು ಮೊದಲು ಬರುವಂತೆ ವರ್ಗೀಕರಿಸುವ ಸಂಬಂಧಪಟ್ಟ ಕ್ರಮಾಂಕದ ಮೇಲೆ ಹೆಚ್ಚು ಒತ್ತು ನೀಡುವುದರಿಂದ ಕ್ರಮೇಣವಾಗಿ ತನ್ನ ಸ್ಥಾನವನ್ನು ಕಳೆದುಕೊಂಡಿತು. ೧೯೯೬ರ ಹೊತ್ತಿಗೆ ಫಲಿತಾಂಶಗಳ ಪೂರ್ಣ ಪಟ್ಟಿಯನ್ನು ಪರಿಶೀಲಿಸುವುದು ಕಷ್ಟಕರವಾದಾಗ, ಸಂಬಂಧಪಟ್ಟ ಕ್ರಮಾಂಕ ವಿಧಾನವು ಪ್ರಮುಖ ಸಮಸ್ಯೆಯಾಗಿತ್ತು. ಕ್ರಮೇಣವಾಗಿ, ಪ್ರಸ್ತುತ ಕ್ರಮಾಂಕದ ಕ್ರಮಾವಳಿಗಳನ್ನು ನಿರಂತರವಾಗಿ ಅಭಿವೃದ್ಧಿಗೊಳಿಸಲಾಯಿತು. Googleನ PageRank ವಿಧಾನವು ಹೆಚ್ಚು ಪ್ರವೇಶಿಸಿದ ಫಲಿತಾಂಶಗಳನ್ನು ಅನುಕ್ರಮಗೊಳಿಸುತ್ತದೆ. ಆದರೆ ಪ್ರಮುಖ ಸರ್ಚ್‌ ಇಂಜಿನುಗಳು ಫಲಿತಾಂಶಗಳನ್ನು ನಿರಂತರ ಪರಿಶೋಧನೆಗೆ ಒಳಪಡಿಸುತ್ತದೆ, ಅಭಿವೃದ್ಧಿಯೆಡೆಗೆ ಗಮನ ಹರಿಸುವುದರಿಂದ ತಮ್ಮ ಕ್ರಮಾಂಕ ವಿಧಾನಗಳನ್ನು ನಿರಂತರವಾಗಿ ಸಂಸ್ಕರಿಸುತ್ತದೆ. ೨೦೦೬ರ ಅಂಕಿಅಂಶದ ಪ್ರಕಾರ ಸರ್ಚ್‌ ಇಂಜಿನು ಕ್ರಮಾಂಕಗಳು ಹಿಂದೆಂದಿಗಿಂತಲೂ ಹೆಚ್ಚಿನ ಮಹತ್ವವನ್ನು ಪಡೆದಿತ್ತು. ಉದ್ಯಮವು ಬೆಳೆದಂತೆ ("ಸರ್ಚ್‌ ಎಂಜಿನ್‌ ಆಪ್ಟಿಮೈಸರ್ಸ್‌" ಅಥವಾ "SEO") ವೆಬ್‌-ನಿರ್ಮಾತೃಗಳು ತಮ್ಮ ಶೋಧ ಕ್ರಮಾಂಕ ಮತ್ತು ಮೆಟಾಟ್ಯಾಗ್‌‌ಗಳಲ್ಲಿ ಸರಕುಮುದ್ರೆಯ ಬಳಕೆಯಂತಹ ಸರ್ಚ್‌ ಇಂಜಿನು ಕ್ರಮಾಂಕಗಳ ಮೇಲೆ ಪ್ರಭಾವ ಬೀರುವ ವಿಷಯಗಳ ಕುರಿತು ರಚಿಸಿದ ಹಿಂದಿನ ತೀರ್ಪಿನ ಸಂಪೂರ್ಣ ವಿವರವನ್ನು ಅಭಿವೃದ್ಧಿಪಡಿಸಲು ಸಹಾಯವಾಗುತ್ತದೆ. ಕೆಲವು ಸರ್ಚ್‌ ಇಂಜಿನುಗಳಿಂದ ಮಾರಾಟ ಮಾಡಲಾದ ಶೋಧ ಕ್ರಮಾಂಕಗಳು ಗ್ರಂಥಪಾಲಕರು ಮತ್ತು ಗ್ರಾಹಕ ನ್ಯಾಯವಾದಿಗಳಲ್ಲಿ ವಿವಾದವನ್ನು ಸೃಷ್ಟಿಸಿತು.

