ವಿಷಯಕ್ಕೆ ಹೋಗು

ಆಶಾ ಭಟ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಆಶಾ ಭಟ್
Beauty pageant titleholder
Bornಆಶಾ ಭಟ್
೫,ಸೆಪ್ಟೆಂಬರ್, ೧೯೯೯
ಭದ್ರಾವತಿ, ಕರ್ನಾಟಕ
Hometownಭದ್ರಾವತಿ
Residenceಮುಂಬೈ, ಮಹಾರಾಷ್ಟ್ರ
Educationಎಲೆಕ್ಟ್ರೋನಿಕ್ಸ್ ಇಂಜಿನಿಯರಿಂಗ್ ಪದವಿ
Alma materಆರ್.ವಿ ಕಾಲೇಜ್ ಆಫ್ ಇಂಜಿನಿಯರಿಂಗ್
Occupationರೂಪದರ್ಶಿ
Hair colorಕಪ್ಪು
Eye colorಕಡು ಕಂದು
Title(s)ಮಿಸ್ ಸುಪ್ರ ನ್ಯಾಷನಲ್, ಮಿಸ್ ಇಂಡಿಯಾ ಸುಪ್ರ ನ್ಯಾಷನಲ್, ಮಿಸ್ ಬ್ಯೂಟಿ‍ಫುಲ್ ಸ್ಮೈಲ್, ಮಿಸ್ ಫಾಸಿನೇಟಿಂಗ್

ಆಶಾ ಭಟ್ ಅವರು ಕರ್ನಾಟಕ ಮೂಲದ ಭಾರತೀಯ ರೂಪದರ್ಶಿ. ಇವರು ತಮ್ಮ ೨೨ನೇ ವಯಸ್ಸಿನಲ್ಲಿಯೇ ಮಿಸ್ ಸುಪ್ರ ಇಂಟರ್ ನ್ಯಾಶನಲ್ ಕಿರೀಟವನ್ನು ಮುಡಿಗೇರಿಸಿಕೊಂಡರು. ಇವರು ಈ ಬಿರುದನ್ನು ಪಡೆದ ಮೊದಲ ಭಾರತೀಯ ಮಹಿಳೆ.[]

ಆರಂಭಿಕ ಜೀವನ ಹಾಗೂ ಶಿಕ್ಷಣ

[ಬದಲಾಯಿಸಿ]

ಆಶಾ ಭಟ್ ಅವರು ೧೯೯೨ನೇ ಸೆಪ್ಟೆಂಬರ್ ೨ರಂದು ಕರ್ನಾಟಕದ ಭದ್ರಾವತಿಯಲ್ಲಿ ಜನಿಸಿದರು. ಕನ್ನಡ ಬ್ರಾಹ್ಮಣ ಕುಟುಂದಲ್ಲಿ ಜನಿಸಿದ ಇವರ ತಂದೆಯ ಹೆಸರು ಸುಬ್ರಹ್ಮಣ್ಯ ಭಟ್ ಹಾಗೂ ತಾಯಿ ಶ್ಯಾಮಲ ಭಟ್. ಆಶಾ ಭಟ್ ಅವರ ಹಿರಿಯ ಸಹೋದರಿ ಡಾ. ಅಕ್ಷತಾ ಭಟ್ ಅವರು ವೃತ್ತಿಯಲ್ಲಿ ವೈದ್ಯೆ. ಆಶಾ ಅವರು ಭದ್ರಾವತಿಯ ಸೇಂಟ್ ಚಾರ್ಲ್ಸ್ ಶಾಲೆಯಲ್ಲಿ ವ್ಯಾಸಂಗ ಮಾಡಿದರು. ಮೂಡುಬಿದಿರೆಯ ಆಳ್ವಾಸ್ ಪದವಿ ಪೂರ್ವ ಕಾಲೇಜಿನಿಂದ ತಮ್ಮ ಪದವಿ ಪೂರ್ವ ಶಿಕ್ಷಣವನ್ನು ಪಡೆದರು ಪುಣೆಯ ಐಐಟಿ ಜೆಇಇ ಕೋಚಿಂಗ್ ಇನ್ಸ್ಟಿಟ್ಯೂಟ್ ಪ್ರೈಮ್ ಅಕಾಡೆಮಿಯಲ್ಲಿ ಅವರು ವಿದ್ಯಾರ್ಥಿಯಾಗಿದ್ದರು. ಇನ್ಸ್ಟಿಟ್ಯೂಟ್ನಲ್ಲಿ ಅಧ್ಯಯನವು ಸೌಂದರ್ಯ ಸ್ಪರ್ಧೆಗಳಿಗೆ ಭಾಗವಹಿಸಲು ಅನುವು ಮಾಡಿಕೊಟ್ಟಿತು. []ಅವರು ಆಳ್ವಾಸ್ ಕಾಲೇಜಿನಲ್ಲಿ ಕಲಿಯುತ್ತಿರುವಾಗ ಎನ್.ಸಿ.ಸಿ ಗೆ ಸೇರಿಕೊಂಡರು ಮತ್ತು ಗಣರಾಜ್ಯೋತ್ಸವ ಶಿಬಿರದಲ್ಲಿ ಭಾಗವಹಿಸಲು ಆಯ್ಕೆಯಾದರು. ಅವರು ದಕ್ಷಿಣ ಏಷ್ಯನ್ ಅಸೋಸಿಯೇಷನ್ ​​ಫಾರ್ ರೀಜನಲ್ ಕೋಆಪರೇಷನ್, ಸಾರ್ಕ್ ರಾಷ್ಟ್ರಗಳಿಂದ ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್ ನಿಯೋಗದ ಸದಸ್ಯರಾಗಿದ್ದರು ಮತ್ತು ಶ್ರೀಲಂಕಾ ಮಿಲಿಟರಿ ಅಕಾಡೆಮಿಗೆ ಭೇಟಿ ನೀಡಿದರು ಹಾಗೂ ೨೦೦೯ರಲ್ಲಿ ಆಲ್ ರೌಂಡರ್ ಪ್ರಶಸ್ತಿಯನ್ನು ಗೆದ್ದರು,[][]ನಂತರ ಅವರು ಎಲೆಕ್ಟ್ರಾನಿಕ್ ಎಂಜಿನಿಯರಿಂಗ್ನಲ್ಲಿ ಬ್ಯಾಚುಲರ್ ಪದವಿಯನ್ನು ಆರ್.ವಿ. ಕಾಲೇಜ್ ಆಫ್ ಎಂಜಿನಿಯರಿಂಗ್ನಿಂದ ಪಡೆದರು.[]

