ಆರ್ಕಲೇಅಸ್
ಗೋಚರ
ಜನನ | ಸಿ. 5 ನೇ ಶತಮಾನ BCE ಮಿಲೆಟಸ್ |
---|---|
ಮರಣ | c. 5th century BCE |
ಕಾಲಮಾನ | . ಪ್ರಾಚೀನ ತತ್ವಶಾಸ್ತ್ರ |
ಪ್ರದೇಶ | ತತ್ತ್ವಶಾಸ್ತ್ರ |
ಪರಂಪರೆ | Pluralist school |
ಪ್ರಭಾವಕ್ಕೋಳಗಾಗು
| |
ಪ್ರಭಾವ ಬೀರು |
ಆರ್ಕಲೇಅಸ್ ಪು.ಶ.ಪು.೫ನೆಯ ಶತಮಾನದಲ್ಲಿದ್ದ ಗ್ರೀಕ್ ದಾರ್ಶನಿಕ. ಅಥೆನ್ಸ್ ನಲ್ಲಿ ಹುಟ್ಟಿದನೆಂದು ಕೆಲವರ ಅಭಿಪ್ರಾಯ. ಅನ್ಯಾಕ್ಸಗೊರಾಸ್ನ ಶಿಷ್ಯ. ಸಾಕ್ರಟೀಸ್‍ಗೆ ಗುರುವಾಗಿದ್ದನೆಂದು ಅನೇಕರ ಅಭಿಪ್ರಾಯ. ಒಟ್ಟಿನಲ್ಲಿ ಅನ್ಯಾಕ್ಸಗೊರಾಸ್ನ ದಾರ್ಶನಿಕ ಮಾರ್ಗವನ್ನೇ ಅನುಸರಿಸಿದ. ಆದರೆ ವಿಶ್ವಶಾಸ್ತ್ರದಲ್ಲಿ (ಕಾಸ್ಮಾಲಜಿ) ಹಿಂದಿನ ಅಯೋನಿಯನ್ನರ ಅಭಿಪ್ರಾಯಗಳನ್ನು ಅನುಮೋದಿಸಿದ. ಅನ್ಯಾಕ್ಸಗೊರಾಸ್ ಪ್ರತಿಪಾದಿಸಿದ ಮನಸ್ಸು ಮತ್ತು ವಾಯು ಭಿನ್ನವೆಂಬ ದ್ವೈತ ತತ್ತ್ವವನ್ನು ನಿರಾಕರಿಸಿ, ವಾಯುವಿಗೆ ಉಚ್ಚಸ್ಥಾನ ಕೊಟ್ಟ. ವಾಯು ಮಂದವಾದಾಗ ಚಳಿ, ವಿರಳವಾದಾಗ ಉಷ್ಣತೆ ಅಥವಾ ನೀರು ಮತ್ತು ಅಗ್ನಿ ಉಂಟಾಗುತ್ತವೆ. ಒಂದು ನಿಷ್ಕ್ರಿಯ, ಇನ್ನೊಂದು ಸಕ್ರಿಯ. ಈ ಪೃಥ್ವಿ ಮತ್ತು ಆಕಾಶಸ್ಥ ಕಾಯಗಳು ಅಗ್ನಿ ನೀರು ಸೇರಿ ಉತ್ಪನ್ನವಾಗಿವೆ. ಇದರಿಂದ ಮನುಷ್ಯನ ಮತ್ತು ಇತರ ಪ್ರಾಣಿಗಳ ಉತ್ಪತ್ತಿ. ಮನುಷ್ಯ ನೀತಿಪ್ರಜ್ಞೆ ಮತ್ತು ಕಲಾಭಿಜ್ಞತೆ ಹೊಂದಿರುವುದರಿಂದ ಇತರ ಪ್ರಾಣಿಗಳಿಂದ ಭಿನ್ನನಾಗಿದ್ದಾನೆ. ಇದು ಇವನ ತತ್ತ್ವದ ಸಾರ.
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- Archelaus Fragments Archived 2016-03-04 ವೇಬ್ಯಾಕ್ ಮೆಷಿನ್ ನಲ್ಲಿ.
ಉಲ್ಲೇಖಗಳು
[ಬದಲಾಯಿಸಿ]