ಡಾಟ್-ಕಾಮ್ ಬುಗ್ಗೆ[ಬದಲಾಯಿಸಿ]

ಅಕಸ್ಮಾತ್‌ ಆಗಿ, ಜಾಹೀರಾತು, ಮೇಲ್‌-ಆದೇಶ ಮಾರಾಟ, ಗ್ರಾಹಕ ಬಾಂಧವ್ಯ ನಿರ್ವಹಣೆ ಮತ್ತು ಇತರ ಹಲವು ಕ್ಷೇತ್ರಗಳಲ್ಲಿ ಈಗ ಅಸ್ತಿತ್ವದಲ್ಲಿರುವ ವ್ಯಾಪಾರ ತತ್ವಗಳು ಕೈಬಿಡಲು ವ್ಯಕ್ತಿಯು ತಲುಪಿದ ಅಥವಾ ಭರವಸೆ ನೀಡಿದ ಸಂದರ್ಭದಲ್ಲಿ ಕಡಿಮೆ ದರದಲ್ಲಿ ವಿಶ್ವಾದ್ಯಂತ ಲಕ್ಷಾಂತರ ಜನರನ್ನು ಭೇಟಿ ಮಾಡಿ ಮಾರಾಟ ಪ್ರಕ್ರಿಯೆ ಅಥವಾ ಗುತ್ತಿಗೆ ಪ್ರಕ್ರಿಯೆಯನ್ನು ನಡೆಸಬಹುದು. ವೆಬ್ ಒಂದು ಹೊಸ ಹಂತಕ ಅಪ್ಲಿಕೇಷನ್‌ ಆಗಿದ್ದು, ಅದು ಅನಿಯಮಿತ ಸಂಖ್ಯೆಯ ಕೊಳ್ಳುವವರು ಮತ್ತು ಮಾರುವವರನ್ನು ಅಗ್ಗದ ದರದಲ್ಲಿ ಒಂದು ಕಡೆ ಸಂಪರ್ಕಿಸುವಂತೆ ಮಾಡಬಹುದು. ದೂರದೃಷ್ಟಿಯುಳ್ಳ ಹೊಸ ವ್ಯಾಪಾರ ಮಾದರಿಯನ್ನು ಅಭಿವೃದ್ಧಿಪಡಿಸಿದ್ದಾರೆ. ಅದರು ತನ್ನ ಹತ್ತಿರದ ಸಾಹಸೋದ್ಯಮ ಬಂಡವಾಳಗಾರರ ಅತಿ ಸಮೀಪಕ್ಕೆ ಬಂದಿದ್ದಾರೆ. ಹೊಸ ವಾಣಿಜೋದ್ಯಮಿಗಳಲ್ಲಿ ಕೆಲವರು ವ್ಯಾಪಾರ ಆರ್ಥಿಕತೆಯಲ್ಲಿ ಅನುಭವವನ್ನು ಹೊಂದಿದ್ದರೆ, ಮತ್ತೆ ಕೆಲವರು ಯೋಜನೆಗಳನ್ನು ಹೊಂದಿರಯತ್ತಾರಾದರೂ ಅವರು ಬಂಡವಾಳದ ಒಳಹರಿವನ್ನು ವಿವೇಕದಿಂದ ನಿರ್ವಹಿಸುವುದಿಲ್ಲ. ಅದಲ್ಲದೇ, ಹಲವು ಡಾಟ್‌-ಕಾಮ್ ವ್ಯಾಪಾರ ಯೋಜನೆಗಳನ್ನು ಇಂಟರ್ನೆಟ್‌ ಬಳಕೆಯ ಅಂದಾಜಿನೊಂದಿಗೆ ತಿಳಿಯಲಾಗುತ್ತದೆ. ಅವುಗಳು ಈಗಿರುವ ವ್ಯವಹಾರಗಳಿಗೆ ಇತರ ವಿತರಣಾ ಮಾರ್ಗಗಳನ್ನು ಕಲ್ಪಿಸಬಹುದು. ಹಾಗಾಗಿ ಈಗಿರುವ ವ್ಯಾಪಾರಗಳ ಮಧ್ಯೆ ಯಾವುದೇ ಸ್ಪರ್ಧೆ ಇರುತ್ತಿರಲಿಲ್ಲ. ಬಲಿಷ್ಠ ಅಸ್ತಿತ್ವವನ್ನು ಹೊಂದಿರುವ ಬ್ರ್ಯಾಂಡ್‌ಗಳೊಂದಿಗೆ ಈಗಾಗಲೇ ಅಸ್ತಿತ್ವದಲ್ಲಿರುವ ಕಂಪನಿಯು ತನ್ನದೇ ಆದ ಇಂಟರ್ನೆಟ್‌ ಅಸ್ತಿತ್ವವನ್ನು ಅಭಿವೃದ್ದಿಪಡಿಸಿದಾಗ, ಈ ಭರವಸೆಗಳು ಉಳಿಯುವುದಿಲ್ಲ. ಭಾರಿ ಅಸ್ತಿತ್ವಹೊಂದಿದ ವ್ಯವಹಾರಗಳ ಎದುರು ಹೊಸಬರು ಈ ಮಾರುಕಟ್ಟೆಯನ್ನು ಪ್ರವೇಶಿಸುವ ಪ್ರಯತ್ನವನ್ನು ಕೈಬಿಡುತ್ತಾರೆ. ಈ ಮಾರುಕಟ್ಟೆಯನ್ನು ಪ್ರವೇಶಿಸುವ ಸಾಮರ್ಥ್ಯವನ್ನೇ ಅನೇಕ ಕಂಪನಿಗಳು ಹೊಂದಿರುವುದಿಲ್ಲ. ೨೦೦೦ರ ಮಾರ್ಚ್‌ ೧೦ರಂದು ಭಾರಿ ತಂತ್ರಜ್ಞಾನ ಬೆಳವಣಿಗೆಯಿಂದಾಗಿ, ಒಂದು ವರ್ಷದೊಳಗೆ ಮೌಲ್ಯವು ದ್ವಿಗುಣಗೊಂಡಿದ್ದರಿಂದ NASDAQ ಕಾಂಪೋಸೈಟ್‌ ಸೂಚಿಕೆ ಅತ್ಯುಚ್ಛ ಮಟ್ಟ ೫೦೪೮.೬೨[೪೬] (ಇಂಟ್ರಾ-ಡೇ ಅತ್ಯುಚ್ಛ ಮಟ್ಟ ೫೧೩೨.೫೨) ತಲುಪಿದಾಗ ಡಾಟ್-ಕಾಮ್ ಬುಗ್ಗೆ ಉಕ್ಕಿತು. ಬುಗ್ಗೆಯ ಹಣದುಬ್ಬರವಿಳಿತ ೨೦೦೧ರ ಹೊತ್ತಿಗೆ ಧಡಕ್ಕನೆ ಜಾರಿತು. ಸಾಹಸೋದ್ಯಮ ಬಂಡವಾಳ ಮತ್ತು IPO ಬಂಡವಾಳ, ಕೆಲವೊಮ್ಮೆ ಯಾವುದೇ ಲಾಭ ಮಾಡದಿರುವ ಕಾರಣ, ಡಾಟ್‌-ಕಾಮ್ಸ್‌ನ ಹೆಚ್ಚಿನವು ತಮ್ಮ ವ್ಯವಹಾರಕ್ಕೆ ಬಾಗಿಲೆಳೆದವು.