ಸೌಂದರ್ಯ ಸ್ಪರ್ಧೆ

[ಬದಲಾಯಿಸಿ]

೨೦೧೪ರಲ್ಲಿ ಟೈಮ್ಸ್ ಗ್ರೂಪ್ ಆಯೋಜಿಸಿದ ಮಿಸ್ ದಿವ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.ಮತ್ತು ಮಿಸ್ ಇಂಡಿಯಾ ಸುಪ್ರಾನ್ಯಾಶನಲ್ ೨೦೧೪ ಕಿರೀಟವನ್ನು ಪಡೆದರು. ಮಿಸ್ ದಿವಾ ೨೦೧೪ ರಲ್ಲಿ ಆಶಾ ಇದರಲ್ಲಿ ಮಿಸ್ ಕಾನ್ಜೆನಿಯಾಲಿಟಿ, ಮಿಸ್ ಬ್ಯೂಟಿಫುಲ್ ಸ್ಮೈಲ್ ಮತ್ತು ಮಿಸ್ ಫ್ಯಾಸಿನೇಟಿಂಗ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. [][][]ಪೋಲೆಂಡ್‌ನಲ್ಲಿ ನಡೆದ ಮಿಸ್ ಸುಪ್ರಾನೇಶನಲ್ ೨೦೧೪ರಲ್ಲಿ ಅವರು ಭಾರತವನ್ನು ಪ್ರತಿನಿಧಿಸಿದರು. ೨೦೧೪ರ ಡಿಸೆಂಬರ್ ೫ ರಂದು ನಡೆದ ಸ್ಪರ್ಧೆಯ ಗ್ರ್ಯಾಂಡ್ ಫಿನಾಲೆಯಲ್ಲಿ ಅಂತಿಮವಾಗಿ ವಿಜೇತರಾದರು. ಸ್ಪರ್ಧೆಯಲ್ಲಿ "ಬೆಸ್ಟ್ ಇನ್ ಟ್ಯಾಲೆಂಟ್" ಗಾಗಿ ವಿಶೇಷ ಪ್ರಶಸ್ತಿಯನ್ನೂ ಪಡೆದರು..[][೧೦]ಮಿಸ್ ಸುಪ್ರಾನೇಶನಲ್ ಅವಧಿಯಲ್ಲಿ ಅವರು ಥೈಲ್ಯಾಂಡ್, ಮ್ಯಾನ್ಮಾರ್, ಹಂಗೇರಿ, ಮಾರಿಷಸ್, ಚೀನಾ ಮತ್ತು ಪೋಲೆಂಡ್ ಮತ್ತು ಹಲವಾರು ದೇಶಗಳಿಗೆ ಭೇಟಿ ನೀಡಿದರು. ಜುಲೈನಲ್ಲಿ ಅವರು ಯುನಿವರ್ಸಲ್ ಒರ್ಲ್ಯಾಂಡೊ, ಮೈಕ್ರೋಸಾಫ್ಟ್ ರೆಡ್ಮಂಡ್ ಕ್ಯಾಂಪಸ್, ಮೌಂಟ್ ರೈನಿಯರ್, ಮೇಡಮ್ ಟುಸ್ಸಾಡ್ಸ್ ವಾಷಿಂಗ್ಟನ್ ಡಿ.ಸಿ. ಮತ್ತು ನಾಸಾ ಗೆ ಭೇಟಿ ನೀಡಿದರು.[೧೧]

ವೃತ್ತಿಜೀವನ

[ಬದಲಾಯಿಸಿ]

ಆಶಾ ರೂಪದರ್ಶಿಯಾಗಿ ಯಮಹಾ ಮೋಟಾರ್ ಕಂಪನಿ, ಕ್ಲೋಸ್-ಅಪ್, ಕಲ್ಯಾಣ್ ಜ್ಯುವೆಲ್ಲರ್ಸ್ ಜಾಹಿರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕೆಲವೊಂದು ಚಲನಚಿತ್ರಗಳಲ್ಲಿಯೂ ಪಾತ್ರ ನಿರ್ವಹಿಸಿದ್ದಾರೆ.[೧೨][೧೩][೧೪][೧೫]ಜಂಗ್ಲಿ, ರೋಬರ್ಟ್, ದೋಸ್ತಾನ ೨ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.[೧೬]

ಉಲ್ಲೇಖಗಳು

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. "India's Asha Bhat is the first Indian to win Miss Supranational 2014 title". ibnlive.com. Archived from the original on 19 ಮಾರ್ಚ್ 2016. Retrieved 25 January 2016.
  2. "'Miss Supra' Asha Bhat gets felicitated by Alvas foundation". newskarnataka.com. Retrieved 23 January 2016.
  3. VEERENDRA P.M. (27 October 2014). "Asha Bhat felicitated". thehindu.com. Retrieved 25 January 2015.
  4. "MISS SUPRANATIONAL 2014 ASHA BHAT - MAKING INDIA PROUD". indiatimes.com. Archived from the original on 31 ಜನವರಿ 2016. Retrieved 25 January 2016.
  5. Divya Nair (9 December 2014). "How an Indian cadet became Miss Supranational". rediff.com. Retrieved 25 January 2016.
  6. "Miss Diva Universe 2014". globalbeauties.com. Archived from the original on 30 January 2016. Retrieved 25 January 2016.
  7. "Yamaha Fascino Miss Diva 2014: Sub-Contest Winners". indiatimes.com. Archived from the original on 31 ಜನವರಿ 2016. Retrieved 25 January 2016.
  8. "ASHA BHAT ALL SET TO GET INDIA'S FIRST MISS SUPRANATIONAL CROWN". indiatimes.com. Archived from the original on 29 ಜನವರಿ 2016. Retrieved 25 January 2016.
  9. "ASHA BHAT CROWNED MISS SUPRANATIONAL 2014". indiatimes.com. Retrieved 25 January 2016.
  10. "Miss India wins Miss Supranational 2014". globalbeauties.com. Archived from the original on 13 December 2014. Retrieved 25 January 2016.
  11. "Spunky Asha Bhat's US diaries". indiatimes.com. Archived from the original on 31 ಜನವರಿ 2016. Retrieved 25 January 2016.
  12. "Asha Bhat: The scintillating cover girl". indiatimes.com. Archived from the original on 3 ಆಗಸ್ಟ್ 2015. Retrieved 25 January 2015.
  13. "Asha Bhat's scintillating photoshoot". indiatimes.com. Archived from the original on 31 ಜನವರಿ 2016. Retrieved 25 January 2016.
  14. "I FELT LIKE A BRIGHT SHINY STAR IN THE SKY: ASHA BHAT". indiatimes.com. Archived from the original on 21 ಜನವರಿ 2016. Retrieved 25 January 2016.
  15. "Asha Bhat endorses a jewellery brand - BeautyPageants". Femina Miss India. Archived from the original on 2019-05-31. Retrieved 2019-05-31.
  16. "Ahead of trailer release Junglee actors Vidyut Jammwal, Pooja Sawant and Asha Bhat visit Siddhivinayak temple". Times Now. 4 March 2019.
"https://kn.wikipedia.org/w/index.php?title=ಆಶಾ_ಭಟ್&oldid=1264963" ಇಂದ ಪಡೆಯಲ್ಪಟ್ಟಿದೆ