ಆನ್‌ಲೈನ್‌ ಜನಸಂಖ್ಯಾ ಅಂದಾಜು[ಬದಲಾಯಿಸಿ]

ಜ್ಯುಪಿಟರ್‌ರಿಸರ್ಚ್‌ ನಡೆಸಿದ ಅಧ್ಯಯನದ ಪ್ರಕಾರ ಅನ್‌ಲೈನ್‌ ಪ್ರವೇಶವನ್ನು ಹೊಂದಿದ ಜನರ ಸಂಖ್ಯೆಯಲ್ಲಿ ೩೮ ಪ್ರತಿಶತದಷ್ಟು ಏರಿಕೆಯನ್ನು ನಿರೀಕ್ಷಿಸುತ್ತದೆ. ೨೦೧೧ರ ಹೊತ್ತಿಗೆ ಭೂಮಿಯ ಜನಸಂಖ್ಯೆಯ ೨೨ ಪ್ರತಿಶತದಷ್ಟು ಜನರು ಪ್ರತಿನಿತ್ಯ ಇಂಟರ್ನೆಟ್‌ ಅನ್ನು ಸರ್ಫ್ ಮಾಡುತ್ತಾರೆ. ವರದಿಯೊಂದರ ಪ್ರಕಾರ ಪ್ರಸ್ತುತ ೧.೧ ಶತಕೋಟಿ ಜನರು ನಿರಂತರ ವೆಬ್ ಪ್ರವೇಶಿಸಿ ಆನಂದಿಸುತ್ತಿದ್ದಾರೆ. ಜ್ಯುಪಿಟರ್‌ರಿಸರ್ಚ್‌ ತನ್ನ ಅಧ್ಯಯನಕ್ಕಾಗಿ ಇಂಟರ್ನೆಟ್‌ ಪ್ರವೇಶ ಸಾಧನಗಳಿಗೆ ಮೀಸಲಾಗಿದ್ದ ಇಂಟರ್ನೆಟ್‌ ಅನ್ನು ದಿನನಿತ್ಯ ಪ್ರವೇಶಿಸಿ ಜಾಲಾಡುವ ಜನರನ್ನು ಅನ್‌ಲೈನ್‌ ಬಳಕೆದಾರರು ಎಂದು ವ್ಯಾಖ್ಯಾನಿಸಿದೆ. ಆ ಸಾಧನಗಳು ಮೊಬೈಲ್‌ಗಳನ್ನು ಒಳಗೊಂಡಿರುವುದಿಲ್ಲ.[೪೭]

ಮೊಬೈಲ್‌ ಫೋನ್‌ ಮತ್ತು ಇಂಟರ್ನೆಟ್‌[ಬದಲಾಯಿಸಿ]

ನೋಕಿಯಾ ೯೦೦೦ ಇಂಟರ್ನೆಟ್‌ ಸಂಪರ್ಕ ಹೊಂದಿದ ಮೊದಲ ಮೊಬೈಲ್‌. ೧೯೯೬ರಲ್ಲಿ ಇದನ್ನು ಫಿನ್ಲೆಂಡ್‌ನಲ್ಲಿ ಬಿಡುಗಡೆ ಮಾಡಲಾಯಿತು. ಮೊಬೈಲ್‌ ಆಧರಿತ ಇಂಟರ್ನೆಟ್‌ನ ಕಲ್ಪನೆಯು ಆ ಮಾದರಿಯ ಮೊಬೈಲ್‌ಗಳ ಬೆಲೆ ಕಡಿಮೆಯಾಗುವವರೆಗೆ ಏರಿಕೆ ಕಾಣಲಿಲ್ಲ. ನೆಟ್‌ವರ್ಕ್‌ ಸೇವಾ ಪೂರೈಕೆದಾರರು ಮೊಬೈಲ್‌ಗಳಲ್ಲಿ ಇಂಟರ್ನೆಟ್‌ ಅನ್ನು ಸಕ್ರಿಯಗೊಳಿಸಲು ತಮ್ಮ ಸಿಸ್ಟಮ್‌ಗಳು ಮತ್ತು ಸೇವೆಗಳನ್ನು ಅಭಿವೃದ್ಧಿಪಡಿಸಲು ಪ್ರಾರಂಭಿಸಿದರು . ಜಪಾನ್‌ನಲ್ಲಿ NTT DoCoMo i-Mode ಎಂಬ ಮೊದಲ ಮೊಬೈಲ್‌ ಇಂಟರ್ನೆಟ್‌ ಸೇವೆಯನ್ನು ೧೯೯೯ರಲ್ಲಿ ಬಿಡುಗಡೆ ಮಾಡಿತು ಮತ್ತು ಮೊಬೈಲ್‌ ಆಧರಿತ ಇಂಟರ್ನೆಟ್‌ನ ಹುಟ್ಟು ಎಂದು ಇದನ್ನು ಪರಿಗಣಿಸಲಾಗಿದೆ. ೨೦೦೧ರಲ್ಲಿ ರಿಸರ್ಚ್‌ ಇನ್‌ ಮೋಷನ್‌ ತಮ್ಮ ಬ್ಲಾಕ್‌ಬೆರ್ರಿ ಉತ್ಪನ್ನಕ್ಕಾಗಿ ಮೊಬೈಲ್‌ ಆಧರಿತ ಇಮೇಲ್‌ ವ್ಯವಸ್ಥೆಯನ್ನು ಅಮೆರಿಕಾದಲ್ಲಿ ಬಿಡುಗಡೆ ಮಾಡಿತು. ಮೊಬೈಲ್ಲ್‌ನ ಚಿಕ್ಕ ಪರದೆ, ಚಿಕ್ಕ ಕೀಪ್ಯಾಡ್‌ ಮತ್ತು ಒಂದು ಕೈಯ ಕಾರ್ಯಚರಣೆ ಅತ್ಯುತ್ತಮವಾಗಿ ಬಳಸಿಕೊಳ್ಳಲು, ಮೊಬೈಲ್‌ ಇಂಟರ್ನೆಟ್‌ಗಾಗಿ ಸರಳವಾದ ಪ್ರೋಗ್ರಾಮಿಂಗ್ ಆವರಣವನ್ನು ರಚಿಸಲಾಯಿತು‌. ಅದನ್ನು ವೈಯರ್‌ಲೆಸ್‌ ಅಪ್ಲಿಕೇಷನ್‌ ಪ್ರೋಟಕಾಲ್‌ ಆದ WAP ಎಂದು ಕರೆಯುತ್ತಾರೆ. ಹೆಚ್ಚಿನ ಮೊಬೈಲ್‌ ಇಂಟರ್ನೆಟ್‌ ಸೇವೆಗಳು WAPನಲ್ಲಿ ಕಾರ್ಯನಿರ್ವಹಿಸುತ್ತದೆ. ಮೊಬೈಲ್‌ ಆಧರಿತ ಇಂಟರ್ನೆಟ್‌ನಲ್ಲಿನ ಅಭಿವೃದ್ಧಿಯು ಏಷ್ಯಾದ ಜಪಾನ್‌, ದಕ್ಷಿಣ ಕೊರಿಯಾ ಮತ್ತು ತೈವಾನ್‌ ದೇಶಗಳಲ್ಲಿ ಪ್ರಾರಂಭವಾಗಿ, ನಂತರ PCಗಿಂತ ಹೆಚ್ಚು ಮೊಬೈಲ್‌ನಿಂದ ಇಂಟರ್ನೆಟ್‌ ಬಳಸುವವರ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿತು. ಈ ದೇಶಗಳನ್ನು ಅನುಸರಿಸಿದ ಅಭಿವೃದ್ಧಿಗೊಳ್ಳುತ್ತಿರುವ ದೇಶಗಳಾದ ಭಾರತ, ದಕ್ಷಿಣ ಆಫ್ರಿಕಾ,ಕೀನ್ಯಾ, ಫಿಲಿಫೈನ್ಸ್‌ ಮತ್ತು ಪಾಕಿಸ್ತಾನದಲ್ಲಿಯು ಸಹ PCಗಿಂತ ಹೆಚ್ಚು ಮೊಬೈಲ್‌ನಿಂದ ಇಂಟರ್ನೆಟ್‌ ಬಳಸುವವರ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿತೆಂದು ವರದಿಯಾಗಿದೆ. ಯುರೋಪ್‌ ಮತ್ತು ಉತ್ತರ ಅಮೆರಿಕಾದ ಇಂಟರ್ನೆಟ್‌ ಬಳಕೆ ದೊಡ್ಡ ಪ್ರಮಾಣದ ವೈಯಕ್ತಿಕ ಕಂಪ್ಯೂಟರ್‌ಗಳ ಪ್ರಭಾವಕ್ಕೆ ಒಳಗಾಗಿತ್ತು. ಮೊಬೈಲ್‌ ಇಂಟರ್ನೆಟ್‌ ಬಳಕೆಯಲ್ಲಿನ ಏರಿಕೆಯು ನಿಧಾನಗತಿಯಲ್ಲಿತ್ತು. ಆದರೆ ಹೆಚ್ಚಿನ ಪಾಶ್ಚಾತ್ಯ ದೇಶಗಳಲ್ಲಿ ರಾಷ್ಟ್ರೀಯ ಇಂಟರ್ನೆಟ್‌ ನುಸುಳುವಿಕೆಯ ಮಟ್ಟಗಳು ೨೦%-೩೦% ತಲುಪಿದೆ. ೨೦೦೮ರಲ್ಲಿ ಹೆಚ್ಚಿನ ಇಂಟರ್ನೆಟ್‌ ಪ್ರವೇಶಕ್ಕೆ ವೈಯಕ್ತಿಕ ಕಂಪ್ಯೂಟರ್‌ ಸಾಧನಗಳಿಗಿಂತ ಮೊಬೈಲ್‌ ಸಂಪರ್ಕ ಹೆಚ್ಚಾಗಿರುವುದರಿಂದ ಅಡ್ಡಹಾಯುವಿಕೆಯು ಸಂಭವಿಸಿತು. ವಿಶ್ವದ ಅಭಿವೃದ್ಧಿಶೀಲ ಭಾಗಗಳಲ್ಲಿ, ೧೦ ಮೊಬೈಲ್‌ ಬಳಕೆದಾರರಿಗೆ ಒಂದು PC ಬಳಕೆದಾರರಷ್ಟು ಇಂಟರ್ನೆಟ್‌ ಅನುಪಾತವಿದೆ.

ಇತಿಹಾಸಾಧ್ಯಯನ[ಬದಲಾಯಿಸಿ]

ಇಂಟರ್ನೆಟ್‌ನ ಅಭಿವೃದ್ಧಿಯ ಇತಿಹಾಸ ಲೇಖನದ ಬಗ್ಗೆ ಕಳಕಳಿ ವ್ಯಕ್ತವಾಗಿದೆ. ಇಂಟರ್ನೆಟ್‌ನ ರಚನೆಗೆ ಕಾರಣವಾದ ಅಭಿವೃದ್ಧಿ ಕಾರ್ಯಗಳ ಹಿನ್ನೆಲೆಯ ದಾಖಲೆಗಳ ಕೊರತೆ ಸೇರಿದಂತೆ ಹಲವು ಕಾರಣಗಳಿಗೆ ಇಂಟರ್ನೆಟ್‌ನ ಉಗಮದ ಬಗ್ಗೆ ಸ್ಪಷ್ಟತೆ ಸಿಗುವುದಿಲ್ಲ.ಆರಂಭಿಕ ಹಂತಗಳ ದಾಖಲೆಗಳ ಕ್ರೋಢೀಕರಣಕ್ಕೆ ಮಹತ್ವ ನೀಡದಿರುವುದೂ ಪ್ರಮುಖ ಕಾರಣಗಳಲ್ಲೊಂದು.

"The Arpanet period is somewhat well documented because the corporation in charge - BBN - left a physical record. Moving into the NSFNET era, it became an extraordinarily decentralized process. The record exists in people's basements, in closets. [...] So much of what happened was done verbally and on the basis of individual trust."

— Doug Gale (೨೦೦೭), [೪೮]

ಇದನ್ನೂ ಗಮನಿಸಿ[ಬದಲಾಯಿಸಿ]

ಇದನ್ನೂ ಗಮನಿಸಿ[ಬದಲಾಯಿಸಿ]

ಅಡಿಟಿಪ್ಪಣಿಗಳು[ಬದಲಾಯಿಸಿ]

 1. ರುತ್‌ಫೀಲ್ಡ್‌, ಸ್ಕಾಟ್‌, ದಿ ಇಂಟರ್ನೆಟ್‌'ಸ್ ಹಿಸ್ಟರಿ ಆಂಡ್ ಡೆವಲಪ್‌ಮೆಂಟ್‌ ಫ್ರಮ್ ವಾರ್‌ಟೈಮ್‌ ಟೂಲ್‌ ಟೂ ಫಿಶ್‌-ಕ್ಯಾಮ್‍‌‌, ಕ್ರಾಸ್‌ರೂಡ್ಸ್‌ Archived 2007-10-18 ವೇಬ್ಯಾಕ್ ಮೆಷಿನ್ ನಲ್ಲಿ. ೨.೧, ಸಪ್ಟೆಂಬರ್‌ ೧೯೯೫.
 2. J. C. R. Licklider (೧೯೬೦). "Man-Computer Symbiosis". {{cite journal}}: Cite journal requires |journal= (help)
 3. "An Internet Pioneer Ponders the Next Revolution". An Internet Pioneer Ponders the Next Revolution. Retrieved November 25 2005. {{cite web}}: Check date values in: |accessdate= (help); Unknown parameter |dateformat= ignored (help)
 4. "About Rand". Paul Baran and the Origins of the Internet. Retrieved January 14 2006. {{cite web}}: Check date values in: |accessdate= (help); Unknown parameter |dateformat= ignored (help)
 5. "How does the Internet Work?". Retrieved June 15 2009. {{cite web}}: Check date values in: |accessdate= (help); Unknown parameter |dateformat= ignored (help)
 6. Johna Till Johnson. "Net was born of economic necessity, not fear". Archived from the original on 2011-06-13. Retrieved June 15 2009. {{cite web}}: Check date values in: |accessdate= (help); Unknown parameter |dateformat= ignored (help)
 7. "NORSAR and the Internet". NORSAR. Archived from the original on 2009-05-19. Retrieved 2009-06-05.
 8. tsbedh. "History of X.25, CCITT Plenary Assemblies and Book Colors". Itu.int. Retrieved 2009-06-05.
 9. "Events in British Telecomms History". Events in British TelecommsHistory. Archived from the original on 2003-04-05. Retrieved November 25 2005. {{cite web}}: Check date values in: |accessdate= (help); Unknown parameter |dateformat= ignored (help)
 10. Barry M. Leiner, Vinton G. Cerf, David D. Clark, Robert E. Kahn, Leonard Kleinrock, Daniel C. Lynch, Jon Postel, Larry G. Roberts, Stephen Wolff (೨೦೦೩). "A Brief History of Internet". Retrieved ೨೦೦೯-೦೫-೨೮. {{cite journal}}: Check date values in: |accessdate= (help); Cite journal requires |journal= (help)CS1 maint: multiple names: authors list (link)
 11. "Computer History Museum and Web History Center Celebrate 30th Anniversary of Internet Milestone". Retrieved November 22, 2007.
 12. ಜಾನ್‌ ಪೋಸ್ಟಲ್‌, NCP/TCP ಪರಿವರ್ತನೆ ಯೋಜನೆ, RFC ೮೦೧
 13. David Roessner, Barry Bozeman, Irwin Feller, Christopher Hill, Nils Newman (1997). "The Role of NSF's Support of Engineering in Enabling Technological Innovation". Archived from the original on 2008-12-19. Retrieved 2009-05-28. {{cite journal}}: Cite journal requires |journal= (help)CS1 maint: multiple names: authors list (link)
 14. "RFC 675 - SPECIFICATION OF INTERNET TRANSMISSION CONTROL PROGRAM". Tools.ietf.org. Retrieved 2009-05-28.
 15. Tanenbaum, Andrew S. (1996). Computer Networks. Prentice Hall. ISBN 0-13-394248-1.
 16. Hauben, Ronda (2004). "The Internet: On its International Origins and Collaborative Vision". Amateur Computerist. 12 (2). Retrieved 2009-05-29. {{cite journal}}: Cite has empty unknown parameter: |coauthors= (help)
 17. "RFC 1871 - CIDR and Classful Routing". Tools.ietf.org. Retrieved 2009-05-28.
 18. Ben Segal (೧೯೯೫). "A Short History of Internet Protocols at CERN". Archived from the original on 2020-06-19. Retrieved 2009-12-01. {{cite journal}}: Cite journal requires |journal= (help)
 19. "Internet History in Asia". 16th APAN Meetings/Advanced Network Conference in Busan. Archived from the original on 2006-02-01. Retrieved December 25 2005. {{cite web}}: Check date values in: |accessdate= (help); Unknown parameter |dateformat= ignored (help)
 20. "ICONS webpage". Icons.afrinic.net. Archived from the original on 2007-05-09. Retrieved 2009-05-28.
 21. ನೆಪ್ಯಾಡ್‌, ಎಸ್ಸೇ ಪಾರ್ಟನರ್‌ಶಿಪ್‌ ಎಂಡ್ಸ್‌ ಇನ್‌ ಡಿವೋರ್ಸ್‌,(ಸೌತ್‌ ಆಫ್ರಿಕನ್‌) ಫೈನಾನ್ಶಿಯಲ್‌ ಟೈಮ್ಸ್‌ FMಟೆಕ್‌, ೨೦೦೭
 22. "APRICOT webpage". Apricot.net. 2009-05-04. Retrieved 2009-05-28.
 23. "A brief history of the Internet in China". China celebrates 10 years of being connected to the Internet. Archived from the original on 2008-10-21. Retrieved December 25 2005. {{cite web}}: Check date values in: |accessdate= (help); Unknown parameter |dateformat= ignored (help)
 24. "The World internet provider". Retrieved 2009-05-28.
 25. "Best Internet Communications: Press Release: Low Cost Web Site". Web.archive.org. Archived from the original on 1996-12-19. Retrieved 2009-05-28.{{cite web}}: CS1 maint: bot: original URL status unknown (link)
 26. OGC-00-33R Department of Commerce: Relationship with the Internet Corporation for Assigned Names and Numbers (PDF), Government Accountability Office, ೭ July ೨೦೦೦, p. ೫ {{citation}}: Check date values in: |date= (help)[ಶಾಶ್ವತವಾಗಿ ಮಡಿದ ಕೊಂಡಿ]
 27. "DDN NIC". IAB Recommended Policy on Distributing Internet Identifier Assignment. Retrieved December 26 2005. {{cite web}}: Check date values in: |accessdate= (help); Unknown parameter |dateformat= ignored (help)
 28. "GSI-Network Solutions". TRANSITION OF NIC SERVICES. Retrieved December 26 2005. {{cite web}}: Check date values in: |accessdate= (help); Unknown parameter |dateformat= ignored (help)
 29. "Thomas v. NSI, Civ. No. 97-2412 (TFH), Sec. I.A. (DCDC April 6, 1998)". Lw.bna.com. Archived from the original on 2008-12-22. Retrieved 2009-05-28.
 30. "NIS Manager Award Announced". NSF NETWORK INFORMATION SERVICES AWARDS. Archived from the original on 2005-05-24. Retrieved December 25 2005. {{cite web}}: Check date values in: |accessdate= (help); Unknown parameter |dateformat= ignored (help)
 31. USC/ICANN ಬದಲಾವಣೆ ಒಪ್ಪಂದ
 32. [೧]
 33. [೨]
 34. [೩]
 35. "The Risks Digest". Great moments in e-mail history. Retrieved April 27 2006. {{cite web}}: Check date values in: |accessdate= (help); Unknown parameter |dateformat= ignored (help)
 36. "The First Network Email". The First Network Email. Archived from the original on 2006-05-06. Retrieved December 23 2005. {{cite web}}: Check date values in: |accessdate= (help); Unknown parameter |dateformat= ignored (help)
 37. Vannevar Bush (೧೯೪೫). "As We May Think". Retrieved ೨೦೦೯-೦೫-೨೮. {{cite journal}}: Check date values in: |accessdate= (help); Cite journal requires |journal= (help)[ಶಾಶ್ವತವಾಗಿ ಮಡಿದ ಕೊಂಡಿ]
 38. Douglas Engelbart (೧೯೬೨). "Augmenting Human Intellect: A Conceptual Framework". Archived from the original on 2005-11-24. Retrieved 2009-12-01. {{cite journal}}: Cite journal requires |journal= (help)
 39. "NCSA Mosaic - September 10, 1993 Demo". Totic.org. Retrieved 2009-05-28.
 40. "Mosaic Web Browser History - NCSA, Marc Andreessen, Eric Bina". Livinginternet.com. Retrieved 2009-05-28.
 41. "Vice President Al Gore's ENIAC Anniversary Speech". Cs.washington.edu. 1996-02-14. Retrieved 2009-05-28.
 42. "UCLA Center for Communication Policy". Digitalcenter.org. Archived from the original on 2012-10-28. Retrieved 2009-05-28.
 43. "ಅಧಿಕೃತ ಸೈಟ್‌-ಮ್ಯಾಪ್‌ನ ಪ್ರತಿಬಿಂಬ". Archived from the original on 2009-02-21. Retrieved 2009-12-01.
 44. "ಅಧಿಕೃತ ಸೈಟ್‌ನ ಪ್ರತಿಬಿಂಬ". Archived from the original on 2008-12-22. Retrieved 2009-12-01.
 45. "The human face of cyberspace, painted in random images". Archive.southcoasttoday.com. Retrieved 2009-05-28.
 46. "ನ್ಯಾಸ್‌ಡಕ್‌ ಅತ್ಯುತ್ತಮ ಮಟ್ಟ 5048.62". Archived from the original on 2006-03-26. Retrieved 2021-08-09.
 47. "Brazil, Russia, India and China to Lead Internet Growth Through 2011". Clickz.com. Retrieved 2009-05-28.
 48. "An Internet Pioneer Ponders the Next Revolution". Illuminating the net's Dark Ages. Retrieved February 26 2008. {{cite news}}: Check date values in: |accessdate= (help); Unknown parameter |dateformat= ignored (help)

ಆಕರಗಳು[ಬದಲಾಯಿಸಿ]

ಹೆಚ್ಚಿನ ಓದಿಗಾಗಿ[ಬದಲಾಯಿಸಿ]

ಹೊರಗಿನ ಕೊಂಡಿಗಳು[ಬದಲಾಯಿಸಿ]